ಒಂದು ಹಳೆ ನೆನಪು
ಅಮ್ಮನ ಫೋನ್ ಬಂದಿತ್ತು. ನಾಡಿದ್ದು ಅಕ್ಷಯ ತೃತೀಯ ಏನಾದ್ರೂ ಸಣ್ಣ ಬಂಗಾರದ ಐಟಂ ತೆಗೊ.ಆ ದಿನದಂದು ಬಂಗಾರ ತೆಗೊಂಡ್ರೆ ಯಾವತ್ತೂ ನಮಗೆ ಆರ್ಥಿಕ ಸಂಕಷ್ಟ ಇರಲ್ಲ ' ನಾನು ಖುಷಿಯಿಂದ ' ಖಂಡಿತ ಅಮ್ಮ , ಈ ಸಲ ಬೋನಸ್ ಬೇರೆ ಸಿಕ್ಕಿದೆ .
ಸರಿ ಆದ್ರೆ ಆ ದಿನ ತುಂಬಾ ಕೆಲಸ. ಸ್ವಾ ಉದ್ಯೋಗ ತರಬೇತಿ ಕಾರ್ಯಕ್ರಮದ ಬಗ್ಗೆ ನಾವು ದಿನಪತ್ರಿಕೆಯಲ್ಲಿ ಹಾಕಿದ್ದರಿಂದ , ಹೆಚ್ಚಿನ ಮಾಹಿತಿ ಪಡೆದು ಕೊಳ್ಳಲು ಹಲವಾರು ದೂರವಾಣಿ ಕರೆಗಳು. ಸಂಜೆ ಉಸ್ಸಪ್ಪ ಅಂತ ಕೂತುಕೊಂಡಾಗ ನಮ್ಮಆಫಿಸ್ ಸ್ಟಾಫ್ ಒಬ್ಬರಿಗೆ ಕರೆ ಬಂದಿತು. ಅವರ ಅಣ್ಣ ನದಿಯಲ್ಲಿ ಈಜುವಾಗ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಸೇರಿಸಿದ್ದರು. ತುಂಬಾ ಆತಂಕ ಹಾಗು ಹಣಕಾಸಿನ ತೊಂದರೆಯಿದ್ದ ಅವರಿಗೆ ನನ್ನ ಬಳಿಯಿದ್ದ ಬೋನಸ್ ದುಡ್ಡು , ಕ್ಯಾಶ್ ಕೊಟ್ಟಿದ್ದರು envelope ನಲ್ಲಿ ಹಾಕಿ. ಅದನ್ನು ಹಾಗೆ ಅವರ ಕೈಗೆ ವರ್ಗಾಯಿಬಿಟ್ಟೆ . ಎಲ್ಲರೂ ಆದಷ್ಟು ಹಣಕಾಸಿನ ನೆರವನ್ನು ನೀಡಿದರು. ಹಲವಾರು ದಿನದ ಆಸ್ಪತ್ರೆ ವಾಸ , ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿದರು.
ಕೆಲ ಸಮಯದ ನಂತರ ಅವರು ದುಡ್ಡು ವಾಪಸ್ ಮಾಡಿದರು. ನನಗೆ ಆ ದುಡ್ಡನ್ನು ಏನು ಮಾಡುವುದೆಂದು ತಿಳಿಯಲಿಲ್ಲ. ಶ್ರೀಕಾಂತ್ ಸಲಹೆಯ ಮೇರೆಗೆ ಅದನ್ನು revolving ಫಂಡ್ ತರಹ ಉಪಯೋಗಿಸುವ ಯೋಜನೆ ಹಾಕಲಾಯಿತು. ಅದರ ಹಾಗೆ ಪ್ರತೀ ತಿಂಗಳು ಜೂನಿಯರ್ಸ್ ೨೫೦/- ರು ಮತ್ತು ಸೀನಿಯರ್ಸ್ ೫೦೦/- ಹಾಕೋದು . ಯಾರಿಗಾದ್ರೂ ದುಡ್ಡಿನ ತುರ್ತು ಇದ್ದಲ್ಲಿ ಅದರಿಂದ ದುಡ್ಡು ಪಡೆಯುವುದು, ಆರು ತಿಂಗಳ ನಂತ ೧೦೦ ರು , ಬಡ್ಡಿ ಇಲ್ಲದೆ ,ಹಾಗೆ ಆ ದುಡ್ಡನ್ನು ಪಾವತಿಸುವುದು . ಹೀಗೊಂದು ಯೋಜನೆ ಹಾಕಿದ್ದು.... ಹಲವಾರು ಜನರು ಇದರಿಂದ ಲಾಭ ಪಡೆದೊಕೊಂಡಿದ್ದಾರೆ.
ಅಕ್ಷಯ ತೃತೀಯ ಅಂದ್ರೆ ಇದೆ ನೆನಪಾಗುವುದು.
ಇಲ್ಲಿದೆ ಬಂಗಾರದಂತಹ ಸಿಹಿಗುಂಬಳದ ಹೋಳಿಗೆ