April 28, 2026

ಎಳ್ಳು ಚಿತ್ರಾನ್ನ

 ಮೊನ್ನೆ ಭಾನುವಾರ ಜಯಮಹಲ್ ಪ್ಯಾಲೇಸ್ ನಲ್ಲಿ MTR food ನವರ food fest ಇತ್ತು...ಅಲ್ಲಿತ್ತು ಎಳ್ಳು ಚಿತ್ರಾನ್ನ. ನನಗೆ, ಅಕ್ಕ ಹಾಗೂ ಅವಳ ಸ್ನೇಹಿತೆ ಅನಘಾ ಗೆ ಇದು ತುಂಬಾ ಇಷ್ಟ ಆಯ್ತು. ನಾನು ಅಂದಾಜಲ್ಲೆ ನಿನ್ನೆ ತಯಾರಿಸಿದೆ

amma this is tastier ಅಂದ್ಲು ಮಗಳು. ನಿಹಾ ನಮ್ಮೊಂದಿಗೆ ಆ ದಿನ ಬಂದಿರಲಿಲ್ಲ. ಅವಳೂ ನಾ ಮಾಡಿದ್ದನ್ನು ತಿಂದು ಚೆನ್ನಾಗಿದೆ ಅಂದ್ಲು

ಅದಕ್ಕೂ ಮುಂಚೆ ನನ್ನ ಅಕ್ಕಿ ಹಿಟ್ಟಿನ ಉಬ್ಬು/ಉಕ್ಕರಿಸಿದ ರೊಟ್ಟಿ ಯು ಟ್ಯೂಬ್ ನಲ್ಲಿ 22,000 views ಪಡಿದಿದೆ. ಖುಷಿಯಾಯ್ತು 🙂🙏❤️

ಉಬ್ಬು ರೊಟ್ಟಿ/ಉಕ್ಕರಿಸಿದ ರೊಟ್ಟಿ

ಎಳ್ಳು ಚಿತ್ರಾನ್ನ ನಮ್ಮ ಮಾಮೂಲು ಚಿತ್ರಾನ್ನದ ಹಾಗೆಯೇ...ಕರಿ + ಬಿಳಿ ಎಳ್ಳು ಒಂದು ದೊಡ್ಡ ಚಮಚ, ಘಮ್ ಅನ್ನುವ ವರೆಗೆ ಹುರಿದು, ತಣ್ಣಗಾದ ಮೇಲೆ ಪುಡಿ ಮಾಡಿ,  ಚಿತ್ರಾನ್ನದ ಒಗ್ಗರಣೆಯಲ್ಲಿ ಬೆರೆಸೋದು..ಸ್ವಲ್ಪ ಹುಣಸೆ ಪೇಸ್ಟ್ ಬೆರೆಸೋದು, ಅರಿಶಿನ ಹಾಕ್ಲಿಕ್ಕಿಲ್ಲ..ಅಷ್ಟೇ 😁😁




 ವಿಸ್ತರಿತ recipe ಬೇಕೇ?? 🤔🤔

ಇದನ್ನೂ ನೋಡಿ 👇👇

MTR food festival



April 26, 2026

improvisation

 ಶ್ರೀಕಾಂತ್ ಗೆ  ದೈವಾಧೀನ ರಾಗುವ ಎರಡು ತಿಂಗಳ ಹಿಂದೆ, ಪ್ರತೀ ಮೂರು ದಿನಕ್ಕೊಮ್ಮೆ ಹೋಟಲ್ ಇಡ್ಲಿ ತಿನ್ನುವ ಆಸೆ ಆಗ್ತಿತ್ತು. ಚಟ್ನಿ ಮಾತ್ರ ಮನೆದೇ 😁


ನನ್ನ ಇಷ್ಟದ ಒಂದು ಪುಟ್ಟ ಅಂಗಡಿ  ಇದೆ. ರುಚಿಕರ ಆಹಾರ ಮಾತ್ರವಲ್ಲ, ಬೆಳಿಗ್ಗೆ ನಾಲ್ಕು ಗಂಟೆಗೆ ತೆರೆಯುತ್ತೆ.  ಗ್ಯಾಸ್ ಇಲ್ಲ ಅಂತ ಏನೂ complaint ಇಲ್ಲ. ಮೆನ್ಯು ನಲ್ಲಿ ಯಾವ ಐಟಂ ಕೂಡ ಕಡಿತ ಗೊಳಿಸಿಲ್ಲ. ಮತ್ತೆ ಅವರ ಲಕ್ ಅನ್ನಬಹುದು....ಅಂಗಡಿ ಇರೋ ಜಾಗ ದ ಎದುರು ಅಗಲ ರಸ್ತೆ ಮಾತ್ರವಲ್ಲದೇ ಅಷ್ಟೊಂದು ವಾಹನ ಸಂಚಾರ ಇಲ್ಲ. ವೀಡಿಯೊ ದಲ್ಲಿನ ಹಾಗೆ ರಸ್ತೆ ಪಕ್ಕ ಕಲ್ಲು ಪೇರಿಸಿ ಓಲೆ ಮಾಡಿಕೊಂಡಿದ್ದಾರೆ. ಪಲಾವ್ ರೆಡಿಯಾಗ್ತಿದೆ 😁👍

BTM eatery

ನನಗೆ ಒಂದು ಬೇಜಾರಿದೆ. ಯಾಕೆ ನಮ್ಮ ದೇಶ ಸೌರ ಶಕ್ತಿ ಉಪಯೋಗಿಸುತ್ತಿಲ್ಲ ಎಂದು? ನನ್ನ ತಂಗಿ ಮಗಳು ನಾನು ತುಂಬಾ ಪ್ರಯಾಣ ಕೈಗೊಳ್ಳುತ್ತೇನೆಂದು ನನಗೆ ಪುಟ್ಟದೊಂದು ಸೌರ ಟಾರ್ಚ್ ಕೊಟ್ಟಿದ್ದಳು....ಸ್ವಲ್ಪ ಬೆಳಕಿದ್ದರೂ ಸಾಕು ಅದು ತನ್ನಷ್ಟಕ್ಕೇ ಚಾರ್ಜ್ ಆಗ್ತಾ ಇರ್ತದೆ...(ಕಡೆಗೊಂದು ದಿನ ಅದು ಕಾಣೆಯಾಯ್ತು. ಮನೆಯೆಲ್ಲ ಮೇಲೆ ಕೆಳಗೆ ಮಾಡಿ ಹುಡುಕಿದೆ. ಲಾಸ್ಟ್ ಅದು ಶ್ರೀಕಾಂತ್ ಗೆ ಕೊಟ್ಟಿದ್ದ ನೆನಪು..ಆದರೆ ಅವರು ಬಿಲ್ಕುಲ್ ಅದರ ಬಗ್ಗೆ ಗೊತ್ತಿಲ್ಲ ಅಂದರು..ನಾನೂ ಸುಮ್ಮನಾದೆ. ಕೆಲವೊಂದು ತಿಂಗಳ ನಂತರ ಅವರ ಅಕ್ಕನ ಮನೆಗೆ ಹೋದಾಗ ಅಲ್ಲಿತ್ತು. 'ಓ ಇಲ್ಲ8ದೇ ನನ್ನ ಟಾರ್ಚ್, ಹಿಂದಿನ ಸಲ ಇಲ್ಲಿಗೆ ಬಂದಾಗ ಶ್ರೀಕಾಂತ್ ಬಿಟ್ಟು ಹೋಗಿರಬೇಕು' ಅಂದೆ ನನ್ನ ನಾದಿನಿಯ ಬಳಿ. ಅದಕ್ಕೆ ಅವರು ' ಇಲ್ಲ, ನನಗೆ ಟಾರ್ಚ್  ಇಷ್ಟ ಆಗಿದೆ, ನನಗೆ ಕೊಡು' ಅಂತ ಇಸ್ಕೊಂಡೆ ಅಂದ್ರು...🤔🤔)

ಹಾಗೆ ಸೂರ್ಯ ನಿಗೆ ಏಳುವ ಮೂಡ್ ಇಲ್ಲದಿದ್ದರೆ ಸೌರ battery ಗಳನ್ನು ಮಾಡಿ ಇಡಬಹುದು. ನನ್ನ ದಿವಂಗತ ಸ್ನೇಹಿತೆ ಸೂಸಿ ಮನೆಯಲ್ಲಿ ಇಂತಹ ವ್ಯವಸ್ಥೆ ಇತ್ತು...ಬಾವಿಯಿಂದ ನೀರು.ಕೂಡ ಸೌರ ಶಕ್ತಿಯಿಂದಲೆ ಟ್ಯಾ0ಕೆಗೆ ತುಂಬಿಸುತ್ತಿದ್ದರು. ಮಳೆಗಾಲಕ್ಕೆ ಉಪಯೋಗಿಸಲು  ಸೌರ ಬ್ಯಾಟರಿ ಕೂಡ ಇತ್ತು. ಆದರೆ ಅದು ಹಾಳಾದ ಮೇಲೆ ರಿಪೇರಿ ಆಗಲಿಲ್ಲ ಅಂದ್ರು.

ಆ ನಿಟ್ಟಿನಲ್ಲಿ ಸ್ವಲ್ಪ research ಮಾಡಿದರೆ ಒಳಿತಿತ್ತು ಸಂತ ನನ್ನ ಅನಿಸಿಕೆ..ನೀವೆನ್ನನ್ನುತ್ತೀರಾ?

ತೀರ್ಥಹಳ್ಳಿಯಲ್ಲಿ ನಾವು ತೋಟದ ಮನೆಗೆ ಸೋಲಾರ್ ಹಾಕಿಸುವಾ ಅಂದಿದ್ದೆ..ಅವರೂ ಹೂಂ ಅಂದಿದ್ರು...

ಅಷ್ಟೇ...ಸುಮ್ನೆ....

April 20, 2026

4 months without you

 

                  two years ago...jog falls

ಒಬ್ಬ ಸಂಬಂಧಿಕರ complaint ಇತ್ತು. ನಮಗ್ಯಾರಿಗೂ serious ಅಂತ ಹೇಳೇ ಇಲ್ಲ. ನಾವು ಬರ್ತಿದ್ವಿ ಶ್ರೀಕಾಂತ್ ನನ್ನು ನೋಡಲು ಅಂತ....


20ನೆ dec ರಂದು ಬೆಳಿಗ್ಗೆ  ಡಾಕ್ಟರ್..'ಏನೂ improvement ಇಲ್ಲ. ಹೊಟ್ಟೆಯಲ್ಲಿ ಎದೆಯಲ್ಲಿ clot ಆಗಿದೆ. ಹೆಚ್ಚಂದ್ರೆ 10 ದಿನ. ventilator ನಾನು suggest ಮಾಡಲ್ಲ. ವಾರ್ಡ್ ಗೆ ಶಿಫ್ಟ್ ಮಾಡ್ತೇವೆ...comfortable ಆಗಿರಲಿಕ್ಕೆ ಅಷ್ಟೇ ಔಷಧಿ ಕೊಡ್ತೇವೆ....ಫ್ಯಾಮಿಲಿ ಮೆನ್ಬರ್ಸ್ ಎಲ್ಲ ಬಂದು ನೋಡಲಿಕ್ಕೆ ನಾವು ಅಡ್ಡಿ ಮಾಡಲ್ಲ ಅಂದ್ರು...ನಾನು ಕೆಳಗಡೆ toilet ಗೆ ಹೋಗಿ ಅತ್ತು ಬಂದೆ....ಕೊಪ್ಪ ದಿಂದ ಸ್ನೇಹಿತರು ಬಂದಿದ್ದರು....ವಿಸಿಟಿಂಗ್ ಟೈಮ್ ಅಂತ ಅವರನ್ನು ಕರೆದುಕೊಂಡು ಐಸಿಯು ಗೆ ಲಿಫ್ಟ್ ನಲ್ಲಿ ಹೋಗಬೇಕಾದ್ರೆ ಅಲ್ಲಿಂದ ಕಾಲ್ ಬಂತು...ಬೇಗ ಮೇಲೆ ಬನ್ನಿ cardiac ಅರೆಸ್ಟ್ ಆಗಿದೆ ಅಂತ....ಎಷ್ಟು ಸಡನ್ ಅಂದ್ರೆ ಏನು ಮಾಡಬೇಕೆಂದು ತೋಚಲಿಲ್ಲ..
ವಾರ್ಡ್ ಗೆ ಶಿಘ್ಟ್ ಆದ ಮೇಲೆ ಅವರನ್ನು comfortable ಆಗಿ ಇಡೋದು.. ಅವರ ಇಷ್ಟದ ಅವರಮ್ಮನ ಶಾಲ್ ಅವರಿಗೆ ಹೊದಿಸೋದು, ಅವರ ಇಷ್ಟದ ಸಂಗೀತ / ಹಾಡು...ಪಂಡಿತ್ ವೆಂಕಟೇಶ್ ಕುಮಾರ, ಗಂಗೂಬಾಯಿ ಹಾನಗಲ್, ಕಿಶೋರಿ ಅಮೊಂಕರ್,  ಉಸ್ತಾದ್ ರಶೀದ್ ಖಾನ್ ಸಂಗೀತ ಎಲ್ಲ ಹಾಕಿ ಕೇಳಿಸೋದು, ಯಾವ ಯಾವ ಸಂಬಂಧಿಕರಿಗೆ ಕರೀಬೇಕು ಅಂತೆಲ್ಲ ಪ್ಲಾನ್ ಹಾಕುವಾಗ ಸಡನ್ ಹೋಗಿ ಬಿಟ್ರು....ದಿಕ್ಕು ತೋಚದಂತಾಗಿತ್ತು...ಯಾರ್ ಯಾರ್ ಗೆ ಮೆಸೇಜ್ ಮಾಡಿದೆ ಗೊತ್ತಿಲ್ಲ....automaton mode ನಲ್ಲಿದ್ದೆ..

liver cirrhosis ಪತ್ತೆಯಾದಾಗ ನನ್ನ immediate family members,  ಶ್ರೀಕಾಂತ್ ಒಬ್ಬ ಅಣ್ಣನ ಮಗಳಿಗೆ ಮಾತ್ರ ತಿಳಿಸಿದ್ದೆವು...ಹುಷಾರಾಗುತ್ತಾರೆ ಅನ್ನುವ ಬಲವಾದ ನಂಬಿಕೆಯಿತ್ತು...ಆಗಸ್ಟ್ ರಿಂದ ಆಕ್ಟೊಬರ್ ..ಆರೋಗ್ಯದಲ್ಲಿ ಸುಮಾರು ಬದಲವಾಣೆಯಿತ್ತು...ಮತ್ತೆ  ಒಂದು ಸಲ ammonia ಜಾಸ್ತಿ ಆಗಿ ಈ ಕಡೆಯ ಪರಿವೆಯೇ ಇರಲಿಲ್ಲ. ಡಾ urine infection ನಿಂದ...ಪೂರ್ತಿ ಮೂತ್ರ ಹೊರ ಹೋಗದೆ ಹಾಗಾಗೋದು...ಅಂದ್ರು...
urinary infection ಅಂದಾಗ ನಾನು 'ನಾನು ಖುದ್ದಾಗಿ ಅವರ toilet clean ಮಾಡೋದು...ಅವರೊಬ್ಬರೇ ಅದನ್ನು ಉಪಯೋಗಿಸೋದು' ಅಂತ emotional ಆಗಿ ಹೇಳ್ತಿರಬೇಕಾದ್ರೆ.....
toilet ಗಲೀಜು ಕಾರಣ ಅಲ್ಲ. prostrate enlarge ಆಗಿ bladder ಮೇಲೆ pressure ಬಿದ್ಫು..ಪೂರ್ತಿ ಮೂತ್ರ ಖಾಲಿ ಆಗಲ್ಲ....ಅದ್ದರಿಂದ ಪದೇ ಪದೇ infection ಆಗುತ್ತೆ....liver transplant ಗೇ ಅಂತ ಸಜ್ಜಾದಾಗ ಯಾವುದೇ ಸರ್ಜರಿ ನಾವು ರಿಕಮೆಂಡ್
ಮಾಡಲ್ಲ ಅಂದ್ರು...liver  ಸಿಕ್ಕಿತ್ತು...ನಮ್ಮ ದುರ್ಭಾಗ್ಯ...ಕೊನೆಗೆ urinary infection ನಿಂದ ಕಿಡ್ನಿ ಕೆಲಸ ಮಾಡೋದು ನಿಂತೆ ಹೋಯ್ತು...ಮೂತ್ರದ ಚೀಲ ಅಳವಡಿಸಿದರು, dialysis ಆಯ್ತು.. ಉಹೂಂ....😭😭

ಇವತ್ತಿಗೆ ನಾಲ್ಕು ತಿಂಗಳಾಯ್ತು ಹೋಗಿ...🙏🙏

April 17, 2026

Unfermented Dosa/dose


ನನ್ನ ತಮ್ಮನ ಮಗಳಿಗೆ fermented ತಿಂಡಿಗಳು ಇಷ್ಟ ಆಗಲ್ಲ. ಅವಳಿಗೆ ಉದ್ದು-ಮೈದಾ ದೋಸೆ, ನೀರು ದೋಸೆ ಮತ್ತು ಕೆಳಗೆ ಕೊಟ್ಟಿರುವ ದೋಸೆ ಇಷ್ಟ.

ಕೊಂಕಣಿಯಲ್ಲಿ ಕರ್ ಕರ್ ಮಚಕಟ್ ಅಂತ ಹೆಸರು...ಸ್ವಲ್ಪ ದಪ್ಪ ಹುಯ್ಯಬೇಕು..

2 ಗ್ಲಾಸ್ ಅಕ್ಕಿ, 2 tb sp ಉದ್ದಿನ ಬೇಳೆ, 2 ಟೇಬಲ್ ಚಮಚ ತಾಜಾ ಕಾಯಿ ತುರಿ

ನಾನು ನಾಲ್ಕು ಗಂಟೆಗೆ ಎದ್ದಿರುತ್ತೇನೆ ಅಂತ ಹಲವಾರು ಬಾರಿ ಬ್ಲಾಗ್ ನಲ್ಲಿ ಹಾಕಿದ್ದೇನೆ....so ನಾಲ್ಕು ಗಂಟೆಗೆ ನೀರಲ್ಲಿ ನೆನೆಸ್ತೀನಿ. ಚಹಾ ಕುಡಿದು..ವಾಕ್ ಹೋಗಿ..6 ಗಂಟೆಗೆ ಎರಡು table spoon ತಾಜಾ ತೆಂಗಿನ ಕಾಯಿ ತುರಿ ಹಾಕಿ ತರಿ ತರಿ ಯಾಗಿ ರುಬ್ಬಿ..ಉಪ್ಪು ಬೆರೆಸಿ, regular ದೋಸೆ ಹಿಟ್ಟಿಗಿಂತ ,ಹಿಟ್ಟು ಸ್ವಲ್ಪ ನೀರು ನೀರಾಗಿರಲಿ batter.  ಬಿಸಿ ಬಿಸಿ ದೋಸೆ ಹುಯ್ದು, ಬಿಸಿ ಇರುವಾಗಲೇ ಬೆಣ್ಣೆ ಜತೆ ಜಮಾಯಿಸಿ..ನನಗೆ ಥ್ಯಾಂಕ್ಸ್ ಹೇಳಿ 🙂🙏❤️

ಚಿತ್ರದಲ್ಲಿ salted butter ಮತ್ತು  shadrasa cooking channel  ನಲ್ಲಿರಿವ, ಮಂಜೇಶ್ವರ ದೇವಸ್ಥಾನದಲ್ಲಿ ಊಟಕ್ಕೆ ಬಡಿಸುವ ಟೊಮೆಟೊ ಗೊಜ್ಜು...ನೋ ನೀರುಳ್ಳಿ ನೋ ಬೆಳ್ಳುಳ್ಳಿ...yet yummy

yummy crisp unfermented dosa

unfermented : ಹುದುಗು ಬರದ / ಹುಳಿಯಾಗಿರದ




April 12, 2026

Orchids

 ಹಿಂದಿನ ವಾರ ಎಲ್ಲ ಗಿಡಗಳಿಗೆ ನೀರು ಹಾಕ್ತಾ ಇದ್ದೆ. ಈ ಆರ್ಕಿಡ್ಗ  ಗಿಡ ಗಳಿಗೆ ತುಂಬಾ ನೀರು ಹಾಕಬಾರದು ಅಂತಾರೆ...ಹಾಗೂ ನನ್ನ ಬಳಿ ಈ ಗಿಡಗಳು ಉಳಿಯಲ್ಲ...ನನಗೂ ಅವಕ್ಕೂ ಕೂಡಿ ಬರಲ್ಲ....ಈ ಗಿಡಗಳು ನನ್ನ ಹುಟ್ಟು ಹಬ್ಬಕ್ಕೆ ರಾಧಿಕಾ ಗಂಗಣ್ಣ ಉಡುಗೊರೆಯಾಗಿ ಕಳಿಸಿದ್ದು....ಬಿಟ್ಟ ಹೂ ಮೂರು ತಿಂಗಳು ಇರುತ್ತೆ..ಇತ್ತು...

ಮೊನ್ನೆ ನೋಡಿದಾಗ ಗಿಡ ಎಲ್ಲ ಒಣಗಿದ ಹಾಗೆ ಅನ್ನಿಸಿ....'ಎಷ್ಟೊಂದು ಸೆಕೆ ಇದೆ...ನಿಮಗೆ ನೀರು ಕುಡಿಯಲು ಏನು ಧಾಡಿ' 'ಸುಮ್ನೆ ನಾಟಕ ಆಡಬೇಡಿ' ಅಂತ ಸರಿ ಬೈದು ಮೂರು ಆರ್ಕಿಡ್ ಗಿಡಕ್ಕೂ ಅರ್ಧ ಅರ್ಧ ಗ್ಲಾಸ್ ನೀರು ಸುರಿದೆ.

ನಿಹಾಳ ಸ್ನೇಹಿತೆ (ಖ್ಯಾತ ಬರಹಗಾರರ niece - ಬರಗಾರರು ಶ್ರೀಕಾಂತ್ ಗೆ friend and colleague) ಮನೆಗೆ ಬಂದಾಗ ಗಿಡಗಳ ಬಗ್ಗೆ ಮಾತು ಬಂದಾಗ ನಿಹಾ 'ಅಮ್ಮ ಊರಲ್ಲಿಲ್ಲದಿದ್ದಾಗ ನಾವು ನೀರು ಹಾಕಿದ್ರೂ ಸ್ವಲ್ಪ ದಿನ ಆದ ಮೇಲೆ ಗಿಡ ಡಲ್ ಕಾಣ್ ತಾವೆ, ಅಂದ್ರೆ ಅವಳು ಇದನ್ನು ಅನುಮೋದಿಸಿದಳು.   ನಮ್ಮಲ್ಲೂ ಹಾಗೆ ಅಮ್ಮ, ಅಣ್ಣನ ಮನೆಗೆ ಕೆಲ ದಿನ ಹೋಗಿ ಇದ್ದಾಗ , ನಾನು ಅಪ್ಪ ನೀರೆಲ್ಲ ಹಾಕತೆವೆ...ಸೇಮ್ ಕತೆ ಅಂತ....ಅದಕ್ಕೆ ನಾನು 'ಹೌದು, ನಾನು ಗಿಡಗಳ ಜತೆ ಮಾತು ಕತೆ ಆಡ್ತೀನಿ, ಹಾಡ್ತೀನಿ..i caress the plants ಅಂದೆ...
ಶ್ರೀಕಾಂತ್ ಗೂ ತುಂಬಾ ಇಷ್ಟ ಈ ಹುಡುಗಿ...ಸಮಯ ಹೋದದ್ದೇ ತಿಳಿಯಲ್ಲ..ಅಷ್ಟು ಮಾತು ನಗು, mimicry.. we talk about everything under the sun..🙂🙂 ನಾನು ಮೀನು ಅಡಿಗೆ ಮಾಡಿದಾಗಲೆಲ್ಲ ಅವಳಿಗೆ invite ಇರುತ್ತೆ.

ಇವತ್ತು ಆರ್ಕಿಡ್ ಗಿಡ ನೋಡಿಡ್ರೆ 😁😁❤️❤️ 👇👇


ಶ್ರೀಕಾಂತ್ ಇದ್ದಾಗ ಊಟಕ್ಕೆ ಬಂದಾಗ ಮಾಡಿದ್ಫು 👇👇

ಮೀನು ಊಟದ ಪ್ಲೇಟ್

April 4, 2026

ಒಂದು ಕಪ್ ಚಹಾ

 


ದಸರಾ ದಿನದಂದು, ದೀಪಾವಳಿಗೆ ಬರುವ  ನನ್ನ ಹುಟ್ಟು ಹಬ್ಬದ  ಮುಂಚಿತ ಉಡುಗೊರೆಯಾಗಿ, ಅಕ್ಕ, ಬ್ಯೂಟಿ salon ಅನ್ನೇ ಮನೆಗೆ ಕರೆಸಿದಳು.  8.30 ಗೆ ಬಂದಿದ್ಫು ಎಲ್ಲ ಕೆಲಸ ಮುಗಿಸುವಾಗ 1.00 ಗಂಟೆ. ಹಬ್ಬದ ದಿನ ನನಗೆ ಪಾಪ ಅನ್ನಿಸ್ತು. ಊಟ ಮಾಡಿ ಹೋಗಿ ಅಂದೆ. ಇಲ್ಲ, ಮನೆಯಲ್ಲಿ ಆಕೆಯ ತಂಗಿ ಮೈಸೂರಿನ ಹಳ್ಳಿಯಿಂದ ಇಲ್ಲಿಗೆ ಕಾಲೇಜು ಕಲಿಯಲು ಇವರ ಮನೆಯಲ್ಲೇ ಇದ್ದಾಳೆಂದೂ, 6 ವರ್ಷದ ಮಗಳು ಮನೆಯಲ್ಲಿ.ಇದ್ದಾಳೆಂದು...ತಂಗಿ ಅಡಿಗೆ ಮಾಡುತ್ತಾಳೆ ಅಂದ್ರು...ಅವರ ಗಂಡ factory ಕೆಲಸ, ಇವತ್ತು ರಜೆ ಇಲ್ಲ ಅಂದ್ರು...11.00 ಗಂಟೆಗೆ  ನಾನು ಚಹಾ ಮಾಡಿದಾಗ , ಅವರಿಗೂ ಕೊಟ್ಟು, ನಮಗೆ ಆ ದಿನ ಇಡ್ಲಿ ಸಾಂಬಾರು....ಕೊಡ್ಲಾ ಅಂದ್ರೆ ಬೇಡ ತಿಂಡಿ ಆಗಿ ನೆ ಬಂದಿದ್ಫು ಅಂದ್ರು  ಸ್ವಲ್ಪ ಕುರುಕುಲು ತಿಂಡಿಗಳನ್ನು ಕೊಟ್ಟೆ...ಎಲ್ಲಾ ತಿಂಡಿ ಚೆನ್ನಾಗಿ ತಿಂದ್ರು...ಅವರ ಗಂಡ ಶ್ರೀ0ಗೇರಿ ಯವರು ಅಂದ ಕೂಡಲೇ ಶ್ರೀಕಾಂತ್ ಕಿವಿ ಚುರುಕಾಯಿತು...ಅವರ ಬಗ್ಗೆ ಎಲ್ಲ ಕೇಳಿ ತಿಳಕೊಂಡ್ರು..ದಿನಕ್ಕೆ ಎಷ್ಟು ದುಡಿತಾರೆ, app ಮೂಲಕ ಬಂದ್ರೆ parlour ನವರು ಇವರಿಗೆ. ಎಷ್ಟು ಕೊಡ್ತಾರೆ, insurance ಹಾಗೆ ಹೀಗೆ ಅಂತ.....ನಾನು facial, ಹುಬ್ಬಿನ ಆಕಾರ ಮಾಡಿಸಿದೆ...ಮಕ್ಕಳು ಪೆಡಿಕ್ಯೂರ್.....ಹುಷಾರಿಲ್ಲದ ಶ್ರೀಕಾಂತ್ ಇದನ್ನೆಲ್ಲ ನೋಡಿ ಸಖತ್ impressed ಉ.....

ಮರುದಿನ ಅಕ್ಕನಿಗೆ 'ಅಕ್ಕಾ ನನಗೂ ಮಸಾಜ್ ಎಲ್ಲ ಮಾಡಿಸಬೇಕೆಂದು ಆಸೆ ಆಗಿದೇ ಅಂದ್ರು...ಕೂಡಲೇ ಅಕ್ಕಾ ಆ ಭಾನುವಾರ ಅವರಿಗೋಸ್ಕರ ಹೋಮ್ grooming ಬುಕ್ ಮಾಡಿದಳು....
ಅವನೂ ಕರೆಕ್ಟ್ 8 ಗಂಟೆಗೆ ಆಕಳಿಸುತ್ತಾ ಬಂದ....ನಮ್ಮ ರಾಯರೋ ಸ್ನೇಹ/ಸಂಘ ಜೀವಿ....ವಟವಟ ಮಾತಾಡ್ ಬೇಕು...ಅವನಿಗೋ ಮಾತೇ ಬೇಡ ದ ತರಹ.ಶ್ರೀಕಾಂತ್ ಹತ್ತು ಮಾತಾಡಿದ್ರೆ ಅವನು ಅರ್ಧ ಮಾತಾಡ್ತಿದ್ದ..,😁..ನಾನು ಶ್ರೀಕಾಂತ್ ಗೆ ಕೊಂಕಣಿಯಲ್ಲಿ ಈಗ ಎದ್ದಿರಬಹುದು., ಸಂಡೆ ಬೇರೆ...ಸುಮ್ಮನಿರಿ ಸ್ವಲ್ಪ ಹೊತ್ತು ಅಂದೆ....ಬೇಗ ಬೇಗ ನೆ ಬಿಸಿ ಬಿಸಿ ಟಿ ಮಾಡಿದೆ ಇಬ್ಬರಿಗೂ...ದೋಸೆ ತಿನ್ನುತ್ತಿಯಾ ಬೇಟಾ ಅಂದೆ....ಚುಟುಕಾಗಿ ಬೇಡ ಅಂದ...ಆದರೆ ಚಹಾ ಜತೆ ಮೂರು ನಾಲ್ಕ್ಯ್ ಬಗೆಯ ಬಿಸ್ಕಿಟ್, ಖಾರಿ ಬಿಸ್ಕತ್ತು ಮುಂತಾದು ಇಟ್ಟೆ....ಟೇಬಲ್ ಬಳಿ ಕುರ್ಚಿ ಎಳೆದು ಆರಾಮಾಗಿ ಪವಡಿಸಿ ಎರಡು ಗುಟುಕು ಚಹಾ ಕುಡಿದಿದ್ದೆ  ಹುಡುಗ ಚುರುಕಾಗಿ ಬಿಟ್ಟ....ಮಾ ಜಿ,  ಹಮಾರಿ ಮಾ ಭಿ   ಐಸೆ ಹೀ ಮಜೆದಾರ್ ಚಾಯ್ ಬನಾತಿ ಹೈ...ಮಾ ಕಿ ಯಾದ್ ಆ ಗಯಿ' ಅಂತ ಖುಷ್ ಆಗಿ ಬಿಟ್ಟ..ಪ್ಲೇಟ್ ನಲ್ಲಿ ಇಟ್ಟ ತಿಂಡಿಗಳನ್ನೆಲ್ಲಾ ನೀಟಾಗಿ ತಿಂದು..ಪ್ಲೇಟ್, ಚಹಾ ದ ಕಪ್ , ನಾನು ಬೇಡ ಬೇಡ ಅಂದ್ರು, ಅಡಿಗೆ ಮನೆಗೆ ಬಂದು, ತೊಳೆದು ಇಟ್ಟ..ದೇಖಿಯೇ ಮೇರಿ ಚಾಯ್ ಕಾ ಕಮಾಲ್ ಅಂತ.ಮಕ್ಕಳು ನಾನು ಅಡಿಗೆ ಮನೆಯಲ್ಲಿ ಮುಸು  ಮುಸು ನಗ್ತಾ ಇದ್ವಿ... ಶ್ರೀಕಾಂತ್ ಗೂ ಒಳ್ಳೆ ಮಸಾಜ್, ಹೇಯರ್ ಕಟ್,  ಪೀಡಿಕ್ಯೋರ್ ಎಲ್ಲ ಮಾಡಿ...ಸೈ ಆನಿಸಿಕೊಂಡ...ಉತ್ತರಾಖಂಡ್ ದವನಂತೆ..ಅಪ್ಪ ,ಅಮ್ಮ ತಂಗಿ , ತಮ್ಮ ಎಲ್ಲ ಖೇತಿ ಮಾಡ್ತಾರೆ ಅಂದ...ಜೀವನ ತುಂಬಾ ಕಷ್ಟ...ತಂಗಿಗೆ ಮದುವೆ ಮಾಡಬೇಕು ಅಂತೆಲ್ಲ ಅಂದ...ಯಾವ ಬೇಳೆ, ಅವರ ಆಹಾರ ವಿಧಾನಗಳನ್ನೆಲ್ಲ ಶ್ರೀಕಾಂತ್ ಕೇಳಿ ತಿಳಕೊಂಡ್ರು....ಹಿಂದಿನ ರಾತ್ರಿ ತುಂಬಾ kelasa ಇದ್ದು ರಾತ್ರಿ ಮಲಗುವಾಗ ಲೇಟ್ ಆಗಿ ಬಹುಶಃ ಮೂಡ್ ಹಾಳಾಗಿತ್ತೇನೋ....ಏಕ್ ಕಪ್ ಚಾಯ್ ನೆ ಸಬ್ ಕುಚ್ ಬದಲ್ ದಿಯಾ..😁😁
ಅಕ್ಕ ದಸರಾ ಗೆ ಮಾಡಿದ ಚಾಕೊಲೇಟ್ ಕೊಟ್ಟೆ...ಥಾಂಕ್ you ಮಾಜಿ ಅಂತ ಕಾಲಿಗೆ ಎರಗಿ ಹೋದ  ಹುಡುಗ...😁😁
ಶ್ರೀಕಾಂತ್ ಅವನು ಹಿದ ಮೇಲೆ ಎಷ್ಟು ದುಡ್ಡು ಆಯ್ತು ಅಂತ ಕೇಳಿದ್ರೆ...ಅಕ್ಕ 'ask no questions and you will be told no lies' ಒಲಿವರ್ ಗೋಲ್ಡ್ ಸ್ಮಿತ್ ಅವರ ಗಾದೆ ಉದುರಿಸಿ ನಗಿಸಿದಳು ' 😁😁
 am glad  we got to do these little things for srikanth ..😭😭






March 28, 2026

ಬಣ್ಣ -my ಬಣ್ಣ 😧

 i noticed those  girls while entering the hospital cafe. Both were very pretty..looked alike. Maybe sisters or even twins. Both were engrossed with their cell phones. Niha took turns sitting in the ward with Srikanth and she asked me go and have a leisurely tea. i ordered a tea and a veggie puff and sat in a toasty sunlit corner.  Found a discarded newspaper. opened the crossword part , found a pen in my bag and started solving. 'Auntie' someone called near my ear. i turned towards the voice and found one of the pretty girls. besides me.  'aunty i just wanted to compliment on your beautiful skin colouring', it is amazing. Me, i am not used to nor take easily to praise...arre what does this girl want,  i think..but sensibility/manners made me thank her...she must have seen the confusion/doubt in my face...'my sister thinks so too'....we haven't seen such colouring on anybody....i said this is the 'first time i am hearing of it...and turned to my crossword.....suddenly i realized i was sitting in the sunlight..i smiled at the girl who was still sitting beside me ...haha it is the sunlight...see 😁. she replied 'no aunty we observed you when you entered the cafe and wanted to.let you know...she smlled...i repeated my thank you  i was.a bit embarassed. she said bye and went back to her sibling....after i entered the ward i shared the incident with niha and said..i am so dumb..i forgot to say they were pretty themselves...


ಶ್ರೀಕಾಂತ್ ಹೋದ ಒಂದು ವಾರದ ಮೇಲೆ ಯಾಕೋ ಈ ಮೇಲಿನ ಘಟನೆ ನೆನಪಾಯ್ತು.
ಯಾಕೋ ಹೆದರಿದೆ
ಯಾಕೆಂದರೆ............
ಶ್ರೀಕಾಂತ್ ಗೆ ಲೀವರ್ transplant ಮಾಡಲೇ ಬೇಕಾಗುತ್ತದೆ ಎಂದ ಮೇಲೆ liver workup ಅಂತ ಮಾಡುತ್ತಾರೆ. ಬೇರೆ ಲೀವರ್ ಪಡೀಲಿಕ್ಕೆ ರಕ್ತದ ಗುಂಪು match ಆದ್ರೆ ಮಾತ್ರ ಸಾಕಾಗಲ್ಲ, kidney, heart, lungs ಎಲ್ಲ ಸರಿ ಕೆಲಸ ಮಾಡಿದ್ರೆ ಮಾತ್ರ transplant. ಇದನ್ನು airport ರೋಡ್ ನಲ್ಲಿರೋ Aster CMI ನಲ್ಲಿ ಮಾಡಿಸಿದ್ವಿ. ಎಷ್ಟು ದೂರ...ನಮ್ಮದೇ ವಾಹನ ಇದ್ರೂ it was too tiring..
ಅಲ್ಲಿ 4 ವರ್ಷದ ಮಗುವಿನಿಂದ 50+  ವರೆಗಿನ, ವಿವಿಧ ಸ್ಥರದ / ಹಂತದ/ಬಣ್ಣದ ಲೀವರ್ ಕಾಯಿಲೆ ಯ ಜನರನ್ನು ನೋಡಿದೆ. ಅದರಲ್ಲಿ ಒಬ್ಬ 28- 30 ವರ್ಷದ ಹಡುಗ ನ ಬಣ್ಣ ತುಂಬಾ ನೆ ವಿಚಿತ್ರವಾಗಿತ್ತು....ಲಕ ಲಕ ಹೊಳೆಯುವ ರಕ್ತ ಚಂದನದ ಬಣ್ಣ, ಹಳದಿ - ನೀರು ಭರಿತ ಕಣ್ಣು, ಮೂತ್ರದ ಚೀಲ ಕೈಯಲ್ಲಿ...ಮೂತ್ರದ ಚೀಲ ದ ಸಲುವಾಗಿ ಲುಂಗಿ ತೊಟ್ಟಿದ್ದ...i was fascinated by his colour.... ನಾನು ಕಣ್ಣು ಕೀಳಿಸದೆ ಅವನನ್ನು ನೋಡುತ್ತಿರಬೇಕಾದ್ರೆ ಅಕ್ಕ ನನಗೆ amma stop staring ಅಂತ ಗದರಿದಳು...ಅವನ  ಸಣ್ಣ ಪ್ರಾಯದ ಹೆಂಡತಿ ಕೂಡ ಅವನ ಜತೆ ಇದ್ದಳು....ಅವನೂ transplant ಗಾಗಿ ಕಾಯುತ್ತಿದ್ದ...
ಈ ಹುಡುಗಿಯರು  ಮತ್ತೆ ನೆನಪಾಗಿ , ಮೈ ನಡುಕ ಬಂದು, ನಾನು malathi manipal ನಲ್ಲಿ ಫುಲ್ body ಚೆಕ್ up ಮಾಡಿಸಿದೆ...low haemoglobin ಮತ್ತು pre diabetis ಪತ್ತೆಯಾಗಿದ್ರು ಬಿಟ್ರೆ ಎಲ್ಲ ಸರಿಯಾಗಿದೆ..
ಡೈಬೇಟಿಸ್ control ನಲ್ಲಿದೆ....stress ಇಂದ ಸಕ್ಕರೆ ಅಂಶ ಏರು ಪೇರಾಗ್ತದೆ ಮತ್ತು life style ಬಗ್ಗೆ ಕೇಳಿ...ಅದನ್ನೇ maintain ಮಾಡಿ..ಮೂರು ತಿಂಗಳ ನಂತರ ಪುನಃ ತಪಾಸಣೆ ಮಾಡುವಾ ಅಂದು ಔಷಧಿ ಏನೂ ಬರೆದು ಕೊಟ್ಟಿಲ್ಲ...
ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ fort ಕೊಚ್ಚಿ ಯಲ್ಲಿ ಹೋಟೆಲ್ ನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನಿಹಾ 'ಅಮ್ಮ  you are glowing, let me take a pic ಅಂತ ಫೋಟೋ ತೆಗೆದ್ಲು...🤔🤔 ನಾನೂ ಚಿತ್ರ ನೋಡಿದೆ ನನಗೇನೂ glow ಆಗ್ತಿದ್ದೆನೆ ಅನ್ನಿಸಲಿಲ್ಲ..
ನಾನು ಮೊದಲಿನ ಧೈರ್ಯವಂತೆ ಮಾಲತಿ ಅಲ್ಲವೇ ಅಲ್ಲ...ಆಕ ನಿಂಪಿ ಗೆ ಸ್ವಲ್ಪ cold cough, ಆರೋಗ್ಯ ಏರು ಪೇರಾದ್ರೆ ತುಂಬಾನೇ tense ಆಗ್ತೀನಿ.  ಮೊದಲು ನನ್ನ panic attack ನಂತರ ಶ್ರೀಕಾಂತ್ ರ liver cirrhosis ಮತ್ತುdetect ಆದ 8 ತಿಂಗಳಿಗೆ ಸಾವು ನನ್ನನ್ನು ಕಂಗೆಡಿಸಿಬಿಟ್ಟಿದೆ 😭😭😏


ಶ್ರೀಕಾಂತ್ ಗೆ ಸಿಕ್ಕಾಪಟ್ಟೆ weight loss ಆಗಿ ಸರಿಯಾದ ಸೈಜ್ ಬಟ್ಟೆ ತೆಗೊಂಡ್ರೆ ಹೊಟ್ಟೆ ಮೇಲೆ ಟೈಟ್ ಆಗುತ್ತಿತ್ತು, ಲೂಸ್ ತೆಗೊಂಡ್ರೆ shoulder ಮೇಲಿಂದ ಇಳಿತಿತ್ತು...ಪ್ಲಸ್ ನಾವು ತಂದದ್ದು, online ಆರ್ಡರ್ ಮಾಡಿದ್ದು ಅವರಿಗೆ ಸರಿ ಆಗ್ತಿರಲಿಲ್ಲ..ಅಂತ ನಾನು ಅವರನ್ನು reliance ಗೆ ಕರೆದುಕೊಂಡು ಹೋದಾಗ, ನನಗೂ force ಮಾಡಿ ಮೇಲಿನ ಚಿತ್ರದಲ್ಲಿನ ಡ್ರೆಸ್ ತೆಗೆಸಿಕೊಟ್ರು...ನಮ್ಮ ಲಾಸ್ಟ್ ಶಾಪಿಂಗ್ outing. ತೆಗೆದುಕೊಂಡ ಬಟ್ಟೆ ಹಾಕಲೇ ಇಲ್ಲ, ಆರೋಗ್ಯ ಹದಗೆಡುತ್ತಾ ಹೋಯ್ತು...ಇತ್ತೀಚಿಗೆ ಒಂದು ದೊಡ್ಡ suitcase ತುಂಬಾ ಬಟ್ಟೆ ವೃದ್ಧಾಶ್ರಮಕ್ಕೆ ಕೊಟ್ಟೆ...
ನನ್ನ ಹೊಸ ಚಸ್ಮ ಹಾಕಿ ಚಿತ್ರ ತಮ್ಮ-ಅಮ್ಮ ನಿಗೆ ಕಳಿಸಿದ್ದು ನಿಮಗೂ....ಅವರೊ ಇಲ್ಲಿಗೆ ಬಾ ಬಾ ಅಂತ ಕರೀತಿರ್ತಾರೆ, ನನಗೆ ಎಲ್ಲೂ ಹೋಗಲೂ ಮನಸ್ಸಿಲ್ಲ 😏.

March 23, 2026

Fort Kochi. story in pictures

 ನಿಹಾ ಗೆ ಕೂಡಿಟ್ಟ ರಜೆಗಳಿದ್ವು...ಅದಕ್ಕೆ ಯುಗಾದಿ ರಾತ್ರಿ ಟ್ರೈನ್ ನಲ್ಲಿ ನಮ್ಮ ಸವಾರಿ ಫೋರ್ಟ್ ಕೊಚ್ಚಿ ಕಡೆಗೆ. ಇಲ್ಲಿಂದ ರೈಲು ಎರ್ನಾಕುಲಮ್..ಅಲ್ಲಿಂದ water ಮೆಟ್ರೋ ನಲ್ಲಿ ಫೋರ್ಟ್ kochi. ತಲಾ ಒಬ್ಬರಿಗೆ 50 ರೂ. ಮೊದಲಿ ವೈಪಿನ್ ಗೆ ಸ್ಟಾಪ್..ಅಲ್ಲಿ ಕೆಲವರು ಇಳಿದು ಹತ್ತಿ ಮಾಡಿ ನಾವು ಫೋರ್ಟ್ ಕೊಚ್ಚಿ ಯಲ್ಲಿ ಇಳಿದೆವು. ತಗುಲಿದ ಸಮಯ ಅರ್ಧ ಗಂಟೆ. 




                            water metro


ಅಲ್ಲಿಂದ ಹತ್ತು ನಿಮಿಶದ ನಡಿಗೆಯಲ್ಲಿ ನಾವು ರೂಮ್ ಕಾಯ್ದಿರಿಸಿದ fort house ಹೋಟೆಲ್ ಗೆ. ದಿನಕ್ಕೆ 3000 ರೂ...ನಾವು ಮೂರು ಜನ ಒಂದೇ ರೂಮ್. ಬೇಕಿದ್ದಲ್ಲಿ extra ಹಾಸಿಗೆ  ಕೊಡುತ್ತೇವೆ ಅಂದ್ರು...ಆದರೆ ಮಂಚ ಅಗಲವಿತ್ತು. ಸಾಕಷ್ಟು ಚೆನ್ನಾಗಿತ್ತು ರೂಮ್. ಸಿಬ್ಬಂಧಿ ಎಲ್ಲ ತುಂಬಾ helpful....








ನನಗೆ ಅಷ್ಟೇನೂ ಸೆಕೆ ಅನ್ನಿಸಲಿಲ್ಲ..





 ಆದರೆ ಊಟ ತಿಂಡಿ ಆರ್ಡರ್ ಮಾಡಿದ್ರೆ. ಮೆನ್ಯು ನಲ್ಲಿ ಅದು ಇಲ್ಲ ಇದು ಇಲ್ಲ..ಗ್ಯಾಸ್ ಇಲ್ಲ ಅನ್ನುವ ಸಬೂಬು....ಮತ್ತು ತಿಂಡಿ ಊಟ ಆರ್ಡರ್ ಮಾಡಿದ minimum  45 ನಿಮಿಷ ತಗುಲು ತ್ತಿತ್ತು...ಅಲ್ಲಿ ಮಾತ್ರವಲ್ಲ..ಎಲ್ಲ ಕಡೆ...ನಿನ್ನೆ ಟೀ ಇಲ್ಲ ಅಂದಾಗ ಉರಿದು ಹೋಯ್ತು...ನನ್ನ ಅಸಹನೆ  ಗಮನಿಸಿ... ಇಲ್ಲ ಮ್ಯಾಡಮ್ ಹಾಲು ಬೇರೆ ಯದಾಗಿ  ಕೊಡುತ್ತೇವೆ..ನೀವೇ ಬೆರೆಸಿಕೊಳ್ಳಬೇಕು ಅಂದ ಹುಡುಗ...ಲಾಜಿಕ್ ಗೊತ್ತಾಗಲಿಲ್ಲ...

.


ಒಂದು ನಾಲ್ಕು ದಿನ ಬ್ರೇಕ್  ಬೇಕಿದ್ದಲ್ಲಿ (ನಾಲ್ಕು ದಿನ ಸಾಕಾಗಲ್ಲ) ನೀವು ಹೋಗಿ ಬನ್ನಿ... biennale art ಷೋ ಗಳ ಗಡಿಬಿಡಿ....ಹೊರದೇಶ ದ ಯಾತ್ರಿಕರು ಹೆಚ್ಚು.

ಕೊನೆಯ ದಿನ ಬೆಳಿಗ್ಗೆ ನಾವು ತೈಲ ಮಸಾಜ್ ಗೆ ಹೋದ್ರೆ,. ನಿಹಾ ಆರ್ಟ್ exhibition ಗಳನ್ನೆಲ್ಲಾ ನೋಡಿ ಬ0ದ್ಲು.  ಸಂಜೆ ರಿಕ್ಷಾ ಮಾಡಿಕೊಂಡು ಸ್ವಲ್ಪ ಪೇಟೆ ಕಡೆ ಹೋಗಿ ಬಂದೆವು. ಅಲ್ಲಿನ jew street/ market ತುಂಬಾ ಇಷ್ಟ ಆಯ್ತು...ಶ್ರೀಕಾಂತ್ ಇದ್ದಿದ್ರೆ ತರಕಾರಿ ಮಾರ್ಕೆಟ್ ಕಡ್ಡಾಯ ಇರ್ತಿತ್ತು...ನಾವಂತೂ 'ಅಪ್ಪ ಇದ್ದಿದ್ರೆ ಹೀಗೆ ಮಾಡ್ತಿದ್ರ್ಯ, ಹಾಗೆ ಮಾಡ್ತಿದ್ರು ಅಂತ ನೆನಪು ಮಾಡಿ ನಕಿದ್ದೆ ಹೆಚ್ಚು....1 ಒಂದು ವರ್ಷದ ಮೇಲೆ ಮೂರು ಜನ ಸೇರಿ ಪರ ಊರಿಗೆ outing ಹೋಗಿದ್ದು. ಎಂಜಾಯ್ ಮಾಡಿದ್ವಿ...



    synagogue was closed on account of jewish holiday









ಬರುವಾಗ  flight ನಲ್ಲಿ ಬಂದೆವು. ಕೊಚ್ಚಿ airport ತುಂಬಾನೇ ಚೆನ್ನಾಗಿದೆ.

cochin airport

*weekend ಹೋದ್ರೆ... ಶನಿವಾರ ಬೆಳಿಗ್ಗೆನೇ  ಎಲ್ಲ s8ght-sering  ಮುಗಿಸಿ...ಸಂಜೆ 4 ರ ನಂತರ ನಮಗೆ ಚರ್ಚ್, ಸಿನಾಗೋಗ್, dutch cemetary ಮುಂತಾದ್ದು ನೋಡಲು ಸಿಗಲಿಲ್ಲ. Jewish Market ನಲ್ಲಿ ತುಂಬಾ ಸಮಯ ಕಳೆಯಬಹುದು.



March 21, 2026

Simple Ugadi

 ಶ್ರೀಕಾಂತ್ ಇದ್ದಿಡ್ರೆ ಕೆಳಗಿನ ಎಲೆಯಲ್ಲಿ ಕೊಟ್ಟೆ ಕಡುಬು, ಚಟ್ನಿ, ಮೆಣಸಿನ ನೀರು, ಕಡ್ಲೆ ಬೇಳೆ ಪಾಯಸ ಮತ್ತು ಮೆಣಸಿನ ಕಾಯಿ ಬೋಂಡಾ,  ಸೌತೆಕಾಯಿ ಪಚ್ಚಡಿ ಇರುತ್ತಿತ್ತು. 

can't believe he is no more 😏😏


ಏನೇ ಅನ್ನಿ 'ಪರಾಭವ' ಹೆಸರು ಇಷ್ಟ ಆಗಲಿಲ್ಲ..ಹೌದೌದು ಅನೇಕ ರೀತಿಯ explanation ಬಂದಿವೆ  family whatsapp ಗ್ರೂಪ್ ಗಳಲ್ಲಿ...ಆದರೂ 

ರಾತ್ರಿ ಟ್ರಾವೆಲ್ ಪ್ಲ್ಯಾನ್ಸ್ ಇದ್ದುದರಿಂದ ಎಲ್ಲಾ ಸ್ವಲ್ಪ ಸ್ವಲ್ಪನೆ ಮಾಡಿದ್ದು. ಟ್ರೈನ್ ನಲ್ಲಿ ಊಟಕ್ಕೆ ಮೆಂತೆ ಸೊಪ್ಪಿನ ಚಪಾತಿ, ಮೊಸರನ್ನ ಮತ್ತು ಉಪ್ಪಿನಕಾಯಿ.

ಎಲ್ಲಿಗೆ ಹೋಗಿದ್ದು ಅಂತ ಮುಂದಿನ ಪೋಸ್ಟ್.....

ಉಗಾದಿ 2026


March 13, 2026

AI / ಕೃತ್ರಿಮ ಬುದ್ದಿಮತ್ತೆ!!!

 ವಸುಧೇಂದ್ರ ಅವರು ತಮ್ಮ whatsapp status ನಲ್ಲಿ ಒಂದು ಪುಸ್ತಕ ಬಿಡುಗಡೆಯ invite ಹಾಕಿದ್ದರು. ಸಂಪೂರ್ಣವಾಗಿ AI ಅನುವಾದ ಮಾಡಿದ ಒಂದು ಕೃತಿ.

ಶ್ರೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಮೊಬೈಲ್ ನಲ್ಲಿ ಒಂದು ಕತೆ ಕುಟ್ಟಿದೆ. ಅರ್ಧಂಬರ್ಧ...ಮಧ್ಯ ಮಧ್ಯ ಅದಕ್ಕೆ addition, deletion, edition ಮಾಡ್ತಾ ಹೋಗ್ತಿದ್ದೆ. ಅವರು ದೈವಾಧೀನರಾದಮೇಲೆ ಅದು ನಿಂತು ಹೋಗಿತ್ತು. ಹೀಗೆ ಒಂದು ನಿದ್ದೆ ಬರದ ರಾತ್ರಿ ಆ ಕತೆಯನ್ನು copy paste ಮಾಡಿ ..Meta AI ಗೆ ಆಂಗ್ಲಕ್ಕೆ ಅನುವಾದ ಮಾಡಲು ನಿರ್ದೇಶಿಸಿದೆ....ಎರಡೇ ಸೆಕೆಂಡ್ ನಲ್ಲಿ ಮಾಡಿ ಬಿಟ್ಟಿತು. ನಿಜಕ್ಕೂ ಅನುವಾದ ಚೆನ್ನಾಗಿತ್ತು. ನಾನು ಕತೆ ಪೂರ್ಣ ಗೊಳಿಸಿರಲಿಲ್ಲ...ಅದರ ಅಂತ್ಯ ನನ್ನ ತಲೆಯೊಳಗಿತ್ತು ಆದರೆ ಯಾಕೋ ಬರೆಯಲು ಮನಸ್ಸೇ ಇಲ್ಲ...Meta ಕೇಳಿತು 'would you like me to  continue' ಅಂತ...yes ಕೊಟ್ಟೆ....ಕತೆಗೊಂದು ಚೆಂದದ ಕೊನೇನೂ ಕಾಣಿಸ್ತು....ನನ್ನ ಎಂಡಿಂಗ್ ಬೇರೇನೇ ಇದೆ....but i was damn impressed 🤔🤔
ಕತೆಯನ್ನು ಮನಸ್ಸಿದ್ದರೆ/ ಕೊನೆಗೊಳಿಸಿದರೆ  ದೀಪಾವಳಿಗೆ ಯಾವುದಾದರೂ ವಿಶೇಷಾಂಕಕ್ಕೆ ಕಳಿಸುವಾ ಅಂತಿದ್ದೇನೆ.....🙂🙏👍
ಸುಮ್ನೆ ಶೇರಿಂಗೂ, not that i am a great story teller or anything

*ಆಸ್ಪತ್ರೆ ವಾಸದಿಂದ ಅಲ್ಲಿನ ದಿಂಬನ್ನು ಉಪಯೋಗುಸಿದ ನಂತರ ತಲೆಗೇನೋ ಅಲರ್ಜಿಯಾಗಿದೆ...ಔಷಧಿ ಉಪಚಾರದಿಂದ ಕೆರೆತ ನಿಂತಿಲ್ಲ  ತಲೆಗೂದಲು ಸಿಕ್ಕಾಪಟ್ಟೆ ಹೋಗ್ತಿದೆ....ಅದಕ್ಕೆ AI ಉಪಯೋಗಿಸಿ ತಲೆಗೂದಲು ಕತ್ತರಿಸಿದರೆ ಯಾವ ಮಾದರಿ ಕಟ್ ನನಗೆ suit ಆಗಬಹುದು ನೋಡಿದೆ 😁
ಹಾಗೆ ಪೂರ್ತಿ ಕೂದಲು ಹೋದ್ರೆ ಯಾವ ಬಣ್ಣ ಮತ್ತು ಮಾದರಿಯ ವಿಗ್/ wig ನನ್ನ ಮುಖಕ್ಕೆ ಸರಿಹೊಂಡಬಹುದು ಅಂತ ಚೆಕ್ ಮಾಡಿದೆ....
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
ಎಂಜಾಯ್ ಮಾಡಿದೆ....
Interesting!!!!

March 10, 2026

ಠನಕಪುರ್ thanakpur

 

ನಕ್ಪುರ್/ tanakpur

ಲೋಹಾಘಟ್ ನಿಂದ ವಾಪಸ್ ಲಕ್ನೋ ಗೆ ಬರುವಾಗ ಪುನಃ ತನಕ್ಪುರ್ ಮಾರ್ಗವಾಗಿ ಬರಬೇಕಿತ್ತು. ನಮ್ಮ ಬಳಿ ಸ್ವಲ್ಪ ಸಮಯ ಇತ್ತು. ಸಂಜೆ 4 ಗಂಟೆಗೆ ಹೋಟಲ್ ಸಿದ್ಧಾರ್ಥ್ ತಲುಪಿದ್ವಿ. ನಾನು ಆನ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದ್ದೆ. ಹೊರಗಿನಿಂದ ನೋಡಲು ಹೋಟಲ್ ಚೆನ್ನಾಗಿತ್ತು. ಒಳಗಡೆ ಗಬ್ಬು. ನಮಗೆ ಕೊಟ್ಟ ಕೊಠಡಿ ತೆರೆದರೆ ಅಲ್ಲಿ ಪಬ್ಲಿಕ್ ಲೆವೆಟರಿ ವಾಸನೆ ಮಾತ್ರವಲ್ಲ ಜೋಂಪು ಜೋಂಪು ಸೊಳ್ಳೆಗಳು. ನಮ್ಮ ದುಡ್ಡು ವಾಪಸ್ ತೆಗೊಂಡು, ಶ್ರೀಕಾಂತ್ ವಾಕ್ ಹೋಗಿ ಇನ್ನೊಂದು ಹೋಟಲ್ ಹುಡುಕಿದ್ರು. ಹೊಸದಾಗಿ ಕಟ್ಟಿಸಿದ್ದ. ಈ ಹೋಟೆಲ್ ಚೆನ್ನಾಗಿತ್ತು. ಇಷ್ಟರೊಳಗೆ 5 ಗಂಟೆ ಆಗಿತ್ಯು. ಹೋಟಲ್ ನವ ಅಲ್ಲಿನ  ಹೆಸರಾಂತ ಪೂರ್ಣಾದೇವಿ ಮಂದಿರ ಈಗ ಬಂದ್ ಆಗಿರುತ್ತೆ, ಆದ್ದರಿಂದ ನಮಗೆ ಶಾರದಾ ನದಿಗೆ ಹೋಗಲು ಹೇಳಿದರು. ಅಲ್ಲಿ ಪ್ರತಿ ಸಂಜೆ ಆರತಿ ಆಗುತ್ತೆ... ಕೆಳಗಿನ ಚಿತ್ರದಂತೆ ಊರು ತುಂಬ ಇಂತಹ ಚಿಕ್ಕ ದೊಡ್ಡ ಊರೂಟು ಕಲ್ಲುಗಳು. ಶ್ರೀಕಾಂತ್ ಪುರೋಹಿತರನ್ನು ಮಾತಾಡಿಸುತ್ತಿದ್ರೆ,  ನಾನು ಸಣ್ಣಕ್ಕೆ ಸದ್ದು ಮಾಡುತ್ತಿರುವ ನದಿ ಯ ಸದ್ದು ಆಲಿಸುವುದರಲ್ಲಿ ತನ್ಮಯಳಾದೆ. ವಾಪಸ್ ಬರ್ತಾ ಪೇಟೆಯೊಳಗೆ ಒಂದು ರೌಂಡ್ ಹಾಕಿದ್ವಿ.




ಇದು ನಮ್ಮ ಕೊನೆಯ ಹೊರ ರಾಜ್ಯದ ಪಯಣ...ಇನ್ನೂ ಓರಿಸ್ಸಾ, ಗುಜರಾತ್ ಪ್ಲ್ಯಾನ್ ಮಾಡಿದ್ದೆ ಬಂತು...ತುಂಬಾ ಬೇಜಾರಾಗುತ್ತೆ ಕಣ್ರೀ...😏😏

March 3, 2026

thandayi ನನ್ನ ರೆಸಿಪಿ

why should people with sugar complaints be left out.of the fun?~..have fun snd enjoy with my 'no added sugar' thandai recipe

Ingredients:

- Handful of fox nuts (makhana), lightly fried

- 4-5 cashew nuts

- 10 raisins

- 1/2 tsp  poppy seeds

- Cardamoms (a few)

- Milk

- Pistachios and rose petals for garnish


Instructions:

1. Blend fried fox nuts, cashews, raisins, khuskhus, and cardamoms into a fine powder.

2. Heat milk and add the blended mixture.

3. Boil until it thickens.

4. Garnish with pistachios and rose petals.

5. Serve warm or chilled.

Enjoy! 😊 Happy birthday, Srikanth!



ಕಾವಲಿಯಲ್ಲಿ ಮಖಾನಾ, 4-5 ಗೇರು ಬೀಜ, 10 ಒಣ ದ್ರಾಕ್ಷಿ, 1/2 ಟಿ ಚಮಚೆ ಗಸ್ ಗಸೆ  ಯನ್ನು ಹುರಿಯಿರಿ. ತಣಿದ ನಂತರ ಎಲಕ್ಕಿಯೊಂದಿಗೆ ಮಿಕ್ಸಿ ಯಲ್ಲಿ ನುಣ್ಣಗೆ ಪುಡಿ ಮಾಡಿ. 

ಬಿಡಿ ಹಾಳಲ್ಲಿ ಬೆರೆಸಿ, ಕುಡಿಬಂದು ದಪ್ಪ ಆಗುವವರೆಗೆ ಓಲೆ ಮೇಲೆ 8ಡಿ.  ಗುಲಾಬಿ ಪಕಳೆ, ಪಿಸ್ತಾ ಒಂದಿಗೆ decorate ಮಾಡಿ ಬಿಸಿ ಅಥವಾ ತಣ್ಣಗೆ ಸರ್ವ್ ಮಾಡಿ



March 2, 2026

HBD Shenoy maam

 


ನಮ್ಮ ಅತ್ತೆ ಯಾವಾಗಲೂ ಹೇಳೋರು. 'ಕಾಂತು ಹೋಳಿ ಹಬ್ಬದ ದಿನ ಹುಟ್ಟಿದ್ದು  ಅಂತ. ನಾಳೆ ಹೋಳಿ...ಆಂಗ್ಲ calender ಪ್ರಕಾರ ಇವತ್ತು ಶ್ರೀಕಾಂತ್ ಹುಟ್ಟಿದ ದಿನ.  ಎರಡು ದಿನ celebration

ಅದಕ್ಕೆ ಮುಂಚೆ ಮನೆಯೆಲ್ಲ ಸುಣ್ಣ ಬಡಿದಿದ್ಫು ಆಯ್ತು. ಮೆಟ್ರೋ  construction ಮುಗಿದ ಮೇಲೆ ಮಾಡೋದು ಮಾಡೋದು ಅಂತ ಪ್ಲಾನ್ ಮಾಡಿ...ಆಮೇಲೆ ಶ್ರೀಕಾಂತ್ ಗೆ ಹುಷಾರು ತಪ್ಪಿ ಮುಂದೂಡುತ್ತ ಕೊನೆಗೆ ಮೊನ್ನೆಗೆ ಮನೆ ಫ್ಹುಲ್ ಲಕಲಕ ಅಂತಿದೆ....ಪೈಂಟಿಂಗ್ ಜತೆ chimney, ಗ್ಲಾಸ್ ಬಾಗಿಲು, ನಳ, ಬಾತ್ ರೂಮ್ ಟೈಲ್ಸ್ ಎಲ್ಲ ಸ್ವಚ್ಛ...ಆಶ್ಚರ್ಯ ಅಂದರೆ ಕೆಲಸಕ್ಕಿದ್ದವರೆಲ್ಲ ವಯಸ್ಸಾದವರು. ಸರಿಯಾಗಿ ಒಂಬತ್ತಕ್ಕೆ ಬಂದು ಸಂಜೆ 5 ಕ್ಕೆ ಕ್ಲೋಸ್. ಹೆಚ್ಚು  / ಅನಾವಶ್ಯಕ ಮಾತಿಲ್ಲ, ಕತೆಯಿಲ್ಲ, ಮೊಬೈಲ್ ಬಳಿಸಿಲ್ಲ.... ಟಿ ಕಾಫಿ ಗೆ ಒಂದು 10 ನಿಮಿಷ ,  ಮಧ್ಯಾಹ್ನ ಊಟಕ್ಕೆ ಅರ್ಧ ಗಂಟೆ ಬ್ರೇಕ್ ಅಷ್ಟೇ. ಸೋಮವಾರ ಶುರು ಮಾಡಿ ಶನಿವಾರ ಸಂಜೆ.complete. ಮೂರು ಜನ ಇದ್ರು ಎಲ್ಲ ಸಾಮಾನು ಎಲ್ಲೆಲ್ಲಿತ್ತೋ  ಅಲ್ಲಿ ನೀಟಾಗಿ ಜೋಡಿಸಿ ಕೊಟ್ರು...ನಾನಂತು ಫುಲ್ ಖುಶ್...

ನನ್ನ ತಮ್ಮನ ಮಗಳು ಸ್ಯಾಮಿ ಪೈ ಶ್ರೀಕಾಂತ್ ಗೋಸ್ಕರ ಅವಳೇ compose ಮಾಡಿ, ಹಾಡಿದ ಹುಟ್ಟು ಹಬ್ಬದ ಹಾಡು...ಮತ್ತು ನನ್ನ ತಮ್ಮ ಪಾಂಡು ಈ ದಿನವನ್ನು ಶ್ರೀಕಾಂತ್ ಡೇ ಅಂತ ಹೆಸರಿಸಿದ್ದಾನೆ 🙂❤️🙏🙏



msgs about the  delicacies he taught us 👆👆

February 21, 2026

fansu

 ನಿನ್ನೆ ನನ್ನ ಮುಂಬೈ ಫ್ರೆಂಡ್ಸ್ ಬಂದಿದ್ದರು. ಎಲ್ಲರೂ ಬೆಂಗ್ಳೂರಲ್ಲೇ ಸೆಟ್ಲ್ ಆಗಿದ್ದಾರೆ.  ಒಬ್ಬ ಫ್ರೆಂಡ್ ದುಬೈ ನಲ್ಲಿ ಇದ್ಲು...ಈಗ ಕೆಲವು ತಿಂಗಳಿಂದ ಇಲ್ಲಿಗೆ ಬಂದಿದ್ದಾಳೆ.  ಹಾಗೆ ಮಾತು ಸೋಷಿಯಲ್ ಮೀಡಿಯಾ, ಯು ಟ್ಯೂಬ್, ಇನ್ಸ್ಟಾಗ್ರಾಮ್ , ಆತ್ಮಹತ್ಯೆ, digital ಅರೆಸ್ಟ್, hacking, ಲೀವರ್ ಕಾಯಿಲೆ ಇದೆಲ್ಲದರ ಕಡೆ ಆಯ್ತು. 'ನಿನ್ನ ಎಫ್ಹ್ ಬಿ ಪೋಸ್ಟ್, instagram ರೀಲ್ಸ್ ಎಲ್ಲ ಮಿಸ್ ಮಾಡಿ ಕೊಳ್ತಿದ್ದೆವೆ ಅಂದರು. ನಿನ್ನ ಭೋಪಾಲ್ ಫೋಟೋಸ್ ಎಷ್ಟು ಚೆನ್ನಾಗಿದ್ದವು...ಅಂತೆಲ್ಲ.. ಅದಕ್ಕಿಂತ ಮುಂಚೆ ಹಿಂದಿನ ವಾರ ನನ್ನ ಹೈ ಸ್ಕೂಲ್ ಕ್ಲಾಸ್ಮೇಟ್, ಯು ಎಸ್ ನಲ್ಲಿರೋದು..ಮಾಲವಿಕಾಳಿಗೆ 'ನಿನ್ನ ಅಮ್ಮನ ಎಷ್ಟು ಸೈಲೆಂಟ್..ಆದ್ರೂ ಅಮ್ಮನ  ಪೋಸ್ಟ್ ಗೆ ಎಷ್ಟೆಲ್ಲ ಲೈಕ್ಸ್, ಕಮೆಂಟ್ಸ್ ಬತಿದ್ವು ಗೊತ್ತಾ ಅಂದರೆ....ಅಕ್ಕ'ಅಯ್ಯೋ ಅಮ್ಮನ ಬ್ಲಾಗ್ ಫ್ಯಾನ್ಸ್ ಎಷ್ಟಿದ್ದಾರೆ...ರಸ್ತೆಯಲ್ಲಿ  ಹೋಗುವವರೆಲ್ಲ  ಗುರುತಿಸೋರು..ಅಂದ್ಲು...ಸಿಕ್ಕಾ ಪಟ್ಟೆ ಮುಜುಗರ ಆಯ್ತು...

ಅದೇ ನಾನು insta ದಲ್ಲಿದ್ದಾಗ ನನ್ನ ಪೋಸ್ಟ್ ಗೆ.ಮೊದಲ ಲೈಕ್ ನನ್ನ ತಮ್ಮನ ಮಗಳು ಸ್ಯಾಮಿ...'ಮಾಲ್ತ್ಯಕ್ಕಾ ನನ್ನ ಫ್ರೆಂಡ್ಸ್ ಗೆಲ್ಲ ನಿನ್ನ ಪೋಸ್ಟ್ ಇಷ್ಟ ಆಗುತ್ತೆ 'ನಿನ್ನ ಆಂಟಿ ಎಷ್ಟು ಲವಲವಿಕೆಯಿಂದಿದ್ದಾರೆ....ನನ್ನ ಆಂಟಿಗೆ ಅಷ್ಟೇನೂ ವಯಸ್ಸಾಗಿಲ್ಲ ಆದ್ರೂ ಮುದುಕರ ತರಹ ಆಡ್ತಾರೆ... ಯಾವುದ್ರಲ್ಲೂ ಇಂಟೆರೇಸ್ಟ್

 ಇಲ್ಲ ' ಅಂದಾಗ ಸಿಕ್ಕಾಪಟ್ಟೆ ಜೋರಾಗಿ ನಕ್ಕಿದ್ದು ನೆನಪಾಗಿ...ಈಗ ಅವಳು ನನ್ನ you ಟ್ಯೂಬ್ follow ಮಾಡ್ತಾಳೆ...

hydroponics experiment

ನನ್ನ ತಮ್ಮ ತಂಗಿಯರು ಏನು ಅಡಿಗೆ ಅಂದ್ರೆ ಯು ಟ್ಯೂಬ್  ನೋಡಿ ಅಂತೀನಿ...ಅದರಲ್ಲಿ ಮುಂಬೈ ತಮ್ಮ ನೋಡ್ತಾನೆ ಆದರೆ ಲೈಕ್ ಎಲ್ಲ ಹಾಕಲ್ಲ..ಮಿಲ್ಲೆಟ್ ಗಂಜಿ ತಯಾರಾಗ್ತಿದೆ...ತಿನ್ನುವ ಮುಂಚೆ ಸ್ವಲ್ಪ  ಕೊರೆಯುವ ಅಂತ... 🙂❤️


ಮಿಲ್ಲೆಟ್ಸ್ ಒಂದಿಗೆ ,ತುಪ್ಪ ಬಳಸಿ. ಮೊಸರು ಬಳಸಿ. ನೀರು ಮಜ್ಜಿಗೆ ಸೇವಿಸಿ ತುಂಬಾ ನೀರು ಕುಡಿಯಿರಿ.  ಕೆಲವರಿಗೆ ಹೀಟ್ ಆಗುತ್ತೆ. ನನಗಂತೂ ಮಿಲ್ಲೆಟ್ಸ್ ತುಂಬಾ ಇಷ್ಟ...🙏🙏


February 20, 2026

Two months

 ಪದೇ ಪದೇ ಅದೇ ಅನ್ನಿಸುತ್ತೆ. ಸ್ವಲ್ಪ ಅರೋಗ್ಯದ ಬಗ್ಗೆ ಕಾಳಜಿ ವಹಿಸಿದಿದ್ರೆ?? ಎಲ್ಸರೂ ಟೈಮ್ ಆಗಿತ್ತು, destiny, ಹೋಗಿ ಬಿಟ್ರು ಮುಂತಾದ ಮಾತುಗಳಿಂದ ಸಮಾಧಾನ ಮಾಡುತ್ತಾರಾದ್ರೂ ನನಗೆ ಅದು ಸರಿ ಅನ್ನಿಸಿವುದೇ ಇಲ್ಲ. ಮನಸ್ದು accept ಮಾಡುತ್ತಿಲ್ಲ. ಈಗ retire ಆಗಿ relax ಆಗಿರುವ ಸಮಯದಲ್ಲಿ ಹಾಗೆ ಬಿಟ್ಟು ಹೋಗೋದಾ? 😢 ಕೆಲವೊಮ್ಮೆ ರಾತ್ರಿ ನಿದ್ದೆ ಬರದಿದ್ದಲ್ಲಿ ಮನೆ ತುಂಬಾ ಓಡಾಡುವಾಗ ಸಡನ್ ಆಗಿ 'ಹೌದಾ ಹೋಗಿದ್ದು' ಅಂತ ಪೆಚ್ಚಾಗಿ ಒಂದು ಕ್ಷಣ ಹಾಗೆ ನಿಂತು ಬಿಡ್ತೀನಿ.

insurance, ಬ್ಯಾಂಕ್ ಖಾತೆ ಎಲ್ಲ ನನ್ನ ಹೆಸರಿಗೆ ವರ್ಗಾವಣೆ ಆದವು. ಕೆಲವೆಲ್ಲ ಡಾಕ್ಯುಮೆಂಟ್ಸ್ ಹುಡುಕಲು ಮನೆಯೆಲ್ಲ ತಲೆಕೆಳಗೆ ಮಾಡಿದೆವು. ಹಳೆ ಪತ್ರ ಓದಿ, ಫೋಟೋ ಗಳನ್ನು  ನೋಡಿ ಬೇಜಾರು ಮಾಡಿಕೊಂಡೆವು, ನಕ್ಕೆವು etc..ಇನ್ನೂ ಕೆಲವು ಕೆಲಸಗಳು ಮಾರ್ಚ್ ಅಷ್ಟರಲ್ಲಿ ಮುಗಿಸಿ ನಾವು ಮೂವರು ಎಲ್ಲಾದರೊ ಹೋಗಿ ಬರಬೇಕು..
ಕೂತು ತಿಂದರೆ ಕುಡಿಕೆ ಹಣ ಸಾಲದು ಅಂತ ಒಂದು ಹೇಳಿಕೆ ಇದೆಯಲ್ಲವಾ???
since i would not be working i have to make the money work, invest wisely that lasts me a long time...🤔🤔.  cos i am going to live long...to 106 years. i am not financially ವೆರಿ literate 😏.





ತಬೆಬುವ ಹೂ ಗಳು ಅರಳಿ ಬೆಂಗಳೂರು  ತುಂಬಾ ಚೆಂದ ಕಾಣುತ್ತಿವೆ. ನನಗೆ ಬಾಲ್ಕನಿಯಿಂದ ಹಲವಾರು ಗಿಡಗಳು ಕಾಣುತ್ತಿದ್ದವು, ಈಗ ಮೆಟ್ರೋ ದೆಸೆಯಿಂದ ಅವು ಕಾಣುತ್ತಿಲ್ಲ.
ಹೀಗೆ....... ಮುಂದುವರಿಲೇ ಬೇಕು....🙏🙏. ಅಷ್ಟೇ

February 15, 2026

ಶಿವರಾತ್ರಿ - ನೆನಪು

 

 

ಓಂ ಶಾಂತಿ ಶಾಂತಿ ಶಾಂತಿಃ.... ಬಿಟ್ಟು ಹೋಯ್ತು 👆👆

ಇವತ್ತು ಶಿವರಾತ್ರಿ. ಉಪವಾಸ  ಮಾಡುವಾ ಅಂತಿದ್ದೆ. ಆದರೆ ಏಳುವಾಗಳೇ ಹಸಿವೆ ಅನಿಸ್ತು. ಮುಂಬೈ ಜೀವನ ನೆನಪಾಯ್ತು. ಎಷ್ಟು ಕಟ್ಟುನಿಟ್ಟಾಗಿ ಸಂಕಷ್ಟಿ, ಕೃಷ್ಣಾಷ್ಟಮಿ, ಶಿವರಾತ್ರಿ ಉಪವಾಸ ಮಾಡುತ್ತಿದ್ದೆವು.

ಮೂರು ಜನ ದೊಡ್ಡ ವಾಕ್ ಹೀಗಿ,  ಸಿಂಪಲ್ಲಾಗಿ ಒಂದು ಅವಲಕ್ಕಿ ಉಸ್ಲಿ ಮಾಡಿ ತಿಂದೆವು. ನಮ್ಮ engagement ಆದ ದಿನ ಇವತ್ತು. ಹಳೆ ಕೆಲ ವಿಷಯಗಳು ನೆನಪಾಗಿ  ನಗೆ ಬಂತು. 




ಶ್ರೀಕಾಂತ್ ತಂದೆ ತಾಯಿಗೆ ವಯಸ್ಸಾಗಿತ್ತು, ಮಾತ್ರವಲ್ಲ ಅವರ ತಾಯಿಯವರಿಗೆ  ಕಿವಿ ಕಣ್ಣು ಮಂದವಾಗಿದ್ದವು. ನಾವೇ ಮುಂಬೈ ನಿಂದ ಬೆಂಗಳೂರು, ಅಲ್ಲಿಂದ ಶಿವಮೊಗ್ಗ ಮತ್ತು ಅಲ್ಲಿಂದ ತೀರ್ಥಹಳ್ಳಿ ಗೆ  ಬಂದೆವು...ಆವಾಗಿನ (1987)ದಿನಗಳಲ್ಲಿ ಇದು strange event ಅಂತ ಹೇಳಬಹುದು.

ತುಂಬಾ strict ಆಗಿ ಬೆಳೆಸಿದ ನನಗೆ, ಶ್ರೀಕಾಂತ್ ನನಗೊಬ್ಬಳನ್ನೇ ಅವರ ಜತೆ ಮಾತುಕತೆ ಆಡಲು, ತೀರ್ಥಹಳ್ಳಿಯಲ್ಲ, ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗುತ್ತೇನೆ ' ಅಂದಾಗ , ಅಪ್ಪ ಅಮ್ಮ ಬೇಡ ಅನ್ನಬಹುದು ಅಂತ ಧೈರ್ಯವಾಗಿದ್ಫೆ...ಆದರೆ ಎಲ್ಲ ಉಲ್ಟಾ ಆಯಿತು. ಅಪ್ಪ, ಮತ್ತು ಮಾವನವರು permisson ಕೊಟ್ಟೆ ಬಿಡುವುದಾ??  ನನಗಿನ್ನೂ ನನ್ನ ಪಿಂಕ್ ಚೂಡಿದಾರ್ ಹಾಕೊಂಡು ಹೋಗಿದ್ದು ನೆನಪಿದೆ...ಶಿವಮೊಗ್ಗದಲ್ಲಿ ಅವರ ಎಲ್ಲ ಪ್ರಶ್ನೆಗೆ ನಾನು 'ಹೌದು' 'ಅಲ್ಲ' ಅಂತಷ್ಟೇ ತಲೆಯಾಡಿಸಿದ್ಫು...ಒಂದೂ ಮಾತಿಲ್ಲ... ಶ್ರೀಕಾಂತ್ ನನಗೆ 'ನೀನು ಬಾಂಬೆ (bombay) ಹುಡಿಗಿ ಹೌದಾ ಅಂತ ನಿರಾಸೆಯಿಂದ ಕೇಳಿ...ಪ್ರತೀ ವರ್ಷ ಮಕ್ಕಳಿಗೆ ಈ ಕತೆ ಕೇಳುವ ಫಜೀತಿ... ಆ ದಿನ ಸಂಜೆ ಮನೆಯ ಹಿರೀಕರ ಎದುರಿಗೆ ಉಂಗುರ ಸಿಹಿ ಹಂಚಿ ನಮ್ಮದೊಂದು engagement ಎನ್ನುವಲ್ಲಿಗೆ....
ಹೀಗೆ ಮಧ್ಯದಲ್ಲಿ ಬಿಟ್ಟು ಹೋಗ್ತಾರೆ ಅಂತ ಅನ್ನಿಸಿರಲಿಲ್ಲ.  anyways we have lots of good/fun memories to recall ಅನ್ನುತ್ತಾ.......🙏🙂

February 4, 2026

ನೀರುಳ್ಳಿ ಸೊಪ್ಪಿನ ಝುಣಕಾ

 ಮೊನ್ನೆ ಬೆಳಿಗ್ಗೆ ಕೆ ಪಿ ಏನ್ ಗೆ ಹೋದಾಗ ತಾಜಾ ನೀರುಳ್ಳಿ ಸೊಪ್ಪು ಬಂದಿತ್ತು. ತೆಗೊಂಡೆ. ಸೊಪ್ಪು ನೋಡಿ ನಿಹಾ ,'ಅಮ್ಮ spring onion ಝುಣಕಾ ತಿನ್ನದೆ ಸುಮಾರು ಸಮಯ ಆಯ್ತು. ನಾಳೆ ಆಫಿಸ್ ಲಂಚ್ ಬಾಕ್ಸ್ ಗೆ ಮಾಡ್ತಿಯಾ ' ಅಂತ  ಕೇಳಿ ದ್ಲು...ನಾ ಹೂ ಅಂದೆ..ಅವಳು ರಾತ್ರಿ ಚಪಾತಿ ಹಿಟ್ಟು ಕಲಿಸಿ ಇಟ್ಟಳು. 

ನವೆಂಬರ್ ನಲ್ಲಿ ಅವಳಿಗೆ ಜಾಬ್ ಆಫರ್ ಸಿಕ್ತು...ಜನವರಿಯಲ್ಲಿ ಜಾಯ್ನ್ ಆಗುವ ಹಾಗೆ. ಶ್ರೀಕಾಂತ್ 'congrats ನಿಂಪಿ' ಅಂದಿದ್ದು ಇನ್ನು ಕೇಳಿದ ಹಾಗೆ ಇದೆ. December ನಲ್ಲಿ ಅವರು ಹೋಗಿ ಬಿಟ್ರು...ನಾವು ಗೋಕರ್ಣ ಕ್ಕೆ ಹೋಗಿ ಬಂದು, ನುಡಿ ನಮನ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಅವಳು ಕೆಲಸಕ್ಕೆ ಸೇರಿದ್ದು ನನಗೆ ಸಮಾಧಾನ ಅನ್ನಿಸ್ತು...attention divert  ಆದ ಹಾಗೆ ಆಯಿತು....ಸ್ವಲ್ಪ ಹೆಚ್ಛೆ emotional ಅವಳು ❤️❤️

ನಾನು ಝುಣಕಾ ಮಾಡುವ ವಿಧಾನ

ಸೊಪ್ಪನ್ನು ಚೆನ್ನಾಗಿ ತೊಳೆದು...ಬುಡದಲ್ಲಿನ ತಾಜಾ ಇರುಳ್ಳಿ ಚಿಕ್ಕದಾಗಿ ಕಟ್ ಮಾಡಿ ಬೇರೆ ಇಡುತ್ತೇನೆ. ಸೊಪ್ಪನ್ನೂ ಕತ್ತರಿಸಿ ಇಡಿ. regular ನೀರುಳ್ಳಿ ಕೂಡ ಕಟ್ ಮಾಡಿ ಇಡಿ. ಸ್ವಲ್ಪ ಕಡಲೆ ಹಿಟ್ಟು ಲೈಟ್ ಆಗಿ ಹುರಿದಿಡಿ.

ಮೊದಲಿಗೆ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿದ ಮೇಲೆ ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ. next ರೇಗುಲರ್ ನೀರುಳ್ಳಿ ಹಾಕಿ ಕೆಂಪ ಗಾಗುವ ತನಕ ಹುರಿಯಿರಿ. ಅರಿಸಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಧನಿಯಾ ಜೀರಾ powder ಬೆರೆಸಿ. ಎರಡು ನಿಮಿಷ ಬಿಟ್ಟು ಇದಕ್ಕೆ ಎಳೆ ನೀರುಳ್ಳಿ ತುಂಡು ಬೆರೆಸಿ. ಎರಡು ನಿಮಿಷ ಆದ ಮೇಲೆ ದಂಟು ಸೇರಿಸಿ....ಅದು ನೀರು ಬಿಡಲು ಆರಂಭ ಆಗುವಾಗ, ಎಷ್ಟು ಬೇಕೋ ಅಷ್ಟು  ಹುರಿದ ಕಡಲೆ ಹಿಟ್ಟು ಬೆರೆಸಿ. ಡ್ರೈ ಆಗುವ ತನಕ ಒಲೆ ಮೇಲಿಡಿ ....

ಅಷ್ಟೇ


spring onion jhunka



February 1, 2026

morning walk @cubbon.park

 ನಿನ್ನೆ ಸಂಜೆ ನಿಹಾ "ಅಮ್ಮ ಸಂಬಳ credit ಆಯ್ತು. ನಾಳೆ ಎಲ್ಲಾದರೂ ವಾಕ್ ಹೋಗಿ, ಬೆಳಗಿನ ತಿಂಡಿ ನನ್ನ treat 'ಅಂದ್ಲು.  ಬೇಜಾರು ಮಾಡೋದು ಬೇಡ ಅಂತ ಹೂಂ ಅಂದೆ. ಲಾಲಬಾಗ್ or ಕಬ್ಬನ್ ಪಾರ್ಕ್ ಅಂತ ಕೇಳಿದ್ಲು....ನಾನು ಸಾಂಕೀ ಟ್ಯಾಂಕ್ ಹೊದ್ರೆ  ಹೇಗೆ ಅಂದೆ...ಅದಕ್ಕೆ ಅಕ್ಕ 'ಅಮ್ಮ ನಾವು ಏಳೋದು ಲೇಟ್ ಆದ್ರೆ??....ಅದು 10 ಗಂಟೆಗೆ ಕ್ಲೋಸ್ ಅಂದ್ಲು... ಕಬ್ಬನ್ ಪಾರ್ಕ್ choose ಮಾಡಿ ಅಲ್ಲಿಗೆ ಹೋದ್ವಿ...

         ನನ್ನ veggie english breakfast. Niha's treat...ಹೊಸ ಕೆಲಸದ ಮೊದಲ ಸಂಬಳ



wizened wise, deep rooted tree that caught mine and nimpi's attention. akka had gone for a run...
                            namma metro




January 31, 2026

Grief / ದುಃಖ / ನೋವು

 every one's experience of grief and coping mechanism is different. it is super draining to listen to comparisions.

The doctor's words still rankle - "you're lucky" Srikanth's condition was diagnosed late after age 60😔. Like, what even is that comparison? We just want our loved ones healthy, period 🙏

And then the bank manager' said 'i can understand madam, my father passed away 2 months ago.... losing a partner is different from losing a father 😤. Comparisons don't help, they just make it worse. 

People often try to relate through their own experiences, but it doesn't diminish the pain 😔. Everyone's grief is unique - losing a partner, kids, or a friend are different kinds of loss. Comparisons don't help. I know people mean well, but sometimes feel like screaming, but it's better to just listen 🙏. 

Now i am apprehensive when people say they want to come meet me...😭😧




January 20, 2026

A month without you



Shock has settled and reality has kicked in

Srikanth was nauseous on the morning of the 8th Dec 2025 and didn't eat much. He slept for a while and couldn't have lunch either, looking weak and faint. Without an appointment, we took him to the doctor. Dr. Sandur examined him, diagnosed gastritis, and suggested medication. He referred us to Dr. Naveen Ganjoo - Liver yransplant surgeon, at Aster RV, saying, "Better go and meet him today itself."

We had to wait quite a bit to meet Dr. Naveen, who said, "I heard about you, Mr. Shenoy, long before your visit to me." He advised Srikanth to get admitted for observation and tests. We waited 45 minutes for a single occupancy ward. Salimath, who accompanied us, asked the administrator for a place for Srikanth to lie down.

As I entered the ward, an unknown fear clutched my heart. I asked Akka if we could go back to Manipal Hospital, but Dr. Sandur had suggested Dr. Naveen since he's a transplant surgeon. Srikanth perked up by evening and had dinner after medication.

A clumsy nurse kept dropping things, and I was exasperated when she dropped an injection vial. She kept making me fetch hot water, mix medicines, and give them to him. She had a terrible cold and cough and lost her voice the next day, whispering loudly at everyone – it was irritating.

The annas took 20-25 minutes to clean him up and change his diaper. He was given a laxative and had loose motions every 5 minutes. I told Srikanth, I'd seen YouTube videos and could clean him and change his diaper, he was amused but did not agree to it , inspite of me saying that  lying in filth wasn't good. They put a tube since he wasn't passing urine and did some tapping. Before tapping, he was left unattended in the corridor in the basement until the bed was free – they could do better with coordination. I was aghast and took pictures; his urinary tube was showing blood.

On Thursday evening, the oximeter didn't show any reading. The night shift nurse panicked, rubbed his fingers, and covered him up. A horde of doctors and nurses came with some equipments. Around 11 pm, they shifted him to ICU for observation. The hospital let me stay in the ward that night.

Each time I visited ICU, there was nobody attending him. He pulled the dialysis tube, and the bed was wet with blood. They said they couldn't change the sheet during dialysis and put restraints – it was heart-rending. A person who spent his life striving for the betterment of rural farmers and the urban poor, begging to free his hands... it broke my heart 😭😭.

Another time, when I was in the washroom, Salimath visited and said blood was spurting like a fountain with nobody attending him. He rushed to the duty doctor for help and was visibly shaken.

 i wonder if there are security cameras inside ICU. No sympathy or empathy just general apathy

The doctor told us to keep his spirits up and visit ICU as much as possible but failed to communicate this to security. I  begged them everytime to let me visit, even for a short while.

Since he couldn't void after three days, they tried more dialysis – nothing worked, and there were internal complications. On the 17th, the doctor said things weren't looking good, and I called my brothers and amma to come to Bengaluru 😧😧😭.

On the 20th, I fought with security and went in, telling Srikanth, "I'm here at the hospital. fighting the security person is tiring, Get well soon, we can go home..." that was my last cinversation with him..albeit one way .There was a 'hand over' process, (doctors change in shift)and I was sent out. at 10.42 I got a call from ICU that he'd suffered a cardiac arrest... everything went numb... he was cold to my touch, and his lips had turned yellow. I hope he didn't suffer much... 😭😭.
at 8 am my msg to my bro..by 10.47 srikanth was no more 😭


my take on the hospital : they are seriously short staffed. could not help but compare the facilities with Manipal Hospital, Kanakapura road. Such efficient , kind hearted Doctors,bstaffs and nurses.

Many stood by us in our grief, helping with hospital discharge paperwork and insurance. Since he wished to donate his body to a medical college, we had help from Narasimha Prasad, Srikanth's friend Dr. Somashekhar's son...

Life has to go on; we have to come to terms with things 🙏🙏.

January 18, 2026

Niha's sketch at NGMA

 


Super excited to share that Niha's sketch is on display at NGMA as part of #bengaluruhabba 2026, from Jan 16th to 25th, 10am-6pm! 🎨 There are art activities for all ages, so do drop by if you're free. Nearest metro: Cubbon Park or Ambedkar Bhavan/Vidhan Soudha 🙏

Niha's sketch

more about the artist and the art 👇👇

https://drawingbengaluru.com/web/2026/01/niharika-shenoy/