coffee filter clean ಮಾಡುವ ಬಗೆ
ಮೊದಲೆಲ್ಲ ನಾನು ಸೇಫ್ತಿ ಪಿನ್ ನಿಂದ ಒಂದೊಂದೇ ತೂತು ಚುಚ್ಚಿ ಕ್ಲೀನ್ ಮಾಡ್ತಿದ್ದೆ. ಈಗ 👇👇🙂🙂
ನಾನು ಮಾಡುವ ಕಾಫಿ world ಫೆಮಸ್ಸು 🙂🙂. ನಮ್ಮ ಮನೆಯಲ್ಲಿ ಕಾಪಿ without ಚಿಕೋರಿ. ಇದು ಜಯನಗರ 9ನೆ ಬ್ಲಾಕ್ ನ just coffee ನಲ್ಲಿ ಲಭ್ಯ...
coffee filter clean ಮಾಡುವ ಬಗೆ
ಮೊದಲೆಲ್ಲ ನಾನು ಸೇಫ್ತಿ ಪಿನ್ ನಿಂದ ಒಂದೊಂದೇ ತೂತು ಚುಚ್ಚಿ ಕ್ಲೀನ್ ಮಾಡ್ತಿದ್ದೆ. ಈಗ 👇👇🙂🙂
ನಾನು ಮಾಡುವ ಕಾಫಿ world ಫೆಮಸ್ಸು 🙂🙂. ನಮ್ಮ ಮನೆಯಲ್ಲಿ ಕಾಪಿ without ಚಿಕೋರಿ. ಇದು ಜಯನಗರ 9ನೆ ಬ್ಲಾಕ್ ನ just coffee ನಲ್ಲಿ ಲಭ್ಯ...
ಇದೊಂದು ಪಕ್ಕಾ 1೦೦% ಕೊಂಕಣಿ ಅಡುಗೆ. ತುಂಬಾ ಜನ ಧಾವಂತದ ಈ ಬದುಕಿನಲ್ಲಿ ಮರೆತಿರಬಹುದು. ಈ ಕೋದ್ದೆಲ್ ಅಥವಾ ಹುಳಿ ಇದ್ದಲ್ಲಿ ಒಂದು ತುತ್ತು ಹೆಚ್ಛೆ ಉಣ್ಣಬಹುದು. ಸಾಧಾರಣವಾಗಿ ಇದು ಮಳೆಗಾಲದಲ್ಲಿ ಮಾಡುವಂತಹ ಅಡುಗೆ. ಆದರೆ ಈಗ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ಮಂಗಳೂರು ಸ್ಟೋರ್ಸ್ ನಲ್ಲಿ ಉಪ್ಪಿಗೆ ಹಾಕಿಟ್ಟ ಮಾವಿನ ಕಾಯಿ ಹಾಗೂ ಹಲಸಿನ ಸೊಳೆ ಯಾವತ್ತೂ ಲಭ್ಯ.
ಇದಕ್ಕೆ ಬೇಕು : ಉಪ್ಪಿಗೆ ಹಾಕಿಟ್ಟ ಹಲಸಿನ ಸೊಳೆ, ಉಪ್ಪಿಗೆ ಹಾಕಿಟ್ಟ ಮಾವಿನ ಕಾಯಿ.
ಹಲಸಿನ ಸೊಳೆಯನ್ನು ರಾತ್ರಿಯೇ ನೀರಲ್ಲಿ ಹಾಕಿಡಿ. ಬೆಳಿಗ್ಗೆ ಚೆನ್ನಾಗಿ ತೊಳೆದು ನೀರಲ್ಲಿ ಹಾಕಿಡಿ. ಉಪ್ಪೆಲ್ಲ ಕಡಿಮೆಯಾದ ಮೇಲೆ, ತೊಳೆದ ಮಾವಿನ ಕಾಯಿ ಜತೆ ಬೇಯಿಸಿ.
ಮಸಾಲೆಗೆ : ತೆಂಗಿನ ಕಾಯಿ ತುರಿ, ಕೆಂಪು ಮೆಣಸು, ಚೂರೇ ಚೂರು ಹುಣಸೆ...ಬೇಯಿಸಿದ ನೀರು ಸೇರಿಸಿ ನುಣ್ಣಗೆ (ಕೊಂಕಣಿಯಲ್ಲಿ ಗಾಂಧ್..ಅಂದ್ರೆ ಗಂಧ ದಷ್ಟು ನುಣುಪು) ರುಬ್ಬಿ. ನಿಮಗೆಷ್ಟು ತೆಳ್ಳಗೆ ಬೇಕು ಅಷ್ಟು ನೀರು ಸೇರಿಸಿ. ಉಪ್ಪು ಚೆಕ್ ಮಾಡಿ ಬೇಕಿದ್ದಲ್ಲಿ ಸೇರಿಸಿ.
ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಒಗ್ಗರಣೆ ಹಾಕಿ...
ಇನ್ನು ಶ್ರಾವಣ ಶುರು...ನಾನ್ ವೆಜ್, ಬೆಳ್ಳುಳ್ಳಿ, ನೀರುಳ್ಳಿ ನಿಷಿದ್ಧ...ಅದಕ್ಕೆ ಮುಂಚೆ ಈ ಪದಾರ್ಥ ಮಾಡಿ ತಿಂದು....
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...❤️🙏🙂👍
ಮರೆತುಹೋದ ಈ ಖಾದ್ಯ ನೆನಪಿಸಿದ ಷಡ್ರಸ channel ಗೆ ತುಂಬು ಹೃದಯದ ಧನ್ಯವಾದಗಳು..
please subscribe to this channel 👆👆🙏🙏
brined mango courtesey : Dr. Rajendra Hegde
ಸೀಮೆ ಅಕ್ಕಿ/ಸಾಬಕ್ಕಿ/ಸಾಬುದಾನಾ + ಪರಿಮಳದ ಅಕ್ಕಿ ಅರ್ಧ ಘಂಟೆ ನೀರಲ್ಲಿ ನೆನೆಸಿಟ್ಟು, ಆಮೇಲೆ ಸರಿ ನೀರು ಹಾಕಿ ಬೇಯಿಸಿ. ಹಾಲು +ಸಕ್ಕರೆ ಕುದಿ ಬರೆಸಿ. ಇದಕ್ಕೆ ಬೆಂದ ಸೀಮೆ ಅಕ್ಕಿ ಮಿಶ್ರಣ ಬೆರೆಸಿ. ಏಲಕ್ಕಿ ಪುಡಿ ಸೇರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ. ತಣ್ಣಗಾದ ಮೇಲೆ ಮಾವಿನ ಹಣ್ಣಿನ puree ಬೆರೆಸಿ. ಖೀರ್ ತಯ್ಯಾರ್..🙂👍
ಒಂದು vlog ನೋಡ್ತಿದ್ದೀನಿ. ಭಾರತಿ ಕೌರ್ ಕನ್ನಡ ವಾಲ್ಗ್ s.ಅದರಲ್ಲಿ ಆ ಮಹಿಳೆ ತನ್ನ ಅಮ್ಮನ ಬಗ್ಗೆ ಅಷ್ಟೊಂದು ಒಳ್ಳೆ opinion ಇದ್ದ ಹಾಗೆ ಇಲ್ಲ. she is a straightforward lady. ಏನು ಮುಚ್ಚು ಮರೆಯಿಲ್ಲ. and sometimes i agree with her viewpoints. just because one is a mother we need not keep them on a pedestal. They are human beings too with their faults.
ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ 2 ಲಕ್ಷ ದಾಟಿದೆ ಆ0ತ ಸುಮ್ಮನೆ ಹೇಳಿದ್ದು, ನಿಹಾ ನನಗೋಸ್ಕರ ಒಂದು ಸರ್ಪ್ರೈಸ್ ಕೇಕ್ ತಂದ್ಲು. 😁😁❤️
ಮಾಲವಿಕಾ ನನ್ನ ಇಷ್ಟದ ದಹಿ ವಡಾ ಮಾಡಿದಳು.
ಈಗ ಈ ಪೋಸ್ಟ್ ಬಗ್ಗೆ ಕೆಂಪು ಬಣ್ಣದ ಬಾಳೆ.
ಹಣ್ಣಾಗಿ ಮಾತ್ರ ಉಪಯೋಗಿಸುವುದು ಅಂದು ಕೊಂಡಿದ್ದೆ. ನಿನ್ನೆ ಶ್ರೀಕಾಂತ್ ಆಫಿಸ್ ನ ಪ್ರಶಾಂತ್ ಹೆಗ್ಡೆ, ಅವರ ಊರಿನ ತೋಟದಿಂದ ತಂದ ಕೆಂಪು ಬಾಳೆ ಕಳುಹಿಸಿ ಕೊಟ್ಟಿದ್ದರು. ಸುಮಾರು ಇವೆ. ಅದು ತುಂಬಾ starchy ಆಗಿರುವ ಕಾರಣ ಮನೆಯಲ್ಲಿ ಯಾರೂ ಅಷ್ಟು ಇಷ್ಟ ಪಡಲ್ಲ. ಅದಕ್ಕೆ ಅವರು ತರಕಾರಿ ರೂಪದಲ್ಲಿ ಉಪಯೋಗಿಸುತ್ತೇವೆ ಅಂದ್ರು. ನಿನ್ನೆ ನಮ್ಮ ಕೊಂಕಣಿ spl ಕಿಸಮುರಿ ಮಾಡಿದ್ದೆ. ಇವತ್ತು ಕಾವಲಿ ಮೇಲೆ ಪ್ರೈ...ತುಂಬಾ ರುಚಿಯಾಗಿದೆ. ಶ್ರೀಕಾಂತ್ ನಾನು ಸೆಪ್ಪೆ ತಿಂದಿದ್ದು, ಆದರೂ ರುಚಿಯಾಗಿತ್ತು. ಇನ್ನು ಏನೇನು ಮಾಡಬಹುದು ಅಂತ ಆಲೋಚಿಸುತ್ತಾ ಇದ್ದೇನೆ...🙂👍
Strawberry moon all the way from US. ಆ ದಿನ ಇಲ್ಲ8 ಬೆಳಿಗ್ಗೆ ಮಳೆ, ರಾತ್ರಿ ಮೋಡ ಇದ್ದುದರಿಂದ ಇಲ್ಲಿ ಚಂದ್ರ ಕಾಣಲಿಲ್ಲ.
ಇದು ತಂಗಿಯ ರೆಸಿಡೆಂಟ್ ಗುಂಪಲ್ಲಿ share ಮಾಡಿದ್ದಂತೆ.