January 30, 2011

Experiment with SRI

I do address Srikanth as 'Sri' but this SRI is different. It stands for System of Rice Intensification (SRI). Here is the experiment where we have adopted the SRI method in paddy cultivation.
Farmer Field School in session. Its participatory-experiential adult pedagogy, promoted by FAO.The farmers meet here before going to their farm, usually early in the morning, or sometimes late in the evening, to discuss about farming and other farm related matters. It emphasizes learning through experiments and observations. This is our group in Tumkur.
One of the FFS members volunteered to give 2 acres of land for SRI experimentation in paddy cultivation.This was necessary for the farmers to see and observe the result of both the method of paddy cultivation, SRI as well as the conservative method.
 The volunteer (he can be seen in the last photograph)faced  fierce opposition from his family members who stopped talking to him, until they saw the results. Later on they were so happy that they not only went on to advise other farmers to adopt this method but  also adopted the SRI method for Ragi Cultivation.
Less water consumption, less no of seeds for sowing, and higher yield than the conservative method are some of  the key observations.

Ready for transplant

Transplantation in progress
Plants finally stand 'rooted' to the spot :-)

The plant on the right: robust feeder roots ,owing to distancing of the seedling to seedling and row to row to 10 X 10 inches,the roots get a comfortable space to absorb the organic nutrients. In this particular field we used panchagavya.

Observing and recording the findings- 1. On the left plot is paddy under conservative method. The farmer and his family had their share of misgivings initially
.... observations and recording


A sight to behold.

The robust seeds. The volunteer relieved at long last.. his family is slowly relenting on the pros of SRI method. Observe the Panicles

Azolla initiated /inoculated into the puddle...it is a nitrogen fixator. Since Azolla spreads rapidly into the water it suppresses weed formation
The Milk grains
Sri (Srikanth) and SRI
Ready for Harvest. TOUCHWOOD -hey i am NOT Superstitious :-) The yield was 25 -30% higher than the conservative method adopted in the same field
A 'field' day!!
Successful experimentation with Ragi (fingermillet)using SRI principles. Hebbal sir fondly calls it the 'wonder millet' :-)
Farmer- Our Annadata (provider of food).

These experiments were conducted at Kunigal, Tumkur under IDF-Sujeevan programme. 'Sri method of paddy cultivation' in google/yahoo search will give you further details about such experiments conducted elsewhere in India. Shortly we will be experimenting with Sugarcane with our groups in Belgaum
Photo: MS Govindarajan, and Niharika Shenoy
:-)

January 20, 2011

ಅವರೆ ಕಾಳು ಸೀಸನ್ ಮುಗಿಯುವ ಮುನ್ನ

ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ನಾನು ಅವರೆ ಕಾಳಿನ ಸುದ್ದಿಗೆ  ಹೋಗ್ಲೇ ಇಲ್ಲ. ಮುಂಬೈನಲ್ಲಿ ಅದು ಸಿಗುತ್ತಿರಲಿಲ್ಲ.ನಮ್ಮ ಆಫಿಸ್ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ಏಳನೆ ಮಹಡಿಯಲ್ಲಿತ್ತು. ಕೆಲವೊಮ್ಮೆ break ತೆಗೊಂಡು ಕಿಟಕಿಯಿಂದ ಕೆಳಗೆ ನೋಡಿದ್ರೆ, ಕೆಳಗಡೆ ತರಕಾರಿ ಮಾರುವವರು ರಾಶಿ ರಾಶಿ ಅವರೆಕಾಳನ್ನು ಬಿಡಿಸಿ ನೀರಿನಲ್ಲಿ ಹಾಕಿಡತಿದ್ರು. ನಮ್ಮ ಆಫಿಸ್ ನವರು ಯಾರಿಗೂ ಅವರೆಕಾಳಿನ ಬಗ್ಗೆ ತಿಳಿದಿರಲಿಲ್ಲ. ಜನರು ಮುಗಿಬಿದ್ದು ತೆಗೆದುಕೊಂಡು ಹೋಗುವುದನ್ನು ನೋಡುತ್ತಿದ್ದೆ ವಿನ: ನಾನಂತು ಅದರ ತಂಟೆಗೆ ಹೋಗಿರಲಿಲ್ಲ. ಆಮೇಲೆ ನಿಧಾನವಾಗಿ ವಿಜಯಕರ್ನಾಟಕದ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ಪರಿಚಯವಾಯ್ತು. ಅವರ ಮೂಲಕ thatskannada ಡಾಟ್ ಕಾಮ್ websiteನ ಪರಿಚಯವಾಯ್ತು. ಅಲ್ಲಿ ಅವರೆಕಾಳಿನ ಉಪ್ಪಿಟ್ಟಿನ ವಿವರಣೆ ಹಾಗೂ ಕಮೆಂಟ್ ಗಳನ್ನು ಓದಿ ಬಾಯಲ್ಲಿ ನೀರೂರಿತು. ನಾನು ಯಾವಗಾದರೊಮ್ಮೆ try ಮಾಡಬೇಕೆಂದು ಅಂದುಕೊಂಡಿದ್ದೆ ಅಷ್ಟೆ. ಶ್ರೀಕಾಂತ್ ಹತ್ತಿರ mention ಮಾಡಿದಾಗ, ಅವರು ಹಿಂದೊಮ್ಮೆ ಅವರ ಫ್ರೆಂಡ್ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು ಮತ್ತು ಚಟ್ನಿ ತಿಂದಿದ್ದು ನೆನಸಿಕೊಂಡು, ಸ್ವಲ್ಪ extra fittings (ಮಕ್ಕಳ term) ಇಟ್ಟು ಅದನ್ನು ರಸವತ್ತಾಗಿ ಬಣ್ಣಿಸಿದಾಗ, ಸ್ವಲ್ಪ ಹೊಟ್ಟೆಕಿಚ್ಚಾಗಿದ್ದು ನಿಜ. but ಪುನಃ ಅದು ನನ್ನ ಮನಸ್ಸಿನಿಂದ ಆಚೆ ಹೋಯ್ತು. ಮತ್ತು ಅಷ್ಟರಲ್ಲೇ ನಮ್ಮ ಹೊಸ ಆಫಿಸ್ ರಾಜಾಜಿನಗರ ಎರಡನೇ ಬ್ಲಾಕ್ ನಲ್ಲಿ ಶುರು ಮಾಡಿದ್ವಿ. ನನ್ನನ್ನು ಅಲ್ಲಿಗೆ ವರ್ಗಾಯಿಸಿದರು.

ಹೊಸ ಆಫಿಸಿಗೆ ಹೋದ ಕೆಲವೆ ದಿನದಲ್ಲಿ ನಮ್ಮ ಆಫಿಸ್ ಗೆ ಗೋವಿಂದರಾಜನ್ ಅನ್ನುವವರು ನಮ್ಮನ್ನು join ಆದರು. ಅವರು ಕೆಲವೊಮ್ಮೆ ಬೆಳಿಗ್ಗೆ ಅಲ್ಲಿ ಹತ್ತಿರದ ಹೋಟಲ್ ನಿಂದ ಅವರ favorite ಪಡ್ಡು (hoppers) ತರಿಸುತ್ತಿದ್ದರು. ಒಂದು ಸಲ ಪಡ್ಡು ಇರಲಿಲ್ಲ ಅದಕ್ಕೆ ಅವರೆಕಾಳಿನ ಅಕ್ಕಿ ರೊಟ್ಟಿ ತರಿಸಿ ತಿನ್ನುವಾಗ ನನಗೆ ಅದರ ಪರಿಮಳ ಬಂದು ನಾಚಿಕೆ ಬಿಟ್ಟು ಅವರ ಹತ್ತಿರ ಒಂದು piece ತೆಗೊಂಡು ತಿಂದೆ. ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ ಪರಮಾನಂದಂ..ಪರಮಸುಖದಂ.... ಆಮೇಲೆ ಅವರು ಹೋಟಲ್ ನಿಂದ ಏನಾದ್ರೂ ತರಿಸುವಾಗ ನಾನು ನನಗೋಸ್ಕರ ಅಕ್ಕಿ ರೊಟ್ಟಿ ತರಿಸ್ತಿದ್ದೆ. ಬೆಳಿಗ್ಗೆ ಒಂದು ರೊಟ್ಟಿ ತಿಂದ್ರೆ ಆಮೇಲೆ ಇಡೀ ದಿನ ಹಸಿವೆ ಆಗ್ತಿರಲಿಲ್ಲ. ನನ್ನ ಊಟದ ಡಬ್ಬಿ ಉಳಿದವರು ಹಂಚಿಕೊಳ್ಳುತ್ತಿದ್ದರು.ಮತ್ತೆ ಮನೇಯಲ್ಲೇ ಮಾಡಬೇಕೆನ್ನುವ ಹುಮ್ಮಸ್ಸು ಬಂತು. ಯಾಕೆಂದ್ರೆ ಅಕ್ಕಿ ರೊಟ್ಟಿ ಸಿಗುವ ಅಶೋಕಾ ಹೋಟಲ್ ಮುಚ್ಚಿ ಬಿಟ್ಟು ಅಲ್ಲಿ ರಾಗಿ ಮುದ್ದೆ ಹೋಟಲ್ ಬಂತು :-(
experiment ಮಾಡಲು ಇನ್ನೊಂದು ಕಾರಣಾನೂ ಇತ್ತು. ಮೊದಲು ಜಯನಗರದಿಂದ ಮಹಾಲಕ್ಷ್ಮೀ ಲೇ ಔಟ್ ಗೆ ಬಸ್ಸ್ ನಲ್ಲಿ ನೇತಾಡಿಕೊಂಡು ಸಂಜೆ 7.15 ರಿಂದ 7.30 ಕ್ಕೆ ಮನೆ ತಲುಪಿ, ನೆಲ ಒರೆಸಿ ಬಟ್ಟೆ wash ಮಾಡಿ, ಉಳಿದ ಆಫಿಸ್ ಕೆಲಸಗಳು,ಆಮೇಲೆ ರಾತ್ರಿ ಅಡುಗೆ, ಮರುದಿನದ ತಿಂಡಿ ಅಡುಗೆಯ ಸ್ವಲ್ಪ ತಯಾರಿ ನಡೆಸುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. (ಮತ್ತೆ ಅಮೇರಿಕದಲ್ಲಿರೋ ತಂಗಿ ಏನಾದ್ರು ಫೋನ್ ಮಾಡಿದ್ರೆ, ಯಾಕೋ ಅವಳು ನಮ್ಮನ್ನು ತುಂಬ ಮಿಸ್ ಮಾಡ್ತಾ ಇದ್ದಳು, ಅವಳು ಆಗಷ್ಟೆ ಅಮೇರಿಕಾಗೆ ಹೋಗಿದ್ಲು- ಮನೆಯಲ್ಲಿ ಕೊನೆಯವಳು ಮುದ್ದಿನ ತಂಗಿ)ಮಾತಾಡ್ತಾ ರಾತ್ರಿ ಮಲಗುವಾಗ ಎರಡು ಮೂರು ಗಂಟೆ ಯಾಗಿದ್ದೂ ಇದೆ.) easy ಯಾಗಿರುವ ತೊಗರಿ ಬೇಳೆ ತೊವ್ವೆ ನೆ ಜಾಸ್ತಿ ಮಾಡ್ತಿದ್ದಿದ್ದು. ಹೊಸದಾಗಿ ಏನಾದ್ರೂ ಟ್ರೈ ಮಾಡಲು ಮೂಡ್ ಇರ್ತಿರಲಿಲ್ಲ.
ರಾಜಾಜಿನಗರಕ್ಕೆ ಬಂದ ಮೇಲೆ, ಅದರಲ್ಲೂ ಆಫಿಸ್ ಕ್ಲೀನ್ ಮಾಡುವ ಸರೋಜಮ್ಮನೇ, ಮನೆ ಕೆಲಸ ಮಾಡಿಕೊಡ್ತೇನೆ ಅಂದಾಗ,ನನ್ನ ಕೈ ನಲ್ಲಿ ಸಮಯ ಉಳಿತಿತ್ತು. ಬೆಳಿಗ್ಗೆ ಶ್ರೀಕಾಂತ್ drop ಮಾಡ್ತಿದ್ದರು. ಸಂಜೆ ಆಫಿಸ್ ನಿಂದ ಮನೆಗೆ ನಡೆದುಕೊಂಡು ಹೋಗ್ತಿದ್ದೆ. ಅನನ್ಯ hospital ಬಳಿ ಅವರೆಕಾಳು ಮಾರುವ ಹೆಂಗಸಿನ ಪರಿಚಯ ಆಗಿ, ಅದನ್ನು ಅಡಿಗೆಗೆ ಬಳಸುವ ಬಗ್ಗೆ ಅವರ ಹತ್ತಿರ ತಿಳದುಕೊಳ್ಳುತ್ತಿದ್ದೆ.

ಇತ್ತೀಚಿನ ಎಂಟು ವರ್ಷಗಳಲ್ಲಿ ಅವರೆ ಕಾಳನ್ನು ಬಳಸಿ ಮೂರು ತರಹದ ಉಪ್ಪಿಟ್ಟು( ರವೆ as well as ಅಕ್ಕಿ ತರೀದು), ಪುಲಾವ್, ವೆಜಿಟೇಬಲ್ ಭಾತ್, ಅವರೆ ಕಾಳು+ಮೆಂತೆ ಸೊಪ್ಪು ಹಾಕಿ ಪಲ್ಯ ವಗೈರೆ ಮಾಡ್ತೇನೆ. ಅಷ್ಟೇ ಅಲ್ಲ ಬಿಸಿ ಬೇಳೆ ಭಾತ್ ಮತ್ತು ಖಾರ ಪೊಂಗಲ್ ನಲ್ಲೂ ಅವರೆ  ಬಳಸುತ್ತೇನೆ. ಕೊಂಕಣಿ ಅಡಿಗೆಯಲ್ಲೂ ತುಂಬಾ ಹೊಂದುತ್ತೆ ಈ ಕಾಳು in ಹುಳಿ, ಸಾಂಬಾರು, ಘಸಿ etc. ಅವರೆ ಹಾಕಿದ ಬಸ್ಸಾರು ಬಗ್ಗೆ ಕೇಳಿದ್ದೇನೆ ಹೊರತು ನಾನು ಎಲ್ಲೂ ತಿಂದಿಲ್ಲ. ಅದಕ್ಕೆ ಮಾಡಿಲ್ಲ.ಶ್ರೀಕಾಂತ್ ಮಾದಪ್ಪ ಮೆಸ್ ನ ಬಸ್ಸಾರು ಹೊಗಳ್ತಾ ಇರ್ತಾರೆ. :-(

ಒಂದೆ ಬೇಜಾರಿನ ಸಂಗತಿಯೆಂದರೆ, ಕೆಲವರು ಮನೆಯ ಎದುರುಗಡೆನೆ ಸಿಪ್ಪೆ ಹಾಕೋದು. ಕೇಳಿದ್ರೆ ದನ ತಿನ್ನುತ್ತವೆ ಅಂತಾರೆ, ಎರಡು ಮೂರು ಬಾರಿ ಸಿಪ್ಪೆ ಮೇಲೆ ಜಾರಿದ್ದೇನೆ ಕೂಡ. ಕೆಲವರ ಪ್ರಕಾರ ಸಿಪ್ಪೆಯನ್ನು ಮನೆಯೆದುರಿಗೆ ಬಿಸಾಡಿದರೆ, ಆ ಮನೆಯವರು ಅವರೆ ಕಾಳು ತಿಂದಾಗ ಹೊಟ್ಟೆ ನೋವು ಬರಲ್ವಂತೆ. ಬಸ್ಸ್ ನಲ್ಲಿ ಕೂತು, ಅಥವ, ಮಹಿಳೆಯರು ಅಂಗಡಿ ನಿಭಾಯಿಸುವ ಕಡೆಯಲ್ಲಿ ಪುರುಸೊತ್ತಾದಾಗ, ಪುಟ್ಟ ಟಿ.ವಿ.ನೋಡ್ತಾ ಅಲ್ಲೆ ಅವರೆಕಾಯಿ ಬಿಡಿಸೋದು ಒಂದು ವಿಶೇಷ.
ಆಫೀಸ್ ನ ಸೀನಿಯರ್ಸ್ ಗೆಲ್ಲ ’ಅವರೆ’ ಸೇರಿಸಿ ಸಂಭೋದಿಸುವುದು. ಸಾಲಿಮಠ್ ಅವರೆ, ಗೋವಿಂದರಾಜನ್ ಅವರೆ.. ಹೆಬ್ಬಾಳ ಅವರೆ etc.  ಶ್ರೀಕಾಂತ್ ಒಂದು ಸಲ ನನಗೆ ಹೇಳಿದ್ರು ’ಹೆಬ್ಬಾಳ ಅವರೆ” ಅಂತ ಒಂದು ಅವರೆಕಾಳಿನ variety ಇದೆ ಎಂದು. ಅಮೇಲೆ ಅವರಿಗೆ ಹೆಬ್ಬಾಳ sir ಅಂತ ಕರೆಯುವುದು ನಾನು.
so ಇಲ್ಲಿದೆ ಅವರೆ ಕಾಳು ಹಾಕಿ ಮಾಡಿದ ಅಕ್ಕಿ ರೊಟ್ಟಿ.

ಅಕ್ಕಿ ಹಿಟ್ಟು - 3 ಕಪ್
ಬಾಂಬೆ ರವಾ- 1/2 ಕಪ್
ಹಸಿ ಮೆಣಸು - 4 ಅಥವ 5
ಉಪ್ಪು ಹಾಕಿ ಬೇಯಿಸಿದ ಅವರೆಕಾಳು- 1 ಕಪ್
ತಾಜ ತೆಂಗಿನ ತುರಿ- 1/2 ಕಪ್
ಹುಳಿ ಮೊಸರು - 1/2 ಕಪ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ, (ಸಬ್ಬಸಿಗೆ (Dill) ಸೊಪ್ಪು-optional), ಹುರಿದು coarsely ಪುಡಿಮಾಡಿದ ಶೆಂಗಾ ಬೀಜ, 1/2 ಟೀ ಸ್ಪೂನ್ ಜೀರಿಗೆ (optional), ಉಪ್ಪು. ಎಲ್ಲವನ್ನೂ ಸೇರಿಸಿ ಹಿಟ್ಟು ಚಿತ್ರದಲ್ಲಿ ತೋರಿಸಿದ ಹಾಗೆ ಹಿಟ್ಟು ತಯಾರಿಸಿ.
ಕೆಳಗಿನ ಲಿಂಕ್ ನಲ್ಲಿ ರೊಟ್ಟಿ ಮಾಡುವ ವಿಧಾನ ಇದೆ

http://malathisanchiyinda.blogspot.com/2009/10/blog-post_30.html

ಕೆಂಪು ಖಾರದ ಚಟ್ನಿ ಮತ್ತು ಪುದಿನ ಬೆರೆಸಿದ ಕಾಯಿ ಚಟ್ನಿ ಜತೆಗೆ home made ತುಪ್ಪ...ಸ್ವರ್ಗಕ್ಕೆ ಮೂರೆ ಗೇಣು
ಅದು ಶ್ರೀಕಾಂತ್ ಉವಾಚ
ಖಾರದ ಚಟ್ನಿ ಮಾಡಲು:
ಬಿಸಿ ನೀರಿನಲ್ಲಿ ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಅದಕ್ಕೆ ಹುಳಿ, ಎರಡು ಬೆಳ್ಳುಳ್ಳಿ, ಎರಡು ಕಾಳು ಕೊತ್ತಂಬರಿ ಬೀಜ, ಉಪ್ಪು , ಚೂರೆ ಬೆಲ್ಲ ಹಾಕಿ ಮಿಕ್ಸಿ/ರುಬ್ಬೋ ಕಲ್ಲಲ್ಲಿ ತಿರುವಿ. ಚಟ್ನಿ ರೆಡಿ....ಖಾರ ಜಾಸ್ತಿಯಾಗಿ ’ಜೀವನ ಸಾಕ್ಷಾತ್-ಖಾರ’ ಆದ್ರೆ ನಾನು ಜವಾಬ್ದಾರಳಲ್ಲ. ಬೆಳ್ಳುಳ್ಳಿ ಇಷ್ಟ ಪಡದವರು ಹಿಂಗನ್ನು ಸ್ವಲ್ಪ ಬಿಸಿ ಎಣ್ಣೆಯಲ್ಲಿ ಅರಳಿಸಿ ಹಾಕ ಬಹುದು. no problem.
ಅವರೆಕಾಳು ಸೀಸನ್ ಮುಗಿಯುವ ಮುನ್ನ ಒಂದು ಸಲ್ try karke dekho na..
:-)
pic: Niharika Shenoy

January 13, 2011

ಸಂಕ್ರಾಂತಿಗೆ special ಬೆಲ್ಲದ ಕಿಚಡಿ

ಸ್ವಲ್ಪ different ಆಗಿದೆ. ಹಿಂದಿನ ವರ್ಷದ ಪೊಂಗಲ್ ಗೆ ಹೆಸರು ಬೇಳೆ -ಅಕ್ಕಿ ಯ ಸಕ್ಕರೆ ಪೊಂಗಲ್ post ಮಾಡಿದ್ದೆ. ಈ ವರ್ಷ ಕೆಳಗೆ ಕೊಟ್ಟಿರುವಂತಹ ಕಿಚಡಿ ತಯಾರಿಸಿ. ನನ್ನ favorite.
ಹೆಸರು ಬೇಳೆ- 1/2 ಕಪ್
ದಪ್ಪ ರವೆ/ಲ್ಯಾಪ್ಸ್ಕಿ/ಕೇಸರಿ/ಬನ್ಸಿ ರವೆ - 1/2  ಕಪ್
ತಾಜ ತೆಂಗಿನ ತುರಿ - 1ಕಪ್
ಬೆಲ್ಲ- 1 and 1/2 ಕಪ್
ತಾಜಾ ತುಪ್ಪ - 1 ಟೇಬಲ್ ಚಮಚ
ಗೋಡಂಬಿ ಚೂರು, ಏಲಕ್ಕಿ,


ಹೆಸರು ಬೇಳೆಯನ್ನು ಪರಿಮಳ ಬರುವ ತನಕ ಹುರಿದು ಆಮೇಲೆ ನೀರಿನಲ್ಲಿ ನೆನೆಸಿಡಿ. ರವೆ ಯನ್ನು ಪಸೆ ಹಾಕದೆ ಎರಡು ಮೂರು ನಿಮಿಷ ಹುರಿದು ಪಕ್ಕಕ್ಕಿಡಿ. ಹತ್ತು ನಿಮಿಷ ನೆನೆದ ಹೆಸರು ಬೇಳೆಯನ್ನು, ರವೆ ಜತೆಗೆ ಮೂರು ಕಪ್ ನೀರುಹಾಕಿ, ಕುಕ್ಕರಿನಲ್ಲಿ ಬೇಯಿಸಿ. ಬೆಲ್ಲ ಒಂದು ಸರಿಗೆ ಪಾಕ ಬರುವ ತನಕ ಬಿಸಿ ಮಾಡಿ ಅದಕ್ಕೆ ಕಾಯಿ ತುರಿ ಹಾಕಿ ಎರಡು ನಿಮಿಷ ಕೈಯಾಡಿಸಿ ಆಮೇಲೆ ಬೆಂದ ಬೇಳೆ ಸೇರಿಸಿ , ಖಿಚಡಿ ದಪ್ಪಗಾಗುತ್ತ ಬಂದ ಹಾಗೆ,ಸ್ವಲ್ಪ ತುಪ್ಪದಲ್ಲಿ ಗೋಡಂಬಿ ಹುರಿದು ಇದಕ್ಕೆ ಬೆರೆಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಉಳಿದ ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಬಿಸಿಯಿರುವಾಗಲೇ ತಿನ್ನಿ.
enjoy.
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಚಿತ್ರಗಳು : ಮಾಲವಿಕ
ವಿ.ಸೂ: ನಾನು ನೀರು /ತೆಳುಬೆಲ್ಲ ಉಪಯೋಗಿಸುವುದರಿಂದ ಒಂದು ವರೆ ಕಪ್ ಅಂತ ನಮೂದಿಸಿದ್ದೇನೆ. ಗಟ್ಟಿ ಬೆಲ್ಲ ಉಪಯೋಗಿಸುವುದಾರೆ ಅದನ್ನು ತುರಿದು ಎರಡು ಕಪ್ ನ ಅಂದಾಜು ಹಾಕಬಹುದು. (ಹಾಗೆ ಒಂದು ಸಲ ಬೆಲ್ಲ ಕಡಿಮೆಯಾದಾಗ ನಾನು ಮೇಲಿನಿಂದ ಸಕ್ಕರೆ ಬೆರೆಸಿದ್ದೂ ಇದೆ.) ಈಗ ಎಲ್ಲ ಅಂದಾಜಿನಲ್ಲೇ ಅಡುಗೆ.Practice makes perfect
for sakkare pongal click on the link below
http://malathisanchiyinda.blogspot.com/2010/01/blog-post.html
:-)


January 10, 2011

ಜಯತು ಜಯತು ಸಂಸ್ಕೃತ- ಬನ್ನಿ ಸಂಸ್ಕೃತ ಗ್ರಾಮದಲ್ಲಿ ಒಂದು ಸುತ್ತು ಹೊಡೆಯೋಣ

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಕೃತ ಪುಸ್ತಕೋತ್ಸವದಲ್ಲಿ ಭಾಗವಹಿಸೋಣ. ಇವತ್ತು ಕೊನೆಯ ದಿನ. ನಿನ್ನೆ ಭಾನುವಾರದಂದಂತೂ ಜನ ಸಾಗರ...ಎಲ್ಲೆಲ್ಲೂ ಸಂಸ್ಕೃತ ಮಾತನಾಡುವವರು. ಒಂದು novel experience. ಕಾರ್ಯಕ್ರಮದ ನಡುವೆ ಜಯತು ಜಯತು ಸಂಸ್ಕೃತ ಎನ್ನುವ ಉದ್ಘೋಷ. ದಿನೇಶ್ ಕಾಮತ್ ರ ಅಚ್ಚ ಸಂಸ್ಕೃತದ ಭಾಷಣ ಮೈ ಜುಮ್ಮೆನ್ನುವಂತಿತ್ತು.His enthusiam was contagious
ಸಂಸ್ಕೃತ ಗ್ರಾಮದಲ್ಲಿ ಅಂಚೆಕಚೇರಿ, ಶಾಲೆ,ಗರಾಜ್, ಅರಳಿ ಕಟ್ಟೆಮೇಲೆ ನ್ಯಾಯ ಹೇಳುವ ಗ್ರಾಮನ್ಯಾಯಾಲಯ, ಹಿಮಾಚಲ ಪ್ರದೇಶದವರ ಸಂಸ್ಕೃತ ಹಾಡಿಗೆ ತಕ್ಕಂತೆ ಕುಣಿತ, and of course food court...ಗಮನ ಸೆಳೆದವು. ಹೆಚ್ಚಾಗಿ ಯುವಜನತೆಯ ಹುಮ್ಮಸ್ಸು ಕೊಂಡಾಡುವಂತದ್ದು.ಮೇಳದಲ್ಲಂತೂ ಸರ್ವಂ ಸಂಸ್ಕೃತಮಯಂ.
ತಾಳೆಗರಿ ಪ್ರದರ್ಶನ ಮಳಿಗೆಯಲ್ಲಂತೂ ಸಾಸಿವೆ ತೂರಲಿಕ್ಕೂ ಆಗದಂತಹ rush. ಮಹಾಭಾರತದ ಚಕ್ರವ್ಯೂಹವನ್ನು ಮಣ್ಣಿನ ಗೊಂಬೆಗಳ ಮೂಲಕ depict ಮಾಡಿದ್ದು ತುಂಬಾ ಸರಳವಾಗಿತ್ತು-self explanatory. ತುಂಬ ಕಷ್ಟಪಟ್ಟು ಒಳ ನುಸುಳಿ ನೋಡಬೇಕಾಯಿತು.ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ.
ಸಂಸ್ಕೃತ ಶ್ಲೋಕ ಹೇಳಿ 80 ರೂ ನ sweet ನ್ನು 50 ರೂ ಗೆ ಗಿಟ್ಟಿಸಿಕೊಂಡ್ವಿ. ಮಜಾ ಬಂತು. ನಾನು ’ಅಸತೋಮ ಸದ್ಗಮಯ’ ಮತ್ತು ಅದರ ಅರ್ಥ ಹಿಂದಿಯಲ್ಲಿ ಹೇಳಿದ್ರೆ, ನಿಹಾರಿಕಾ ’ತ್ವಮೇವ ಮಾತಾ ಚ ಪಿತಾ ತ್ವಮೇವ’ ರಾಗವಾಗಿ ಹಾಡಿದಳು...ಶ್ರೀಕಾಂತ್ ಪರವಾಗಿ ನಾನು ’ಕಷ್ಟಂ ಕಷ್ಟಂ ಬಹು ಕಷ್ಟಂ, ಪ್ರಾತ: ಕಾಲೇ ಉತ್ಥಾನಂ...ಹಾಡಿ ಆ ಕಾಶ್ಮೀರಿ ಯುವಕನನ್ನು ನಗಿಸಿದೆ...
ಪುಸ್ತಕ ಮೇಳದಲ್ಲಂತೂ ಉಸಿರು ಕಟ್ಟುವ ಜನಜಾತ್ರೆ. ನನಗೆ ತುಂಬಾ ಇಷ್ಟವಾಗಿದ್ದು ಬ್ರಹತ್ ಗಾತ್ರದ..ನಾಲ್ಕೂ ವೇದಗಳನ್ನೊಳಗೊಂಡ ಪುಸ್ತಕ. ಸಂಸ್ಕೃತ ಮೇಳ ಇವತ್ತು last.
ಇಲ್ಲಿವೆ ಕೆಲವು ಝಲಖ್

ವೇದಿಕೆಯ ಮೇಲಿನ ಗಣ್ಯರು: ನಿವೃತ್ತ ನ್ಯಾಯಮೂರ್ತಿ ಲಾಹೋಟಿ(ಅವರು ಮುಂದಿನ ವರ್ಷದ ಸಮ್ಮೇಳನದಲ್ಲಿ, ಸಂಸ್ಕೃತ ಕಲಿತು ಸಂಸ್ಕೃತದಲ್ಲೇ ಭಾಷಣ ಮಾಡುವ ಆಶ್ವಾಸನೆ ನೀಡಿದ್ದಾರೆ), ನಿ.ನ್ಯಾ ಹಾಗೂ ಮಾಜಿ ರಾಜ್ಯಪಾಲರು ಶ್ರೀಯುತ ರಾಮಾ ಜೊಯಿಸ್, ಕರ್ನಾಟಕ ರಾಜ್ಯ ಸಚಿವರು ಶ್ರೀ ವಿ.ಎಸ್. ಆಚಾರ್ಯ ಮುಂತಾದವರು







The outer decor




the Bagavadgeeta and the Management Principles..one of the many posters by IIM-Bangalore








parts of the motorbike ಸಂಸ್ಕೃತದಲ್ಲಿ for eg ಬ್ರೇಕ್= ವೇಗನಿಯಂತ್ರಕಾ

ಸಂಸ್ಕೃತ ಪಾಠಶಾಲೆ in progress

scene from the Mahabharatha


ಚಕ್ರವ್ಯೂಹ
ವಿ.ಸೂ: ಸಂಸ್ಕೃತ ವಿ.ವಿ ಯ ಲಾಂಛನಕ್ಕೆ 5000 ಹಾಗೂ ಧ್ಯೇಯವಾಕ್ಯಕ್ಕೆ(slogan) ರೂ 1000 ಘೋಷಿಸಲಾಗಿದೆ. interest ಇದ್ದವರು ಭಾಗವಹಿಸಬಹುದು
:-)

January 1, 2011

Enter 2011

ಎಲ್ಲರಿಗೂ ಹ್ಯಾಪ್ಪಿ ೨೦೧೧ :-)
ಇಲ್ಲಿದೆ ನಮ್ಮ ಕಂಪೆನಿ ಗ್ರಾಮ್ಯ ದ greeting card.
ನಿನ್ನೆ office ನಲ್ಲಿ new years eve party ಇತ್ತು. ನಮ್ಮ ಆಫಿಸ್ ನ ರಘುನಂದನ್ ಶ್ರೀವತ್ಸ್ ಶರ್ಮ ಮತ್ತು ಮೈಥಿಲಿ ಶರ್ಮ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಪದ್ಯ ಹಾಡಿದರು..ಹೊಯ್ಯಾ ರೆ ಹೊಯ್ಯ ರೆ ಹೊಯ್ಯ ಹೊಯ್ಯಾರೆ!!! it was nice. ಮತ್ತು ನಮ್ಮ ಶರ್ಮ ಅವರು ಜಿ.ಪಿ.ರಾಜರತ್ನಂ ಅವರ ದೊಡ್ಡ ಫ್ಯಾನ್. ’ಹೇಳ್ಕೊಳ್ಳಕ್ ಒಂದೂರು”(ರತ್ನನ್ ಪ್ರಪಂಚ) ಹಾಡಿದರು. ನಮ್ಮೆಲ್ಲರಿಗೂ 2010 ಹೇಗಾಯ್ತು ಮತ್ತು 2011 ನಲ್ಲಿ ನಾವೆಲ್ಲ ಏನು expect ಮಾಡ್ತಿದ್ದೀವಿ both on office and personal front, share ಮಾಡ್ಕೊಂಡ್ವಿ.
ಎಲ್ಲರಿಗೂ ಶುಭಾಶಯಗಳು
:-)