(ಮಕ್ಕಳಿಗಾಗಿ ಒಂದು ಕತೆಯನ್ನು ಅನುವಾದಿಸಿದ ಮಾಲತಿ ಆಂಟಿ)
ಕತ್ತಲಾವರಿಸಿತ್ತು. ಆಕಾಶದಲ್ಲೆಲ್ಲ ಕಪ್ಪು ಮೋಡಗಳು. ದೂರದಲ್ಲೆಲ್ಲೋ ಗುಡುಗು. ಬಲವಾದ ಗಾಳಿ ಬಿಸಿ ಮರಗಿಡಗಳೆಲ್ಲ ಅಲ್ಲಾಡುತ್ತಿದ್ದವು. ಸ್ವಲ್ಪ ಹೊತ್ತಿಗೆ ಪಿಟಿ ಪಿಟಿ ಎಂದ ಮಳೆ ಕ್ಷಣದಲ್ಲೆ ರಭಸದಲ್ಲಿ ಸುರಿಯಿತು.
ಒಂದು ಮುದಿ ಹುಲಿ ಮಳೆಯಿಂದ ರಕ್ಷಣೆ ಬಯಸಿ ತಂಗಲು ಜಾಗ ಹುಡುಕುತ್ತಿತ್ತು. ತನ್ನ ಗವಿಯಿಂದ ತುಂಬ ದೂರ ಬಂದಿತ್ತು ಈ ಹುಲಿ. ಒಂದು ಗುಡಿಸಲು ಕಾಣಿಸಿ ಅದರ ಬಳಿ ಹೋಗಿ ಅದರ ಹುಲ್ಲಿನ ಮಾಡಿನ ಕೆಳಗೆ ತೂರಿ ಕುಳಿತುಕೊಂಡಿತು. ಮಳೆಯ ಸದ್ದೊಂದನ್ನು ಬಿಟ್ಟು ಬೇರೆ ಯಾವುದೆ ಶಬ್ದಗಳಿರಲಿಲ್ಲ. ಓಡಿ ಸುಸ್ತಾದ ಹುಲಿ ಇನ್ನೇನೂ ತೂಕಡಿಸಬೇಕು ಅಷ್ಟರಲ್ಲಿ ಮನೆಯೊಳಗಿನಿಂದ ಮನೆಯೊಡತಿಯ ಮಾತು ಕೇಳಿಸಿದವು. "ಏನು ಹಾಳಾದ ತೂತು, ಈ ಮಾಡಿನ ತೂತಿನಿಂದ ಸೋರುವ ನೀರಿನೊಂದಿಗೆ ಏಗುವುದಕ್ಕಿಂತ ಅಡವಿಯ ಹುಲಿಯಯನ್ನು ನಾನು ಧೈರ್ಯದಿಂದ ಎದುರಿಸಬಲ್ಲೆ". ಹುಲಿಗೆ ಅಚ್ಚರಿ ಎನಿಸಿತು. "ನಾನೋ ಕಾಡಿನ ರಾಜ. ಎಲ್ಲರೂ ನನಗೆ ಹೆದರುವವರು. ಇದೇನಿದು ಹೆಂಗಸಿನ ಮಾತು. ನನ್ನನ್ನು ಎದುರಿಸಬಲ್ಲೆ ಎನ್ನುತ್ತಿದ್ದಾಳಲ್ಲವಾ? ಹಾಗಾದರೆ ಈ ’ತೂತು’ ಎನ್ನುವುದು ನನಗಿಂತ ಬಲಶಾಲಿಯಾಗಿರಬೇಕು." ಹೇಗಿರಬಹುದು ಈ ’ತೂತು’ ಕಾಣಲು ಎಂದೆಲ್ಲ ಚಿಂತಿಸುತ್ತ ಕೂತ ಕಡೆಯೇ ನಿದ್ದೆ ಹೋಯಿತು.
ಸ್ವಲ್ಪ ಹೊತ್ತಿಗೆ ಯಾರೂ ಹಿಂಬದಿಗೆ ಒದ್ದ ಹಾಗಾಯಿತು. ಅದರ ಹಿನ್ನೆಲೆಯಲ್ಲೆ ಒಂದು ದನಿ , ’ಇಲ್ಲಿದಿಯಾ ಕತ್ತೆ? ಎಷ್ಟು ಪೊಗರು ನಿನಗೆ? ಮಧ್ಯಾಹ್ನ ಇಡೀ ನಿನ್ನನ್ನು ಹುಡುಕುವುದೇ ಆಯಿತು . ಹುಲಿ, ’ಹೋ ಹಾಗಾದರೆ ಆ ’ತೂತು’ ಈಗ ಮನೆ ಹೊರಗೆ ಬಂದು ನನ್ನನ್ನು ಹೊಡೆಯುತ್ತಿದೆ ಅಂದು ಕೊಂಡಿತು. ಹುಲಿಯ ಕೊರಳಿಗೆ ಹಗ್ಗ ಬಿಗಿದು ಅದನ್ನು ಹೊಡೆಯುತ್ತ ಒದೆಯುತ್ತ ಅದರ ಮೇಲೆ ಹತ್ತಿ ಕೂತು, ನಡಿ ಮನೆಗೆ, ಒಂದು ದಿನ ನಿನ್ನನ್ನು ಕೊಂದು ಹಾಕುವೆ, ಅಂತ ಹೇಳಿ ಹಗ್ಗವನ್ನು ಬಿಗಿ ಮಾಡಿ ಅದರ ಹಿಂಬದಿಗೆ ಇನ್ನೊಮ್ಮೆ ಬಲವಾಗಿ ಒದೆದ. ಹಾಗೂ ಹೀಗೂ ಹುಲಿ , ಅವನ ಮೇಲೇರಿ ಕೂತವನ ಆದೇಶದಂತೆ ಇನ್ನೊಂದು ಗುಡಿಸಲಿನ ಬಳಿಗೆ ಹೋಯಿತು. ಅದನ್ನು ಹೊರಗೆ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಬಂದ ಹುಲಿಯ ಮೇಲೆ ಕುಳಿತವನು. ಸರೀ ರಾತ್ರಿಯಾಗಿದ್ದರಿಂದ ಮನೆ ಒಳಗೆ ಸೇರಿ ಮಲಗಿ ನಿದ್ದೆ ಹೋದ. ಹುಲಿ ತನ್ನ ಕಟ್ಟನ್ನು ಬಿಡಿಸಲು ಶತ ಪ್ರಯತ್ನ ನಡೆಸಿ, ತನ್ನನ್ನು ಹೊಡೆಯುತ್ತ ಇಲ್ಲಿಯವರೆಗೆ ಕರೆದು ತಂದ ಈ ’ತೂತಿನ’ ಬಗ್ಗೆ ಯೋಚಿಸುತ್ತ ಸುಮ್ಮನಾಯಿತು.
ಹುಲಿ ’ತೂತು’ ಎಂದುಕೊಂಡಿದ್ದು ಆ ಊರಿನ ಒಬ್ಬ ಬಡ ಕುಂಬಾರ
ಮರುದಿನ ಬೆಳಿಗ್ಗೆ ಹೊರಗಡೆ ಜನರ ಮಾತಿನ ಸದ್ದು ಗದ್ದಲಕ್ಕೆ ಕುಂಬಾರನಿಗೆ ಎಚ್ಚರ ಆಯಿತು. ಎಲ್ಲರೂ ಅವನನ್ನು ಹೊಗಳುವವರೆ. ’ಎಷ್ಟು ಧೈರ್ಯ ನಮ್ಮ ಕುಂಬಾರನಿಗೆ. ನಮ್ಮ ಹಲವಾರು ಜಾನುವಾರುಗಳನ್ನು ತಿಂದು ಹಾಕಿ ನಮ್ಮ ಕೈಗೆ ಸಿಗದ ಹಾಗೆ ಓಡಾಡುತ್ತಿದ್ದ ಹುಲಿಯನ್ನು ಹೇಗೆ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾನೆ’ ಮುಂತಾದ ಮಾತುಗಳು.
ಅದರ ಹಿಂದಿನ ದಿನ ಮಧ್ಯಾಹ್ನ ನಡೆದಿದ್ದು ಇಷ್ಟೆ. ಬೆಳಿಗ್ಗೆ ಎಲ್ಲ ಓಲೆಗೆ ಹಾಕಲು ಸೌದೆ ಹುಡುಕುತ್ತ ಕಾಡಿನಲ್ಲಿ ಅಲೆದಾಡಿ ಕುಂಬಾರ ಸುಸ್ತಾಗಿ ಮನೆಗೆ ತೆರಳಿದ. ಹೆಂಡತಿಗೆ ಒಂದು ಬಟ್ಟಲು ಸಾರಾಯಿ ಕೊಡಲು ಹೇಳಿದಾಗ ಆಕೆ ಇಡೀ ಪಿಪಾಯಿಯನ್ನು ತಂದು ಅವನ ಮುಂದೆ ಕುಕ್ಕಿದಳು. ಒಂದಾದ ಮೇಲೆ ಒಂದು ಹೀಗೆ ಹಲವಾರು ಬಟ್ಟಲು ಸೆರೆ ಕುಡಿಯುತ್ತ ತನ್ನ ಆಯಾಸವನ್ನು ಮರೆಯುತ್ತಿದ್ದ ಹಾಗೆ ಹೊರಗಡೆ ಗುಡುಗು-ಸಿಡಿಲಿನ ಆರ್ಭಟ ಕೇಳಿಸಿತು. ತಕ್ಷಣ ತನ್ನ ಕತ್ತೆಯನ್ನು ಕಾಡಿನಲ್ಲಿ ಕಟ್ಟಿಹಾಕಿದ ನೆನಪಾಗಿ ಕುಂಬಾರ ಗಡಿಬಿಡಿಯಿಂದ ಮಳೆ ಬರುವ ಮುಂಚೆ ಕತ್ತೆಯನ್ನು ಮನೆಗೆ ತರಲು ಓಡಿದ. ಕಾಡಿನಲ್ಲಿ ಕತ್ತೆಯನ್ನು ಕಟ್ಟಿದ ಜಾಗದಲ್ಲಿ ಅದರ ಹಗ್ಗ ಮಾತ್ರ ಇತ್ತು, ಕತ್ತೆ ನಾಪತ್ತೆ. ಅದನ್ನು ಶಪಿಸುತ್ತ, ಅಷ್ಟರಲ್ಲೆ ಮಳೆಯೂ ಶುರು ಆಗಿ, ಮರದ ಬೇರುಗಳಲ್ಲಿ ಕಾಲು ಸಿಲುಕಿ ಬಿದ್ದು, ತುಂಬ ಕೋಪದಲ್ಲಿ ಹುಡುಕಾಡುತ್ತ ಅವನು ಹುಲಿ ಮಲಗಿದ ಗುಡಿಸಲಿನ ಬಳಿ ಬಂದಿದ್ದ. ಕುಡಿತದ ಅಮಲಿನಲ್ಲಿ ಅದು ಕತ್ತೆಯೋ ಹುಲಿಯೋ ಗುರುತಿಸಲಾಗದೆ ಅಲ್ಲಿ ಸಿಕ್ಕಿದ ಪ್ರಾಣಿಯನ್ನು ಹೊಡೆದು ಬಡಿದು ಮನೆಯ ಹೊರಗೆ ಕಟ್ಟಿ ಹಾಕಿ ನಿದ್ದೆ ಹೋಗಿದ್ದ.
ಕುಂಬಾರ ಮನೆಯ ಮುಂದೆ ಕಟ್ಟಿದ ಹುಲಿಯನ್ನು ನೋಡಿ ಮೂರ್ಛೆ ಹೋದ. ಜನರಿಗೆಲ್ಲ ನಿಜ ಸಂಗತಿ ಅರುಹಿ ಹೇಳಿದರೂ ಯಾರು ಅವನನ್ನು ನಂಬಲಿಲ್ಲ ಎಲ್ಲರೂ ಅವನನ್ನು ಹೊಗಳುವವರೆ..ಎಲ್ಲರೂ ಅವನನ್ನು’ ಧೀರ ಕುಂಬಾರ’ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದರು.
ಹೀಗೆ ಒಂದು ದಿನ ಕುಂಬಾರನಿರುವ ರಾಜ್ಯದಲ್ಲಿ ಪರ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದು ಊರ ಹೊರಗಿನ ಬಯಲಿನಲ್ಲಿ ಬೀಡು ಬಿಟ್ಟ. ಕುಂಬಾರನಿರುವ ರಾಜ್ಯದ ರಾಜನಿಗೆ ಹೀಗೆ ಯಾರೂ ದಂಡೆತ್ತಿ ಬರುವ ಯೋಚನೆ ಇಲ್ಲದಿದ್ದರಿಂದ ಅವನು ಆರಾಮಾಗಿದ್ದುದ್ದಲ್ಲದೆ, ತನ್ನ ಸೇನೆ ಯನ್ನು ಸೋಮಾರಿ ಸ್ಥಿತಿಗೆ ತಂದಿಟ್ಟಿದ್ದ. ತನ್ನ ಸೇನೆಯ ಮುಂದಾಳತ್ವ ವಹಿಸಿ ದಂಡೆತ್ತಿ ಬಂದ ವೈರಿ ಸೈನ್ಯವನ್ನು ಓಡಿಸಲು ಒಭ್ಬ ಧೈರ್ಯವಂತ ಸಿಪಾಯಿಯನ್ನು ರಾಜ ಹುಡುಕಲು ತೊಡಗಿದ. ಯಾರದ್ದೋ ಮೂಲಕ, ಹುಲಿಯನ್ನು ಮರಕ್ಕೆ ಕಟ್ಟಿದ ಕುಂಬಾರನ ಬಗ್ಗೆ ರಾಜನಿಗೆ ತಿಳಿಯಿತು. ಅವನಿಗೆ ಬುಲಾವ್ ಹೋಯಿತು. ಕುಂಬಾರ ನಿಗೆ ಏನನ್ನೂ ಕೇಳದೆ, ’ನೀನು ನನ್ನ ಸೇನೆಯ ಮುಂದಾಳತ್ವ ವಹಿಸಿ ಊರಿನ ವೈರಿ ರಾಜನನ್ನು ಹೊಡೆದೋಡಿಸ ಬೇಕು’ ನಿನಗೆ ಒಂದು ಒಳ್ಳೆಯ ಕುದುರೆಯನ್ನು ನೀಡುತ್ತೇನೆ ಎಂದು ರಾಜ ಆಜ್ಝೆಯನ್ನು ವಿಧಿಸಿದ.
ಹೈರಾಣಾದ ಕುಂಬಾರ ಮನೆಗೆ ಬಂದು ನನಗೆ ಕುದುರೆ ಓಡಿಸಲು ಬಿಡು, ಅದರ ಮೇಲೆ ಕೂರಲು ನನಗೆ ಬರುವುದಿಲ್ಲವಲ್ಲ. ಏನಾದರಾಗಲಿ ನಾಳೆ ಬೆಳಿಗ್ಗೆ ನನ್ನನ್ನು ತುಸು ಬೇಗನೆ ಎಬ್ಬಿಸು, ಕುದುರೆ ಸವಾರಿ ಒಂದೆರೆಡು ಗಂಟೆ ಕಲಿತು, ಆ ವೈರಿ ರಾಜನಿದ್ದೆಡೆ, ಸೈನ್ಯವನ್ನು ಕರೆದುಕೊಂಡು ಹೋಗುತ್ತೇನೆ, ಈಗ ನಾನು ಮಲಗುತ್ತೇನೆ’. ಸರಿ ಎಂದಳು ಅವನ ಹೆಂಡತಿ
ಮರುದಿನ ನಸುಕಿಗೆ ಎದ್ದು ಮನೆಯ ಹಿಂಬದಿಗೆ ಕಟ್ಟಿದ ಕುದುರೆಯನ್ನಿಬ್ಬರೂ ನೋಡಿದರು. ಅದೋ ಅಷ್ಟು ಎತ್ತರ.. ಕೊನೆಗೆ ಮನೆಯ ಒಳಗಿದ್ದ ಕುರ್ಚಿಯ ಸಹಾಯದಿಂದ ಕಂಬಾರ ಕಷ್ಟಪಟ್ಟು ಕುದುರೆಯನ್ನೇರಿದ. ತನ್ನ ಹೆಂಡತಿಗೆ ಕುದುರೆ ಜೀನಿನಿಂದ (saddle) ತಾನು ಕೆಳಗೆ ಬೀಳದಂತೆ ತನ್ನ ಕೈ ಕಾಲು ಗಳನ್ನು ಕುದುರೆಯ ಸುತ್ತು ಕಟ್ಟಲು ಅಪ್ಪಣಿಸಿದ. ಯಜಮಾನನ ಹೆಂಡತಿ ಜಾಣೆ, ಯಜಮಾನನ ಕಾಲನ್ನು ರಿಕಾಬಿಗೆ (stirrup) ಕಟ್ಟುವುದೇ ಅಲ್ಲದೆ ಅವನ ಎರಡೂ ಕಾಲನ್ನು ಒಂದೆ ಹಗ್ಗದಿಂದ ಒಟ್ಟಿಗೆ ಕಟ್ಟಿ ಅದನ್ನು ಕುದುರೆಯ ಹೊಟ್ಟೆಯ ಕೆಳಗೆ ಕಟ್ಟಿಟ್ಟಳು. ಈಗ ಕೈ ಗಳ ಸರದಿ. ಒಂದು ಕೈಯನ್ನು ಹಗ್ಗಕ್ಕೆ ಕಟ್ಟಿ ಅದನ್ನು ಕುದುರೆಯ ಕುತ್ತಿಗೆ ಮೇಲಿರುವ ಕೂದಲಿಗೆ ಕಟ್ಟಿದಳು. ಕುದುರೆಗೆ ಅಸಾಧ್ಯ ನೋವಾಗಿ ಅದು ಒಂದೆ ಸಮನೆ ಓಡಲು ಶುರು ಮಾಡಿತು. ಊರು ಕೇರಿ ದಾಟಿ ಊರ ಹೊರಗೆ ಬರುವುದರಲ್ಲಿ ಶರವೇಗದಿಂದ ಓಡಲು ಶುರುಮಾಡಿತು. ಕಾಲನ್ನು ಗಟ್ಟಿಯಾಗಿ ಕುದುರೆಯ ಸುತ್ತ ಕಟ್ಟಿದ್ದರಿಂದ ಕಂಬಾರ ಕೆಳಗೆ ಬೀಳಲಿಲ್ಲ. ಒಂದು ಕೈ ಬಿಡುವು (free) ಆಗಿದ್ದರಿಂದ ಹಿಂದಕ್ಕೆ ಸಾಗುತ್ತಿರುವ ಮರದ ಗೆಲ್ಲನ್ನು ಹಿಡಿಯುವ ಪ್ರಯತ್ನ ಕುಂಬಾರ ಮಾಡುತ್ತಲಿದ್ದ. ಕೊನೆಗೆ ಒಂದು ಮರದ ಕೊಂಬು ಅವನ ಕೈಗೆ ಸಿಕ್ಕಿತ್ತು. ಆದರೆ ಕುದುರೆಯ ಓಟದ ರಭಸಕ್ಕೆ ಆ ಮರ ಬುಡ ಸಮೇತ ಕಿತ್ತುಕೊಂಡು ಬಂದು ಅವನ ಕೈಯಿಂದ ನೇತಾಡಲು ಶುರು ಮಾಡಿತು. ದೂರದಿಂದ ಇದನ್ನೆಲ್ಲ ವೀಕ್ಷಿಸುತ್ತಿದ್ದ ವೈರಿ ರಾಜನಿಗೆ, ಒಂದು ಕೈಯಲ್ಲಿ ಇಡಿ ಮರವನ್ನು ಹಿಡಿದುಕೊಂಡ ಒಬ್ಬನೆ ಕಾದಾಡಲು ಬರುತ್ತಿರುವ ಸೈನಿಕನನನ್ನು ನೋಡಿ ಭಯವಾಯಿತು. ಕುದುರೆ ಓಡಿ ಓಡಿ ಸುಸ್ತಾಗಿ ವೈರಿ ರಾಜ ಬೀಡು ಬಿಟ್ಟಿರುವ ಮೈದಾನಕ್ಕೆ ಹೋಗಿ ಕೊನೆಗೊಮ್ಮೆ ಸುಮ್ಮನೆ ನಿಂತಿತು.
ಕುಂಬಾರ ಹರ ಸಾಹಸ ಮಾಡಿ ತನ್ನ ಕೈ ಕಾಲುಗಳನ್ನು ಹಗ್ಗದಿಂದ ಬಿಡಿಸಿಕೊಂಡ. ಮೈದಾನದಲ್ಲಿ ಕಟ್ಟಿರುವ ಡೇರೆಯಲ್ಲಿ ಯಾರೂ ಕಾಣಿಸಲಿಲ್ಲ. ನಿಧಾನಕ್ಕೆ ಒಂದು ಡೇರೆ ಒಳಗಡೆ ಹೋಗಿ ನೋಡಿದ. ಅಲ್ಲಿ ಪಲ್ಲಂಗದ ಮೇಲೆ ಒಂದು ಪತ್ರವಿದ್ದಿತು. ಅದನ್ನು ಕೈ ಯಲ್ಲಿ ತೆಗೆದುಕೊಂಡು ಕಂಬಾರ ನಿಧಾನಕ್ಕೆ ನಡೆದು ಸುಸ್ತಾಗಿ ತನ್ನ ಮನೆ ಸೇರಿದ."ಪ್ರೀತಿಯ ಹೆಂಡತಿಯೇ, ಇನ್ನೆಂದೂ ನಾನು ಕುದುರೆಯ ಮೇಲೆರುವವನಲ್ಲ. ಪತ್ರವನ್ನು ತನ್ನ ಹೆಂಡತಿಯ ಕೈಗೆ ರವಾನಿಸಿ ಅದನ್ನು ರಾಜನಿಗೆ ಕೊಡಲು ಹೇಳಿ ತಾನು ಮಲಗಿ ನಿದ್ದೆ ಹೋದ.
ಓಡೋಡುತ್ತ ಆ ಪತ್ರವನ್ನು ಕುಂಬಾರನ ಹೆಂಡತಿ ರಾಜನಿಗೆ ಕೊಟ್ಟಳು
ಪತ್ರದ ತುಂಬ ಸೈನಿಕನ ಧೈರ್ಯ ಬಗ್ಗೆ ಬರೆದಿತ್ತು. ರಾಜ, ಕುಂಬಾರನೆಲ್ಲಿ ಅಂತ ಕೇಳಿದ, ಕಂಬಾರನ ಹೆಂಡತಿ, ’ದೊರೆಯೆ, ನನ್ನ ಪತಿ ಹೋರಾಡಿ ಸುಸ್ತಾಗಿ ಮಲಗಿದ್ದಾನೆ ಎಂದು ನಮ್ರತೆಯಿಂದ ಉಸುರಿದಳು.
"ಇವತ್ತು ಅವನು ವಿಶ್ರಮಿಸಲಿ, ನಾಳೆ ಅವನನ್ನು ನನ್ನನ್ನು ಬಂದು ಕಾಣಲು ತಿಳಿಸು" ಎಂದನು ರಾಜ.
ಮರುದಿನ ಕುಂಬಾರ ರಾಜನ ಬಳಿಗೆ ಹೋದ. ಕುದುರೆಯನ್ನು ಮನೆಯ ಹಿಂಬಾಗದಲ್ಲೇ ಬಿಟ್ಟು ನಡೆದುಕೊಂಡೇ ಅರಮನೆ ತಲುಪಿದ. ’ಆಹಾ ಏನು ನಯ ವಿನಯ ನಮ್ಮಕುಂಬಾರನಿಗೆ, ಕುದುರೆ ಹೊಂದಿದ್ದರೂ, ನೋಡು ನಡೆದು ಕೊಂಡೆ ಅರಮನೆಗೆ ಬಂದಿದ್ದಾನೆ’ ಎಂದು ಅಲ್ಲಿ ಸೇರಿದ ಊರವರು ತಮ್ಮ ತಮ್ಮಲ್ಲೆ ಹೇಳಿಕೊಂಡರು. ’ಅವನು ನಿಜಕ್ಕೂ ಶೂರ, ಧೈರ್ಯವಂತ.
ರಾಜನು ಕುಂಬಾರನನ್ನು ಧನ-ಕನಕಗಳಿಂದ ಸತ್ಕರಿಸಿದರಿಂದ, ಮುಂದೆ ಯಾವತ್ತು ಕುಂಬಾರನಿಗೆ ಕಷ್ಟಪಟ್ಟು ದುಡಿಯುವ ಅಥವ ಕುದುರೆ ಏರುವ ಪ್ರಸಂಗ ಬರಲಿಲ್ಲ.
Marguerite Siek ಬರೆದ ಆಂಗ್ಲ ಕತೆ ’the Brave Potter' ನ ಕನ್ನಡ ಅನುವಾದ