January 24, 2024

ಮೈಸೂರು - a quick trip & back

 ನಿಹಾ ಗೆ ಮೈಸೂರಿನ 'ಅರಿವು' ಶಾಲೆಗೆ ಭೇಟಿ ನೀಡಲು ಆಹ್ವಾನ ವಿತ್ತು. ಅಕ್ಕ ನಿಗೆ 'ಉಚಿತ ಪ್ರಯಾಣ' ಯೋಜನೆ ಅಡಿ ಒಂದ್ಸಲ  ಎಲ್ಲಾದರೂ ಹೋಗ ಬೇಕೆಂಬ ಆಸೆ ಇತ್ತು. ಹೇಗೂ ಮೊನ್ನೆ ಶುಕ್ರವಾರ ಆಕೆಗೆ ಕೇಕ್ ಆರ್ಡರ್ ಇರಲಿಲ್ಲ, ನಿಹಾ ಗೆ ಕೆಲಸದಿಂದ ಬ್ರೇಕ್ ಬೇಕಿತ್ತು. ನಾನಂತು ಯಾವಾಗಲೂ, ಎಲ್ಲಾದರೂ ಹೋಗಲು ever ready. 

4 ಗಂಟೆಗೆ ಎದ್ದು ಅವಲಕ್ಕಿ ಮತ್ತು ಬ್ರೆಡ್ sandwich ತಯಾರು ಮಾಡಿ, ನೀರು, ಸ್ನ್ಯಾಕ್ಸ್ ಮುಂತಾವುಗಳನ್ನು ಪ್ಯಾಕ್ ಮಾಡಿ 5.45 ಗೆ ಓಲಾ ಬುಕ್ ಮಾಡಿ ಮೇಜಿಸ್ಟಿಕ್ ಗೆ ಬಂದೆವು. ಓಲಾ ದವನಿಗೆ ದುಡ್ಡು ಪಾವತಿಸುತ್ತ, ಮೈಸೂರು ಬಸ್ ಎಲ್ಲಿ ಅಂತ ಕೇಳಿದಾಗ 'ಅಯ್ಯೋ ಮ್ಯಾಡಮ್ ಇಲ್ಲಿಗ್ಯಾಕೆ ಬಂದ್ರಿ? satellite ಟೌನ್ ಗೆ ಹೋಗೋದಲ್ವಾ?   ಯಾವುದಕ್ಕೂ terminal2 ರಲ್ಲಿ ವಿಚಾರಿಸಿ...ಅಲ್ಲಿಂದ satellite ಟೌನ್ ಗೆ ಬೆಜ್ಜಾನ್ ಬಸ್ ಗಳು ಓಡಾಡ್ತಾವೆ' ಅಂದಾಗ ಅವನಿಗೆ ಧನ್ಯವಾದ ಹೇಳಿ,..(ಈ ವರೆಗೆ ಮೈಸೂರಿಗೆ ಹಲವು ಬಾರಿ ನಾವು  ಬಾಡಿಗೆಗೆ ಗಾಡಿ ಮಾಡಿ ಕೊಂಡೆ  ಹೋಗಿದ್ದು) ಇನ್ನೂ ಎರಡು ಮೂರು ಅಂಗಡಿಯವರಿಗೆ  ಕೇಳಿ...ಟರ್ಮಿನಲ್ 2 ಗೆ ಹೋದೆವು. ಅಲ್ಲಿ ಬೆಂಗಳೂರು ಮೈಸೂರು A C ಬಸ್ ಒಂದು ನಿಂದಿತ್ತು. ಅದರೊಳಗೆ ಹೋಗಿ ಕೂತೆವು.  ನಾವು ಮೂರು ಜನ ಬಿಟ್ರೆ ಇನ್ನೊಬ್ಬರು ಗಂಡಸರು ಮಾತ್ರ ಅಷ್ಟು ದೊಡ್ಡ ಬಸ್ ನಲ್ಲಿ. ಅಷ್ಟರಲ್ಲಿ ಪಕ್ಕದಲ್ಲಿ ಸೆಟಲೈಟ್ ಟೌನ್ ಗೆ ಹೋಗುವ ಬಸ್ ಬಂತು. ನಮಗೆ A C ಬಸ್ ಅಷ್ಟು ಆಗಿ ಬರಲ್ಲ..ಅದಕ್ಕೆ ಟೌನ್ ನಲ್ಲಿ non A C ಬಸ್ ಸಿಗಬಹುದೆಂದು, ಆ ಬಸ್ ಹತ್ತಿದೆವು. 10 ನಿಮಿಷದಲ್ಲಿ ಬಸ್ ತುಂಬಿದ್ದು,  10 ನಿಮಿಷಕ್ಕೆ ಸಟಲೈಟ್ ಟೌನ್ ತಲುಪಿದ್ದೂ ಆಯ್ತು. ಅಲ್ಲಿ ಹಲವಾರು ಬಸ್ ಗಳು ಮೈಸೂರಿಗೆ ಹೊರಡಲು ಸಿದ್ಧವಾಗಿದ್ದವು. ಒಂದರಲ್ಲಿ ಹತ್ತಿ ಕೂತೆವು. ಜಾಗ ಸಿಕ್ಕಿತು ಹೇಗೂ. ಉಚಿತ ಪ್ರಯಾಣ. 6.15 ಗೆ ಬಿಟ್ಟ ಬಸ್ ಎರಡು ಮೂರು ಕಡೆ ನಿಂತು 9.45 ಗೆ ಮೈಸೂರಿಗೆ ತಲುಪಿದೆವು. ಟೈಮ್ ಇದ್ದ ಕಾರಣ  ವಿಷ್ಣುಪ್ರಸಾದ್ ಗೆ ಹೋಗಿ ಎರಡನೇ ರೌಂಡ್ ಬ್ರೆಕ್ಫಾಸ್ಟ್ ಮಾಡಿದೆವು. ನನಗೆ ಬಿಸಿ ಟಿ ಬೇಕಿತ್ತು. ಆರಾಮಾಗಿ ತಿಂಡಿ ತೀರ್ಥ ಮುಗಿಸಿ, ಅವರ ರೆಸ್ಟ್ ರೂಮ್ ಉಪಯೋಗಿಸಿ,  ಹೊರ ಬಂದಾಗ ಆಟೊ ದವ ಸಿಕ್ಕಿದ. ಎಲ್ಲಿಗೆ ಹೋಗಬೇಕು ಅಂದಾಗ ನಾನು ಮೊದಲಿಗೆ ನಿಹಾ ಹೋಗ ಬೇಕಾದ ಜಾಗ, ಶುಕವನ ಅಂತೆಲ್ಲ ಹೇಳುವಾಗ..' ಮೀಟರ್ ಮೇಲೆ ಎಲ್ಲಿಗೆ ಹೋಗಬೇಕೋ ಅಲ್ಲೆಲ್ಲ ಕರೆದುಕೊಂಡು ಹೋಗುವುದಾಗಿ ಹೇಳಿದ. ನಮಗೂ ಖುಷಿ ಯಾಯ್ತು. ಅವನ ಹೆಸರು ಸೋಮು.

ಇಲ್ಲಿವೆ ಕೆಲ ಚಿತ್ರಗಳು

ಮೊದಲು ಲಿಂಗಾಂಬುದಿ ಕೆರೆ... ನವೀಕರಿಸುವ ಕೆಲಸ ಭರದಿಂದ ಸಾಗಿದೆ









ಆಮೇಲೆ ಕಾರ್ಯಸಿದ್ಧಿ ಹನುಮಂತ. ಶುಕವನ  ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ದೇವಸ್ಥಾನದ ಆವರಣ ಚೆನ್ನಾಗಿದೆ. ರಾಮ ಭಜನೆ ಸಾಗಿತ್ತು. ದೂರದಿಂದ ಟೆಂಪೋ ಮಿನಿ ಬಸ್ ನಲ್ಲಿ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊ0ಡಿದ್ದರು ಸುಮಾರು ಜನ. ಒಂದೇ ತರಹದ ಕಾವಿ ಬಣ್ಣದ ಸೀರೆ ಉಟ್ಟ ಭಕ್ತಾದಿ ಮಹಿಳೆಯರು. 12.30 ಗೆ ಮಂಗಳಾರತಿ ಆದಮೇಲೆ ದೇವಸ್ಥಾನ ಖಾಲಿ ಆಯ್ತು. ಹರಳು ಕಲ್ಲು ಅಳವಡಿಸಿದ ದೊಡ್ಡ ಹನುಮನ ಮೂರ್ತಿ. ಒಳಗಡೆ ಹೋದಾಗ ನನಗೆ ಸ್ಟೀಲ್ barricade annu ಹೊತ್ತು ಇಡುವ ಕೆಲಸ ಕೊಟ್ಟರು 😄. ಮಾಡಿದೆ. ಭಜನೆ ಮಂದಿ ಗೆ ಕೂರಲು  ಆನೂಕೂಲ ವಾಗುವಂತೆ ಅವನ್ನೆಲ್ಲ ಬದಿಗೆ ದೂಡಿಟ್ಟಿದ್ದರು.


ಏನಾದರೂ ಸಂಕಲ್ಪ (ಆಸೆ/ಅಭಿಲಾಷೆ) ಮಾಡಿ ಒಂದು ಸುಲಿಯದೆ ಇರುವ ತೆಂಗಿನಕಾಯಿ ಗೆ ಪೂಜೆ ಮಾಡಿ, ಅದನ್ನು ಹಿಡಿದುಕೊಂಡು ದೇವಸ್ಥಾನದ 12 ಪ್ರದಕ್ಷಿಣೆ ಮಾಡಿ, ಆ ತೆಂಗಿನಕಾಯಿಯನ್ನು ಒಂದು hall ನಲ್ಲಿ ಕಂಬಕ್ಕೆ ದಾರದಿಂದ ಜೋಡಿಸಬೇಕು....ಸಂಕಲ್ಪ ಪೂರ್ಣಗೊಳ್ಳುತ್ತದೆ ಎಂದು ನಂಬುವವರು.....👍👍
 ಮಿತ್ರ ರವೀಂದ್ರ ಮಾವಖಂಡ ಅವರಿಗೆ ಫೋನ್ ಮಾಡಿದ್ದೆ. ಅವರು ಅವರ ಸಂಸ್ಥೆ ಗೆ ಬರಲು ಆಹ್ವಾನವಿತ್ತರು.  ಪಂಚವಟಿ gardenia ದಲ್ಲಿ ಊಟ ಮಾಡಿ ಅವರಲ್ಲಿಗೆ ಹೋದ್ವಿ. ಅವರು ಮತ್ತು team ತಾಳೆಗರಿಯ ಬರಹಗಳನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. 


ಅರ್ಧ ಗಂಟೆ ಅಲ್ಲಿ spend ಮಾಡಿ 'ಸಾಪಾ' ಅನ್ನುವ ಬೇಕರಿಗೆ ಭೇಟಿ ನೀಡಿ ಸಂಜೆ 4.45 ದುಡ್ಡು ಕೊಟ್ಟು ಬಸ್ಸಿಗೆ ಕೆಂಗೇರಿ ಯಲ್ಲಿಳಿದು ಅಲ್ಲಿಂದ ಮೆಟ್ರೋ ದಲ್ಲಿ ಮನೆಗೆ ಮರಳಿದೆವು. ಈ ಸಲ ಎರಡೇ ಗಂಟೆಯಲ್ಲಿ ಕೆಂಗೇರಿಯಲ್ಲಿದ್ದೆವು



ರಾತ್ರಿ ಏನು ಅಡಿಗೆ ಮಾಡುವ ಅಂತ ಆಲೋ  ಚಿಸಬೇಕಾದ್ರೆ ಶ್ರೀಕಾಂತ್ ಫೋನ್ ಮಾಡಿ ಹೊರಗಿನಿಂದ ಏನಾದ್ರು ತರುತ್ತೇನೆ ಅಂತ ಹೇಳಿದ್ರು...ಖಶಿಯಾಯ್ತು...a day well spent 😄😄❤️






January 11, 2024

Departures- ಜಪಾನಿ ಸಿನಿಮಾ


ದೀಪಾರ್ಚರ್ಸ್ ಎನ್ನುವ ಜಪಾನಿ ಸಿನಿಮಾ ನೋಡಿದೆ.
ಡಾಯಗೊ  ಎಂಬ ಚೆಲ್ಲೋ (cello) ನುಡಿಸುವಾತ. ಅವನ orchestra ಗುಂಪು disband ಆದಾಗ ಅವನಿಗೆ ಬೇರೆ ಯಾವ ಕೆಲಸವೂ ಇರುವುದಿಲ್ಲ.
ಯಾಕೆ ನಾವು ಅಮ್ಮ ಸಾಯುವಾಗ ತನ್ನ ಹೆಸರಿಗೆ ಬಿಟ್ಟ ಮನೆಗೆ ವಾಪಸ್ಸಾಗಬಾರದು ಎಂದಾಗ ಹೆಂಡತಿ ಒಪ್ಪುತ್ತಾಳೆ
ಹುಟ್ಟೂರಿಗೆ ಮರlಳಿದ ಮೇಲೆ ವೃತ್ತಪತ್ರಿಕೆಯಲ್ಲಿ departures ಎನ್ನುವ ಜಾಹೀರಾತು ನೋಡಿ ಅದರ ಕಚೇರಿಗೆ ಹೋಗುತ್ತಾನೆ. ಅವನ ಅಂದಾಜಿನ ಪ್ರಕಾರ ಅದು travel agency ಅಥವಾ ಗೈಡ್ ಕೆಲಸ ಅಂದುಕೊಳ್ಳುತ್ತಾನೆ. ಅದರ ಮಾಲೀಕ ಏನೂ ವಿವರಣೆ ನೀಡದೆ ಅವನಿಗೆ ಕೆಲಸ ಮಾತ್ರವಲ್ಲ ಮುಂಗಡ ಹಣ ಕೂಡ ನೀಡುತ್ತಾನೆ
ಆದರೆ ಅದು ಸತ್ತವರನ್ನು - ಮನೆಯವರಿಗೆ ಮುಜುಗರವಾಗದಂತೆ ಸ್ವಚ್ಛ ಗೊಳಿಸಿ, ಸುಂದರವಾಗಿಸಿ  ಚಿತೆಗೇರಿಸುವ  ಕಾಯಕ. ಮಾಲೀಕ ತುಂಬಾ ತನ್ಮಯನಾಗಿ ಈ ಕೆಲಸ ಮಾಡುವುದನ್ನು ನೋಡಿ ಇವನಿಗೂ ಆ ಕೆಲಸ ನಿಭಾಯಿಸಲು ತೊಡುಗುವಂತೆ ಮಾಡುತ್ತದೆ.
ಹೆಂಡತಿಗೆ ಕೆಲ ಸಮಯದ ನಂತರ ಗೊತ್ತಾದಾಗ ಅಸಮಾಧಾನ ಗೊಂಡು ಅವನನ್ನು ಬಿಟ್ಟು ಹೋಗುತ್ತಾಳೆ. pregnant ಅಂತ ಗೊತ್ತಾದಾಗ ಮರಳಿ ಬಂದು, 'ಮಗನಿಗೆ ಏನು ಕೆಲಸ ಮಾಡುತ್ತಿ ಎಂದು ಹೇಳಲು ಧೈರ್ಯ ಬರುತ್ತಾ' ಅಂತ ಕೇಳುತ್ತಿರುವಾಗಲೇ ಅವರಿಬ್ಬರಿಗೂ ತುಂಬಾ ಇಷ್ಟವಾದ 'public bath' ನಡೆಸುವ ಹೆಣ್ಣುಮಗಳ ದೇಹಾಂತ ವಾಗುತ್ತದೆ. ಆಗ ಹೆಂಡತಿ ತನ್ನ ಗಂಡ ಮಾಡುತ್ತಿರುವ ಕೆಲಸ ಕಣ್ಣಾರೆ ನೋಡಿ ಸಮಾಧಾನ ಗೊಳ್ಳುತ್ತಾಳೆ.
ತನ್ನ ತಂದೆ ತಾನು ಚಿಕ್ಕವನಿರುವಾಗ ಬಿಟ್ಟು ಹೋದದ್ದೇ ನೆಪವಾಗಿಸಿಕೊಂಡು  ಕೋಪದ ಜಿದ್ದು ಹಿಡಿದಿರುತ್ತಾನೆ. ಅವನ ಸಾವಿನ ಸುದ್ದಿ ಕೇಳಿ ಅವನು ಅಲ್ಲಿಗೆ ಹೋಗಲು ಇಷ್ಟ ಪಡುವುದಿಲ್ಲ. ಆದರೆ ಅವನ ಸಹೋದ್ಯೋಗಿ, ಹೆಂಡತಿ ಬುದ್ಧಿವಾದದ ಮೇರೆಗೆ ಕೊನೆಗೆ ಹೋಗುತ್ತಾನೆ. ತನ್ನ ತಂದೆಯನ್ನು ಡೀಸೆಂಟ್/ ಸಭ್ಯ  ಆಗಿ ನಿರ್ಗಮಿಸುವ ಕಾಯಕದಲ್ಲಿ ತೊಡಗುತ್ತಾನೆ
ಅತ್ತು ಅತ್ತು dehydration ಆಯ್ತು ಕಣ್ರೀ....😔😔
ನನಾಗಿಷ್ಟವಾಯ್ತು. ನಿಮಗೂ ಇಷ್ಟವಾಗಬಹುದು.
...ಚೆಂದ ತೆಗೆಗಿದಿದ್ದಾರೆ ಸಿನಿಮಾ
 

January 6, 2024

15 ದಿನದ ಪ್ರವಾಸ..ಉತ್ತರಾಖಂಡ್ etc

 climate resilient crops ಅನ್ನುವ ವರ್ಕ್ ಶಾಪ್ (workshop) ನಬಾರ್ಡ್ ಸಂಸ್ಥೆ ಉತ್ತದಾಖಂಡ್ ನ ಲೋಹಾಘಾಟ್ ನಲ್ಲಿ ಹಮ್ಮಿಕೊಂಡಿದ್ದು, ಶ್ರೀಕಾಂತ್ ನನಗೆ ತಣ್ಣಗಿನ ಪ್ರದೇಶ, ಬರುತ್ತೀಯ, ಗುಡ್ಡ ಕಾಡು ಮೇಡು ಅಲೆಯಬಹುದು ಅಂತ ಕೇಳಿದಾಗ ನಾನು  ಹಿಂದೆ ಮುಂದೆ ಯೋಚಿಸದೆ ಹೂಂ ಅಂದಿದ್ದೆ.  ಹೊರಡುವ ಎರಡು ದಿನ ಮುಂಚೆ ನನಗೆ ಗುಡ್ಡ ಪ್ರದೇಶ, ಹಿಂದಿನ ವರ್ಷ ಏನೋ ಹಿಮಾಚಲಕ್ಕೆ ಹೋಗಿದ್ದೆ...ಈ ಸಲ ಏನಾದ್ರೂ ಆರೋಗ್ಯ ಏರುಪೇರಾದ್ರೆ ಎಲ್ಲರಿಗೂ ಕಿರಿ ಕಿರಿ...ಯಾಕೋ panic attack ನಂತರ ಇಲ್ಲಸಲ್ಲದ ಆಲೋಚನೆ. 

ಆದ್ರೂ ನನಗೆ ಪ್ರೋಗ್ರಾಮ್ details ಕಳುಹಿಸಿ ಅಂದೆ. ಶ್ರೀಕಾಂತ್ ಒಳಗೊಂಡಂತೆ 32 ಜನ ರ ಭಾಗವಹಿಸುವಿಕೆ ಇತ್ತು. ಹೆಚ್ಚಿನ ಜನ ಆ ಕಡೆಯವರೆ. ಕೆಲವು ರಾಜಸ್ಥಾನ, 9 ಜನ ಮಧ್ಯಪ್ರದೇಶ, ಒಬ್ಬರು  ತಮಿಳನಾಡು, ಕರ್ನಾಟಕ ದಿಂದ ಶ್ರೀಕಾಂತ್ ಒಬ್ಬರೇ. ನನ್ನ ಖರ್ಚು ಬೇರೆ ಅಂತ ನಮಗೋಸ್ಕರ ಬೇರೆ accomodation. ಉಳಿದವರು ಆ ಸ್ಟಾರ್ ಹೋಟೆಲ್ ನಲ್ಲಿ.ಇಬ್ಬರು ಮೂವರಂತೆ ಉಳಿದಿಕೊಂಡಿದ್ದರು.

ನಾವು ಮೊದಲಿಗೆ ಬೆಂಗಳೂರಿನಿಂದ ವಿಮಾನಯಾನ ಲಕ್ನೋವ್ ವರೆಗೆ. ಅಲ್ಲಿ ಎರಡು ದಿನ ತಂಗಿದ್ದು..ಲೋಕಲ್ sight seeing ಮಾಡಿದ್ವಿ.  e- rickshaw ದಲ್ಲಿ 100 ರೂ ಗೆ ದೂರದಲ್ಲೇ ಛೋಟಾ  ಇಮಾಂಬಾರ clock ಟವರ್, ತೋರಿಸಿ, museum ಬಳಿ 20 ನಿಮಿಷ ನಿಲ್ಲಸಿದ. ಮ್ಯೂಸಿಯಂ ನಲ್ಲಿ ಮೊದಲೆಲ್ಲ ಆಳಿದ ರಾಜರುಗಳ /ಆಂಗ್ಲರ ಚಿತ್ರಗಳು  ಆಮೇಲೆ ಪುನಃ ಕ್ಲಾಕ್ ಟವರ್ ಬಳಿ ನಮ್ಮಿಬ್ಬರ ಫೋಟೋ ತೆಗೆದ. ಕೊನೆಗೆ ಬಡಾ ಇಮಾಂಬಾರ ಕ್ಕೆ ಬಿಟ್ಟ. ಅಲ್ಲಿ ಎರಡು ಮೂರು ತಾಸು ಕಳೆದ್ವಿ. ಗೈಡ್ ಒಬ್ಬರನ್ನು ಹಿಡಿದ್ವಿ. ಅವರ ಜತೆ ಇನ್ನೂ 15 ಮಂದಿ ಇದ್ರು. ಮಜವಾಗಿತ್ತು  ಅನುಭವ. ಗೈಡ್ ಗಳಿಗೆ ನಂಬರ್ ಕೊಟ್ಟಿರುತ್ತಾರೆ. ನಮ್ಮ ಗೈಡ್ ನಂಬರ್ 10. ನಂಬರ್ ದಸ್ ವಾಲೇ ಯಹಾನ್ ಖಡೆ ಹೋ ಜಾಯಿಯೇ ಅಂತ ಮಧ್ಯ ಮಧ್ಯ ಆವಾಜ್ ಹಾಕುತ್ತಾನೆ. ನಮ್ಮೆಲ್ಲ sight seeing ಆದಮೇಲೆ ಅವನ ಬಳಿ ಹೋಗಬೇಕು...ಅವನು ಇನ್ನೊಂದು ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ಫೋಟೋ ಇಲ್ಲಿವೆ ನೋಡಿ.

                     ಕ್ಲಾಕ್ ಟವರ್

                    chota imambara
              Bada imambara




               Bada imambara










ಲಕ್ನವ್ ನಲ್ಲಿ travel cheap. per head 10 ರೂ ಲೆಕ್ಕದಲ್ಲಿ e ರೀಕ್ಷ ಸಿಗುತ್ತವೆ. 

ಅಲ್ಲಿ ನನಗೆ ವಿಶೇಷ ಅನಿಸಿದ್ದು ಹಜ್ರಥ್ ಗಂಜ್. ಇಲ್ಲಿನ ಸೈನ್ ಬೋರ್ಡ್ ಎಲ್ಲ ಕಪ್ಪು ಬಿಳುಪು. ಕ್ರಿಸ್ಮಸ್ ರಾತ್ರಿ ಅಲ್ಲಿ ಕಳೆದ್ವಿ. ನಾವು ಉಳಿದುಕೊಂಡಿದ್ದ 'ಗಂಗಾ ಮೈಯ್ಯಾ' ಹೋಟೆಲ್ ನಿಂದ ಒಂದು ಕಿಮೀ. ನಡೆದು ಕೊಂಡು ಹೋದ್ವಿ. ಮಾಲವಿಕಾ ಇನ್ಸ್ಟಾಗ್ರಾಮ್ ನಲ್ಲಿ ನೋಡಿದ ತಿಂಡಿ ಹೋಟೆಲ್ ನ ಲಿಸ್ಟ್ ನಿಂದ ಏನೆಲ್ಲ ಟೇಸ್ಟ್ ಮಾಡಬಹುದು ಅಂತ ಲಿಸ್ಟ್ ಕಳಿಸಿದ್ಲು

. ನಾನು ಮಕ್ಕನ್ ಮಲಾಯಿ, ಬಾದಾಮ್ ಹಾಲು ಮತ್ತು ಪಾನಿಪುರಿ ತಿಂದೆ. ಜನವೋ ಜನ. ಅಲ್ಲಿ St. Patrick ಚರ್ಚ್ ಒಂದಿತ್ತು. ಕೇಕ್, ಚಾಟ್, ಮಕ್ಕಳ ಆಟಿಕೆ, ಸಿಹಿ-ಖಾರ ತಿಂಡಿ ಮಾರುವ  ಗಾಡಿಗಳು.









       paan packed in mahua leaf
      morning breakfast @ sharma ji ki chai
    yummy not too sweet malai makkhan
           banarasi paan & calcutta paan
                 thick tasty hot badam milk
@ hotel ganga maiyya, husseinganj chouraha
                 tangy fruits

ಲಕ್ನವ್ ನಿಂದ ಟ್ರೈನ್ ನಲ್ಲಿ ಟನಕ್ ಪುರ್.

 ಟನಕಪುರದ ಸುಂದರ ರೈಲು ನಿಲ್ದಾಣ


 5 ಗಂಟೆಯ ದಾರಿ. ಟ್ರೈನ್ ಎರಡು ಗಂಟೆ ಲೇಟ್. ನಮಗೆ ಗೊತ್ತಿರಲಿಲ್ಲ. ಟ್ರೈನ್ ನಲ್ಲಿ ಯಾವುದೇ ತಿಂಡಿ ಊಟದ ವ್ಯವಸ್ಥೆ ಇರಲಿಲ್ಲ. ನಮ್ಮ ಬಳಿ ಇರುವ ಹಣ್ಣು-- ಬಾಳೆ ಹಣ್ಣು, ಕಿತ್ತಳೆ ಹಣ್ಣು ಮತ್ತು ಅಮ್ಮ ಮಾಡಿ ಕೊಟ್ಟ ರಾಗಿ ಚೂಡಾ ಜತೆ ನಿಭಾಯಿಸಿದ್ವಿ. ಟನಕಪುರದಿಂದ ಲೋಹಘಾಟ್ ಗೆ ಟೆಂಪೋ ವ್ಯವಸ್ಥೆ ಹೋಟೆಲ್ ನವರು ಮಾಡಿದ್ದರು. ಇನ್ನಷ್ಟು ಜನ ಬರುವುದಿತ್ತು. ನಾವೇ ಲೇಟ್ ಅಂದುಕೊಂಡರೆ...ಇನ್ನೂ ಯಾರು ತಲುಪಿರಲಿಲ್ಲ. ಟೆಂಪೋ ಡ್ರೈವರ್ ಗೆ ಹೇಳಿ ಹಾಗೆ ಒಂದು ರೌಂಡ್ ಊರೊಳಗೆ ಹೋದ್ವಿ. ಅಲ್ಲಿ ಒಬ್ಬ ಅಜ್ಜನ ಹೋಟೆಲ್ ನಲ್ಲಿ ಬಿಸಿ ಸಮೋಸಾ, ಚಟ್ನಿ..ಮತ್ತು ನನಗೆ ಬೇಕಾಗಿರುವ ಬಿಸಿ ಚಹಾ ಸಿಗ್ತು. 



 ವಾಪಸ್ ಬಂದ್ರು ಇನ್ನೂ ಯಾರ ಸುಳಿವೂ ಇರಲಿಲ್ಲ. ಪೂರ್ಣಾ ದೇವಿ ಜಾತ್ರೆಯಂತ ಸುಮಾರೆಲ್ಲ stall ಗಳು ರೈಲು ನಿಲ್ದಾಣದ ಬಳಿ ಹಾಕಿಕೊಂಡಿದ್ರು. ಬೆಂಡು ಬತ್ತಾಸು, ಹುರಿದ ಕಡಲೆ ಪ್ರಸಾದ ಅಂತ ಮಾರಲು ಇಟ್ಟಿದ್ದರು.. ಆಗಲೇ ಚಳಿ ಶುರುವಾಯ್ತು. ನಾವು ಟೆಂಪೋ ಹತ್ತಿಕೊಂಡು ಕೂತುಬಿಟ್ವಿ. ಎಲ್ಲರೂ ಸೇರುವಾಗ ಸಂಜೆಯ 5 ಗಂಟೆ ಆಗಿತ್ತು. ಅಲ್ಲಿಂದ ಗುಡ್ಡದ ದಾರಿ. ಒಂದೇ ಸಮ ಮೇಲೇರುತ್ತ ಹೋದ್ವಿ. 4.30 ಗೆ ಕತ್ತಲೇ ಆವರಿಸಿಕೊಂಡಿದ್ದು, ಹೊರಗಡೆಯ ಯಾವುದೇ ದೃಶ್ಯ ಕಾಣಲಿಲ್ಲ. ಅಂಗಡಿ ಮುಂಗಟ್ಟು ಗಳು ಯಾವುದೂ ತೆರೆದಿರಲಿಲ್ಲ. 7 ಗಂಟೆಗೆ ಡ್ರೈವರ್ ಗೆ ಟಿ ಬೇಕಂತ ಒಂದು ಪುಟ್ಟ ಹೋಟೆಲ್ ಬಳಿ ನಿಲ್ಸಿದ. ನಾವು ನಾವು ಒಬ್ಬರನ್ನೊಬ್ಬರು ಪರಿಚಯಿಸಿಕೊಂಡ್ವಿ. ಒಂದಿಬ್ಬರು ಹುಡುಗಿಯರು ಎರಡು ದಿನ ಬಸ್ ಪ್ರಯಾಣ ಮಾಡ್ತಾ ಬಂದಿದ್ದು ಸುಸ್ತು ಹೊಡೆದಿದ್ದರು. ಅವರು ಹಿಮಾಚಲ ಪದೇಶದಿಂದ ದೆಹಲಿಗೆ ಬಂದು ಅಲ್ಲಿಂದ ಟನಕ್ ಪುರ್ ಬಸ್ ಹಿಡಿದು ನಮ್ಮನ್ನು ಸೇರಿದ್ದರು. ಇಬ್ಬರು ನಾಗಪುರ್, ಮಹಾರಾಷ್ಟ್ರ..ಇಬ್ಬರು ಭೋಪಾಲ್, ಒಬ್ಬರು ಇಂದೋರ್...

ಲೋಹಾಘಾಟ್ ನ M J  hotel and resorts  ತಲುಪಿದಾಗ ರಾತ್ರಿ 9 ಗಂಟೆ. ಹಸಿವೆಯಿಂದ ಹೊತ್ತ ತಾಳ ಹಾಕಲಾರಂಭಸಿತು.....

cont.........in next post 😆😆😆