May 30, 2015

ಸುವರ್ಣ ವಾಹಿನಿ -ಪಾಕ ಶಾಲೆ ಕಾರ್ಯಕ್ರಮ

ಸುವರ್ಣ ವಾಹಿನಿಯ ಪಾಕಶಾಲೆ ಕಾರ್ಯಕ್ರಮದಲ್ಲಿ ನನ್ನ ಮಗಳು ಭಾಗವಹಿಸಿದ್ದಳು. ನಮ್ಮ ಮನೆಯಲ್ಲಿ ಟಿ ವಿ ಇಲ್ಲವೆಂದು ಹೇಳಿದಾಗ , organiser ಶ್ರೀದೇವಿ ಕುಡ್ಲ ನನಗೆ ಈ ಲಿಂಕ್ ಕಳುಹಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದು ಶ್ರೀದೇವಿ ಕಳಸದ - ನನ್ನ ಫೇಸ್ ಬುಕ್ ಸ್ನೆಹಿತೆ. ಅವರಿಗೊಂದು ಥ್ಯಾಂಕ್ಸ್
ಶೆಫ್ ಕೆಲವು ಉಪಯುಕ್ತ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಹೇಳಿಕೊಟ್ಟ ಅಡುಗೆಗಳನ್ನು ನಾನು ಮನೆಯಲ್ಲಿ ಟ್ರೈ ಮಾಡಿದೆ. ಚೆನ್ನಾಗಿ ಬಂತು, especially ಶಾಹೀ ಪಲಾವ್....ಇಷ್ಟು ಸುಲಭದಲ್ಲಿ ಅದನ್ನು ಮಾಡಬಹುದು ಅಂತ ನನಗೆ ಗೊತ್ತಿರಲಿಲ್ಲ. ಕಲಿಕೆ ಅನ್ನುವುದು ಒಂದು ನಿರಂತರ ಪ್ರಕ್ರಿಯೆ.....ಅಲ್ಲವಾ??
ನೀವು ಈ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು. ಯು ಎಸ್ ನಲ್ಲಿರುವ ನನ್ನ ತಂಗಿಗೆ ಈ ಲಿಂಕ್ ಕಳಿಸ್ತಿದ್ದೆ. ಹಾಗೆಯೇ ನಿಮ್ಮ ಜತೆ ಕೂಡ ಶೇರ್ ಮಾಡುವಾ ಅಂತ..............
ದಿನ-1

ದಿನ -2

ದಿನ- 3

May 23, 2015

ನಮ್ಮ extended ಸಂಸಾರ c/o the ಪಾರಿವಾಳಾs

ಮುಂಬೈನಲ್ಲಿ ಪಾರಿವಾಳ ಕಾಗೆಗಳಿಗೆ ಏನೂ ಬರವಿರಲಿಲ್ಲ. in fact ಚಿಕ್ಕವಳಿದ್ದಾಗ ಬಿಸ್ಕಟ್ ಹಿಡಿದುಕೊಂಡು ಮನೆಯೆದುರಿಗೆ ನಿಂತಾಗ ಕಾಗೆಗಳಿಂದ ತಲೆಗೆ ಕುಟ್ಟಿಸಿಕೊಂಡಿದ್ದು ಎಷ್ಟೋ ಬಾರಿ. ಇನ್ನೂ ಸೂರ್ಯ ಹುಟ್ಟಲಿಕಿಲ್ಲ ಪಾರಿವಾಳಗಳ ಗುಟುರ್ ಗುಟುರ್ ಶುರು. ಸ್ವಲ್ಪ ಬುದ್ದಿ ಬಂದ ಮೇಲೆ ನಾನು ನೋಡಿದ್ದು ಅಮ್ಮಂದು ಪಾರಿವಾಳಗಳದ್ದು ಮುಗಿಯದ ಕದನ. ಅಪ್ಪ ಬ್ಯಾಂಕ್ ನಲ್ಲಿದ್ದುದರಿಂದ ಎರಡು ವರ್ಷಗಳಿಗೊಮ್ಮೆ ಎಲ್ ಎಫ್ ಸಿ ಸಿಗುತ್ತಿತ್ತು. ನಾವು ಒಂದು ಹತ್ತು ಹದಿನೈದು ದಿನ ಮನೆಯಲ್ಲಿಲ್ಲದಿದ್ದಾಗ ಅಮ್ಮ ಪೂಜಿಸುವ ತುಲಸೀ ಗಿಡ ಒಣಗಿ ಹೋಗಿರುತ್ತಿತ್ತು. ಇನ್ನು ಅಕ್ಕ ಪಕ್ಕದವರಿಂದ ಸಣ್ಣದೊಂದು ತುಳಸಿ ಗಿಡ ತಂದು ಪಾಟ್ ನಲ್ಲಿ ಹಾಕಿದ ಕೂಡಲೇ ಅದು ಎಲ್ಲಿರುತ್ತಿತ್ತೋ ಸಿಟ್ಟು ಪಾರಿವಳಗಳು ಅದನ್ನು ಧ್ವಂಸ ಮಾಡದೇ ಬಿಡುತ್ತಿರಲಿಲ್ಲ. ತುಲಸಿ ಪಾಟ್ ಅಂದ ಕೂಡಲೇ ನಮ್ಮ ಆ ಫ್ಲ್ಯಾಟ್ ಗೆ ಬಾಲ್ಕನಿ ಇದೆ ಅಂತ ಭಾವಿಸಬೇಡಿ ಮತ್ತೆ. ಅದು ಯಾವುದೋ ಓಬೀರಾಯನ ಕಾಲದಲ್ಲಿ ಕಟ್ಟಿದ ಅಪಾರ್ಟ್ಮೆಂಟ್. ಅದರ ಒಂದು ಕಡೆ ದೊಡ್ಡ ಕ್ಯ್ರಾಕ್. ರಸ್ತೆಯಲ್ಲಿ ಗಾಡಿ ಓಡಾಡುವಾಗ ಯಾವಾಗಲೂ ಬಿಲ್ಡಿಂಗ್ ಅದುರುವುದರಿಂದ ಒಂದು ತರಹ constant earthquake. ಜಾಗ ಮಾತ್ರ ಪ್ರಶಸ್ತ ವಾಗಿತ್ತು. ಸ್ಕೂಲು, ಮಾರುಕಟ್ಟೆ ಎಲ್ಲ ಹತ್ತಿರ. ಎಲ್ಲಕ್ಕಿಂತ ಮುಖ್ಯ ಅತೀ ಹತ್ತಿರದಲ್ಲಿ ಸ್ಟೂಲ್ ಮೇಲೆ ನಿಂತರೆ ಕಾಣುವ ಸಮುದ್ರ. ಆಹಾ!! ಮಿಸ್ ಯು ಮುಂಬೈ....
ಹಾಂ ಏನನ್ನುತ್ತಿದೆ. ಬಾಲ್ಕನಿ ಇರಲಿಲ್ಲ. ಕಿಟಕಿಯ ಸರಳುಗಳಿಗೆ ತಂತಿ ಬಿಗಿದು ಅಮ್ಮನ ಪುಟ್ಟ ತುಲಸಿಯ ಪಾಟ್. ಆಮೇಲೆ ಪಾರಿವಾಳಗಳಿಂದ ರಕ್ಷಣೆಯಂತ ಕಿಟಕಿಯ ಸರಳುಗಳಿಗೆ ಕಪ್ಪು ಬಟ್ಟೆ ಸ್ಟ್ರಿಪ್. ಅದು ಗಾಳಿಗೆ ಹಾರಾಡುವಾಗ ಪಾರಿವಾಳಗಳು ಹಾರಿ ಹೋಗುತ್ತಿದ್ದವು. ಆದರೆ ಅದು ಅಭ್ಯಾಸವಾಗಿ ಪಾರವಾಳಗಳು ಅದಕ್ಕೆ ಕ್ಯಾರೆ ಅನ್ನುತ್ತಿರಲಿಲ್ಲ. ಆಮೇಲೆ ಪ್ಲಾಸ್ಟಿಕ್ ಬಟ್ಟೆ, ಐಸ್ ಕ್ರೀಮ್ ಚಮಚ ಹೀಗೆ ಅಮ್ಮ ಏನೆಲ್ಲ ನೇತಾಡಿಸುವುದು, ಪಾರಿವಾಳಗಳು ಸ್ವಲ್ಪ ದಿನ ಸುಮ್ಮನಿರುವುದು, ಪುನ: ಅವು ಧಾಂದಲೇ ಎಬ್ಬಿಸುವುದು ಹೀಗೆ ನಡೆದು, ಕೊನೆಗೂ ಅಮ್ಮ ತುಲಸಿ ಗಿಡ ದೊಡ್ಡದಾಗಿಸುವುದರಲ್ಲಿ ಸಫಲರಾಗುತ್ತಿದ್ದರು. ಪುನ: ತುಲಸಿ ಗಿಡ ಸ್ವಲ್ಪ ಬಲಿತುಕೊಂದರೆ, ಗೂಡಿಗೆ ಅಂತ ಪುನ್: ಕೊಕ್ಕಿನಿಂದ ಕುಕ್ಕುವುದು ಪ್ರಾರಂಭ. ನಾವು ಇನ್ನೊಂದು ಮನೆಗೆ ಶಿಫ್ಟ್ ಆಗುವ ತನಕ ಇದು ನಡೆದೇ ಇತ್ತು. ಆದರೆ ಆ ಫ್ಲ್ಯಾಟ್ ನಲ್ಲಿ ಇನ್ನೊಂದು ತೊಂದರೆ ಬಾತ್ ರೂಂ ಟಾಯ್ಲೆಟ್ ಕಿಟಕಿಯ ಗಾಜಲ್ಲಿ ಮೊಟ್ಟೆ ಇಟ್ಟು ಅದು ಜಾರಿ . ಕೆಳಗೆ ಬಿದ್ದು ಒಡೆದು ಅದರ ವಾಸನೆ , ಯಪ್ಪ ಯಾರಿಗೂ ಬೇಡ.....

ಇಲ್ಲಿ ಬೆಂಗಳೂರಿನ ನಮ್ಮ ಇತರೇ ಮನೆಗಳಲ್ಲಿ (ಬಾಡಿಗೆ) ಪಾರಿವಾಳಗಳ ಕಾಟ ಇರಲಿಲ್ಲ. ನಮ್ಮ ಜಯನಗರ 4th ಬ್ಲಾಕ್ ಆಫಿಸ್ ನಲ್ಲಿ ಕೆಲ ಪಾರಿವಾಳಗಳು ಕಿಟಕಿಯಿಂದ ಒಳ ಬಂದು..ಒಂದು ಕಿಟಕಿಗೆ ಗಾಜು ಇರಲಿಲ್ಲ, ನಮ್ಮ ಆಫಿಸ್ ಫೈಲ್ ಗಳೆಲ್ಲ ಗಲೀಜು ಮಾಡುತ್ತಿದ್ದವು. ಕ್ರಮೇಣ ಗಾಜು ಹಾಕಿಸಿಕೊಂಡ ಮೇಲೆ ಅವು ಬರುವುದು ನಿಂತು ಹೋಯಿತು. ಈಗ ನಮ್ಮ ಸ್ವಂತ ಪ್ಲ್ಯಾಟ್ ಗೆ ಬಂದ ಮೇಲೆ ನಾನು ಅವುಗಳನ್ನು ಕುತೂಹಲದಿಂದ ಸ್ಟಡಿ ಮಾಡಿದ್ದು.





















ಮೊಟ್ಟೆ ಇಡುವ ಎರಡು ದಿನ ಮುಂಚೆ ಅದು ಸೇಫ್ ಆಗಿರುವ ಜಾಗ ಹುಡುಕುತ್ತಿತ್ತು. ನಮ್ಮ ಬಾಲ್ಕನಿಯಲ್ಲಿ ಎನೂ ಸಾಮಾನು ಇಟ್ಟಿರಲಿಲ್ಲ. ಎರಡು ಕುರ್ಚಿಗಳು ಮಾತ್ರ. ಹಾಗಾಗಿ ಆ ಕುರ್ಚಿಗಳ ಹಿಂಬದಿಯ ಜಾಗ ಸೇಫ್ ಅಂದು ಕೊಂಡು ಒಂದು ಮೊಟ್ಟೆ ಮೊದಲು ಹಾಕಿತ್ತು. ಮೊಟ್ಟೆ ಹಾಕಿದ ಮೇಲೆ ಗೂಡು ಕಟ್ಟುವ ತಯಾರಿ ನಡೆಸಿತು. ನೀರು ಹೋಗುವ ಜಾಲರಿ ಮೇಲೆ ಮೊಟ್ಟೆ ಇಟ್ಟಿತ್ತು. ನನಗೆ ದಿನ ಬಿಟು ದಿನ ಬಾಲಕ್ನಿ ತೊಳೀಬೇಕು. ನೀರು ಹೋಗುವ ಜಾಗದಿಂದ ಮೊಟ್ಟೆಗಳಿಗೆ ತೊಂದರೆಯಾಗದಂತೆ, ನಾನು ಹಿಂದಿನ ದಿನ ತಂದ ದ್ರಾಕ್ಷಿಯ ಡಬ್ಬಿಯೊಳಗಿದ್ದ ಪೇಪರ್ ಸ್ಟ್ರಿಪ್ಸ್ ಅನ್ನು ಒಂದು ಚಪ್ಪಟೆ ಆಕಾರದ ಪಾಟ್ ನಲ್ಲಿ ಹಾಕಿ ಅದರಲ್ಲಿ ನಿಧಾನಕ್ಕೆ ಆ ಮೊಟ್ಟೆಯನ್ನೆತ್ತಿಟ್ಟೆ. ನಾನು ಮುಟ್ಟಿದರಿಂದ ಪಾರಿವಾಳ ಆ ಮೊಟ್ಟೆ ತಿರಸ್ಕರಿಸಬಹುದಾ ಅಂತ ಸಂಶಯ ಕಾಡಿತು. ಆದರೆ ನಾನು ಅಡಿಗೆ ಮನೆ ಕೆಲಸ ಮುಗಿಸಿ ಬರುವಷ್ಟರಲ್ಲಿ ನಾನು ಮಾಡಿಟ್ಟ ಗೂಡಿನಿಂದ ನಿಧನಕ್ಕೆ ಮೊಟ್ಟೆ ಪುನ: ಅದರ ಮೊದಲನೇ ಜಾಗದಲ್ಲಿಟ್ಟಿ ಬಿಟ್ಟಿತ್ತು. ನನಗೆ ಸ್ವಲ್ಪ ಬೆಜಾರಾಯ್ತು. ಆ ಮೇಲೆ ನಿಧಾನಕ್ಕೆ ನಾನು ಮಾಡಿದ ಗೂಡಿನ ತರಾ ನೆ ನೆಲದ ಮೇಲೆ ಅದು ಮಾಡಿ ಅದರಲ್ಲಿ ಇನ್ನೊಂದು ಮೊಟ್ಟೆ ಇಟ್ಟಿತು. ಇವೆಲ್ಲ ನಡೆಯುತ್ತಿರುವಾಗ ನನ್ನ ಅಡಿಗೆ ಮನೆ ಬಾಲ್ಕನಿ ಯಲ್ಲಿ ಎರಡು ಮೊಟ್ಟೆ ಇದ್ದವು. ಎರಡು ದಿನ ನೋಡಿದೆ ಈ ಮೊಟ್ಟೆಗಳ ಅಪ್ಪ ಅಮ್ಮ ಬರಲೇ ಇಲ್ಲ. ಈ ಮೊಟ್ಟೆಗಳನ್ನೂ ಹಾಲ್ ಬಾಲ್ಕನಿಯಲ್ಲಿರುವ ಗುಡಿನಲ್ಲಿಟ್ಟೆ. ಸ್ವ್ಲಲ್ಪ ಕಷ್ಟ ಆದರೂ ಆ ಮೊಟ್ಟೆಗಳನ್ನು ಆ ಪಾರಿವಾಳ ಇನ್ಕ್ಯೂಬೇಟ್ ಮಾಡುತ್ತಿದ್ದಳು. ನಾನು ಬಾಲನಿ ತೊಳೆಯುವಾಗ ಪಾರಿವಾಳ ಒಂದು ರೌಂಡು ಹಾರಾಡಿ ಬರುತ್ತಿತ್ತು. ಇದೆಲ್ಲ ಎಂಜಾಯ್ ಮಾಡಿದೆ.
ಆಮೇಲೆ ಹದಿನೆಂಟನೆ ದಿನ ಒಂದು ಮೊಟ್ಟೆಯಿಂದ ಮರಿ ಹೊರ ಬಂತು. ಈಗ ಆ ಅಮ್ಮ ಪರಿವಾಳಕ್ಕೆ ಮೂರು ಮೊಟ್ಟೆ ಒಂದು ಮರಿ ಇವುಗಳನ್ನು ಕಾವು ಕೊಡುವುದು ತೊಂದರೆಯಾಗುತ್ತಾ ಇತ್ತು. ಡೈರೆಕ್ಷನ್ ಬದಲಾಯಿಸಿ ಬದಲಾಯಿಸಿ ಕಾವು ಕೊಡಲಾರಂಭಿಸಿದಳು. ಅವಳಿಗೆ ತೊಂದರೆ ಆಗ ಬಾರದೆಂದು ನಾನು ಜೋಳದ ನುಚ್ಚು ನೀರು ದಿನಾ ಇಡುತ್ತಿದ್ದೆ. ಅವಳ ಜತೆ ಬೇರೆ ಪಾರಿವಾಳಗಳೂ ಬಂದು ಭೋಜನ ಮಾಡುತ್ತಿದ್ದವು.
ನನ್ನ ಪಾರಿವಾಳಗಳ ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಹಾಕಿದಾಗ, ಅಲ್ಲಿರುವ ಪರಿಚಯದವರು, ಇನ್ಬಾಕ್ಸ್ ಗೆ ಬಂದು ’ಮೇಡಂ ಬೇಜಾರು ಮಾಡಕೊಳ್ಳದಿದ್ದರೆ ಒಂದು ಮಾತು ಹೇಳಲಾ ’ ಅಂತ ಕೇಳಿದರು. ನಾನು ಹೇಳಿ ಅಂದೆ
"ದಯವಿಟ್ಟು ಪಾರಿವಾಳಗಳ ಗೂಡಿನ ಫೋಟೊ ಹಾಕಬೇಡಿ’
"ಯಾಕೆ?"
"ಯಾಕಂದರೆ ಗಿಡುಗ ಕೆಂಬೂತ ನೋಡಿದರೆ ಆ ಮೊಟ್ಟೆ, ಮರಿಗಳಿಗೆ ಅಪಾಯ’
"ಆದರೆ ಗಿಡುಗ ಕೆಂಬೂತ ಗಳು ನನ್ನ FB Friend's list ನಲ್ಲಿಲ್ಲ ಕಣ್ರೀ’ ಅಂತ ಜೋಕಾಯಿಸಿದೆ
ಆಮೇಲೆ ಪಾಪ ಅನಿಸಿ
"ಯಾಕೆ ಹಾಗೆ ಹೇಳ್ತೀರಾ’ ಅಂತ ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ ನನ್ನಲ್ಲೂ ಆಲೋಚನೆಗಳನ್ನು ಎಬ್ಬಿಸಿದವು. ಹೌದು ನಾವೆಲ್ಲ ಗುಂಪಾಗಿ ನಿಂತು ಗೂಡು, ಮೊಟ್ಟೆ ನೋಡ್ತಾ ಇದ್ದರೆ ಸೂಕ್ಷ್ಮ ಗ್ರಾಹಿ ಗಿಡುಗ, ಕೆಂಬೂತ ಗಳಿಗೆ ಇಲ್ಲೇನೋ ಕೂತುಹಲಕರವಾದ್ದದ್ದು ಏನೋ ನಡೀತಾ ಇದೆ ಅಂತೆನಿಸಿ, ಬಂದು, ಮರಿ ಗಳನ್ನು ಎತ್ತೂಯುತ್ತದೆ ’ ಅಂತ ಅವರ ಅನುಭವವನ್ನು ಹಂಚಿಕೊಂಡರು. ಇದ್ದರೂ ಇರಬಹುದು ಅಂತ ನಾನು ಫೋಟೊ ಹಾಕುವುದನ್ನಿ ನಿಲ್ಲಿಸಿ, ಅವು ಹಾರಿ ಹೋದ ಮೇಲೆ ನಿಹಾ ತೆಗೆದ ವಿಡಿಯೋ ವನ್ನು ಫೇಸ್ ಬುಕ್ ನಲ್ಲಿ ಹಾಕಿದೆ.
ಉಪ್ಪಿನ ಮೂಟೆ!! :-)


ಹಾರಲು ಕಲಿತು ಬಾಲ್ಕನಿ ರೈಲಿಂಗ್ ಮೇಲೆ ಕೂತು ಅವಲೋಕನ!!
ಇದರ ಮಧ್ಯೆ ಮದುವೆಗೆಂತ ಬಂದ ನನ್ನ ಅಮ್ಮ, ತಮ್ಮಂದಿರು, ಯು ಎಸ್ ನಲ್ಲಿರುವ ತಂಗಿ ಅವರೆಲ್ಲರ ಮಕ್ಕಳು ಒಟ್ಟು ನಾವು ಹದಿನೇಳು ಜನ ನಮ್ಮ ಮನೆಯಲ್ಲಿ ಒಂದು 15 ದಿನ. ಅವರೆಲ್ಲ ಗಳಿಗೆಗೊಂದು ಸಲ ಹೋಗಿ ಮರಿಗಳನ್ನು ನೋಡುವುದು, ಯು ಎಸ್ ನ ತಂಗಿ ಮಕ್ಕಳು ವಿಡಿಯೋ ಸೆರೆ ಹಿಡಿಯುವುದು ಮುಂತಾದೆಲ್ಲ ಮಾಡುತ್ತಿದ್ದರು. ಅಮ್ಮ ಅಂತೂ ಬೈದು ಬಿಟ್ಟರು. ನಿನಗೆ ಬೇರೆ ಕೆಲಸ ಇಲ್ಲವಾ? ಎಲ್ಲ ಬಿಟ್ಟು ಪಾರಿವಾಳಗಲನ್ನು ಸಾಕೋದಾ? ಮೊದಲು ಅವನ್ನು ಬಿಸಾಕು ಅಂತ. ನನ್ನ ಮನಸ್ಸು ಒಪ್ಪಲ್ಲ ಅಮ್ಮ, ಒಂದು ಸಲ ಮರಿ ಎಲ್ಲ ಆಗಿ ಹಾರಾಡಿ ಬಿಡಲಿ, ಆಮೇಲೆ ನಾನು ಇಲ್ಲಿ ಅವಕ್ಕೆ ಗೂಡನ್ನು ಕಟ್ಟಕ್ಕೆ ಬಿಡೊಲ್ಲ ಅಂದಾಗ ಸುಮ್ಮನಾದರು.
ಸ್ವಲ್ಪ ದಿನದಲ್ಲಿ ನನ್ನ ಬೆಸ್ಟ್ ಫ್ರೆಂಡ್ ಒಬ್ಬರು ತೀರಿಕೊಂಡರು. ಅವರ ಪ್ರೆಯರ್ ಮೀಟ್ ಗೆ ಹೋದಾಗ ’ಮಾಲತಿ ಹೇಗಿದೆ ನಿನ್ನ ಪಾರಿವಾಳ ಪರಿವಾರ? ಎಲ್ಲ ಫೇಸ್ ಬುಕ್ ನಲ್ಲಿ ನೋಡಿದೆ ಅಂತ ಇನ್ನೋರ್ವ ಹಳೆ ಮಿತ್ರರು ಕೇಳಿದಾಗ ಆಶ್ಚರ್ಯ. ’Malathi nobody likes pigeons much. It is commendable that you are looking after it' ಅಂದಾಗ ಇನ್ನೂ ಅಚ್ಚರಿ.
 ನನ್ನ ತಮ್ಮನ ಪುಟ್ಟ ಮಗಳು ಇನ್ನೂ ಒಂದು ವರೆ ವರ್ಷ ಆಗಿಲ್ಲ, ಬೆಳಿಗ್ಗೆ ಎದ್ದ ತಕ್ಷಣ ಕೈ ಗಳನ್ನು ಹಿಂದಕ್ಕೆ ಕಟ್ಟಿ ದುಡು ದುಡು ಓಡಿ ಮೊದಲು ಹಕ್ಕಿಗಳನ್ನು ನೋಡಿ ಬಂದು , ಮಾಲ್ತಿ ಅಕ್ಕ ಬೊಮ್ಮಿಟಾ ಕೊಡು ಅಂತ ಕೇಳುತ್ತಿದ್ದಳು. ಅವಳಿಗೆ ಇಡಿ ದಿನಾ ಹಾಡು ಗುನುಗ್ತಾ ಇರಬೇಕು. ಅವಳ ಅಕ್ಕ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ್ದಾಳೆ. ಅವಳ ಹಾಡುಗಳನ್ನೆಲ್ಲ ಚಿಕ್ಕವಳು ಚೆಂದ ಮಾಡಿ ಹಾಡುತ್ತಾಳೆ. ಪರಿವಾಳದ ಮರಿಗಳು ಪುಣ್ಯ ಮಾಡಿದ್ದವು ಅವಳ ಹಾಡು ಕೇಳಲು.
ಮರಿ ಆದ ತಕ್ಷಣ ಅಮ್ಮ ಪರಿವಾಳ ಸ್ವಲ್ಪ strict fierce ಆದಳು. ನನ್ನನ್ನು ಮಾತ್ರ ಬಳಿ ಬಿಡುತ್ತಿದ್ದಳು, ಬೇರೆ ಯಾರಾದರೂ ಹತ್ತಿರ ಬಂದರೆ ಗುಟುರು ಹಾಕುತ್ತಿದ್ದಳು ವಿನ: ಮರಿ ಬಳಿಯಿಂದ ಕದಲುತ್ತಿರಲಿಲ್ಲ. ಒಂದು ಬಾರಿ ನೀರು ಇಡಲು ಹೋದಾಗ, ರೆಕ್ಕೆಯಿಂದ ನನ್ನ ಕೈ ಗೆ ಹೊಡೆದದ್ದು ಚಾಟಿ ಏಟಿನಂತೆ ಪೆಟ್ಟು ಬಿತ್ತು. :-)
ಆ ಮೇಲೆ ಅಪ್ಪ ಅಮ್ಮ ಪರಿವಾಳ ಅದಕ್ಕೆ ತಿಂಡಿ ತಂದು ಹಾಕುತ್ತಿದ್ದರು. ಅದು ಹೇಗೆ? ಪಾರಿವಾಳ ತಿಂದ ತಿಂಡಿ ಜೀರ್ಣ ಮಾಡಿ, ಒಂದು ತರಹ ಪೇಸ್ಟ್ ನಂತಹ consistency ಮಾಡಿ, ತನ್ನ ಬಾಯೊಳಗೆ ಇಟ್ಟು ಕೊಂಡರೆ ಮರಿ ಪಾರಿವಾಳ ಅಮ್ಮ ಅಥವಾ ಅಪ್ಪ ಪಾರಿವಾಳದ ಬಾಯೊಳಗೆ ಕೊಕ್ಕು ಹಾಕಿ ತಿಂಡಿ ತಿನ್ನುತ್ತಿದ್ದವು. ಅದಾದ ಹತ್ತು ದಿನದ ನಂತರ ಇನ್ನೊಂದು ಮರಿ ಹೊರ ಬಂತು. ಈ ಎರಡು ಮರಿ ಸೇರಿ ಉಳಿದ ಎರಡು ಮೊಟ್ಟೆಗಳನ್ನು ಕುಕ್ಕಿ ಕುಕ್ಕಿ ಹಾಕಿದವು, ಅದು ಟೋಳ್ಳಾಯಿತು, ನಾನೇ ತೆಗೆದು ಬಿಸಾಕಿದೆ.
ಮೊದಲು ರೋಮ ತುಂಬಿದ ಮೈ ನಿಂದ ರೋಮ ಉದುರಲು ಶುರು ಆಗಿ,  ಬೇಗ ಬೇಗ ಬೆಳವಣಿಗೆ ಹೊಂದಿದವು. ಕೆಲ ದಿನ ಬಾಲ್ಕನಿಯಲ್ಲೇ ರೆಕ್ಕೆ ಬಡಿದು ಹಾರಲು ಕಲಿತವು. ದೊಡ್ಡ ಮರಿ ಚಿಕ್ಕ ಮರಿಗಳ ಆಟ ನೋಡೋದರಲ್ಲಿ ಸಮಯ ಹೋದದ್ದೆ ಗೊತ್ತಾಗುತ್ತಿರಲಿಲ್ಲ.  ಆ ಮೇಲೆ ನಾನೆ  ಹಾರಿಸಿದೆ. ಚೆನ್ನಾಗಿ ಹಾರಿತು. ಈಗ ರಾತ್ರಿ ಹೊತ್ತು ಮಲಗಲು ನನ್ನ ಬಾಲ್ಕನಿಗೇ ಬರುತ್ತಿವೆ. ಇನ್ನೂ ಕಾಲು ಕೆಂಪಾಗಿಲ್ಲ, ಕುತ್ತಿಗೆ ಬಳಿ ಕಾಮನಬಿಲ್ಲಿನ ಬಣ್ನದ ರೋಮ ಬಂದಿಲ್ಲ, ಕಣ್ಣು ಕೂಡ ಕೆಂಪಾಗಿಲ್ಲ, ಹಾಗಾಗಿ ಐ ಕ್ಯಾನ್ identity my ಪಾರಿವಾಳ ಮರಿ. ಒಂದು ಮರಿಗೆ ಕಣ್ಣಿನ ಬಳಿ ಏನೋ ಬೆಳವಣಿಗೆ ಬಂದಿದೆ, ಹಾಗಾಗಿ ಅದು ಇನ್ನೂ ದೊಡ್ಡದಾದ ಮೇಲೂ ನಾನು ಅದನ್ನು ಗುರುತಿಸ ಬಹುದು.
ಸ್ವಲ್ಪ ದಿನ ತಿನ್ನೋದು, ಹಿಕ್ಕೆ ಹಾಕೋದು ಇದೇ ಕೆಲಸ ಆಗೋಯ್ತು. ಬಾಲ್ಕನಿ ತೊಳೆದು ತೊಳೆದು ನನ್ನ ಸೊಂಟ ಬಿದ್ಧೋಯ್ತು. ಈಗ ನನ್ನ ಬಾಲ್ಕನಿ ನನಗೆ ಸಿಕ್ಕಿದೆ. ಶೀಘ್ರದಲ್ಲೇ ಶ್ರೀಕಾಂತ್ ಬಾಲ್ಕನಿಗೆ ಸ್ಲೈಡಿಂಗ ಗಾಜು ಅಳವಡಿಸುವವರಿದ್ದಾರೆ.
ಅವಕ್ಕೆ ಜೋಳದ ನುಚ್ಚಿಗಿಂತ ನನ್ನ ಸಾವಯವ fox tail millet/ ನವಣೆ ಹೆಚ್ಚು ಇಷ್ಟವಾಯಿತು. ನಾನು ಅದನ್ನು ಅದರ ಫ಼ೀಡಿಂಗ್ ಡಿಶ್ ನಲ್ಲಿ ಹಾಕಿದ ಕೂಡಲೇ ಅದನ್ನು ತಿಂದು ಹಾಕುತಿತ್ತು, where as ಜೋಳದ ನುಚ್ಚನ್ನು ನಿಧಾನಕ್ಕೆ ತಿಂದು ಉಳಿದ ಪಾರಿವಾಳಗಳೊಂದಿಗೆ ಶೇರ್ ಮಾಡುತ್ತಿತ್ತು.
ಒಂದಂತು ಅರ್ಥ ಆಗಲಿಲ್ಲ. ನಮ್ಮ ಬಿಲ್ಡಿಂಗ್ ನ ಸುತ್ತ ಮುತ್ತ ದೊಡ್ಡ ದೊಡ್ಡ ಮರಗಳಿಗೇನೂ ಕೊರತೆಯಿಲ್ಲ. ಆದರೂ ಬಾಲ್ಕನಿ, ಕಿಟಕಿ ಸಂದು ಹುಡುಕಿ ಪಾರಿವಾಳಗಳು ಯಾಕೆ ಗೂಡು ಕಟ್ಟುತ್ತವೆ? ಗೊತ್ತಿದ್ದವರು ಹೇಳಿ ಪ್ಲೀಸ್....
ಇಂತಿ ಪಾರಿವಾಳ ಪುರಾಣಮಂ ಸಮಾಪ್ತಂ.....ನನ್ನ ಬಾಲ್ಕನಿ ಸಿರ್ಫ್ ನನ್ನದು....

May 16, 2015

ಮಾವು-ಅನಾನಸು ಸಾಸಿವೆ

ಈ ಎಪ್ರಿಲ್ ಮೇ ತಿಂಗಳಲ್ಲಿ ನಮ್ಮ ಕೊಂಕಣಿ ಸಮಾರಂಭಗಳಾದ ಮದುವೆ, ಮುಂಜಿ, ಗರ್ಭಿಣಿ ಶಾಸ್ತ್ರ, ಗೃಹಪ್ರವೇಶ ಅಥವಾ ಚೌಲು...ಮಾವು ಅನಾನಸಿನ ಸಾಸಿವೆ ಕಾಮನ್ ಆಗಿ ಮೆನ್ಯು ನಲ್ಲಿರುತ್ತೆ. ಹಿಂದಿನ ತಿಂಗಳಂತೂ ನಾನು ಎಟೆಂಡ್ ಆದ ಸಮಾರಂಭಗಳೆಷ್ಟೋ. ಅದು ನನ್ನ ಅಮ್ಮ ತಮ್ಮ ಇಲ್ಲಿಗೆ ಬಂದಿದ್ದರಿಂದ. ಇಲ್ಲದಿದ್ದರೆ ನಾನು ತಪ್ಪಿಸ್ಕೊಳ್ಳೊ ಪಾರ್ಟಿ. ನನ್ನ ಮನೆಯಾಯ್ತು ನಾನಾಯ್ತು. ಖುಶಿಯಿಂದ ನಾನು ಹೊರಡೋದು ಬ್ರಿಟಿಶ್ ಲೈಬ್ರರಿಗೆ ಮಾತ್ರ. ಉಳಿದ ಹಾಗೆ ನನಗೆ ಎಲ್ಲೂ ಹೋಗಬೇಕನಿಸಲ್ಲ. ಕೆಲವೊಮ್ಮೆ  ಈ ಸಮಾರಂಭಗಳಿಂದ ತಪ್ಪಿಸಿಕೊಳ್ಳಗಾಗುವುದೇ ಇಲ್ಲ. ಹೋದರೆ ಊಟ ಅಂತೂ ಪಟ್ಟಾಗಿ ಎಲೆಯಲ್ಲಿ ಒಂಚೂರು ಬಿಡದೆ ಕ್ಲೀನ್ ಆಗಿ ಊಟಮಾಡಿ ಬರುತ್ತೇನೆ. ನನ್ನ ಮಕ್ಕಳೂ ಹಾಗೆ ಊಟದ ತಟ್ಟೆ ಮೇಲೆ ಯಾವತ್ತೂ ಫುಡ್ ವೇಸ್ಟ್ ಮಾಡಲ್ಲ. ಇಷ್ಟ ಆಗದಿದ್ದರೂ !! ಲವ್ ಯು ಅಕ್ಕ ಎಂಡ್ ನಿಂಪು.
 :-) ಮಾಲವಿಕ ಅಂತು ನನಗಿಂತ ವರ್ಸ್. ಅವಳಿಗಂತೂ ಅವಳ ಕೇಕ್/ಕೂಕಿ ಗಳ ಆರ್ಡರ್ ಇರುತ್ತೆ. ಅವಳೂ ಎಲ್ಲೂ ಬರಲ್ಲ. ಹಾಗಾಗಿ ಈ ಅವಳ ಇಷ್ಟದ ಪದಾರ್ಥ ನಾನು ಮನೆಯಲ್ಲಿ ಮಾಡಿದಾಗ ಮಾತ್ರ ಅವಳಿಗೆ ತಿನ್ನುವ ಭಾಗ್ಯ. ಇವತ್ತು ಬೆಳಿಗ್ಗೆ ಸೆಲ್ ಫೋನ್ ನಲ್ಲಿ ಏನೋ ಮಾಡುತ್ತಿದ್ದಳು. ’ಪೈನ್ ಆಪಲ್ ಇದೆ, ಮಾವಿನ ಹಣ್ಣು ಇದೆ. ಸಾಸಿವೆ ಮಾಡಲಾ ಅಂದೆ..ಧಿಗ್ಗನೆದ್ದು..’ಮಾಡು, ಮಾಡು’ ಅಂದ್ಲು, ಅಲ್ಲದೆ ನಾನು ಮಾಡು ವಾಗ ಹೇಗೆ ಮಾಡುವುದೆಂದೂ ಕಲಿತುಕೊಂಡಿದ್ದಾಳೆ.

ಮಾಡುವ ಬಗೆ:
ಮಾವಿನ ಹಣ್ಣು ಅನಾನಸಿನ ಹೋಳು ಮಾಡಿಟ್ಟು ಕೊಂಡು ಅದಕ್ಕೆ ಉಪ್ಪು ಬೆಲ್ಲ ಹಸಿಮೆಣಸಿನಕಾಯಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

 ಒಂದು ಟೇಬಲ್ ಚಮಚ ಕಾಯಿ ತುರಿ, ನಾಲ್ಕೈದು (ಅಥವಾ ನಿಮಗೆ ಎಷ್ಟು ಖಾರ ಬೇಕೋ ಅಷ್ಟು) ಹುರಿದ ಕೆಂಪು ಮೆಣಸು, ಸಣ್ಣ ತುಂಡು ಹುಣಸೆ ಹುಳಿ, ಅರ್ಧ ಚಮಚ ಸಾಸಿವೆ - ಇವನ್ನು ನುಣ್ಣಗೆ ರುಬ್ಬಿ. ಹೋಳುಗಳಿಗೆ ಬೆರೆಸಿ. ರುಚಿ ನೋಡಿ ಬೇಕಿದ್ದಲ್ಲಿ ಇನ್ನಷ್ಟು ಉಪ್ಪು, ಬೆಲ್ಲ ಸೇರಿಸಿ. ಹುಳಿ, ಖಾರ, ಸಿಹಿ, ಉಪ್ಪು ಇವೆಲ್ಲ ಸಮ ಪ್ರಮಾಣದಲ್ಲಿದ್ದರೇನೆ ಈ ಸಾಸಿವೆಗೆ ರುಚಿ.  ಕೊನೆಯಲ್ಲಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.


ದಕ್ಷಿಣ ಕನ್ನಡದ ಕಡೆ ಈ ಸಾಸಿವೆಗೆ ದ್ರಾಕ್ಶಿ, ಗೇರು ಹಣ್ಣು ಕೂಡ ಬೆರೆಸುತ್ತಾರೆ. ಅದರ ರುಚಿನೇ ಬೇರೆ. :-)


May 13, 2015

ಆಲೂಗಡ್ಡೆ/ಬಟಾಟೆ-ಮಾವಿನಕಾಯಿ ಗೊಜ್ಜು


ಇದು ನನ್ನ ಮಗಳ ಇಷ್ಟದ ಪದಾರ್ಥ. ನನ್ನ ಇಬ್ಬರೂ ಮಕ್ಕಳು ಜಂಕ್ ಫುಡ್ ಎಂಜಾಯ್ ಮಾಡುವಷ್ಟೆ ನಮ್ಮ ಸಾಂಪ್ರದಾಯಿಕ ಅಡುಗೆಗಳನ್ನು ಇಷ್ಟ ಪಡುತ್ತಾರೆ ಆದ್ದರಿಂದ ಮಾಡಲೂ ಹುಮ್ಮಸ್ಸು ಬರುತ್ತದೆ. ಈಗಂತೂ ಮಾವಿನಕಾಯಿಯ ಸೀಸನ್. ನನ್ನ ಅಜೋಬಾ ಯಾವಾಗ್ಲೂ ಹೇಳೋವ್ರು, ಆಯಾ ಸೀಸನ್ ನ ಫುಡ್ ಕನ್ಸ್ಯೂಮ್ ಮಾಡಿದ್ರೆ ಯಾವ ಕಾಯಿಲೆ-ಕಸಾಲೆನೂ ಹತ್ತಿರ ಸುಳಿಯಲ್ಲ ಅಂತ.
ಮಾವಿನ ಕಾಯಿ ಹಾಗೂ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಮ್ಯಾಶ್ ಮಾಡಿ. ಹಸಿ ಮೆಣಸಿನಕಾಯಿ ಜಜ್ಜಿ ಹಾಕಿ
ಉಪ್ಪು, ಹಿಂಗು ನೀರು ಬೆರೆಸಿ. ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ. ಸುಲಭ ಮಾತ್ರವಲ್ಲ ರುಚಿಯಾಗಿರುತ್ತೆ. ಬಿಸಿ ಅನ್ನ ಸೇರಿಸಿ ತಿಂದರೆ ಒಂದು ತುತ್ತು ಜಾಸ್ತಿನೇ ಉಣ್ಣ ಬಹುದು.
:-)