December 13, 2009

ಜವೆ ಗೋದಿ ರವೆ ಉಪ್ಪಿಟ್ಟು

ಜವೆ ಗೋದಿ ರವೆ (emmer wheat rawa) ಯಿಂದ ಮಾಡಿದ ಉಪ್ಪಿಟ್ಟು ಮತ್ತು pineapple ಪುಡ್ಡಿಂಗ್ ಚಿತ್ರ.
scientific name : triticum turgidum (emmer/Durum Wheat)

ಇತರೇ ಗೋದಿಗಳಿಗೆ compare ಮಾಡಿದರೆ ಜವೆ ಗೋದಿಯಲ್ಲಿ ಹೆಚ್ಚಿನ ಪೋಷಕಾಂಶವಿದೆಯಿದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ನಾರಿನಂಶ (fibre) ಇದ್ದು ಇದರಲ್ಲಿ ಕೊಬ್ಬು ಮತ್ತು ಪಿಷ್ಟಾಂಶದ ಪ್ರಮಾಣ ಕಡಿಮೆ ಇದ್ದುದರಿಂದ ಮಧುಮೇಹಿ ಹಾಗೂ ಹೃದ್ರೋಗಿಗಳಿಗೆ ಹೇಳಿ ಮಾಡಿಸಿದಂತಹ ಆಹಾರ. ಉಪ್ಪಿಟ್ಟು ತಯಾರಿಸುವುದು ಸುಲಭ.

ಉಪ್ಪಿಟ್ಟನ್ನು ಹೇಗೆ ತಯಾರಿಸುತ್ತೀರೋ ಹಾಗೆ ತಯಾರಿಸಿ. ಇದಕ್ಕೆ ಎಣ್ಣೆ ಕಡಿಮೆ ಹಾಕಿದ್ರೆ ಒಳ್ಳೆಯದು. ಮತ್ತೆ ಸಾಧಾರಣವಾಗಿ ನಾವು 1 ಕಪ್ ರವೆ ಬಳಸಿದ್ರೆ 2 ಕಪ್ ನೀರು ಹಾಕ್ತೇವೆ. ಜವೆ ಗೋದಿ ಉಪ್ಪಿಟ್ಟಿಗೆ 3 ಕಪ್ ನೀರು ಬೇಕಾಗುತ್ತದೆ. ಕೊನೆಯಲ್ಲಿ ಒಂದು ಟಿ.ಚಮಚ ತಾಜಾ ತುಪ್ಪ,ಕೊಬ್ಬರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ.
ನಾನು ಬಿಸಿ ಬೆಳೆ ಭಾತ್ ಮಾಡಿ ಅದಕ್ಕೆ ಅಕ್ಕಿ/ಅನ್ನದ ಬದಲಿಗೆ ಈ ರವೆ ನೀರಿನಲ್ಲಿ ಬೇಯಿಸಿ, ಬಳಸಿದ್ದೇನೆ. ಟೇಸ್ಟ್ ತುಂಬ ಚೆನ್ನಾಗಿರುತ್ತದೆ.
ಈ ರವೆಯಿಂದ ಮಾಡಿದ ತಿನಿಸಿನಿಂದ ತಿಂದಾಗ ಹೊಟ್ಟೆ ತುಂಬಿದಂತೆ ಇದ್ದು, ಬೇಗ ಹಸಿವೆಯಾಗುವುದಿಲ್ಲ. ಈ ಗೋದಿಯ ಹಿಟ್ಟಿನಿಂದ ಮಾಡಿದ ಚಪಾತಿನೂ tasty ಯಾಗಿರುತ್ತೆ.
ಆದರೆ ದುರದೃಷ್ಟವಶಾತ್ ಪೇಟೆಯಲ್ಲಿನ ಸುಮಾರು ಜನರಿಗೆ ಈ ಉತ್ಪನ್ನದ ಬಗ್ಗೆ ಗೊತ್ತಿಲ್ಲ. ಹಾಗಾಗಿ demand ಇಲ್ಲದೇ ಈಗ ಜವೆ ಗೋದಿ ರವೆ ಇಲ್ಲಿ ಅಲಭ್ಯ.ನನ್ನ ಚಿಕ್ಕಪ್ಪನಿಗೆ ಚೆನ್ನಗಿ ಊಟ ತಿಂಡಿ ಮಾಡ ಬೇಕು. routine ವೈದಕೀಯ ತಪಾಸಣೆಯಲ್ಲಿ ಡಯಾಬಿಟಿಸ್ ಉಲ್ಬಣಗೊಂಡಿದ್ದು ಪತ್ತೆಯಾಯಿತು. ನಮ್ಮಲ್ಲಿ ಬಂದಾಗ ಈ ತರಹ ಬಿಸಿ ಬೆಳೆ ಭಾತ್ ಮಾಡಿ ಕೊಟ್ಟಾಗ ಅವರು ತುಂಬ ಖುಶಿ ಪಟ್ಟರು ಹಾಗೇ 5 ಕೆ.ಜಿ ಪ್ಯಾಕೆಟ್ ರವೆ ಸಹ ತೆಗೆದುಕೊಂಡು ಹೋಗಿದ್ದರು. ಈಗ ಅವರಿಗೆ ಈ ರವೆ ಸಿಗುತ್ತಿಲ್ಲ.
ಲಾಸ್ಟ್ ಒಂದೇ ಪ್ಯಾಕೆಟ್ ಉಳಿದಿದ್ದ ರವೆ ಯಿಂದ ಈ ಉಪ್ಪಿಟ್ಟು, pineapple pudding ಮಾಡಿದ್ದೇನೆ. ಚಿತ್ರ ನೋಡಿ ಆನಂದಿಸಿ ..ಹಾ ಹಾ ಹಾ

:-)

December 9, 2009

December 6, 2009

ಆತಂಕದ ಕ್ಷಣಗಳು

ಡಿಸೆಂಬರ್ 7, 1992. ಬೆಳಿಗ್ಗೆ ಹೆರಿಗೆ ನೋವು ಶುರು ಆಯ್ತು. ಹಿಂದಿನ ದಿನ ರಾತ್ರಿ ಅಂದರೆ 6 ನೆ ತಾರೀಕಿಗೆ ಅಯೋಧ್ಯೆಯಲ್ಲಿ ಬಾಬ್ರಿ ಮಸ್ಜಿದ್ ಕೆಡವಲಾಗಿದೆ ಎಂದು ಸುದ್ದಿ. ಪರಿಸ್ಥಿತಿ ಅಷ್ಟು ವೀಕೋಪಕ್ಕೆ ಹೋಗುವುದೆಂದು ಖಂಡಿತ ತಿಳಿದಿರಲಿಲ್ಲ. ನಮ್ಮ ಮನೆ ಇರೋದು ಸಾತ್ ಬಂಗ್ಲೆಯಲ್ಲಿ. ಆಸ್ಪತ್ರೆ ಮನೆಯಿಂದ ಅರ್ಧ ಕಿಲೋಮೀಟರ್(ಚಾರ್ ಬಂಗ್ಲಾ- ಮನೀಶ್ ನಗರ್) ಅಷ್ಟೆ. ನಾನು ಅಮ್ಮ ಹಿಂದಿನ ಗಲ್ಲಿಯಿಂದ ನಡೆದುಕೊಂಡು ಹೋದ್ವಿ, . ಸಂಜೆ ಹೊತ್ತಿಗೆ ನನಗೆ ಹೆರಿಗೆಯಾಯ್ತು. ರಾತ್ರಿ ಮನೆಯಿಂದ ಊಟ, ಕೆಲವು ಬಿಸ್ಕತ್, ಹಣ್ಣುಗಳನ್ನು ತಮ್ಮ ತಂದು ಕೊಟ್ಟ.
ಮರುದಿನ ಬೆಳಿಗ್ಗೆ ನಮಗೆಲ್ಲ ಆಸ್ಪತ್ರೆಯಲ್ಲೇ ಟೀ ಮತ್ತು ಬಿಸ್ಕತ್ತ್ ಸಿಕ್ತು. ಆಮೇಲೆ (ಹಿಂದು ಮುಸ್ಲಿಂ) ಗಲಾಟೆ ಶುರು ಆಗಿ ಎಲ್ಲ ಬಂದ್. ಮಧ್ಯಾನ್ಹ ತಮ್ಮ ಊಟ ತರಬೇಕಾದ್ರೆ ಅವನಿಗೆ ಲಾಠಿ ಏಟು ಬಿದ್ದು, ಅಲ್ಲಿನ constable 'ಕಹಾಂ ಜಾ ರಹೇ ಹೋ’ ಅಂತ ಕೇಳಿದ್ರಂತೆ. ಅವನು ಊಟದ ಡಬ್ಬಿ ತೋರಿಸಿ ಆಸ್ಪತ್ರೆಗೆ ಹೋಗ್ತಾ ಇದ್ದೇನೆ ಅಂತ ಹೇಳಿದ್ದಕ್ಕೆ, ತಮ್ಮನ ಮುಖ ಪರಿಚಯ ಇರುವ ಮತ್ತೊಬ್ಬ constable ’ಪೀಛೆವಾಲಿ ಗಲ್ಲಿ ಸೇ ಜಾಒ”ಅಂದನಂತೆ. ಆಸ್ಪತ್ರೆ ತಲುಪುವಷ್ಟರಲ್ಲಿ ತಮ್ಮನ ಕೈ ಊದಿ ನೀಲಿ ಬಣ್ಣಕ್ಕೆ ತಿರುಗಿತು. ನನಗೆ ತುಂಬ ಕೆಟ್ಟದೆನಿಸಿತು.ರಾತ್ರಿ ಬರಬೇಡ ಅಂತ ಹೇಳಿದೆ. ಆದರೆ ರಾತ್ರಿ ಅವನಿಗೆ ಬರಲಿಕ್ಕೆ ಆಗದೇ ಇರುವಷ್ಟು ಗಲಾಟೆ ಶುರು ಆಯ್ತು. ಕರ್ಫ್ಯು ಹಾಕಿದ್ರು. ಹೆರಿಗೆಗೆ ದೂರದಿಂದ ಬಂದ ಇತರೇ ನಾಲ್ಕು patients ಗೆ ಊಟ ಬರಲೇ ಇಲ್ಲ. ಆಸ್ಪತ್ರೆಯಲ್ಲಿರುವ stock ನಲ್ಲಿದ್ದ ಹಾಲು, ಬಿಸ್ಕತ್ತು ಖರ್ಚಾಯಿತು. ನಮಗೆ ಹೊರಗೆ ನಡೆದಿರುವ ಗಲಾಟೆ ಕೇಳಿಸ್ತಾ ಇತ್ತು. ಆಸ್ಪತ್ರೆ main road ನಲ್ಲಿರದೇ, ಎರಡು ಕಟ್ಟಡಗಳ ಮಧ್ಯ ಇದ್ದುದರಿಂದ , ಪಕ್ಕನೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. safe ಅನ್ನಿಸ್ತು. ನಮ್ಮೊಂದಿಗೆ ಇಬ್ಬರು resident ನರ್ಸ ಗಳೂ ಹಾಗೂ ಅನುಸೂಯಾ ಎಂಬ ದಾಯಿ ಇದ್ದರು.ನನಗೆ ಹೆರಿಗೆ ಮಾಡಿಸುವಲ್ಲಿ assist ಮಾಡಿದ ನರ್ಸ್ ಹೆಸರು ಸಾಯಿರಾ. ಪಳಗಿದ ಕೈ, ಸ್ನಿಗ್ದ, ನಗು ಮುಖದ ಮುಸ್ಲಿಂ ನರ್ಸ್. ಬುರ್ಖ ಹಾಕಿಕೊಂಡು ಬರುವುದು, ಹೋಗುವುದು. ನಮ್ಮ ಮರಾಠಿ ಡಾಕ್ಟರ್ ನ favorite ನರ್ಸ್. ಡಾಕ್ಟರ್ ಹತ್ತಿರ ಟ್ರೈನಿಂಗ್ ಪಡೆದವರು, ಆದರೆ ಅಸ್ಪತ್ರೆಗೆ ಬರುವಾಗ ಹಾಗೂ ಅಲ್ಲಿಂದ ಮನೆಗೆ ಹೋಗುವಾಗ ಅವರ ಗಂಡ ಬಂದೇ ಕರೆದುಕೊಂಡು ಹೋಗುವುದು.
ರಾತ್ರಿಯಾಗುತ್ತಿದ್ದಂತೆ ಗಲಾಟೆಯ ಸದ್ದು ಸ್ಪಷ್ಟವಾಗಿ ನಮಗೆ ಕೇಳಿಸಹತ್ತಿತ್ತು. ಮಲಯಾಳಿ ನರ್ಸ್ ಗಳಂತೂ ಏಸುವಿನ ಪದ್ಯ, ಬೈಬಲ್ ಓದಲು ಶುರು ಮಾಡಿದರು. ಅದುವರೆಗೆ ಅವರು ಕ್ರಿಶ್ಚಿಯನ್ನರು ಅಂತ ನನಗೆ ತಿಳಿದಿರಲೇ ಇಲ್ಲ. :-)
ನನ್ನ ಬಳಿ ಇದ್ದ ಉಟ/ಚಪಾತಿ ಆಸ್ಪತ್ರೆಯಲ್ಲಿರುವವರ ಜತೆ ಹಂಚಿಕೊಂಡೆ. ಮುಂದಿನ ನಾಲ್ಕು ದಿನ ನನ್ನ ಬಳಿಯಿರುವ ಹಣ್ಣು, ಬಿಸ್ಕತ್ತ್ ನಿಂದಲೇ ನಾವೆಲ್ಲ ಹೊಟ್ಟೆ ತುಂಬಿಸಿಕೊಂಡ್ವಿ. ಐದನೇ ದಿನ ವತಾವರಣ ಸ್ವಲ್ಪವೇ ಸ್ವಲ್ಪ ತಿಳಿ ಗೊಂಡಿತು. ಅಮ್ಮ ಮತ್ತು ತಮ್ಮ ,ಪರಿಚಯದವರ ಕಾರ್ ಮಾಡಿಕೊಂಡು ಬೇಗ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಬರುವ ಮುಂಚೆ ಆಸ್ಪತ್ರೆಗೆ ಫೋನ್ ಮಾಡಿದ್ರಿಂದ ನಾನು ಅಮ್ಮನಿಗೆ ಉಳಿದವರ ಬಗ್ಗೆ ಹೇಳಿದೆ. ಅಮ್ಮ ಅವರಿಗೆ light ಆದ ಪಲಾವ್ ಮತ್ತು ಚಪಾತಿ ಪಲ್ಯ ಮಾಡಿ ತಂದಿದ್ದರು. fridge ನಲ್ಲಿಡಲು , ನಾಲ್ಕು ದಿನ ಸಾಕಾಗುವಷ್ಟು ಅಡಿಗೆ ಮಾಡಿ ತಂದಿದ್ದರು.
ನನ್ನ ತಮ್ಮನ ಫ್ರೆಂಡ್ ರಾಜು ಆವಾಗಷ್ಟೆ ’video box’ ಅನ್ನುವ ವಿಸಿಪಿ(Video Casette Players- (ಕೆಲವರಿಗಾದರೂ ಇದರ ನೆನೆಪು ಇದೆಯೆಂದು ಭಾವಿಸುತ್ತೇನೆ),( ನನ್ನ ತಂದೆಯ ಸಹಾಯದಿಂದ, ಬ್ಯಾಂಕ್ ಲೋನ್ ಪಡೆದುಕೊಂಡು) ಬಾಡಿಗೆ ಕೊಡುವ ಅಂಗಡಿ ತೆರೆದಿದ್ದ. ರಾಜು ಅಂಗಡಿ ಪಕ್ಕ ಮುಸ್ಲಿಮ್ ಒಬ್ಬರ ಹಣ್ಣಿನ ರಸ ಮಾರುವ ಅಂಗಡಿಯಿತ್ತು. ಖಂಡಿತ ಗಲಾಟೆಯಾದ್ರೆ ಅಂಗಡಿ ದ್ವಂಸವಾಗುತ್ತೆ ಅಂತ ಅವನಿಗೆ ಗೊತ್ತಿತ್ತು. ಸ್ವಲ್ಪ ಸ್ವಲ್ಪ ಮಾಡಿ ಅವನ ಅಂಗಡಿಯಲ್ಲಿರುವ ಸಾಮಾನು/casette ಗಳನ್ನೆಲ್ಲ ನಮ್ಮ ಮನೆಗೆ ಸಾಗಿಸಿದರು. ಪೂರ್ತಿ ಸಾಮಾನೆಲ್ಲ ಸಾಗಿಸುವಷ್ಟರಲ್ಲಿ ಪುನಃ ಕರ್ಫ್ಯು ಶುರು ಆಯ್ತು. ಅವರು ಎಣಿಸಿದ ಹಾಗೆ ರಾತ್ರಿ ಅವನ ಪಕ್ಕದ ಅಂಗಡಿಗೆ ಬೆಂಕಿ ಹಚ್ಚಲಾಯಿತು. ರಾಜು ನ ಅಂಗಡಿಗೂ ಸ್ವಲ್ಪ ಬೆಂಕಿ ತಗುಲಿತು.
ಮಜವಾದ ವಿಷಯವೆಂದರೆ ಅಲ್ಲಿರುವ ರಾಮ್-ರಹೀಮ್ ಎಣ್ಣೆ ಅಂಗಡಿ. ಅದಕ್ಕೆ ಮಾತ್ರ ಯಾರೂ ಎನೂ ಮಾಡಲಿಲ್ಲ. ಒಟ್ಟಿಗೆ ನಮ್ಮ ಬಿಲ್ಡಿಂಗ್ ನಲ್ಲಿ 42 ಮನೆಗಳಿದ್ದವು. ಅದರಲ್ಲಿ ಎರಡು ಮಾತ್ರ ಮುಸ್ಲಿಂ ಕುಟುಂಬಗಳಿದ್ದವು.ಪಾಪ ತುಂಬ ಹೆದರಿ ಕೊಂಡಿದ್ದರು. ಆದರೆ ನಾವು ಅವರನ್ನು ಏನೂ ಆಗದಂತೆ ಕಾಪಾಡುವ ಪೂರ್ಣ ಭರವಸೆ ನೀಡಿದ್ದೆವು. ವಾಚ್ ಮ್ಯಾನ್ ಜತೆ ಬಿಲ್ಡಿಂಗ್ ನ ಹಲವಾರು ಮಕ್ಕಳು ರಾತ್ರಿ ಬಿಲ್ಡಿಂಗ್ ಸುತ್ತ ಗಸ್ತು ತಿರುಗುತ್ತಿದ್ದರು. ಕಂಪೌಂಡ್ ದೊಡ್ಡದಾಗಿರದಿದ್ದರೂ. ಗೇಟ್ ಗೆ ಮಾತ್ರ ದೊಡ್ಡ ಬೀಗ ಜಡಿಯಲಾಯಿತು. ಟೆರೆಸ್ ಮೇಲೂ ಕೆಲವರು watch ಮಾಡಲು ಇದ್ದರು. ಏಳನೆ ಮಹಡಿಯಲ್ಲ್ಲಿರುವ ನಮಗೆ,ಕಿಟಕಿಯಿಂದ ತಲೆ ಹೊರಗೆ ಹಾಕಿದ್ದರೆ ಕೆಲವು ಕಡೆ ಬೆಂಕಿ, ಹೊಗೆ ಬರುವುದು ಕಾಣುತ್ತಿತ್ತು. ಆದರೂ ನನಗೆ ಅನಿಸುವುದುಂಟು. ನಾವು ಎಷ್ಟೆ ಆಶ್ವಾಸನೆ ನೀಡಿದ್ದರೂ ಆ ಎರಡು ಮುಸ್ಲಿಂ ಪರಿವಾರದವರು ಎಷ್ಟು ಹೆದರಿ ಕೊಂಡಿರಬೇಕು? mob mentality /mob psyche / mass hysteria ಆದಾಗ ಕೆಲವೊಮ್ಮೆ ಮನುಷ್ಯರ ಮನಸ್ಸು ಹೇಗೆ ಉಲ್ಟಾ ಹೊಡೆಯುತ್ತದೆ ಎಂದು ತಿಳಿಯುವುದಿಲ್ಲ. ಒಳ್ಳೆಯವರು ಕ್ಷಣದಲ್ಲಿ ಬಣ್ಣ ಬದಲಾಯಿಸುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ.ಆ ಮೇಲೆ ಅವರು ಪಶ್ಚಾತಾಪ ಪಟ್ಟಿದ್ದು ಉಂಟು.
ಇಂದಿರಾಗಾಂಧಿ ಗೆ ಗುಂಡಿಟ್ಟು ಕೊಂದಾಗ ಇಂತಹುದ್ದೆ ಪರಿಸ್ಥಿತಿ ಆಗಿತ್ತು. ಆವಾಗ ಸಿಖ್ ಸಮುದಾಯದವರನ್ನು ಹಿಡಿದು ಹೋಡೀತಾ ಇದ್ದರು. ರಸ್ತೆ ಎಲ್ಲ ನಿರ್ಜನ, ಗುಂಪಾಗಿ ಗಲಾಟೆ ಮಾಡುವವರನ್ನು ಬಿಟ್ಟು.
ಪರಿಸ್ಥಿತಿ ಸುಧಾರಿಸುವವರೆಗೆ necessary provision ಗೂ ಪರದಾಟ, ಎಷ್ಟೊಂದು ಆತಂಕ. Life came to a stand still.
ದರ್ಮದ ಹೆಸರಿನಲ್ಲಿ ಏನೆಲ್ಲ ಅತ್ಯಾಚಾರಗಳು ನಡೆದವೋ ಅದನ್ನೆಲ್ಲ ಟೇಪ್ ಮಾಡಿದ್ರು. ನೋಡಿ ದಿಗಿಲಾಯಿತು. ಜನರು ಈ ತರಹ behave ಮಾಡ್ತಾರಾ ಅಂತ ಅನ್ನಿಸ್ತು.
ನನ್ನ ಮಗಳಿಗೆ ಕರ ಸೇವಕಿ ಹೆಸರು ಇಡಲು ಎಲ್ಲರೂ ಸೂಚಿಸಿದ್ದರು. :-) ಆದರೆ ಅವಳ ಹೆಸರು ನಿಹಾರಿಕಾ.
ಇದಾದ ಕೆಲವೇ ತಿಂಗಳಲ್ಲಿ 12 ಮಾರ್ಚ್ 1993 ಸಿರಿಯಲ್ ಬಾಂಬ್ ಬ್ಲಾಸ್ಟ್ ಗಳು. ಆ ದಿನ ಅಮ್ಮ ಅವರ ಗೆಳತಿಯನ್ನು ಕಾಣಲು ಸುಮಾರು 11.00 ಗಂಟೆಗೆ ಚರ್ನಿ ರೋಡ್ ಗೆ ಹೋಗಿದ್ದರು. ಸಾಧರಣ ಒಂದು ವರೆ ಗಂಟೆಗೆ ಸುಮಾರು ಕಡೆ ಬಾಂಬ್ ಇಡಲಾಗಿದೆ ಎಂದು ತಿಳಿಯಿತು. ಆಗ ಸೆಲ್ ಫೋನ್ ಗಳು ಇನ್ನೂ ಬಂದಿರಲಿಲ್ಲ. ಅಮ್ಮನ ಸ್ನೇಹಿತೆಗೆ ಫೋನ್ ಮಾಡಿದಾಗ , ಅಮ್ಮ ಆಗಲೇ ಅಲ್ಲಿಂದ ಹೊರಟಿದ್ದಾರೆ ಎಂದು ತಿಳಿಯಿತು. ಅಮ್ಮ ಬರುವ ಬಸ್ ರೂಟ್ ನಲ್ಲೇ ಒಂದೊಂದಾಗಿ ಬಾಂಬ್ ಸ್ಫೋಟಿಸುತ್ತಿದ್ದವು. ನಾವೆಲ್ಲರೂ ಏನೂ ಮಾಡಲು ತೋಚದೆ, ಗಂಟಲಲ್ಲಿ ಅಳು ಇಟ್ಟುಕೊಂಡು ಎಲ್ಲ ಕಿಟಕಿಗಳಿಂದ ಹೊರಗೆ ಅಮ್ಮನ ಬರವನ್ನು ಕಾಯುತ್ತಿದ್ದೆವು. ಪುಟ್ಟ ನಿಹಾರಿಕಾ ಅಳ್ತಾ ಇದ್ದಳು. ಅವಳು ಹಾಲು ಉಣಿಸಲು ಹೋದಾಗ, ನನಗಾಗಿರುವ tension ಗೊತ್ತಾದಂತೆ ಸುಮ್ಮನೆ ಅಳ್ತಾ ಇದ್ದಳು ವಿನಃ ಹಾಲು ಕುಡಿಯಲೇ ಇಲ್ಲ.
ತಮ್ಮಂದಿರು ಪಾಪ ಬಿಲ್ಡಿಂಗ್ ಗೇಟ್ ಬಳಿ. ಸುಮಾರು 6.00 ಗಂಟೆಗೆ ಅಮ್ಮ ಬಂದ್ರು. ಮನಸ್ಸಿಗೆ ನಿರಾಳ. ತಂದೆ relief ಆಗಿ ಅಮ್ಮನಿಗೆ ಬೈದು ಬಿಟ್ರು. ಬಸ್ ರೂಟ್ ನ ಎರಡು ಕಡೆ ಬಾಂಬ್ ಬ್ಲಾಸ್ಟ್ ನೋಡಿ, ಬಸ್ ಡ್ರೈವರ್ ಸ್ವಲ್ಪ ತಲೆ ಉಪಯೋಗಿಸಿ, ಬೇರೆ ರೂಟ್ ನಲ್ಲಿ ಗಲ್ಲಿ ಗಲ್ಲಿ ತಿರುಗಿಸಿ ನಮ್ಮ ಮನೆಯ ಬಳಿ ಇರುವ ಕೊನೆಯ ನಿಲ್ದಾಣಕ್ಕೆ ಪ್ರಯಾಣಿಕರನ್ನು ತಲುಪಿಸಿದನಂತೆ. ಅಮ್ಮ ಕಂಡ ಹಾಗೆ ಜುಹು ರೋಡ್ ನಲ್ಲಿ ಒಂದು ಡಬಲ್ ಡೆಕ್ಕರ್ ಬಸ್ಸಿನ ಬಹುತೇಕ ಭಾಗ ಇರಲಿಲ್ಲವಂತೆ. ಕೆಲವರ ಕೈ, ಕಾಲು, ತಲೆ, ಮಾಂಸ ಎಲ್ಲ ರಸ್ತೆಯಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ವಂತೆ.ಕೆಲವು ಮನೆಗಳ ಛಾವಣಿನೆ ಹಾರಿ ಹೋಗಿತ್ತಂತೆ. ಒಂದು ಸೀಟ್ ಬಳಿ ಹುಡುಗಿಯ ಕೇವಲ ಎರಡೂ ಬೂಟುಗಾಲು ಮಾತ್ರ ಇತ್ತಂತೆ. ಉಳಿದ ಭಾಗ ಎಲ್ಲೋ?
ನಮ್ಮ ಬಿಲ್ಡಿಂಗ್ ನಲ್ಲಿರುವವರ ಸುಮಾರು ಜನರ ಪತ್ತೇನೆ ಇರಲಿಲ್ಲ. ಅದರಲ್ಲಿ ಕೆಲವರು ಫೋನ್ ಮಾಡಿ ಸ್ನೇಹಿತರ ಮನೆಯಲ್ಲಿರುತ್ತೇವೆಂದರು. ಒಬ್ಬರ ದೇಹ ಮೂರನೆ ದಿನ ಎಂಬುಲೆನ್ಸ್ ನಲ್ಲಿ ತಂದರು.ಅವರು ಬಾಂಬೆ ಸ್ಟಾಕ್ Exchange ನಲ್ಲಿ ಕೆಲಸಕ್ಕಿದ್ದರು.ಒಂದು ಕೈ ಇರಲಿಲ್ಲ. ಬಲ ಕಣ್ಣಿನ ಬಳಿ ಬಹುಭಾಗ ಹೋಗಿತ್ತು. ಪ್ಯಾಂಟ್ ಕಿಸೆಯಲ್ಲಿರುವ ಐಡೆಂಟಿಫಿಕೇಶನ್ ಕಾರ್ಡ್ ನಿಂದ ಅವರ ಮನೆಯ ವಿಳಾಸ ಸಿಕ್ಕಿ ಅವರ ದೇಹವನ್ನು ಮನೆಗೆ ತಂದಿದ್ದರು.client ಜತೆ ಮೀಟಿಂಗ್ ಗೆ ಹೊರಡಲು ಅನುವಾಗಿ basement ನಿಂದ ಕಾರ್ ಹೋರಗೆ ತೆಗೆಯುವಾಗ ತುಂಬ ಹತ್ತಿರದಿಂದ blast ನಲ್ಲಿ ಸಿಕ್ಕಿ ಹಾಕಿಕೊಂಡರು ಅನ್ನಿಸುತ್ತೆ.ಹೊರಡುವ ಮುಂಚೆ ಮನೆಗೆ ಫೋನ್ ಮಾಡಿದ್ದೆ ಅವರ ಕೊನೆಯ ಮಾತು.ಅವರ ಮನೆಯ ದೃಶ್ಯ ಹೃದಯವಿದ್ರಾವಕವಾಗಿತ್ತು.ಮನೆಯಲ್ಲಿ ಪುಟ್ಟ ಪುಟ್ಟ ಎರಡು ಮಕ್ಕಳು. ಏನಂತ ಸಮಾಧಾನ ಮಾಡುವುದೆಂದೇ ತಿಳಿಯಲಿಲ್ಲ.
ಬಿಲ್ಡಿಂಗ್ ನಲ್ಲಿ ಎಲ್ಲ ಹಬ್ಬಗಳನ್ನು ನಾವು ಕೂಡಿ ಮಾಡುವ ಪರಿಪಾಠವಿತ್ತು. ಈ ಘಟನೆ ನಡೆದ ವರ್ಷ ನಾವು ಬಿಲ್ದಿಂಗ್ ನಲ್ಲಿ ಯಾವುದೇ ಸಮಾರಂಭ, ಹಬ್ಬ ಮಾಡಲಿಲ್ಲ.
ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ. ಎಷ್ಟೆಲ್ಲ ಸಾವು, ನೋವು. ಇದೆಲ್ಲ ಮರೆಯಲಾಗುತ್ತ? ಗಾಯ ಮಾಗಿದರೂ ಕಲೆ ಉಳಿದ ಹಾಗೆ ಈ ನೆನಪುಗಳು. ಧರ್ಮದ ಹೆಸರಲ್ಲಿ ರಕ್ತ ಪಾತ ಇದ್ಯಾವ ಸೀಮೆ ನ್ಯಾಯ?
ನಿಹಾರಿಕಳ ಹುಟ್ಟಿದ ಹಬ್ಬದಂದು ಇದೆಲ್ಲ ನೆನಪಿಗೆ ಬರುತ್ತದೆ. Let us wish her a happy life in a peaceful India alwaa?
:-)