June 17, 2024

ಜೋಳದ ಹಿಟ್ಟಿನ ದೋಸೆ

 ನನ್ನ ತಿರುಗಾಟ ಸ್ವಲ್ಪ ಜಾಸ್ತಿ ಆಗಿದೆ. 😁.ಮೊನ್ನೆ ಡ್ರಮ್ ನಲ್ಲಿ ಒಂದು ಪೊಟ್ಟಣ ಜೋಳದ ಹಿಟ್ಟು ನೋಡಿದೆ. ಅದು ಹಾಳಾಗುವ ಮುಂಚೆ ಉಪಯೋಗಿಸಬೇಕು ಅಂದು ಕೊಂಡೆ.

ಒಂದರ್ಧ ಗ್ಲಾಸ್ ಉದ್ದಿನ ಬೇಳೆ

ಅರ್ಧ ಗ್ಲಾಸ್ ಕೆಂಪಕ್ಕಿ

2 ಗಂಟೆ ನೆನೆ ಹಾಕಿದೆ.

ನುಣ್ಣಗೆ ರುಬ್ಬಿ ಅದಕ್ಕೆ ಮೂರು ಗ್ಲಾಸ್ ಜೋಳದ ಹಿಟ್ಟು ಸೇರಿಸಿ ಪುನಃ ಮಿಕ್ಸಿ ಹಾಕಿದೆ.

ಉಪ್ಪು ಬೆರೆಸಿಟ್ಟೇ. 8 ಗಂಟೆಯ ನಂತರ ಒಳ್ಳೆಯ ಹುದುಗೂ ಬಂದಿತ್ತು

ರುಚಿ ರುಚಿಯಾದ ದೋಸೆ ತಯಾರಾಯಿತು. 👍❤️. ಎಷ್ಟು ರುಚಿಯಾಗಿತ್ತು ಅಂದ್ರೆ ರಾತ್ರಿಗೂ ಅದೇ ತಿಂದ್ವಿ...








June 13, 2024

ನಮ್ಮ ಮೆಟ್ರೋ

 ಜ್ಯೋತ್ಸ್ನಾ ಕಾಮತ್ ರ 'ಕಲಕತ್ತಾ ದಿನಗಳು' ಓದುತ್ತಾ ಇದ್ದೇನೆ. ಆಗಲೇ 85 ಪುಟಗಳನ್ನು ಓದಿದೆ. ರಾತ್ರಿ ಎಲ್ಲ ಓದಿದರೆ ಇನ್ನಷ್ಟು ಪುಟಗಳನ್ನು ಓದಬಹುದು. ಆದರೆ ಈ ಮನೆಯ ಬೆಳಕು ನನಗೆ  ಒದಲು ಸರಿ ಹೊಂದಲ್ಲ. ಟಿ ವಿ ಅಥವಾ ರೀಲ್ಸ್ ನೋಡೋದು..🙂

ಹಾಗೆ ಇವತ್ತು ಮಂಚದ ಕೆಳಗಿನ ಕ್ಲೀನಿಂಗ್ ಹಮ್ಮಿಕೊಂಡಿದ್ದೆ. ಶ್ರೀಕಾಂತ್ 'ಇವತ್ತು ಲಂಚ್ ತೆಗೆದುಕೊಂಡು ಹೋಗುವುದಿಲ್ಲ, ಆಫಿಸ್ ನಲ್ಲಿ ಊಟ ಇಟ್ಟುಕೊಂಡಿದ್ದಾರೆ ಅಂದರು'..ಹಾಗಾಗಿ ಬೆಳಿಗ್ಗೆ ಅಡಿಗೆಯ ಗಡಿಬಿಡಿ ಇರಲಿಲ್ಲ. ನಾವು ಸಿಂಪಲ್ ಏನಾದರೊ ಅಡಿಗೆ ಮಾಡಿ ಕೊಂಡರಾಯಿತೆಂದುಕೊಂಡೆವು.
ಮಂಚದ ಕೆಳಗಿನ ಕ್ಲೀನಿಂಗ್ ಅಂದರೆ ಸುಮ್ಮನೇನಾ? ಹಳೆ ಫೋಟೋ ಆಲ್ಬಮ್ ತೆರೆದು ನೋಡೋದು, ನಗೋದು, ನಿಹಾ ಬರೆದ  ಚಿತ್ರಗಳನ್ನು ನೋಡೋದು...ಸಣ್ಣ ಮಕ್ಕಳ ಪುಸ್ತಕದಲ್ಲಿನ illustrations ನೋಡೋದು...ನಿಹಾಳ ಸುಮಾರು ವಸ್ತುಗಳನ್ನು ಮೊನ್ನೆ ಕಾರ್ ನಲ್ಲಿ ಹಾಕಿ ಅವಳ ಮನೆಗೆ ಸಾಗಿಸಿದ್ದಾಯ್ತು. ಅವಳ ಹಾರ್ಮೋನಿಯಂ ತೆಗೆದು ಅಕ್ಕ ಸಾ ರಿ ಗ ಮ ನುಡಿಸಿದಳು...ಇವತ್ತು ಅವಳಿಗೆ ಬಿಡುವು, ಕೇಕ್ ಆರ್ಡರ್ ಇಲ್ಲ..ಇದನ್ನೆಲ್ಲ ಮಾಡಿ ಸುಮಾರು ಸಮಯ ಕಳೆದವು. ಊಟ ಮಾಡಿ ಪುನಹ ಬಾಲ್ಕನಿಯಲ್ಲಿ ಕೂತು ...ಇಲ್ಲಿ ಸುರಿಯುತ್ತಿರುವ  ಮಳೆಯ ಜತೆ ಕಲಕತ್ತಾ ದ ಮಳೆಯ ಬಗ್ಗೆ ಓದುತ್ತಿದೆ...


ಮೆಟ್ರೋ ರೈಲಿನ ಸದ್ದು ಕೇಳಿಸಿದಂತಾಯ್ತು...ಈಗೆಲ್ಲಿ ಟ್ರೈನು..ನನ್ನ ಕಿವಿಗೆ ಏನೇನೋ ಕೇಳಿಸ್ತಿದೆ ಅಂತ ತಲೆ ಎತ್ತಿದ್ರೆ...ಏನಾಶ್ಚರ್ಯ..ಮೆಟ್ರೋ ರೈಲು....ಅಕ್ಕಾ ಅಕ್ಕಾ ಮೆಟ್ರೋ ಟ್ರೈನ್ ಕಣೆ ಅಂದ್ರೆ..ಅವಳು ಬಂದು ಏನೇ ಅದು ನಿನ್ನ excitement ಉ..ಅಂದ್ಲು..ಯಾಕೋ ತುಂಬಾ ಖುಷಿ....😁😁 ನಮ್ಮ ಕಾರ್ ಗಿಂತ ಇದೆ ಹೆಚ್ಚು exciting

ಪುಸ್ತಕದಲ್ಲಿನ ಒಂದು funny ತುಣುಕು ನಿಮಗಾಗಿ
ಅದಾದ ಮೇಲೆ ಚೆಂದದ ಕಾಮನಬಿಲ್ಲು ಸಹಾ ಮೂಡಿತು 😁 enough excitement for an old woman 😁😁




June 11, 2024

a quick trip to ನಂಜನಗೂಡು

 ನಿಹಾ ಗೆ drop ಮಾಡಿ , ನಂಜನಗೂಡಿಗೆ ಹೋಗಿ ಬಂದೆವು....ನಮ್ಮ ಗಾಡಿಯಲ್ಲಿ ಮೊದಲ  ಟೂರ್

cute dashboard ಗಣಪ


ಶ್ರೀಕಂಠೇಶ್ವರ ದೇವಸ್ಥಾನ






ಅಲ್ಲಿನ ಅನ್ನಪೂರ್ಣೆಶ್ವರಿಮೆಸ್ ನಲ್ಲಿ ಊಟ ಮಾಡಿ, 


ಪ್ರಸಿದ್ಧ ನಂಜನಗೂಡಿನ ರಸಬಾಳೆಯೊಂದಿಗೆ ಬೆಂಗಳೂರಿಗೆ ಮರಳಿದೆವು 🙂🙂🙏👍

June 4, 2024

ನಮ್ಮದೊಂದು ಗಾಡಿ

 expect ಎ ಮಾಡಿರಲಿಲ್ಲ ಈ ಜನ್ಮದಲ್ಲಿ ಕಾರ್ ತೆಗೆದುಕೊಳ್ಳುತ್ತೇವೆಂದು. ನಾನು ಚಿಕ್ಕವಳಿದ್ದಾಗ ಅಜ್ಜ ಅಜ್ಜಿಯೊಂದಿಗೆ ಇದ್ದೆ ಸುಮಾರು ವರ್ಷ. ಅಜ್ಜನ ಬಳಿ ಕಾರು, ಕೆಲಸಕ್ಕೆ ಆಳು ಕಾಳು.. ಹೀಗೆ ರಾಣಿಯಂತೆ ಬೆಳೆದಿದ್ದೆ.

ಮದುವೆಯ ನಂತರ ಇವರು, ಕಾರ್ ಎಲ್ಲ ತೆಗೆದುಕೊಳ್ಳುವುದಿಲ್ಲ.  we will not add to the pollution ಅಂದಿದ್ದರು. ಆದರೆ ಬೈಕ್ ನಲ್ಲಿ esp ಬುಲ್ಲೆಟ್ ಬೈಕ್ ನಲ್ಲಿ ಮಜ್ಜಾ ಮಾಡಿದ್ದೇವೆ, friends ಒಟ್ಟಿಗೆ. organic lifestyle ಈಗ ಒಂದು ತರಹ ಫ್ಯಾಷನ್ ಮಾದರಿಯಲ್ಲಿ ನಡೆಸುತ್ತಿದ್ದಾರೆ...ಇಲ ಇಲ್ಲ i ಆಮ್ not against ಇಟ್,.... ಆದರೆ ನಾವು 37 ವರ್ಷಗಳಿಂದ ನಮ್ಮದು ಸಾವಯವ ಜೀವನ ಶೈಲಿ.ಶ್ರೀಕಾಂತ್ ಬ್ಯಾಂಕ್ ನಲ್ಲಿ ಕೆಲಸಕ್ಕಿದ್ದಾಗ,  ಬೇರೆ ಬೇರೆ ಊರುಗಳಲ್ಲಿ ಇದ್ದಾಗ,, ಅದೂ independent ಮನೆಗಳಲ್ಲಿ ಬಾಡಿಗೆಗೆ ಇದ್ದಾಗ , ತರಕಾರಿ, ಬೇಳೆ ಹಣ್ಣು ತೊಳೆದ ನೀರಿನಿಂದ ಗಿಡಗಳ ಬೆಳವಣಿಗೆ..ಇದಕ್ಕೆ ತೀರ್ಥಹಳ್ಳಿಯ ದಿ. ಶ್ರೀ ಪುರುಷೋತ್ತಮ ರಾಯರಿಗೆ ಎಷ್ಟೇ ಧನ್ಯವಾದಗಳು ಸಲ್ಲಿಸಿದರೂ ಕಡಿಮೆ. ...ಅಲಸಂದೇ, ಬೆಂಡೆ, ಮೂಲಂಗಿ, ಬೂದುಗುಂಬಳ, ತೊಂಡೆಕಾಯಿ ಏನು ರುಚಿ ಅಂತೀರಾ...ಬೆಂಗಳೂರಿಗೆ ಬಂದ ಮೇಲೆ ತರಕಾರಿ ಎಲ್ಲ ಸಾಧ್ಯವಾಗುತ್ತಿಲ್ಲ, ಕೆಲವು ಹೂ, ಅಲಂಕಾರಿಕ ಗಿಡಗಳು ಮಾತ್ರ....ಪ್ಲಾಟ್ ನ space constraint...ಆದರೂ ಕಾಂಪೋಸ್ಟ್ ಖಂಬ ಇಟ್ಟಿದ್ದೇನೆ. ಜಾಸ್ತಿ compost ಬೆಳಗಾವಿಯ ಅಮ್ಮನ ತಾರಸಿ ಗಾರ್ಡನ್ ಗೆ ಹೋಗುತ್ತೆ...

ಈಗ ತೀರಾ ಸಾವಯವ ಜೀವನ ಶೈಲಿ ಸಾಧ್ಯವಾಗುತ್ತಿಲ್ಲ, ಆದಷ್ಟು ಪ್ರಯತ್ನವಂತೂ ಮಾಡುತ್ತೇವೆ ನಾವು ನಾಲಕ್ಕೂ ಜನ 🙏🙏❤️

ನಮ್ಮ ಸ್ವಂತ ಮನೆಗೆ ಬಸ್, ಮೆಟ್ರೋ ಸೌಕರ್ಯ  ಇದ್ದಾಗ ಕಾರ್ ತೆಗೊಂಡಿದ್ದು ನನಗೆ ಆಶ್ಚರ್ಯ.. 🤔🤔

anyways ನೆಟ್ಟಕಲ್ಲಪ್ಪ ವೃತ್ತ ಗಣಪತಿ ದೇವಸ್ಥಾನದ ಪುರೋಹಿತರು ಚೆಂದದ ಪೂಜೆ ಮಾಡಿ ಕೊಟ್ಟರು. 🙏🙏


ಆದರೆ ವಿಷಯ ಅದಲ್ಲ. ಪೂಜೆಗೆ ಆಫಿಸ್ ಹತ್ತಿರ ಬನ್ನಿ. ಬನಶಂಕರಿ ಮೆಟ್ರೋ ಬಳಿಯಿಂದ ಹೂ, ನಿಂಬೆ ಹಣ್ಣು ತೆಗೊಂಡು ಬನ್ನಿ ಅಂದಿದ್ರು ಶ್ರೀಕಾಂತ್..ಹಾಗೆ ಹೂ ತೆಗೊಂಡು ಸುಮಾರು ಮುಂದೆ ಬಂದ ಮೇಲೆ ಹಿಂದ ಗಡೆಯಿಂದ ಸುಮಾರು ಜನರು ಆವಾಜ್ ಹಾಕಲು ಶುರುಮಾಡಿದರು. ಮ್ಯಾಡಮ್ ಮ್ಯಾಡಮ್ ಅಂತ....ನಾನು, 'ಮಾಲವಿಕಾ ಬ್ಯಾಗ್ ಬಿಟ್ಟು ಬಂದಿರ ಬೇಕೆಂದು ಕೊಂಡೆ' ಅವಳು ಪುನಃ ಅಲ್ಲಿ ಹೋದಾಗ ಹೂವಿನವಳು ಒಂದು ಮೊಳ ಮಲ್ಲಿಗೆ ಕೊಟ್ಟು, ಅಮ್ಮನಿಗೆ ಈಗಲೇ ಮುಡಿದುಕೊಳ್ಳಲು ಹೇಳು' ಅಂದಳಂತೆ...ಇದರ ಬಗ್ಗೆ ಪೋಸ್ಟ್ ಮಾಡು ಅಂತ ಮಾಲವಿಕ ಫೋಟೋ ತೆಗೆದಾಗ...

ಹೂವಿಗೆ ಏನು ಘಮ ಅಂತೀರಾ...ಮ್ಮ್ಮ್ಮ್ಮ್



ನನಗೆ ಗಾಡಿಗಿಂತ ,ಗಿಫ್ಟ್ ಅಂತ ಕೊಟ್ಟ ಈ ಮಗ್ ಮತ್ತು ಪುಟ್ಟ ಗಿಡ ಹೆಚ್ಚು ಇಷ್ಟ ಆದವು ❤️❤️😁😁


Happy World Environment Day ❤️❤️


June 1, 2024

Beautiful Lalbag : walk/talk/eat

 Srikanth's Agriculture college batch mates meet once in a while with their better halfs. This time we had the lalbag tours. One of the batch mate Shri P B Ramamoorthy is an IAS Cadre who arranged  horticulture officials to show us around the lalbag, esp the exotic plants and trees. This was followed by special arrangements for breakfast at MTR. 

some pictures..







why go to other countries when we have our own beautiful flora & fauna


butter cup leaf..it is believed Lord Krishna ate butter from this 🤔🤔, ಗೊಳಿ ಮರ


the first chikku/sapota tree planted 200 years ago 🙏👍



our guides who were patient with us and helped take lots of pictures.







also shared pics clicked by Shri Ashok Kulkarni 🙏🙏.
after heavy breakfast simple lunch @home..