ಹಳೆಯ ಪೇಪರ್ ರಾಶಿ ಜಮಾ ಆಗಿತ್ತು. ಸೆಕ್ಯುರಿಟಿಯವರಿಗೆ ಹೇಳಿಟ್ಟಿದ್ದರು ಇಷ್ಟು ದಿನ ಯಾರು ಬಂದಿರಲಿಲ್ಲ. ಕೊನೆಗೆ ಶ್ರೀಕಾಂತ ನಮ್ಮ ಬಿಲ್ಡಿಂಗ್ ಗೆ ಬರುವ ಮಾಮೂಲು ಪೇಪರ್ ತೆಗೆದುಕೊಂಡುಗುವ ರದ್ದಿ ಪೇಪರ್ ಅಂಗಡಿಗೆ ಹೋದ್ರೆ ಅದು ಬಂದ್ ಆಗಿ ಹಲವು ಸಮಯ ಆಯ್ತು ಅಂತ ಪಕ್ಕದ ಅಂಗಡಿಯವರು ಹೇಳಿದರು. ಇವತ್ತು ಬಾಲ್ಕನಿಯಲ್ಲಿ ನಿಂತಾಗ 'ಪೇಪರ್' ಅನ್ನುವ ಕೂಗು ಕೇಳಿಸಿ ಸಂತೋಷವಾಯಿತು. ಕಪರ್ಡ್ ತುಂಬಿ, ಟೀಪಾಯ್ ಕೆಳಗಡೆ ತುಂಬಿ, ಸ್ವಲ್ಪ ಬಾಲ್ಕನಿ, ಇನ್ನು ಕೆಲವು ಟೀಪಾಯ್ ಮೇಲು ಹಳೆ ಪೇಪರ್ ರಾರಾಜಿಸುತ್ತಿದ್ದವು. ಕೂಡಲೇ ನಾನು 'ಪೇಪರ್' ಅಂತಾ ಕೂಗಿದೆ ಆರನೇ ಮಹಡಿಯಿಂದ, ಅದು ನಿರಂತರ ಟ್ರಾಫಿಕ್ ಸದ್ದಿನಲ್ಲಿ ನನ್ನ ಪುಟ್ಟ ದನಿ ಅಲ್ಲಿ ಹೋಗುವುದೋ ಇಲ್ಲವೋ ಅಂತ ಸ್ವಲ್ಪ ಮುಜುಗರ ಆಯ್ತು. ಪುನ: ಪೇಪರ್ ಅಂತ ಕೂಗಿದ್ದು ಮಾತ್ರವಲ್ಲ ಎರಡೂ ಕೈ ಕೂಡ ಅಷ್ಟುದ್ದ ಕೆಳಗಡೆ ಬಿಟ್ಟು ಸನ್ನೆ ಮಾಡ್ತಾ ಇದ್ದೆ. ಸಧ್ಯ ನನ್ನ ಕೂಚಿಪುಡಿ, ಸರ್ಕಸ್, ಸನ್ನೆಗಳನ್ನು ನೋಡಿ ಮನೆಯಲ್ಲಿ ಬೆಂಕಿ ತಾಗಿದೆ ಅಂತ ಯಾರಾದರೂ ನೋಡಿ ಭಯಪಡಲಿಲ್ಲ. :-) ಅವನು ನೋಡಿ ಬಿಲ್ಡಿಂಗ್ ಗೆಟ್ ಬಳಿ ನಿಂತಿದ್ದ. ಸೆಕ್ಯುರಿಟಿಯಂವ ಅವನಿಗೆ ಒಳಗೆ ಬರಲು ಬಿಡಲಿಲ್ಲ. ನಾನು ಸನ್ನೆ ಮಾಡಿ ಅಲ್ಲೇ ನಿಲ್ಲಿ ನಾನು ಫೋನ್ ಮಾಡ್ತೇನೆ ಅಂದೆ. ಫೋನ್ ಮಾಡಿದರೆ 'ಈ ನಂಬರ್ ಚಾಲನೆಯಲ್ಲಿಲ್ಲ ' ಅನ್ನುವ ಸಂದೇಶ ಬಂತು, ಕಡೆಗೆ ಅಕ್ಕನನ್ನು ಕೆಳಗಡೆ ಕಳುಹಿಸಿದೆ.
ಅಷ್ಟರೊಳಗೆ ಸಂತೆಗೆ ಹೋದ ಶ್ರೀಕಾಂತ ಕೂಡ ಬಂದಿದ್ದರು. ನಾನು ನೀಟಾಗಿ ಜೋಡಿಸಿಟ್ಟು ದಾರ ಕಟ್ಟಿದ ಪೇಪರ್ ಎಲ್ಲ ಹೊರಗೆ ತರಯುವ ಗಡಿಬಿಡಿಯಲ್ಲಿ ಹೆಂಗೆಂಗೋ ಆಯ್ತು. ಅದನ್ನು ನೀಟಾಗಿ ಜೋಡಿಸ್ತಾ ಇದ್ರು.
ಶ್ರೀಕಾಂತ : ಏನು ಕನ್ನಡದವರಾ?"
"ಅಲ್ಲ ಸರ್ ತಮಿಳ್ ರವರು"
"ಏನು ಹೆಸರು"
"ರಾಮಸ್ವಾಮಿ"
"ಎಷ್ಟು ಪೇಪರ್ ಗೆ "
"ಹತ್ತು ರೂಪಾಯಿ ಸಾರ್ ಕೆ ಜಿ ಗೆ"
"ಹನ್ನೊಂದಲ್ಲವಾ?"
"ಇಲಾ ಸಾ
"ನೀವ್ ಎಷ್ಟಕ್ಕೆ ಮಾರ್ತೀರಿ"?
"೧೦.೫೦ , ಹನ್ನೊಂದು"
"ದಿನಕ್ಕೆ ಎಷ್ಟು ಸಂಪಾದನೆ ಆಗ್ತದೆ"?
"ಆಗುತ್ತೆ ಸರ್ "
"ಎಷ್ಟು?"
"ಶನಿವಾರ ಭಾನ್ ವಾರ ಸ್ವಲ್ಪ ಜಾಸ್ತಿ ಆಗುತ್ತೆ, ಒಂದು ೫೦೦-೬೦೦"
"ತಿಂಗಳಿಗೆ ಹತ್ತು ಸಾವರ ಆಗತ್ತಾ ?"
"ಹಾ ಹಾ ಇಲ್ಲಾ ಸಾ "
"ಮತ್ತೆ ಊರಿಗೆ ಕಳುಸಿಲಿಕ್ಕೆ ಇಲ್ಲವಾ?"
"ಹೆಂಡತಿ ಮಕ್ಕಳು ಅಲ್ಲೇ ಸಾರ್ "
"ಎಷ್ಟು ಮಕ್ಕಳು?"
"ಎರಡು ಹೆಣ್ಣು ಒಂದು ಗಂಡು"
"ಹೆಂಡತಿ ಏನ್ ಮಾಡ್ತಾರೆ?"
"ಮಕ್ಕಳು ಇಸ್ಕೂಲ್ ಗೆ ಹೋಗ್ತಾರೆ ಅದಕ್ಕೆ ಹೆಂಡತಿ ಮನೆಯಲ್ಲೇ . ತುಂಬಾ ಸಣ್ಣ ಮಕ್ಕಳು "
"ಎಕೌಂಟ್ ಇದೆಯಾ?"
"ಇಲ್ಲಾ ಸಾ "
"ಯಾಕೆ ಮಾಡಿಸಿಲ್ಲ?"
"ಇಲ್ಲಿ ಇಲ್ಲಾ ಸಾ, ಊರಲ್ಲಿ ಇದೆ".
"ಮತ್ತೆ, ನಿಮಗಿಲ್ಲಿ ದಿನಕ್ಕೆ ಎಷ್ಟು ಖರ್ಚ್ ಆಗುತ್ತೆ."
" ದಿನಕ್ಕೆ ೧೬೦ ರು ಸಾ "
" ದಿನಕ್ಕೆ ೧೬೦ ರು ಸಾ "
"೩೦ -೪೦ ಕ್ಕೆ ಲ್ಲ ತಿಂಡಿ ಊಟ ಸಿಗತ್ತೆ , ಆಮೇಲೆ ಒಂದು ಸಲ್ಪ ಚಾ ಕಾಪಿ"
"ಮತ್ತೆ ಉಳಿಕೊಳ್ಳೋದಿಕ್ಕೆ?"
"ಪೇಪರ್ ಅಂಗಡೀಲೇ ಉಳ್ಕೊಳ್ಳೋದು"
"demonetization ನಿಂದ ಏನಾದ್ರೂ ತೊಂದ್ರೆ ಆಯ್ತಾ?"
"ಇಲ್ಲಾ ಆ ನಮಗೇನು ತೊಂದರೆ ಆಗಿಲ್ಲ "
"demonetization ನಿಂದ ಏನಾದ್ರೂ ತೊಂದ್ರೆ ಆಯ್ತಾ?"
"ಇಲ್ಲಾ ಆ ನಮಗೇನು ತೊಂದರೆ ಆಗಿಲ್ಲ "
"ಮತ್ತೆ ಕುಡಿಯೋದು, ಗಿಡಿಯೋದು ಇದೆಯಾ?"
"ಹಾ ಹಾ ಇದೆ ಸಾ. ಇಲ್ಲಿ ಕುಡೀತೀನಿ , ಊರಲೆಲ್ಲಾ ಇಲ್ಲ"
"ಅದಕ್ಕೆ ತುಂಬಾ ಖರ್ಚ ಆಗಲ್ಲ್ವಾ?"
"ಗಂಗೋತ್ರಿ ದಾಟಿದ್ರೆ ಅಲ್ಲಿ ೬೨ ರು ಗೆ ಸೀಗತ್ತೇ ಸಾ!"
"ಹೋಗ್ರ್ರಿ ೬೨ ಆ?"
"ಹೂಂ ಸಾ! ಗಂಗೋತ್ರಿ ಹತ್ತೀರಾ ೮೦ ರು . ನಾನು ಹೋಗೋದು ಹೋಲ್ ಸೆಲ್ . ಸುಮ್ನೆ ೧೮ ರು ವೆಸ್ಟ್ ಮಾಡಲ್ಲಾ"
ನಾನು : :-) :-) :-)
"ಊರಿಗೆ ಎಷ್ಟು ಸಲ ಹೋಗ್ತೀರಿ?"
"೨೦ ದಿನ ಕೆಲಸ ಮಾಡ್ತೀನಿ, ಮತ್ತೆ ಊರಿಗೆ ಹೋಗ್ತೀನಿ, ಇಲ್ಲದಿದ್ದರೆ ಏನಾದರೂ ಅರ್ಜೆಂಟ್ ಇದ್ರೆ ಹೋಗ್ ಬೇಕಲ್ಲವಾ ಸಾ?"
"ಮತ್ತೆ ಅಮ್ಮನ ಪ್ಹ್ಯಾನ್ ಆ?"
"ಹಾ ಹಾ ಇಲ್ಲಾ ಸಾ "
"ಯಾಕ್ರೀ? ಅಮ್ಮ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾರೆ . ಪ್ಹ್ಯಾನ್ , ಮಿಕ್ಸಿ , ಪ್ಹ್ರಿಜ್"
"ಪ್ಹ್ರಿಜ್ ಇಲ್ಲಾ ಸಾ! ಫ್ಯಾನ್ ಮಿಕ್ಸಿ ಎಲ್ಲ ಒಂದು ಮೂವತ್ತು ಪರ್ಸೆಂಟ್ ನಡೆಡ್ರೆ ಅದೇ ಲಕ್ಕು ಸಾ . ಕಾಂಟ್ರಾಕ್ಟ್ ಆಲ್ವಾ ಸಾ? "
"ಮತ್ತೆ ಮಕ್ಕಳಿಗೆ ಲ್ಯಾಪ್ ಟಾಪ್ "
"ಹಾಂ ಅದು ಕೊಟ್ಟಿದಾರೆ"
"ಅಕ್ಕಿ ಫ್ರೀ ಸಿಗತ್ತಲ್ಲವಾ?"
"ಹಾಂ ಸಿಗತ್ತೆ "
"ಹೇಗೆ ಕ್ವಾಲಿಟಿ ?"
"ಕ್ವಾಲಿಟಿ ಹಾಂ ಹೂಂ ( ಸರಿ ಉತ್ತರ ಬರಲಿಲ್ಲ) :-)"
"ಎಷ್ಟು ವರ್ಷ ಆಯ್ತು ಈ ಕೆಲಸ ಮಾಡ್ತಾ ಇದ್ದೀರಿ?"
"೩೫ ವರ್ಷ ಸಾ "
"ಈಗ ಎಷ್ಟು ವಯಸ್ಸು ನಿಮಗೆ??
"೫೫"
"ಒಂದು ಫೋಟೋ ತೇಗಿ ಬಹುದಾ?"
ಅಂತ ಪೋಸ್ ಕೊಟ್ಟು ಅಷ್ಟರಲ್ಲಿ ಪೇಪರ್ ನೀಟಾಗಿ ಕಟ್ಟಿ ಎಷ್ಟು ಕೆಜಿ ಇದೆ ಅಂತನನಗೆ ತೋರಿಸಿ , ದುಡ್ಡು ಕೊಟ್ಟು , ಫೋನ್ ನಂಬರ್ ಕೂಡ ಕೊಟ್ಟು ಹೋದ
ಇಂತಿಪ್ಪ ರಾಮಾಸ್ವಾಮಿ






