ಕೆಳಗಿನ ಮನೆಯವರು ಕಂಪ್ಲೈನ್ ಮಾಡಲು ಬಂದಿದ್ದರು. 'ನಾವು ವರ್ಕ್ ಫ್ರಮ್ ಹೋಮ್, ಇಡಿ ದಿನ ನಿಮ್ಮ ಮನೆಯಲ್ಲಿ ಓಡಾಡುವ, ಕುಣಿದಾಡುವ, ಸಾಮಾನು ಬೀಳಿಸುವ ಸದ್ದು. ಒಂದು ಗಳಿಗೆ, ಎರಡು ಗಳಿಗೆ ಅಲ್ಲ, ಈಡಿ ದಿನ. ತಲೆ ಮೇಲೆ ಎದೆ ಮೇಲೆ ಗುದ್ದಿದಂಗೆ ಆಗುತ್ತೆ." ರೇಖಾಳ ಮುಖ ಎಲ್ಲ ಮುಜುಗರದಿಂದ ಕೆಂಪೇರಿತ್ತು..ಅಲ್ಲೇ ನಿಂತು ಇದನ್ನೆಲ್ಲ ಕೇಳುತ್ತಿದ್ದ ಗಂಡ ಶ್ರೀಧರ ನ ಮುಖದ ಮೇಲೆ ಆಕೆಯನ್ನು ಸುಟ್ಟು ಬಿಡುವಂತ ನೋಟ...
11 ವರ್ಷ ವಯಸ್ಸಿನ ಶಿಶಿರನಿಗ autism. ಮಲಗಿರುವ ಸಮಯ ಬಿಟ್ಟರೆ ಉಳಿದ ಸಮಯವೆಲ್ಲ ಹೈಪರ್ active. ವಾರದಲ್ಲಿ 5 ದಿನ ಅವನಿಗೆ ಶಾಲೆ ಬೆಳಿಗ್ಗೆ 9 ತರಿಂದ ಸಂಜೆ 3.45 ರ ತನಕ. ಶಾಲಾ ವಾಹನದ ಸೌಕರ್ಯ ಇತ್ತು. ರೇಖಾಳಿಗೆ ಅಷ್ಟು ಹೊತ್ತು ಸ್ವಲ್ಪ ನೆಮ್ಮದಿ. ರಜಾ ದಿನಗಳಲ್ಲಿ ಅವಳಿಗೆ ಶಿಶಿರನನ್ನು ಸಂಭಾಳಿಸುವಷ್ಟರಲ್ಲಿ ಹೆಣ ಬೀಳುತ್ತಿತ್ತು. ಶ್ರೀಧರನಿಗೆ ವಾರ್ಯ0ತದಲ್ಲಿ ರಜೆ. ಆದರೂ ಶಿಶಿರನನ್ನು ನೋಡಿಕೊಳ್ಳುವ ಜವಾಬ್ದಾರಿ ತಪ್ಪಿಸಲು ಅವನು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ
ಈಗ lock ಡೌN ಘೋಷಿಸಿದ್ದರಿಂದ ಅವನಿಗೆ ಗ್ರಹ ಬಂಧನ... ಕೆಲಸದ ನೆವ ಹೇಳಿ ರೂಮೊಳಗೆ ಬಾಗಿಲು ಹಾಕಿಯೇ ಇರುತ್ತಿದ್ದ. ಶಿಶಿರಣದ್ದು ಒಂದೇ ಕಡೆ ಕೂತಿರುವ ಜಾಯಮಾನವಲ್ಲ..ಮನೆ ಇಡೀ ಒದ್ದಾಡುತ್ತಿರಬೇಕು
ಔಷಧಿಯ ದುಷ್ಪರಿಣಾಮದಿಂದ ಮೈ ಕೂಡ ಬಂದಿದ್ದರಿಂದ ಮನೆಯವರಿಗೆ ದಭ ದಭ ಸದ್ದು ಕೇಳುವದಕ್ಕೆ ಕಷ್ಟ ಆಗುತ್ತಿತ್ತು ಇನ್ನು ಕೆಳಗಿನ ಮನೆಯವರು ಬಂದು ಆಕ್ಷೇಪಿಸಿದ್ದು ತಪ್ಪು ಅನ್ನುವಂತಿರಲಿಲ್ಲ...ಉಳಿದ ಸಮಯ ಕೆಳಗಿನ ಮನೆ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ ಹೋದರೆ ಸಂಜೆ ವಾಪಸ್..ವಾರ್ಯಅಂತ್ಯದಲ್ಲಿ ಊರಿಗೆ ಹೋಗುತ್ತಿದ್ದರು, ಮಿತ್ರರ ಭೇಟಿ ಅಂತ ಮನೆಗೆ ವಾಪಸ್ ರಾತ್ರಿ ನೆ ಮರಳುತ್ತಿದ್ದರು. ಇನ್ನೂ ಹೊಸದಾಗಿ ಮದುವೆಯಾದವರು.
Lock ಡೌನ್ ನಿಮಿತ್ತ ಶಿಶಿರಣ ಶಾಲೆಗೂ ಕೂಡ ರಜೆ...ರೇಖಾಳಿಗೆ ಏನು ಮಾಡುವುದೆಂದು ತೋಚುತ್ತಿರಲಿಲ್ಲ. ಮನೆಗೆಲಸ ಮಾಡ್ತಾ ಶಿಶಿರನ್ನು ಸಂಭಾಳಿಸುತ್ತ ಹೈರಾನಾಗಿದ್ದಳು. ಕೆಲಸಫಾವರನ್ನು ನೇಮಿಸುವ ಅಂದ್ರೆ ಅವರ ಗ್ರಹ ಸಮುಚ್ಸಿಚಯದವರು ಕಡ್ಡಾಯವಾಗಿ ಸೋಷಿಯಲ್ distancing ಪಾಲಿಸಲೇ ಬೇಕು..ಯಾರೂ ಕೆಲಸದವರನ್ನು, ಅಡಿಗೆ ಯವರನ್ನು ಮನೆಗೆ ಕರೆಸುವಂತಿಲ್ಲ ಅಂತ ಕಟ್ಟುನಿಟ್ಟಿನ ನಿಯಮ ಹಾಕಿದ್ದರು
ಸಂಜೆ ರೇಖಾಳ ತಂಗಿ, ಯು ಎಸ್ ನಲ್ಲಿ ಡಾಕ್ಟರ್ ಆಗಿರುವ ಅರುಣ face time ಮಾಡುವಾಗ...'ಏನಾಗಿದ್ಯೆ ನಿನಗೆ, ತುಂಬಾ ಸೋತು ಹೋಗಿದ್ದೀಯ' ಅಂತ ಆತಂಕದಿಂದ ಕೇಳಿದಳು..ತನ್ನ ಕಷ್ಟಗಳನ್ನು ಹೇಳಿಕೊಂಡಳು.
"ತುಂಬಾ ಹೈಪರ್ ಆದಾಗ ಒಂದು ಚಮಚ benadryl ಕುಡಿಸು...ಒಳ್ಳೆ ನಿದ್ದೆ ಮಾಡ್ತಾನೆ..ಆದರೆ ಅದೇ ಅಭ್ಯಾಸ ಮಾಡಿಸಬೇಡ..ಅಂತ ಸಲಹೆ ಕೊಟ್ಟಿದ್ದಾಳೆ
Quarantine is not always a happy family time for some!!! ಕೆಲವರು..family time, enjoy with your family..stay safe..ಅಂತೆಲ್ಲ ಗಿಣಿಪಾಠದ ತರಹ ಒಪ್ಪಿಸ್ತಾರಲ್ಲ್ವಾ..ಹಾಗಾಗಿ ಈ ಕತೆಗೆ ಪ್ರೇರಣೆ..