ನೆನಪಿನ ಸಂಚಿಯಿಂದ

August 6, 2026

ಹುಟ್ಟು ಹಬ್ಬ, ಇಶಾ ವಿಲಾಸ, ಗೋವಾ

 ತಂಗಿ ಯು ಎಸ್ ನಿಂದ ಬಂದಿದ್ದಾಳೆ. ಅಮ್ಮ, ಮಾಲವಿಕಾ, ಹಾಗೂ ಇಬ್ಬರೂ ತಮ್ಮಂದಿರ ಹೆಂಡತಿಯರ ಹುಟ್ಟು ಹಬ್ಬ ಒಂದೇ ದಿನ...ಗೋವಾ ದಲ್ಲಿ ಆಚರಿಸುವುದೆಂದಾಯಿತು. ಆದರೆ ಚಿಕ್ಕ ತಮ್ಮನ ಮಕ್ಕಳಿಗೆ ಹುಷಾರಿರಲಿಲ್ಲ, ಹಾಗೂ ಸ್ಕೂಲ್, ಪರೀಕ್ಷೆ ತಪ್ಪಿಸಲಾಗುವುದಿಲ್ಲವೆಂದು, ಅವರನ್ನು ಬಿಟ್ಟು ನಾವು ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿದೆವು.

ಇಶಾವಿಲಾಸ ತುಂಬಾ ಚೆಂದದ property. ನನ್ನ ತಮ್ಮ ಯಾವಾಗಲೋ ಮಹೀಂದ್ರ ಟೈಮ್ ಶೇರ್ ನಲ್ಲಿ ದುಡ್ಡು invest ಮಾಡಿದ್ದ. ವರ್ಷಕ್ಕೆ ಒಮ್ಮೆ ಭಾರತ ದೇಶದ ಯಾವುದಾದರೂ destination, ಒಂದು international ಟೂರ್ ಮಾಡಬಹುದು. ಹಾಗಾಗಿ ಅವನು ಹಲವಾರು ದೇಶ ತಿರುಗಿದ್ದಾನೆ. ಇಶಾ ವಿಲಾಸ is very tastefully decorated. ಎರಡು ವಿಲಾ ಗಳನ್ನು , ಒಂದು private ಸ್ವಿಮ್ಮಿಂಗ್ ಪೂಲ್ ನಮಗೆ ಕೊಟ್ಟಿದ್ದರು. ದಿನಕ್ಕೆ 38,000 ಸಾವಿರ..ಊಟ ತಿಂಡಿ ಗೆ ಬೇರೆ ..ಈ 38,000 ಅವನು member ಆಗಿದ್ದಕ್ಕೆ ಇಲ್ಲದಿದ್ದರೆ ಜಾಸ್ತಿ ಇದೆಯೇನೋ..ಆರಾಮಾಗಿ ಒಂದು 15 ಜನ ತಂಗಬಹುದಾದ ಅರಮನೆ ಗಾತ್ರದ ಕೊಠಡಿಗಳು

Nice to have a rich brother 😁😁. ನಮಗೆ ಯಾವುದಕ್ಕೂ spend ಮಾಡಲಿಕ್ಕೆ ಬಿಡಲಿಲ್ಲ. ತುಂಬಾ ತುಂಬಾ ಎಂಜಾಯ್ ಮಾಡಿದೆವು. 🙏🙏❤️👍







































ಅಲ್ಲಿಂದ ವಗಾಟರ್ ಬೀಚ್, ಚಪೋರ ಕೋಟೆಗೆ ಭೇಟಿ ನೀಡಿದೆವು. ಒಳ್ಳೆ ಮೀನು ಊಟ ಮಾಡಿದೆವು. ಅಕ್ಕನಿಗೆ ಒಳ್ಳೆಯ ಶಾಖಾಹಾರಿ option ಕೂಡ ಸಿಕ್ಕಿತು.

ಗೂಗಲ್ ನಲ್ಲಿ ಇಷಾವಿಲಾಸ ಚೆಕ್ ಮಾಡಿ

ಗೋವಾ ಟೂರ್

July 24, 2026

4 ಲಕ್ಷ ವಿಸಿಟರ್ಸ್ 🙏

 ಒಂದೇ ತಿಂಗಳಲ್ಲಿ 1 ಲಕ್ಷ ಜನರು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಾರೆ.  ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೂ. ಏನು ಓದುತ್ತಾರೆ ಎಂಬ ಕೂತೂಹಲ  ನನಗೆ.

ಮೊನ್ನೆ ರಾತ್ರಿ ಎಚ್ಚರವಾದಾಗ, ನಾಳೆ ಇಡ್ಲಿ ಅದರ ಜತೆಗೆ ಒಂದು ಹೊಸ ಪ್ರಯೋಗ/experiment ನ ವಡೆ ಮಾಡಿದ್ರೆ ಹೇಗೆ ಅಂತ ರಾರಿ ಎರಡು ಗಂಟೆಗೆ ಎದ್ದು ಉದ್ದಿನಬೇಳೆ ನೆನೆಯಲು ಹಾಕಿದೆ.

ಕೋವಿಡ್ ಸಮಯದ ಲಾಕ್ ಡೌನ್ ನೆನಪಾಯಿತು. ಎಷ್ಟೊಂದು ಜನರು innovative ವಿಡಿಯೋ ಗಳು ಹಾಕುತ್ತಿದ್ದರು. ಅದರಲ್ಲಿ ತಿಂಡಿದೆ ಜಾಸ್ತಿ. ಬೇರೆ ಬೇರೆ ನಮೂನೆ ವಡೆಗಳನ್ನು ಜನರು ಮಾಡಿದ್ದೆ ಮಾಡಿದ್ದು...🙂.  ಈಗ ನಮ್ಮ ಮನೆಯ ಎದುರು ರಸ್ತೆ, ಹಾಗೂ ಓವರ್ bridge, ಮೆಟ್ರೋ ರೈಲು ಅಂತ ರಾತ್ರಿ ಇಡೀ ಸದ್ದು ಗದ್ದಲ. ಅದು ಹೇಗೆ ಲಾಕ್ ಡೌನ್ ಸಮಯದಲ್ಲಿ ಎಲ್ಲ ಶಾಂತ ವಾಗಿತ್ತು ಅಂತ ಆಶ್ಚರ್ಯ. ನಾನಂತು ಬೇಗ ಮನೆ ಕೆಲಸ, ಅಡುಗೆ ಕೆಲಸ ಮುಗಿಸಿ, ಕುರುಕಲು ತಿಂಡಿ ಮೇಲ್ತ ಪುಸ್ತಕ ಓದುತ್ತಿದ್ದೆ, ಗಾರ್ಡನ್ ಸರಿ ಮಾಡುತ್ತಿದ್ದೆ... 

ಸುಮ್ನೆ.....as usual

ನಾನು ಮಾಡಿದ್ದ  ಇಡ್ಲಿ ವಡೆ...ಅದನ್ನು you tube ನಲ್ಲಿ ಹಾಕಿದಾಗ AI ನಿನಗೂ ಈ video ದಲ್ಲಿ ಅಳವಡಿಸಲಾ ಅಂತ ಕೇಳಿತು. ತಮಾಷೆ ಗೆ ಹೂಂ ಅಂತ , ನನ್ನದೊಂದು selfie ಕೊಟ್ಟೆ...ನೀವೂ ನೋಡಿ....ನನ್ನ family ಗ್ರೂಪ್ ಎಂಜಾಯ್ ಮಾಡಿದ್ರು...

ಇಡ್ಲಿ ವಡಾ ಚಟ್ನಿ ಸಾಂಬಾರು

ಮತ್ತು ವಡೆ ವಿಷಯ ಮಕ್ಕಳು ತುಂಬಾsss ಹೋಗಳಿದ್ರು. ಮಾಲವಿಕಾ ಅಂತೂ ಅಮ್ಮ ಹೋಟಲ್ ಶುರು ಮಾಡಿದಾಗ ಈ ವಡೆ ಮಾಡುವಾ ಅಂದ್ಲು...ಅದಕ್ಕೆ recipe ಶೇರ್ ಮಾಡಲ್ಲ 😁❤️🙏❤️👍









July 21, 2026

ಬಿರಿಯಾನಿ - ಏಕ್ ಕಹಾನಿ 😁

 ಒಂದು ಹದಿನೈದು ದಿನದ ಹಿಂದೆ ಬೆಳಿಗ್ಗೆ ಬೇಗ ಎದ್ದಿದ್ದೆವು. ಅಕ್ಕನಿಗೆ ದೊಡ್ಡ ಕೇಕ್ ಆರ್ಡರ್ ಇತ್ತು. 'ಇನ್ನೂ ಸಮಯ ಇದೆ, ಇಷ್ಟು ಬೇಗ ಕೇಕ್ ತಯಾರಿ ಮಾಡಲ್ಲ' ಅಂದ್ಲು. ಹಾಗಾದರೆ ವಾಕ್ ಹೋಗಿ ಬರುವಾ ಅಂತ ಅಂದೆ. ಮನೆ ಬಾಗಿಲು ತೆರೆದ ಕೂಡಲೇ ಘಮ್ ಎನ್ನುವ ಬಿರಿಯಾನಿ ಪರಿಮಳ. ನಾನೂ ಅಕ್ಕ ವಾವ್ ಅನ್ನುತ್ತಾ, ಇಷ್ಟು ಬೇಗ ಬಿರಿಯಾನಿಯಾ ಅಂತ ಅಕ್ಕ ಅಂದ್ರೆ, ದೊಡ್ಡ ಆರ್ಡರ್, ದೂರದ ದಾರಿಯಿದ್ರೆ ಮೊದಲೇ ಮಾಡಬೇಕಲ್ಲವೇ ಅಂದೆ. ನಮ್ಮ ಅಪಾರ್ಟ್ಮೆಂಟ್ ನಲ್ಲಿ ಯಾರೋ ಬಿರಿಯಾನಿ ಮಾಡಿ, ಅದನ್ನು ದೊಡ್ಡ ಅಲ್ಯೂಮಿನಿಯಂ ಪಾತ್ರೆಯಲ್ಲಿ, ಮುಚ್ಚಳಕ್ಕೆ ಸೀಲ್ ಮಾಡಿ ಲಿಫ್ಟ್ ನಲ್ಲಿ ಒಯ್ದು, ಟೆಂಪೋ ದಲ್ಲಿ ಹೋಗುವುದನ್ನು ಸುಮಾರು ಬಾರಿ ಗಮನಿಸಿದ್ದೇನೆ.

ಮನೆ ಬಾಗಿಲ ಬಳಿಯಲ್ಲಿದ್ದ  ವಾರ್ತಾ ಪತ್ರಿಕೆಯನ್ನು ಮನೆಯೊಳಗಿಟ್ಟು ಹೊರಟೆವು. ವಾಪಸ್ ಮನೆಗೆ ಬಂದ್ರೂ ಅದೇ ಪರಿಮಳ. ನಾನು 'ಬಾಲ್ಕನಿ ಬಾಗಿಲು ಓಪನ್ ಇದೆ ಅಲ್ಲವೇ ಅಲ್ಲಿಂದ. ನಮ್ಮ ಬ್ರೆಕ್ಫಾಸ್ಟ್ ಮಾಡ್ತಾ ಅಕ್ಕ ನಾನು ಪದಬಂಧ ಬಿಡಿಸ್ತಾ ಇದ್ವಿ... ಈ ಬಿರಿಯಾನಿ ಪರಿಮಳ ಮೂಗಿಗೆ ಅಡರುತ್ತಾ ಇತ್ತು ಇನ್ನೂ...
ಈಗ
ಅಲ್ವೇ ನಮ್ಮ ಬಿಲ್ಡಿಂಗ್ ನ ಬಿರಿಯಾನಿ ಇರಲಿಕ್ಕಿಲ್ಲ, ನ್ಯೂಸ್ ಪೇಪರ್ ಬಳಿ ಜಾಸ್ತಿ ಪರಿಮಳ ಬರ್ತಾ ಇದೆ..ಬಹುಷ್ಯ ನಮ್ಮ ಪೇಪರ್ ನವ ನಿನ್ನೆ ಬಿರಿಯಾನಿ ತಂದ ಬ್ಯಾಗ್ ನಲ್ಲಿ ನ್ಯೂಸ್ಪೆಪರ್ ತಂದಿರಬಹುದು ಎಂದೇ.
ಅದಕ್ಕೆ ಅಕ್ಕ 'ಅಮ್ಮ ಬಿರಿಯಾನಿ flavor essence ಬಂದಿದೆ ಕಣೆ..ಅದರ ADVERTISEMENT ಅಂತ ಪೇಪರ್ ಮೇಲೆ ಸುರಿದಿರಲೂ ಬಹುದು ಅಂದ್ಲು...ನಾನು - ಯಾಕೆ ಬಿರಿಯಾನಿ ಗೆ ಹಾಕಲಿಕ್ಕಾ ಅಂತ ಕೇಳಿದೆ
ಅಕ್ಕ - ಅಲ್ಲ ಆಮ್ಮ್ ಈಗ ಬಿರಿಯಾನಿ flavor ಕೇಕ್ trending ಅಂದ್ಲು...ಸಧ್ಯಕ್ಕೆ ನನಗೆ ಅಂತಹ ಆರ್ಡರ್ ಬರದಿದ್ರೆ ಸಾಕು ಅಂದ್ಲು....🤔😧
ಆಮೇಲಾಮೇಲೆ ಈ ಬಿರಿಯಾನಿ ಪರಿಮಳ began cloying and ಸಣ್ಣಕ್ಕೆ ತಲೆ ನೋವು ಶುರು ಆಯಿತು. ನಾನು ಆ ವೃತ್ತ ಪತ್ರಿಕೆಯನ್ನು ನ್ಯೂಸ್ಪಪರ್ ಪೇರಿಸಿಡುವ ಕಪಾಟಿನಲ್ಲಿ ಹಾಕಿ ಬಾಗಿಲು ಹಾಕಿದೆ. ಆ ಕಪಾಟಿನಲ್ಲೇ ಕೆಳಗಡೆ rack ಗಳಲ್ಲಿ ನಮ್ಮ ಚಪ್ಪಲಿ, ಶೂ ಗಳೂ ಇಡುವ ಜಾಗ...ಪ್ರತಿ ಸಲ ಅದರ ಬಾಗಿಲು ತೆರೆದಾಗ ಬಿರಿಯಾನಿ ಪರಿಮಳ/ವಾಸನೆ...
ಮೂರ್ನಾಲ್ಕು ದಿನಗಳ ನಂತರ ವಾಸನೆ ತಲೆಚಿಟ್ಟು ಹಿಡಿಯಲು ಶುರುವಾಯ್ತು...ಆ ಪತ್ರಿಕೆ ಹುಡುಕಿ ತೆಗೆದು...ಹೊರಗಡೆ ಕಸದ ಬುಟ್ಟಿಯಲ್ಲಿ ಹಾಕಿದೆ
ನೀವೇ ನೋಡಿ ಅದರ ಚಿತ್ರ ಏನು ಹೇಳುತ್ತೆ 😁😁😁
ಒಳ್ಳೆ ಕತೆ ಮಾರಾಯ್ರೆ...



 





July 14, 2026

ರಗಳೆಗಳು

 ಕಿರಿಕಿರಿ -1

ರಾತ್ರಿ ಎಲ್ಲರೂ ಒಳ್ಳೆಯ ನಿದ್ದೆಯಲ್ಲಿರುವಾಗ ಸೈಲೆಂಸರ್ ತೆಗೆದ ಬೈಕ್ ಅನ್ನು ತುಂಬಾ ಸದ್ಫು ಮಾಡುತ್ತಾ ಚಲಾಯಿಸುವುದು ಜಾಸ್ತಿಯಾಗಿದೆ. ಶ್ರೀಕಾಂತ್ ಗೆ ಹುಷಾರಿಲ್ಲದೆ , ಮಲಗುವುದು ತುಂಬಾ ಕಷ್ಟವಾಗುತ್ತಿತ್ತು...😧. ಇದಕ್ಕೆ ಕಾನೂನು ನಿರ್ಬಂಧನೆ ಇಲ್ಲವಾ???

ಕಿರಿಕಿರಿ - 2

gay ಗಳು ಮೊದಲೂ ಇದ್ರೂ ಈಗಲೂ ಇದ್ದಾರೆ.... straight intimacy ನೆ ನೋಡಕ್ಕೆ irritate ಆಗುತ್ತೆ,  ಅಂಥದ್ದರಲ್ಲಿ ಇತ್ತೀಚಿಗೆ awareness ಅಂತ ಸಿನಿಮಾದ ಕತೆಗೆ ಬೇಡದಿದ್ದಲ್ಲೂ 'ಗೆ' intimacy scene ಗಳನ್ನು ತುರುಕುವುದು ಕಿರಿಕಿರಿ ಎನ್ನಿಸುತ್ತಿದೆ. ಅದೂ ಕುಟುಂಬದವರೆಲ್ಲ ಸೇರಿ ನೋಡುವಾಗ...

ಕಿರಿಕಿರಿ - 3

ಹಲವಾರು ಬಾರಿ ನನ್ನ  shorts ರೀಲ್ ಅನ್ನು  ಯೂ ಟ್ಯೂಬ್ ತೆಗೆದುಬಿಟ್ಟು..ಸ್ಟೈಲ್ ಆಗಿ ಒಂದು ಮೈಲ್ ಕಳಿಸುತ್ತೆ.  ಮ್ಯೂಸಿಕ್ copyright ಅನ್ನು ನಾನು  ನಮೂದಿಸಿಲ್ಲ, ಅಥವಾ ಅದು ಯಾರ ರೈಟ್ಸ್ ನಲ್ಲಿರೋ ಮ್ಯೂಸಿಕ್ ಅವರು ಅದನ್ನು ತೆಗೆದಿದ್ದಾರೆ.. ಮುಂತಾದ್ದು explanation ಗಳು..ಅಥವಾ ಕೆಲವು ವಿಡಿಯೋ ಗಳ ಸೌಂಡ್ ಮ್ಯೂಟ್  ಮಾಡಿ ಬಿಡುತ್ತೆ....ಅದರ ಬದಲು ನಮಗೆ ವಾರ್ನ್ ಮಾಡಿ, ನಾವು ಸರಿ ಮಾಡದಿದ್ದಲ್ಲಿ ನಮ್ಮ ಶಾರ್ಟ್ಸ್ ರೇರ್ಲ್ ತೆಗೆದು ಬಿಡಲಿ ಯಾರು ಬೇಡ ಅನ್ನುತ್ತಾರೆ?? ಹ್ಮ್?
ಅದೇ ಒಂದು ಸಲ ಒಂದು ನಿದ್ದೆ ಬರದ ರಾತ್ರಿ.. ಲೈವ್ ಅಡಿಗೆ ಮೇಲೆ ಕ್ಲಿಕ್ ಮಾಡಿದೆ. ಅದು ಕೆಲ ಹೊತ್ತಲ್ಲಿ ಕ್ಲೋಸ್ ಆಯಿತು....ಸ್ಕ್ರೀನ್ ತನ್ನಷ್ಟಕ್ಕೆ scroll ಆಗಿ ನೆಕ್ಷ್ಟ್ ಲೈವ್ ವಿಡಿಯೋ ಮೇಲೆ ಹೋಯಿತು...ನಾನು ಕ್ಲಿಕ್  ಮಾಡಲಿಲ್ಲ..ಆದರೂ ಅದರಲ್ಲಿ ಮಧ್ಯ ವಯಸ್ಕ ಹೆಂಗಸು ಮುಕ್ಕಾಲು ಭಾಗ ಎದೆ ಕಾಣುವ ನೈಟಿ..ಮಧ್ಯ ಮಧ್ಯ ಎದೆ ಕುಣಿಸುವುದು..ಕೈನಿಂದ ಅಸಹ್ಯ ಸಂಜ್ಞ ಮಾಡುವುದು....ಕಾಮೆಂಟ್ ನಲ್ಲಿ ಕೆಲವರು 'ಆಂಟಿ ಔರ್ ದಿಖಾವ್ ಅನ್ನೋದು..ಆಂಟಿ ಇಸ್ ಉಮರ್ ಮೇ ಭಿ ಅಚ್ಛೇ maintain ಕಿಯ ಹೈ body ಕೋ'.. ರ್ಆಂಟಿ ಸಠಿಯಾ ಗಯಿ ಹೈ...ಅನ್ನೋದು...ಮತ್ತು ಆಕೆ 31 ರೂ ಕೊಟ್ಟು subscribe ಮಾಡಿ ಅನ್ನೋದು ..ನೋಡಿ ಉರಿದು ಹೋಯ್ತು...ಅಂತದೆಲ್ಲ ಯೂ ಟ್ಯೂಬ್ ಬ್ಲಾಕ್ ಮಾಡಲ್ಲ ಅಂತ ಗೊತ್ತಾಯ್ತು...grrrr

June 29, 2026

ಕೆಸುವಿನ ಗಡ್ಡೆಯ ಬೊಡ್ಕೊ

 ನನ್ನ ಬ್ಲಾಗ್ visitors ಸಂಖ್ಯೆ 3 ಲಕ್ಷ ದಾಟಿದೆ. Thank You 🙏🙏 ಅದಕ್ಕೆ ಒಂದು ಗೋದಿಹಿಟ್ಟು + ಖರ್ಜೂರ ಕೇಕ್ ಮಾಡಿ ಅದಕ್ಕೆ ನೇರಳೆ ಹಣ್ಣಿನ ಕ್ರೀಮ್ ಹಾಕಿ decorate ಮಾಡಿದೆ ❤️


ಈಗ ಒಂದು ನನ್ನ fav ರೆಸಿಪಿ. ಅಮ್ಮ ಇದನ್ನು ಮಾಡ್ತಿದ್ರು. ಸುಮಾರು 25 ವರ್ಷಗಳ ನಂತರ ಇದನ್ನು ಮಾಡಿ ಸವಿದೆ. 🙏🙏

..ಕೆಸುವಿನ ಗೆಡ್ಡೆಯ dry item..

ಕೆಸುವಿನ ಗೆಡ್ಡೆಗಳನ್ನು ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್ ನಲ್ಲಿ ಮೂರು ಸೀಟಿ ಬೇಯಿಸಿಕೊಳ್ಳಿ.  ಕಾಲು ಚಮಚೆಯಷ್ಟು ಸಾಸಿವೆ, ಒಂದು ತುಂಡು  ಹಿಂಗು ಪುಡಿಮಾಡಿಟ್ಟುಕೊಳ್ಳಿ.


ಸ್ವಲ್ಪ ಹೆಚ್ಛೇ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹಾಕಿ ಸಿಡಿದ ಮೇಲೆ ಮಾಡಿಟ್ಟ ಪುಡಿ, ಖಾರದ ಪುಡಿ, ಅರಿಶಿನ ಹಾಕಿ ಕೈಯಾಡಿಸಿ. ಬೆಂದ ಸಿಪ್ಪೆ ಬೇರ್ಪಡಿಸಿ ಕಟ್ ಮಾಡಿದ  ಗೆಡ್ಡೆಗಳನ್ನು ಬೆರೆಸಿ. ಸ್ವಲ್ಪ ಉಪ್ಪು ,ಚಿಟಿಕೆ ಸಕ್ಕರೆ, ಕರಿಬೇವು ಹಾಕಿ ಕ್ಷಣ ಹೊತ್ತು ಕೈಯಾಡಿಸಿ. ಎರಡು ನಿಮಿಷ ಮುಚ್ಚಿಡಿ. ಆಮೇಲೆ ಕಾಲು ಟಿ ಸ್ಪೂನ್ ನಷ್ಟು ಅಕ್ಕಿ ಹುಡಿ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ.  ಬೇಕಿದ್ದಲ್ಲಿ ಸ್ವಲ್ಪ ಹುಣಸೆ ರಸ ಬೆರೆಸಬಹುದು. ನನಗಿಷ್ಟ ಈ side dish.. 👍


ಕೆಲವರಿಗೆ ಗಂಟಲಲ್ಲಿ ಕೆರೆತ ಆಗಬಹುದು. ಹೆದರಬೇಕಿಲ್ಲ ಮಜ್ಜಿಗೆ ಕುಡಿಯಿರಿ/ಮೊಸರು ತಿನ್ನಿ. recipe ರೆಡಿ ಮಾಡುವಾಗ ಹುಣಸೆ ರಸ ಹಾಕಿದ್ರೂ ನಡೆಯುತ್ತೆ. 
#stuffsthatkonkaniseat 😁😁❤️
eat at your own risk*

#ಅನ್ನದಾತಾಸುಖೀಭವ

June 25, 2026

ಒಂದರ್ಧಕತೆ 🤔🙂🙂

 ಜೂನ್ 2015 ನಲ್ಲಿ ಬರೆದಿದ್ಫು draft ನಲ್ಲಿತ್ತು : ಓದಿ ನಾನೇ ಬರೆದಿದ್ದಾ ಅಂತ 😎😎

ಆತನಿಗೂ 'ಆಕೆ'ಗೂ ಮೊದಲಿನಿಂದಲೇ ಪರಿಚಯ, ಪ್ರೀತಿ. ಅವನೋ ಪೇಟೆಗೆ ಬಂದ ಹಳ್ಳಿ ಗಮಾರ. 'ಆಕೆ' ಶ್ರೀಮಂತ ಕುಟುಂಬದವಳು. ಅವಳ ಕುಟುಂಬದ ಸದಸ್ಯರ ಆಶಯದಂತೆ ಅವಳು ಒಬ್ಬ ಶ್ರೀಮಂತನನ್ನು ವರಿಸಿದಳು. ಅವನು ಊರಿಗೆ ಹೋಗಿದ್ದ ಅವನ ಕಾಯಿಲೆಯ ಅಮ್ಮನನ್ನು ನೋಡಿಕೊಳ್ಳಲು. ಅವಳಮ್ಮನನ್ನು ನೋಡಿಕೊಳ್ಳುತ್ತಿದ್ದ ಕಸ್ತೂರಿಯ ಜತೆ ಅವನು ಮದುವೆಯಾಗಬೆಕೇಂದು ಅವನ ಅಮ್ಮನ ಕೋರಿಕೆಯಂತೆ ಅವನು ಅವಳನ್ನು ಮದುವೆಯಾದ. ಎರಡು ಮಕ್ಕಳ ತಂದೆಯಾದ. ಅಮ್ಮ ಸತ್ತುಹೋದಮೇಲೆ ಪೇಟೆಗೆ ಮರಳಿದ. ಅಲ್ಲಿ ದೊಡ್ಡದೊಂದು ಸಂಸ್ಥೆಯಲ್ಲಿ ಕೆಲಸ. ಆ ಸಂಸ್ಥೆಯಲ್ಲೇ ಭೇಟಿಯಾದಳು ಅವನ ಹಳೇ ಪ್ರೇಯಸಿ. ಅವಳೀಗ ವಿಧವೆ. ಪುನ: ಅವರ ಮಧ್ಯೆ ಸಂಬಂಧ ಚಿಗುರ ತೊಡಗಿತು. 'ಆಕೆ'ಯ ಗಂಡ ಮದುವೆಯಾದ ಆರನೇ ತಿಂಗಳಿಗೆ ಕ್ಯಾನ್ಸರ್ ಗೆ ತುತ್ತಾಗಿ ತೀರಿಕೊಂಡಿದ್ದ. ಆಘಾತ ತಾಳಲಾಗದೇ ಅಪ್ಪನೂ ತೀರಿಕೊಂಡಿದ್ದ. ಈಗ ಈಕೆ ಒಬ್ಬಂಟಿ. ಮಕ್ಕಳೂ ಇರಲಿಲ್ಲ. ಇವನ ಮಕ್ಕಳ ಮೇಲೆ ವಿಶೇಷ ಒಲವು. ಕಸ್ತೂರಿಗೆ  ತನ್ನ ಮನೆಯ ಕೆಲಸಗಳೇ ಆಗುತ್ತಿತ್ತು. ಪೇಟೆಯ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟವೆನಿಸಿತ್ತು. ಮಕ್ಕಳೂ ಈಗ ಶ್ರೀಮಂತ ಆಕೆಯನ್ನು ಒಗ್ಗಿಕೊಂಡು ಅವಳ ಜತೆ ಅವಳ ದೊಡ್ಡ ಮೆನೆಯಲ್ಲಿ ಇರಲು ಇಷ್ಟಪಡುತ್ತಿದ್ದರು.ಇದರಿಂದ ಅವಳ ಹೃದಯಕ್ಕೆ ದೊಡ್ದ ಗಾಯ. ಅವಳ ಗಂಡ ಮತ್ತು ಆಕೆಯ ಬಗ್ಗೆ ಅವರಿವರಿಂದ ಕೇಳುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆ. ಕಸ್ತೂರಿಗೆ ಅವನ ಬಗ್ಗೆ ಪ್ರೀತಿ. ಆದರೆ ಅವನಿಗೆ ಆಕೆಯ ಮೇಲೆ ಪ್ರೀತಿ

ಇಂತಹ ಸಮಯದಲ್ಲೇ ಆಕೆ ನಡೆಸುತ್ತಿದ್ದ ಕಾರ್, ಇವಳ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ಇಬ್ಬರೂ ಮಕ್ಕಳೂ ಸಾವಿಗೀಡಾಗುತ್ತಾರೆ. ಅವನು ಬೇಜಾರಿನಲ್ಲಿ ದೇಶಾಂತರ ಹೋಗುತ್ತಾನೆ. ಇಲ್ಲಿ ದು:ಖತಪ್ತ ಕಸ್ತೂರಿ ಮತ್ತು 'ಆಕೆ'.