July 30, 2012

ಸಂಚಿಯಿಂದ ತೆಗೆದ ನೆನಪು - 8-ಸುಮ್ಮನೆ ಒಂದು ನೆನಪು

ದಿನ ನಿತ್ಯ ಬೆಳಿಗ್ಗೆ 4 ಗಂಟೆಗೆದ್ದು, ಹಾಲು ತಂದು ದಿನದ ಮೊದಲ ಚಹಾ ಕುಡಿದು, ಬೆಳಗ್ಗಿನ ತಿಂಡಿ, ಮಕ್ಕಳ ಮಧ್ಯಾಹ್ನದ ಊಟ ವಗೈರೆ ಅಂತ 6.30 ತನಕ ನಾನು ಅಡಿಗೆ ಮನೆಯಲ್ಲಿರುತ್ತೇನೆ. ಆಮೇಲೆ ಇನ್ನೊಂದು ಕಪ್ ಚಹಾ ಮಾಡಿ, ಹೊರಗೆ ಹಾಕಿರುವ ನ್ಯೂಸ್ ಪೇಪರ್ (The Hindu, Business Line ಮತ್ತು ಪ್ರಜಾವಾಣಿ) ತಂದು ದೀವಾನ್ ಮೇಲೆ ಪೇಪರ್ ಎಲ್ಲ ಬಿಡಿಸಿ, ನಾನು ಒಂದೆ ಪೇಪರ್ ಬಿಡಿಸಲ್ಲ ಮೂರು ಒಟ್ಟಿಗೆ ಬಿಡಿಸಿ ಅದರಲ್ಲಿ ಯಾವುದಾದರೊಂದು ಪೇಪರ್ ಓದುವುದು. ಶ್ರೀಕಾಂತ ಮಕ್ಕಳು ಏಳುವ ತನಕ. 
ಆ ದಿನ ದೋಸೆ. ದೋಸೆ ಮಾಡಿ ಕ್ಯಾಸರೋಲ್ ನಲಿ ಹಾಕಿಡುವ ಅಂತ ಅಡಿಗೆ ಮನೆಗೆ ಹೋದ ನನ್ನ ಕಣ್ಣು ಅಲ್ಲೇ ಬ್ಲಿಂಕ್ ಆಗ್ತಿದ್ದ ಸೆಲ್ ಫೋನ್ ಕಡೆ ಹೋಯ್ತು. ನೋಡಿದ್ರೆ ಒಂದು ಮಿಸ್ಡ್ ಕಾಲ್. ಜಿ.ಎನ್. ಮೋಹನ್ ಅವರದ್ದು. ಅರೇ ಇದೇನಿದು ಬೆಳಿಗ್ಗೆ ಬೆಳಿಗ್ಗೆ ಫೋನ್ ಅಂತ ಕೂಡಲೆ ಅವರಿಗೆ ಫೋನ್ ಮಾಡಿದೆ. ರಿಂಗ್ ಆಯ್ತು ವಿನ: ಯಾರೂ ಎತ್ತಲಿಲ್ಲ. ಒಂದರ್ಧ ಗಂಟೆ ಬಿಟ್ಟು ಅವರೇ ಪುನ: ಫೋನ್ ಮಾಡಿದ್ರು, 'ವಿ. ಎನ್. ವೆಂಕಟಲಕ್ಷ್ಮಿ ನಿಮ್ಮ ಜತೆ ಮಾತನಾಡಬೇಕಂತೆ ನಿಮ್ಮ ನಂಬರ್ ಕೊಟ್ಟಿದ್ದೀನಿ' ಇಷ್ಟೆ ವಿಷಯ ಅಂತ ಹೇಳಿ, ಶ್ರೀಕಾಂತ ಜತೆ ಒಂದೆರಡು ಮಾತಾಡಿ ಫೋನ್ ಇಟ್ಟರು ..
ಮಿತ್ರ ರಘು, ವಿ.ಎನ್. ವೆಂಕಟಲಕ್ಷ್ಮಿಯವರ ಪರಿಚಯ, -ನಾನು ವಸುಧೇಂದ್ರರ ನಾಟಕ ಯುಗಾದಿ ವೀಕ್ಷಿಸಲು ನ್ಯಾಶನಲ್ ಕಾಲೇಜ್ ಜಯನಗರ, ಶ್ರೀಕಾಂತ ಹಾಗೂ ಮಾಲವಿಕ ರ ಟಿಕೆಟ್ ನನ್ನ ಬಳಿಯಿದ್ದುದರಿಂದ ಹೊರಗೆ ಅವರಿಗೆ ಕಾಯುತ್ತಿದ್ದಾಗ  -ಮಾಡಿದ್ದರು. ನಾನು ಅವರನ್ನು ಬಿ.ಎಸ್. ವೆಂಕಟಲಕ್ಷ್ಮಿ ಅಂತ confuse ಮಾಡಿಕೊಂಡು, ಅಷ್ಟು ಪ್ರಬುದ್ಧ ಪತ್ರಿಕೆ ಇಷ್ಟು ಚಿಕ್ಕವಯಸ್ಸಿನ ಹೆಣ್ಮಗಳು ನಡೆಸುತ್ತಾಳ ಅಂದು ಕೊಂಡು, 'ಚರ್ಚೆಗೊಂದು ಚಾವಡಿ; ನಿಮ್ಮದೇನಾ? ಅಂತ ಕೇಳಿದ್ದೆ. ಅವರು' ಇಲ್ಲ ಅವರು ಬೇರೆ ವೆಂಕಟಲಕ್ಷ್ಮಿ ಅಂತ ನಗುತ್ತ ಹೇಳಿದ್ದರು.....ಆ ಫೋನ್ ಕಾಲ್ ನಿಂದ ಇಷ್ಟೆಲ್ಲ ನೆನಪಾಯಿತು.
ಮಧ್ಯಾಹ್ನಾನಂತರ ವೆಂಕಟಲಕ್ಷ್ಮಿಯವರು ಫೋನ್ ಮಾಡಿದರು. ನಮ್ಮ ದೀಪಾವಳಿ ವಿಶೇಷಾಂಕಕ್ಕೆ(ಅಷ್ಟರತನಕ ನನಗೆ ವಿ.ಕ. ದೀಪಾವಳಿ ವಿಶೇಷಾಂಕ ಹೊರತರುತ್ತಿದೆ ಅಂತ ಸಹ ಗೊತ್ತಿರಲಿಲ್ಲ) ನಿಮ್ಮ ಬ್ಲಾಗ್ ನಿಂದ ರೆಸಿಪಿಗಳನ್ನು ಕಳಿಸಬಹುದಾ' ಅಂತ. ರೆಸಿಪಿಗಿಂತ ನೀವು ಅದಕ್ಕೆ ಹಾಕಿರುವ blurbs ಚೆನ್ನಾಗಿರುತ್ತದೆ' ಅಂದರು. ಆದರೆ ನನ್ನ ಕನ್ನಡ ಸರಿಯಿಲ್ಲವಲ್ಲ ಅಂತ ನಾನು ಅವರಿಗೆ ಹೇಳಿದೆ. ಅಡ್ಡಿಯಿಲ್ಲ ಅಂದ್ರು...ನಾನು ನನ್ನ ಬ್ಲಾಗ್ ನಲ್ಲಿ ಹಾಕಿದ ರೆಸಿಪಿಗಳನ್ನೆಲ್ಲ (ಒಟ್ಟು ಐದು) ಸೇರಿಸಿ ಕೆಲವು ಫೋಟೊಗಳ ಸಮೇತ ಅವರಿಗೆ ಮೈಲ್ ಮಾಡಿದೆ. ಮತ್ತು ಅದರ ಬಗ್ಗೆ ನನಗೆ ಮರೆತು ಹೋಯ್ತು. ಒಂದು ಚಿಕ್ಕ ಟೂರ್ ಎಲ್ಲ ಹೋಗಿ ಬಂದೆವು.
ದೀಪಾವಳಿ ಸಮಯದಲ್ಲಿ ನನಗೆ ಮೊದಲು ಎಸ್ ಎಮ್ ಎಸ್ ಕಳುಹಿಸಿದವರು ಸೃಜನ್(cartoonist)...'ನಿಮ್ಮ ಫೋಟೊ ಬರಹ ವಿಜಯಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ನೋಡಿ ಖುಶಿಯಾಯ್ತು' ಅಂತ. ಅದರ ಬೆನ್ನಿಗೆ ಎರಡ್ಮೂರು ಎಸ್ ಎಮ್ ಎಸ್ ಬಂತು. ನನಗೆ ಅದರ ತಲೆ ಬುಡ ಅರ್ಥ ಆಗಲಿಲ್ಲ. 
ನಾನು ಯಾವುದೇ ವಿಶೇಷಾಂಕವನ್ನು ತರಿಸಲ್ಲ. ಬೆಳಗಾವಿಗೆ ಹೋದಾಗ ನನ್ನ ತಮ್ಮನ ಹೆಂಡತಿ ತರಿಸುವ ಕರ್ಮವೀರ / ಸುಧಾ ವಿಶೇಷಾಂಕಗಳನ್ನು ಓದುವುದು. ಅದರ ಜತೆ ಅವಳು ತರಂಗ ಮತ್ತು ಗೃಹಶೋಭ ಕೂಡ ತರಸುತ್ತಾಳೆ.
ಮಧ್ಯಾಹ್ನ ನನ್ನ ತಮ್ಮನ ಹೆಂಡತಿಯ ಫೋನ್ ಬಂತು ತುಂಬ excite ಆಗಿದ್ದಳು (ಆ ವರ್ಷ ಅವಳು ವಿ.ಕ ದೀ ವೀ ತೆಗೆದುಕೊಂಡಿದ್ದಳು), 'ಮಾಲ್ತ್ಯಕ್ಕಾ ನಿನ್ನ ಅಡುಗೆ, ಫೋಟೊ ಎಲ್ಲ ಹಾಕಿದ್ದಾರೆ ಪುಸ್ತಕದಲ್ಲಿ, ನನ್ನ ಅಕ್ಕ ತಂಗಿಯರೆಲ್ಲ ರಜೆಗೆ ನಮ್ಮಲ್ಲಿ ಬಂದಿದ್ದಾರೆ ಅವರಿಗೆಲ್ಲ ತೋರಿಸಿ ಹೆಮ್ಮೆ ಪಟ್ಟುಕೊಂಡೆ' ಅಂದ್ಲು. ಇ-ಮೈಲ್ ಓಪನ್ ಮಾಡಿ ನೋಡಿದ್ರೆ ಶ್ರೀವತ್ಸ ಜೋಶಿ ನನ್ನ ಬರಹ ದ ಬಗ್ಗೆ ಚೆಂದದ ಎರಡು ಮಾತು ಬರೆದದ್ದಲ್ಲದೇ ಅದರ ಪಿಡಿಎಫ್ ಸಹ ಕಳುಹಿಸಿದ್ದರು. ತುಂಬ ಖುಶಿಯಾಯಿತು ನನಗೆ ಅವರ ಅಭಿಮಾನ ನೋಡಿ.
ಸರಿ ಒಂದುವಾರ ಆದಮೇಲೆ excitement ಎಲ್ಲ ತಣ್ಣಗಾಯಿತು ಹಾಗೆ ಮರೆತು ಕೂಡ ಹೋಯಿತು. ಸುಮಾರು 6 ತಿಂಗಳ ನಂತರ ನನಗೆ VRL Printers ನಿಂದ ಒಂದು ಕೊರಿಯರ್ ಬಂತು. ಅದರಲ್ಲಿ ಒಂದು ಚೆಕ್. ಅದಕ್ಕೆ ಅಪ್ಪ ಅಮ್ಮ ಅರ್ಥಾತ್ ಏನು ಡೀಟೈಲ್ಸ್ ಇರಲಿಲ್ಲ ನನ್ನ ಹೆಸರು ಮತ್ತು 750/- amount.ನ ಚೆಕ್. ಕೂಡಲೆ ನಾನು ವಿ ಎನ್ ವಿ ಗೊಂದು ಮೈಲ್ ಹಾಕಿದೆ ಹೀಗ್ ಹೀಗೆ ಅಂತ..ಅದಕ್ಕೆ ಅವರು ನಿಮ್ಮ ಬರಹಕ್ಕೆ ನಮ್ಮ ಪುಟ್ಟ ಕಾಣಿಕೆ ಅಂದ್ರು...
ನನಗಂತು ನಗು. ಏನೂ ಶ್ರಮ ವಹಿಸದೆ ನನ್ನ ಬ್ಲಾಗ್ ನ ರೆಸಿಪಿಗಳಿಗೆ 750/- ಕೊಡ್ತಾರಾ ಅಂತ? ಸರಿ ನಾಲ್ಕ್ಸೈದು ದಿನ ಚೆಕ್ ಅಲ್ಲೇ ಟಿಫಾಯ್ ಮೇಲೆ ಬಿದ್ದಿತ್ತು. ಇನ್ನು ಬ್ಯಾಂಕ್ ಗೆ ಹಾಕದಿದ್ದರೆ ಶ್ರೀಕಾಂತ ರಿಂದ ನನ್ನ ಸೋಂಬೇರಿತನಕ್ಕೆ ಬೈಗುಳು ಖಂಡಿತ ಅಂತ ಬ್ಯಾಂಕ್ ಕಡೆ ಹೊರಟೆ, ಹಾಗೆ ಬೋರ್ಡ್ ಗೆ ಸಿಕ್ಕಿಸಿದ್ದ ವಿದ್ಯುತ್ ಹಾಗೂ ನೀರಿನ ಬಿಲ್ಲ ಸಹ ಎತ್ತಿಕೊಂಡೆ. ಬಿಲ್ಲ ಪಾವತಿಸಿ, ಚೆಕ್ ಬ್ಯಾಂಕಿಗೆ ಹಾಕಿ, ATM ನಿಂದ ಸ್ವಲ್ಪ ದುಡ್ಡು ಡ್ರಾ ಮಾಡಿ ಮನೆಗೆ ಬಂದೆ. ಮನೆ ಹತ್ತಿರ ಹತ್ತಿರ ತಲುಪುವಾಗ ದಿನಾ ಬರುವ ಕ್ವಾಲಿಟಿ ವಾಲ್ಸ್ ಐಸ್ ಕ್ರೀಮ್ ಗಾಡಿಯವ ನಮ್ಮ ಮನೆಮುಂದೆ ಅವನ ಗಾಡಿ ನಿಲ್ಲಿಸಿದ್ದ. ಸುಮಾರು ದಿನಗಳೇ ಆಗಿ ಹೋಗಿದ್ದವು ಐಸ್ ಕ್ರೀಮ್ ತಿನ್ನದೆ, ಹಾಗೂ ಆ ದಿನ ಮಧ್ಯಾಹ್ನ್ ಊಟಕ್ಕೆ ಯಾರಿರುವುದಿಲ್ಲವೆಂದು, ರಾತ್ರಿಯೇ ಅಡಿಗೆ ಮಾಡಿದ್ರಾಯಿತೆಂದು ಸುಮ್ಮನಾಗಿದ್ದೆ. ಈಗ ಸ್ವಲ್ಪ ಹಸಿವೆಯೂ ಕಾಣಿಸಿಕೊಂಡಿತು.
ನಾನು ಯಾವ ಐಸ್ ಕ್ರೀಮ್ ಬೇಕೆಂದು ಸೆಲೆಕ್ಟ್ ಮಾಡುತ್ತಿದ್ದಾಗ ಪಕ್ಕದ ನಿವೇಶನದಲ್ಲಿ ಮನೆ ಕಟ್ಟುತ್ತಿದ ಗಾರೆಯ ಕೆಲಸಕ್ಕೆ ಬಂದವರು ಸುಮ್ಮನೆ ನಿಂತು ನನ್ನನ್ನು ನೋಡಲು ಶುರು ಮಾಡಿದರು. ಅದರಲ್ಲಿ ಒಬ್ಬಳನ್ನು ಕರೆದೆ. "ನಾನು ಐಸ್ ಕ್ರೀಮ್ ಕೊಡಿಸಿದರೆ ತಿನ್ನುತ್ತೀರಾ ಅಂತ' ಅವಳು ಹೂಂ ಅಂದಳು. ಎಷ್ಟು ಜನ ಇದ್ದೀರಾ ಅಂತ ಕೇಳಲು, ಅವರಲ್ಲಿನ ಒಬ್ಬ  ಹುಡುಗ ಲೆಕ್ಕ ಹಾಕಿ 9 ಜನ ಇದ್ದೀವಿ ಅಂದ. ಐಸ್ ಕ್ರೀಮ್ ನವನ ಕಾರ್ಡ್ ಅವರ ಹತ್ತಿರ ಜರುಗಿಸಿ ನಿಮಗೆ ಯಾವುದು ಬೇಕೋ ಆರಿಸಿಕೊಳ್ಳಿ ಅಂದೆ. ಅವರು ನೀವು ತೆಗೊಂಡಿದ್ದಂತ್ದ್ದೆ ಬೇಕು ಅಂದ್ರು...ಸರೀ ಐಸ್ ಕ್ರೀಮ್ ನವನಿಗೆ ಕೇಳಿದೆ ಅಷ್ಟು ಇದೆಯಾ ಅಂತ...ಇತ್ತು. ಅವರಿಗೆಲ್ಲ ಐಸ್ ಕ್ರೀಮ್ ಕೊಡಿಸಿ ಅದಕ್ಕೆ ಸುತ್ತಿದ  ಕಾಗದವನ್ನು ಅಲ್ಲಿ ಇಲ್ಲಿ ಬಿಸಾಕದೆ ಒಂದು ಪ್ಲಾಸ್ಟಿಕ್ ಕವರ್ ಗೆ ಹಾಕಲು ಹೇಳಿ ಅವರ ಜತೆಗೆ ನಾನು ಐಸ್ ಕ್ರೀಮ್ ತಿಂದು ಮುಗಿಸಿದೆ. ಅವರ ಖುಶಿ ನೋಡಿ ನಾನು ಹಾರಾಡ್ತಾ ಇದ್ದೆ. ಸಂಜೆ ಶ್ರೀಕಾಂತ ಮಕ್ಕಳು ಬಂದ ಮೇಲೆ ಮೂವರಿಗೂ ಹೇಳಿದೆ. ಶ್ರೀಕಾಂತ ಯಾವತ್ತಿನ ಹಾಗೆ ಹಮ್ಮ್ಮ್ಮ್ ಅಂದರು, ನಿಹಾ ತಬ್ಬಿ ಕೊಂಡು ಲವ್ ಯು ಮೋಮಿsssss ಆಂದ್ಲು, ಮಾಲು ಮಾತ್ರ  ನಗುತ್ತ dont boast ಅಂದ್ಲು. ನನ್ನ ತಲೆಗೆ ಹೇಲೋ (Halo ) ಒಂದು ಬರೋದು ಬಾಕಿ.
ಸರಿ ಮರುದಿನ ಬೆಳಿಗ್ಗೆ ಮನೆಯ ಬೆಲ್ ಸದ್ದು ಆಯಿತು. ಬಾಗಿಲು ತೆರೆದ್ರೆ ಬಂದವರು ಯಾರು ಅಂತ ಗೊತ್ತಾಗಲಿಲ್ಲ. ಮ್ಯಾಡಂ ನಾನು ಪಕ್ಕದ ಮನೆಯ ಮಾಲೀಕ. ನೆನ್ನೆ ಐಸ್ ಕ್ರೀಮ್ ಕೊಡಿಸಿದರಂತೆ ನಮ್ಮ ಆಳುಗಳಿಗೆ. ನಾನು ನಿಧಾನಕ್ಕೆ ಹೂಂsss ಆಂದೆ
"ಅಲ್ಲ ಮ್ಯಾಡಂ ನೀವೆಲ್ಲಾ ಹೀಗೆ ಮಾಡಿದ್ರೆ, ಉಳಿದವರು ಹಾಗೆ ಮಾಡಬೇಕೆಂದು ಅವರು expect ಮಾಡಲ್ವಾ' ಅಂದ್ರು
ನಾನು , 'ಹೌದಲ್ವಾ , ನಾನು ಆ ತರಹ ಯೋಚಿಸಲೇ ಇಲ್ಲ, ಎನ್ಮಾಡಲಿ ಈಗ' ಅಂದೆ ಸೆಪ್ಪೆ ಮುಖ ಮಾಡಿ' ಪಾಪ ಅವರು ಮುಂದೆ ಏನೂ ಮಾತಾಡದೆ ಹೋದರು
ಎರಡು ದಿನ ಬಿಟ್ಟು ಅವರೇ ಪುನ: ಬಂದು' ಸೊರಿ ಮ್ಯಾಡಂ ನೀವು ಐಸ್ ಕ್ರೀಮ್ ಕೊಡಿಸಿದ್ದಕ್ಕಲ್ಲ ನನಗೆ ಇರುಸು ಮುರುಸಾಗಿದ್ದು, ನನಗೆ ಆ ತರಹದ ಆಲೋಚನೆ ಯಾವತ್ತೂ ಬರಲೇ ಇಲ್ಲವಲ್ಲ ಅಂತ'
ನನ್ನ neem toothpaste ಸ್ಮೈಲ್ ಪುನ: ಹತ್ತಿಕೊಂಡಿತು, ನಿಹಾ ಇನ್ನಷ್ಟು ಗಟ್ಟಿ ಯಾಗಿ ತಬ್ಬಿಕೊಂಡಳು, ಮಾಲವಿಕ 'ಮೊಮ್ಮೀ you are impossible' ಅಂದ್ಲು, ನಮ್ಮ ರಾಯರು as usual ಹ್ಮ್ಮ್ಮ್ಮ್ಮ್ ಅಂತ ಹಮ್ಮಿಂಗ್ ಬರ್ಡ್ ತರಹ ಸದ್ದು ಮಾಡಿದರು...
ಇದೆಲ್ಲ ಹೇಗೆ ನೆನಪಾಯ್ತು ಅಂದ್ರೆ, ಪಾಸ್ ಪೋರ್ಟ್ ಗೆ ಬೇಕಿದೆಯಂತ ಯಾವುದೂ ಡಾಕ್ಯೂಮೆಂಟ್ ಹುಡುಕ್ತಿರಬೇಕಾದ್ರೆ ನನಗೆ  ಆ VRL Printers ನ ಚೆಕ್ ನ ಕೌಂಟರ್ ಫೋಯಿಲ್ ಸಿಕ್ತು..ಹಾಗೆ...ಇದೂ ಒಂದು ಸಂಚಿಯಿಂದ ತೆಗೆದ ನೆನಪೆ ಒಂದು ವರೆ ವರ್ಷ ಆಯ್ತು ಈ ಘಟನೆಗೆ...
(ಮರುವರ್ಷ ಕುರಿಯರ್ ನಲ್ಲಿ ಒಂದು ಯುಗಾದಿ ವಿಶೇಷಾಂಕ ಕೂಡ ಕಳುಹಿಸಿದರು) :-)
P.S: I HATE COOKING...
ಇಲ್ಲಿ ಒಂದು ಗಮ್ಮತ್ತಿನ ಘಟನೆ ನಿಮ್ಮೊಂದಿಗೆ ಶೇರ್ ಮಾಡ್ತೀನಿ:
ನಾನು ಅಕ್ಕ ಒಂದು ಸಲ ಬಸವೇಶ್ವರನಗರದ ಕಡೆ ಹೊರಟಿದ್ವಿ ನಡೆದುಕೊಂಡು..ಏನೋ ಮಾತಿಗೆ 'akka wish i had  a cook, i so hate cooking' ಅಂದೆ. ಸ್ವಲ್ಪ ದೂರ ನಡೆದಿರಬಹುದು. ಆ ರಸ್ತೆಯಲ್ಲಿ ನಮ್ಮನ್ನು ಬಿಟ್ಟರೆ ಯಾರೂ ಇರಲಿಲ್ಲ. ತಿರುವು ತೆಗೆದುಕೊಂಡ ಮೇಲೆ ನಮ್ಮ ಮುಂದೆ ದೂರ, ಆ ರಸ್ತೆ ತುದೀಗೆ ಒಬ್ಬ ಹೆಂಗಸು ಹೋಗ್ತಾ ಇದ್ದರು. ನಾವು ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕ್ತಾ ಇದ್ವಿ. ಆ ಹೆಂಗಸಿನ್ ಬಳಿ ತಲುಪುವಷ್ಟರಲ್ಲಿ , ಆ ಹೆಂಗಸು sudden ಆಗಿ ತಿರುಗಿ 'ನಿಮಗೆ ಅಡುಗೆಯವಳು ಬೇಕೆ' ಅನ್ನುವುದೆ? ಅಕ್ಕ ಒಂದಿಂಚು ಜಂಪ್ ಹೊಡೆದಳು ಹೌಹಾರಿ. ನಾನೆ ಸುಧಾರಿಸಿಕೊಂಡು 'ಬೇಡಮ್ಮ' ಅಂದೆ...ಹೆಂಗೆ????
(ಅಂದಹಾಗೆ ಆ ದಿನ ನಾವೆಲ್ಲರೂ ತಿಂದಿದ್ದು ಕ್ವಾಲಿಟಿ ವಾಲ್ಸ್ ನ ಚಾಕೊಲೇಟ್ ಬಟರ್  ಸ್ಕಾಚ್ ಕೋನ್...)
:-)

July 26, 2012

ರಾಜ್ಮಾ ರೈಸ್ :-)


usually ಮರುದಿನ ಮಕ್ಕಳಿಗೆ ಲಂಚ್ ಬಾಕ್ಸ್ ಗೆ ಏನು ಮಾಡಬೇಕು ಅಂತ ಹಿಂದಿನ ದಿನ ರಾತ್ರಿನೆ ಆಲೋಚನೆ ಮಾಡಿ ಅದಕ್ಕೆ ತಯಾರು ಮಾಡಿ ಇಡುವುದು ರೂಢಿ.. ಮೊನ್ನೆ ಭಾನುವಾರ ಯಾಕೋ ಸೋಮಾರಿತನ ಬಂತು. ಬೆಳಿಗ್ಗೆ ಫ್ರಿಜ್ ಒಪನ್ ಮಾಡಿದ್ರೆ ಹಿಂದಿನ ದಿನ ಬಿಡಿಸಿಟ್ಟ ಹಸಿ ರಾಜ್ಮಾ ಕಾಳು ಕಾಣಿಸಿತು. ರಾಜ್ಮಾ ರೈಸ್ ಮಾಡಿದ್ರೆ ಹೆಂಗೆ ಅಂತ ಕೂಡಲೆ ಅದಕ್ಕೆ ಶುರು ಹಚ್ಚಿಕೊಂಡು ಬಿಟ್ಟೆ.
ಬಾಸುಮತಿ ಅಕ್ಕಿ ತೊಳೆದು ಅದಕ್ಕೆ ಹಸಿ ಬಟಾಣಿ ಹಾಗೂ ರಾಜ್ಮ ಕಾಳು, ಉಪ್ಪು, ಅರ್ಧ ಟೀ ಸ್ಪುನ್ ತುಪ್ಪ ಮತ್ತು ಅಕ್ಕಿಯ  ಅಳತೆಯ ಒಂದುವರೆ ಅಷ್ಟು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿದೆ. ಕುಕ್ಕರ್ ಮುಚ್ಚಳ ತೆಗೆಯಲು ಬಂದ ಕೂಡಲೇ  ಅದರಿಂದ ಅಕ್ಕಿಯ ಪಾತ್ರೆ ಯನ್ನು ತೆಗೆದು ಡೀಪ್ ಫ್ರೀಜ್ ನಲ್ಲಿ ಹಾಕಿಟ್ಟೆ. ನನ್ನ 26 ವರ್ಷದ ಸಾಥಿ ನನ್ನ ಫ್ರಿಝ್ ನನ್ನ ಜುಲುಮಿಯನ್ನೆಲ್ಲ ಸಹಿಸಿಕೊಂಡು, ನನ್ನ ಅಡಿಗೆ ಮನೆ ಅವತಾರ/ಅವಾಂತರಗಳನ್ನೆಲ್ಲ ನೋಡಿಕೊಂಡು, ನನ್ನ ಜತೆ ಊರು ಊರು ತಿರುಗಿಕೊಂಡು ಇನ್ನೂ ನನ್ನನ್ನು ಸಹಿಸಿಕೊಂಡಿದೆ ಪಾಪ. ಶ್ರೀಕಾಂತ, ಮತ್ತು ನನ್ನ ಅಮ್ಮ, ತಮ್ಮಂದಿರು ನನ್ನ ಮನೆಗೆ ಬಂದಗಲೆಲ್ಲ 'ಹೇ ಹೊಸ ಫ್ರಿಜ್ ಕೊಡಿಸಲಾ ಅಂತ ಕೇಳ್ತಿರುತ್ತಾರೆ. ನನಗೆ ಮಾತ್ರ 'ಫ್ರಿಜ್ ನನ್ನನ್ನು ಬಿಡಬೇಕೆ ಹೊರತು ನಾನು ಫ್ರಿಜ್ ನ್ನು ಬಿಡಲ್ಲ ಅಂತ ಖಂಡಿತವಾಗಿ ಹೇಳಿಟ್ಟಿದ್ದೀನಿ.
ಅರೇ ನಮ್ಮ recipe ಕತೆ ಏನಾಯ್ತು?
ಒಂದು ಹಿಡಿ ಕೊತ್ತಂಬರಿ ಸೊಪ್ಪು, 5 ಬೆಳ್ಳುಳ್ಳಿ ಎಸಳು, ಅರ್ಧ ಇಂಚ್ ಶುಂಠಿ, 5 ಹಸಿಮೆಣಸಿನಕಾಯಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಈರುಳ್ಳಿ ಯನ್ನು ಸಣ್ಣಕ್ಕೆ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಒಂದು cinnamon ಎಲೆ ಹಾಕಿ, ಅರ್ಧ ಸ್ಪೂನ್ ಜೀರಿಗೆ. ಜೀರಿಗೆ ಸಿಡಿದ ಮೇಲೆ ಕತ್ತರಿಸಿದ ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ followed by ರುಬ್ಬಿದ ಮಸಾಲೆ. ಹಸಿ ವಾಸನೆ ಹೋದ ಮೇಲೆ (ಅಥವ ನಿಮ್ಮ ಮನೆಯಲ್ಲೂ ಒಂದು ನಿಹಾರಿಕಾ ಇದ್ದು, ಅವಳು mmmm mommy what's it? its smelling nice ಅನ್ನುವವರಗೆ) ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗರಂ ಮಸಾಲೆ ಪುಡಿ ಬೆರೆಸಿ.ಇದಕ್ಕೆ ಒಂದು ಹದ ಗಾತ್ರದ ಸಣ್ಣಕ್ಕೆ ಕತ್ತರಿಸಿದ ಟೋಮೇಟೋ ವನ್ನು ಹಾಕಿ. ಎರಡು ನಿಮಿಷ ಕೈ ಆಡಿಸಿ. ನಂತರ ತಣ್ಣಗಾದ ಅನ್ನ+ಹಸಿ ಬಟಾಣಿ+ರಾಜಮಾ ಮಿಕ್ಸ್ಚರ್ ಬೆರೆಸಿ. ರುಚಿ ನೋಡಿ ಉಪ್ಪು ಬೆರೆಸಿ ಯಾಕಂದ್ರೆ ಅಕ್ಕಿ ಬೇಯುವಾಗಲೆ ಉಪ್ಪು ಹಾಕಿದೇವಲ್ವಾ? 10 ನಿಮಿಷ ಮುಚ್ಚಳ ಹಾಕಿ ಬೇಯಿಸಿ...flavored ರಾಜ್ಮಾ rice ರೆಡಿ.
ನಿಹಾಳ ಕಾಲೆಜ್ ನಲ್ಲಿ ಮತ್ತು ಅಕ್ಕ ನ ಕಲೀಗ್ಸ್ ರಲ್ಲಿ ಇದು ತುಂಬ hit ಆಗಿದೆ! ಮಾಲವಿಕ ಅವಳು ಕೆಲಸ ಮಾಡುವಲ್ಲಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ಒಂದು ಮೊಸರು packet ಕೊಂಡುಕೊಂಡು ರಾಜ್ಮಾ ರೈಸ್ ಜತೆ ತಿಂದಳಂತೆ, ನಿಹಾ ಹಾಗೇ ತಣ್ಣಗೆ...
ಬಿಸಿ or cold... tastes good!
enjoy
P.S: ರಾಜ್ಮಾ ಇಲ್ಲದಿದ್ದರೆ ಹಸಿ ಲೈಮಾ ಬೀನ್ ಅಥವ ಅವರೆಕಾಳು (ಸೀಸನ್ ನಲ್ಲಿ) ಬಳಸಿ ಇದೇ ರೀತಿ ರೈಸ್ ಮಾಡಬಹುದು. ಅಪರೂಪಕ್ಕೆ ನಾನು ಸೊಯ್ (Soya) nuggets ಕೂಡ ಹಾಕುತ್ತೇನೆ.
photo : Niharika
:-)

July 24, 2012

ನಾನಿ ಹೇಳಿದ ಕತೆ

ಒಂದು ಊರಿತ್ತಂತೆ. ಆ ಊರಿನಲ್ಲಿ ರಾತ್ರಿ ದೇವರ ದೀಪಗಳೆಲ್ಲವೂ ಆರಿ ಊರಿನ ಮಧ್ಯದಲ್ಲಿರುವ ಅಶ್ವತ್ಥ ಕಟ್ಟೆಯ ಮೇಲೆ ಸೇರುತ್ತಿದ್ದವಂತೆ.
ಹೆಂಚಿನ ಮನೆಯ ದೀಪಕ್ಕೆ, ದೊಡ್ಡ ಮನೆಯ ದೀಪ ಕೇಳಿತಂತೆ 'ಏನಾಯ್ತು ನಿಮ್ಮ ಮನೆ ಕತೆ'? ಅಂತ
ಅದಕ್ಕೆ ಹೆಂಚಿನ ಮನೆಯ ದೀಪ, ಸೊಸೆಯನ್ನು ಮನೆಯಿಂದ ಹೊರಹಾಕಿಬಿಟ್ರು'
ಹೊಸದಾಗಿ ಗೃಹಪವೇಶ ಆದ ಮನೆಯ ದೀಪ, ಅದೇನದು ನನಗೂ ಆ ಕತೆ ಹೇಳಿ ಅಂತ ಕೇಳಿಕೊಂಡಿತು
ಹೆಂಚಿನ ಮನೆಯ ದೀಪ:
ನನ್ನ ಮನೆಯಲ್ಲಿ ಇರೋದು ಪುಟ್ಟ ಸಂಸಾರ, ಅಮ್ಮ ಮಗ ಮತ್ತು ಸೊಸೆ. ಅತ್ತೆಗೆ ಒಂದು ಅಭ್ಯಾಸ ಚಕ್ಕುಲಿ, ಕೋಡುಬಳೆ, ಲಾಡು ಎಲ್ಲ ಮಾಡಿದ್ರೆ ಅದನ್ನು ಲೆಕ್ಕ ಮಾಡಿಡೋದು. ಅವರಿಗೆ ಸೊಸೆ ಮೇಲೆ ಗುಮಾನಿ, ಮಾಡಿದ ತಿಂಡಿನೆಲ್ಲ ಅವಳೇ ತಿಂದು ಬಿಡುತ್ತಾಳೇನೋ ಅಂತ. ಹಿಂದಿನ ವಾರ ಅತ್ತೆ ಕೋಡುಬಳೆ ಮಾಡಿ ಲೆಕ್ಕ ಮಾಡಿ ಆರಲಿಕ್ಕೆ ಅಂತ ತಟ್ಟೇಯಲ್ಲಿ ಹಾಕಿ ಇಟ್ಟಿದ್ದಳು. ಅದರ ಘಂ ಎನ್ನುವ ಪರಿಮಳಕ್ಕೆ ತಡಿಯಲಾರದೆ ಸೊಸೆ ಅದರಲ್ಲಿನ ನಾಲ್ಕು ಕೋಡುಬಳೆ ಗುಳುಂ ಮಾಡಿದಳು. ಹೊರಗಿನ ಕೆಲಸಗಳನ್ನೆಲ ಮುಗಿಸಿ ಒಳ ಬಂದ ಅತ್ತೆಯ ಸೂಕ್ಷ್ಮ ಕಣ್ಣುಗಳಿಗೆ ತಟ್ಟೆಯಲ್ಲಿ ಕೋಡುಬಳೆ ಕಡಿಮೆ ಅಂದೆನಿಸಿ ಪುನಃ ಅದನ್ನು ಲೆಕ್ಕ ಮಾಡಿ ಸೊಸೆಯನ್ನು ತರಾಟೆಗೆ ತೆಗೆದುಕೊಂಡಳು. "ಏನಿದು? ನಾಲ್ಕು ಕೋಡುಬಳೆ ಕಡಿಮೆಯಿದೆ'. ಹೆದರಿದ ಸೊಸೆ, ಗೊತ್ತಿಲ್ಲ ಅತ್ತೆ ಒಂದು ಇಲಿ ಇಲ್ಲೇ ಓಡಾಡುತ್ತ ಇತ್ತು ಬಹುಶ: ಅದು ತಿಂದಿರಬೇಕು ಅಂದಳು. ಇರಬಹುದೇನೋ ಅಂತ ಅತ್ತೆ ಸುಮ್ಮನಾದರೂ, ಅಲ್ಲೇ ಇವರ ಸಂಭಾಷಣೆಯನ್ನು ಕೇಳಿತ್ತಿದ್ದ ಇಲಿಗೆ ಎಲ್ಲಿಲ್ಲದ ಸಿಟ್ಟು ಬಂತು. ನನ್ನ ಮೇಲೆ ಸುಳ್ಳು ಅಪಾದನೆ ಹಾಕಿದ್ದ ಸೊಸೆಗೆ ಬುದ್ದಿ ಕಲಿಸುವ ಹುನ್ನಾರ ಹಾಕತೊಡಗಿತು.
ದೀಪ ಮುಂದುವರೆಸಿತು:- ನಮ್ಮ ಮನೆಯಿರುವುದು ರಸ್ತೆಯ ಪಕ್ಕದಲ್ಲಿ ಆದುದರಿಂದ ಪಂಢರಪುರಕ್ಕೆ ಹೋಗುವ ಯಾತ್ರಾರ್ಥಿಗಳು ರಾತ್ರಿ ಇವರ ಜಗಲಿ ಮೇಲೆ ತಂಗುತ್ತಿದ್ದು, ಬೆಳಿಗ್ಗೆ ಎದ್ದು ಹೋಗುತ್ತಾರೆ. ನಿನ್ನೆ ಹೀಗೆ ರಾತ್ರಿ ಒಬ್ಬ ಗಂಡಸು ಜಗಲಿ ಮೇಲೆ ತಂಗಿದ್ದ. ಇಲಿ ಸೊಸೆಯು ರಾತ್ರಿ ಮಲಗುವ ಮುನ್ನ ಕಳಚಿಟ್ಟ ಚವರಿ /ಚೌರಿ ಯನ್ನು ಆ ದಾರಿಹೋಕನ ಬಳಿ ಒಯ್ದಿಟ್ಟಿತು. ಬೆಳಿಗ್ಗೆ ಅಂಗಳ ಗುಡಿಸಲು ಹೊರ ಬಂದ ಅತ್ತೆಗೆ ಸೊಸೆಯ ಚೌರಿ ಹೊರಗೆ ಜಗಲಿ ಮೇಲೆ ದಾರಿಹೋಕನ ಬಳಿಯಲ್ಲಿ ಇದ್ದದ್ದು ನೋಡಿ ಗಲಾಟೆ ಮಾಡಿ ಸೊಸೆಯನ್ನು ಮನೆಯಿಂದ ಹೊರದಬ್ಬಿದಳು....ಇಷ್ಟೆ ಕತೆ
pic from the net
ಈ ಕತೆ ನಾನಿ ನನಗೆ ಹೇಳಿದಾಗ 9 ವರ್ಷ ವಯಸ್ಸು. ಚೌರಿ ಹೊರಗೆ ಇರುವುದಕ್ಕೂ ಸೊಸೆಯನ್ನು ಹೊರಗೆ ದಬ್ಬುವುದಕ್ಕೂ ಏನೂ ಕಾರಣ ಅಂತ ಗೊತ್ತಾಗದೆ ತುಂಬ ಪೇಚಾಟಕ್ಕೆ ಒಳಗಾಗಿದ್ದೆ. ನಾನಿ ಗೆ ಕೇಳಲೂ ಭಯ. ಯಾಕೆಂದರೆ ನಾನಿ ಎರಡು ವರ್ಷಕ್ಕೊಮ್ಮೆ ನಾನು ಕಾಡಿಸಿ ಪೀಡಿಸಿ ಗೋಗರೆದ ಮೇಲೆ ಕತೆ ಹೇಳುತ್ತಿದ್ದುದು. ನಾನಿಗೆ ಸಿಟ್ಟು ಬರೆಸಲು ಅಥವ ನನಗೆ ಏನೂ ಗೊತ್ತಿಲ್ಲ ಎನ್ನುವ ಭಾವನೆ ಬರಿಸಲು ನಾನು ಸಿದ್ದಳಿರಲಿಲ್ಲ. ಎಷ್ಟೋ ವರ್ಷಗಳ ನಂತರ ಈ ಕತೆಯ ಮರ್ಮ ಗೊತ್ತಾಗಿ ಜೋರಾಗಿ ನಕ್ಕು ಬಿಟ್ಟಿದ್ದೆ. (ಸೋಮವಾರ ಕೇಳಿದ ಜೋಕ್ ಗೆ ಯಾರೋ ಬುಧವಾರ ನಕ್ಕ ಹಾಗೆ)..
ನಾನಿ = ಅಜ್ಜಿ (ಅಮ್ಮನ ಅಮ್ಮ)
ಚೌರಿ (ಕೊಂಕಣಿ ಪದ) ಜಡೆಗೆ ಹಾಕುವ ಕೂದಲಿನ ಕುಚ್ಚು. ಮೋಟು ಜಡೆಯಿದ್ದವರಿಗೆ ಇದರಿಂದ ತುರುಬು ಕಟ್ಟಲು ಸುಲಭ)
:-)

July 19, 2012

Meet my Friends Ranjith and Susy

Susy and Ranjith are my best friends who live in Ujire (kukkavu) amidst  picturesque surroundings.
It was one summer evening i met Susy. There was a clay pot making workshop for the kids during their summer vacations,organised at RUDSET Institute, Siddavana, Ujire. I was there in the evening to pick up my kids and look at exhibited work of art. I saw an angelic looking lady approach me from the opposite side. She came directly to me and asked 'are you a dancer'. I smiled shyly at her and said, 'No but i do make my husband and girls dance to my tunes'. We both had a hearty laugh and stuck an instant friendship.Susy introduced me to Ranjith!
Susy  would visit me or i would visit her, sitting sometimes quietly on the side of the riverbank bordering their farm/house, looking at the  waters rippling at the mild breeze or at the movement of a stray fish or a frog, or sit on the jhoola on the terrace of K T Gatti mama's house where we rented his first floor accommodation, enjoying the lush lovely greenery surrounding the house
Or she would visit me on the weekly market day, that was held on Monday and we both would go to Belthangady and do our weekly shopping of vegetables. While returning we would visit Doctor Rathnakar,  listen to all that he had to say about the miracles of Sri Sathya Sai Baba, have a gudbud ice cream at the shop near the bus stand and catch a tempo back to Ujire. Then would share the meal i prepared and Susy would leave for kukkavu in the evening. Those were 5 years of divine companionship that existed between me and Susy.
Whenever my mother called the conversations from my side would be about susy.....Susy this..susy that.., so much so, that my mother was very curious to meet her. So when my mother came visiting i invited Susy. Funny thing was my mom cannot speak English , but she spoke to Susy in Hindi and smatterings of English and Susy knows only English and Malayalee. So i was in the kitchen smiling and trying to decipher their getting -to- know- each other process..:-)
After Susy left my mom took me to task, how can she be your friend, she is older  to me...I was perplexed 'i said 'oh  i did not know friendship was based on age' So its been more than 20 years me and Susy and Ranjith have known each other. I just enjoy being with them.
Ranjith is a very naughty man.A store house of information and a jolly good fellow, famous as a Reiki master in and around Ujire/Belthangady.

Today they visited us and spent some time with us. Ranjith presented us with a book by Sugata Srinivasa Raju  -Pickles, the awesome cover page was designed by another best friend Apara Raghu, and next moment he gave me a call and i was overly exhuberant about the book and the coverpage..day of coincidences, to top it all this morning i read an article in Prajavani by K.T. Gatti , so it was a good day of sorts...by the way both Ranjith and Susy featured in a movie 'karimaleya kaggattalu'. they dont speak much about that either. it was a good movie with a message. i purchased the CD from Shankara book house,just  because they were in the movie. :-)
here is a small video on Ranjith and their lovely house/hill /surroundings captured a few months ago

He was a bit embarrassed to share this clip for he feels it should have been done differently and i agree. But he is my friend and i would like to share his bio- pic with my other friends..it will just take 10 minutes of your time.
enjoy my ramblings...this post is for my sister in the US..
:-)

July 17, 2012

ಒಂದು ಹಳೆ ಪತ್ರ (ಸಂಚಿಯಿಂದ ತೆಗೆದ ನೆನಪು)

ಮೊದಲಿಗೆ ಈ ಎರಡು ಲಿಂಕ್ ನಲ್ಲೇನಿದೆ ಓದಿ



ಆತ್ಮೀಯ ಶ್ರೀವತ್ಸ ಜೋಶಿಯವರಿಗೆ,

ವಂದನೆಗಳು. ಕರಿಮಣಿ/ಮಾಂಗಲ್ಯ ಕುರಿತ ಲೇಖನ ಚೆನ್ನಾಗಿ ಮೂಡಿ ಬಂದಿದಿಎ. ಲಿಂಕ್ ಕಳುಹಿಸಿದಕ್ಕಾಗಿ ಧನ್ಯವಾದಗಳು. ಎಷ್ಟೆಲ್ಲಾ ಮಾಹಿತಿಗಳನ್ನು ಕಲೆತುಹಾಕಿ ಈ ಲೇಖನವನ್ನು ವಿಚಿತ್ರಾನ್ನದಲ್ಲಿ ನಮಗೆ ಉಣಬಡಿಸಿದ್ದೀರಾ. ಲೇಖನದಲ್ಲಿ ಕೊಟ್ಟಿರುವ ಮಾಹಿತಿಯಲ್ಲಿ 75% ವಿಚಾರಗಳು ಗೊತ್ತಿರಲಿಲ್ಲ ಎಂದು ಹೇಳುವುದಕ್ಕೆ ಮುಜುಗರವಾಗುತ್ತೆ. ಮದುವೆಯಾಗಿ (ಇನ್ನು ಕೆಲವೇ ತಿಂಗಳಲ್ಲಿ) 21 ವರ್ಷ ವಾಗುತ್ತೆ. ಮಾಂಗಲ್ಯ ಅಂದರೆ ಮದುವೆಯಾಗಿರುವ ಬಗ್ಗೆ trademark ಚಿನ್ಹೆ ಅಂತಷ್ಟೆ ಅಂದುಕೊಂಡಿದ್ದೆ.
ಹಾಗೆಯೇ ನಮಗೆ ಗೊತ್ತಿರುವ ಮಾಹಿತಿಗಳೇನಾದರು ಇದ್ದರೆ ಇ-ಮೇಲ್ ಮೂಲಕ ಕಳುಹಿಸಲು ಹೇಳಿದ್ದಿರಾ.

ನಾವು ಕೊಂಕಣಿ G.S.B. ನಮ್ಮಲ್ಲಿ ಮದುವೆ ಸಮಯದಲ್ಲಿ ತವರಿನಿಂದ ಕರಿಮಣಿ ಸರ ಧಾರೆ ಎರೆಯುವ ಸಮಯದಲ್ಲಿ ತೊಡಿಸುತ್ತಾರೆ. ಆದರೆ ಅದು ಮಾಂಗಲ್ಯ ಅಲ್ಲ, ಆ ಕರಿಮಣಿ ಸರವನ್ನು 'ಧಾರೆಮಣಿ' ಅನ್ನುತ್ತಾರೆ. ಮತ್ತೆ ಮಾಂಗಲ್ಯವನ್ನು ಹವಳ ಹಾಗೂ ಎರಡೇ ಕರಿಮಣಿಯೊಂದಿಗೆ ಪೋಣಿಸುತ್ತಾರೆ. ಸರದ ಮಧ್ಯದಲ್ಲಿ ಚೌಕಾಕಾರದ ತಾಳಿ, ಅದರ ಎರಡೂ ಬದಿಗೆ ಆರರಂತೆ, 12 ಹವಳ ಹಾಕಿರುತ್ತಾರೆ. ಕೊನೆಯಲ್ಲಿ ಎರಡೂ ಬದಿಗೆ ಒಂದೊಂದು ಕರಿಮಣಿ. ಆದರೆ ಒಂದು ವೈಚಿತ್ರ್ಯವೆಂದರೆ ಮದುವೆಯಾದ ಕೆಲವೇ ದಿನಗಳಲ್ಲಿ ಮಾಂಗಲ್ಯವನ್ನು locker ನಲ್ಲಿಟ್ಟು, ಕರಿಮಣಿಯನ್ನು ಸದಾ ಕೊರಳಿನಲ್ಲಿ ಹಾಕಿರುತ್ತಾರೆ. ಇದರೆ ಬಗ್ಗೆ ಎಷ್ಟು ತಲೆ ಕೆರೆದುಕೊಂಡರೂ ಸುಳುಹು ಸಿಗಲಿಲ್ಲ. ಅದಕ್ಕೆ ಪತಿಯ ಊರಾದ ತೀರ್ಥಹಳ್ಳಿಗೆ ಫೋನಾಯಿಸಿದೆ. ನನ್ನ ಅಕ್ಕ (co-sister) ವೈದೀಕ ಪರಿವಾರದ ಹಿನ್ನೆಲೆಯವರು. ಆಶ್ಚರ್ಯ ಅಂದರೆ ಅವರಿಗೂ ಗೊತ್ತಿರಲಿಲ್ಲ. ಅಮ್ಮನಿಗೆ ಫೋನ್ ಮಾಡಿದೆ. ಅಮ್ಮ ಹೇಳಿದ್ರು ಯಾರಿಗ್ಗೊತ್ತು ಅಂತ. ಅದಕ್ಕೆ ನಾನು ಕೇಳಿದೆ, 'ಗೊತ್ತಿಲ್ಲದೇ ಹಾಗೆ ಮದುವೆ ಮಾಡ್ಕೊಂಡ್ರಾ ಅಂತ? ಅದಕ್ಕೆ ಅಮ್ಮನ ಪ್ರತ್ಯುತ್ತರ, 'ನಾವು ಹಿರಿಯರಿಗೆ ಅದನ್ನೆಲ್ಲಾ ಕೇಳ್ತಿರಲಿಲ್ಲ.. (ಬಹುಶ: ನೀನು ತಲೆಹರಟೆ ಪ್ರಶ್ನೆಗಳನ್ನೆಲ್ಲ ಕೇಳಬೇಡ ಅಂತ ಇನ್ ಡೈರೆಕ್ಟ್ ಆಗಿ ಹೇಳಿರಬೇಕು.)


ಆಮೇಲೆ ಗೊತ್ತಿರುವ ಸಂಬಂಧಿಕರಿಗೆಲ್ಲ ಫೋನಾಯಿಸಿದೆ. ರಿಸಲ್ಟ್ ಮಾತ್ರ ನಿಲ್. ಸೋ, ದೇರ್ಫೋರ್ ಗೊತ್ತಿದವ್ರು ಪ್ಲೀಸ್ ಇದರ ಮೇಲೆ ಬೆಳಕು ಚೆಲ್ಲಿ......

ನಿಜ ಹೇಳಬೇಕು ಅಂದ್ರೆ ನನಗೂ ತಾಳಿ ಒಂದು ಆಭರಣ ಅಷ್ಟೆ. ಮದುವೆ, ಮುಂಜಿ ಹಾಗೂ ದೇವಸ್ಥಾನಕ್ಕೆ ಹೋಗುವಾಗ ಹಾಕಿಕೊಳ್ತೇನೆ.

ತಾಳಿ ನನಗೆ ಒಂದು ಹಳೆಯ ಪ್ರಸಂಗ ನೆನಪಿಸಿತು. ನನ್ನ ಹಿರಿಯ ಮಗಳು ಹುಟ್ಟಿದ ಸಮಯ. ಹಾಲುಡಿಸಲಿಕ್ಕೆ ತೊಂದರೆ ಆಗುತ್ತೆ ಅಂತ ತಾಳಿ ತೆಗೆದು ಇಟ್ಟಿದ್ದೆ. ನನ್ನ ವಯಸ್ಸಾದ ಅಜ್ಜಿ ನನ್ನ ಬಾಣಂತನಕ್ಕೆ ಹೆಲ್ಪ್ ಅಗ್ತದೆ ಅಂತ ನಮ್ಮಲ್ಲಿ ಬಂದಿದ್ರು. ನನ್ನ ಬೋಳು ಹಣೆ ಕಿವಿ ಕುತ್ತಿಗೆ ನೋಡಿ, 'ಎಂತದ್ದೆ ಇದು ಮಾರಾಯ್ತಿ ಅಂತ ಗಟ್ಟಿ 'ತಾಳಿ'ಗೆ ಮಾಡಿ ಕೇಳಿದ್ರು. ಗಟ್ಟಿ ತಾಳಿಗೆ ಯಾಕಂದ್ರೆ ಅವರಿಗೆ ಕಿವಿ ಸ್ವಲ್ಪ ಮಂದ. ಅದಕ್ಕೆ ಬೇರೆಯವರಿಗೂ ಕಿವಿ ಕೇಳಿಸುವುದಿಲ್ಲ ಎಂದು ಅವರ ಗುಮಾನಿ.

ಅದಕ್ಕೆ ನಾನು 'ಅಜ್ಜಿ, ಏನಾಯ್ತೀಗ' ಅಂದೆ. ಅಜ್ಜಿ : ಅದು ಸುಮಂಗಲೀಯರ ಲಕ್ಷಣ. ಹಾಗೆಲ್ಲ ತಾಳಿ ಕುಂಕುಮ ತೆಗೆದು ಓಡಾಡಬಾರದು. ಗಂಡನ ಆಯಸ್ಸು ಕಡಿಮೆಯಾಗುತ್ತೆ ಅಂತೆಲ್ಲ ಅಂದ್ರು. ನೀನು ಒಂದೂ ದಿನ ತೆಗಿಲಿಲ್ಲವ ಅಜ್ಜಿ ಅಂತ ಕೇಳಿದೆ. ಇಲ್ಲಪ್ಪ ಬಾಣಂತನಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವಾಗಲೂ ತೆಗಿಲಿಲ್ಲ ಅಂದ್ರು. ನಮ್ಮ ಅಜ್ಜಿ ತುಂಬ ಶ್ರೀಮಂತ ಪರಿವಾರದಿಂದ ಬಂದವರು. ಅವರ ಕಿವಿಯಲ್ಲಿ ದೊಡ್ಡ ದೊಡ್ಡ ಹರಳಿನ ವಜ್ರದ ಬೆಂಡೋಲೆಗಳಿದ್ದವು ಅದರಿಂದ ಅವರ ಮುಖದ ಲಕ್ಷಣ ಇನ್ನಷ್ಟು ಬೆಳಗುತ್ತಿತ್ತು. ಅದಕ್ಕೆ ನಾನು 'ಹಾಗಾದ್ರೆ ಅಜ್ಜ ಯಾಕೆ ತೀರಿಕೊಂಡರು ಅಂತ ಕೇಳಿದೆ. ನಮ್ಮ ಅಜ್ಜ ನಾವೆಲ್ಲ ಹುಟ್ಟುವ ಮುಂಚೆಯೆ ತೀರಿ ಕೊಂಡಿದ್ರು). ಅಜ್ಜಿ ಸುಮ್ಮನಾಗಿಬಿಟ್ಟರು. ಪಾಪ ಅಜ್ಜಿಗೆ ನನ್ನ ತಲೆಹರಟೆ ಪ್ರಶ್ನೆಯಿಂದ ಎಷ್ಟು ನೋವಾಗಿರಬೇಕು? ಅದು ಅವರ ಸೆಂಟಿಮೆಂಟು, ನಾನು ಸುಮ್ಮನೆ ಅವರು ಹೇಳಿದ್ದನ್ನೆಲ್ಲ ಕೇಳಬಹುದುತ್ತು. ಯಾಕೋ ನೀವು ಬರೆದ 'ತಾಳಿ' ಬಗ್ಗೆ ಲೇಖನ ಓದಿ ಈ ಮೇಲಿನ ಪ್ರಸಂಗ ನೆನಪಾಗಿ ಕಣ್ಣು ಹನಿಗೂಡಿತು.

*ತಾಳಿಗೆ = ಗಂಟಲು

ಮಾಲತಿ ಎಸ್.
ಬೆಂಗಳೂರು

ಯಾವುದೋ ಫೈಲ್ ಹುಡುಕುತ್ತಿದ್ದಾಗ ಸಿಕ್ಕಿದ್ದು. 5 ವರ್ಷಗಳ ಹಿಂದಿನ ನನ್ನ ಕನ್ನಡ ಚೆನ್ನಾಗಿತ್ತು ಅಂತ ನನ್ನ ಅನಿಸಿಕೆ. ನೀವೇನು ಹೇಳುತ್ತೀರಿ?

ಆವಾಗೆಲ್ಲ ಶ್ರೀವತ್ಸ ಜೋಶಿಯವರ ಪ್ರತೀ ವಿಚಿತ್ರಾನ್ನದ ಎಪಿಸೋಡ್ ಓದೋದು ದೊಡ್ಡ ದೊಡ್ಡ ರಿಪ್ಲೈ ಹಾಕೋದು ಇದೇ ಕೆಲಸ ಆಗೋಗಿತ್ತು. ನನ್ನ ಕನ್ನಡ ಸಾಕಷ್ಟು ಸುಧಾರಿಸಲು ಸಹಕಾರಿಯಾದ ಶ್ರೀವತ್ಸ ಜೋಶಿ ಹಾಗೂ ದ್ಯಾಟ್ಸ್ ಕನ್ನಡ ಡಾಟ್ ಕಾಮ್ (ಶ್ಯಾಂ ಸುಂದರ್) ಇಬ್ಬರಿಗೂ ಧನ್ಯವಾದಗಳು ಹೇಳಲೇಬೇಕು....


ಶ್ರೀವತ್ಸ ಜೋಶಿಯವರು ತಮ್ಮ ಬ್ಯುಸಿ ಶೆಡ್ಯೂಲ್ ನಲೂ ಈ ಹಳೆಯ ಲಿಂಕ ಕಳಿಸಿಕೊಟ್ಟಿದ್ದಾರೆ. ಅವರಿಗೆ ಇನ್ನೊಂದು ಥ್ಯಾಂಕ್ಸ್


:-)

July 14, 2012

Was I Right

Everybody by now has read about the teenage girl who was molested by a gang in full public view, In Guwahati......
Though what i am about to relate has nothing to do with the above incident all the same ,the news reminded me of an incident that happened several years ago in the month of July which i wanted to add  in my blog,   but kept postponing. so here it is..
We were very new to Bangalore. I had enrolled for a three day workshop on Developmental Journalism with CDL.. Our home was quite far from the workshop venue which involved me taking two buses to reach the spot. 
On the first day of the programme we were let off early. On the second day we went to the Press club to watch how a press release is conducted. From there we returned to the training venue. we had some brainstorming, some exercises to differentiate all the journalism terms we learnt that day and we did some mock demonstrations of vociferous/silent rally etc.. It was dark when we left the training. I had to catch a bus from Coles Park to Majestic and from there another bus to Mahalaxmi Layout. The bus was full  and the ladies seat were  occupied by male passengers.
I was really tired that day. I was having a bad MC, added to that lots of physical activity at the training venue and since we had just come to Bangalore a few days ago, the previous day i spent unpacking some of the household goods. Srikanth was away to Delhi on a project and my girls were young. It was nearing 8.30 in the evening.I looked about for a seat and also looked at a few of the faces. They seemed hostile, also there was a waft of alcoholic breath in the vicinity. The conductor gave me a ticket but did not bother to tell the men to vacate the ladies seat. So i knew i had no help from these quarters so i stood at the spot behind the driver. And i was only lady in the bus and i could get this bus after an half hour wait. I felt the area was too seedy and I was scared. It began to rain and my main concern was the girls at home. I did not have a cell phone. So i had no other alternative left than to catch this bus.
A few seconds later another girl got into the bus.i was relieved. She politely asked the men to give up the ladies seat but they totally ignored her. Few of the men sitting at the behind passed some lewd remarks at the girl. Later the girl was angry with me and asked me why i did not fight for a seat. So i told her (in a sufficiently  loud voice that i could muster) i have been literally on my feet since 6 hours but another two or more would not kill me and that I am quite a strong woman at that..all of a sudden two of the men in the front seat got up. I told them no its ok please sit. but they ignored us and proceeded to the back of the bus.
Me and the girl occupied the seat just vacated. and asked the girl, 'Did we both really have a chance if all the men had chosen to flock together to get even at us if we had ranted and raved? I am no superwoman and even if i did know martial arts it does not work in real life as shown in the movies.' Two against 35+ men and with no support from the driver and conductor of the bus..no way..'
You all must be wondering why i did not catch the auto,  i did not have extra cash on me. did not know the proper route and i always feel safe travelling with  many people, than alone in an auto during night.
But did i do the right thing? or was i a coward?
and yes by the way i have this strange ability to gauge an environment if it is hostile or conducive...all about positive and negative energies...
Ladies who read my post how would you have handled this situation??
Coming back to the Guwahati Incident:
(One of us had asked this question: In a situation where you feel you can help a person (for example an accident/or natural calamity like floods or earthquake), would you shoot the incident or help the victim if its in your reach..The girl in Guwahati who was stripped and molested..the question arises someone could shoot the scenes but did not go to her aid....but in this case the journalists say they did try to help but they were outnumbered)
Guwahati incident is a classic example of mob mentality..the men attack her as if social condemnation is required for her behaviour. for one, she came out of a bar and secondly she bad mouthed the men who passed remarks on her...Other people kept silent thinking she deserved what was coming...
( I have witnessed mob mentality twice wherein perfectly decent persons turn into monsters/vicious people in a few seconds time..once during Indira Gandhi Assassination and second on a bus from Mumbai to Mangalore)
Where is our country headed to.........??It took Four days for the Government to wake up and take action?

July 8, 2012

ನಮ್ಮ ತೋಟದಲ್ಲಿ , ನದಿ ತೀರದಲ್ಲಿ ಒಂದು ರೌಂಡ್ ಹಾಕುವಾ

ಈ ಸಲ ಊರಿಗೆ ಹೋದಾಗ ಕ್ಯಾಮರಾ ನನ್ನ ಕೈ ನಲ್ಲಿ..ಮಂಗನ ಕೈ ನಲ್ಲಿ ಮಾಣಿಕ್ಯದ ಹಾಗೆ..ಹೆಂಗೆಂಗೋ ತೆಗೆದಿದ್ದೀನಿ..ಬನ್ನಿ join me....:-)
good morning teerthahalli

Green Rose

ಬನ್ನಿ ಮೊದಲು ತೋಟಕ್ಕೆ ಹೋಗುವಾ

ನಮ್ಮ ತೋಟವನ್ನು ನೋಡಿಕೊಳ್ಳುವ ಪುಟ್ಟರಾಜು and family ಜತೆ ನಮ್ಮ ರಾಯರು ಇನ್ blue T-shirt

ಬರಿ ಜಂಬದ ಹುಂಜ

ನನ್ನ ಪುಟ್ಟ ನರ್ಸರಿ
A-Z ಎಲ್ಲ ಇವೆ...:-)

ನನ್ನ ಬಗ್ಗೆ ಕುತೂಹಲ ಈತನಿಗೆ..:-)



Temple Tree
ಸಾಂಬಾರಬಳ್ಳೀ
ನೀರಿನ ಒರತೆ
ಬಾಳೆವನದಲ್ಲಿ ನಾ!!

ಕದಳಿಫಲ..ನೀರಿಲ್ಲದಿದ್ದರೂ :-(

ಇಲ್ಲಿ ಬಿಸಿಲಿನಿಂದ ಸ್ವಲ್ಪ respite
ಜೋರು ಗಂಟಲಿನ ಪುಟ್ಟ ಹಕ್ಕಿ

ಸೊರಗಿವೆ ಕೆಂಪು ಹರಿವೆ
once in a while we should stop and smell the flowers ಅಂತೆ..ಅದಕ್ಕೆ ನಾನು..... coffee ಹೂವಿನ ಪರಿಮಳ ಘಮ ಘಮ

ತೋಟದ ಒಂದು ಬದಿಯಿಂದ ಕಾಣುವ ಜನತಾ ಕಾಲೋನಿ




ರಸ ಭರಿತ punನೇರಳೆ ಕೆಳಗಿದೆ ಪೇರಳೆ..

guavas the sweetest ever!

ನೀರಿನ ಅಗತ್ಯವಿಲ್ಲ ಈ ಗಿಡಗಳಿಗೆ. they grow robustly the tapioca plants.



ಸಂಜೆಯಾಯಿತು ಈಗ ನದಿ ತೀರ ಯಾನ...:-)


ನದಿಗೆ ಹೋಗಿವ ರಸ್ತೆ



ಅಗೋ ದೂರದಲ್ಲಿ ಅಪ್ಪ ಮಗಳಿಗೆ ಈಜು ಕಲಿಸುತ್ತಿರುವುದು..

ರಜೆ ಮಜಾ

ನನಗಿಷ್ಟ ಈ ನದಿ ತೀರದ ಮೃದು ಮರಳು

ಅಹಾ! ಸರ್ ವಿಶ್ವೇಶ್ವರಯ್ಯ ಕಟ್ಟಿಸಿದ ಸೇತುವೆ..ಎಳ್ಳಮವಾಸ್ಯೆ ಜಾತ್ರೆಗೆ ಬಿಳಿ ಬಣ್ಣ ಹೊಡೆಸಿಕೊಡಿದ್ದು.

ಸುಮ್ನೆ experimenting with camera..:-)

ಕಣ್ಣು ಕಿರಿದು ಗೊಳಿಸಿ ಸೂಕ್ಷ್ಮತೆಯಿಂದ ನೋಡಿದರೆ ರಾಮಮಂಟಪ ಕಾಣಬಹುದು :-)

ಸೂರ್ಯಾಸ್ತಮಾನಕ್ಕೆ ಮುನ್ನ

ಸೂರ್ಯ ಮುಳುಗುವ ಮುಂಚೆ ಪ್ರಖರ

ಲೊ ಶ್ಯಾಮ್ ಹೋ ಗಯೀ ಘರ್ ಚಲ್ತೆ ಹೈ ಅಭಿ!

bye bye ರವಿ

ಸೂರಜ್ ಚಲಾ ಘರ್ ಕೋ
:-)