December 23, 2010

ಕಷಾಯ / Concoctions : Winter warmers

ನಿನ್ನೆ ಕುರಿಯರ್ /courier ನಲ್ಲಿ ಚೇತನಾ ತೀರ್ಥಹಳ್ಳಿ ಅವರ ಹೊಸ ಕವನ ಸಂಕಲನದ ’ಗುಟ್ಟು ಬಚ್ಚಿಡಲು ಬರುವುದಿಲ್ಲ’ ಪ್ರತಿಯನ್ನು ನನಗೆ ಕಳುಹಿಸಿ ಕೊಟ್ಟಿದ್ದಾರೆ. ಜಗಳ ಆಡುವ ಅಂದ್ರೆ ನನ್ನ ಗಂಟಲು ಕೆಟ್ಟು ಹೋಗಿದೆ. orange ತಿಂದಿದ್ದು ನೆಪ. ನನಗೆ ಆ ಪುಸ್ತಕ ಖರೀದಿಸಿ ಓದ ಬೇಕಿತ್ತು. ಅವರ ಕೆಲ ಕವನಗಳು ತುಂಬ ಕಾಡುತ್ತವೆ, ಕೆಲವು ಅರ್ಥವಾಗುವುದಿಲ್ಲ.ಇರಲಿ ಇನ್ನೂ ಕೆಲವು ಪ್ರತಿಗಳನ್ನು ಖರೀದಿಸಿ gift ಕೊಟ್ಟರಾಯಿತು.
ಓಕೆ!! ಗಂಟಲು ಕಟ್ಟಿದನ್ನು ಸರಿ ಪಡಿಸಲು ಕೆಲವು ಕಷಾಯಗಳನ್ನು ನಾನು ಮಾಡುತ್ತೇನೆ ಅದನ್ನು ಬ್ಲಾಗ್ ನಲ್ಲಿ ಹಾಕುವಾ ಅಂತ ಬಂದೆ!!
ನನ್ನ favorite ಕಷಾಯ ಇದು
fresh ಶುಂಠಿ, lightly crushed ಒಣ ಅರಷಿನ ಕೊಂಬು, ಕಾಳು ಮೆಣಸು 8-10, ಬೆಲ್ಲ (ಊರಿನಿಂದ ತಂದ ನೀರು ಬೆಲ್ಲದ stock ಇರುತ್ತೆ ನನ್ನ ಹತ್ತಿರ), ಇದನ್ನು ಎರಡು ಕಪ್ ನೀರಿನಲ್ಲಿ ಕುದಿಸಿ, ಒಂದು ಕಪ್ಪ್ ಳತೆಗೆ ಬಂದ ಮೇಲೆ ಸ್ವಲ್ಪ ಹಾಲು ಬೆರೆಸಿ ಬಿಸಿ ಇರುವಾಗಲೆ ಕುಡಿದು ಬಿಡಿ. ಗಂಟಲು ಕೆರೆತ, ಕೆಮ್ಮು ಇದರಿಂದ ಶಮನಗೊಳ್ಳುತ್ತೆ.
*********************************************************************************************************
ಇನ್ನು ಕೆಲವು ಕಷಾಯ , ಜೇನುತುಪ್ಪ ಬೆರೆಸಿ ಕುಡಿಯುವಂತವು ಈ ಕೆಳಗಿನಂತಿವೆ:
A few soothing concoctions. The dictionary meaning of concoction says ‘the act or process of combining ingredients to create something new and unusual’. Or maybe we can name them decoction. Whichever way you refer to them, these drinks are soothing to the troublesome throat.

Most of these mixtures are had with honey. Honey is proven to be good for diabetics. It also aids in digestion. Also,In case of small burn mishaps in the kitchen, just apply a thin coat of honey to the affected area.
Hot/cold basil drink
Boil a glass of water. Add a handful of freshly picked, thoroughly washed basil leaves. Let the mixture cool a little, add a tea spoon of honey. Alternatively you can have it cold.
In case of sore throat, add a pinch of freshly ground black pepper to the hot decoction.
Masala Tea - 1
When brewing your tea add half an inch of fresh ginger, cardamom and two slightly crushed peppercorn. Sugar and Milk is optional.
Masala Tea – 2
Add a bunch of lemongrass when brewing your tea. Lemongrass soothes the digestive system.
A drink to soothe the vocal chord

coleus aromaticus

Boil a glass of water. Add medium sized sambarballi - coleus aromaticus (DoDDapatre) leaf. When the mixture is luke warm add a tea spoon of honey. Beneficial to people who have to strain their vocal chords. (Teachers, singers, trainers etc.)
De-addiction drink
Boil water with 1/4 teaspoon of cumin, 1 tea spoon of Fennel seed (Sauph/baDishep). Add honey. Very pleasant to the tastebud. Makes you crave less for tea and coffee.
Medicine for Infants with cold:
1.Crush some basil leaves until you get at least a tea spoon of juice, add honey and give it to babies with cold, running nose. gently make the baby lick it off your finger...
2.Lightly heat the doddapatre leaves on a hot griddle/tawa. Extract the juice. Add honey.

Ligthly heat 4-5 doddapatre leaves, and keep it on the chest of child ailing with respiratory problems.

:-)
saambarbaLLi pic courtsey: the net.

December 14, 2010

ನಾನೂ ಕದ್ದಿದ್ದೆ!!!

ಸ್ಕೂಲಿನ ಗೇಟ್ ಬಳಿ ಒಬ್ಬ ಹಣ್ಣು ಹಣ್ಣು ಮುದುಕಿ ಚಿಕ್ಕ ಚಿಕ್ಕ ಬೋರೆ ಹಣ್ಣು, ಕತ್ತರಿಸಿದ, ಉಪ್ಪು, ಖಾರದ ಪುಡಿ ಹಚ್ಚಿಟ್ಟ ಪೇರಳೆ (ಸೀಬೆ)ಹಣ್ಣು, ಇಲಾಯಚಿ (ನೋಡಕ್ಕೆ ಒಂದು ತರಹ ಹಸಿ ಹುಣಸೆ ಹಣ್ಣಿನ ತರಹ ಇರುತ್ತೆ, ಬೀಜ ಮಾತ್ರ ತಿನ್ನಬೇಕು,ರುಚಿ ಮಾತ್ರ ಒಗರು), ಮತ್ತು ತ್ರಿಕೋಣಾಕಾರದ ಪುಟ್ಟ ಪುಟ್ಟ ಸುಪಾರಿ ಪುಡಿ ಪ್ಯಾಕೆಟ್ ಮಾರುತ್ತಿದ್ದಳು. ನನ್ನ ಆಜೋಬಾ ನನಗೆ ಕೇಳಿದ್ದನ್ನೆಲ್ಲ ಕೊಡಿಸ್ತಿದ್ದರು. ಆದರೆ ರಸ್ತೆ ಪಕ್ಕ ಮಾರುವವರಲ್ಲಿ ಏನು ತೆಗೆದು ಕೊಳ್ಳಲು ಬಿಡುತ್ತಿರಲಿಲ್ಲ. ಶಾಲೆಯ ಇತರ ಮಕ್ಕಳು ತ್ರಿಕೋಣಾಕಾರದ ಪ್ಯಾಕೆಟ್ ನಲ್ಲಿದ ಪುಡಿ ತಿಂದ ಮೇಲೆ ಅವರ ಬಾಯಿಗೆ ಸುವಾಸನೆ ಮತ್ತು ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ನೋಡಿದಾಗ ನನಗೆ ಒಂದು ತರಹ fascination. ನನಗೂ ಅದು ಒಂದು ಸಲನಾದ್ರೂ ತಿನ್ನಬೇಕು ಅನ್ನಿಸಿತ್ತು.ಆದರೆ ಕೇಳಿದ್ರೆ ಅಮ್ಮ, ಆಜೋಬಾ ಇಬ್ಬರು ದುಡ್ಡು ಕೊಡ್ತಿರಲಿಲ್ಲ.

ಒಂದು ಸಲ ಅಮ್ಮ ನನಗೆ ಬಟ್ಟೆಗಳನ್ನು ಕಪಾಟಿನಲ್ಲಿಡಲು ಹೇಳಿದಳು. ಅಲ್ಲೇ ಎದುರಿಗೆ 5 ನಯಾ ಪೈಸೆ ನೋಡಿದೆ. ಕೂಡಲೆ ಅದನ್ನು ತೆಗೆದು , ಶಾಲೆಯ ಯುನಿಫಾರ್ಮ್ ನ ಕಿಸೆಗೆ ಹಾಕಿದೆ. but my bad luck, ನನ್ನ ತಮ್ಮ ಕೃಷ್ಣ ನೋಡಿಬಿಟ್ಟ. ನಾನು ಸುಮ್ಮನಿರದೆ, ನೋಡು ಕೃಷ್ಣ ನಿನಗೂ ಚಾಕಲೇಟ್ ತರ್ತೀನಿ. ದುಡ್ಡು ತೆಗೆದದ್ದು ಅಮ್ಮನಿಗೆ ಹೇಳಬೇಡ ಅಂದೆ!!

ಸರಿ, ಶಾಲೆಗೆ ಹೋಗುವಾಗ ಅಜ್ಜಿ ಹತ್ರ ಪೊಟ್ಟಣಗಳನ್ನು ತೆಗೊಂಡೆ. 5 ಪೈಸೆಗೆ 5 ಪೊಟ್ಟಣಗಳನ್ನು ಕೊಟ್ಟಳು. ಕ್ಲಾಸಿಗೆ ಬಂದು ಒಂದೊಂದೆ ಪೊಟ್ಟಣ ಬಿಚ್ಚುತ್ತಾ ತಿನ್ನುತ್ತ ಹೋದೆ.. ಘಮ ಘಮ ಸುವಾಸನೆಯ, ತೀಕ್ಷ್ಣವಾದ ಸಿಹಿಯಿದ್ದ ಪುಡಿಗಳನ್ನು ತಿಂದು, ನಾಲಗೆ ನೋಡಿಕೊಂಡೆ, ಗುಲಾಬಿ ಬಣ್ಣಕ್ಕೆ ತಿರುಗಿಕೊಂಡಿತ್ತು. ನನ್ನ ಸಹಪಾಠಿ ಕೂಡ ನಿನ್ನ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗಿವೆ ಅಂದಾಗ ನಾನು ಖುಶ್. ಪರಿಮಳಯುಕ್ತ ಖಾಲಿಯಾದ ಪೊಟ್ಟಣಗಳನ್ನೆಲ್ಲ ನನ್ನ text book ಹಾಳೆಯೆಡೆಯಲ್ಲಿಟ್ಟೆ. ಸಂಜೆ ಮನೆಗೆ ಹೋದೆ.

ನನಗೆ ಮರೆತು ಹೋದ್ರೂ, ನನ್ನ ತಮ್ಮ ನಾನು ತರುವ ಚಾಕಲೇಟ್ ಗೋಸ್ಕರ ಕಾಯ್ತಾ ಇದ್ದ. ಚಾಕಲೇಟ್ ಎಲ್ಲಿ ಅಂದ , ಅರೇ ನನಗೆ ಮರೆತೇ ಹೋಯ್ತು, ಅಂದೆ. ಕೂಡಲೆ ಅಮ್ಮನಿಗೆ ಚಾಡಿ ಹೇಳಿದ. ಅಮ್ಮ ನನಗೆ’ದುಡ್ಡು ಕದ್ದೆಯ?’ ಅಂತ ಕೇಳಿದ್ರು. ತಲೆ ಕೆಳಗೆ ಹಾಕಿ ’ಹೌದು, ತಪ್ಪಾಯ್ತು, ಇನ್ನು ಮುಂದೆ ಕದಿಯಲ್ಲ’ ಅಂದೆ. ಅಮ್ಮ ಅಲ್ಲೆ ಹತ್ತಿರ ಇದ್ದ ಪೊರಕೆಯಿಂದ ನನಗೆ ಸರೀ ಥಳಿಸಿದರು. ನಾನು  ಪೆಟ್ಟು ತಿಂದೆ ವಿನಃ ಅಳಲಿಲ್ಲ. ಯಾಕೆಂದ್ರೆ ನಾನು ಮಾಡಿದ್ದು ತಪ್ಪು ಎಂದು ಗೊತ್ತಿತ್ತು. ಅಪ್ಪ ಬರಲಿ ನಿನಗೆ ಮಾಡ್ತೇನೆ ಶಾಸ್ತಿ ಅಂದಾಗ ಹೊಟ್ಟೆಯಲ್ಲಿ ಪುಕು ಪುಕು ಶುರು. ಅಪ್ಪ ಅಂದರೆ ನನಗೆ ಮೊದಲಿನಿಂದಲೂ ಹೆದರಿಕೆ. (ಈಗಲೂ, though i am 41 years old) ಮತ್ತೆ ಒಂದು ಸಲ ಮನೆಗೆ ಸುಣ್ಣ ಹೊಡೆಯುವ ಹುಡುಗ ಪಕ್ಕದ ಮನೆಯವರಿಗೆ ಏನೋ ಎದುರು ಜವಾಬು ಕೊಟ್ಟಿದ್ದಕ್ಕೆ,ಅಪ್ಪ ಅವನನ್ನು ಅಟ್ಟಿಸಿಕೊಂಡು, ಚಪ್ಪಲಿಯಿಂದ ಹೊಡೆದದ್ದು , ಅವನು ’ಬಸ್ ಕರೋ ಸಾಬ್’ಅಂತ ಅತ್ತಿದ್ದು ನೆನಪಿತ್ತು.ಇನ್ನಷ್ಟು ಹೆದರಿ, ಜ್ವರ ಬರುವ ಹಾಗಾಯಿತು.ಆಗಲೇ ಅಮ್ಮ ಹೊಡೆದಿದ್ದ ಜಾಗ ಎಲ್ಲ ಕೆಂಪಾಗಿ ಗೀರು ಬಿಟ್ಟಿತ್ತು, ಸ್ವಲ್ಪ ಉರಿಯುತ್ತ ಇತ್ತು. ಅಪ್ಪ ಬಂದು ಯಾವಾಗ ಇದರಿಂದ ಮುಕ್ತಳಾಗುತ್ತೇನೋ ಅಂತ ಕಾಯ್ತಾ ಇದ್ದರೆ, ಆ ದಿನ ಅಪ್ಪ ಬರುವಾಗ ತುಂಬ ಲೇಟ್.

ಅಪ್ಪ ಶೂ ಬಿಚ್ಚುವ ಮುಂಚೆಯೇ, ಅಜ್ಜಿ ಒಳಗಿಂದ ಅಮ್ಮನಿಗೆ ,’ ಅವನು ಈಗಷ್ಟೆ ಬಂದಿದ್ದಾನೆ, ಆಮೇಲೆ ಹೇಳುವಿಯಂತೆ’ ಅಂದ್ರೂ, ಅಮ್ಮನ ವರದಿ ಶುರು. ಅಪ್ಪ ಕೂಡಲೇ ಫಾಂತ್ರೀ (ಅಪ್ಪ ನನಗಿಟ್ಟ petname)ಅಂತ ಕೂಗು ಹಾಕಿದ್ರು. ಆಗಲೆ ನನಗೆ ಒಂದಕ್ಕೆ ಹೋಗುವ ಅವಸರ ಆಯ್ತು. ಆದರೂ ಅಪ್ಪನ ಎದುರಿಗೆ ಹೋಗಿ ನಿಂತೆ. ಹತ್ತಿರ ಬಾ ಅಂದ್ರು, ಕಾಲೆಳೆದುಕೊಂಡು ಹೋದೆ. ದುಡ್ಡು ತೆಗೆದಿದ್ದಿ ಹೌದಾ ಅಂದ್ರು. ನಾನು ಹೌದೆಂಬಂತೆ ಗೋಣು ಅಲ್ಲಾಡಿಸಿದೆ. ನನ್ನ ಗಲ್ಲ ಸವರಿ ಇನ್ನು ಮುಂದೆ ಹಾಗೆ ಮಾಡಬಾರದು ಅಂದರು.ಅಷ್ಟೆ ಅಂದಿದ್ದು, ಎಲ್ಲಿತ್ತೋ, ಅಷ್ಟು ಹೊತ್ತು ಹಿಡಕೊಂಡಿದ್ದ ಅಳು, ಒನ್ ನಂಬರ ಒಟ್ಟಿಗೆ ಬಂದು ಬಿಡ್ತು. ಅಪ್ಪ ಹೋಗು ಮುಖ ತೊಳಿ ಅಂದ್ರು...ಅಮ್ಮ ಮಾತ್ರ..ಹಾಗೆ ಬಟ್ಟೆ ತೆಗೆದುಕೊಂಡು ಉಚ್ಚೆ ಒರಸು ಅಂದ್ರು.....

ಆ ದಿನ ಅಪ್ಪ ಬೈದು..ಹೊಡೆದಿದ್ದಿದ್ರೆ?? ನಾನಾಗ ಮೂರನೆ ಕ್ಲಾಸ್ ನಲ್ಲಿ ಓದುತಿದ್ದೆ. ಅಜ್ಜ ರಾತ್ರಿ ಬಂದ ಮೇಲೆ ಬಾಸುಂಡೆ ಎದ್ದ ಜಾಗಕೆಲ್ಲ, ತೆಂಗಿನ ಎಣ್ಣೆಯಲ್ಲಿ ಅರಸಿನ ತೇದು ಗಾಯಕ್ಕೆ ಹಚ್ಚಿದ್ರು. ನಾನು ಮಲಗಿದ್ದೇನೆ ಅಂದು ಕೊಂಡು ಅಮ್ಮನಿಗೆ ಬೈದಿದ್ರು..ಮಗುಗೆ ಹೇಗೆ ಹೊಡೆದಿದ್ದಿಯಾ??ಚಂದ ಮಾಡಿ ಹೇಳಿದ್ರೆ ಆಗತಿತ್ತು ಅಂತ.

ಮಕ್ಕಳಿಗೆ ನಾನು ಈ ಕತೆಯನ್ನು ಅವರು primary ಶಾಲೆಯಲ್ಲಿದ್ದಾಗ ಹೇಳಿದ್ದೆ.ಮತ್ತು ಏನಾದ್ರು ಬೇಕಿದ್ದಲ್ಲಿ ನನಗೆ ಕೇಳಿ. ಅದರ ಬಗ್ಗೆ discus ಮಾಡಿ, ಅದನ್ನು ತೆಗೊಳ್ಳಬೇಕಾ ನೋಡುವಾ,ದುಡ್ಡು ಮಾತ್ರ ಕದೀ ಬಾರ್ದು ಅಂತ ಹೇಳಿದ್ದಾಗ ಅವರು ನಕ್ಕಿದ್ದರು.ನಾನು ಆಫಿಸ್ ಗೆ ಹೋಗುವಾಗ ಮಕ್ಕಳಿಗೆ urgent ಏನಕ್ಕೂ ಬೇಕಾದ್ರೆ ಅಂತ ಮನೆಯಲ್ಲಿ ಮಿನಿಮಮ್ 2000 ಕ್ಯಾಶ್ ನಾದ್ರೂ ಇಡುವ ಪರಿಪಾಠ. ಅವರು ಖರ್ಚು ಮಾಡಿದಕ್ಕೆ ಲೆಕ್ಕ ಬರೆದು ಇಡತಿದ್ರು. ಈಗ ಇಬ್ಬರೂ ದೊಡ್ಡವರಾಗಿದ್ದಾರೆ. ಅವರದ್ದೆ ಪಾಕೆಟ್ ಮನಿ ಇರತ್ತೆ.

ಎದುರು ಮನೆಯ ಕೆಲಸದ ಪುಟ್ಟ ಹುಡುಗಿಗೆ ದುಡ್ಡು ಕದ್ದಿದ್ದಾಳೆ ಅಂತ ಬೆಳಿಗ್ಗೆ ತುಂಬಾ ಬೈತಾ ಇದ್ರು. ಅವಳ ಅಮ್ಮ ಅಳುತ್ತ ’ಎಷ್ಟು ವರ್ಷದಿಂದ ಇಲ್ಲಿದ್ದೇನೆ,ನಿನ್ನಿಂದ ನನಗೆ ಕೆಟ್ಟ ಹೆಸರು ಬಂತು’ ಅಂತ ಅವಳಿಗೆ ಹೋಡಿತಾ ಇದ್ರು. ಅವಳು ’ಇಲ್ಲಮ್ಮ ನಾನು ಕದಿಲಿಲ್ಲ’ ಅಂತ ಅಳ್ತಾ ಇದ್ದಳು.ಆದ್ರೆ....ಕತೆ ಬೇರೆನೆ ಇದೆ ಅಲ್ಲಿ...ಬಿಡಿ...ಇನ್ನೊಮ್ಮೆ ಹೇಳ್ತೇನೆ.

:-)

December 8, 2010

ಶ್ರೀ ಸಂತೋಷ್ ಕುಮಾರ್ ಗುಲ್ವಾಡಿ- ಒಂದು ಅಪರೂಪದ ಭೇಟಿ

ನಮ್ಮ ಸಂಸ್ಥೆಯ honorary ಅಧ್ಯಕ್ಷರಾದ ಶ್ರೀ ಕೆ. ಎಸ್. ಪ್ರಕಾಶ ರಾವ್ ಮಾಮನವರ ಪತ್ನಿ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ತಲೆಗೆ ತೀವೃ ಏಟಾಗಿ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದರು. ಅವರ 13 ನೇ ದಿನದ ವೈಕುಂಠಕ್ಕೆ ನಾವು ಮಲ್ಲೇಶ್ವರಂ ನ ಚಿತ್ರಾಪುರ ಮಠಕ್ಕೆ ಹೋಗಿದ್ದೆವು. ಊಟಕ್ಕೆ ಏರ್ಪಾಡು ಕೆಳಗಡೆ ನಡೆದಿತ್ತು. ಊಟ ಮುಗಿಸಿ, ಪ್ರಾಕಾಶ ರಾವ್ ಮಾಮನವರಿಗೆ ಪುನಃ ಮಾತನಾಡಿಸಿ ಹೊರಡುವ ಅಂತ ಮೇಲಕ್ಕೆ ನಡೀತಾ ಇದ್ವಿ.

 ಒಬ್ಬರು ತೆಳ್ಳನೆಯ ಉದ್ದದ ಹಿರಿಯರು ಯಾರೊಂದಿಗೋ ಮಾತಾಡ್ತಾ ಮಾತಾಡ್ತಾ ಹಿಮ್ಮುಖವಾಗಿ ಚಲಿಸುತ್ತಿರುವುದನ್ನು ನೋಡಿದೆ. ಇನ್ನೇನೂ ಮೆಟ್ಟಿಲಿನ ತುದಿಗೆ ತಲುಪ್ತಾ ಇದ್ದರು. ನಾನು ಮೇಲಕ್ಕೆ ಓಡಿ ಹೋಗಿ, ಅವರು ಮೆಟ್ಟಿಲು ತುದಿಗೆ ಬರುವಷ್ಟರಲ್ಲಿ ಅವರ ಬೆನ್ನಿಗೆ ನನ್ನ ಕೈಯಾನಿಸಿದ್ದೆ. ’ಮಾಮ, be careful, ಮೆಟ್ಟಿಲು ಅಂದೆ’ . ಅವರು ನನ್ನನ್ನು ನೋಡಿ, ’ನೀನಾ’?? ತಡಿ ತಡಿ...ಅಂತ ಅವರ ಹೆಂಡತಿಯನ್ನು ಕರೆದು, ’ಆವಾಗ್ಲಿಂದ ನಿನ್ನನ್ನು observe ಮಾಡ್ತಿದ್ದಾಳೆ ನನ್ನ ಹೆಂಡತಿ, ’ಯಾರು ಈ ನಗು ಮುಖದ ಹೆಂಗಸು ಅಂತ’, ನೀನೆ ಹತ್ತಿರ ಬಂದಿದ್ದಿ, ಒಳ್ಳೆದಾಯ್ತು. ಅವರ ಹೆಂಡತಿ ನಮ್ಮ ಬಳಿ ಬಂದಾಗ, ’ನಾನು ಈಗ ಬೀಳುತ್ತಿದ್ದೆ, ಇವರು ತಡೆದರು’ ಅಂದ್ರು.ಅಷ್ಟರಲ್ಲಿ ಶ್ರೀಕಾಂತ ಮತ್ತು ನನ್ನ office ನವರೆಲ್ಲ ಮೇಲೆ ತಲುಪಿ, ಹಲ್ಲೋ ಗುಲ್ವಾಡಿ ಸರ್, ಅಂತ ಮಾತಾಡಿಸ್ತಾ,(ಬೇರೆ ಮಾತಿನ ನಂತರ) ನಮ್ಮ ಸಂಸ್ಥೆಯ ಬಗ್ಗೆ ಹೇಳಲಿಕ್ಕೆ ಶುರು ಮಾಡಿದರು. ನಾನು ಮಾಮಿಯ ಜತೆ ಒಂದೆರಡು ಕುಶಲೋಪರಿ ಮಾತನಾಡಿ, ಪ್ರಕಾಶ ರಾವ್ ಮಾಮನ ಸೊಸೆಯನ್ನು ಮಾತನಾಡಿಸಿ ಬಂದೆ. ಆಗ ಗುಲ್ವಾಡಿಯವರನ್ನು ವಾಪಸ್ ಕರೆದುಕೊಂಡು ಹೋಗುವವರು ಹೊರಡಲಿಕ್ಕೆ ಅವಸರ ಪಡಿಸ್ತಾ ಇದ್ದರು. ಅವರು ಬೇರೊಂದು ಕಾರ್ಯಕ್ರಮಕ್ಕೆ ಹೊರಡಬೇಕಿತ್ತು.ಅವರ ಇನ್ನೊಂದು ಚಪ್ಪಲಿ ಸಿಗ್ತಾ ಇರಲಿಲ್ಲ. ನಾನು ಹುಡುಕಿ ಕೊಟ್ಟಾಗ, ನನ್ನ ತಲೆ ಮೇಲೆ ಕೈಯಿಟ್ಟು, ಹೋಗಿ ಬರ್ತೆನೆ ಅಂದ್ರು.
ಆಮೇಲೆ ನಾವೂ office ಕೆಲಸದ ಮೇಲೆ ಒಬ್ಬ ಸರಕಾರಿ ಅಧಿಕಾರಿಯನ್ನು ಭೇಟಿ ಮಾಡಲು ಹೋಗ ಬೇಕಿತ್ತು.ದಾರಿಯಲ್ಲಿ ನಮ್ಮ ಅಫೀಸ್ ನವರು- ಗುಲ್ವಾಡಿಯವರು, ತರಂಗ ಹಾಗೂ ಅವರ ಬರಹದ ಬಗ್ಗೆ ಮಾತಾಡ್ತಾ ಇದ್ದರು. ಆವಾಗಲೇ ಅವರು ಯಾರು ಅಂತ ನನಗೆ ಗೊತ್ತಾಗಿದ್ದು. ಯಾಕೋ ತುಂಬ ಒಳ್ಳೆಯವರು, gentle human being ಅನ್ನಿಸಿತ್ತು. ಇವತ್ತು ಪೇಪರ್ ನೋಡಿದಾಗ ಮೇಲಿನ ನೆನಪು ಬಂತು
ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ..........

November 30, 2010

ಕಡಲೆಕಾಯಿ ಪರಿಷೆ

ಕ್ಯಾಮರಾ ಚಾರ್ಜ್ ಆಗಿರಲಿಲ್ಲ. so sirph 4 photos.

ಮೈ beautiful daughter!!

ಕಡಲೆಕಾಯಿ ಪರೀಕ್ಷೆ by me???? no way.

ನಿಹಾರಿಕಾ


.

November 22, 2010

ಮಂಗಳೂರು special - ಬನ್ಸ್ ಮತ್ತು ತೊವ್ವೆ


2 ಗ್ಲಾಸ್ - ಮೈದಾ ಹಿಟ್ಟು
1 ಹಿಡಿ - ಕಡಲೆ ಹಿಟ್ಟು
2 ಟೇಬಲ್ ಸ್ಪೂನ್ - ಸಕ್ಕರೆ
1 ಟೀ. ಸ್ಪೂನ್ - ಅಡಿಗೆ ಸೋಡಾ
2 ಟೇ ಸ್ಪೂ - ಮೊಸರು
2 ಟೀ.ಸ್ಪೂ ಜೀರಿಗೆ, 4 ಹಸಿಮೆಣಸಿನ ಕಾಯಿ, ತುಂಬಾ ಹಣ್ಣಾದ 2 ಬಾಳೆ ಹಣ್ಣು (ಸಿಪ್ಪೆ ಕಪ್ಪಾಗಿದ್ದು), ರುಚಿಗೆ ಉಪ್ಪು ಮತ್ತು deep fry ಮಾಡಲು ಎಣ್ಣೆ.

ಮೊಸರಿಗೆ ಸೋಡಾ ಪುಡಿ, ಸಕ್ಕರೆ, ಉಪ್ಪು ಹಾಕಿಡಿ. ಮಿಕ್ಸಿಯಲ್ಲಿ ಜೀರಿಗೆ, ಹಸಿಮೆಣಸಿನಕಾಯಿ, ಬಾಳೆ ಹಣ್ಣು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೊಸರಿಗೆ ಹಾಕಿ. ಎರಡು ನಿಮಿಷ ಅಂದ್ರೆ ಸಕ್ಕರೆ ಕರಗುವ ತನಕ ಕೈಯಾಡಿಸಿ. ಇದಕ್ಕೆ ಮೈದಾ ಹಿಟ್ಟು + ಕಡಲೆ ಹಿಟ್ಟು ಬೆರೆಸಿ , ನೀರನ್ನು ಹಾಕಿ ತುಂಬಾSSSSSS ಮೆತ್ತಗಿನ dough ತಯಾರಿಸಿ. ಒದ್ದೆ ಬಟ್ಟೆಯಿಂದ 4-5 ಗಂಟೆಮುಚ್ಚಿಡಿ. ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ಉಂಡೆ ಮಾಡಿ,(ಪೂರಿ size ನಲ್ಲಿ )ಸ್ವಲ್ಪ ದಪ್ಪ ದಪ್ಪ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ :-) ಇಬ್ಬರಿಗೆ ಸಾಕು.

for ತೊವ್ವೆ

ತೊಗರಿಬೆಳೆ ತೊಳೆದು, 2 ಹಸಿ ಮೆಣಸಿನಕಾಯಿ ಸೀಳಿ ಹಾಕಿ, ಸ್ವಲ್ಪ ಅರಿಶಿನ ಪುಡಿ ಬೆರೆಸಿ ನೀರು ಹಾಕಿ ಬೇಯಿಸಿ.. ಒಗ್ಗರಣೆಗೆ ಸಾಸಿವೆ, ಕರಿಬೇವು, ಹಿಂಗು ಮತ್ತು ಕೆಂಪು ಒಣ ಮೆಣಸು ಹಾಕಿ. ಉಪ್ಪು ಹಾಕಲು ಮರೆಯಬೇಡಿ.


ಈ ತಿನಿಸು ಸಂಜೆಗೆ ಅಥವಾ ರಜೆಯಿದ್ದಾಗ nice. ಬ್ರೇಕ್ ಫಾಸ್ಟ್ ಗೆ ಇದನ್ನು ಮಾಡಿ ತಿಂದು , ಆಫೀಸ್ ನಲ್ಲಿ ನಿದ್ದೆ ಹೋಗಿ ನನ್ನ ಬೈಯಬೇಡಿಯಪ್ಪ.

Double role: ದಪ್ಪಗೆ ಲಟ್ಟಿಸಿ ಚಾಪಾತಿ ಕಾವಲಿಮೇಲೆ ಎಣ್ಣೆ ಹಾಕದೆ ಬೇಯಿಸಬಹುದು. ಇದಕ್ಕೆ ’ವಸ್ತಾದಿ ರೊಟ್ಟಿ” ಅನ್ನುತಾರೆ. ಬೆಣ್ಣೆ ಜತೆ ತಿನ್ನ ಬಹುದು ಅಥವಾ ತೊವ್ವೆ ಜತೆಗೂ!!
:-)

November 15, 2010

work is worship

ಕಾಯಕವೇ ಕೈಲಾಸ


ಈಗ ಮಧ್ಯಾಹ್ನ ನೆನಪಾಯಿತು. ಇವತ್ತು ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬ (foundation day) .ಕೆಲಸದಲ್ಲಿ ಎಲ್ಲರೂ ಎಷ್ಟು ವ್ಯಸ್ತರಾಗಿದ್ದಾರೆಂದರೆ, celebration ಇರಲಿ, ನೆನಪಿಸಿಕೊಳ್ಳೋದಕ್ಕೂ ಯಾರಿಗೂ ಪುರುಸೊತ್ತಿಲ್ಲ. ಈ ವರ್ಷ ಒಂದು ದೊಡ್ಡ ಸಮಾರಂಭ ಏರ್ಪಡಿಸಿ ನಮಗೆ ಸಹಕಾರ ನೀಡಿ, ನಾವು ಈ ೧೦ ವರ್ಷಗಳಲ್ಲಿ ರಾಷ್ತ್ರೀಯ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪ್ರತ್ಯಕ್ಷ, ಪರೋಕ್ಷವಾಗಿ ಬೆನ್ನು ತಟ್ಟಿದವರಿಗೆಲ್ಲ ಖಂಡಿತ ಧನ್ಯವಾದ ಅರ್ಪಿಸಬೇಕೆಂದು ನಿರ್ಧರಿಸಿದ್ದೇವೆ.
ಐದನೆ ವರ್ಷದ ಸಂಸ್ಥಾಪನಾ ದಿನಾಚರಣೆ ಸಂಭ್ರಮದಲ್ಲಿ ನಮ್ಮೊಂದಿಗೆ ಮ್ಯಾಗಸೆಸ್ಸೆ ಪ್ರಶಸ್ತಿ ವಿಜೇತರಾದ ಪದ್ಮಶ್ರೀ ಡಾ. ಎಚ್. ಸುದರ್ಶನ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ವರಿಷ್ಠ ಅಧಿಕಾರಿ, ಶ್ರೀಮತಿ ಮಹಪರಾ ಅಲಿ ನಮ್ಮೊಂದಿಗಿದ್ದರು.


ಶ್ರೀಮತಿ ಮಹಪರಾ ಅಲಿ, ದೀಪ ಬೆಳಗಿಸುತ್ತಿರುವವರು ಡಾ. ಎಚ್. ಸುದರ್ಶನ್. ಇವರಿಬ್ಬರ ಮಧ್ಯದಲ್ಲಿರುವವರು ಡಾ. ಸೋಮಶೇಖರ್. ದುರದೃಷ್ಟವಶಾತ್ ಅವರು ಈಗ ನಮ್ಮೊಂದಿಗಿಲ್ಲ. ಐದು ವರ್ಷಗಳ ಕಾಲ ಧೈರ್ಯದಿಂದ ಕ್ಯಾನ್ಸರ್ ಕಾಹಿಲೆ ಎದುರು ಹೋರಾಡಿ,  ಮೂರು ತಿಂಗಳಹಿಂದೆ ಅವರು ದೈವಾಧೀನರಾದರು. ನಮ್ಮ well wisher , ನಮ್ಮ ಸಂಸ್ಥೆಯ ಬಗ್ಗೆ ತುಂಬಾ ಆಸ್ಥೆ ವಹಿಸುತ್ತಿದ್ದವರು ಇಲ್ಲದ್ದು ನಮಗೆ ತುಂಬಲಾರದ ನಷ್ಟ. 

ಡಾ. ಸುದರ್ಶನ್ ಅವರು , ಎಲ್ಲರಿಗೂ ಮಾದರಿಯಾಗುವಂತ ಕರುಣಾ ಟ್ರಸ್ಟ್ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಕಳೆದ 25 ವರ್ಷಗಳಿಂದ ಬಿ.ಆರ್.ಹಿಲ್ಲ್ಸ್ ನಲ್ಲಿ ನಡೆಸ್ತಾ ಇದ್ದಾರೆ.

November 5, 2010

Death by Chocolate

ಇದೇನೋ ಸಸ್ಪೆನ್ಸ್ ಕತೆ ಅನ್ನಕೋಬೇಡಿ.

ನಮ್ಮಲ್ಲಿ ಊಟಕ್ಕೆ ಬಂದಾಗ ವಸುಧೇಂದ್ರ ಅವರು, ತಮ್ಮ ಚಿಕ್ಕಂದಿನಲ್ಲಿ ತಿನ್ನುತ್ತಿದ ಅವಲಕ್ಕಿ, ಮೊಸರು, ಮತ್ತು ಚಟ್ನಿ ಪುಡಿ ಯ terrific combination, ಆಲೂಗಡ್ಡೆ ಫ್ರೈ, ನೆನೆಸಿಕೊಂಡು, ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ,ಅಯ್ಯೋssss, (ನೆನಪು ಮಾಡಕೊಂಡ್ರೆ )ಪ್ರಾಣಹೋಗುತ್ತೆ’ ಅಂತ ಹೇಳ್ತಿದ್ದ ಮಾತನ್ನು ನಾನು, ಮಕ್ಕಳು ಬಿಟ್ಟ ಕಣ್ಣಿಂದ, ತೆರೆದ ಬಾಯಿಯಿಂದ ಕೇಳ್ತಾ ಇದ್ವಿ.

ಇವತ್ತು ನಾನು ಹುಟ್ಟಿದ ದಿನ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಅದು 31 ನೇ ಅಕ್ಟೋಬರ್. ಶ್ರೀಕಾಂತ್ ಆಫೀಸು ಕೆಲಸದ ಮೇಲೆ ಓರಿಸ್ಸಾ ಗೆ ಹೋಗಿದ್ದರಿಂದ, ಅದನ್ನು ಇವತ್ತು ಆಚರಿಸಿದ್ವಿ. ಮಾಲವಿಕ ನನಗೋಸ್ಕರ ಚಾಕೋಲೇಟ್ ಚೀಸ್ ಕೇಕ್ (chocolate cheese cake) ತಂದಿದ್ಲು. ಕೇಕ್ ಕಟ್ ಮಾಡಿ ಬಾಯೊಳಗಿಟ್ಟ ಕೂಡಲೆ, ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಂಡು, ಅದರ ಸ್ವಾದ ನಾಲಿಗೆ ಮೇಲೆ ಮೆಲ್ಟ್ ಆಗ್ತಾ, ನಾನು ಈ ಲೋಕದಲ್ಲಿರದೇ ತೇಲ್ತಾ, ಸಮಾಧಿ ಸ್ಥಿತಿ ಯಿಂದ, ಇನ್ನೇನು ನಿರ್ವಾಣ ಹೊಂದಬೇಕು.... ಅನ್ನುವಷ್ಟರಲ್ಲಿ, ನನ್ನ ತಮ್ಮ ಫೋನ್ ಮಾಡ್ದ. ಸಹಜ ಸ್ಥಿತಿಗೆ ಮರಳುವಂತೆ ಮಾಡಿದ ಅವನಿಗೆ ಥ್ಯಾಂಕ್ಸ್ ಅಂತೂ ಹೇಳಲಿಲ್ಲ.


ಮಮಮಮಮ್.....what a heavenly taste!!!!ಪ್ರ್ರಾಣ ಹಾಗೆ ಹೋಗಿ, ಹೀಗೆ ಬಂದು ಬಿಡ್ತು. ವಸುಧೇಂದ್ರರ ಮಾತಿನ ಅರ್ಥ ಈಗಾಯ್ತು.

ಅಂದ ಹಾಗೆ ಡೆಥ್ ಬೈ ಚಾಕೋಲೇಟ್ ಐಸ್ ಕ್ರೀಮ್ ಹೆಸರು.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

:-)

October 26, 2010

The exquisite Charminar

At night the charminar looks surreal illuminated by myriad lights of surrounding shops, commercialcomplex, street vendors, street light giving it a magical glow, really out of this world. the air is rife with cries of vendors drawing attention to their wares..the special Hyderabadi lac bangles, attars, lovely sequined /embroideried garments, pearls, coral and semi precious stone jewellery shops or the brightly coloured apples, figs and pomegranates. Its a hustle of activity which bombards our senses and we are at a loss as to where to begin.



there is a devi temple nestled right at the base of the Charminar. Since it was Navarathri time,devotees thronged the temple and bhajans and aarati were going on full swing. The temple is marked by the saffron flags
Lights go on in the four minarets during the muslim holy festivals.

Day time , charminar looks different, one cannot but marvel at the vast effort put in the construction of this majestic monument. It is a fine example of a blend of Hindu and Mughal architecture. the walls are made of sand, limestone, ground marble and Jaggery.



It is believed that the monument was constructed to commemorate the eradication of plague.

a tiny cat face is sculpted atop one of the latticed structures and is said to bring luck to people who look at it. Hope u all see it in my blog and get loads of luck. :-) this was shared with utmost confidence by the Bihari guard atop the charminar.

 He also whispered that a cat was sacrificed and buriedbelow one of the four arches,adding that the entry to the higher floors was restricted following the suicide of 5 women.
The inside of the dome.

the 'char' shenoys atop the char-minar :-). the just beginning traffic below
the makkah masjid backdrop, in all its splendour

miya-biwi :-)

latice work window typical mughal style
A smaller masjid as the backdrop. Seated in this place Quli Qutub shah promised to construct a monument 'if' the plague was completely eliminated from the city.(according to the guard)

     Same spot- close up
the Artistic insides of the dome 


May Allah bestow peace and prosperity on the city sayeth the inscription

 By the time i reached up i was quite giddy with the effort of climbing up the confined space of 129 narrow spiral steps. Only one person can use the space to go up/down and at times i did feel claustrophobic.

seen below the beginnings of an Early morning traffic

It was a great experience. The first two days were spent at Ushegaon,tumriguda villages near Adilabad accompanied by Prof. Trilochan shastri of IIM, Bangalore. It was late night when we entered Hyderabad. The lights around Husaain Sagar lake reminded me of Queens necklace / Marine Drive in Mumbai. The road along Husaain sagar lake is also called necklace road with the lights placed in semicircle manner along the lake ,twinkling, at night lending it an aura of a sparkling necklace
We could glimpse the monolithic Buddha statue in silhoutte.We were too tired to get out our cameras and shoot the picture. We just wanted to stretch our cramped, aching legs. Opposite to the lake is the famous 'lumbini' garden. we just looked at it passing by. could not include it in our schedule. 
Along the garden are the statues of the famous people of Hyderabad. 
We visited the Birla Mandir amidst tight security. Cell phone and cameras were banned inside the Mandir so had to kept back in the vehicle. I spotted a gola stall and in the excitement of eating forgot to get a picture of Birla Mandir, at least from the outside. :-)
We thoroughly enoyed this trip. the four of us were accompanied by our colleagues Kempegouda, Srikanth Sagar and Sateesh Kattimani. and not to forget the driver Dileep.

the Makkah (Mecca) Masjid. This is the famous LaaD bazaar.

We were just in time for the evening prayer. A person from the masjid said our wishes would come true if we prayed in this spot and as usual i forgot to wish!! :-)

Makkah masjid. I felt some good vibes here and spent more time here than at charminar or shopping!!
:-)

October 17, 2010

ಪಡುವಳಕಾಯಿ (snakegourd)ಬೀಜದ ತಂಬುಳಿ/ತಂಬ್ಳಿ

ಉಣ್ಣಕ್ಕೊಂದು ತಂಬ್ಳಿ, ಹೊದೆಯಕ್ಕೊಂದು ಕಂಬ್ಳಿ.....perfect ನಾನ್ನುಡಿ for ಮಲೆನಾಡು. ಹೊರಗಡೆ ಧೋ ಅಂತ ಮಳೆ ಸುರೀತಾ ಇದ್ದರೆ, ಬಿಸಿ ಬಿಸಿ ಅನ್ನ, ತಂಬ್ಳಿ ಊಟ ಮಾಡಿ, ಸಂಜೆ ತನಕ ಬೆಚ್ಚಗೆ ಮಲ್ಕೋ ಬಹುದು.
ಪಡುವಳಕಾಯಿಯ ಪಲ್ಯ ಎಲ್ಲರಿಗೂ ಗೊತ್ತು!! ಪಡವಳಕಾಯಿ ಬೀಜದ ತಂಬುಳಿ???ಗೊತ್ತಿದ್ದರೆ ok. ಇಲ್ಲದಿದ್ದರೆ ಒಂದು ಸಲ try ಮಾಡಿ ನೋಡಿ!!!
ಎರಡು ಪಡವಳ ಕಾಯಿಯನ್ನು ಉದ್ದಕ್ಕೆ ಕತ್ತರಿಸಿ, ಅದರಿಂದ ಬೀಜಗಳನ್ನು ಬೇರ್ಪಡಿಸಿ.
1 ಟೇಬಲ್ ಚಮಚ ಎಣ್ಣೆಯಲ್ಲಿ, ಈ ಬೀಜಗಳನ್ನು ನಸು ಕಂದು ಬಣ್ಣ ಬರುವ ತನಕ ಹುರಿಯಿರಿ. ಬೀಜಗಳನ್ನು ಎಣ್ಣೆಯಿಂದ ತೆಗೆದಿಡಿ. ಉಳಿದ ಎಣ್ಣೆಯನ್ನು ಒಗ್ಗರಣೆಗೆ ಬಳಸಿ.


1 tablespoon ತೆಂಗಿನ(ತಾಜಾ) ತುರಿಯನ್ನು ೪ ಹುರಿದ ಒಣ ಕೆಂಪು ಮೆಣಸು, ಚಿಕ್ಕ ತುಂಡು ಹುಣಸೆ ಹುಳಿ ಮತ್ತು ಉಪ್ಪಿನೊಂದಿಗೆ ನುಣ್ಣಗೆ ರುಬ್ಬಿ. ಬಡಿಸುವ ಮುನ್ನ ತಂಬಳಿಗೆ ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿ ಹುರಿದಿಟ್ಟ ಬೀಜಗಳನ್ನು ಸೇರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಮಸ್ತ್ ಮಜಾ


ಕೊಂಕಣಿಯವರು ಏನನ್ನು ಬಿಡದೇ ತಿನ್ನುತ್ತಾರೆ ಎನ್ನುವ ಪ್ರತೀತಿ ಇದೆ. ಹಾಗೆ ನೋಡಿದರೆ ತರಕಾರಿಗಳ ಸತ್ವ ಇರುವುದೇ ಅದರ ಸಿಪ್ಪೆ ಬೀಜಗಳಲ್ಲಿ. ನಾನು ಬಟಾಟೆ,/ಆಲುಗಡ್ಡೆ, ಕ್ಯಾರೆಟ್ ವಗೈರೆ ಬಳಸುವಾಗ ಅದರ ಸಿಪ್ಪೆಯನ್ನು ತೆಗೆಯುವುದಿಲ್ಲ. ನೀರಿನಲ್ಲಿ ಸ್ವಲ್ಪ ಹೊತ್ತು ಈ ತರಕಾರಿಗಳನ್ನು ಇಟ್ಟು ಬಿಟ್ಟರೆ, ಅದರ ಸಿಪ್ಪೆಗೆ ತಾಗಿದ ಮಣ್ಣು ಎಲ್ಲ ಹೋಗಿ ಕ್ಲೀನ್ ಆಗಿರುತ್ತದೆ.
ಪಡವಳಕಾಯಿ ಮಾತ್ರವಲ್ಲ ಅದರ ಎಲೆಯ ಕಶಾಯವನ್ನು ಮಾಡುತ್ತಾರೆ. ಅಜೀರ್ಣದ ತೊಂದರೆಯಿದ್ದರೆ, ಹೊಟ್ಟೆ ಹುಣ್ಣು, ನಂಜು ಮುಂತಾದುವಕ್ಕೆ ಈ ಕಶಾಯ (Decoction)ಉತ್ತಮ.
(watch this space for ಪಡುವಳಕಾಯಿ ಕಟ್ಲೆಟ್)
:-)

October 7, 2010

ನಾನು ,ದೇವರು


ನಮ್ಮ ಮನೆ ಎರಡು ಮನೆಗಳ ಮಧ್ಯ sandwich ನಂತಿದೆ.ಇವತ್ತು ಪಕ್ಕದ ಮನೆಯಲ್ಲಿ ಪೂಜೆ ಇತ್ತು. ಹೋಮ ಹವನದ ಹೊಗೆ, especially ಅಗ್ನಿಗೆ ತುಪ್ಪದ ಹವಿಸ್ಸು ಬಿದ್ದ ಪರಿಮಳ ಭರಿತ ಹೊಗೆ, ಪೂರ್ತಿ ನಮ್ಮನೆಯೊಳಗೆ. ಒಂದು ತರಹದ nice nice feeling!!ಅದನ್ನು ಅಘ್ರಾಣಿಸುತ್ತ ಸುಮಾರು ಹೊತ್ತು ಸಮಯ ಕಳೆದೆ. ಅಮ್ಮನ ಫೋನ್ ಬಂದಾಗ ಅಮ್ಮನಿಗೂ ಹೇಳಿದೆ. ಮತ್ತು ಇವತ್ತು ಗ್ಯಾರಂಟಿ ಸೊಳ್ಳೆ ಇರಲ್ಲ ಅಂತಲೂ ಸೇರಿಸಿದೆ.ಅದಕ್ಕೆ ಅಮ್ಮ’ ಇರಲಿ, ನಿನಗೆ ದೇವರು ಪೂಜೆ ಅಂತಹುದಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ನೋಡು, ದೇವರು ಮಾತ್ರ ನಿನ್ನನ್ನ ಬಿಡಲ್ಲ. ದೇವರ ಮನೆ, ದೀಪಗಳನ್ನು ಕ್ಲೀನ್ ಮಾಡುವುದು ಇಂತಹುದೆಲ್ಲ ಮಾಡುತ್ತೇನೆ. ದೇವರ ದೀಪ ಹಚ್ಚುವ, ಪೂಜೆ ಮಾಡುವ ಕೆಲಸ ಮಾತ್ರ ಶ್ರೀಕಾಂತ್ ದ್ದು.

ಆಶ್ಚರ್ಯ ಅಂದರೆ ನನ್ನ ತಂದೆ ತಾಯಿ ಮನೆಯಲ್ಲಿ, ಅಥವಾ ನಾನು ಬೆಳೆದ ಅಜ್ಜನ ಮನೆಯಲ್ಲಿ ದೇವರಲ್ಲಿ ಭಕ್ತಿ ತುಂಬ. ಆದರೂ ನಾನ್ಯಾಕೆ ಹಾಗಾದೆ ಎಂಬುದೇ ಅವರಿಗೆಲ್ಲ ಅಚ್ಚರಿ. ಮದುವೆಯಾದ ಮೇಲೆ ನೋಡಿದ್ರೆ ಶ್ರೀಕಾಂತ್ ಮನೆಯಲ್ಲಂತೂ ದೈವ ಭಕ್ತಿ ಸ್ವಲ್ಪ ಹೆಚ್ಚೆ.

ನಾವು ಬೆಂಗಳೂರಿಗೆ 2001 ನಲ್ಲಿ ಬಂದಾಗ ನಮ್ಮ ಮೊದಲ ಬಾಡಿಗೆ ಮನೆ (ಇದು ಮೂರನೆದು ಮತ್ತು hopefully last )ಇದ್ದದ್ದು ಮಹಾಲಕ್ಷ್ಮಿ ಲೇ ಔಟ್ ನಲ್ಲಿ. ಸ್ವಲ್ಪ ಎತ್ತರದ ಪ್ರದೇಶದಲ್ಲಿತ್ತು. ಎರಡನೇ ಮಹಡಿ. ಮನೆಗಿಂತ ಮನೆಯ ಎದುರಿಗಿದ್ದ ಬಿಸಿಲು ಮಚ್ಚು(terrace) ದೊಡ್ದದಾಗಿತ್ತು. ನನಗಂತು ಮಹಾ ಅನುಕೂಲ. ಯಾಕಂದ್ರೆ ನನ್ನ ಹತ್ತು ಹಲವು ಹೂವಿನ ಕುಂಡಗಳನ್ನಿಡಲು ಜಾಗ ಮಾತ್ರವಲ್ಲದೇ ಇನ್ನಷ್ಟು ಹೊಸ ಹೂ ಗಿಡ ಗಳನ್ನು ನಾನು ತಂದು ಸೇರಿಸಿದೆ.

ನನ್ನ ಝೂಲಾ ಗೂ ಒಳ್ಳೆ ಜಾಗ ಸಿಗ್ತು. ಬೆಳಿಗ್ಗೆ ನಾಲ್ಕು ಗಂಟೆ ನನ್ನ ಮೊದಲ ಚಹಾ ಸೇವನೆಗೆ ಪ್ರಶಸ್ತವಾಗಿತ್ತು. ನಾನು ಕೂತಲ್ಲಿಂದ ISKCON ದೇವಳದ ಗೋಪುರದ ತನಕ clear view ಸಿಗುತ್ತಿತ್ತು. ಮಳೆ ಚಳಿಗಾಲದಲ್ಲೆಲ್ಲ ಸಖತ್ enjoyment. ದೂರದ ಗಿಡಮರದೆಡೆಯಲ್ಲಿ ಕಣ್ಣು ಮುಚ್ಚಾಲೆಯಾಡುವ ಬೀದಿ ದೀಪಗಳು, ಮಳೆ ನೀರಿನ ತರಹಾವರಿ direction ಗಳು, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಕುಳಿರ್ಗಾಳಿ ಮತ್ತು ಮಂಜು. ನಿಧಾನವಾಗಿ ಬೆಳಗು ಮೂಡುವುದನ್ನು ನೋಡುವುದು ಅತ್ಯಂತ ಸಂತಸದ ಸಂಗತಿ. ಮುಂಬೈನಲ್ಲಿದ್ದಾಗ ನಮ್ಮ ಐದನೆ ಮಹಡಿ ಕಿಟಕಿಯಿಂದ ನನಗೆ ಸಮುದ್ರ ಕಾಣುತಿತ್ತು. ಸಂಜೆ ನಾನು ಮತ್ತು ನನ್ನ ಫ್ರೆಂಡ್ ನಿಲಿಮಾ terrace ಮೇಲಿಂದ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಈಗ ಅವಳು ಬೆಂಗಳೂರಿನಲ್ಲಿದ್ದಾಳೆ.

ಬೆಂಗಳೂರಿಗೆ ಬಂದಾಗಲೆಲ ಅಮ್ಮನಿಗಂತೂ ತುಂಬ ಖುಶಿ..ಒಂದೊಂದು ದಿನ ಒಂದೊಂದು ದೇವಸ್ಥಾನ. ಮನೆಯ ಎದುರುಗಡೆ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮನೆಯ ಹಿಂಭಾಗದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ. (ಬಾತ್ ರೂಮ್ ನಿಂದ ಕಾಣುತಿತ್ತು). :-) ನಾವಿರುವ ಬೀದಿಯ entrance ನಲ್ಲಿ ,ಪಂಚಮುಖಿ ಗಣಪ, ವಾಸವಿ,ಬಸ್ ಸ್ಟಾಪ್ ಹತ್ತಿರ ಬಾಲಾಜಿ(ವೆಂಕಟರಮಣ)...ಇನ್ನು ಸ್ವಲ್ಪ ಮುಂದಕ್ಕೆ ಹೋದರೆ famous ಮಹಾಲಕ್ಷ್ಮಿ ಮತ್ತು ದೊಡ್ಡ ಹನುಮ....ಅಲ್ಲಿಂದ ಹತ್ತು ಹೆಜ್ಜೆ ನಡೆದರೆ ISKCON. ನಮ್ಮ ಮನೆಗೆ ಬಂದಾಗ, ಅಮ್ಮ ಯಾರೋಂದಿಗೋ ಫೋನ್ ನಲ್ಲಿ ಮಾತಾಡ್ತಾ ’ನಮ್ಮ ಮಾಲತಿಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ಏನಾಯ್ತು. ಅವಳ ಸುತ್ತ ಮುತ್ತ ಮಾತ್ರ ತುಂಬಾ ದೇವರುಗಳು ಇದ್ದಾರೆ’ ಅಂತ

ಇನ್ನೊಂದು ವಿಚಿತ್ರ ಸಂಗತಿಯೆಂದರೆ ನಮ್ಮ ಮನೆಯ ಔನರ್ ಹೆಂಡತಿ, ಪ್ರತಿ ವರ್ಷ ವರಮಹಾಲಕ್ಷ್ಮೀ ವೃತ ಹಾಗೂ ನವರಾತ್ರಿಯಲ್ಲಿನ ಶುಕ್ರವಾರದಂದು ನನಗೆ ಬೆಳಿಗ್ಗೆ 5 ಗಂಟೆಯ ಪೂಜೆಗೆ ಕರೆಯುತ್ತಿದ್ದರು. ನಾನು ಹೇಗೂ ಬೇಗ ಏಳುವುದು ಅವರಿಗೆ ಗೊತ್ತು. breakfast ಮಾಡದೇ ಬನ್ನಿ ಅಂತ ಒಂದು request ಇರುತ್ತಿತ್ತು. ಅವರು first time ಪೂಜೆಗೆ ಕರೆದಾಗಲೇ ನನಗೆ ದೇವರಲ್ಲಿ ನಂಬಿಕೆ ಇರದಿದ್ದು ಹೇಳಿದ್ದೆ. ಆದರೂ ಅವರು ಪೂಜೆಯ ದಿನ ನನ್ನ ಕಾಲು ತೊಳೆದು,ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ, ಕೈಗೆ ಹಸಿರು ಕೆಂಪು ಗಾಜಿನ ಬಳೆ ತೊಡಿಸುತ್ತಿದ್ದರು. ಹಣ್ಣು ಹಂಪಲು ಕೊಟ್ಟು ಕಳಿಸುತ್ತಿದ್ದರು. ನನಗಂತೂ ಸಿಕ್ಕಾ ಪಟ್ಟೆ ಮುಜುಗರ. ನಾವಲ್ಲಿರುವ 5 ವರ್ಷವೂ ಈ ಪ್ರಸಂಗ ಹೀಗೆ ಮುಂದುವರೆಯಿತು.

ಮತ್ತೆ, ನಾವು ಈಗಿರುವ ಮನೆಗೆ ತುಂಬ ಹತ್ತಿರದಲ್ಲಿ ದೊಡ್ಡ ಶನಿ ದೇವಸ್ಥಾನ. ಈಗ ಇಲ್ಲಿ ಬಂದಾಗ ಅಮ್ಮ ಕುಣಿದಾಡುವುದೊಂದೇ ಬಾಕಿ..ಯಾಕೆಂದ್ರೆ ಮನೆಯ ಹಿಂಬಾಗಿಲು ತೆಗೆದ್ರೆ, ಎದುರಿಗಿರುವ ಗೋಡೆ ನೆ ಶ್ರೀ ರಾಮ ಮಂದಿರದ್ದು. ನಾನು ಬಟ್ಟೆ ಒಣಗಿಸಲಿಕ್ಕೆ ಹಾಕುವಾಗಲೆಲ್ಲ ನನ್ನ ಕೈ ಹಲವಾರು ಸಲ ಅಂತು ಗೋಡೆಗೆ ತಾಗುತ್ತೆ.

ಇತ್ತೀಚಿಗೆ ಅಮ್ಮ ನನ್ನ ಜಾತಕ ಯಾರಿಗೋ ತೋರಿಸಿದ್ದರು. ನನಗೀಗ ಏಳುವರೆ ಶನಿ ಕಾಟವಂತೆ. ಪ್ರತೀ ಶನಿವಾರ ಶನಿದೇವರಿಗೆ ಮೂರು ಪ್ರದಕ್ಷಿಣೆ ಹಾಕಬೇಕಂತೆ..........
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹೇಳುತ್ತಾ

:-)



September 22, 2010

one day at the ನಂದಿ ಬೆಟ್ಟ

ದೇವನಹಳ್ಳಿ ಹೌಸಿಂಗ್ ಸೊಸೈಟಿಯ Annual General Body ಮೀಟಿಂಗ್ ಇತ್ತು. ಊಟ ಆದ ಮೇಲೆ ಸುಮ್ಮನೆ ನಂದಿ ಬೆಟ್ಟಕ್ಕೆ ಹೋಗಿದ್ವಿ. ಕೆಲವು ಚಿತ್ರಗಳು
ಬೆಟ್ಟಕ್ಕೆ ಹೋಗುವ ದಾರಿಯಲ್ಲಿ, ಕಾರ್ ನಿಂದ ತೆಗೆದ ಫೋಟೊ
just look at the view
ಬೆಟ್ಟದಲ್ಲಿ, ದೇವಸ್ಥಾನದಲ್ಲಿ ಸಾಕಷ್ಟು ಜನರಿದ್ದರೂ, ಸೋಜಿಗದ ವಿಷಯವೆಂದರೆ ಪುಷ್ಕರಣಿಯ ಬಳಿ ಯಾರೂ ಇರಲಿಲ್ಲ.
ಪುಷ್ಕರಣಿ ಮೆಟ್ಟಿಲಲ್ಲಿ ಅರಳಿದ ಪುಟ್ಟ ಪುಟ್ಟ ಹೂಗಳು
:-)
ಮೋಡ, ಜಿಟಿ ಜಿಟಿ ಮಳೆ, ಸ್ವಲ್ಪ ಗಾಳಿ..ಚೆನ್ನಗಿತ್ತು ವಾತಾವರಣ
ಇನ್ನಷ್ಟು ಮೋಡ...smile please
ದೂರದಲ್ಲಿ ಮಳೆ
ನಿಹಾರಿಕಾ ನಮ್ಮನ್ನೆಲ್ಲ ನಗಿಸಿ ಫೋಟೊ ತೆಗೆದದ್ದು
ತುಂಬ edge ನಲ್ಲಿ ನಿಂತಿದ್ದ ಈ ಹುಡುಗ
ಈ ಮಂಗವನ್ನು ಹುಡುಗರು ಕೆಣಕಿ ಸುಮಾರು ಜನರಿಗೆ ತೊಂದರೆಯಾಯಿತು.
ಪುಷ್ಕರಣಿ entrance
ಹೆ ಹೆ !! ನಾನು ತೆಗೆದದ್ದು ಅಂತ ಎಲ್ಲರಿಗೂ ಗೊತ್ತಾಯ್ತಲ್ಲ!!
ಛೋಟಾ ಬೆಟ್ಟ
just like that
ಬೆಟ್ಟದ ಬುಡದಲ್ಲಿ ಮನೆಗಳು
google map ತರಹ ಕಾಣುತಿತ್ತು
ಮೋಡ- ಮಳೆ
ಆ ಪರಿವಾರದವರು ತಮ್ಮ ಪಾಡಿಗೆ ಊಟ ಮಾಡ್ತಾ ಇದ್ದರು. ಮಂಗಗಳ ಕಾಟದಿಂದ ತಟ್ಟೆಗಳನ್ನು ಹಿಡಿದು ಈಚೆಗೆ ಬರುತ್ತ ಇರುವುದು.
ಅಕ್ಕ ತಂಗಿ ಜೋಡಿ

ವಾಪಸ್ ಬರುವಾಗ ದಾರಿಯಲ್ಲಿ..

We enjoyed the Sunday
:-)