(ಮೊನ್ನೆ ಗಾಂಧಿ ಜಯಂತಿಯಂದು ಇದನ್ನು ಪೋಸ್ಟ್ ಮಾಡಬೇಕಿತ್ತು.. ಯಾಕೋ ಸೋಂಬೇರಿತನ. ಮತ್ತು ನಾವು ಆ ದಿನ ಇಡಿ ಮನೆಯಲ್ಲಿರಲಿಲ್ಲ. ಇನ್ನು ಎರಡೇ ತಿಂಗಳಿಗೆ ಪುನ: ಬೆಂಗಳೂರು ಅಂತರ್ ರಾಷ್ಟ್ಟ್ರೀಯ ಚಲನಚಿತ್ರೋತ್ಸ್ವ ಪ್ರಾರಂಭವಾಗುತ್ತೆ. ಈ ಸಿನಿಮಾ ಏನಾದರೂ ಪುನ: ಪ್ಲೇ ಮಾಡಿದ್ರೆ ನೀವೆಲ್ಲ ನೋಡಬಹುದು ಅಂತ ಬ್ಲಾಗ್ ನಲ್ಲಿ ಹಾಕುವ ಅಂದಾಜು ಮಾಡಿದೆ. anyways ನೆನಪಿನ ಸಂಚಿ ಅಂತ ಬ್ಲಾಗ್ ಹೆಸರು ಸಾರ್ಥಕವಾಯ್ತು ಬಿಡಿ :-) )
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ನಾನು ಬೆಂಗಳೂರಿಗೆ ಬಂದು ಆಲ್ ಮೋಸ್ಟ್ 12 ವರ್ಷ ಆಗುತ್ತೆ. ಇಲ್ಲಿಗೆ ಬಂದ ಮೇಲೆ ನಾನು ನೋಡಿದ ಕನ್ನಡ ಸಿನಿಮಾಗಳು
1 ಮಾತಾಡ್ ಮಾತಾಡ್ ಮಲ್ಲಿಗೆ
2 ಎಕ್ಶಿಡೆಂಟ್
3 ನಾನೂ ನನ್ನ ಕನಸು
4 ಅಬಚೂರಿನ ಪೋಸ್ಟ್ ಆಫಿಸ್
5 ಕನಸೆಂಬ ಕುದುರೆಯನ್ನೇರಿ
6 ಗುಬ್ಬಿಗಳು
7 ಎದ್ದೇಳು ಮಂಜುನಾಥ
8 ಬೆಟ್ಟದ ಜೀವ
9 ಪುಟ್ಟಕ್ಕನ ಹೈ ವೇ
10 ಕೂರ್ಮಾವತಾರ
ನನ್ನ ಕನ್ನಡ ಪ್ರೀತಿ ಪುಸ್ತಕಗಳು ಹಾಗು ಕೆಲವು ಹಾಡುಗಳಿಗೆ ಮಾತ್ರ ಸೀಮಿತ. ಮೇಲಿನ ಪಟ್ಟಿಯಲ್ಲಿದ್ದ ಸಿನಿಮಾದಲ್ಲಿ ನಾನು ಪೂರ್ತಿಯಾಗಿ ನೋಡಿದ್ದು 1 ರಿಂದ 3 ಮತ್ತು 8 ರಿಂದ 10. ಉಳಿದ ಸಿನಿಮಾ ನನಗೆ concentrate ಮಾಡಕ್ಕೆ ಆಗಲಿಲ್ಲ. ನನ್ನ ಕೆಲವು ಮಿತ್ರರು ತುಂಬಾ ಆಪ್ತ ಎನಿಸಿದವರೂ ಈ ಚಿತ್ರ ನೋಡು ಅಂದ್ರೆ ನಾನು 5 ಜನರಲ್ಲಿ, ನಾಲ್ಕು ಜನ ಚೆನ್ನಾಗಿದೆ ಅಂದ್ರೆ ಮಾತ್ರ ಸಿನಿಮಾಗೆ ಹೋಗುತ್ತೇನೆ. ಆಗಲೂ ಅವರು ನೋಡಲು ಹೇಳಿದ ಸಿನಿಮಾ ನನಗೆ ಇಷ್ಟವಾಗಿದ್ದು ಅತೀ ವಿರಳ ಎನ್ನಬಹುದು. ಮಿತ್ರ ರಘು ಅಪಾರ 'ಕೂರ್ಮಾವತಾರ' ಸಿನಿಮಾ ಬಗ್ಗೆ ಬರೆದಿದ್ದೀನಿ ಅಂದಿದ್ರೂ ಸಿನಿಮಾ ನೋಡದೆ ನಾನು ಯಾರದೇ ಸಿನಿಮಾ review ಓದೋದಿಲ್ಲ, ನೋಡಿದ ಮೇಲೆ ಓದ್ತೀನಿ ಅಂದಿದ್ದೆ. ಫಿಲ್ಮ್ ನೋಡಿಯಾದ ಮೇಲೆ ಅದರ ಬಗ್ಗೆ ಇಬ್ಬರೂ ಡಿಸ್ಕಸ್ ಮಾಡಿದ್ವಿ and iam glad ನಮ್ಮ 90% views ಮ್ಯಾಚ್ ಆದುವು. ಮೇಲಿನ ಪಟ್ಟಿಯಲ್ಲಿನ ಎಲ್ಲ ಸಿನಿಮಾಗಳಲ್ಲಿ ನನಗೆ ಕೂರ್ಮಾವತಾರ ಹೆಚ್ಚು ಇಷ್ಟ ಆಗಿದ್ದು.
ಹಿಂದಿನ ವರ್ಷ ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ, ಹೇಗೂ ನಿಹಾ ಗೆ ರಜೆ ಇತ್ತು ನನಗೂ ಆಫಿಸ್ ನ ಹೇಳಿಕೊಳ್ಳುವ ಯಾವ ಕೆಲಸಗಳೂ ಇರಲಿಲ್ಲ. ಹಾಗಾಗಿ ನಾನು ನಿಹಾ ಜೋಡಿಯಾಗಿ ಹಲವಾರು ಸಿನಿಮಾ ಗಳನ್ನು ನೋಡಿದ್ವಿ. 'ಈ ವರ್ಷ ನೀನು ಚೂಸ್ ಮಾಡಿದ ಸಿನಿಮಾ' ಯಾವುದೇ ಆಗಿರಲಿ ನಾ ನೋಡುತ್ತೇನೆ ಅಂದೆ. ಅವಳಿಗೆ ಸಿನಿಮಾ ಬಗ್ಗೆ alert ಮಾಡುವ ಹಲವಾರು ಸ್ನೇಹಿತೆಯರು ಮಾತ್ರವಲ್ಲ ಅವಳ ಕಾಲೇಜಿನ ಲೆಕ್ಚರರ್ ಮನು ಚಕ್ರವರ್ತಿ ಸರ್ ಕೂಡ ಒಳ್ಳೆಯ ಸಿನಿಮಾ ದ ಲಿಸ್ಟ್ ಗಳನ್ನು ಕೊಡುತ್ತಿರುತ್ತಾರೆ. ನಾನು ಇಲ್ಲಿ ಒಳ್ಳೆಯ ಸಿನಿಮಾ ಅಂದಾಗ 'ಅವರು ಸೂಚಿಸಿದ ಎಲ್ಲ ಸಿನಿಮಾಗಳೂ ನನಗೆ ಇಷ್ಟವಾಗಿವೆ ಹಾಗಾಗಿ ಇದು ಸಿರ್ಫ್ ಮೇರಾ ಅಭಿಪ್ರಾಯ. ಈವರೆಗೆ ಅವರು ಅವಳಿಗೆ ಯಾವ ಕನ್ನಡ ಸಿನಿಮಾನೂ ಸೂಚಿಸಿಲ್ಲ.
ಬೆಳಿಗ್ಗೆ ನಾವು ಹೊರಡುವಾಗ ನಿಹಾ ಅಮ್ಮ ಕನ್ನಡ ಸಿನಿಮಾ 'ಕೂರ್ಮಾವತಾರ' ಚೆನ್ನಾಗಿದೆ ಅಂತ ಸುಮಾರು ಜನ ನನಗೆ ಹೇಳಿದ್ದಾರೆ' ಅಲ್ಲಿ ಹೋಗಿ ನೋಡುವಾ otherwise my choice is Bengali movie' ಅಂದ್ಲು. ನಾನು ಹೂಂ ಅಂದೆ. ಅಲ್ಲಿ ನೋಡಿದ್ರೆ ಆಗಲೇ ಕೂರ್ಮಾವತಾರಕ್ಕೆ ದೋssssssಡ್ಡ ಲೈನ್. ನನಗಂತೂ ಖುಶಿ. ಗ್ಯಾರಂಟಿ ಕನ್ನಡ ಸಿನಿಮಾ ಸಿಗಲಿಕ್ಕಿಲ್ಲ. i was all for the Bengali movie'. ಸರತಿ ಸಾಲಿನಲ್ಲಿ ನಿಂತುಕೊಂಡೆವು. 10-10 ಜನರನ್ನು ಮಾತ್ರ ಒಳಗೆ ಬಿಡುತ್ತಿದ್ದರು. ನನ್ನ-ನಿಹಾ ಸರದಿ ಬಂದಾಗ ಸೆಕ್ಯುರಿಟಿ ಗಾರ್ಡ್ 'ಮ್ಯಾಡಂ ಫುಲ್ ಹೋಗಯಾ , ಸಾರಿ' ಅಂದ. ನಾನು ನಿಹಾ ಕಡೆ ತಿರುಗಿ ವಿಜಯದ ನಗೆ ನಕ್ಕೆ. ಹಾ ಇನ್ನು ಬೆಂಗಾಲಿ ಚಿತ್ರಕ್ಕೆ, ಅದು ಶುರು ಆಗಲು ಇನ್ನೂ 15 ನಿಮಿಷದ ಟೈಮ್ ಇತ್ತು. ಸೋ ನಾ ಹೊರಡಲು ಅನುವಾದಾಗ ಇನ್ನೊಬ್ಬರು ಯಾರೋ 'please wait madam' there might be a few seats' ಅಂದ. ನಿಂತೆ. ಕೆಲ ಕ್ಷಣಗಳ ನಂತರ only two more seats ,please enter ಅಂದ. ಸರಿ ಹ್ಯಾಪ್ ಮೋರೆ ಹಾಕ್ಕೊಂಡು ಎಂಟರ್ ಆde. ಅಲ್ಲಿ ನೋಡಿದ್ರೆ ನಮ್ಮನ್ನು ಸೀಟ್ ಗಳಿಗೆ ಎಸ್ಕೋರ್ಟ್ ಕೂಡ ಮಾಡಿದರು. ತುಂಬ ಎದುರಿನ ಸೀಟ್. ನನಗೂ ನಿಹಾಗೂ ಅಕ್ಕ ಪಕ್ಕದ ಸೀಟ್ ಎ ಸಿಕ್ಕಿದ್ದು. ಆ ಮೇಲೆ ಡೈರೆಕ್ಟರ್, ತಾರಾ ಅನುರಾಧ ಅವರೆಲ್ಲ ಎದುರಿಗೆ ಬಂದು ನಿಂತರು. ಕಾಸರವಳ್ಳಿಯವರ ಮಗ-ಮಗಳು ಎಲ್ಲ ಇದ್ದರು. ಗಿರೀಶ್ ಕಾಸರವಳ್ಳಿಯವರನ್ನು ನಾನು ಮಿತ್ರ ವಸುಧೇಂದ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ದರಿಂದ ಅವರನ್ನು ಐಡೆಂಟಿಫೈ ಮಾಡಿದೆ. ನನ್ನ ಪಕ್ಕದಲ್ಲಿ ಕೂತವರು ಯಾರೋ ದೊಡ್ಡ (ಗಾತ್ರದಲ್ಲೂ) ಜನ ಐ ಮೀನ್ ಫೇಮಸ್ personality ಇದ್ದರೋ ಏನೋ. ಫೋಟೊಗ್ರಾಫರ್ಸ್ ಬಂದು ಫೋಟೊ ತೆಗೆದದ್ದೆ ತೆಗೆದದ್ದು. ಅವರು ಯಾರು ಅಂತ ನನಗೆ ನಿಹಾಗೆ ತಿಳಿಯಲಿಲ್ಲ ಆದರೆ ಫೋಟೊಗಳ ಫ್ಲಾಶ್ ಕಣ್ಣುಗಳನ್ನು ಕೆಲವು ಕ್ಷ್ಣಣಗಳ ಕಾಲ ಕುರುಡಾಗಿಸಿದ್ದು ನಿಜ. ಸಿಕ್ಕಾಪಟ್ಟೆ ಮುಜುಗರ ಕೂಡ ಆಯ್ತು. :-(.( ಗಾಂಧೀಜಿಯವರನ್ನು ಶೂಟ್ ಮಾಡುವ ಸೀನ್ ಗೆ ಸಜ್ಜಾಗಿಸುತ್ತ ಅವರ co-actor ಗಳು ಅವರಿಗೆ get ready to be shot ಅಂದಾಗ ನಾನು ಎಲ್ಲಿದ್ದೇನೆ ಎಂಬ ಪರಿವೆಯಿಲ್ಲದೇ good one ಅಂದೆ ಗಟ್ಟಿಯಾಗಿ. ಪಕ್ಕದಲ್ಲಿದ್ದವರ ಬಿಳಿ ಹಲ್ಲು ಮಾತ್ರ ಕಾಣ್ಸಿತು ಅವರು ನನ್ನ ಉದ್ಘಾರ ಕೇಳಿ ನನ್ನ ಕಡೆ ಹೊರಳಿದಾಗ. :-))
ನಟಿ ತಾರಾ ಅವರು ಸಿನಿಮಾ ಉದ್ಘಾಟನೆ ಮಾಡಿ ಒಮ್ಮೆ ಸುತ್ತಲೂ ನೋಡಿ, 'ಸಿನಿಮಾ ಈ ಮೊದಲೇ ನೋಡಿದವರು ದಯವಿಟ್ಟು ಹೊರಗೆ ಬನ್ನಿ, ಹೊರಗಡೆ ಅಲ್ಲಿ ಎಷ್ಟೋ ಜನ ಕೂರ್ಮಾವತಾರ ನೋಡಲು ನಿಂತಿದ್ದಾರೆ ಪಾಪ' ಅಂದ್ರು. ಸಿನಿಮಾ ಶುರು ಆದ ಮೇಲೆ ಹೊರಗೆ ನಿಂತವರಿಗೆ ಒಳಗೆ ಬಿಟ್ಟಿದ್ದರಿಂದ ಅವರೆಲ್ಲ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡಿದರು. ನನಗೆ ನಿಹಾ ಕೆಲ ಅಂಶ ಬಿಟ್ಟರೆ ಈ ಸಿನಿಮಾ ನಿಜಕ್ಕೂ ಇಷ್ಟ ಆಯ್ತು.
ಗಾಂಧಿಜಿಯವರನ್ನು ಹೋಲುವ, ನಿವೃತ್ತಿಯ ಅಂಚಿನಲ್ಲಿರುವ ಆನಂದರಾವ್ ಅವರಿಗೆ ಆಕಸ್ಮಿಕವಾಗಿ ಟಿ.ವಿ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಅವರಿಗದು ಅಷ್ಟು ಇಷ್ಟವಿರುವುದಿಲ್ಲವಾದರೂ ಮಗ ಹಾಗು ಅವನ ಸಂಸಾರದ ಒತ್ತಾಯದ ಒತ್ತಡಕ್ಕೆ ಸಿಲುಕಿ ಒಪ್ಪಿಕೊಳ್ಳುತ್ತಾರೆ.
.ಚಿತ್ರದ ಮೊದಲ ಸೀನ್ ನಲ್ಲಿ ಭಾರತ ವಿಭಜನೆಗೊಳ್ಳುವುದು. ಅದರಲ್ಲಿ ಗಾಂಧೀಜಿಯವರನ್ನು ದು:ಖ ತಪ್ತರಾನ್ನಾಗಿಸಿ portray ಮಾಡುವಲ್ಲಿ ಪಾತ್ರ ಮಾಡುತ್ತಿರುವ ಆನಂದ ರಾವ್ ವಿಫಲರಾಗುತ್ತಾರೆ. ಕೊನೆಗೆ ಡೈರ್ ಕ್ಟರ್ ನಿಮ್ಮ ಪತ್ನಿಯ ಸಾವನ್ನು ನೆನಪಿಸಿಕೊಳ್ಳಿ ಅಂತ ಸಲಹೆ ನೀಡುತ್ತಾನೆ. ಯಾವ ತರಹದ ಇಮೋಷನ್ಸ್ ತೋರಿಸಲಿಕ್ಕಾಗದಾದಾಗ ಡೈರೆಕ್ಟರ್ ಅವರಿಂದ' ಭಾವನೆಗಳಿಲ್ಲದನು ನಾಯಿಗಿಂತ ಕಡೆ' ಎಂದು ಛೀ ಮಾರಿ ಹಾಕಿಸಿಕೊಳ್ಳುತ್ತಾರೆ. ಆಗ ತಾನು ತನ್ನ ಪತ್ನಿಗೆ ಎಷ್ಟು ಅನ್ಯಾಯ ಮಾಡಿದೆ, ಕ್ಯಾನ್ಸರ್ ನಿಂದ ಆಕೆ ಸಾಯುವಾಗ ತಾನು ಮಾಡಿದ ಅಸಡ್ಡೆ ನೆನಪಿಸಿಕೊಂಡು,'ಛೆ ನಾನು ನಾಯಿಗಿಂತ ಕಡೆ' ಅಂತ ದು:ಖ್ಹ ವಿಹ್ವಲರಾಗಿ ಅವರ ಜೀವನ ಹೊಸ ತಿರುವನ್ನು ಪಡೆಯುತ್ತದೆ.
ತನ್ನಿಂದ ಅಭಿನಯ ಸಾಧ್ಯವಾಗುತ್ತಿಲ್ಲ ಅಂದಾಗಲೆಲ್ಲ ಅವರನ್ನು ಪ್ರೇರೆಪಿಸುವ ಹಲವಾರು ಘಟಣೆಗಳು...ಹೀಗೆ ಸಾಗುತ್ತದೆ ಸಿನಿಮಾ. ಪಾತ್ರ ಮಾಡ್ತಾ, ಗಾಂಧಿಜಿಯವರ ಬಗ್ಗೆ ಪುಸ್ತಕ ಓದ್ತಾ ತಾವೇ ಗಾಂಧಿಜಿಯಾಗುವಷ್ಟು ಕೊನೆಗೆ ಪಾತ್ರದಲ್ಲಿ ತಲ್ಲೀನರಾಗುತ್ತಾರೆ. ಸೀರಿಯಲ್ ಜನಪ್ರಿಯವಾಗತೊಡಗಿದಂತೆ ಅವರ ಮಿತ್ರರು ಪರಿಚಯದವರು ಅಕ್ಕಪಕ್ಕದವರೆಲ್ಲ ರಾಯರಲ್ಲಿ ಗಾಂಧೀಜಿಯನ್ನು ಕಾಣ ಬಯಸಿ ಅವರಿಗೆ ಬೇಕಾದ ಬದಲಾವಣೆಗಳನ್ನು ಆನಂದ ರಾಯರಿಂದ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಕ್ರಮೇಣ ರಾಯರಿಗೆ ಗಾಂಧೀ ತತ್ವ ಪಾಲಿಸುವಲ್ಲಿ ತನ್ನ ಇತಿ ಮಿತಿಗಳೆಲ್ಲಾ ಅರಿವಾಗುತ್ತಾ ಹೋದಂತೆ ಅವರು ಹಲವು ರೀತಿಯ ತಲ್ಲಣ ಹತಾಶೆಗಳಿಗೆ ಒಳಗಾಗುತ್ತಾ ಸಾಗುತ್ತಾರೆ. ಮನೆಯ ಕಷ್ಟ ಕೋಟಲೆಗಳಿಂದ ಸಮಾಧಾನ ಹೊಂದಲು ಕಸ್ತೂರ್ಬಾ ಪಾತ್ರ ಮಾಡುತ್ತಿರುವವರ ಸುಶೀಲಾ ಅವರ ಸ್ನೇಹ ಬಯಸಿ ಅವರನ್ನು ಆಗಾಗ ಭೇಟಿ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ. ಕೊನೆಗೆ ಮಗ ದುಡ್ಡಿನ ಅವ್ಯವಹಾರದಲ್ಲಿ ಸಿಲುಕಿ ಜೈಲ್ ಸೇರುತ್ತಾನೆ. ಜೈಲ್ ನಿಂದ ಹೊರಬರಬೇಕಾದರೆ ಲಂಚ ಕೊಡಬೇಕಾಗುತ್ತದೆ. ಆಗ ಆನಂದ ರಾಯರು ಏನು ನಿರ್ಧಾರ ತಳೆಯುತ್ತಾರೆ? ಹ್ಯ್ವಾಯ್ ಪೂರ್ತಿ ಸಿನಿಮಾದ ಬಗ್ಗೆ ಇಲ್ಲೇ ಹೇಳಿ ಬಿಟ್ಟರೆ ನೀವು ನೋಡುವುದು ಯಾವಾಗ. ಒಳ್ಳೆಯ ಸಿನಿಮಾ ಬಂದಾಗ ಖಂಡಿತ ಮಿಸ್ ಮಾಡಬೇಡಿ.
ಕೂರ್ಮಾವತಾರ ಟೈಟಲ್ ಬಗ್ಗೆ ಗೊತ್ತಾಗಲಿಲ್ಲ. ಸಂಸ್ಕೃತದ ಕೂರ್ಮ ಅಂದರೆ ಆಮೆ. ಆನಂದರಾಯರ ಮೊಮ್ಮಗನ ಬಳಿ ಒಂದು ಆಮೆ ಇರುತ್ತೆ ನಿಜ. ಮತ್ತು ಕೂರ್ಮಾವಾತರ ವಿಷ್ಣುವಿನ ಎರಡನೆ ಅವತಾರ. ಸತ್ಯಯುಗದಲ್ಲಿ, ಸಮುದ್ರ ಮಥನದ ವೇಳೆ ಮಂದಾರ ಪರ್ವತ ಕಡೆಗೋಲಾದರೆ, ನಾಗ ವಾಸುಕಿ ಹಗ್ಗ ಆಗುತ್ತಾನೆ. ಆದರೆ ಪರ್ವತ ಸುರ ಅಸುರರ ಕಡೆಯುವ ವೇಗ ತಾಳಿಕೊಳ್ಳದೆ ಕುಸಿಯಲಾರಂಭಿಸುತ್ತದೆ ಆಗ ವಿಷ್ಣು ಆಮೆಯ ಅವತಾರ ತಾಳಿ , ಮಂದಾರ ಪರ್ವತಕ್ಕೆ ಬೆನ್ನು ಕೊಡುತ್ತಾನೆ. ಅಂದರೆ ಗಾಂಧಿತತ್ವಗಳನ್ನು ಪರಿಪಾಲಿಸುವುದರಿಂದ ಕೆಟ್ಟು ಹೋಗುವ ಸಮಾಜವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದೆಂದು ಇದರ ಅರ್ಥ ಅಂತ ಅಂದುಕೊಳ್ಳಬಹುದೇ?? ಕುಂಬಾರ ವೀರಭದ್ರಪ್ಪನವರು ಬರೆದ ಕತೆ 'ಕೂರ್ಮಾವತಾರ'. ಅದೇ ಹೆಸರಿನ ಚಿತ್ರ. ಪುಸ್ತಕ ಇನ್ನೂ ಓದಿಲ್ಲ. ಓದಬೇಕೆನಿಸಿದೆ. ಮುಂದಿನ ಸಲ ಆಕೃತಿಗೆ ಹೋದಾಗ ಈ ಪುಸ್ತ್ಕಕದ ಹೆಸರು ನನ್ನ ಲಿಸ್ಟ್ ನಲ್ಲಿದೆ.
on a scale of 1 to 5 i give this movie 3.5 score. ಸ್ವಲ್ಪ ಎಡಿಟಿಂಗ್ ಬಿಗಿ ಮಾಡಿದಿದ್ರೆ ಈ ಸಿನಿಮಾಗೆ ನಾನು ಆಲ್ಮೋಸ್ಟ್ ಐದರಲ್ಲಿ ಐದು ಕೊಡುತ್ತಿದ್ದೆ. :-) ;-)
ಐಸಾಕ್ ಥಾಮಸ್ ಕೊಟ್ಟುಕಾಪಳ್ಳಿಯವರ ಸಂಗೀತ ಹಿತವಾಗಿದೆ.
ಮನೆಗೆ ಬಂದ ಮೇಲೆ ಮಿತ್ರ ರಘು ಬರೆದ ಕೂರ್ಮಾವತಾರ ವಿಮರ್ಶೆ ಓದಿದೆ. ಅವರ ಪರ್ಮಿಶನ್ ತೆಗೊಂಡು ಅವರ ವಿಮರ್ಶೆಯ ಲಿಂಕ್ ಕೆಳಗೆ ಕೊಟ್ಟಿದ್ದೇನೆ. ನೀವೂ ಓದಿ. ತುಂಬ ಚೆಂದ ಬರೀತಾರೆ ಅವರು. :-) ಥ್ಯಾಂಕ್ಸ್ ರಘು.
http://raghuapara.blogspot.in/ 2012/01/blog-post.html
ಎರಡು ದಿನಗಳ ನಂತರ ಇನ್ನೊಂದು ಸಿನಿಮಾ ಹಾಲ್ ಪ್ರವೇಶಿಸುವ ಮುನ್ನ ನಮ್ಮ ಸಾಲಿನಲ್ಲಿ ನಿಂತಿದ್ದ ಹಿರಿಯರನ್ನು ಎಲ್ಲೋ ನೋಡಿದ್ದೇನೆ ಅನ್ನಿಸ್ತು. ನೆನಪಾಗಲಿಲ್ಲ. ನಿಹಾ ಬಳಿ 'ಥ್ಯಾಟ್ ಗ್ರಾಂಡ್ ಪಾ ಲುಕ್ಸ್ ಫಮಿಲಿಯರ್' ಅಂದೆ. ಅವಳೂ ಹೂಂ ಅಂದ್ರೂ ಯಾರು ಅಂತ ಗೊತ್ತಾಗಲಿಲ್ಲ. ಆಮೇಲೆ ಸಿನಿಮಾ ಹಾಲ್ ಒಳಗೆ ಹೋಗ್ತಾ ಥಟ್ ಅಂತ ಫ್ಲಾಶ್ ಆಗಿ 'hey it's Gandhiji'' ಅಂತ ಜೋರಾಗಿ ಕಿರುಚಿದೆ. :-) :-)

http://raghuapara.blogspot.in/

3 comments:
ಈ ಸಾರ್ತಿ ಸಿನೆಮಾ ಉತ್ಸವ ಬಂದಾಗ ನಮಗೂ ಹೇಳಿ.
ತುಂಬಾ ಕನ್ನಡ ಸಿನೆಮಾಗಳು ಕೂಡ ಚೆನ್ನಾಗಿವೆ :)
ಕೂರ್ಮಾವತಾರ ನೋಡಬೇಕು ಅನಿಸ್ತಾ ಇದೆ.
Sure Swarna!! thanks
@ Rajesh!! ಅವಕಾಶ ಆದ್ರೆ ಖಂಡಿತ ಕೂರ್ಮಾವತಾರ ನೋಡಿ.
:-)
ಮಾಲತಿ ಎಸ್.
Post a Comment