December 30, 2014

ಮಸಾಲೆದೋಸೆಗೆ ಕೆಂಪು ಚಟ್ನಿ

ಈ ರುಚಿಕರವಾದ ಟೈಟಲ್ ನ ಶ್ರೇಯ ಬರಹಗಾರರಾದ ಗಿರೀಶ ರಾವ್ ಹತ್ವಾರ್ ಇವರಿಗೆ ಸಲ್ಲುತ್ತದೆ. (ಅವರ ಇತ್ತೀಚಿಗಿನ ಎರಡು ಪುಸ್ತಕಗಳು ’ಮಸಾಲ್ ದೋಸೆಗೆ ಕೆಂಪು ಚಟ್ನಿ” ಮತ್ತು”ಎಲ್ಲಾನೂ ಮಾಡುವುದು ಹೊಟ್ಟೆಗಾಗಿ’ )
ಮುಂಬೈ ನ  ನಮ್ಮ ಮನೆಯಲ್ಲಿ ಮಸಾಲ್ ದೋಸೆಗೆ ಕೆಂಪು ಚಟ್ನಿ ಮಾಡದಿದ್ದರೆ ಅದು ಮಸಾಲೆ ದೋಸೆನೆ ಅಲ್ಲ. ಬೇರೆಯವರ ಮನೆಗಳಿಗೆ ಹೋದಾಗ ಅವರು ಮಸಾಲೆ ದೋಸೆ ಅಂತ ನಮಗೆ ಕೊಟ್ಟರೆ, ಅದರಲ್ಲಿ ಕೆಂಪು ಚಟ್ನಿ ಇಲ್ಲದಿದ್ದಲ್ಲಿ ನಾವು ಅದನ್ನು ದೋಸೆ ಪಲ್ಯ ಅಂತ ಹೆಸರಿಡುತಿದ್ದೆವು. ನಾವು ಚಿಕ್ಕವರಿರುವಾಗ ಹೋಟಲ್ ಗೆ ಹೋಗುತ್ತಿದ್ದದ್ದು ಅತೀ ಅಂದರೆ ಅತಿ ವಿರಳ, ಅದೂ ಪರ ಊರಿಗೆ ಹೋದಾಗ ಅದರಲ್ಲೂ ಆ ಊರಿನಲ್ಲಿ ನೆಂಟರಿಷ್ಟರು ಇಲ್ಲದಿದ್ದಾಗ ಮಾತ್ರ ಅನಿವಾರ್ಯವಾಗಿ ಹೋಟಲ್ ನ ಮೊರೆ ಹೊಕ್ಕುತ್ತಿದ್ದೆವು. ಟ್ರೈನ್ ನಲ್ಲಿ ದೂರದ ಪ್ರಯಾಣ ಆದರೆ ಹುರಿದ ಅವಲಕ್ಕಿ, ಮಂಡಕ್ಕಿ, ಕುರುಕುಲು ತಿಂಡಿಗಳು ಇರುತ್ತಿದ್ದವು. ಅಮ್ಮನ ಒಬ್ಬ ಅಣ್ಣ(ಅಮ್ಮನಿಗೆ ಮೂರು ಜನ ಅಣ್ಣಂದಿರು ಒಬ್ಬಳು ಅಕ್ಕ..ಅಮ್ಮ ಕೊನೆಯವರು) ಓದು ಹತ್ತದೆ ಅಜ್ಜನ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋಗಿ ಯಾರೋ ಅಡಿಗೆಯವರಿಗೆ ಎಸಿಟೆಂಟ್ ಆಗಿದ್ದರಂತೆ. ಆಮೇಲೆ ನಮ್ಮಜ್ಜ ಅವನನ್ನು ಹುಡುಕಿಕೊಂಡು ತಂದು ಅಲ್ಲೇ ಊರಲ್ಲಿ ಕೆಲಸಕ್ಕೆ ಸೇರಿಸಿದರಂತೆ. ಮಾಮನಿಂದ ಆಗ ಮನೆಯ ಹೆಂಗಸರು ಹಲವಾರು ಹೋಟಲ್ ನಲ್ಲಿ ಬಡಿಸುವಂತಹ ತಿಂಡಿಗಳನ್ನು ಇನ್ಕ್ಲೂಡಿಂಗ್ ಮಸಾಲ್ ದೋಸೆ, ಕಲಿತಿದ್ದಂತೆ.
ಉಳಿದಂತೆ ನಮ್ಮ ಮನೆಯವರಿಗೆ ಹೋಟಲ್ ಗೆ ಹೋಗಿ ತಿನ್ನುವ ರುಚಿ ಹತ್ತಿದ್ದು ನನ್ನ ಮದುವೆಯಾದ ಮೇಲೆ ಶ್ರೀಕಾಂತ್ ರಾಯರ ದೆಸೆಯಿಂದ. ಈ 27 ವರ್ಷಗಳಲ್ಲಿ ನಾವು ಸುತ್ತಿದ ಊರು ಹೋಟಲ್ ನಲ್ಲಿ ತಿಂದಿದ್ದಕ್ಕೆ ಲೆಕ್ಕವೇ ಇಲ್ಲ.
ನಮ್ಮ ಅಮ್ಮನ ಅಡುಗೆಯ ರುಚಿ ಅಂದ್ರೆ ರುಚಿ. ಆದರೆ ಮೂರು ಐಟಮ್ ಅಮ್ಮನಿಗಿಂತಲೂ ನಾನು ಹೆಚ್ಚು ರುಚಿಕರವಾಗಿ ಮಾಡುತ್ತೇನೆ. ಒಂದು ಬಾಂಬೆ ಪಾವ್ ಭಾಜಿ, ಕಾಸಿದ ತುಪ್ಪ ಮತ್ತು ಮಸಾಲೆ ದೋಸೆ.

ಅಪ್ಪ ಬ್ಯಾಂಕ್ ನಲ್ಲಿದ್ದರಿಂದ ಹಲವಾರು ಕಡೆ ವರ್ಗ  ಆಗುತ್ತಿತ್ತು. ನಾನು ಮುಂಬೈನಲ್ಲಿ ಅಜ್ಜನ ಬಳಿಯಿದ್ದರೂ ಬೇಸಿಗೆ ರಜೆಯಲ್ಲಿ ಅಪ್ಪ ಅಮ್ಮ ಇದ್ದ ಕಡೆ ಹೋಗುತ್ತಿದ್ದೆ. ಹಾಗೆ ಒಂದು ಸಲ ಬಿಹಾರ್ ನಲ್ಲಿದ್ದರು. ಅವರು ಅಲ್ಲಿದ್ದಾಗ ಭೀಕರ ಪ್ರವಾಹ ಬಂದು ಜನ ಜೀವನ ಅಸ್ತ್ಯ ವಸ್ತ್ಯ ವಾಗಿತ್ತಂತೆ. ಅಪ್ಪನ ಬ್ಯಾಂಕ್ ಕ್ವಾರ್ಟರ್ಸ್ (ಇಡೀ ಮನೆ ಇದ್ದರೂ ಅದಕ್ಕೆ quarter ಯಾಕಂತಾರೆ ಅದೂ plural ನಲ್ಲಿ??!!) ಸ್ವಲ್ಪ ಉಬ್ಬು ಪ್ರದೇಶದಲ್ಲಿದ್ದರೂ ಮನೆಯಿಂದ ಹೊರಗಡೆ ಕಾಲಿಡಲಾಗದಷ್ಟು ನೀರು ಹಾಗೂ ನೀರಿನ ಸೆಳೆತ ಇತ್ತಂತೆ. ಆಗ ಹೆಲಿಕಾಪ್ಟರ್ ನಲ್ಲಿ ಊಟದ ಪಾರ್ಸೆಲ್ ಮನೆಯ ತಾರಸಿ ಮೇಲೆ ಎಸೆದು ಹೋಗುತ್ತಿದ್ದರಂತೆ, ಆರ್ಮಿಯವರು.  ಇದು ನಡೆದು ಕೆಲ ಸಮಯದ ನಂತರ ನಾನು ಅವರಲ್ಲಿಗೆ ಹೋಗಿದ್ದೆ. ಆಗ ಪ್ರವಾಹಪೀಡಿತರಿಗಾಗಿ ದುಡ್ಡು ಒಟ್ಟು ಮಾಡಲು (ಫ಼್ಲಡ್ ರಿಲೀಫ್ ಫಂಡ್) ಒಂದು ಫೆಸ್ಟ್ ಅನ್ನು ರೋಟರಿಯವರು ಪ್ರಾಯೋಜಿಸಿದರು . ನಮ್ಮ ತಂದೆ ಆಗ ರೋಟರಿ ಮೆಂಬರ್ ಆಗಿದ್ದರು. ಬೇರೆ ಬೇರೆ ತಿಂಡಿ ಸ್ಟಾಲ್ ಇಟ್ಟು ಅಲ್ಲಿ ಕಲೆಕ್ಟ್ ಆದ ದುಡ್ಡನ್ನು ಫ಼್ಲ್ಲಡ್ ರಿಲೀಫ್ ಫ್ಂಡ್ ಗೆ ಕೊಡುವುದು ಮತ್ತು ಯಾರು ಹೆಚ್ಚು ಸೇಲ್ಸ್ ಮಾಡ್ತಾರೆ ಅವರಿಗೊಂದು ಪ್ರೈಜ಼್. 
ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ. ನಮ್ಮ ಮಿಡಿಯಂ ಸೈಜ್ ರುಬ್ಬೋ ಕಲ್ಲಲ್ಲಿ (ಬಿಹಾರ್ ಗೆ ನಮ್ಮ ಸಾಮಾನು ಸಾಗುಸುವವರು ನಮ್ಮ್ ರುಬ್ಬೋಕಲ್ಲು ನೋಡಿ ನಕ್ಕಿದ್ದೆ ನಕ್ಕಿದ್ದಂತೆ. ಶಿವಲಿಂಗ ಕೂಡ ಅಂದಿದ್ದುಂಟು.ಅವರು ರುಬ್ಬಲು ಬೇರೆ ಮಾದರಿಯ ಕಲ್ಲು(pestle and mortar)  ಉಪಯೋಗಿಸುವುದು ಮತ್ತು ತೆಂಗಿನಕಾಯಿಯ ಉಪಯೋಗ ಎಲ್ಲ ನಿಲ್) ಮೂರು ನಾಲ್ಕು ಸಲ ರುಬ್ಬಿ ದೊಡ್ಡ ದೊಡ್ಡ ಸ್ಟೀಲ್ ಪಾತ್ರೆಯಲ್ಲಿ ಹಾಕಿದರು. ಮರುದಿನ ಮುಚ್ಚಳ ಹಾಕಿ ಅದಕ್ಕೆ ಬಟ್ಟೆ ಕಟ್ಟಿದರು. ಆಕಸ್ಮಾತ್ ಹಿಟ್ಟು ತುಳುಕಿದರು ಕಾರ್ ನಲ್ಲಿ ಬೀಳಲ್ಲ ಅಂತ.  ಬೆಳಿಗ್ಗೆ ಬೇಗ ಎದ್ದು ಆಲೂಗಡ್ಡೆ -ನೀರುಳ್ಳಿ ಪಲ್ಯ, ಕೆಂಪು ಚಟ್ನಿ ಮಾಡಿದರು. ದೋಸೆ ಹುಯ್ಯಲು ಕಾವಲಿ, ಸುಟ್ಟುಗ, ಚಟ್ನಿ ಗೆ ಬೇಕಾದ ಸೌಟುಗಳು, ಮತ್ತು ಗ್ಯಾಸ್ ಕಟ್ಟೆ-ಸಿಲಿಂಡರ್....ಅಂತೂ ಒಂಬತ್ತು ಗಂಟೆಗೆ ನಾವೆಲ್ಲ ಹೊರಟೆವು. ಅಪ್ಪ ಇದ್ದ ಊರಿನ ಹೆಸರು ’ಆರಾ’ (Arrah) ಊರಿನಿಂದ ಸುಮಾರು ದೂರ ಇತ್ತು ಫೆಸ್ಟ್ ನಡೆಸುವ ಜಾಗ. ಅಲ್ಲಿ ನೋಡಿದರೆ ಅದು ದೊಡ್ಡ  ಮೈದಾನ. ಆಗಲೇ ಹಲವಾರು ಸ್ಟಾಲ್ ಗಳು ತಿಂಡಿ ಸರಬರಾಜು ಶುರು ಮಾಡಿದ್ದರು. ಕೂಪನ್ ಎಲ್ಲ ಎಂಟ್ರೆನ್ಸ್ ನಲ್ಲೇ ತೆಗೋಬೇಕಿತ್ತು. ಬೇರೆ ಬೇರೆ ತಿಂಡಿಗಳಿಗೆ ಬೇರೆ ಬೇರೆ ಧಾರಣೆಯ ನ ಕೂಪನ್ ಗಳು, ಆಟ ಕ್ಕೂ ಕೂಪನ್ ಗಳು.  ಆಮೇಲೆ ಅಮ್ಮ ದೋಸೆ ಮಾಡಿದ್ದೆ ಮಾಡಿದ್ದು. ಬೆವರು ಸುರಿಸ್ತಾ ಇದ್ರು. ಬಿಹಾರ್ ನಲ್ಲಿ ಕ್ಲೈಮೆಟ್ extreme. ಚಳಿಗಾಲದಲ್ಲಿ ಸಖತ್ ಚಳಿಯಾದ್ರೆ, ಬೇಸಿಗೆಯಲ್ಲಿ ಸ್ನಾನಕ್ಕೆ ಉಪಯೋಗಿಸುವ ನೀರಿಗಿಂತ ಜಾಸ್ತಿ ಬೆವರು ಮೈನಿಂದ ಹೋಗುತ್ತಿತ್ತು. ಅಪ್ಪ ಅಂತೂ ಕರ್ಚೀಫ್ ನಿಂದ ಬೆವರು ವರೆಸಿ ಕರ್ಚೀಫ್ ಅನ್ನು ಹಿಂಡುತ್ತಿದ್ದರು. ಪವರ್ ಕಟ್ ಬಗ್ಗೆ ಮಾತಾಡೋದೆ ಬೇಡ. ಮತ್ತು ಅಪ್ಪನ ಆಫಿಸ್ ಗೆ ಬಂದು ಅಪ್ಪನಿಗೆ ರೋಪ್ ಹಾಕುವವರಿಗಂತೂ ಏನೂ ಕಡಿಮೆಯಿರಲಿಲ್ಲ. ಯಾವಾಗ ಗಲಾಟೆ ಶುರು ಆಗುತ್ತಂತ ಹೇಳಲಿಕ್ಕೂ ಬರ್ತಿರಲಿಲ್ಲ. ಹಾಗಿದ್ದವು ಆ ದಿನಗಳು. ಅಪ್ಪ ಮನೆಗೆ ಬರುವುದು ಸ್ವಲ್ಪ ವಿಳಂಬ ಆದ್ರೂ ಅಮ್ಮ ಹೆದರಿಕೊಳ್ಳುತ್ತಿದ್ದರು. ಮೂರು ವರೆ ವರ್ಷ ಇದ್ರು ಅಪ್ಪ ಅಲ್ಲಿ. ನನಗಂತೂ ರಜೆಯಲ್ಲಿ ಹೋದಾಗ ಸೊಳ್ಳೆ ಕಚ್ಚಿ ಅದರಿಂದ ಎಲರ್ಜಿಯಾಗಿ ಇಂಜೆಕ್ಷನ್ ಚುಚ್ಚಿಸಿಕೊಳ್ಳೋದೆ ಆಯ್ತು. ಆದ್ರೂ ಪಟ್ನಾ ಸಿಟಿ  ನಳಂದಾ, ಸಾರನಾಥ್ ಗೆ ಮತ್ತು ರೋಟರಿ ಟೀಮ್ ನೊಂದಿಗೆ ನೇಪಾಲ್ ಎಲ್ಲ ಹೋಗಿ ಬಂದಿದ್ದೆವು. ಫೋಟೊಗಳು ಈಗಲೂ ಇವೆ ಅಮ್ಮನ ಮನೆಯಲ್ಲಿ.

(continued...)ಅಮ್ಮ ಬೆವರು ಸುರಿಸ್ತಾ ದೋಸೆ ಮಾಡಿದ್ದೆ ಮಾಡಿದ್ದು. ಕೆಲವರು ತಿಂದು ಪುನ: ಕೂಪನ್ ತೆಗೊಂಡು ಬರ್ತಿದ್ದರು. ಭಾಭಿ ಡೋಸಾ ಬಹುತ್ ಅಚ್ಚಾ ಹುವಾ ಹೈ ಅಂತ. ಸಂಜೆ ಆಗ್ತಾ ಮೊದಲಿಗೆ ಚಟ್ನಿ ಖಾಲಿಯಾಯ್ತು. ಅದೂ ಅಲ್ಲದೆ ಚಟ್ನಿ ಅವರಿಗೆಲ್ಲ ಎಷ್ಟು ಇಷ್ಟ ಆಯ್ತಂದ್ರೆ ಇನ್ನಷ್ಟು ಚಟ್ನಿ ಬಡಿಸಿ ಅಂತ ಕೇಳುತ್ತಿದ್ದರು. ಚಟ್ನಿ ತುಂಬಾ ಖಾರವಾಗಿತ್ತು, ಆದರೆ ಗಮ್ಮತ್ತೆಂದರೆ ನಮ್ಮ ಬಾಜೂ ಸ್ಟಾಲ್ ನಲ್ಲಿ ನಿಂಬೆಹಣ್ಣಿನ ಜ್ಯೂಸ್ ಮಾರುತ್ತಿದ್ದರು. (ಆಕೆಗೆ ಸೆಕೆಂಡ್ ಪ್ರೈಜ್) ಖಾಲಿಯಾದಹಾಗೆ ಫ್ರೆಶ್ ನಿಂಬೆ ಹಣ್ಣು ತಂದು ಪುನ: ಜ್ಯೂಸ್ ಮಾಡ್ತಿದ್ದರಿಂದ ಅದು ದೋಸೆ ತಿನ್ನುವವರಿಗೆ ಅನುಕೂಲವಾಯ್ತು. ಅಲ್ಲೂ ಅಮ್ಮ ತಲೆ ಉಪಯೋಗಿಸಿಕೊಂಡು ಐಸ್ ಸ್ಲಾಬ್ ಒಂದನ್ನು ತಂದು ಅದನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಗಟ್ಟಿ ಕೆಂಪು ಚಟ್ನಿಯ ಬಕೆಟ್ ಇಟ್ಟಿದ್ದರು. ಇಲ್ಲದಿದ್ದರೆ ಆ ಸೆಕೆಗೆ ಚಟ್ನಿ ಮಧ್ಯಾನಕ್ಕೆ ಗೋವಿಂದ ಆಗ್ತಿತ್ತು. ಜಾಣೆ ನಮ್ಮಮ್ಮ. :-) ಚಟ್ನಿ, ಖಾಲಿ ಯಾಗಿ, ಪಲ್ಯವೂ ಖಾಲಿಯಾಯ್ತು. ಇನ್ನೊಂದು ಬದಿಯ ಸ್ಟಾಲ್ ನ ಹೆಂಗಸಿನ ಬಳಿ ಉಪ್ಪಿನಕಾಯಿ ಉಳಿದಿದ್ತ್ತು. ಅದನ್ನು ಅವಳು ಅಮ್ಮನಿಗೆ ಕೊಟ್ಟಳು. ಕೊನೆ ಕೊನೆಗೆ ಜ್ಯಾಮ್ ಕೂಡ ಸಿಕ್ಕಿತು.  ಕೊನೆಗೆ ಅದೂ ಮುಗಿದು ಹೋಯ್ತು. ದೋಸೆ ಹಿಟ್ಟು ಸುಮಾರು ಇತ್ತು. ಎಷ್ಟೊಂದು ಡಿಮಾಂಡ್ ಅಮ್ಮನ ದೋಸೆಗೆ ಅಂದ್ರೆ, ಖಾಲಿ ಡೋಸಾ ಭಿ ಚಲೆಗಾ ಅಂತ ಕೇಳಿಕೊಂಡು ತಿಂದು ಹೋದ್ರು. ಖಾಲಿ ದೋಸೆಗೆ ಮಾತ್ರ ಅಮ್ಮ ಸ್ವಲ್ಪ ಹೆಚ್ಚೆ ಎಣ್ಣೆ (actually ಎಣ್ಣೆ +ಡಾಲ್ಡಾ ಮಿಶ್ರಣ) ಹಾಕಿ ಗರಿಗರಿಯಾಗಿ ದೋಸೆ ಮಾಡಿಕೊಟ್ಟಳು. ಆಮೇಲೆ ಗೊತ್ತಾಯ್ತು ಫೆಸ್ಟ್ ನ ಇನ್ನೊಂದು ಕಂಡಿಷನ್ " ಹೆಚ್ಚು ಸೇಲ್ ಮಾತ್ರವಲ್ಲ ಸಂಜೆ ತನಕ ನಡೆಸಿಕೊಂಡು ಹೋಗುವವರು" ಅಂತಿದ್ದದ್ದು. ನಮ್ಮಮ್ಮನೆ ಹ್ಯಾಂಡ್ಸ್ ಡೌನ್ ವಿನ್ನರ್. ಚ್ಯಾಟ್, ಅವಲಕ್ಕಿ, ದಹಿ ವಡಾ, ಇಡ್ಲಿ ವಡಾ ಮುಂತಾದ , ನನಗೆ ಗೊತ್ತಿಲ್ಲದ ಹಲವಾರು ತಿಂಡಿಗಳ ಸ್ಟಾಲ್ ನೋಡಿದೆ ನಾನು ಆ ದಿನ.
ಈಗಲೂ ನಾವು ರಜೆಯಲ್ಲಿ ಅಮ್ಮನ ಮನೆಯಲ್ಲಿ ಸೇರಿದಾಗ ಒಂದು ದಿನ ಮಸಾಲೆ ದೋಸೆ ಸಂಭ್ರಮ. ಪಲ್ಯ ಹಿಂದಿನ ದಿನ ರಾತ್ರಿನೇ ಮಾಡಿಡುವುದು. ಸಂಜೆ ನಾವೆಲ್ಲ ನಗುತ್ತಾ ಮಾತನಾಡುತ್ತ ನೀರುಳ್ಳಿ ಕಟ್ ಮಾಡಿ ಕೊಡುವುದು.ಚಿಕ್ಕ ಮಕ್ಕಳು ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದುಕೊಡುವುದು ಇತ್ಯಾದಿ. ಕಾಯಿ ತುರಿದು ಫ್ರಿಜ್ ನಲ್ಲಿ ಹಾಕಿಡುವುದು. ಮರುದಿನ ನಾವೆಲ್ಲ ಒಂದು ದೋಸೆ ಹೆಚ್ಚು ತಿಂದು ಹೆಬ್ಬಾವ್ ತರಹಾ ಹೊರಳಾಡ್ತಾ ಇರ್ತೀವಿ. ನಾಲ್ಕೈದು ದೋಸೆ ಹೊಡೆದು, ಹೋಟಲ್ ನಲ್ಲಿ ಒಂದಕ್ಕಿಂತ ಹೆಚ್ಚು ತಿನ್ನಕ್ಕಾಗಲ್ಲ ಅಲ್ವ ಅನ್ನುವ ಕಾನ್ಸ್ ಟೆಂಟ್ ಡೈಲೋಗ್ ಹೊಡೆಯುವುದನ್ನು ಮರೆಯಲ್ಲ. :-)
ನಾನು ಮಾಡುವ ಮಸಾಲೆ ದೋಸೆಗೆ’
ಎರಡು ಹಿಡಿ ಉದ್ದಿನ ಬೇಳೆ, ಎರಡು ಗ್ಲಾಸ್ ಅಕ್ಕಿ, ಒಂದು ಟೇಬಲ್ ಚಮಚ ಕಡ್ಲೇ ಬೇಳೆ, ಎರಡು ಟೀ ಸ್ಪೂನ್ ಮೆಂತೆ, ಒಂದು ಹಿಡಿ ಅವಲಕ್ಕಿ. ಎಲ್ಲವನ್ನೂ ಎರಡು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬುವುದು. ರಾತ್ರಿ ಅರ್ಧ ಟೀ ಸ್ಪೂನ್ ಸಕ್ಕರೆ ಬೆರೆಸಿಡುವುದು. ಮರುದಿನ ಉಪ್ಪು ಹಾಕಿ ತೆಳ್ಳಗೆ ದೋಸೆ ಹುಯ್ಯುವುದು
ಅಲೂಗಡ್ಡೆ ಪಲ್ಯ ಅಂತೂ ಎಲ್ಲರಿಗೂ ಗೊತ್ತು
ಕೆಂಪು ಚಟ್ನಿ ಮಾಡುವ ವಿಧಾನ: ಕಾಯಿ ತುರಿ, ನಾಲ್ಕು ಎಸಳು ಬೆಳ್ಳುಳ್ಳಿ, ಕಾಲು ಟೀ ಸ್ಪೂನ್ ಕೊತ್ತಂಬರಿ ಬೀಜ, ಅರ್ಧ ಇಂಚ್ ಶುಂಠಿ, ಸ್ವಲ್ಪ ಹುಣಸೆ ಹುಳಿ, ಹುರಿದ ಕೆಂಪು ಮೆಣಸು, ಒಂದು ಹಸಿ ಮೆಣಸು, ಉಪ್ಪು ಹಾಕಿ ತರಿತರಿಯಾಗಿ ರುಬ್ಬುವುದು. 
ಶ್ರೀಕಾಂತ್ ಗೆ ಮಾತ್ರ ಈ ಚಟ್ನಿ ಹಿಡಿಸಲ್ಲ. ಅವರಿಗೋಸ್ಕರ ಸಾದಾ ಕಾಯಿ ಚಟ್ನಿ ಮಾಡ್ತೀನಿ. :-)
ನೋಡಿ ಅವರ ಪುಸ್ತಕದ ಟೈಟಲ್ ನಿಂದ ನಾನು ಇಷ್ತು ಬರೆದೆ. 
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

December 15, 2014

ನೌಟಂಕಿಗಳು

( ಇತ್ತೀಚಿಗೆ ಆಫಿಸ್ ಗೆ ಹೋಗಿದ್ದೆ. ಶ್ರೀಕಾಂತ ಆಫಿಸ್ ಗೆ ಯಾವುದೋ ಸಹಿ ಮಾಡಿದ ದಾಖಲೆ ಪತ್ರ ಅರ್ಜೆಂಟ್ ತಲುಪಿಸಬೇಕಿತ್ತು. ಅವರು ಸಹಿ ಮಾಡಿಟ್ಟು ಊರಿಗೆ ಹೋಗಿದ್ದರಿಂದ ನಾನು ಆಫಿಸ್ ಗೆ ಅದನ್ನು ತಲುಪಿಸಬೇಕಾಯ್ತು. ಆಗ ಆಫಿಸ್ ನಲ್ಲಿದ್ದವರು ಯಾಕೆ ಮ್ಯಾಡಂ ಬ್ಲಾಗ್ ಬರೀತಾ ಇಲ್ಲ. ಬಿಸಿ ನಾ ಅಂತ. ಅವರು ನನ್ನ ಬ್ಲಾಗ್ ಓದ್ತಾರೆ ಅಂತ ಖಂಡಿತ ಗೊತ್ತಿರಲಿಲ್ಲ. :-(. ಮೊದಲು ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ ಅಂತ ನೆವ ಇತ್ತು. ಈಗ ಶ್ರೀಕಾಂತ ನನಗೆ ಒಂದು ಸಿಸ್ಟಮ್ ಕೊಡಿಸಿದ್ದೆ ಅಲ್ಲದೆ ಬರಹ ಕೂಡ ಅಳವಡಿಸಿಕೊಟ್ಟಿದ್ದಾರೆ. ಅದಲ್ಲದೆ. ವಾಟ್ಸ್ ಅಪ್ ನಲ್ಲಿ ಯಂಗ್ ಡೈರೆಕ್ಟರ್ ಸ್ ಅವಾರ್ಡ್ ಗೆ ಮಾಡಿದ ಎಡ್ ಗೆ ಮಾಡಿದ ಯೂ ಟ್ಯೂಬ್ ವಿಡಿಯೋ  ಓಡ್ತಾಡ್ತಾ ಇದೆ. ತರಲೆ ಮಕ್ಕಳದ್ದು. ಈ ವಿಷಯ ನೆನಪಾಗಿ ಅದನ್ನು ಬರೆಯುವಾ ಅಂತ ಬಂದೆ.....) ಮೊದಲು ಈ ವಿಡಿಯೋ ನೋಡಿ,


ಶ್ರೀಕಾಂತ ಫ್ರೆಂಡ್ ಮಗ ಅವನು. ಮುಂಬೈನಲ್ಲಿದ್ದಾಗ ನಾನು ಶ್ರೀಕಾಂತ ಶನಿವಾರ/ಭಾನುವಾರ ಅವರ ಜತೆ ಸ್ಪೆಂಡ್ ಮಾಡ್ತಿದ್ದ್ವಿ. ನಾನು ನೋಡಿದಾಗಲೆಲ್ಲ ಅವನ ಅಮ್ಮ ಸ್ಕೇಲ್ ಹಿಡಿದುಕೊಂಡು ಅವನಿಗೆ ಓದಿಸಲಿಕ್ಕೆ ಕೂತಿರುತ್ತಿದ್ದರು. ಅಪ್ಪ ಅಮ್ಮ ಇಬ್ಬರೂ ಬ್ಯಾಂಕರ್ಸ್. ಇವನು ನೋಡಲು ಮುದ್ದು ಮುದ್ದು ಗೊಂಬೆ ತರಹ. ಬಿಳಿ ಬಣ್ಣ, ಕೆಂಪು ಕೆಂಪು ಕದಪು, ಚೆಂದದ ಕಣ್ಣುಗಳಿಗೆ ಚಾಮರದಂತ, ಉದ್ದ ಉದ್ದ ರೆಪ್ಪೆ ಅದರ ಮೇಲೆ ಗುಳಿ ಬಿಳುವ ಕೆನ್ನೆ. ನಾನಂತು ಅವರ ಮನೆಗೆ ಹೋದರೆ ಅವನನ್ನು ರೆಪ್ಪೆ ಮಿಟುಕಿಸದೆ ನೋಡುತ್ತಿದ್ದೆ. ಚೂಟಿ ಚುರುಕು ಎಲ್ಲಾ ಹೌದು. ಆದರೆ ಓದುವುದೆಂದರೆ ಎಲರ್ಜಿ, ಅದರಲ್ಲೂ ಹೋಮ್ ವರ್ಕ್ ಮಾಡುವುದೆಂದರೆ ಶತ ಎಲರ್ಜಿ. ಅವನ ಅಮ್ಮನಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಇಂತದರಲ್ಲೆ ಒಂದು ದಿನ ಶಾಲೆಯಿಂದ ಪೋಷಕರಿಗೆ ಕರೆ ಬಂದಿತಂತೆ. ಅವನ ಅಮ್ಮ ಅಲ್ಲಿಗೆ ಹೋದರೆ ಅವನ ಶಾಲೆಯ ಸಿಸ್ಟರ್, "ಏನಮ್ಮ ನಿಮಗೆ ಮಗು ಸಾಕುವುದು ಕಷ್ಟ ಆಗುತ್ತಿದ್ದರೆ ಜನ್ಮ ಯಾಕೆ ನೀಡುತ್ತೀರಾ" ಅಂತ ಕೇಳಿದರಂತೆ, ಇವರ ಮಾತು ಕೇಳಲು ತಯಾರಿಲಿಲ್ಲವಂತೆ. ಅವನು ಆ ದಿನ ಹೋಮ್ ವರ್ಕ್ ಮಾಡಿರಲಿಲ್ಲವಂತೆ. ಅದಕ್ಕೆ ಮಿಸ್ ಬೈದಾಗ ಅವನು ಅಳುತ್ತಾ, ’ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊಗುತ್ತಾರೆ. ಸಂಜೆ ಅಲ್ಲಿಂದ ಇಬ್ಬರೂ ಕ್ಲಬ್ ಗೆ ಹೋಗುತ್ತಾರೆ. ನಾನು, ಅವರು ಮನೆಗೆ ಬರುವ ತನಕ ಮೆಟ್ಟಿಲ ಮೇಲೆ ಕುಳಿತಿರುತ್ತೇನೆ. ಲೇಟ್ ಆಗಿ ಬರ್ತಾರಾದ್ದರಿಂದ ನಾನು ಮಲಗಿ ಬಿಡ್ತೇನೆ, ಅಪ್ಪ ಅಮ್ಮ ಹೋಡಿತಾರೆ, ಅಂತೆಲ್ಲ ಕತೆ ಕಟ್ಟಿ ಹೇಳಿದ್ದನಂತೆ. ಆಗ ಅವನು ಇನ್ನೂ ಪ್ರೀ ಸ್ಕೂಲ್... ಅವನ ಅಮ್ಮ ಇಲ್ಲ ಸಿಸ್ಟರ್ ಸುಳ್ಳು ಸುಳ್ಳೇ ಹೇಳ್ತಾನೆ. ನಿನ್ನೆ ಹೋಮ್ ವರ್ಕ್ ಇದೆಯಾ ಅಂತ ಕೇಳಿದರೆ ಇಲ್ಲ ಅಂದ...ಅಂತ ಹೇಳೋವಷ್ಟರಲ್ಲಿ ಅವನ ಪ್ರಿನ್ಸಿಪಲ್-ಅದೇ ಸಿಸ್ಟರ್.." ಅವನ ಮುಖ ನೋಡಿ ಅವನು ಸುಳ್ಳು ಹೇಳ್ತಾನಾ? ನೀವೇ ಸುಳ್ಳು ಹೇಳ್ತಿದ್ದೀರಿ ಅಂತ ಜೋರಿನಿಂದ ಇವರ ಬಾಯಿ ಮುಚ್ಚಿಸಿದರಂತೆ. ಇದೆಲ್ಲ ನಡೆಯುವಾಗ ಅವನು ತಣ್ಣಗೆ ಮುಗ್ದ ಕಣ್ಣುಗಳನ್ನು ಪಿಟಿಕಿಸ್ತಾ ಇದ್ನಂತೆ. ಆಮೇಲೆ ನಮಗೆ ಹೇಳಿದಾಗ ನಾವು ನಕ್ಕಿದ್ದೆ ನಕ್ಕಿದ್ದು. ಅಂತೂ ಅವನು ಓದು ಪೂರ್ಣ ಗೊಳಿಸಲಿಲ್ಲ. ಫ್ರೆಂಡ್ ಗರಾಜ್ ನಲ್ಲಿ ಕೆಲಸ ಮಾಡಿ, ಅದರ ಜತೆ ಜಿಮ್ ಗೆ ಹೋಗಿ ಬಾಡಿ ಬಿಲ್ಡಿಂಗ್ ಎಲ್ಲಾ ಮಾಡಿ..ಈಗ ಅವನು ಆಸ್ಟೇಲಿಯಾದಲ್ಲಿ ಎರಡು ಗರಾಜ್ ಒಂದು ಜಿಮ್ ನಡೆಸ್ತಿದಾನೆ. ಭಾರತೀಯ ಮೂಲದ ಬಟ್ ಅಲ್ಲೇ ಹುಟ್ಟಿ ಬೆಳೆದ ಗುಜರಾತಿ ಹುಡುಗಿಯನ್ನು , ಇಲ್ಲೇ ಬೆಂಗಳೂರಿನಲ್ಲೇ ಮದುವೆಯಾಗಿ ಈಗ ಒಂದು ಮಗುವಿನ ತಂದೆ....ವಿಡಿಯೋ ನೋಡಿ ಅವನ ನೆನಪಾಯ್ತು.

ನನ್ನ ತಮ್ಮನ ಮಗಳು ಸ್ಯಾಮಿ
ಅವಳೂ ಪ್ರಿ ಸ್ಕೂಲ್. ಆಗಲೇ  ಹಿಂದುಸ್ತಾನಿ ಸಂಗೀತದಲ್ಲಿ ಅವಳ ವಯಸ್ಸಿಗೆ ಮೀರಿ ಪರಿಣಿತಿ ಹೊಂದಿದ್ದಾಳೆ. ನಮ್ಮ ಮಾತೃ ಭಾಷೆ ಕೊಂಕಣಿ ಜತೆ ಕನ್ನಡ, ಇಂಗ್ಲಿಶ್, ಹಿಂದಿ ಅರಳು ಹುರಿದಂತೆ ಮಾತಾಡ್ತಾಳೆ. ಓದಿನಲ್ಲೂ ತುಂಬಾ ಮುಂದೆ. ಇದರ  ಜತೆ ವೆಸ್ಟರ್ನ್ ಡ್ಯಾನ್ಸ್ ಕೂಡ ಕಲಿತಿದ್ದಾಳೆ. ಪನ್ ಕೂಡ ಮಾಡ್ತಾಳೆ. ಎಲ್ಲಾ ಹೌದು ಆದರೆ ಊಟ ತಿಂಡಿ ವಿಷಯದಲ್ಲಿ ಮಾತ್ರ ರಗಳೆ. ತಿನ್ನೋದೇ ಇಲ್ಲ. ಅವರ ಶಾಲೆಯಲ್ಲಿ ಮಧ್ಯಾಹ್ನದ ಊಟ ಕ್ಲಾಸ್ ರೂಮ್ ನಲ್ಲೇ ಟೀಚರ್ ಎದುರಿಗೆ ಮಾಡಬೇಕು. ಟಿಫಿನ್ ಎಲ್ಲ ಖಾಲಿ ಮಾಡದಿದ್ದರೆ ಟೀಚರ್ ಫನಿಶ್ ಮೆಂಟ್ ಕೊಡುತ್ತಾರೆ. ಆದ್ದರಿಂದ ಮಕ್ಕಳು ಟಿಫನ್ ಬಾಕ್ಸ್ ನಲ್ಲಿದ್ದದ್ದು ತಿಂದೇ ಬರುತ್ತಾರೆ. ಇಂತದ್ದರಲ್ಲಿ ಸ್ಯಾಮಿ ಯ ಕಂಡಿಷನ್...ನನಗೆ ಇಷ್ಟ ಆಗೋ ತಿಂಡಿ ಮಾತ್ರ ಹಾಕಬೇಕು ಅಂತ. ಅವಳಿಗೆ ಇಷ್ಟ ಆಗೋ ತಿಂಡಿ ಅಂದ್ರೆ ನೀರು ದೋಸೆ, ಚಪಾತಿ,ಪೂರಿ ಮತ್ತು ಉದ್ದು ಮೈದಾ ದೋಸೆ, ಅದೂ ಒಂದೇ ಅಂದ್ರೆ ಒಂದು ದೋಸೆ, ಒಂದು ಚಪಾತಿ ಹಾಗೆ. (ಹುಳಿ ಬರಿಸಿದ್ದು for eg ಇಡ್ಲಿ, ದೋಸೆ...ಅದೆಲ್ಲ ತಿನ್ನಲ್ಲ) ನಾವು ಹೋದಾಗ ಒಂದು ದಿನ ಒಂದು ಎಕ್ಸ್ಟ್ರಾ ಚಪಾತಿ ಹಾಕಿದ್ದಳು ಬಾಕ್ಸ್ ನಲ್ಲಿ ಅವಳ ಅಮ್ಮ. ಅವಳು ಬಂದಮೇಲೆ ಅವಳ ಅಮ್ಮ ಅವಳ ಟಿಫಿನ್ ಬಾಕ್ಸ್ ಚೆಕ್ ಮಾಡಿ ವಾಹ್ ಎಲ್ಲಾ ತಿಂದು ಬಂದಿದ್ದಾಳೆ ಅಂತ ಖುಶಿಯಲ್ಲಿದ್ದಳು. ನಾನು- ತಿಂದ್ಯೇನೆ ಅಂತ ಕೇಳಿದರೆ..ಇಲ್ಲ ಮಾಲ್ತ್ಯಕ್ಕ, ಸ್ಕೂಲ್ ಯುನಿಫರ್ಮ್ ಪಾಕೆಟ್ ನಿಂದ ಒಂದು ಚಪಾತಿ ತೆಗೆದು ತೋರಿಸಿ ಅವಳು ನಕ್ಕ ಪರಿಯಿದೆಯಲ್ಲ...priceless and unforgettable.. ಬ್ಲ್ಯಾಕ್ ಮೈಲ್ ಮಾಡುವುದರಲ್ಲಿ ಎತ್ತಿದ ಕೈ. ಅವಳಿಗೆ ಏನಾದರೂ ಕೇಳಿದರೆ ಕೊಡಿಸದಿದ್ದಲ್ಲಿ, ಸಿರಿಯಲ್ ನಲ್ಲಿ ತೋರಿಸೋ ಕ್ಯಾರಕ್ಟರ್ ತರಾ ಅಳ್ತಾ, ’ಗೊತ್ತು ಗೊತ್ತು ನಿಮಗೀಗ ಹೊಸ ಪಾಪು ಬಂದಿದೆಯಲ್ಲಾ? ಅದೂ ಬಿಳಿ ಬಿಳಿ ಬಣ್ಣ ಕೂಡ ಇದೆ ಅದಕ್ಕೆ, ನಾನು ಅಂದರೆ ಅಸಡ್ಡೆ ಎನ್ನುವ ದೊಡ್ಡ ದೊಡ್ಡ ಪದಗಳನ್ನು ಬಳಸ್ತಾಳೆ...ಆಗ ಪೆಚ್ಚು ಮುಖ ಮಾಡಿಕೊಂಡು ನನ್ನ ಬಳಿ ಕಂಪ್ಲೈನ್ ಮಾಡುವ ಸರದಿ ಅವಳ ಅಮ್ಮನದು, ’ನೋಡಿದ್ಯಾ ಮಾಲ್ತಕ್ಕಾ ಹೆಂಗೆ ಮಾತಾಡ್ತಾಳೆ? ಎಲ್ಲಿ ಕಲಿತಾಳೆ ಇದೆಲ್ಲ ನನಗೂ ಗೊತ್ತಿಲ್ಲ..ಅಂತ....
........................................................................................................................................................
ಮಾಲತಿ ಅಕ್ಕ, ನಿನಗೆ ಗೊತ್ತಾ? ನನಗೆ cooking ಅಂದ್ರೆ ಇಷ್ಟ. ನಾಳೆ ನಿನಗೆ ಸ್ಪೆಷಲ್ ಪರಾಠಾ ಮಾಡಿ ತಿನ್ನಿಸ್ತೇನೆ ಅಂತ   ನನ್ನ ತಮ್ಮನ ಐದು ವರೆ ವರ್ಷದ ಮಗಳು ಸ್ಯಾಮಿ  ಅಂದಾಗ, ಎನೋ ಮುದ್ದು ಮುದ್ದಾಗಿ ಹೇಳ್ತಿದ್ದಾಳೆ ಅಂತ, ಆಯ್ತು ಮಗು' ಅಂದೆ. ಆದ್ರೆ ಮರುದಿನ ಅವಳು ಕೊತ್ತಂಬರಿ ಸೊಪ್ಪು stuffed ಪರಾಠಾ ಮಾಡಿ ನಮಗೆ ಕೊಟ್ಟಾಗ ನಿಜಕ್ಕೂ ಬೆರಗಾದೆ.
ಹಿಟ್ಟು ಮಾತ್ರ ಅಮ್ಮ ಕಲಿಸಿಕೊಟ್ಟಿದ್ದು ಮತ್ತು ಗ್ಯಾಸ್ ಆನ್ ಮಾಡಿ ತವಾ ಇಟ್ಟಿದ್ದು. ಉಳಿದದ್ದೆಲ್ಲಾ ಆಕೆನೆ ಮಾಡಿದ್ದಾಳೆ. ಹಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಅದಕ್ಕಿಂತ ಮುಂಚೆ ಅದನ್ನು ಚೆನ್ನಾಗಿ ತೊಳೆದು, ಪರಾಠಾವನ್ನು  almost ಉರುಟಾಗಿ ಲಟ್ಟಿಸಿ, (ನಾನು ಉರುಟು ಚಪಾತಿ ಮಾಡಲು ಕಲಿಯುವಷ್ಟರಲ್ಲಿ ನನಗೆ ಕತ್ತೆಯ ವಯಸ್ಸು ಆಗಿತ್ತು  :-)) ತುಪ್ಪ ಹಾಕಿ (ಅಜ್ಜಿ ಎಣ್ಣೆ ಬೇಡ ತುಪ್ಪ ಕೊಡು ಅದರಿಂದಲೇ Taste  ಬರುವುದು. ) ಚೆನ್ನಾಗಿ ರುಚಿ ರುಚಿಯಾದ ಪರಾಠಾ ತಿನ್ನುವ ಭಾಗ್ಯ ನಮ್ಮದು. ನನ್ನ ಪಾಲಿಂದು ನಾನು ಗಬ ಗಬ ತಿಂದೆ. ಇದು ನಿಹಾರಿಕಾ ತಿನ್ನುವ ಮುಂಚೆ, whatsapp  ನ ಫ್ಯಾಮಿಲಿ ಮೆಂಬರ್ಸ್ ಗೆ ಕಳುಹಿಸಲು ತೆಗೆದ ಚಿತ್ರ.

ಸ್ವಲ್ಪ ಹೊತ್ತು ಬಿಟ್ಟು ಸ್ಯಾಮಿ , ಮಾಲತಿ ಅಕ್ಕ ಹೇಗಾಗಿತ್ತು ಪರಾಠಾ' ಅಂತ ಕೇಳಿದಳು. ನಾನು ತುಂಬಾ ಚೆನ್ನಾಗಿತ್ತು ಅಂದೆ. ಸುಮ್ನೆ ಹೇಳ್ತಿದ್ದಿಯಾ ನಿಜ ಹೇಳಿತ್ತಿದ್ದಿಯಾ?
'ನಿಜ'.
pinky promise
ಎಸ್ ಪಿಂಕಿ ಪ್ರಾಮಿಸ್ ನಾನಂದೆ.
ಅಷ್ಟೆ ಯಾಕೆ ನಾ whatsapp  ನಲ್ಲಿ ಎಲ್ಲರಿಗೂ ಕಳಿಸಿ ಆಯ್ತು.
'ಹೌದಾ'ಎಲ್ಲಿ ತೋರಿಸು', ಏನು comments  ಹಾಕಿದಾರೆ ಅಂತ ಕೇಳ್ತಾಳೆ ಪುಟ್ಟಿ... ಈಗೀನಾ ಮಕ್ಕಳಾ?? ಅಬ್ಬಾ??
...............................................................................................................
ನಮ್ಮ ಮನೆ ಗೃಹ ಪ್ರವೇಶಕ್ಕೆ ಇಲ್ಲಿ ಬೆಂಗಳೂರಿಗೆ ಬಂದಾಗ, ’ಸ್ಯಾಮಿ ನನಗೆ ಎರಡು ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಅವರು ಇವತ್ತು ಬರುತ್ತಿದ್ದಾರೆ, ಅವರಿಗೆ ’ಚಂದಿರ ನಮಗೆ, ದೇವರು ಕೊಟ್ಟ ಪೆಪ್ಪರಮಿಂಟೇನಮ್ಮ" ಹಾಡು ಹೇಳ್ತೀಯಾ ಅಂತ ಕೇಳಿದೆ. ಆಯ್ತು ಹಾಡ್ತೀನಿ ಅಂತ ಒಪ್ಪಿ ಅದರ ಜತೆಗೆ ನಾನು ಅವರಿಗೋಸ್ಕರ ಗ್ರೀಟಿಂಗ್ ಕಾರ್ಡ್ ಕೂಡ ಮಾಡ್ತೇನೆ’ ಅಂದ್ಲು. ಆಯ್ತು ಅಂತಂದೆ. ಆಮೇಲೆ ಗ್ರೀಟಿಂಗ್ ಕಾರ್ಡ್ ಹಿಡಿದುಕೊಂಡು ಬಂದು ಅವರ ಹೆಸರು ಹೇಳು ಇದರ ಮೇಲೆ ಬರೀತೀನಿ ಅಂದ್ಲು. ನಾನು ಎರಡು ಹೆಸರು ಹೇಳಿದೆ. ಅದಕ್ಕೆ ಅವಳು ಕಣ್ಣುಗಳನ್ನು ಇಷ್ಟು ದೊಡ್ಡ ದೊಡ್ಡ ಬಿಟ್ಟುಕೊಂಡು, ಗಟ್ಟಿ ದನಿಯಿಂದ ’ನಿನ್ನ ಫ್ರೆಂಡ್ಸ್ ಬಾಯ್ಸಾ?? (boysಆ) ಅಂತ ಕೇಳಿದ್ದು ನನಗೆ ಒಂದು ಕ್ಷಣ ಶಾಕ್.....ಆಮೇಲ್ ಮಹಾ ನನ್ನ ಮೇಲೆ ಉಪಕಾರ ಮಾಡಿದ ಹಾಗೆ, ’ಹಾಂ ಇರಲಿ ಬಿಡು ಅವರ ಹೆಸರು ಬರೀತೇನೆ’ ಅಂತ ಬರೆದು ಇಟ್ಟು ಕೊಂಡಿದ್ದಳು. ಆದರೆ ನನ್ನ ಬೆಸ್ಟ್ ಫ್ರೆಂಡ್ಸ್ ಬಂದಾಗ ಅವಳು ಊಟ ಮಾಡ್ತಾ ಇದ್ದಳು, ಆಮೇಲೆ ಅವರೆಲ್ಲ ಅವಳ ಚಿಕ್ಕಮ್ಮನ ಮನೆಗೆ ವಿಸಿಟ್ ಕೊಡಲು ಹೋದರು. ರಾತ್ರಿ ಮನೆಗೆ ಬಂದು, ’ಎಲ್ಲಿ ನಿನ್ನ ಫ್ರೆಂಡ್ಸ್? ಹೊರಟು ಹೋದ್ರಾ ಅಂದ್ಲು’. ನಾನು ಹೌದೆಂದೆ....ತುಂಬಾ ಬೇಸರದ ಪೋಸ್ ಕೊಟ್ಟು, ಇರಲಿ ಬಿಡು ಈ ಗ್ರೀಟಿಂಗ್ ಕಾರ್ಡ್ ನಾದ್ರೂ ತಲುಪಿಸು ಅಂತ ಕೊಟ್ಲು.

ನನಗಂತೂ ಅವಳು, ಅವಳ ನೌಟಂಕಿಗಳು ತುಂಬಾ ಇಷ್ಟ. ಅದೂ ಅವಳಿಗೆ ಗೊತ್ತು..ಆದ್ದರಿಂದ  ನಾನಿದ್ದಾಗ ಸ್ವಲ್ಪ ಎಕ್ಸ್ಟ್ರಾ ನೇ ಮಾಡ್ತಾಳೆ.
ಲವ್ ಯು ಸ್ಯಾಮಿ. ಇವತ್ತು ಅವಳು ಶಾಲೆಯಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾಳೆ....

November 12, 2014

ದೊಡ್ಡಪತ್ರೆ/ ಸಾಂಬಾರಬಳ್ಳಿ ತಂಬುಳಿ


ಮಧ್ಯಾಹ್ನ ಊಟಕ್ಕೆ ಅಚಾನಕ್ಕ್ ಆಗಿ ಗೆಸ್ಟ್ ಇದ್ರು. ಹೊಟ್ಟೆ ಸರಿಯಿಲ್ಲದ್ದರಿಂದ ಮೊಸರನ್ನ ಊಟ ಮಾಡಲು ಬಂದವರು. ಈ ತಂಬುಳಿ ಬಗ್ಗೆ , ಅದರ ಔಷಧಿಯ ಗುಣಗಳ ಬಗ್ಗೆ ಹೇಳಿ' ಅಜ್ವಾಯಿನ್ ಪತ್ತೆ ಕಾ ಚಟ್ನಿ' ಅಂದೆ. ಅದಕ್ಕೆ ಬಂದವರು 'ಅರೇ  ಏ ತೋ ಸೇಹತ್ ಕೆ ಲಿಯೇ ಬಹುತ್ ಅಚ್ಚಾ ಹೈ ' ಅಂದಿದಲ್ಲದೆ ನಾನು ಮಾಡಿದ ೫-೬ ಬಗೆಯ ಅಡಿಗೆಯನ್ನು ಊಟ ಮಾಡಿ ಬಾಳೆ ಹಣ್ಣು ತಿನ್ನಲು ಜಾಗ ವಿಲ್ಲಾ ಅಂತ ಪೇಚಾಡಿಕೊಂಡು ಹೋದರು. ( ಇವತ್ತು ಬೆಳಿಗ್ಗೆ ಯಾರಾದರೂ ಊಟಕ್ಕೆ ಬರಬಹುದು ಅನ್ನಿಸಿತ್ತು ಯಾಕೋ ................) :-)

ಬೇಕಾಗುವ ಸಾಮಗ್ರಿ:

4-5 ದೊಡ್ಡಪತ್ರೆ ಎಲೆಗಳು, 8-10 ಕಾಳುಮೆಣಸು, 2 ಟೇಬಲ್ ಸ್ಪೂನ್ ಕಾಯಿ ತುರಿ ,  ಅರ್ಧ ಟೀ ಸ್ಪೂನ್ ಜೀರಿಗೆ, ಸ್ವಲ್ಪ ತುಪ್ಪ, ಹುಣಸೆ ಹುಳಿ , ಉಪ್ಪು, ಮಜ್ಜಿಗೆ.

ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತುಪ್ಪದಲ್ಲಿ ಕಾಳುಮೆಣಸು-ಜೀರಿಗೆ ಹುರಿಯಿರಿ. ಕಾಯಿತುರಿಯಿಂದಿಗೆ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ. ಇದು ಚಟ್ನಿ ಯಾಯಿತು.



ತಂಬುಳಿಗೆ: ಮೇಲಿನ ಮಿಶ್ರಣಕ್ಕೆ ಮಜ್ಜಿಗೆ / ಮೊಸರು ಬೆರೆಸಿ ತಂಬುಳಿ ಮಾಡಿ. ಬೇಕಿದ್ದಲ್ಲಿ ಸಾಸಿವೆ ಜೀರಿಗೆ ಒಗ್ಗರಣೆ ಕೊಡಬಹುದು. ದೇಹಕ್ಕೆ ತಂಪು. ನೆಗಡಿ ಎಲ್ಲ ಆಗಲ್ಲ. ಹಸಿಮೆಣಸಿನ ಕಾಯಿಯ ಬಳಕೆಯಿಲ್ಲದ್ದರಿಂದ ಎಸಿಡಿಟಿ ಇದ್ದವರಿಗೆ ಇದು ಒಳ್ಳೆಯ ಔಷಧಿ
ಟ್ರೈ ಮಾಡ್ತೀರಾ??
:-)
Vikas Hegde ಎಂಬೋ ತಮ್ಮ ಬ್ಲಾಗ್ ಬರಹಗಾರರಿಗೆ ಧಮಕಿ ಹಾಕ್ತಿದ್ದಾನೆ . ಅದಕ್ಕೆ ಅವನ ಗೂಂಡಾಗಿರಿಗೆ ಹೆದರಿ ಈ ಝಟ್ ಪಟ್  but healthy post
( ನನ್ನ ಬ್ಲಾಗ್ ನ ೬ ನೇ ಹುಟ್ಟುಹಬ್ಬ ಕೂಡ ಆಗಿ ಹೋಯ್ತೇ?? ನನಗೆ ಮರತೇ ಹೋಯ್ತು !!! ಛೆ ಒಂದು ಟ್ರೀಟ್ ಮಿಸ್ ಆಗಿ ಹೋಯ್ತು :-)

October 17, 2014

ಪೀಕಲಾಟ (ಸಣ್ಣ ಕತೆ)

ಇವತ್ತು ಪಟ್ಟು ಹಿಡಿದು ಬರೀಲಿಕ್ಕೆ ಕೂತಿದ್ದೇನೆ.  ತಿಂಗಳ ಮೇಲಾಯಿತು ಏನೂ ಬರೆದೆ ಇಲ್ಲ. ವಾಕಿಂಗ್ ಹೋದಾಗ ನೋಡಿದ ದೃಶ್ಯದ ಆಧಾರದ ಮೇಲೆ ಈ ಸಣ್ಣ ಕತೆ ಹೆಣೆದಿದ್ದೇನೆ..ಒಪ್ಪಿಸಿಕೊಳ್ಳುವಂತವರಾಗಿ....:-)
.
.
.
.
.
.ಮನೋರಮಾ ಗಾರ್ಡನ್ ನ ಸುತ್ತು ಹೊಡೆದು ಬರುವಾಗ ಈ ದೃಶ್ಯ ಅವಳಿಗೆ ಎದುರಾಯಿತು. ಅವಳ ಅಮ್ಮ ಒಬ್ಬ ಗಂಡಸಿನ ಜತೆ ಅವ್ಯಾಚ್ಯ ಶಬ್ದಗಳಿಂದ ಜಗಳವಾಡುತ್ತಿದ್ದಳು..’ಏನೋ ನೀನು ನನ್ನ ಮಗಳ ಮಿಂಡ ನಾ? ಏನು ಅವಳ ಜತೆ ನಿನ್ನ ಖುಸುಪುಸು? ನೀವು ಒಟ್ಟಿಗೆ ಇದ್ದದ್ದನ್ನ ನಾನು ನೋಡಲಿಲ್ಲ ಅಂದುಕೊಂಡೆಯಾ ಹೇಗೆ? ಬೋಸುಡಿ ಮಗನೆ..ಅಂದದ್ದು ಮಾತ್ರವಲ್ಲ ಅಲ್ಲೆ ಇದ್ದ ಇಟ್ಟಿಗೆಯನ್ನು ಎತ್ತಿಕೊಂಡಳು ಅವನನ್ನು ಹೊಡೆಯಲು. ಇದೆಲ್ಲ ನೋಡಿ ಮನೋರಮಾ ಓಡು ನಡಿಗೆ ಯಿಂದ ಅವರ ಬಳಿ ಬಂದು, ಅವಳ ಅಮ್ಮ ಕೈ ಎಳೆದಳು , ಆ ಜಾಗ ದಿಂದ ಹೊರಡಲು..ಆದರೆ ಅವಳ ಅಮ್ಮನ ಬೈಗಳು ಇನ್ನೂ ನಿಂತಿರಲಿಲ್ಲ..ಅಷ್ಟೆ ಅಲ್ಲ ಆ ವ್ಯಕ್ತಿ ತಬ್ಬಿಬ್ಬಾಗಿ ಇವರಿಬ್ಬರ ಬಳಿ ನೋಡುತ್ತಿದ್ದ. ಗಾರ್ಡನ್ ಬಳಿಯಿಂದ ಹಲವಾರು ಒಳದಾರಿಗಳು ಮುಖ್ಯ ರಸ್ತೆಗೆ ಒಯ್ಯುತ್ತಿದ್ದವು. ಹಾಗೆ ಈ ವ್ಯಕ್ತಿ ಕೂಡ ಶಾರ್ಟ್ ಕಟ್ ಬಳಸಲು ಈ ದಾರಿಯಿಂದ ಬಂದರೆ ಇಲ್ಲಿ ಹೀಗೆ.... ಮನೋರಮಾ ಅವರಿಗೆ ’ಹೋಗಿ ಸರ್..ಅಮ್ಮನಿಗೆ ಸ್ವಲ್ಪ ತಲೆ ಸರಿಯಿಲ್ಲ..ತುಂಬಾ sorry. ಅಂದಳು , ಮುಖ ಎಲ್ಲ ನಾಚಿಕೆ ಅವಮಾನದಿಂದ ಕೆಂಪಗಾಗಿತ್ತು. ಅವನು ಸಿಟ್ಟು ತಿರಸ್ಕಾರದಿಂದ...ಏನ್ರೀ ಮೆಂಟಲ್ ಹಾಸ್ಪಿಟಲ್ ಸೇರಿಸೋದು ಬಿಟ್ಟು ಹೀಗೆ ದಾರಿ ಹೋಕರನ್ನ ಬೈಯ್ಯೋದ...?? ಮೆಂಟಲ್ ನನ್ನ್ಮಕ್ಕಳು..ಅಂತ ಅಲ್ಲಿಂದ ಹೊರಟು ಹೋದ.
ಮನೋರಮಾ ’ಬಹುಶ: ನಾನು ಇವತ್ತು ಎದುರಿನ ಬಾಗಿಲು ಸರಿಯಾಗಿ ಎಳೆದುಕೊಂಡಿಲ್ಲಾ ಹಾಗಾಗಿ ಅಮ್ಮ ಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು’ ಅಂದು ಕೊಂಡು ಅಮ್ಮನನ್ನು ಎಳೆದುಕೊಂಡೆ ಮನೆಗೆ ಬಂದಳು. ಇತ್ತೀಚಿಗೆ ಅವಳ ಅಮ್ಮನಿಗೆ ಅವಳ ಮೇಲೆ ಸಂಶಯ ಜಾಸ್ತಿಯಾಗಿತ್ತು. ಆಫಿಸ್ ಕೆಲಸ ಮುಗಿಸಿ ಕೆಲವೊಮ್ಮೆ ಮನೆಗೆ ಬರುವಾಗ ಲೇಟ್ ಆದರೆ ’ಏನೇ ಯಾರ ಜತೆ ಚಕ್ಕಂದ ಆಡ್ತೀದ್ದಿ..ಅಂತಲೋ....ಬೋಸುಡಿಕೆ ಆಫಿಸ್ ಗೆ ಹೋಗ್ತೀಯಾ ಎಲ್ಲಿ ಅಂಡಲಿಲಿಕ್ಕೆ ಹೊಗ್ತೀಯ ಎಂಬಂತಹ ಅವ್ಯಾಚ್ಯ ಶಬ್ದಗಳ ಬಳಕೆ ಇತ್ತೀಚಿಗೆ ವಿಪರೀತ ವಾಗಿತ್ತು. ಅಷ್ಟೆ ಅಲ್ಲ ನ್ಯುಸ್ ಪೇಪರ್ ಬಿಲ್, ಹಾಲಿನವ, ಹೂವಿನವ ಬಂದಾಗಲೆಲ್ಲ ಇಂತವೇ ಬೈಗಳು. ಆಫಿಸಿನಿಂದ ಮನೆಗೆ ಮರಳಿ ಮನೆಗೆ ಬಂದಾಗ ಒಂದು  ಲೋಟ ಬಿಸಿ ಟೀ ಯಾರಾದರೂ ಮಾಡಿಕೊಡುವಂತಿದ್ದರೆ...ರೆ....ರೆ.....
ಬಾಗಿಲಿನ ಸದ್ದಾದಾಗ ಮನೋರಮಾ ಎದ್ದು ಹೊರಗೆ ಬಂದಳು. ಅವಳ ಸ್ನೇಹಿತೆ ಲತಾ ಬಂದಿದ್ದಳು. ’ಏನಾಯಿತು? ಅದೇ ಹಳೆ ಪ್ರಾಬಲ್ಂ ಆ?? ಯಾಕೆ ಅಳ್ತಾ ಇದ್ದೀಯಾ? ನಿನಗೆ ಎಷ್ಟೊಂದು ಸಾರಿ ಸಮಜಾಯಿಸಿ ಹೇಳಿದೆ ಅಮ್ಮನಿಗೆ ಒಂದು ಒಳ್ಳೆಯ ಸ್ಯಾನಿಟೋರಿಯಮ್ ಗೆ ಸೇರಿಸು ಅಂತ. ಇನ್ನೂ ಎಷ್ಟು ಅಂತ ಅನುಭವಿಸುತ್ತೀಯಾ?? you have a right to be happy. ಈಗಲೇ ನಿನಗೆ 28 . ಯಾರಿಗೋಸ್ಕರ ತ್ಯಾಗ ಮಾಡುತ್ತೀಯಾ?...ಮನೋರಮಳ ಸಪ್ಪಗಿನ ಮುಖ ನೋಡಿ..’ ನೋಡು ರಮ್ಮಿ, ಒಂದು ಮಾತು ಕೇಳ್ತಿಯಾ?? ಕೆಲವು ದಿನಗಳ ಮಟ್ಟಿಗೆ ಅಮ್ಮನನ್ನು ಸ್ಯನಿಟೋರಿಯಮ್ ನಲ್ಲಿಡುವ ಪ್ಲಾನ್ ಮಾಡು. ನೋಡು ಇನ್ನೂ ಪಾಪ ಪ್ರಜ್ಝೆ ಕಾಡುತ್ತಿದ್ದರೆ ಅಲ್ಲಿಂದ ಕರೆದುಕೊಂಡು ಬರುವಾ ಆಗದೆ?? ಇವತ್ತು ನೀನು ಆಲೋಚನೆ ಮಾಡು. ಯಾಕಂದ್ರೆ ಪರಿಸ್ಥಿತಿ ಮೀರುತ್ತಾ ಇದೆ. ಅಕ್ಕಪಕ್ಕದವರಿಗೂ ನಿನ್ನಮ್ಮನ ಮಾತುಗಳು ಕೇಳಿ ಕಿರಿಕಿರಿಯಾಗ್ತಾ ಇದೆ. ಸುಮ್ನೆ ಅವರೆಲ್ಲರ ಕಂಪ್ಲೈನ್ ಬರುವ ಮುಂಚೆ ಏನಾದರೂ ನಿರ್ಧರಿಸು. ನಾನಿದ್ದೀನಿ ನಿನ್ನ ಜತೆ. ಸರಿ..ಸಂಜೆ ಸಿಗ್ತೀನಿ,,ಆಫಿಸ್ ಗೆ ಲೇಟ್ ಆಯ್ತು..

.
.
.
.
.
.
.
ಅಂತೂ ಗಟ್ಟಿ ಮನಸ್ಸು ಮಾಡಿ ಮನೋರಮಾ ತನ್ನ ತಾಯಿಯನ್ನು ಪ್ರಖ್ಯಾತ ಆಶ್ರಮವೊಂದಕ್ಕೆ ಸೇರಿಸಿ ಬಂದಳು. ಒಂದು ನಾಲ್ಕು ದಿನ ತುಂಬಾ ಸಂಕಟ ಪಟ್ಟಳು. ತಿಂಗಳಿಗೊಮ್ಮೆ ಅವಳು ತನ್ನ ಅಮ್ಮನನ್ನು ಕಾಣಬಹುದಿತ್ತು. ಸ್ವಲ್ಪ ಹೆಚ್ಚೆ ಖರ್ಚಾದರೂ ಅಲ್ಲಿನ ವಾತಾವರಣ ಚೆನ್ನಾಗಿತ್ತು. ದೊಡ್ಡ ತೋಟದ ಮಧ್ಯೆ ಈ ಆಶ್ರಮ. ಅಲ್ಲಿ ಸೇರಿಸಿರುವ ಎಲ್ಲರಿಗೂ ಚೆನ್ನಾಗಿ ನೋಡಿಕೊಳ್ಳುವವರಿದ್ದರು. ದಿನಾ ಭೇಟಿ ಕೋಡುವ ವೈದ್ಯರು, ಯೋಗಾ ಕ್ಲಾಸ್ ಮುಂತಾದವು
.
.
.
.
..
ಈಗ ಸ್ವಲ್ಪ ಪ್ಲ್ಯಾಶ್ ಬ್ಯಾಕ್ ಗೆ ಹೋಗುವಾ....
ಮನೋರಮಾ ಅವಳ ಅಪ್ಪ ಅಮ್ಮನಿಗೆ ಮೂರನೆಯವಳು..ಅದೂ ಅವಳ ಅಮ್ಮನಿಗೆ 40 ರ ಮೇಲಾಗಿತ್ತು. ಮುಟ್ಟು ನಿಲ್ಲುವ ಸಮಯ ಎಂದು ನಿರ್ಲಕ್ಷಿಸಿದ್ದೆ ತಪ್ಪಾಯಿತು. ತಾನು ಗರ್ಭಿಣಿ ಎಂದು ಅರಿವಾದಾಗ ತುಂಬಾ ವಿಳಂಬವಾಗಿತ್ತು. ತೆಗೆಸಿದರೆ ಅವರ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರು. ಅಂತೂ ಇಂತೂ ಕಷ್ಟಕರ ಡೆಲಿವರಿಯಾಗಿ ..ಚೇತರಿಸಿಕೊಳ್ಳಲು ಅವಳ ಅಮ್ಮನಿಗೆ ತುಂಬಾ ಸಮಯ ಬೇಕಾಯಿತು. ಮನೋರಮಳಿಗೆ ಇಬ್ಬರು ಅಣ್ಣಂದಿರು..ಆಗಲೇ ಕಾಲೇಜು ಮುಗಿಸಿ, ಮನೋರಮೆಗೆ ತಿಳಿವಳಿಕೆ ಬರುವಷ್ಟರಲ್ಲಿ, ಕೆಲಸದ ಮೇಲೆ ಹೊರದೇಶಕ್ಕೆ ಹೋದವರು ಅಲ್ಲೇ ಮದುವೆ ಮಕ್ಕಳು ಮನೆ ಅಂತ ಮಾಡಿ ಹಾಯಾಗಿದ್ದರು. ತಮ್ಮ ಇಳಿವಯಸ್ಸಿನಲ್ಲಿ ತನಗೆ ಆಸರೆಯಾಗ ಬಹುದೆಂದು ತಿಳಿದುಕೊಂಡ ಅಮ್ಮನಿಗೆ ಇದರಿಂದ ಆಘಾತವಾಯಿತು. ಏತನ್ಮಧ್ಯೆ ಮನೋರಮಾಳ ತಂದೆಯ ದೇಹಾಂತವಾಗಿತ್ತು. ಮಗಂದಿರಿಬ್ಬರೂ ದೂರವೇ ಉಳಿದರು. ಪತ್ರವಿಲ್ಲ, ಮಾತುಕತೆಯಿಲ್ಲ..ಎನೂ ಇಲ್ಲ. ಮನೋರಮಾ ಕಲಿಯುವುದರಲ್ಲಿ ಜಾಣೆ. ಸ್ವಂತ ಪ್ರತಿಭೆಯಿಂದ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗದಲ್ಲಿದ್ದಳು. ಅಮ್ಮನನ್ನು ನೋಡಿಕೊಳ್ಳಲ್ಲು ಯಾರು ಇಲ್ಲವೆಂದು ಮದುವೆ ಕೂಡ ಮಾಡದೇ ಉಳಿದುಕೊಂಡಿದ್ದಳು. ಇತ್ತೀಚಿಗೆ ಅವಳ ಅಮ್ಮನಿಗೆ ತುಂಬ ಹೆದರಿಕೆ. ಗಂಡು ಮಕ್ಕಳು ಕೈ ಬಿಟ್ಟರು. ಮನೋರಮಾ ಕೂಡ ಮದುವೆಯಾಗಿ ಹೋದರೆ ಎಂಬ ಭಯದಿಂದ ಅವರ ಮಾನಸಿಕ ಕಾಯಿಲೆ ಉಲ್ಬಣಿಸಿತ್ತು. ಯಾರದರೂ ಚಿಕ್ಕ ಪ್ರಾಯದ ಗಂಡಸನ್ನು ನೋಡಿದರೆ ಅವರು ಮನೋರಮೆಯನ್ನು ಮದುವೆ ಮಾಡಿಕೊಂಡು ಹೋಗುತ್ತಾರೆಂಬ ಭ್ರಮೆ...ಹಾಗಾಗೀ ಗಾರ್ಡನ್ ಬಳಿಯ ಆ ವ್ಯಕ್ತಿಯೊಂದಿಗೆ ಹಾಗೇ ಬಿಹೇವ್ ಮಾಡಿದ್ದರು
.
.
.
.
ಲತಾ ಹೇಳಿದ ಹಾಗೆ ನಾಲ್ಕು ದಿನ ಮನೋರಮಾಗೆ ಗಿಲ್ಟ್ ಕಾಡಿತ್ತು. ಆದರೆ ಅಲ್ಲಿ ಅಮ್ಮ ಡಾಕ್ಟರ್, ಔಷಧಿ ಯೋಗದ ಪರಿಣಾಮದಿಂದ ಮಾನಸಿಕ ಶಾಂತಿ ಪಡೆದಿದ್ದರು. ಮನೋರಮ ತನ್ನ ಉದ್ಯೋಗದಲ್ಲಿ ಇನ್ನಷ್ಟು ತೊಡಗಿಸಿಕೊಂಡು ಪ್ರೋಮೋಷನ್ ನಿರೀಕ್ಷೆಯಲ್ಲಿದ್ದಾಳೆ. ಇನ್ನೆರಡು ತಿಂಗಳಲ್ಲಿ ಮದುವೆ ಕೂಡ ಇದೆ....
ನನಗೆ ಇನ್ವಿಟೇಶನ್ ಕಳಿಸಿದ್ದಾಳೆ...ನೀವೂ ಬರಬಹುದು....
-:-)
.
,

August 22, 2014

ಶ್ರೀಯುತ ಅನಂತಮೂರ್ತಿ- Not A Documentary But A Hypothesis

ಜನವರಿ 25 ರಂದು The Times Literary Carnival ನಲ್ಲಿ ಗಿರೀಶ ಕಾಸರವಳ್ಳಿಯವರು ಶ್ರೀ ಯು.ಆರ್. ಅನಂತಮೂರ್ತಿಯವರ ಜೀವನದ ಬಗ್ಗೆ  ಡಾಕ್ಯೂಮೆಂಟರಿ Ananthamurthy -- Not A Documentary But A Hypothesis- ಹಮ್ಮಿಕೊಂಡಿದ್ದರು. ನಾನು ಹೋಗಲು ಮೂರು ಕಾರಣಗಳಿದ್ದವು, 
ಒಂದು ಅದರ ಶೂಟೀಂಗ್ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದಾಗ ಅದರ ಬಗ್ಗೆ ಲೈವ್ ಅಪ್ಡೇಟ್ ಮಿತ್ರ ನೀಲೇಶ ಜವಳಿ ನಿಡುತ್ತಿದ್ದದ್ದು, ಹಾಗಾಗಿ ತೀರ್ಥಹಳ್ಳಿಯನ್ನು ನೋಡಲು. ಅವರು ಅಪ್ಡೇಟ್ ನೀಡಲು ಕಾರಣ ಅದರಲ್ಲಿ ಒಂದು ಚಿಕ್ಕ ಪಾತ್ರ ಅವರೂ ಮಾಡಿದ್ದು. ಇನ್ನೊಂದು ಅದರಲ್ಲಿ ನಿಹಾಳ ಮನು ಸರ್ ಕೂಡ ಮಾತಾಡಿದ್ದು. ನಿಹಾಳ ಇಷ್ಟದ ಲೆಕ್ಚರರ್ ಅಂದ್ರೆ ಸುಮ್ಮನೇನಾ ಮತ್ತೆ? ಇನ್ನೊಂದು ಕಾರಣ ಹೊಸದಾಗಿ ಪರಿಚಯ ಆದ ಜರ್ನಲಿಸ್ಟ್ ಮಿತ್ರರು, ಮತ್ತೊಂದು ಕಾರಣ ಅಷ್ಟು ದೊಡ್ಡ ಬರಹಗಾರರ ಬಗ್ಗೆ ತಿಳಿಯುವ ಕೌತುಕ. (ಮೂರಕ್ಕಿಂತ ಜಾಸ್ತಿ ಕಾರಣಗಳಾದುವಾ??) :-) ನಾನು ಅವರ ಬರಹಗಳನ್ನು ಓದಲು ಶುರು ಮಾಡಿ ಎರಡು ವರ್ಷಗಳಾಗಿವೆ ಅಷ್ಟೆ. ಹಲವಾರು ಪುಸ್ತಕಗಳಿವೆ ನನ್ನ ಬಳಿ. ಸಂಸ್ಕಾರ ಅಂತೂ ಅಬ್ಬಬ್ಬಾ ಎಂತಹ ಕಾದಂಬರಿ?? ನಿಹಾ ಅದನ್ನು ಮೊದಲು ಇಂಗ್ಲಿಶ್ ಆ ಮೇಲೆ ಕನ್ನಡ ದಲ್ಲಿ ಓದಿದಳು.  ಅದಾದ ನಂತರ ಭಾರತೀಪುರ ಓದಿದೆ. ಈ ಎರಡು ಪುಸ್ತಕಗಳ ಪಂಚ ಅವರ ಭವ, ದಿವ್ಯ, ಅವಸ್ಥೆ ಕಾದಂಬರಿಗಳಲ್ಲಿ ಸಿಗಲಿಲ್ಲ. ಪಚ್ಚೆ ರಿಸೋರ್ಟ್ ಅರ್ಧ ಓದಿ ಕೈ ಬಿಟ್ಟೆ. ಇನ್ನೂ ಹಲವಾರು ಪುಸ್ತಕಗಳಿವೆ ಅವರ ಬಗ್ಗೆ ಅದನ್ನು ಇನ್ನೂ ಓದಬೇಕು. ನನ್ನ ಬಳಿ ಸಮಯ ಸಾಕಷ್ಟಿದೆ. :-) ಅವರು ತೀರ್ಥಹಳ್ಳಿಯವರು ಅಂತ ಅವರ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ನನಗೆ.  

ಕಾರ್ಯಕ್ರಮ  ಇದ್ದದ್ದು ಬೆಳಿಗ್ಗೆ 9.30 ಗಂಟೆಗೆ . ಡಾಕ್ಯೂಮೆಂಟರಿ ಆದ ನಂತರ ಪ್ರಕಾಶ ಬೆಳವಡಿ ಶ್ರೀ ಅನಂತಮೂರ್ತಿಯವರ ಜತೆ ಮಾತುಕತೆ ನಡೆಸುವವರಿದ್ದರು. ಆದ್ರೂ ನಿಹಾ - ಮಾಲು ಗೆ ಅಂದೆ’ ಅಷ್ಟು ಬೆಳಿಗ್ಗೆ ಯಾರು ಬರ್ತಾರೆ’ ಅಂತ . ನಾವೇನೋ ಸರಿಯಾದ ಸಮಯಕ್ಕೆ ತಲುಪಿದ್ವಿ. ಕನ್ಫೂಶನ್ ಆಗಿ  ರಿಕ್ಷಾದಲ್ಲಿ ಸ್ವಲ್ಪ  ಹುಡುಕಿಕೊಂಡು ಹೋಗಬೇಕಾಯ್ತು. ಅದು ಇದ್ದದ್ದು ಜಯಮಹಲ್ ಪ್ಯಾಲೆಸ್ ನಲ್ಲಿ. ನಾನು ಅಂದುಕೊಂಡ ಹಾಗಾಯ್ತು. ನಾವು ಇದ್ದದ್ದೆ 9 ಮಂದಿ. ಕಾರ್ಯಕ್ರಮದ ಸಂಚಾಲಕರು ’ಯಾರೂ ಬಂದಿಲ್ಲ ಆದ್ದರಿಂದ ಕಾರ್ಯಕ್ರಮ ಸ್ವಲ್ಪ ವಿಳಂಬವಾಗಿ ಶುರುಮಾಡುವ ಬಗ್ಗೆ ಎನೌಂನ್ಸ್ ಮಾಡಿದರು. ನಾವು ಅಲ್ಲೆ ಪಕ್ಕದಲ್ಲೇ exhibit ಮಾಡಿದ paul Fernandez ಅವರ bangalore in the 60's ಕಾರ್ಟೂನ್ಸ್ ಗಳನ್ನು ನೋಡಲಿಕ್ಕೆ ಹೊರಟೆವು. ನಿಜಕ್ಕೂ ನಗು ಬರುವಂತಹ ಕಾರ್ಟೂನ್ ಗಳು. 

ಆಮೇಲೂ ಯಾರು ಜನ ಸೇರಿರಲಿಲ್ಲ. ನಾನು ಮಕ್ಕಳ ಬಳಿ ಪಿರಿಪಿರಿ ಮಾಡ್ತಿದ್ದೆ. ಜನರಿಗೆ ಒಂದು ಭಾನುವಾರ ಬೇಗ ಎದ್ದು ಬರಲು ಏನು ಧಾಡಿ ಅಂದ್ರೆ ಮಾಲವಿಕಾ ’ನಿನ್ನದೊಳ್ಳೆ ಕತೆ. first of all the Documentary is in English, ಆಮೇಲೆ ನಿನ್ನ ಫ್ರೆಂಡ್ ಇದ್ದಾನೆ ಅಂತ ನೀನು ಇಲ್ಲಿಗೆ ಬಂದಿದ್ದೀಯಾ, ಸುಮ್ನೆ ಡೈಲೋಗ್ ಹೊಡಿಬೇಡ ಅಂದಾಗ ಅವಳಿಗೊಂದು ಗುರ್ ಹೇಳಿದೆ.ಆದರೆ ಅವಳು ಅಂದಿದ್ದು ನಿಜ. ಸಂಡೆ ಅಂದರೆ ನಮ್ಮ ಮನೆಯಲ್ಲಿ ಎಲ್ಲ ಕೆಲಸಗಳು - ತಿನ್ನುವುದು ಬಿಟ್ಟರೆ- ವಿಳಂಬ. 
ಗಿರೀಶ ಕಾಸರವಳ್ಳಿಯವರು ಬಂದಿದ್ದರು. ಕಾರ್ಯಕ್ರಮ ಶುರು ಆದ ಅರ್ಧ ಗಂಟೆ ಆದಮೇಲೆ ಕರಂಟ್ ಪೋಯಿ. ಪುನ: ಅರ್ಧಕ್ಕೆ ಬಿಟ್ಟ ಕಾರ್ಟೂನ್ ವೀಕ್ಷಣೆ. ಅಷ್ಟರಲ್ಲಿ ಶ್ರೀ  ಯು ಆರ್ ಅನಂತಮೂರ್ತಿಯವರು ಎಸ್ತರ್ ಅವರೂ ಬಂದರು. ಈ ಇಳಿವಯಸ್ಸಿಗೆ ಅವರ ಲವಲವಿಕೆ, ಅವರ ವಿಚಾರ ಶಕ್ತಿ, ಅವರ ನೆನಪಿನ ಶಕ್ತಿ , ಮಾತನಾಡುವ ವೈಖರಿ ನಿಜಕ್ಕೂ ಪ್ರಶಂಸನೀಯ. (ನಮ್ಮ ಮಾನಸ ಟೀಮ್ ನ ಸದಸ್ಯರೊಬ್ಬರು ಅವರಿಗೆ ಪುಸ್ತಕ ನೀಅಲು ಹೋದಾಗ ತುಂಬಾ ಪ್ರೋತ್ಸಾಹಕರ ಮಾತನ್ನಾಡಿದ್ದಲ್ಲದೆ, ನಿಮಗೇನಾದರೂ ಬರೆದುಕೊಡಬೇಕಾದಲ್ಲ್ ಹೇಳಿ ನಾನು ಬರೆಯುತ್ತೇನೆ ಅಂದು, ಮತ್ತು ಸ್ವಳಪ್ ಹೊತ್ತು ಬಿಟ್ಟು, ನಾನು ಹೇಳುತ್ತೇನೆ ನೀವು ಬರೆದುಕೊಳ ಬಹುದು ಅಂದಿದ್ದರಂತೆ, ನಿಹಾ ಹೇಳುವ ಪ್ರಕಾರ aaw thaths cho chweet of him' :-)

ಕಾರ್ಯಕ್ರಮದ ಬಗ್ಗೆ ಶೂಟ್ ಮಾಡುವವರ ಕಿರಿಕಿರಿ ಮಧ್ಯ ಫೋಟೊ ತೆಗೆಯುವವರ ಕಿರಿಕಿರಿ ಅದರ ಫ್ಲಾಶ್ ಸೀದಾ ಮುಖದ ಮೇಲೆ.  ಕೊನೆಕೊನೆಗೆ ಆ ಫೋಟೊದವನಿಗೆ ಸನ್ನೆ ಮಾಡಿ ನಮಗೆ irritate ಆಗ್ತಾ ಇದೆ ಅಂತಂದೆ. 

ಶ್ರೀ ಅನಂತಮೂರ್ತಿಯವರ ಬರಹ ಕಾಸರವಳ್ಳಿಯವರ ಮೇಲೆ ತುಂಬಾ ಪ್ರಭಾವ ಬಿರಿದೆ ಅನ್ನುವ ಮಾತಿನಿಂದ ಈ ಸಾಕ್ಷಚಿತ್ರ ಪ್ರಾರಂಭವಾಗುತ್ತದೆ. ಶ್ರೀ ಅನಂತಮೂರ್ತಿಯವರ ಜತೆ ಒಡನಾಡಿದ, ಅವರನ್ನು ಹತ್ತಿರದಿಂದ  ನೋಡಿರುವ ಸಾಹಿತಿಗಳ  ಸಂದರ್ಶನ, ಅಭಿಪ್ರಾಯ, ಅನಿಸಿಕೆಗಳ (bit long winded) ಮೂಲಕ , ಅವರ ಗಾಂಧೀವಾದಿ, ಸಮಾಜವಾದಿ ಚಿಂತನೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಬರವಣಿಗೆಯ (both fiction and non-fiction)  ಮೂಲಕ  ಶ್ರೀ ಅನಂತಮೂರ್ತಿಯವರ  ಜೀವನ ಚಿತ್ರಣವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಇದು ಹೊಸತನದಿಂದ ಕೂಡಿ ಇಂಟೆರೆಸ್ಟಿಂಗ್ ವೇ ಆಫ್ ಇನ್ಟ್ರೋಡ್ಯೂಸಿಂಗ್ ಎ ಪರ್ಸೋನಾ ಅನ್ನಿಸ್ತು.

ಅನಂತಮೂರ್ತಿಯವರ ವ್ಯಕ್ತಿತ್ವ ಮತ್ತು ಚಿಂತನೆಯನ್ನು ದೃಶ್ಯಾತ್ಮಕ ನೆಲೆಯಲ್ಲಿ ಕಟ್ಟಿಕೊಡುವ ನಿಜಕ್ಕೂ ಒಂದು ಪ್ರಶಂಸಾರ್ಹ ಪ್ರಯತ್ನ (ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು)  ಮಾಡಿದ್ದಾರೆ..  ಡಾಕ್ಯೂಮೆಂಟರಿ ಕೆಲವು ಕಡೆ ಸ್ವಲ್ಪ ಎಡಿಟಿಂಗ್ ಬಿಗಿ ಮಾಡಬೇಕಿತ್ತು ಅನ್ನಿಸ್ತು. background score ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಮಿತ್ರ ನಿಲೇಶ
ಜವಳಿ,  ’ಪಶ್ನೆ’ ಎನ್ನುವ  ಕತೆಯಲ್ಲಿ ಪಾತ್ರವಹಿಸಿದ್ದಾರೆ, ಮಾತ್ರವಲ್ಲ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸಿದ್ದಾರೆ.. ನನಗೆ ಸಂಭಾಷಣೆ ತುಂಬಾ ಚೆನ್ನಾಗಿದೆ ಅನ್ನಿಸಿ ಮರುದಿನ ಅವರ ’ಪ್ರಶ್ನೆ’ ಕತಾ ಸಂಕಲನ ತಂದು ಓದಿದೆ. 
ಮನೆಗೆ ಬಂದು ನಿಲೇಶ ಜವಳಿಗೆ ಎಸ್ ಎಮ್ ಎಸ್ ಮಾಡಿದೆ. ನಿನ್ನ ಪಾರ್ಟ್ ಚೆನ್ನಾಗಿ ಮೂಡಿದೆ, ಡಾಕ್ಯೂಮೆಂಟರಿಗೆ 5 ರಲ್ಲಿ 2.5 ಪಾಯಿಂಟ್ ಕೊಟ್ಟಿದ್ದೇನೆ ಅಂದಾಗ, ಅವಾರ್ಡ್ ಬರಬಹುದಾ?  ಅಂತ ಕೇಳಿದ. ಆಗ ನಾನು ಖಂಡಿತ award ಸಿಗುತ್ತೆ ಅಂದಿದ್ದೆ. ಬೇರೆ ನಿರ್ದೇಶಕರಿಗೆ ನನಗ್ಗೆ ಸಿನಿಮಾ ದಲ್ಲಿ  ಅವಕಾಶ ಕೊಡಲು ಹೇಳಬಹುದಾ ಅಂದಾಗ ಕೂಡ ' ಓಹೋ ಖಂಡಿತಾ' ಅಂದಿದ್ದೆ....ಒಳ್ಳೆ  ಕಣಿ ಹೇಳಿದಹಾಗೆ 
ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ಖುಶಿಯಾಗಿ ಅವನು ಎಸ ಎಂ ಎಸ ನಲ್ಲಿ  ’ yaahoo our documentary got a national award, i am soooo happy' ಅಂತ ಕಳುಹಿಸಿದ್ದ. ಹಾಗಾಗಿ ಈ ಪೋಸ್ಟ್ ನಿಮ್ಮ ಜತೆ ಶೇರಿಂಗ್. ನೀವು ಅವಕಾಶ ಆದಾಗ ಖಂಡಿತ ನೋಡಿ. (ಟಿ ವಿ ನಲ್ಲಿ ಹಾಕಬಹುದು)

malathi the 'common man' photo c/o Niha. :-)

ಶ್ರೀ ಅನಂತಮೂರ್ತಿಯವರು  ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತ ...... :-(
(Draft ನಲ್ಲಿತ್ತು. ಕೆಲವು ವಾಕ್ಯ ಸೇರಿಸಿ  ಈಗ ಪಬ್ಲಿಶ್ ಮಾಡಿದೆ ಅಷ್ಟೆ)

August 18, 2014

ಹೀಗೆರಡು ನೆನಪುಗಳು

ನೆನಪು-1
ಮದುವೆಯಾಗಿ ಕೆಲ ತಿಂಗಳು ಕಳೆದಿತಷ್ಟೆ. ಅಕ್ಕನಿಗೆ ಅಡಿಗೆಗೆ ನನ್ನ ಪಾಲಿನ ಸಹಾಯ ಅಂದ್ರೆ ಕಾಯಿ ತುರಿದು ಕೊಡೋದು, ತರಕಾರಿ ಕಟ್ ಮಾಡಿ ಕೊಡೋದು ಮುಂತಾದ್ದು ಮುಗಿದ ಮೇಲೆ ನನ್ನ ಪದವಿ ಪರೀಕ್ಷೆಗೆ ಓದುತ್ತಾ, ಕಾಲು ಚಾಚಿ, ಅಡಿಗೆ ಮನೆಯ ಎದುರಿಗೆ ಇರುವ ಚಿಕ್ಕ ಅಂಗಳದಲ್ಲಿ ,ಅದು ಹಳೆಯ ಕಾಲ ಚೌಕದ ಮನೆ. ಮಧ್ಯದ ತುಳಸಿ ಕಟ್ಟೆಯ ಅಂಗಳದ ಸುತ್ತ ನಮ್ಮ ಮನೆಯ ಕೋಣೆಗಳು. ಹಿತವಾದ ಬಿಸಿಲು ಅಂಗಳದಲ್ಲಿ ಬೀಳುತಿತ್ತು. ವಿಜ್ಝಾನ ವಿಷಯವನ್ನು ಬಿಟ್ಟು ಆರ್ಟ್ ಸ್ ಸ್ಟ್ರೀಮ್ ಗೆ ಶಿಫ್ಟ್ ಆಗಿದ್ದನ್ನು ನಾನು ನಿಧಾನಕ್ಕೆ ಎಕ್ಸೆಪ್ಟ್ ಮಾಡಿದ್ದೆ ಅಲ್ಲದೇ ಸೋಶಿಯೋಲಾಜಿ ನನ್ನ ಇಷ್ಟದ ವಿಷಯವಾಗಿ ಪರಿಣಿಮಿಸಿತು. ನಾನು ಕಾಲು ಚಾಚಿಕೊಂಡು ತಲ್ಲೀನತೆಯಿಂದ khaasi-synteng ಬುಡಕಟ್ಟು ಜನಾಂಗದ charasteric feature ಬಗ್ಗೆ ಓದುತ್ತ ಇದ್ದೆ. ಕಾಲಿನ ಬುಡಕ್ಕೆ (ಪಾದಗಳಿಗೆ) ತಣ್ಣನೆಯ ಗಾಳಿಯೊಂದು ಬೀಸಿತು. ಓ ಚೆಂದದ ಗಾಳಿ ಕಾಲಿಗೆ ಮಾತ್ರ ಸೋಕುತ್ತಿದೆ ಅಂದು ಕೊಂಡು ಓದನ್ನು ಮುಂದುವರೆಸಿದೆ. ಕೆಲ ಸಮಯದ ನಂತರ ಪುಣ: ಪಾದಗಳ ಬಳಿ ಗಾಳಿ ಮಾತ್ರವಲ್ಲ ಫುಸ್ ಅನ್ನುವ ಸದ್ದು ಕೂಡ ಕೇಳಿಸಿಕೊಂಡಿತು. ತಲೆ ಎತ್ತಿ ನೋಡುತ್ತೇನೆ, ಕರಿ ನಾಗರವೊಂದು ಹೆಡೆ ಎತ್ತಿ ನಿಂತಿದೆ. ಆಗಿನ್ನು ತೀರ್ಥಹಳ್ಳಿಯಲ್ಲಿ ಟಿ ವಿ ಇರಲಿಲ್ಲ ಹಾಗಾಗಿ ನ್ಯಾಶನಲ್ ಜಿಯೋಗ್ರಾಫಿಕ್ ಚ್ಯಾನೆಲ್ ಕೂಡ ಇರಲಿಲ್ಲ. ನಾಗರ ಹಾವು ಎಂಬ ಜಂತುವನ್ನು, ಮುಂಬೈನಲ್ಲಿ ನಾಗರ ಪಂಚಮಿಯಂದು ಮನೆ ಮನೆಗೆ ಬುಟ್ಟಿಯಲ್ಲಿ ತಂದು, ನಾಗೋಬಾಲಾsssss ದೂssssದ್(ನಾಗಪ್ಪನಿಗೆ ಹಾಲು) ಎನ್ನುತ್ತ ಹಾವಾಡಿಗರು ಮನೆಗೆ ತಂದು,ಮೆಟ್ಟಿಲ ಬಳಿ ನೆಲದ ಮೇಲಿಟ್ಟು  ಬುಟ್ಟಿ ಮುಚ್ಚಳ ತೆರೆದು ಅಫೀಮು ಕುಡಿದ ನೀರ್ಜೀವ  ಮಲಗಿದಂತ ಅದರ ತಲೆ ಮೇಲೆ ಕುಕ್ಕಿಯೋ, ಬಾಲ ಎಳೆದೋ ಅದು ಹೆಡೆ ಎತ್ತುವಂತೆ ಮಾಡುವುದು, ಅಮ್ಮ ಬಟ್ಟಲಲ್ಲಿ ಹಾಲು ತಂದು ಬುಟ್ಟಿಯ ಎದುರಿಗೆ ಇಡುವುದು, ಹಾವಾಡಿಗಳು ಹಾವಿನ ತಲೆಯನ್ನು ಹಾಲಲ್ಲಿ ಮುಳುಗಿಸಿ ತೆಗೆಯುವುದು, ಆಮೇಲೆ ಅಷ್ಟೆ ಜಬರದಸ್ತಿಯಿಂದ ಹಾವನ್ನು ಬುಟ್ಟಿಗೆ ಸೇರಿಸಿ, ಅಮ್ಮ ಕೊಟ್ಟ ಒಂದು ಶೇರು ಅಕ್ಕಿ, ಕೆಲವು ನಾಣ್ಯ ಪಡೆದುಕೊಂಡು ಹೋಗುವದನ್ನು ನೋಡುವುದಷ್ಟಕ್ಕೆ ಸೀಮಿತಗೊಂಡಿದ್ದು, ಈ ಹಾವು ಪೂತ್ಕರಿಸುವಾಗ ಅದರ ಗಲ್ಲ ನಡುಗುವುದು, ನಾಲಗೆ ಹೊರ ಒಳ ಚಾಚುವುದು, ಮಿರಿ ಮಿರಿ ಮಿಂಚುವ ಅದರ ಮೈ ಮೊದಲ ಬಾರಿಗೆ ಅಪ್ ಕ್ಲೋಸ್ ನೋಡಿದ್ದು. ತನ್ನಷ್ಟಕ್ಕೆ ನನ್ನ ಗಂಟಲಿನಿಂದ ’ಅಕ್ಕ’ ಎನ್ನುವು ಕೂಗು ಹೊರ ಹೊಮ್ಮಿತು. ಸಾಂಬರ್ ಮಾಡಲು ತೊಗರಿ ಬೆಳೆ ತರಲು ಒಳ ಹೋದ ಅಕ್ಕ ನನ್ನ ಕೂಗಿನಿಂದ ಅಂಗಳ ಬಳಿ ಬಂದರು. ಅವರು ’ಯಾಕೋ ನಾಗಪ್ಪ?? ಏನಾಯ್ತು? ಏನಾದರು ಮೈಲಿಗೆ ಆದರೆ ಕ್ಷಮಿಸಬೇಕು. ಇವತ್ತು ಮಧ್ಯಾಹ್ನದ ಪೂಜೆಗೆ ನಿನಗಾಗಿ ವಿಶೇಷ ಆರತಿ ಮತ್ತು ನಾಗನ ಕಲ್ಲಿಗೆ ಹಣ್ಣು ಕಾಯಿ, ಪಂಚಾಮೃತದ ಅಭೀಷೇಕ ಮಾಡಿಸುತ್ತೇವೆ. ಈಗ ನೀನು ಹೋಗು. ಹೀಗೆ ಮನುಷ್ಯರು ಓಡಾಡುವ ಜಾಗದಲ್ಲಿ ನೀನು ಬರಬಾರದು’ ಅಂದಾಗ ಮಹಾ ಹೇಳಿದ್ದು ಗೊತ್ತಾದ ಹಾಗೆ ಹೆಡೆಯನ್ನು ಒಂದು ಸಲ ಹಾಗೆ ಹೀಗೆ ವಾಲಿಸಿ, ಹೆಡೆ ಮುಚ್ಚಿ ಅಲ್ಲಿಂದ ನಿಧಾನಕ್ಕೆ ಹೊರಟು ಹೋಯಿತು. ನಾನು ಬಿಟ್ಟ ಬಾಯಿ (ಸಧ್ಯ ಬೇರೆ ಯಾವುದೇ ಜಂತು ನನ ಬಾಯಿಯೊಳಗೆ ಹೊಕ್ಕಲಿಲ್ಲ) ಬಿಟ್ಟ ಕಣ್ಣುಗಳಿಂದ ಅದರ ಚೂಪು ಬಾಲ ಮರೆಯಾಗುವ ತನಕ ನೋಡುತ್ತಲೆ ಇದ್ದೆ. ಕಾಲು ಮಡಚಲು ಆಗದಷ್ಟು ಮರಗಟ್ಟಿತ್ತು.

ನೆನಪು-2
ಆಗ ನಾವು ಬಸವೇಶ್ವರನಗರದಲ್ಲಿದ್ದೆವು. ಯಾವತ್ತಿನಂತೆ ಬೆಳಿಗ್ಗೆ ನಾಲ್ಕು ಗಂಟೆ ಅಡಿಗೆಮನೆಯಲ್ಲಿ ನಿಂತು ಚಹಾ ತಯಾರಿಸುತ್ತ ಇದ್ದೆ. ಅಡಿಗೆ ಮನೆ ಕಟ್ಟೆ ಎದುರಿಗೆ ದೊಡ್ಡ ಕಿಟಕಿ. ಒಂಚೂರು ಸದ್ದಿರಲಿಲ್ಲ. ಚಹಾಗೆ ನೀರು ಮರಳುತ್ತಿದ್ದ ಹಾಗೆ, ಮೂಂಜಾವಿನ ನೀರವತೆಯಲ್ಲಿ, ನಾನು ಬುಕ್ ಹಿಡಿದುಕೊಂಡು ಓದ್ತಾ ಇದ್ದೆ. ಸಡನ್ ಆಗಿ ಕಿಟಕಿ ಬಳಿಯಿಂದ ಅಕ್ಕೋಯ್ ಅನ್ನುವ ಕೂಗು ಕೇಳಿ ನಾಲ್ಕ್ ಇಂಚ್ ಮೇಲೆ ಹಾರಿದೆ. ’ಹೆದರಿ ಬಿಟ್ರಾ ಅಕ್ಕಾ, ನಾನು ನೈಟ್ ಬೀಟಿನ ಪೋಲಿಸಪ್ಪ. ಯಾರಾದರೂ ಏಳ್ತಾರಾ ಅಂತ ಕಾಯ್ತ ಇದ್ದೆ. ಇಲ್ಲಿ ಲೈಟ್ ಕಾಣಿಸಿ ಇಲ್ಲಿಗೆ ಬಂದೆ. ಏನಿಲ್ಲ, ನನ್ನ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಹೊಸ ಬೈಕ್ ಒಂದು ಕಣ್ಣಿಡಿ ಅಂತಷ್ಟೆ ಹೇಳೋದಿತ್ತು’ ಅಂದ. ನಾನು ಸರಿ ಅಂದೆ. ಅಡಿಗೆ ಮನೆಯ ಕಿಟಕಿಯ ಮುಂದಿನ ರಸ್ತೆಯ ಆಚೆ ಬದಿಯ ಲೈಟ್ ಕಂಬದ ಕೆಳಗೆ ಬೈಕ್ ನಿಲ್ಲಿಸಿದ್ದ. ನಿಜಕ್ಕೂ ಹೊಸ ಬೈಕ್, ಅದರ ಮೇಲೊಂದು ಕೆಂಪು ಬಣ್ನದಿಂದ ಬರೆದ ಹುಲಿಯ ಚಿತ್ರ ನಿಚ್ಚಳವಾಗಿ ಕಾಣುತ್ತಿತ್ತು. ಆಯ್ತಪ್ಪ ಅಂದೆ. ಅವನು ಹೋಗಿ ಬಿಟ್ಟ. ನನಗೆ ಆ ದಿನ ಆಫಿಸ್ ಗೆ ಹೋಗುವುದಿತ್ತು. ಪಕ್ಕದ ಮನೆಯ ರಾಮಮೂರ್ತಿಗೆ ಬೈಕ್ ಬಗ್ಗೆ ಹೇಳಿ ಹೋಗ ಬೇಕು ಅಂತ್ಂದುಕೊಂಡಿದ್ದೆ. ಆದರೆ ಅಡಿಗೆ ಕೆಲಸ ಮನೆ ಕೆಲಸ ಮುಗಿಸಿವುದರಲ್ಲಿ ನನಗೆ ಮರೆತೆ ಹೋಯ್ತು. ಸಂಜೆ ಮನೆಗೆ ಬರುವಾಗ ಎಂದಿಗಿಂತ ತಡವಾಗಿತ್ತು. ಆಗಲೇ ಸ್ಟ್ರೀಟ್ ಲೈಟ್ ಎಲ್ಲ ಹೊತ್ತಿಕೊಂಡಿತ್ತು. ಮನೆಯ ಆ ಕಡೆ ಏನೋ ಗೌಜು. ಅಡಿಗೆ ಮನೆಯೆ ಕಿಟಕಿಯಿಂದ ನೋಡಿದರೆ ಬೆಳಿಗ್ಗೆ ಪಾರ್ಕ್ ಮಾಡಿದ್ದ ಬೈಕ್ ಸುತ್ತಲೂ ಜನ, ಪೋಲಿಸ್ ನಾಯಿ ಹಿಡಕೊಂಡು ಬಂದ ಪೋಲಿಸರು. ಬೆಳಿಗ್ಗೆ ಬೈ ಕ್ ಪಾರ್ಕ್ ಮಾಡಿ ಹೋದ ಪೋಲಿಸಪ್ಪ ನೆನಪು ನನಗೆ ಆಗ ಆಗಿದ್ದು. ನಾನೇ ಅಲ್ಲಿ ಹೋದೆ. ಹೀಗೆ ಹೀಗೆ ಅಂದೆ. ಅಷ್ಟೊತ್ತಿಗೆ ಪೋಲಿಸಪ್ಪನ ಮಗ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಪೆಟ್ರೋಲ್ ಹಿಡುದು ಕೊಂಡು ಬಂದ.
ಆದದಿಷ್ಟೆ: ರಾಮಮೂರ್ತಿ (ಇದ್ದ ಕೆಲಸ ಬಿಟ್ಟು ಇನ್ನೊಂದನ್ನು ಹುಡುಕುತ್ತಿದ್ದ , ಮನೆಯಲ್ಲೇ ಇದ್ದ ಅವರು), ಬೆಳಿಗ್ಗೆ ಇಂದ ಅಲ್ಲಿ ಪಾರ್ಕ್ ಆಗಿದ್ದ ಹೊಚ್ಚ ಹೊಸ ಬೈಕ್ ಸಂಜೆ ತನಕ ಅಲ್ಲೇ ಇದ್ದದ್ದು ನೋಡಿ ಬಾಂಬ್ /ಅಥವಾ ಕಳ್ಳತನದಲ್ಲಿ ಇನ್ವಾಲ್ವ್ ಆಗಿದೆ ಬೈಕ್ ಅಂದುಕೊಂಡು ಪೋಲಿಸರಿಗೆ ಕರೆ ಮಾಡಿದಾರೆ. ಪೋಲಿಸರು ಎಲ್ಲರ ಹೇಳಿಕೆಯನ್ನು ಆಲಿಸುತ್ತ ಇದ್ದರು. ನಾನು ಹೋಗಿ ಬೆಳಿಗ್ಗೆ ಏನಾಯಿತು ಅಂತ ವಿವರಿಸಿದೆ. ಮುಂದಿನದನ್ನು ಪೋಲಿಸಪ್ಪನ ಮಗ ವಿವರಿಸಿದ: ಅಪ್ಪ ಎರಡು ದಿನದಿಂದ ನೈಟ್ ಡ್ಯೂಟಿ, ನಿನ್ನೆ ಬೆಳಿಗ್ಗೆ ಹತ್ತಿರದ ಸಂಬಂಧಿಯೊಬ್ಬರ ಸಾವು, ಮತ್ತು ಪುನ: ನೈಟ್ ಶಿಫ್ಟ್, ಅದ್ದರಿಂದ ಸರಿ ನಿದ್ದೆಯಾಗಿರಲಿಲ್ಲ. ಬೆಳಿಗ್ಗೆ ನನ್ನನ್ನು ಎಬ್ಬಿಸಿ ಬೈಕ್ ಎಲ್ಲಿ ಪಾರ್ಕ್ ಮಾಡಿದ್ದೇನೆ, ಪೆಟ್ರೋಲ್ ತುಂಬಿಸಬೇಕೆಂದು ಹೇಳಿ ಮಲಗಿದರು. ನನಗೆ ಬೇರೆ ತುರ್ತು ಕೆಲಸಗಳ ಒತ್ತಡದಿಂದ ಈಗಷ್ಟೆ ಇತ್ತಕಡೆ ಬರಲಾಯಿತು ಎಂದು ಹೇಳಿದ

ಮೇಲೇನ ಎರಡು ನೆನಪಿಗೆ ಕಾರಣ ಯಶವಂತ ಚಿತ್ತಾಲರ ’ನಾಗರ ಪಂಚಮಿ’ ಮತ್ತು ’ಬೆಳಗು ಜಾವದ ಕನಸು’ ಕತೆಗಳು
:-)

July 6, 2014

Book Cover page Design Contest

The Chukkubukku Website for books and famous publishing house of Dharwad- Manohar Grantha mala (Srikanth has a soft corner for this publishing house :-)) has announced a cover page design contest for M R Dattathri Novel 'Masaku Bettada dari' .
I Am travelling and my laptop does not support Kannada. So am copy pasting the mail from Chukku Team.
Last year Niharika entered one such contest and secured the second prize. Hope there are more contestants this year. So what are you waiting for. Throw in your hats in to the ring :-) The more the merrier....
Good luck from nenapina Sanchiyinda.
Details in the mail as follows :-

ಚುಕ್ಕುಬುಕ್ಕು ತಾಣ ಮತ್ತೊಂದು ಮುಖಪುಟ ಸ್ಪರ್ಧೆಯನ್ನು ತಂದಿದೆ! ಈ ಬಾರಿ ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಮನೋಹರ ಗ್ರಂಥಮಾಲೆಯ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಈ ಬಾರಿ ನೀವು ಮುಖಪುಟ ವಿನ್ಯಾಸಗೊಳಿಸಬೇಕಿರುವುದು ಕಾದಂಬರಿಕಾರ ಎಂ ಆರ್ ದತ್ತಾತ್ರಿ ಅವರ ಹೊಸ ಪುಸ್ತಕ 'ಮಸುಕು ಬೆಟ್ಟದ ದಾರಿ'ಗೆ.

ಬಹುಮಾನದ ಮೊತ್ತ ೫೦೦೦ ರೂ. ನಿಮ್ಮ ವಿನ್ಯಾಸ ನಮ್ಮನ್ನು ಜುಲೈ 12ರೊಳಗೆ ತಲುಪಬೇಕು. ಎಲ್ಲ ಪ್ರವೇಶಗಳನ್ನು ಅವಲೋಕಿಸಿ, ತಮ್ಮ ಕೃತಿಯ ಭಾವಲೋಕವನ್ನು ಸೂಕ್ತವಾಗಿ ಬಿಂಬಿಸುವ ಮುಖಪುಟವನ್ನು ಲೇಖಕರೇ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವಿನ್ಯಾಸವು ಆಗಸ್ಟ್ ತಿಂಗಳಲ್ಲಿ ಪ್ರಕಟಗೊಳ್ಳುವ ಈ ಕಾದಂಬರಿಯ ಹೊದಿಕೆಯಾಗಲಿದೆ. ಗ್ರಂಥಮಾಲೆಯು ಆಗಸ್ಟ್‌ ೧೫ರಂದು ಧಾರವಾಡದಲ್ಲಿ ನಡೆಸಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಈಗ ನೀವು ಮಾಡಬೇಕಾದ್ದಿಷ್ಟು: ಈ ಕೆಳಗೆ ಕಾದಂಬರಿಕಾರರು ತಮ್ಮ ಕೃತಿಯ ಬಗ್ಗೆ ಹೇಳಿರುವ ಟಿಪ್ಪಣಿಯನ್ನು ಹಾಗೂ ಚುಕ್ಕುಬುಕ್ಕು ಈಗಾಗಲೇ ಪ್ರಕಟಿಸಿರುವ ಒಂದು ಅಧ್ಯಾಯವನ್ನೂ ಓದಿಕೊಳ್ಳಿ. (ನಿಮ್ಮ ಕಲ್ಪನೆಗೆ ನೆರವಾಗಬಲ್ಲ ಇನ್ನಷ್ಟು ವಸ್ತುವನ್ನೂ ಪ್ರಕಟಿಸುತ್ತೇವೆ, ಗಮನಿಸುತ್ತಿರಿ.) ನಂತರ ಈ ಪುಸ್ತಕಕ್ಕೆ ಹೊಂದುವಂಥ ಮುಖಪುಟ ವಿನ್ಯಾಸವೊಂದನ್ನು ರೂಪಿಸಿ ನಮಗೆ ಕಳುಹಿಸಿಕೊಡಿ. ಒಬ್ಬರು ಗರಿಷ್ಠ ಮೂರು ವಿನ್ಯಾಸಗಳನ್ನೂ ಕಳಿಸಬಹುದು. ಬಳಸುವ ಚಿತ್ರ ಅಥವಾ ಫೋಟೊಗಳು ನಿಮ್ಮದೇ ಆಗಿರಬೇಕು. ಇಂಟ್‌ರ್ನೆಟ್‌ ಚಿತ್ರಗಳನ್ನು ಯಥಾವತ್‌ ಬಳಸಬೇಡಿ. ಎಲ್ಲ ವಿಷಯಗಳಲ್ಲೂ ಆಯೋಜಕರದೇ ಅಂತಿಮ ತೀರ್ಮಾನ.

ನಿಮ್ಮ ಮುಖಪುಟಗಳನ್ನು ಇಮೇಲ್‌ ಮಾಡಬೇಕಾದ ವಿಳಾಸ: chukkumail@gmail.com. ಮುಖಪುಟದ ಅಳತೆ: ಅಗಲ 14.5 ಸೆಂಟಿಮೀಟರ್‌, ಎತ್ತರ 22.5 ಸೆಂಟಿಮೀಟರ್‌, ರೆಸಲೂಷನ್‌ 300, ನಮಗೆ ಇಮೇಲ್‌ ಮಾಡುವಾಗ 72 ರೆಸಲೂಷನ್‌ಗೆ ಇಳಿಸಿ ಜೆಪೆಗ್‌ ಫಾರ್ಮಾಟ್‌ಗೆ ಬದಲಾಯಿಸಿ ಕಳಿಸಿ.

ನಿಮಗೆ ಪುಸ್ತಕ ಮುಖಪುಟಗಳತ್ತ ಆಸಕ್ತಿ ಇದ್ದರೆ ಸಾಕು, ನೀವೀ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೋಟೋಶಾಪ್‌ ಬರಲೇಬೇಕು ಅಂತ ಇಲ್ಲ. ನೀವೇ ತೆಗೆದ ಫೋಟೊ, ಬಿಳಿಹಾಳೆ, ಬಣ್ಣ, ಬ್ರಷ್ಯು, ಕತ್ತರಿ, ಗೋಂದು ಏನನ್ನಾದರೂ ಬಳಸಿ. ಫೋಟೊ ತೆಗೆದು ಪುಸ್ತಕದ ಹೆಸರು ಸೇರಿಸಿ ಕಳಿಸಿ.

ಇದು ಈ ತಾಣದಲ್ಲಿ ನಡೆಯುತ್ತಿರುವ ಮೂರನೇ ಮುಖಪುಟ ಸ್ಪರ್ಧೆ. ಹಿಂದಿನ ಸ್ಪರ್ಧೆಗಳಂತೆಯೇ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು ನಿರೀಕ್ಷಿಸುತ್ತಿದ್ದೇವೆ. 


ನಿಮ್ಮ ಸಹಕಾರ, ವಿಶ್ವಾಸ ನಮ್ಮೊಂದಿಗೆ ಹೀಗೆಯೇ ಇರಲಿ.



ವಂದನೆಗಳೊಂದಿಗೆ

ಸೌಮ್ಯ ಕಲ್ಯಾಣ್ಕರ್
ಚುಕ್ಕುಬುಕ್ಕು ಟೀಮ್
:-)
good luck guys. 6 more days to go

June 29, 2014

ನಿಹಾ ಮಣಿ

ಈ ತಿಂಗಳ ಮೊದಲಿಗೆ ನಿಹಾ ಜತೆ ಅವಳ ಕಾಲೇಜ್ ಗೆ ಅವಳ ಸೈಕೊಲೊಜಿ ಪ್ರಾಕ್ಟಿಕಲ್ಸ್ ಗೆ ಸಬ್ಜೆಕ್ಟ್ ಆಗಿ ಹೋಗಿದ್ದೆ. ಈ ಸಲ ಅಕ್ಕನನ್ನು ಕರಕೊಂಡು ಹೋಗು ಅಂದ್ರೆ, ಇಲ್ಲ ಅಮ್ಮ ಯು ಆರ್ ಲಕ್ಕಿ ಫಾರ್ ಮಿ ಅಂತ ಪ್ಹುಸಲಾಯಿಸಿ ಕರಕೊಂಡು ಹೋದ್ಲು. ಅವಳ ಕೊನೆಯ ವರ್ಷ ಈ ಕಾಲೇಜ್ ನಲ್ಲಿ ಅದಕ್ಕೆ ನಾನು ಸುಮ್ಮನೆ ಹೋದೆ. 
ಕಾಲೇಜ್ ತಲುಪಿದ ತಕ್ಷಣ ಬೆಲ್ಲಕ್ಕೆ ಇರುವೆ ಮುತ್ತಿದ ಹಾಗೆ ಅವಳ ಕ್ಲಾಸ್ಮೇಟ್ಸ್ ಅವಳನ್ನು ಸುತ್ತುವರೆಯುವುದನ್ನು ನೋಡೋದೆ ಒಂದು  ಸಡಗರ ನನಗೆ. 'ನಿಯಾರಿಕ (ನಿಹಾರಿಕಾ) ಕ್ಯಾನ್ ಯು ಪ್ಲೀಸ್ ಹೆಲ್ಪ್ ಮಿ ವಿತ್ ದಿಸ್ ? ಅಂತ ಕೇಳೋವ್ರು ಎಷ್ಟೋ ಫ್ರೆಂಡ್ಸ್. ಅವಳ ಉತ್ತರ , ;Actually it is very easy ಅಂತ ಶುರು ಮಾಡಿ ನಿಧಾನಕ್ಕೆ ಅವರಿಗೆ ಅರ್ಥವಾಗುವಂತೆ explain ಮಾಡ್ತಾಳೆ. ಅವಳು ಟೀಚರ್ ಆಗಲಿ ಅಂತ ನನಗೆ ಅನಿಸಿ, ಹಾಗೇ ಹೇಳಿದ್ದೇನೆ ಕೂಡ. ಆದರೆ ಅವಳು I have no patience to teach, iam a one to one person ಅಂತ ಹೇಳಿ ನಗುತ್ತಾಳೆ. 
ಅವಳನ್ನು ಸ್ನೇಹಿತರು ಸುತ್ತುವರೆದಾಗ ನನಗೆ ನನ್ನ ಶಾಲಾ ಜೀವನದ ನೆನಪಾಗುತ್ತದೆ. ಯಾರಾದರೂ ಮಾತಾಡಿಸಿಯಾರೆಂದು ನಾನು ಬಗ್ಗಿಸಿದ ತಲೆ ಕ್ಲಾಸ್ ತಲುಪಿದ ಮೇಲೆಯೇ ಎತ್ತುತಿದ್ದುದು. ಟೀಚರ್ ಏನಾದರೂ ಪ್ರಶ್ನೆ ಕೇಳಿದ್ದಲ್ಲಿ ನನಗೆ ಉತ್ತರ ಗೊತ್ತಿದ್ದರೂ ನಾನು ಯಾವತ್ತು ಕೈ ಎತ್ತಿ ಉತ್ತರ ಗೊತ್ತುಂಟು ಅಂತ ಅಂದಿದಿಲ್ಲ. ನನಗೆ ಯಾವಾಗಲು ಒಂದು ಹೆದರಿಕೆ ಇರ್ತಿತ್ತು. ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ, ಕ್ಲಾಸ್ ನ ಮಕ್ಕಳೆಲ್ಲ ನಾನು ಮಹಾ ಜಾಣೆ ಅಂತ ತಪ್ಪು ತಿಳಿದುಕೊಂಡು ನನ್ನ ನೋಟ್ ಬುಕ್ ಯಾರಾದರೂ ಪರೀಕ್ಷೆ ಸಮಯದಲ್ಲಿ ನನ್ನ ಬಳಿ ಪಡಕೊಂಡು ಅದನ್ನು ನನಗೆ ವಾಪಸ್ ಮರಳಿಸಲಿಕ್ಕೆ ಇಲ್ಲ ಅಂತ. (ಹೀಗಾಗಿದ್ದು ಯಾರೋ ನಾನು ಚಿಕ್ಕವಳಿದ್ದಾಗ ಮಾತಾಡ್ತಾ ಇದಾಗ ಕೇಳಿಸಿಕೊಂಡಿದ್ದು) ಒಂದ್ಸಲ ಹೀಗೆ ಅಂಬಿಕಾ ಕುಟ್ಟಿ ಟೀಚರ್ ಮ್ಯಾಥ್ಸ್ ಪಾಠ ಹೇಳಿಕೊಡ್ತಾ ಅದರ ಹಿಂದಿನ ದಿನ ನಮಗೆ trigonometry fucntion ಬಗ್ಗೆ ಹೇಳಿಕೊಟ್ಟಿದ್ದರು . ಯಾರಿಗೆ ಗೊತ್ತು ಅಂತ ಕೇಳಿದರು . ನನಗೆ ಗೊತ್ತಿತ್ತು ಆದರೂ ಗುಮ್ಮನ ಗುಸ್ಕನ ತರಹ ಸುಮ್ಮನಿದ್ದೆ. ಕೊನೆಗೆ ಟೀಚರ್ ಒಬ್ಬೊಬ್ಬರನ್ನೇ ನಿಲ್ಲಿಸಿ ಕೇಳುತ್ತಾ ಹೋದರು. ಹೆಚ್ಚಿನ ಹುಡುಗ ಹುಡುಗಿಯರು ಉತ್ತರ ಗೊತ್ತಿಲ್ಲ ಎಂದರು, ಕೆಲವರು ತಪ್ಪು ಉತ್ತರ ನೀಡಿದರು. ನನ್ನ ಸರದಿ ಬಂದಾಗ ನನಗೆ ಗೊತ್ತಿರುವ ಉತ್ತರ ಹೇಳಿದೆ. ಟೀಚರ್ ಅದು ಸರಿಯೋ ತಪ್ಪೋ ಅಂತ ತಿಳಿಸದೇ ಮುಂದಿನ ಬೆಂಚ್ ನವರಿಗೆಲ್ಲ ಪ್ರಶ್ನೆ ಕೇಳುತ್ತ ಹೋದರು. ಇಡೀ ಕ್ಲಾಸ್ ನ ಮಕ್ಕಳಿಗೆಲ್ಲ ಕೇಳಿ ಆಯ್ತು. ಆಮೇಲೆ ಓನ್ಲಿ ಮಾಲತಿ ಪೈ ವಿಲ್ ರಿಮೈನ್ ಇನ್ ದಿ ಕ್ಲಾಸ್ ರೆಸ್ಟ್ ಆಫ್ ಯು ಗೆಟ್ ಔಟ್ ಅಂತ ಹೇಳಿದರು. ಇಡೀ ಕ್ಲಾಸ್ ಖಾಲಿ ನಾನೊಬ್ಬಳೆ ಒಳಗೆ. ಟೀಚರ್ ನನಗೆ sarcastically ಮೇಡಂ ಜೀ ಉತರ ಗೊತ್ತಿತ್ತಲ್ಲವೇ, ಯಾಕೆ ಕೈ ಎತ್ತಲಿಲ್ಲ? ನಾನಾಗಿ ಕೇಳಬೇಕಿತ್ತೆ ಅಂತ ಬೈದು ಬಿಟ್ಟರು. ಅದ್ಯಾಕೋ ನನಗೆ ಯಾರನ್ನಾದ್ರೂ ಹಚ್ಚಿಕೊಳ್ಳೋದರಲ್ಲಿ ಒಂದು ತರಹ ಎಲರ್ಜಿ. ಈಗಲೂ. ಶ್ರೀಕಾಂತ ಎಷ್ಟೊಂದು ಜನರನ್ನು ನನಗೆ ಪರಿಚಯಿಸುತ್ತಾರೆ. ನಾನು ಆ ಕ್ಷಣಕ್ಕೆ ಹಲ್ಲೋ, ಹಾಯ್ ಅಂದು ಮರೆತು ಬಿಡುತ್ತೇನೆ. ಆಮೇಲೆ ಅವರು ಎಂದಾದರೊಂದು ನನಗೆ ಸಿಕ್ಕಿ ಮಾತನಾಡಿಸಿದರೆ ನಾನು ತಬ್ಬಿಬ್ಬು.
ಮಾಲವಿಕ ನನ್ನ ಹಾಗೆ ಸ್ವಲ್ಪ. ನಿಹಾ ಕಮ್ಪ್ಲೀಟ್ ಬೇರೆ. ತುಂಬಾ ಸೋಷಲ್ ನೇಚರ್. ಶ್ರೀಕಾಂತ ತರಹ ಅನ್ನಬಹುದು. 
ನಿಹಾ ಳ ರಿಸಲ್ಟ್ ಬಂದಿದೆ. ಪುನ: ಅವಳು ಒಳ್ಳೆ ಮರ್ಕ್ಸ್ ತೆಗೊಂಡು ಪಾಸ್ ಆಗಿದ್ದಾಳೆ . ಒಂದು ವರ್ಷ ಸ್ಟಡಿ ಗ್ಯಾಪ್ ತೆಗೊಂಡು ಆರ್ಟ್ ಫೋಟೋಗ್ರಾಫಿ ಬಗ್ಗೆ explore ಮಾಡುತ್ತಾಳಂತೆ. ನನಗೆ ಖುಶಿ. ಆಗಲೇ ಕೆಲವು ಫ್ರೀ lance ಕೆಲಸ ಮಾಡಿ ಸ್ವಲ್ಪ ದುಡ್ಡು ಮಾಡಿದ್ದಾಳೆ. 
ಅವಳಿಗೊಂದು ಗುಡ್ ಲಕ್. ಸುಮ್ನೆ ಶೇರ್ ಮಾಡುವ ಮನಸ್ಸಾಯ್ತು ಅಷ್ಟೆ.
ಮಗಳು ಅಪೂರ್ವಳ ಮದುವೆ ಚೆನ್ನಾಗಿ ನಡೆಯಿತು. ಆ ಗಡಿಬಿಡಿಯಲ್ಲಿದ್ದದ್ದರಿಂದ ಬ್ಲಾಗ್ ಅಪ್ಡೇಟ್ ಸ್ವಲ್ಪ ಸ್ಲೋ ಆಯ್ತು. ಇಲ್ಲಿದೆ ನಿಹಾ ಕ್ಲಿಕ್ ಮಾಡಿದ ಫೋಟೊಗಳು........
Some private moments at Apoorva's wedding

June 20, 2014

out of this world- 1

ಹಿಂದಿನ ವರ್ಷ ಜೂನ್ ನಲ್ಲಿ ನಡೆದದ್ದು. ಸಣ್ಣಕ್ಕೆ ಮಳೆ ಹನೀತಾ ಇತ್ತು. ಶ್ರಿಕಾಂತ 'ಇವತ್ತು ವಾಕ್ ಹೋಗಿದ್ದ್ಯೇನೆ?' ಅಂತ ಕೇಳಿದರು. ನಾನು ಹೋಗಿರಲಿಲ್ಲ. ಅದಕ್ಕ ಪ್ರಶ್ನೆ ನನಗಲ್ಲವೆಂಬಂತೆ ಇಗ್ನೋರ್ ಮಾಡಿದೆ. ನಾನು ಉತ್ತರ ಹೇಳಿಲ್ಲವಾದ್ದರಿಂದ ರಾಯರಿಗೂ ಗೊತ್ತಾಯ್ತು ನಾ ವಾಕ್ ಹೋಗಿಲ್ಲವೆಂದು. 'ಸೋಂಬೇರಿ , ನಡಿ  ನಡಿ ಮನೆಯಲ್ಲಿ ಫ್ರೂಟ್ಸ್ ಇಲ್ಲ, ಹಣ್ಣಿನ ಅಂಗಡಿಗೆ ಹೋಗಿ ತೆಗೊಂಡು ಬರುವ' ಅಂದರು. ನಾನು ಹ್ಯಾಪ್ ಮೋರೆ ಮಾಡ್ಕೊಂಡು ರೆಡಿಯಾದೆ. ಮಳೆ ನಿಂತಿತ್ತು. ವಾತಾವರಣ ಕೂಲ್ ಆಗಿತ್ತು. ಮೇನ್ ರಸ್ತೆಯಲ್ಲಿ ರಸ್ತೆ ಅಲ್ಲಲ್ಲಿ ಅಗೆದು ಹಾಕಿದ್ದರಿಂದ ಮಳೆ ನೀರಿನಿಂದ ಸೇರಿ ಕೊಚ್ಚೆಯಾಗಿತ್ತು. ನಿಧಾನವಾಗಿ ನಡೆಯದಿದ್ದರೆ ಜಾರುವುದು ಗ್ಯಾರಂಟಿ. ಡಾಕ್ಟರ್ ನನಗೆ ಬೋನ  ತುಂಬಾ ವೀಕ್ ಆಗಿದೆ ಅಂತ ಹೇಳಿದ ಸಮಯದಿಂದ ನಾನು ಜಾರಿ ಬೀಳದಂತೆ ತುಂಬ ಸಾವಧಾನವಾಗಿ ನಡೆಯುವುದು ಕಲಿತಿದ್ದೇನೆ. ಶ್ರೀಕಾಂತಗೆ ಕೆಲವೊಮ್ಮೆ ಕಿರಿಕಿರಿಯಾಗುವಷ್ಟು. :-) 

ಸರಿ, ರಸ್ತೆ ಮೇಲೆ ವಾಹನಗಳ ನಿರಂತರ ಓಡಾಟ, ಪಾದಚಾರಿಗಳಿಗೆ ಓಡಾಡಲು ರಸ್ತೆ ಇರಲಿಲ್ಲ. ಕೊಚ್ಚೆ ರಾಶಿಯ ಮೇಲೆ ನಡೀಬೇಕಾಯ್ತು. ಪುನ: ಸಣ್ಣಕ್ಕೆ ಮಳೆ  ಹನಿಯಲು ಶುರು ಆಯ್ತು. ವಾಹನಗಳ ದೀಪದ ಬೆಳಕಿ ನಲ್ಲಿ ಮಳೆನೀರಿಗೆ ಬೆಂಕಿ ತಾಗಿದಂತೆ, ಬಂಗಾರದ ಮಣಿಗಳನ್ನು ಸರಿಗೆಗೆ ಹಾಗಿ ಪೋಣಿಸಿದಂತೆ ಕಾಣುವುದನ್ನು ನಾನು ಎಂಜಾಯ್ ಮಾಡ್ತಾ ಶ್ರೀಕಾಂತ ಕೈಗೆ ಜೋತು ಬಿದ್ದು  ನಡೀತಾ ಇದ್ದೆ. ಅಷ್ಟರಲ್ಲಿ ದೂರದಲ್ಲಿ  ನಾನು ಆ ಗಿಡ್ಡ ಆಕೃತಿಯನ್ನು ನೋಡಿದ್ದು. ಬೆನ್ನಿನ ಮೇಲೆ ಭಾರವಾದ ಚೀಲ ಇದ್ದುದರಿಂದ ಬಾಗಿದ ಬೆನ್ನು. ಕಾಲುಗಳ ಬಳಿ ಮಡಚಿದ ಬಿಳಿ ಪೈಜಾಮ, ಮೇಲೆ ಹರಕಲು ಕಪ್ಪು ಕೋಟು. ಶ್ರೀಕಾಂತ ಸಡನ್ ಆಗಿ 'malathi, what are you doing? ಯಾಕೆ ಹೀಗೆ ತಳ್ಲುತ್ತ  ಇದ್ದೀಯ? ಇನ್ನು ಚರಂಡಿಗೆ ಬಿಳೋದೊಂದು ಬಾಕಿ ' See that man...over there?? he is going to come and touch me' ಅಂದೆ. ಅರೇ ಆತ  ಅಷ್ಟು ದೂರ ಇದ್ದಾನೆ, ಈ ವಾಹನ ಗಳ ಓಡಾಟದಲ್ಲಿ ಸಧ್ಯಕ್ಕಂತು ಆ ಅಸಾಮಿ ಕ್ರಾಸ್ ಮಾಡಲು ಆಗುವುದಿಲ್ಲ. ಮತ್ತೆ ವೈ ವಿಲ್ ಹಿ ಟಚ್ ಯು? ಅಂದ್ರು ನಾನು I don't know ಅಂತ ತಲೆ ಎತ್ತಿದರೆ ಆ ಮನುಷ್ಯ ನನ್ನ ಮುಂದೆಯೇ. ಎರಡು ಕೈಗಳನ್ನು ಶ್ರೀಕಾಂತ ರಟ್ಟೆಗೆ ಜೋತು  ಬಿಟ್ಟಿದ್ದೆ ಅಂದನಲ್ಲ?ನನ್ನ ಉದ್ದ ತೋಳಿನ ಚೂಡೀದಾರ ನಿಂದ ನನ್ನ ಬಲಗೈಯ ಬೆರಳಿನ ಮೇಲಿನ  ಸ್ವಲ್ಪ ಭಾಗ ಹೊರಗೆ ಇಣುಕ್ತಾ ಇತ್ತು. ಆ ಮನುಷ್ಯ ಅವನ ಬಲಗೈ ಯಿನ ತೋರು ಬೆರಳಿನಿಂದ ಒಂದ್ಸಲ ಮುಟ್ಟಿ ಸಲ್ಯೂಟ್ ಹೊಡೆದು ಹೋದ. 
ಈಗ ಶಾಕ್ ಆಗುವ ಸರದಿ ಶ್ರೀಕಾಂತ ದು 'ವಾಟ್ ವಾಸ್ that'?  ಅಂತ ಎರಡು ನಿಮಿಷ ನಾವು ಸುಮ್ನೆ ಅಲ್ಲಿ ನಿಂತಿದ್ವಿ. ಆಮೇಲೆ ತಲೆ ಕೊಡವಿಕೊಂಡು ಹಣ್ಣು ಖರೀದಿಸಿ , ನನಗೆ ಇವೆಲ್ಲವನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳುವ ತವಕ. ಮರುದಿನ ಮಿತ್ರರೊಂದಿಗೆ ಇದನ್ನು ಶೇರ್ ಮಾಡಿದಾಗ ಅವರು 'ನಿನಗೇ  ಯಾಕೆ  ಯಾವಾಗಲು ಈ ತರದ್ದೆಲ್ಲ  ಆಗೋದು' ಅಂತ ಕೇಳಿದ್ರು. ಯಾಕೆಂದರೆ ಅವರ ಜತೆ ಇದ್ದಾಗ ಒಂದೆರಡು ಸಲ  ಈ ತರಹದು ಸಂಭವಿಸಿವೆ. :-)
ನಿನ್ನೆ ಫೇಸ್ ಬುಕ್ ನಲ್ಲಿ ಗಿರೀಶ ರಾವ್ ಹತ್ವಾರ್ (ಜೋಗಿ) ಅವರ ಸ್ಟೇಟಸ್ ಇದನ್ನು ನೆನಪಿಸಿತು.  ಅಷ್ಟೆ. ಹಾಗೆ ನಿಮ್ಮೊಂದಿಗೆ ಶೇರ್ ಮಾಡುವಾ ಅಂತ 

June 14, 2014

power packed pongal (copied from my food blog)

aka ಪಾಲಕ್  ಪೊಂಗಲ್

ಮೂರು ವರ್ಷದ ಹಿಂದೆ ಶ್ರೀಕಾಂತ ಗೆ ಆಫಿಸ್ ಕೆಲಸದ ಮೇಲೆ ಯೂರೊಪ್ ಗೆ ಹೋಗಲಿಕ್ಕಿತ್ತು. ಯೂರೊ ಡೊಲರ್ಸ್ ತೆಗೆದುಕೊಳ್ಳಲ್ಲು ರಿಚ್ ಮಂಡ್ ರೋಡ್ ಗೆ ಹೋಗಬೇಕಿತ್ತು. ಮತ್ತು ಅಲ್ಲಿಂದ ಪ್ರವಾಸಕ್ಕೆ ಬೇಕಾದ ಬಟ್ಟೆ ಬರೆಗಳನ್ನು ಕೊಳ್ಳಲು ಕಮರ್ಶಿಯಲ್ ಸ್ಟೀಟ್ ಗೆ ಹೋಗಲಿಕ್ಕೆದೆಯೆಂದು ನನಗೂ ಅವರ ಜತೆ ಬರಲು ಹೇಳಿದರು. ಆ ದಿನ ನಿಂಪಿ ಗೆ ರಜೆ. ಅವಳನ್ನೂ ಕರೆದುಕೊಂಡು ಹೋದೆವು. ರಿಚ್ ಮಂಡ್ ರೋಡ್ ಗೆ ಹೋಗಿ ಕ್ಯಾಶ್ ಕೊಟ್ಟು ಅದನ್ನು ಯೂರೊ ಡಾಲರ್ಸ್ ಗೆ ಬದಲಾಯಿಸಿ ( ಆ ಆಫಿಸ್ ತೆರೆಯುವುದೇ ಬೆಳಿಗ್ಗೆ 11.00 ಗಂಟೆಗೆ. ನಾವು ತಲುಪುವಾಗ 11.45. ಅಲ್ಲಿಯ ಫಾರ್ಮೆಲಿಟಿಸ್ ಮುಗಿಯ ಬೇಕಾದರೆ ಸುಮಾರು ಹೊತ್ತು ಕಳೆಯಿತು. ಹೊಟ್ಟೆ ತಾಳಹಾಕಲಾರಂಭಿಸಿತು. ಶ್ರೀಕಾಂತ ನಮ್ಮನ್ನು ಅಲ್ಲಿಯೆ ಬಳಿ ಯಿದ್ದ ವುಡ್ ಲ್ಯಾಂಡ್ಸ್ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲ ಬಾರಿಗೆ ಸವಿದಿದ್ದು ಪಾಲಕ್ ಪೊಂಗಲ್. ನನಗಂತೂ ತುಂಬಾ ಇಷ್ಟ ಆಗಿ ಈಗ ನನ್ನದೇ ವರ್ಶನ್ ಗಳಲ್ಲಿ ಇದನ್ನು ಮಾಡುತ್ತೇನೆ.

ಬೇಕಾಗುವ ಸಾಮಾನು:
ಜವೆ ಗೋದಿ ಸದಕು (ಬ್ರೊಕನ್ ವ್ಹೀಟ್), ಹಸಿರು ಬೇಳೆ ಸಮ ಪ್ರಮಾಣದಲ್ಲಿ

ಮೊದಲಿಗೆ ನಾನು ಹೆಸರು ಬೇಳೆಯನ್ನು ಸ್ವಲ್ಪ ಹುರಿದುಕೊಳ್ಳುತ್ತೇನೆ.ತಣ್ಣಗಾದ ನಂತರ ಜವೆ ಗೋದಿಯೊಂದಿಗೆ ಮಿಕ್ಸ್ ಮಾಡಿ ಚೆನ್ನಾಗಿ ತೊಳೆದು ಮೂರು ಪಟ್ಟು ನೀರು ಹಾಕಿ ಬೇಯಿಸಬೇಕು.
ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಎರಡು ನಿಮಿಷ ಬಿಸಿ ನೀರಿನಲ್ಲಿ ಹಾಕಿ, ಅದರಿಂದ್ದ ತೆಗೆದು ತಣ್ಣೀರಿನಲ್ಲಿ ಹಾಕಿಡಿ. ಆ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪಕ್ಕಕ್ಕಿಡಿ.
ನೀರುಳ್ಳಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ (optional), ಸ್ವಲ್ಪ ಹಸಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ.
ಸ್ವಲ್ಪ ಎಣ್ಣೆ/ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕರಿಬೇವು, ಇಡೀ ಕರಿ ಮೆಣಸು ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಹುರಿಯಿರಿ, ನಂತರ ಶುಂಠಿ ಚೂರು ಹಾಕಿ. ಸ್ವಲ್ಪ ಅರಿಶಿನ ಪುಡಿ ಬೆರೆಸಿ. ರುಬ್ಬಿಟ್ಟ ಪಾಲಕ್ ಸೊಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ನೀರು ಬೆರೆಸಿ. ಇದಕ್ಕೆ ಬೇಯಿಸಿಟ್ಟ ಗೋದಿ+ಹಸಿರುಬೆಳೆ ಹಾಕಿ. ಉಪ್ಪು ಚೂರು ಬೆಲ್ಲ ಬೆರೆಸಿ ಬೇಕಾದಷ್ಟು ನೀರು ಹಾಕಿ ಒಂದು ಕುದಿ ಬಂದ ನಂತರ ಕೆಳಗಿಳಿಸಿ. ಇದಕ್ಕೆ ಕಾಯಿ ಚಟ್ನಿ ಅಥವಾ ಟ್ಯೋಮೇಟೋ ನೀರುಳ್ಳಿ+ಮೊಸರು ಸ್ಯಾಲಾಡ್ ಜತೆ ಸೆರ್ವ್ ಮಾಡಿ.
ಬೇಗ ಹಸಿವೆ ಆಗಲ್ಲ. ಮತ್ತು ಇಡೀ ದಿನ್ active ಆಗಿರುತ್ತೆ ದೇಹ/ಮನಸ್ಸು. ಶುಗರ್ complaint ಇರುವವರಿಗೆ ಇದು ಉಪಯುಕ್ತ. 

June 8, 2014

ಮಾತಿಗಿಂತ ’ಮೌನ’..............??!! Not always

ಆಫಿಸ್ ನ ಕೆಲಸ, ಮತ್ತೊಂದೆರಡು ತುರ್ತು ಕೆಲಸ ಮುಗಿಸಿ ಅಲಿಂದ ಹೊರಡುವಾಗ ಲೇಟ್. ಆದರೂ 15 ನಿಮಿಷ ಮುಂಚೆ ತಲುಪುತ್ತೇವೆ ಅಷ್ಟು ಸಾಕು ಅಂದುಕೊಂಡಿದ್ದೆ. ರಾಯರು ನಮ್ಮನ್ನು drop ಮಾಡಿ ಮನೆಗೆ ಹೋಗುವವರಿದ್ದರು. ನಾನು ಶುಕ್ರವಾರ ಮೂರು ಟಿಕೆಟ್ ಬುಕ್ ಮಾಡಿಕೊಂಡಿದ್ದೆ. ಕೊನೆ ಗಳಿಗೆಯಲ್ಲಿ ಮಾಲವಿಕಾ ಬರಲ್ಲ ಅಂದ್ಲು. ನಾನು ನಿಹಾ (ನನ್ನ ನಿಹಾ ಕಾಲೇಜಿನ ಹಲವಾರು ನಾಟಕಗಳಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಭಾಗವಹಿಸಿ(ರಂಗ ಸಜ್ಜಿಕೆ ಅವಳ speciality) ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಹಾಗಾಗಿ ನಾನು ಅವಳು ನಾಟಕಗಳಿಗೆ ಹೋಗುವುದು ಸಾಮಾನ್ಯ. ಏನಾದರೂ ಹೊಸತನ್ನು ಕಲೀಲಿಕ್ಕೆ/ನೋಡಕ್ಕೆ ಸಿಗತ್ತೆ ಅಂತ.) ದಾರಿ ಮಧ್ಯ ಶ್ರೀಕಾಂತ,’ನಾನು ನಾಟಕಕ್ಕೆ ಬರ್ತೀನಿ ಹೇಗೂ ಮೂರು ಟಿಕೆಟ್ ಬುಕ್ ಮಾಡಿದೀ ಅಲ್ಲ’ ಅಂದ್ರು. ನನಗೆ ಪುಕು ಪುಕು. ನಿಧಾನಕ್ಕೆ ಬಾಯಿ ಬಿಟ್ಟೆ. ’ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟರ್ ನೋಡಿ ಮತ್ತು ನನ್ನ ಇಷ್ಟದ ಕುಮುದವಲ್ಲಿ ಅದರಲ್ಲಿ ಇದ್ದಾರೆ ಅಂತ ಈ ನಾಟಕ ನೋಡುವ ಪ್ಲ್ಯಾನ್ ಅಂತ ಹೆದರಿ ಹೆದರಿ ಹೇಳಿದೆ. ಪುಕುಪುಕು/ಹೆದರಿಕೆ ಯಾಕಂದ್ರೆ after an hectic tiruing day at the office i wanted him to relax and enjoy. 
ನಾನು ನನ್ನ ಯೋಚನೆಯಲ್ಲಿ ಮುಳುಗಿದ್ದು ಸಡನ್ ಆಗಿ ಅಲ್ಲಿಂದ ಹೊರಬಂದಾಗ ದಾರಿ ಫಲಕ ಅಶೋಕನಗರ ತೋರಿಸ್ತಾ ಇತ್ತು. ’ಹೋಯ್ ಮಾರಾಯ್ರೆ ಎಲ್ಲಿಗೆ ಅಂತಾ ಕರಕೊಂಡು ಹೋಗ್ತಿದ್ದೀರಿ? ಅಂದ್ರ’ ಹನುಮಂತನಗರ ಮೇಡಂ ಅಂದಾ ಆಟೋ ದವ. ಯಾರಿಗಾದ್ರು ಕೇಳಿ ಯಾಕೋ ದಾರಿ ತಪ್ಪಿದ ಹಾಗೆ ಅನ್ನಿಸ್ತಾ ಇದೆ ಅಂದೆ. ಅಲ್ಲೇ ನಿಂತಿದ್ದ ಇನ್ನೊಂದು ರಿಕ್ಷಾದವನಿಗೆ ಕೆ ಎಚ್ ಕಲಾಸೌಧ ಎಲ್ಲಿ ಅಂದ್ರೆ, ನನ್ನ ಮುಖ ಮಿಕಿ ಮಿಕಿ ನೋಡ್ತಾ ಇದ್ದ. ಕೊನೆಗೆ ರಾಮಾಂಜನೇಯ ದೇವಸ್ಥಾನ ಅಂದೆ. ಅದಕ್ಕೆ ರೈಟ್ ಗೆ ಹೋಗಿ ಇನ್ನೊಂದು ರೈಟ್ ಆಮೇಲೆ ಸರ್ಕಲ್ ಅಲ್ಲಿಂದ ಸೀದಾ ಅಂದ ಭೂಪ್. ನಮ್ಮ ಆಟೋ ಡ್ರೈವರ್ ಇನ್ನಷ್ಟು ಸುತ್ತಾಡಿಸಿ, ನಾನು ಆಲ್ಮೋಸ್ಟ್ ನನ್ನ ಭಾರವಾದ bag ನಿಂದ ಅವನ ತಲೆ ಒಡೆಯುವುದೊಂದು ಬಾಕಿ. ಅಂತೂ ಇಂತೂ ಸುತ್ತಾಡಿಸಿ ನನ್ನ ಪಿರಿಪಿರಿ ಮಧ್ಯೆ 7.28 ಕ್ಕೆ ನಾವು ಕಲಾಸೌಧ ತಲುಪಿದ್ವಿ. ಆಗಲೇ ಅಲ್ಲೆಲ್ಲ ರಶ್. ’ಚೆನ್ನಾಗಿದೆಯಾ ಈ ನಾಟಕ? ಎಷ್ಟೊಂದು ಜನರು ಅಮ್ತ ಕೇಳಿದರು ರಾಯರು. ಅದಕ್ಕೆ ನಾನು ಫೇಸ್ ಬುಕ್ ಪ್ರಭಾವ. ನಾನು ಅಲ್ಲೇ ಇದರ ಪೋಸ್ಟರ್ ನೋಡಿ ಬಂದದ್ದು ಅಂದಾಗ ಅವರು ಗಟ್ಟಿಯಾಗಿ ನಕ್ಕರು. ನಿಹಾ ಟಿಕೆಟ್ ತರಲು ತೆರಳಿದರೆ ನಾನು ಟಾಯಲೆಟ್ ಗೆ ಹೋದೆ. ಅಲ್ಲಿಂದ ಹೊರಗೆ ಬರುವಾಗ ಕೆಳಗಡೆ ಹೌಸ್ ಫುಲ್, ಮೇಲಕ್ಕೆ ಹೋಗಿ ಅಂದ್ರು. ನನಗೆ ಯಾವತ್ತೂ ನಾಟಕ ನೋಡಲು ಹೋದಾಗ ಒಳಗಡೆ ಹೋಗಿ ಸ್ಟೇಜ್ ಕಡೆಯ vantage point ನೋಡಿ ಜಾಗ ಹುಡುಕುವ ಅಭ್ಯಾಸ. ಮೇಲೆ ಕೂಡ ರಶ. ನಾನು ಹಲವಾರು ಬಾರಿ ಕೆ ಎಚ್ ಕಲಾಸೌಧಕ್ಕೆ ಹೋದರೂ ಮೇಲಿನ ಸೆಕ್ಷನ್ ಒಪನ್ ಮಾಡುವಷ್ಟು ಗರ್ದಿ ಇರಲಿಲ್ಲ. ರಾಯರು ಎದುರಿನ ಬೆಂಚ್ ಮೇಲೆ ಕೂರುವ ಅಂದ್ರು. ಅಲ್ಲಿ ಕೂತ್ರೆ ಅಲ್ಲಿನ parapet ನಮಗಿಂತ ಉದ್ದ. ಸ್ಟೇಜ್ ಸರಿಯಾಗಿ ಕಾಣ್ತಿರಲಿಲ್ಲ. ಮಂಗಗಳ ತರ parapet ಮೇಲೆ ನೇತಾಡ್ತಾ ನಾಟಕ ನೋಡುವ ಅನುಭವ. ಅದರಲ್ಲಿ ನನ್ನ ಹಿಂಬದಿ ಕೂತವರಿಗೆ ಕೆಮ್ಮು, ಗಡಿ ಗಡಿ ಕ್ಯಾಕರಿಸ್ತಾ ಇದ್ರೆ ನನಗೆ ಬೆನ್ನ ಮೇಲೆ ಅವರ ಕಫ ಏನಾದರೂ ಬೀಳ ಬಹುದು ಅಂತ amoeba ತರಹ ಮೈ ಅನ್ನು ಮುದುಡಿಸ್ತಾ ಇದ್ದೆ. :-(.  ಇಇನ್ನೊಬ್ಬರು ಪಿಸಿ ಪಿಸಿ ಮಾತಿನಲ್ಲಿ ನಾಟಕ ಯಾರಿಗೋ explain ಮಾಡ್ತಾ ಇದ್ರು. ಅಸಹನೆ ಇಂದ ಅವರ ಕಡೆ ನೋಡಿದ್ರೆ ಅವರು ಪುಟ್ಟ ಹುಡುಗಿಗೆ ನಾಟಕ explain ಮಾಡ್ತಾ ಇದ್ದದರಿಂದ ಸುಮ್ನಾದೆ. ಮತ್ತೆ ಹಿಂದೆ ಕೂತವರ ಕಾಲು ನಮ್ಮ ಬೆನ್ನಿಗೆ ತಾಗ್ತಾ literally we were on the edge of the seat. ಮನೆಗೆ ಬಂದು ಅಕ್ಕನಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು. ಅವಳು mommeeeee ಅಂತ ಹೇಳಿದಾಗ ಆಗುವ ಖುಶಿನೆ special.
’ಮೌನ’ ನಾಟಕ ಒಟ್ಟು ಐದು ಕತೆಗಳ ಸಂಗಮ. ಎರಡನೆ ಕತೆ ಅಷ್ಟು impressive ಆಗಿ ಬರಲಿಲ್ಲ. ಕೊನೆಯ ಕತೆಯಲ್ಲಿ ಹಾಡು ಸ್ವಲ್ಪ ಜಾಸ್ತಿ ಆಯ್ತು. ಕುಮುದವಲ್ಲಿಯವರ acting .005% over ಅನ್ನಿಸಿದ್ರೂ not bad. ಜಯಲಕ್ಷ್ಮಿ ಪಾಟೀಲ, ಪುಟ್ಟ ಸಾತ್ವಿಕ್ ಸೂಪರ್. ರಂಗ ಸಜ್ಜಿಕೆ, ಲೈಟಿಂಗ್ ನ ಹೊಸ ಟೆಕ್ ನೀಕ್ ಗೆ ನನ್ನದು 5/5. 
ಹಿನ್ನೆಲೆಗಾಯನ ಕುಮುದವಲ್ಲಿ ಸೂಪರ್.You have a very sweet voice. ಅವರ ಜತೆ ಇದ್ದವರು ಕೂಡ, ಆದರೆ ಚಪ್ಪಾಳೆ ತಟ್ಟುವ ಭರದಲ್ಲಿ ಅವರ ಹೆಸರುಗಳು ಸರಿಯಾಗಿ ಕೇಳಿಸಲಿಲ್ಲ. 
’ಮೌನ’ ನಾಟಕದ ಬಗ್ಗೆ ಹೇಳುವುದಾದ್ರೆ....................ಅರೇ ನಾನ್ಯಾಕೆ ಹೇಳ್ಲಿ?? ಪುನ: ಕೆ ಎಚ್ ಕಲಾಸೌಧದಲ್ಲಿ ಅವರ show ಇದೆ. ಹೋಗಿ ನೋಡಿ ಪ್ರೋತ್ಸಾಹಿಸಿ.
ಶ್ರೀಕಾಂತ ಅಂತೂ ಟೀಮ್ ನಲ್ಲಿರುವ ಒಟ್ಟಾರೆ youngsters ಗಳನ್ನು ನೋಡಿ ತುಂಬಾ ಇಂಪ್ರೆಸ್ಡ್. ನಾನು ನಿಹಾ ಗಿಂತ ಅವರು ಜಾಸ್ತಿ ಎಂಜಾಯ್ ಮಾಡಿದಾರೆ. I am glad.
ಆಜಾದ್ ಭಾಯ್ ನಿಮ್ಮನ್ನು ಸ್ಟೇಜ್ ಮೇಲೆ ಸೋಮಯಾಜಿ ಯವರು ನೆನಪಿಸಿಕೊಂಡಾಗ , ಶ್ರೀಕಾಂತ , ’ನಿನ್ನ ಆಜಾದ್ ಭಾಯ್ ನಾ’ ಅಂತ ಕೇಳಿದಾಗ ಹೌದು ಎನ್ನಲು ಖುಶಿ ಅನ್ನಿಸ್ತು. ನೀವು ಕುವೈಟ್ ನಲ್ಲಿದ್ದು ಕೊಂಡು ಸಪೋರ್ಟ್ ಮಾಡ್ತಿದ್ದೀರಲ್ಲ..ಭೇಷ!!! ಇಲ್ಲೆ ಇದ್ದುಕೊಂಡು ನಾವೇನೂ ಮಾಡಲ್ಲ.
ಪ್ರಕಾಶ ಹೆಗ್ಡೆ : ’ನಿಮ್ಮ ಬ್ಲಾಗ್ ಓದುತ್ತಿದ್ದ ದಿನಗಳಲ್ಲಿ ನನಗೆ ಸಖತ್ ಕಾಡಿದ ಕತೆಯನ್ನು ಇಲ್ಲಿ adapt ಮಾಡಿದ್ದು ಖುಶಿ ಅನ್ನಿಸ್ತು.
'ಮೌನ; i award it 3.8 / 5
:-) 
ಸರಿ ನೀವು ಓದ್ತಾ ಇರಿ ನಾ ಹೊಂಟೆ.....ಮೆಂಥ್ಯದ್ ದೊಸೆ ಮಾಡಲು ಎಲ್ಲರಿಗೂ ಹೊಟ್ಟೆ ಹಸೀತಾ ಇದೆ ಅಂತೆ. ಸಂಡೆ ಅಲ್ಲವಾ ಸ್ವಲ್ಪ ಲೇಟ್ .....ಇದನ್ನು ಬರೆದು ಹೋಗುವಾ ಅಂತ ಬಂದೆ
ಬರಲಾ??
:-)

May 31, 2014

ಇಂಗು ತಿಂದ ಮಂಗ

ಇತ್ತೀಚಿನ ಟ್ರೈನ್ ಪ್ರಯಾಣದ ಸಮಯ  ನಡೆದಿದ್ದು. :
ನಮ್ಮ ಬೋಗಿಯಲ್ಲಿ ಒಬ್ಬ ಪ್ರಯಾಣಿಕರು ಬಂದು ತಮ್ಮ ಸೀಟ್ ಹುಡುಕ್ತಾ ಇದ್ರು. ಅವರ ಸ್ಲೀಪರ್ ಸೀಟ್ ಮೇಲೆ ಆಗಲೇ ಯಾರೋ ಮಲಗಿದ್ದರು. ನಾವೂ observe ಮಾಡಿರಲಿಲ್ಲ. 
ಬಂದವರು: Hello ! Gentleman ಅಂತ ಮೇಲಿನ ಬರ್ತ ಮೇಲೆ ಮಲಗಿದ್ದ  ಆ ವ್ಯಕ್ತಿಯನ್ನು ಕೂಗಿದ್ರು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರದ ಸಂದರ್ಭ ಅವನ ಕಾಲುಗಳನ್ನು ಹಿಡಿದು ಅಲ್ಲಾಡಿಸಿದರು. ಅವನು ಬೆದರಿ ದಬಕ್ಕನೆ ಎದ್ದು ನನ್ನ ಕಿಸಿಯಿಂದ ಟಿಕೆಟ್ ತೆಗೆದ, ಬಹುಶ: ಅವನನ್ನು ಎಬ್ಬಿಸಿದವರು ಟಿಸಿ ಅಂದುಕೊಂಡು. 
ಹೊಸಬರು : hello young man! you seem like an educated person. But you should confirm your seat number before you occupy your place ಅಂದರು ತುಸು ಧಿಮಾಕು ಪ್ಲಸ್ ಸಿಟ್ಟಿನಿಂದ 
ಆ ಹುಡುಗ (ಹೌದು ಅವನು ಚಿಕ್ಕ ಪ್ರಾಯದವನು) ಕೂಲ್ ಆಗಿ ಅವರ ಬಳಿಯಿಂದ ಟಿಕೆಟ್ ಪಡೆದು Yes same train, same compartment, same time  but the ticket is dated for tomorrow ಅಂತ ಹೇಳಿ ಪುನ: ಮೇಲಿನ ಬರ್ತ ಏರಿ ನಿದ್ದೆಗೆ  ಶರಣಾದ. 
ಬಂದವರ ಮುಖ 'ಇಂಗು ತಿಂದ ಮಂಗ'ನ ಮುಖದ ತರಹ ಆಗಿತ್ತು. ಮಕ್ಕಳಿಗೆ ಇಂಗು ತಿಂದ ಮಂಗ ಅನ್ನುವ padada ಎಕ್ಸಾಂಪಲ್ ಇದೇ ಅಂತ ಹೇಳಿದೆ ಅವರು ನಮ್ಮ ಬಳಿಯಿಂದ ಹೋದ ಮೇಲೆ. :-) hope i am right.

ಸ್ವಲ್ಪBusy . ಈ ತಿಂಗಳು ನನ್ನ ಬ್ಲಾಗ್ ತುಂಬ ಅಪ್ದೇಟ್ ಆಗುವ ತರಹ ಕಾಣಲ್ಲ. ಕಾರಣ ನಂತರ ನಿಮ್ಮ ಜತೆ ಶೇರ್ ಮಾಡ್ತೀನಿ. :-)
ಎಂಜಾಯ್ 


May 19, 2014

House Bound

ನಿಹಾ ಮೊದಲ ಸಲ ಈ ಪದದ ಪ್ರಯೋಗ ಮಾಡಿದ್ದು. ನನ್ನನ್ನು ಹಾಗೆ ಸಂಭೋಧಿಸಿದ್ದು. ಅದಕ್ಕೆ ಕಾರಣ ಶ್ರೀಕಾಂತ. ಮೊನ್ನೆ ಪಟ್ಟಾಗಿ ಬಿಸಿ ಇಸಿ ಇಡ್ಲಿ ಸಾಂಬಾರ್ ಚಟ್ನಿ ಬೆಣ್ಣೆ ಮೇಲ್ತಾ, ' ಎಷ್ಟು ದಿನ ಆಯ್ತು ನೀನು ಹೊರಗೆ ಹೋಗದೆ ' ಅಂತ ಪ್ರಶ್ನಿಸಿದರು. ನಾನು ಉತ್ತರಿಸುವ ಮುನ್ನ ನಿಹಾರಿಕಾ 'amma has become housebound. ಎರಡು ಮೂರು ತಿಂಗಳಾಯಿತು ಹೊರಗೆ ಹೋಗದೆ ಅಂತ. ನಾನು ಅರೆ ಆಫಿಸ್, ಲೈಬ್ರರಿ,ನಾಟಕಕ್ಕೆಲ್ಲ ಹೋಗಿದೀನಿಲ್ಲವಾ ಅಂದ್ರೆ' ಹಾಗಲ್ಲವಂತೆ ರಸ್ತೆ ಮೇಲೆ ಓಡಾಡ್ತಾ ಜನರ ಮದ್ಯೆ ಬರೆತಿಲ್ಲ ನೀನು ಈ ಮಧ್ಯೆ ಅಂದಳು. ಹೌದು ಎಲ್ಲಾದರೂ ಹೊರಗೆ ಹೋಗಬೇಕಿದ್ದಲ್ಲಿ ಮನೆಯಿಂದ ಹೊರಗೆ ಬಂದರೆ ಲಿಫ್ಟ್.  ಇಳಿದು  ಸೀದಾ ಕಾರ್ ನಲ್ಲಿ. ಆಮೇಲೆ towards my destination and back the same way. 

ಈ ಮನೆಗೆ ಬಂದಿದ್ದು ಅಂದ್ರೆ ಶಿಫ್ಟ್ ಆಗಿದ್ದು ಫೆಬ್ರವರಿ ೨೬ ರಂದು. ಅ ಮೇಲೆ ಒಂದು ವಾರ ಹಾಲು, ಮನೆಗೆ ಅಗತ್ಯತ ಸಾಮಾನು ಸರಂಜಾಮೂಗಳ ದೊರಕುವ ಸ್ಥಳಗಳ ಬಗ್ಗೆ ಮಾಹಿತಿಗೆ ತಿರುಗಾಟ, ಇದಾದ ಕೆಲವು ದಿನಗಳ ನಂತರ ಅಮ್ಮನಿಗೆ ಬೆಳಗಾವಿಗೆ ಬಿಟು ಬಂದ ನಂತರ ನಾನು ಮನೆಯಿಂದ ಹೊರಗಡೆ ಕಾಲು ಇಟ್ಟಿಲ್ಲ, ಬೆಳಿಗ್ಗೆ ಹಾಲು ತರಕಾರಿ ಶ್ರೀಕಾಂತ  ದಿಪಾರ್ಟಮೆಂಟ್, ಉಳಿದ ಸಾಮಾನು ನಿಹಾ ಕಾಲೇಜಿನಿಂದ ಬರುವಾಗ, ಇಸ್ತ್ರಿ ಯವರು ಮಾತ್ರವಲ್ಲ,  ಮೆಡಿಕಲ್ ಸ್ಟೋರ್ ನವ ಔಷಧಿ ಬೇಕಿದ್ದಲ್ಲಿ ಫೋನ್ ಮಾಡಿ ಮೇಡಂ ನಾನೇ ಬಂದು ಕೊಡ್ತೀನಿ ಅಂತಾನೆ,, ಬಿಲ್ ಗಳನ್ನೆಲ್ಲ ನೆಟ್ ನಲ್ಲೇ ಪೇಮೆಂಟ್. :-) ಹೀಗೆ ನಾನು ಹೊರಗೆ ಹೋಗದೆ ಸುಮಾರು ಸಮಯ ಆಗಿತ್ತು. ಮದುವೆ ಮುಂಜಿ ಮುಂತಾದ ಸಮಾರಂಭಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಮಹಾ ಜಾಣೆ ನಾನು. ಮತ್ತು ಈ ಮನೆಗೆ ಬಂದ ಮೇಲೆ ಹಲವಾರು ನೆಂಟರು ಇಷ್ಟರು ಬರುತ್ತಿರುತ್ತಾರೆ. ನನ್ನ ಬೆಳಗ್ಗಿನ ಕೆಲಸಗಳು ಮುಗಿದ ನಂತರ ಪುಸ್ತಕ ಹಿಡಿದು ಬಾಲ್ಕನಿಯಲ್ಲಿ ಕುಳಿತರೆ ಮಧ್ಯಾಹ್ನ ಊಟಕ್ಕೆ ಒಳಗೆ ಬರುವುದು. ಸಂಜೆ ಬಾಲಕ್ನಿಯಿಂದಲೆ ಜಗತ್ತನ್ನು ನೋಡುವ್ದುದು. 
"ನೋಡು ಮೈ ಎಲ್ಲ ಜಬ್ಬ್ಬು ಜಬ್ಬು ಆಗಿದೆ. You are 40 + It is high time you take care of your health "ಅಂದ್ರು ರಾಯರು. ನಾಳೆ ಬೆಳಿಗ್ಗೆಯಿಂದ ನನ್ನ ಜತೆ ವಾಕ್ ಅಂತಲೂ ಸೇರ್ಸಿದರು. 
ಮರುದಿನ ಬೆಳಿಗ್ಗೆ ಬಾ ವಾಕಿಂಗ್ ಹೋಗುವಾ ಅಂದ್ರೆ 'ಇವತ್ತು ಲೇಟ್ ಆಯ್ತು ನನಗೆ ಪೂರಿ ಪಲ್ಯ ಮಾಡಬೇಕು ಬರಲ್ಲ ಅಂತಲೋ, ಬಾಳೆ ಎಲೆ ಮೇಲೆ ಅಕಿ ರೊಟ್ಟಿ ತಟ್ಟಬೇಕು ಅಂತಲೋ ಏನಾದರೊಂದು ನನ್ನ ಸಬೂಬು. ಸಂಜೆ ಮಕ್ಕಳು ಬಾ ಅಮ್ಮ ವಾಕ್ ಹೋಗುವ ಅಂದ್ರೆ ನನ್ನ ಬಟ್ಟೆ ಎಲ್ಲ ಟೈಟ್ ಆಗಿದೆ, ಬಟ್ಟೆಗೆ ಇಸ್ತ್ರಿ ಇಲ್ಲ, ಕಾಲು ನೋವು, ಬೆನ್ನು ನೋವು, ಅಥ್ವಾ ನಿಮಗೋಸ್ಕರ ಏನಾದರೂ ಸ್ಪೆಷಲ್ ತಿಂಡಿ ಮಾಡ್ತೇನೆ ಅಂತ್ಲೋ ತಪ್ಪಿಸಿಕೊಳ್ಳುತ್ತಿದ್ದೆ.
ಮೊನ್ನೆ ನಿಹಾ nothing doing, you are coming with us for a walk and that's it' ಅಂತ ಖಡಾಖಂಡಿತವಾಗಿ ಹೇಳಿದ್ಲು. (ನಾನು ಅವಳಿಗೆ ಸ್ವಲ್ಪ ಹೆದರುತ್ತೇನೆ :-)) ಅಷ್ಟೆ ಅಲ್ಲ ನನಗೋಸ್ಕರ ಲೂಸ್ ಚೂರಿದಾರ ಟಾಪ್ ಒಂದನ್ನು ಜಯನಗರದಿಂದ ತಂದಿದ್ದಳು. ಅದಕ್ಕೆ ಇಸ್ತೀ ಕೂಡ ಹಾಕಿ, ನನ್ನ ಶೂಸ್ ಎಲ್ಲ ರೆಡಿ ಮಾಡಿಟ್ಟಿದ್ದಳು. ಆದ್ದರಿಂದ ನನ್ನ ಬಳಿ ವಾಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಸಬೂಬು ಇರಲಿಲ್ಲ. ಹೊರಟೆ. ಸಿಗ್ನಲ್ ನಲ್ಲಿ ನಿಂತಾಗ ವಾಹನಗಳ ಭರ ಭರ ಓಡಾಟ, ಜನ ಜಂಗುಳಿ ನೋಡಿ ಕಂಪಿಸಿದೆ. ತಲೆ ಎದೆಯಲ್ಲೆಲ್ಲ ಢಡ ಢಡ ಸದ್ದು, ಸಿಗ್ನಲ್ ಕ್ರಾಸ್ ಮಾಡಲು ಭಯ. ಕ್ರಾಸ್ ಮಾಡುವ ಅವಕಾಶ ಎರಡು ಸಲ ಸಿಕ್ಕರೂ ನಾನು ಅರಾಲ್ಡೈಟ್ ಹಾಕಿ ನೆಲಕ್ಕೆ ಅಂಟಿಸಿಕೊಂಡವರ ಥರ ನಿಂತಿದ್ದೆ. ದಳ ದಳ ಬೆವರಿದೆ. ಕೊನೆಗೆ ಮಕ್ಕಳಿಬ್ಬರೂ ಎರಡು ಕಡೆಯಿಂದ ಕೈ ಹಿಡಿದು ದರದರನೆ ಎಳೆದು ರಸ್ತೆ ಕ್ರಾಸ್ ಮಾಡಿಸಿದರು. ’ಮನೆಯಲ್ಲಿ ಕೂತ್ರೆ ಹಿಂಗೆ ಆಗೋದು’ ಅಂತ ಅಕ್ಕ ಕೂಡ ಜೋರು ಮಾಡಿದಳು. ಸಿಕ್ಕಾಪಟ್ಟೇ ಹೆದರಿದೆ ಆ ದಿನ. housebound ನ ಅರ್ಥ ಮನೆಗೆ ಬಂದೆ ಮೇಲೆ ಹುಡುಕಿದೆ. ನೀವೂ ಗೂಗಲಿಸಿ. ಆಮೇಲೆ The Net ಅನ್ನುವ ಸಿನಿಮಾ ನೋಡಿದೆ. ನೀವೂ ನೋಡಿ.
ಈಗ ನಾನು ದಿನಾ ವಾಕಿಂಗ್, ಅದೂ ಇದು ಅಂತ ಮನೆಯಿಂದ ಹೊರಗಡೆ ಹೋಗ್ತಿದ್ದಿನಿ. it was very scary. :-(

May 11, 2014

ಮದರ್ಸ್ ಡೇ


ನಿಹಾ ಬರೆದ ಚಿತ್ರ
ಆಗ ನಾವು ಬೆಂಗಳೂರಿಗೆ ಬಂದಿದ್ದಷ್ಟೆ.. ಅಂದರೆ ನಾಳೆ ಶಾಲೆ ಶುರು ಅನ್ನುವಾಗ ನಾವು ಅದರ ಹಿಂದಿನ ದಿನ ಇಲ್ಲಿದ್ದೆವು.ಮೊದಲನೇ ದಿನ ಮಕ್ಕಳ ಪೋಷಕರು ಅವರೊಂದಿಗೆ ಬರಬೇಕೆಂದು , ಶ್ರೀಕಾಂತ ಅಡ್ಮಿಶನ್ ಮಾಡಿ ಬರುವಾಗ ಪ್ರಿನಿಸಿಪಾಲರು ಹೇಳಿದ್ದರಂತೆ. ನಮ್ಮ ಕಲೀಗ್ ಸಾಲಿಮಠ ರ ಮಗನಿಗೂ ಆ ಶಾಲ್ಲೆಯಲೇ ಸೇರಿಸಿದ್ದರು. ನಾವು ಅವರು ಎಲ್ಲ ಸೇರಿ ಹೋದೆವು. ಅಲ್ಲಿ ಕ್ಲಾಸ್ ಟೀಚರ್ ಭೇಟಿ, ಪುಸ್ತಕಗಳ ಪಟ್ಟಿ, ಯುನಿಫಾರ್ಮ್ ( ಆ ವರ್ಷ ಯುನಿಫಾರ್ಮ್ ಬಣ್ಣ ಬದಲಾಯಿಸಿದ್ದರು) ಅದು ಸಿಗುವ ಅಂಗಡಿಗಳ ವಿಳಾಸ ಮುಂತಾದದ್ದೆಲ್ಲ ಮಾಹಿತಿ  ಪಡೆದುಕೊಂಡ ನಂತರ ಒಂದು ಕಡೆ ಪೋಷಕರು ಗುಂಪಾಗಿ ನಿಂತ ಯಾರ ಬಳಿಯೋ ಮಾತು ಕತೆ ನಡೆಸಿದ್ದರು. ನಾನೂ ಕುತೂಹಲದಿಂದ ಹೋದರೆ, ಮಕ್ಕಳನ್ನು ಶಾಲೆಗೆ ತರುವ/ಮನೆಗೆ ಬಿಡುವ ಟೆಂಪೂ ಚಾಲಕರು ಯಾವ ಯಾವ ಏರಿಯಾದಲ್ಲಿ ಪಿಕ್ ಅಪ್/ಡ್ರಾಪ್ ಸೇವೆಗಳಿವೆಯೆಂದು ಹೇಳುತ್ತಿದ್ದರು. ನಮ್ಮ ಮನೆ ಶಾಲೆಯಿಂದ ಅಷ್ಟೇನೂ ದೂರವಿರದಿದ್ದರೂ ನಮಗೆ ಆ ಜಾಗೆಯ ಅಷ್ಟು ಪರಿಚಯವಿಲ್ಲದಿದ್ದರಿಂದ, ಹಾಗೂ ಇಬ್ಬರೂ ಚಿಕ್ಕವರಿದ್ದರಿಂದ ಒಂದೆರಡು ತಿಂಗಳು ಮಟ್ಟಿಗಾದರೂ ನಾನು ಮಕ್ಕಳನ್ನು ಟೆಂಪೋದಲ್ಲಿ ಕಳಿಸುವ ಪ್ಲ್ಯಾನ್ ಹಾಕಿದೆ. ಹಾಗೆ ಓರ್ವ ಟೆಂಪೋ ಡ್ರೈವರ್ ಹತ್ತಿರ ಅವರ ಕಂಡೀಶನ್ಸ್  ಎಲ್ಲ ಕೇಳಿ ನಮ್ಮ ಮನೆಯ ವಿಳಾಸ ಕೊಟ್ಟೆ. ಅದರ ಪ್ರಕಾರ ಬೆಳಿಗ್ಗೆ ಬಂದು ಪಿಕ್ ಮಾಡಿ ಹೋದರು. ಸಾಲಿಮಠ ರ ಮಗನಿಗೆ ಆಗ ಮಧ್ಯಾಹ್ನದ ಶಿಫ್ಟ್. ನನಗೆ ಮುಂಬೈ ನೆನಪಾಯಿತು. (ನನಗೆ ಬೆಳಗ್ಗಿನ ಶಿಫ್ಟ್ ಆದರೆ ನನ್ನ ತಮ್ಮ ತಂಗಿಯಂದಿಯಾರಿಗೆ ಮಧ್ಯಾಹ್ನದ ಶಿಫ್ಟ್. ಹಾಗಾಗ್ಗಿ ಭಾನುವಾರ ಮಾತ್ರ ನಮ್ಮ ಮುಖಾಮುಖಿ. :-) ) ಈ ಶಾಲೆಯಲಿ ರಿಪೇರಿ ಕೆಲಸಕ್ಕೆಂದು ಈ ಉಪಾಯ. ಅವನು ಮಾಲವಿಕಳಿಗಿಂತ ಎರಡು ವರ್ಷಕ್ಕೆ ದೊಡ್ಡವನು. ಅವನು ನಡೆದುಕೊಂಡು, ಮತ್ತು ಅವನ ಸೈಕಲ್ ಇನ್ನೂ ಉಜಿರೆಯಿಂದ ಬಂದಿರಲಿಲ್ಲ, ಅದು ಬಂದ ಮೇಲೆ ಸೈಕಲ್ ನಲ್ಲಿ ಹೋಗುವುದು ಅಂತ ಅವನು ಟೆಂಪೊ ಬೇಡ ಅಂದ. 
ಶಾಲೆಯ ಮೊದಲ ದಿನ( ಎರಡು ಶಿಫ್ಟ್ ನಲ್ಲಿ ಶಾಲೆ ನಡೆಸ್ತ್ತಿದ್ದರಿಂದ ನನ್ನ ಮಕ್ಕಳಿಗೆ ಬೆಳಿಗ್ಗೆ ೭.೩೦ ಯಿಂದ ಮಧ್ಯಾಹ್ನ ೧೨.೧೫ ರ ತನಕ ಶಾಲೆ. ೧. ೧೫ ಆಯ್ತು, ಎರಡು ಗಂಟೆ ಆಯ್ತು, ಮಕ್ಕಳ ಸುಳಿವೇಯಿಲ್ಲ. ಬೆಳಿಗ್ಗೆ ಯಾವುದಕ್ಕೂ ಇರಲಿ ಅಂತ ಮಕ್ಕಳ ಕಂಪಾಸ್ ಬಾಕ್ಸ್ ನಲ್ಲಿ ಮನೆಯ ವಿಳಾಸ, ಹತ್ತಿರದ ಲ್ಯಾಂಡ್ ಮಾರ್ಕ್ ಇತ್ಯಾದಿ ಬರೆದು ಇಟ್ಟಿದ್ದೆ. ಶ್ರೀಕಾಂತ ಹೊಸ ಪ್ರಾಜೆಕ್ಟ್ (ನಮ್ಮ ಮೊಟ್ಟ ಮೊದಲ ಪ್ರಾಜೆಕ್ಟ್) ಬಗ್ಗೆ ಮಾತುಕತೆ ನಡೆಸಲು ಹೋಗಿದ್ದರು.ಅವರು ಯಾವ ಏರಿಯಕ್ಕೆ ಹೊರಟಿದ್ದಾರೆ, ವಗೈರೆ ನಾನೂ ಕೇಳಿರಲಿಲ್ಲ. ಅವರನ್ನು ಸಂಪರ್ಕಿಸುವ ಯಾವ ದಾರಿಯೂ ಇರಲಿಲ್ಲ. ಬೇಗ ಬೇಗ ಬಟ್ಟೆ ಬದಲಾಯಿಸಿ, ಶೋಭಾ -ಸಾಲಿಮಠರ ಹೆಂಡತಿ) ಗೆ ಹೀಗ್ ಹೀಗೆ ಆಗಿದೆ, ನಾನು ಮಕ್ಕಳನ್ನು ಹುಡುಕಲು ಹೋಗ್ತಾ ಇದ್ದೇನೆ. ನೀವು ಒಂದು ಕಣ್ಣಿಟ್ಟಿರಿ (ಅವರ ಮನೆ ನಮ್ಮ ಮನೆಯಿಂದ ಎರಡು ಮನೆ ದಾಟಿ ಹಾಗೂ ಗ್ರೌಂಡ್ ಫ್ಲೋರ್ ನಲ್ಲಿತ್ತು. ಅ ರಸ್ತೆಯಲ್ಲಿ ಓಡಾಡುವವರ ಮೇಲೆ ಒಂದು ನಿಗಾ ಇಡ ಬಹುದಿತ್ತು. ಅವರು, 'ನಾನು ಇಲ್ಲೇ ನಿಂತಿರುತ್ತೇನೆ ಮಾಲ್ತಿ . ಆದರೆ ಟೆನ್ಶನ್ ಮಾಡ್ಕೋಬೇಡಿ, ಮಕ್ಕಳು ಜಾಣರು’ ಅಂತ ಹೇಳಿ ನನ್ನನ್ನು ಕಳುಹಿಸಿದರು. ನಮ್ಮ ಬೀದಿಯ ಹೊರಗೆ ಒಂದು ರಿಕ್ಷಾ ಖಾಲಿಯಾಗಿ ನಿಂತಿತ್ತು. ಅವರಿಗೆ ವಿಷಯ ತಿಳಿಸಿದೆ. ಅವರು ಗಾಬರಿ ಆಗ ಬೇಡ ಅಕ್ಕ, ಮಕ್ಕಳು ಸಿಗುತ್ತಾರೆ. ಆದರೆ ಟೆಂಪೋ ದವರಿಗೆ ಜವಾಬ್ದಾರಿ ಇರಬೇಕಲ್ವಾ ಸ್ವಲ್ಪನಾದ್ರೂ' ಅಂದರು. ಹಿರಿಯರು. ಗಾಡಿಯನ್ನು ನಿಧಾನಕ್ಕೆ ಓಡಿಸಿದರು. ಸಧ್ಯ ಅವರಿಗೆ ಶಾಲೆಯ ಹೆಸರು ಗೊತ್ತಿತ್ತು.  ಎರಡು ನಿಮಿಷ ರಿಕ್ಷಾದಲ್ಲಿ ಹೋಗಿರಬಹುದು, ಮಕ್ಕಳು ಮುದ್ದು ಮುದ್ದಾಗಿ ಒಬ್ಬರನ್ನೊಬ್ಬರು ರೇಗಿಸುತ್ತ ನಗುತ್ತ, ಮುದ್ದು ಮುದ್ದು ಹೆಜ್ಜೆಹಾಕಿ ಬರುತ್ತಿದ್ದರೆ ನನ್ನ ಕಣ್ಣಲ್ಲಿ ನೀರು. ರಿಕ್ಷಾ ದವರಿಗೆ 'ಅವ್ರೆ ನನ್ನ ಮಕ್ಕಳು' ಅಂದೆ. ಗಾಡಿ ತಿರುಗಿಸಿ ಮಕ್ಕಳ ಬಳಿ ಬಂದರೆ ಅವರಿಗೆ ಯಾವುದೇ ಹೆದರಿಕೆ ಕೂಡ ಆಗಿರಲಿಲ್ಲ. 'ಅಮ್ಮ ಟೆಂಪೊದವನು ಇರಲಿಲ್ಲ, ಅದಕ್ಕೆ ನೀನು ಕೊಟ್ಟ ಎಡ್ರಸ್ ಕೈಯಲ್ಲಿ ಹಿಡಿದುಕೊಂಡು ಒಂದು ಪೋಲಿಸಪ್ಪನಿಗೆ ತೋರಿಸಿ ಈ ಲ್ಯಾಂಡ್ ಮಾರ್ಕ್ ಎಲ್ಲಿದೆ ಅಂತ ಕೇಳಿದೆ, ಅವರು ತೋರಿಸಿದರು. ನಾವು ತಲುಪುವಷ್ಟರಲ್ಲಿ ನೀನೂ ಇಲ್ಲಿ ಬಂದಿದ್ದೇಯ. ನಾನು ನಿಹಾ ಗೆ ಹೇಳಿದ್ದೆ ಅಮ್ಮ ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತಾರೆಂದು' ಅಂತ ಹೇಳಿದಾಗ ಇಬ್ಬರನ್ನೂ ಗಟ್ಟಿಯಾಗಿ ತಬ್ಬಿಕೊಂಡೆ. ರಿಕ್ಷಾದವರು ನಮಗೆ ಮನೆ ಬಳಿ ಬಿಟ್ಟು ದುಡ್ಡು ಕೂಡ ತೆಗೆದುಕೊಳ್ಳದೆ ಹೊರಟು ಹೋದರು. ಆಗ ರಿಕ್ಷಾದಲ್ಲಿ ಅವರ ಹೆಸರು ವಿಳಾಸ ಬರೆದು ಹಾಕುವ ಕಡ್ಡಾಯವಿರಲಿಲ್ಲ. ಅವರಿಗೊಂದು ದೊಡ್ಡ ಥ್ಯಾಂಕ್ಸ್. 
ಸಂಜೆ ಟೆಂಪೋ ದವನು ಬಂದು ಸಾರಿ ಅಮ್ಮ ನನಗೆ ಮರೆತೇ ಹೋಯ್ತು ಅಂತ ಹ್ಯಾಪು ಮೋರೆ ಹಾಕಿಕೊಂಡು ಬಂದು ಹೋದ. ಆಗ ಇನ್ನು ಮುಂದೆ ನಾನೇ ಮಕ್ಕಳನ್ನು ಕೆಲವು ದಿನ ಶಾಲೆಗೆ ನಾನೇ ಬಿಟ್ಟು ಕರೆ ತರುವುದನ್ನು ಮಾಡುವುದೆಂದು ಡಿಸೈಡ್ ಮಾಡಿದೆ.  ಹಾಗೇ ಮಾಡ್ತಾ ಇದ್ದೆ ಕೂಡ. ಅಷ್ಟರಲ್ಲಿ ಶ್ರೀಕಾಂತ ಸ್ಕೂಟರ್ ಮಣಿಪಾಲದಿಂದ ಬಂದು ಬಿಡ್ತು. ಹಾಗಾಗಿ ಬೆಳಿಗ್ಗೆ ಅವರು ಬಿಡುವುದು ಮಧ್ಯಾಹ್ನ ನಾನು ತರುವುದು ಆಯ್ತು. ನಿಹಾ ಮಾಲವಿಕಾಳ ಕ್ಲಾಸ್ಮೇಟ್ಸ್, ಅವರ ತಾಯಿಯಂದಿರ ಪರಿಚಯ ಆಗ್ತಾ ಇತ್ತು. ಅವರಲ್ಲಿ ಒಬ್ಬ ಹುಡುಗಿ ನಿಹಾ ಳ ಕ್ಲಾಸ್ ಮೇಟ್ ನನ್ನನ್ನು ತುಂಬಾ ಹಚ್ಚಿಕೊಂಡಳು.. ನಿಹಾ ಕ್ಲಾಸಿನಿಂದ ಶಾಲೆಯ ಆವರಣದಿಂದ ಹೊರ ಬರುವ ಮುಂಚೆಯೆ ಆಕೆ ಬಂದು ನನ್ನ ಬಳಿ ನನ್ನು ತಾಗಿಕೊಂಡು ನಿಲ್ಲುತ್ತಿದ್ದಳು. ಕರು ಹಸುವನ್ನು ಆರಿಸಿ ಬಂದ ಹಾಗೆ. ನಾನು ಅವಳ ತಲೆ ನೇವರಿಸುವುದು ಅವಳ ಉದ್ದ ಜಡೆ ಎಳೆಯುವುದು ಮುಂತಾದ್ದು ಮಾಡುತ್ತಿದ್ದೆ. ಅವಳು ಕ್ಲಾಸ್ ನಲ್ಲಿ 'your mummy is very beautiful' ನನ್ನ ಅಮ್ಮಕೂಡ ಹಾಗೇ ಇದ್ರೆ ಚೆನ್ನಾಗಿರ್ತಿತ್ತು, ನನಗೆ ನನ್ನ ಅಮ್ಮ ಇಷ್ಟ ಆಗಲ್ಲ' ಮುಂತಾದೆಲ್ಲ ನಿಹಾ ಬಳಿ ಶೇರ್ ಮಾಡ್ತಿದ್ದಳಂತೆ. ಒಂದು ಸಲ ಆ ಹುಡುಗಿಗೆ ನಮ್ಮ ಮನೆಗೆ ಇನ್ವೈಟ್ ಮಾಡಿದ್ದೆ ಊಟಕ್ಕೆ. ನಾನು ನನ್ನ ಮಕ್ಕಳನ್ನು ಕರೆದು ತರುವಾಗ ಅವಳನ್ನೂ ಕರೆದು ತಂದಿದ್ದೆ. ಆ ಮೇಲೆ ಅವಳಿಗೆ ಮನೆಗೆ ಹೋಗುವ ಮನಸ್ಸೇ ಬರಲಿಲ್ಲ. ನಾನೇ ಜಬರದಸ್ತಿನಿಂದ ಅವಳ ತಂದೆ ಅವಳನ್ನು ಪಿಕ್ ಮಾಡಲು ಬಂದಾಗ ಕಳುಹಿಸಬೇಕಾಯ್ತು. ನನಗಂತೂ ಆಶ್ಚರ್ಯ. ನಾನೇನೂ ನೋಡೋಕೆ ಚೆನ್ನಾಗಿರಲಿಲ್ಲ. ಅದೂ ಉಡುಪಿಯಿಂದ ಬರುವ ಮುಂಚೆ ಸಿಕ್ಕಾ ಪತ್ತೆ  unexplained weight loss ಆಗಿ ನನನ್ನ ಬಟ್ಟೆಯೆಲ್ಲ ನನ್ನ ಮೇಲೆ ಲೂಸ್ ಆಗಿ ಜೋತು ಬೀಳ್ತಾ ಇತ್ತು.  ಹೀಗೆ ಒಂದು ತಿಂಗಳು ಆದ ಮೇಲೆ ಶಾಲೆಯಲ್ಲಿ ಪೇರೆಂಟ್ಸ್ ಟೀಚರ್ ಮೀಟ್ ಇತ್ತು  ಆ ಹುಡುಗಿಯ ಅಮ್ಮನು ಬರುತ್ತಾರೆಂದು ಗೊತ್ತಾಯಿತು.ನನಗೆ ಅವರನ್ನು ಭೇಟಿ ಮಾಡುವ ಕುತೂಹಲ ಇತ್ತು. ನಾನು ನಿಹಾ ಒಂದು ಪ್ಲ್ಯಾನ್ ಹಾಕಿಕೊಂಡೆವು. ಅವಳ ಅಮ್ಮನನ್ನು ನಾವು ತುಂಬಾ ಹೊಗಳುವ ಆಗ ಅವಳು ಅಮ್ಮನ ಬಗ್ಗೆ ಹಾಗೆಲ್ಲ ಹೇಳಲಿಕ್ಕಿಲ್ಲವೆಂದು. ಆ ಹುಡುಗಿ ಅವಳ ಅಮ್ಮನನ್ನು ನಮಗೆ ಪರಿಚಯಿಸಿದಾಗ, ನಾನು ನಿಹಾ ಕಣ್ಣು ಬಾಯಿಬಿಟ್ಟು ಆಕೆಯನ್ನು ನೋಡಿದ್ದೆ ನೋಡಿದ್ದು. ಅಷ್ಟು ಸುಂದರವಾಗಿದ್ದಳಾಕೆ. ತಿದ್ದಿ ತೀಡಿದಂತಹ ಕಣ್ಣು, ಚೆಂದದ ತುಟಿ, ನಾಗರಹಾವಿನಂತೆ ಹಿಂದೆ ಓಲಾಡುವ ಮಂಡಿತನಕ ದಪ್ಪ ಜಡೆ, ಆರು ಫೀಟ್ ಹೈಟ್ , ಶಿಲಾಬಾಲಿಕೆಯ ಮೈಮಾಟ. ಎಷ್ಟೊ ಹೊತ್ತು ಅವರ ಸೌಂದರ್ಯವನ್ನು ಆಸ್ವಾದಿಸಿದೆ. ಅಷ್ಟೆ ಅಲ್ಲ ನಾವು ಅಲ್ಲಿದ್ದ ಮುಕ್ಕಾಲು ಗಂಟೆ ನನಗೆ ತುಂಬಾ ನಗಿಸಿದ್ದರು. fun person. ನಾನಂತು ಸಖತ್ ಇಂಪ್ರೆಸ್ ಆಗಿ ಮರುದಿನ ಆ ಹುಡುಗಿಗೆ ಯುವರ್ ಮಮ್ಮಿ ಇಸ್ very very beautiful  ಅಂಡ್ ಗ್ರಾಂಡ್  ಅಂದೆ. ಅದಕ್ಕೆ ಆಕೆ ಬಟ್ ಶಿ ಇಸ್ ಬ್ಲಾಕ್ ಅಂದಾಗ ನನಗೆ ಶಾಕ್.  Shall i tell you something?? its not black or white instead you should say fair and dark..and i wish i had your mummy's looks. ಹೌದಾ ನನ್ನ ಅಮ್ಮ ಅಷ್ಟು ಚೆಂದ ಇದ್ದಾರಾ ಅಂತ ಆ ಹುಡುಗಿ  ಪ್ರಶ್ನಿಸಿದಳು. ಅವಳ ಜಡೆ ಎಳೆದು ಹೌದು ಅಂದೆ. ಆಮೇಲೆ  ಅವಳ ಬ್ಹಿವಿಯರ್  ತುಂಬಾ ಚೇಂಜ್ ಆಯ್ತು ಮತ್ತು ನಾವು ಕೂಡಾ ಸುಳ್ಳು ಸುಳ್ಳೇ ಹೊಗಳುವ ಅವಕಾಶವಾಗಲಿಲ್ಲ ವೆಂದು  ಖುಶಿಯಾಯಿತು. ಈ ಎಡ್ವರಟೈಸ್ಮೆಂಟ್ಗಳ ಭರಾಟೆಯಲ್ಲಿ ಪುಟ್ಟ ಕಂದಮ್ಮಗಳ ತಲೆಯಲ್ಲಿ ಏನೇನೋ ತುಂಬಿ ಕೊಳ್ಳುತ್ತಿವೆ.
ಸುಮ್ನೆ ಮದರ್ಸ್ ಡೇ ಗೆ ಒಂದು ಪೋಸ್ಟ್..ನೆನಪಿನಿಂದ ಹೆಕ್ಕಿದ್ದು .
so ಏನು ಮಾಡ್ತಿದ್ದಿರಿ ಇವತ್ತು??

May 8, 2014

ನೆಲ್ಲಿಕಾಯಿ ಸಾರು reloaded

ಕೆಲವು ವರ್ಷಗಳ ಹಿಂದೆ ಶ್ರೀವತ್ಸ ಜೋಶಿಯವರು ವಿಜಯ ಕರ್ನಾಟಕಕ್ಕೆ ಒಂದು ಕಾಲಮ್ ಬರೆಯುತ್ತಿದ್ದರು. ಅದೇ ಅಂಕಣವನ್ನು ಮುಂದಿನವಾರ ಥ್ಯಾಟ್ಸ್ ಕನ್ನಡ .ಕಾಮ್ ನಲ್ಲಿ ಹಾಕುತ್ತಿದ್ದರು. ಅಥವಾ viceversa?ಗೊತ್ತಿಲ್ಲ. ಹಾಳು ಮರೆವು. ವಯಸ್ಸಾಯಿತಲ್ಲವೇ? :-( ಆಗ ಶ್ರೀವತ್ಸ ಜೋಶಿಯವರ ಮೂಲಕ ಪರಿಚಯ ಆದವರು ಶ್ರೀ ಶ್ಯಾಮ್ ಸುಂದರ. ಅವರು ಫೋನ್ ಮಾಡಿದಾಗಲೆಲ್ಲ ಏನಡಿಗೆ ಅನ್ನುವ ಕೇಳುವ ಪರಿಪಾಠ ಇಟ್ಟುಕೊಂಡಿದ್ದರು. ಒಂದು ದಿನ ಹೀಗೆ ಜೋರು ಮಳೆ. ಏನಡಿಗೆ ಇವತ್ತು ಅಂತ ಕೇಳಿದಾಗ ಉಪ್ಪಿಗೆ ಹಾಕಿಟ್ಟ ನೆಲ್ಲಿಕಾಯಿಯ ಸಾರು ಅಂತ ಸ್ಟೈಲ್ ಆಗಿ ಹೇಳಿದೆ. ಆಗ ಮನೆಯಲ್ಲಿ ಯಾರಿಗೋ ಜೋರು ಶೀತ ಕೂಡ ಆಗಿತ್ತು. ಅವರು ನನಗೆ ಕನ್ನಡದಲ್ಲೇ ಮಾತಾಡಲು ಹುರಿದುಂಬಿಸುತ್ತಿದ್ದರು. ನಾನು ಅಕ್ಷರ-ಪದ ಜೋಡಿಸಿ ರಾಗವಾಗಿ ಮಾತನಾಡುವುದು ಅವರಿಗೆ ಗಮ್ಮತ್ತೆನಿಸುತ್ತಿತ್ತೋ ಎನೋ. ಅಂತೂ ಬರೆದು ಕಳಿಸಿ ಮಾಲತೀ ಅಂದರು. ನಾನು ಸುಮ್ನೆ ರೆಸಿಪಿ ಬರೆದು ಕಳುಹಿಸಿದೆ. ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಅವರು ಥ್ಯಾಟ್ಸ್ ಕನ್ನಡದಲ್ಲಿ ಹಾಕಿದರು. ನಂತರ ನನ್ನ ಇನ್ನೋರ್ವ ಮಿತ್ರರ encouragement ನಿಂದ ( ಅವರದ್ದೂ ಗಮ್ಮತ್ತು: ನಾನು ಇಂಗ್ಲಿಷ್ ನಲ್ಲಿ ಮಾತನಾಡಿದಾಗಲೆಲ್ಲ ಅವರು ಅಚ್ಚ ಕನ್ನಡದಲ್ಲೇ ಉತ್ತರಿಸುತ್ತಿದ್ದರು ನಾನೇನೋ ಅವರು ಕಟ್ಟ ಕನ್ನಡಾಭಿಮಾನಿ ಅಂದುಕೊಂಡು ಹಾಗೇ’ ನೀವು ನವೆಂಬರ್ 1 ಫ್ಯಾನ್ ಪೈಕಿಯಾ’ ಅಂತ ಕೇಳಿದೆ ಕೂಡ ಅದಕ್ಕೆ ಅವರು ’ನನಗೆ ಇಂಗ್ಲಿಷ್ ಬರಲ್ಲಮ್ಮ’ ಅಂದಿದ್ದು ಇನ್ನೂ ನನಗೆ ನಗೆ ಬರಿಸುತ್ತದೆ) ನನ್ನದೇ ಬ್ಲಾಗ್ ಶುರು ಮಾಡಿದೆ. ಆಗ ಥ್ಯಾಟ್ಸ್ ಕನ್ನಡದಿಂದ copy paste ಮಾಡಿ ನೆಲ್ಲಿಕಾಯಿ ಸಾರಿನ ರಿಸಿಪಿ ಹಾಕಿದ್ದೆ. ಆಗ ನನಗೆ ಹಲವಾರು ಮೈಲ್ ಬಂದಿತ್ತು. ನನ್ನ ಬ್ಲಾಗ್ ನ comment setting ನಲ್ಲಿ ನಾನು ಎನೋ ಎಡವಟ್ಟು ಮಾಡಿಕೊಂಡಿದ್ದೆ. ಅವರಲ್ಲೇ ಒಬ್ಬರ ಸಹಾಯ ಪಡೆದು ಅದನ್ನು rectifyiಸಿದೆ. ಮತ್ತು ಲಿಂಕ್ ಕೊಡುವುದು ಅಷ್ಟು ಗೊತ್ತಿರಲಿಲ್ಲ ಮತ್ತು ಥ್ಯಾಟ್ಸ್ ಕನ್ನಡ /ಶ್ಯಾಂ ಗೆ ಕ್ರೆಡಿಟ್ ಕೂಡ ಕೊಟ್ಟಿರಲಿಲ್ಲ. ಇವತ್ತು ಬೆಳಿಗ್ಗೆ ಬೆಳಿಗ್ಗೆ ಬಂದ ಕಮೆಂಟ್ ನಿಂದಾಗಿ ಈ ಪೋಸ್ಟ್. ಅಷ್ಟೆ ಅಲ್ಲ ಈಗ ಪುನ: ಮಳೆಗಾಲ ಆರಂಭವಾಗಲಿದೆ. ನೀವು ಮಾಡಿ ನೋಡಿ ನೆಲ್ಲಿಕಾಯಿ ಸಾರು. ಉಪ್ಪಿಗೆ ಹಾಕಿಟ್ಟಿದ್ದೆ ಆಗಬೇಕೆಂದಿಲ್ಲ. ಮಾರ್ಕೆಟ್ ಗೆ ಹೋದಾಗ ದೊಡ್ಡ ದೊಡ್ಡ ನೆಲ್ಲಿಕಾಯಿಗಳನ್ನು ನೋಡಿದ್ದೆ. ಈಗ ಉಪ್ಪಿಗೆ ಹಾಕಿಡಬಹುದು.
ಮತ್ತು ಇಲ್ಲಿದೆ ಲಿಂಕ್
ನೆಲ್ಲಿಕಾಯಿ ಸಾರು

ನನ್ನ ಬ್ಲಾಗಿಗೆ 74,000 + ಹಿಟ್ಟುಗಳು , 85+  ಹಿಂಬಾಲಕರು ಇದ್ದರೆ ಇದರ ಶ್ರೇಯ ನನ್ನ ಮಿತ್ರರಿಗೆ ಸಲ್ಲುತ್ತಿದೆ.
:-)
(ನನಗೆ ಇಂಗ್ಲಿಷ ಬರಲ್ಲಮ್ಮ ಅಂದಿದ್ದ ಮಿತ್ರರ ಇಂಗ್ಲಿಷ್ ತುಂಬಾsssssನೆ ಚೆನ್ನಾಗಿದೆ. ಅವರಿಗೆ ಸ್ವಲ್ಪ ನಾಚಿಕೆ ಅಷ್ಟೆ....) :-)

May 6, 2014

Biscoot Factory

ನನ್ನ ಮಗಳು ಮಾಲವಿಕಾಳ enterprise 'Biscoot Factory' ಪ್ರಾರಂಭ ವಾಗುತ್ತಿದೆ,  ನಿಮ್ಮೆಲ್ಲರ ಆಶೀರ್ವಾದ, ಸಲಹೆ, ಸಹಕಾರಗಳು ತುಂಬಾ ಮುಖ್ಯ. 
ಅವಳಿಗೆ Best Of Luck' ಅನ್ನುತ್ತಾ....ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಫೇಸ್ ಬುಕ್ ಪುಟ ನೋಡಿ. ಇಲ್ಲಿದೆ ಕೊಂಡಿ Biscoot Factory
ಹಾಗು ಚೆಂದದ ಚಿತ್ರಗಳಿಗೆ ಈ ಕೊಂಡಿ ಕ್ಲಿಕ್ಕಿಸಿ:Biscoot Factory Photo Shoot

May 3, 2014

ಬಟಾಟೆ ಗೊಜ್ಜು

ಕೆಲವು ವರ್ಷಗಳ ಹಿಂದೆ, ಅಂದ್ರೆ ಆಗಷ್ಟೆ ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡ್ತಾ ಇದ್ದಾಗ thatskannada ನನ್ನಿಂದ  ಆಲೂ ಪೋಹಾ/ ಬಟಾಟಾ  ಪೋಹಾ  ರೆಸಿಪಿ ಬರೆಯಿಸಿ  ಹಾಕಿದ್ದರು. ಆಗ ಒಂದು ಕಮೆಂಟ್ ಹೀಗಿತ್ತು: 'ಮ್ಯಾಡಂ  ಕನ್ನಡದಲ್ಲಿ ಲಕ್ಷಣವಾಗಿ ಆಲೂಗಡ್ಡೆ ಅಂತಾರೆ', ಆಲೂಗಡ್ಡೆ ಹಾಕಿದ್ದ ಅವಲಕ್ಕಿ ಅಂತ ಟೈಟಲ್ ಕೊಡಬೇಕಿತ್ತಂತೆ. :-) ನಾನು ಮುಂಬೈನಲ್ಲಿ ಹುಟ್ಟಿ ಬೆಳೆದಿರಬಹುದು, ಆದರೆ ನಮ್ಮ ಮನೆ ಭಾಷೆ ಕೊಂಕಣಿ, ನಾವು ಆಲೂಗಡ್ಡೆಗೆ ಕೊಂಕಣಿಯಲ್ಲಿ ಬಟಾಟೆ ಅಂತಲೇ ಹೇಳೋದು ಹಾಗಾಗಿ ನಾನು ಇವತ್ತು  ಹಾಗೇ ಬರೆದಿದ್ದು. ಅಲ್ಲದೇ ಹಲವಾರು ಕಡೆ ಕನ್ನಡದಲ್ಲಿ ಬಟಾಟೆ ಅನ್ನುವುದನ್ನು ಕೇಳಿದ್ದೇನೆ   anyways ....... 

ಇವತ್ತು ಬೆಳಿಗ್ಗೆ ಎದ್ದು ಏನಪ್ಪಾ ಬ್ರೇಕ್ ಫಾಸ್ಟ್ ಗೆ ಮಾಡೋದು ಅಂತ , ಸುಮಾರು ದಿನ ಆಯ್ತು ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಮಾಡಿರಲಿಲ್ಲ, ಸೋ ಅದನ್ನೇ  ಮಾಡುವ ಅಂತ, ಆಲೂಗಡ್ಡೆ ಬೇಯಿಸಿದೆ. ಮಾಲವಿಕಾ ಗೆ ಇವತ್ತು ಚಪಾತಿ ತಿನ್ನುವ ಮೂಡ್  ಇರಲಿಲ್ಲ. ಅಮ್ಮ, ಸುಮ್ಮನೆ ಗಂಜಿ ಊಟ ಮಾಡುವ ಸಿಕ್ಕಾಪಟ್ಟೆ ಸೆಕೆ ಅಂದ್ಲು. ಶ್ರೀಕಾಂತ ಚಪಾತಿ ನೇ ಮಾಡು ಅಂದ್ರು. ಅದಕ್ಕೆ ಎರಡೂ ಮಾಡಿದೆ. ಮಾಲವಿಕಾಗೆ ಗಂಜಿ ಜತೆ ಬಟಾಟೆ  ಗೊಜ್ಜು ಇಷ್ಟ. ಹೇಗೂ ಬೇಯಿಸಿದ ಆಲೂಗಡ್ಡೆ ಇತ್ತು. ಅದರಿಂದ ಗೊಜ್ಜು ಕೂಡ ಮಾಡಿದೆ. ಸೊ breakfast double ಧಮಾಕಾ. ಮಕ್ಕಳು ಅಷ್ಟೆಲ್ಲ ಡೈಲಾಗ್ ಹೊಡೆದು ಚಪಾತಿ  ಪಲ್ಯ ಸಹ ಗುಳುಂ ಮಾಡಿದ್ರು ಅದು ಬೇರೆ ವಿಷಯ. ಇಲ್ಲಿದೆ ಆಗೂಗಡ್ಡೆ ಉರ್ಫ್ ಬಟಾಟೆ ಗೊಜ್ಜು ಮಾಡುವ ವಿಧಾನ. ಬಹುತೇಕ ಎಲ್ಲರಿಗೂ ಇಷ್ಟ ವಾಗುವಂತಹ ಪದಾರ್ಥ. 





ಒಗ್ಗರಣೆಗೆ : ಬಿಸಿ ಎಣ್ಣೆಯಲ್ಲಿ ಸಾಸಿವೆ , ಕರಿಬೇವು, ಹಿಂಗು, ಸಣ್ಣಕ್ಕೆ ಕೊಚ್ಚಿದ ಹಸಿಮೆಣಸಿನಕಾಯಿ. ಇದಕ್ಕೆ ಮ್ಯಾಶ್ ಮಾಡಿದ ಬಟಾಟೆ ಹಾಕಿ. ಉಪ್ಪು ಬೆರೆಸಿ, ಕೊನೆಯಲ್ಲಿ ಮೊಸರು ಮತ್ತು ಸಣ್ಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು. Actually original ಗೊಜ್ಜಿ ನಲ್ಲಿ ಕೊತ್ತಂಬರಿ ಸೊಪ್ಪ ಬೆರೆಸಲಿಕ್ಕೆ ಇಲ್ಲ. ಆದರೆ ನಮ್ಮ ರಾಯರು ಕೆಲವೊಮ್ಮೆ ಲೆಕ್ಚರ್ ಮೋಡ್ ಗೆ ಹೋಗಿ, ಈ  ಗೊಜ್ಜಲ್ಲಿ ಏನೂ ಪೌಷ್ಠಿಕಾಂಶ ಇಲ್ಲ ಅಂತ ರಾಗ ಎಳೀತಾರೆ. ಅದಕ್ಕೆ ಕೊತ್ತಂಬರಿ ಸೊಪ್ಪು ಕರಿಬೇವು ತೋರಿಸಿ ,  see i have added some greens' ಅಂತ ಅವರಿಗೆ ತಮಾಷೆ ಮಾಡ್ತೇನೆ. ನೀವು ಮಾಡಿ ನೋಡಿ. ಸಿಕ್ಕಾ ಪಟ್ಟೆ ಈಸಿ. ಚಪಾತಿ ಜತೆಗೂ ಚೆನ್ನಾಗಿರುತ್ತೆ. ಎಂಜಾಯ್ 

May 1, 2014

May Day

Happy May Day/ ಕಾರ್ಮಿಕರ ದಿನಾಚರಣೆ ಎಲ್ಲರಿಗೂ. :-)

ಆಶ್ಚರ್ಯಗಳಲ್ಲಿ ಆಶ್ಚರ್ಯ ಅಂದರೆ ನಮ್ಮ ಆಫಿಸ್ ಗೆ ಇವತ್ತು ರಜೆ. ಅದಕ್ಕೆ ಶ್ರೀಕಾಂತ ಗೆ ಕೇಳಿದೆ ಅರೇ, ಕಾರ್ಮಿಕ ದಿನಾಚರಣೆ ಅಂದ್ರೆ ಇವತ್ತು ನೀವು 20 ಗಂಟೆ ಕೆಲಸ ಮಾಡಬೇಕು ಅಂತ. ಇರಲಿ ಪಾಪ ನಮ್ಮ ಸ್ಟಾಫ್ ಎಂಜಾಯ್ ಮಾಡಲಿ. ಇವತ್ತು ಬೆಳಿಗ್ಗೆ ಸುಮ್ನೆ ಇದ್ದೆ. ಶ್ರೀಕಾಂತ ಇವತ್ತು ಬ್ರೇಕ್ಫಾಸ್ಟ್ ಇಲ್ಲ್ವಾ ಅಂತ ಕೇಳಿದಾಗ ಇವತ್ತು ನನಗೆ may day ಅಡಿಗೆಗೆ holiday ಅಂದೆ.

ನಿಹಾ ನನಗೊಸ್ಕರ ಹೊಸ ಮಾಸ್ಟ್ ಹೆಡ್ ಮಾಡಿ ಕೊಟ್ಟಿದ್ದನ್ನು ಹಾಕುವಾ ಅಂತ ಬಂದೆ. ಹಾಗೆ ಸ್ವಲ್ಪ ನಿಮ್ಮ ತಲೆ ತಿನ್ನುವಾ ಅಂತ. ಇಲ್ಲ ಇಲ್ಲ ಬ್ರೇಕ್ ಫಾಸ್ಟ್ ಗೆ ಬ್ರೆಡ್ ಸ್ಯಾಂಡ್ ವಿಚ್ ಮತ್ತು ರಾಯರಿಗೆ ಅವರ ಫೇವರಿಟ್ ಅಕ್ಕಿ ಹಿಟ್ಟಿನ ದೋಸೆ ಮಾಡಿ ಕೊಟ್ಟೆ. ಆದರೆ ಮಧ್ಯಾಹ್ನ ಅವರದ್ದೇ ಅಡಿಗೆ. :-)

ಈಗ ಇದನ್ನು ಬರೆಯುವಾಗ ಪಂಡಿತ್ ಕುಮಾರ ಗಂಧರ್ವರು ’ಉಡ್ ಜಾಯೇಗಾ ಹನ್ಸ್ ಅಕೇಲಾ’ ಅಂತ ಹಾಡ್ತಿದ್ದಾರೆ.

ನಿಹಾ ಹೊಸದೊಂದು ಬ್ಲಾಗ್ ಶುರು ಮಾಡಿದಾಳೆ. ನೋಡಿ ಇಲ್ಲಿ http://shutterisles.blogspot.in/

ಸಂಜೆ ದೋsssssssಡ್ಡ ವಾಕ್ ಹೋಗಿ ರಾತ್ರಿ ಹೊರಗಡೆ ಊಟ ಮಾಡುವ ಪ್ರೋಗ್ರಾಮ್. ನಿಮ್ಮದು?

ಎಂಜಾಯ್

April 26, 2014

ಎಳನೀರಿನ ಸೂಪ್/ Tender coconut soup

ಮೊನ್ನೆ ಭಾನುವಾರ ಮಡಿವಾಳ ಸಂತೆಗೆ ಹೋಗಿದ್ದೆ . ಹಲವಾರು ಸಲ ವೀಕ್ ಡೇಸ್ ನಲ್ಲೂ ಹೋಗಿದ್ದೇನೆ, ಆದರೆ ಶನಿವಾರ ಭಾನುವಾರ ಅಲ್ಲಿ ಜನರನ್ನು ನೋಡ ಬಹುದು. ಮತ್ತೆ ಭಾನುವಾರ ಆದರೆ ನಮ್ಮ ರಾಯರ ಐರಾವತ ಅರ್ಥಾತ್ ಸ್ಕೂಟರ್ ಏರಿ ಹೋದ್ರೆ ಸ್ವಲ್ಪ ಜಾಸ್ತಿ ತರಕಾರಿ ಎತ್ತ ಕೊಂಡು ಬರಬಹುದು. 

ಮಡಿವಾಳದ ತರಕಾರಿ ಮಾರ್ಕೆಟ್ ತುಂಬಾ ದೊಡ್ಡದಾಗಿದೆ. ಪೂರ್ತಿ ಮಾರ್ಕೆಟ್ ನಾ ಇನ್ನೂ ನೋಡಿಲ್ಲ. ಹಾಗೆ ಮೊನ್ನೆ ಬರ್ತಾ 10 ಏಳನೀರು ಕಾಯಿಗಳನ್ನು ಹೊತ್ತುಕೊಂಡು ಬಂದ್ವಿ. ಎರಡು ದಿನ ಆದ ನಂತರ ಯಾರಿಗೂ ಎಳನೀರು ಕುಡಿಯುವ ಮನಸ್ಸು ಆಗಲಿಲ್ಲ. ನಾನಂತೂ ಜೀವ ಹೋದರೂ ಎಳನೀರು ಕುಡಿಯಲ್ಲ. ಯಾಕೆ ಅಂತ (ಕುಸುಮಬಾಲೆ ಸ್ಟೈಲ್ ನಲ್ಲಿ) ಯೋಳ್ತೀನಿ ಕೇಳಿ:

ಆಗ ನಾನು ಮಾಲವಿಕಳ ಟೈಮ್ ಪ್ರೆಗ್ನೆಂಟ್ . ಅಮ್ಮ ಅಪ್ಪ ಕೊಪ್ಪಕ್ಕೆ ಬಂದಿದ್ದರು. ಅವರು ಕೊಪ್ಪಕ್ಕೆ ಬಂದಾಗಲೇ ನನ್ನ ಅಣ್ಣನ (ದೊಡ್ಡಪ್ಪನ ಎರಡನೇ ಮಗ) ನ ಮದುವೆ ಬೆಂಗಳೂರಿನಲ್ಲಿ ಅಂತ ಆಮಂತ್ರಣ ಪತ್ರ ಬಂದಿತು. ಆಗ ಬೆಂಗಳೂರಿಗೆ ಡೈರಕ್ಟ್ ಬಸ್ ಶೃಂಗೇರಿ  ಯಿಂದ  ಮಾತ್ರ. ಅಪ್ಪ ಅಮ್ಮನಿಗೆ ಶೃಂಗೇರಿ ತೋರಿಸಿದ ಹಾಗಾಗುತ್ತದೆ ಎಂದು ಶ್ರೀಕಾಂತ ಶೃಂಗೇರಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸಿದ್ರು. ಮಧ್ಯಾಹ್ನ ಊಟದ ನಂತರ ನಾವು ಶೃಂಗೇರಿಗೆ ಹೊರಟ್ವಿ. ಕೊಪ್ಪದಿಂದ ಶೃಂಗೇರಿ ರೂಟ್ ಇದೆಯಲ್ಲ ಅಬ್ಬ ಎಷ್ಟೊಂದು ತಿರುವು ಮುರುವು? ಹೊಟ್ಟೆಯಲ್ಲಿದ ಅನ್ನ ಸಾರು ಪಲ್ಯ ಎಲ್ಲ ಮಿಕ್ಸಿ ನಲ್ಲಿ ಹಾಕಿದ ಹಾಗಾಯ್ತು. ವಾಂತಿ ಮಾಡ್ತಾ ಹೋದೆ. ಶೃಂಗೇರಿ ತಲುಪುವಷ್ಟರಲ್ಲಿ ಅರೆ ಜೀವ ಆದೆ. ಶೃಂಗೇರಿಯಲ್ಲಿ ಶಾರದೆಯ ದರ್ಶನ ಮಾಡಿ, ಅಲ್ಲಿ ನೀರಿನ ಮೀನುಗಳಿಗೆ ಮಂಡಕ್ಕಿ ಹಾಕಿ ದೇವಸ್ಥಾನ ಆವರಣದಲ್ಲಿ ಸಂಜೆ ತನಕ ಕಾಲ ತಳ್ಳಿದ್ವಿ. ಸಂಜೆ 7.30 ಗೆ ನಮ್ಮ ಬಸ್. ನನಗೆ ಊಟ ಮಾಡಬೇಕೆನ್ನಿಸಲಿಲ್ಲ. ಹಾಗಾಗಿ ಶ್ರೀಕಾಂತ್ ಎಳನೀರು ಕುಡಿಬಹುದು ಅಂದ್ರು. ಎಷ್ಟು ರುಚಿಯಾಗಿತ್ತೆಂದರೆ,  ಒಂದಲ್ಲ ಎರಡು ಎಳನೀರು ಕುಡಿದೆ. ಡಿಸೆಂಬರ್ ನ ಚಳಿ ಗಾಲ. ಅಲ್ಲೆಲ್ಲ ತುಂಬಾ ಚಳಿ. ಹೊಟ್ಟೆನೂ ಖಾಲಿ. ಬಸ್ ಊರಿಂದ ಬಿಟ್ಟ ಸ್ವಲ್ಪ ಹೊತ್ತಿಗೆ ನನಗೆ ಮೂತ್ರಶಂಕೆ ಎನ್ಸಿತು. ಇರಲಿ ಹೇಗಾದರೂ ಕಂಟ್ರೋಲ್ ಮಾಡಿ ಬೆಳಿಗ್ಗೆ ಬೆಂಗಳೂರಿಗೆ ತಲುಪಿದ ಮೇಲೆ  ಟಾಯ್ಲೆಟ್ ಗೆ ಹೋಗೋದು ಅಂತ ತೀರ್ಮಾನಿಸಿದೆ. ನಾನು ತೀರ್ಮಾನಿಸಿದರೆ ಆಯಿತೇ? ಪ್ರೆಗ್ನೆಂಟ್ ಬೇರೆ ಇದ್ನಾ? ಕಡೆಗೆ ತಡಿಲಿಕ್ಕ್ ಆಗದೆ ಶ್ರೀಕಾಂತ ಗೆ ಬಸ್ ನಿಲ್ಲಿಸಲಿಕ್ಕೆ ಹೇಳಿದೆ. ಬಸ್ ನವರು ಅರ್ಧ ಗಂಟೆ, ಅರ್ಧ ಗಂಟೆ ಅಂತ ಸತಾಯಿಸ್ತಾ ಇದ್ರು. ಕೊನೆಗೆ ಶ್ರೀಕಾಂತ ಬೆರಳು ಕಚ್ಚಲಿಕ್ಕೆ ಶುರು ಮಾಡಿದೆ, ಅದರ ಜತೆ ಅಳು ಕೂಡ. ಕೊನೆಗೆ ನಾಲ್ಕೈದು ಪ್ಯಾಸೆಂಜರ್ ಸ ಸೇರಿ ಡ್ರೈವರ್ ಅನ್ನು ದಬಾಯಿಸಿದರು. ಬಸ್ ಕೊನೆಗೂ ನಿಂತಿತು. ಹಲವಾರು ಜನ ಇಳಿದರು. ಅಮ್ಮ ಕೂಡ. ಅಷ್ಟು ಹೊತ್ತು ತಡಕೊಂಡಿದ್ದಕ್ಕೋ ಏನೋ ಮೂತ್ರ ಬರಲೇ ಇಲ್ಲ. ಅಷ್ಟರಲ್ಲಿ ಎರಡು ಮೂರು ಸಲ ಡ್ರೈವರ್ ಬೇಗ ಬೇಗ ಬಸ್ ಹತ್ತಿ ಅಂತ ಕಿರುಚ್ತಾ ಇದ್ದ. ಅಂತೂ ಇಂತೂ ಎಲ್ಲ ಸುಸೂತ್ರವಾಗಿ ನಡೆದು ಉಸ್ಸಪ್ಪ ಅಂತ ಬಸ್ ಹತ್ತಿದ್ದೆ. ಅಮ್ಮನೂ ಹಾಗೇ ಹೇಳಿದ್ರು ಇನ್ನು ಜನ್ಮದಲ್ಲಿ ಟ್ರಾವೆಲ್ ಮಾಡುವಾಗ ಎಳನೀರು ಕುಡಿಯಲ್ಲ ಅಂತ. ಅದೇ ಫರ್ಸ್ಟ್ ಟೈಮ್ ರಸ್ತೆ ಪಕ್ಕ ಕೂತು ವನ್ ನಂಬರ್ ಮಾಡಿದ್ದು. (ಆಮೇಲೆ ನಮ್ಮ ಟ್ರಾವೆಲ್, ಟ್ರೆಕ್ಕಿಂಗ್, ಬೈಂಕಿಂಗ್, ಹೈಕಿಂಗ್ ಸಮಯದಲ್ಲಿ ಇದೆಲ್ಲ ಸರ್ವೇ ಸಾಮಾನ್ಯವಾದ ವಿಷಯ ಆಯ್ತು ಬಿಡಿ. )ಆದರೂ ಆದಿನ ನಾ ಪಟ್ಟ ಮುಜುಗರ ಜೀವನ ಪರ್ಯಂತ ಮರೆಯುವುಲ್ಲ. ಹಾಗಾಗಿ ನನಗೆ ಎಳನೀರ್ ಗೆ ಕಟ್ಟಿ. :-)

ಸೊ ಎರಡು ದಿನ ನಂತರ ಶ್ರೀಕಾಂತ ಪುನ: ಹಳ್ಳಿಗೆ ಪ್ರಯಾಣ. ಈ ಹುಡುಗಿಯರು ಎಳನೀರು ಬೇಡ ಅಂತ. ಮೊದಲೇ ಸೆಕೆ. ಸೆಕೆಗೆ ಎಳನೀರು , ತೆಂಗಿನಕಾಯಿ ಎಲ್ಲ ಬೇಗ ಹಾಳಾಗುತ್ತಿವೆ.  ಆದ್ದರಿಂದ ಎಳನೀರಿನಿಂದ ಸೂಪ್ ಮಾಡುವ ಪ್ಲ್ಯಾನ್ ಹಾಕಿದೆ. 
ಎರಡು ಎಳನೀರು, ಅದರಿಂದ ಗಂಜಿ ಬೇರ್ಪಡಿಸಿ. ನಿಮಗೆ ಬೇಕಾದ ತರಕಾರಿ ಕತ್ತರಿಸಿ ಇಡಿ.. ನಾನು ಬೀನ್ಸ್, ಕ್ಯಾರೆಟ್, ಬಸಳೆ ಉಪಯೋಗಿಸಿದೆ. ಸ್ವಲ್ಪ ನೀರುಳ್ಳಿಯನ್ನು ಎಣ್ಣೆಯಲ್ಲಿ ಘಂ ಪರಿಮಳ ಬರುವ ತನಕ ಹುರಿಯಿರಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ತರಕಾರಿಗಳನ್ನು ಬೆರೆಸಿ. ದೊಡ್ಡ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಉಪ್ಪು ಬೆರೆಸಿ. ಎಳನೀರು ಹಾಕಿ ಕುದಿ ಯಲು ಬಿಡಿ. ಇದಕ್ಕೆ ಸ್ವಲ್ಪ ಕೋರ್ನ್ ಫ್ಲೋರ್ ಬೆರೆಸಿ . ಸೂಪ್ ದಪ್ಪ ಆಗಲಿಕ್ಕೆ ಬಂದಾಗ ಬೆಂಕಿಯಿಂದ ಕೆಳಗಿಳಿಸಿ. ಕರಿಮೆಣಸಿನ ಪುಡಿ ಮತ್ತು ದಪ್ಪ ಗಂಜಿ ಇದ್ದಲ್ಲಿ ಅದನ್ನೂ ಸಣ್ಣಕ್ಕೆ ಕತ್ತರಿಸಿ ಸೂಪ್ ನಲ್ಲಿ ಹಾಕಬಹುದು.  ಎಳನೀರಿನ ಚಿಪ್ಪಿನಲ್ಲಿ ಸರ್ವ ಮಾಡ ಬಹುದು. 

ಇಲ್ಲಿದೆ ಸೂಪ್ ಮಾಡುವ ವಿಧಾನ/ಫೋಟೊಗಳು. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ
Tender coconut soup

April 20, 2014

ಮೀನು minded malathi- ಸಂಚಿಯಿಂದ ತೆಗೆದ ನೆನಪು-10

ಈ ಮೊದಲೇ ಬಹಳ ಸಲ ಬರೆದ ಹಾಗೆ : ನಾನು ನನ್ನ ಅಜ್ಜನ ಹತ್ತಿರ ಬೆಳೆದೆ. ಅವರು ಪಕ್ಕಾ ಸಸ್ಯಾಹಾರಿಗಳು. ರಜೆಗೆಂದು ಅಮ್ಮನ ಮನೆಗೆ ಹೋದಾಗ ಅವರು ಬಹಳ ಕಟ್ಟುನಿಟ್ಟಾಗಿ ಹೇಳುತ್ತಿದ್ದರು, ’ಮಾಲತಿ ಅಲ್ಲಿ ಹೋಗಿ ಮೀನು ತಿಂದರೆ ನೀನು ವಾಪಸ್ ನನ್ನ ಬಳಿ ಬರಲಿಕ್ಕಿಲ್ಲ’ ಅಂತ. ಅಮ್ಮನ ಮನೆಗೆ ಹೋದಾಗಲೆಲ್ಲ ನನಗೋಸ್ಕರ ಅಮ್ಮ ವೆಜಿಟೇರಿಯನ್ ಅಡಿಗೆ ಮಾಡುತ್ತಿದ್ದರು. ಆ ಮೇಲೆ ನಾನಿಗೆ ಕ್ಯಾನ್ಸರ್ ಆಗಿ ನಾನು ಅಮ್ಮನ ಮನೆಗೆ ಪರ್ಮನೆಂಟ್ ಆಗಿ ವರ್ಗಾಯಿಸಲ್ಪಟ್ಟೆ. ಅಮ್ಮನಿಗೋ ತುಂಬ ಕೆಲಸಗಳು. ನಾವು ಐದು ಜನರ ಪಾತ್ರೆ ಬಟ್ಟೆ ಮನೆ ಕ್ಲೀನ್ ಇಡುವುದು, ಹೊರಗಿನಿಂದ ಸಾಮಾನು ತರುವುದು ವಗೈರೆ. ಅಷ್ಟೆ ಅಲ್ಲ ಯಾವುದೇ ಕಾರಣಕ್ಕೆ ಪಾಲಕರು ಶಾಲೆಗೆ ಬರಲೇಬೇಕಿದ್ದಲ್ಲಿ ನಮ್ಮ ಅಮ್ಮನೇ ಬರುತ್ತಿದ್ದದ್ದು- ಶಾಲೆಯ ವಾರ್ಷಿಕೋತ್ಸವ ಇರಲಿ, ಸ್ಪೋರ್ಟ್ಸ್ ಡೇ ಇರಲಿ, ಪೇರೆಂಟ್ ಟೀಚರ್ಸ್ ಮೀಟ್ ಇರಲಿ... ನಮ್ಮ ತಂದೆ ಬೆಳಿಗ್ಗೆ ಆಫಿಸ್ ಗೆ ಹೋದರೆ ಬರುತ್ತಿದ್ದದ್ದೆ ರಾತ್ರಿ. ಆವಾಗಲೇ ನಮ್ಮ ಬಿಲ್ಡಿಂಗ್ ನಲ್ಲಿ ಕಾರ್ ಪೂಲಿಂಗ್ ನಡೀತಿತ್ತು. ನಮ್ಮ ಮನೆ ಒಂದು ಕಡೆ ಆದರ ಅಪ್ಪನ ಆಫಿಸ್ ಮುಂಬೈ ನ ಇನ್ನೊಂದು ತುದಿಯಲ್ಲಿ. ಹಾಗಾಗಿ ಅಪ್ಪ ನಮಗೆ ಅಪರಿಚರಾಗೇ ಉಳಿದರು. ನಾನಂತು ಅಪ್ಪನಿಗೆ ಸಿಕ್ಕಾಪಟ್ಟೆ ಹೆದರುತ್ತಿದ್ದೆ. ಮಾರ್ಕ್ಸ್ ಕಾರ್ಡ್ ಎಲ್ಲ ಅಮ್ಮ ಅಥವಾ ತಮ್ಮ ತಂಗಿಯರಿಂದ ಅಪ್ಪನ ಬಳಿ ಕಳುಹಿಸಿ ಸಹಿ ಪಡೆದುಕೊಳ್ಳುತ್ತಿದ್ದೆ, ಒಳ್ಳೆಯ ಅಂಕಗಳನ್ನು ಪಡೆದುಕೊಂಡರೂ!!!.

ಆಮೇಲೆ ಅಮ್ಮಮನೆಯಲ್ಲಿ ನಾನ್ ವೆಜ್ ಮಾಡಿದಾಗ (ವಾರದಲ್ಲಿ ನಾಲ್ಕು ಸಲ ನಮ್ಮನೆಯಲ್ಲಿ ಮೀನು ಮಾಡುತ್ತಿದ್ದರು) ನನಗೊಸ್ಕರ ಬೇರೆ ಅಡಿಗೆ ಮಾಡಬೇಕಲ್ಲವಾ ಅಂತ ನಾನು ಪರವಾಗಿಲ್ಲಮ್ಮ ನಾನು ಮೀನು ತಿನ್ನಲು ಟ್ರೈ ಮಾಡ್ತೇನೆ ಏನಿಲ್ಲದಿದ್ದರೆ ಅದರ ಗ್ರೇವಿಯಾದರೂ ತಿನ್ನುತ್ತೇನೆ ನೀನು ನನಗೋಸ್ಕರ ಸಸ್ಯಾಹಾರಿ ಅಡುಗೆ ಮಾಡಬೇಕಿಲ್ಲ. ಹೌದು ನನ್ನ ಅಡುಗೆ ನಾನೇ ಮಾಡಿಕೊಳ್ಳುವಷ್ಟು ಬುದ್ದಿ ಬಂದಿತ್ತು ನನಗೆ, ಆದರೆ ನನಗೆ ಬೆಳಗ್ಗಿನ ಶಿಫ್ಟ್ ಶಾಲೆ ಇತ್ತು. 6 ಗಂಟೆಗೆಲ್ಲ ನಾನು ಮನೆಯಿಂದ ಹೊರಬೀಳಬೇಕಿತ್ತು. ಅದಲ್ಲದೇ ಎನ್ ಸಿ ಸಿ ಪರೇಡ್ ಇದ್ದಾಗ 5 ಕ್ಕೆ ಬೆಳಿಗ್ಗೆ ಹೊರಡಬೇಕಿತ್ತು.

ತಂದೆಯವರು ಭಾನುವಾರ ಬೆಳಿಗ್ಗೆ ವರ್ಸೋವಾ ಧಕ್ಕೆಗೆ ಹೋಗಿ ದೊಡ್ಡ ದೊಡ್ಡ ಗೋಣಿ ಚೀಲದಲ್ಲಿ ಮೀನು ತರುತ್ತಿದ್ದರು, ನಮಗೆ ಮಾತ್ರವಲ್ಲ ನಮ್ಮ ಬಿಲ್ಡಿಂಗ್ ನಲ್ಲಿನ ಇತರರಿಗೂ ಸಾಕಾಗುವಷ್ಟು, ನಮ್ಮ ಮನೆಯಲ್ಲಿ ಒಂದು ಜರ್ಮನ್ ಕಂಪನಿಯ ಯಾವುದೋ ಒಂದು ದೋssssssಡ್ಡ ಫ್ರಿಜ್ ಇತ್ತು. ಅದರ ಫ್ರೀಜರ್ ಕಂಪಾರ್ಟ್ ಮೆಂಟ್ ನಲ್ಲಿ ಪೂರ್ತಿ ಎರಡು ಮೂರು ನಮೂನೆಯ ಮೀನುಗಳು. ಅಷ್ಟೆ ಅಲ್ಲ ಭಾನುವಾರ ನಮ್ಮ ಮನೆಯಲ್ಲಿ ಮೂರು ನಾಲ್ಕು ಬಗೆಯ ಮೀನಿನ ಐಟಮ್. ನಮ್ಮಮ್ಮನ ಅಡುಗೆ ಮಾತ್ರ ಯಾವತ್ತೂ ಸೂಪರ್!

ಮಧ್ಯಾಹ್ನ ಚಪಾತಿ ಮೆಂತೆ ಸೊಪ್ಪು ಅಥವಾ ಆಲೂ ಭಾಜಿ ತಿಂದು ನಿಭಾಯಿಸುತ್ತಿದ್ದೆ. ರಾತ್ರಿ ಕಷ್ಟಪಟ್ಟು ಮೀನಿನ ಊಟ ಮಾಡುತ್ತಿದ್ದೆ. ಆ ಮೇಲೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಟಾಯಲೆಟ್ ಹೋಗಿ ವಾಂತಿ ಮಾಡುತ್ತಿದ್ದೆ :-) ನನ್ನ ಮದುವೆ ಆಗುವ ತನಕ ಇದು ನಡೆಯಿತು.

ಸಮುದ್ರ ಹೇಗೂ ನಮ್ಮ ಮನೆಯ ಬಳಿಯೇ ಇತ್ತು. ಅಪರೂಪಕ್ಕೊಮ್ಮೆ ಸಮುದ್ರದ ಅಲೆಯಲ್ಲಿ ರಾಶಿರಾಶಿ ಚಿಪ್ಪು ಮೀನು (Shell Fish) ಬರುತ್ತಿತ್ತು. ಆಗ ಬಿಲ್ಡಿಂಗ್ ನ ಯಾರಾದ್ರೂ ನಮಗೆ ತಿಳಿಸುತ್ತಿದ್ದರು. ಅಮ್ಮ, ಅಮ್ಮನ ಫ್ರೆಂಡ್ ಜತೆ ನಾವು ಪ್ಲ್ಯಾಸ್ಟಿಕ್ ಚೀಲ ಹಿಡಿದುಕೊಂಡು ಹೋಗಿ, ಕರ್ಚೀಫ್ ಅನ್ನು ಗಾಳದ ತರಹ ಯೂಸ್ ಮಾಡಿ ಅದರಲ್ಲಿ ಚಿಪ್ಪುಗಳನ್ನು ಹಿಡಿಯುತ್ತಿದ್ದೆವು. ನನಗೆ ಸಮುದ್ರದ ಬಳಿ ಹೋಗುವುದೆಂದರೆ ಇಷ್ಟದ ಕೆಲಸ. ಅಮ್ಮ ಎಲ್ಲ ಇದ್ದಾಗ ಸ್ವಲ್ಪ ಹೆಚ್ಚಿನ ಸಮಯ ಅಲ್ಲಿ ಕಳೆಯುವ ಅವಕಾಶವಾಗುತ್ತಿತ್ತು. ಹಾಗಾಗಿ ನಾನು ಫುಲ್ ಜೋಶ್ ನಿಂದ ಚಿಪ್ಪು ಗಳನ್ನು ಹಿಡಿದುಕೊಡುತ್ತಿದ್ದೆ. ನಮ್ಮ ಮನೆಯಲ್ಲಿ ನನ್ನ ಅಪ್ಪ, ತಮ್ಮ ತಂಗಿಯಂದಿರಿಗೆ ಇದು ಇಷ್ಟದ ಪದಾರ್ಥ.  ಸಂಜೆ ಅದನ್ನು ತಂದ ಮೇಲೆ ಅಮ್ಮ ಅದನ್ನು ಕ್ಲೀನ್ ಆಗಿ ತೊಳೆದು( ಅದಕ್ಕೆ ಮರಳು ಮೆತ್ತಿಕೊಂಡಿರುತ್ತೆ ಅಲ್ಲವಾ? )ಅದನ್ನು ಫ್ರೀಜ್ ನಲ್ಲಿ ಹಾಕಿಟ್ಟು ಅದರ ಅಡುಗೆ ಮರುದಿನ ಮಾಡುವುದು. ಇದು ಯಾವತ್ತಿನ ಪರಿಪಾಠ.

ಹೀಗಿದ್ದಾಗ ಒಂದು ದಿನ ಅಮ್ಮನ ಕಸಿನ್ ಅವಳ ಪುಟ್ಟ ಮೂರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಬರುತ್ತಾರೆಂದು ಪತ್ರ ಬಂತು. ಆಗಿನ್ನೂ ಮನೆಗೆ ಫೋನ್  ಬಂದಿರಲಿಲ್ಲ. ಪತ್ರ ತಲುಪಿದ ಮೂರನೇ ದಿನಾ ನೆ ಅವರು ಬರುವ ದಿನಾಂಕ್. ಅಪ್ಪನಿಗೆ ಆ ದಿನ ಆಫಿಸ್ ನಲ್ಲಿ ಇನ್ಸ್ಪೆಕ್ಷನ್, ಆದ್ದರಿಂದ ಅಮ್ಮನೇ ಅವರನ್ನು ಕರೆತರಲು ದಾದರ್ ಗೆ ಹೋಗಬೇಕಾದ ಪರಿಸ್ಥಿತಿ. ನಾನು ಶಾಲೆಯಿಂದ ಮನೆಗೆ 1 ಗಂಟೆಗೆ ತಲುಪಿದಾಗ ಮನೆಗೆ ಬೀಗ. ಮೇಲಿನ ಮನೆಯಲ್ಲಿರುವ ಅಮ್ಮನ ಸ್ನೇಹಿತೆಯ ಮನೆಯಿಂದ ಬೀಗದ ಕೈ ತೆಗೊಂಡು ಮನೆಗೆ ಬಂದು ನೋಡಿದರೆ, ಅಡಿಗೆನೇ ಆಗಿರಲಿಲ್ಲ.  ಬಹುಶ: ಟ್ರೈನ್ ಬರಲು ವಿಳಂಬ ವಾಗಿರಬೇಕೆಂದು ಕೊಂಡೆ. ಆ ಮೇಲೆ ಎನಪ್ಪಾ ಮಾದುವುದು ಅಂತ ತಲೆ ಕೆರೆದುಕೊಂಡೆ. ಹಿಂದಿನ ದಿನ ಸಂಜೆ ತಂದಿಟ್ಟ ಚಿಪ್ಪು ಮೀನಿನ ನೆನಪಾಯಿತು. ಅದನ್ನು ಪುನ: ಒಮ್ಮೆ ತೊಳೆದು ನೀರಲ್ಲಿ ಹಾಕಿ ಬಿಸಿ ಮಾಡಲಿಟ್ಟೆ. ಇನ್ನೊಂದು ಗ್ಯಾಸ್ ಮೇಲೆ (ಆಗ ನಮ್ಮನೇಲಿ ಗ್ಯಾಸ್ ಇದ್ದರೂ ಸಿಲಿಂಡರ್ ಸಿಗುವುದು ಕಿರಿಕಿರಿಯಾಗುತ್ತದೆಂದು, ಅಮ್ಮ ತುರ್ತು ಪರಿಸ್ಥಿತಿ ಬಿಟ್ಟರೆ ಸೀಮೆ ಎಣ್ಣೆಯ ಸ್ಟವ್ ಮೇಲೆ ಅಡಿಗೆ ಮಾಡುತ್ತಿದ್ದರು.) ಕುಕ್ಕರ್ ನಲ್ಲಿ ಅನ್ನಕಿಟ್ಟೆ, ಜತೆಯಲ್ಲಿ ಸ್ವಲ್ಪ ಬೇಳೆ ಕೂಡ. ನಮ್ಮಲ್ಲಿ ಬೇಳೆ ದಾಳಿ ತೊವ್ವೆ ಆಪತ್  ಬಾಂಧವ್. ಸೇಫ್ ಅಡುಗೆ. :-) ಆ ಮೇಲೆ ನಿಧಾನಕ್ಕೆ ತೆಂಗಿನಕಾಯಿ ಹೆರೆದೆ, ಅದಕ್ಕೆ ಅಂದಾಜಿನಲ್ಲಿ (ಆ ಅಂದಾಜು ಮಾಡಬೇಕಾದ್ರೆ 10 ನಿಮಿಷ ಬೇಕಾಯ್ತು) ಹುರಿದ ಕೆಂಪು ಮೆಣಸು, ಸಣ್ಣ ಹುಣಸೆ ಹುಳಿ ತುಂಡು (ಹುರಿದ ಕೆಂಪು ಮೆಣಸು+ ಉಪ್ಪು ಹಚ್ಚಿಟ್ಟ ಹುಣಸೆ ಹುಳಿ ನಮ್ಮಲ್ಲಿ ಯಾವತ್ತೂ ಸ್ಟಾಕ್ ಇರುತ್ತೆ) , ಸ್ವಲ್ಪ ಹರಳುಪ್ಪು ಹಾಕಿ ರುಬ್ಬುವ ಕಲ್ಲಲ್ಲಿ (ಆಗ ನಮ್ಮ ಮನೆಯಲ್ಲಿ ಮಿಕ್ಸಿ ಇರಲಿಲ್ಲ) ನುಣ್ಣಗೆ ರುಬ್ಬಿದೆ. ರುಬ್ಬುವ ಅಭ್ಯಾಸ ನನಗೆ ಮೊದಲೆ ಅಮ್ಮ ಮಾಡಿಸಿದ್ದರು. ಹಾಗಾಗಿ ಅಂದಾಜಲ್ಲಿ ಏನೇನು ಸಾಮಾನು ಹಾಕಬೇಕೆಂದು ಗೊತ್ತಾಗಿದ್ದು) -ಎಲ್ಲೋ ಒಂದು ಕಡೆ ಮನಸ್ಸಲ್ಲಿ ಮನಸ್ಸಿಲ್ಲದಿದ್ದರೂ ಕೆಲವು ವಿಷಯ ಸೇವ್ ಆಗಿರುತ್ತೆ ಅಂತಹ ವಿಷಯಗಳು) 

ಬಿಸಿ ನೀರಿನಲ್ಲಿ ಮರಳುತ್ತ ಆ ಚಿಪ್ಪುಗಳು ತೆರೆದುಕೊಳ್ಳುತ್ತವೆ. ಅದರ ಒಳಗಿನ ಫ್ಲೆಶ್ ಅನ್ನು ತೆಗೆಯಬೇಕು, ಚಿಪ್ಪುಗಳನ್ನು ಬಿಸಾಡುವುದು. ಈ ಕೆಲಸ ಮಾಡಿ ಅದಕ್ಕೆ ರುಬ್ಬಿಟ್ಟ ಮಸಾಲೆ ಬೆರೆಸಿದೆ, ಒಂದು ಸಣ್ಣ ತುಂಡು ಮಾವಿನ ಕಾಯಿಯಿತ್ತು ಅದನ್ನು ಸೇರಿಸಿ, ಅದನ್ನು ಕುದಿ ಬರಲು ಇಟ್ಟೆ. ವಾಹ್ ಏನು ಘಂ ಎನ್ನುವ ಪರಿಮಳ. ಸರಿ ಕುದಿ ಬಂದ ನಂತರ ಅದಕ್ಕೆ ಒಂದೆರಡು ಸ್ಪೂನ್ ತೆಂಗಿನ ಎಣ್ಣೆ ಬರೆಸಿ, ಆಫ್ ಮಾಡಿ , ಪಾತ್ರೆ ಮುಚ್ಚಿಟ್ಟೆ. ಅಷ್ಟರಲ್ಲಿ ಕುಕ್ಕರ್ ಕೂಡ ತನ್ನ ಕೆಲಸ ಮುಗಿಸಿತ್ತು. ನೋಡಿದರೆ ಅನ್ನ ಚೆನ್ನಾಗಿ ಬೆಂದಿತ್ತು, ಆದರೆ ಬೇಳೆ ಬೆಂದಿರಲಿಲ್ಲ. ಹಾಗಾಗಿ ಅನ್ನದ ಪಾತ್ರೆ (ದೊಡ್ಡ ಕುಕ್ಕರ್ ಅದು ಈಗ ಅಂತಹುದ್ದನ್ನು ನಾನು ನೋಡಿಲ್ಲ, ಅದು ಜೋಡಿಸಬೆಕಾದರೆ ಸ್ವಲ್ಪತಲೆ ಖರ್ಚು ಮಾಡಬೇಕಾಯಿತು.) ಪುನ: ಬೇಳೆ ಬೇಯಲು ಇಟ್ಟೆ. ನನ್ನ ಅಡುಗೆ ಎಲ್ಲ ಮುಗಿಸಿ ಖುಶಿ ಖುಶಿಯಾಗಿದ್ದೆ. ನನ್ನ ಜೀವಮಾನದ ಮೊದಲ ಅಡುಗೆ (from scratch) ಅದೂ ಮೀನಿನದ್ದು, ಅಮ್ಮ , ಅಮ್ಮನ ಕಸಿನ ಎಲ್ಲ ಹಸಿವೆಯಿಂದ ಬಂದು ಊಟ ಮಾಡಿ ಕೊಂಡಾಡುತ್ತಾರೆಂದು!!

ಹೌದು ನಾನೆಣೆಸಿದ ಹಾಗೆ ಟ್ರೈನ್ ಬರುವಾಗ ತುಂಬ್ ಲೇಟ್ ಆಗಿ, ಎರಡು ಎರಡು ಲೋಕಲ್ ಟ್ರ್ರೈನ್ ಹಿಡಿದು. ಮೂರು ಪುಟ್ಟ ಮಕ್ಕಳು, ಸಾಮಾನು, ಮನೆಗೆ ತಲುಪುವಾಗ ಅವರೆಲ್ಲ ಸೋತು ಸುಣ್ಣವಾಗಿದ್ದರು. ಅದರಲ್ಲೂ ಅಮ್ಮನಿಗೆ ಡಬಲ್ ಚಿಂತೆ. ಮನೆಗೆ ಬಂದು ಅಡುಗೆ ಮಾಡಬೇಕಲ್ಲವಾ ಎಂದು. ಅಮ್ಮನ ಕಸಿನ್ ವಾಹ್ ವಾಹ್ ಅನ್ನುತ್ತ ಹೊಗಳುತ್ತ ಊಟ ಮಾಡಿದರು. ನಾನು ಮೊದಲ್ನೇ ಸಲ ಮಾಡಿದ ಅಡುಗೆ ಅಂತ ಅವರಿಗೆ ನಂಬಲಾಗಲಿಲ್ಲ. ಅಮ್ಮನಿಗೆ ನಾನು ಅಡಿಗೆ ಮಾಡಿಟ್ಟಿದ್ದೇನೆ ಅಂತ ನಿರಾಳ ಏನೋ ಆಯ್ತು ಆದರೆ ಒಂದು ಹೊಗಳಿಕೆಯ ಮಾತುಗಳನ್ನು ಹೇಳದೇ ಇದ್ದುದರಿಂದ ತುಂಬಾ ಪೆಚ್ಚಾದೆ. :-( :-(. ನಾನು ಅನ್ನ ತೊವ್ವೆ ಮಾತ್ರ ಉಂಡದ್ದು. ನಾನು ಮೀನಿನ ಸುದ್ದೆಗೆ ಹೊಗಿರಲಿಲ್ಲ. ರಾತ್ರಿ ಅಪ್ಪ ಊಟ ಮಾಡ್ತಾ, ಚೆನ್ನಾಗಿದೆ ಪ್ರಿಪರೇಶನ್ ಅಂದಾಗ ಮಾಲತಿ ಮಾಡಿಡ್ಡು ಅಂದಾಗ ಅಪ್ಪ ಆಶ್ಚರ್ಯದಿಂದ ಹೌದಾssssss, ಆಡ್ಡಿಲ್ಲ ಹುಡುಗಿ, ಅಂದಿದ್ದು ಕೇಳಿಸಿಕೊಂಡಿದ್ದೆ. :-)

ಆಮೇಲೆ ಮದುವೆಯಾಗಿ ತೀರ್ಥಹಳ್ಳಿಗೆ. ಅಲ್ಲಿ ಮೀನು ಬಿಡಿ ನೀರುಳ್ಳಿ ಬೆಳ್ಳುಳ್ಳಿ ಸಮೇತ ತಿನ್ನುತ್ತಿರಲಿಲ್ಲ. ಸಾಧಾರಣವಾಗಿ ಮನೆಯಲ್ಲಿ ಸಾಲಿಗ್ರಾಮಕ್ಕ್ಕೆ ಪೂಜೆ ಮಾಡುತ್ತಿದ್ದ ಪಕ್ಷ ಹೀಗೆ ಸಾತ್ವಿಕ ಆಹಾರ ತಿನುತ್ತಾರೆ ಅಂತ ನನ್ನ ಅನಿಸಿಕೆ. ನನಗೇನು ಕಿರಿಕಿರಿ ಅನ್ನಿಸಲಿಲ್ಲ. ಅದರ ಬದಲು ನೀರುಳ್ಳಿ ಬೆಳ್ಳುಳ್ಳಿ ಬಳಸದೇ ಎಷ್ಟೊಂದು ಅಡಿಗೆ ತಯಾರಿಸಬಹುದು ಎನ್ನುವ ಮನವರಿಕೆ ಯಾಯಿತು.

ನನ್ನ ಅಕ್ಕನಿಗೆ ಅಡಿಗೆ ಮನೆಯ ಕೆಲಸಗಳಲ್ಲಿ ಸಹಕರಿಸಿ ಆ ಮೇಲೆ ನನ್ನ ಓದು (ನನ್ನ ಪದವಿ ಪೂರ್ಣಗೊಂಡಿರಲಿಲ್ಲ, ಹನ್ನೆರಡನೇ ಇಯತ್ತೆ ಆದಕೂಡಲೇ ಮದುವೆ ಆಗಿದ್ದು) , ಓದಿ ಬೇಜಾರಾದಾಗ ನನ್ನ ಅತ್ತೆಯ ಕೊಠಡಿ ಹೊಕ್ಕುತ್ತಿದ್ದೆ. ಅವರು ಹರಳಿಮಠದ ಅವರ ತೋಟದ ವಿಷಯ, ಅವರ ಕುಟುಂಬದ ವಿಷಯಗಳನ್ನೆಲ್ಲ ಮೆಲುಕು ಹಾಕುತ್ತಿದ್ದರು. ಆಗ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ, ಕಿವಿ ಮಂದವಾಗಿ ಕೇಳಿಸುತ್ತಿತ್ತು. ಹೀಗೆ ಒಂದು ಸಲ ಲೋಕಾಭಿರಾಮವಾಗಿ ಮಾತನಾಡುವಾಗ ಅವರು ಈ ತೀರ್ಥಹಳ್ಳಿಯ ಮನೆಯಲ್ಲಿ ಮಿಸ್ ಮಾಡುತ್ತಿದ್ದದ್ದು ಮೀನಿನ ಊಟ ಅಂದಾಗ ನನಗೆ ಆಶ್ಚರ್ಯ. ಮದುವೆಯಾದ ಕೆಲವು ತಿಂಗಳು ಅವರು ಮೀನಿನ ಊಟ ಮಾಡಲಿಕ್ಕೋಸ್ಕರ, ಹೋಗುವಾಗ ನಡೆದುಕೊಂಡು, ಬರುವಾಗ ತೀರ್ಥಹಳ್ಳಿ ಪೇಟೆಗೆ ಬರುವ ಎತ್ತಿನಗಾಡಿಯಲ್ಲಿ ವಾಪಸ್ ಬರುವುದು ಮಾಡುತ್ತಿದ್ದರಂತೆ :-) ಹರಳೀಮಠ ತೀರ್ಥಹಳ್ಳಿಯಿಂದ 12 ಕಿ.ಮೀ ದೂರದಲ್ಲಿದೆ.

ಮತ್ತೆ ನಮ್ಮ ರಾಯರ ಬಗ್ಗೆ ಕೇಳಿ! ಧಾರವಾಡದಲ್ಲಿ ಓದಲು ಹಾಸ್ಟೆಲ್ ನಲ್ಲಿದ್ದಾಗ ಮೀನು ತಿನ್ನುವ ರೂಢಿಯಾಯಿತಂತೆ. ಹಾಸ್ಟೆಲ್ ಮೆಸ್ ನಲ್ಲಲ್ಲ. ಪ್ರೆಂಡ್ಸ್ ಜತೆ ಹೋಟಲ್ ನಲ್ಲಿ. ಅವರ ಮೆಸ್ ಗೆ ಪ್ರತೀ ಭಾನುವಾರ ರಜೆ. ಆಗ ಇವರು ಬೆಳಿಗ್ಗೆ ಬಿನ್ ಬುಲಾಯೆ ಮೆಹಮಾನ್ ತರಹ ಅವರ ಪ್ರೊಫೆಸರ್ ಗಳ ಮನೆಗೆ ಲಗ್ಗೆ ಇಡುತ್ತಿದ್ದರಂತೆ. ಪಾಪ ಅವರು ಬೇರೆ ದಾರಿಗಾಣದೇ ಇವರನ್ನು ಬ್ರೇಕ್ ಫಾಸ್ಟ್, ಲಂಚ್ ಗೆ ಉಳಿಸಿಕೊಳ್ಳುತ್ತಿದ್ದರಂತೆ. ಧಾರವಾಡದಲ್ಲಿ ನಡೆದ alumni meet ನಲ್ಲಿ ಶ್ರೀಕಾಂತ ಅವರನ್ನೆಲ್ಲ ಪರಿಚಯಿಸಿ ಅವರ ಕಾಲಿಗೆರಗಿದ್ದು ನನಗೆ ಖುಶಿಯಾಗಿತ್ತು.  ಅದಕ್ಕೆ ನಾನೆ ಇಲ್ಲಿ ಮುಂದಾಗಿ ನನ್ನ ಬ್ಯಾಚಲರ್ ತಮ್ಮಗಳಂದಿರಿಗೆ ಹಬ್ಬಕ್ಕೆ ಊಟಕ್ಕೆ ಕರೆಯುವುದು. :-)

ಹಾಂ ಎಲ್ಲಿದ್ದೆ?! ಸರಿ ಆ ಮೇಲೆ ಶ್ರೀಕಾಂತ್ ಬ್ಯಾಂಕ್ ಸೇರಿ ಮೊಟ್ಟ ಮೊದಲ ಪೋಸ್ಟಿಂಗ್ ಗೋವಾಕ್ಕೆ. ಅಲ್ಲಂತೂ ತಾಜಾ ಮೀನು ನೋಡಿ, ಗೋವಾದ ಸ್ಪೇಶಲ್ ಮೀನಿನ ಕರಿ ಪ್ರೆಪರೆಶನ್ ಗೆ ಫೀದಾ ಆಗಿ ಅವರು ಸಿಕ್ಕಾಪಟ್ಟೆ ಮೀನ್ ಮೈಂಡಂಡ್ ಆದ್ರೂ. (ಮೀನು ತಿನ್ನುವವರೆಲ್ಲ ಮೀನ್ ಮೈಂಡಡ್, ಶುಗರ್ ಇರುವವರೆಲ್ಲ ಗೋಡ್ ಬೋಲೆ/godfearing  - ಗೋಡ್ ಅಂದರೆ ಕೊಂಕಣಿಯಲ್ಲಿ ಸಿಹಿ - ಅಂತ ನಮ್ಮ ಪ್ರೈವಟ್ ಸರ್ಕಲ್ ನ ಜೋಕ್) ಕೊಪ್ಪದಲ್ಲಿ ಮನೆ ಮಾಡಿದಾಗ ನಾನೂ ನಿಧಾನಕ್ಕೆ ಅವರ ಪ್ರೆಂಡ್ಸ್ ಗೋಸ್ಕರ ಮೀನಿನ ಅಡಿಗೆ ಮಾಡುತ್ತಿದ್ದೆ. ಅಮ್ಮ ಮಾಡುತ್ತಿದ್ದದ್ದು ಅಂದಾಜು ನನಗೆ ಇತ್ತು. ಆಗ ಮೀನು ಉಡುಪಿಯಿಂದ ಕೊಪ್ಪಕ್ಕೆ ತರಿಸುತ್ತಿದ್ದರು ಅಥವಾ ರಾಯರು ಬ್ಯಾಂಕ್ ನ ಮೀಟಿಂಗ್ ಮಂಗಳೂರು-ಉಡುಪಿಯಲ್ಲಿ ಇದ್ದರೆ , ನನ್ನ ಬಳಿ ದೊಡ್ಡ ಐಸ್ ಬಾಕ್ಸ್ ಇತ್ತು ಅದರಲ್ಲಿ ಹಾಕಿ ತರುತ್ತಿದ್ದರು. ಆ ದಿನ ರಾತ್ರಿ ಬೀರ್ ಮತ್ತು ಮೀನಿನ ಪಾರ್ಟಿ. ಅಲ್ಲೆಲ್ಲ ಇಂಡಿಪೆಂಡೆಂಟ್ ಮನೆಗಳಿದ್ದವು, ನಾನೂ ಮಾಡುತ್ತಿದ್ದೆ.

Manohar Mulgaonkar's book: 'Inside Goa',- 'Market Place' Cartoon : Mario Miranda

ಮಾಲವಿಕಳ ಟೈಮ್ ಡೆಲಿವರಿಗೆ ಮುಂಬೈಗೆ ಹೋದಾಗ ಅಮ್ಮ ಒಂದು ಸಲ ಬಂಗುಡೆ ಮೀನು ಕರಿಯುತ್ತಿದ್ದರು ಆ ವಾಸನೆಗೆ ನನಗೆ ತಿನ್ನುವ ಬಯಕೆಯಾಯಿತು. ತಿಂದೆ . ವಾಂತಿ ಗೀಂತಿ ಏನೂ ಆಗಲಿಲ್ಲ. ಸರಿ ಆಮೇಲೆ ನಾನು ಪಕ್ಕಾ ಮೀನ್ ಮೈಂಡಡ್ ಮಾತ್ರವಲ್ಲ ಮಾಲವಿಕಾ ಕೂಡ ಮೀನು ತಿನ್ನುವುದರಲ್ಲಿ ಎಕ್ಶಪರ್ಟ್ ಆದಳು. ಆದರೆ ಬೆಂಗಳೂರಿಗೆ ಬಂದ ಮೇಲೆ(ಇಲ್ಲಿ ಮನೆ ಬಾಡಿಗೆಗೆ ಕೊಡುವಾಗ ಮೀನು ತಿನ್ನದವರಿಗೆ ಮಾತ್ರ ಅಂತೆಲ್ಲ ಹೇಳುತ್ತಾರಾದ್ದರಿಂದ) ನಾನು ಶ್ರೀಕಾಂತ್ ಗೆ ಮೊದಲೇ ಹೇಳಿದ್ದೆ ಇಲ್ಲಿ ಮೀನು ಹೋಟಲ್ ನಲ್ಲಿ ಮಾತ್ರ ಅಥವ ನಮ್ಮ ಸ್ವಂತ ಮನೆಯಾದಲ್ಲಿ ಮಾತ್ರ ಅಂತ.

ಈಗ ನಮ್ಮದೇ ಮನೆ ಅದಲ್ಲದೇ ಅಡುಗೆ ಮನೆಯಲ್ಲಿ ಹೈ ಫಂಡಾ  ಚಿಮ್ನಿ ಬೆರೆ. ಇವತ್ತು ಮಡಿವಾಳ ಮಾರ್ಕೆಟ್ ನಲ್ಲಿ ಫ್ರೆಶ್ ಮೀನು ಸಿಕ್ಕಿತು. ಮನೆಯಲ್ಲೆ ಮಾಡಿದೆ. ಹಾಂ ಈಗ ಮಾಲವಿಕ ಪ್ಯೂರ್ ವೆಜ್, ನಮ್ಮ ನಿಹಾಗೆ ಆವಾಗಾವಾಗ್ ಮೀನು ತಿನ್ನಲೇ ಬೇಕು, ನನಗೆ ಶ್ರೀಕಾಂತ್ ಗೆ ಹೇಗಾದರೂ ನಡೆಯುತ್ತೆ. ಚೆನ್ನಾಗಿತ್ತು. ನನ್ನ ಮೀನು ತಿನ್ನುವ ಪ್ರೆಂಡ್ಸ್, ತಮ್ಮ ತಂಗಿಯಂದಿಗೆಲ್ಲ whatsapp ನಲ್ಲಿ ಚಿತ್ರ ಕಳುಹಿಸಿ ಹೊಟ್ಟೆ ಕಿಚ್ಚಾಗುವಂತೆ ಮಾಡಿದೆ.

ಇತ್ತೀಚಿಗೆ ಆಫಿಸ್ ನಿಂದ ಒಂದು ಬಸ್ ಮಾಡಿ ನಾವೆಲ್ಲ ಕೇರಳಕ್ಕೆ ಹೋಗಿದ್ವಿ. ವಾಪಸ್ ಬೆಂಗಳೂರಿಗೆ ಬರುವ ದಿನ ’ಕೇರಳಕ್ಕೆ ಬಂದು ಮೀನು ಊಟ ಮಾಡದಿದ್ದರೆ ಹೇಗೆ’ ಅಂತ ವೆಜ್ ನಾನ್-ವೆಜ್ ಎರಡೂ ಸರ್ವ್ ಮಾಡುವ ಹೋಟಲ್ ಗೆ ಹೋದ್ವಿ. ಎರಡು ಗುಂಪುಗಳಾದ್ವು. ನಾನು ನಾನ್ ವೆಜ್ ಟೀಮ್ ಜತೆ ಹೋಗುತ್ತಿರಬೇಕಾದ್ರೆ, ನಮ್ಮ ಕಲೀಗ್ ಹೆಂಡತಿ, ’ಮಾಲತಿ ಆ ಕಡೆ ಯಾಕೆ ಹೋಗ್ತಿದ್ದೀರಾ? ಅವರು ಮೀನು ಊಟಕ್ಕೆ ಹೋಗ್ತಿದ್ದಾರೆ’ ಅಂದಾಗ ನಾನು ಸುಮ್ನೆ ಅವರ ಕಡೆ ಮುಗುಳ್ನಕ್ಕು , ಮೀನು ಊಟ ಟೀಮ್ ಜತೆ ನಡೆದೆ. ಅವರು ಮಾಲತಿ ’ನೀವು ನಾನ್ ವೆಜ್ ತಿನ್ನುತ್ತೀರಾ’ ಅಂತ ಸಿಕ್ಕಪಟ್ಟೆ ಅಪ್ ಸೆಟ್ ಆಗಿ ಊಟ ಕೂಡ ಮಾಡದೆ, ತುಂಬ ಸೈಲೆಂಟ್ ಆಗಿ ಕೂತ್ರಪ್ಪ. ಯಾಕೆ ಅಂತ ನನಗೊತ್ತಾಗಲಿಲ್ಲ, ಅಂದ ಹಾಗೆ ಅವರ ಹಸ್ಬೆಂಡ್ ಮೀನುಪ್ರಿಯರು....................!!! :-) :-)

ಸುಮ್ನೆ as usual :-) :-)

ಮೀನಿನ ಅಡುಗೆ ನನ್ನ ಇಂಗ್ಲಿಷ್ ಬ್ಲಾಗನಲ್ಲಿ