July 28, 2023
ಬೆಳ್ಳ ಬೆಳಿಗ್ಗೆ..ಸುಮ್ ಸುಮ್ನೆ
husband ಕೆಲಸದ ನಿಮಿತ್ತ tour ಹೋದಾಗಲೆಲ್ಲ ನನ್ನ ಬೆಳಗಿನ ತಿಂಡಿ ಈ ತರಹದ್ದು ಹೆಚ್ಚು ಕಡಿಮೆ 🙂
ಆರಾಮಾಗಿ ಬಾಲ್ಕನಿಯಲ್ಲಿ ಕೂತು, ಪುಸ್ತಕದ, ನನ್ನ ಗಿಡಗಳ ಜತೆ ನನ್ನ ಓದು , ತಿಂಡಿ.
ಮನೆ ಬಳಿಯಲ್ಲಿ theobroma ಅನ್ನುವ ಬೇಕರಿ ಇದೆ. ಅಲ್ಲಿಂದ ತಂದ sour dough ಬ್ರೆಡ್. ಚೆನ್ನಾಗಿವೆ ಅವರ ಉತ್ಪನ್ನಗಳು. ಸ್ವಲ್ಪ ತುಟ್ಟಿ..ಆದರೂ ಯಾವಾಗಾದರೊಮ್ಮೆ it is ok to spend ಅಂತ ನನ್ನ ಮೊಟೊ...
ಮತ್ತೆ ಮಧ್ಯಾಹ್ನ ಏನಾದರೊಂದು ಸಿಂಪಲ್ ಅಡಿಗೆ...ಬಿಸಿ ಬೆಳೆ ಭಾತ್ ಅಥವಾ ದಾಲ್ ಖಿಚಡಿ. ಆಗ ಮನೆಯೆಲ್ಲ ಕ್ಲೀನ್ ಮಾಡುವ ಕೆಲಸ ಹಮ್ಮಿಕೊಳ್ಳುತ್ತೇನೆ
ಹೇಗಿದೆ ಚಿತ್ರ?
July 16, 2023
ಬಂಗಾರದ ಬಳೆ
ಆವಾಗ ಈ ತರಹದ ಬಳೆ ಡಿಸೈನ್ ತುಂಬಾ ಚಾಲ್ತಿ ಯಲ್ಲಿತ್ತು. trend ಅಂತಾರಲ್ಲವಾ? ಹಾಗೆ 🙂
ನನ್ನ ಸಂಬಳದಿಂದ ಸ್ವಲ್ಪ ಸ್ವಲ್ಪ ಹಣ ಕೂಡಿತ್ತು ಇದನ್ನು ಮಾಡಿಸಿಕೊಂಡಿದ್ದೆ. ಈಗ ನನ್ನ ಕೈಗೆ ಚಿಕ್ಕದಾಗುತ್ತೆ. ಈಗ ಇದರ ಡಿಸೈನ್ ಕೂಡ ಅಷ್ಟು ಇಷ್ಟ ಆಗಲ್ಲ. ಮಕ್ಕಳಿಗೆ ಇದರ ಮೇಲೆ ಇಂಟೆರೇಸ್ಟ್ ಇಲ್ಲ. ಅಮ್ಮ ಇದನ್ನು ಕೊಟ್ಟು ಬೇರೆ ಮಾಡಿಸಿಕೊ ಅಂದ್ರೂ ಅದು ನನಗೆ ಇಷ್ಟ ಇಲ್ಲ.ಯಾಕಂದ್ರೆ ಇದು ನನ್ನದು. ನಾನು ಆಸೆ ಪಟ್ಟು ಕೊಂಡು ಮಾಡಿಸಿದ first & last ಬಂಗಾರದ ಐಟಂ. 🙂🙂
ಇರಲಿ ಹಾಗೆ ಬ್ಯಾ0ಕ್ ಲಾಕರ್ ನಲ್ಲಿ 🙂❤️
ಚಿತ್ರದಲ್ಲಿ ಅಕ್ಕನ ಕೈ with ಬಳೆ
July 14, 2023
July 1, 2023
ಕೊಪ್ಪ - revisited
ಸುಮಾರು 31 ವರ್ಷಗಳ ನಂತರ ನಾವು ಕೊಪ್ಪಕ್ಕೆ ಹೋದೆವು. ಹಳೆ ಮಿತ್ರರನ್ನೆಲ್ಲ ಉಮಾ invite ಮಾಡಿ, ಹಳೆ ನೆನಪುಗಳನ್ನು ಮೆಲುಕು ಹಾಕಿದೆವು. ನಮ್ಮ ಮಾತು ನಗು ಮಕ್ಕಳನ್ನೂ ಖುಷಿ ಪಡಿಸಿದವು.
ಸ್ನೇಹಿತೆ ಉಮಾ ವಿಜಯ.ಕುಮಾರ ದಂಪತಿಗಳು ವಿನು ಹೋಮ್ ಸ್ಟೇ ಹಾಗೂ ಗಿಡಗಳ ನರ್ಸರಿ ನಡೆಸುತ್ತಾರೆ. ಹೋಮ್ ಸ್ಟೇ ಶುದ್ಧ ಶಾಖಾಹಾರಿ ಮತ್ತು no drinks...
ನಾವು ಬಾಡಿಗೆಗೆ ಇದ್ದ ಮಿತ್ರೆ ಪ್ರೇಮಾ ಶೆಟ್ಟಿ ಯವರ ಮನೆ ..ಮಾಲಾವಿಕ ಹುಟ್ಟಿದ ಮೇಲೆ ಬಂದ ಮನೆಗೆಲ್ಲ ಒಂದು round ಭೇಟಿ ನೀಡಿದೆವು.
ಕೆಲವು ಚಿತ್ರಗಳು...ನೆನಪಿಗೋಸ್ಕರ ❤️❤️
Subscribe to:
Comments (Atom)















