August 28, 2025

ಗಣೇಶ ಹಬ್ಬ - 2025


ತುಂಬಾ ಚಿಕ್ಕವಳಿದ್ದಾಗ ಒಂದೊಮ್ಮೆ ನನ್ನ ಸೋದರತ್ತೆಯ ಕುಟುಂಬದ ಜತೆ ಒಬ್ಬರ ಮನೆಯ ಗಣಪತಿ ಪೂಜೆಗೆ ಹೋಗಿದ್ದೆ. ಒಳ್ಳೆ ಪಂಡಾಲ್ ಹಾಕಿ, ಜಮಖಾನೆ ಹಾಸಿಟ್ಟಿದ್ದರು. ಪೂಜೆಗೆ ಪುರೋಹಿತರು, ಅಡಿಗೆಗೆ ಭಟ್ಟರು...ಮನೆಯ ಒಡತಿ ಭರಪೂರ ಬಂಗಾರ ತೊಟ್ಟು ಆರಾಮಾಗಿ (ಅವರಿಗೆ ಒಂದು ಕಾಲಿಗೆ ಪೋಲಿಯೋ ಇತ್ತು) ಎಲ್ಲರ ಜತೆ ಮಾತಾಡ್ತಾ, ನಗ್ತಾ ಕಾಲ ಹಾಕ್ತಾ ಇದ್ದು...ಊಟದ ಸಮಯಕ್ಕೆ ನಮ್ಮೆಲ್ಲರ ಬಿಸಿ ಅನ್ನದ ಮೇಲೆ ತುಪ್ಪ ಬಡಿಸೋದೊಂದೆ ಕೆಲಸ... ಹಬ್ಬ ಅಂದ್ರೆ ಹಾಗಿರಬೇಕು..ಎಲ್ಲರ ಜತೆ ನಾವು ಎಂಜಾಯ್ ಮಾಡಬೇಕು ಅನ್ನುವ ಒಂದು ಆಲೋಚನೆ  ತಲೆಯಲ್ಲಿ ಹೊಕ್ಕಿ ಬಿಟ್ಟಿತ್ತು.
ನನಗೆ ಮದುವೆ ಮಾಡಿ ಕೊಡುವ ಮನೆಯಲ್ಲಿ ಗೌರಿ-ಗಣಪತಿ ಆಚರಣೆಯಲ್ಲಿದೆ ಎಂದು ಅಮ್ಮನಿಗೆ ಸಂಭ್ರಮ....ನನಗೆ ಅದರಲ್ಲೆಲ್ಲ ಆಸಕ್ತಿನೆ ಇರಲಿಲ್ಲ. ಮನೆಯಲ್ಲಿ  ದೀವಾನ್ ಮತ್ತು ಗೋಡೆ ಎಡೆಯಡಿಯ ಸಂಧಿ ನನ್ನ ಅರಮನೆ...ಅಲ್ಲೇ ನನ್ನ ಪುಸ್ತಕದ ಓದು, ಮೈಕ್ರೋ biologist ಆಗುವ ಕನಸು ಇಷ್ಟರಲ್ಲೇ ನನ್ನ ಖುಷಿ.
ಆದರೆ ತೀರ್ಥಹಳ್ಳಿಯಲ್ಲಿ ಚೌತಿಯ ಮುನ್ನಾ ದಿನದಿಂದಲೇ ಒಂದ್ರಾಶಿ ಕೆಲಸಗಳು. ಗೌರಿ ಪೂಜೆಗೆ ತೆಂಗಿನ ಕಾಯಿ ಒಪ್ಪ ಮಾಡಿ ಪೂಜೆಗೆ ಸಿಂಗರಿಸುವುದು...ರಾತ್ರಿ ಎಲ್ಲಾ ಅಂದ್ರೆ ಎಲ್ಲಾ ಪಾತ್ರೆಗಳನ್ನು ತೊಳೆದು ಹಾಕುವುದು. ಇತ್ತ ಕೂರುವುದು ಇಲ್ಲ, ಪೂರ್ತಾ ನಿಲ್ಲುವುದು ಇಲ್ಲ..ಆ ತರಹ ಬಗ್ಗಿ ದೊಡ್ಡ ಪಾತ್ರೆಗಳನ್ನು ತೊಳೆದು ಹಾಕುವುದು...ಅದರಲ್ಲೂ ಮಳೆ ಸಿಡಿಯುವ ಜಾಗ..ನಾಲ್ಕಂಕಣದ ಮನೆ....ಬಟ್ಟೆ ಎಲ್ಲ ತೊಯ್ದು ಹೋಗಿ...ಒದ್ದೆ ಬಟ್ಟೆಯಲ್ಲೇ ಮಲಗ್ತಿದ್ದೆ...ನನ್ನ ಬಳಿ ಇದ್ದುದ್ದೆ ನಾಲ್ಕು ಸೀರೆ..ಎರಡು ಮನೆಯಲ್ಲಿ ಉಡುವಂತದ್ದು.  ಅಪ್ಪ ಕಷ್ಟ ಪಟ್ಟು ನನ್ನ ಮದುವೆ ಮಾಡಿಸಿದರು. ತುಂಬಾ ಹಣಕಾಸಿನ ತೊಂದರೆ ಇತ್ತು.
ಒಂದು ದಿನ ತಮ್ಮ ನನಗೆ ಪತ್ರ ಬರೆದಿದ್ದ..ನಿನ್ನ ಮದುವೆಯಾದ ಮೇಲೆ  ಇಲ್ಲಿ ನಾವು  ದಿನಾ ಗಂಜಿ ಮತ್ತು ಹುರಿದ ಹಪ್ಪಳ ತಿನ್ನೋದು ಅಂತ....ನಾನು ಎಷ್ಟು ಅಪ್ಸೆಟ್ ಆದೇ ಅಂದ್ರೆ ತಿನ್ನೋದೆ ಬಿಟ್ಟು ಬಿಟ್ಟು  ಮೊದಲೇ ಕೋಲಿ ನಂತಿದ್ದವಳು ಕಡ್ಡಿಯಂತಾದೆ...ಎಷ್ಟೆಂದರೆ  ಮದುವೆಯ ನಂತರದ ಮೊದಲ ಯುಗಾದಿಗೆ ಹೋದಾಗ ನನ್ನ ತಂಗಿ ನನ್ನನ್ನು ನೋಡಿ ಬಾತ್ಬ್ರೂಮ್ ಗೆ ಹೋಗಿ ಅತ್ತು ಬಿಟ್ಟಳಂತೆ...ಆಮೇಲೆ ತಮ್ಮ ತಮಾಷೆಗೆ ಹಾಗೆ ಬರೆದದ್ಫು ಅಂತ ಗೊತ್ತಾಯ್ತು...🤔😧 (ಆವಾಗ ಫೋನ್ ಎಲ್ಲ ಇರಲಿಲ್ಲ.. ಅವನಿಗೆ ಅವನ ತಮಾಷೆ ಮರೆತು ಹೋಗಿತ್ತು.
ಸರಿ ಸ್ವಲ್ಪ track change ಆಯ್ತು 😁.
ಮಾಲವಿಕಾ ಹುಟ್ಟಿದ ಹನ್ನೊಂದನೇ ದಿನ - ಕಿವಿ ಚುಚ್ಚುವುದು ಮತ್ತು ನಾಮಕರಣದ ದಿನ with my parents, brothers and ದೊಡ್ಡಮ್ಮ Aug 1990. the only time i missed ganesh chaturthi pooja. otherwise never missed one in 37years..guess what? did not even miss due to periofs either 🤔🤔😁

ಸಧ್ಯ ಹುಷಾರು ತಪ್ಪಲಿಲ್ಲ. ಆದರೆ ವಯಸ್ದು ಆಗ್ತಿದ್ದ ಹಾಗೆ ಸೊಂಟ ನೋವು ಶುರು ಆಯ್ತು. ದೂರದ ಊರಿನಿಂದ ಎರಡು ಬಸ್ change ಮಾಡಿ, ಮಕ್ಕಳಿಬ್ಬರನ್ನೂ ಕರೆದು ಕೊಂಡು, ಅಲ್ಲಿ ತಲುಪುವಷ್ಟರಲ್ಲಿ ಹೈರಾಣಾಗ್ತಿದ್ದೆ. ನನ್ನ ಅಕ್ಕನಿಗೂ ನನಗೂ 20 ವರ್ಷದ ಅಂತರ. ಅವರಿಗೆಷ್ಟು ಸುಸ್ತಾಗಿತ್ತೋ ಪಾಪ...ಗೌರಿ ಗಣೇಶ ಎರಡನ್ನೂ  ಗಣೇಶ ಚತುರ್ಥಿ ದಿನ ಆಚರಿಸುವ ಪರಿಪಾಠ.. ಆದ್ದರಿಂದ ಇನ್ನಷ್ಟು ಕೆಲಸಗಳು ಜಾಸ್ತಿ...
 ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು, ವಿರಾಮ ಸಿಗದಷ್ಟು ಕೆಲಸದ ರಾಶಿ. ಹಬ್ಬ enjoy ಮಾಡಿದ್ದ ನೆನಪಿಲ್ಲ.  ಆ ಮೇಲೆ ಭಯ್ಯ ನವರಿಗೆ  ಹುಷಾರು ತಪ್ಪಿದ ಮೇಲೆ ನಾವು ಬೆಂಗಳೂರಲ್ಲಿ ಗಣಪತಿ ಕೂರಿಸುವದೆಂದಾಯಿತು. ನನ್ನನ್ನು ಒಂದು ಮಾತು ಕೇಳಲಿಲ್ಲ.  ಸ್ವಂತ ಮನೆಯಾದ ಮೇಲೂ ನಿಲ್ಲಿಸುವ, ನನಗೆ stress ಆಗುತ್ತೆ ಅಂದ್ರು ಇವರು ಕಿವಿಗೆ ಹಾಕಿಕೊಳ್ಳಲಿಲ್ಲ...
ಈಗ ಅವರಿಗೆ ಹುಷಾರಿಲ್ಲ, ಪೂಜೆ ಮಾಡಲು ಕೂರಲು ಆಗುವುದಿಲ್ಲ.  ನಮ್ಮ building ನವರು ಗಣಪತಿ ಪೂಜೆ ಮಾಡುತ್ತಾರೆ. ಅಲ್ಲಿಗೆ ದುಡ್ಡು ಕಟ್ಟಿ, ಮನೆಯಲ್ಲಿ ಸಿಂಪಲ್ಲಾಗಿ ನನಗೆ ಬೇಕಾದ ಹಾಗೆ ಪೂಜೆ ಮಾಡಿದೆ. ಮಕ್ಕಳಿಗೆ ಹೆಚ್ಚಿನ ತಿಂಡಿ ಪದಾರ್ಥ ತಿನ್ನುವ ಮನಸ್ಸು ಇರಲಿಲ್ಲ. ಮೊದಲೆಲ್ಲ ಆಫಿಸ್ ಗೆ ಕಳಿಸ್ತಿದ್ದೆ. ಈಗ ಆಫಿಸ್ ಇಲ್ಲ....ಕೆಲವೆಲ್ಲ ಪ್ರಸಾದಗಳನ್ನು ನಮ್ಮ building ನ ಕ್ಲೀನರ್ಸ್ ಗೆ ಕೊಟ್ಟು ಬಿಟ್ಟೆ.



ನಮ್ಮ minimalist ಗಣಪತಿ ಪೂಜೆ.  It felt really good not to do anything. Instead joined our resident welfare  pooje. ಯಾವಾಗಲೂ ಎರಡು ಗಂಟೆಗೆ ಎದ್ದು, ಮನೆ ಕ್ಲೀನ್ ಮಾಡಿ, ಪೊಜೆಯ ಅಡುಗೆಗೆ ಅಣಿಯಾಗುತ್ತಿದ್ದೆ. ಹಿಂದಿನ ತಿ0ಗಳು ಶ್ರೀಕಾಂತ್ ಗೆ ಹೇಳಿಟ್ಟಿದ್ದೆ಼಼ ಈ ಸಲ ಪೂಜೆ ಇಲ್ಲ ಅಂತ...ಅವರಿಗೆ ಕೆಳಗೆ ತುಂಬಾ ಹೊತ್ತು ಕೂರಲು ಆಗುವುದಿಲ್ಲ,  ಅವರು ಹೇಗೂ ಏನೂ ತಿನ್ನಲಿಕ್ಕೆ ಇಲ್ಲ...ಮಕ್ಕಳಿಗೂ ಉಮ್ಮೆದು ಇರಲಿಲ್ಲ. ಹಾಗಾಗಿ ಬೇಸಿಕ್ ಒಂದು ಅಡಿಗೆ. ನನಗೆ ಈ ಪೂಜೆ ಎಲ್ಲದರಲ್ಲಿ ನಂಬಿಕೆ ಇಲ್ಲ,  ಇಷ್ಟವಿಲ್ಲದಿದ್ದರೂ  ಎಲ್ಲವನ್ನು ನೇಮ ನಿಷ್ಠೆಯಿಂದ ಈ ವರೆಗೆ ಮಾಡಿದ್ದೇನೆ...ಇದೆ ಲಾಸ್ಟ್...ಮುಂದಿನ ವರ್ಷ ಎಲ್ಲಾದರೂ ಟ್ರಾವೆಲ್ ಹೋಗ್ತೇನೆ 👍😊🙏🙏






August 25, 2025

ನನ್ನ ಸ್ನೇಹಿತೆ ಸೂಸಿ -ಈಗ ನೆನಪು ಮಾತ್ರ

 ನನ್ನ ಸೂಸಿಯ ಸ್ನೇಹ ಒಂದು ಸುಂದರ- ವಿಚಿತ್ರ. ಅವರು ನನ್ನ ಅಮ್ಮನಿಗಿಂತ ಹಿರಿಯರು...ಅದು ನನ್ನ ಅಮ್ಮನೇ ನನಗೆ ಮನದಟ್ಟು ಮಾಡಿದ್ದು...ನನಗೆ ನಮ್ಮ ವಯಸ್ಸಿನ ಅಂತರ  ಗೊತ್ತಾಗಲೇ ಇಲ್ಲ ಯಾವತ್ತೂ. ಶಾಂತ ಸ್ವಭಾವದ ನನ್ನ ಸೂಸಿ ನಮ್ಮನ್ನೆಲ ಬಿಟ್ಟು ನಿನ್ನೆ ಹೊರಟು ಬಿಟ್ಟರು...ಅವರಿಗೆ ಸುಮಾರು ಜನ ಸೋದರ ಸೋದರಿಯರು ಇದ್ದಾರೆ. 

ಅವರಿಗೆ ಫೋಟೋ ಎಲ್ಲ ಅಷ್ಟು ಹಿಡಿಸುತ್ತಿರಲಿಲ್ಲ. ಆದರೂ ನಾನು ಒಂದೆರಡು ಫೋಟೋ ತೆಗೆಯುತ್ತೇನೆ ಅಂದಾಗ ನಾಚಿ ಹೂಂ ಎಂದಿದ್ದರು. 



ಕೆಳಗಡೆ ಕೆಲವು ಲಿಂಕ್ ನಲ್ಲಿ ಸೂಸಿ ಬಗ್ಗೆ ನೀವು ಓದಬಹುದು...

ಸೂಸಿ

ರಂಜಿತ್ ಮತ್ತು ಸೂಸಿ

ಹಾಗೆ ಸುಮ್ಮನೆ recall/memories


ನಮ್ಮ ಕೊನೆಯ ಭೇಟಿ 2022 ನಲ್ಲಿ....ಆ ಮೇಲೆ ಫೋನ್ ಸಂಪರ್ಕದಲ್ಲಿ ಇದ್ದೆವು.  ಆಮೇಲೆ ಅವರು ಹೊಸ ಫೋನ್ ತೆಗೊಳ್ಳಲು ಹೋದಾಗ ಅಂಗಡಿಯಿಂದ ಫೋನ್ ಮಾಡಿದ್ದೆ ಕೊನೆ. ಹೊಸ ಫೋನ್ ನಲ್ಲಿ ನನ್ನ ನಂಬರ್ ಬಹುಷ್ಯ ಸೇವ್ ಆಗಿಲ್ಲ...ನಾನು ಫೋನ್ ಮಾಡಿದ್ರೆ ಬೀಫ್ ಬರ್ತಿತ್ತು...ಹೇಗೂ ಅವರ ಬಳಿ ಹೋಗಲಿಕ್ಕಿತ್ತು ಅಂತ ಸುಮ್ಮನಾದೆ...ನಮ್ಮ travel ಪ್ಲೇನ್ಸ್ reschedule ಆಗ್ತಾ ಆಗ್ತಾ ಅಲ್ಲಿಗೆ ಹೋಗಲು ಆಗಿಲ್ಲ....


August 24, 2025

Champaca Book store

 A quaint warm place with books, library and a cafe. A place with serene surtoundings and green plants. just loved it. It was their 'women in translation' month and such books were on display, the booker orize winning book of short stories by Bhanu Mushtak displayed prominently.


I should thank Niha for introducing me to this space. We attended a book talk on 'Uncoded- A technological history of Independent India' . by the Author Meghaa Gupta in conversation with Vinayak Varma. It was interesting to know how she went about researching and writing the book.

i was in need of such an outing and it was good to see youngsters browsing, munching and even buying books in large number ❤️❤️



champaca book store, Vasanthanagar.

August 18, 2025

ಕಾಕಿ ಸೊಪ್ಪಿನ ತಂಬುಳಿ

  


ತಂಬುಳಿ ಬ್ರೇಕ್ up ಮಾಡಿದ್ರೆ ಆಗುವುದು ತಂಪು + ಹುಳಿ. fireless cooking ನ ನಿಜವಾದ example. ಸ್ವಲ್ಪ ಜೀರಿಗೆ, ಸ್ವಲ್ಪ ಕಾಳು  ಮೆಣಸು, ಕಾಯಿ ಮತ್ತು ತಂಬುಳಿ ಗೆ ಹೇಳಿದಂತಹ ಎಲೆಗಳು, ಉಪ್ಪಿನೊಂದಿಗೆ ಒರಳಲ್ಲಿ ರುಬ್ಬಿ ಮಜ್ಜಿಗೆಗೆ ಬೆರೆಸಿ ಅನ್ನದ ಜತೆ ಉಣ್ಣಬಹುದು, ಅಥವಾ ಮಜ್ಜಿಗೆಯೊಂದಿಗೆ ಪೇಯದ ಹಾಗೆ ಕುಡಿಯುವುದು. ಇವೆಲ್ಲ ಪೂರ್ವಜರು ಬೇಸಿಗೆಗೆ  ಮಾಡಿದಂತಹ invention ಗಳು. ನಾನು ರುಬ್ಬುವ ಕಲ್ಲು ಉಪಯೋಗಿಸುತ್ತಿದ್ದಾಗ ಈ  ತಂಬುಳಿಗಳನ್ನೆಲ್ಲಾ ಮಾಡುತ್ತಿದೆ. ಈಗ ತೀರ್ಥಹಳ್ಳಿಯ ತೋಟಕ್ಕೆ ಭೇಟಿ ನೀಡಿದರೆ ಪೇರಳೆ ಹಣ್ಣಿನ ಕುಡಿ, season ನಲ್ಲಿ ಸಿಗುವ ಅಂಕ್ರೆ,  ಕಾಕಿಸೊಪ್ಪಿನ ಕುಡಿ ಎಲೆಗಳನ್ನೆಲ್ಲ ತಂದು ತಂಬುಳಿ ಮಾಡುತ್ತೇನೆ.



ಈಗ ಶ್ರೀಕಾಂತ್ ಗೆ liver cirrhosis. ಈ ಕಾಕಿ ಸೊಪ್ಪು /solanum nigrum/ night shade  ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದೆಂದು ಮಾಡುತ್ತಿರುತ್ತೇನೆ. ವೈದ್ಯರು ಹಸಿ ಪದಾರ್ಥ ತಿನ್ನ ಕೂಡದು ಅಂತ ಹೇಳಿದ್ದಾರೆ. ಅದಕ್ಕೆ ನಾನು ಕೆಳಗಿನ ರೀತಿಯಲ್ಲಿ ತಯಾರಿಸುತ್ತೇನೆ.
ತುಪ್ಪದಲ್ಲಿ ಕಾಳು ಮೆಣಸು ಮತ್ತು ಜೀರಿಗೆ ಹುರಿದು ಅದಕ್ಕೆ ಸ್ವಚ್ಛವಾಗಿ ತೊಳೆದ ಎಲೆಗಳು ಮತ್ತು ಕಾಯಿ ತುರಿ ಹಾಕಿ ಸ್ವಲ್ಪ ಬಿಸಿ ಮಾಡುತ್ತೇನೆ. ತಣಿದ ಮೇಲೆ ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳುತ್ತೇನೆ. ಮಜ್ಜಿಗೆ ಬೆರೆಸಿ ಬಿಸಿ ಅನ್ನದೊಂದಿಗೆ ಸರ್ವ್ ಮಾಡುತ್ತೇನೆ. 👍❤️🙏
ಮಕ್ಕಳಿಗೂ ಇದು ಇಷ್ಟವಾಗಿದೆ.


August 13, 2025

Health update - Liver Transplant



The doctor has recommended a liver transplant, but advises against rushing the process, as it takes time. considering his age, better to be prepared!
First, he'll need to undergo a thorough evaluation to assess his suitability for the transplant, including checks on his heart and kidney stability due to his diabetes.

While the patient needs a 10 day hospiral stay after the transplant ,the donor can resume his normal day to day activities in 2 days and the liver will start growing in 10days..




Next, he'll need to find a matching donor, either a living donor or a cadaver. As he's A+, he can receive a liver from A+, A-, or O blood groups. If opting for a living donor, the donor will need to undergo a comprehensive health checkup. Both the donor and recipient will then need to pass a panel of doctors' assessment.

There are also legal formalities to complete, including proof of relationship and a statement confirming no coercion or monetary involvement. If choosing a cadaver transplant, an application needs to be submitted to the government.

Post-transplant, he'll require regular check-ups, lifelong medication, and adherence to a recommended lifestyle.

My life will never be the same again.

August 10, 2025

Metro Yellow Line

 ಕೊನೆಗೂ ಮೆಟ್ರೋ ಹಳದಿ ಮಾರ್ಗ ಇವತ್ತು ಶುರು ಆಗಿದೆ. ನಮ್ಮ ಮಾನ್ಯ ಪ್ರಧಾನಮಂತ್ರಿ ಮೋದಿಜಿ ಯವರು ಈ ಮಾರ್ಗಕ್ಕೆ ಚಾಲನೆ ನೀಡಿದರು. 

ನಮ್ಮ ಮನೆ ಮುಂದೆಯೇ ಮೆಟ್ರೋ station. ನಮ್ಮ ಬಾಲ್ಕನಿಯಿಂದ ಸ್ಟೇಷನ್ ಗೆ ಒಂದು ದಾರಿ ಮಾಡಬಹುದಿತ್ತು....🤔🤔.


Metro Yellow line

ನಾನಂತು ತುಂಬಾ excite ಆಗಿ ಕೂದಲಿಗೆ ಕಪ್ಪು ಬಣ್ಣ ಕೂಡ ಹಚ್ಚಿ, ಮೆಟ್ರೋ ದ ಉದ್ಘಾಟನೆಗೆ ರೆಡಿ ಆದೇ. ನಿಹಾ ಒಂದು ವಿಡಿಯೋ ತೆಗೆದಳು...ನಾಳೆಯಿಂದ ಸಂಚಾರ ಶುರು ಅಂತ ಇದೆ. ಎಲ್ಲಾದರೂ ಹೋಗಿ ಬರಬೇಕಿದೆ.

tried to forget the troubles at home and pretended to enjoy 😧. how pathetic...

August 3, 2025

me n him


My introverted nature clashes with his sociable personality. While I find solace in books and plants, content to spend days in silence, he craves human interaction and conversation. Our differences often leave me feeling drained and irritable, especially when I'm shouldering caregiving responsibilities. With his low BP and dizziness, I have to accompany him everywhere, i take him for walks including his favorite trips to the vegetable market. After one such outing, I felt like a mule, trudging along behind him with three bags full of veggies. As we passed renowned film maker Girish Kasaravalli's home I struggled to contain my laughter at the absurdity of it all thinking,thankfully, he does not know me!"😁🤔


i frequently send pictures like these to my bro 🤔👍