September 24, 2022

Yummy brownies

 


Husband had been to thailand last month. A boys only trip. Had sent sugar free oats biscuits with him which came back unopened. Yesterday when i thought i will munch on them, i found them all gone soft.

We konkanis dont waste anything 🥳😀

So i just put the biscuits in a blender and powdered them finely. Added cocoa, baking powder, few soft cashews, some overly ripe sweet sour bananas, butter milk and mixed them into smooth dough. 

Baked at 180 degrees for 35 minutes and got lovely fragrant brownies.

The biscoot factory girl who rarely eats sweets, tasted them and said 'ಲಾಯ್ಕ್ ಜಾಲ್ಲಾ ಗೋ ಅಮ್ಮಾ' and to me it is ಸ್ವರ್ಗಕ್ಕೆ ಮೂರೇ ಗೇಣು... 

Cannot share proper recipe cos i eyeballed the ingredients.

Decorated with left over cream from the cake order from day before 😀👍

September 22, 2022

ಓಲಾ ಆಟೋ - ಆಟಾಟೋಪ

 


ಈ ಮೊದಲೂ ಹೇಳಿದ ಹಾಗೆ ದೊಡ್ಡ ಕೇಕ್ ಇದ್ರೆ ನಾವೇ deliver ಮಾಡೋದು. ಕೆಲ ಒಲಾ ಆಟೋ ದವರು ಒಳ್ಳೆಯವರಾಗಿರುತ್ತಾರೆ. ಒಂದೆರಡು ಕಿರಿಕ್ ಪಾರ್ಟಿಯವರೂ ಸಿಕ್ಕಿದ್ದಾರೆ. 

ನಿನ್ನೆ ಹಾಗೆ ಆಯಿತು. 6 ಕಿಲೋ ಕೇಕ್. ಡೆಲಿವರಿ ಪಾರ್ಟ್ನರ್ ಜತೆ ಎರಡು ಕೆ ಜಿ ಸಿಂಪಲ್ ಕೇಕ್ ಅಥವಾ ಕಪ್ ಕೆಕ್ಸ್, ಅದೂ ಸ್ಕೂಟರ್ ಆದ್ರೆ ಕಳುಹಿಸಬಹುದು. ಇಲ್ಲದಿದ್ದರೆ ಕಸ್ಟಮರ್ಸ್ ಬಳಿ ತಲುಪುವಷ್ಟರಲ್ಲಿ ಅದರ ಶೇಪ್ ಯೇ ಬದಲಾಗಿರುತ್ತೆ. ಅವಳು ಡಿಸೈನ್ ಮಾಡ್ದ ಕೇಕ್ ಎಲ್ಲ ವೆಸ್ಟ್. ಹಾಗಾಗಿ ದೊಡ್ಡ ಕೇಕ್, tier ಕೇಕ್, ತುಂಬಾ detailing ಇರೋ ಕೇಕ್ ಎಲ್ಲ ನಾವೇ ತೆಗೆದುಕೊಂಡು ಹೋಗೋದು. ಅತಿ ದೊಡ್ಡ ಕೇಕ್ ಅಥವಾ ತುಂಬಾ ಕೇಕ್ ಇದ್ದಲ್ಲಿ ನಾನೂ ಹೋಗ್ತೇನೆ. ಅದನ್ನು ಸಹಿ ಸಲಾಮತ್ ಹಿಡಿದುಕೊಂಡು ಹೋಗುವ ಜವಾಬ್ದಾರಿ ನಂದು. Of course ನನಗೆ ಇದರ ಸಂಬಳ ಸಿಗುತ್ತೆ 😊.

ಹಿಂದಿನ ಸಲದ ಓಲಾ ಆಟೋ ದವ ಹೆಂಗೆಗೋ ಗಾಡಿ ಚಲಾಯಿಸುತ್ತಿದ್ದ. ನಯವಾಗಿ 'ಸ್ವಲ್ಪ ನಿಧಾನಕ್ಕೆ ಹೋಗುವಾ' ಅಂದದ್ದೇ...'ಎನ್ ಮೇಡಂ ನಾನು ಏನು ಫಾರ್ಮುಲಾ ರೇಸ್ ಗೆ ಹೋಗ್ತಿದ್ದೀನಾ' ಹಾಗೆ ಹೀಗೆ ಅಂತ ಸಿಟ್ಟಾಗಿ...ಇದ್ದ ಬದ್ದ ಹೊಂಡದಲ್ಲಿ ಜಾನ್ ಭೂಜ್ ಕೆ ಗಾಡಿ ತೆಗೆದೊ ಕೊಂಡು ಹೋದ...ಸಧ್ಯ ನಾನು ಕೂಡ ರಸ್ತೆ ಮೇಲೆ ಕಣ್ಣಿಟ್ಟಿದ್ದು, ಕೇಕ್ ಬಾಕ್ಸ್ ಅನ್ನು balance ಮಾಡಿಕೊಂಡಿದ್ದೆ. ನಾವು ತಲುಪಬೇಕಾದ ಸ್ಥಳ ಬಂದ ಮೇಲೆ..ಇನ್ನೂ ಏನೋ ಕಿರಿಕ್ dialogue ಹೇಳಲು ಮುಂದಾದ. ನಾನು ಸಮಾಧಾನದಿಂದ ಹೇಳಿದೆ ' ನೋಡಪ್ಪ ನಿಮಗೆ ಹೇಗೆ ರಿಕ್ಷಾ ಓಡಿಸುವ ಉದ್ಯಮವೋ...ಹಾಗೆ ನಾವು ಕೇಕ್ ಮಾಡಿ ಮಾರುತ್ತೇವೆ. ಚೆಂದದ ಕೇಕ್ ಹಾಳಾದ್ರೆ, ಕಸ್ಟಮರ್ಸ್ ಗೂ ಬೇಜಾರೂ, ನಮಗೂ ಬೇಜಾರು. ಇದೇನೋ ಮೊದಲನೇ ಕೇಕ್ ಅಲ್ಲ ನಾವು ಡೆಲಿವರಿ ಮಾಡಿದ್ದು. ಎಲ್ಲಾ ಒಳ್ಳೆ ಓಲಾ ದವರೆ ಸಿಕ್ಕಿದ್ದಾರೆ ನಮಗೆ. ಅಂತ ಹೇಳಿ ಅವನ ದುಡ್ಡು ಪಾವತಿಸಿದೆವು. ಮುಂದೆ ಜಾಸ್ತಿ ಮಾತಾಡದೆ ಹೋದ. ಅಕ್ಕ ಅವನ ಮೇಲೆ complaint ಹಾಕಿದಳು.

ಮತ್ತು ಕೆಲವು ಚಾಲಕರು ಮ್ಯಾಡಂ ಚೆಂದ ಮಾಡಿ ಬಂದಿದೆನೆ ಐದು ಸ್ಟಾರ್ ಕೊಡಿ ಅಂದಾಗ ಅಕ್ಕ 5 star ಕೊಟ್ಟಿದ್ದಾಳೆ

ಮತ್ತು ನಿನ್ನೆ ರಾಜಾಜಿನಗರ ಕಡೆ ಹೋಗಲಿಕ್ಕಿತ್ತು. ನಮ್ಮ ಹಳೆ haunt. ಬೆಂಗಳೂರಿನ 21 ವರ್ಷಗಳಲ್ಲಿ 12ರಡು ವರುಷ ಅಲ್ಲಿ ಕಳೆದಿದ್ದೀವಿ. ಆ ಕಡೆ ಹೋಗದೆ ಸುಮಾರು ಸಮಯ ವಾಗಿತ್ತು. 6 ಕೆ ಜಿ ಕೇಕ್. ವಾಪಸ್ ಬರುವಾಗ ಮೆಟ್ರೊ ದಲ್ಲಿ ಕೆ ಆರ್ ಮಾರುಕಟ್ಟೆಗೆ ಹೋಗು ಬರುವ ಪ್ಲಾನ್. ಈ ಆಟೋ ದವನಿಗೂ ಸಿಕ್ಕಾ ಪಟ್ಟೆ ರೋಡ್ ರೇಜ್. ಮೂರು ಸಲ almost ವಾಹನಗಳಿಗೆ ಡಿಕ್ಕಿ ಹೊಡೆದು, ಗಲಿಜೂ ಗಲಿಜೂ ಬೈಗಳು. ನಾಲ್ಕನೇ ಸಲ two wheeler ನವನಿಗೆ ಗುದ್ದಿಯೇ ಬಿಟ್ಟ. ಇಬ್ಬರದ್ದೂ ತಪ್ಪಿತ್ತು. ಇಬ್ಬರೊ ಒಬ್ಬರನ್ನೊಬ್ಬರು ಮೀರಿಸಿದ ಕೆಟ್ಟ ಬೈಗಳು. ಆಮೇಲೆ two wheeler ನವನು ನಮ್ಮಿಬ್ಬರನ್ನೂ ನೋಡಿ ಸುಮ್ಮನೆ ಮುಂದಕ್ಕೆ ಹೋದ.

ನಿಜ ಹೇಳಬೇಕೆಂದರೆ...ರಿಕ್ಷಾ ದವನಿಗೆ ನಿಧಾನಕ್ಕೆ ಹೋಗಪ್ಪ ಅಂದ್ರೆ... ರಸ್ತೆ ಸರಿಯಿದ್ರೆ ತಾನೇ? ಎಷ್ಟೊಂದು ಹೊಂಡಗಳು? ಅತಿಯಾದ ಮಳೆ, ಕಳಪೆ ಕಾಮಗಾರಿ, metro rail construction ಅಂತ ಬೆಂಗಳೂರಿನ ಬಹುಪಾಲು ರಸ್ತೆ ಪೂರ್ತ ಹಾಳಾಗಿದೆ...

ಸಧ್ಯ ಕೇಕ್ ಹಾಳಾಗಿರಲಿಲ್ಲ...

ಸುಮ್ನೆ ಒಂದು ಅನುಭವ ಹಂಚಿಕೊಂಡೇ. 

ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿ ಎಲ್ಲ ತುಂಬಾ cheap. ಚೀಲಗಳನ್ನು ತುಂಬಾ ತೆಗೆದು ಕೊಂಡು ಹೋಗಿದ್ವಿ. ಅಲ್ಲಿ ಹೆಚ್ಚಿನವರು ಕ್ಯಾಶ್....ನಮಗೂ ಗೂಗಲ್ ಪೆ ಅಭ್ಯಾಸ. ದೊಡ್ಡ denomination ಹಣ ನನ್ನ ಬಳಿ ಇತ್ತು. ಅವರ ಬಳಿ ಚೇಂಜ್ ಇರಲಿಲ್ಲ. ಎಲ್ಲ ಹತ್ತು ಇಪ್ಪತ್ತು ರೂಪಾಯಿ. ಇದ್ದ ಚಿಲ್ಲರೆಯಲ್ಲಿ ಕೆಲವು ಹಣ್ಣು ತರಕಾರಿ ತಂದೆವು. ಕಡಿಮೆ ಬೆಲೆಗೆ ನಾಟಿ ಚಿಕ್ಕ ಚಿಕ್ಕ ಕೆಂಪು ಟೊಮ್ಯಾಟೋ ಹಣ್ಣು ಸಿಕ್ಕಿತು. ಅದನ್ನು ಬಳಸಿ ಇವತ್ತು ಅವಲಕ್ಕಿ ಒಗ್ಗರಣೆ...ಅದಕ್ಕೆ ಇಷ್ಟೊಂದು ಕತೆ....😀😀




September 17, 2022

ಕಂದ ನಿಮ್ಮವಳೆಂದು ಕಾಣಿರಿ 😊

 ಮಾಲವಿಕಾ ಕೊರಿಯಾ (ಮತ್ತು ಭಾರತ ಸಂಸ್ಕೃತಿ)ಅಡುಗೆ  ಸ್ಪರ್ಧೆಯಲ್ಲಿ 20 ಮಂದಿಯಲ್ಲಿ ಒಬ್ಬಳಾಗಿ ಅರ್ಹಳಾಗಿದ್ದಾಳೆ.  ಕೊನೆಯ ಐದು ಮಂದಿಯನ್ನು ಅವರು ಸೊಶಲ್ ಮೀಡಿಯಾ ದಲ್ಲಿ ಅತಿ ಹೆಚ್ಚು ಲೈಕ್ಸ್ ಬಂದವರಿಗೆ ಆಯ್ಕೆ ಮಾಡುತ್ತಾರಂತೆ. ನಿಮಗೆ ಇಷ್ಟವಿದ್ದಲ್ಲಿ instagram facebook ನಲ್ಲಿ ಮಾಲವಿಕ ಳ ವಿಡಿಯೋ ಗೆ ಲೈಕ್ ಹಾಕಬಹುದು. ಕೆಳಗಿದೆ ಕೊಂಡಿ. ಧನ್ಯವಾದಗಳು ❤️🙏😊

Korean culinary contest

September 6, 2022

Banana stamen chutney

 



#ಬಾಳೆಹೂವಿನಪರಾಗದ#bananafloretstamens #chutney #ofclunchbox

highly absorbent source of iron. tasty too

heat oil

Add few mustard. Once it splutters add jeera, green chillies, red chillies, asafoetida, cleaned florets,coconut salt, jaggery and a small piece of tamarind ..in that order. Fry for a few minutes. Once it cools down, run in a grinder, adding just enough water to make into chutney consistency