(ಈ ಪೋಸ್ಟ್ ನನಗೆ drafts ನಲ್ಲಿ ಸಿಕ್ಕಿತು. 2017 ನಲ್ಲಿ ಬರೆದಿದ್ಫು. ನನ್ನ ಪೋನ್ ಹಾಳಾಗಿ ಚಿತ್ರಗಳು ಇಲ್ಲ. ಗದಗ ಕ್ಕೆ ಹಿದಾಗ ನಮ್ಮ ಜತೆ ಬಂದಿದ್ದವರ ಬಳಿ photos ಬಗ್ಗೆ ಕೇಳಿದೆ. ಹಲವಾರು ವರ್ಷಗಳು ಕಳೆದಿವೆ.. ಅವರಲ್ಲಿ ಇಲ್ಲ. ಇನ್ನು ಶ್ರೀಕಾಂತ್ ದು ಹಳೆ disc ಗಳಲ್ಲಿ ಹುಡುಕ ಬೇಕಷ್ಠೆ.
ಒಂದು ಚಿತ್ರ ಬಿಟ್ರೆ ಉಳಿದವು net ನಿಂದ ತೆಗೆದವು. ಒಂದು ಚೆಂದದ ಚಿತ್ರ ಮಿಸ್ಸಿಂಗ್..ಅಂಬೇಡಕರ ಪುತ್ಥಳಿ ಮೇಲಿನಿಂದ ಒಂದು ಕಾಮನಬಿಲ್ಲು ಮೂಡಿದ್ದು. ಇನ್ನೊಂದು ದೇವರ ವಿಶ್ವರೂಪದರ್ಶನ)
ಗದಗ ದಲ್ಲಿ ಆಫಿಸ್ ಕೆಲಸ ಇತ್ತು. ಗಾಡಿ ಮಾಡಿದ್ದೀವಿ ಬಾ, ಅಲ್ಲಿಯ ದೇವಸ್ಥಾನಗಳು, ಹಾಗು ಹಳೆ ಪರಿಚಯದ ರೈತರ ಮನೆಗೆ ಹೋಗುವಾ , ಬರ್ತಿಯಾ ಅಂತ ಕೇಳಿದರು. ನಾನು ಹೊರಟೆ.
ನಾವು ಬೆಳಿಗ್ಗೆ ೪ ಗೆ ಬೆಂಗಳೂರು ಬಿಡಬೇಕಾಗಿತ್ತು.
ಗದುಗಿನ ವೀರ ನಾರಾಯಣಸ್ವಾಮಿ ದೇವಾಲಯ. ಹೊಯ್ಸಳ ವಿಷ್ಣುವರ್ಧನ ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲೊಂದು. ಚಾಲುಕ್ಯ ಶೈಲಿಯಲ್ಲಿ ಗುಡಿಯನ್ನು ನಿರ್ಮಿಸಲಾಗಿದೆ. ಕೃತ ಮುನಿಯ ಗದುಗಿಗೆ ಹತ್ತಿರವಿರುವ ಕಪ್ಪತ್ತಗುಡ್ಡದಲ್ಲಿ ತಪಸ್ಸಿಗೆ ಭಂಗ ಮಾಡುವ ರಾಕ್ಷಸರಿಂದ ರಕ್ಷಿಸಲೋಸುಗ ಬದರಿಯಿಂದ ನಾರಾಯಣನು ಇಲ್ಲಿಗೆ ಬಂದನೆಂದು ಕೃತಪುರಾಣ ಉಲ್ಲೇಖಿಸುತ್ತದೆ. ಗದಗಿಗೆ ಮೊದಲು ಕೃತಪುರ ವೆಂಬ ಹೆಸರಿತ್ತು. ಇಲ್ಲೇಈ ದೇವಸ್ಥಾನದ ಆವರದಲ್ಲೇ ಕುಮಾರವ್ಯಾಸರು ಮಹಾಭಾರತ (ಗದುಗಿನ ಭಾರತ/ಕನ್ನಡಭಾರತವನ್ನು ) ಕುಳಿತು ರಚಿಸಿದರೆಂದು ಹೇಳಲಾಗಿದೆ. book from my collection
ನಮಗೆ ವೀರನಾರಾಯಣ ಸ್ವಾಮೀ ವಿಶ್ವರೂಪ ದರ್ಶನ ಸಿಕ್ಕಿತು. ಅಂದರೆ ಯಾವುದೇ ಅಲಂಕಾರ ಮಾಡಿರದ ಮೂರ್ತಿ. ಮೂರ್ತಿಯ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ, ಮತ್ತೊಂದು ಅಭಯ ಹಸ್ತ ಮತ್ತು ಎಡಗೈಯಲ್ಲಿ ಬೆಂಡು ಇವೆ. ಈ ದೇವಸ್ಥಾನಕ್ಕೆ ಎಲ್ಲ ಜಾತಿ ಮತ ಭಕ್ತರು ಭೇಟಿ ನೀಡುತ್ತಾರೆ ಅಲ್ಲದೆ ಆಡಳಿತ ವರ್ಗದಲ್ಲಿ ಮುಸ್ಲಿಂ ಬಾಂಧವರು ಇದ್ದಾರೆ.
ಈ ಫೋಟೋ ತೆಗೆದಿದ್ದು ವಿಜಯ ಗುಡಿ!ಗದಗ ದವರೇ ಆದ ಇವರು ವಾರ್ಯಾ೦ತದಲ್ಲಿ ದೇವಸ್ಥಾದಲ್ಲಿ ಸೇವೆ ಸಲ್ಲಿಸುತ್ತಾರೆ. during the week he works for a company in BengaLuru. interesting ಅಲ್ವಾ ?? Srikanth's nephew is a lecturer during the week and at the weekends we find him partnering in catering business or helping his father in carrying out his priestly duties. My father's friend after his retirement from bank is a full time priest in one of the temples in Kerala. I find such things very impressive and interesting!!
ಗದುಗಿಗೆ ಹೋಗಿ ಎರಡು ವಾರಗಳು ಕಳೆದಿದೆ. ಕಂಪ್ಯೂಟರ್ ಇವತ್ತು ಕೈಗೆ ಸಿಕ್ತು, ಹಾಗಾಗಿ ಬೇಗ ಬೇಗ ಇಷ್ಟನ್ನು ಕುಟ್ಟಿ ಹಾಕಿದೆ. ಬಹುಷ್ಯ: ಯಾರೇ ದೇವರನ್ನು ಈ ರೂಪದಲ್ಲಿ ನೋಡಿರಲಾರರು ಅಂತ ಅಷ್ಟೇ,
ಪಂಡಿತ್ ಪುಟ್ಟರಾಜ್ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮ ಮಠಕ್ಕೂ ಭೇಟಿನೀಡಿದೆವು. . ಅಲ್ಲೊಂದು ಮದುವೆಯ ಗದ್ದಲ, ಓಲಗ ಪಕ್ಕವಾದ್ಯಗಳ ಸದ್ದಿನ ಮದ್ಯ ಒಂದು ಸುಶ್ರಾವ್ಯ ಕಂಠ ಕೇಳಿಸಿ ಅದರ ಜಾಡು ಹಿಡಿದು ನಡೆದೆವು ನಾನು ಮತ್ತು ಸುಜಯ್ . ಅಲ್ಲೊಂದು ಪುಟ್ಟ ಮಗು ತಾನು ಕಲಿತ ರಾಗಗಳನ್ನು ಸ್ವಾಮೀಜಿಯವರಿಗೆ ಒಪ್ಪಿಸುತ್ತಿದ್ದ. ವಯಸ್ಸು 7-8 ಇರಬಬಹುದು. ಅಲ್ಲಿ ಆಯ್ಕೆಯಾದರೆ ಮುಂದಿನ ಶಿಕ್ಷಣ /ಸಂಗೀತ ಶಿಕ್ಷಣ ಯಾವುದೇ ವೆಚ್ಚವಿಲ್ಲದೆ ನಡೆಯುತ್ತದೆ. ತನ್ನ ಪಾಠ ಒಪ್ಪಿಸಿ ತನ್ನ ತಾಯಿಯ ಜತೆಗೆ ಬಂದ ಈ ಪುಟ್ಟ ಹುಡುಗ ತನ್ನ ತಾಯಿಯ ಕಡೆ ನೋಡಿ ನಕ್ಕ ನಗು priceless .
ಸಾಧಾರಣ ೧೦೦೦ ಸಾವಿರ ಮಕ್ಕಳಿಗೆ ಈ ಮಠ ಊಟ ವಸತಿ ಸಂಗೀತ, ಶಿಕ್ಷಣ ವನ್ನು ಯಾವುದೇ ಜಾತಿ ಭೇದವಿಲ್ಲದೆ ಉಚಿತವಾಗಿ ನೀಡುತ್ತಿದೆ, ಭಕ್ತಾದಿ ಗಳು ನೀಡಿದ ದಾನದಿಂದಲೇ ಅವರು ಹತ್ತಾರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾರೆ. ಬೆಳಿಗ್ಗೆ ಬೇಗ ಹೋಗಿ ಅಲ್ಲಿ ಸಂಗೀತದ ತಾಲೀಮು ನಡೆಸುವುದನ್ನು ಕೇಳಬೇಕೆಂದು ಕೊಂಡಿದ್ದೆವು . ಆದರೆ ವೀರನಾರಾಯಣ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಹೆಚ್ಚು ಸಮಯ ಕಳೆದುದರಿಂದ, ಮಠ ತಲಪುವಾಗ ಆಗಲೇ ಹೊತ್ತು ನೆತ್ತಿಗೇರಿತ್ತು.
ಕಳ್ಳತನದಿಂದ ತೆಗೆದ ಚಿತ್ರ. ಅಲ್ಲಿ ಮಂಚದ ಮೇಲೆ ಈಗಿನ ಉಸ್ತುವಾರರು ಕುಳಿತಿದ್ದಾರೆ , ಕೆಳಗಡೆ ಈ ಹುಡುಗ, ಪಕ್ಕದಲ್ಲಿ ತಾಯಿ, ಎದುರಿಗೆ ಆ ಸಂಸ್ಥೆಯ ಒಬ್ಬ ಬಾಲಕ .
ಹಾರ್ಮೋನಿಯಂ ನುಡಿಸುತ್ತಿದ್ದಾನೆ
ಇನ್ನೊಂದು ಚಿತ್ರ: ಬಸವ ಜಯಂತಿಯಂದು, ಬಸವೇಶ್ವರರ ಪುತ್ಥಳಿಯ ಹಿಂಬದಿ ಕಂಡ ಕಾಮನಬಿಲ್ಲು.
ಕುಮಾರವ್ಯಾಸ ಕಂಬ : ಕುಮಾರವ್ಯಾಸ ಇಲ್ಲಿ ಕುಳಿತು ವೀರನಾರಾಯಣನಿಂದ ಸ್ಪೂರ್ತಿ ಪಡೆದು ಕನ್ನಡಭಾರತವನ್ನು ರಚಿಸಿದ್ನೆಂದು ಹೇಳಲಾಗಿದೆ
ತಾಲ್ಲೂಕಿನ ಹೆಚ್ಚಿನ ಭಾಗ ಎರೆಮಣ್ಣಿನ ಪ್ರದೇಶ. ಸರಾಸರಿ ೬೩೫ಮಿಮಿ ವಾರ್ಷಿಕ ಮಳೆ. ಹೆಚ್ಚಿನ ವ್ಯವಸಾಯ ಮಳೆಯಾಧಾರಿತ. . ಹತ್ತಿ ಜೋಳ ಗೋದಿ ಮುಖ್ಯ ಬೆಳೆಗಳು. ಮೆಣಸಿನಕಾಯಿ, ಶೇಂಗಾ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ.
ತ್ರಿಕೂಟೇಶ್ವರ : ಸರಸ್ವತಿ ಗುಡಿ ಚಿಕ್ಕದು. ಸರಸ್ವತಿ ವಿಗ್ರಹ ಮುರಿದಿದ್ದರು ಅದರಲ್ಲಿನ ಸಹಜ ಸುಂದರ ಪ್ರಮಾಣ, ಭಾವಲಾಲಿತ್ಯ, ವಸ್ತ್ರ ಆಭರಣಗಳಲ್ಲಿನ ನವಿರು ಕೆಲಸ ಮನಮೋಹಕವಾಗಿವೆ. ಚಾಲುಕ್ಯ ಸಂಪ್ರದಾಯದಲ್ಲಿ ಅತಿ ಸೂಕ್ಷ್ಮವಾಗಿ ಕೆತ್ತಿರುವ ಕಂಬಗಳು ಬಹು ಸುಂದರ ರಚನೆಗಳು.
2017