August 30, 2009

ಗಣಪತಿ ಹಬ್ಬ

ಮುಂಬೈನಲ್ಲಿ, ಗಣಪತಿ ಸ್ಥಾಪಿಸಿದ ಮೂರನೆ ದಿನ ಅಲ್ಲಿನ ಹೆಚ್ಚಿನ ಜನರು ವಿಗ್ರಹಗಳನ್ನು ವಿಸರ್ಜಿಸುತ್ತಾರೆ. ಆ ದಿನ ಎಲ್ಲ ಸ್ಕೂಲು, ಕಛೇರಿ ಅರ್ಧ ದಿನ ಕೆಲಸ ಮಾಡುತ್ತವೆ. ಮಧ್ಯಾನ್ಹ ಮೂರು ಗಂಟೆಗೆ ಒಂದೊಂದೆ ಗಣಪತಿ ಸಮುದ್ರದ ಕಡೆ ಬರುತ್ತವೆ. ನಮ್ಮ ಮನೆ ಸಮುದ್ರದ ಬಹಳ ಹತ್ತಿರ ವಿರುವ ಗೋವಿಂದ ಸಾಗರ್ ಅಪಾರ್ಟ್ ಮೆಂಟ್ ನ 5 ಮಹಡಿಯಲ್ಲಿ. ಅಲ್ಲಿಂದ ಸಮುದ್ರದ ಬಹುಪಾಲು ವೀಕ್ಷಣೆಗೆ ಸಿಗುತ್ತಿತ್ತು. ಅಮ್ಮ ತುಂಬ ಕುರುಕಲು ತಿಂಡಿಯ ಸ್ಟಾಕ್ ready ಇಡುತ್ತಿದ್ದರು. ನನ್ನ ಗೆಳತಿಯರೆಲ್ಲ ಆ ದಿನ ನಮ್ಮ ಮನೆಯಲ್ಲೇ. ಮೂರು ಗಂಟೆಗೆ ಕಿಟಕಿಯಿಂದ ತಲೆ ಹೊರಗೆ ಹಾಕಿದರೆ, ರಾತ್ರಿ 12.00 ಗಂಟೆವರೆಗೆ ನಮಗೇ ಇದೇ ಕೆಲಸ.

ದೊಡ್ಡ ಗಾತ್ರದ,ವಿವಿಧ ಭಂಗಿಯ, ಬಣ್ಣ ಬಣ್ಣದ ಗಣಪತಿ ವಿಗ್ರಹಗಳನ್ನು ಟ್ರಕ್ ಮೇಲೆ, ಚಿಕ್ಕ ಮೂರ್ತಿಗಳನ್ನು ಮಣೆ ಮೇಲೆ ಇಟ್ಟುಕೊಂಡು ಕೈಯಲ್ಲಿ ಹಿಡಿದುಕೊಂಡು, ಅಥವ ಬೀದಿಯವರೆಲ್ಲ ಸೇರಿ ತಮ್ಮ ತಮ್ಮ ಮನೆಯ ಗಣಪನನ್ನು ತಳ್ಳುವ ಗಾಡಿಯಲ್ಲಿ ಒಟ್ಟಾಗಿ ಇಟ್ಟುಕೊಂಡು ಸಮುದ್ರ ದ ಬಳಿಗೆ, ಕುಣಿದು, ಕುಪ್ಪಳಿಸಿ, ಬಣ್ಣ ಎರಚುತ್ತ, ಲೇಜಿಮ್ ಆಡುತ್ತ, ಕೋಲಾಟ , ಗಣಪತಿ ಭಜನೆ ಹೇಳುತ್ತ , ಗಣಪತಿ ಬಪ್ಪಾ ಮೋರಯ, ಫುಡ್ಚಾ ವರ್ಷೀ ಲೌಕರ್ ಯಾ ಘೋಷದೊಂದಿಗೆ, ಜನರು ಹೋಗುವುದನ್ನು ನೋಡುವುದು ಗಮ್ಮತ್ತು. ಥೀಮ್ ಗಣಪತಿ ನೋಡುವುದು ಕೂತುಹಲಕಾರಿಯಾಗಿರುತ್ತಿತ್ತು. ಜುರಾಸಿಕ್ ಪಾರ್ಕ್ ಸಿನಿಮಾ ಬಂದಾಗ ಗಣಪತಿ ವಿಗ್ರಹದ ಆಜು ಬಾಜು ಡಿನಾಸೌರ್ ಇಡಲಾಗಿತ್ತು, ಕರೆಂಟ್ ನಿಂದ ಓಡಿಸುವ ಈ ಡಿನಾಸೌರ್ ಗಳು ಗಳಿಗೆಗೊಂದು ಸಲ ಬಾಯಿ open & close, ಕುತ್ತಿಗೆ ಅಲ್ಲಾಡಿಸುತ್ತಿದ್ದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ರೋಮಾಂಚನ. ಅಥವಾ ಯಾವುದಾದ್ರು ಪೌರಾಣಿಕ ಕಥೆಯಾಧಾರಿತ,ಯಾ ಜೋಳ ಬೀಸುವ / ಭಾಕ್ಕರಿ ಬಡಿಯುವ ಮಹಿಳೆಯರು, ಜೋಡೆತ್ತನ್ನು ಓಡಿಸುವ ರೈತ ಮುಂತಾದ tableau ಇರುತ್ತಿತ್ತು.

5 ನೆ ಮಹಡಿಯಲ್ಲಿನ ನಮ್ಮ flat ನಿಂದ ಸಮುದ್ರ ತೀರದಲ್ಲಿ ಸೇರಿದ ಅಪಾರ ಜನಸ್ತೋಮ ಇರುವೆಗಳಂತೆ ಕಾಣುತ್ತಾರೆ.ಎಷ್ಟೋ ಮಕ್ಕಳು ಕಾಣೆಯಾಗಿದ್ದಾರೆ. ಕೆಲವರು ಜಖಂ ಗೊಂಡಿದ್ದಾರೆ. ಆದರೂ ಜನರಲ್ಲಿನ ಉತ್ಸಾಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಲೋಕಮಾನ್ಯ ಠಳಕ್ (balagangadhar Tilak) ಗಣೇಶ ಚತುರ್ಥಿಯನ್ನು national Festival ನ ಮನ್ನಣೆ ಕೊಟ್ಟರು. ಸಮಾಜದ ಎಲ್ಲ ಬಂಧು ಬಾಂಧವರು ಜಾತಿ-ಮತ ಲೆಕ್ಕಿಸದೆ ಇದರಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು. ಹಾಗೇ ಈಗಲೂ ಅದು ಚಾಲ್ತಿಯಲ್ಲಿದೆ.ಗಲಿ ಗಲಿ ಗಳಲ್ಲಿ ಚೆನ್ನಾಗಿ ಅಲಂಕರಿಸಲ್ಪಡುವ ರುವ ಪಂಡಾಲ್ ಗೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

ಇದೆಲ್ಲ ಸುಮಾರು ವರ್ಷಗಳ ಹಿಂದಿನ ಮುಂಬಯಿನ ಗಣೇಶ ಚತುರ್ಥಿ ಆಚರಣೆ ವಿಷಯವಾಯಿತು.

ನಾನು ಮದುವೆ ಯಾಗಿ ಮಹಾನಗರಿ ಮುಂಬೈ ನಿಂದ ಪುಟ್ಟ ತೀರ್ಥಹಳ್ಳಿಗೆ ಬಂದೆ. ಇಲ್ಲಿ ನಾವು ಮನೆಯಲ್ಲೇ ಗಣೇಶನ ವಿಗ್ರಹ ಮಂಡಿಸಿ ಒಂದು ದಿನ ಪೂಜಿಸಿ, ಸಂಜೆ ತುಂಗೆಯಲ್ಲಿ ವಿಸರ್ಜಿಸುತ್ತ ಬಂದಿದ್ದೇವೆ. ನಮ್ಮದು ದೊಡ್ಡ ಕುಟುಂಬ ಆದುದರಿಂದ ಉಸಿರಾಡಲು ಪುರುಸೊತ್ತು ಸಿಗುವುದಿಲ್ಲ. ಮೋದಕ, ಪತ್ರೊಡೆ ಮತ್ತು ಸೆಪ್ಪೆ ಖೀರಿ (Recipe given below) ಇವುಗಳನ್ನು ತಯಾರಿಸುವುದು ಯಾವತ್ತೂ ನನ್ನ Department.

ಬಂದ ನೆಂಟರಿಷ್ಟರು, ಸ್ನೇಹಿತರು ಎಲ್ಲರೂ ಅಡುಗೆ ರುಚಿಯಾಗಿದೆ ಎಂದು ಉಣ್ಣುವಾಗ ಖುಶಿಯಾಗುತ್ತೆ. ಆದರೆ ಒಂದು ದಿನನೂ ಗಣಪ ನಿನ್ನ ಅಡುಗೆ ಚೆನ್ನಗಿದೆ ಅಂತ ಹೇಳಲೇ ಇಲ್ಲ ಅಂತ ಬೇಜಾರು

ತೀರ್ಥಹಳ್ಳಿಯಲ್ಲಿ ,ನಾನು ಮದುವೆಯಾಗಿ ಬಂದ ಹಾಗೆ ಇಡಿ ಊರಿಗೆ ಎರಡೆ- ಟೌನ್ ಹಾಲ್ ಹಾಗೂ ಒಂದು ಕುರುವಳ್ಳಿಯಲ್ಲಿ -ಸಾರ್ವಜನಿಕ ಗಣಪತಿ ಇಡುತ್ತಿದ್ದರು. ಸಾಯಂಕಾಲ ಒಳ್ಳೆಯ ಸಂಗೀತ ಕಾರ್ಯಕ್ರಮಗಳು, ಹರಿಕಥೆ, ಶಾಸ್ತ್ರೀಯ ನೃತ್ಯಗಳು, ಇರುತ್ತಿದ್ದವು. ಒಂದು ಒಗ್ಗಟ್ಟಿತ್ತು. ಗಮ್ಮತ್ತಿತ್ತು. ನಾವು ನಮ್ಮ ಗಣಪನನ್ನು ವಿಸರ್ಜಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಅಂಧ ಮಕ್ಕಳು ಮಾಡಿದ ಯಕ್ಷಗಾನ ಇನ್ನೂ ನನ್ನ ಕಣ್ಣ ಮುಂದಿದೆ.ಮೈ ಎಲ್ಲ ಝಂ ಎಂದಿತ್ತು ಆಗ. ಅಂಧ ಮಕ್ಕಳು ಅಂತ ಮೊದಲೇ announce ಮಾಡಿರದಿದ್ದರೆ ಗೊತ್ತೇ ಆಗುತ್ತಿರಲಿಲ್ಲ ಹಾಗಿತ್ತು ಅವರ ಯಕ್ಷಗಾನ ಪ್ರದರ್ಶನ. ಕಹಾಂ ಗಯೇ ಓ ದಿನ್

ಆದರೆ ಇತ್ತೀಚಿಗೆ ಗಲ್ಲಿಗೊಂದು ಗಣಪತಿ, ಮತ್ತು orchestra ದಲ್ಲಿ ಸಿನಿಮಾ ಹಾಡುಗಳದ್ದೆ ಅಬ್ಬರ. ಗಣೇಶನ ಹೆಸರಿನಲ್ಲಿ ದುಡ್ಡು ಒಟ್ಟು ಮಾಡಿ, ಸ್ವಲ್ಪವನ್ನು ಮಾತ್ರ ಹಬ್ಬಕ್ಕೆ ವಿನಿಯೋಗಿಸಿ ಉಳಿದ ದುಡ್ಡಿನಿಂದ ಕುಡಿತಕ್ಕೆ ತೊಡಗುತ್ತಾರೆ.
ಇತ್ತೀಚಿಗಿನ ನಾಲ್ಕೈದು ವರುಷಗಳಿಂದ ನಮ್ಮ ಮನೆಯಲ್ಲಿ ಮಣ್ಣಿನ ಗಣಪ. ಹಲವಾರು ವರ್ಷಗಳಿಂದ ನಮಗಾಗಿ ಗಣಪತಿ ವಿಗ್ರಹ ಮಾಡುತ್ತಿದ್ದ ಒಂದು ಕುಟುಂಬವಿತ್ತು. ಅವರಿಗೆ ಬಣ್ಣ ಹಾಕದೇ ಇರುವ ಗಣಪ ಮಾಡಿಕೊಡ್ರಿ ಅಂದ್ರೆ ಅವರು ಮಾಡಿ ಕೊಡಲೇ ಇಲ್ಲ. ಬೇರೆಯವರ ಬಳಿ ಹೋಗಲು ನಮಗೂ ಮುಜುಗರ. ಆದ್ರೆ ಐದು ವರ್ಷಗಳ ಹಿಂದೆ ಆ ಶಿಲ್ಪಿ ತೀರಿ ಕೊಂಡು ಅವರ ಮನೆಯಲ್ಲಿ ಈಗ ವಿಗ್ರಹ ಮಾಡುವವರು ಯಾರೂ ಇಲ್ಲ. ಇದ್ದ ಇಬ್ಬರು ಮಕ್ಕಳು ಬೆಂಗಳೂರಿನ ಥಳುಕು ಬೆಳಕಿಗೆ ಮರುಳಾಗಿ ಹೋಟೆಲ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ಚೂರು harmful ರಾಸಾಯನಿಕ ಬಣ್ಣ ಬಳಸದೆ.....ಶುದ್ದ ಮಣ್ಣಿನಿಂದ ಮಾಡಿದ ನಮ್ಮ ಮುದ್ದು ಗಣಪ (in pic)




ಸೆಪ್ಪೆ ಖೀರಿ:

ಎರಡು ಅರಸಿನ ಎಲೆ ತೊಳೆದು ಒರೆಸಿದ್ದು.

1 ಪಾವು ಅಕ್ಕಿ , ಎರಡು ತೆಂಗಿನ ಕಾಯಿಯಿಂದ ತೆಗೆದ ಹಾಲು

ಅಕ್ಕಿಯನ್ನು 3 ಗ್ಲಾಸ್ ನೀರಿನಿಲ್ಲಿ ಮೆತ್ತಗಾಗುವರೆಗೆ ಬೇಯಿಸಿ. ಬೇಯುವಾಗ ಅರಸಿನ ಎಲೆ ಹಾಕಿ. ತೆಂಗಿನಕಾಯಿ ಹೆರೆದು ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಿಕ್ಸಿಯಲ್ಲಿ ಹಾಕಿ. ಆಮೇಲೆ strainer ನಲ್ಲಿ ಸೋಸಿ ತೆಂಗಿನ ಹಾಲು ತೆಗೆಯಿರಿ. ಬಡಿಸುವ ಮುನ್ನ ಬೆಂದ ಅನ್ನಕ್ಕೆ ತೆಂಗಿನ ಹಾಲು ಬೆರೆಸಬೇಕು. ಸೆಪ್ಪೆ ಖೀರಿ ನಮ್ಮಲ್ಲಿ ಗೌರಿಗೆ ನೈವೈದ್ಯವನ್ನಾಗಿ ಮಾಡುತ್ತೇವೆ. ಉಣ್ಣುವಾಗ ಸ್ವಲ್ಪ ಉಪ್ಪು, ಉಪ್ಪಿನಕಾಯಿ ಹಾಕಿಕೊಳ್ಳಿ.

ಅರಸಿನ ಎಲೆಯ antiseptic property ದೇಹಕ್ಕೆ ಒಳ್ಳೆಯದು. ರುಚಿಕರವಾಗಿಯೂ ಇರುತ್ತದೆ.

August 28, 2009

ಹೂವಿನ ಅಭಿಲಾಷೆ (ಪುಷ್ಪ ಕಿ ಅಭಿಲಾಷಾ)

ನನ್ನ ಚಿಕ್ಕಂದಿನ ಅತೀ ಪ್ರಿಯವಾದ ಪದ್ಯವನ್ನು (ಹಿಂದಿ)ಇಲ್ಲಿ translate ಮಾಡಿ ಹಾಕಿದ್ದೇನೆ. ನೀವು ಇದನ್ನು ಓದಿರಬಹುದು...ಚಾಹ ನಹೀಂ ಮೈ ಸುರ್ ಬಾಲಾ ಕೆ ಗೆಹೆನೋಂ ಮೆಂ ಗೂಂಥಾ ಜಾಉಂ

ಆಸೆಯಿಲ್ಲ ನನಗೆ
ದೇವಕನ್ನಿಕೆಯ ಕೊರಳ ಆಭರಣವಾಗಿ
ಶೋಭಿಸಲು

ಆಸೆಯಿಲ್ಲ ನನಗೆ
ಮನಸೆಳೆವ ಮಾಲೆಯ ಸೇರಿ
ಪ್ರೇಮಿಕೆಗೆ ಪ್ರಲೋಭನೆಯಾಗಲು

ಆಸೆಯಿಲ್ಲ ನನಗೆ
ಸಾಮ್ರಾಟರ ಶವದ ಮೇಲೆ
ಕುಳಿತು ರಾರಾಜಿಸಲು

ಆಸೆಯಿಲ್ಲ ನನಗೆ
ದೇವರ ಮುಡಿ ಏರಿ
ನನ್ನ ಅದೃಷ್ಟಕ್ಕೆ ಗರ್ವಪಡಲು

ಕಿತ್ತು ಬಿಡು ವನಮಾಲಿ
ನನ್ನನ್ನು ಎಸೆದು ಬಿಡು
ನಾಡಿಗಾಗಿ ನೆತ್ತರು ಹರಿಸಲು
ವೀರಯೋಧರು ತುಳಿವ ಹಾದಿಯಲಿ

- ಮಾಖನ್ ಲಾಲ್ ಚತುರ್ವೇದಿ

(ಹಿಂದಿಯಿಂದ ಕನ್ನಡಕ್ಕೆ- ಮಾಲತಿ ಎಸ್.)

August 26, 2009

ಆಲು ಪೋಹ


ಅಲೂ ಪೋಹಾ (ಉಹಾಪೋಹ ಅಲ್ಲಾ)


ಬೇಕಾಗುವ ಪದಾರ್ಥಗಳು:


ದಪ್ಪ ಅವಲಕ್ಕಿ 2 1/2 ಕಪ್ (ಎರಡುವರೆ ಕಪ್)

1 ನೀರುಳ್ಳಿ ದೊಡ್ಡದು, ಸಣ್ಣಗೆ ಕತ್ತರಿಸಿ

ಆಲೂಗಡ್ಡೆ- ಬೇಯಿಸಿದ್ದು ಹದಗಾತ್ರದ್ದು, ಸಣ್ಣಗೆ ಕತ್ತರಿಸಿ

ಒಗ್ಗರಣೆ - ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಹಸಿಮೆಣಸು, ಅರಿಸಿನ ಪುಡಿ

ರುಚಿಗೆ - ಉಪ್ಪು, ಸಕ್ಕರೆ, ನಿಂಬೆ ರಸ, ಕೊತ್ತಂಬರಿ ಸೊಪ್ಪು, fresh grated coconut (optional)


ಮಾಡುವ ವಿಧಾನ


ಅವಲಕ್ಕಿಯನ್ನು ಮೆತ್ತಗಾಗುವ ತನಕ ಅಂದರೆ ಸಾಧಾರಣ ೧೦ ನಿಮಿಷ ನೀರಲ್ಲಿ ನೆನೆಸಿಡಿ. ಆಮೇಲೆ ನೀರು ಬಸಿದಿಡಿ. ಬೆಂದ ಆಲೂಗಡ್ಡೆ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಸ್ವಲ್ಪ ಉಪ್ಪು ಚಿಮುಕಿಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಒಗ್ಗರಣೆಗಿಡಿ. ಹಸಿಮೆಣಸಿನಕಾಯಿಯನ್ನು ಹಾಕಿ ಕೈಯಾಡಿಸಿ. ನಂತರ ನೀರುಳ್ಳಿ ಹಾಕಿ ಕೆಂಪಾಗುವ ತನಕ ಫ್ರೈ ಮಾಡಿ. ಇದಕ್ಕೆ ಅರಿಸಿನ ಪುಡಿ, ಬೇಯಿಸಿದ ಆಲೂಗಡ್ಡೆಯ ತುಂಡುಗಳನ್ನು ಹಾಕಿ, ಸ್ವಲ್ಪ ಹೊತ್ತು ಮುಚ್ಚಿಡಿ. ಆ ಬಳಿಕ ಬಸಿದಿಟ್ಟ ಅವಲಕ್ಕಿ ಯನ್ನು ಸೇರಿಸಿ ಕೈಯಾಡಿಸಿ, ಉಪ್ಪು ಸ್ವಲ್ಪ ಸಕ್ಕರೆ ಹಾಕಿ ಮುಚ್ಚಿಡಿ. ಬಡಿಸುವ ಮುನ್ನ ಕೊತ್ತಂಬರಿ ಸೊಪ್ಪು ಮತ್ತು ೧/೨ ನಿಂಬೆಯ ರಸ ಬೆರೆಸಿ. ಆಲೂ-ಪೋಹಾ ತೈಯಾರ್. ಇದು ಮಹಾರಾಷ್ಟ್ರದ ರುಚಿಕರವಾದ ತಿಂಡಿ. ಮಳೆಗಾಲದಲ್ಲಿ ಬಿಸಿ ಮೆಣಸಿನಕಾಯಿ ಬೋಂಡಾದ ಸಾತ್ ಇದ್ದರೆ ರುಚಿ ಇನ್ನಷ್ಟು ಹೆಚ್ಚು.
pic: the Net

August 17, 2009

ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು.....

ಆ ದಿನ ಅವರೆ ಕಾಳು ಉಪ್ಪಿಟ್ಟು ಮಾಡಿದ್ದೆ. ಅದಕ್ಕೆ ಪುದೀನಾ ಚಟ್ನಿ. ಕ್ಯಾಲಿಫೋರ್ನಿಯ ದಿಂದ ಶ್ರೀಕಾಂತ್ ರ ಆಪ್ತ ಗೆಳೆಯರು ಬಂದಿದ್ದರು. ನೆಟ್ ನಲ್ಲೆಲ್ಲ ಅವರು ಅವರೆ ಕಾಳು ಉಪ್ಪಿಟ್ಟ್ ಬಗ್ಗೆ ಓದಿದ್ರಂತೆ. ಫೋನ್ ಮಾಡಿದ್ದಾಗ ಅವರ ಫರ್ಮಾಯಿಶ್ ತಿಳಿಸಿದ್ರು. ಅವರಿಗೆಲ್ಲ ನನ್ನ ಅವರೆ ಕಾಳು ಉಪ್ಪಿಟ್ಟು ತಿನ್ನಿಸಿ ಭೇಶ್ ಅನ್ನಿಸಿ ಕೊಂಡಿದ್ದೆ. ಅವರ ಹೊಗಳಿಕೆಯ ಮಾತಿನಿಂದಲೇ ನನ್ನ ಹೊಟ್ಟೆ ಅರೆ ತುಂಬಿತ್ತು ಖುಶಿಯಿಂದ.ಆತುರಾತುರವಾಗಿ ನನ್ನ ಕೆಲಸ ಮುಗಿಸ್ತಾ ಇದ್ದೆ. ಯಾಕೇ ಅಂದರೆ ಪ್ರತೀ ವರ್ಷ ನಾವು ಆಗಸ್ಟ್ 15 ರಂದು ರಕ್ತ ದಾನ ಮಾಡುತ್ತ ಬಂದಿದ್ದೇವೆ.

ಶ್ರೀಕಾಂತ ಕೂಡ ತುಂಬಾ ಆತುರ ಪಡಿಸ್ತಾ ಇದ್ರು. ನಿನ್ನ breakfast ಬೇಗ ಮುಗಿಸು. ಗಾಡಿ ಬರುವಷ್ಟರಲ್ಲಿ ನಾವು ರೆಡಿ ಯಾಗ ಬೇಕು.

ಉಪ್ಪಿಟ್ಟು ಉಳಿದದ್ದೆ ಕಡಿಮೆ. (ರಜೆ ಇದ್ದಾಗ ಮಕ್ಕಳ ಹೊಟ್ಟೆಯಲ್ಲಿ ಜಾಸ್ತಿ ಜಾಗ ಇರುತ್ತೆ. ಕಾಲೇಜು ಇದ್ದಾಗ ಎರಡು ದೋಸೆ ತಿಂದ್ರೆ, ರಜೆಯಲ್ಲಿ 4-5 ದೋಸೆನಾದ್ರು ಕಬಳಿಸ್ತಾರೆ. ಇದರ logic ನನಗೆ ಖಂಡಿತ ಇನ್ನೂ ಗೊತ್ತಾಗಿಲ್ಲ :-))ಅದನ್ನು ಪ್ಲೇಟ್ ನಲ್ಲಿ ಹಾಕಿ, spoon ತರಲು ಒಳಗೆ ಹೋದಾಗ, ಬಾಗಿಲ ಬಳಿ ’ಅಮ್ಮಾssss' ಎನ್ನುವ ಹೃದಯವಿದ್ರಾವಕ ಕೂಗು ಕೇಳಿಸ್ತು. ಆ ಕರೆ ಯಿಂದ ನನ್ನ ಮೈ ಮೇಲಿನ ರೋಮಗಳೆಲ್ಲ ನಿಮಿರಿ ನಿಂತವು. ಯಾರಪ್ಪ ಅಂತ ನೋಡಲು ಹೊರಗೆ ಹೋಗಿ ನೋಡಿದರೆ ಚಿಂದಿ ಆಯುವ ಹುಡುಗ. ಸ್ನಾನ ಕಾಣದೆ ಎಷ್ಟೋ ದಿನಗಳಾಗಿರಬೇಕು. ನನ್ನ ಕಂಡೊಡನೆ....’ಅಮ್ಮ 3 ದಿನದಿಂದ ಏನೂ ತಿಂದಿಲ್ಲ...ಏನಾದ್ರೂ ಕೊಡಿ ಅಂದ’

ಸರಿ. ಉಪ್ಪಿಟ್ಟು ತಿನ್ತಿಯಾ ಅಂತ ಕೇಳಿದೆ. ಅವನಿಗೆ ಗೋಣು ಅಲ್ಲಾಡಿಸುವಷ್ಟೂ ಶಕ್ತಿ ಇರಲಿಲ್ಲ. ನನ್ನ ಪ್ಲೇಟಿನ ತಿಂಡಿಯನ್ನೆಲ್ಲ ಬಾಳೆ ಎಲೆಗೆ ರವಾನಿಸಿ. ಅದರ ಜತೆ ಒಂದಿಷ್ಟು ಖಾರ ಹಾಕಿ ಅವನಿಗೆ ಕೊಡಲು ಹೋದೆ. ಕೈ ನಿಂದ ಎಳೆದು ಕೊಳ್ಳುವ ಹಾಗೆ ಕಾಣ್ತಿದ್ದ. ಅವನ ಕೈಗಳು ಕೊಳೆಯಾಗಿದ್ದವು. ಉಗುರಿನಲ್ಲೆಲ್ಲ ಕಪ್ಪು ಗಲೀಜು. ನನ್ನ ಕೈಯನ್ನು ಹಿಂದಕ್ಕೆಳೆದು...’ಸೋಪ್ ಕೊಡ್ತೇನೆ, ಮೊದಲು ಕೈ ತೊಳೆದು ಆ ಮೇಲೆ ತಿಂಡಿ ತೆಗೊ ಅಂದೆ. ಅವನು ಅಳುವುದೊಂದು ಬಾಕಿ. ಆದರೂ ಹೊರಗೆ ಗರಾಜ್ ನಲ್ಲಿದ್ದ ನಲ್ಲಿ ಬಳಿ ಹೋಗಿ ಕೈ ತೊಳೆದು ಬಂದು, ಗಬ ಗಬ ನೆ ತಿನ್ನಲಿಕ್ಕೆ ಶುರು ಮಾಡಿದ. ನಾನು ’ನಿಧಾನ...ಎದೆಯಲ್ಲಿ ಸಿಕ್ಕ ಹಾಕೊಳ್ಳುತ್ತೆ. ತಡಿ ನೀರು ತರ್ತೆನೆ ಅಂದೆ. ನೀರು ಕೊಟ್ಟು ಟಿ ಮಾಡಲಾ ಅಂದೆ. ಗೋಣು ಅಲ್ಲಾಡಿಸಿದ.
ಪಾಪ ಹಸಿದಿದ್ದಂತು ಹೌದು. ಟಿ ಜತೆ ಇನ್ನಷ್ಟು ಬಿಸ್ಕತ್, ಕೋಡುಬಳೆ ಎಲ್ಲ ಪ್ಯಾಕ್ ಮಾಡಿ ಕೊಟ್ಟೆ.

ನನಗಂತು ಶ್ರೀಕಾಂತ್ ದು 'big hug' ಸಿಕ್ತು, ಅವರ ಕಣ್ಣಲ್ಲಿ ಕಂಡೂ ಕಾಣದಂತ ನೀರಿನ ಪಸೆ.

ಆದರೆ ನನಗನಿಸಿದ್ದು. ಸ್ವಾತಂತ್ರ್ಯ ಬಂದು 61 ವರ್ಷಗಳಾದ್ವು. ಒಬ್ಬ ಮನುಷ್ಯ ಇಷ್ಟು ಹಸಿವೆಯಿಂದಿರ್ತಾನಂದ್ರೆ...ಇದು ನಾಚಿಕೆ - ಕಾಳಜಿ ಪಡುವ ವಿಷಯ ತಾನೆ? ಮತ್ತು ಇದೇ ಮನುಷ್ಯ ನಾಳೆ ದುರ್ಮಾರ್ಗಕ್ಕೆ ಇಳಿಯಲ್ಲ ಅಂತ ಏನು ಖಾತ್ರಿ. ಆ ಹುಡುಗನ ವಯಸ್ಸು ಅಂದಾಜು 10 ರಿಂದ 12 ಇದ್ದಿರಬಹುದು. ಅವನೂ ನಮ್ಮ ಮಕ್ಕಳ ಹಾಗೆ ನಾಳಿನ ಪ್ರಜೆ ಅಲ್ಲವೇ?

ಹುಡುಗ ಮಾತ್ರ ಪಾಪ ’ಅಮ್ಮ ಏನಾದ್ರು ಕೆಲಸ ಇದ್ರೆ ಹೇಳಿ ಮಾಡ್ತೇನೆ’ ಅಂದ. ಇನ್ನೊಮ್ಮೆ ಬಾಪ್ಪ , ಈಗ ಮನೆಯಲ್ಲಿರಲ್ಲ ಅಂದೆ. ಅದೇ ನಾವು ಮದುವೆ, ಮುಂತಾದ ಸಭೆ-ಸಮಾರಂಭದಲ್ಲಿ ಎಷ್ಟೊಂದು ಆಹಾರ ಚೆಲ್ಲಿ ಬಿಡ್ತೇವೆ.

ಮೊದಲೆಲ್ಲ ಹೋಟಲ್ ನಲ್ಲಿ ಪಾರ್ಟಿ ಎಲ್ಲ ಇದ್ದಾಗ ಉಳಿದಿದ್ದ ಊಟ-ತಿಂಡಿಯನ್ನು ಅನಾಥಾಶ್ರಮಕ್ಕೆ ಕಳಿಸ್ತಾ ಇದ್ರು. ಆದ್ರೆ ಒಂದು ಸಲ ಇಂತಹ ತಿಂಡಿ ತಿಂದು ಅನಾಥಾಶ್ರಮದ ಮಕ್ಕಳೆಲ್ಲ ಅಸ್ವಸ್ಥರಾಗಿದ್ದರಂತೆ, ಇನ್ನುಳಿದಂತೆ ಕೆಲವೊಮ್ಮೆ ಈ function ಗಳಿಂದ ಬಂದ ತಿಂಡಿಗಳೆಲ್ಲ್ಲ ಅಲ್ಲಿನ ಸಿಬ್ಬಂದಿಗಳು ತಮ್ಮ ಮನೆಗೆ ಒಯ್ಯುತ್ತಾರಂತೆ.

ಒಟ್ಟಿನಲ್ಲಿ disturbing situations ಗಳು. ಏನಿದಕ್ಕೆ ಉಪಾಯ?ನಿಟ್ಟುಸಿರು ಬಿಡುವುದು ಅಷ್ಟೆ.

HAPPY INDEPENDENCE DAY ಎಲ್ಲರಿಗೂ

August 14, 2009

An 'Ear'ie Experience



Since i was unable to sleep, i picked a book at random from my book collection. It was an interesting book and before long i was engrossed in it.

Now i will recount a mind boggling experience. But since entering my experience in the blog I will just call it ‘mind blogging’…..

Engrossed in my book, ( name of the book in P.S) suddenly I felt my brain move….i was like shocked. Tried to get up but could not. Felt dizzy. Was too scared to call out to kids/ hubby who sleep in rooms close to the drawing room, where I lie down. It was like my brain was being stir fried with a spatula.

Known amongst my family and close friends’ circle for my cool demeanor, this feeling totally rattled me. I felt cold. But still broke out in a sweat. I was sure what I was experiencing was a brain hemorrhage.

Simultaneously I thought, if it was a brain hemorrhage, no point in waking anybody, since death was definite. I let myself calm down, taking deep breaths. I thought I felt something move in my ears. Then I was sure about something coursing through by ear tract. Suddenly it struck me that it might be something in my ear. All this time my brain was doing somersaults and there was terrible agony each time ‘the thing’ moved. I recalled having read somewhere that insects comes out if some light is let directly into the ear. Thought I will take a chance. But now torches in households are extinct. I had to think really fast. My groping hands found my cell phone, I was expecting a call from my sister in states. Otherwise me and my cell phone are not greatest of pals!! Well then, pressed some button because of which the cell phone emitted its bluish light. (“lead kindly light’!!!!! )Held the cell phone to my ear,…..lo and presto!!!! I could feel slow movement of something and waited for ‘it’ to reach the earlobe. I quickly grabbed it with my fingers. It was such a small thing. It was ‘AN ANT’ But the agony was intoler’ant’, really ‘mind-blowing mahia’

I found out then why mom used to tell us…when fighting don’t slap on the cheeks. Slapping effects the eardrum and that causes disorientation/imbalance, sometimes permanently. I also used to wonder when my uncle constantly complained of losing his balance when he had earache. On medical diagnosis it was found out that there was a small tear in his eardrum. It was surgically patched later on and he was all right.

Now this tiny ant taught me a big lesson that balance is the result of a number of bodily systems working together - the eyes (visual system), ears (vestibular system), and the body's sense of where it is in space (proprioception). So we really must take care of our senses.
For some time I think I will plug my ears with cotton and tie a scarf round my head, scared ‘what if a centipede gets adventurous and wanders into my ear?’ And even if I threw some light into the ear, it would have difficulty in turning its looooooooong body to wriggle out of my eary space….. and imagine the state my brain would be in ……..

P.S.:The book I was reading ‘Phantoms in the Brain’ by Sandra Blackeslee & V.S. Ramachandran.A book on Neurology….fascinating coincidence to say the least. Read the book. Its very interesting

August 13, 2009

ನೆಲ್ಲಿಕಾಯಿ ಸಾರು

ಬೆಳಿಗ್ಗೆ ಮಧ್ಯಾನ್ಹ ಮತ್ತು ಸಾಯಂಕಾಲ ಹಾಗೂ ರಾತ್ರಿ ! ಕರ್ನಾಟಕದ ಅನೇಕ ಭಾಗಗಳಲ್ಲಿ (ಬೆಂಗಳೂರು ಬಿಟ್ಟು)ಈಗ ನಾಲ್ಕೂ ಹೊತ್ತು ಮಳೆಯದ್ದೇ ದರ್ಬಾರು. ಇದರೊಂದಿಗೆ ಅದೂ ಇದೂ ಕಾಯಿಲೆ ಕಸಾಲೆಗಳು. ಆರೋಗ್ಯ ವರ್ಧನೆಗೆ ಮತ್ತು ಬಾಯಿ ರುಚಿಗೆ ಇಗೊಳ್ಳಿ ಇಲ್ಲಿದೆ ನೆಲ್ಲಿಕಾಯಿ ಸಾರು. ನೆಲ್ಲಿಕಾಯಿಯಲ್ಲಿನ ವೈಟಮಿನ್ ಸಿ ಅಂಶ ಥಂಡಿಯಿಂದ ಜಡ್ಡುಗಟ್ಟಿದ ನಾಲಿಗೆಯನ್ನು ಶುಚಿಯಾಗಿಸುತ್ತದೆ. ಅನ್ನದ ಜತೆ ಬಿಸಿ ಬಿಸಿಯಾಗಿ ಸಾರಿನ ಊಟ ಮಾಡಿ. ಪ್ರತೀಕೂಲ ಹವಾಮಾನಕ್ಕೆ ತಕ್ಕ ಉತ್ತರ ನೀಡಿ.

ಬೇಕಾಗುವ ಸಾಮಾನು

1) ನೆಲ್ಲಿಕಾಯಿ : 3 ಅಥವಾ 4

2) ತೆಂಗಿನ ತುರಿ : 2 ದೊಡ್ದ ಚಮಚ

3) ಹುರಿದ ಕೆಂಪು ಮೆಣಸು : 2 ಸಾಕು

4) ಹುಣಸೆ ಹುಳಿ : ಚಿಕ್ಕದು

5) ತುಪ್ಪದಲ್ಲಿ ಸ್ವಲ್ಪ ಹುರಿದ ಜೀರಿಗೆ ಇಂಗು
ಉಪ್ಪು ಬೆಲ್ಲ : ರುಚಿಗೆ ತಕ್ಕಷ್ಟು. ಸಾಸಿವೆ ಕರಿಬೇವು ಒಗ್ಗರಣೆಗೆ ಬೇಕೇಬೇಕು.
ಮಾಡುವ ವಿಧಾನ ನೆಲ್ಲಿಕಾಯಿಯನ್ನು ನೀರಿನಲ್ಲಿ ಬೇಯಿಸಿ ಬೀಜ ತೆಗೆದಿಡಿ. ಈ ನೀರನ್ನು ಸಾರಿಗೆ ಬಳಸಬಹುದು.ಆಮೇಲೆ
:-)
ನಂ 1ರಿಂದ 5ರವರೆಗೆ ಪಟ್ಟಿಮಾಡಿದ ಸಾಮಾನುಗಳನ್ನು ನುಣ್ಣಗೆ ರುಬ್ಬಿ. ಬೇಕಾದಷ್ಟು ನೀರು ಸೇರಿಸಿ, ಅದಕ್ಕೆ ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಒಗ್ಗರಣೆ ಹಾಕಿ. ಸಾರು ತಯಾರು. ಬಾಯಲ್ಲಿ ನೀರೂರಿಸುವ ಈ ಸಾರನ್ನು ಅನ್ನಕ್ಕೆ ಸೇರಿಸಿ ಸೇವಿಸಬಹುದು. ಹಾಗೇ ಕುಡಿಯಲೂ ಇದು ಚೆನ್ನಾಗಿರುತ್ತದೆ.

ಬಿರು ಬೇಸಿಗೆಯಲ್ಲಿ. ರುಬ್ಬಿದ 1 ರಿಂದ 5 ಪದಾರ್ಥಕ್ಕೆ ತೆಳು ಮಜ್ಜಿಗೆ ಸೇರಿಸಿ, ಕುಡಿಯಬಹುದು. {ಕೆಂಪು ಮೆಣಸು (optional)}
(nellikaayi chitra courtesey The world wide web)

August 12, 2009

ಒಂದು ಘಟನೆ

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದ ಘಟನೆ. ಆ ದಿನ ತುಂಬ ಮೋಡ ಇತ್ತು. ನಮ್ಮನ್ನು ಮನೆಗೆ ಒಯ್ಯುವ ಬಸ್ಸ್ ನಿಲ್ಲುವ ತಾಣದತ್ತ ನಮ್ಮ ಕುಟುಂಬದವರ ಜತೆ ಬಿರುಸಿನ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ’ಮರಾಠಿ ಮಾತನಾಡುವವರು (ಮರಾಠಿ ಭಾಷೆಯಲ್ಲಿ) ಯಾರಾದರೂ ಇದ್ದಿರ” ಅನ್ನುವ ದನಿ ಕೇಳಿಸಿತು. ಜತೆಯಲ್ಲಿ ಬೊಬ್ಬಿಡುವ ಚಿಕ್ಕ ಮಗು ಬೇರೆ. ನಾನೋ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬಯಿಯಲ್ಲಿ. ವಿವಾಹಾನಂತರ ಕರ್ನಾಟಕಕ್ಕೆ ಬಂದ್ದದು. ನನ್ನ ಹುಟ್ಟಿದೂರಿನ ಭಾಷೆಯ ಅಭಿಮಾನ ಜಾಗೃತವಾಯಿತು.
ಹೇಳಮ್ಮ ನನಗೆ ಮರಾಠಿ ಬರುತ್ತದೆ ಎಂದೆ.
ಅದಕ್ಕೆ ಅವಳು ನಿನ್ನೆ ರಾತ್ರಿ ನಾವು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದೆವು. ರಾತ್ರಿ ಯಾರೋ ನಮ್ಮ ಸಾಮಾನುಗಳನ್ನು ಕದ್ದಿದ್ದಾರೆ. ಮಗು ಬೇರೆ ಹಸಿವಿನಿಂದ ಅಳ್ತಾ ಇದೆ. ಸ್ವಲ್ಪ ಹಣ ಸಹಾಯ ಮಾಡಿದರೆ ನಮ್ಮ ಊರಿಗೆ ಹೋಗಬಹುದು ಎಂತಲೂ ಹೇಳಿದಳು. ಬಸ್ಸ್ ಪಾಸ ಹಾಗೂ ಕ್ರೆಡಿಟ್ ಕಾರ್ಡ್ ಗಳಿರುವುದರಿಂದ ನನ್ನ ಪರ್ಸ್ ನಲ್ಲಿ ಹಣ ಇರುವುದು ಕಡಿಮೆ. ಪರ್ಸ್ ತೆರೆದಾಗ ಅಲ್ಲಿದ್ದುದು ಕೇವಲ ಹತ್ತು ರೂಪಾಯಿಯ ನೋಟು. ನನ್ನ ಪತಿ ಹಾಗೂ ಮಕ್ಕಳು ಆಗಲೇ ಸಾಕಷ್ಟು ದೂರ ನಡೆದಿದ್ದರು. ಬೇರೆ ವಿಧಿ ಇಲ್ಲದೇ ಹತ್ತು ರೂಪಾಯಿಯ ನೋಟನ್ನೆ ನೀಡಿದೆ.
ಇದೆಲ್ಲಿ ಸಾಕಾಗುತ್ತದೆ ಎಂದಳು? ನನ್ನಲ್ಲಿರುವುದೇ ಅಷ್ಟೇ ಅಂತ ಪರ್ಸ್ ಅವಳಿಗೇ ತೋರಿಸಿದೆ. ಸಧ್ಯಕ್ಕೆ ಮಗು ಗೋಸ್ಕರ ಏನಾದರೂ ತೆಗೆದುಕೋ ಅಂತ ಹೇಳಿ ನಿಟ್ಟುಸಿರು ಬಿಡುತ್ತಾ ನಮ್ಮವರನ್ನು ಸೇರಿಕೊಂಡೆ.
ಸುಮಾರು ಒಂದು ತಿಂಗಳ ನಂತರ ಪುನ: ಆ ಮಹಿಳೆಯನ್ನು ನೋಡಿದೆ. ಕನ್ನಡದಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಅವಳ ಜತೆ ಇನ್ನ್ನೊಂದಿಷ್ಟು ಮಂದಿ ಇದ್ದರು. ಅದೇ ಹಳೇ ರಾಗ ಮತ್ತು ಈ ಬಾರಿ ಮಗುನೂ ಬೇರೆ. ಅವರ ಹತ್ತಿರ ಹೋಗಿ ಇದೇನಿದು ಅಂತ ಪ್ರಶ್ನೆ ಕೇಳಿದೆ, ಅಷ್ಟೇ, ಅವಳು ಅಲ್ಲಿಂದ ಓಡಿ ಜಾಗ ಖಾಲಿ ಮಾಡಿದಳು. ನನ್ನ ಮನೆಯವರಿಗೆಲ್ಲ ಹೇಳಿದಾಗ ನಗು ಅಂದ್ರೆ ನಗು.
ಇದು ಹೊಸ ಪರಿ ಬಿಕ್ಷೆ ಬೇಡುವ ಪದ್ದತಿ ಎಂದು ಆಮೇಲೆ ತಿಳಿಯಿತು.

August 7, 2009

ಅಟ್ಟದಲ್ಲಿ ಕೆಂಪು ಇಲಿ (title by Vijaya Karnataka)

(this post is a revised version)
ಇವತ್ತು ಬೆಳಿಗ್ಗೆ ತೀರ್ಥಹಳ್ಳಿಯಿಂದ ಭೈಯ್ಯಾ (ಶ್ರೀಕಾಂತ ದೊಡ್ಡ ಅಣ್ಣ)ಫೋನ್ ಮಾಡಿದ್ದರು. ರಸ್ತೆ ಅಗಲೀಕರಣ ಖಾತ್ರಿಯಾಗಿದೆ. ಅಟ್ಟಕ್ಕೆ ಹೋಗುವ ಮೆಟ್ಟಿಲಿನ ತನಕ ಜಾಗ ಹೋಗೇ ಬಿಡತ್ತೆ ಅಂತ. ರಸ್ತೆ ಅಗಲೀಕರಣದ ಬಗ್ಗೆ ಗೊತ್ತಿತ್ತು. ಆದರೆ ಆಪಾಟಿ ಜಾಗ ಹೋಗಿ ಬಿಡತ್ತೆ ಅಂತ ಗೊತ್ತಾದ ಮೇಲೆ ಯಾಕೋ ಮೈಯಲ್ಲಿ ಹುಷಾರು ತಪ್ಪಿದಂತೆ ಆಯಿತು.

೧೭ ವರ್ಷಕ್ಕೆಲ್ಲ ಮದುವೆ ಯಾಗಿ ಇವರ ಮನೆಗೆ ಹೋದಾಗ, ೧೦ ವರ್ಷದ ಓರಗಿತ್ತಿ ಮಗಳು ಬಿಟ್ಟರೆ ನಾನೇ ಚಿಕ್ಕವಳು. ಊರಲ್ಲೇ ನಮ್ಮದು ದೊಡ್ಡ ಕೂಡು ಕುಟುಂಬ. ದೊಡ್ಡವರೆಲ್ಲಾ ಇದ್ದುದರಿಂದ ಹಾಗೂ ನನಗೆ ಇನ್ನೂ ಕಾಲೇಜು ಕಲಿಯಿವುದು ಅದರ ಪರೀಕ್ಷೆಗೆ ತಯಾರಾಗಲು ಅಂತ ನನಗೆ ತುಂಬಾ ಕೆಲಸ ಏನು ಹೇಳ್ತಿರಲಿಲ್ಲ. ಓದಿ ಬೇಜಾರಾದಾಗಲೆಲ್ಲಾ ನಾನು ಸಾಕಷ್ಟು ಸಮಯ ಅಟ್ಟದಲ್ಲಿ ಕಳೆಯುತ್ತಾ ಇದ್ದೆ.

ಈಗಲೂ ತೀರ್ಥಹಳ್ಳಿಗೆ ಹೋದಾಗಲೆಲ್ಲಾ ನನ್ನ ಅತೀ ಮೆಚ್ಚಿನ ಕೆಲಸ ಅಂದರೆ ಅಟ್ಟಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯುವುದು. ಅಕ್ಕ ಬೈಯುತಿರುತ್ತಾರೆ. ಹಬ್ಬಕ್ಕೆ ಅಂತ ಒಂದೆರಡು ದಿನದ ಮಟ್ಟಿಗೆ ಬರ್ತಿಯಾ ಸುಮ್ಮನೆ ಆರಾಮಾಗಿರೋದು ಬಿಟ್ಟು ಅದೇನು ಅಟ್ಟ ಏರಿ ಕೂರ್ತಿಯಾ. ಎಷ್ಟೋ ವರ್ಷ ಆಯ್ತು ಅಲ್ಲಿ ಯಾರೂ ಹೋಗ್ದೆ. ಸುಮ್ನೆ ಮೈ ಎಲ್ಲಾ ಧೂಳು. ಮಧ್ಯಾನ್ಹ ಒಂದರೆಗಳಿಗೆ ಮಲಕ್ಕೋ ಬಹುದಲ್ಲವಾ?

ಇತ್ತೀಚಿಗಂತು ನನ್ನ ಜತೆ ನನ್ನ ಇಬ್ಬರೂ ಮಕ್ಕಳು ನನಗೆ ಸಾಥ ನೀಡುತ್ತಾರೆ. ಇಲ್ಲಿ ಹೋದರೆ ಸಮಯ ಸಂದಿದ್ದೆ ತಿಳಿಯುವುದಿಲ್ಲ. ಅಕ್ಕ ಸಂಜೆಯ ಚಹಾ-ತಿಂಡಿಗೆ ಕರೆದಾಗಲೇ ನಾವು ಈ ಲೋಕಕ್ಕೆ ಬರುವುದು. ನನಗೆ ಅಟ್ಟದ ರಾಣಿ ಎಂದೇ ಎಲ್ಲರೂ ಕರೆಯುವುದು

ಹಳೆ ಆರಾಮ ಕುರ್ಚಿ, ಸೀಮೆ ಎಣ್ಣೆ ಬುಡ್ಡಿಗಳು, ಹಳೆ ಕಪ್ಪು ಬಿಳುಪು ಫೋಟೊಗಳು, ಕಲಾತ್ಮಕವಾಗಿ ಕೊರೆದಿರುವ, ಸೂಕ್ಷ್ಮ ಕುಸುರಿ ಕೆಲಸದ ತಾಮ್ರದ ಪಾತ್ರೆ ಪಗಡಿ, ಹಳೆಯ ಬಾರು ಕೋಲು, ವಿವಿಧ ಉದ್ದ- ಗಿಡ್ಡ ಗಾತ್ರದ ಕಡಗೋಲು, ಮರದಲ್ಲಿ ಮಾಡಿದ ಪಶು-ಪಕ್ಷಿಗಳು, ಅತೀ ತೆಳುವಾದ, ಈಗಲೂ ಪೀಂ ಅನ್ನುವ ಬಣ್ಣ ಬಣ್ಣದ ಪ್ಲಾಸ್ಟಿಕ್ ಬೊಂಬೆಗಳು,- ಇವನ್ನು ಬಹುಶ: ದಸರಾ ಗೊಂಬೆಯ ಜತೆ ಇಡುತ್ತಿದ್ದರೆನೋ? ಕೈಯಿಲ್ಲದ ಗಡಿಯಾರ, ಕಾಲಿಲ್ಲದ ಮಣೆಹೀ॒ಗೆ ಹತ್ತು ಹಲವಾರು ಸಾಮಾನುಗಳು,ಇನ್ನೇನೇನೋ ಯಾವುದಕ್ಕೆ ಉಪಯೋಗಿಸ್ತಾರೆ ಅಂತ ಗೊತ್ತಿಲ್ಲದ ಉಪಕರಣಗಳು. ಅವುಗಳನ್ನೆಲ್ಲ ಒರೆಸುವುದು. ಬೆಂಗಳೂರಿನಲ್ಲಾದ್ರೆ ಇವಕ್ಕೆ ಪೊಲಿಶ್ ಮಾಡಿ ಮನೆಯಲ್ಲಿ ಹೇಗೆ ಕಲಾತ್ಮಕವಾಗಿ ಜೋಡಿಸಬಹುದುದು- ಮ್ಯೂಸಿಯಂ ಇಡುವುದು, ಇಂತದೆಲ್ಲಾ ಮಾತಾಡ್ತಾ ಅಲ್ಲೆಲ್ಲಾ ನಾವು ಹುಡುಕಾಡ್ತಾ ಇರ್ತೇವೆ.

ಈ ಸಲ ನಮ್ಮ ಗಮನ ಹಳೆಯ ಟ್ರಂಕ್ ಮೇಲೆ ಬಿತ್ತು. ಬೀಗ ಜಡೆಯಲಾಗಿತ್ತು. ಮನೆಯಲ್ಲಿ ಕೇಳಿದರೆ ಅದರ ಬೀಗದ ಕೈ ಕಳೆದು ಹೋಗಿದುದರ ಬಗ್ಗೆ ತಿಳಿಯಿತು. ತುಂಬಾ ಹಳೆಯ ಬೀಗಕ್ಕೆ ತುಕ್ಕು ಹಿಡಿದಿತ್ತು. ಕಲ್ಲಿನಿಂದ ನಾಲ್ಕು ಸಲ ಬಡಿದಾಗ ತೆರೆದು ಕೊಂಡಿತು. ನನ್ನ ಕಣ್ಣನ್ನು ನಾನೇ ನಂಬಲಿಲ್ಲ. ಅಷ್ಟು ಪುಸ್ತಕಗಳಿದ್ವು ಅದರಲ್ಲಿ. ಎಲ್ಲಾ ತುಂಬಾ ಹಳೆಯವು. ಹೆಚ್ಚಿನ ಪುಸ್ತಕಗಳು ಅಂಗ್ಲ ಭಾಷೆಯಲ್ಲಿದ್ದವು, ಹಾಗು ಹೆಚ್ಚು ಕಡಿಮೆ ಎಲ್ಲ ಪುಸ್ತಕದಲ್ಲೂ, ಪುಸ್ತಕ ಖರೀದಿಯ ತಾರೀಕು ಹಾಗೂ ಮಾವನವರ, ಹಾಗೂ ಕೆಲವು ಪುಸ್ತಕದ ಮೇಲೆ ಮಾವನವರ ತಂದೆಯ ಹಸ್ತಾಕ್ಷರ ಹೊಂದಿದ್ದವು. ಮಾವನವರ ಪುಸ್ತಕ ಪ್ರೇಮದ ಬಗ್ಗೆ ನನಗೆ ತಿಳಿದಿರಲೆ ಇಲ್ಲ. ನನಗೆ ಬಿಡಿ ನನ್ನ ಮನೆಯಲ್ಲಿದ್ದ ಅಷ್ಟೂ ಜನರಿಗೂ ಗೊತ್ತಿರಲಿಲ್ಲ. ತುಂಬಾ ಮೇಲಿದ್ದ ಪುಸ್ತಕ ಎತ್ತಿಕೊಂಡೆ. ಪುಸ್ತಕ ರಟ್ಟು ಗಟ್ಟಿಯಿದ್ದರೂ ಪುಸ್ತಕದ ಪುಟಗಳು ತುಂಬಾ ಬ್ರಿಟ್ಟಲ್ - ಲಡ್ಡು ಆಗಿದ್ದವು. ಪುಸ್ತಕದ ಟೈಟಲ್ - an epic fast- by Mahatma Gandhi.

ಇನ್ನೊಂದು ಪುಸ್ತಕ ‘A Red Mouse- William Osborne Hamilton ಬರೆದಿದ್ದು. ಅದರ ದೂಳನ್ನು ನಾಜೂಕಾಗಿ ಒರೆಸಿ, ಭಯ ಭಕ್ತಿಯಿಂದ ಅದನ್ನು ತೆಗೆದಿಟ್ಟೆ. ಬೆಂಗಳೂರಿಗೆ ಬಂದ ಮೇಲೆ ಬುಕ್ ಬೈಂಡ ಮಾಡಿಸುವವನಿಗೆ ತೋರಿಸಿದಾಗ, ‘ಮ್ಯಾಡಂ ಒಂದು ಸೊಲ್ಯೂಷನ್ - ದ್ರಾವಣ ಸಿಗತ್ತೆ ಇಂತದ್ದೆಲ್ಲಾ ಪುಸ್ತಕ ಕಾಪಾಡಲು ಅಂತ ಹೇಳಿದ. ಸರಿ ಮತ್ತೊಮ್ಮೆ ಹೋದಾಗ ಆದಷ್ಟು ಪುಸ್ತಕಗಳನ್ನು - ಅಕ್ಕ ನಿನಗೆಲ್ಲೋ ಹುಚ್ಚು ಅಂದ್ರುವೆ- ಕೇಳಿಸಕೊಳ್ಳದೇ, ಬುಕ್ಕ ಬೈಂಡ ನವನಿಗೆ ತಂದು ಕೊಟ್ಟೆ. ಒಂದೆ ವಾರದಲ್ಲಿ ಆ ಪುಸ್ತಕಗಳು ಲವಲವಿಕೆ ಹೊಂದಿ, ಬುಕ್ ಬೈಂಡ್ ಆಗಿ ಮನಗೆ ಬಂದು ಬಿಟ್ಟವು. ಎಷ್ಟೊ ಹೊತ್ತು ಅವನ್ನು ಮುಟ್ಟದೇ ಹಾಗೆ ನೋಡ್ತಾ ಇದ್ದೆ. ದೊಡ್ಡವಳಂತೂ ‘ಅರೆ widow-marriage’ ತರಹ ಕಾಣ್ತಾ ಇದ್ದಾವಲ್ಲ ಪುಸ್ತಕಗಳು ಅನ್ನುವ ತನಕ.

‘A Red Mouse’ ಒಂದು ಪತ್ತೆದಾರಿ ಕಾದಂಬರಿ. ಪುಸ್ತಕ ಓದಿ ಕೊನೆಗೊಳ್ಳುವ ತನಕ ನಾನು ಅದನ್ನು ಕೆಳಗಿಡಲಿಲ್ಲ. ಕಥೆ ಹೇಳಲ್ಲ. ಇಸ್ಕೊಂಡಿ ಓದಿ.

ಡಾ ಜಾಕೀರ್ ಹುಸೇನ್ - ಭಾರತಿಸುತ- ವಯಸ್ಕರ ಶಿಕ್ಷಣ ಸಮಿತಿ ಹೊರತಂದಿದ್ದು- ೧೯೬೭ ರಚಿತ. ಆವಾಗ ನಾ ಇನ್ನೂ ಹುಟ್ಟಿರಲಿಲ್ಲ. ನನ್ನದು ೧೯೬೯. ರಾಮೋಹಳ್ಳಿಯ ಒಬ್ಬ ಯುವಕನ ಯಶೋಗಾತೆ. ಕತೆ ಬರೆದವರ ಹೆಸರೂ ಎಲ್ಲೂ ಸಿಗಲಿಲ್ಲ. ಮುನ್ನುಡಿಯಲ್ಲಿ ಪಿ.ಎನ್. ಜವರಪ್ಪ ಗೌಡ - ಇಂತಹ ಚಿಕ್ಕ ಹೊತ್ತಿಗೆಯ ಉದ್ದೇಶದ ಬಗ್ಗೆ ಎರಡು ಮಾತು ಬರೆದಿದ್ದಾರೆ. ಈ ಪುಸ್ತಕವನ್ನೂ ವಯಸ್ಕರ ಶಿಕ್ಷಣ ಸಮಿತಿಗಾಗಿ ೧೯೨೦ ರಲ್ಲಿ ಮುದ್ರಿಸಿದ ದಾಖಲೆ ಪುಸ್ತಕದ ಹಿಂಬಾಗದಲ್ಲಿದೆ.

ಉಳಿದ ನಾನು ತಂದ ಪುಸ್ತಕಗಳು ಆಂಗ್ಲ ಭಾಷೆಯ ಪುಸ್ತಕಗಳು...
Her friends and mine….ಇದನ್ನು ಬರೆದವರ ಹೆಸರೂ ಎಲ್ಲೂ ಸಿಗಲಿಲ್ಲ. ಅಜ್ಜಿಯ ಜತೆಯಲ್ಲಿ ವಾಸಿಸುವ ಇಬ್ಬರು ಹೆಣ್ಣು ಮಕ್ಕಳೂ ಹಾಗೂ ಪಕ್ಕದ ಮನೆಯಲ್ಲಿ ವಾಸಿಸಲು ಅಜ್ಜನೆ ಜತೆ ಬಂದ ತಾಯಿ ಇರದ ಪುಟ್ಟ ಬಾಲಕನ ಮೈತ್ರಿಯ ಕಥೆ. ಹದಿಹರೆಯದ ಮಕ್ಕಳಿಗಾಗಿ ಬರೆದಿರುವಂತದ್ದು.

Adventures of Tom Wallis -ಪುಟ್ಟ ಬಾಲಕನ ಹಡಗಿನಲ್ಲಿಯ ಜೀವನ, ತಂದೆಯ ಹಡಗಿನಲ್ಲಿ ದೂರ ದೂರದ ಪ್ರಯಾಣ, ಅವನು ಕಂಡ ವಿಸ್ಮಯಕಾರಿ ಘಟನೆಗಳು,- ಅವನ ಸಂತಸ- ವ್ಯಥೆಯ ಕಥೆ. ತುಂಬಾ ಚೆನ್ನಾಗಿದೆ.ಇಂತಹ ಇನ್ನೂ ಸುಮಾರು ಪುಸ್ತಕಗಳು ಈಗ ನನ್ನ ಪುಸ್ತಕದ ಕಪಾಟಿನಲ್ಲಿವೆ.

ಬದಲಾವಣೆ ಖಂಡಿತ ಬೇಕು, but at what cost? ಬದಲಾವಣೆ ಜತೆಗೆ ನಮ್ಮ ಮಧುರ ನೆನಪಿನ ಕುರುಹುಗಳು ನಶಿಸಿತ್ತುವಲ್ಲ? ಏನು ಮಾಡುವುದು? ಅಟ್ಟ ಹೋಗುತ್ತೆ ಅನ್ನುವ ಬೇಜಾರು ತುಂಬಾ ಕಾಡುತ್ತೆ. ಅಗಲೀಕರಣ ಆಗುವ ಮುನ್ನ ಒಂದ್ಸಲ ಅಲ್ಲಿಗೆ ಹೋಗಿ ಬರಬೇಕು. ಮುಂದಿನ ವಾರದ ಟಿಕೀಟು ಸಿಕ್ಕಿದೆ, ತೀರ್ಥಹಳ್ಳಿಗೆ ಹೋಗಲು.ಇಲ್ಲ ನೆನಪುಗಳು ಮಾತ್ರ ನಮ್ಮವು. ಯಾವಾಗ ಬೇಕೋ ಆವಾಗ ಫ್ಲಾಶ-ಬ್ಯಾಕ್ ಮೋಡ್ ಗೆ ಹೋಗಿ, ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕ ಬಹುದು. ಇದಕ್ಕೆ ಕರೆಂಟ್ - generator -ಯು.ಪಿ.ಎಸ್ , ಯಾವುದೂ ಬೇಡ.
ಈ ಸಲ ಮನೆಗೆ ಹೋದಾಗ ಮನೆಯ ಹೊರಗಿನ ಗೋಡೆಯ ಮೇಲೆ ಹೋಗುವ ಜಾಗವನ್ನು ಕೆಂಪು ಬಣ್ಣ ದ ದೊಡ್ಡ ’X ’ ಮಾರ್ಕ್ ಹಾಕಿದ್ದರು.
ನನ್ನ ಕನಲಿದ ಮುಖ ಕಂಡು, ಭೈಯಾ ’ಹುಚ್ಚು ಹುಡುಗಿ, ಅಷ್ಟ್ಯಾಕೆ ಬೇಜಾರು ಪಡ್ಕೋತೀಯಾ? ಮುಂದೆ ನೀವೆಲ್ಲ ದೊಡ್ಡ ದೊಡ್ಡ ಗಾಡಿ ಎಲ್ಲ ಇಟ್ಕಂಡು ಇಲ್ಲಿ ಬಂದಾಗ ರಸ್ತೆ ದೊಡ್ಡ ದಾಗಿದ್ರೆ ನಿಮಗೆ ತಾನೆ ಒಳ್ಳೆಯದು’. ಭೈಯ್ಯ ನ ಮುಖ ನೋಡಿದೆ. ನಾನಾದ್ರು ಮದುವೆ ಯಾಗಿ ಈ ಮನೆಗೆ ಬಂದಿದ್ದು. ಆದ್ರೆ ಭೈಯಾ ಈ ಮನೆಯಲ್ಲೇ ಹುಟ್ಟಿದ್ದು. ಅವರ ಬಾಲ್ಯ, ಯೌವನ ಎಲ್ಲ ಇಲ್ಲೆ ಕಳೆದಿದ್ದು. ಈಗ ಅವರಿಗೆ 74 ವರ್ಷ ವಯಸ್ಸು. ಎಷ್ಟೆಲ್ಲ ನೋವು -ನಲಿವು, ಸಂತಸ ದುಃಖ, ಹುಟ್ಟು-ಸಾವು, ಮದುವೆ-ಮುಂಜಿ ಈ ಮನೆಯಲ್ಲೇ ಕಂಡವರು. ಆದರೂ ಅವರ ಬೇಜಾರನ್ನು ಮರೆತು ನನ್ನನು ಸಂತೈಸಲು ಹೊರ‍ಟ ಅವರನ್ನು ಕಂಡು ಯಾಕೋ ಇನ್ನಷ್ಟು ದುಃಖ ಆಯ್ತು.
ಬನ್ನಿ ಭಯ್ಯ, ಅಕ್ಕ ಕಾಪಿ ಮಾಡ್ಕೊಂಡು ಕಾಯ್ತಿರ್ತಾಳೆ, ಹೋಗುವ ಅಂದು ಅವರನ್ನು ಎಳ್ಕೊಂಡು ಮನೆಯೊಳಗೆ ಹೋದೆ.

August 5, 2009

ಸಂಚಿಯಿಂದ ತೆಗೆದ ಮೊದಲ ನೆನಪು

ಹಠಾತ್ತನೆ ಗಾಳಿಗೆ ತೇಲಿ ಬರುವ after-shave ನ ಪರಿಮಳ, ಅಥವಾ ಯಾರದ್ದೋ ಕಾಲುಚೀಲದ ಕೆಟ್ಟ ವಾಸನೆ, ಬಸ್ಸ್ ನಿಲ್ದಾಣದಿಂದ ಹೊರಟಾಗ ಕಿಟಕಿಯಿಂದ ಒಂದೇ ಕ್ಷಣ ಕಂಡ ಯಾರದ್ದೊ ನಗು ಮುಖ, ಹಾಡಿನ ತುಣುಕು ಪಲ್ಲವಿ ಕೇಳಿ.... ಎನೋ ನೆನಪಾಗಿ ನಾವು flash-back ಗೆ ಜಾರುವ ಹಾಗೆ.....ನನ್ನ ನೆನಪಿನ ಸಂಚಿ. ಸಂಚಿ ಚೀಲ ಕ್ಕೆ drawstring bag ಅಂತಾರೆ. ಪಗಡೆ ಕಾಯಿಗಳನ್ನು ಹಾಕಿಡಲು ನನ್ನ ಮಗಳು ಪುಟ್ಟದಾದ ಒಂದು ಸಂಚಿಯನ್ನು ಹೊಲಿಯುತ್ತಿರುವಾಗ ನನ್ನ ಬ್ಲಾಗ್ ಗೆ ಇದೇ ಹೆಸರು ಯಾಕಿಡಬಾರದೆಂದು ಹೊಳೆಯಿತು.


ಶ್ರೀಕಾಂತ್ ಗೆ ಕೇಳಿದಾಗ ಅವರು wow ಅಂದ್ರು.ಸೋ ನನ್ನ ಬ್ಲಾಗ್ ನೆನಪಿನ ಸಂಚಿಯಿಂದ...................


ಸಂಚಿ...........


ನಮ್ಮಲ್ಲಿ ಕೆಲಸಕ್ಕೆ ಬರುವ ರಾಜೀವಿಯ ನೆನಪು....


ಕೆಲಸ ಶುರು ಮಾಡುವ ಮುಂಚೆ ಅವಳು ಒಂದು ಕಪ್ ಚಹಾ ಕುಡಿದು, ಅವಳ ಕಚ್ಚೆ ಹಾಕಿ ಉಟ್ಟ ಸೀರೆಯ ನೆರಿಗೆಯಲ್ಲಿ ಸಿಕ್ಕಿಸಿದ ಸಂಚಿಯನ್ನು ತೆಗೆದು ನೆಲದ ಮೇಲಿಡುತ್ತಿದ್ದಳು. ಅದರೊಳಗಿನಿಂದ ನಿಧಾನವಾಗಿ ಪ್ಲ್ಯಾಸ್ಟಿಕ್ ನಲ್ಲಿ ಕಟ್ಟಿದ ವೀಳ್ಯದ ಎಲೆ, ಪುಟ್ಟ ಡಬ್ಬಿಯಲ್ಲಿದ್ದ ಸುಣ್ಣ, ಹೊಗೆಸೊಪ್ಪಿನ ಸುರುಳಿ, ಅಡಿಕೆ ಗೋಟು, ಚೂರು..ಹೀಗೆ ಒಂದೊಂದಾಗಿ ನೆಲದ ಮೇಲೆ ತೆಗೆದಿಟ್ಟು, ಎಲೆಯನ್ನು ಸೆರಗಿಗೆ ಗಸ ಗಸ ಉಜ್ಜಿ, ಬಲಗೈ ತೋರು ಬೆರಳಿನಿಂದ ಗುಲಾಬಿ ಬಣ್ಣದ ಸುಣ್ಣ ಎಲೆಗೆ ಹಚ್ಚಿ, ಹಿಂದಿನ ದಿನ ಪುಡಿ ಮಾಡಿಟ್ಟುಕೊಂಡ ಅಡಿಕೆ ಚೂರು ಹಾಕಿ, ಎಲೆಯನ್ನು ಸುರುಳಿ ಮಾಡಿ ಬಾಯಿಗೆ ಇಟ್ಟು ಕೊಳ್ಳುತ್ತಿದ್ದಳು. ಕೆಲ ಸೆಕೆಂಡು ಬಿಟ್ಟು ಹೊಗೆಸೊಪ್ಪಿನ ಪುಟ್ಟ ತುಣುಕೊಂದು ಬಾಯಲ್ಲಿ ಹಾಕಿ ಕೊಂಡು...ಬಾಯಿಯಿಂದ ರಸ ತುಳುಕದ ಹಾಗೆ ಬಾಯಿಯನ್ನು ಒಂದು ತರಹ ಓರೆ ಮಾಡಿ...ಆ ದಿನದ gossip ಶುರು. :-)..........................ಅಮ್ಮಾ ಇವತ್ತು ಏನಾಯ್ತು ಗೊತ್ತಾ.................ಅಥವ ನನ್ನ ಉದ್ದ ಜಡೆಗೆ ಎಣ್ಣೆ ಹಚ್ಚಿ, ಗಟ್ಟಿಯಾಗಿ ಹೆಣೆಯುತ್ತ........ಪುಟ್ಟಮ್ಮ...ಹೀಗೆ ದಿನ ಗಟ್ಟಿಯಾಗಿ ಜಡೆ ಹಾಕ್ಕೊಂಡ್ರೆ ಒಂದು ದಿನ ಕೂದಲು ಕಾಲಿನ ತನಕ ಬರುತ್ತೇ, ನೋಡ್ತಾ ಇರು.ಆ ಮೇಲೆ ರಾಜಕುಮಾರ ಕುದುರೆ ಮೇಲೆ ಬಂದು ನಿನ್ನನ್ನು ಎತ್ಕೊಂಡ್ ಹೋಗ್ತಾನೆ..ಅಂತೇನೋ.....ಅಥವ ಅವರ ಮನೆಯ ಹತ್ತಿರ ಇರುವ ಟಾಕೀಸ್ ಗೆ ಬಂದ ಕುಡುಕರ ಗಲಾಟೆ ಬಗ್ಗೆಯೋ..ಹೇಳ್ತಾ, ಯಾವಾಗ ಜಡೆ ಹಾಕೋದು ನಿಲ್ಲಿಸುತ್ತಿದ್ದಳು ಎಂದೇ ತಿಳಿಯುತ್ತಿರಲಿಲ್ಲ..ನಾನು ಅವಳ ಮಾತಿನಲ್ಲಿ ಕಳೆದು ಹೋಗಿರ್ತಿದ್ದೆ....ಅವಳು ’ಇನ್ನು ಏಳಿ ಪುಟ್ಟಮ್ಮ’ ಅನ್ನುವ ತನಕ.
illustrations: Srikanth