December 27, 2023

on a lighter note

 soon 2023 will come to an end..

mine and nimpi's whatsapp msg today



i forgot tomatoes...she called to ask about addition of tomatoes.
*finely chopped tomatoes to be added after the garam masala part.
 she said it was very tasty and she made the bestest rotis...❤️❤️🙂

December 8, 2023

horsegram idli /ಕುಳ್ತಾ ಸಾನ್ನಣ/ಹುರುಳಿ ಇಡ್ಲಿ

  


ನನ್ನ 12th ಮತ್ತು ಮೊದಲನೇ ವರ್ಷದ ಪದವಿ ಸೇರುವ ಮುನ್ನ ಸುಮಾರಷ್ಟು ಸಮಯ ರಜ ಇತ್ತು. ಅಮ್ಮ ನನ್ನನ್ನು ನಾನಿ ಬಳಿ ಕಳಿಸಿದ್ರು... ನಾನಿ ಬಳಿ ಇದ್ದ ಹಾಗಾಗುತ್ತೆ  ಹಾಗೆ ಅಡುಗೆ ಕಲ್ತ ಹಾಗಾಗುತ್ತೆ ಅಂತ. heavy duty ಕೆಲಸಕ್ಕೆಲ್ಲ ರಾಜೀವಿ ಇದ್ಲು. ನಾನಿಗೆ rheumatic arthritis ಇದ್ದುದರಿಂದ ಹೆಚ್ಚು ಕೆಲಸಗಳು ಕೂಡುತ್ತಿರಲಿಲ್ಲ

ನಾನು ಅಲ್ಲಿದ್ದಾಗ ನಾನಿಗೆ ಇಷ್ಟವಾದ ಅಡಿಗೆಗಳನ್ನೆಲ್ಲ ನನ್ನಿಂದ ಮಾಡಿಸುತ್ತಿದ್ದರು. ಅದರಲ್ಲಿ ಈ ಹುರುಳಿ ಕಾಳು ಇಡ್ಲಿ ಒಂದು. ಹೆಚ್ಚಿನ ಜನರಿಗೆ ಇದು ಇಷ್ಟ ಆಗಲ್ಲ ಯಾಕೋ

ಈಗ ಸ್ವಲ್ಪ ದಿನ ಅಮ್ಮನ ಜತೆ ಇರಲು ಬಂದಿದ್ದೇನೆ. ಹೀಗೆ ಮರೆತು ಹೋಗಿರುವ traditional ತಿಂಡಿ ಗಳನ್ನು ನಾನು ಅಮ್ಮ ಮಾಡಿ ತಿನ್ನುವ ಯೋಜನೆ.

ಹುರುಳಿ ಇಡ್ಲಿ ಗೆ ಅಳತೆ ಒಂದು ಅಳತೆ ಉದ್ದಿನ ಬೆಳೆಗೆ, ಅರ್ಧ ಅಕ್ಕಿ, ಎರಡು ಅಳತೆ ಹುರುಳಿ ಕಾಳು. ಉದ್ದಿನ ಬೇಳೆ ನುಣ್ಣಗೆ , ಮತ್ತು ಆಕಿಯನ್ನು ರವೆ ಸಮಾನ ರುಬ್ಬಿ, ಇವೆರಡನ್ನು ಸೇರಿಸಿ  ಹುದುಗು ಬಂದ ಮೇಲೆ, 8 ಗಂಟೆ / ಮರುದಿನ  ನೆನೆಸಿಟ್ಟ ಹುರುಳಿ ಯನ್ನು ರವೆ ಹದಕ್ಕೆ ರುಬ್ಬಿ ಮಿಕ್ಸ ಮಾಡಿ ಅರ್ಧ ಗಂಟೆ ಬಿಟ್ಟು ಬಾಳೆಯಲ್ಲಿ ಸುರಿದು/ಇಡ್ಲಿ mould  ನಲ್ಲಿ  ಹಾಕಿ ಅರ್ಧ ಗಂಟೆ ಬೇಯಿಸುವುದು.

ಬೇಯಿಸುವ ಮುನ್ನ ಶುಂಠಿ + ಹಸಿ ಮೆಣಸಿನ ಕಾಯಿ ಜಜ್ಜಿ ಹಾಕಿದ್ರೆ ಅದರ level ಎ ಬೇರೆ.

ಸ್ವಲ್ಪ ತಣಿದ ಮೇಲೆ ಚೆಂದ ಆಕಾರದಲ್ಲಿ ಕಟ್ ಮಾಡಬದು..ಇದು ಬಿಸಿ ಇದ್ದಾಗ ಕಟ್ ಮಾಡಿ ಚಿತ್ರದಲ್ಲಿ ಹಾಗೆ  ಬಂದಿದೆ

ಇನ್ನು experiment ಮಾಡಲು....

1.ಹುರುಳಿ ಕಾಳು + ನವಣೆ ಉಪಯೋಗಿಸಿ ಇಡ್ಲಿ.

2. ಮೇಲೆ ಕೊಟ್ಟಿರುವ ಅಳತೆಯಿಂದ ಅಕ್ಕಿ skip ಮಾಡಿ ಇಡ್ಲಿ ತಯಾರಿಸೋದು.

ಖಾರವಾದ ಚಟ್ನಿ, ದಾಳಿ ತೊವ್ವೆ , ಸಾಂಬಾರು, ತೆಂಗಿನ ಎಣ್ಣೆ ಜತೆ ಸರ್ವ್ ಮಾಡಿ 👍👍


November 21, 2023

cake delivery & Cricket

  





we had to deliver these cakes to Sarjapur. since there were two boxes i accompanied akka. I was surpised to see the road deserted. then i realized it was the Cricket finals. i enjoyed the ride thoroughly, imagining i was riding in a open jeep and taking deep cool breath of air 😆. winter is heralding its arrival there is a definite nip in the air. my imagination hit  a rock when we reached really bad roads and had to balance our cake boxes. 😆

the destination was quite far, barely any street light and location was unknown to us.
Malavika asked the autowala, if he was willing to drop us back...and he readily agreed, saying
ನಾನೂ ಅದನ್ನೇ ಯೋಚನೆ ಮಾಡ್ತಾ ಇದ್ದೆ. ಖಾಲಿ ಹೋಗ್ಬೇಕಲ್ಲಾ?  ಎರಡು app ಒಪನ್ ಮಾಡಿ ಕೊಂಡದಿದ್ದೆ..ಆದರೆ ಇವತ್ತು ಕ್ರಿಕೆಟ್ ಇದೆಯಲ್ಲಾ.. ಯಾವ್ದು ರೈಡ್ ಸಿಗ್ತಿಲ್ಲ' ಅಂತ. ಮನೆ ತಾವ ಬುಡಬೇಕಾ?
ಅಕ್ಕ : ಬಿಡಿಲಿಕ್ಕೆ ಆಗತ್ತಾದ್ರೆ  ಬಿಡಿ. ಇಲ್ಲದಿದ್ರೆ ಹತ್ತಿರದ ಬಸ್ ಸ್ಟಾಪ್ ಗೆ ಬಿಟ್ರು ಆಗುತ್ತೆ.
ಬೇಡ ಮನೆ ಹತ್ತರಾನೇ ಡ್ರಾಪ್ ಮಾಡ್ತೀನಿ...

while returning...after traversing half distance.. vehicles were again on the road. i said to akka 'oh traffic again, i think India lost the match'
'how come u know'
me: lots of vehicles, no sound of crackers...

this was a cute cake. the auto wala drove us very carefully. the roads as we approached  near to the cake delivery location was very very very bad.

we thanked him profusely for driving us carefully and dropping us back and akka gave him a big tip 🙂🙂🙏

November 20, 2023

ಮೀನಿನ ಬುಟ್ಟಿ ಮೀನು ಊಟ

 when Kuntady Nitesh (rutumana/moggubooks publisher) sent me a voice note saying he would visit us to bring the printed copies of meenina butti, i asked him to come over for a fish meal which was long overdue.

it is been a long time since i cooked non veg food for friends. earlier i enjoyed cooking fish for Niha's office mates who hailed from kerala. Now she lives in a different state, malavika  hates the smell of fish and me and srikanth are not particularly interested in eating fish. so with great trepidation i have prepared fish and chicken today when i invited Nitesh & family for lunch. 😆😆
 i felt it apt to have fish with ಮೀನಿನ ಬುಟ್ಟಿ



                 bonda sharbath
old pic cos we had self service meal 😆

   kokum kadi..soothing after a meal



for the veggie girl dal and cabbage palya

i made kori ghasi for kori rotti and some sungta phaNNa upkari

for dessert carrot halwa, vanilla ice cream and rasagulla. forgot to click pics


ಮೀನಿನಬುಟ್ಟಿ written by Kiran Manjunath
illustration - Niharika Shenoy
Publishers - rutumana/moggubooks

November 16, 2023

ಮಕ್ಕಳ ದಿನಾಚರಣೆಯಂದು ಬಿಡುಗಡೆ ಹೊಂದಿದ ಮೀನಿನ ಬುಟ್ಟಿ

 

one of the illustrations for #ಮೀನಿನ ಬುಟ್ಟಿ


ನಿಹಾರಿಕಾಳಿಗೆ  ಕನ್ನಡ ಪುಸ್ತಕಕ್ಕೆ ಚಿತ್ರ ಬರೀ ಬೇಕೆಂಬ ಆಸೆ ಇತ್ತು. ಕಿರಣ್ ಮಂಜುನಾಥ ಅವರು ಬರೆದ 'ಮೀನಿನ ಬುಟ್ಟಿ' ಗೆ ನಿಹಾ ಚಿತ್ರ ಬರೆದಿದ್ದಾಳೆ.

ಮೊಗ್ಗು ಬುಕ್ಸ್ ಡಾಟ್ ಕಾಮ್ ನಲ್ಲಿ ಪುಸ್ತಕ ಲಭ್ಯವಿದೆ.

thanks to Nitesh Kuntady

www.moggubooks.com

👍🙏❤️

November 12, 2023

ನೀರು ಕುಡಿಯಿರಿ

 ಒಂದು ಸಣ್ಣ ಕತೆ

illustration by @niharikashenoy ❤️❤️

ನಾನಿ ಹೇಳಿದ್ದು:
ಚಿಕ್ಕವರಿದ್ದಾಗ ರಾತ್ರಿ ಹೊತ್ತು ನಾನಿ 'ನೀರು ಕುಡಿದು ಮಲಗಿ ಮಕ್ಕಳೇ ಅಂತ ಹೇಳುತ್ತಿದ್ರು.
ಯಾಕೆ ಅಂತ ಕೇಳಿದಾಗ ಈ ಕತೆ ಹೇಳಿದ್ರು
ಒಬ್ಬನಿಗೆ ರಾತ್ರಿ ಮಲಗುವಾಗ ಬಾಯಾರಿಕೆ ಯಾಯಿತಂತೆ. ಸೋಂಬೇರಿ ತನ ನೀರು ಕುಡಿಯದೆ ಹಾಗೆ ಮಲಗಿದ. ರಾತ್ರಿ ಅವನ ಆತ್ಮ ನೀರಡಿಕೆ ತಾಳಲಾರದೆ ನೀರು ಹುಡುಕಿ ಹೋಯಿತಂತೆ. ಹಲವಾರು ಮನೆಗಳಿಗೆ ಭೇಟಿ ನೀಡಿತಂತೆ. ಕೊನೆಗೆ ಒಬ್ಬರ ಮನೆಯಲ್ಲಿ ನೀರಿನ ಮಡಕೆಯ ಮುಚ್ಚಳ ತೆಗೆದಿದ್ದಿದ್ದು ನೋಡಿ ಅದರಲ್ಲಿ ಮುಳುಗಿ ಬಾಯಾರಿಕೆ ನೀಗಿಸಿಕೊಂಡಿತಂತೆ. ಅಷ್ಟರಲ್ಲಿ ಮನೆಯಲ್ಲಿನ ಯಾರೋ ಮಡಕೆಗೆ ಮುಚ್ಚಳ ಹಾಕಿಬಿಟ್ಟರಂತೆ. ಆತ್ಮ ಮಡಿಕೆಯಲ್ಲೇ........
ಇಲ್ಲಿ ಮನೆಯಲ್ಲಿ ಆತ ಏಳಲಿಲ್ಲ ಇನ್ನೂ ಯಾಕೆ, ಅಂತ ನೋಡಿದರೆ ದೇಹ ತಣ್ಣಗಾಗಿತ್ತಂತೆ. ಅವನ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಯಿತು. ಜನರು ಅವನ ಕಳೇಬರ ಎತ್ತಿಕೊಂಡು ಸ್ಮಶಾನದ ದಾರಿ ಹಿಡಿದರು.
ಈ ಮನೆಯಲ್ಲಿ ಪುನಃ ಮಡಕೆಯ ಮುಚ್ಚಳ ತೆಗೆಯಲಾಯಿತು. ಆತ್ಮ ಹಾರಿಕೊಂಡು ಇವನ ದೇಹ ಸೇರಿತು. ಇವನು ಪಟಕ್ಕನೆ ಎದ್ದು ಕುಳಿತ ರಭಸಕ್ಕೆ, ಹೊತ್ತೊಯ್ಯುವವರು ಬೆದರಿ ಇವನನ್ನು ಕೆಳಕ್ಕೆ ಬಿಸಾಕಿ ಓಡಿ ಹೋದರಂತೆ 🙂
ಮಕ್ಕಳೇ ಆಕಸ್ಮಾತಾಗಿ ಅವನ ದೇಹ ಬೆಂಕಿಗೆ ಆಹುತಿಯಾಗಿದ್ದರೆ, ಆತ್ಮ ಏನು ಮಾಡಬೇಕಿತ್ತು???
ಗೊತ್ತಾಯ್ತಾ ಎಲ್ಲರೂ ನೀರು ಕುಡಿದು ಮಲಗಿ ಇನ್ಮೇಲಿಂದ 🙂🙂🙂
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ❤️❤️🙂🙏🙏

November 8, 2023

ದಾಳಿಂಬೆ ಹಣ್ಣಿನ ತಾಜಾ ರಸ

 Freshly squeezed pomegranate juice. yes you heard it right!!. These tiny pomegranates are a hassle to peel/deseed.  cut them in half and squeeze them in the  lime/orange squeezer. no mess at all.

malathi's tried and tested tips ❤️❤️



ಮಾರುಕಟ್ಟೆಯಲ್ಲಿ  ಪುಟ್ಟ ಪುಟ್ಟ ದಾಳಿಂಬೆ ಹಣ್ಣುಗಳು ಬಂದಿವೆ. ಸುಲಿಯಲು/ಬಿಡಿಸಲು ಕಿರಿಕಿರಿ.

ನನಗೊಂದು ಉಪಾಯ ಹೊಳೆಯಿತು. ಅದನ್ನು ಮಧ್ಯಕ್ಕೆ ಕತ್ತರಿಸಿ, ಲಿಂಬೆ ಹಣ್ಣಿನ squeezer ನಲ್ಲಿ ಒತ್ತಿ ಅದರ ರಸ ಹಿಂಡೋದು. 😄👍👌
ದೀಪಾವಳಿಯ ಕ್ಲೀನಿಂಗ್ ಮಾಡಿ ಸುಸ್ತಾದಾಗ ಇದರ ಜ್ಯುಸ್ ನಮ್ಮನ್ನು refresh ಮಾಡುತ್ತೆ.
ಪುಸ್ತಕ ಜ್ಯುಸ್ ಜತೆ ಇದ್ದದ್ದು ಕಾಕತಾಳೀಯ...
ದಿನ ಬೆಳಿಗ್ಗೆ ಸಂಜೆ ಟೀ ಕುಡಿಯುವಾಗ ಈ ಪುಸ್ತಕದ ನಾಲ್ಕೈದು ಪುಟ ಓದುತ್ತೇನೆ.
ಒಬ್ಬ ಮಿತ್ರ ಪುಸ್ತಕ ಬರೆದರೆ ಇನ್ನೊಬ್ಬರು ಇದರ ಪ್ರಕಾಶಕರು..😄❤️👍
Happy Deepavali ಎಲ್ಲರಿಗೂ
ಕೆಳಗಡೆ ಕೊಂಡಿ click ಮಾಡಿ

November 4, 2023

ಇಕ್ಕೇರಿ

 ಸಾಗರದಿಂದ ತೀರ್ಥಹಳ್ಳಿಗೆ ಮರಳುವ ಮುನ್ನ ಬೇಗನೆ ಇಕ್ಕೇರಿಗೆ ಹೋಗಿ ಬಂದೆವು. ನಾನು ಈ ಮೊದಲೇ ಆಫಿಸ್ ನವರ ಜತೆ ಇಕ್ಕೇರಿಗೆ ಹೋಗಿದ್ದೆ...ಮಾಲವಿಕ ನೋಡಿರಲಿಲ್ಲ.






 







November 2, 2023

Drinksu

 ನನ್ನಿಷ್ಟದ ಪೇಯ ಒಂದನ್ನು ನಿಮ್ಮ ಜತೆ ಹಂಚಿ ಕೊಳ್ಳುತ್ತೇನೆ

ಬೋಂಡ ಶರ್ಬತ್


ಬೇಕಾಗಿರುವುದು

ಎಳನೀರು with ತೆಳು ಗಂಜಿ, ಸಕ್ಕರೆ (ಬೇಕಿದ್ದಲ್ಲಿ ಮಾತ್ರ), ನೀರಲ್ಲಿ ನೆನೆಸಿಟ್ಟ ಸಬಜ್/ಕಾಮಕಸ್ತೂರಿ ಬೀಜ, ನಿಂಬೆ ಹಣ್ಣಿನ ರಸ ಮತ್ತು ಪುದಿನಾ ಎಲೆಗಳು

ಎಲ್ಲವನ್ನು ಮಿಕ್ಸ್ ಮಾಡಿ ಅತ್ಲಾಗೆ ಅಂಡ್ ಹೊಡೀರಿ....

winter ಬರ್ತಾ ಇದೆ. ಬೆಳಿಗ್ಗೆ ಸಂಜೆ ಮಂದನೆ ಕುಳಿರ್ಗಾಳಿ ಆದ್ರೆ ಮಧ್ಯಾಹ್ನದ ಹೊತ್ತು ಸ್ವಲ್ಪ ಚುರುಕಾದ ಬಿಸಿಲು. ಆಗ ಈ ಎಲ್ನೀರಿನ ಬೋಂಡ ಜೀವಕ್ಕೆ ತಂಪನ್ನೆರೆಯುತ್ತದೆ.

try and let me know ❤️❤️

October 30, 2023

ಆರ್ಕಿಡ್ಸ್ ನ ವಿಸ್ಮಯಕಾರಿ ಜಗತ್ತು

 orchids/ಆರ್ಕಿಡ್ಸ್. ಕನ್ನಡದಲ್ಲಿ ಸೀತಾಳ ದಂಡೆ. ಎಷ್ಟು ಚೆಂದದ ಹೆಸರಲ್ಲವೇ? 😊

ನಮ್ಮ ತೋಟದಲ್ಲಿ ಅಡಿಕೆ ಮರದ ಮೇಲೆ, ಕಲ್ಲು ಪೊಟರೆಯಲ್ಲಿ ತನ್ನಿಂದ ತಾನೆ ಬೆಳೆಯುವ ಸೀತಾಳ ದಂಡೆಯ ಒನಪೇ ಬೇರೆಯದು.

ನಿನ್ನೆ ಮೊನ್ನೆ ಎರಡು ದಿನ St. joseph's university, Langford Road, ಇಲ್ಲಿ ಎರಡು ದಿನದ Orchids show ನಡೆಸಲಾಯಿತು. ನಾವು ಶನಿವಾರ ರಾತ್ರಿಯಷ್ಟೇ ತೀರ್ಥಹಳ್ಳಿಯಿಂದ ಬೆಂಗಳೂರು ತಲುಪಿದೆವು. ಭಾನುವಾರ ಆಪ್ಟೆಷ್ಟ್ರರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಷೋ ಗೆ ಹೊರಟೆವು. ಎಷ್ಟೊಂದು ಚೆಂದದ ಹೂಗಳನ್ನು ನೋಡಲು ಎರಡು ಕಣ್ಣು ಸಾಲದಾದವು. ಅದೊಂದು ಬೇರೆಯದೆ ಲೋಕ. ಈ ಶೋ ಗೆ ಆಮಂತ್ರಣ ಶ್ರೀಕಾಂತ್ ಗೆ ನನ್ನ ಸ್ನೇಹಿತೆ ರಾಧಿಕಾ ಗಂಗಣ್ಣ ಮೂಲಕ ಸಿಕ್ಕಿತ್ತು. ಅವರ ಅಣ್ಣ ಪುರುಷೋತ್ತಮ್ TOSKAR* ಗುಂಪಿನ ಸದಸ್ಯರು. ಅವರ ಮನೆಯ ಮಹಡಿ ಮೇಲೆ ಸುಮಾರು ಆರ್ಕಿಡ್ ಹೂ ಗಳನ್ನು propogate  ಮಾಡಿದ್ದಾರೆ/ಮಾಡುತ್ತಿದ್ದಾರೆ.

ಆರ್ಕಿಡ್ ಹೂ ಗಳು ಇತರ ಹೂವಿನಂತೆ ಅಲ್ಲ. ಅವನ್ನು ತುಂಬಾ ಕಾಳಜಿ, ಸಂಯಮ ದಿಂದ ಪೋಷಿಸಬೇಕು/ಸಾಕಬೇಕು/ಸಲಹಬೇಕು. ನಾನು ಯಾವುದೇ ಗಿಡ, ಬಳ್ಳಿ , ಹಣ್ಣು ತರಕಾರಿ ಬೆಳೆಸ ಬಲ್ಲೆ, ಆದರೆ ಆರ್ಕಿಡ್ಸ್ ನನ್ನ ಕೈಯಲ್ಲಿ ಬದುಕಿಲ್ಲ. ಸುಮಾರು ಪ್ರಯತ್ನ ಮಾಡಿದ್ದಿದೆ.,😔😔.

ಇಂತಹ ಒಂದು ಗುಂಪು ಇದ್ದದ್ದೇ ಗೊತ್ತಿರಲಿಲ್ಲ. ಈ ಸಲ ಹಲವಾರು ಪರಿಣಿತರು, ಪುರುಷೋತ್ತಮ ಅವರನ್ನೂ ಒಳಗೂಡಿ, ಸಲಹೆ ಸೂಚನೆ ನೀಡಿದ್ದಾರೆ, ಹಾಗಾಗಿ ಕೆಲವು ಹೂಗಳನ್ನು ಕೊ0ಡು ತಂದಿದ್ದೇನೆ....ನೋಡುವಾ

TOSKAR : The Orchid Society Of Karnataka

ಕೆಲ ಚಿತ್ರ ನಿಮಗಾಗಿ













October 25, 2023

ದಸರಾ 2023

 


ನಮ್ಮ ದಸರಾ ಚೆನ್ನಾಗಾಯಿತು. ನಿಮ್ಮದು?? ಇನ್ನು ದೀಪಾವಳಿ ಹ್ಯಾ0ಪರ್ ಗೆ ತಯಾರಿ.






October 15, 2023

doodpak/ದೂದ್ಪಾಕ್

not related to mysore pak 😀😀



ಮೊನ್ನೆ ಕಾರ್ಕಳದಲ್ಲಿ ಶ್ರೀಕಾಂತ್ ಭಾವ ನವರ ವೈಕುಂಠ ಇತ್ತು. ಊಟದ ಕೊನೆಯಲ್ಲಿ ಪಾಯಸ ಬಂತು. ಎಲ್ಲರೂ ಬೇಡ ಬೇಡ ಅಂತ ಎಲೆಯಲ್ಲಿ ಪಾಯಸ ಹಾಕಿಸಿಕೊಳ್ಳಲಿಲ್ಲ. ನಾನು ಹಾಕಿಸಿಕೊಂಡೆ. ಮಾಮಿ, ಇನ್ನಷ್ಟು ಬಡಿಸಲಾ ಅಂದ್ರು. ಓಹೋ ಖಂಡಿತ !ಇನ್ನೊಂದು ಸೌಟು ಬಡಿಸಿ..ಅಂದೆ
ಮಾಮಿ ನೀವೊಬ್ಬರೆ ಪಾಯಸ ಹಾಕಿಸಿಕೊಂಡಿದ್ಫು, ಖುಷಿಯಾಯ್ತು ಎಲ್ಲರೂ ಬೇಡ ಅನ್ನೋವ್ರೆ..
ನಾನು ನಕ್ಕೆ. ಪಾಯಸ ಮಾತ್ರ ಅದ್ಭತ ವಾಗಿತ್ತು.

ಇವತ್ತು ಮಹಾಲಯ ಅಮಾವಾಸ್ಯೆ..ಶ್ರೀಕಾಂತ್ ಇನ್ನೂ ತೀರ್ಥಹಳ್ಳಿಯಲ್ಲಿದ್ದಾರೆ. ಹಾಗಾಗಿ ಅಡಿಗೆ ಸಿಂಪಲ್. ಅನ್ನ ಸಾರು ಪೋಡಿ...ಮತ್ತು ದೂದ್ ಪಾಕ್. ದೂದ್ ಪಾಕ್ ನನ್ನ ಇಷ್ಟದ ಪಾಯಸ...here goes.......

doodpak/ದೂದ್ ಪಾಕ್

ಬೇಕಾಗಿರುವುದು : ಗಂಧಸಾಲೆ(ಪರಿಮಳದ) ಅಕ್ಕಿ, ಸ್ವಲ್ಪ ಸಬ್ಬಕ್ಕಿ ಸೀಮೆಅಕ್ಕಿ/ಸಾಬುದಾನಾ), ಹಾಲು, ಸಕ್ಕರೆ, ಏಲಕ್ಕಿ. ಹುರಿದ ಕಾಜು ಕೀಸ್ಮಿಸ್
ಹಾಲನ್ನು ಬಿಸಿ ಮಾಡಿಟ್ಟು ಕೊಳ್ಳಿ
ಅಕ್ಕಿ ಮತ್ತು ಸೀಮೆ ಅಕ್ಕಿಯನ್ನುಚೆನ್ನಾಗಿ ತೊಳೆದು, ನೀರಿನಲ್ಲಿ ಬೇಯಿಸಿಕೊಳ್ಳಿ. ಹಾಲಿಗೆ ಸಕ್ಕರೆ ಬೆರೆಸಿ ಕುದಿಸಿ. ಇದಕೆ ಬೇಯಿಸಿದ ಅಕ್ಕಿ+ಸೀಮೆಅಕ್ಕಿ ಬೆರೆಸಿ ಕುದಿಸಿ. ಏಲಕ್ಕಿ ಬೆರೆಸಿ. ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಬೆರೆಸಿ. ದೂದ್ಪಾಕ್ ತಯಾರು. ಮೇಲೆ ಬೇಕಾದ್ರೆ ಕೇಸರಿಯನ್ನು ಉದುರಿಸಿ..👍❤️🙂

October 9, 2023

kheeri- comforting food

 For gouri - ganesh festival we make patholi - a sweet that makes use of turmeric leaves and also seppe/cheppe kheeri where rice is soft steamed with the addition of turmeric leaves and once it cools down adding freshly extracted coconut milk. seppe/ cheppe means bland cos neither sugar/jaggery nor salt is used for this dish.

turmeric leaf is believed to have antiseptic properties but i love using using it for its aroma & taste.
srikanths office has a big terrace  and he with the help of manjanna has grown lot many plants. turmeric is one of them.
he had got a few leaves for chouthi and on  after  the festival he takes the prasadam/offerings to the office  to share with colleagues. but this time round he was on office tour so i did not make lots of prasadam.
with the leaves and organic mundaga rice sourced from Jaivik Sattva made kheeri today. and believe me when i say it so sooothing to the gut..especially after a heavy breakfast of  pav bhaji 😀😀



recipe :
steam/cook rice with turmeric leaves.


 extract coconut milk and add it before serving. 





it should neither be too thick nor runny but porridge like consistency. i served with a side of stuffed bhindi and appe midi pickle. 
A good sunday even though daughter was busy with cake orders.


October 3, 2023

Daughter's Day ❤️

 

ಮೊನ್ನೆ daughter's ಡೇ ಗೆ ಹಲವಾರು ಚಾಕೊಲೇಟ್ ಕಪ್ ಕೇಕ್ ಗಳಿಗೆ ಆರ್ಡರ್ ಇತ್ತು. ಅದರ ಜತೆಗೆ ಎರಡು ಬರ್ತ್ ಡೇ ಕೇಕ್ ಹಾಗೂ ಒಂದು whole wheat ಬ್ರೆಡ್ ಹಾಗೂ  ಬೆಲ್ಲದ ಕಪ್ ಕೇಕ್ ಆರ್ಡರ್ ಕೂಡ ಇತ್ತು. 



ಕೇಕ್ ಟಿನ್ ಗೆ ತಾಗಿದ ಬ್ರೆಡ್ ಚೂರೊಂದನ್ನು ಬಾಯಿಗೆ ಹಾಕ್ಕೊಂಡೆ.. ಮ್ಮ್ಮ್ಮ್ಮ್ಮ್ ಎನ್ ರುಚಿ ಅಂತೀರಾ? ಮತ್ತೆ ಮನೆಯೆಲ್ಲ ಪರಿಮಳ...mmmm heavenly 

ನಾನೂ ಬ್ಯುಸಿ ಇದ್ದ ಕಾರಣ ಕೆಲವು ಕೇಕ್ ಗಳ ಫೋಟೋ ತೆಗೆಯಲಾಗಲಿಲ್ಲ

ಸುಮ್ನೆ you tube shorts ಗೆ ಒಂದು ಕ್ಲಿಪ್ ಮಾಡಿ ಹಾಕಿದೆ. ನೀವು ನೋಡಿ...❤️🙏🙂

ಕಪ್ ಕೇಕ್ಸ್ / cup cakes


ನಿಮಗೆ ಆರ್ಡರ್ ಮಾಡಬೇಕೆನಿಸಿದರೆ 9902825368 ಗೆ ಮೆಸೇಜ್ ಮಾಡಿ