August 20, 2023

ಇಡ್ಲಿ ಎಲ್ಲಿ ಇಡ್ಲಿ

ಇವತ್ತು ಬೆಳಗ್ಗೆ ಏಳುವಾಗ ಆಗಲೇ 6.15. ಹಾಗೆ ನೋಡಿದರೆ ಮಲಗುವಾಗ 9.55. ಏನೋ ರೀಲ್ಸ್ ನೋಡ್ತಿದ್ದ ಹಾಗೆ , ಮೊಬೈಲ್ ನಲ್ಲಿ ಗಂಟೆ ಕೂಡ ನೋಡಿದ್ದೆ. ಬೆಳಿಗ್ಗೆ ಬೇಗ ಎದ್ದು ಮಡಿವಾಳ ಕೆರೆ ಕಡೆ ವಾಕ್ ಹೋಗುವ ಪ್ಲ್ಯಾನ್ ಇತ್ತು. ಏಳುವಾಗ ಲೇಟ್, ಅಲ್ಲದೆ ಬೆಳಗಿನ ನಾಸ್ತಾ ಗೆ ಇಡ್ಲಿ ಗೆ ರೆಡಿ ಮಾಡಿದ್ದೆ.   ಎದ್ದು, ಹಲ್ಲುಜ್ಜಿ ಮೊದಲು ಇಡ್ಲಿ ಬೇಯಿಸಲು ಇಟ್ಟೆ. ಚಟ್ನಿಗೆ ನಿನ್ನೆಯೇ ತುರಿದ ಕಾಯಿ ಫ್ರಿಜ್ ನಲ್ಲಿತ್ತು. ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿಟ್ಟು, ನಾನು ಅಕ್ಕ ವಾಕ್ ಹೊರಟರೆ, ರಾಯರು ಬನಶಂಕರಿ ಮಾರುಕಟ್ಟೆಗೆ ತಾಜಾ ತರಕಾರಿ ತರಲು ಹೊರಟಾಗಿತ್ತು. 
ಅಮ್ಮ ಗ್ಯಾಸ್ ಒಲೆ ಆಫ್ ಮಾಡಿದ್ದೀಯ ಅಂತ ಅಕ್ಕ ಕೇಳಿದಳು. ಇತ್ತೀಚಿಗೆ ಹಲವಾರು ಬಾರಿ ಗ್ಯಾಸ್ ಆನ್ ಇಟ್ಟಿದ್ದಿದ್ದೆ. ದೋಸೆ ಮಾಡಿ ಕಾವಲಿ ಹಾಗೆ ಗ್ಯಾಸ್ ಒಲೆ ಮೇಲೆ, ಒಗ್ಗರಣೆ ಹಾಕಿದ ಮೇಲೆ ಕೂಡ ಗ್ಯಾಸ್ ಆನ್ ಇಟ್ಟಿದ್ದು..ಹೀಗೆ. ಈಗ ಹೊರಗೆಲ್ಲಾದರೂ ಹೋಗುವಾಗ ಕಡ್ಡಾಯವಾಗಿ ಗ್ಯಾಸ್ ಆಫ್ ಇದೆ ಅಂತ ಖಾತರಿ ಮಾಡಿ ನೆ ಮನೆಗೆ ಬೀಗ ಹಾಕೋದು. ವಯಸ್ಸಾಗ್ತಾ ಇದೆ ಅನ್ನೋದಕ್ಕೆ ಒಂದು example. 😲
 ಹಾಗೆ ಅಕ್ಕ' ಅಲ್ಲ ಇಡ್ಲಿಯ ಒಳ್ಳೆ ಪರಿಮಳ ಬರ್ತಾ ಇದೆ, ಅದಕ್ಕೆ ಕೇಳಿದ್ದು ಅಂದ್ಲು. ನಾನು hmmm the aroma of idli batter steaming in containers smeared with coconut oil ಅಂತ ಹೇಳ್ತಾ ಬೀಗ ಹಾಕಿ, ಲಿಫ್ಟ್ ಗೆ ಕಾಯ್ತಾ ಇರುವಾಗ, ಅಮ್ಮ i only like the idli you prepare, else where ican smell the udid dal in the idlis which i do not like ಅಂದ್ಲು. ಸ್ವಲ್ಪ ಸೂಕ್ಷ್ಮ ನಾಲಿಗೆ ಮತ್ತು ಮೂಗು ನಮ್ಮ ಅಕ್ಕನಿಗೆ 😁 ಇದನ್ನು ಕೇಳಿ ನನಗಂತೂ ಖುಷಿ.

   ಹಿಂದಿನ ವರ್ಷ ಅಮ್ಮನ ಮನೆಗೆ ಹೋಗಿದ್ದೆ. ಮಾಲವಿಕಾ ಮತ್ತವಳ ತಂದೆ ಇಲ್ಲಿ ಇದ್ದರು. ಮಾಲವಿಕಾ ದೋಸೆ ಮತ್ತಿತರ ಬೆಳಗಿನ ತಿಂಡಿಯನ್ನು ಮಾಡುತ್ತಾಳೆ, ರುಚಿಯಾಗೂ ಇರುತ್ತೆ..ಆದರೆ ಇದುವರೆಗೆ wet grinder ಉಪಯೋಗಿಸಿ ಇಡ್ಲಿ ಒಂದನ್ನು ಮಾಡಿರಲಿಲ್ಲ. ಫೋನ್ ಮಾಡಿ ನನಗೆ ಇಡ್ಲಿ ಹಿಟ್ಟಿನ ಅಳತೆ ಕೇಳಿದಳು. ಮರು ದಿನ ಫೋನ್ ಮಾಡಿ 'ಅಮ್ಮ ಇಡ್ಲಿ ಚೆನ್ನಾಗಿ ಬರಲಿಲ್ಲ, ಕಲ್ಲಿನ ತರಹ ಆಗಿದೆ ಹಾಗೂ ಉದ್ದಿನ ವಾಸನೆ ಹೊಡೆಯುತ್ತೆ ..ಅಂತ ಹೇಳಿದಳು. ಇಡ್ಲಿ ಹಿಟ್ಟಿ ಗೆ ಬಹುಷ್ಯ ನೀರು ಕಡಿಮೆಯಾಗಿರಬೇಕು. ಮತ್ತು ಉದ್ದು ಸರಿ ತೊಳೆದಿ ರಲಿಕ್ಕಿಲ್ಲ ಅವಳು 😀. ವಿವರಿಸಿ ಹೇಳಿದೆ. 'ಓ ಹಾಗೋ' ಅಂದ್ಲು. ಉದ್ದಿನ ವಾಸನೆ ಮಿಕ್ಸಿ ಯಲ್ಲಿ ಇಡ್ಲಿ ರುಬ್ಬಿದ್ರೆ ಮಾತ್ರ ಬರೋದು. ಕೈ ನಲ್ಲಿ ಅಥವಾ ವೆಟ್ grinder ನಲ್ಲಿ ಸರಿಗಾಗಿ 45 ನಿಮಿಶ ಉದ್ದು ರುಬ್ಬಬೇಕು. ಮತ್ತು ನಾನು  ಬೆಳ್ತಿಗೆ ಕೆಂಪು ಅಕ್ಕಿಯ ರವೆ ಮಾಡಿತ್ತು ಕೊ0ಡಿರುತ್ತೇನೆ. ಅದನ್ನು 2 ಗಂಟೆ ನೆನೆಹಾಕಿ, ರುಬ್ಬಿದ ಉಡ್್ಡ್ ಹಿಇನ್ಗೆಆ , ನೀರೆಲ್ಲ ಹಿಂಡಿ ಹಾಕಿ, ರಾತ್ರಿನೇ ಗೋಕರ್ಣದ ಹರಳುಪ್ಪ್ಪು ಬೆರೆಸುತ್ತೇನೆ
ಬೆಳಿಗ್ಗೆ ಅದನ್ನ ಇಡ್ಲಿ ಬೇಯಿಸಿವ ಪಾತ್ರೆಯಲ್ಲಿ , ಇಡ್ಲಿ stand ನಲ್ಲಿ ಸರಿಯಾಗಿ 12 ನಿಮಿಷ ಬೇಯಿಸುತ್ತೇನೆ. by the way even i like the idlis i make next to amma's and my friend guru's mother 😀 ಅಂತ ಹೇಳುತ್ತಾ ಇಡ್ಲಿ ಪುರಾಣ ಇಲ್ಲಿಗೆ ಸಮಾಪ್ತ...ಇಡ್ಲಿ ಹಿಟ್ಟು ಇದ್ರೆ ಮೂರು ದಿನ breakfast ಬಗ್ಗೆ ನಿಶ್ಚಿಂತೆ. ಅಷ್ಟು ದೊಡ್ಡದಿದೆ ನನ್ನ wet grinder. ಕಡಿಮೆ ಬೆಲೆಗೆ ದೊಡ್ಡದು ಸಿಕ್ತು ಮೆಟ್ರೋ cash & carry ನಲ್ಲಿ
ಇವತ್ತು ಇಡ್ಲಿ ಜತೆ ಸಾಂಬಾರ್ ಮತ್ತು ಗಾಂಧಾರಿ ಮೆಣಸಿನ ಕಾಯಿ ಹಾಕಿ ಚಟ್ನಿ ಮತ್ತು ಕರಿಬೇವಿನ ಚಟ್ನಿ ಪುಡಿ ಮತ್ತು ತುಪ್ಪ ❤️🙏. ಶ್ರೀಕಾಂತ ಅಂತೂ wow tasty idlis ಅಂತ ಅದೆಷ್ಟು ಬಾರಿ ಆ0ದ್ರೋ..😀😀👍

August 15, 2023

2023 ಸ್ವಾತಂತ್ರ್ಯೋತ್ಸವ ❤️

Happy Independence Day ಎಲ್ಲರಿಗೂ ಅಕ್ಕನ ಬಿಸ್ಕೂಟ್ ಫ್ಯಾಕ್ಟರಿ ತ್ರಿವರ್ಣದ ಕಪ್ ಕೇಕ್ ಗಳು. ಇವತ್ತು ಬೆಳ್ಳಿ ಬೆಳಿಗ್ಗೆ factory ಶುರು.
ಬೆಳಿಗ್ಗೆ 4 ಗಂಟೆಯಿಂದಲೇ ಕೇಕ್

August 11, 2023

colourful ME ❤️❤️

when i am happy, i am pink
 when angry, red 
 when it rains i am like silver 
 when i am sad i see blue 
 with nature, i am green 
 at night the sky and stars, i feel white sometimes
 i am depressed and it is grey 
 travelling by flight, i feel purple 
 during summers i am orange 
 my food is colourful too..like avocado on toast 😁😁👌

August 5, 2023

ಬ್ಲಾಗ್ ಲೋಕದಲ್ಲಿ 14 ನೆ ವರ್ಷ 🙂🙂❤️

❤️ ಅದಕ್ಕೊಂದು ಸಿಹಿ ಅಡುಗೆ .
ಹಲಸಿನ ಬೀಜದ ಪಾಯಸ ಸ್ವಲ್ಪ different ಆದ ಪಾಯಸ 
ಬೇಕಾಗುವ ಸಾಮಗ್ರಿ 4 ಹಲಸಿನ ಬೀಜ ನಾಲ್ಕು ಗೇರು ಬೀಜ ನಾಲ್ಕು ಖರ್ಜೂರ ಏಲಕ್ಕಿ, ತುಪ್ಪ, ಹಾಲು
ಮೊದಲಿಗೆ ತಾಜಾ ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರಿನ ಜೊತೆ ಬೇಯಿಸಿ. ತಣಿದ ಮೇಲೆ ಹೊರಗಿನ ಸಿಪ್ಪೆ, ಒಳಗಿನ ಸಿಪ್ಪೆ ತೆಗೆದು ಬಿಡಿ. ಗೇರು ಬೀಜ, ಖರ್ಜೂರ ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ. ಖರ್ಜೂರ ಮೆತ್ತಗಾದ ಮೇಲೆ, ಹ.ಬೀಜದ ಜತೆ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ, ಪೇಸ್ಟ್ ತರ ರುಬ್ಬಿ. ಸ್ವಲ್ಪ ತುಪ್ಪದಲ್ಲಿ ಮೇಲಿನ ಪೇಸ್ಟ್ ಹುರಿಯಿರಿ. ತಣ್ಣಗಾದ ಮೇಲೆ ಕಾಯಿಸಿ ತಣಿಸಿದ ಹಾಲು, ಏಲಕ್ಕಿ ಪುಡಿ ಬೆರೆಸಿ. *ತುಂಬಾ ಸಿಹಿ ಬೇಕಿದ್ದಲ್ಲಿ ಒಂದೆರಡು ಖರ್ಜೂರ ಹೆಚ್ಚು ಹಾಕಿ,, ಅಥವಾ ಸಕ್ಕರೆ, ಅಥವಾ ಬೆಲ್ಲ ಬೆರೆಸಿ *ಹಾಲಿನ ಬದಲಿಗೆ ಕಾಯಿ ಹಾಲು ಬೆರೆಸಬಹುದು  *ಕೇಸರಿ ಬಳಸಬಹುದು..
* ಬಾದಾಮಿ ಬೆರೆಸಿ ಕೇಸರ್ ಬಾದಾಮಿ ಪಾಯಸ ಅಂತ ಹೆಸರಿಡಬಹುದು..
ಈ ಸಿಹಿ ಅಡುಗೆಗೆ ಪ್ರೇರಣೆ ಸ್ನೇಹಿತೆ ಉಮಾ ವಿಜಯಕುಮಾರ್. ಕೊಪ್ಪದಲ್ಲಿ ವಿಜಯ ನರ್ಸರಿ ಮತ್ತು ವಿನು ಹೋಮ್ ಸ್ಟೇ (no booze, no non veg) ಯ proprietress 

 *options unlimited 
 ಹಲಸಿನ ಬೀಜ ಬಳಸಿ ಪರಾಠಾ 👇👇 https://malathisanchiyinda.blogspot.com/2018/05/blog-post.html?m=1

August 3, 2023

ನಮ್ಮ ತೋಟದ ಕಣಿಲೆ

ನನ್ನ ಜೀವಮಾನದಲ್ಲಿ ಮೊದಲ ಬಾರಿ ಕಣಿಲೆ ಕಟ್ ಮಾಡಿದ್ದು. ನನಗೆ ಬಂಗಾರದ ಪಾರಿತೋಷಕ ಬೇಕೆಂದು ಹೇಳಿದ್ದೇನೆ
ನಮ್ಮ ತೋಟದಲ್ಲಿ ಬೆಳೆದ ಕಣಿಲೆ. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುವ ಮಂಜಣ್ಣ ಚಿತ್ರದುರ್ಗದ ಕಡೆಯವರು. ಅವರಿಗೆ ಕಣಿಲೆ ಎಲ್ಲ ಗೊತ್ತಿಲ್ಲ. ಹಿಂದಿನ ವರ್ಷ ಹೆಂಗೆoಗೊ ಕೊಯ್ದು ಕೊಟ್ಟಿದ್ದ. 🙂. ಶ್ರೀಕಾಂತ್ ಕಣಿಲೆ ಹೇಗೆ ಕೊಯ್ಯುವುದು ಅಂತ ಹೇಳಿಕೊಟ್ಟ ಮೇಲೆ ಈ ವರ್ಷ ಒಳ್ಳೆಯ ಕೆಲಸ ಮಾಡಿದ್ದಾನೆ .
ನಮ್ಮ ಮನೆಯಲ್ಲಿ ಕಣಿಲೆ ಕಟ್ ಮಾಡುವುದು ಶ್ರೀಕಾಂತ್ ಕೆಲಸ. ಈ ಸಲ ಅವರು, ಬೆಂಗಳೂರಿಗೆ ಬರುವ , ಆಫಿಸಿನ ಕೆಲಸದ ಮೇಲೆ ಅಲ್ಲಿ ಹೋಗಿದ್ದ ಗಾಡಿಯಲ್ಲಿ ಬೆಂಗಳೂರಿಗೆ ಕಣಿಲೆ ಮತ್ತು ಹಲಸಿನ ಹಣ್ಣು ಹಾಕಿ ಕಳುಹಿಸಿದ್ದಾರೆ. ಅವರು ತೀರ್ಥಹಳ್ಳಿಯಿಂದ ಬರಲು ವಿಳಂಬವಾಗುವುದೆಂದು. ನಾನು ನನ್ನ ಮದುವೆಯಾಗಿ 36 ವರ್ಷದಲ್ಲಿ ಮೊದಲ ಬಾರಿ ಇದನ್ನು prep ಮಾಡಿದ್ದೇನೆ. ನಮಗೋಸ್ಕರ ಸ್ವಲ್ಪ ಇಟ್ಟುಕೊಂಡು ಉಳಿದದ್ದನ್ನು ಆಪ್ಟೆಷ್ಟರಿಗೆ ಕಳುಹಿಸಲು ರೆಡಿಯಾಗಿ ಕೂತಿವೆ ಕಾಣಿಲೆಗಳು. ಕೈ ಬೆರಳಿಗೆ ಸಾಕಷ್ಟು ಗಾಯ ಆಗಿದೆ ಅನ್ನವುದು ಬಿಟ್ಟರೆ i enjoyed this work.. surprisingly ❤️❤️👍 ಮೂರು ದಿನ ನೀರಲ್ಲಿ ಹಾಕಿಟ್ಟು... (ದಿನ ನೀರು change ಮಾಡಿ fresh ನೀರಲ್ಲಿ ಹಾಕಬೇಕು) ಮನೆಯಲ್ಲಿ ತರಹಾವರಿ ಕಣಿಲೆ ಅಡಿಗೆ 🙂
https://malathisanchiyinda.blogspot.com/2013/09/blog-post_6.html?m=1 i am maha proud of myself

August 1, 2023

ಕೇಸರಿ/saffron

ಕೇಸರಿ
ಹಿಂದಿನ ಆಕ್ಟೊಬರ್ ನಲ್ಲಿ 15 ದಿನ ಹಿಮಾಚಲ ಪ್ರವಾಸ ಕೈಗೊ0ಡಿದ್ದೆವು. ಹೋಗುವ ಮುಂಚೆ ಮಾಲಾವಿಕ 'ಅಮ್ಮ ಕೇಸರಿ ಸಿಕ್ಕಿದ್ರೆ ತೆಗೊಂಡು ಬಾ ಅಂತ ಹೇಳಿದ್ದಳು. ಒಂದು ಹದಿನೈದು ವರ್ಷದ ಹಿಂದೆ ಗ್ಯಾಂಗ್ಟಕ್ ಗೆ ಹೋದಾಗ ರಸ್ತೆ ಬದಿಯಲ್ಲಿ ಕೂತು ಕೇಸರ್ ಮಾರುತ್ತಿರುವವರೊಬ್ಬರಿಂದ ತೆಗೊಂಡು ಬಂದಿದ್ದು ಅವಳಿಗೆ ಇಷ್ಟ ವಾಗಿತ್ತು. authentic ಕೇಸರಿಯ ವಾಸನೆ ಅವಳಿಗೆ ಇಷ್ಟವಾಗುವುದಿಲ್ಲ. ನಾ ಹ್ಞೂ ಅಂದದಷ್ಟೇ, ಅದನ್ನು ಹುಡುಕಲು ಹೋಗಿರಲಿಲ್ಲ. mcleod gunj ನ ದಲಾಯಿ ಲಾಮ ಅವರ ವಾಸಸ್ಥಳಕ್ಕೆ ಹೋಗುವ ದಾರಿಯಲ್ಲಿ, ನಮ್ಮೊಡನೆ ಇದ್ದವರು ಪರ್ಸಿಮ್ಮೊನ್ ಹಣ್ಣುಗಳನ್ನು ಖರೀದಿಸುವಾಗ ನನ್ನ ಕಣ್ಣು ಅಲ್ಲೇ ಪಕ್ಕದಲ್ಲಿ ಪರ್ಸಿಮ್ಮೊನ್ ಮತ್ತು ಇತರೆ ಹಣ್ಣುಗಳನ್ನು ಮಾರಲು ಇಟ್ಟಿರುವ ಪುಟ್ಟ ಹುಡುಗಿಯನ್ನು ನೋಡಿತು. ಅವಳ ಬಳಿಗೆ ಸಾರಿ ಮುಗುಳ್ನಕ್ಕೆ. ಚೆಂದದ ಕಣ್ಣಿನ ಹುಡುಗಿ. ಆಂಟಿಜಿ ಕೇಸರಿ ತೆಗೋಳ್ತೀರಾ ಅಂತ ಕೇಳಿದಳು. ಹಣ್ಣು ಮಾರಲು ಇಡುವ ಸಣ್ಣ ಜಾಗದಲ್ಲಿ ನನಗೆ ಕೇಸರಿ ಕಾಣಲಿಲ್ಲ. ಆದರೂ ಹೌದೆಂದೆ. ಅವಳು ಹಣ್ಣುಗಳನ್ನು ಇಟ್ಟಿದ್ದ ಹಲಗೆ ಅಡಿಯಿಂದ ಸಣ್ಣದೊಂದು ಕಟ್ಟಿಗೆಯ ಟ್ರೆ ಹೊರ ತಂದು ನನ್ನ ಮುಂದಿಟ್ಟಳು. 20 ರೂ ಗೆ ಒಂದು 20ಗ್ರಾಮ್ ನ ಪುಟ್ಟ ಪ್ಲಾಸ್ಟಿಕ್ ಡಬ್ಬಿ. ಎರಡು ಡಬ್ಬಿ ತೆಗೆದುಕೊಂಡು, ಗೂಗಲ್ ಪೆ ಮಾಡಿದೆ. ನನಗಂತೂ ತುಂಬಾ ಖುಷಿಯಾಯ್ತು. ನಿಜವಾದ ಕೇಸರಿ ಅಲ್ಲದಿದ್ದರೂ ಸ್ವೀಟ್ ಗೆಲ್ಲ ಚೆಂದದ ಬಣ್ಣ ಹಾಗೂ ಪರಿಮಳ ಕೊಡುತ್ತದೆ. ಈ ವರ್ಷ ಹಲವಾರು ಮಿತ್ರರು ಕುಟುಂಬಸ್ಥರು ಹೊರ ದೇಶಕ್ಕೆ ಹೋದವರು ಅಂದ್ರೆ ದುಬಾಯಿ, ನೇಪಾಲ್, ಅಮೆರಿಕಾ ಹೋದವರೆಲ್ಲ ಅತ್ಯುತ್ತಮ ಗುಣಮಟ್ಟದ, ಬೆಲೆ ಬಾಳುವ ಕೇಸರಿ ಡಬ್ಬಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ, ಆದರೆ ನಮಗಿದೇ ನಾನು ತಂದ ಕೇಸರಿಯೇ ಇಷ್ಟ. ಹಾಗಾಗಿ ಇತ್ತೀಚಿನ ನನ್ನ ಸಿಹಿ ತಿಂಡಿಗಳ ಮೇಲೆ ಕೇಸರಿ ದಳಗಳು ರಾರಾಜಿಸುತ್ತಿದೆ 🙂🙂❤️ ಕೇಸರಿ ಅಂದ್ರೆ ಹೂವಿನ ಪರಾಗ. ಕ್ರೋಕಸ್ ಎನ್ನುವ ಹೂವಿನಿಂದ ಪಡೆದ ಪರಾಗವೇ ನಾವು ಬಳಸುವ saffron ಅಥವಾ ಕೇಸರ್, ಕೇಸರಿ 👍👍. ಇದು ಕಾಶ್ಮೀರದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.