orchids/ಆರ್ಕಿಡ್ಸ್. ಕನ್ನಡದಲ್ಲಿ ಸೀತಾಳ ದಂಡೆ. ಎಷ್ಟು ಚೆಂದದ ಹೆಸರಲ್ಲವೇ? 😊
ನಮ್ಮ ತೋಟದಲ್ಲಿ ಅಡಿಕೆ ಮರದ ಮೇಲೆ, ಕಲ್ಲು ಪೊಟರೆಯಲ್ಲಿ ತನ್ನಿಂದ ತಾನೆ ಬೆಳೆಯುವ ಸೀತಾಳ ದಂಡೆಯ ಒನಪೇ ಬೇರೆಯದು.
ನಿನ್ನೆ ಮೊನ್ನೆ ಎರಡು ದಿನ St. joseph's university, Langford Road, ಇಲ್ಲಿ ಎರಡು ದಿನದ Orchids show ನಡೆಸಲಾಯಿತು. ನಾವು ಶನಿವಾರ ರಾತ್ರಿಯಷ್ಟೇ ತೀರ್ಥಹಳ್ಳಿಯಿಂದ ಬೆಂಗಳೂರು ತಲುಪಿದೆವು. ಭಾನುವಾರ ಆಪ್ಟೆಷ್ಟ್ರರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಷೋ ಗೆ ಹೊರಟೆವು. ಎಷ್ಟೊಂದು ಚೆಂದದ ಹೂಗಳನ್ನು ನೋಡಲು ಎರಡು ಕಣ್ಣು ಸಾಲದಾದವು. ಅದೊಂದು ಬೇರೆಯದೆ ಲೋಕ. ಈ ಶೋ ಗೆ ಆಮಂತ್ರಣ ಶ್ರೀಕಾಂತ್ ಗೆ ನನ್ನ ಸ್ನೇಹಿತೆ ರಾಧಿಕಾ ಗಂಗಣ್ಣ ಮೂಲಕ ಸಿಕ್ಕಿತ್ತು. ಅವರ ಅಣ್ಣ ಪುರುಷೋತ್ತಮ್ TOSKAR* ಗುಂಪಿನ ಸದಸ್ಯರು. ಅವರ ಮನೆಯ ಮಹಡಿ ಮೇಲೆ ಸುಮಾರು ಆರ್ಕಿಡ್ ಹೂ ಗಳನ್ನು propogate ಮಾಡಿದ್ದಾರೆ/ಮಾಡುತ್ತಿದ್ದಾರೆ.
ಆರ್ಕಿಡ್ ಹೂ ಗಳು ಇತರ ಹೂವಿನಂತೆ ಅಲ್ಲ. ಅವನ್ನು ತುಂಬಾ ಕಾಳಜಿ, ಸಂಯಮ ದಿಂದ ಪೋಷಿಸಬೇಕು/ಸಾಕಬೇಕು/ಸಲಹಬೇಕು. ನಾನು ಯಾವುದೇ ಗಿಡ, ಬಳ್ಳಿ , ಹಣ್ಣು ತರಕಾರಿ ಬೆಳೆಸ ಬಲ್ಲೆ, ಆದರೆ ಆರ್ಕಿಡ್ಸ್ ನನ್ನ ಕೈಯಲ್ಲಿ ಬದುಕಿಲ್ಲ. ಸುಮಾರು ಪ್ರಯತ್ನ ಮಾಡಿದ್ದಿದೆ.,😔😔.
ಇಂತಹ ಒಂದು ಗುಂಪು ಇದ್ದದ್ದೇ ಗೊತ್ತಿರಲಿಲ್ಲ. ಈ ಸಲ ಹಲವಾರು ಪರಿಣಿತರು, ಪುರುಷೋತ್ತಮ ಅವರನ್ನೂ ಒಳಗೂಡಿ, ಸಲಹೆ ಸೂಚನೆ ನೀಡಿದ್ದಾರೆ, ಹಾಗಾಗಿ ಕೆಲವು ಹೂಗಳನ್ನು ಕೊ0ಡು ತಂದಿದ್ದೇನೆ....ನೋಡುವಾ
TOSKAR : The Orchid Society Of Karnataka
ಕೆಲ ಚಿತ್ರ ನಿಮಗಾಗಿ
























