1. ಕೋವಿಡ್ ನಿಂದಾಗಿ ಆಕೆ ಸಾವನ್ನು ಅಪ್ಪಿರಿವುದಾಗಿ ಡಾಕ್ಟರ್ ಹೇಳಿದ್ರು. ಬೇರೆ ಊರಿನಲ್ಲಿರುವ ಗಂಡನಿಗೆ ತಿಳಿಸಿದಾಗ, ದೇಹವನ್ನು ಇಟ್ಟಿರಿ, ನಾನು ಬಂದ ಮೇಲೆಯೇ ದಹನ ಅಂತ ಹೇಳಿಟ್ಟರು. ದೂರದ ಊರಿನಿಂದ ಮನೆ ತಲುಪಿದಾಗ ಮೂರು ದಿನ. ಅಂತ್ಯ ಕ್ರಿಯೆಗೆ ಮೊದಲು ಸ್ನಾನಕ್ಕೆ ಅಕೆಯ ದೇಹವನ್ನು ಬಚ್ಚಲು ಕೋಣೆಗೆ ಒಯ್ದಾಗ ಕ್ಷೀಣವಾಗಿ ಉಸಿರಾಡುತ್ತಿರುವ ಅನುಮಾನ..ಕೂಡಲೇ ಆಸ್ಪತ್ರೆಗೆ ಸೇರಿಸಿದರಿಂದ ಆಕೆ ಚೇತರಿಸಿಕೊಂಡಳು...
2. ಆಕೆಗೆ ಜನರೇಂದರೆ ಜೀವ. ಮನೆಯಲಿನ್ ಯಾವಾಗಲೂ ಗಲಗಳ, ಮಾತು ನಗು...ಅಂತಹ ಮಹಿಳೆಗೆ ಕೊರೊನ ಕಾಲದಲ್ಲಿ ತುಂಬಾ ಮನಸ್ಸು ಕುಗ್ಗಿತು. ವಯಸ್ಸಾಗಿದ್ದರಿಂದ ಹೊರ ಬೀಳುತ್ತಿರಲಿಲ್ಲ. ಮಾತ್ರವಲ್ಲ ಮಕ್ಕಳು ಮನೆಗೆ ಬೇಕಾದ ಸಾಮಾನು ಸರಂಜಾಮು ಆನ್ ಲೈನ್ ನಲ್ಲಿ ಅವರಿಗೆ ತಲುಪುವಂತೆ ಮಾಡುತ್ತಿದ್ದರು. ಹಾಗಿದ್ದರೂ ಮನೆಯಲ್ಲಿರುವ ಗಂಡ ಹೆಂಡತಿ ಇಬ್ಬರಿಗೂ ಕೋವಿಡ್ ಪಾಸಿಟಿವ್. ತೀವ್ರ ವಾದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಗಂಡ ಚೇತರಿಸಿದರು....ಹೆಂಡತಿ ಅಸುನೀಗಿದರು. ಡಾಕ್ಟರ್ ಪರಿಚಿತರಾದರಿಂದ..ಮನೆಯ ಮಕ್ಕಳಿಗೆ ವಿಡಿಯೋ ಮೂಲಕ ಅವರ ಕೊನೆಯ ದರ್ಶನ ವಾಯಿತು... ದೇಹವನ್ನು ಅಲ್ಲಿಂದಲೇ ಬಿಳಿ ಬಟ್ಟೆಯಲ್ಲಿ ಸುತ್ತಿ, ನಿರ್ಭಾವುಕರಾದ ಕರ್ಮಚಾರಿಗಳಿಂದ ಆಕೆಯ ದೇಹವನ್ನು ವ್ಯಾನ್ ನಲ್ಲಿ, ಇತರೆ ದೇಹದೊಂದಿಗೆ ಬಿಸಾಕುವ ದೃಶ್ಯ ಮನೆ ಮಂದಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ...ಎಷ್ಟೊಂದು ಜನರಿಗೆ ಬೇಕಾದವರು..ಅನಾಥರಾಗಿ ಸ್ಮಶಾನಕ್ಕೆ ಸಾಗಿಸಲ್ಪಟ್ಟರು....
☹️☹️


