May 30, 2020

This & That

After 66 days of being at home, me and akka ventured out into the new normal. Pro-COVID & new normal are the in thing now.
We had to get some urgent baking essentials. People from our apartment also are availing goodies from #biscootfactory all these days we ordered baking paraphernalia through dunzo. There were a few blunders. Yesterday we needed to choose what we wanted, hence went out. 
As soon as i put on my 'going-out' clothes i realized i had lost weight, so clicked a pic to send to my sis ...for early this morning when she called she said she had put on a few pounds.



If there is one person who i feel has benefitted from the lock down, it is she. Though she is a stay at home mother of two, she has no respite. Two different timings for the girls' school pick up and drop, car pooling, volunteering at the school, look after her aged mother-in-law, take her to doctor, grocery shopping, driving the kids to badminton, music classes, hosting dinner every few days, gardening etc...i always felt she is always on wheels....to add to that both her girls are lactose intolerant..so when ever she is invited to parties she has to pack interesting food for the girls, cook soft white rice for the M-I-L... 
One person who did not take well to the lick down is a close family friend, a businees tycoon, multi millionaire friend of ours. He has a well disciplined life. Get up early, go for walks, then play badminton, come home, have breakfast and getting ready for work, meetings, travels....always busy...i remember once i had told him to take a break and he mentioned he would like to breathe his last while he is busy at work. Sitting at home has affected his mental health.
Me, for a while i was agitated and missed my daughter, missed going out badly..now i am calm all of a sudden.
Glad i can pin my thoughts in blog.

May 28, 2020

Breakfast story



#todaysspecial
#husband makes #breakfast. #recipe from #whatsapp group.
I skip dinner, so i am ravenously hungry by 6.45 am. Today husband started breakfast activity only atb7.15 am...i was faint with hunger by the time i ate..😃 They were yummy though 👌

These rawa rottis were taking ages to bake. He ate first cos he had a #concall .
As a stand by i quickly rustled up some chitranna from yesterday's left over #redrice

Since i had some time on hands and since the baking was taking too long, i made some long strips of ripe #nendra #banana and roasted them. Made a slurry with rice flour, bombay rawa, red chilli powder, salt and hing..dipped the banana slices and baked them along with the rawa rottis 😇😇😃 #rawarotti #andhrachutney #freshlychurnedbutter  #chitranna #bananafry

#breakfaststory

May 19, 2020

Biscoot factory

ಹಿಂದಿನ ವಾರದಿಂದ ಬಿಸ್ಕೂಟ factory ಗೆ ಬಿಡುವಿಲ್ಲದ ಕೆಲಸ. ಕೆಲಗಿವೆ ಕೆಲ ಕಪ್ ಕೇಕ್ಸ್, ಕೇಕ್, ಜಾರ್ treats ಮುಂತಾದವುಗಳು
ನಿಮಗೂ ಬೇಕಿದ್ದಲ್ಲಿ 9902825368 ಗೆ ಕಾಲ್ ಮಾಡಿ ಅಥವಾ ಮೆಸೇಜ್ ಮಾಡಿ






May 17, 2020

ನೀಲೇಶ ಜವಳಿ - ತೀರ್ಥಹಳ್ಳಿಯ ಯುವ ಉದ್ಯಮಿ

ಮೊನ್ನೆಯಷ್ಟೇ ತೀರ್ಥಹಳ್ಳಿಯ, ನನ್ನ ಮಾವನವರ ಬಗ್ಗೆ ಓದಿದ್ರಿ. ಈಗ ನನ್ನ ಕಿರಿಯ ಮಿತ್ರ ನೀಲೇಶ ಜವಳಿ ಬಗ್ಗೆ ಓದಿ.
ನೀಲೇಶ ಪದವಿ ಶಿಕ್ಷಣ ಮುಗಿಸಿದ್ದು ಬೆಂಗಳೂರಿನಲ್ಲಿ. ಆದರೂ ಇಲ್ಲಿನ ತಳಕು ಬೆಳಕಿಗೆ ಮರುಳಾಗದೆ, ತಮ್ಮ ಸ್ವಂತ ಊರಾದ ತೀರ್ಥಹಳ್ಳಿಗೆ ತೆರಳಿ,ತಮ್ಮ ತಂದೆಯವರೊಡಗೂಡಿ ಶ್ರೀ ಕಾಫಿ ವರ್ಕ್ಸ್ ಅನ್ನು ಕಾಫಿ ಮಾತ್ರವಲ್ಲ ,ಇನ್ನೂ ಕೆಲವು products ಸೇರಿಸಿ  ಚೆನ್ನಾಗಿ ಮುನ್ನಡಿಸಿದ್ದಾರೆ.
Face book ನಿಂದ ಕಾಪಿ ಮಾಡಿದ್ದು. ಬರಹ : ನಿಖಿಲ್ ಕಾಮತ 


#Thirthahalli2Global - 2

ಯಾರು ಯಾವುದೇ ಕಾರಣಕ್ಕೆ ಫೋನ್ ಮಾಡೀರ್ಲಿ ಮಾತು ಶುರುವಾಗೋದೆ ಕಾಫೀ ಆಯ್ತಾ ಅಂತ... ಮನೆಗೆ ಬಂದವರು ಅವಸರದಿಂದ ಹೊರಟಾಗ ಹೇಳುವ ಕಾಮನ್ ಡೈಲಾಗ್ "ಅಯ್ಯೋ ಕುತ್ಕೊಳ್ರಿ, ಸ್ವಲ್ಪ ಕಾಫಿ ಕುಡ್ಕೊಂಡು ಹೋಗೋರಂತೆ" ಹೀಗೆ ಕಾಫೀ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. 

ಸುಮಾರು 15ನೇ ಶತಮಾನದಲ್ಲಿ ಯಮನ್ ದೇಶದಲ್ಲಿ ಮೊದಲ ಬಾರಿಗೆ ಕಾಫಿ ಪ್ರಯೋಗವಾಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಫಿ ನಮ್ಮಲ್ಲಿ ಅಡಕವಾಗಿದೆ. 

ಈ ಎಲ್ಲಾ ಪೀಠೀಕೆಗಳೇಕೆಂದರೆ ನಮ್ಮ ನಡುವೆ ಒಬ್ಬ ಕಾಫಿಪುಡಿ ಮಾರಾಟಗಾರರಿದ್ದಾರೆ. ಅವರು ತಮ್ಮ ವೃತ್ತಿ -ಪ್ರವೃತ್ತಿಗಳಿಂದ ನಮಗೆಲ್ಲಾ ಚಿರಪರಿಚಿತರೇ. ಅವರೇ ಶ್ರೀ ನಿಲೇಶ್ ಜವಳಿ. 

ತೀರ್ಥಹಳ್ಳಿಯ ಕಾಫಿ ಪ್ರಿಯರಿಗೆ ಕಾಫಿ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದೇ "ಶ್ರೀ ಕಾಫೀ ವರ್ಕ್ಸ್"

ಶ್ರೀಮನ್ಮಥ ನಾಮ ಸಂವತ್ಸರ, ಪುಷ್ಯ ಬಹುಳ ಷಷ್ಠಿ, ಫೆಬ್ರವರಿ 11,1956ರ ಗುರುವಾರ ಶ್ರೀ ಕಾಫಿ ವರ್ಕ್ಸ್ ದಿ|| ದಯಾನಂದ ಜವಳಿಯವರಿಂದ ಆರಂಭ. ಅವರ ಸುಪುತ್ರ ಶ್ರೀ ನಿಲೇಶ್ ಜವಳಿಯವರು ತಮ್ಮ ವಿದ್ಯಾಭ್ಯಾಸದ ನಂತರ ತಂದೆಯವರ ಉದ್ಯಮದಲ್ಲಿ ಕೈ ಜೋಡಿಸಿದಿರಲ್ಲದೇ ಕಾಫಿ ಪುಡಿ ಮಾಡುವುದರೊಂದಿಗೆ ಹಿಟ್ಟಿನ ಗಿರಣಿ, ಬೇಕರಿ ತಿನಿಸುಗಳ ವ್ಯಾಪಾರವನ್ನೂ ಆರಂಭಿಸಿ ಶ್ರೀ ಕಾಫೀ ವರ್ಕ್ಸ್ ಜನರಿಗೆ ಇನ್ನೂ ಹತ್ತಿರವಾಗುವಲ್ಲಿ ಶ್ರಮಿಸಿದರು. ಸುಮಾರು 64 ವರ್ಷಗಳಿಂದ ಶ್ರೀ ಕಾಫೀ ವರ್ಕ್ಸ್ ನಿರಂತರವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ, ಕಾಫೀ ಪ್ರಿಯರ ಮನಸೂರೆಗೊಂಡಿದೆ. 

ಶ್ರೀ ಕಾಫೀ ವರ್ಕ್ಸ್ ನವರ ಕಾಫೀ ಪುಡಿಯ ರುಚಿ ತೀರ್ಥಹಳ್ಳಿಯ ಗಡಿಯನ್ನು ದಾಟಿರುವುದಲ್ಲದೇ ಹೊರ ಊರು, ಹೊರ ಜಿಲ್ಲೆಗಳಲ್ಲಿ ಅಸಂಖ್ಯ ಅಭಿಮಾನಿ ಗ್ರಾಹಕರನ್ನು ಹೊಂದಿದೆ. ಕಾರ್ಯ ನಿಮಿತ್ತ ಬೇರೆ ಊರುಗಳಿಗೆ ತೆರಳುವವರು ಒಂದು ಕ್ಷಣ ಶ್ರೀ ಕಾಫಿ ವರ್ಕ್ಸ್ ನ ಮುಂದೆ ತಮ್ಮ ವಾಹನ ನಿಲ್ಲಿಸಿ ಕಾಫೀ ಪುಡಿ ಖರೀದಿಸಿ ಮುಂದೆ ಸಾಗುತ್ತಾರೆ. ಬೆಂಗಳೂರಿಗೆ ಬರುವ ತಮ್ಮ ನೆಂಟರ ಬಳಿ ಮರೆಯದೇ ಶ್ರೀ ಕಾಫೀ ವರ್ಕ್ಸ್ ನವರ ಕಾಫಿ ಪುಡಿ ತರ ಹೇಳುತ್ತಾರೆ.

 ಇದಕ್ಕೆಲ್ಲ ಒಂದೇ ಕಾರಣವೆಂದರೆ ಶ್ರೀ ಕಾಫೀ ವರ್ಕ್ಸ್ ನವರ ಕಾಫಿ ಪುಡಿಯ ಸ್ವಾದ ಎಂದೂ ಸಹ ಬದಲಾಗಿಲ್ಲ.
ಇದಕ್ಕೆ ಒಂದು ತಾಜಾ ಉದಾಹಣೆಯೂ ಇದೆ. ಶೃಂಗೇರಿಯಲ್ಲಿ ತೀರ್ಥಹಳ್ಳಿ ಮೂಲದ ಉಪನ್ಯಾಸಕರಿದ್ದಾರೆ. ಪ್ರೋ. ಲಕ್ಷೀನಾರಾಯಣ್ . ಅವರ ತಂದೆ ಹಿರಿಯಣ್ಣ ಗೌಡರು ತೀರ್ಥಹಳ್ಳಿಯಲ್ಲಿ ಬಹುತೇಕರಿಗೆ ಪರಿಚಿತರು. ಅವರ ಕುಟುಂಬ ಶ್ರೀ ಕಾಫೀ ಪುಡಿಯ ಖಾಯಂ ಗ್ರಾಹಕರು.  ಒಮ್ಮೆ ಅವರ ಮನೆಗೆ ಬಂದಿದ್ದ ನೆಂಟರೊಬ್ಬರು ಕಾಫೀ ಬಾಯಿಗಿಡುತ್ತಲೇ ಇಂತಹ ಕಾಫೀ ನಾನು ತೀರ್ಥಹಳ್ಳಿಯಲ್ಲಿದ್ದಾಗ ಸುಮಾರು 20 ವರ್ಷಗಳ ಮುಂಚೆ ಕುಡಿದಿದ್ದು. ಅಲ್ಲಿ ಶ್ರೀ ಕಾಫೀ ವರ್ಕ್ಸ್ ಅಂತ ಒಂದು ಅಂಗಡಿ ಇದೆ. ಅಲ್ಲಿನ ಕಾಫೀ ರುಚಿ ಹೀಗೆ ಇತ್ತು ಎಂದಾಗ ಲಕ್ಷ್ಮೀನಾರಾಯಣ ಚಕಿತರಾಗಿ 20 ವರ್ಷಗಳಿಂದ ಕಾಫೀ ಪುಡಿಯ ಸ್ವಾದವೇ ಬದಲಾಗಿಲ್ಲ ಎಂದರೆ ಅದು ಹೇಗೆ ಎಂದು ನಿಲೇಶ್ ಜವಳಿಯವರ ಬಳಿ ಆಶ್ಚರ್ಯಚಕಿತರಾಗಿ ಕೇಳಿದ್ದಿದೆ.

ಪ್ರಸ್ತುತ ಗ್ರಾಹಕರ ಬೇಡಿಕೆಯ ಮೇರೆಗೆ ಶ್ರೀ ನಿಲೇಶ್ ಜವಳಿಯವರು ಹೊರ ಊರುಗಳಲ್ಲಿರುವ ತಮ್ಮ ಗ್ರಾಹಕರಿಗೆ ಕೋರಿಯರ್ ಮೂಲಕ ಕಾಫೀ ಪುಡಿ ರವಾನಿಸುತ್ತಿದ್ದಾರೆ. ಈ ವ್ಯವಸ್ಥೆ ಇರುವುದು ಅನೇಕರಿಗೆ ತಿಳಿದಿಲ್ಲ. ಶ್ರೀ ನಿಲೇಶ್ ಜವಳಿಯವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ತಮ್ಮ ಆರ್ಡರ್ ತಿಳಿಸಿ, ಆನ್ ಲೈನ್ ಮೂಲಕ ಪೇಮೆಂಟ್ ಮಾಡಲಿಚ್ಛಿಸುವ ಗ್ರಾಹಕರಿಗೆ ಶ್ರೀ ನಿಲೇಶ್ ಜವಳಿ ಕೋರಿಯರ್, ಟ್ರಾನ್ಸ್ ಪೋರ್ಟ್ ಮುಖಾಂತರ ಕಾಫಿ ಪುಡಿ ಇನ್ನಿತರ ಪದಾರ್ಥಗಳನ್ನು ಕಳುಹಿಸಿಕೊಡಲಿದ್ದಾರೆ. 

ಶೀಘ್ರದಲ್ಲಿ ಶ್ರೀ ಕಾಫಿ ವರ್ಕ್ಸ್ ನವರ ಹೊಸ್ ಬ್ರಾಂಡ್ ಕಾಫೀ ಪುಡಿ ನಮ್ಮೆಲ್ಲರ ಕೈ ಸೇರಲಿದೆ. 
ತಮ್ಮ ಸಂಸ್ಥೆಯ ಲಾಂಚನದಂತೆ ಸದಾ ನಗುಮೊಗದೊಂದಿಗೆ ನಮ್ಮೊಂದಿಗೆ ವ್ಯವಹರಿಸುವ ಶ್ರೀ ನಿಲೇಶ್ ಜವಳಿಯವರ ದೂರವಾಣಿ ಸಂಖ್ಯೆ 8050301283

#Thirthahalli2Global

May 13, 2020

ಉದ್ಯಮಶೀಲತೆ

ನಮ್ಮ ಮನೆ ಬಳಿಯ famous landmark ಉಡುಪಿ garden ಹೋಟಲ್. ಆದರೆ ನಾವು ನಮ್ಮ ಸ್ವಂತ flat ಗೆ ವಾಸೀಸಲು ಬರುವಷ್ಟರಲ್ಲಿ ಅದು ಶಿವ ಸಾಗರ್, ನ್ಯೂ ಶಾಂತಿ ಸಾಗರ್, ಉಪಹಾರ ದರ್ಶಿನಿ ಅಂತೆಲ್ಲ ಉಸ್ತುವಾರಿ ಬಡಲಾಗ್ತಾ ಇತ್ತು. ಇತ್ತೀಚಿನ ಒಂದು ವರ್ಷ ಅದು ಬಂದ್ ಆಗಿತ್ತು. ಇವತ್ತು ಮನೆಗೆ ಬೇಕಾಗುವ ಅಗತ್ಯ ಸಾಮಗ್ರಿ ತರಲು ಆ ಕಡೆ ಹೋದರೆ ಏನಾಶ್ಚರ್ಯ... ಅದು ಕೆಳಗಿನ ಚಿತ್ರದಂತೆ ಮದ್ಯ ಮಾರುವ ಅಂಗಡಿ ಯಾಗಿದೆ...
ಇದಪ್ಪ ಉದ್ಯಮಶೀಲತೆಯೆಂದರೆ 🤔🤔😁
Jokes apart. ನಿಜವಾದ ಉದ್ಯಮಶೀಲತೆಯೆಂದರೆ ನಮ್ಮ ಹಾಲು ಮಾರುವವನದ್ದು. ಲಾಕ್ ಡೌನ್ ಘೋಷಿಸಿದ ಕೆಲವೇ ದಿನಗಳಲ್ಲಿ, ಹಾಲಿನ ಜತೆ ಬ್ರೆಡ್ಡು, ಮೊಟ್ಟೆ ಮುಂತಾದವುಗಳನ್ನು ಮಾರಲಿಕಿಟ್ಟ. ಬೇಕಾರಿಗಳು ಓಪನ್ ಆದ ಮೇಲೆ ಪಫ್, ಕೇಕ್, ಜ್ಯುಸ್ ಮಾತ್ರವಲ್ಲ ಅವೆಲ್ಲವನ್ನು ಡಿಸ್ಪ್ಲೇ ಮಾಡಲು ಒಂದು ಅಂದದ ಕೇಸ್ ಕೂಡ ಎಲ್ಲಿಂದಲೋ ಸಂಪಾದಿಸಿದ.
ಕೆಲವು ದಿನಗಳ ಹಿಂದೆ ಹಳ್ಳಿಯಿಂದ ನಮ್ಮ ರೈತರು, ಅಪಾರ್ಟ್ಮೆಂಟ್ ಗಳಿಗೆ ಮಾವು ಸರಬರಾಜು ಮಾಡಲು ಬೆಳ್ಳಿಗ್ಗೆ ನಾಲಕ್ಕು ಗಂಟೆಗೆ ಹೊರಟಿದ್ದರು. ಬ್ರೆಕ್ಫಾಸ್ಟ್ ಮಾಡಲು ಎಲ್ಲೂ ಅವಕಾಶವಿರಲಿಲ್ಲ...ಹಾಗಾಗಿ ಮಧ್ಯಾಹ್ನದ ಹೊತ್ತಿಗೆ ನಾನು ಅವರಿಗೆ ಅವಲಕ್ಕಿ ಉಸಲಿ, ಚಹಾ, ಕೆಲವು ಕುರುಕುಲು ತಿಂಡಿ ಕಳುಹಿಸಿದ್ದೆ. ಸಂಜೆಗೆ ನನಗೆ ಹಾಲು ಬೇಕಿತ್ತು. ಸುಮಾರು ನಾಲಕ್ಕು ಗಂಟೆಗೆ ಹಾಲು ತರಲು ಹೋದಾಗ ಅವರು ಊಟಕ್ಕೆ ಕುಳಿತಿದ್ದರು ಪಾಪ ಅಷ್ಟು ಪುರುಸೊತ್ತಿಲ್ಲದ ವ್ಯಾಪಾರ. ಮೆಟ್ರೊ ಕೆಲಸದವರೆಲ್ಲ ಅವರ ಅಂಗಡಿಗೆ ಬರುತ್ತಾರೆ. ನನಗಂತೂ ಹೀಗೆ ಚುರುಕಾಗಿ ವ್ಯಾಪಾರ ಮಾಡುವವರನ್ನು ಕಂಡರೆ ಖುಷಿ ಮತ್ತು respect.





May 9, 2020

ಬುದ್ಧ ಪೂರ್ಣಿಮೆಯ ಚಂದ್ರ

7.5.2020
ಇವತ್ತಿನ ಚಂದ್ರ ಕೇಸರಿ ಬಣ್ಣದಾಗಿತ್ತು. ನನ್ನ ಸೇಲ್ ಫೋನ್ ನಲ್ಲಿ ರಾತ್ರಿ ಚಿತ್ರಗಳು ಸರಿಯಾಗಿ ಬರಲ್ಲ, ಅದಕ್ಕೆ ಹಳದಿ ಬಣ್ಣ ಕಾಣ್ತಿದೆ.
ಸುಮ್ನೆ ಗೂಗಲ್ ನ್ಯೂಸ್ ನೋಡ್ತಿದ್ದಾಗ, 'ಇನ್ನು 62 ವರ್ಷ ಈ ತರದ ಚಂದ್ರ ಕಾಣಲಿಕ್ಕೆ ಸಿಗುವುದಿಲ್ಲ ಅಂತ ಓದಿದೆ.  ಈಗ ನನಗೆ 52...62 ಅಂದ್ರೆ 114 ವರ್ಷ ಆದರೆ ನಾನು ಬದುಕಿರೋದು 105 ವರ್ಷ ಮಾತ್ರ..ಒಳ್ಳೆದಾಯ್ತು ನಿನ್ನೆ ನಾನು ಅಚಾನಕ್ಕಾಗಿ ಆಕಾಶ ನೋಡಿದ್ದು 😁😁😁



May 5, 2020

BTM 3rd stage under containment

(the lady tested  negative. Probably she just had the symptoms and people made a hue &cry out of it..
Cant imagine her plight, whst she went through. But the health department wentbto each and every house in the corfoned off street and gave a thorough chek up to all the residents. It took up most part of the dsy well into the night till( 3 am) the next day


The apartment opposite ours is sealed down. A pregnant lady tested positive today evening. She contracted COVID on her routine check up at cloud nine. The hospital is also sealed down...sealed down means they cannot come out even for necessary items...only in case of extreme meducal emergencies people are let out..
We have been ordered not to cross the road.







May 4, 2020

ನನ್ನ ಮಾವನವರಾದ ಟಿ ವಿ ಬಾಲಕೃಷ್ಣ ಶೆಣೈ

ಟಿ.ವಿ ಬಾಲಕೃಷ್ಣ ಶೆಣೈ      (  ವರ್ತಕರು ,ತೀರ್ಥಹಳ್ಳಿ )
---ಬರಹ : ನವನೀತ ಮಕ್ಕಿಮನೆ

ತೀರ್ಥಹಳ್ಳಿ ತಾಲ್ಲೂಕಿನ ಗೌಡ ಸಾರಸ್ವತ ಸಮಾಜದ ಹಿರಿಯರು ವೃತ್ತಿಯಲ್ಲಿ ವರ್ತಕರು ಹಾಗು ಕೃಷಿಕರಾಗಿ ತಮ್ಮ ಶಿಸ್ತು ಬದ್ಧ ಜೀವನ ಹಾಗು ವೃತ್ತಿ ಬದ್ದತೆಗಳ ಮೂಲಕ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಿರಪರಿಚಿತರಾಗಿದ್ದ ಟಿ.ವಿ ಬಾಲಕೃಷ್ಣ ಶೆಣೈ ಇವರು ಮೂಲತಃ ದಕ್ಷಿಣ ಕನ್ನಡದ ಮೂಲದವರಾದರು ಸರಿಸುಮಾರು ಶತಮಾನದ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಮುತ್ತೂರು ಹೋಬಳಿಯ " ಹಾರೋಗೊಳಿಗೆ "ಯಲ್ಲಿ ನೆಲೆಗೊಂಡ ಗ್ರಾಮದ ಹಿರಿಯ ಕೃಷಿಕರಾಗಿದ್ದ  ಟಿ ವೆಂಕಟೇಶಯ್ಯ ಇವರ ಪುತ್ರರಾದ ಟಿ.ವಿ ಶ್ರೀನಿವಾಸಯ್ಯ ಮತ್ತು ದೇವಕಿ ಇವರ ಹಿರಿಯ ಪುತ್ರರಾಗಿ 1915 ರಲ್ಲಿ ಜನಿಸಿದರು.1923 ರಲ್ಲಿ ಹಾರೋಗೊಳಿಗೆಯ ಜಮೀನನ್ನು ಮಾರಿ ತೀರ್ಥಹಳ್ಳಿಯ ಕುರುವಳ್ಳಿಗೆ ಬಂದು ನೆಲೆಸಿದ ಬಾಲಕೃಷ್ಣ ಶೆಣೈ ಇವರ ತಂದೆ ಟಿ.ವಿ ಶ್ರೀನಿವಾಸಯ್ಯ ಜವಳಿ ಅಂಗಡಿಯನ್ನು ಪ್ರಾರಂಭಿಸಿದರಲ್ಲದೆ ಕೆಲಕಾಲ ಶಿಕ್ಷಕ ವೃತ್ತಿಯ ಮೂಲಕ ತಮ್ಮ ಬದುಕನ್ನು‌ ಕಟ್ಟಿಕೊಂಡವರು.1924 ರ ಮಳೆಗಾಲದಲ್ಲಿ ತುಂಗಾ ನದಿಯ ಪ್ರವಾಹದಿಂದ ಅಪಾಯದ ಮಟ್ಟವನ್ನು ಮೀರಿದ ಸಂಧರ್ಭದಲ್ಲಿ ನೆರೆಯ ಅಬ್ಬರಕ್ಕೆ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡ ಬಾಲಕೃಷ್ಣ ಶೆಣೈ ಇವರು ತಮ್ಮ ಸಹೋದರರೊಡಗೂಡಿ ತೀರ್ಥಹಳ್ಳಿಯ ಹೃದಯ ಭಾಗವಾದ ಕೊಪ್ಪ ಸರ್ಕಲ್ ಬಳಿಯ ಮನೆಯನ್ನು ಖರೀದಿಸಿ " ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಎಂಬ ವ್ಯಾಪಾರೀ ಸಂಸ್ಥೆಯನ್ನು ಪ್ರಾರಂಭಿಸಿ ತಮ್ಮ ಸಂಸ್ಥೆಯನ್ನು ತೀರ್ಥಹಳ್ಳಿ ತಾಲ್ಲೂಕಿನ " ಜೀವನಾಡಿ " ಯಾಗಿ ಸಾರ್ವಜನಿಕ ಬಳಕೆಯ ಬಹುಪಯೋಗಿ ಸಂಸ್ಥೆಯನ್ನಾಗಿಸಿ ರೂಪಿಸಿ ಬೆಳೆಸಿದ್ದು ಟಿ.ವಿ ಬಾಲಕೃಷ್ಣ ಶೆಣೈ ಹಾಗು ಸಹೋದರರ ವೃತ್ತಿ ಬದ್ದತೆಗೆ ಸಾಕ್ಷಿಯಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ " ಹೋಂ ಗಾರ್ಡ್ " ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಬಾಲಕೃಷ್ಣ ಶೆಣೈ ಇವರು ತಮ್ಮ ಜೀವಿತಾವಧಿಯುದ್ದಕ್ಕೂ ಡಿಸೆಂಬರ್ ಆರರಂದು ನಡೆಯುವ " ಹೋ ಗಾರ್ಡ್ " ಸಂಸ್ಥಾಪನಾ ದಿನಾಚರಣೆಯಂದು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೆರವೆಯನ್ನು ಸಲ್ಲಿಸುತಿದ್ದ ಶ್ರೀಯುತರು ವ್ಯವಸಾಯ, ಜೇನು ಕೃಷಿ, ಖಾದಿ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಗಳಿಸಿಕೊಂಡಿದ್ದವರು. ಸರಿಸುಮಾರು ಎಂಟು ದಶಕಗಳ ಕಾಲದ ತಮ್ಮ ಜೀವಿತಾವಧಿಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ,ಹಿರಿಯರಾಗಿ ತಮ್ಮೆಲ್ಲಾ ಸಹೋದರರೊಂದಿಗೆ ಕುಟುಂಬವನ್ನು ಮುನ್ನಡೆಸಿ ಅನ್ಯೋನತೆಯ ಜೀವನವನ್ನು ನಡೆಸುವ ಮೂಲಕ " ಕೂಡು ಕುಟುಂಬ "ದ ಸಾಂಪ್ರದಾಯಿಕ ಬಾಳಿಗೊಂದು ಹೊಸ ಅರ್ಥವನ್ನು ಕಲ್ಪಿಸಿದವರು ಎಂದರೆ ಅತಿಶಯೋಕ್ತಿಯಲ್ಲ.ಎತ್ತರದ ನಿಲುವು,ಉದ್ದ ತೋಳನ್ನು ಮಡಚಿದ ಶ್ವೇತವರ್ಣದ ವಸ್ತ್ರ ,ಕಚ್ಚೆ ಪಂಚೆ,ಗಂಭೀರತೆಯ ಮುಖಭಾವದ ಬಾಲಕೃಷ್ಣ ಶೆಣೈ ಇವರು ತಮ್ಮ ಅಂಗಡಿಯ ಬಲಭಾಗದ ಚೌಕಾಕೃತಿಯ ಚಾಕೊಲೇಟ್ ಗಳ ಭರಣಿಗಳು ತುಂಬಿದ ಗಲ್ಲದಲ್ಲಿ ಕುಳಿತು ವ್ಯವಹರಿಸುತ್ತಿದ್ದರೆ ಅಂಗಡಿಯ ಎಡಬದಿಯ ಗಲ್ಲದಲ್ಲಿ ಶ್ರೀಯುತರ ಸಹೋದರರಾದ ರಾಮ್ ಶೆಣೈ, ಲಕ್ಷ್ಮೀನಾರಾಯಣ ಶೆಣೈ ಹಾಗು ಪುತ್ರರಾದ ಅನಂತ ಶೆಣೈ, ನಾಗರಾಜ ಶೆಣೈ ಇವರು ಗ್ರಾಹಕರ ಸೇವೆಯಲ್ಲಿ ನಿರತರಾಗಿರುತ್ತಿದ್ದ, ಹತ್ತಾರು ಮರದ ಹಲಗೆಗಳ ಬಾಗಿಲಿನ ಅಂಗಡಿಯಾಗಿದ್ದ ಅಂದಿನ ಬಾಲಕೃಷ್ಣ ಶೆಣೈ ಯವರ ಸಂಸ್ಥೆಯ ವ್ಯಾಪಾರದ ದಿನಚರಿಗಳು ಇಂದಿಗೂ ನಾಗರೀಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.ತೀರ್ಥಹಳ್ಳಿ ತಾಲ್ಲೂಕಿನ ಗ್ರಾಹಕರ ಪಾಲಿಗೆ ಕೇಳಿದನ್ನು ಕೊಡುವ " ಕಾಮಧೇನು " ವಾಗಿದ್ದ " ಬಾಲಕೃಷ್ಣ ಶೆಣೈ " ಸಹೋದರರ ವ್ಯಾಪಾರಿ ಸಂಸ್ಥೆ ತೀರ್ಥಹಳ್ಳಿಯ ನಾಗರೀಕರ ನಿತ್ಯಜೀವನದ ಒಡನಾಡಿಯಾಗಿ ಸುಧೀರ್ಘ ಎಂಟು ದಶಕಗಳ  ಕಾಲದ ಗ್ರಾಹಕರ ಸೇವೆಯ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಗೊಂಡಿರುವುದರೊಂದಿಗೆ ಶಾಲಾ ಮಕ್ಕಳ ಬಳಕೆಯ ಸುಣ್ಣದ ಬಳಪ, ಪುಸ್ತಕ, ಬೈಂಡಿಗ್ ಪೇಪರ್, ಔಷದಿಗಳ ಬೇರು,ದಿನಸಿ ಸಾಮಾಗ್ರಿ,ಕೃಷಿ ಉಪಕರಣಗಳು,ಗಾಜಿನ ಬಾಟಲಿಯ ಮರದ ಮಚ್ಚಳಗಳು, ಪೇಂಟಿಂಗ್ ಹಾಗು ಹಾರ್ಡ್‌ವೇರ್ ಉಪಕರಣಗಳು,ಮನೆ ಬಳಕೆಯ ವಸ್ತುಗಳು,ಗ್ರಾಮೀಣ ಕರಕುಶಲ ಸಾಮಾಗ್ರಿಗಳು ಹೀಗೆ ನೂರಾರು ಸಾಮಗ್ರಿಗಳನ್ನು  ಸೂರಿನಡಿ ತಾಲ್ಲೂಕಿನ ಗ್ರಾಹಕರಿಗೆ ಪೂರೈಸುವ ಜಿಲ್ಲೆಯ ಏಕೈಕ ಪ್ರತಿಷ್ಠಿತ ಸಂಸ್ಥೆಯಾಗಿ ಪ್ರಸಿದ್ದಿ ಪಡೆದಿತ್ತಲ್ಲದೆ ವ್ಯಾಪಾರದ ಉದ್ದಾತ ಧೈಯಾದರ್ಶಗಳ‌ ಮೂಲಕ‌ ಜನ ಮೆಚ್ಚಗೆಗೆ ಪಾತ್ರವಾಗಿತ್ತು.ಇಂದು ದೇಶ- ವಿದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಹಾಗು ಒಂದೆ ಸೂರಿನಡಿ ಎಲ್ಲಾ ರೀತಿಯ ಜನೋಪಯೋಗಿ ವಸ್ತುಗಳು ಸಿಗುವ ಅಧುನಿಕ ವ್ಯವಹಾರಿಕ  " ಮಾಲ್ " ಸಂಸ್ಕ್ರತಿಯ ಮಾದರಿ ಕಲ್ಪನೆಯನ್ನು ಅಂದಿನ ಕಾಲದ ಅಗತ್ಯತೆಗೆ ತಕ್ಕಂತೆ  ಸರಿಸುಮಾರು ಏಳೆಂಟು ದಶಕಗಳ ಹಿಂದೆ " ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಇವರ ವಾಣಿಜ್ಯ ಸಂಸ್ಥೆ ತಮ್ಮ ವೈವಿದ್ಯಮಯ ವ್ಯಾಪಾರದ ಮೂಲಕ ಶಿವಮೊಗ್ಗ  ಜಿಲ್ಲೆಗೆ ಪರಿಚಯಿಸಿದ್ದು ಶ್ರೀಯುತರ ವ್ಯಾಪಾರೀ ಕ್ಷೇತ್ರದ ದೂರದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ.ತಮ್ಮ ಸಹೋದರರು ಹಾಗು ಪುತ್ರರ ಸಹಕಾರದಿಂದ ಸುಧೀರ್ಘ ಎಂಟು ದಶಕಗಳ ಕಾಲ ವ್ಯಾಪಾರಿ ವೃತ್ತಿಜೀವನ, ವ್ಯವಹಾರದ ಶಿಸ್ತು,ಗ್ರಾಹಕರೊಂದಿಗಿನ ಅನ್ಯೋನತೆಗಳಿಂದಾಗಿ ತಮ್ಮ ಸಹ ವರ್ತಕರ ಗೌರವಾಧಾರಗಳಿಗೆ ಪಾತ್ರರಾಗಿದ್ದ ಟಿ.ವಿ ಬಾಲಕೃಷ್ಣ ಶೆಣೈ ತೀರ್ಥಹಳ್ಳಿ ವರ್ತಕ ವಲಯದ " ಭೀಷ್ಮ " ಎಂದರೆ ತಪ್ಪಾಗಲಾರದು. ಮೊದಲ ಮಡದಿ ಮನೋರಮಾರವಲ್ಲಿ ಮಗಳು ವಿಜಯಾ, ಮಗ ಅನಂತ ಶಣೈ ಮತ್ತು ರಘುನಾಥ ಶಣೈ, ಮೊದಲ ಮಡದಿಯ ನಿಧನನಂತರ ದ್ವಿತಿಯ ಮಡದಿ ರಮಣಿಯವರಲ್ಲಿ  ಮಗಳು ಅನುರಾಧ ಮತ್ತು ಮಗ ನಾಗರಾಜ ಶಣೈ, ರಮಣಿಯವರ ನಿಧನನಂತರ, ಮೂರನೇ ಮಡದಿ ಶಾಂತಾ ಅವರಲ್ಲಿ ಶ್ರೀಕಾಂತ ಶಣೈ ಹೀಗೆ ಏಳು ಮಕ್ಕಳು, ಐವರು ಸಹೋದರಿಯರು ಇಬ್ಬರು ಸಹೋದರರನ್ನು ಹೊಂದಿದ್ದ ಟಿ.ವಿ ಬಾಲಕೃಷ್ಣ ಶೆಣೈ ಇವರು 29-10-1996 ರ ತಮ್ಮ‌ಎಂಬತ್ತೊಂದರ ವಯಸ್ಸಿನಲ್ಲಿ ವಿಧಿವಶರಾದ ಬಳಿಕ ಬಾಲಕೃಷ್ಣ ಶೆಣೈಯವರ ಸಂಸ್ಥೆಯ ವ್ಯವಹಾರಗಳನ್ನು ಇವರ ಸಹೋದರರು ಹಾಗು ಪುತ್ರರು ಮುಂದುವರೆಸಿಕೊಂಡು ಬಂದರಾದರೂ ಕಾಲಕ್ರಮೇಣ ಅವರ ಮಾಗಿದ ವಯಸ್ಸು ಹಾಗು ಸಂಸ್ಥೆಯ ವ್ಯವಹಾರಗಳನ್ನು ಮುಂದವರೆಸಿಕೊಂಡು ಹೋಗಲು ಅಗತ್ಯವಾದ ಕೌಟುಂಬಿಕ ಸದಸ್ಯರ ಕೊರತೆಯಿಂದಾಗಿ  ಸರಿಸುಮಾರು 2007 ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕಾಲದಲ್ಲಿ ಅನಿವಾರ್ಯವಾಗಿ ಸಂಸ್ಥೆಯ ವ್ಯವಹಾರವನ್ನು ಸ್ಥಗಿತಗಿಳಿಸುವ ಮೂಲಕ ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಸಂಸ್ಥೆ ಇತಿಹಾಸದ ಪುಟವನ್ನು ಸೇರಿತು.ಇಂದು ಬಾಲಕೃಷ್ಣ ಶೆಣೈ ಇವರ ಸಂಸ್ಥೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ದಶಕಗಳು ಉರುಳಿದರೂ ಗ್ರಾಹಕರಿಗೆ ಸಕಾಲಕ್ಕೆ  ವಸ್ತುಗಳ ಅಗತ್ಯತೆ ಬಂದಾಗ " ಬಾಲಕೃಷ್ಣ ಶೆಣೈ ಮತ್ತು ಸಹೋದರ" ರ ಬಹುಪಯೋಗಿ ಸಂಸ್ಥೆಯ ನೆನಪುಗಳು ಮನಸ್ಸಿನಾಳದಲ್ಲಿ ಹಾದುಹೋಗುವುದಲ್ಲದೆ ತೀರ್ಥಹಳ್ಳಿ ತಾಲ್ಲೂಕಿನ ನಾಗರೀಕರಿಗೆ ಈ ಸಂಸ್ಥೆಯ ಸೇವೆಯ ಅಲಭ್ಯತತೆಯ ಕೋರಗು ಇಂದಿಗೂ ಕಾಡುತ್ತಿರುವುದಲ್ಲದು ಸುಳ್ಳಲ್ಲ.ಟಿ.ವಿ ಬಾಲಕೃಷ್ಣ ಶೆಣೈ, ಅವರ ಸಹೋದರರು ಹಾಗು ಪುತ್ರರ ವ್ಯವಹಾರಿಕ ಕ್ಷೇತ್ರದ ಸಾರ್ವಜನಿಕ ಸುಧೀರ್ಘ ಸೇವೆಗೆ ತೀರ್ಥಹಳ್ಳಿ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ.

ಬರಹ : ನವನೀತ್ ಮಕ್ಕಿಮನೆ  ( 9481319601 ) thank you nanni

May 2, 2020

Lock down 3




It is terribly upsetting to hear that lock down is extended. Government should have made arrangement to transport people held up in different places. Miss my daughter. She has been out there for more than 3 months. When she was just about to return the lock down was declared .

Was feeling down in the doldrums. Went to fetch milk and was waiting 0 for the lift to take me home. The powercut was on and the lift takes ages to come down when it operates on back up. So i was listening to a child cry. I realised the child was not actually crying..but listening to its own sound/ different ways of crying and it made me smile. 😊 Realized with a jolt that though the ground floor houses had balcony there was nothing for them to look at except the party hall/pool walls, and here i was complaining about not being able to go out. I have three balconys overlooking lovely trees, and enjoy looking at birds, bees and road. Spotted two new variety of birds. Have yet to identify them
#lockdown #musings #rambling