December 16, 2013

ಸ್ವರೂಪ ರಾಣಿಯ ಕಥೆ

(ನಮ್ಮ ತಂದೆ ದಿನಾಂಕ 11.12.13 ರ ಮಧ್ಯಾಹ್ನ ದೈವಾಧೀನರಾದದರು. ಅವರ ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದಿದ್ದು ಸಮಾಧಾನ ತಂದಿದೆ. ಫೋನ್ ಮೂಲಕ/ಎಸ್ ಎಮ್ ಎಸ್ ಮೂಲಕ ಸಂತಾಪ ಸೂಚಿಸಿದವರಿಗೆಲ್ಲ ಧನ್ಯವಾದಗಳು. ಯಾರ್ಯಾರಿಗೆ ತಂದೆಯವರ ದೇಹಾಂತದ ಬಗ್ಗೆ ತಿಳಿಸಬೇಕೆಂಬುದು ಲಿಸ್ಟ್ ಮಾಡುತ್ತಿದ್ದಾಗ ಸ್ವರೂಪ್ ಟೀಚರ್ ಬಗ್ಗೆ ಮಾತು ಬಂತು.)
ಆಕೆ ನನ್ನ ತಮ್ಮಂದಿರ ಗಣಿತ-ವಿಜ್ಝಾನದ ಶಿಕ್ಷಕಿ. ಅವರ ಬ್ಯಾಂಕ್ ಖಾತೆ ನನ್ನ ತಂದೆ ಕೆಲಸ ಮಾಡುವ ಬ್ಯಾಂಕ್ ನಲ್ಲಿ. ಆಗ ನನ್ನ ತಂದೆ ಬಿಹಾರದಿಂದ ಬಂದಿದ್ದಷ್ಟೆ. ತಂದೆಯ ಮೂಲಕ ಅವರ ಪರಿಚಯ ಆದಾಗ ಅವರು ತಮ್ಮಂದಿರ ಟೀಚರ್ ಕೂಡ ಅಂತ ಖುಶಿಯಾಯಿತು. ಮಕ್ಕಳಿಗೆ ಟ್ಯೂಶನ್ಸ್ ಕೊಡಲು ಒಪ್ಪಿದರು. ಅಮ್ಮನ ಬೆಸ್ಟ್ ಫ್ರೆಂಡ್ ಕೂಡ ಆಗಿಬಿಟ್ಟರು. ಶನಿವಾರ ಭಾನುವಾರ, ಅಪ್ಪನ ಹದಿನೈದುದಿನಕ್ಕೊಮ್ಮೆ ನಡೆಯುವ ಗುಂಡು ಪಾರ್ಟಿಗೆಲ್ಲ ಸ್ವರೂಪ್ ಟೀಚರ್ ಕೂಡ ನಮ್ಮೊಂದಿಗೆ ಇರುತ್ತಿದ್ದರು. ಅಮ್ಮ ಕೂಡ ಅವರನ್ನು ಸ್ವರೂಪ್ ಟೀಚರ್ ಅಂತ್ಲೆ ಕರೆಯುತ್ತಿದ್ದರು. ಅವರಿಗೆ ಹೆಚ್ಚು ಕಡಿಮೆ ನಮ್ಮಮ್ಮನ ವಯಸ್ಸು. ಅಮ್ಮನಿಗೆ ನಾವಾಗಲೇ ನಾಲ್ಕು ಜನ ಮಕ್ಕಳಾಗಿದ್ದರೆ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಮಾತಿಗೆ ಮುಂಚೆ ನಗು, ನೋಡಲು ಸುರಸುಂದರಿ, ತಿದ್ದಿತೀಡಿದಂತಹ ಕಣ್ಣು-ಮೂಗು, ದಂತದ ಮೈಬಣ್ನ, ಉದ್ದ ಜಡೆ, ಕಡೆದಿಟ್ಟಂತಹ ದೇಹಾಕೃತಿ. ಮದುವೆ ಮಾತು ಬಂದಾಗಲೆಲ್ಲ 'ನಾನು ಓದಿರುವಷ್ಟು ಓದಿದ ವರ ನಮ್ಮ ಜಾತಿಯಲ್ಲಿ ಸಿಗುವುದು ಕಷ್ಟ. ಮತ್ತೆ ಸುಮ್ಮನೆ ego ಪ್ರಾಬ್ಲಂ ಎಲ್ಲ ಬೇಡ. ಹೀಗೆ ಖುಶಿಯಾಗಿದ್ದೇನೆ' ಅಂತ ಮಾತು ಹಾರಿಸುತ್ತಿದ್ದರು. ಸ್ವರೂಪ ರಾಣಿ ಗಣಿತದ ವಿಷಯದಲ್ಲಿ ಎಮ್ ಎಸ್ಸಿ ಮಾಡಿದ ಗೋಲ್ಡ್ ಮೆಡಲಿಸ್ಟ್.  ಬೇಜಾರೆಂದರೆ ಅವರ ತಂಗಿ ತಮ್ಮಂದಿರಿಗೆ ವಿದ್ಯೆ ಹತ್ತಲಿಲ್ಲ. ಅವರ ತಂಗಿ ನನ್ನ ಕ್ಲಾಸ್. ಹತ್ತನೆಯ ತರಗತಿ ನಂತರ ಓದು ಸ್ಥಗಿತಗೊಳಿಸಿ ಟೈಲರಿಂಗ್ ಕಲೀಲಿಕ್ಕೆ ಹೋಗುತ್ತಿದ್ದಳು. ತಮ್ಮ ಯಾವುದೋ ಗರಾಜ್ ನಲ್ಲಿ ಕೆಲಸ. ತಂದೆ ಸರಕಾರಿ ಕರಕೂನ, ಅಮ್ಮ ಗೃಹಿಣಿ, ಅಲ್ಲದೇ ಮನೆಯಲ್ಲಿ  ವಯಸಾದ ಅಜ್ಜಿ. ನಾವು ಅವರ ಮನೆಗೆ ಭೆಟಿ ನೀಡಿದಾಗಲೆಲ್ಲ, ಸ್ವರೂಪ್ ಟೀಚರ್ ಗೆ ಮದುವೆಯಾಗದಿದ್ದರ ಬಗ್ಗೆ ಅವರಮ್ಮನದ್ದು ಯಾವಾಗಲೂ ಕಂಪ್ಲೈಂಟ್.
ಹೀಗೆ ಒಂದುಸಲ ಬೇರೆ ಊರಲ್ಲಿ ನಡೆದ ಶಾಲಾ-ಕಾಲೇಜು ಸಮಾವೇಶದಲ್ಲಿ ಸ್ವರೂಪ್ ಗೆ ಜೀವನ್ ಸಿಕ್ಕಿದರು. ಅವರದ್ದೆ ಜಾತಿ. ದೂರದ ಹೈದರಾಬಾದ್ ನಲ್ಲಿ ಕಾಲೇಜ್ ಲೆಕ್ಛರರ್. ತಂಗಿಯಂದಿರಂದಿಗೆಲ್ಲ ಮದುವೆ ಮಾಡಿ ಆಗಲೇ ಅವರಿಗೆ ನಲವತ್ತರ ಪ್ರಾಯ. ನಮ್ಮ ಸ್ವರೂಪ್ ಟೀಚರ್ ಗೆ 28-29. ಆದರೂ ಸೂಕ್ತ ವರ ಅಂತ ಮತ್ತು ಮನೆಯಲ್ಲಿನ ಒತ್ತಡಗಳಿಂದ ಸ್ವರೂಪ್ ಅವರನ್ನು ಮದುವೆಯಾಗಲು ಒಪ್ಪಿದರು. ಮದುವೆ ದೂರದ ಹಳ್ಳಿಯಲ್ಲಿ. ಅಪ್ಪನಿಗೆ ಹೃದಯ ಸಂಬಂಧಿ ಕಾಯಿಲೆಯ ಶಸ್ತ್ರ ಚಿಕಿತ್ಸೆ ನಡೆದಿತ್ತಷ್ಟೆ. ಆದುದರಿಂದ ನಾವು ಮದುವೆಗೆ ಹೋಗಲಾಗಲಿಲ್ಲ. ಅ ಮೇಲೆ ಅವರು ನಮ್ಮ ಜತೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದರು.
ಅಲ್ಲಿ ಜೀವನ್ ಅವರದ್ದು ಕೂಡು ಕುಟುಂಬ. ಅವರ ಚಿಕ್ಕಪ್ಪ ದೊಡ್ಡಪ್ಪ, ಮದುವೆಯಾದವರು ಆಗದವರು ಮುಂತಾದ್ದು. ಮೊದ ಮೊದಲು ಎಲ್ಲ ಚೆನ್ನಾಗಿತ್ತು. ಆದರೆ ಸ್ವರೂಪ್ ಕೆಲಸಕ್ಕೆ ಹೋಗೋದು ಕುಟುಂಬದ ಮಹಿಳಾ ಸದಸ್ಯರಿಗೆ ಸರಿ ಬರುತ್ತಿರಲಿಲ್ಲ. ಅದೇನೂ ಗಂಡಸರ್ ಸರಿಸಮಾನ ಕೆಲ್ಸಕ್ಕೆ ಹೋಗೋದು? ಅವಳ ಗಂಡನೆನೂ ಕೈಲಾಗದವನಾ' ಅಂತೆಲ್ಲ ಕೊಂಕು ಮಾತಾಡುತ್ತಿದ್ದರಂತೆ. ಜೀವನ್ ಇದೆಲ್ಲ ಕೇಳಿಸಿಕೊಳ್ಳದವರಂತೆ ಇರುತ್ತಿದ್ದರಿಂದ ಅವರ ಪಿರಿಪಿರಿಗೆ ಸೊಪ್ಪು ಹಾಕಿದಂತಾಯಿತು. ಇವಳಿಗೆ ಕಿರುಕುಳ ನೀಡಲಾರಂಭಿಸಿದರು. ಸ್ವರೂಪ್ ಟೀಚರ್ ಶಾಲೆಯಿಂದ ಮನೆ ಬರುವ ತನಕ ಅವರು ಬೆಳಿಗ್ಗೆ ತಿಂದಿದ ತಟ್ಟೆ ಲೋಟಗಳು, ಮನೆ ಮಂದಿಯ ಬಟ್ಟೆಗಳು ಅವಳಿಗೋಸ್ಕರ ಕಾಯಲಾರಂಭಿಸಿದವು. ಸುಸ್ತಾಗಿ ಸಂಜೆ ಮನೆಗೆ ಬಂದ ನಂತರ ರಾತ್ರಿ 11 ರ ವರೆಗೆ ಕೆಲಸ. ಗಂಡನಿಗೆ ಏನಾದರೂ ಹೇಳಿದರೆ 'ಅದೆಲ್ಲ ನಿಮ್ಮ ಹೆಂಗಸರ ವಿಷಯ, ನೀನೇ ಏನಾದರೂ ಒಪ್ಪಂದ ಮಾಡಿಕೋ' ಅಂತ ಹೇಳಿ ಕೈತೊಳೆದುಕೊಳ್ಳುತ್ತಿದ. ಅಮೇಲೆ ಸ್ವರೂಪ್ ಟೀಚರ್ ಒಂದಾದ ಮೇಲೆ ಒಂದು ಇಬ್ಬರು ಹೆಣ್ಣು ಮಕ್ಕಳು ಬೇಗ ಬೇಗ ಹುಟ್ಟಿದರು. ಗಂಡು ಮಗು ಹುಟ್ಟಲಿಲ್ಲ ಅಂತ ಅವಳಿಗೆ ಇನ್ನಷ್ಟು ತೊಂದರೆ ಕೊಡುವುದರಲ್ಲಿ ಜೀವನ್ ಕೂಡ ಸೇರಿಕೊಂಡರು.  ಮತ್ತೆ ಇಬ್ಬರು ಹೆಣ್ಣುಮಕ್ಕಳಿಗೋಸ್ಕರ ದುಡ್ಡು ಸಂಪಾದಿಸಿಡಲು  ಅಂತ ಮನೆಯಲ್ಲಿನ ಒಂದು ಕೋಣೆಯಲ್ಲಿ ಸ್ವರೂಪ್ ಟೀಚರ್ ಸಂಜೆ ಶಾಲೆಯಿಂದ ಬಂದ ನಂತರ ಕಡ್ಡಾಯ ಮನೆ ಪಾಠಮಾಡುವಲ್ಲಿ ಒತ್ತಡ ಶುರು ಆಯಿತು. ಅಷ್ಟೆ ಅಲ್ಲ ಸ್ವರೂಪ್ ಟೀಚರ್ ಶಾಲೆಗೆ ಹೋದಾಗ ಮಕ್ಕಳಿಗೆ ಇಲ್ಲ ಸಲ್ಲದ್ದನ್ನು ಹೇಳಿ ಕೊಡಲು ಪ್ರಾರಂಭಿಸಿದರಂತೆ. ಅಷ್ಟರಲ್ಲಿ ಸ್ವರೂಪ್ ಟೀಚರ್ ಗೆ ಗಂಡು ಮಗ ಹುಟ್ಟಿದ. ಮನೆಯಲ್ಲಿ ಆಗ ಆಕೆಗೆ ಮಹಾರಾಣಿಯ ಸತ್ಕಾರ. ಇನ್ನೇನೂ ಎಲ್ಲ ಸರಿ ಹೋಯಿತು ಅನ್ನುವಷ್ಟರಲ್ಲಿ ಮಗನಿಗೆ ಬುದ್ದಿ ಮಾಂದ್ಯತೆ ಇರುವುದು ಗೋಚರವಾಯಿತು.ಮನೆಯಲ್ಲಿ ಪುನಃ ಯತಾಪ್ರಕಾರ ಕಿರುಕುಳಗಳು ಆರಂಭವಾದವು. ಶಾಲೆಯಲ್ಲಿ ವೇತನ ಪರಿಷ್ಕರಣೆಯಾಗಿ ಸ್ವಲ್ಪ ಹೆಚ್ಚು ಸಂಪಾದನೆ ಬರಲು ತೊಡಗಿದಾಗ ಸ್ವರೂಪ ಟೀಚರ್ ಮಗನ ದೇಖರೇಖಿಗೆ ಒಂದು ಹುಡುಗಿಯನ್ನು ತಂದು ಇಟ್ಟಳು.
ನಮ್ಮ ಅಮ್ಮನನ್ನು ಭೇಟಿ ಯಾಗಲು ಬಂದಾಗ ಎಷ್ಟು ಓದಿ , ಕೆಲಸದಲ್ಲಿದ್ದು ಏನು ಉಪಯೋಗ ಅಂತ ಬೇಸರಿಸಿಕೊಂಡರು. ಈಗ ಅವರು ಗಂಡನ ಸಂಪರ್ಕದಲ್ಲಿಲ್ಲ. ಮಗ ತನ್ನ 15 ನೇ ವರ್ಷದಲ್ಲಿ ತೀರಿಕೊಂಡ. ಇಬ್ಬರೂ ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದಾರೆ. ಸ್ವರೂಪ್ ಟೀಚರ್ ರಿಟೈರ್ ಆಗಿದ್ದಾರೆ. ವಾರಕ್ಕೆ ಮೂರು ದಿನ ಅನಾಥಾಶ್ರಮದ ಮಕ್ಕಳಿಗೆ ಫ್ರೀ ಆಗಿ ಪಾಠ ಹೇಳಿಕೊಡುತ್ತಾರೆ. ಮೊದಲಿನಹಾಗೆ ನಗುವುದನ್ನು ಸಂಪೂರ್ಣ ಮರೆತಿದ್ದಾರೆ.
(ಯಾಕೋ ಬೇಜಾರಾಗಿ ಸುಮ್ಮನೆ ಕೂತಿದ್ದೆ. ನನ್ನ ತಮ್ಮ ನಿನ್ನ ಬ್ಲಾಗ್ ನಾದ್ರು ಅಪ್ ಡೇಟ್ ಮಾಡು ಅಂದ. ಅವನೇನೂ ನನ್ನ ಬ್ಲಾಗ್ ಓದಲ್ಲ. ಅವನು ಹೇಳಿದ್ದಕ್ಕೆ ಕಷ್ಟಪಟ್ಟು ಬರೆಯಲು ಪ್ರಯ್ತ್ನಿಸಿದ್ದೇನೆ. ತಪ್ಪುಗಳೇನಾದರು ಇದ್ದಲ್ಲಿ ಬೆಂಗಳೂರಿಗೆ ಬಂದ ಮೇಲೆ ಸರಿಪಡಿಸುತ್ತೇನೆ)
:-(

December 7, 2013

The making of cover page 'Shikari'

ನಮ್ಮ ಫ್ಲ್ಯಾಟ್ ಗೆ ಹೋಗುವ ದಿನ ಸನೀಹ ಬರುತ್ತಿದ್ದ ಹಾಗೆ ನಮಗೆ ಬೇಡದಿದ್ದ ಸಾಮಾನೆಲ್ಲ ಹೊರಗೆ ಹಾಕ್ತಾ ಇದ್ದೀವಿ. ಹಳೇ ಪುಸ್ತಕದ ಕಪಾಟು ಆ ಮನೆಯ ಡೆಕೋರ್‍ ಗೆ ಸ್ಯುಟ್ ಆಗಲ್ಲ ಅಂತ ರಾಯರು ಹೇಳಿದ್ದಾರೆ ಆದ್ದರಿಂದ, ಆ ಕಪಾಟು ಮಾರುತ್ತಿದ್ದೇವೆ. ಅದರಲ್ಲಿನ ಕೆಲವು ಪುಸ್ತಕ ಕೊಡಲೇ  ಬೇಕಾಗಿದೆ. ಹಾಗಾಗಿ ನಿಹಾ, ನಾನು, ಅಕ್ಕ ಕಪಾಟನ್ನು sort ಮಾಡ್ತಾ ಈದ್ವಿ. ನಾವು ಕೆಲಸ ಮಾಡೋದ್ದಕ್ಕಿಂತ ಯಾವುದಾದರೂ ಪುಸ್ತಕ ತೆರೆದು ಅದರೊಳಗಿನ ಏನಾದರೂ ಸ್ವಲ್ಪ ಓದುವುದು, ಪದ್ಯಗಳ ಪುಸ್ತಕದಿಂದ ಪದ್ಯಗಳನ್ನು ಓದುವುದು ಮುಂತಾದ್ದು ಮಾಡಿದ್ದೆ ಹೆಚ್ಚು. ಅದಲ್ಲದೆ, 'ಹೇ ಈ ಪುಸ್ತಕ ಕೊಡಬೇಕಾ ಇದು ನನ್ನ ಫೇವರಿಟ್'....ಹೀಗೆ ಸಾಗಿತ್ತು ನಮ್ಮ ಪುಸ್ತಕದ ವಿಲೇವಾರಿ.
ಅಷ್ಟರಲ್ಲಿ ರಘು ಫೋನ್ ಬಂತು. ನಾವಿಬ್ಬರು ಮಾತಾಡುವುದು ಸಾಧಾರಣ ಒಂದು ಗಂಟೆ + ಆದ್ದರಿಂದ  ಕಪಾಟಿನ ಎಡೆಯಲ್ಲಿ ಪವಡಿಸಿದ ನಾನು ಕಾಲು ಸಡಲಿಸುತ್ತ ಹೊರಗಿನ ಕೋಣೆಗೆ ಬಂದೆ. ನಮ್ಮ ಲೋಕಾಭಿರಾಮ ಮಾತಿನ ನಡುವೆ, 'ಚುಕ್ಕುಬುಕ್ಕು'ವಿನಲ್ಲಿ ಶಿಕಾರಿ ಮುಖಪುಟ ಸ್ಪರ್ಧೆ ಇದೆ, ನಿಹಾ ಗೆ ಭಾಗವಹಿಸಲು ಹೇಳಿ ಅಂದ್ರು . ನಾನು ಸರಿ ಅಂದೆ, ಪುನ: ನಮ್ಮ ಮಾತು ಪುಸ್ತಕ ಸಿನಿಮಾ ಅಂತ ಗಿರ್ಕಿ ಹೊಡೆದು, ಮುಗಿಸಿದ ಮೇಲೆ ನಿಹಾ ಗೆ ಹೇಳಿದೆ, 'ಪುರುಸೊತ್ತಾದಾಗ ಚುಕ್ಕುಬುಕ್ಕು ನೋಡು. ರಜೆ ಯಲ್ಲಿ ಮಾಡಕ್ಕೆ ಏನಿಲ್ಲ ಬೋರ್ ಅಂತಾ ಇದ್ದಿಯಲ್ಲ, ಕವರ್ ಡಿಸೈನ್ ಕಂಟೆಸ್ಟ್ ಹಾಕಿದ್ದಾರಂತೆ'
ಅವಳು ಸರಿ ಅಂದ್ಲು. ಪುಸ್ತಕ ಸಾರ್ಟ್ ಮಾಡಿ ಬ್ರೇಕ್ ತೆಗೊಂಡು ಅವಳು ಕಂಟೆಸ್ಟ್ ನ ಡೇಟೈಲ್ಸ್ ಓದಿ, 'ಆಮ್ಮ, ಬುಕ್ ಓದ ಬೇಕಂತೆ ಕಣೆ' ಅಂತ ಹೇಳಿ ಸುಮ್ಮನಾದಳು
ಇದಾದ ಎರಡು ದಿನದ ನಂತರ ನನಗೆ ಯಶವಂತ ಚಿತ್ತಾಲರ 'ಶಿಖಾರಿ' ಪುಸ್ತಕ ಕಪಾಟಿನಲ್ಲಿ ಸಿಕ್ಕಿತು." Niha , cover page contest or not i strongly reccommend that you read this book, since psychology is your favorite subject (ಅವಳು ಸೈಕೋಲೋಜಿ ಯಲ್ಲಿ ಸೆಂಟಮ್ ಸ್ಕೋರರ್) His novels delve deep into the human psyche. I have read Shikari and liked it but my favorite is Chedha (ಛೇದ)' ಅಂದೆ.

ಮಾಲವಿಕಾ ನಿಹಾರಿಕಾ ಇಬ್ಬರೂ ಹತ್ತನೇಯ ತರಗತಿಯಲ್ಲಿ,ಕನ್ನಡದಲ್ಲಿ ಅನುಕ್ರಮವಾಗಿ ನೂರರಲ್ಲಿ 97, 98  ಅಂಕಗಳು ಪಡೆದುಕೊಂಡಿದ್ದು ನನಗೆ ಖುಶಿಯಾಗಿತ್ತು. ಕೋರ್ ಸಬ್ಜೆಕ್ಟ್ ನಲ್ಲಿ ಒಳ್ಳೆಯ ಮಾರ್ಕ್ ಬಂದು ಲಾಂಗ್ವೇಜ್ s ನಲ್ಲಿ ಕಡಿಮೆ ಬಂದ್ರೆ overall percentage ಕಡಿಮೆಯಾಗಬಹುದೇನೋ ಅನ್ನುವ ನನ್ನ ಅನುಮಾನ ಅವರು ಸುಳ್ಳು ಮಾಡಿದ್ದರು. ಪಿ.ಯು ನಲ್ಲೂ ಕನ್ನಡ ಬಾಷೆ ಆಯ್ದುಕೊಳ್ಲಬಹುದೆಂದು ಅಂದುಕೊಂಡರೆ, ಮಾಲವಿಕಾ ಸಂಸ್ಕೃತ, ಹಾಗೂ ನಿಹಾ ಪ್ರೆಂಚ್ ತೆಗೆದುಕೊಂಡಿದ್ದರು. ಕನ್ನಡ ಆಯ್ದುಕೊಂಡಿದ್ದರೆ ಶ್ರೀಕಾಂತ ಆದ್ರೂ ಸಹಾಯ ಮಾಡ್ತಿದ್ದರು. ಈ ಎರಡು ಭಾಷೆ ನಮಗೆ ಬರುವುದಿಲ್ಲವಲ್ಲ ಅಂದ್ರೆ, ಸುಮ್ನಿರಮ್ಮ ಇವೆರಡು high scoring subjects ಅಂತ ನನ್ನ ಬಾಯಿ ಮುಚ್ಚಿಸಿದರು. ಅವರು ಹೇಳಿದ ಹಾಗೆ ಪಿ ಯು ಸೆಕೆಂಡ್ ಪರೀಕ್ಷೆಯಲ್ಲಿ ಇಬ್ಬರೂ 100 kke 100 ತೆಗೆದುಕೊಂಡು ನನಗೆ ಆಶ್ಚರ್ಯ ಹಾಗೂ ಹೆಮ್ಮೆ ಪಡುವಂತೆ ಮಾಡಿದ್ದರು.
ಅದಾದ ನಂತರ ಮಾಲವಿಕಾ ಹೋಟಲ್ ಮ್ಯಾನೆಜ್ ಮೆಂಟ್ ಸೇರಿದಳು. ಅಲ್ಲಿ ಹೆಚ್ಚಿನವರು ನಾರ್ಥೀಸ್, North-east, ಮಲಯಾಳಿಗಳು. ಹಾಗಾಗಿ ಅವಳ ಸಂಭಾಷಣೆ ಎಲ್ಲ ಹಿಂದಿ ಭಾಷೆಯಲ್ಲ್ಲಿ, ಕಾಲೇಜ ನಲ್ಲಿ ಪಾಠ ಆಂಗ್ಲ ಭಾಷೆಯಲ್ಲಿ. ಬಸ್ ನಲ್ಲಿ ಹೋಗ್ತ ಬಹುಶ: ಕಂಡಕ್ಟರ್ ಜತೆ ಕನ್ನಡದ ಒಂದೆರಡು ಮಾತು ಬಿಟ್ರೆ, ಕನ್ನಡ ನಿಲ್. ನಿಹಾ ಕ್ರೈಸ್ತ್ ಕಾಲೇಜ್ ಸೇರಿದಳು. ಅಲ್ಲಿ ಬರೀ ಇಂಗ್ಲಿಷ್ ಮಾತಾಡುವುದೇ ಆಯ್ತು. ಹಾಗಾಗಿ ಕನ್ನಡದ ಸಂಪರ್ಕವೇ ಹೋದಂತಾಯಿತು. ಅವಳು ಎನ್ ಎಮ್ ಕೆ ಆರ್ ವಿ ಸೇರಿದ ಮೇಲೆ ಪುನ: ಕನ್ನಡ ಮಾತನಾಡಲು ಆರಂಭಿಸಿದ್ದು ಮಾತ್ರವಲ್ಲ, 'ನಮ್ಮ ಮಾನಸ' ಪತ್ರಿಕೆಯ ಎಡಿಟೋರಿಯಲ್ ಬೋರ್ಡ್ ನಲ್ಲಿ ಕೂಡ ಇದ್ದಳು. ಕನ್ನಡ ಪುಸ್ತಕ/ ಕನ್ನಡ ಪೇಪರ್ ಕಡೆ ಇಬ್ಬರೂ ಕಣ್ಣು ಹಾಯಿಸುವುದಿಲ್ಲ. ಅಪರೂಪಕ್ಕೊಮ್ಮೆ ನನ್ನ ಬ್ಲಾಗ್ ನಲ್ಲಿ ಕಣ್ಣು ಹಾಯಿಸುತ್ತಾರೆ ಅಷ್ಟೆ. ಹಾಗಾಗಿ ನಿಹಾರಿಕಾ ಶಿಕಾರಿ ಪುಸ್ತಕ ಓದಲು ತೆಗೆದುಕೊಂಡಾಗ ನಿಜಕ್ಕೂ ಖುಶಿ ಅನ್ನಿಸಿತ್ತು. ಓದ್ತಾ ಓದ್ತಾ ಅದರಿಂದ ಸ್ಪೂರ್ತಿ ಪಡೆಯುತ್ತ ಒಂದೊಂದೆ ಕವರ್ ಪೇಜ್ ಡಿಸೈನ್ ಮಾಡಿದಳು. ಅವಳು ಪುಸ್ತಕ ಬದಿಗೆ ಇಟ್ಟಿದಾಗ ನಾನೂ ಅದನ್ನು ಓದ್ತಾ ಇದ್ದೆ. (ಇದು ನನ್ನ ಮೂರನೇ ಸಲದ ಓದು. ಪ್ರತೀ ಸಲ ಓದುವಾಗ ಏನಾದರೂ ಹೊಸತು ಹೊಳಹು ಪಡೆಯುತ್ತೇನೆ). ಅಲ್ಲದೆ ನಮ್ಮ ಈಗಿನ ಮನೆಯಿಂದ ನಾವು ಹೋಗುತ್ತಿರುವ ಫ್ಲ್ಯಾಟ್ ಗೆ ಹೋಗಲು ತುಂಬಾ ಸಮಯ ಬೇಕು. ಮನೆಯ interiors ನನ್ನ ಜವಾಬ್ದಾರಿ. ಆಗ ಟ್ರಾವಲ್ ಮಾಡುವಾಗ ಅವಳು ಈ ಪುಸ್ತಕ ಓದುತ್ತಿದ್ದಳು.
ಮೊದಲ 24 ಕವರ್ ಪೇಜ್ ಡಿಸೈನ್ಸ್ ಅಷ್ಟೆ ನನಗೆ ನೋಡಲಿಕ್ಕೆ ಆಗಿದ್ದು, ಆಮೇಲೆ ಮಾಲವಿಕಾಳ ಸೆಪ್ಟೊಪ್ಲಾಸ್ಟಿ ಸರ್ಜರಿ ಇತ್ತು. ಐದು ದಿನ ಆಸ್ಪತ್ರೆ ಓಡಾಟವೇ ಆಯ್ತು. ಚುಕ್ಕುಬುಕ್ಕುವಿನಲ್ಲಿ ಹಾಕಿದ್ದ, ನಮ್ಮ ಎಂಟ್ರಿಸ್ ಬಿಟ್ಟರೆ ಹಲವಾರು ಚಂದದ ಕವರ್ ಪೇಜ್ ಗಳು ಇದ್ದುವು, ಆಗ ನನಗೆ 'ಛೆ! ನಾನು ಕಳುಹಿಸಬಾರದಿತ್ತು ಅಂದುಕೊಂಡಿದ್ದೆ. 
ವಸುಧೇಂದ್ರ ಬೆಳಿಗ್ಗೆ ಮುಂಚೆ ಕಳುಹಿಸಿದ ಮೈಲ್ ನಿಂದ (ಅದನ್ನು ನಾನು ನನ್ನ ಸೆಲ್ ಫೋನ್ ನಲ್ಲೇ ಓದಿದೆ) ಗೊತ್ತಾಯಿತು ನನ್ನ ಮತ್ತು ನಿಹಾಳ ಕವರ್ ಪೇಜ್ ಅಂತಿಮ 12 ರಲ್ಲಿ ಬಂದಿದ್ದು. ಆದರೆ ಆ ದಿನ ತುರ್ತಾಗಿ ಪ್ಲ್ಯಾಟ್ ಕಡೆ ಹಾಗೂ ಹಲವು ಇತರೇ ಕೆಲಸಗಳ ನಿಮಿತ್ತ ನಾನು ನಿಹಾ ಚುಕ್ಕುಬುಕ್ಕುಗೆ ಹೋಗಿ ನೋಡಿದಾಗ ಮಧ್ಯಾಹ್ನ ದಾಟಿತ್ತು.
ನಿಹಾಗೆ ಪ್ರೈಜ್ ಬಂದಿದ್ದು ಕೂಡ ವಸುಧೇಂದ್ರ ಅವರೆ ನನಗೆ ಮೊದಲು ತಿಳಿಸಿದ್ದು. ಆಮೇಲೆ ಹಲವಾರು ಎಸ್ ಎಮ್ ಎಸ್ ಗಳು, ಫೋನ್ ಗಳು, ಇ-ಮೈಲ್ ಗಳು. ಖುಶಿಯಾಯ್ತು ಎಲ್ಲರೂ ನಿಹಾಗೆ ಅಭಿನಂದಿಸಿದ್ದು. ಇದರಲ್ಲಿ ನನಗೆ ತುಂಬಾ ಖುಶಿ ಎನಿಸಿದ್ದು 'ಜೋಗಿ' ಅವರ ಎಸ್ ಎಮ್ ಎಸ್- ಅವರ ಬುಸಿ ಶೆಡ್ಯೂಲ್ ನಲ್ಲಿ ಸ್ವಲ್ಪ ಟೈಮ್ ತೆಗೊಂಡು ನನಗೆ ಎಸ್ ಎಮ್ ಎಸ್  ಕಳುಹಿಸಿದ್ದು.....:-) 
ನಾನು ನಿಹಾಗೆ ಈ ಮೊದಲೇ ಪ್ರಾಮಿಸ್ ಮಾಡಿದೆ 'ಪ್ರೈಜ್ ಬರಲಿ ಬಿಡಲಿ ನಾನಂತು ನಿನಗೆ ಏನಾದರೂ ಸ್ಪೆಷಲ್ ಉಡುಗೊರೆ ಕೊಡುತ್ತೇನೆ ಯಾಕೆಂದರೆ ನೀನು ಪ್ರಾಮಾಣಿಕವಾಗಿ ಕಂಟೆಸ್ಟ್ ನಲ್ಲಿ ಭಾಗವಹಿಸಿದ್ದೀಯಾ ಅಂತ. ಹಾಗಾಗಿ ಅವಳಿಗೆ ಸೆಕೆಂಡ್ ಪ್ರೈಜ್ ಬಂದಿದ್ದು ನನಗೆ ಖುಶಿ.
ನಿಹಾ ಕವರ್ ಪೇಜ್ ಗಳನ್ನು ಮಾಡುವಾಗ ನನಗೂ ಹುಮ್ಮಸ್ಸು ಬಂದು  ನಾನೂ ಮೂರು ಕವರ್ ಪೇಜ್ ಗಳನ್ನು ಮಾಡಿ ಕಳುಹಿಸಿದೆ. :-(
 this coverpage was for private circulation only, not for the competition. just experimenting with the color combos. :-) :-) Niha said 'not at all nice mommee'
 ah this is atrocious the original colour was awful. Niha said you can do better so i just clicked on the microsoft picture managers' autocolour option and this came up. i used mspaint,artRage for this coverpage. both malavika and niharika liked this though it did not reflect  anything from the novel 'Shikari'.

ಸ್ನೇಹಿತೆ ಫೋನ್ ಮಾಡಿ ಯಾವ ಕವರ್ ಪೇಜ್ ನಿಮ್ಮದು ಅಂತ ಕೇಳಿದಾಗ, ಹೇಳಬಾರದಲ್ಲವಾ? ಅಂತ ಹೇಳಿ, ಯಾವುದು ಚೆನ್ನಾಗಿಲ್ಲ ಅದೆಲ್ಲ ನಂದೇ ಅಂದಿದ್ದೆ, ಅದಕ್ಕೆ ಬಾಣಗಳ ಚಿತ್ರ ಇರುವುದು ನಿಮ್ಮದೇನಾ ಅಂತ ಕೇಳಿದ್ರು, ಹಿ ಹಿ ಹಿ....(ಕವರ್ ಪೇಜ್ ಕಳುಹಿಸಿದ ಮೇಲೆ ನನಗೆ ಎಷ್ಟು ಮುಜುಗರ ಆಯ್ತು ಅಂದ್ರೆ  ನನ್ನ ಆಪ್ತ ಸ್ನೆಹಿತೆಯರಾದ ಜ್ಯೋತಿ, ವೇದ, ನಾಗಮಣಿ, ಸಂಧ್ಯಾ ಅವರೊಂದಿಗೆ ಹೇಳಿಕೊಂಡೆ. 'ಕಳುಹಿಸಿದ ಮೇಲೆ ಕಳುಹಿಸಬಾರದು ಅನ್ನಿಸಿತು' ಅಂತ, ಆದರೆ ಅವರೆಲ್ಲ ತುಂಬ encouraging words ನಿಂದ ಸಮಾಧಾನ ಮಾಡಿದ್ರು. ಅವರಿಗೆಲ್ಲ ದೊಡ್ಡ ಧನ್ಯವಾದಗಳು. ಲವ್ ಯು ಗಯ್ಸ್.
ನಿಜ ಹೇಳಬೇಕೆಂದರೆ ಚುಕ್ಕುಬುಕ್ಕುವಿನಲ್ಲಿನ ಈ ಪ್ಯಾರಾ ನಿಂದ ಇಂಪ್ರೆಸ್ಸ್ ಆದೆ:
ಈ ಸ್ಪರ್ಧೆಯ ಹಿಂದಿರುವ ಉದ್ದೇಶ ಕಾದಂಬರಿಯನ್ನು ಮೆಚ್ಚಿದ ಓದುಗರಿಗೆ ಅದರ ಕಥಾಲೋಕದಲ್ಲಿ ಇನ್ನಷ್ಟು ಮುಳುಗೇಳುವ ಅವಕಾಶ ಕಲ್ಪಿಸುವದು.  ಆದ್ದರಿಂದ ಹಿಂದೆಂದೂ ಚಿತ್ರ ಬರೆಯದಿದ್ದರೂ ನೀವೀ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೋಟೋಶಾಪ್‌ ಬರಲೇಬೇಕು ಅಂತ ಇಲ್ಲ. ನೀವೇ ತೆಗೆದ ಫೋಟೊ, ಬಿಳಿಹಾಳೆ, ಬಣ್ಣ, ಬ್ರಷ್ಯು, ಕತ್ತರಿ, ಗೋಂದು ಏನನ್ನಾದರೂ ಬಳಸಿ. ಫೋಟೊ ತೆಗೆದು ಶೀರ್ಷಿಕೆ ಸೇರಿಸಿ ಕಳಿಸಿ.
ನನ್ನ cr'eat'ivity ಅಡಿಗೆ ಮಾಡಿ ತಿನ್ನುವುದು ರಲ್ಲೇ ಮುಗಿದು ಹೋಗುತ್ತೆ, ಅದಕ್ಕೆ ಸ್ಪರ್ಧೆಯಲ್ಲಿ ಹೇಳಿದ ಹಾಗೆ ಯಾಕೆ ಒಂದು ಕೈ ನೋಡಬಾರದು ಅಂತ contest ನಲ್ಲಿ ಪಾಲ್ಗೊಂಡೆ.


 thought i was trying to depict the confused mind in this coverpage. the illustration is by Niharika. Personally this is my favorite


This made to the final 12 and surprise of surprises made it to the last 5 and got a special mention by the Judge for its abstract depiction and also the reasons why this was discarded. AND i agree with the judge this had nothing to do with the novel. The exciting part of this Novel Shikari (which has seen many edition - the copy with me shows the year  2007- the book was first published in 1979) was that the contestants had to read the book. My favorite is Cheda another novel by Sri Yashawanth Chittal and Shikari comes a second. ( used Freshpaint from my windows phone, Transferred it to artRage and final touches in MsPaint for this abstract drawing).

 Nihas cover designs:


Here she has scanned her Psychology answer papers and drew the warli figures in ink and then used 'invert colour ' option in MsPaint, brought them all together in this coverpage. This is my favorite
The photograph of the hand and its shadow is her own. She tried to photograph my hand it did not come out nice. I tried to photograph hers and she was not happy with the result, so she shot her own hand. anyways she is a lefty. :-) Just loved this cover page cos she attempted this after reading the Novel. But this consumed a lot of time and she almost gave up in between. i had promised her that i would give her a prize cos this was an honest attempt.  There was some problem with resolution which we could not rectify. But Raghu has given her guidance for any future attempt. :-)
If i were the judge i would choose this design for its enigmatic depiction

In the final 12: here is the link. Two of Niha's coverpages made it to the final 12.

http://www.chukkubukku.com/event/mukhaputa-shikari/final12

Here is the Judge's comment:
http://www.chukkubukku.com/kagada/1386184861
Anyways Niharika will have triple treat today. first because she turns 21 today, second for winning the contest and third one to keep my promise.

The contest was organised by Chukkubukku-an exclusive website and the only such  to my knowledge which is completely dedicated to Kannada literature, and  Ankita Pustaka.The covers were judged by Sri Channakeshava- theatre personality and a renowned artist.

here is the link to the web

www.chukkubukku.com

We both enjoyed a lot.

Never judge a book by its cover ಅನ್ನುತ್ತಾರಾದರೂ ನನಗೆ ಕವರ್ ಪೇಜ್ ಚಂದ ಇರಬೇಕು.  ಆಪ್ತ ಮಿತ್ರರೊಬ್ಬರು ಒಂದು ಪುಸ್ತಕ ಓದಲು suggest ಮಾಡಿದ್ದರು. ನಾನು- ಪುಸ್ತಕದ ಕವರ್ ಪೇಜ್ ಚೆನ್ನಾಗಿರಲಿಲ್ಲ ಅದಕ್ಕೆ ತೆಗೊಂಡಿಲ್ಲ ಅಂದಾಗ ಸರಿ ಬೈದು ಒಂದು ಉದ್ದ ಮೈಲ್ ಕಳಿಸಿ ಕೆಲವು ದಿನ ಮಾತು ಬಿಟ್ಟಿದ್ದರು. 

Moral of the story is : give it (anything) your best shot, one  has every chance to win. ;-) :-)

ಏನಂತೀರಾ??

November 25, 2013

ಆಸ್ಪತ್ರೆ ಝಲಕ್ ಗಳು


ನನಗೋಸ್ಕರ ಆಸ್ಪತ್ರೆಗೆ ಹೋಗೋದು ಕಡಿಮೆ. 40 ಆದ ನಂತರ ವರ್ಷಕ್ಕೆ ಒಂದು ಸಲ ಪೂರ್ತಿ ಚೆಕ್ ಅಪ್ ಮಾಡಿಸಿಕೊಳ್ಳೋ ಕೆ ಹೋಗ್ತೀನಿ. ಇಲ್ಲದಿದ್ದರೆ ಕುಟುಂಬದವರ ಆಪ್ತರ ಜತೆಗಾರಳಾಗಿ ಹೋಗೋದು ಹೆಚ್ಚು.



ಇತ್ತೀಚಿಗೆ ರೂಟಿನ್ ಚೆಕ್ ಅಪ್ ಗೆ ಗೈನಕಾಲಜಿಸ್ಟ್ ಬಳಿ ಹೋಗಿದ್ದೆ. ನನಗೆ 15 ನೆ ನಂಬರ್ ವೈಟಿಂಗ್ ಲಿಸ್ಟ್.  ಆಗಲೇ ಪ್ರೆಗ್ನೆನೆನ್ಸಿ ಯ various stage ನಲ್ಲಿರೋ ಹುಡುಗಿಯರು/ಮಹಿಳೆಯರು ತಮ್ಮ ಸರತಿಗೋಸ್ಕರ ಕಾಯುತ್ತಿದ್ದರು. ಈಗಿನ ಹೊಸ ಟ್ರೆಂಡ್, ಪ್ರೆಗ್ನೆನ್ಸಿ ಸಮಯದಲ್ಲಿ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಬಂದು ಡಾಕ್ಟರ್ ನ ಕಾಣುತ್ತಾರೆ. ನನ್ನ ಸಮಯದಲ್ಲಿ ಮನೆಯಲ್ಲಿನ ಯಾವುದಾದರು ಮಹಿಳೆ, ಅಮ್ಮ ಅಥವಾ ಹಲವಾರು ಬಾರಿ ನಾನೊಬ್ಬಳೆ ಹೋಗಿದ್ದು ನೆನಪಿದೆ. ಒಟ್ಟಿಗೆ ಅವರು ಡಾಕ್ಟರ್ ನ ಕನ್ಸಲ್ಟ್ ಮಾಡೋದು ನನಗೆ ಖುಶಿ. ಇರಲಿ. ಆ ದಿನ ಡಾಕ್ಟರ್ ಬರೋದು ಲೇಟ್. ಎಲ್ಲೋ ಟ್ರಾಫಿಕ್ ನಲ್ಲಿ ಸಿಕ್ಕಾಕೊಂಡಿದ್ದರು. ಅದರಲ್ಲಿ ಕೆಲವರು ಸ್ಕ್ಯಾನಿಂಗ್ ಗೋಸ್ಕರ ತುಂಬ ನೀರು ಕುಡಿದುಕೊಂಡು ಬಂದಿದ್ದು ಅವರಿಗೆ ಮೂತ್ರ ವಿಸರ್ಜನೆಯ ತುರ್ತು ಪಾಪ. ಮೂತ್ರ ಮಾಡಿ ಬಂದರೆ ಪುನ: ನೀರು ಕುಡಿದು ಬ್ಲ್ಯಾಡರ್ ತುಂಬುವ ತನಕ ಕಾದು ಸ್ಕಾನ್ ಮಾಡಿಸಬೇಕು. ಸಮಯ ಆಗಲೇ 8.30 ದಾಟಿತ್ತು. ಅದರಲ್ಲಿ ಒಬ್ಬ ಹುಡುಗಿಯ ಗಲಾಟೆಯೋ ಗಲಾಟೆ. ನೀರು ಕುಡಿದು ಅಬಾರ್ಶನ್ ಆದ್ರೆ ನಾನು ಇಲ್ಲೇ ಸತ್ತು ಹೋಗ್ತೀನಿ, ಅದರ ಪಾಪ ನಿನ್ನ ಮೇಲೆ ಅಂತ ಡಾಕ್ಟರ್ ನ ಎಸಿಸ್ಟೆಂಟ್ ಮೇಲೆ ಹರಿಹಾಯುತ್ತ ಇದ್ದಳು. ಆಕೆಗೆ ಇದೆಲ್ಲಾ ಮಾಮೂಲಿ ಅನ್ನಿಸುತ್ತೆ ಆಕೆ ಸುಮ್ನೆ ಮುಖದ ತುಂಬೆಲ್ಲ ಮುಗುಳ್ನಗು ಇಟ್ಟುಕೊಂಡೇ ಇದ್ದಳು. ಇನ್ನೊಬ್ಬಳಂತೂ ತನ್ನ ಗಂಡನ ಕೈ ಕಚ್ಚುತ್ತಿದ್ದಳು. ಆದರೆ ಕೂತಕಡೆಯಲ್ಲೇ ನಿಯಂತ್ರಣ ಇಲ್ಲದೇ ಮೂತ್ರ ಹೊಯ್ದು ಬಿಟ್ಟು ಅಳಲು ಶುರು ಮಾಡಿದಳು.ಹಿರಿಯರಾದನಾವು ಕೆಲವು ಜನ ಆಕೆಗೆ ಸಮಾಧಾನ ಮಾಡಿದೆವು. ಇದೆಲ್ಲ ಮಾಮೂಲು , ಅವಮಾನ ಪಡುವಂತಹದ್ದು ಏನೂ  ಇಲ್ಲ ಅಂತ ಆಕೆಗೆ ಮನೆಗೆ ಹೋಗಲು ಸಲಹೆ ನೀಡಿದೆವು. ಡಾಕ್ಟರ್ ಬಂದ ಮೇಲೆ ನೀರು ಕುಡಿದವರನ್ನು ಮೊದಲು ಒಳಗೆ ಬಿಟ್ಟಳು ಸಹಾಯಕಿ. ಸಧ್ಯ ಡೆಲಿವರಿ ಯಾಗೋ ಕೇಸ್ ಯಾವುದೂ ಇರಲಿಲ್ಲ.  ಮತ್ತು ಉಳಿದ ಕೆಲವರು ಅವರ ವಾಂತಿ ಸಂಕಟ, ಹೊಟ್ಟೆಯ ಗಾತ್ರ ಎಲ್ಲ ಕಂಪೇರ್ ಮಾಡ್ತಿದ್ದರು. ನನ್ನದು ರೂಟೀನ್ ಚೆಕ್ ಅಪ್ ಮತ್ತು ಹೇಗೂ ಆಸ್ಪತ್ರೆಗೂ ಮನೆಗೂ ಅಷ್ಟು ದೂರವಿರಲಿಲ್ಲದಿಂದ ನಾನು ಕೊನೆಯಲ್ಲಿ ಡಾಕ್ಟರ್ ಅವರನ್ನು ಭೇಟಿ ಮಾಡಿ ಬಂದೆ. ಅದೊಂದು ಬೇರೆನೆ ಲೋಕ. 


ಶ್ರೀಕಾಂತ್ ಗೆ ಒಂದು ರಾತ್ರಿ 1 ಗಂಟೆ ಹೊತ್ತಿಗೆ ಕಿಡ್ನೀ ಸ್ಟೋನ್ ಪ್ರಾಬ್ಲಮ್ ಆಗಿ ಆಸ್ಪತ್ರೆಗೆ ಎಡ್ಮಿಟ್ ಮಾಡಬೇಕಾಯ್ತು. ಡ್ರಿಪ್ಸ್ ಪೈನ್ ಕಿಲ್ಲರ್ ಎಲ್ಲ ಕೊಟ್ಟು ಶ್ರೀಕಾಂತ ನಿದ್ದೆಯ ಮಂಪರಿನಲ್ಲಿದ್ದರು. ನನಗೆ ರಾತ್ರಿ ಮೊದಲೇ ನಿದ್ದೆ ಬರಲ್ಲ. ಮತ್ತು ಅದು ಆಸ್ಪತ್ರೆ ಅದರ ಮೇಲೆ ಸೊಳ್ಳೆಗಳ ಕಾಟ, ನಿಶಬ್ದ ಆಸ್ಪ್ತ್ರೆಯಲ್ಲಿನ ತರಹವಾರಿ ಸದ್ದುಗಳು, ಯಾರದೋ ಕೆಮ್ಮು, ಮಾನಿಟರ್ ಗಳ ಬೀಪ್. ಇದ್ದಕ್ಕಿದಂತೆ ಒಬ್ಬ ಪೇಶೆಂಟ್ ನ ತಂದು ಶ್ರೀಕಾಂತ ಪಕ್ಕದ ಬೆಡ್ ನಲ್ಲಿ ಎಡ್ಮಿಟ್ ಮಾಡಿದರು. ಇಂಜೆಕ್ಷನ್, ಸಲೈನ್ ನಳಿಗಳನ್ನು ಅವನಿಗೆ ಲಗತ್ತಿಸಿದರು. ತುಂಬ ಜ್ವರದಿಂದ ಹುಡುಗ ನಡುಗ್ತಾ ಇದ್ದ. ಕೊನೆಗೂ ಗೌಜು ಗಡಿಬಡಿ ನಿಲ್ಲಬೇಕಾದ್ರೆ ಸಮಯ ಮೂರು ಗಂಟೆ. ಅವನ ಜತೆ ಇದ್ದ ಮಹಿಳೆ ಆಗಲೆ ನಿದ್ರಾ ಲೋಕಕ್ಕೆ ಜಾರಿ ಗೊರಕೆ ಹೊರಡಿಸುತ್ತಿದ್ದರು. ನಾನು ಓದಲು ಪುಸ್ತಕ ಒಯ್ದಿದ್ದೆನಾದರೂ (ಆಸ್ಪತ್ರೆಗೆ ಹೋಗುವಾಗ ನನ್ನ ಬಳಿ ದೊಡ್ಡ ನೀರಿನ ಬಾಟಲ್, ಒಂದು ಬುಕ್,ಸ್ಕ್ರಿಬ್ಲಿಂಗ್ ಪ್ಯಾಡ್, ಪೆನ್, ಸ್ಟೀಲ್ ಲೋಟ, ಸಣ್ಣ ಪ್ಲೇಟ್ , ಸ್ಪೂನ್, ಸ್ಯಾವ್ಲಾನ್ ಬಾಟಲ್, ಟಿಸ್ಯೂ ಪೇಪರ್ - ಇವಿಷ್ಟು ಇರುತ್ತವೆ.)ರಾತ್ರಿಯ ಮಂದ ದೀಪದಲ್ಲಿ ಓದಲು ಆಗುವುದಿಲ್ಲ. ಕಿಟಕಿಯಿಂದ ಹೊರ ನೋಡಿದರೆ ಸ್ಟೀಟ್ ಲೈಟ್ ನಲ್ಲಿ ಕಾಣುತ್ತಿದ್ದ ಯಾರದ್ದೋ ಮನೆಯ ಟಾರಸಿ ಅಲ್ಲಿನ ಕೆಲವು ಹೂ ಕುಂಡಗಳು. ಬೆನ್ನು ನೋಯಲು ಶುರು ಆಗಿದ್ದಕ್ಕೆ ಹಾಗೆ ಬೆಂಚ್ ಮೇಲೆ ಅಡ್ಡಾದೆ. ಪಕ್ಕದ ಬೆಡ್ ನ ಹುಡುಗ ನಿದ್ದೆಯಲ್ಲೇ ನರಳುತ್ತಿದ್ದ. ಸ್ವಲ್ಪ ಹೊತ್ತಿಗೆ 'ಅಮ್ಮ' ಅಂದ ಹಾಗೆ ಅನ್ನಿಸಿತು. ಕೆಲ ನಿಮಿಷ ಬಿಟ್ಟು ಪುನ: ಆ ಹುಡುಗ ಕರೆದದ್ದು ಕೇಳಿಸಿತು. ಹಾಗಾಗಿ ಪಕ್ಕದಲ್ಲಿ ಮಲಗಿರುವ ಹೆಂಗಸು ಅವನ ಅಮ್ಮ ಅಂತ ಗೊತ್ತಾಯಿತು. ಬಹುಶ: ಬೆಳಗಿನಿಂದ ದುಡಿದು ದಣಿದ ಜೀವ, ಈ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು. ನಾನೇ ಅವನ ಬಳಿ ಹೋಗಿ 'ಅಮ್ಮ ಗಾಢ ನಿದ್ದೆಯಲ್ಲಿದ್ದಾರೆ, ಏನು ಬೇಕಾಗಿತ್ತು? ತುಂಬಾ ಚಳಿ, ರಗ್ ಬೇಕಿತ್ತು ಅಂದ. ಒಂದು ರಗ್ ಆಗಲೇ ಅವನಿಗೆ ಹೊದಿಸಿ ಆಗಿತ್ತು. ಸರಿ ನರ್ಸ್ ಸ್ಟೇಷನ್ ಬಳಿ ಹೋದೆ. ನರ್ಸ್ ಗಳು ಮಲಗಿದ್ದರು. ಒಂದು ರೂಮ್ ಹೊಕ್ಕೆ 'ಸಿಸ್ಟರ್' ಅಂದೆ, ಆಕೆ ಧಡಕ್ಕನೆ ಎದ್ದು ಕುಳಿತು 'ಏನಾಯ್ತು' ಅಂತ ಅವಳ ಮಲಯಾಳಿ accent ನಲ್ಲಿ ಕೇಳಿದಳು. ಏನಿಲ್ಲ ನಮ್ಮ ರೂಮ್ ನಲ್ಲಿರೋ ಇನ್ನೊಂದು ಪೇಶೆಂಟ್ ಗೆ ರಗ್ ಬೇಕಾಗಿತ್ತು. ಎಲ್ಲಿದೆ ಅಂತ ಕೇಳಿದೆ. ಆಕೆ ಅಲ್ಲೆ ಕಪಾಟು ತೋರಿಸಿ, ಏಳಲಿಕ್ಕೆ ಹೊರಟಳು, ನಾನು ಬೇಡ ಅಂತ ಸನ್ನೆ ಮಾಡಿ, ರಗ್ ಒಯ್ದು ಆ ಹುಡುಗಂಗೆ ಹೊದೆಸಿದೆ. ಸುಮಾರು 5 ಗಂಟೆ ಹೊತ್ತಿಗೆ ಆ ಹುಡುಗ ಕೆಮ್ಮಲು ಶುರು ಮಾಡಿ ಎದ್ದು ಕುಳಿತ, ವಾಂತಿ ಮಾಡುತ್ತಾನೇನೋ ಅಂತ ಭಯ ಆಯ್ತು. ಅವನ ಅಮ್ಮ ಇನೂ ನಿದ್ರೆಯಲ್ಲೇ ಇದ್ದರು. ನನಗೇನೂ ತೋಚದೆ ಬೆಡ್ ಕೆಳಗಿರುವ ಬೆಡ್ ಪ್ಯಾನ್ ಕೊಟ್ಟೆ. ಅವನು ಅದರಲ್ಲಿ ವಾಂತಿ ಮಾಡಬೇಕಾದ್ರೆ, ನರ್ಸ್ ಸದ್ದು ಕೇಳಿಸಿ ಬಂದು ದೊಡ್ಡ ಲೈಟ್ ಹಾಕಿದಳು. ಅವಳು ಬೆಡ್ ಪ್ಯಾನ್ ಹಿಡಿದುಕೊಂಡಳು, ನಾನು ಹೊರಡ ಬೇಕಾದರೆ ನನ್ನ ಕಣ್ಣು ಅಪ್ರಯತ್ನವಾಗಿ ಬೆಡ್ ಪ್ಯಾನ್ ಕಡೆ ಹೋಯಿತು. ಅದರ ತುಂಬಾ ರಕ್ತ. ಹೆದರಿ ಬಿಟ್ಟೆ. ಇನ್ನೊಬ್ಬ ನರ್ಸ್ ಬಂದು ಅವನಿಗೆ ಇಂಜೆಕ್ಷನ್ ಚುಚ್ಚಿದರು. ಆಮೇಲೆ ಆ ಹುಡುಗ ಮಲಗಿದ. ನಾನು ಆ ನರ್ಸ್ ಬಳಿ ಹೋಗಿ ಕಳಕಳಿಯಿಂದ 'ಎಷ್ಟೊಂದು ರಕ್ತ ಇತ್ತಲ್ಲವಾ' ಅಂದೆ. ನರ್ಸ್ ಏನೋ ಹೇಳಲು ಹೊರಟವಳು 'ಇನ್ವೆಸ್ಟಿಗೇಶನ್ ನಡೀತಾ ಇದೆ' ಅಂತ ಅಂದಳು.
ಬೆಳಿಗ್ಗೆ ಅವನ ಅಮ್ಮ ನನಗೆ ಎಷ್ಟೊಂದು ಥ್ಯಾಂಕ್ಸ್ ಹೇಳಿದರೆಂದರೆ ನನಗೆ ತುಂಬಾ ಮುಜುಗರ ಆಯ್ತು. ಅವರು ಸರಕಾರಿ ನೌಕರಿಯಲ್ಲಿದ್ದಾರಂತೆ. ಮಗನಿಗೆ ಬಿಟ್ಟು ಬಿಟ್ಟು ಜ್ವರ ಬಂದು ಹಿಂದಿನ ದಿನ ಸಂಜೆ ಜ್ವರ ಏರಿ ಮೇಲುಗಣ್ಣಾದಾಗ ಮನೆಯ ಬಳಿಯ ಆಸ್ಪತ್ರೆ ಕರೆದುಕೊಂಡು ಹೋಗಿ ಆ ಅಸ್ಪತ್ರೆಯ ಡಾಕ್ಟರ್ ಸಲಹೆ ಮೇರೆಗೆ ಶ್ರೀಕಾಂತ ಎಡ್ಮಿಟ್ ಆಗಿರುವ ಆಸ್ಪತ್ರೆಗೆ ಕರೆದು ತಂದು ಎಡ್ಮಿಟ್ ಮಾಡಿದರು. ಕೆಲ ತಿಂಗಳ ಹಿಂದೆಯಷ್ಟೆ ಅವನು ಕೆಲಸಕ್ಕೆ ಸೇರಿದ್ದನಂತೆ. ಹೆಸರು ರಘು. ಅವನಿಗೆ ಪಾಪು ಪಾಪು ಅಂತ ಕರೆಯುವುದು ತುಂಬಾ ಖುಶಿ ಅನ್ನಿಸ್ತು. :-)
 ಬೆಳಿಗ್ಗೆ 11 ಗಂಟೆ ಹೊತ್ತಿಗೆ ಯೂರೋಲೊಜಿಸ್ಟ್ ಬಂದು ನೋಡಿದ ನಂತರ ಶ್ರೀಕಾಂತ ಗೆ ಪುನ: ಸ್ಕ್ಯಾನ್ ಮಾಡಿಸಿ ಕೊಂಡು, ಸ್ಟೋನ್ ಬಿದ್ದು ಹೋಗಿದೆಯೆಂದು , ಡಿಸ್ಚಾರ್ಜ್ ನ formalities ಪೂರ್ಣ ಗೊಳಿಸಿ, ಈಗ ಮಾಲವಿಕಾ ಕೂಡ ಬಂದಿದ್ದರಿಂದ ಅವಳು ಉಳಿದ ಕೆಲಸಗಳನ್ನು ನಿಭಾಯಿಸಿದಳು. ನಾನು ಔಷಧಿ ಎಲ್ಲ ಬ್ಯಾಗ್ ನಲ್ಲಿ ತುಂಬಿದೆ, ಶ್ರೀಕಾಂತ್ ಸಿಸ್ಟರ್ ಹತ್ತಿರ ಮಾತಾಡಲು ಹೋಗಿದ್ದರು. ಅಷ್ಟರಲ್ಲೇ ಆ ಹುಡುಗನ ತಂದೆ ಬಂದು ಅವನ ಟೆಸ್ಟ್ ರಿಪೋರ್ಟ್ ನೋಡಿ 'ಅಯ್ಯೋ ಕಂದಾsss ಇದೇನಾಗಿ ಬಿಡ್ತೂ' ಅಂದಾಗ ನನ್ನ ಮೈ ಮೇಲೆ ಮುಳ್ಳು ಎದ್ದು ಬಂತು ಅಷ್ಟು ದಾರುಣವಾಗಿ ಬಂತು ಆ ದನಿ. ನಾನು ತಲೆ ಎತ್ತಿ ನೋಡಿದಾಗ ಅಪ್ಪ ಮಗ ಇಬ್ಬರ ಮುಖದ ಮೇಲೂ ಗಾಬರಿ. ನನ್ನ ಬ್ಯಾಗ್ ತುಂಬಿಸುವ ಕೆಲಸ ಮುಗಿದಿತ್ತು. ಅವರಿಗೆ ಪ್ರೈವಸಿ ಓದಗಿಸಲು ನಾನು ಹಿಂದುರಿಗಿ ನೋಡದೆ ಅಲ್ಲಿಂದ ಹೊರಬಿದ್ದೆ :-(
*********************************************************************************

ಪುಟ್ಟ ರಿಯಾ ಬಗ್ಗೆ ಹಿಂದಿನ ಹಲವಾರು ಪೋಸ್ಟ್ ಗಳಲ್ಲಿ ಬರೆದಿದ್ದೇನಿ. ಅವಳಿಗೆ ಕೀಮೋಥೆರಪಿ ಆದ ಕೆಲ ದಿನ ನಂತರ ರಕ್ತದಲ್ಲಿನ ಪ್ಲೇಟಲೆಟ್ ನ ಕೌಂಟ್ಸ್ ಗೋಸ್ಕರ್ ರಕ್ತ ತಪಾಸಣೆಗೆ ಹೋಗಿದ್ದೆವು. ಹೀಗೆ ಒಂದು ಸಲ ನಾನು ಹಣ ಪಾವತಿಸಿ ರಿಸೀದಿಗೋಸ್ಕರ ಕಾಯ್ತಾ ಇದೆ. ಆ ದಿನ ರಿಸಪ್ಷನ್ ಕೌಂಟರ್ ನಲ್ಲಿ ಸಿಕ್ಕಾಪಟ್ಟೆ ರಶ್. ಪ್ರಿಂಟರ್ ಜ್ಯಾಮ್ ಆಗಿ ರಸಿದಿ ಕೊಡಲು ತಡವಾಗುತ್ತಿತ್ತು. ಆಗಲೇ ಇಬ್ಬಿಬ್ಬರು ಪ್ರಿಂಟರ್ ಬಿಚ್ಚಿ ಅದನ್ನು ಸರಿಪಡಿಸುತ್ತ ಇದ್ದರು. ಒಬ್ಬ ನರ್ಸ್ ಗೂ ಯಾವುದೋ ರಿಪೋರ್ಟ್ ನ ಪ್ರಿಂಟ್ ಅಔಟ್ ಬೇಕಾಗಿದ್ದರಿಂದ ಆಕೇನೂ ಹುಬ್ಬುಗಂಟಕ್ಕಿ ಅಲ್ಲೇ ನಿಂತಿದ್ದಳು. ಅದೊಂದು ಚಿಕ್ಕ diagnostic centre. ಅಷ್ಟರಲ್ಲೇ ಒಬ್ಬ ಬಂದು 'ಮ್ಯಾಡಂ, ತಂದಿವ್ನಿ ಅಂತ ತರೆ ಕೆರೆದುಕೊಳ್ಳಹತ್ತಿದ. ಆಕೆ ಏನಪ್ಪ ಅದು ಅಂದ್ಲು. ಅದೇ ಮ್ಯಾಡಂ ಅಂತ ನಂದಿನಿ ಸ್ವೀಟ್ಸ್ ನ ಉರುಟು ಡಬ್ಬಿ ಕೌಂಟರ್ ಮೇಲಿಟ್ಟ. ನಾನು 'ಬಹುಶ: ಮಗು ಹುಟ್ಟಿದ ಖುಶಿಗೆ ಸ್ವೀಟ್ಸ್ ತಂದಿದ್ದಾನೆ ಅಂದುಕೊಂಡೆ. ನರ್ಸ್ ಪುನ: ಏನಪ್ಪ ಅದು ಅಂತ ಕೇಳಿದಾಗ, ಅದೇ ಮ್ಯಾಡಂ ಅವ್ರೆ, ಎರಡು ನಂಬ್ರ. ನರ್ಸ್ ತಲೆ ಚಚ್ಚಿಕೊಂಡು ಇದೇನ್ರಿ? ಟೆಸ್ಟ್ ಮಾಡಕ್ಕೆ ತರಲಿಕ್ಕೆ ಹೇಳಿದ್ದು, ಟೇಸ್ಟ್ ಮಾಡಕ್ಕಲ್ಲ ಅಂದಾಗ ನಾನಂತು ಬಿದ್ದು ಬಿದ್ದು ನಗಲಾರಂಭಿಸಿದೆ. ಅಸ್ಪತ್ರೆಯಲ್ಲಿ ಕಂಟೈನರ್ ಕೊಡುತ್ತಾರೆ ಮಲ ಪರೀಕ್ಷೆಗೆ. ಅವನಿಗೆ ಸರಿಯಾಗಿ ತಿಳಿಸಿಲಿಲ್ಲವೇನೋ ಅವನು ನಂದಿನಿ ಸ್ವೀಟ್ ಡಬ್ಬಿಯಲ್ಲಿ ಅವನ ಮಲ ನೀಟಾಗೆ ಹಾಕಿಕೊಂಡು ತಂದಿದ್ದ. ನರ್ಸ್ ಗೂ ನನಗೆ ಅಲ್ಲಿಗೆ ನಾನು ಹೋಗ್ತಾ ಬರ್ತಾ ಇದ್ದಿದ್ದರಿಂದ ಸ್ವಲ್ಪ ಸಲಿಗೆ ಇತ್ತು. ನಾನು 'ನೀವು ಸರಿಯಾಗಿ ಹೇಳಬೇಕಿತ್ತು' ಅಂದ್ರೆ ಮತ್ತೆ ಡೆಮೋ ಮಾಡೋಕ್ಕು ಹೇಳ್ತಿರಾ ಅಂತ ನನ್ನ ಜತೆ ಅವರು ಮುಸಿ ಮುಸಿ ನಗಲು ಶುರು ಮಾಡಿದರು. ಈಗ ನಂದಿನಿ ಬೂತ್ ಬಳಿ ಬಂದಾಗಲೆಲ್ಲ ಆ ಘಟನೆ ನೆನಪಾಗಿ ನಗು ಹಾದು ಹೋಗುತ್ತದೆ.








November 21, 2013

ವಸುಧೇಂದ್ರರ ಬರಹಗಳ ಬಗ್ಗೆ ಸಂಕಿರಣ

ಒಂದು ಹೊಸ ಸಮಸ್ಯೆ ಶುರು ಆಗಿದೆ. ನಾನು ಯಾವುದಾದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರೆ, ಅದರ ಬಗ್ಗೆ ರಿಪೋರ್ಟ್ ಮಾಲತಿ ಮ್ಯಾಡಂ ಬ್ಲಾಗ್ ನಲ್ಲಿ ಓದ ಬಹುದು ಅಂತ. ಅಯ್ಯೋ ನಾನು ಎಟೆಂಡ್ ಆಗೋದು ನನಗೆ ತುಂಬಾssss ಆಪ್ತ ಎನಿಸಿದವರ ಸಮಾರಂಭಗಳನ್ನು ಮಾತ್ರ. ಮತ್ತೆ ಭಾಗವಹಿಸಿದ ಸಮಾರಂಭಗಳದ್ದೆಲ್ಲsss ನಾ ಬರೆಯಲ್ಲ. ಈ ಹಿಂದೆ ವಸುಧೇಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿ ಬಂದು ಅದರ ಬಗ್ಗೆ ಸುಮ್ನೆ ತಮಾಶೆಗೆ ಬರೆದಿದ್ದು, ಅದು ಫೇಸ್ ಬುಕ್ ನಲ್ಲಿ ಶೇರ್‍ ಆಗಿದ್ದು ಇಂತಹ ಗಲತ್ ಫೆಹಮಿ ಗೆ ಕಾರಣ. :-)

ಹೌದು ವಸುಧೇಂದ್ರ ಅತ್ಯಂತ ಆತ್ಮೀಯರು. ನಾನು ಅವರನ್ನು ಫ್ರೆಂಡ್ ಅನ್ನುತ್ತೇನಾದರು, ಸಾಧಾರಣ ವಾಗಿ ಫ್ರೆಂಡ್ಸ್ ಆದವರು ಎಷ್ಟು ಒಡನಾಡಬೇಕು ನಾನು ಅಷ್ಟು ಅವರ ಜತೆ ಒಡನಾಡುವುದಿಲ್ಲ. ಆದರೆ ನನಗೆ ಅಗತ್ಯ ಬಿದ್ದಾಗ ಯಾವುದೇ ಸಹಾಯ (ಆಫಿಸ್ ಫ್ರಂಟ್) ಬೇಡಿದರು ಅದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಭೇಟಿಯಾಗಿದ್ದಾಗಲೂ ಅವರು ಯಾರ ಬಗ್ಗೆ ಕುಹುಕ ಮಾತಾಡುವುದು ಇರಲಿ, ಬೇರೆಯವರ ಬಗ್ಗೆ ಕೆಟ್ಟದ್ದು ಮಾತಾಡುವುದಿರಲಿ ಮುಂತಾದ್ದನ್ನು ಮಾಡುವುದಿಲ್ಲ.  ತುಂಬ ಹಾಸ್ಯ ಪ್ರವೃತ್ತಿಯವರು.  ಇದರಿಂದ ನನಗೆ ಅವರ ಜತೆ ತುಂಬಾ ಕಂಫರ್ಟೇಬಲ್ ಅನ್ನಿಸುತ್ತೆ.
ಅವರ ಬರಹ ಕೂಡ ಅವರಂತೆಯೇ ಆಪ್ತ, honest. ಜೀವನ ಪ್ರೀತಿಯಿಂದ ಕೂಡಿದ ಬರಹಗಳು is not everybody's cup of tea ((or coffee), ಆಮೇಲೆ ಕಾಫಿ ಪ್ರಿಯರು ನನ್ನ ಮೇಲೆ ಸಿಟ್ಟಾಗುವುದು ಬೇಡ :-))
ನಿನ್ನೆಯ ಕಾರ್ಯಕ್ರಮದ ಬಗ್ಗೆ ಚುಕ್ಕುಬುಕ್ಕು ವೆಬ್ಸೈಟ್ ನಲ್ಲಿ ಹಾಕುತ್ತಾರೆಂದು ರಘು ಹೇಳಿದ್ದಾರೆ. ಅದನ್ನು ಇಲ್ಲಿ ಲಿಂಕಿಸುತ್ತೇನೆ. ಎಷ್ಟು ಆಪ್ತವಾಗಿತ್ತು ನಿನ್ನೆಯ ಕಾರ್ಯಕ್ರಮ ಎಂದು ನಿಮಗೂ ಗೊತ್ತಾಗುತ್ತೆ. ಎಂಜಾಯ್

  ಜ್ಯೋತಿ ಫೋನ್ ಬಂದಾಗ ನಾನು "ವಸುಧೇಂದ್ರರ ಕಾರ್ಯಕ್ರಮ ಅಂದ್ರೆ ಸಭೆ ಕಿಕ್ಕಿರಿದು ತುಂಬಿರುತ್ತೆ, ನಾನು ಮೊದಲು ತಲುಪಿದ್ರೆ ನಿಮಗೆ ಸೀಟ್ ರಿಸರ್ವ್ ಮಾಡಿರ್ತೀನಿ ಅಂದಿದ್ದೆ, ಆದರೆ ನಾನು ಮನೆಯಲ್ಲಿ ಒತ್ತು ಶ್ಯಾವಿಗೆ, ಮಿತ್ರ ನೀಲೇಶ ಜವಳಿ ತೀರ್ಥಹಳ್ಳಿಯಿಂದ ಬರುತ್ತಾರೆಂದು ಅರ್ಧ ಅಡಿಗೆ ಮಾಡಿ ಬರುವುದರಷ್ಟರಲ್ಲಿ ನಾನು ತಲುಪುವಾಗ ಸ್ವಲ್ಪ ಲೇಟ್. ಜ್ಯೋತಿ ನನಗೋಸ್ಕರ ಜಾಗ ಕಾಯ್ದಿಟ್ಟಿದ್ದರು. ನಿಹಾ ತೆಗೆದ ಫೊಟೊ. ಸುಮ್ನೆ ನಿಲ್ಲಬೇಡಿ ಏನಾದರೂ ಮಾತಾಡಿ ಅಂದಾಗ ಜ್ಯೋತಿ 'hi malthi how r u? ಅಂದಾಗ ನಾನು ಥಟ್ ಅಂತ 'ಐ ಯಾಮ್ ಫೈನ್' ಅಂತ ನಕ್ಕಾಗ ನಿಹಾ ಕ್ಲಿಕ್ಕಿಸಿದ್ದು. :-)

ಜ್ಯೋತಿ ಕಡಲಾಡಿ, ವಸುಧೇಂದ್ರ ಮತ್ತು ನಾನು. ಅವರ ಫ್ಯಾನ್ ಗಳ ಮಧ್ಯ ಹೊಕ್ಕಿ ಫೋಟೊ ತೆಗೆದದ್ದೆ ಒಂದು ಸಾಹಸ/ಸಂಭ್ರಮ. :-)

ಶತಾವಧಾನಿ ಆರ್ ಗಣೇಶ ಅವರು ಎಷ್ಟೊಂದು ಓದಿಕೊಂಡಿದ್ದಾರೆ ಅಂತ ದಿಗಿಲು ಖುಶಿ ಅನ್ನಿಸಿತು. ಅವರು ಅಂದ ಮಾತು 'ಬರಹ ನಿಂತ ಕಲ್ಲಾಗದಂತೆ ಹರಿಯುವ ಶಾಸನದಂತಿರಬೇಕು'  ತುಂಬ ಇಷ್ಟ ಆಯ್ತು. ಶತಾವಧಾನಿ ಆರ್. ಗಣೇಶ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ. ಅಶೋಕ ಮತ್ತು ವಸುಧೇಂದ್ರರ ಆಪ್ತ ಮಿತ್ರರಾದ ಎಮ್. ದತ್ತಾತ್ರಿ ಅವರ ಬರಹಗಳ (ಕತೆ, ಕಾದಂಬರಿ, ಲಘು ಬರಹ) ಬಗ್ಗೆ ಎಷ್ಟು ಚಂದದ ಮಾತನ್ನಾಡಿದರು ಅಂದ್ರೆ ನಾನು ಪುನ: ಅವರ ಪುಸ್ತಕಗಳನ್ನು ಓದುತ್ತಾ ಇದ್ದೇನೆ. ನನ್ನ ಮಗಳು ನಿಹಾರಿಕಾ ಕನ್ನಡ ಪುಸ್ತಕ ಓದುವುದು ಕಡಿಮೆ. ಶಿಕಾರಿ ಮುಖಪುಟ ಸ್ಪರ್ಧೆಯಲ್ಲಿ ಭಾಗವಹಿಸಲು (ಅದರ ಬಗ್ಗೆ ಪೋಸ್ಟ್ ಮುಂದೆ) ಶಿಕಾರಿ ಓದುತ್ತಿದ್ದಾಳೆ, ಆದರೆ ಕಾರ್ಯಕ್ರಮದಲ್ಲಿ ಘಟಾನುಘಟಿಗಳ ಮಾತು, ಅದಕ್ಕೆ ತಕ್ಕಂತೆ ನಮ್ಮ ನಗು ಚಪ್ಪಾಳೆಯಿಂದ ಎಷ್ಟು ಪ್ರಭಾವಿತಳಾಗಿದ್ದಾಳೆ ಅಂದ್ರೆ ಅವಳು ವಸುಧೇಂದ್ರರ ಪುಸ್ತಕ ಓದಲು ತೊಡಗಿದ್ದಾಳೆ. ಹೇಗೂ ನನ್ನ ಬಳಿ ಅವರು ಬರೆದ ಎಲ್ಲ ಪುಸ್ತಕಗಳು ಇವೆ ಮತ್ತು ಅವಳಿಗೆ ರಜೆ. ಕಾರಣಾಂತರಗಳಿಂದ ನಮ್ಮ ಟೂರ್ ಪ್ರೋಗ್ರಾಮ್ ಕ್ಯಾನ್ಸ್ಲಲ್ಡ್  <೦>
ಇಲ್ಲಿದೆ ಚುಕ್ಕುಬುಕ್ಕು ಲಿಂಕ್ ಅವರು ಅಪ್ ಡೇಟ್ ಮಾಡಿದ ಹಾಗೆ ಓದ್ತಾ ಇರಿ.
http://www.chukkubukku.com/
ಈಗ ಬೈ
:-)

November 14, 2013

ಮಕ್ಕಳ ದಿನಾಚರಣೆ

ನಿಹಾಗೆ ಪರೀಕ್ಷೆ ಮುಗಿದು ಒಂದು ತಿಂಗಳು ಕಾಲೇಜ್ ಗೆ ರಜೆ. ನಾವು ಚಿಕ್ಕ ಪುಟ್ಟ್ ಟೂರ್ ಹಾಕ್ಕೊಂಡಿದ್ದೇವೆ. ಇವತ್ತು ನಿಜ ಹೇಳಬೇಕೆಂದರೆ ನಾವು ಎರಡು ದಿನದ ದಾವಣಗೆರೆ ಟೂರ್ ಹಾಕ್ಕೊಂಡಿದ್ದೆವು.ಮರೆತು ಹೋಗಿತ್ತು. ನಮ್ಮ ಆಫಿಸ್ ನ ರಾಘು ಅವರ ನಿಶ್ಚಿತಾರ್ಥ ಇವತ್ತು ಎಂದು . ರಾಘು ನಮ್ಮ ಸಂಸ್ಥೆ ಸೇರಿ ಆಗಲೇ 10 ವರ್ಷ. ನನಗೆ ಮಗನ ತರಹ. ಹಾಗಾಗಿ ನನ್ನ ಟೂರ್ ಕ್ಯಾನ್ಸಲ್. ಇವತ್ತು ಮಕ್ಕಳ ದಿನಾಚರಣೆಯಲ್ಲವಾ?? ನನಗೆ ಮಾತೆ ಮಾಲತಿ, ಮಾಲದಿಯಮ್ಮೆ, ಅಮ್ಮ, mom ಅಂತ ಕರೆಯುವ ಸುಮಾರು ಮಿತ್ರರಿದ್ದಾರೆ ನನ್ನಷ್ಟೆ ವಯಸ್ಸಿನವರು ಕೂಡ. ನನ್ನ ಪುಟ್ಟ ಸ್ನೇಹಿತನೊಬ್ಬ ಉಡುಪಿಗೆ ನನ್ನನ್ನು ಭೇಟಿ ಮಾಡಲು ಬಂದಿದ್ದ. ನನ್ನ ಅಕ್ಕ (ಓರಗಿತ್ತಿ) ಗೆ 'ನನ್ನ ಮಗ' ಅಂತ ಪರಿಚಯಿಸಿದ್ದೆ. ಅವನು ಹೋದ ಮೇಲೆ ಅವನು ಹೇಗೆ ನಿನ್ನ ಮಗ ಆಗುತ್ತಾನೆ ಅವನು ದೊಡ್ಡ ಹುಡುಗ ಅಂತ ಕೇಳಿದ್ದು, ನಾನು, ಮುನ್ನಾ(ಸುಮತಿ- ಓರಗಿತ್ತಿಯ ಮಗಳು ಹಾಗೂ ಆ ಹುಡುಗನ FB ಪರಿಚಯ ಇರುವವಳು) ) ನಕ್ಕಿದ್ದು ನೆನಪಾಯ್ತು. ಅವರೆಲ್ಲರಿಗೂ happy childrens day from ಮಾತೆ. :-)

ಮಕ್ಕಳ ದಿನಾಚರಣೆ ಅಂದರೆ ನೆನಪಿಗೆ ಬರುವುದು ಎರಡು ಘಟನೆ
೧.ಮುಂಬೈನ ನಮ್ಮ ಮನೆ ಪಕ್ಕದಲ್ಲಿರುವ 8 ವರ್ಷದ ಹುಡುಗಿ. ತಾಯಿಯಿರಲಿಲ್ಲ. ತಂದೆ ಕುಡುಕ. ತಂದೆಗೆ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ. ಆ ಹುಡುಗಿ ಬೆಳಿಗ್ಗೆ ಮುಂಚೆ ಎದ್ದು ಅನತೀ ದೂರದಲ್ಲಿರುವ ಹ್ಯಾಂಡ್ ಪಂಪ್ ನಿಂದ ಮನೆಗೆ ನೀರು ತಂದು ಹಾಕುತ್ತಿದ್ದಳು. ತಿಂಡಿಗೆ ಟಿಫಿನ್ ಬಾಕ್ಸ್ ಗೆ ರೊಟ್ಟಿ ತಟ್ಟಿ ಕೊಡುತ್ತಿದ್ದಳು. ಮಾಡಿದ್ದ ಕೆಲಸ ಅಡಿಗೆ ಸರಿಯಾಗದಿದ್ದರೆ ತಂದೆಯಿಂದ ಒದೆತ/ಪೆಟ್ಟು. ಆ ಪುಟ್ಟ ಸೊಂಟದ ಮೇಲೆ ದೊಡ್ಡ ಬಿಂದಿಗೆ ತರೋದು ಇನ್ನೂ ನನ್ನ ಕಣ್ಣ ಮುಂದೆ ಇದೆ. ಆ ಪುಟ್ಟ ಮುಖದಲ್ಲಿ ದೊಡ್ಡವರ ಗಾಂಭೀರ್ಯ. ಅವಳಿಗೆ ಬಾಲ್ಯವೇ ಇರಲಿಲ್ಲ. ಇಲ್ಲಿ ನಾನು ದುಬಾರಿ ಚಾಕೋಲೇಟ್ ತಿನ್ನುತ್ತ ಬಣ್ಣ ಬಣ್ಣ್ದ ಕತೆ ಪುಸ್ತಕ ಓದುತ್ತಾ ಮಹಾರಾಣಿ ತರಹ ಇದ್ರೆ ಆ ಹುಡುಗಿಗೆ ದಿನ ಇಡೀ ಕೆಲಸ, ಪ್ರೀತಿ ಮಾಡುವವರು ಕೂಡ ಯಾರು ಇಲ್ಲ. :-(

೨.ಅಮ್ಮನ ಮನೆಯಲ್ಲಿ ಕೆಲಸಕ್ಕಿದ್ದ ಅನುಸೂಯ. ಅವಳ ಗಂಡ ಅವಳನ್ನು ಬಿಟ್ಟು ಬೇರೆ ಮದುವೆಯಾಗಿದ್ದ. ಯಾಕೆಂದರೆ ಅನುಸೂಯಾ ಗೆ ನಾಲ್ಕು ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಪುಷ್ಫ. ಒಂದು ದಿನ ಅನುಸೂಯ ಎದೆ ನೋವು ಅಂದವಳೆ, ಪುಷ್ಪ ಅವಳನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಇವಳ ಕೈ ಯಲ್ಲೇ ಅಸುನೀಗಿದಳು. ಆಗ ಪುಷ್ಪಾ 6 ನೇ ಕ್ಲಾಸ್. ಅದಾದ ನಂತರ ಸ್ಕೂಲ್ ಬಿಟ್ಟು ಮನೆಕೆಲಸಕ್ಕೆ ಹೋಗಿ , 10 ನೇ ತರಗತಿ ಪ್ರೈವೆಟ್ ನಲ್ಲಿ ಪಾಸ್ ಮಾಡಿ (ಇದಕ್ಕೆ ನಾನು ತುಂಬಾ ಸಹಾಯ ಮಾಡಿದ್ದೇನೆ ಅನ್ನುವ ಖುಶಿ ನನಗೆ) ಒಳ್ಳೆ ಅಂಕಗಳನ್ನು ಪಡೆದು, ನಮ್ಮ ತಂದೆಯ ಸಹಾಯದಿಂದ ಬ್ಯಾಂಕ್ ನ ಎಟೆಂಡರ್ ಆಗಿ, ಬ್ಯಾಂಕ್ ನ ಕ್ಲರಿಕಲ್ ಪರೀಕ್ಷೆಗೆ ಕೂತು, ಪ್ರೊಮೋಷನ್ ಎಲ್ಲ್ಸ್ ಆಗಿ ಈಗ ಅವಳು ಬೆಳಗಾವಿಯ ಹತ್ತಿರದ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್. ಮೂವರು ತಂಗಿಯರನ್ನು ದಡ ಸೇರಿಸಿ ತನ್ನ ನಲವತ್ತನೇಯ ವಯಸ್ಸಿಗೆ , ಇವಳಂತೇ ಕಷ್ಟ ಪಟ್ಟಿದ ಜೀವ ಒಂದರ ಜತೆ ಮದುವೆಯಾಗಿ, ಹಿಂದಿನ ವರ್ಷ ಅವಳಿಗೆ ಮಗು ಹುಟ್ಟಿದೆ. ಮದುವೆಗೆ ನಾನು ಹೋಗಿದ್ದೆ.

ಮಕ್ಕಳ ದಿನಾಚರಣೆಯೆಂದರೆ ನೆನಪಿಗೆ ಬರುವುದು Mulk Raj Anand ರ 'The Lost Child' ಮತ್ತು ಪಥೇರ್ ಪಾಂಚಾಲಿಯ 'ಆಪೂ'
ಇಲ್ಲಿದೆ ದ ಲಾಸ್ಟ್ ಚೈಲ್ಡ್ ನ ಕೊಂಡಿ. ಮಕ್ಕಳಿಗೆ ಓದಿ ಹೇಳಿ. ಗೂಗಲ್ ನಲ್ಲಿ ಹುಡುಕುವಾಗ ಸಿಕ್ಕಿತು. ತುಂಬ ಚಿಕ್ಕವಳಿರುವಾಗ ಈ ಕತೆ ಓದಿ ದೇವರ ಹತ್ತಿರ ಆ ಮಗುವಿಗೆ ಅವನ ಅಪ್ಪ ಅಮ್ಮ ಸಿಗಲಿ ದೇವರೆ ಅಂತ ಕೇಳಿಕೊಂಡು ಅತ್ತಿದ್ದು ನೆನಪಿದೆ. ಆಗ ಅಜ್ಜನ ಬಳಿ ಬೆಳೆಯುತ್ತಿದ ನನಗೆ ದೂರದೂರಿನಲ್ಲಿರುವ ನನ್ನ ಅಪ್ಪ, ಅಮ್ಮನ, ತಮ್ಮಂದಿರ ನೆನಪು ತುಂಬಾssssss ಕಾಡಿತ್ತು. :-(

http://www.arvindguptatoys.com/arvindgupta/lostchild.pdf

ಪುಸ್ತಕದ ಕಪಾಟು ಕ್ಲೀನ್ ಆಗ್ತಾ ಇದೆ. ಒಂದು ಪುಸ್ತಕದಲ್ಲಿ ನಿಹಾ ಗೆ ಸಿಕ್ಕಿತು ಈ ಚಿತ್ರ. ಇದರಲ್ಲಿ ನಾನು ದ್ರೌಪತಿ/ದ್ರೌಪದಿ,
ನಿಹಾ ಮಾಡಿದ ಡೂಡಲ್. ಪರೀಕ್ಷೆ ಮುಗಿದ ನಂತರ ಅವಳಿಗೆ ತುಂಬಾ art attack ಬರ್ತಾ ಇದೆ.

ಇನ್ನಷ್ಟು ಚಿತ್ರಗಳಿಗಾಗಿ ಕ್ಲಿಕ್ಕಿಸಿ

http://dudledop.blogspot.in/

:-)

November 8, 2013

Life is BEAUTIFUL

ಕೆಲದಿನಗಳ ಹಿಂದೆ ಆಯೋಜಿಸಲಾದ ಅರ್ಬನ್ ಕೃಷಿ ಮೇಳದಲ್ಲಿ ಶ್ರೀಕಾಂತರ ಹಿರಿಯ ಮಿತ್ರರ ಒತ್ತಾಯದ ಮೇರೆಗೆ ನಾವೂ ಒಂದು ಮಳಿಗೆ ಹಾಕಿ ನಮ್ಮ ಗ್ರಾಮ್ಯಾ ಹಾಗೂ ಕೈ ಕ್ರಾಫ್ಟ್ಸ್ ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುವುದು ಕೊನೆ ಘಳಿಗೆಯಲ್ಲಿ ತೀರ್ಮಾನವಾಯಿತು. ಬೆಳಿಗ್ಗೆ ಶ್ರೀಕಾಂತ ಎದ್ದವರೆ ಪೋಸ್ಟರ್ ಮಾಡುವಲ್ಲಿ ನಿರತರಾದರು. ನಾವು ಮೂವರು ಉಳಿದವರ (ನಾನು, ಅಕ್ಕ, ನಿಹಾ) ಚೆನ್ನಾಗಿದೆ/ಚೆನ್ನಾಗಿಲ್ಲ ಗಳ ಮಧ್ಯೆ ಕಡೆಗೂ ನಾವೂ ನಾಲ್ಕ್ಕೂ ಜನ ಒಪ್ಪುವಂತಹ ಪೋಸ್ಟರ್ ತಯಾರಾಯಿತು.  ಅದನ್ನು ಪ್ರಿಂಟ್ ಹಾಕಿಸಬೇಕಿತ್ತು. ಹೆಬ್ಬಾಳ್ ಗೆ ಹೋಗಲು ನಾವು ಗಾಡಿ ಬುಕ್ ಮಾಡಿಕೊಂಡಿದ್ದೆವು. ಹಾಗೆಯೇ ಪೋಸ್ಟರ್ ನ ಪ್ರಿಂಟ್ ಹಾಕಿಸಲು ನಾವು ಯಾವಾಗಲೂ ಹೋಗುವ ರಾಘವೇಂದ್ರ ಪ್ರಿಂಟರ್ಸ್ ಬಳಿ ಹೋದೆವು. ಅವರಿಗೆ ನಾನು-ನಮ್ಮ ಸಂಸ್ಥೆ- ಐಡಿಎಫ್ ನ ಆಫಿಶಿಯಿಲ್ ಪ್ರಿಂಟರ್ಸ್ ಅನ್ನೋದು. ಬೆಳಿಗ್ಗೆ ನಾವು ಏಷ್ಟೆ ಹೊತ್ತಿಗೆ ಬರುತ್ತೇವಂದ್ರೂ ರಾಜಣ್ಣ  ಅವರು ಅಂಗಡಿ ತೆರೆದು ರೆಡಿಯಾಗಿರ್ತಾರೆ. :-)ನಮ್ಮ ಸಂಸ್ಥೆಯ ಸಾಧನೆಗಳಲ್ಲೆಲ್ಲ ಅವರದ್ದೂ ಸಿಂಹ ಪಾಲು ಇದ್ದೇ ಇದೆ.

 ಅಲ್ಲಿ ಅವರ ಕಂಪ್ಯೂಟರ್ ಹಾಳಾಗಿದ್ದರಿಂದ ಶ್ರೀಕಾಂತ ಅದನ್ನು ರಿಪೇರಿ ಮಾಡುವ ಕಾಯಕ ಹೊತ್ತುಕೊಂಡರು. ಇನ್ನು ಸಧ್ಯಕ್ಕೆ ಅಲ್ಲಿಂದ ಬಿಡುಗಡೆಯಿಲ್ಲ ಎಂದು ನನಗೆ ಗೊತ್ತಾಯಿತು. ನನ್ನ ಚೀಲದಲ್ಲಿ ಆದಿನ ಚಾಕೋಲೇಟ್ ಬಿಸ್ಕತ್ ಮುಂತಾದವು ಯಾವುದೂ ಇರಲಿಲ್ಲ. ಅಕ್ಕ ಪಕ್ಕ ಕಣ್ಣು ಹಾಯಿಸಿದಾಗ ಒಂದು ಪುಟ್ಟ ಮೆಡಿಕಲ್ ಸ್ಟೋರ್ಸ್ ಕಂಡಿತು. ಏನಿಲ್ಲದಿದ್ದರೂ ಹಾಲ್ಸ್ , ವಿಕ್ಸ್ ಕಿ ಗೋಲಿ ಆದ್ರೂ ತೆಗೊಳ್ಳುವ ಅಂತಲ್ಲಿ ಹೋದೆ.
ಅಲ್ಲಿ ಒಬ್ಬ ವಯಸ್ಸಾದವರು ಇಡ್ಲಿ ತಿನ್ನುತ್ತಿದ್ದರೆ, ಹೆಂಗಸು ಗಲ್ಲಾದಲ್ಲಿ, ಗಲ್ಲಕ್ಕೆ ಕೈಯಾನಿಸಿ  ನಿಂತಿದ್ದರು. ಮೂಗಿನ ಎರಡೂ ಬದಿ ಮೂಗುತಿ ಹಾಕಿಕೊಂಡು ಚಂದದ ದೊಡ್ಡ ಕುಂಕುಮ ಇಟ್ಟು ಕೊಂಡು ನೋಡಲು ತುಂಬ ಲಕ್ಷಣವಾದ ಮುಖ. ನಾನು ಹೋದ ಕೂಡಲೇ ಹಿರಿಯರು ಏಳಲು ಉಪಕ್ರಮಿಸಿದರು. ನಾನು 'ನಿಧಾನವಾಗಿ ತಿಂಡಿ ಮುಗಿಸಿ ನನಗೇನೂ ಗಡಿಬಿಡಿಯಿಲ್ಲ' ಅಂತಂದೆ. ನನಗೆ ಬೇಕಾದ ಬಿಸ್ಕಿಟ್ ಚಾಕೋಲೇಟ್ ಗಳನ್ನೆಲ್ಲ ಕೌಂಟರ್ ಮೇಲಿರುವ ಡಬ್ಬಿಯಿಂದ ತೆಗೆದು ನಾನೇ ನೀಟಾಗಿ ಕೌಂಟರ್ ಮೇಲೆ ಜೋಡಿಸಿದೆ. ಅಷ್ಟರಲ್ಲಿ ಅವರು ತಿಂಡಿ ಮುಗಿಸಿ, ಒಂದು ಲೋಟ ನೀರು ಕುಡಿದು. ಕೈ ತೊಳೆದು ಬರುತ್ತೇನೆಂದು, ಅಂಗಡಿ ಬದಿಯಲ್ಲಿ ಇದ್ದ ಗೇಟ್ ನೊಳಗೆ ತಟ್ಟೆ ಲೋಟದೊಂದಿಗೆ ಒಳ ಹೊರಟು ಹೋದರು. ಆಗ ಆ ಮಹಿಳೆ 'ಸ್ವಲ್ಪ ಇರಿ, ಅವರು ಕೈ ತೊಳೆದು ಬರುತ್ತಾರೆ' ಅಂದರು. ನಾನು ಸುಮ್ಮನೆ ಮಾತಿಗೆ ಶುರು ಮಾಡಿದೆ. ಎಷ್ಟು ವಯಸಮ್ಮ ನಿಮಗೆ?..................
ನಿಹಾ ಬರೆದ ಈ ಚಿತ್ರದಂತೆ ಇತ್ತು ಅವರ ಮುಖ

ಭಾನುವಾರ ಆದುದರಿಂದ ಅಕ್ಕಪಕ್ಕದ ಅಂಗಡಿಗಳೆಲ್ಲ ಬಂದ್ ಅಥವಾ ಇನ್ನೂ ತೆರೆದಿಲ್ಲದ್ದರಿಂದ  ಆಗಲೇ ನಾಲ್ಕೈದು ಜನ ಸಾಮಾನು ಕೊಳ್ಳುವವರು ಬಂದಿದ್ದರು. ಅದರಲ್ಲಿ ಒಬ್ಬ ಹುಡುಗಿಗಂತೂ ಅರ್ಜೆಂಟ್. 'ಅಜ್ಜಿ ಬೇಗ ಐದು ರೂಪಾಯಿಯ ಕ್ಲೋಸ್ ಅಪ್ , ಒಂದು ಮೆಡಿಮಿಕ್ಸ್ ಸೋಪ್ ಕೊಡಿ ಅಂತ ಕೇಳಿ ಅದರ ಒಟ್ಟಿಗೆ ಎರಡು ಶ್ಯಾಂಪೂವಿನ ಸ್ಯಾಶೆ ಕೊಂಡು, (ಆ ಹುಡುಗಿ ಎಷ್ಟು ಗಡಿಬಿಡಿ ಮಾಡಿದರೂ ಅಜ್ಜಿ ನಿಧಾನವಾಗಿ ಒಂದೊಂದೆ ಸಾಮಾನು ಹುಡುಕಿ ಹುಡುಕಿ ಕೊಡುತ್ತ ಇದ್ದರು ಅದರಲ್ಲೂ  ಅವರ ಕೈ ತಾಗಿ ಬೀಳಿಸಿದ ಇತರೇ ಸಾಮಾನುಗಳೆ ಹೆಚ್ಚು  ) 'ಅಜ್ಜಿ ಲೆಕ್ಕ ಬರೆದಿಡಿ ಆಮೇಲೆ ಬರುತ್ತೇನೆ ಅಂತ ಓಡಿ ಹೋದಳು. ಇನ್ನೊಬ್ಬ ಮಹಿಳೆ ಫೋನ್ ಬೂತ್ ಉಪಯೋಗಿಸಲು ಚಿಲ್ಲರೆ ಕೇಳಲು ಬಂದಿದ್ದಳು. ನನಗೇನೂ ಅರ್ಜೆಂಟ್ ಇಲ್ಲದ್ದರಿಂದ ನಾನು ನನ್ನ ದುಡ್ಡು ಕೊಡಲು ಅಂಗಡಿ ಖಾಲಿಯಾಗಲು ಕಾಯ್ತಾ ಇದ್ದೆ.  ಹೀಗೆ ಚಿಲ್ಲರೆ ಸಾಮಾನು ಕೊಳ್ಳುವವರದ್ದೆ ಭರಾಟೆ.
ಈಗ ಅವರ ಕತೆ ಕೇಳಿ
"ನನಗೂ ಅವರಿಗೂ 80 ರ ಆಸುಪಾಸು. ಈ ಮೆಡಿಕಲ್ ಸ್ಟೋರ್ ನಾನು ಮದುವೆಯಾಗಿ ಈ ಮನೆಗೆ ಬಂದಾಗಲಿಂದಲೂ  ಇದೆ. ಅಂಗಡಿ ಹಿಂಬದಿಯಲ್ಲೇ ಮನೆ. ಮದುವೆಯಾದ ಹಲವಾರು ವರ್ಷ ಮಕ್ಕಳಿಲ್ಲದ್ದರಿಂದ, ಹೇಗೂ ಮಕ್ಕಳಾಗುವುದಿಲ್ಲವೆಂದು ನಾವಿದ್ದ ಪುಟ್ಟ ಮನೆ ಮತ್ತು ಅಂಗಡಿ ಆಗಿನ ಕಾಲಕ್ಕೆ ಸ್ವಂತ ಮಾಡಿ ಕೊಂಡ್ವಿ. ನನಗೆ 40 ಆದಾಗ ಮಗೆ ಹುಟ್ಟಿದ. ಸಂಪಾದನೆಯನ್ನು ಅಳಿಸಿ ತೂಗಿ ಉಪಯೋಗಿಸಿ ಜೀವನ ಮಾಡಿ ಮಗನಿಗೆ ಅವನಿಷ್ಟದಂತೆ ಇಂಜಿನಿಯಿರಿಂಗ್ ಓದಿಸಿದೆವು. ಓದಿ ಆದ ಕೂಡಲೆ ಅವನಿಗೆ ನೌಕರಿ ಸಿಗಲಿಲ್ಲ. ಮೆಡಿಕಲ್ ಸ್ಟೋರ್ ನ್ನೆ ಒಪ್ಪು ಓರಣಗೊಳಿಸಿ ಮಗನಿಗೆ ನೀಡುವಾ ಅಂದರೆ ಅವನಿಗೆ ಈ ಕಸುಬಿನಲ್ಲಿ ಆಸಕ್ತಿಯಿಲ್ಲ. ಕಡೆಗೂ ಒಂದು ಎಮ್ ಎನ್ ಸಿ ನಲ್ಲಿ ಕೆಲಸ ಸಿಕ್ಕಿ, ಪ್ರೋಮೋಷನ್ ಎಲ್ಲ ಸಿಕ್ಕಿ, ಅವನೂ ಲೇಟ್ ಆಗಿ ಒಂದು ತಿಂಗಳ ಹಿಂದೆಯಷ್ಟೆ ದೂರದ ಸಂಬಂಧದ ಒಂದು ಅನಾಥ ಹುಡುಗಿಯನ್ನು ಮದುವೆ ಮಾಡಿಕೊಂಡು ನಾಲ್ಕೂ ಜನ ಅಂಗಡಿ ಹಿಂಬದಿಯ ಪುಟ್ಟ ಮನೆಯಲ್ಲಿರುವುದು". ಎದುರಿನ ಅಂಗಡಿ ಅಷ್ಟೆ ಸೈಜ್ ಅಂತೆ ಅವರ ಮನೆ ಕೂಡ. ನಾಲ್ಕೂ ಜನ ಒಟ್ಟಿಗೆ ಆರಾಮಾಗಿ ಇರಲಿಕ್ಕಾಗುವುದಿಲ್ಲವಂತೆ. ಹೆಚ್ಚಿನ ಸಮಯ ಮಗನಿಗೆ ನೈಟ್ ಶಿಫ್ಟ್ ಆದರೆ, ಸೊಸೆಗೆ ಬೆಳಗ್ಗಿನ ಶಿಫ್ಟ್. ಅಪರೂಪಕ್ಕೊಮ್ಮೆ ಇಬ್ಬರಿಗೂ ಒಂದು ಭಾನುವಾರ ಒಟ್ಟಿಗೆ ಸಿಗುತ್ತದೆಯಂತೆ. ಆಗ ತಾತ ಹಾಗೂ ಅಜ್ಜಿ ಅವರಿಬ್ಬರಿಗೆ ಏಕಾಂತ ಕಲ್ಪಿಸಲು ಅಂಗಡಿಗೆ ಬಂದಿರುವುದಂತೆ. ಕೆಲವು ರಾತ್ರಿ ಇಲಿಗಳ ಕಾಟ ತಾಳಿಕೊಂಡು ಅಂಗಡಿಯಲ್ಲೇ ಮಲಗುವುದೂ ಇದೆಯಂತೆ.ನಮ್ಮ ಈ ಎರೆಂಜ್ಮೆಂಟ್ ನೋಡಿ ಸೊಸೆಗೆ ಬೇಜಾರಾಗುತ್ತೆ. 'ತುಂಬ ಒಳ್ಳೆಯವಳು ನನ್ನ ಸೊಸೆ' ರಜೆಯಂತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವಳಿಗೆ ರಜೆಯಿದ್ದ ದಿನ ನನಗೆ ಏನೂ ಕೆಲಸ ಮಾಡಲು ಬಿಡುವುದಿಲ್ಲ. "ಉಳಿದ ದಿನ ನಾನು 6.30 ಗೆ ಹೊರಟು ಬಿಡ್ತೇನೆ ನಿಮಗೆ ಏನೂ ಸಹಾಯ ಮಾಡಲು ಆಗಲ್ಲ' ಅಂತಾಳೆ.  . ಮಗ ಬೇರೆ ಮನೆ ಹುಡುಕುತ್ತಿದ್ದಾನೆ ಸ್ವಲ್ಪ ಲೋನ್ ತಗೊಂಡರೆ, ಈ ಅಂಗಡಿ ಮನೆ ಮಾರಿ ಆ ದುಡ್ಡನ್ನೆಲ್ಲ ಹಾಕಿ ನಾಲ್ಕು ಜನ ಒಟ್ಟಿಗೆ ಇರುವ ಪ್ಲ್ಯಾನ್ಸ್ ಹಾಕಿದ್ದಾರೆ. 'ಮೈನ್ ರೋಡ್ ಮೇಲೆ ಇರೋದರಿಂದ ಅಂಗಡಿಗೆ ಒಳ್ಳೇ ಬೆಲೆ ನೆ ಸಿಗುತ್ತೆ. ಅತ್ತೆ ಸೊಸೆ  ಟಿವಿ ಸೀರಿಯಲ್ ಗಳನ್ನೂ ಮೀರಿಸುವಷ್ಟು ಜಗಳ ಮನಸ್ತಾಪ ಮಾಡ್ತಾ ಇರುವ ಈ ಕಾಲದಲ್ಲಿ ಇವರದ್ದು ನನಗೆ ವಿಶಿಷ್ಟ ಸಂಸಾರ ಅನ್ನಿಸಿತು.
ತಾತನಿಗೆ ನಾನು ಕೊಂಡ ಸಾಮಾನಿನ ಬೆಲೆ ಎಷ್ಟಾಯಿತು ಅಂದಾಗ ಮೂವತ್ತು ಅಂದರು. ನನಗೆ ಡೌಟ್ ಬಂದು ಒಂದೊಂದಾಗಿ ಎಲ್ಲದರ ಬೆಲೆ ಕೇಳ್ತಾ ಹೋದೆ. 65 ರೂ ಆಗಿತ್ತು. 'ವಯಸ್ಸಾತಲ್ವಾ ಅಂತ ನಗುತ್ತ ನನ್ನ ಬಳಿ ದುಡ್ಡು ಇಸಕೊಂಡರು'.  ಅವರಿಗೆ ಶುಭವಾಗಲಿ ಅಂತ ಹಾರೈಸಿ ಗಾಡಿ ಬಳಿ ಮರಳಿದೆ.
ಪ್ರಿಂಟಿಂಗ್ ಕಟ್ಟಿಂಗ್ ಎಲ್ಲ ಮುಗಿಸುವಾಗ ಮುಕ್ಕಾಲು ಗಂಟೆ ಕಳೆದು ಹೋಯಿತು. ಹೋಗುವಾಗ ಮೇಲಿನ ಪ್ರಸಂಗ ಹಾಗೂ ಚಾಕಲೇಟ್ ಗಳನ್ನು ಶ್ರೀಕಾಂತ  ನಿಹಾ ಹಾಗೂ ಕಾರು ಚಾಲಕ್ ಸ್ವಾಮಿ ಜತೆ ಶೇರ್ ಮಾಡಿದೆ. ರಾಯರು ಎಂದಿನಂತೆ ಹ್ಮ್ಮ್ಮ್ಮ್ಮ್ಮ್ ಅಂದ್ರೆ ನಿಹಾ cho chweet' ಅಂದ್ಲು. ನಿಹಾ ಮರುದಿನ ಪರೀಕ್ಷೆ ಇದ್ದರೂ ಅವಳು ನಮ್ಮ ಜತೆ ಬಂದಿದ್ದಳು.
ಅಲ್ಲಿ ನಮ್ಮ ಕೌಂಟರ್ ನಲ್ಲಿ ಆಗಲೇ ರೂಪಾ ಹಾಗೂ ಸತೀಶ ಕಟ್ಟಿಮನಿ ಉಪಸ್ಥಿತರಿದ್ದರು. ನಮ್ಮ ಮಳಿಗೆಗೆ ತುಂಬಾ queries/ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.
:-)

November 4, 2013

ದೀಪಾವಳಿ ಹಬ್ಬ

ಸುಮ್ನೆ ಟೈಮ್ ಪಾಸ್ ಗೆ ಅಂತ ಮಾಡಿದ್ದು: - (ರಾಯರಿಗೆ ಟೈಮ್ ಪಾಸ್ ಅಂದ್ರೆ ಸಿಟ್ಟು ಬರುತ್ತೆ. 'ಏನು! ಪಾಸ್ ಮಾಡ್ಲಿಕ್ಕೆ ನಿನ್ನ ಹತ್ತಿರ ಟೈಮ್ ಇದ್ರೆ ಆಫಿಸ್ ಕೆಲ್ಸ ಮಾಡಿ ಕೊಡು' ಅಂತಾರೆ :-))

ಎಲ್ಲರೂ ಹಬ್ಬವನ್ನು ಎಂಜಾಯ್ ಮಾಡಿದ್ದೀರಿ ಅಂದುಕೋತೀನಿ. ನನಗಂತೂ ಸ್ಪೇಶಲ್ ಯಾಕಂದೆ ನನ್ನ ಹುಟ್ಟಿದ ಹಬ್ಬ ಕೂಡ ದೀಪಾವಳಿ ಹಬ್ಬದಂದೇ.
 ಈ ಸಲ ಅಮ್ಮ ಹೇಳಿ ಕೊಟ್ಟ ಚಕ್ಕುಲಿ ಮಾಡಿದೆ
ಒಂದು ಗ್ಲಾಸ್ ಉದ್ದಿನಬೇಳೆ. ನಸು ಕಂದು ಬಣ್ಣ ಬರುವ ತನಕ ಹುರಿದು, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ ಜರಡಿ ಹಿಡಿಯಿರಿ
ಒಂದು ಗ್ಲಾಸ್ ಮೈದಾ ಹಿಟ್ಟು. ಇದನ್ನು ಬಟ್ಟೆಯಲ್ಲಿ ಕಟ್ಟಿ ಹಬೆ ಪಾತ್ರೆಯಲ್ಲಿ 10 ನಿಮಿಷ ಬೇಯಿಸಿ
ತಣ್ಣಗಾದ ಮೇಲೆ ಸರಿಯಾಗಿ ಪುಡಿ ಮಾಡಿ ಜರಡಿ ಹಿಡಿಯಿರಿ.
ಉಪ್ಪು ಬೆರೆಸಿ ಎರಡು ಹಿಟ್ಟನ್ನು  ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ದೊಡ್ಡ ಟೇಬಲ್ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ಒಂದು ಸ್ಪೂನ್ ಬೆಣ್ಣೆ ಕೂಡ ಸೇರಿಸಬಹುದು. ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿ ಚೆನ್ನಾಗಿ ನಾದಿ. ಐದು ನಿಮಿಷ ಹಾಗೆ ಇಡಿ
ಚಕ್ಕುಲಿ ಒರಳಲ್ಲಿ ಹಾಕಿ ಚಕ್ಕುಲಿ ಮಾಡಿಡಿ.\
ಎಣ್ಣೆ ಬಿಸಿ ಮಾಡಿ ನಾಲ್ಕ್ನಾಕು  ಚಕ್ಕುಲಿಗಳನ್ನು ಕರಿಯಿರಿ
Malavika gets a training in the art of chakkuli making :-)



 ಬೇಸನ್ ಲಾಡೂ

ಒಂದು ಗ್ಲಾಸ್ ಕಡ್ಲೇ ಹಿಟ್ಟು. ಅರ್ಧ ಟೇಬಲ್ ಸ್ಪೂನ್ ಬಾಂಬೆ ರವಾ, ಅರ್ಧ ಗ್ಲಾಸ್ ತುಪ್ಪ, ಅರ್ಧ ಗ್ಲಾಸ್ ಸಕ್ಕರೆ, ಏಲಕ್ಕಿ, ದ್ರಾಕ್ಷಿ, ಗೋಡಂಬಿ.
ಸಕ್ಕರೆ ಪುಡಿ ಮಾಡಿಡಿ
ಬೇಸನ್ ಅನ್ನು ಪರಿಮಳ ಬರುವ ತನಕ( ಸಾಧಾರಣ 15-20 ನಿಮಿಷ ಆಗುತ್ತೆ) ಹುರಿಯಿರಿ. ತುಪ್ಪ ಬೆರೆಸಿ ಸ್ವಲ್ಪ ಹುರಿಯಿರಿ. ತಣ್ಣಗಾದ ಮೇಲೆ ಸಕ್ಕರೆ ಪುಡಿ, ಏಲಕ್ಕಿ, ಹುರಿದ ಗೋಡಂಬಿ, ದ್ರಾಕಿ ಬೆರೆಸಿ. ಕೈನಿಂದ ಚೆನ್ನಾಗಿ ನಾದಿ ಉಂಡೆ ಕಟ್ಟಿ. ಅಷ್ಟೆ.
:-)

November 1, 2013

ಕನ್ನಡ ರಾಜ್ಯೋತ್ಸವ 2013

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.
ನಮ್ಮ ರಾಯರು ಸಖತ್ ದೇಶಪ್ರೇಮಿಗಳು. ಅಂದರೆ ಹೋರದೇಶದ ಪ್ರಾಜೆಕ್ಟ್ ಏನಾದರೂ ಇದ್ದಲ್ಲಿ ಆದಷ್ಟು ಬೇರೆಯವರಿಗೆ ಅವಕಾಶ ಕೋಡೋರು. ಹೀಗೆ ಒಂದು ಸಲ ಅವರೇ ಹೋಗ ಬೇಕಾದ ಅನಿವಾರ್ಯತೆ ಬಂತು. ಜಿನಿವಾಗೆ. ಆಗಲೇ ಹೋಗಿ ಹದಿನೈದು ದಿನಗಳಾಗಿದ್ದವು.  ಹೋದ ಮೂರನೇ ದಿನದಿಂದಲೆ ಬೆಂಗಳೂರು, ಮನೆ, ಆಫಿಸ್, ಹಾಗೂ ಮನೆ ತಿಂಡಿ ಮಿಸ್ ಮಾಡಲು ಶುರು ಮಾಡಿದ್ದರು. ಸರಿ, ಅಲ್ಲಿಂದ ಹೊರಡುವ ಮುನ್ನ ಪ್ಯಾರಿಸ್ ಗೆ ಒಂದು ಟೂರ್ ಹಾಕ್ಕೊಂಡ್ರು. ಅಲ್ಲಿ ಒಂದು ಜೋಡಿ ಕನ್ನಡ ಮಾತನಾಡುವವರನ್ನು ಕಂಡು ಇವರು ಹಿರಿಹಿರಿ ಹಿಗ್ಗಿ, ಮಾತನಾಡಿಸಲು ಹೋದಾಗ ಅವರು ಭಾಷೆ ಬರುವುದಿಲ್ಲವೆಂಬತೆ ಬಿಹೇವ್ ಮಾಡಿದ್ದರಿಂದ ರಾಯರಿಗೆ ಬೇಜಾರಾಗಿ ನನಗಿಲ್ಲಿ ಫೋನ್ ಮಾಡಿದರು. ಅದಕ್ಕೆ ನಾನು 'ಎಲ್ಲೋ ಹೊಸದಾಗಿ ಮದುವೆಯಾದವರು ಹನಿಮೂನ್ ಗೆ ಬಂದಿರಬಹುದು ನೀವು ಶಿವ ಪೂಜೆಯಲ್ಲಿ ಕರಡಿ ಆಗಬಹುದೆಂದು ಆ ಜೋಡಿ ಹಾಗೆ ವರ್ತಿಸಿರಬಹುದು' ಎಂದು ಸಮಾಧಾನ ಮಾಡಿದೆ. :-)  ಕನ್ನಡಕ್ಕೋಸ್ಕರ ಮಾಡಿದ ಈ ಎರಡು ವೆಬ್ ಸೈಟ್ ಲಿಂಕ್ ಇಲ್ಲಿ ಹಾಕುವಾಗ ಮೇಲಿನ ಸಂಗತಿ ನೆನಪಾಗಿ ನಿಮ್ಮ ಜತೆ ಶೇರಿಂಗ್

ನನ್ನ ಆಪ್ತ ಮಿತ್ರ ರಘು ಅಪಾರ ತನ್ನ ಮಿತ್ರರೊಂದಿಗೆ ನಡೆಸುವ ಚುಕ್ಕುಬುಕ್ಕು. ಕಳೆದ ನವೆಂಬರ್ 1, 2012 ರಂದು ಹಸಿರು ನಿಶಾನೆ ಪಡೆದ ಈ ತಾಣಕ್ಕೆ ವರುಷದ ಹರುಷ.


ಇನ್ನೊಂದು ತಾಣ  ನನ್ನ ಮಗನೆಂದೆ ಕರೆಯುವ ನಟರಾಜು ಅವರ ಪಂಜು ಪತ್ರಿಕೆ. ಇದ್ಯಾಕೆ ವಿಶೇಷ ಅಂದ್ರೆ, ದೂರದ ಜಲಪಾಯ್ ಗುರಿಯಲ್ಲಿದ್ದುಕೊಂಡು ಈ ಇ-ಪತ್ರಿಕೆಯನ್ನು ಅವರು ನಡೆಸುವ ಮೂಲಕ ತಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಿದ್ದಾರೆ.

ಇಬ್ಬರಿಗೂ ಶುಭಹಾರೈಕೆಗಳು. ನೀವೂ ಅವರ ತಾಣಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಿ

ಧನ್ಯವಾದಗಳು
:-)

October 29, 2013

ಮನೆಯಲ್ಲಿ ಬೇಕ್ ಮಾಡಿದ ಪಾವ್ ಮತ್ತು ಭಾಜಿ

ತಂಗಿ ಅಮೇರಿಕಾದಿಂದ ಬಂದಾಗಲೆಲ್ಲ ಒಂದು ದಿನ ನಾವು ಬೇಕಿಂಗ್ ಗೆ ಅಂತಲೇ ಇಡುತ್ತೇವೆ. ಆ ದಿನ ತರಹವಾರಿ ಕೇಕ್, ಬ್ರೆಡ್, ಕುಕ್ಕೀಸ್, ಡೋ ನಟ್ಸ್ ಗೆ ಮೀಸಲು.
ನಾನು, ತಮ್ಮಂದಿರು & ತಂಗಿ ಸ್ಟುಡಿಯೋ ಗೆ ಹೋಗಿ ತೆಗೆದ ಫೋಟೊ

ಹಲವಾರು ವರ್ಷಗಳ ಹಿಂದೆ, ನಮ್ಮ ತಂದೆ ಕೆಲಸ ಮಾಡುತ್ತಿರುವ ಬ್ಯಾಂಕ್ ಇನ್ನೊಂದು ಲಾಸ್ ನಲ್ಲಿರುವ ಬ್ಯಾಂಕ್ ಒಂದನ್ನು ಟೇಕ್ ಓವರ್ ಮಾಡಿತ್ತು. ಅದು ಜೈಪುರ್-ರಾಜಸ್ಥಾನ್ ದಲ್ಲಿತ್ತು. ಮುಂಬೈ ನಲ್ಲಿರುವ ಕ್ವಾರ್ಟರ್ಸ್ ಮಾತ್ರವಲ್ಲದೇ ಜೈಪುರ್ ನಲ್ಲೂ ಒಂದು ಮನೆ ಮಾಡುವ ಸೌಲಭ್ಯವಿದ್ದುದರಿಂದ  ನಮ್ಮ ತಂದೆ ಆ option ನಿಂದ ಅಲ್ಲಿಗೆ ಹೋದರು. ಆಗ ಡಿಸೆಂಬರ್ ಜನವರಿ ತಿಂಗಳು. ಅಲ್ಲಿಗೆ  ಬಿಡಾರ ಶಿಫ್ಟ್ ಮಾಡಿದಿದ್ರೆ ನಮ್ಮ ಶಾಲೆ ಕಾಲೇಜ್ ಗೆ ತೊಂದರೆ ಆಗುತ್ತಿತ್ತು.
ಅಮ್ಮ ,ಅಪ್ಪನ ಜತೆ ಜೈಪುರ್ ನ ಮನೆ ಹೊಂದಿಸಿಕೊಡಲಿಕ್ಕೆ ಅಂತ ಒಂದು ವಾರದ ಕಾಲ ಹೋಗಿರುವುದು ಅಂತಾಯಿತು. ಮನೆ ಮತ್ತು ತಮ್ಮ, ತಂಗಿಯರ ಜವಾಬ್ದಾರಿ ನನ್ನ ಮೇಲೆ. ಆದರೆ ಅಲ್ಲಿ ಹೋದದ್ದೆ ಅಮ್ಮನಿಗೆ ಸ್ಕಿನ್ ಇನ್ಫೆಕ್ಷನ್ ಆಗಿ, ಜ್ವರ ಎಲ್ಲ ಬಂದು ಅಮ್ಮ ಬರುವಾಗ ಒಂದು ತಿಂಗಳು ಕಳೆದು ಹೋಗಿತ್ತು. ಈ ಮಧ್ಯೆ ನನ್ನ ತಂಗಿಯ ಹುಟ್ಟು ಹಬ್ಬ. ಅವಳು ಮುಖ ಚಿಕ್ಕದು ಮಾಡಿ ತಿರುಗುವಾಗ ನನಗೆ ಕೆಟ್ಟದೆನಿಸಿತು. ನನಗೆ ಬೆಳಿಗ್ಗೆ ಸ್ಕೂಲ್ ಆದ್ರೆ ಅವಳಿಗೆ ಮಧ್ಯಾಹ್ನದ ಶಿಫ್ಟ್. 
ನಾನು ಮತ್ತು ನನ್ನ ತಮ್ಮ ಕೃಷ್ಣ ಅವಳಿಗೋಸ್ಕರ ಸರ್ಪ್ರೈಸ್ ಬರ್ತಡೆ ಪಾರ್ಟಿ ಮಾಡುವ ಯೋಜನೆ ಹಾಕಿಕೊಂಡೆವು. ಅವಳ ಹುಟ್ಟುಹಬ್ಬದ ದಿನ ಅವಳಿಗೆ ಶಾಲೆಯಲ್ಲಿ ಡಿಸ್ಟ್ರೂಬ್ಯೂಟ್ ಮಾಡಲು ಚಾಕೋಲೇಟ್ ತೆಗೆಸಿಕೊಟ್ಟೆ. ನಾವು ಆದಷ್ಟು ತಿಂಡಿಗಳನ್ನು ಮನೆಯಲ್ಲೇ ಮಾಡುತ್ತಿದ್ದ ದಿನಗಳವು. ಅಮ್ಮ ಯಾವುದೇ ತಿಂಡಿ ಮಾಡುವಾಗ ಅಮ್ಮನಿಗೆ ಸಹಾಯ ಮಾಡುತ್ತಿದ್ದರಿಂದ ಅಡುಗೆ ತಿಂಡಿ ಮಾಡುವ ಸಾಧಾರಣ ಅಂದಾಜಿತ್ತು.
ಅವಳು ಶಾಲೆಗೆ ಹೋದ ಮೇಲೆ ನಾನು ತಮ್ಮ ಸೇರಿ ಕೇಕ್, ಅದೂ ತ್ರೀ ಕಲರ್ ಕೇಕ್ ಮಾಡಿ ಇಟ್ಟು, ಬಟಾಟಾ ವಡಾ, ಸ್ವಲ್ಪ ಅವಲಕ್ಕಿ ಚೂಡಾ ಎಲ್ಲ ಮಾಡಿದೆವು.ಬಿಲ್ಡಿಂಗ್ ನ ಮಕ್ಕಳಿಗೆಲ್ಲ ಹೋಗಿ ಆಹ್ವಾನ ನೀಡಿದ್ದು ನನ್ನ ಇನ್ನೊಬ್ಬ ತಮ್ಮ ಪಾಂಡು. ಸಂಜೆ ಅವಳ ಖುಶಿ ನೋಡಿ ನಾವು ಮಾಡಿದ್ದು ಸಾರ್ಥಕವೆನಿಸಿದ್ದು ಮಾತ್ರವಲ್ಲ ಕೇಕ್ perfect professional ತರಹಾನೆ ಆಗಿತ್ತು. ನಾನು ಐಸಿಂಗ್ ಶುಗರ್ ಎಲ್ಲ ಹಾಕಿ ಅವಳ ಹೆಸರು ಬರೆದಿದ್ದೆ. 
ಸುಮಾರು ದೊಡ್ಡವಳಾದ ಮೇಲೆ ಅವಳು ಹೇಳಿದ್ದು "ನನ್ನ ಹುಟ್ಟುಹಬ್ಬದ ಹಿಂದಿನ ರಾತ್ರಿಯೆಲ್ಲ ನಾನು ಅತ್ತಿದ್ದೆ. ನನ್ನ ಬರ್ಥ್ ಡೇ ಮಾಡಿ ಫ್ರೆಂಡ್ಸ್ ಗೆಲ್ಲ ಕರೀಬೇಕು ಅಂತ ಇತ್ತು. ಅಮ್ಮನನ್ನು ನೆನೆಸಿಕೊಂಡು ತುಂಬಾ ಅತ್ತಿದೆ. that is one day in my life that i will never forget ಅಂತ.
ಈಗ ಅವಳು ಭಾರತಕ್ಕೆ ಬಂದಾಗಲೆಲ್ಲ ಈ ಕತೆ ಎಷ್ಟೊಂದು ಸಲ ರಿಪೀಟ್ ಆಗಿದ್ರೂ ಮಕ್ಕಳಿಗೆ ಅದನ್ನು ಕೇಳುವುದರಲ್ಲಿ ಖುಶಿ. i am so glad i made her day all those years ago. :-)
ಮನೆಯಲ್ಲಿ ಕೇಕ್, ಬ್ರೆಡ್ ಎಲ್ಲ ತಯಾರಾಗುವಾಗ ಏನು ಘಮ ವಾವ್. ನನಗೆ ತುಂಬ ಇಷ್ಟ. ಮನೆಯಲ್ಲಿ ಮೈಕ್ರೋವೇವ್ ಬಂದ ಮೇಲೆ ನಮ್ಮ ಮನೆಯಲ್ಲಿ ಮೂಡ ಬಂದಾಗಲೆಲ್ಲ ಬ್ರೆಡ್ ಪಾವ್ ಮಾಡುತ್ತಿರುತ್ತೇವೆ. ಕೆಳಗಡೆ ಕೊಟ್ಟ ರೆಸಿಪಿಯಿಂದ ಬ್ರೆಡ್ ಅಥ್ವಾ ಪಾವ್ ಎರಡೂ ತಯಾರಿಸಬಹುದು. ಬ್ರೆಡ್ ತಯಾರಿಸಲು ಅದರ ಅಚ್ಚು (container or mould) ತರಬೇಕಾಗುತ್ತೆ. ಆ ಕಂಟೈನರ್ ನಲ್ಲಿ ಅರ್ಧದಷ್ಟೆ ತುಂಬಿಸಿ ಅದು ಬೇಕ್ ಆಗಿ ಆ ಕಂಟೈನರ್ ತುಂಬ ಉಬ್ಬುತ್ತೆ.

ಮೈದಾ ಹಿಟ್ಟು - 200 ಗ್ರಾಂ (ನಾವು ಅರ್ಧ ಮೈದ ಅರ್ಧ ಗೋದಿ ಹಿಟ್ಟು ಹಾಕುವುದು)
ಯೀಸ್ಟ್ - 6 ಗ್ರಾಂ  (ಫ್ರೆಶ್ ಇದ್ದಷ್ಟು  ಒಳ್ಳೇದು)
ಉಪ್ಪು - 4ಗ್ರಾಂ
ಸಕ್ಕರೆ - 10 ಗ್ರಾಂ
ಬೆಣ್ಣೆ - 10 ಗ್ರಾಂ
ಓಲಿವ್ ಎಣ್ಣೆ - 5 ಮಿ ಲಿ (ಅಥವಾ ರಿಫೈನ್ಡ್ ಎಣ್ಣೆ ಕೂಡ ಆಗುತ್ತೆ)
(ಮೆಶರಿಂಗ್ ಕಪ್ ಇದ್ದರೆ ಒಳ್ಳೆಯದು)

ಯೀಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಅದು ನೊರೆನೊರೆಯಾಗುತ್ತೆ. ಉಳಿದ ಎಲ್ಲ ಪದಾರ್ಥಗಳನ್ನು ಯೀಸ್ಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಹಾಕಿ ಅತ್ಯಂತ ಮೃದುವಾದ ಕಣಕ ತಯಾರಿಸಿ. ಈ ಕಣಕಕ್ಕೆ ಎಣ್ಣೆ ಸವರಿ ಒಂದು ಗಂಟೆ ಇಡಿ. ಕಣಕ ಉಬ್ಬಿ ದುಪ್ಪಟ್ಟು ಆಗುತ್ತೆ.
ಇದು ದುಪ್ಪಟ್ಟು ಆಗಿರುವ ಹಿಟ್ಟು. ಕಲಸಿದ ಕೂಡಲೇ ಫೋಟಿ ತೆಗೀಲಿಕ್ಕೆ ಮರೆತು ಹೋಯಿತು.

 ಈಗ ನಿಮಗೆ ಬೇಕಾದ ಆಕಾರ ಸೈಜ್ ನ ಪಾವ್ ತಯಾರಿಸಿ.
ಹೀಗೆ ಒಮ್ದರ ಬಳಿ ಒಂದು ಹಿಟ್ಟಿನ ಉಂಡೆ ಇಡಿ. ಸ್ವಲ್ಪ ಹೊತ್ತಿನ ಬಳಿಕ ಅದು ಕೆಳಗಿನ ಚಿತ್ರದಲ್ಲಿದ್ದಂತೆ ಆಗುತ್ತೆ.

 ಈ ಪಾವ್ ಗಳು ಪುನ: ದುಪ್ಪಟ್ಟು ಸೈಜ್ ಆಗಿ ಉಬ್ಬುತ್ತವೆ. ಆಗ ಓವನ್ ನಲ್ಲಿ 250*C ಯಲ್ಲಿಟ್ಟು ಮೇಲಿನ ಪದರ ಹೊಂಬಣ್ಣಕ್ಕೆ ಬರುವ ತನಕ ಬೇಕ್ ಮಾಡಿ.

ಮನೆಯಲ್ಲಿ ಮೂರು ನಾಲ್ಕು ಬಾರಿ ಈ ಪಾವ್ ನ್ನು ಮಾಡಿ ಆಯ್ತು. ಮೇಲಿನ ಅಳತೆ ಪರ್ಫೆಕ್ಟ್ ಆಗಿದೆ. ಪಾವ್ ತಯಾರಾಗುವಾಗಿನ ಘಮ..ಆಆಆಆಹ್!!! :-)
ಪಾವ್ ಜತೆ ಭಾಜಿ ಮಾಡುವ ವಿಧಾನ ಕೂಡ ಹೇಳಿ ಬಿಡುತ್ತೇನೆ
ಬೇಯಿಸಿದ ತರಕಾರಿ = ಕ್ಯಾರೆಟ್, ಆಲೂಗಡ್ಡೆ, ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದಲ್ಲಿ , ಕಾಳುಗಳನ್ನು ರಾತ್ರಿ ನೆ ನೀರಲ್ಲಿ ನೆನೆಹಾಕಿ. ಬೆಳಿಗ್ಗೆ ಎಲ್ಲವನ್ನು ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿಡಿ.
ನೀರುಳ್ಳಿ - ಹದ ಗಾತ್ರದ್ದು 4
ಬೆಳ್ಳುಳ್ಳಿ- 15
ಟೋಮೇಟೊ - ತುಂಬಾ ಮಾಗಿದ್ದು ಒಂದು
ಕೆಂಪು ಮೆಣಸಿನ ಪುಡಿ - 2 ಟೀ ಸ್ಫೂನ್
ಎವರೆಸ್ಟ್ ಪಾವ್ ಭಾಜಿ ಮಸಾಲಾ - ಎರಡು ದೊಡ್ಡ ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಲಿಂಬೆ ಹಣ್ಣಿನ ಸ್ಲೈಸ್ ಮೇಲೆ ಉದುರಿಸಲು. ಸ್ವಲ್ಪ ಬೆಣ್ಣೆ.


ಮೊದಲಿಗೆ ನೀರುಳ್ಳಿ, ಬೆಳ್ಳುಳ್ಳಿಯನ್ನು ಯನ್ನು ಚಿಕ್ಕದಾಗಿ ಕತ್ತರಿಸಿಡಿ. ಸ್ವಲ್ಪ ಹೆಚ್ಚೆ ಎಣ್ಣೆ ಬಿಸಿಮಾಡಲು ಇಡಿ. ಎಣ್ಣೆ ಬಿಸಿಯಾದ ನಂತರ ಇದಾಕೆ ನೀರುಳ್ಳಿ ಬೆರೆಸಿ ಪಿಂಕ್ ಬಣ್ಣ ಆಗುವ ತನಕ ಹುರಿಯಿರಿ. ಇದಕ್ಕೆ ಬೆಳ್ಳುಳ್ಳು ಬೆರೆಸಿ. ಎರಡು ನಿಮಿಷ ಹುರಿದು ಕ್ರಮವಾಗಿ ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ನಂತರ ಟೋಮೇಟೋ ಬೆರೆಸಿ. ಎಣ್ಣೆ ಬಿಡುವ ಹಂತಕ್ಕೆ ಬಂದಾಗ ಮ್ಯಾಶ್ ಮಾಡಿಟ್ಟ ತರಕಾರಿ ಬೆರೆಸಿ. ಎಷ್ಟು ಬೇಕೋ ಅಷ್ಟು ನೀರು ಸೇರೆಸಿ. ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ.  ಚೆನ್ನಾಗಿ ಕುದಿ ಬಂದ ನಂತರ ಒಂದು ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಮೇಲಿನಿಂದ ಭಾಜಿಗೆ ಹಾಕಿ.
ಸರ್ವ್ ಮಾಡುವ ಮುನ್ನ ಪಾವ್ ಅನ್ನು ಮಧ್ಯಕ್ಕೆ ಕತ್ತರಿಸಿ ಬೆಣ್ಣೆ ಹಚ್ಚಿ ಕಾವಲಿ ಮೇಲೆ ಬಿಸಿ ಮಾಡಿ, ಭಾಜಿ, ನೀರುಳ್ಳಿ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ಜತೆ ಬಡಿಸಿ.

ಮೊದಲ ಸಲ ಪಾವ್ ಮಾಡಿದಾಗ ಶ್ರೀಕಾಂತ್ ರ್ ಪ್ರೆಂಡ್ ಒಬ್ಬರು ಮಡಿಕೇರಿಯಿಂದ ಬಂದಿದ್ದರು. ಕಾಫಿ ಕುಡಿಯುವ ಅಂತ ಅವರು ಬಂದಿದ್ದು.. ಅದರೊಂದಿಗೆ ಬಿಸಿ ಪಾವ್ ಮತ್ತು ಅಮುಲ್ ಬಟರ್ ಕೂಡ ಸೆರ್ವ್ ಮಾಡಿದ್ದು ಅವರಿಗೆ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಅದೂ ಮನೆಯಲ್ಲೇ ಮಾಡಿದ, ಮೊಟ್ಟೆಯಿಲ್ಲದ ಪಾವ್ ಅಂತ. ಈಗಲೂ ಸಿಕ್ಕಾಗಲೆಲ್ಲ ಅದರ ಬಗ್ಗೆ ಮೆನ್ಷನ್ ಮಾಡ್ತಾರೆ.
ನಮ್ಮ ಮುಂದಿನ ಪ್ರಯೋಗ ರಾಗಿಯಿಂದ ಬ್ರೆಡ್/ಪಾವ್ ತಾಯಾರಿಸುವುದು
:-)



Maida -  200 gms
Yeast - 6 gms
Salt - 4 gms
Sugar - 10 gms
Butter - 10 gms
Olive Oil - 5ml
Dissolve yeast in warm water. Mix all the ingredients and knead to form a soft dough. Cover with oil and let it rise, for one hour.
Divide into 8 portions and shaped into pavs. wait until it doubles and bake at 250 degree C till  the top is golden brown.
The above recipe can be used for both bread as well as pav.
This bread we experimented with whole wheat floor. 



Home made pav  & bhaji

October 24, 2013

'ಕೂರ್ಮಾವತಾರ' ಸ್ವಲ್ಪ ಲೇಟ್ ಆಗಿ


(ಮೊನ್ನೆ ಗಾಂಧಿ ಜಯಂತಿಯಂದು ಇದನ್ನು ಪೋಸ್ಟ್ ಮಾಡಬೇಕಿತ್ತು.. ಯಾಕೋ ಸೋಂಬೇರಿತನ. ಮತ್ತು ನಾವು ಆ ದಿನ ಇಡಿ ಮನೆಯಲ್ಲಿರಲಿಲ್ಲ. ಇನ್ನು ಎರಡೇ ತಿಂಗಳಿಗೆ ಪುನ: ಬೆಂಗಳೂರು ಅಂತರ್ ರಾಷ್ಟ್ಟ್ರೀಯ ಚಲನಚಿತ್ರೋತ್ಸ್ವ ಪ್ರಾರಂಭವಾಗುತ್ತೆ. ಈ ಸಿನಿಮಾ ಏನಾದರೂ ಪುನ: ಪ್ಲೇ ಮಾಡಿದ್ರೆ ನೀವೆಲ್ಲ ನೋಡಬಹುದು ಅಂತ ಬ್ಲಾಗ್ ನಲ್ಲಿ ಹಾಕುವ ಅಂದಾಜು ಮಾಡಿದೆ. anyways ನೆನಪಿನ ಸಂಚಿ ಅಂತ ಬ್ಲಾಗ್ ಹೆಸರು ಸಾರ್ಥಕವಾಯ್ತು ಬಿಡಿ :-) )
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ನಾನು ಬೆಂಗಳೂರಿಗೆ ಬಂದು ಆಲ್ ಮೋಸ್ಟ್ 12 ವರ್ಷ ಆಗುತ್ತೆ. ಇಲ್ಲಿಗೆ ಬಂದ ಮೇಲೆ ನಾನು ನೋಡಿದ ಕನ್ನಡ ಸಿನಿಮಾಗಳು

1 ಮಾತಾಡ್ ಮಾತಾಡ್ ಮಲ್ಲಿಗೆ
2 ಎಕ್ಶಿಡೆಂಟ್
3 ನಾನೂ ನನ್ನ ಕನಸು
4 ಅಬಚೂರಿನ ಪೋಸ್ಟ್ ಆಫಿಸ್
5 ಕನಸೆಂಬ ಕುದುರೆಯನ್ನೇರಿ
6 ಗುಬ್ಬಿಗಳು
7 ಎದ್ದೇಳು ಮಂಜುನಾಥ
8 ಬೆಟ್ಟದ ಜೀವ
9 ಪುಟ್ಟಕ್ಕನ ಹೈ ವೇ
10 ಕೂರ್ಮಾವತಾರ

ನನ್ನ ಕನ್ನಡ ಪ್ರೀತಿ ಪುಸ್ತಕಗಳು ಹಾಗು ಕೆಲವು ಹಾಡುಗಳಿಗೆ ಮಾತ್ರ ಸೀಮಿತ. ಮೇಲಿನ ಪಟ್ಟಿಯಲ್ಲಿದ್ದ ಸಿನಿಮಾದಲ್ಲಿ ನಾನು ಪೂರ್ತಿಯಾಗಿ ನೋಡಿದ್ದು 1 ರಿಂದ 3  ಮತ್ತು 8 ರಿಂದ 10. ಉಳಿದ ಸಿನಿಮಾ ನನಗೆ concentrate ಮಾಡಕ್ಕೆ ಆಗಲಿಲ್ಲ. ನನ್ನ ಕೆಲವು ಮಿತ್ರರು ತುಂಬಾ ಆಪ್ತ ಎನಿಸಿದವರೂ ಈ ಚಿತ್ರ ನೋಡು ಅಂದ್ರೆ ನಾನು 5 ಜನರಲ್ಲಿ, ನಾಲ್ಕು ಜನ ಚೆನ್ನಾಗಿದೆ ಅಂದ್ರೆ ಮಾತ್ರ ಸಿನಿಮಾಗೆ ಹೋಗುತ್ತೇನೆ. ಆಗಲೂ ಅವರು ನೋಡಲು ಹೇಳಿದ ಸಿನಿಮಾ ನನಗೆ  ಇಷ್ಟವಾಗಿದ್ದು ಅತೀ ವಿರಳ ಎನ್ನಬಹುದು. ಮಿತ್ರ ರಘು ಅಪಾರ 'ಕೂರ್ಮಾವತಾರ' ಸಿನಿಮಾ ಬಗ್ಗೆ ಬರೆದಿದ್ದೀನಿ ಅಂದಿದ್ರೂ ಸಿನಿಮಾ ನೋಡದೆ ನಾನು ಯಾರದೇ ಸಿನಿಮಾ review ಓದೋದಿಲ್ಲ, ನೋಡಿದ ಮೇಲೆ ಓದ್ತೀನಿ ಅಂದಿದ್ದೆ. ಫಿಲ್ಮ್ ನೋಡಿಯಾದ ಮೇಲೆ ಅದರ ಬಗ್ಗೆ ಇಬ್ಬರೂ ಡಿಸ್ಕಸ್ ಮಾಡಿದ್ವಿ and iam glad ನಮ್ಮ 90% views ಮ್ಯಾಚ್ ಆದುವು. ಮೇಲಿನ ಪಟ್ಟಿಯಲ್ಲಿನ ಎಲ್ಲ ಸಿನಿಮಾಗಳಲ್ಲಿ ನನಗೆ ಕೂರ್ಮಾವತಾರ ಹೆಚ್ಚು ಇಷ್ಟ ಆಗಿದ್ದು.

ಹಿಂದಿನ ವರ್ಷ ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ, ಹೇಗೂ ನಿಹಾ ಗೆ ರಜೆ ಇತ್ತು ನನಗೂ ಆಫಿಸ್ ನ ಹೇಳಿಕೊಳ್ಳುವ ಯಾವ ಕೆಲಸಗಳೂ ಇರಲಿಲ್ಲ. ಹಾಗಾಗಿ ನಾನು ನಿಹಾ ಜೋಡಿಯಾಗಿ ಹಲವಾರು ಸಿನಿಮಾ ಗಳನ್ನು ನೋಡಿದ್ವಿ. 'ಈ ವರ್ಷ ನೀನು ಚೂಸ್ ಮಾಡಿದ ಸಿನಿಮಾ' ಯಾವುದೇ ಆಗಿರಲಿ ನಾ ನೋಡುತ್ತೇನೆ ಅಂದೆ. ಅವಳಿಗೆ ಸಿನಿಮಾ ಬಗ್ಗೆ alert ಮಾಡುವ ಹಲವಾರು ಸ್ನೇಹಿತೆಯರು ಮಾತ್ರವಲ್ಲ ಅವಳ ಕಾಲೇಜಿನ ಲೆಕ್ಚರರ್ ಮನು ಚಕ್ರವರ್ತಿ ಸರ್ ಕೂಡ ಒಳ್ಳೆಯ ಸಿನಿಮಾ ದ ಲಿಸ್ಟ್ ಗಳನ್ನು ಕೊಡುತ್ತಿರುತ್ತಾರೆ. ನಾನು ಇಲ್ಲಿ ಒಳ್ಳೆಯ ಸಿನಿಮಾ ಅಂದಾಗ 'ಅವರು ಸೂಚಿಸಿದ ಎಲ್ಲ ಸಿನಿಮಾಗಳೂ ನನಗೆ ಇಷ್ಟವಾಗಿವೆ  ಹಾಗಾಗಿ ಇದು ಸಿರ್ಫ್ ಮೇರಾ ಅಭಿಪ್ರಾಯ. ಈವರೆಗೆ ಅವರು ಅವಳಿಗೆ ಯಾವ ಕನ್ನಡ ಸಿನಿಮಾನೂ ಸೂಚಿಸಿಲ್ಲ.
ಬೆಳಿಗ್ಗೆ ನಾವು ಹೊರಡುವಾಗ ನಿಹಾ ಅಮ್ಮ ಕನ್ನಡ ಸಿನಿಮಾ 'ಕೂರ್ಮಾವತಾರ' ಚೆನ್ನಾಗಿದೆ ಅಂತ ಸುಮಾರು ಜನ ನನಗೆ ಹೇಳಿದ್ದಾರೆ' ಅಲ್ಲಿ ಹೋಗಿ ನೋಡುವಾ otherwise my choice is Bengali movie' ಅಂದ್ಲು. ನಾನು ಹೂಂ ಅಂದೆ. ಅಲ್ಲಿ ನೋಡಿದ್ರೆ ಆಗಲೇ ಕೂರ್ಮಾವತಾರಕ್ಕೆ ದೋssssssಡ್ಡ ಲೈನ್. ನನಗಂತೂ ಖುಶಿ. ಗ್ಯಾರಂಟಿ ಕನ್ನಡ ಸಿನಿಮಾ ಸಿಗಲಿಕ್ಕಿಲ್ಲ. i was all for the Bengali movie'. ಸರತಿ ಸಾಲಿನಲ್ಲಿ ನಿಂತುಕೊಂಡೆವು. 10-10 ಜನರನ್ನು ಮಾತ್ರ ಒಳಗೆ ಬಿಡುತ್ತಿದ್ದರು. ನನ್ನ-ನಿಹಾ ಸರದಿ ಬಂದಾಗ ಸೆಕ್ಯುರಿಟಿ ಗಾರ್ಡ್ 'ಮ್ಯಾಡಂ ಫುಲ್  ಹೋಗಯಾ , ಸಾರಿ' ಅಂದ. ನಾನು ನಿಹಾ ಕಡೆ ತಿರುಗಿ ವಿಜಯದ ನಗೆ ನಕ್ಕೆ. ಹಾ ಇನ್ನು ಬೆಂಗಾಲಿ ಚಿತ್ರಕ್ಕೆ, ಅದು ಶುರು ಆಗಲು ಇನ್ನೂ 15 ನಿಮಿಷದ ಟೈಮ್ ಇತ್ತು. ಸೋ ನಾ ಹೊರಡಲು ಅನುವಾದಾಗ ಇನ್ನೊಬ್ಬರು ಯಾರೋ 'please wait madam' there might be a few seats' ಅಂದ. ನಿಂತೆ. ಕೆಲ ಕ್ಷಣಗಳ ನಂತರ only two more seats ,please enter ಅಂದ. ಸರಿ ಹ್ಯಾಪ್ ಮೋರೆ ಹಾಕ್ಕೊಂಡು ಎಂಟರ್ ಆde. ಅಲ್ಲಿ ನೋಡಿದ್ರೆ ನಮ್ಮನ್ನು ಸೀಟ್ ಗಳಿಗೆ ಎಸ್ಕೋರ್ಟ್ ಕೂಡ ಮಾಡಿದರು. ತುಂಬ ಎದುರಿನ ಸೀಟ್. ನನಗೂ ನಿಹಾಗೂ ಅಕ್ಕ ಪಕ್ಕದ ಸೀಟ್ ಎ ಸಿಕ್ಕಿದ್ದು. ಆ ಮೇಲೆ ಡೈರೆಕ್ಟರ್, ತಾರಾ ಅನುರಾಧ ಅವರೆಲ್ಲ ಎದುರಿಗೆ ಬಂದು ನಿಂತರು. ಕಾಸರವಳ್ಳಿಯವರ ಮಗ-ಮಗಳು ಎಲ್ಲ ಇದ್ದರು. ಗಿರೀಶ್ ಕಾಸರವಳ್ಳಿಯವರನ್ನು ನಾನು ಮಿತ್ರ ವಸುಧೇಂದ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ದರಿಂದ ಅವರನ್ನು ಐಡೆಂಟಿಫೈ ಮಾಡಿದೆ. ನನ್ನ ಪಕ್ಕದಲ್ಲಿ ಕೂತವರು ಯಾರೋ ದೊಡ್ಡ (ಗಾತ್ರದಲ್ಲೂ) ಜನ ಐ ಮೀನ್ ಫೇಮಸ್ personality ಇದ್ದರೋ ಏನೋ. ಫೋಟೊಗ್ರಾಫರ್ಸ್ ಬಂದು ಫೋಟೊ ತೆಗೆದದ್ದೆ ತೆಗೆದದ್ದು. ಅವರು ಯಾರು ಅಂತ ನನಗೆ ನಿಹಾಗೆ ತಿಳಿಯಲಿಲ್ಲ ಆದರೆ ಫೋಟೊಗಳ ಫ್ಲಾಶ್ ಕಣ್ಣುಗಳನ್ನು ಕೆಲವು ಕ್ಷ್ಣಣಗಳ ಕಾಲ ಕುರುಡಾಗಿಸಿದ್ದು ನಿಜ. ಸಿಕ್ಕಾಪಟ್ಟೆ ಮುಜುಗರ ಕೂಡ ಆಯ್ತು. :-(.( ಗಾಂಧೀಜಿಯವರನ್ನು ಶೂಟ್ ಮಾಡುವ ಸೀನ್ ಗೆ ಸಜ್ಜಾಗಿಸುತ್ತ ಅವರ co-actor ಗಳು ಅವರಿಗೆ get ready to be shot ಅಂದಾಗ ನಾನು ಎಲ್ಲಿದ್ದೇನೆ ಎಂಬ ಪರಿವೆಯಿಲ್ಲದೇ good one ಅಂದೆ ಗಟ್ಟಿಯಾಗಿ. ಪಕ್ಕದಲ್ಲಿದ್ದವರ ಬಿಳಿ ಹಲ್ಲು ಮಾತ್ರ ಕಾಣ್ಸಿತು ಅವರು ನನ್ನ ಉದ್ಘಾರ ಕೇಳಿ ನನ್ನ ಕಡೆ ಹೊರಳಿದಾಗ. :-))
ನಟಿ ತಾರಾ ಅವರು ಸಿನಿಮಾ ಉದ್ಘಾಟನೆ ಮಾಡಿ ಒಮ್ಮೆ ಸುತ್ತಲೂ ನೋಡಿ, 'ಸಿನಿಮಾ ಈ ಮೊದಲೇ ನೋಡಿದವರು ದಯವಿಟ್ಟು ಹೊರಗೆ ಬನ್ನಿ, ಹೊರಗಡೆ ಅಲ್ಲಿ ಎಷ್ಟೋ ಜನ ಕೂರ್ಮಾವತಾರ ನೋಡಲು ನಿಂತಿದ್ದಾರೆ ಪಾಪ' ಅಂದ್ರು. ಸಿನಿಮಾ ಶುರು ಆದ ಮೇಲೆ ಹೊರಗೆ ನಿಂತವರಿಗೆ ಒಳಗೆ ಬಿಟ್ಟಿದ್ದರಿಂದ ಅವರೆಲ್ಲ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡಿದರು. ನನಗೆ ನಿಹಾ ಕೆಲ ಅಂಶ ಬಿಟ್ಟರೆ ಈ ಸಿನಿಮಾ ನಿಜಕ್ಕೂ ಇಷ್ಟ ಆಯ್ತು.
ಗಾಂಧಿಜಿಯವರನ್ನು ಹೋಲುವ, ನಿವೃತ್ತಿಯ ಅಂಚಿನಲ್ಲಿರುವ ಆನಂದರಾವ್ ಅವರಿಗೆ ಆಕಸ್ಮಿಕವಾಗಿ ಟಿ.ವಿ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಅವರಿಗದು ಅಷ್ಟು ಇಷ್ಟವಿರುವುದಿಲ್ಲವಾದರೂ ಮಗ ಹಾಗು ಅವನ ಸಂಸಾರದ ಒತ್ತಾಯದ ಒತ್ತಡಕ್ಕೆ ಸಿಲುಕಿ ಒಪ್ಪಿಕೊಳ್ಳುತ್ತಾರೆ.
.ಚಿತ್ರದ ಮೊದಲ ಸೀನ್ ನಲ್ಲಿ ಭಾರತ ವಿಭಜನೆಗೊಳ್ಳುವುದು. ಅದರಲ್ಲಿ ಗಾಂಧೀಜಿಯವರನ್ನು ದು:ಖ ತಪ್ತರಾನ್ನಾಗಿಸಿ portray ಮಾಡುವಲ್ಲಿ  ಪಾತ್ರ ಮಾಡುತ್ತಿರುವ ಆನಂದ ರಾವ್ ವಿಫಲರಾಗುತ್ತಾರೆ. ಕೊನೆಗೆ ಡೈರ್ ಕ್ಟರ್ ನಿಮ್ಮ ಪತ್ನಿಯ ಸಾವನ್ನು ನೆನಪಿಸಿಕೊಳ್ಳಿ ಅಂತ ಸಲಹೆ ನೀಡುತ್ತಾನೆ. ಯಾವ ತರಹದ ಇಮೋಷನ್ಸ್ ತೋರಿಸಲಿಕ್ಕಾಗದಾದಾಗ ಡೈರೆಕ್ಟರ್ ಅವರಿಂದ' ಭಾವನೆಗಳಿಲ್ಲದನು ನಾಯಿಗಿಂತ ಕಡೆ' ಎಂದು ಛೀ ಮಾರಿ ಹಾಕಿಸಿಕೊಳ್ಳುತ್ತಾರೆ. ಆಗ ತಾನು ತನ್ನ ಪತ್ನಿಗೆ ಎಷ್ಟು ಅನ್ಯಾಯ ಮಾಡಿದೆ, ಕ್ಯಾನ್ಸರ್ ನಿಂದ ಆಕೆ ಸಾಯುವಾಗ ತಾನು ಮಾಡಿದ ಅಸಡ್ಡೆ ನೆನಪಿಸಿಕೊಂಡು,'ಛೆ ನಾನು ನಾಯಿಗಿಂತ ಕಡೆ' ಅಂತ  ದು:ಖ್ಹ ವಿಹ್ವಲರಾಗಿ ಅವರ ಜೀವನ ಹೊಸ ತಿರುವನ್ನು ಪಡೆಯುತ್ತದೆ.
ತನ್ನಿಂದ ಅಭಿನಯ ಸಾಧ್ಯವಾಗುತ್ತಿಲ್ಲ ಅಂದಾಗಲೆಲ್ಲ ಅವರನ್ನು ಪ್ರೇರೆಪಿಸುವ ಹಲವಾರು ಘಟಣೆಗಳು...ಹೀಗೆ ಸಾಗುತ್ತದೆ ಸಿನಿಮಾ. ಪಾತ್ರ ಮಾಡ್ತಾ, ಗಾಂಧಿಜಿಯವರ ಬಗ್ಗೆ ಪುಸ್ತಕ ಓದ್ತಾ ತಾವೇ ಗಾಂಧಿಜಿಯಾಗುವಷ್ಟು ಕೊನೆಗೆ ಪಾತ್ರದಲ್ಲಿ ತಲ್ಲೀನರಾಗುತ್ತಾರೆ. ಸೀರಿಯಲ್ ಜನಪ್ರಿಯವಾಗತೊಡಗಿದಂತೆ ಅವರ ಮಿತ್ರರು ಪರಿಚಯದವರು ಅಕ್ಕಪಕ್ಕದವರೆಲ್ಲ ರಾಯರಲ್ಲಿ ಗಾಂಧೀಜಿಯನ್ನು ಕಾಣ ಬಯಸಿ ಅವರಿಗೆ ಬೇಕಾದ ಬದಲಾವಣೆಗಳನ್ನು ಆನಂದ ರಾಯರಿಂದ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಕ್ರಮೇಣ ರಾಯರಿಗೆ ಗಾಂಧೀ ತತ್ವ ಪಾಲಿಸುವಲ್ಲಿ ತನ್ನ ಇತಿ ಮಿತಿಗಳೆಲ್ಲಾ ಅರಿವಾಗುತ್ತಾ ಹೋದಂತೆ ಅವರು ಹಲವು ರೀತಿಯ ತಲ್ಲಣ ಹತಾಶೆಗಳಿಗೆ ಒಳಗಾಗುತ್ತಾ ಸಾಗುತ್ತಾರೆ. ಮನೆಯ ಕಷ್ಟ ಕೋಟಲೆಗಳಿಂದ ಸಮಾಧಾನ ಹೊಂದಲು ಕಸ್ತೂರ್ಬಾ ಪಾತ್ರ ಮಾಡುತ್ತಿರುವವರ ಸುಶೀಲಾ ಅವರ ಸ್ನೇಹ ಬಯಸಿ ಅವರನ್ನು ಆಗಾಗ ಭೇಟಿ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ. ಕೊನೆಗೆ ಮಗ ದುಡ್ಡಿನ ಅವ್ಯವಹಾರದಲ್ಲಿ ಸಿಲುಕಿ ಜೈಲ್ ಸೇರುತ್ತಾನೆ. ಜೈಲ್ ನಿಂದ ಹೊರಬರಬೇಕಾದರೆ ಲಂಚ ಕೊಡಬೇಕಾಗುತ್ತದೆ. ಆಗ ಆನಂದ ರಾಯರು ಏನು ನಿರ್ಧಾರ ತಳೆಯುತ್ತಾರೆ? ಹ್ಯ್ವಾಯ್ ಪೂರ್ತಿ ಸಿನಿಮಾದ ಬಗ್ಗೆ ಇಲ್ಲೇ ಹೇಳಿ ಬಿಟ್ಟರೆ ನೀವು ನೋಡುವುದು ಯಾವಾಗ. ಒಳ್ಳೆಯ ಸಿನಿಮಾ ಬಂದಾಗ ಖಂಡಿತ ಮಿಸ್ ಮಾಡಬೇಡಿ.

ಕೂರ್ಮಾವತಾರ ಟೈಟಲ್ ಬಗ್ಗೆ ಗೊತ್ತಾಗಲಿಲ್ಲ. ಸಂಸ್ಕೃತದ ಕೂರ್ಮ ಅಂದರೆ ಆಮೆ. ಆನಂದರಾಯರ ಮೊಮ್ಮಗನ ಬಳಿ ಒಂದು ಆಮೆ ಇರುತ್ತೆ ನಿಜ. ಮತ್ತು ಕೂರ್ಮಾವಾತರ ವಿಷ್ಣುವಿನ ಎರಡನೆ ಅವತಾರ. ಸತ್ಯಯುಗದಲ್ಲಿ, ಸಮುದ್ರ ಮಥನದ ವೇಳೆ ಮಂದಾರ ಪರ್ವತ ಕಡೆಗೋಲಾದರೆ, ನಾಗ ವಾಸುಕಿ ಹಗ್ಗ ಆಗುತ್ತಾನೆ. ಆದರೆ  ಪರ್ವತ ಸುರ ಅಸುರರ  ಕಡೆಯುವ ವೇಗ ತಾಳಿಕೊಳ್ಳದೆ ಕುಸಿಯಲಾರಂಭಿಸುತ್ತದೆ ಆಗ ವಿಷ್ಣು  ಆಮೆಯ ಅವತಾರ ತಾಳಿ , ಮಂದಾರ ಪರ್ವತಕ್ಕೆ ಬೆನ್ನು ಕೊಡುತ್ತಾನೆ. ಅಂದರೆ ಗಾಂಧಿತತ್ವಗಳನ್ನು ಪರಿಪಾಲಿಸುವುದರಿಂದ ಕೆಟ್ಟು ಹೋಗುವ ಸಮಾಜವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದೆಂದು ಇದರ ಅರ್ಥ ಅಂತ ಅಂದುಕೊಳ್ಳಬಹುದೇ?? ಕುಂಬಾರ ವೀರಭದ್ರಪ್ಪನವರು ಬರೆದ  ಕತೆ 'ಕೂರ್ಮಾವತಾರ'. ಅದೇ ಹೆಸರಿನ ಚಿತ್ರ. ಪುಸ್ತಕ ಇನ್ನೂ ಓದಿಲ್ಲ. ಓದಬೇಕೆನಿಸಿದೆ. ಮುಂದಿನ ಸಲ ಆಕೃತಿಗೆ ಹೋದಾಗ ಈ ಪುಸ್ತ್ಕಕದ ಹೆಸರು ನನ್ನ ಲಿಸ್ಟ್ ನಲ್ಲಿದೆ.
on a scale of 1 to 5 i give this movie 3.5 score. ಸ್ವಲ್ಪ ಎಡಿಟಿಂಗ್ ಬಿಗಿ ಮಾಡಿದಿದ್ರೆ ಈ ಸಿನಿಮಾಗೆ ನಾನು ಆಲ್ಮೋಸ್ಟ್ ಐದರಲ್ಲಿ ಐದು  ಕೊಡುತ್ತಿದ್ದೆ. :-) ;-)
ಐಸಾಕ್ ಥಾಮಸ್ ಕೊಟ್ಟುಕಾಪಳ್ಳಿಯವರ ಸಂಗೀತ ಹಿತವಾಗಿದೆ.
ಮನೆಗೆ ಬಂದ ಮೇಲೆ ಮಿತ್ರ ರಘು ಬರೆದ ಕೂರ್ಮಾವತಾರ ವಿಮರ್ಶೆ ಓದಿದೆ. ಅವರ ಪರ್ಮಿಶನ್ ತೆಗೊಂಡು ಅವರ ವಿಮರ್ಶೆಯ ಲಿಂಕ್ ಕೆಳಗೆ ಕೊಟ್ಟಿದ್ದೇನೆ.  ನೀವೂ ಓದಿ. ತುಂಬ ಚೆಂದ ಬರೀತಾರೆ ಅವರು. :-) ಥ್ಯಾಂಕ್ಸ್ ರಘು.

http://raghuapara.blogspot.in/2012/01/blog-post.html

ಎರಡು  ದಿನಗಳ ನಂತರ ಇನ್ನೊಂದು ಸಿನಿಮಾ ಹಾಲ್ ಪ್ರವೇಶಿಸುವ ಮುನ್ನ ನಮ್ಮ ಸಾಲಿನಲ್ಲಿ ನಿಂತಿದ್ದ ಹಿರಿಯರನ್ನು ಎಲ್ಲೋ ನೋಡಿದ್ದೇನೆ ಅನ್ನಿಸ್ತು. ನೆನಪಾಗಲಿಲ್ಲ. ನಿಹಾ ಬಳಿ 'ಥ್ಯಾಟ್ ಗ್ರಾಂಡ್ ಪಾ ಲುಕ್ಸ್ ಫಮಿಲಿಯರ್' ಅಂದೆ. ಅವಳೂ ಹೂಂ ಅಂದ್ರೂ ಯಾರು ಅಂತ ಗೊತ್ತಾಗಲಿಲ್ಲ. ಆಮೇಲೆ ಸಿನಿಮಾ ಹಾಲ್ ಒಳಗೆ ಹೋಗ್ತಾ ಥಟ್ ಅಂತ ಫ್ಲಾಶ್ ಆಗಿ 'hey it's Gandhiji'' ಅಂತ ಜೋರಾಗಿ ಕಿರುಚಿದೆ. :-) :-)




October 19, 2013

ಕಥೆ

ಅವಳು ಅವನಿಗೆ ತಾನು ತಾಯಾಗಲಿರುವ ಬಗ್ಗೆ ಹೇಳಿದಾಗ ಅವನು ಕೇಳಿದ ಪ್ರಶ್ನೆ 'ಅದು ಹೇಗೆ ಸಾಧ್ಯ?' ಅಂತ. ಅವಳೋ ಕಕ್ಕಾಬಿಕ್ಕಿ
ಪ್ರಿಯಂವದಾಳಿಗೆ ಐದು ಜನ ಅಕ್ಕಂದಿರು ಇಬ್ಬರು ತಂಗಿಯಂದಿರು. ಅಕ್ಕಂದಿರ ಮದುವೆ, ಬಾಣಂತನ, ಮಕ್ಕಳು ಅಂತ ನೋಡಿ ಅವಳಿಗೆ ರೇಜಿಗೆ ಅನ್ನಿಸಿ. ತಾನು ಯಾವತ್ತೂ ಮದುವೆಯಾಗಲಾರೆನೆಂದು ಪ್ರತಿಜ್ಞೆ ಮಾಡಿದ್ದಳು. ಹಾಗೆ ವಿಜ್ಞಾನದ ಉನ್ನತ ಪದವಿಧರೆಯಾದ ಅವಳು ವಿಜ್ಞಾನಿಯೊಬ್ಬರ ಬಳಿ ಎಸಿಸ್ಟೆಂಟ್ ಆಗಿ ಕ್ಯಾನ್ಸರ್ ರೋಗದ ಮೇಲೆ, ಅದನ್ನು ಗುಣಪಡಿಸುವತ್ತ  ಸಂಶೋಧಕಿಯಾಗಿ ಕೆಲಸಕ್ಕಿದ್ದಳು. ಹೀಗಿರುವಾಗ ಒಂದು ದಿನ ಅವಳ ತಂಗಿಗೆ ಒಬ್ಬನ ಜತೆ ಪ್ರೇಮವಾಗಿ ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದಳು. ಆದರೆ ಅವಳಿಗಿಂತ ದೊಡ್ಡವಳಿಗೆ ಮದುವೆಯಾಗದೆ ಚಿಕ್ಕವಳಿಗೆ ಮದುವೆ ಮಾಡುವುದು ಮನೆಯ ಹಿರಿಯರಿಗೆ ಸರಿ ಬರಲಿಲ್ಲ. 38 ರ ಪ್ರಾಯದ ಪ್ರಿಯಂವದೆಗೆ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಅವಳು ಸುತಾರಾಂ ಒಪ್ಪಲಿಲ್ಲ. ಸರಿ ಹಾಗಾದ್ರೆ ಚಿಕ್ಕವಳಿಗಾದ್ರು ಮದುವೆ ಮಾಡಿ ಮುಗಿಸುವ ಅಂದ್ರೆ ಅವಳ ಪ್ರಿಯಕರನ ಕುಟುಂಬಕ್ಕೆ  ಗುಮಾನಿ. ನೋಡಲು ಇಷ್ಟು ಚೆನ್ನಾಗಿದ್ದಾಳೆ ಅಕ್ಕ, ಸ್ವಂತ ದುಡಿಮೆಯಿದೆ ಆದರೆ ಯಾಕೆ ಮದುವೆಯಾಗುತ್ತಿಲ್ಲ ಅಂತ ಅವರಿಗೆ ತಲೆ ಬಿಸಿ. ಏನೋ ಊನವನ್ನು ಮುಚ್ಚಿಡುತ್ತಿದ್ದಾರೆ ಅಂತ. ಹೀಗೆ ಮದುವೆ ಮುಂದೂಡುತ್ತಲೆ ಇರುವಾಗ ತಂಗಿ ತಲೆ ಕೆಟ್ಟವರಹಾಗೆ ವರ್ತನೆ ಶುರು ಮಾಡಿದ್ಲು. ಆಗ ಕುಟುಂಬದ ಹಿರಿಯರೆಲ್ಲ ಸೇರಿ ಪ್ರಿಯಂವದೆಗೆ ಛಿಮಾರಿ ಹಾಕಿದರು - ನಿನ್ನಿಂದ ನಿನ್ನ ತಂಗಿಯ ಜೀವನ ಹಾಳಾಗುತ್ತಿದೆಯೆಂದು. ಅವಳು 'ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಆಶ್ರಮ ಸೇರಿ ಸನ್ಯಾಸಿ ಆಗುತ್ತೇನೆ ಅಂತ ಗಲಾಟೆ ಮಾಡಲು ಶುರು ಮಾಡಿದಳು. ಆಗ ಸಿಕ್ಕಿದ ವರ ಸುಮತೀಂದ್ರ.
ಸುಮತೀಂದ್ರನಿಗೆ ಮೂವರು ಅಕ್ಕಂದಿರು. ತಂದೆ ಚಿಕ್ಕ ಪ್ರಾಯದಲ್ಲೇ ಕಾಲಾವಸಾನರಾಗಿದ್ದರು. ಕೈ ತುಂಬ ಸಂಬಳ ಮಾತ್ರವಲ್ಲ ಗದ್ದೆ ತೋಟಗಳಿಂದಲೂ ಸಾಕಷ್ಟು ಆದಾಯ  ಬರುವ ಸುಮತೀಂದ್ರನಿಗೆ ಮೂವರು ಅಕ್ಕಂದಿರ ಮದುವೆ ಮಾಡಿ ಮುಗಿಸಬೇಕಾದ್ರೆ ಸಾಕು ಬೇಕಾಯಿತು. ನೋಡಲು ಒಂದು ಚೂರು ಲಕ್ಷಣವಿಲ್ಲದ ಹುಡುಗಿಯರನ್ನು ದಂಡಿಯಾಗಿ ವರದಕ್ಷಿಣೆ ಕೊಟ್ಟು ಸಾಗ ಹಾಕಿದ. ಅಮ್ಮನೂ ತೀರಿಕೊಂಡ ಮೇಲೆ ಅವನು ದುಡಿಯುತ್ತ ಕುಡಿಯುತ್ತ ಇತ್ತೀಚಿನ ಐದು ವರ್ಷಗಳಲ್ಲಿ ಹಾಯಾಗಿದ್ದ.ಮದುವೆ ಮಾಡಿಕೊಳ್ಳುವ ಯೋಚನೆ ಅವನಿಗೆ ಖಂಡಿತ ಇರಲಿಲ್ಲ. ಪ್ರಿಯಂವದಾ ಹಾಗೂ ಸುಮತೀಂದ್ರ ಮದುವೆ ಮಾಡಿಸಿದವರು ಎರಡೂ ಕುಟುಂಬದ ನಿಕಟ ಪರಿಚಯದವರು ಮತ್ತು ಎರಡೂ ಕುಟುಂಬಕ್ಕೆ ಬೇಕಾದವರು. ಪ್ರಿಯಂವದಾ ಹಾಗೂ ಸುಮತೀಂದ್ರರಿಬ್ಬರನ್ನೂ ಒಂದು ಸಲ ಒಟ್ಟೊಟ್ಟಿಗೆ ಇನ್ನೊಂದು ಸಲ ಬೇರೆ ಬೇರೆಯಾಗಿ ಸಂಧಿಸಿ ಅವರಿಬ್ಬರೂ ಮದುವೆಯಾಗುವ ಹಾಗೆ ತಯಾರು ಮಾಡಿದರು. ಮ್ಯಾರೇಜ್ ಆಫ್ ಕನ್ವಿನೀಯನ್ಸ್ ಅಂತಾರಲ್ಲವಾ, ಹಾಗೆ!
ಸರಿ ಮದುವೆಯಾಯ್ತು. ಸುಮತೀಂದ್ರ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರಿಬ್ಬರಿಗೂ ಬೇರೆ ಬೇರೆ ಕೊಠಡಿ. ಅವಳು ಮಾಡಿ ಹಾಕಿದ ರುಚಿರುಚಿಯಾದ ಅಡಿಗೆ ಬಾಯಿ ಚಪ್ಪರಿಸಿ ತಿಂದು ಅವನ ಸ್ನೇಹಿತರು, ಕುಡಿತ ಅಂತ ಆರಾಮಾಗಿದ್ದು ಬಿಟ್ಟಿದ್ದ. ಪ್ರಿಯಂವದೆ ತನ್ನ ಸಂಶೋಧನೆಯಲ್ಲಿ ಮಗ್ನ.ಯಾವಾಗಲೋ ಕುಡಿತದ ಅಮಲಿನಲ್ಲಿ ಅವಳನ್ನು ಕೂಡಿದ ಅವನು, ಅವಳು ರೇಜಿಗೆಯಿಂದ ಅವನಿಗೆ ಛಿ ಮಾರಿ ಹಾಕಿದ್ದು,  ಈ ಸಿಡಿಲಿನಂತಹ ಸುದ್ದಿ.
ಅವನು ಅದು ಹೇಗೆ ಅಂತ ಕೇಳಿದ್ದಕ್ಕೆ ಅವಳ ಬಳಿ ಉತ್ತರ ಏನೋ ಇತ್ತು ಆದರೆ ಅವನ ಶಾಕ್ ನಿಂದ ಕೂಡಿದ ಮುಖ ನೋಡಿ ಅವಳಿಗೆ ಉತ್ತರಿಸಬೇಕೆಂದನಿಸಲಿಲ್ಲ. ಅವನು ಯಾವಾಗಲೋ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವನಿಗೆ ಮಕ್ಕಳಾಗದಿರುವ ಬಗ್ಗೆ ರಿಪೋರ್ಟ್ ಬಂದಿದ್ದು ಅವನಿಗೆ ನಿಜಕ್ಕೂ ಶಾಕ್ ಆಗಿತ್ತು.ಆ ಮೇಲೆ ಅವರು ಬೇರೆ ಬೇರೆ ಆದರು. ಅವನಿಗೆ ಅವಳ ಬಗ್ಗೆ ಮರೆತು ಕೂಡ ಹೋಯಿತು. 
ಪ್ರಿಯಂವದಾ ಯಾವಾಗಲೋ ಹೊರ ದೇಶದ ಸಂಶೋಧನಾ ಫೆಲ್ಲೊಶಿಪ್ ಗೆ ಅರ್ಜಿ ಹಾಕಿದ್ದು ಅದು ಸ್ವೀಕೃತ ಆಗಿ ಆಕೆ ಸ್ವಿಜರ್ ಲ್ಯಾಂಡ್ ಗೆ ಹೋಗಿದ್ದಷ್ಟೆ ಅವನಿಗೆ ಅವರಿವರಿಂದ ಗೊತ್ತು. ಆಮೇಲೆ ಅವರಿಬ್ಬರೂ ಸಂಪರ್ಕದಲ್ಲಿರಲಿಲ್ಲ
ಮಧ್ಯೆ ಮಧ್ಯೆ ಸುಮತೀಂದ್ರನಿಗೆ ಅವನ ದೂರದ ಸಂಬಂಧಿ ಡಾಕ್ಟರ್ ಒಬ್ಬರು ಪತ್ರ ಕಳುಹಿಸುತ್ತಿದ್ದರು. ಅದರ ಒಕ್ಕಣೆ ಹೆಚ್ಚು ಕಡಿಮೆ ಹೀಗಿರುತ್ತಿತ್ತು, 'ಇಲ್ಲಿ ಥೇಟ್ ನಿನ್ನನ್ನು ಹೋಲುವ ನೇ ಒಬ್ಬ ಹುಡುಗನಿದ್ದಾನೆ ಅಂತಲೋ, ನೀನು ಆರನೆ ಈಯತ್ತೆಯಲ್ಲಿದ್ದಾಗ ಹೇಗೆ ಕಾಣುತ್ತಿದ್ದೆ ಹಾಗೆ ಕಾಣುತ್ತನೆಂದಲೋ, ನಕ್ಕರೆ ನೀನೆ ನಕ್ಕಹಾಗೆ ಕಾಣುತ್ತನೆಂತ್ಲೋ ಇರುತಿತ್ತು. ಆದರೆ ಮೊನ್ನೆ ಬಂದ ಪತ್ರ ಓದಿ ಅವನಿಗೆ ಯಾಕೋ ತಳಮಳ ಆಯ್ತು. ಈ ಪತ್ರದ ಒಕ್ಕಣೆ ಹೀಗಿತ್ತು, 'ಒಂದು ಸಲ ಇಲ್ಲಿ ಬಂದು ಆ ಹುಡುಗನ್ನ ನೋಡ್ತಿಯಾ? ದೂರದಿಂದಲೇ ನೋಡು. ಅವನ ತಾಯಿ ಇನ್ನೂ ಕೆಲವೆ ದಿನಗಳ ಅತಿಥಿ.'
ಸುಮತೀಂದ್ರ ಈಗ ಸ್ವಯಂ ನಿವೃತ್ತಿ ಹೊಂದಿದ್ದ. ದುಡ್ಡಿನ ಜತೆ ಅವನ ಬಳಿ ಸಮಯವೂ ಸಾಕಷ್ಟಿತ್ತು. ಈಗ ಗೆಳೆಯರೂ ಅವರವರ ಪರಿವಾರ ಅವರ ಜೀವನದಲ್ಲಿ ವ್ಯಸ್ತರಾಗಿದ್ದು ಇವನ ಬಳಿ ಮಾತಾಡುವಷ್ಟು ವ್ಯವಧಾನ ಅವರಿಗಿರಲಿಲ್ಲ. ಇತ್ತೀಚಿಗೆ ಯಾಕೋ ಅವನಿಗೆ ಪ್ರಿಯಂವದಾ ಅವಳ ಅಡಿಗೆ, ಅವಳು ಬಳಸುವ ಶ್ಯಾಂಪೂ ಪರಿಮಳ ಅವಳ ಉದ್ದ ಜಡೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಹದಿನೈದು ವರ್ಷಗಳೇ ಕಳೆದು ಹೋಗಿದ್ದವು. ಅವಳಿಗೆ ನನ್ನ ನೆನಪು ಒಂದು ಸಲವೂ ಕಾಡಿಲ್ಲವೇ ಮುಂತಾದ ಪ್ರಶ್ನೆಗಳು ಅಸ್ವಸ್ಥ ಮಾಡುತ್ತಿದ್ದವು. ಆ ಸಂಬಂಧಿಕರಿರುವ ಊರಿಗೆ ಹೋಗಿ ಯಾಕೆ ಆ ಹುಡುಗನ್ನ ನೋಡ ಬಾರದು? ಅವನ ಶಿಕ್ಷಣಕ್ಕೆ ಏನಾದರೂ ದಾರಿಯಾದರೂ ಮಾಡುವ ಅಂತ ಹೊರಟ ಸುಮತೀಂದ್ರ.
ಹೌದು ಅಲ್ಲಿ ನೋಡಿದ್ರೆ ಆ ಹುಡುಗ ಸುಮತೀಂದ್ರ 9 ನೆ ತರಗತಿಯಲ್ಲಿ ಹೇಗೆ ಕಾಣಿಸುತ್ತಿದ್ದ ಹಾಗೇ ಇದ್ದ. ಅಷ್ಟೆ ಅಲ್ಲ ಸುಮತೀಂದ್ರನ ಹಾಗೆ ಸುಮ್ಮನೆ ಕೂತಾಗ ಒಂದು ಕಾಲನ್ನು ಅಲ್ಲಾಡಿಸುವ ಅಭ್ಯಾಸ ಕೂಡ ಇತ್ತು. ಸುಮತೀಂದ್ರ ಆ ಹುಡುಗನ ಅಮ್ಮನ ಬಳಿ ಮಾತನಾಡಲು ಹೋದ. ಅಮ್ಮನ ಪರಿಸ್ಥಿತಿ ತುಂಬ ಬಿಗಡಾಯಿಸಿತ್ತು. ಆಕೆ ಕಷ್ಟಪಟ್ಟು ಹುಡುಗನಿಗೆ ತಂದೆ ಇಲ್ಲ, ಹೇಳಿಕೊಳ್ಳುವಂತಹ ಬಂಧು ಬಳಗವಿಲ್ಲ, ನಾನು ನೋಡಿದರೆ ನಿತ್ಯ ರೋಗಿ, ನನ್ನ ನಂತರ ಆ ಹುಡುಗಂದು ಏನಾಗುತ್ತದೋ ಎಂದು ರೋಧಿಸಿದರು. ಅವನು ಊರಿನ ಮುನಿಸಿಪಾಲಿಟಿ ಆಫಿಸ್ ನಲ್ಲಿ ಸ್ವಲ್ಪ ಅವರಿವರ ಕೈ ಬೆಚ್ಚಗೆ ಮಾಡಿ ಆ ಹುಡುಗ ಹುಟ್ಟಿದ ದಿನಾಂಕ ಅವನ ಇತರೇ ಮಾಹಿತಿಗಳನ್ನು ಕಲೆ ಹಾಕಿದ. ತಾಯಿಯ ಹೆಸರು ಇತ್ತೆ ವಿನಹ ತಂದೆಯ ಹೆಸರನ್ನು ಅಲ್ಲಿ ನೋಂದಾಯಿಸಿರಲಿಲ್ಲ. ಈಗ ಅವನು ಪ್ರಿಯಂವದಾಳಿಗೆ ಸಂಪರ್ಕಿಸ ಬೇಕಾಯಿತು. ಹಾಗೆ ತಾನೂ ಡಾಕ್ಟರ್ ಬಳಿ ತಪಾಸಣೆ ಹೋದಾಗ ಅವನಲ್ಲಿ ತಂದೆಯಾಗುವ ಎಲ್ಲ ಯೋಗ್ಯತೆಗಳೂ ಇದ್ದವು. ಒಂದು ತರಹ ಸಂತಸ ಸಂಭ್ರಮ.
ಸರಿ ಗೂಗಲ್ ನಲ್ಲಿ ಅವಳ ಹೆಸರು ಪ್ರಿಯಂವದಾ ಅಂತ ಹಾಕಿದ್ರೆ ಏನೂ ಸಿಗಲಿಲ್ಲ. ಪುನ: ಅವನ ಊರಿಗೆ ವಾಪಸ್ ಬಂದು  ಮನೆಯ ಕಪಾಟುಗಳನ್ನೆಲ್ಲ ತಡಕಾಡಿದ ಪ್ರಿಯಂವದಾ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಅಂತ. ಕೊನೆಗೂ ಪುಸ್ತಕದ ಕಪಾಟಿನಲ್ಲಿ ಎರಡು ಪುಸ್ತಕದ ಮಧ್ಯೆ ಅಪಚ್ಚಿಯಾದ, ಹುಳು ತಿಂದ ಅರ್ಜಿಯ ಸ್ವಲ್ಪ ಭಾಗದಲ್ಲಿ ಅವಳ ಸಂಶೋಧನಾ ಸಂಸ್ಥೆಯ ಹೆಸರು ಸಿಕ್ಕಿತು. ಕೂಡಲೆ ಗೂಗಲಿಸಿ ನೋಡಿದರೆ ಪ್ರಿಯಂವಾದ ಈಗ ಪ್ರಿಯಾ ಆಗಿದ್ದು, ಅವಳಿಗೆ ಬಂದ ಹಲವಾರು ಪ್ರಶಸ್ತಿಗಳು, ಅವಳು ಮತ್ತು ಅವಳ ಸಹೋದ್ಯೋಗಿಗಳು ಜಂಟಿಯಾಗಿ ಮಂಡಿಸಿದ ಪ್ರಬಂಧಗಳ ಪಟ್ಟಿಯೇ ಕಣ್ಣೆದುರಿಗೆ ಸಾಲು ಸಾಲಾಗಿ ಬಂದು ನಿಂತಿತು. ಪುಟದ ಕೊನೆಯಲ್ಲಿ ಅವಳ ವೈಯಕ್ತಿಕ ಮಾಹಿತಿ ಮುಂತಾದನ್ನು ಹಾಕಿದ್ದರು. ಅವಳ ಇ ಮೈಲ್ ಫೋನ್ ನಂಬರ್ ಇತ್ಯಾದಿ.
ಕೂಡಲೆ ಒಂದು ಮೈಲ್ ಕಳುಹಿಸಿ ಒಂದು ವಾರದ ತನಕ ಬೆಳಿಗ್ಗೆ ಮಧ್ಯಾಹ್ನ , ರಾತ್ರಿ ಎಚ್ಚರವಾದಾಗಲೆಲ್ಲ ಅವಳ ಮೈಲ್ ಏನಾದರೂ ಬಂದಿದೆಯಾ ಅಂತ ಕಾಯೋದೆ ಆಯಿತು. ಇನ್ನೊಂದೆರಡು ದಿನ ಕಾದು ಅಲ್ಲಿ ಕೊಟ್ಟ ನಂಬರ್ ಗೆ ಸಂಪರ್ಕಿಸೋದು ಅಂತ ತನ್ನಷ್ಟಕ್ಕೆ ಅಂದು ಕೊಂಡ ಅಲ್ಲಿಂದ ಯಾವುದೇ ಸುದ್ದಿಯಿಲ್ಲ. ಕೊನೆಗೆ ಫೋನ್ ಮಾಡಿದರೆ, 'ದಯವಿಟ್ಟು ನಿಮ್ಮ ಹೆಸರು ನಂಬರ್ ಹೇಳಿ ಅಂತ ಆಟೋಮೇಟದ್ ದನಿಯೊಂದು ಕೇಳಿತು. ಹತಾಶನಾದ ಸುಮತೀಂದ್ರ. ಎಲ್ಲ ಆಸೆ ಕೈಬಿಟ್ಟ ಮೇಲೆ ಒಂದು ದಿನ ಅವಳ ಮೈಲ್ ನೋಡಿ ಅವನ ಎದೆ ಡವಗುಟ್ಟಿತು ಕಾತುರದಿಂದ.
ಮೈಲ್ ಪಕ್ಕದಲ್ಲೇ ಅವಳ ಫೋಟೊ ಮೊದಲಿಗೆ ನೋಡಿದ. ಬಿಳಿ ಕೂದಲಿನಿಂದ ಆವೃತ ಅವಳ ಮುಖ ಇನ್ನೂ ಆಕರ್ಷಕ ವಾಗಿತ್ತು, ಸ್ನಿಗ್ದ ಸುಂದರವಾಗಿತ್ತು. ಮಿಂಚಂಚೆಯಲ್ಲಿ ಅವಳು ಕೆಲ ದಿನಗಳ ಮಟ್ಟಿಗೆ ಕೆಲಸಕ್ಕೆ ಬ್ರೇಕ್ ತೆಗುದ್ಕೊಂಡು ಮಗನ ಜತೆ ಯೂರೋಪ್ ಟೂರ್ ಗೆ ಹೋಗಿದ್ದು ಹಾಗು ಅಲ್ಲಿನ ಚಿತ್ರಗಳನ್ನು ಕಳುಹಿಸಿದ್ದಳು. 'ಆಶ್ಚರ್ಯದಿಂದ ಮೂರು ನಾಲ್ಕು ಸಲ ನಿನ್ನ ಮೈಲ್ ಓದ ಬೇಕಾಯ್ತು. ಏನಪ್ಪ ದಿಢೀರ್ ನೆನಪು ಬಂತು ಅಂತ' ಆ ಹುಡುಗನ ಬಗ್ಗೆ ಓದಿ ಆಶ್ಚರ್ಯ ಆಯಿತು.ಡಾಕ್ಟರ್ ನನಗೆ ಅವಳಿ ಜವಳಿ ಮಕ್ಕಳಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ ಒಂದು ಮಗು ಸತ್ತು ಹುಟ್ಟಿತ್ತು ಅಂತ ದಾಯಿ ಹೇಳಿದಾಗ ಅವಳನ್ನು ನಂಬಿದೆ. ಸಾಧ್ಯ ಆದರೆ ನನಗೆ ಅವನ ಫೋಟೊ ಕಳುಹಿಸಿ ಮತ್ತು ಆಟಾಂಚ್ ಮೆಂಟ್ ನಲ್ಲಿ ನಿನ್ನ ಮಗನ ಫೋಟೊ ಕೂಡ ನೋಡು. ಹೇಗಿದ್ದಿಯಾ? ನಾನು ನನ್ನ ಕೆಲಸದಲ್ಲಿ ತುಂಬ ಇನ್ವಾಲ್ವ್ ಆಗಿದ್ದೀನಿ. ನಾನೀಗ ಸೀನಿಯರ್ ರಿಸರ್ಚ್ ಸಯಂಟಿಸ್ಟ್. ವಾಸ ಮಾಡಲು ಮನೆ ಒಳ್ಳೆಯ ಸಂಬಳ ಇದೆ". ಅಂತೆಲ್ಲ ಹಾಕಿದ್ದಳು ಮೈಲ್ ನಲ್ಲಿ
ಮಗನ ಫೋಟೊ ನೋಡಿ ಇವನಿಗೆ ಶಾಕ್. ಥೇಟ್ ಆ ಹುಡುಗನ ತರಹ ಮುಖಚರ್ಯೆ. ಏನಿದು ಆಶ್ಚರ್ಯ ಅಂತ. ಕೂಡಲೆ ಅವಳಿಗೊಂಡು ಮೈಲ್ ಹಾಕಿ ಅವನು ಆ ರಾತ್ರಿಯೇ ಊರಿಗೆ ಹೊರಟ. ಆ ಹುಡುಗ ಹುಟ್ಟಿದ ಆಸ್ಪತ್ರೆಗೆ ಹೋಗಿ, ಸ್ವಲ್ಪ ಲಂಚ ಕೊಟ್ಟು ಹಳೆಯ ಫೈಲ್ ಗಳನ್ನೆಲ್ಲ ಎಡತಾಕಿದ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ದಾಯಿಯ ಹೆಸರು ಸಿಕ್ಕಿತು. ಆ ದಾಯಿಯ ವಿಳಾಸದ ಜಾಡನ್ನು ಹುಡುಕುತ್ತ ಹೊರಟ ಸುಮತೀಂದ್ರ. ಅವರಿವರನ್ನು ಕೇಳಿಕೊಂಡು ಕೊನೆಗೂ ಒಂದು ತಿಂಗಳ ನಂತರ ಅವಳನ್ನು ಪತ್ತೆ ಹಚ್ಚಿದ. ಈಗ ಅವಳು ಹಣ್ಣು ಹಣ್ಣು ಮುದುಕಿ. ಆದರು ಸರಿಯಾಗಿ ನೆನಪುಮಾಡಿಕೊಳ್ಳಲು ಹೇಳಿದಾಗ ಅವಳಿಂದ ಪಡೆದ ಮಾಹಿತಿ ಇಷ್ಟು.
ಪ್ರಿಯಂವದಾ ಅವಳ ಊರಿನವಳೇ ಆಗಿದ್ದು, ಗಂಡನನ್ನು ಬಿಟ್ಟು ಬಂದಿದ್ದು ಅವಳಿಗೆ ತಿಳಿದಿತ್ತು. ಅದೇ ಊರಿನ ಇನ್ನೊಂದು ಕುಟುಂಬದ ಹೆಂಗಸಿಗೆ ತುರ್ತಾಗಿ ಅವಳ ಜೀವ ಉಳಿಸಲು ಒಂದು ಮಗು ಬೇಕೆ ಬೇಕಿತ್ತು. ದಾಯಿ ಪ್ರಿಯಂವದಳಿಗೆ ಗೊತ್ತಾಗದಂತೆ ಅವಳ ಮಗುವನ್ನು ಕದ್ದು ಆ ಕುಟುಂಬಕ್ಕೆ ಕೊಡುವ ಹುನ್ನಾರದಲ್ಲಿದ್ದಳು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಪ್ರಿಯಂವದಳಿಗೆ ಅವಳಿಜವಳಿ ಗಂಡು ಮಕ್ಕಳು ಹುಟ್ಟಿದ್ದು ಅವಳಿಗೆ ಅನುಕೂಲವಾಯಿತು.ಡಾಕ್ಟರ್ ಕೂಡ ಇದರಲ್ಲಿ ಶಾಮೀಲಾಗಿದ್ದಿರ ಬಹುದು ಎಂದು ಅವನಿಗೆ ಸಂಶಯ ಬಂತು. ಅವಳು ಅದರಲ್ಲಿ ಒಂದು ಮಗುವನ್ನೆ ಎತ್ತಿಕೊಂಡು ಆ ಕುಟುಂಬಕ್ಕೆ ಕೊಟ್ಟಿದ್ದಳು. ಆ ಹೆಂಗಸಿಗೆ ಮೂರು ಮಕ್ಕಳಾಗಿ ಹೊಟ್ಟೆಯಲ್ಲಿ ಸತ್ತು ಹುಟ್ಟುತ್ತಿದ್ದರಿಂದ ಆಕೆ ಮಾನಸಿಕ ಕ್ಷೋಭೆಗೆ ತುತ್ತಾಗಿದ್ದಳು. ಈ ಮಗುವಿನಿಂದ ಆಕೆ ಸಮಾಧಾನ ಹೊಂದಿದ್ದಾಳೆ. ಆದರೆ ಈಗ ತೀರ ಕಾಯಿಲೆಯಿಂದ ಅವಳು ಇನ್ನು ಕೆಲವೇ ದಿನಗಳ ಅತಿಥಿ.
ಇದೆಲ್ಲವನ್ನೂ ಸುಮತೀಂದ್ರ ಪ್ರಿಯಂವದಾಳಿಗೆ ಮೈಲ್ ಮೂಲಕ ರವಾನಿಸಿದ.'ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ. ನಿಮ್ಮಿಬ್ಬರನ್ನು ನೋಡಬೇಕೆನ್ನಿಸಿದೆ. ಇತ್ತೀಚಿಗೆ ನಿನ್ನ ನೆನಪು ತುಂಬ ಕಾಡುತ್ತಿದೆ'
ಮರು ಮೈಲ್ ನಲ್ಲಿ ಪ್ರಿಯಂವದಾಳ ಉತ್ತರ ಹೀಗಿತ್ತು. ಇನ್ನು ಎರಡು ತಿಂಗಳಿಗೆ ಮಗನ ರಜೆ ಶುರು ಆಗುತ್ತದೆ. ಆಗ ಅವನನ್ನು ನಿನ್ನ ಬಳಿ ಕಳುಹಿಸುತ್ತೇನೆ. ನೋಡು. ಬೇಕಾದ್ರೆ ನಿನ್ನ ಬಳಿ ಇಟ್ಟು ಕೋ. ನಾನು ಇನ್ನು ಆರು ತಿಂಗಳ ನಂತರ ಸ್ವಯಂ ನಿವೃತ್ತಿ ಪಡೆದು ಸ್ಯಾನ್ ಫ್ರಾನ್ಸಿಕೋ ದ ಆಶ್ರಮ ಸೇರುತ್ತ ಇದ್ದೀನಿ. ನಾವು ಒಂದು ಒಪ್ಪಂದದ ಮೇಲೆ ಮದುವೆಯಾಗಿದ್ದು. ಅದರ ಪ್ರಕಾರ ನೀನು ವರ್ತಿಸಲಿಲ್ಲ. ಮಗುವನ್ನು ನಾನು ಆಗಲೇ ತೆಗೆದು ಹಾಕಬಹುದಿತ್ತು ಆದರೆ ಹುಟ್ಟದೆ ಇರುವ ಮಗುವಿನ ಯಾವುದೇ ತಪ್ಪು ಇರಲಿಲ್ಲ ಅನ್ನುವ ಪಾಪಪ್ರಜ್ಞೆ ಕಾಡಿತ್ತು. ಮಗು ಹುಟ್ಟಿದ ಬಳಿಕ ನಾನು ಬದಲಾಗಬಹುದೆಂದು ಕೊಂಡಿದ್ದೆ. ಆದರ ನನಗೆ ಅವನಿಗೇ ಯಾವ ಇಮೋಷನಲ್ ಅಟ್ಯಾಚ್ ಮೆಂಟ್ ಇಲ್ಲ. ಹುಟ್ಟಿದಾರಭ್ಯ ಅವನು ನ್ಯಾನಿ ಬಳಿ ಬೆಳೆದ. ನೀನು ಬೇರೆ ಮದುವೆ ಮಾಡಿಕೊಳ್ಳುವಲ್ಲಿ ನನ್ನದೇನೂ ಅಭ್ಯಂತರವಿಲ್ಲ. ನಿನಗೆ ಕಾನೂನಿನ ತೊಡಕೂ ಆಗಲ್ಲ ಯಾಕಂದರೆ ನಾವು ಹಲವು ವರ್ಷಗಳು ಸಂಪರ್ಕದಲ್ಲಿರಲಿಲ್ಲ. ಮಗನ ಬಗ್ಗೆ ಬೇಗ ಯಾವುದಾದರೂ ನಿರ್ಧಾರ ತೆಗೆದುಕೊ. ಅವನ ಹೆಸರಿಗೆ ಸ್ವಲ್ಪ ಹಣಕಾಸು ಠೇವಣಿಯಾಗಿಟ್ಟಿದ್ದೇನೆ. ಮಗನನ್ನು ನಿನ್ನ ಬಳಿ ಇರಿಸಿಕೊಳ್ಳಲು ಇಷ್ಟ ಪಡದಿದ್ದರೆ ಅವನಿಗೆ ಬೇರೆ ವ್ಯವಸ್ಥೆ ಮಾಡಬೇಕು.
...................................................................... 
ಸುಮತೀಂದ್ರ ಈಗ ಅವನ ದೂರದ ಸಂಬಂಧದಲ್ಲಿ ವಯಸ್ಸಾದ ದೊಡ್ಡಮ್ಮನನ್ನು ಕರೆದುತಂದು, ಇಬ್ಬರು ಮಗಂದಿರ ಜತೆ ವಾಸವಾಗಿದ್ದಾನೆ.
(ಕಥೆಯೆಂದು ಗೀಚಿದ್ದು ಟೈಟಲ್ ಏನೂ ತೋಚಲಿಲ್ಲ....ಅದಕ್ಕೆ ಸುಮ್ನೆ ಕಥೆ ಅಂತ ಹಾಕಿದ್ದೀನಿ. ಚೆನ್ನಾಗಿದೆಯಾ ಇಲ್ಲವಾ?)

-- 
:-)
malathi S

October 15, 2013

ಪೆಬ್ಬಲ್ ಗಾರ್ಡನ್ ಬಗ್ಗೆ

ಎಲ್ಲರೂ ದಸರಾ ಹಬ್ಬ ಎಂಜಾಯ್ ಮಾಡಿದ್ರಾ?
ಕೆಲ ತಿಂಗಳ ಹಿಂದೆ ನಾನು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ ದೀಪಿಕಾ-ಬರ್ನಾಡ್ ರ ಪೆಬ್ಬಲ್ ಗಾರ್ಡನ್ ಬಗ್ಗೆ ಆನಂದ ತೀರ್ಥ ಪ್ಯಾಟಿಯವರ ಲೇಖನ  ಇಂದಿನ ಪ್ರಜಾವಾಣಿ ಕೃಷಿ ಪುರವಣಿಯಲ್ಲಿ. ಕೆಳಗಡೆ ಇದೆ ಕೊಂಡಿ. ಕೆಲದಿನಗಳ ಹಿಂದೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಜಾತ್ರೆ ಹಮ್ಮಿ ಕೊಂಡಿದ್ದರು. ಅದರ ಉದ್ಘಾಟನೆ ದೀಪಿಕಾ ಅವರಿಂದ ಮಾಡಿಸಿದರು. ನಮಗೆ ದೀಪಿಕಾ ಮಾತಿಗೆ ಸಿಕ್ಕಿದಾಗ i sold all my seeds in just one hour ಅಂತ ಹೇಳಿದರು. ಬೀಜ ಜಾತ್ರೆ ಮೂರುದಿನಗಳ ಕಾಲ ನಡೆಯಿತು. ನಾವು ಹೋಗಿದ್ದು ಭಾನುವಾರದಂದು. ಕತ್ತಲೆಯಲ್ಲಿ ಮುಳುಗಿದ, ಗಾಳಿ ಬೆಳಕು ಸರಿಯಿಲ್ಲದ ಜಾತ್ರೆಯ ಸ್ಥಳದಲ್ಲಿ ಹಲವಾರು ಸಾವಯವ ಕೃಷಿ, ಬೀಜಗಳ ವಿತರಣೆ-ಸಂರಕ್ಷಣೆ, ಗುಡಿ ಕೈಗಾರಿಕೆ, ಗೃಹೋತ್ಪನ್ನಗಳನ್ನು ವೀಕ್ಷಿಸಲು, ಖರೀದಿಸಲು, ಮಾಹಿತಿ ವಿನಿಮಯ ಮಾಡುವ ಆಸಕ್ತರನ್ನು ನೋಡಿ ಖುಶಿಯಾಗಿತ್ತು. ದೀಪಿಕಾ ಅವರಿಂದ ಕೊಂಡುಕೊಂಡ ಬೀಜಗಳನ್ನು ಜನರು ಬಳಸಿ ಅದರ ಬಗ್ಗೆ ಫೀಡ್ ಬ್ಯಾಕ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸ್ತು.
ಮೊದಲಿಗೆ ನನ್ನ ಲೇಖನದ ಲಿಂಕ್:

http://malathisanchiyinda.blogspot.in/2013/04/pebble-garden-pondicherri-trip-4.html

http://www.prajavani.net/article/%E0%B2%B9%E0%B2%BF%E0%B2%A4%E0%B3%8D%E0%B2%A4%E0%B2%B2%E0%B3%8A%E0%B2%B3%E0%B3%81-%E0%B2%A4%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%A4%E0%B2%BE%E0%B2%B0

October 8, 2013

ಟಾಯ್ಲೆಟ್ ಪ್ರವರ

(ನಿನ್ನೆ ರಾಯರು ಗಟ್ಟಿ ಆವಾಜ್ ಹಾಕಿದರು: ನಿನ್ನಿಂದ ಸಿಸ್ಟಮ್ ಸ್ಲೋ ಆಗಿದೆ. ನಿನಗೆ ಬೇಡದಿದ್ದ ಫೈಲ್, ಫೋಟೊ, ಸಿನಿಮಾಗಳನೆಲ್ಲ ತೆಗೆದು ಹಾಕಿ, defrag ಮಾಡು ಅಂತ. ಸರಿ ಒಂದೊಂದಾಗಿ ನನ್ನ ಫೋಲ್ಡರ್ ಕ್ಲಿಯರ್ ಮಾಡಬೇಕಾದ್ರೆ ಈ ಹಳೆ ಬರಹ ಸಿಕ್ಕಿತು. ನಿಮಗೆ ಇಷ್ಟ ಆಗುತ್ತೋ ಇಲ್ಲವೋ ಇಲ್ಲಿ ಹಾಕ್ತಾ ಇದ್ದೀನಿ. ಯಾಕಂದರೆ ಆಗ ಈಗಿನಷ್ಟು ಸಲೀಸಾಗಿ ನನಗೆ ಕನ್ನಡದಲ್ಲಿ ಬರೀಲಿಕ್ಕೆ ಬರುತ್ತಿರಲಿಲ್ಲ.
ವಸುಧೇಂದ್ರರ ಬರಹ ಓದಿ ಅವರಿಗೆ ಎಸ್ ಎಮ್ ಎಸ್ ಮಾಡಿದ್ದು ನೆನಪಿದೆ, ಈ ಬರಹ ಕಳಿಸಿದ್ದು ನೆನಪಿಲ್ಲ. ಹಾಗೂ ಇದು Ansi format ನಲ್ಲಿದ್ದದ್ದು ನಾನೇ ಟ್ರೈ ಮಾಡಿ ಮಾಡಿ Unicode ಗೆ ಬದಲಾಯಿಸಿ ಪೋಸ್ಟಿಸಿದ್ದೇನೆ. of course i am proud of myself for figuring it out :-)ಈ ಕತೆ 'ರಕ್ಷಕ ಅನಾಥ' ಕತಾ ಸಂಕಲನದಲ್ಲಿ ಇದೆ ಅನ್ನಿಸುತ್ತೆ....ಫೈಂಡ್ ಔಟ್ ಮಾಡಿ ಹೇಳ್ತೇನೆ........  )
...................................................................................................................
ವಸುಧೇಂದ್ರರ ಸಣ್ಣ ಕತೆ ಮನೆ -’ಮಾರು’ ಓದ್ತಾ ಇರಬೇಕಾದ್ರೆ ನಮ್ಮಲ್ಲಿ ಶ್ರೀಕಾಂತ್ ಗೂ ಮಾಲವಿಕಾ ಗೂ toilet ಬಳಸಲು ಗಲಾಟೆ ನಡೀತಾ ಇತ್ತು
’ಅಪ್ಪ’ 20 ಕೌಂಟ್ ಮಾಡ್ತೇನೆ, ನೋಡು ಹೊರಗೆ ಬರಬೇಕು ಅಂತ ಬೇಗ ಬೇಗ 1 ರಿಂದ ಎಣಿಸಲು ಶುರು ಮಾಡಿದಳು.
ಅದಕ್ಕೆ ಇವರು ’ಹಾ ಹಾ ಅಷ್ಟು ಬೇಗ ಬೇಗ ಎಣಿಸಲಿಕ್ಕೆ ಇಲ್ಲ ಪ್ರತಿ ಸಂಖ್ಯೆ ಆದಮೇಲೂ ೨ ನಿಮಿಷದ ಗ್ಯಾಪ್ ಇರಬೇಕು’
ಕೂಡಲೇ ಅಮ್ಮ ಅಮ್ಮ ನೋಡಮ್ಮ ಅಪ್ಪನ್ನ್ ಅಂತ ನನ್ನ ಬಳಿ ಕಂಪ್ಲೈಂಟ್
ನಾನಂತು ಸುಮ್ಮನೆ ನಗ್ತಿರ್ತೇನೆ, ಅವರದ್ದು ಕೋಳಿ ಜಗಳ ಕೇಳ್ತಾ.
ಕೂಡಲೇ ವಸುಧೇಂದ್ರ ಅವರಿಗೆ ಎಸ್.ಎಮ್.ಎಸ್ ಮಾಡಿದೆ ’hopefully the tundu mane has equal number of toilets’ ಅಂತ.
(ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿ ಪುಟ: 6 , 20 ಸೆಪ್ಟೆಂಬರ್ 09)
ಅರ್ಜೆಂಟ್ ನಲ್ಲಿ ಈ ಮನೆ ಹುಡುಕಿದಾಗ ಇದರಲ್ಲಿರೋದೆ ಒಂದೇ toilet ಅಂತ ನಾವು ಅಷ್ಟು ಗಮನಿಸಿರಲಿಲ್ಲ. ಹೆಚ್ಚಿನಂಶ ಈಗೀನ ಎರಡು ಬೆಡ್ ರೂಮ್ ಬಾಡಿಗೆ ಮನೆಯಲ್ಲಿ ಒಂದು ಬೆಡ್ ರೂಮ್ ಗೆ ಒಂದು ಎಟ್ಯಾಚ್ಡ್ ಬಾತ್/toilet ಇರುತ್ತೆ. ನಾವಿರುವ ಬಾಡಿಗೆ ಮನೆ ೧೫ ವರ್ಷ ಹಳೆಯದು.
ಮುಂಬಯಿನಲ್ಲಿ ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಇದ್ದಿದ್ದು ಮೂರನೆ ಮಹಡಿಯಲ್ಲಿ. ಲಿಫ್ಟ್ ಇರಲಿಲ್ಲ. ಒಳ ಹೊಕ್ಕ ಕೂಡಲೇ ಒಂದು ದೊಡ್ಡ ಹಾಲ್ ಆಮೇಲೆ ಇನ್ನೂ ಒಳಗೆ ಇನ್ನೊಂದು ರೂಮ್. ಅದಕ್ಕೆ ಬಾಗಿಲು. ಅದು ಅಡಿಗೆ ಮನೆ cum ಬಾತ್ರೂಮ್
ಒಂದು floor  ನಲ್ಲಿ ಒಟ್ಟು ಆರು ಮನೆಗಳಿದ್ದವು. ಎರಡು ಮನೆಗೆ ಒಂದರಂತೆ staircase ಹತ್ತಿರ toilet . ನಾವೆಲ್ಲ ಆಗ ಸರದಿಯಲ್ಲಿ ನಿಲ್ಲ ಬೇಕಾಗುತ್ತಿತ್ತು. ಕೆಟ್ಟ ವಾಸನೆ ಬೇರೆ. ಫೆನಾಯಿಲ್ ಮುಂತಾದವುಗಳ ಬಳಕೆ almost nil . ಈಗೀಗ ಪರಿಸ್ಥಿತಿ improve ಆಗಿದೆ :-)
ತೀರ್ಥಹಳ್ಳಿಯಲ್ಲಿ ನಾವು ಮೂವತ್ತು ಮಂದಿಗೆ ಇದ್ದದ್ದು ಮೂರು toilet, ಅಲ್ಲೂ ಸರದಿ ಸಾಲು, ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಅರ್ಜೆಂಟ್. ಇನ್ನೊಂದು ಗಮ್ಮತ್ತಿನ ವಿಷಯ ಅಂದ್ರೆ ನಾವು ಹೆಣ್ಣು ಮಕ್ಕಳು toilet ಉಪಯೋಗಿಸುವಾಗ ನಮ್ಮ ಮಾತುಗಳು
ಶ್ರೀಕಾಂತ್ ಗೆ toilet ಗೆ ಹೋಗುವಾಗ ಪತ್ರಿಕೆ ಇರಲೇ ಬೇಕು. ಮದುವೆಯಾದ ಹೊಸದರಲ್ಲಿ ಯುಗಾದಿಗೆ ಮುಂಬೈ ಗೆ ಹೋದಾಗ, ಇವರು ಆಂಗ್ಲ ಪತ್ರಿಕೆ ಯೊಂದನ್ನು ಒಯ್ದು toilet ಗೆ ಹೋದರು. ಸುಮಾರು ಹೊತ್ತಾದರೂ ಹೊರಗೆ ಬರಲೆ ಇಲ್ಲ. ನನ್ನ ತಮ್ಮ ಅಂತೂ ’ಜಿಜಾಜಿ ಗೆ ಅಷ್ಟು ಹೊತ್ತು ಬೇಕಾ, ಏನು ಕಬ್ಬಿಣ ಬೀಳಿಸ್ತಾರಾ?’ ಅಂತ ಕೇಳಿದಾಗ ನನಗಂತೂ ಮುಜುಗರ. ಆಮೇಲೆ ನಿಧಾನಕ್ಕೆ ’ಅವರು ಪೇಪರ್ ತೆಗೆದು ಕೊಂಡು ಹೋಗಿದಾರೆ ಅಂದೆ’, ಅದಕ್ಕೆ ಅವನು ಗಟ್ಟಿಯಾಗಿ ಜೀಜಾಜಿ ನಮ್ಮಲ್ಲಿ ನೀರು ಸಾಕಷ್ಟು ಬರ್ತದೆ, ಪೇಪರ್ ಬಳಸುವ ಅಗತ್ಯವಿಲ್ಲ, ಅಷ್ಟೆ ಅಲ್ಲ ಸಮುದ್ರ ತುಂಬ ಹತ್ತಿರದಲ್ಲೇ ಇದೆ, ಎಂದಾಗ ಅವರಿಗೆಲ್ಲ ನಗು.್, ನನಗೋ ಮುಜುಗರ. :-(
ಇತ್ತೀಚಿಗಂತೂ ವಿಜಯ ಕರ್ನಾಟಕ ಪತ್ರಿಕೆ ಇಲ್ಲದಿದ್ದರೆ ಅವರಿಗೆ toilet ಗೆ ಹೋಗಲು ಕಷ್ಟವಾಗುತ್ತದೆ. ಆಕಸ್ಮಾತ್ ಆ ದಿನ ವಿ.ಕ ಬಂದಿರದಿದ್ದರೆ ಪೇಟೆಗೆ ಹೋಗಿ ಅದನ್ನು ಖರಿದಿ ಮಾಡಿ ಆಮೇಲೆ toilet ಗೆ ಎಂಟ್ರಿ.
ರಜೆ ಗಿಜೆ ಬಂದು ಆ ದಿನ ಪೇಪರ್ ಬಂದಿರದಿದ್ದರೆ ’ಛೆ! ಇವತ್ತು toilet ಸರಿ ಆಗ್ಲೆ ಇಲ್ಲ ಅಂತ’ ಕಾಲು ಸುಟ್ಟ ಬೆಕ್ಕಿನಂತೆ ಆ ಕಡೆ ಈ ಕಡೆ ಹೋಗ್ತಿರುತ್ತಾರೆ.
ಹ್ಮ್ ಈ ಪೋಸ್ಟ್ ಓದಿ ಮೂಗು ಮುರಿಯಬೇಡಿ. ಅಲ್ಲ ಮೂಗು ಏನಾದರೂ ನಿಜಕ್ಕೂ ಮುರಿದರೆ ಅದಕ್ಕೆ ಪ್ಲಾಸ್ಟರ್ ಹೇಗೆ ಹಾಕುತ್ತಾರೆ??ಗೂಗಲಿಸಿ ನೋಡುವಾ??

:-)


.

October 3, 2013

ಕೊಬ್ಬರಿ ಬರ್ಫಿ/ ಕೊಬ್ಬರಿ ಮಿಠಾಯಿ/ಸೊಯ್ಯೆ ಖಡಿ

ನಿನ್ನೆ ಗಾಂಧಿ ಜಯಂತಿಯಂದು ಹಾಗೂ ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ 65000 ದಾಟಿದ್ದಕ್ಕೆ ಈ ಸ್ವೀಟ್ ಬ್ಲಾಗ್ ನಲ್ಲಿ  ಹಾಕುವಾ ಅಂತ ಇದ್ದೆ."ಸ್ವೀಟ್ ಕೆ ಲಿಯೆ ಕೊಯೀ ಭಿ ಬಹಾನಾ ಚಲೇಗಾ"  ಆದರೆ ಬೆಳಿಗ್ಗೆ ಮನೆಯಿಂದ ಹೊರಟಿದ್ದು ಬಂದಾಗ ರಾತ್ರಿ 10.00 ಗಂಟೆ ಆಗಿತ್ತು. ಬೆಳಿಗ್ಗೆ ನಾವು ಸರ್ಜಾಪುರ ರಸ್ತೆಯಲ್ಲಿರುವ ಭೂಮಿ ಸ್ಕೂಲ್ ಗೆ ಹೋಗಿದ್ವಿ. ಅಲ್ಲಿ ಆಯೋಜಿಸಲಾದ ಭೂಮಿ ಉತ್ಸವ ತುಂಬಾ ಚೆನ್ನಾಗಿತ್ತು. 300 ಹೆಚ್ಚು ಜನರು ಅಲ್ಲಿದ್ದರು. ಸಾವಯವ ಮಾದರಿಯಲ್ಲಿ ತಯಾರಿಸಿದ ಬಟ್ಟೆ ಬರೆ, ತಿಂಡಿ-ತಿನಿಸುಗಳು, ಹೂ ತರಕಾರಿಗಳ ಬೀಜ, ಮಳೆನೀರು ಸಂಗ್ರಹಣಾ ಪ್ರಾತ್ಯಕ್ಷಿಕೆ, ಗಾಂಧಿ ಜಯಂತಿ  ಪ್ರಯುಕ್ತ  ಖಾದಿ ಬಟ್ಟೆ/ಸಿದ್ದ ಉಡುಪುಗಳ ವೀಕ್ಷಣೆ ಮತ್ತು ಮಾರಾಟ, ಜಾನಪದ ಗೀತೆ, ಕುಂಬಾರಿಕೆ, ಪುಟ್ಟ ಮಕ್ಕಳಿಗೆ ಬಣ್ಣದ ಆಟ, ಬಿದಿರಿನ ವಾದ್ಯಗಳ orchestra. ಸಮಯ ಹೇಗೆ ಸರಿಯಿತು ಗೊತ್ತಾಗಲಿಲ್ಲ.
ಸಂಜೆ , ದು. ಸರಸ್ವತಿಯಯವರ ಆಹ್ವಾನದ ಮೇರೆಗೆ ಅವರ ನಾಟಕ 'ಮೆಕ್ಕಾ ದಾರಿ' ಯ ವೀಕ್ಷಣೆ. ಅದಕ್ಕಿಂತ ಮೊದಲು ದೇಸಿ ಕೊಡಮಾಡುವ ಕೈಮಗ್ಗ ಪ್ರಶಸ್ತಿ ಪ್ರಧಾನ ಸಮಾರಂಭ ಹೊಮ್ಮಿಕೊಂಡಿದ್ದರು. ಸಮಾರಂಭದ ಬ್ಯಾನರ್ ನನಗಿಷ್ಟ ವಾಗಿ ಅದರ ಒಂದು ಚಿತ್ರ ನಿಮಗಾಗಿ.ಚಾಪೆ ಯಿಂದ ಮಾಡಿದ ಬ್ಯಾನರ್. ದೇಸಿ ಸಂಸ್ಥೆಯ ಪ್ರಸನ್ನ ಅವರು ಭಾವಾನುವಾದ ಮಾಡಿದ ಕತೆ 'ಮೆಕ್ಕಾ ದಾರಿ'

ಗಾಂಧಿ ಜಯಂತಿ special doodles by Malavika and Niharika

ಈಗ ಕೊಬ್ಬರಿ ಮಿಠಾಯಿ ಮಾಡುವ ಬಗ್ಗೆ. ತುಂಬ ಸುಲಭದಲ್ಲಿ ಮಕ್ಕಳೂ ಕೂಡ ಇದನ್ನು ತಯಾರು ಮಾಡಬಹುದು. ಕೊಬ್ಬರಿ ತುರಿ ಅದರ ಸರಿಸಮಾನ ಅಳತೆಯ ಸಕ್ಕರೆ, ಅಂದರೆ ಒಂದು ಕಪ್ ಕಾಯಿ ತುರಿ ಗೆ ಒಂದು ಕಪ್ ಸಕ್ಕರೆಯ ಲೆಕ್ಕ, 8-10 ಗೇರುಬೀಜ. ಇವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ.ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಮೊದಲಿಗೆ ಮಿಶ್ರಣ ಮೆಲ್ಟ್ ಆಗುತ್ತೆ, ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗುತ್ತ ತಳ ಬಿಡುತ್ತ ಹೋಗುತ್ತೆ. ಆಗ ಏಲಕ್ಕಿ ಪುಡಿ ಬೆರೆಸಿ ತುಪ್ಪ ಹಚ್ಚಿದ ತಾಟಿಗೆ ಕೂಡಲೆ ಹಾಕಿ ಸುಟ್ಟುಗದಿಂದ ಸಮತಟ್ಟಾಗಿ ಹರಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿಡಿ. 


ಗೀತಾ ಶೆಣೈ ಸಂಪಾದಕತ್ವದಲ್ಲಿ ಹೊರ ತಂದ 'ಆಧುನಿಕ ಕೊಂಕಣಿ ಕತೆಗಳು' ಕೆಲವು ತುಂಬಾ ಚೆನ್ನಾಗಿವೆ.


ನನಗಿಷ್ಟವಾದ ಕೆಲ food related ಎಸ್ ಎಮ್ ಎಸ್ ಗಳು:
1  in life so many incidents cud happen dat wud make you weak. Bt, still thr r 3 things that make U stronger
Breakfast, Lunch and Dinner
No sentiments da!!Just facts
(by Ranjith Sathyaraj)

2  Cup ko honton sey lagakar thoda sa pee lena, cheeni kam hai iss coffee mein Zaykaa zaraa badaa dena: (wah 'Saahil' ji kya baat hai!!!)

ಸುಮ್ನೆ ಒಂದು potpourri post
:-)