December 27, 2017

ಮಗಳ ಬಗ್ಗೆ ವಿಶ್ವವಾಣಿಯಲ್ಲಿ

ಮೊನ್ನೆ ಕ್ರಿಸ್ಮಸ್ ದಿನ ಮಗಳ ಬಿಸ್ಕೂಟ್  ಫ್ಯಾಕ್ಟರಿ ಬಗ್ಗೆ ವಿಶ್ವ ವಾಣಿ ದಿನಪತ್ರಿಕೆಯಲ್ಲಿ ಬಂದಿದೆ. ಕೆಳಗಿನ ಕೊಂಡಿಯಲ್ಲಿ ಓದಿ.

Biscoot Factory





ಇತ್ತೀಚಿಗೆ ಫೇಸ್ ಬುಕ್ ನಿಂದ ಫೋನ್ ನಂಬರ್ ಪಡೆದು ಕೇಕ್ ಆರ್ಡರ್ ಮಾಡಿ ಇಷ್ಟ ಪಟ್ಟದ್ದರು  ..ನಮ್ಮ ಸಂಭಾಷಣೆ ಹೀಗೆ ಸಾಗಿತು. 

"ನನ್ನ ಮಗಳಿಗೆ ಮೊನ್ನೆ ೧೩ ಆಯಿತು. ಇದೆ ಮೊದಲ ಸಲ ಕೇಕ್ ಆರ್ಡರ್ ಮಾಡಿದ್ದೂ. "

ನಾನು-  ಹೌದಾ? ಇಂಟೆರೆಸ್ಟಿಂಗ್ . ಯಾಕೆ? 

"ಹುಟ್ಟಿದ ಹಬ್ಬ ಸೆಲೆಬ್ರೇಟ್ ಮಾಡಿದ್ದೇವೆ. ಆದರೆ ಸುಮ್ಮನೆ ಮನೆಯಲ್ಲಿ ಸಿಹಿ ಖಾರ ತಿಂಡಿ. ಕೇಕ್ ನಲ್ಲಿ ಮೊಟ್ಟೆ ಹಾಕುತ್ತಾರೆಂದು ಭಯ "

ನಾನು-    ಅರೆ ಈಗ ಎಲ್ಲ ಬೇಕರಿಯಲ್ಲಿ ಮೊಟ್ಟೆ ರಹಿತ ಕೇಕ್ ಲಭ್ಯ ವಿದೆಯಲ್ಲವಾ? 

"ಆದರೂ ಬೇರೆ ಐಟಂ ಗಳಿಗೆ ಮೊಟ್ಟೆ ಹಾಕುತ್ತಾರಲ್ಲವಾ? ಅದೇ ಕೈನಿಂದ ಕೇಕ್ ಎಲ್ಲ ಮಾಡುತ್ತಾರೆಂಬ ನನಗೆ ಅನುಮಾನ. ಮೊಟ್ಟೆ ಇದ್ದ ಕೇಕ್ ಒಂದುಸಲ ನಮ್ಮ ಆಫಿಸ್ ಫಂಕ್ಷನ್ ನಲ್ಲಿ 
ಟ್ರೈ ಮಾಡಿದೆ. ಅದು ನನ್ನ ಗಂಟಲಿನಿಂದ ಕೆಳಗಿಳಿಯಲೇ ಇಲ್ಲ. ಹುಷಾರು ತಪ್ಪಿದ ಹಾಗಾಯಿತು. ನಮ್ಮ ಮನೆಯಲ್ಲಿಯಾರಿಗೂ ಇಷ್ಟ ಇಲ್ಲ. ಅತ್ತೆ ಮಾವ ಅಂತೂ ತುಂಬಾ ಸಂಪ್ರದಾಯಸ್ಥರು . ನಿಮ್ಮಿಂದ ಆರ್ಡರ್ ಮಾಡಿದ ಕೇಕ್ ತುಂಬಾ ಇಷ್ಟ ಆಯ್ತು. ಅತ್ತೆ ಮಾವ ಕೂಡ ನೂರು ಸಲ ಕೇಳಿಯಾದ ಮೇಲೆ ತಿಂದಿದ್ದು. "


ಅವರು ಈಗಾಗಲೇ ಮೂರು ಸಲ ಕೇಕ್  ಆರ್ಡರ್ ಮಾಡಿದ್ದಾರೆ. 

ಕೇಕ್- ಕುಕ್ಕೀಸ್ -ಕಪ್  ಕೇಕ್ಸ್ - ಚಾಕಲೇಟ್ - ಪೈಸ್  ಗಳಿಗೆ call or whatsapp 9902825368

ಇನ್ನಷ್ಟು ಕೇಕ್ ಚಿತ್ರಗಳಿಗೆ ಫೇಸ್ ಬುಕ್ ಪೇಜ್  biscootfactory ನೋಡಿ 

ಎಲ್ಲಾರಿಗೂ ಹೊಸ ವರ್ಷ ಶುಭಪ್ರದವಾಗಲಿ 

:-) :-)

December 23, 2017

Metal Wire puzzles

There was this man selling some twisted metal wire contraptions  on the pavement in Malleshwaram. I was intrigued by the various  contraptions in his basket. I asked him what they were for. He said lot of engineering students buy his puzzles and showed me what i had to do ,( maze like wire puzzles and i had to separate/unentangle them )  and gave me one to try. Believe it or not i solved the puzzle within 2 minutes and happily showed it to him thinking he would be impressed/ pleased.





I really do not know what came over him,  he was pissed off. he said i knew all about the game and having fun fooling him at his expense, a poor man who had to sell items on the pavement to make a living. Me and my husband were at our wits end and also had to contend with the dirty looks given by the onlookers and passersby for the seller was lamenting too loudly for our comfort. I bought two metal wire puzzles from him to pacify him.

For the three years i had those contraptions i couldnot solve the puzzle . Every free time was spent with these puzzles . It was great fun. Just when i feel i have unentangled them they r into a tangle again. :-)

Finally when we were about to shift to our own place and also by this time the metal wires had rust in them so i disposed them

Today saw another man selling these wire puzzles and was reminded of the above incident. Also waiting for my husband who has promised to take me out to lunch. Had time on hands hence this quick post
(images from the net)


November 19, 2017

ನಿಜ ಘಟನೆ

 ವಾಕ್ ಮುಗಿಸಿ ಬರುವಾಗ ಕಣ್ಣು ಪೋಸ್ಟ್ ಬಾಕ್ಸ್ ಕಡೆ ಹೊರಳಿತು. . ಪೋಸ್ಟ್ ಬಾಕ್ಸ್ ತುಂಬಿ  ತುಳುಕುತ್ತಾ ಇತ್ತು. ಸಿಕ್ಕ ಎಡೆಯಲ್ಲೆಲ್ಲಾ ಕಾಗದ ಸರ್ಕ್ಯುಲರ್ ಗಳನ್ನು ತುರುಕಿಸಿಟ್ಟಿದ್ದರು.  ಕಸದವರ ಪಾಲಿಗೆ ಎಷ್ಟು ಹೋದವೋ   ಗೊತ್ತಿಲ್ಲ . ಅದರೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಪೋಸ್ಟ್ ಬಾಕ್ಸ್ ನ ಬೀಗದ ಕೈ  ಕಳೆದು ಹೋಗಿ ಸುಮಾರು ಸಮಯ  ಆಗಿತ್ತು. ಅಸಲಿ ಬೀಗದ ಕೈ ಜತೆ ಕೊಟ್ಟ ಕಾಪಿ ಕೂಡ ಒಂದೇ ಕೀಲಿಕೈ ಗೊಂಚಲಿನಲ್ಲಿದ್ದುದರಿಂದ ಪೋಸ್ಟ್ ಬಾಕ್ಸ್ ತೆರೆಯಲು ನಕಲಿ ಬೀಗದ  ಕೈ ಮಾಡುವವರನ್ನೇ ಕರೆ ತರ  ಬೇಕಿತ್ತು. ಕೊನೆಗೆ ಸೆಕ್ಯೂರಿಟಿ ಯವರಿಗೆ ಹೇಳಿಟ್ಟೆ  ನಮ್ಮ ಪೋಸ್ಟ್ ಏನಾದರೂ ಇದ್ದಲ್ಲಿ ನಿಮ್ಮ ಕಡೆ ಇಟ್ಟುಕೊಳ್ಳಿ ನಾ ವಾಕ್ ಮುಗಿಸಿ ಬಂದಾಗ ಕೊಡಿ ಅಂತ. ಅವರು ಠೀಕ್ ಹೈ  ಮೇಡಂ ' ಅಂದು , ನೆನಪಲ್ಲಿಟ್ಟು ಕೊಂಡು ಹಾಗೆ ಮಾಡುತ್ತಿದ್ದರು ಕೂಡ . 

ಪರ ಊರಲ್ಲಿದ್ದ ನಿಹಾ ಫೋನ್ ಮಾಡಿದಳು 'ಅಮ್ಮ ನನ್ನದೊಂದು ಕಾಂಟ್ರಾಕ್ಟ್ ಪೋಸ್ಟ್ ನಲ್ಲಿ ಕಳುಹಿಸಿದ್ದಾರೆ ' ಪ್ಲೀಸ್ ಚೆಕ್ ಮಾಡಿ ಹೇಳು ಅಂದಾಗ ನನಗೆ ಆತಂಕ. ಸುಮಾರು ಸಲ ಫೋನ್ ಮಾಡಿ ಕೇಳಿದಳು.ನಾನು ಅವಳಿಗೆ ಕಾಂಟ್ರಾಕ್ಟ್ ಎಲ್ಲಾ ಹಾಗೆ ಪೋಸ್ಟ್ ನಲ್ಲಿ ಕಳುಹಿಸಲ್ಲ ಕೊರಿಯರ್ ಮಾಡ್ತಾರೆ. ಅಂದೆ. ಇಲ್ಲ ಆದ್ರೂ ಚೆಕ್ ಮಾಡು ಅಂದ್ಲು . ಮನೆ ಎಲ್ಲ ತಲೆ ಕೆಳ್ಗೆ ಮಾಡಿ ಬೀಗದ ಕೈ ಹುಡುಕಿದೆ. ಅಕ್ಕ  ಕೂಡ ಹುಡುಕಿದಳು . ಪುಟ್ಟ ಬೀಗದ ಕೈ , ಕೆಲವೊಮ್ಮೆ ನಾನು ಪೇಟೆ ಗೆ ಹೋಗುವಾಗ ಪೋಸ್ಟ್ ಬಾಕ್ಸ್ ನಿಂದ ಕಾಗದಗಳನ್ನು ತೆಗೆದು ಕೊಳ್ಳಲು ಅಂತ ಪರ್ಸ್ ನಲ್ಲಿ ಹಾಕಿಕೊಂಡು ಹೋಗಿದ್ದುಂಟು. ಹಾಗೆ ದುಡ್ಡು/ಚಿಲ್ಲರೆ ತೆಗೆಯುವಾಗ ಅದು ಬಿದ್ದು ಹೋಗಿರಬಹುದೆಂದು ಅನುಮಾನ. ನಿಹಾ 'ಅಮ್ಮ ತುಂಬಾ important ಕಾಂಟ್ರಾಕ್ಟ್ ಅಂದಕೂಡಲೇ ನನಗೆ ದಿಗಿಲಾಯಿತು. 

ನಮ್ಮ ಮನೆ ಹತ್ತಿರ ಎಲ್ಲೂ ಡೂಪ್ಲಿಕೇಟ್ ಬೀಗದ ಕೈ ಮಾಡುವವರನ್ನು ನಾನು ನೋಡಿರಲಿಲ್ಲ. ಶ್ರೀಕಾಂತ ಗೆ ಹೇಳಿದರೂ ಅವರಿಗೆ ನೆನಪಲ್ಲಿರುತ್ತಿರಲಿಲ್ಲ. ಹಾಗೆ ಕನಸಲ್ಲಿ ಈ ಪರ್ಸ್ ಬರಲು ಆರಂಭಿಸಿತು. ಅದು ಅಕ್ಕನ ಪರ್ಸ್ . ಅವಳು ಇದನ್ನು ನನ್ನ ಎದುರಿಗೆ ಚೆಕ್ ಮಾಡಿದ್ದಳು ಮಾತ್ರವಲ್ಲ ಅದನ್ನು ಉಲ್ಟಾ ಪಲ್ಟಾ ಕೂಡ ಮಾಡಿದ್ದಳು. ನನಗೆ ಉದಾಸೀನ. ಆದರೂ ಎರಡು ಮೂರು ಸಲ  ಇದೇ ಕನಸು ಪುನರಾವರ್ತನೆ ಆದಾಗ ನಾನು ಆ ಪರ್ಸ್  ತೆಗೆದು ಜಾಲಾಡಿದೆ. ಏನಾಶ್ಚರ್ಯ ಪರ್ಸ್ ಒಳಗಡೆ ಅದು ಸಿಕ್ಕಿ ಹಾಕಿಕೊಂಡಿದ್ದು ಕಾಣಿಸಿತು. ನಾನೇ ಒಂದು ಸಲ ಅವಳು  ಅಂಗಡಿಗೆ ಸಾಮಾನು ತರಲು ಹೊರಟಾಗ  ವಿದ್ಯುತ್ ಬಿಲ್ ತರಲು  ಬೀಗದ ಕೈ ಕೊಟ್ಟಿದ್ದು ನೆನಪಾಯಿತು . ಅವಳು ಮರೆತು ಅದನ್ನು ಪರ್ಸ್ ನಲ್ಲೆ ಹಾಗೆ ಬಿಟ್ಟಿದ್ದಳು. ಅವಳು ಹುಡುಕಿದಾಗ ಸಿಗದ ಬೀಗದ ಕೈ , ನನಗೆ ಸಿಕ್ಕಿತ್ತು 


ಬೇಗ ಹೋಗಿ ಬಾಕ್ಸ್ ಚೆಕ್ ಮಾಡಿದಾಗ ಅದರಲ್ಲಿ ಎರಡು ದೊಡ್ಡ ಮೊತ್ತದ ಚೆಕ್, ಮೂರು ಮದುವೆಯ ಕರೆಯೋಲೆ, (ಒಂದು  ಮದುವೆ  ಆಗಲೇ ಮುಗಿದಿತ್ತು :-) :-)) , ಒಂದು ವೈಕುಂಠದ ಪತ್ರಿ , ಎರಡು 'ಸಂಕಥನ ' ಸಂಚಿಕೆ , ಬಿಲ್ಡಿಂಗ್ ನ ಕಾಗದ ಪತ್ರಗಳು , ಉಳಿದವು ಬರೀ  ಕಚ್ರಾ ಇದ್ದವು. 

ನಿಹಾಳ ಕಾಂಟ್ರಾಕ್ಟ್ ಕೊನೆಗೂ ಕೋರಿಯರ್ ನಲ್ಲೆ ಬಂದಿದ್ದು. ಉಸ್ಸಪ್ಪ. 

November 16, 2017

ಇನ್ನಷ್ಟು ಕೇಕ್ ಗಳ ಫೋಟೋಗಳು

ಸುಮಾರು ಸಮಯದ ನಂತರ ಇನ್ನಷ್ಟು ಕೇಕ್ ಗಳ  ಫೋಟೋಗಳನ್ನು ಹಾಕ್ತಾ ಇದ್ದೀನಿ :-)






November 5, 2017

Great Tit name of tiny bird


CLICK HERE TO SEE THE BIRDS

Finally got to see those elusive tiny birds. Few days agovthey came in a group making their cute little tiny noises and settled down long enough for me to see them through binoculars. Otherwise they are extremely frisky. They are about 3 inches in size. Click on the link to see the great tits. I dont think i will ever be able to catch them on camera ☺

October 27, 2017

ಗದ್ದೆ ನೆಟ್ಟಿ /ನೇಜಿ ಪ್ರವಾಸ

ಬೆಳಗಾವಿಗೆ ಹೋಗಿ ಬಂದಿದ್ದಷ್ಟೇ. ಶ್ರೀಕಾಂತ ಊರಿಗೆ (ಹರಳಿಮಠ - ತೀರ್ಥಹಳ್ಳಿ ) ಹೋಗುವ ಕೃಷ್ಣ ಗದ್ದೆನೆಟ್ಟಿ   ಇದೆಯಂತೆ. ಈಗಾಗಲೇ ಮೂರು ಸಲ ಹೇಳಿ ಕೊನೆ ಗಳಿಗೆಯಲ್ಲಿ ಪ್ರವಾಸ ರದ್ದು ಆಗಿದ್ದರಿಂದ ನಾನೇನು  ಉತ್ತರಿಸಲು ಹೋಗಲಿಲ್ಲ .  ಪರ ಊರಿನಿಂದ ಆಗಷ್ಟೇ ಬಂದ ನಿಹಾ ಗೂ ಹೇಳ್ತಾ ಇದ್ದರು. ಈಸಲ  ದೆಹಲಿಯ ಫ್ರೆಂಡ್ ಅನಂತಜೀತ್ ಕೌರ್  ಬೆಂಗಳೂರಿಗೆ ಬಂದಿದ್ದಳು. ಹೊ ಅವಳನ್ನು ಕರೆದು ಕೊಂಡು ಹೋಗ ಬಹುದು. ಆದರೆ ಈಗಲೇ ಹೇಳಬೇಡ.  ರದ್ದಾಗುವುದೇ ಹೆಚ್ಚು ಅಂದದ್ದಕ್ಕೆ , 'ಇಲ್ಲ ಈ ಸಲ ಗ್ಯಾರಂಟಿ .ಆಫಿಸ್   ನವರು ಕೂಡ ಬರುತ್ತಾರೆ. ಬೇಗ ಹೇಳಿ ಗಾಡಿ   ಮಾಡಬೇಕು ಅಂದ್ರು  ಶ್ರೀಕಾಂತ. ನನಗೆ ಇಷ್ಟ  ಇರಲಿಲ್ಲ.  ಆಗಷ್ಟೇ ನಾನು ಊರಿನಿಂದ ಬಂದಿದ್ದೆ , ಬಟ್ಟೆಗಳು  ಇನ್ನು ವಾಷ್ ಆಗಿರಲಿಲ್ಲ. ನಾ ಬರಲ್ಲ ಅಂದೆ. ಶ್ರೀಕಾಂತ ಹಮ್ ಅಂದ್ರು.
ಮರುದಿನ ನಿಹಾ 'ಅಮ್ಮನೀ ಬರಲೇ   ಬೇಕು , ವಾಷ್ ಇಲ್ಲದಿದ್ದರೆ ಅದನ್ನೇ   ಬೇಕಾದ್ರೆ  ಹಾಕ್ಕೋ,ಆದ್ರೆ ನೀನು ಬರ್ಬೇಕು ಅಷ್ಟೇ ಅಂತ ಫರ್ಮಾನು ಹೊರಿಡಿಸಿದಳು. ನಿಹಾ ಹೇಳಿದ ಮೇಲೆ ಮುಗೀತು . i am ready to go the end of this world . :-)   
ಹೊರಡುವ ದಿನ ಬಂತು. ೫ ಗಂಟೆಗೆ ಬರಬೇಕಿದ್ದ  ಬಸ್ ೭. ೩೦  ಬಂತು. ಅಷ್ಟರಲ್ಲಿ ನಮ್ಮ ಏರಿಯಾ ಗೆ ಹತ್ತಿರವಿರುವವರನ್ನು ನಮ ಬಿಲ್ಡಿಂಗ್  ಗೆ ಬರಲು ಹೇಳಿ ಆಗಿತ್ತು, ಅಷ್ಟಾದರೂ  ಸಮಯ ಉಳಿಸ ಲೆಂದು . ಆದರೂ ಬೇರೆ  ಕಡೆಯ ಪಿಕ್ ಅಪ್ ಮಾಡಿ , ತಿಂಡಿ ಮನೆಯಲ್ಲಿ ಬೆಳಗ್ಗಿನ ನಾಷ್ಟಾ ಮುಗಿಸಿ ಬೆಂಗಳೂರು ಬಿಡುವಾಗ ೮. ೪೫. ನಮ್ಮ ಕೆಲವು ಪ್ಲ್ಯಾನ್ ಗಳು ಫ್ಲಾಪ್ ಆಗುವ ಮುನ್ಸೂಚನೆ . ತುಮಕೂರಿನ ಆಫಿಸ್  ಪಿಕ್ ಅಪ್ ಇತ್ತು. ಆದರೆ ಆಫಿಸ್ನವರ ರಿಕ್ವೆಸ್ಟ್   ಮೇರೆಗೆ ನಾವೆಲ್ಲಾಅಲ್ಲಿ  ೧೯ ಜನ  ಕಾಫಿ ಸ್ನ್ಯಾಕ್ಸ್ ತೆಗೆದುಕೊಳ್ಳಲೇಬೇಕಾಯಿತು.
ಮಾರ್ಗ ಮಧ್ಯೆ ಹಣ್ಣು ಗಳ  ಖರೀದಿ ಕೂಡ ಆಯಿತು. ಸ್ವಲ್ಪ ದೂರ ಹೋದ ಮೇಲೆ ನಮ್ಮ ಬಾಯಿಯ  ಫ್ಯಾಕ್ಟರಿ ಶುರು. ಪೇರಳೆ  ಬಾಳೆ ಹಣ್ಣು, ಪಾಪ್ಕಾರ್ನ್ , ಚಾಕಲೇಟು ಇತ್ಯಾದಿ. ಹಿಂಡುಗಡೆಯಿಂದ ಕಿರಿಯರ ಕಲರವ  ಕೇಳಿಸುತ್ತಿತ್ತು. ನಾವು ಹಿರಿಯರು ಎಲ್ಲ   ಮುಂದಿನ ಸೀಟ್ ಮೇಲೆ ಪವಡಿಸಿದ್ದೆವು . :-)
ಮೂರೂ ಜನ ace photographers ಅದಕ್ಕಿಂತ ಜಾಸ್ತಿ advice koDuva creative ಜನಗಳು ಇದ್ದುದರಿಂದ ಫೋಟೋ ತೆಗೆಯುವ ಸ್ಟಾಪ್ ಗಳು. ಸಕ್ರೆಬೈಲ್ ನಲ್ಲಿ  ಸ್ವಲ್ಪ ಸಮಯ ಕಳೆಯುವ ಅಂದಾಜಿತ್ತು. ಆದರೆ ಶಿವಮೊಗ್ಗ  ಬಿಟ್ಟ ಮೇಲೆ ಧಾರಾಕಾರ  ಮಳೆ. ನಮ್ಮಎದುರಿಗಿನ ರಸ್ತೆ ಕಾಣಿಸದಷ್ಟು.
 ಹರಳಿಮಠ ತಲಪುವಾಗ ೭.೪೫.  ಉಭಯ ಕುಶಲೋಪರಿಯ ನಂತರ  ಬಾಳೆಯೆಲೆಯ ಸಿಂಪಲ್ ಆದರೂ ರುಚಿಕರವಾದ  ಊಟ. ಮರುದಿನ ಬೆಳಿಗ್ಗೆ ಬೇಗ ಏಳಬೇಕಿತ್ತರಿಂದ  ಮಲಗಿದೆವು. ಕೆಲವು ಜನ ಶ್ರೀಕಾಂತ   ಕಸಿನ್ ಕೃಷ್ಣನ ಮನೆಯಲ್ಲಿ ಕೆಲವರು ಹತ್ತಿರಲೇ ಇದ್ದ ಲಾಡ್ಜಿಂಗ್ ಗೆ.
ಅನ್ನ ಅಂದರೆ ಪ್ಯಾಕೆಟ್ ಕಟ್  ಮಾಡುವುದು , ಕವರ್ ನ ಗಂಟು ಬಿಚ್ಚುವುದು , ಗೋಣಿ ಚೀಲ ಕಟ್ ಮಾಡಿ ಅಕ್ಕಿ  ಉಪಯೋಗಿಸುವುದು ಮಾತ್ರ ಗೊತ್ತಿದ್ದ ನಮಗೆ ,ಮರುದಿನ  ಅರ್ಧ ದಿನದಲ್ಲೇ  ಅದರ ಹಿಂದಿರುವ ಕಷ್ಟ , ಕೆಲಸ ಗೊತ್ತಾಗಿದ್ದು.
ಬೆಳಿಗ್ಗೆ ಕೋಳಿ/ಹುಂಜ  ಕೂಗಿದಾಗ ಎಚ್ಚರ. ಸಮಯ ನೋಡಿದಾಗ ಇನ್ನು ೨. ೪೫ :-) :-)  . ಒಂದು ಸಲ ಎಚ್ಚರ ಆದಮೇಲೆ ನನಗೆ  ನಿದ್ದೆ ಬರಲ್ಲ . ಫೇಸ್ ಬುಕ್ ನೋಡ್ತಾ  ಬೆಳಕಾಗುವ ತನಕ ಬಿದ್ದುಕೊಂಡೆ. ಆಮೇಲೆ ಹಕ್ಕಿಗಳ   ಕಲರವ,  ಕೃಷ್ಣ ಕಾಫಿ ಮಾಡುವ ಸದ್ದು  ಕೇಳಿಸಿದರಿಂದ ಎದ್ದೆ.  ಮೊದಲು ನಾನು ಟಾಯ್ಲೆಟ್ ಗೆ ಹೋಗಿ  ಬಂದು, ನಿಧಾನವಾಗಿ ಒಬ್ಬೊಬ್ಬರನ್ನೇ ಎಬ್ಬಿಸಿದೆ. ಗದ್ದೆ  ಕೆಸರು ತಾಗುತ್ತದೆಂದು ನಾವ್ಯಾರು ಸ್ನಾನ ಮಾಡಲಿಲ್ಲ. ಕಾಫಿ ಕುಡಿದು ಅಂಗಳದಲ್ಲಿ ಆ ಕಡೆ ಈ ಕಡೆ ನಡೆದಾಡುತ್ತಿದ್ದೆವು. ನಿಹಾಳ ಫ್ರೆ೦ಡ್  ಹಳೆ ಮನೆ ,  ಮಹಡಿ, ನಾಲ್ಕಂಕಣ  ಇವೆಲ್ಲ ಹೊಸದು.  ಅವಳಿಗೆ ಸ್ವಲ್ಪ explain ಮಾಡ್ತಾ   ಇದ್ದೆ.
ಗದ್ದೆಯಲ್ಲಿ ಸ್ವಲ್ಪ ಎಲ್ಲ ತಯ್ಯಾರಿ ಇದೆ. ಬರ್ತೀರಾ ಯಾರಾದ್ರೂ ಟ್ರ್ಯಾಕ್ಟರ್  ಮೇಲೆ ಹೋಗೋದು ಅಂದ್ರು    ಕೃಷ್ಣ. ನಾನು, ಶ್ರೀಕಾಂತ, ಸಾಲಿಮಠ ,ನಿಹಾ, ಮಾಲವಿಕ, ಅನಂತ್ ಜೀತ್ ಹೊರಟ್ವಿ. ಕೃಷ್ಣ ಅವರೇ ಟ್ರ್ಯಾಕ್ಟರ್ ಓಡಿಸಿದ್ದು 

:-) :-) ಪ್ರಯಾಣಕ್ಕೆ ಮುನ್ನ  ಸೆಲ್ಫಿಯತ್ನ 


we were standing stark in the middle of a curving road and i was damn scared of the fast vehicles especially the modified honda bikes :-( hence this pic where i am turned away from the camera PC : Sujay Ramsagar

 love clicking such pics. :-)

creative ಭಾವಜೀವಿ ಮನಸುಗಳು ಅವರದ್ದೇ ಆದ ಲೋಕದಲ್ಲಿ 

ನಮ್ಮ ಆಫಿಸ್ ಸ್ಟಾಫ್ ಜತೆ 
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ  ಕೆಲವು ಸುಂದರ
ತಾಣಗಳು 

ಟ್ರ್ಯಾಕ್ಟರ್ ಪ್ರಯಾಣ 
 Salimath taking a shot with camera
 early in the morning
 saplings all bunched up and ready to go
 misty mountain in the background
 Shenoy maam trying his hand at the tiller
 field getting reay for the transplant
 some last minute instructions by Krishna to the field hands
please take a pic for fb :-)


ಕೆಲಸ ಪ್ರಾರಂಭ ಮಾಡುವ ಮುನ್ನ ಕೆಲಸಗಾರರಿಗೆ ಬೆಳಗ್ಗಿನ ನಾಷ್ಟಾ. , ಆಂಬೊಡೆ, ಕೊಟ್ಟೆ ಕಡಬು ,  ಚಟ್ನಿ,ಸಾಂಬಾರ , ಕಾಶಿ ಹಲ್ವಾ. PC Anantjeet Kaur. ಬಿಸಿ ಬಿಸಿ  ಕಾಶಿ ಹಲ್ವಾ ದ ರುಚಿ ಇನ್ನೂ ಬಾಯಲ್ಲಿ ಉಳಿದಿದೆ :-) 


ನೆಟ್ಟಿ ಅಥವಾ ನೇಜಿ ಮಾಡುವ ಮುನ್ನ 

ನರ್ಸರಿಯಿಂದ  ಬತ್ತದ ಸಸಿ ತಂದಿಟ್ಟಿರಬೇಕು 
 ಗದ್ದೆಯಿಂದ ಕಳೆ ಗಳನ್ನು ಕೀಳಿ ಸ್ವಚ್ಛಮಾಡಬೇಕು 
 ಗದ್ದೆಯಲ್ಲಿ ನೀರು ನಿಂತಿರಬೇಕು. 
 ಟಿಲ್ಲರ್ ಹಾಗು ಎತ್ತುಗಳ  ಮೂಲಕ ನಮ್ಮ ಮೊಣಕಾಲು ಹೂತುಹೋಗುವಷ್ಟು ಆಳ ಹೂLu ಹೊಡೀ ಬೇಕು 


ಕೆಲಸ ಪ್ರಾರಂಭವಾಗುವ ಮುಂಚೆ ಕೆಲವು ಪೋಸ್ ಗಳು :-)

   watching their synchronized movements is a delight to the eye


our staff members

Sujay Niha and Anantjeet 

ಕೈ ಕಾಲು ಕೆಸರಾದರೆ ಬಾಯಿ ಮೊಸರು 

ಗದ್ದೆಯಿಂದ ಗದ್ದೆಗೆ  ಸಾಗುತ್ತಾ 

expert experienced hands. ಕೈ ಜತೆ ಬಾಯಿ ಕೂಡ ಚುರುಕಾಗಿ   ಕೆಲಸ ಮಾಡ್ತಿದ್ವು :-)
ಮಮತಾ ಮತ್ತು ಭಾರತಿ 

ಗೋವಿಂದರಾಜನ್ ಸರ್ 

 ದಾರಿಹೋಕರಿಗೆ,ಕೃಷ್ಣ ಅವರ  ಪರಿಚಿತರೆಲ್ಲರಿಗೂ ಅಚ್ಚರಿ .ನಾ ಕೇಳಿದ ಕೆಲ ಸಂಭಾಷಣೆಗಳು 

೧.  ಸಾವುಕಾರರು ಇಲ್ಲಿ ಗದ್ದೆ ಕೆಲಸಕ್ಕೆ ಜನ ಸಿಗಲ್ಲ ಅಂತ ಬೆಂಗಳೂರಿನಿಂದ ಕರೆಸಿಕೊಂಡಿರಾ ಹೇಗೆ?

೨. ಕೊಪ್ಪ ತೀರ್ಥಹಳ್ಳಿ ಬಸ್ ನಿಲ್ಲಿಸಿ: ಹ್ವಾಯ್ , ಬೇರೆ ಊರಿನಿಂದ ಬಂದಿದ್ದಾರೆ ಕಾಂತೆ. ಇಲ್ಲಿ ಜನರು  ಕೆಲಸ ಮಾಡಲ್ಲಲ್ಲ್ವಾ? ಇರಲಿ  ಏನೋ ಉಮ್ಮೇದು ಒಂದು ದಿನ ಮಾಡ್ತಾರೆ ಹೋಗ್ತಾರೆ. 

ನಾನು ಫೇಸ್ ಬುಕ್  ನಲ್ಲಿ ಈ ಚಿತ್ರಗಳನ್ನು ಶೇರ್ ಮಾಡಿದ್ದಾಗ ತೀರ್ಥಹಳ್ಳಿಯವರೇ ಆದ ನಿಲೇಶ ಜವಳಿ ' ಮುಂದಿನ ವಾರ ನಮ್ಮ ಗದ್ದೆಯಲ್ಲಿ ನೆಟ್ಟಿ , ಬರ್ತೀರಾ ' ಅಂತ ಕಾಮೆ೦ಟ ಮಾಡಿದ್ದರು :-)

ತೀರ್ಥಹಳ್ಳಿಯ ಉದಯೋನ್ಮುಖ ಬರಹಗಾರರು ಶ್ರೀ ನೆಂಪೆ ದೇವರಾಜ್ . ಇವರ ಬರಹದ ನಿಮಿತ್ತ  ಕೃಷ್ಣ ಅವರಿಗೆ ಅತ್ಯ್ತುತ್ತಮ ರೈತ ಪ್ರಶಸ್ತಿ ಸಿಕ್ಕಿತು. ಬತ್ತ ಬೆಳೆಯುವವರು ಈಗ ಕಡಿಮೆಯಾಗಿದ್ದಾರೆ. ಕೆಲಸಕ್ಕೆ ಜನ ಸಿಗಲ್ಲ ಅಂತ ನೆವ. ಎಲ್ಲರೂ ಬತ್ತದ ಗದ್ದೆಯನ್ನು ಈಗ ಅಡಿಕೆ ತೋಟ  ಮಾಡಿ ಆರಾಮ್ ಆಗಿದ್ದಾರೆ. ಹೀಗೆ ನಡೆದರೆ ಮುಂದೆ ಬತ್ತ  ಅಥವಾ ಅಕ್ಕಿಯನ್ನು ನಾವು ಮ್ಯೂಸಿಯಂ  ನಲ್ಲಿ ಕಾಣಬೇಕಾದೀತು' ಎನ್ನುವುದು ಅವರ ಕಳಕಳಿ . ಕೃಷ್ಣ ಅವರಿಗೆ ಈ ಪ್ರಶಸ್ತಿ ಗಿಶಸ್ತಿಯಲ್ಲಿ ಇಂಟರೆಸ್ಟ್ ಇಲ್ಲ. ಅವರ ಕೆಲಸ ಅವರು ನಿಷ್ಠೆಯಿಂದ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ತೋಟ ನೋಡಿದರೆ ಗೊತ್ತಾಗುತ್ತದೆ. ಅವರ ಪ್ರೀತಿ ಕಾಳಜಿಯಿಂದ ಅವು ನಳನಳಿಸುತ್ತಿವೆ. ಅವರ ಒಂದು ಮಾತು  ಹೇಳುತ್ತಾರೆ ಯಾವಾಗಲೂ ಶ್ರೀಕಾಂತ ಗೆ 'ನನ್ನ ಕೈಯಲ್ಲಿ ಆಗುವಷ್ಟು ದಿನ ನಾನು ನೋಡಿಕೊಳ್ಳುತ್ತೇನೆ, ಮುಂದೆ ಇವನ್ನೆಲ್ಲಾ ಯಾರು ನೋಡಿಕೊಂಡು  ಹೋಗುತ್ತಾರೆ ಅಂತ ನಾನಂತು ಯೋಚಿಸಲ್ಲ' ಅಂತ 



ಮಧ್ಯಾಹ್ನ ಊಟಕ್ಕೆ ದಪ್ಪಕ್ಕಿ  ,ಸಾಂಬಾರ್ ,   ಉಪ್ಪಿನಕಾಯಿ , ಹಪ್ಪಳ ಮತ್ತು ಕೊಂಕಣಿ ಸ್ಪೆಷಲ್ ಅಡುಗೆ ' ವಾಗು' ದೆಹಲಿಯ  ಅನನ್ತಜೀತ್ ಗೆ ಇದು ತುಂಬಾ ಇಷ್ಟವಾಗಿ ಎರಡೆರಡು ಸಲ   ಹಾಕಿಸಿಕೊಂಡು ತಿಂದ್ಲು :-)  ಜಹಾಂಗೀರ್ ಸ್ವೀಟು 
 seetaram shetty and Krishna Kumar on the right. we had to request/force him for a picture

ಸಂಜೆ ಕಂಬಳಿ ಕುಪ್ಪೆ , ಮುಟ್ಟಾಳೆ ಟೊಪ್ಪಿ ಹಾಕಿಕೊಂಡು ಕೆಲವು ಫೋಟೋಗಳು 
 ನನ್ನ ಇಷ್ಟದ ಫೋಟೋ Vivekanand and Shobha Salimath
 ಬೆಲ್ಬೆಳಗ್ಗೆ ಹಲ್ಲು   ಉಜ್ಜಿ ಗದ್ದೆಗೆ ಹಾಜರಾಗಿದ್ದು ಹೀಗೆ. ಬ್ಲಾಕ್ ಕ್ಯಾಟ್ ಅಂತ ಫೋಟೋ   ತೆಗೆದಿದ್ದು ಮಲ್ಲಿಕಾರ್ಜುನ  ಹೊಸಪಾಳ್ಯ Me with mamatha and Prema 
sujay in kamblikuppe 

ಮತ್ತೆ ನನ್ನ ಕೆಲಸ ಫೋಟೋ ತೆಗೆದು FaceBook ಗೆ ಅಪ್ಲೋಡ್ ಮಾಡೋದು, ಪಟ್ಟಾಗಿ ಊಟ   ಮಾಡಿದ್ದು ಅಷ್ಟೇ. 
ಎಲ್ಲರಿಗೂ ಖುಷಿ ಆಗಿದ್ದು ಗದ್ದೆ ಕೆಲಸದವರಿಂದ ಶಹಭಾಸ್ಗಿರಿ ' ಅಡ್ಡಿಯಿಲ್ಲ ಪೇಟೆ ಜನ ಚೆನ್ನಾಗಿ ಕೆಲಸ ಮಾಡಿದ್ದೀರಾ ' ಅಂದಾಗ
ನಡುಬಗ್ಗಿ ಕೆಲಸ ಮಾಡಿದವರಿಗೆ ನೆಕ್ಸ್ಟ್ ದಿನ ಕೈ ಕಾಲು  ಸೆಳಕು ನೋವು ..ಮಧುರ ಯಾತನೆ( word c/o Jayanth Kaikini) :-) :-)
ಮುಂದಿನ ತಿಂಗಳು ಬತ್ತದ ಕೊಯ್ಲು. ಯಾರೆಲ್ಲ  ಬರ್ತೀರಿ ಬೇಗ   ಕಾಮೆ೦ಟ ನಲ್ಲಿ ತಿಳಿಸಿ.  ಗಾಡಿ, ಉಳಿದುಕೊಳ್ಳುವ ವ್ಯವಸ್ಥೆ  ಎಲ್ಲ ಮಾಡಬೇಕು. :-) :-)
ಇದೊಂದು   ಹೊಸ ಬಗೆಯ ಪ್ರವಾಸ. ನಮ್ಮ  ಇನ್ನೂ ಇದರ ಇದರ ಗುಂಗಲ್ಲಿ ಇದ್ದಾರೆ. 

October 18, 2017

ಗಾದೆ ನಿಜಾಕಣ್ರೀ

ಇವತ್ತು ಬೆಳಿಗ್ಗೆ  ಬಾಲ್ಕನಿ ಮೇಲೆ ಕೂತು ಚಹಾ ಕುಡಿತಿದ್ದೆ. ಒಂದು ಹದ್ದು . ಅದರ ಬಾಯಲ್ಲಿ ಅರೆ ಜೀವವಾಗಿ , ಕರುಳು ಹೊರಗೆ ನೇತಾಡುತ್ತಿದ್ದರೂ ಮರಿ ಅಳಿಲು  ಚೀ೦sssವ್ ಚೀ೦ssವ್ ಅನ್ನುತಿತ್ತು. ಈ ಹದ್ದನ್ನು ಅಟ್ಟಿಸಿಕೊಂಡು ಇನ್ನೊಂದು  ಹದ್ದು. ಅವರ ಜಗಳಕ್ಕೆ ಬಾಯಲ್ಲಿದ್ದ ಬೇಟೆ ತಪ್ಪಿ ತೊಪ್ಪೆಂದು ಪೆಟ್ರೋಲ್ ಪಂಪ್ ನ ಶೀಟ್ ಮಾಡಿನ ಮೇಲೆ ಬಿತ್ತು . ಅದೆಲ್ಲಿ ಹೊಂಚುಹಾಕುತ್ತಿದವೋ ಕಾಗೆಗಳು , ಬೇಟೆಯ ಮೇಲೆ ಎರಗಿ ಎರಡೇ ಕ್ಷಣದಲ್ಲಿ  ಅಳಿಲಿನ ಕಳೇಬರ ಮಾಯ. 

ಇಬ್ಬರ ಜಗಳ ಮೂರನೆಯವರಿಗೆ ಲಾಭ ..ಅಲ್ವಾ??ಗಾದೆ ಮಾತು ನಿಜ ಆಗಿದ್ದನ್ನು ನೋಡಿದೆ. 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಹಾಗೆಯೇ ಕಿರಿಯ ಮಿತ್ರ ಸ್ವಪ್ನೀಲ್  ಪ್ರಭು ಒಂದು ಅತ್ಯುತ್ತಮ ಫುಡ್ ಬ್ಲಾಗ್ ಪ್ರಾರಂಭ ಮಾಡಿದ್ದಾರೆ.
ಇಲ್ಲಿದೆ ಅದರಕೊಂಡಿ. 

The Missing Drumstick

October 12, 2017

ಗದ್ದೆ ನೆಟ್ಟಿ ಪ್ರವಾಸ

ಇವತ್ತಿನ ಪ್ರಜಾವಾಣಿ -ಕಾಮನಬಿಲ್ಲು ಪುರವಣಿಯಲ್ಲಿ- ನಾವು ಹಿಂದಿನ ತಿಂಗಳು ತೀರ್ಥಹಳ್ಳಿಗೆ, ನೆಟ್ಟಿ ಪ್ರ್ಯಾತ್ಯಕ್ಷಿಕೆ  ಪ್ರವಾಸ ಹಿಮ್ಮಿಕೊಂಡಿದ್ದೆವು. ನಮ್ಮ ತಂಡದ ಮಲ್ಲಿಕಾರ್ಜುನ ಹೊಸಪಾಳ್ಯ  ಅವರ ಲೇಖನ ಕೆಳಗಿನ ಕೊಂಡಿಯಲ್ಲಿ ಓದಿ.

ಗದ್ದೆ ನೆಟ್ಟಿ ಪ್ರವಾಸ
ಇದರ ಬಗ್ಗೆ ನನ್ನ ಬರಹ ಬ್ಲಾಗ್ ನಲ್ಲಿ ಶೀಘ್ರದಲ್ಲೇ ನಿರೀಕ್ಷಿಸಿ

:-)

October 10, 2017

birds of BTM

There is this tree in udupi garden signal . In the day time it is an ordinary tree standing tall against noise and smoke pollution. But with sundown hundreds of tiny birds emerge out of its hiding place in the trees. They remind me of tiny kids who come out of the school gates at the end of the day. Free from the constraints of the school. These birds make sounds like cheep chinv and swing on the cable that connects two high-rise buildings or rest atop the asbestos sheet covering the petrol bunk. They are ashy prinia. Just love to watch them. To the naked eye they are just chirping tiny birds. But through the binoculars you can make out their long tails and Light yellow underbelly. They are so full of activity.
 my juvenile attempt at capturing them on the ipad

from the net

Sad thing is metro construction is happening and these trees will be cut down. Where will these birds go? I was happy that my flat is surrounded by greenery with all these huge green
 trees. I spot birds like the bhraminy kite- oh so regal in its flight, which roost on the trees behind our swimming pool, hundreds of parrots streaking the morning and evening skies with their green plumage and red beaks creating a din to and fro from their nest, the  brown breasted barbets- that
fly from tree to tree making one think a leaf has flown out of one tree and attached itself to another, :-), occasional green fly catcher, white owls, pigeons- i know most people hate them but i adore them in flight, they have the most beautiful wings, thousands of butterflies,dragon flies, damsel flies etc. Along with the crows mynahs. There is an increase in the number of crows and mynahs this year in this area. This year i have even spotted the black eyed orioles much to my delight

There is this tiny black bird just about the size of butterflies, i have yet to identify. they r too fast for me to concentrate on it.
typed on ipad. 

September 5, 2017

Digi love

He met her ( well, virtually) on the social page named digital intelligence. It had members with sharp intelligence. Any question, query received immediate solutions via the comments. He always saw that she was the first one to reply with the answers. She was full of humour too. He did try checking her profile but it was high privacy protection. But he found that he could chat to her on the messenger.
One day he asked her " ,why have you not put your pic in profile ,. Why the Disney character?
To answer your second question first I am a fan of Disney cartoons and answer to the first question is I do not consider myself much in the looks department.
He gradually realised that he lived chatting to her everyday and if she wasn't online he missed her terribly
He one day proposed to her. She warned him again about her looks and asked him to think about it
He replied ' there is nothing to think about, looks fade, and anyways I was attracted to your brains or intelligence. It gets sharper with age. So when can we meet?
Typed this post on cell phone. Just an experiment
#ashortlovestory

September 2, 2017

ಅಡುಗೆ ಎಂಬ ಕರಕರೆ

ಮದುವೆಗೆ ಮೊದಲು ಅಮ್ಮನಿಗೆ ಅಡಿಗೆ ಕೆಲಸದಲ್ಲಿ ಸಹಾಯ ಮಾಡಿ ಅಷ್ಟೇ ಗೊತ್ತಿದ್ದು . ಅಮ್ಮನ ಕೆಲಸ ಎಲ್ಲ ಫಾಸ್ಟ್ ಎಕ್ಸ್ಪ್ರೆಸ್. ಓದು ಮುಗಿಸುವ ಮುನ್ನವೇ ಮದುವೆಯಾಯ್ತು, ಹಾಗಾಗಿ ಅಡುಗೆ ಕಲಿಯುವುದೆಂಬುದು ದೂರವೇ ಉಳಿಯಿತು. ಅಮ್ಮ ಮಾಡುವ ಅಡುಗೆಯನ್ನು ಮಾಡಿ ಅಲ್ಲದಿದ್ದಾರೂ ಕಣ್ಣಾರೆ ನೋಡಿ ಗೊತ್ತಿತ್ತು.  ಸಂಪೂರ್ಣ ಅಡುಗೆ ಮಾಡಿದ್ದು ಮದುವೆ  ಯಾದ ಮೇಲೆ. ಅಮ್ಮನ ಬಳಿ ಕೇಳಿಸಿಕೊಂಡು ಅಪ್ಪನ ಹಳೆಯ ಬ್ಯಾಂಕ್ ಡೈರಿ ಯಲ್ಲಿ ಬರೆದುಕೊಂಡ ಕೆಲವು ನನಗಿಷ್ಟವಾದ ಅಡುಗೆಗಳು, ಅದನ್ನೇ ನೋಡಿ ಮಾಡುತ್ತಿದ್ದೆ. ಮದುವೆಯಾದ ಮೇಲೆ ಶ್ರೀಕಾಂತ ನನಗೆ ಹಲವಾರು ಅಡುಗೆ  ಪುಸ್ತಕ ಗಳನ್ನೂ ತಂದುಕೊಟ್ಟರು. ಅದರಲ್ಲಿ ಮುಖ್ಯವಾದದು ಜಯಾ ವಿ ಶೆಣೈ ಅವರ ಕೊಂಕಣಿ ಊಟ- ಉಪಾಹಾರ .  a to ಝೆಡ್ ಕೊಂಕಣಿ ಮಾತ್ರವಲ್ಲ ಕೆಲವು ನಾರ್ಥ್ ಇಂಡಿಯನ್ ಅಡುಗೆಗಳಾದ, ಚೋಲೆ  ಬಟೂರೆ, ಸಮೋಸಾ, ಪಾನಿ ಪೂರಿ ಮು೦ತಾದವು ಇದ್ದವು. ಈಗಲೂ ನಮ್ಮಲ್ಲಿ ಮದುವೆಯಾದ ಹೊಸದರಲ್ಲಿ ಈ ಪುಸ್ತಕ ಉಡುಗೊರೆಯಾಗಿ ಕೊಡುತ್ತೇವೆ. ಮತ್ತೀಗ ಇಂಗ್ಲೀಷ ಭಾಷೆಯಲ್ಲೂ ಲಭ್ಯ.  ಯು ಎಸ ನಲ್ಲಿರುವ ನನ್ನ ತಂಗಿ ಕೊಂಕಣಿ ಅಡುಗೆ ಇಷ್ಟ ಪಡುವ ಅವಳ ಕನ್ನಡಿಗ ಫ್ರೆಂಡ್ಸ್ ಗಳಿಗೆಲ್ಲ ಈ ಪುಸ್ತಕ ತೆಗುದುಕೊಂಡು ಹೋಗುತ್ತಾಳೆ ಪ್ರತಿ ಸಲ ಭಾರತಕ್ಕೆ ಬಂದಾಗ. 
ಮುದುವೇಯಾದ ಹೊಸದರಲ್ಲಿ ಕಾಲೇಜು ಪುಸ್ತಕ  ಓದಿ ಓದಿ ಬೇಜಾರಾಗಿ ಹೊಸ ಹೊಸ ಅಡುಗೆಗಳು ಪ್ರಯತ್ನ ಮಾಡುತ್ತಿದ್ದೆ. ಹೆಚ್ಚಾಗಿ ರುಚಿಯಾಗೆ ತಯಾರಾಗುತ್ತಿದ್ದವು. guinea ಪಿಗ್ ಗಳು ಶ್ರೀಕಾಂತ ಆಫಿಸಿನ ಬ್ಯಾಚೆಲರ್ ಗಳು. 
ಆಗಿನ್ನೂ ಮೊಬೈಲ್ ಬಿಡಿ ಫೋನ್ ಕೂಡ ಇರಲಿಲ್ಲ. ನಾನು ಅಮ್ಮನಿಗೆ ಪತ್ರ ಬರೆದರೆ ಕನಿಷ್ಠ ೧೫ ದಿನಗಳು ಬೇಕಿದ್ದವು ಕೊಪ್ಪದಿಂದ ಮುಂಬೈ ತಲುಪಲು. ಅರ್ಜೆಂಟ್ ಏನಾದ್ರೂ ಮೆಸೇಜ್ ಕಳುಹಸಿಲು ಇದ್ದರೆ ಶ್ರೀಕಾಂತ ಅವರ ಆಫಿಸ್ ನಿಂದ ಅಪ್ಪನ ಆಫಿಸ್ ಗೆ ಫೋನ್ ಮಾಡುತ್ತಿದ್ದರು. ಆಗ ಟ್ರಂಕ್ ಕಾಲ್ ಬುಕ್ ಮಾಡಬೇಕಿತ್ತು. 
ಹೀಗಿದ್ದಾಗ ಒಂದು ಸಲ ನನ್ನ ಅಡುಗೆ ಕೆಲಸ ಮುಗಿಸಿ ಪರೀಕ್ಷೆಗೆ ಓದುತ್ತಿದ್ದೆ. ಆಫಿಸ್ ನ ಪಿಯನ್ ಬಂದು ಆರು ಜನ ಊಟಕ್ಕೆ ಬರುತ್ತಾರಂತೆ ಅಂತ ಸೈಕಲ್ ನಲ್ಲಿ ಬಂದು  ಹೇಳಿ  ಹೋದ. ನಮ್ಮ ಮನೆ ಪೇಟೆಯಿಂದ ಸಾಕಷ್ಟು ದೂರ. ನಾನು ಮಧ್ಯಾಹ್ನ ಸ್ವಲ್ಪ ಹೆಚ್ಚಿಗೆ ಅಡುಗೆ ಮಾಡಿಡುತ್ತಿದ್ದೆ. , ಯಾಕೆಂದರೆ ಹಲವು ಬಾರಿ  ಬೇರೆ ಹಳ್ಳಿಯಿಂದ ಬಂದ ಆಫಿಸರ್ಗಳಿಗೆ ಶ್ರೀಕಾಂತ ಊಟಕ್ಕೆ ಕರೆದುಕೊಂಡು ಬರುತ್ತಿದ್ರು. ತುರ್ತು ಸಾಮಾನು ತರಕಾರಿ  ಬೇಕಾದ್ರೆ , ಅದು ಬೇಸಿಕ್ ಕೆಲವೇ ಕೆಲವು ,ನಮ್ಮ ಮನೆಯ ಹಿಂಬದಿಯಿದ್ದ ಸುಂದರ ಮಾಮನ್ ಮನೆ ಕಮ್ ಅಂಗಡಿಯಲ್ಲಿ ಸಿಗುತ್ತಿತ್ತು. ನಾನು ಮಾಡಿದ್ದು ಕಾಯಿ ಹಾಕಿ ಕೊಂಕಣಿ ಅಡುಗೆಗಳು. ಬಂದವರಿಗೆ ಇಷ್ಟ ಆಗುತ್ತೋ ಗೊತ್ತಿರಲಿಲ್ಲ. ಯಾವುದಕ್ಕಾದರೂ ಟೊಮೇಟೊ ರಸಂ ಮಾಡುವಾ ಅಂತ ಟೊಮೇಟೊ, ಕೊತ್ತಂಬರಿ ಸೊಪ್ಪು ಮುಂತಾದವು ಕೊಳ್ಳಲು ಸುಂದರ ಮಾಮನ ಅಂಗಡಿಗೆ ಹೋದೆ. ತುಂಬಾ ನಿಧಾನಕ್ಕೆ ಸಾಮಾನು ಕಟ್ಟಿ ಕೊಡ್ತಾ ಇದ್ರು. 'ಮಾಮ ಸ್ವಲ್ಪ ಜಲ್ದಿ ಮಾಡಿ, ಊಟಕ್ಕೆ ಜನ  ಬರುತ್ತಾರೆ ಅಂದೆ. :
ಹೌದಾ? ಎಷ್ಟು ಜನಾ?
ನನಗೆ ಆಶ್ಚರ್ಯ ಆದ್ರೂ .... 
"೬-೭ "
ಏನು ತಿಳಿದುಕೊಳ್ಳದಿದ್ರೆ ಒಂದು ಮಾತು ಹೇಳಲಾ "?
"ಹೇಳಿ ಮಾಮಾ "
"ಒಂದು ರಾಶಿ ಅಡಿಗೆಯಿದೆ ದಯವಿಟ್ಟು ತೆಗೆದುಕೊಂಡು ಹೋಗ್ತೀರಾ"?
ಸುಂದರ ಮಾಮ ಫಂಕ್ಷನ್ ಗಳಿಗೆಲ್ಲ ಅಡಿಗೆ ಮಾಡಿ ಕೊಡುತ್ತಿದ್ದರು. ಆ ದಿನ ಯಾರ ಮನೆಯಲ್ಲಿ ಫಂಕ್ಷನ್ ಇತ್ತೋ ಅಲ್ಲಿ ಸಾವು ನಡೆಯಿತು. ಹಾಗಾಗಿ ಒಂದು ರಾಶಿ ಅಡಿಗೆ ಇದೆ ಅಂದಿದ್ದು. 
ನಾನು ಹೆಚ್ಚು ಯೋಚನೆ ಮಾಡದೆ ಸರಿ ಎಂದೇ 
ನೀವು ಮನೆಗೆ ಹೋಗಿ, ಕೆಲಸದವರ ಬಳಿ ಕಳುಹಿಸುತ್ತೇನೆ ಅಂತ, ಹತ್ತು ಹಲವು ಪಲ್ಯ, ಕೂಟು , ಹಪ್ಪಳ ಸ್ವೀಟ್ ಎಲ್ಲ ಕಳುಹಿಸಿದ್ರು. ಅದರ ಜತೆ ೧೦ ಬಾಳೆ ಎಲೆ ಕೂಡ. 
ಶ್ರೀಕಾಂತ ಅವರ ಆಫಿಸಿನ ಜನರನ್ನು ಕರೆದುಕೊಂಡು ಬಂದ್ರು ಅವರಿಗೆಲ್ಲ ಮಾತ್ರವಲ್ಲ ಶ್ರೀಕಾಂತಗು  ಆಶ್ಚರ್ಯ ಅಷ್ಟೆಲ್ಲ  ಅಡಿಗೆ ಮಾಡಿದಳಾ ಇವಳು ಅಂತ. ನಾನು ನಗುತ್ತಾ ಒಂದೊಂದೇ ಐಟೆಮ್ ಬಡಿಸ್ತಾ ಇದ್ದೆ. ಶ್ರೀಕಾಂತ ಗೆ ಅಡಿಗೆ  ಕತೆ ರಾತ್ರಿ ಹೇಳಿದ್ದು ನಾನು. ಮತ್ತೆ ಸುಂದರ ಮಾಮನ ಅಡುಗೆ ಕೊಪ್ಪ ಊರಲ್ಲೇ ಫೇಮಸ್. ಇಲ್ಲಿ ಆಫಿಸ್ ನಿಂದ  ಬಂದವರು ನನನ್ನು ಹಾಡಿ  ಹೊಗಳಿದರಂತೆ. ಹಾ ಹಾ ಹಾ 
ಹೀಗೆ ಒಂದು ಸಲ  ಒಂದು ಬಸ್ ಇಡೀ ರೈತರು  ಬಂದಿದ್ದರು.  ೪೦ ಜನ.  ಅವರಿಗೋಸ್ಕರ  ನಾನೊಬ್ಬಳೇ  ಸಂಜೆಯ ತಿಂಡಿ ಅಂತ ಬನ್ಸ್, ಶಂಕರಪಾಳೆ  (ತುಕಡಿ) ಶೇವು, ಕಾಫಿ  ಎಲ್ಲ ಮಾಡಿದ್ದೆ. ಮರುದಿನ ಪುನ: ಬಂದಾಗ ಅಷ್ಟು ಜನರಿಗೆ ಕಲಸಿದ  ಅವಲಕ್ಕಿ ಬಟಾಟಾ ವಡಾ ಮಾಡಿ ಸೈ  ಎನ್ನಿಸಿಕೊಂಡಿದ್ದೆ. 
ಬೆಂಗಳೂರಿಗೆ ಬಂದ ಮೇಲೆ ತಿಂಗಳಿಗೊಮ್ಮೆಯಾದರೂ  ಆಫಿಸ್ ನವರಿಗೆ ಊಟ ಇಡುತ್ತಿದ್ದೆ. ಕ್ರಮೇಣ ಅಡುಗೆ ಮಾಡುವುದರಲ್ಲಿ ನನಗೆ ಇಂಟರೆಸ್ಟ್ ಹೋಗಿದೆ. ಏನೋ ಒಂದು ಮಾಡಿ ಹಾಕ್ತೇನೆ. ಉಪಾಯವಿಲ್ಲದೆ ತಿನ್ನುತ್ತಾರೆ. ಇಲ್ಲದಿದ್ದರೆ ಹೊರಗಿನಿಂದ ತಂದು ತಿನ್ನುತ್ತೇವೆ, 
ಶ್ರೀಕಾಂತ, ಮಕ್ಕಳು  ಯಾರನ್ನಾದ್ರೂ ಊಟಕ್ಕೆ ಕರೀಬಹುದಾ ಅಂದ ಕೊಡಲೇ ಸಖತ್ ಟೆನ್ಷನ್ ಆಗುತ್ತೆ. ಆದಷ್ಟು ಹೊರಗೆ ಕರೆದುಕೊಂಡು ಹೋಗಿ ಅನ್ನುತ್ತೇನೆ 
ಈಗ ಉಮ್ಮೇದಿನಿಂದ ಬಹುಷ್ಯ ಅಡುಗೆ ಮಾಡೋದು, ನಿಹಾ ಬೇರೆ ಊರಿಂದ ಹಿಂದಿರುಗಿದಾಗ,   ವಸುಧೇಂದ್ರ ,  ನಿಹಾಳ ಕೇರಳದ ಫ್ರಎಂಡ್ಸ್ ಗಳಿಗೆ ಮೀನು ಅಡುಗೆ ಮಾತ್ರ . 
ಈಗ ನೆಂಟರಿಷ್ಟರನ್ನು ಮನೆಗೆ ಕರೆಯೋದಾದ್ರೆ 'ಬನ್ನಿ ನಮ್ಮ ಮನೆಯ ಎದುರು ಗಡೆಯ ರಸ್ತೆಯಿಂದ ಫುಡ್ ಸ್ಟ್ರೀಟ್ ಶುರು ಆಗತ್ತೆ ಅಂತ ಆಮಂತ್ರಣ ನೀಡೋದು. ;-) :-)
ಇವತ್ತಿನ ಪ್ರಜಾವಾಣಿ- ಭೂಮಿಕಾ ಪುರವಣಿಯಲ್ಲಿ ಸ್ಮಿತಾ ಅಮೃತ್ ರಾಜ್ 'ಅಡುಗೆ ಮನೆಯೊಳಗಿನ ಎಡವಟ್ಟುಗಳು' ಅಂತ ಬರೆದದ್ದನ್ನು ಓದಿ ಈ ಮೇಲಿನ ಸಂಗತಿ ನೆನಪಾಗಿ ಬರೆದೆ 


:-) 

August 15, 2017

Voice lost and regained

ಮೇ ೨೮. ಭಾನುವಾರ. ನಿಹಾ ಹಿಂದಿನ ದಿನ ಬೆಂಗಳೂರಿಗೆ ಮರಳಿದ್ದಷ್ಟೇ. ಹಾಗೆ ಬೆಳಿಗ್ಗೆ ಎದ್ದು ನಾವು ನಮ್ಮ ಚಹಾ ಬಾಲ್ಕನಿ ಯಲ್ಲಿ, ಅವಳ ಟ್ರಾವಲ್ , ಅವಳ ಕ್ಲಾಸ್ , ಅವಳ ಗುರುಗಳು, ಇದರ ಕತೆ ಕೇಳುತ್ತಾ ನಗುತ್ತಾ ಆರಾಮಾಗಿ ಮುಗಿಸಿದೆವು. ನನ್ನ ತಂಗಿ ಗಂಡ ಸಂದೀಪ  ಯು ಎಸ ನಿಂದ  ಬಂದಿದ್ದರು. ಬೆಂಗಳೂರಿನಲ್ಲಿ ಅವರ ಅಕ್ಕನ ಮಗಳ ಮದುವೆಯಿತ್ತು. ಅವರ ಸಲುವಾಗಿ ನಾನು ನನ್ನ ಸ್ಪೆಷಲ್ ಮಸಾಲೆ ದೋಸೆ   ಮಾಡಿದ್ದೆ. ನನ್ನ ಫ್ಯಾಮಿಲಿ  ಸರ್ಕಲ್ ನಲ್ಲಿ ನಾ ಮಾಡುವ ಮಸಾಲೆ ದೋಸೆ ಫೇಮಸ್. ಅವರು ಏಳುವದು ವಿಳಂಬವಾಗುತ್ತದೆಯಂತ ನಾವು ಮಸಾಲೆ ದೋಸೆ ತಿಂದೆವು. ಶ್ರೀಕಾಂತ ನಾನು ಸಂದೀಪ ಜತೆ ತಿನ್ನುತ್ತೇನೆ ಅಂದಿದ್ದರು. ಹಾಗಾಗಿ ಸಂದೀಪ ಎದ್ದ  ತುಸು ಹೊತ್ತಲ್ಲಿ ಗ್ಯಾಸ್ ಮೇಲೆ ಎರಡು ಕಾವಲಿ ಇಟ್ಟೆ . ಆಮೇಲೆ ಶ್ರೀಕಾಂತ ಅಂತ ಕರೀತೀನಿ, ಬಾಯಿಯಿಂದ ಒಂದಕ್ಷರ ಬರಲಿಲ್ಲ. ಗಂಟಲು ಸರಿಪಡಿಸಿ ಸ್ವಲ್ಪ ಜೋರಾಗಿಯೇ ಕಿರುಚಿದೆ, ಊಹೂಂ , ಕಾಗೆ ಕರೆದ ಹಾಗೆ ಧ್ವನಿ ಹೊರಡಿತು. ಅರೆ ಇದೇನಾಯಿತು ಅನ್ನುವಷ್ಟರಲ್ಲಿ, ಇಡೀ ಬಲಭಾಗದ ಗಲ್ಲ anaesthesia ಕೊಟ್ಟಾಗ numb ಆಗುತ್ತಲ್ಲವಾ  ಹಾಗಾಯಿತು ಮಾತ್ರವಲ್ಲ ನಾಲಗೆ ಹೊರಳಲು  ಮುಷ್ಕರ ವಹಿಸಿತು. ಇದಕ್ಕಿಂತ ಮುಂಚೆ ನನಗೆ, ಮೂರೂ ನಾಲ್ಕು ರಾತ್ರಿ ನಿದ್ದೆಯಲ್ಲಿ ಗಲ್ಲ ನಾಲಿಗೆ ಕಚ್ಚಿಕೊಂಡು ನೋವಾಗಿ ಎಚ್ಚರ ಆಗುತ್ತಿತ್ತು. ಮತ್ತೆ ನಿಮಗೆಲ್ಲ ಗೊತ್ತಿರುವ ವಿಚಾರವೇ , ಒಂದು ಸಲ ಗಲ್ಲ ಅಥವಾ ನಾಲಿಗೆ  ಕಚ್ಚಿದರೆ,ಅಲ್ಲಿನ ಚರ್ಮ ಕಿತ್ತುಕೊಂಡು ಹೋಗಿ  ಪುನ:: ಪುನಃ ಅಲ್ಲಿ ಏಟಾಗಿ  ನೋವಾಗುತ್ತದೆ. ಕಚ್ಚಿದ ರಭಸಕ್ಕೆ ನರಕ್ಕೆ ಏನಾದರೂ ಏಟಾಗಿ ಹೀಗಾಗುತ್ತಿದೆ ಅಂದುಕೊಂಡೆ. 
ದಿನ ಸಾಗಿದಂತೆ ಮಾತು  ನಿಂತದ್ದು ಮಾತ್ರವಲ್ಲ, ಒಂದು ಬದಿಯಲ್ಲಿ ತಿನ್ನಕ್ಕೂ ಆಗಲಿಲ್ಲ ನುಂಗಲು ಆಗಲಿಲ್ಲ. ಅಷ್ಟೆಲ್ಲ ಆಗುವಾಗ ಈ ತರಹ ಆದರು ಸಪುರ ಆಗಬಹುದೆಂತು ತೋಚಿತು. :-) 
ಇದಾದ ಮೂರೂ ದಿನ ಮೆಹಂದಿ, ಸಂಗೀತ, ರಿಸೆಪ್ಷಅನ್ , ಮಾಡುವೆ ಅಂತ ಮೂರೂ ದಿನ ಮನೆಯಲ್ಲಿ ನನಗೆ ಕೆಲಸ ಇರಲಿಲ್ಲ. ಮದುವೆಗೆ ಬರಲ್ಲ ಅನ್ನಲು ಧೈರ್ಯ ಬ್ರರಲಿಲ್ಲ. ಯಾರಿಗೂ ಏನು ಸುಳಿವು ಹತ್ತದ ಹಾಗೆ ವರ್ತಿಸಿದೆ. ತಿನ್ನಲು ಉಣ್ಣಲು ತುಂಬಾ ಮುಜುಗರವಾಗುತ್ತಿತ್ತು. ಯಾಕೆಂದರೆ ತುಟಿಯ ಒಂದು ಬದಿಯಿಂದ  ನನ್ನ ಊಟ ತಿಂಡಿ ಹೊರ ಬರುತ್ತೋ ಎನ್ನುವ ಅನುಮಾನ. ದೊಡ್ಡ ಟರ್ಕಿ ಟವೆಲ್ ಇಟ್ಟುಕೊಂಡು ಸೂಪ್, ಐಸ್ ಕ್ರೀಮ್ ಮಾತ್ರ ತಿಂದೆ. 
ಆಮೇಲೆ ಸಂದೀಪ ಮುಂಬಯಿಗೆ ಹೊರಟು  ಹೋದ್ರು. ನಮಗೆ ಶ್ರೀಕಾಂತ ತಂಗಿಯ ಮಗಳ ಮದುವೆ  ಉಡುಪಿಯಲ್ಲಿತ್ತು. ಅದರ ಟ್ರಾವೆಲ್ ಪ್ಲ್ಯಾನ್ ಎಲ್ಲ ನಂದೇ. ಈ ಸಲ ಕಾಸರಗೋಡು ಆ ಕಡೆ ಎಲ್ಲ ಹೋಗಿ ಬರುವ ಪ್ಲಾನ್, ಟಿಕೆಟ್ ಬುಕ್ಕಿಂಗ್ ಅ, ಹೋಟಲ್ ನ ರೂಮ್ ದೆಲ್ಲ ಬುಕ್ಕಿಂಗ್  ಮಾಡಿದೆ.  ನನ್ನ ಎಡ ಭಾಗದ ಮುಖ ಸ್ವಲ್ಪ ಜೋತು ಬಿದ್ದ ಹಾಗೆ ಕಾಣಿಸುತ್ತಿತ್ತು. ಆ ದಿನ ಲೈಬ್ರೆರಿಗೆ ಹೊರಟಿದ್ದೆ. ಮಾಲವಿಕಾ ಏನೋ ಜೋಕ್ ಮಾಡಿದ್ದಕ್ಕೆ ನಾನು ನಗುತಾ ಇದ್ದೆ. ಸಡನ್ ಆಗಿ ಅವಳು  ಕಿರುಚಿದಳು ;ಅಮ್ಮ ಯು ಆರ್ ಲುಕ್ಕಿ೦ಗ್ ಲೈಕ್ ಸಿಲ್ವೆಸ್ಟರ್ stallone ' (ಸಿಲ್ವೆಸ್ಟರ್ ಸ್ಟ್ಯಾಲೊನ್  ಸಿನಿಮಾದಲ್ಲಿ ಸ್ಟ೦ಟ್  ಮಾಡುವಾಗ ತಲೆಗೆ ಏಟಾಗಿ ಒಂದು ಕಡೆ ಸ್ಟ್ರೋಕ್ ಆಗಿದೆ. ) ಅಂತ ಅವಳ ಮುಖದ ತುಂಬಾ ಗಾಬರಿ. ಕನ್ನಡಿ ಬಳಿ ಹೋಗಿ ನಗು ಮುಖ ಮಾಡಿದೆ . ಒಂದು ಬದಿಯ ತುಟಿ ಹೊರಳದೆ ವಿಕಾರವಾಗಿ ಕಾಣಿಸುತ್ತಿತ್ತು. ಮುಖ ಸೀರಿಯಸ್ ಆಗಿಟ್ಟು ಲೈಬ್ರರಿಗೆ ಹೋಗಿ ಬಂದೆ. ಮರು ದಿನ ಶ್ರೀಕಾಂತರ ಕಸಿನ್ ಪರಿಚಯದ  ನರ ತಜ್ಞ ರ ಬಳಿ appointment ತೆಗೆದುಕೊಂಡೆ. ಪೂರ್ತಿ ಎರಡು ಗಂಟೆ ನನ್ನನ್ನು ಪರೀಕ್ಷಿಸಿದರು. ಆಮೇಲೆ MRI ಸ್ಕಾನಿಂಗ್ ಗೆ ಬರೆದು ಕೊಟ್ಟರು. ಇಶ್ಟರಲ್ಲಿ ನಾನು ಯಾರ ಬಳಿಯೂ ಫೋನ್ ನಲ್ಲಿ ಮಾತಾಡುತ್ತಿರಲಿಲ್ಲ. ತೀರಾ ಸನಿಹಕ್ಕೆ ಹೋಗಿ ಮಾತಾಡುವ ಪರಿಸ್ಥಿತಿ. ಎಲ್ಲಕ್ಕಿಂತ ಹೆಚ್ಚು ಬಾಧಿಸಿದ್ದು ಅಡುಗೆ ಮಾಡುವಾಗ ನಾನು ಅಕ್ಕ ಒಟ್ಟಾಗಿ ಹಾಡಲು ಬಾರದೇ  ಇದ್ದದ್ದು. ನಾಲ್ಕು ಸಾಲಾದರೂ ನನಗೆ ಗುನುಗಲೇ  ಬೇಕು. ರೇಡಿಯೋ ಹಾಕ್ಕೊಂಡು ಕೆಟ್ಟದಾಗಿ ಕಿರಚ ಬೇಕು. ಇವೆಲ್ಲಾ ಅಸಾಧ್ಯವಾದವು. ಮದುವೆ  ಮುಗಿಸಿಕೊಂಡು ಸ್ಕ್ಯಾನಿಂಗ್ ಮಾಡಿಸುವುದು ಅಂತ ನಿರ್ಧರಿಸಿದೆ. ಏನಾದರೂ ಹೆಚ್ಚು ಕಡಿಮೆ ರಿಪೋರ್ಟ್ ಬಂದರೆ ಇದ್ದದ್ದೇ. ಹಾಗಾಗಿ ಈ ಒಂದು ಸಲ ಟೂರ್ ಮುಗಿಸಿಕೊಂಡು ಬಂದ ಮೇಲೆ ಪುನ: ಡಾಕ್ಟರ್ ಭೇಟಿ ಮಾಡಿದರಾಯಿತು ಅಂದುಕೊಂಡೆ. 
ಊರಲ್ಲಿ , ಮದುವೆಮನೆಯಲ್ಲಿ  ಕಷ್ಟಪಟ್ಟು ಅಲ್ಪ ಸ್ವಲ್ಪ ತುಂಬಾ ವಿಚಾರ ಮಾಡಿ ಮಾತಾಡಿದೆ.ಒತ್ತಕ್ಷರಗಳಂತೂ ಮುಷ್ಕರ ಹೂಡಿದ್ದವು.  ಮುಖಕ್ಕೆ ಕೈ ಅಡ್ಡ ಇಟ್ಟು  ಮಾತನಾಡುವುದನ್ನು ಕಲಿತೆ. ತುಂಬಾ ಸುಸ್ತಾದಾಗ ದೂರ ಹೋಗಿ ಕುಳಿತೆ. ನನ್ನ ಇಷ್ಟದ ಮುದ್ದು ಸೊಸೆ ಒಂದೆರಡು ಮಾತು ಅಷ್ಟೇ ವಿನಿಮಯ ಮಾಡಲಾಯ್ತು. 
ಆ ಮೇಲೆ ನನ್ನ ತಂಗಿ ಅವಳ ಮಕ್ಕಳೊಂದಿಗೆ ಯು ಎಸ ನಿಮ್ದ ಬಂದಿಳಿದಳು. ನಾನು ಅವಳನ್ನು ಭೇಟಿಯಾಗಿ ಬಂದು ಮೇಲೆ ಡಾಕ್ಟರ ಹೋಗುತ್ತೇನೆ ಅಂತ ಹಠ ಹಿಡಿದೇ. ಅವಳು ಬರುವುದೇ ಅಪರೂಪ. ಅವಳ ಮಕ್ಕಳು ಓದಿನಲ್ಲಿ ತುಂಬಾ ಜಾಣರು. ಹಾಗಾಗಿ ಅಲ್ಲಿ ನ summer vacation ನಲ್ಲಿ ಅವರಿಬ್ಬರಿಗೂ ಸ್ಟೇಟ್ ಲೆವೆಲ್ ಪ್ರಾಜೆಕ್ಟ್  ಇರುತ್ತವೆ ಮಾಡಲು. ಒಬ್ಬಳು ವಿಜ್ಞಾ  ದಲ್ಲಿ ನಿಪುಣೆಯಾದರೆ ಚಿಕ್ಕವಳು ಲೆಕ್ಕದಲ್ಲಿ. ಹಾಗಾಗಿ ಇನ್ನು ಮುಂದೆ ನಾವು ಬೇಸಗೆ ರಜೆಯಲ್ಲಿ ಬರುವುದು ಕಷ್ಟ ಆಗುತ್ತೆ ಅಂದಿದ್ದಳು. ಅವಳಿಗೆ ಟೆನ್ಷನ್ ಕೊಡಲು ನನಗೆ ಸುತಾರಾ೦ ಇಷ್ಟವಿರಲಿಲ್ಲ. 
ಹಾಗಾಗಿ ಬೆಳಗಾವಿಗೆ ಹೋಗಿ ಬಂದೆ. ತಂಗಿ ಅಲ್ಲಿಗೆ ಬಂದಿದ್ದಳು. ಈ ಸಲ ಅವಳ ಅತ್ತೆ ಅವಳ ಜತೆ ಇದ್ದುದರಿಂದ, 'ಅವರಿಗೆ ತುಂಬಾ ಟ್ರಾವೆಲ್  ಮಾಡಲು ಆಗಲ್ಲ, ನೀನೆ  ಇಲ್ಲಿಗೆ ಬಂದು ಬಿಡು' ಅಂದಿದ್ದಳು. ಅಲ್ಲಿ ಹೋಗಿ ನಾಲ್ಕೈದು ದಿನ ಅವರ ಜತೆ ಹೋಗಿ ಇದ್ದೆ. ಅವರ ಜತೆಯೆಲ್ಲ ತುಂಬಾ ಮಾತನಾಡದ ಹಾಗೆ ಜಾಗರೂಕತೆ ವಹಿಸಿದೆ. ನನ್ನ ತಮ್ಮ ಕೂಡ ಮುಂಬೈನಿಂದ ಬಂದಿಳಿದ. ಎಲ್ಲರ ಮಾತು ಕತೆ ಗಲಾಟೆಯಲ್ಲಿ ನನ್ನ ಪ್ರಾಬ್ಲೆಮ್ ಗಳು ಯಾರಿಗೂ ಗೊತ್ತಾಗದ ಹಾಗೆ ಆಯಿತು. ನನ್ನ ಮಕ್ಕಳು ಕೂಡ ನನ್ನ ಜತೆ ಸಹಕರಿಸಿದರು. ;-) ಲವ್ ದೆಮ್ ಸೊ ಮಚ್ 
ಪುನ: ನಿಹಾ ಗೆ ವಾಪಸ್ ಹೋಗುವ ಗಡಿಬಿಡಿ. ಆಮೇಲೆ ಶ್ರೀಕಾಂತ ಆಫಿಸ್ ಟೂರ್ ಅಂತ ನಾನು ಡಾಕ್ಟರ್ ಹತ್ತಿರ ಹೋಗುವದನ್ನು ಮುಂದೂಡುತ್ತಾ ಇದ್ದೆ. ಅಷ್ಟರಲ್ಲೇ ಎಲ್ಲ ಸರಿ ಹೋಗ್ತಾ ಇದೆ ಅಂತ ನನಗೆ ಅನ್ನಿಸಿತು. ನಿಹಾ ಹತ್ತು ದಿನದ  ನಂತರ ಬಂದ ಕೂಡಲೇ ನನಗಂದಿದ್ದು, 'ಅಮ್ಮ ಯು ಆರ್ ಲುಕ್ಕಿಂಗ್  ಬೆಟ್ಟರ್ 'ಅಂತ. ಅವಳು ದಿನಾ ನನಗೆ ಡಾಕ್ಟರ್ ಬಳಿ ಹೋಗಲು ಎಸ ಎಂ ಎಸ ಮಾಡುತ್ತಿದ್ದಳು. ಆಗ ಕನ್ನಡಿ ಯಲ್ಲಿ ನೋಡಿದೆ. ನನ್ನ ಮುಖ ಸರಿಯಾಗಿತ್ತು. ಹಾಡಲು ನೋಡಿದೆ ಅದು ಸರಿಯಾಯ್ತು. ತುಟಿ ಕೂಡ ಸರಿಯಾಗಿತ್ತು.ಪ್ರತಿ  ದಿನದ   ಕೆಲಸಗಳಲ್ಲಿ ಅವನ್ನು ನಾನು ಗಮನಿಸಿಯೇ ಇರಲಿಲ್ಲ. 
ಇನ್ನು ಯಾಕೆ ಡಾಕ್ಟರ್ ಹತ್ತಿರ ಹೋಗೋದು ಅಂತ ಸುಮ್ಮನಿದ್ದುದ್ದು ಮಾತ್ರವಲ್ಲ ಫೇಸ್ ಬುಕ್ ನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದೆ. 'ಈಗ ನಾನು ಅಕ್ಕ ಪುನ: ಅಡಿಗೆ ಮನೆಯಲ್ಲಿ ಹಾಡಬಹುದು ಅಂತ. ಅದನ್ನು ನೋಡಿದ ನಿಹಾಳ ಡಾಕ್ಟರ್ ಫ್ರೆ0ಡ್, ಸರಿ ಬೈದು , ನನಗೆ MRI ಮಾಡಿಸಲೇ ಬೇಕಂತ ಸಲಹೆ ನೀಡಿದರು. 
ಪುನ: ಅದೇ ನರ  ತಜ್ಞರ ಬಳಿ ಹೋಗಿ ಹೆದರುತ್ತಾ (ಅವರು ಬಯ್ಯಬಹುದೆಂದುಕೊಂಡು) 'ಕುಟುಂಬದಲ್ಲಿ ಮದುವೆ ,ಟ್ರಾವೆಲ್ ಅದು ಇದು 'ಅಂತ ಸ್ಕ್ಯಾನಿಂಗ್ ಒಂದು  ಮಾಡಿಸಲಿಲ್ಲ, ನೀವು ಬರೆದುಕೊಟ್ಟ ಉಳಿದ ಟೆಸ್ಟ್ ಎಲ್ಲ ಆಗಿದೆ ಅಂತ ಅಂತ ಅದರ ರಿಪೋರ್ಟ್ ಕೊಟ್ಟೆ. ಸ್ಕ್ಯಾನಿಂಗ್  ಈಗ ಮಾಡಿಸಬೇಕೆಂದಿದ್ದೇನೆ , ದಯವಿಟ್ಟು ಬರೆದು ಕೊಡಿ, ನಮಗೆ ಇನ್ಸೂರೆನ್ಸ್ ಗೆ ನೆರವಾಗುತ್ತೆ ಅಂದೆ . 'ಈಗೆಲ್ಲ ಸರಿಯಿದೆಯಾ?? ಅಂತ ಕೇಳಿ ಪುನ: ಕೂಲಂಕಷವಾಗಿ ನನ್ನನ್ನು ಪರೀಕ್ಷೆಗೆ ಒಳ ಪಡಿಸಿದರು. ಇನ್ನೇನು ಸ್ಕ್ಯಾನಿಂಗ್ ಅವಶ್ಯಕತೆ ಇಲ್ಲ ಅಂತ ಹೇಳಿ ಕಳುಹಿಸಿದರು. ನನ್ನ ಉಳಿದ ರಿಪೋರ್ಟ್ಸ ನೋಡಿ ರಕ್ತ ದಲ್ಲಿ ಕಬ್ಬಿಣ ಕಡಿಮೆ ಅಂತ ಒಂದು iron tablet ಬರೆದು ಕೊಟ್ಟಿದ್ದಾರೆ. ಒಂದು ವಿಶೇಷ ಸಂಗತಿ ಇಲ್ಲಿ ಹೇಳಲೇ ಬೇಕು ನನ್ನ haemoglobiನ್  ಕೌಂಟ್  ಯಾವಾಗಲೂ 8.8 ಇರುತ್ತದೆ. ಹೆಚ್ಚಿಲ್ಲ ಕಡಿಮೆಯಿಲ್ಲ ಎಷ್ಟೇ ಔಷದ ತೆಗೆದುಕೊಂಡ್ರು ......... 
ಎಲ್ಲೋ ಒಂದು ನರಕ್ಕೆ ಇಂಫೆಕ್ಷನ್ ಆಗಿ , ಆ ಬಾತು ಕೊಂಡ ನರ ಮಿದುಳಿನಿಂದಾ  ಕಿವಿಯ ಹಿಂಭಾಗಕ್ಕೆ ಬರುವಾಗ ಅದು ಅಪ್ಪಚಿಯಾದ ಹಾಗೆ, ಕೆಲವು ಮೋಟಾರ್ ನರ್ವ್ಸ್ ಗಲಿಬಿಲಿಗೊಂಡು  ಹಾಗಾಗುತ್ತದೆಎಂದರು. ಅದು ಮರುಕಳಿಸುವ ಸಂಭವ ಅತ್ಯಂತ ವಿರಳ ಅಂತ ಕೂಡ ಹೇಳಿದರು. 
ಯಾವತ್ತೂ ಕಾಯಿಲೆ ಬೀಳದ ನಾನು ಸ್ವಲ್ಪ ಬೇಸ್ತು ಬಿದ್ದದ್ದು ಹೌದು.  ಎಫ್ ಬಿ ನಲ್ಲಿ ಹಾಕಿಕೊಂಡಾಗ ಎಷ್ಟೊಂದು  ಮಿತ್ರರ ಕಳಕಳಿ , ಮೆಸೇಜ್, ಫೋನ್ ಗಳು.......... 
anyways all's well that ends well ಅಲ್ಲವಾ? 
ಅಂದ ಹಾಗೆ ನನ್ನ ಬ್ಲಾಗ್ ಈಗ ಎಂಟು ವರ್ಷ ಹಳೆಯದಾಯ್ತು.  ಅದರ ಸೆಲೆಬ್ರೇಷನ್ ಅಂತ ಐಸ್ಕ್ರೀಮ್ ತಿಂದು ಬಂದೆವು. 

August 11, 2017

ನನ್ನ FB posts

ನಮ್ಮ ಮನೆಯ ಹತ್ತಿರದ ಗಾರ್ಡನ್ restructuring , ಟೈಲಿಂಗ್, ಗಿಡ  ನೆಡುವಿಕೆ, ಅದು, ಇದು,  ಮುಂತಾದವುಗಳಿದ್ದರಿಂದ ಆ ಗಾರ್ಡನ್  ಗೆ ಹೋಗದೆ ಸುಮಾರು ಸಮಯ  ಆಗಿತ್ತು. ಆಗ ಮೂರು  ನಾಯಿ  ಮರಿಗಳು ನನಗೆ ತುಂಬಾ ತೊಂದರೆ ಕೊಡುತ್ತಿದ್ದವು, ಮೈ ಮೇಲೆ ಹತ್ತುವುದು, ಕಾಲು ಬುಡದಲ್ಲಿ ನುಸುಳಿ ವಾಕ್ ಮಾಡಲು ತೊಂದರೆ ಕೊಡುತ್ತಿದ್ದವು. ನಾನು ಕೊನೆಗೆ ಅವರನ್ನು ಬೈದು ಆ ಕಡೆ ಕಳಿಸುತ್ತಿದ್ದೆ. ಇವತ್ತು ನಾಲ್ಕು ತಿಂಗಳುಗಳ ನಂತರ ಈ ಗಾರ್ಡನ್ ಗೆ ಹೋಗಿದ್ದೆ. ಮೂರು  ದೊಡ್ಡ ನಾಯಿಗಳು ಬಾಲ ಅಲ್ಲಾಡಿಸುತ್ತಾ ನನ್ನ ಮೈಮೇಲೆ ಬಂದು ಎರಗಿದವು. ಮೊದಲು ಅರ್ಥ ಆಗಲಿಲ್ಲ. ಇವು ಅವೇ ಮೂರು  ನಾಯಿಮರಿಗಳು. ಅಬ್ಬಾ ಅದೇನು ಪ್ರೀತಿ, ಅದೇನು ಬಾಲ ಅಲ್ಲಾಡಿಸಿ ಸ್ವಾಗತ, ಮೂಸಿ  ನೆಕ್ಕುವುದು ಎಲ್ಲ ಮಾಡಿ ನನಗೆ ವಾಕ್ ಮಾಡಲು ಬಿಡಲೇ ಇಲ್ಲ. ಸಧ್ಯ ನೆಲದ ಮೇಲೆ ಬಿಳಿಸಲಿಲ್ಲ.  ಬೇರೆ ವಾಕ್ ಮಾಡುವ ಜನರು 'ಮ್ಯಾಡಮ್ ನೀಡ್ ಎನಿ ಹೆಲ್ಪ್ ಅಂತ ಕೇಳಿದರು. ಇಲ್ಲಾ they are ಎಕ್ಸೈಟೆಡ್ ಟು ಸೀ ಮೀ after a long time ಅಂದೆ. ಯಾಕೋ ತುಂಬಾ ಖುಷಿಯಾಯ್ತು.  ನಿಹಾ ಗೆ ನಗು ಅಂದ್ರೆ ನಗು. ಸೆಲ್ ಫೋನ್ ಇದ್ರೆ ಫೋಟೋ ತೆಗಿತಿದ್ದೆ ಅಂದ್ಲು.  ಸಧ್ಯ ಅಕ್ಕ ಈ ದಿನ ವಾಕಿಂಗ್  ಬರಲಿಲ್ಲ , ಇದ್ದಿದ್ದರೆ, 'ಅಮ್ಮ ರೈಟ್ ಟೈಮ್ ಟು ಅಡಾಪ್ಟ್ ಆ ಡಾಗ್ 'ಅನ್ನುತ್ತಿದ್ದಳು.
i love cats and dogs when they belong to others.


ಮೊನ್ನೆ ಗ್ರಹಣ ಮುಗಿದ ನಂತರ ದಿ koker ಟ್ರೈಲಾಜಿ ಯಲ್ಲಿನ which is my friend's home ಸಿನಿಮಾ  ನೋಡ್ತಿದ್ದೆ. ಸಮಯ ಒಂದು ಮುಕ್ಕಾಲು ಆಗಿರ ಬಹುದು. ಕಿವಿಗೆ ಇಯರ್ ಫೋನ್ಸ್ ಹಾಕ್ಕೊಂಡಿದ್ದೆ . ಹಲವಾರು ಹೆಣ್ಣು ಮಕ್ಕಳು ಕೂಗಿಕೊಂಡ ಹಾಗೆ ಕೇಳಿಸ್ತು. ವಯಸ್ಸಾದಂತೆ ಏನಾದ್ರೂ ಹೆಚ್ಚು ಕಡಿಮೆ ಸದ್ದಾದ್ರೆ ಹೆದರಿಕೆಇಂದಾ  ಹೃದಯದ  ಬಡಿತ ಹೆಚ್ಚಾಗಿ  ಬಿಡತ್ತೆ. ಛೆ ಅಪಘಾತ ಏನಾದ್ರೂ ಆಯ್ತು ಅಂದುಕೊಂಡು ಬಾಲ್ಕನಿಗೆ  ಓಡಿದೆ . ನಮ್ಮ ಮನೆಯ ಎದುರಿನ  ರಸ್ತೆಯಲ್ಲಿ ನಿರಂತರ ಟ್ರಾಫಿಕ್ , ಅದು ಮುಗಿಯುವುದೇ ಇಲ್ಲ. ಹಾಗಾಗಿ ಸಿಗ್ನಲ್ ಬಂದ್ ಆಗುವುದೇ ಇಲ್ಲ. ಆದರೂ ಕೆಲವೊಮ್ಮೆ ಯಾವುದೇ ವಾಹನ ಕಾಣಿಸದೆ ಇದ್ರೆ ಸಿಗ್ನಲ್ ನಿರ್ಲಕ್ಷಿಸಿ ಓಡಾಡುವ ವಾಹನಗಳು ಇದ್ದಾವೆ. ಹಾಗೆ ಆ ಹೆಣ್ಣುಮಕ್ಕಳು ಕಿರುಚುವ  ಸದ್ದಿಗೆ ಬಾಲ್ಕನಿಗೆ  ಓಡಿದೆ. ನಮ್ಮ ಮನೆಯ ಎದುರಿನ ಹೋಟಲ್ ನಲ್ಲಿ ರಾತ್ರಿ ಉಳಿದುಕೊಳ್ಳುವ ಸಿಬ್ಬಂದಿಗಳು ಕೂಡ ಗಲಾಟೆ ಕೇಳಿ ಅವರ ಹೋಟಲ್ ಮಹಡಿಗೆ ಬಂದಿದ್ದರು.
ಏನು ಗೊತ್ತಾ?medical college ಹೆಸರು ಬರೆದಿರುವ  ಎರಡು ಮಿನಿ ಬಸ್ಸುಗಳು. ಟೂರ್ ಹೊರಟಿದ್ದು. ಅವರದ್ದು ರೇಸ್ ಅಂತೆ. ಒಂದು ಬಸ್ ಇನ್ನೊಂದನ್ನು ಹಿಂದಕ್ಕೆ ಹಾಕಿ ಹೋಗಿ ಬಿಡ್ತು. ಒಂದು  ಬಸ್ ಸಿಗ್ನಲ್ ನಲ್ಲಿ ಸಿಕ್ಕಿ ಹಾಕ್ಕೊಂಡಿತು. ಅದಕ್ಕೆ  ಆ ಹುಡುಗಿಯರ ಗುಂಪು ಕಿರುಚಿಕೊಳ್ತಾ ಇತ್ತು.ಎಷ್ಟು ಸಿಟ್ಟು ಬಂತಂದ್ರೆ..... idiots ಅಂತ ಬೈದೆ. ಕೈಗೇನಾದ್ರು ಸಿಕ್ಕಿದ್ರೆ ಎರಡು ಬಾರಿಸ್ತಿದ್ದೆ. ಹೂಂ ವಯಸ್ಸಾಗ್ತಾ ಸಿಟ್ಟು ಹೆಚ್ಚಾಗ್ತಾ ಇದೆ. ಸಿಗ್ನಲ್ ಎರಡು ನಿಮಿಷದ್ದು. ಅಷ್ಟು ಹೊತ್ತು ಇವರ ಕಿರುಚಾಟ.

*********************************************************************************

 ಸುಮಾರು  ಐದು ವರ್ಷ ಹಿಂದಿನ ಫ್ಲ್ಯಾಷ್ಬ್ಯಾಕ್ . ನಮ್ಮಬಿಬಿಎಂಪಿ ವತಿಯಿಂದ  ರಸ್ತೆಯ ಕ್ಲಿನಿಂಗ್ ಮಾಡುವ ಭಾಗ್ಯಮ್ಮ. ದುಡ್ಡು ಬೇಕಾದಾಗಲೆಲ್ಲಾ ತಲೆ ಕೆರೆದು  ಅಕ್ಕ (ಏನಾದರೂ ನೆವ ಹಿಡಕೊಂಡು) ಕಾಸು ಅಂತ ಹಲ್ಲು ಕಿರಿತಿದ್ಲು. ನಾನು ೧೦೦ , ೨೦೦ ಕೊಡ್ತಿದ್ದೆ. ಹೀಗೆ ಒಂದು ಸಲ ಬೆಲಂಬೆಳಗ್ಗೆ  ಗಂಟೆ ಹೊಡೆದು, 'ಅಕ್ಕ  ಕಾಸು ಕೊಡಿ 'ನನ್ನ ಮಗಳು ದೊಡ್ಡವಳಾಗ್ಅವಳೇ, ಫಂಕ್ಷನ್ ಮಾಡಬೇಕು ಅಂದ್ಲು. ೨೦೦ ರೂ , ಎರಡು ಹೊಸ ಸೀರೆ ಕೊಟ್ಟು ಕೆಳಿಸಿದೆ. ಫಂಕ್ಷನ್ ಗೆ ಬನ್ನಿ ಅಂತ ಆಮಂತ್ರಣ ಕೊಟ್ಲು. ನಾನು ಹೋಗುವ ಅಂದಾಜಿರಲಿಲ್ಲ.
ಸಂಜೆ ವಾಕ್ ಹೋದಾಗ ಅಲ್ಲೊಂದು ಶ್ಯಾಮಿಯಾನಾ, ಸ್ಟೇಜ್ , ಅದರ ಮೇಲೆ  ಸಿನಿಮಾ ಸಂಗೀತಕ್ಕೆ ಸೊಂಟ ಬಳುಕಿಸಿ ಕುಣಿಯುತ್ತಿರುವ ಹುಡುಗಿಯರು. ಅರೆ ನೋಡಿದ್ರೆ ಓ ಆ ಕಡೆ ಭಾಗ್ಯಮ್ಮ. ನನ್ನ ನೋಡಿ 'ಅಕ್ಕೋಯ್ ಇಲ್ಲಿ ಬಂದು ಕೂತುಕೊಳ್ಳಿ ಅಂತ ಒಂದು ಕುರ್ಚಿ ತೋರಿಸಿದ್ಲು. ಇನ್ನೇನು ಜಂಬರ ಅಂತ ಮನಸ್ಸಿಲ್ಲದ ಮನಸ್ಸಲ್ಲಿ ಕೂತೆ. ಸ್ಟೇಜ್ ಮೇಲೆ ಹಾಗೆ ಕಣ್ಣಾಡಿಸುತ್ತಿರುವಾಗ , ಫುಲ್ ಮೇಕ್ ಅಪ್ ಮಾಡಿ ಹೂ ಮುಡಕೊಂಡು ಮದುಮಗಳ ತರಹಾ ಸೀರೆ ಉಡಿಸಿ  ಹುಡುಗಿಯೊಬ್ಬಳು  ಕುರ್ಚಿ ಮೇಲೆ ಕೂತಿದ್ದು  ಕಾಣಿಸಿದ್ಲು. ತಲೆ ಬಗ್ಗಿಸಿ ಕೂತಿದ್ಲು. ಹೊ ಭಾಗ್ಯಮ್ಮನ ಮಗಳು ಅಂತ ಅಂದಾಜಿಸಿದೆ. ಮುಂದಿನ ಹಾಡು ಯಾವುದೋ ಹೊಸ ಹಿಂದಿ ಫಿಲ್ಮ್ ದು. ನನ್ನ ಹಿಂದಗಡೆ  ಕೆಲ ಹುಡುಗರು ನಿಂತಿದ್ದರು. 'ಆ ನೀಲಿ ಸೀರೆ ಉಟಕೊಂಡು ಕುಣಿತಿದ್ದಾಳೆ ನೋಡಲೇ, ಅದು ನನ್ನ ಹಕ್ಕಿ , ಇನ್ನೊಬ್ಬಳು ಯಾರೋ ಇನ್ನಾರದ್ದೋ ಹಕ್ಕಿ, ನನ್ನ ಹಕ್ಕಿ ಮೇಲೆ ನಿನ್ನ ಕೆಟ್ಟ ಕಣ್ಣು ಹಾಕ್ಬೇಡಲೇ, ಆಹಾ ಏನು ಸೊಂಟ  ಅನ್ನುವ ಮಾತು ಕೇಳಿ, ನಿಧಾನಕ್ಕೆ ಭಾಗ್ಯಮ್ಮನ ಕಣ್ಣು ತಪ್ಪಿಸಿ ಮನೆ ಕಡೆ ಓಡಿದೆ .

ಮೊನ್ನೆ ಬಸ್ ನಲ್ಲಿ ಹೋಗ್ತಿರಬೇಕಾದ್ರೆ ಒಂದು ಫ್ಲೆಕ್ಸ್ ಬ್ಯಾನರ್ ಕಂಡೆ "Puberty ceremony of .........." ತಾರೀಖು ,  ವಿಳಾಸ ಎಲ್ಲ ಆದ  ಮೇಲೆ ALL ARE WELCOME' ಅಂತ . ಅರೆ ಇದೇನಿದು,  ಹುಡುಗಿ ಮೈನೆರೆದಾಗ ಕುಟುಂಬದ ಆಪ್ತ ವಲಯದಲ್ಲಿ ಹೆಂಗಸರೇ ಸೇರಿ ಮಾಡುವಂತಹ ಪುಟ್ಟ ಕಾರ್ಯಕ್ಕೆ ಆಲ್ ಆರ್ ವೆಲ್ಕಮ್  ನಿಜಕ್ಕೂ ಸೋಜಿಗದ ವಿಷಯ . ಆರತಿ, ಹಾಡು ಸ್ವೀಟ್ ಇಷ್ಟರಲ್ಲೇ ಮುಗಿಸುವ ಕಾರ್ಯಕ್ರಮಕ್ಕೆ all are welcome ನೋಡಿ ತಲೆ ಒಂದು ಕ್ಷಣ ಗಿರ್ ಅಂತು ಆ ಮೇಲೆ ಮೇಲಿನ ಸಂಗತಿ ನೆನಪಾಯ್ತು.
ಅದಾದ ಆರೇ ತಿಂಗಳಿಗೆ ಭಾಗ್ಯಮ್ಮ ಪುನ: ತಲೆ ಕೆರೆದುಕೊಂಡು ಹಾಜರ್. 'ಅಕ್ಕ ಮಗಳಿಗೆ ಗಂಡು ಗೊತ್ತಾಗೇದೆ . ಕಾಸು ಕೊಡಿ ಅಂತ..
ಅಲ್ಲ ಭಾಗ್ಯಮ್ಮ ಮಗಳು ಚಿಕ್ಕವಳು, ಏನಿಷ್ಟು  ಆರ್ಜಿ೦ಟು? ಇಲ್ಲ ಅಕ್ಕ, ನಾನು ಕೆಲಸದ ಮೇಲೆ ದಿನ ಎಲ್ಲಾ  ಹೊರಗೆ ಇರ್ತೇನೆ, ಪಡ್ಡೆ ಹುಡುಗರ ಕಾಟ ಜಾಸ್ತಿ ನಮ್ಮ ಹಟ್ಟಿ  ತಾವ , ಒಳ್ಳೆ ಸಂಬಂಧ ಸಿಕೈತೆ . ನಾನು- ಸರಿ ಹುಡುಗ ಏನು ಮಾಡ್ತಾನೆ
ನಮ್ಮ ಹಾಗೆ ಬಿಬಿಎಂಪಿ ನಲ್ಲಿ ಕಸ ಎತ್ತೋದು....
ದುಡ್ಡು ಕೊಟ್ಟು ನಿಟ್ಟುಸಿರು ಬಿಟ್ಟೆ..
ಫ್ಲೆಕ್ಸ್ ಬ್ಯಾನರ್ ಬ್ಯಾನ್ ಮಾಡಬೇಕು.

July 18, 2017

July 10, 2017

ಸ್ಯಾನಿಟರಿ ನ್ಯಾಪ್ಕಿನ್ v/s ಹತ್ತಿ ಬಟ್ಟೆಯೂ

ನಾನು ಋತಿಮತಿಯಾದಾಗ ಹತ್ತನೆಯ ತರಗತಿಯಲ್ಲಿದ್ದೆ. ರಜೆಯಲ್ಲಿ ದೊಡ್ಡಮ್ಮನ ಮನೆಗೆ ಹೋದಾಗ ಆಗಿದ್ದು. ಅದರ ಬಗ್ಗೆ ನನ್ನ ಅಮ್ಮ ನನಗೆ ಏನು ಹೇಳಿರಲಿಲ್ಲ. ಶಾಲೆಯಲ್ಲಿ ಮಕ್ಕಳು ಏನೋ ಮಾತಾಡ್ತಾ ಮುಸಿ ಮುಸಿ ನಗುವುದರ ಅರ್ಥ ನನಗಾಗ ಆಗಿದ್ದು. ದೊಡ್ಡಮ್ಮ ನನ್ನ ಅಣ್ಣನ  ಬಳಿ ಜಲೇಬಿ ತರಿಸಿ, ನನಗೆ ತಿನ್ನಿಸಿ, ತಲೆ ಸ್ನಾನ ಮಾಡಿಸಿ  ಬಟ್ಟೆಯನ್ನು ಹೇಗೆ ಬಳಸಬೇಕು ಅಂತ ಹೇಳಿಕೊಟ್ಟು , ಇನ್ನು ಪ್ರತಿ ತಿಂಗಳು ಇದು ಇರುತ್ತೆ, ಮೂರುದಿನಗಳ ನಂತರ ತಲೆ ಸ್ನಾನ ಮಾಡಬೇಕು,  ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಅಂದಿದ್ದರು (ಹಿಂದಿನ ವಾರ ಅವರು ದೈವಾಧೀನರಾದರು) 
ಹೇಳಿಕೊಳ್ಳಲು ನಮ್ಮ ಅಪ್ಪ ಮುಂಬೈನ ಬ್ಯಾಂಕಿನ ದೊಡ್ಡ ಅಧಿಕಾರಿ. ಕೊಟ್ಟಿದ್ದು ಎರಡು ರೂಮಿನ ಕ್ವಾರ್ಟರ್ಸ್. ಅದರಲ್ಲಿ ನಾವು ೬ ಜನ ಮಾತ್ರವಲ್ಲ ಓದಲು, ಕೆಲಸ ಹುಡುಕಿ ಬರುವ ಸಂಬಂಧಿಕರು  ಸೇರಿರುತ್ತಿದ್ದರು. ಅಷ್ಟು ಮಾತ್ರವಲ್ಲ ಅಪ್ಪನಿಗೆ ಶೇರ್ಸ್ ನಲಿ ದುಡ್ಡು ಹೂಡುವ ಅಭ್ಯಾಸ ಇತ್ತು. ( ಆಗ ಅಮ್ಮ ದುಡ್ಡಿಗೋಸ್ಕರ ಕುಸ್ತಿ ಮಾಡಿದ್ದೆ ಬಂತು, ಈಗ ಅಪ್ಪ ಶೇರ್ ನಲ್ಲಿ ಹೂಡಿದ  ದುಡ್ಡೆಲ್ಲ ದುಪ್ಪಟ್ಟು ತಿಪ್ಪಟ್ಟು  ಆಗಿ ಅಮ್ಮನಿಗೆ ಬರುತ್ತಾ ಇದೆ, ಅಪ್ಪ ಮೂರು  ವರ್ಷಗಳ ಹಿಂದೆ ಸಾವನ್ನಪ್ಪಿದರು)  ಮುಂಬೈ ಜೀವನ ಬಲು ತುಟ್ಟಿ . ನಾನು ಅಮ್ಮ ರೇಷನ್ ಅಂಗಡಿ, ಕಡಿಮೆ ದರದಲ್ಲಿ ತರಕಾರಿ ದಿನಸಿ ಸಿಗುವ ದೂರದ ಹೋಲ್ಸೇಲ್ ಮಾರ್ಕೆಟ್ ಗೆ ದೊಡ್ಡ ದೊಡ್ಡ ಬ್ಯಾಗ್ ಹಿಡಿದುಕೊಂಡು ಲೋಕಲ್ ಟ್ರೈನ್ ಹಿಡಿದುಕೊಂಡು  ಶಾಪ್ಪಿಂಗ್ ಮಾಡಲು ಹೋಗುತ್ತಿದ್ದೆವು. ಬಿಲ್ಡಿಂಗ್ ನಲ್ಲಿರುವ ಹಲವು ಜನರು ನಮ್ಮನ್ನು ನೋಡಿ ವ್ಯಂಗ್ಯ ಮಾಡಿ   ನಗುತ್ತಿದ್ದದ್ದು ಗೊತ್ತಿದೆ ) ಅಂತದ್ದರಲ್ಲಿ ನಮಗೆ ಸ್ಯಾನಿಟರಿ ನ್ಯಾಪ್ಕಿನ್ ಗಗನ  ಕುಸುಮವೇ ಸೈ . ತಿಂಗಳು ಕೊನೆ ಅಂದರೆ ಅಮ್ಮ ಮಾಡುವ ಸರ್ಕಸ್ ನೋಡೀನೇ ನಾನು ಹೈರಾಣು. ಅದರಲ್ಲೂ ಒಂದೊಮ್ಮೆ ಮದುವೆ ಅಂತ ಹಲವಾರು ಜನ, ನಮ್ಮ ಮನೆಯಿಂದ ದಿಬ್ಬಣ ಹೋಗುವುದಂತ ೧೫ ದಿನ ನಮ್ಮ ಮನೆಯಲ್ಲೇ ಠಿಕಾಣಿ .  ಖರ್ಚು ವೆಚ್ಚ ಸರಿದೂಗಿಸಲು  ಅಮ್ಮ ಅವರ ಪ್ರೀತಿಯ, ಅವರ ಅಮ್ಮನ ನೆನಪಿಗೆ ಇದ್ದ , ಒಂದೇ ಒಂದು, ಹರಳಿನ ನೆಕ್ಲೆಸ್ ಮಾರಿದ್ದಾಗ ನನಗಾದ ಸಂಕಟ ಅಷ್ಟಿಷ್ಟಲ್ಲ . ರಾತ್ರಿ ಇಡೀ ಅತ್ತು ದಿಂಬನ್ನು ತೋಯಿಸಿದ್ದೆ.  ಯಾರಿಗೂ ಏನು ಕಡಿಮೆಯಾಗದಂತೆ ಅಮ್ಮ ನಿಭಾಯಿಸಿದ್ದರು. 
 ಅಮ್ಮ ಕೂಡ ಬಳಸುತ್ತಿದ್ದುದು ಹಳೆ ಕಾಟನ್ ಸೀರೆಯ ನ್ಯಾಪ್ಕಿನ್ . ನನಗು ಅದೇ ಅಭ್ಯಾಸ. ನನಗಿದ್ದಿದ್ದು ಬೆಳಗ್ಗಿನ ಕಾಲೇಜು . ಅಂದರೆ ೭ ರಿಂದ ಮಧ್ಯಾಹ್ನ ೧ ಗಂಟೆ. ಗೀಸರ್ ಯಾವಾಗಲೂ ಹಾಳು. ಸ್ಟವ್ ಮೇಲೆ ನಾನು ಬೆಳಿಗ್ಗೆ ನೀರು ಕಾಯಿಸಿ ಸ್ನಾನ ಮಾಡಬೇಕಿತ್ತು , ನಾಲ್ಕು ಗಂಟೆಗೆ ಎದ್ದು, ನನ್ನ ಸ್ನಾನಾದಿ ಮುಗಿಸಿ ತಮ್ಮ ತಂಗಿಯರನ್ನು ಎಬ್ಬಿಸಬೇಕಿತ್ತು. ಅದೇ ಸ್ಟೋವ್ ಮೇಲೆ ಬೆಳಗಿನ ಉಪಹಾರ ಕೂಡ ಆಗಬೇಕಿತ್ತು.  ನನ್ನ ಮುಟ್ಟಿನ ಬಟ್ಟೆ ಒಗಯಲು ನನಗೆ ಯಾವತ್ತೂ ಸಮಸ್ಯೆ ಎನಿಸಲಿಲ್ಲ. ಒಂದು ರೂಮಿನ ಬಾಗಿಲ ಹಿಂದೆ ಅಮ್ಮ ದಾರ ಕಟ್ಟಿದರು. ಮುಟ್ಟಿನ  ಬಟ್ಟೆ ವಾಷ್ ಮಾಡಿ ಅಲ್ಲಿ ಹಿಂದಕ್ಕೆ ಒಣಗಿಸುತ್ತಿದ್ದೆವು. ನಾನು ಮುಟ್ಟಾಗಿದ್ದು ಅಮ್ಮನಿಗೆ ತಿಳಿಯುತ್ತಲೂ ಇರಲಿಲ್ಲ. ಶಾಲೆಯಲ್ಲಿ ಮುಟ್ಟಿನ ದಿನಗಳಲ್ಲಿ ಎಲ್ಲ ತರಹದ ಸ್ಪೋಸ್ಟ್ಸ್ ಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೇನೆ. ತಿಂಗಳ ನೋವು ಯಾವತ್ತೂ ನನ್ನ ಬಳಿ ಸುಳಿಯಲಿಲ್ಲ. ಮದುವೆಯಾದ ಮೇಲೆ ಸೇರಿದ್ದು ತಿರ್ಥ'ಹಳ್ಳಿ ' ಗೆ. ಅಲ್ಲಿನ ಮನೆಯಲ್ಲಿ ಯಾರು ಪ್ಯಾಡ್ ಬಳಿಸಿದ್ದು ನನಗೆ ಗೊತ್ತಿಲ್ಲಾ. ಒಂದು advantage ಅಂದ್ರೆ ದೊಡ್ಡ ಮನೆ, ಹಲವಾರು ಬಳಸದೆ ಇರುವ ಕೋಣೆಗಳು, ಬಟ್ಟೆ ಒಗೆಯಲು ಪ್ರತ್ಯೇಕ ಜಾಗ etc . ಪ್ಯಾಡ್ ಕೊಳ್ಳಬಹುದಿತ್ತು ಆದರೂ ನನಗೆ ಹತ್ತಿ ಬಟ್ಟೆಯ ಅಭ್ಯಾಸ ಆಗಿತ್ತು. ಎಷ್ಟೆಲ್ಲಾ ಟೂರ್, ಟ್ರೆಕ್ಕಿಂಗ್, ಹೈಕಿಂಗ್ , ಬೈಕಿಂಗ್  ಎಲ್ಲ ಹೋಗಿದ್ದೇನೆ ನಾನು menses   ಟೈಮ್ ನಲ್ಲಿ. 
ಟ್ರಾವೆಲ್ ಮಾಡುವಾಗ ನಾನು ಹೊಚ್ಚ ಹೊಸ ಬಟ್ಟೆಗಳನ್ನು ಪ್ಯಾಡ್ ಗಳಾಗಿ  ಉಪಯೋಗಿಸುತ್ತಿದ್ದೆ. ಅವನ್ನು ತೊಳೆದು ಬಿಸಾಡುತ್ತಿದ್ದೆ. ಅಜ್ಜಿ ಅವರ ಹಳೆ ನೈನ್ yards ನ ಹತ್ತಿ ಸೀರೆ ನಮಗೋಸ್ಕರ ಇಡುತ್ತಿದ್ದರು. ಕೆಲವು ಗೋಧಡಿ (quilt)ಯಾಗುತ್ತಿದ್ದವು, ಕೆಲವು ನಾವು ಹೆಣ್ಮಕ್ಕಳಿಗೆ ಪ್ಯಾಡ್ ಗಳಾಗಿ ಪರಿವರ್ತಿತವಾಗುತ್ತಿದ್ದವು. 
ಆದರೆ ನನ್ನ ಮಕ್ಕಳು  ಸ್ನ್ಯಾನಿಟರಿ ಪ್ಯಾಡ್ಸ್ ಉಪಯೋಗಿಸುತ್ತಾರೆ. ದೊಡ್ಡವಳು 'ಛಿ  ಅದನ್ನು ಯಾರು ತೊಳೆದು ಕೊಂಡು ಕೂರುತ್ತಾರೆ ' ಅನ್ನುತ್ತಾಳೆ. ಕಿರಿಯವಳು 'ಅಮ್ಮ we  ಆರ್   ಕಾಂಟ್ರಿಬೂಟಿಂಗ್ ಟು ದಿ ಪೊಲ್ಲ್ಯೂಷನ್ ' ಅಂತಾನೆ ಪ್ಯಾಡ್ಸ್ ಉಪಯೋಗಿಸುತ್ತಾಳೆ. :-)
ತೀವೃ ಹೊಟ್ಟೆ ನೋವಿನ ಬಗ್ಗೆ ಕೇಳಿದ್ದೇನೆ ಮಾತ್ರವಲ್ಲ ನನ್ನ ಇಬ್ಬರೂ ಹುಡುಗಿಯರು ನರಳುವದನ್ನು ನೋಡಿದ್ದೇನೆ. ನನಗೆ ಅಂತಹುದ್ದೇನು ತೊಂದರೆನೇ ಇರಲಿಲ್ಲ . ಅದಕ್ಕೆ ಮುಟ್ಟಿನ ತೊಂದರೆ/ಮುಟ್ಟಿನ ನೋವು ಇದರ  ಬಗ್ಗೆ ಬರೆಯುವ ಹಕ್ಕು ನನಗಿಲ್ಲ . ಈಗಂತೂ ಅವೆಲ್ಲದರಿಂದ ಮುಕ್ತ ನಾನು. ಯಾವುದೇ ತರಹದ ಸೋಂಕು ನನ್ನನ್ನು ಬಾಧಿಸಿಲ್ಲ. ಮುಟ್ಟಿನ ಬಟ್ಟೆಗಳನ್ನು ನಾನು soapnut ನಿಂದ ತೊಳೆಯುತ್ತಿದೆ . ನಮ್ಮ ಅಜ್ಜಿಯ ಮನೆಯಲ್ಲಿ ಅದರ ದೊಡ್ಡ ಮರ ಇತ್ತು. ಕಾಯಿಗಳ ಸ್ಟಾಕ್ ಇರುತ್ತಿತ್ತು ನನ್ನ ಬಳಿ. ಕಾಯಿಗಳನ್ನು ಸ್ವಲ್ಪ ಹೊತ್ತು ಬಿಸಿನೀರಿಗೆ ಹಾಕಿದರೆ ಸಾಕು. ಸಾಕಷ್ಟು ನೊರೆ ಬರುತ್ತಿತ್ತು. ಬಟ್ಟೆಗಳೂ ಕ್ಲಿನ್. ನಾನು ಉಡುವ ಸಿಲ್ಕ್ ಸೀರೆಗಳಿಗೂ ಅದನ್ನೇ ಬಳಸುತ್ತೇನೆ ಈಗಲೂ
ವಾಕ್  ಹೋಗುವಾಗ ಕಸದ ಬುಟ್ಟಿಯಿಂದ ನಾಯಿಗಳು ನ್ಯಾಪ್ಕಿನ್ ಎಳೆದು ಅವನ್ನು ಛಿದ್ರ  ಗೊಳಿಸಿ ರಸ್ತೆ ಮೇಲೆಲ್ಲಾ ಅದನ್ನು ಹಾಕಿದಾಗ ಅಸಹ್ಯ  ಅನ್ನಿಸುತ್ತದೆ.
ಶ್ರೀಕಾಂತ ೬ ವರ್ಷಗಳ ಕಾಲ ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಡೆಪ್ಯೂಟೇಷನ್ ಮೇಲೆ ಇದ್ರು . ಅಲ್ಲಿ ಸ್ವಾ ಉದ್ಯೋಗ ತರಬೇತಿಗಳು ನಡೆದಾಗ ಹೆಣ್ಣುಮಕ್ಕಳ  ಶೌಚಾಲಾಯ ಸ್ಯಾನಿಟರಿ ಪ್ಯಾಡ್ ಗಳಿಂದ ಯಾವಾಗಲೂ ಬ್ಲಾಕ್, ನಾವು ಎಷ್ಟೊಂದು ಪೋಸ್ಟರ್ಗಳು ಮಾತ್ರವಲ್ಲ, ಹಲವಾರು ಬಾರಿ ನಾನೇ ಹೋಗಿ ಅವರಿಗೆಲ್ಲ ಹೇಳಿ ಬಂದರು ಸಹ...
ಮಕ್ಕಳು ಇಬ್ಬರಿಗೂ ಹೆಚ್ಚಿನ ರಕ್ತಸ್ರಾವದ ಬಾಧೆ ಇರುವುದರಿಂದ ನಮಗೆ ಜಾಸ್ತಿ  ಸ್ಯಾನಿಟರಿ ನ್ಯಾಪ್ಕಿನ್ಸ್ ಮನೆಗೆ ತರಬೇಕಾಗುತ್ತದೆ.  ನ್ಯಾಪ್ಕಿನ್ ಗಳನ್ನೂ  ನಾವು ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಯಿಂದ ತರೋದು.  ಸ್ವಲ್ಪ ಹಣ ಉಳಿತಾಯ ಆಗುತ್ತೆ.
ಸ್ಯಾನಿಟರಿ ಪ್ಯಾಡ್ ಮೇಲೇ  ಜಿ ಎಸ ಟಿ ಬಂದ ಮೇಲೆ ಎಲ್ಲರೂ ಅದರ ಮೇಲೆ ಬರೆಯುತ್ತಿದ್ದಾರೆ ನನ್ನದು  ನಾಲ್ಕಾಣೆ ಇರಲಿ ಅಂತ ಅಷ್ಟೇ.
ಸರಕಾರ ಪರಿಸರ ಪ್ರೇಮಿ ಪರ್ಯಾಯ ಹಾಗು ಜನರಿಗೆ ಕೈಗೆಟಕುವ ದರದಲ್ಲಿ  ಸ್ಯಾನಿಟರಿ ಪ್ಯಾಡ್ ಒದಗಿಸುವ ನಿಟ್ಟಿನಲ್ಲಿ ಈಗಲಾದರೂ ಯೋಚಿಸಬೇಕು.
(ಮಾಲವಿಕ ಯಾವುದೋ ದೊಡ್ಡ ಪುಸ್ತಕ ಓದುತ್ತಿದ್ದಾಳೆ ಹಾಗಾಗಿ ನನಗೆ ಕಂಪ್ಯೂಟರ್ ಸಿಕ್ಕಿದೆ, ಅದಕ್ಕೆ ಒಂದಾದ ಮೇಲೊಂದು  ಪೋಸ್ಟ್ ಗಳು )
:-)

July 9, 2017

ಲೈಬ್ರರಿ ಗೆ ಹೋದಾಗ - 1

ನಾವು ಬ್ರಿಟಿಷ್ ಲೈಬ್ರರಿ ಗೆ ಹೋದಾಗಲೆಲ್ಲ ಮಧ್ಯಾಹ್ನದ ಊಟಕ್ಕೆ ಬೇರೆ ಬೇರೆ eatery ಗಳಿಗೆ ಹೋಗುವುದು ಸಾಮಾನ್ಯ. ಅಲ್ಲಿ ಎಸ ಬಿ ಎಂ ಎದುರುಗಡೆ ಚೀಪ್ ಆದರೂ ರುಚಿಕರ ಹೊಟ್ಟೆತುಂಬ ಊಟ ಸಿಗುವ ಒಂದು ಪುಟ್ಟ ಹೋಟಲ್ ಇದೆ. ಹೆಚ್ಚಿನವರು ವಿದ್ಯಾರ್ಥಿಗಳು ಹಾಗು ಅಲ್ಲಿ ಅಕ್ಕ ಪಕ್ಕ ಇರುವ ಆಫೀಸ್ ನಲ್ಲಿನ ಜನರು ಬರುವುದು ರೂಢಿ. ನಾವು ಕೆಲವೊಮ್ಮೆ ಅಲ್ಲಿ ಹೋಗುತ್ತೇವೆ. ಅಲ್ಲಿ ಹೊರಗಡೆ ಕೂರಲು ಕುರ್ಚಿ ಟೇಬಲ್ ಗಳನ್ನು ಹಾಕಿದ್ದಾರೆ. ನಾನು ಸಾಧಾರಣವಾಗಿ ಒಳಗಡೆ (ಮೇಲ್ಗಡೆ ಮಾತ್ರ) ಕೂರುತ್ತೇನೆ. ಆ ದಿನ  ಜೋರು ಹಸಿವಾಗಿತ್ತು ಮಾತ್ರವಲ್ಲ ಮೇಲೆ ಕೂರಲು  ಜಾಗ ಭರ್ತಿಯಾಗಿತ್ತು. ಕೆಳಗಡೇನೇ ಕೂತೆ. ಊಟ ಮಾಡುವಾಗ ;ಅಕ್ಕ ' ಅಂತ ಕರೆದ ಹಾಗಾಯಿತು. ತಲೆ ಎತ್ತಿ ನೋಡಿದರೆ ಹೂ ಮಾರುವ ಹುಡುಗಿ. ಅವಳನ್ನು ಆ ಏರಿಯಾ ದಲ್ಲಿ ಹಲವಾರು ಬಾರಿ ನೋಡಿದ್ದೇನೆ. 'ಅಕ್ಕ ಹಸಿವೆಯಾಗಿದೆ, ನನಗೂ  ಊಟ ಕೊಡಿಸಿ ' ಅಂದಳು. ನಾನು 'ಸರಿ, ನಾನು ಊಟ ಮುಗಿಸ್ತೇನೆ ಆಮೇಲೆ ನಿನಗೋಸ್ಕರ  ಆರ್ಡರ್ ಮಾಡ್ತೇನೆ. ಅಲ್ಲಿ ಮೊದಲು ಟೋಕನ್ ಪಡೀಬೇಕು. 'ನಿನಗೇನು ಬೇಕು ಹೇಳು ' . ಅದಕ್ಕೆ ಅವಳು 'ಚಿತ್ರಾನ್ನ ಸಾಕು ' ಅಂದ್ಲು. 'ಇಲ್ಲಿ ಚಿತ್ರಾನ್ನ ಸಿಗಲ್ಲ ' ಅಂದೆ. ಅದು ನಾರ್ಥ್ ಇಂಡಿಯನ್ eatery. ಹಾಗಾದರೆ ಅಕ್ಕ (ಮಾಲವಿಕಾಳ ಕಡೆ ಬೆರಳು ತೋರಿಸುತ್ತಾ) ಏನು ತಿನ್ನುತ್ತಿದ್ದಾರೆ ನನಗು ಅದೇ ಬೇಕು ಅಂದ್ಲು. ಅದು ಪುಲಾವ್ ಅಂದೆ. ಹಾಗಾದರೆ ಪೂರಿ ಪಲ್ಯ ಅಂದ್ಲು. ಅಷ್ಟರಲ್ಲಿ ನನ್ನ ಊಟ ಆಗಿತ್ತು. ನಾನು ಮ್ಯಾನೇಜರ್ ಬಳಿ ಪೂರಿ ಇದೆಯಾ ಅಂತ ವಿಚಾರಿಸಿದೆ. 'ಯಾರು ?ಆ ಹುಡುಗಿಗಾ? ಅವರಿಗೆಲ್ಲ  ಎನ್ಕರೇಜ್ ಮಾಡಬೇಡಿ ಮೇಡಂ 'ಅವರಿಗೆ ಅದೇ ಅಭ್ಯಾಸ ಆಗುತ್ತೆ ' ಅಂದು ಅವಳಿಗೆ ಬೈದು  ಅಲ್ಲಿಂದ ಹೋಗಲು ಹೇಳಿದ, ಆ ಹುಡುಗಿ ನನ್ನ ಬಳಿ ಆಸೆಯಿಂದ ನೋಡುತ್ತಿದ್ದಳು. ಹೋಗಲಿ ಬಿಡಿ ಪಾರ್ಸೆಲ್ ಕಟ್ಟಿ ಕೊಡ್ತೀರಾ ಅಂತ ಕೇಳಿದೆ. ಇಲ್ಲ ಪಾರ್ಸೆಲ್ ಸಿಸ್ಟಮ್ ಇಲ್ಲ  ಅಂದ. ನಾನು ಅವಳಿಗೆ ದುಡ್ಡು ಕೊಟ್ಟು ನಿನಗೇನು ಬೇಕು, ಬೇಕರಿಯಿಂದ ತೆಗೆದುಕೋ ಅಂದೆ. ಈ ಹೋಟಲ್ ನಲ್ಲಿ  ಪೂರಿ ಹೇಗೂ ಇರಲಿಲ್ಲಾ. ಆ ಹುಡುಗಿಗೆ ಚಪಾತಿ ಬೇಡವಂತೆ.
ಅಲ್ಲಿಂದ ಬಂದ ಮೇಲೆ ನನಗೆ  'ಆ ಹುಡುಗಿ ನಾನು ಕೊಟ್ಟ ದುಡ್ಡು ಮ್ಯಾನೇಜರ್ ಗೆ ಕೊಟ್ಟು ಅವಳಿಷ್ಟದ ತಿಂಡಿ ತೆಗೆದುಕೊಳ್ಳ ಬಹುದಾ ಇಲ್ವಾ ಅನ್ನುವ ಪ್ರಶ್ನೆ  ಕೊರೀತಲೆ ಇತ್ತು.
ಅದರ ಮರುದಿನ ನಾವು ಚೆನೈ ಗೆ ಹೋಗಿದ್ವಿ. ಅಲ್ಲಿ ಶರವಣ ಭವನದಲ್ಲಿ ದೊಡ್ಡದಾಗಿ ಈ ಬೋರ್ಡ್ ಹಾಕಿದ್ರು
ಮ್ಯಾನೇಜರ್ ರಿಸರ್ವ್ಸ್ ದಿ ರೈಟ್ ಟು ದಿ ಎಂಟ್ರಿ ಆಫ್  ಕಸ್ಟಮರ್ಸ್ ' ಅಂತ.
ನಾವು ಆ   ದಿನ ಸ್ವಲ್ಪ ದೂರ ನಡೆದು ಹೋದ ಮೇಲೆ ಆ ಹುಡುಗಿ ಓದಿ ಬಂದು ' ಅಕ್ಕ ತೆಗೊಳ್ಳಿ ಎರಡು ಗುಲಾಬಿ ಹೂ ' ಅಂತ ಕೊಡಲು ಬಂದಳು. ನಾನು ಬೇಡ ಅಂದೆ 

July 7, 2017

ಬಹುಮಾನ ಬಂತು

ನಿಹಾ ಮಾಡಿದ logo ಗೆ ಬಹುಮಾನ ಬಂದಿದೆ. ಸುಮಾರು 4800 ಎಂಟ್ರಿಸ್ ಗಳಿಂದ ನಿಹಾಳ ಲೋಗೋ India Post Payments Bank (IPPB) ನಿಮ್ದ ಆಯ್ಕೆಯಾಗಿದೆ. ಮೊನ್ನೆ ಬೆಳಗಾವಿಯಲ್ಲಿ ಈ ಬ್ಯಾo ಕ್  ನ ಶಾಖೆ ನೋಡಿ ಎಷ್ಟೊಂದು ಖುಷಿಯಾಯ್ತು. ಭಾರತದೆಲ್ಲೆಡೆ ಇದರ 1.54 ಶಾಖೆಗಳಿವೆಯಂತೆ.
ಇಲ್ಲಿದೆ ಲೋಗೋ
The board of directors of IPPB selected the following logo entry:ಇದನ್ನು ಓದಿ ಎಷ್ಟು ಹೆಮ್ಮೆ ಪಟ್ಟೆ :-)

ಈ ಲೋಗೋ ಕಳಿಸಿ ಇದರ ಬಗ್ಗೆ ಮರೆತು ಹೋಗಿತ್ತು ಅವಳಿಗೆ. ಬಹುಮಾನದ ಮೊತ್ತದ ಹಣ ಟ್ರಾನ್ಸ್ಫರ್  ಮಾಡಲು  ಬ್ಯಾಂಕ್  ಮಾಹಿತಿ ಪಡೆಯಲು ಅವರಿಂದ ಫೋನ್ ಬಂದಾಗ ನಿಹಾಗೆ ಏನು  ಎತ್ತ ಅಂತ ಗೊತ್ತಾಗಲು ಸ್ವಲ್ಪ ಸಮಯ ಹಿಡಿಯಿತಂತೆ. ಅವಳಿಗೆ  ಕ್ಯಾಶ್ ಪ್ರೈಜ್ ಗಿಂತ ಅವರು ಕೊಡುವ ಸರ್ಟಿಫಿಕೇಟ್ ಹೆಚ್ಚು ಖುಷಿ ತಂದಿದೆಯಂತೆ, ಹಾಗು
1. Sukesh Nayak: Executive Creative Director, Ogilvy & Mather Advertising
2. Tarundeep Girdhar: Senior Professor, National Institute of Design
judging  panel ನ್ಲಲಿರೋವ್ರ ಹೆಸರು ನೋಡಿ  ಖುಷಿ ಆಗಿದೆ. 

ಟ್ಯಾಗ್ ಲೈನ್ ಮಾಡುವಾಗ ನಾವು ನಕ್ಕಿದ್ದೆ ಹೆಚ್ಚು. ಮತ್ತೆ ನಮಗೆ ಕೇರಳಕ್ಕೆ ಹೋಗುವುದಿತ್ತರಿಂದ ನಾವು ಟ್ಯಾಗ್ ಲೈನ್ ಐಡಿಯಾ ಬಿಟ್ಟು ಅವಳು ಈ ಒಂದು ಸಿಂಪಲ್ ಲೋಗೋಮಾತ್ರ  ಕಳುಹಿಸಿದಳು.

ಹೆಚ್ಚಿನ ಮಾಹಿತಿ ಹಾಗು ಆಗಾಗ ನಡೆಯುವ ಸ್ಪರ್ಧೆಗಳಲ್ಲಿ ನೀವು ಪಾಲ್ಗೊಳ್ಳಲು ಕೆಳಗಿದೆ ಇದರ ಲಿಂಕ್
India Post Payments Bank (IPPB) has been set up with a vision to provide a platform to the nation for simple, safe and secure payments banking solutions. It’s a bank for the people, and that’s why people need to form an integral part of its DNA.
To enable this as a first step,  IPPB invited the citizens of India to define its brand identity by designing a logo and tagline. The contest was launched in June 2016 and ended in September 2016. Winners of the selected logo and tagline would win Rs. 25,000 each.
The response to the contest was overwhelming with over 4800 entries!