ಅಗಸ್ಟ್ 2 ತಾರೀಕೂ ರಾತ್ರಿ 8.30 , 9 ರ ಸಮಯ. ನನಗೆ ಐದು ವರ್ಷ ಕೊಪ್ಪದಲ್ಲಿದ್ದು (ಚಿಕ್ಕಮಗಳೂರು ಡಿಸ್ಟ್ರಿಕ್ಟ್) ಅಲ್ಲಿನ ಚಳಿ ವಾತವರಣಕ್ಕೆ ಹೊಂದಿಕೊಂಡು, ನನ್ನ ದೊಡ್ಡ ಹೊಟ್ಟೆ ಹಿಡಕೊಂಡು, ಮುಂಬೈ ನ ಸೆಖೆಗೆ ಸಾಕಪ್ಪಾ ಸಾಕು ಅನ್ನಿಸುವಂತಾಗಿತ್ತು. ಅದಲ್ಲದೆ ಅಪ್ಪನ ಹೃದಯದ ಕಾಯಿಲೆ ಉಲ್ಬಣಿಸಿ ಆಸ್ಪತ್ರೆಗೆ ಎಡ್ಮಿಟ್ ಮಾಡಿದ್ದರು. ಆರ್ಥಿಕ ತೊಂದರೆ ಕೂಡ ಇತ್ತು ಸ್ವಲ್ಪ. ಅದಲ್ಲದೆ ದೊಡ್ಡಪನ ಮಗ, ದೊಡ್ಡಮ್ಮನ ಮಗ ಕೆಲಸದ ಹುಡುಕಾಟಕ್ಕೆಂದು ನಮ್ಮ ಮನೆಯಲ್ಲೇ ಠಿಕಾಣಿ. ತಮ್ಮಂದಿಬ್ಬರೂ ಕೆಲಸ ಹುಡುಕ್ತಾ (ಕೆಲಸ ಹುಡುಕ್ತಾ ಅಂದ್ರೆ ಅವರಿಗೇನೂ ಮಹಾ ವಯಸ್ಸಾಗಿರಲಿಲ್ಲ ದೊಡ್ಡ ತಮ್ಮನಿಗೆ 20 -ನನಗಿಂತ ಒಂದೇ ವರ್ಷಕ್ಕೆ ಚಿಕ್ಕವನು- ಆದ್ರೆ ಚಿಕ್ಕವನಿಗೆ 16.ತಮ್ಮ ಕಾಲೀಜಿಗೆ ಹೋಗ್ತಾ ಪಾರ್ಟ್ ಟೈಮ್ ಕೆಲಸ ಮಾಡ್ತಾ ಈಗ ಬಿಡಿ ದೊಡ್ಡ ಹುದ್ದೆಯಲ್ಲಿದ್ದಾನೆ, ಚಿಕ್ಕವನಿಗೆ ಓದುವುದರಲ್ಲಿ ಅಷ್ಟೇನೂ ಇಂಟರೆಸ್ಟ್ ಇರಲಿಲ್ಲ. ಅವನಿಗ ಬಿಸಿನೆಸ್ ಮ್ಯಾನ್) ಸರಿಯಾದ ಕೆಲಸ ಸಿಗದೆ ಅವರೂ ಟೆನ್ಷನ್ ನಲ್ಲಿದ್ದು, ಮನೆ ತುಂಬಾ ಒಂತರಹ ಬೇಜಾರಿನ ವಾತವರಣ. ಅದೇ ರಾತ್ರಿ ನಾನು ಸುಮ್ಮನೆ ಅಡ್ಡಾಗಿದ್ದೆ. ಡಾಕ್ಟರ್ ನನಗೆ ಡೆಲಿವರಿ ಡೇಟ್ 15 ಕ್ಕೆ ಕೊಟ್ಟಿದ್ದರು.
ನಾನು ಅಡ್ಡಾದ ಕಡೆ ಅಮ್ಮ ಮತ್ತು ತಮ್ಮ ಬಂದು ಕೂತರು. ಅಮ್ಮನಿಗೆ ಏನನ್ನಿಸಿತ್ತೋ, ನನ್ನ ಹೊಟ್ಟೆ ಮೇಲೆ ಕೈ ಇಟ್ಟು ನಾಳೆ ನೇ ಬಂದು ಬಿಡು ಮಗ, ಯಾಕೋ ಬೇಜಾರು..ಮತ್ತು ನಾಳೆ ನನ್ನ ಹುಟ್ಟಿದ ಹಬ್ಬ ಕೂಡ ಅಂದಾಗ, ನನ್ನ ತಮ್ಮ ಏನೂ ಬೇಡ ನನ್ನ ಹುಟ್ಟು ಹಬ್ಬ 12 ಕ್ಕೆ , ಆಗ ಬಾ, ಗಮ್ಮತ್ತಿರುತ್ತೆ ಅಂದ. ನಾನು ’ಹೋಗಮ್ಮ, i don't like boys, ನನಗೆ ಹೆಣ್ಣೇ ಹೊಟ್ಟೋದು ನೋಡು, ಅಂದಾಗ ಹೊಟ್ಟೆಯೊಳಗಿನ ಮಗು ತಿಪ್ಪರಲಾಗ ಹಾಕಿತ್ತು. ಆ ದಿನ ರಾತ್ರಿ ನೇ contractions ಶುರು ಆಯ್ತು. ಆದರೆ ದಿನವಿಡಿ ಕೆಲಸ, ಆಸ್ಪತ್ರೆ ಓಡಾಟ ಅಂತ ಸುಸ್ತಾಗಿರೋ ಅಮ್ಮನನ್ನು ಎಬ್ಬಿಸುವ ಮನಸ್ಸಾಗಲಿಲ್ಲ.
ಮರುದಿನ ಅಮ್ಮ ಎದ್ದ ಕೂಡಲೆ ನೋವಿನ ಬಗ್ಗೆ ಹೇಳಿದೆ. ಅಮ್ಮ ಜೀರಿಗೆ ಕಶಾಯ ಮಾಡಿ ಕೊಟ್ಟು, ನೋವು ಕಡಿಮೆಯಾಗದಿದ್ದಲ್ಲಿ ಅದು ಡೆಲಿವರಿ ನೋವು, ಆಸ್ಪತ್ರೆಗೆ ಹೋಗುವಾ ಅಂತ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆಗೆ ತೊಡಗಿದರು. ನೋವು ಜಾಸ್ತಿಯಾಗುತ್ತ ಹೋಯಿತು. ನಾನು ಸ್ನಾನ ಮಾಡಿ ಬಂದೆ. ಅಮ್ಮ ಕೂಡ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿಟ್ಟು, ಹೆರಿಗೆ ಸುಸೂತ್ರವಾಗಲಿ ಅಂತ ಗಟ್ಟಿಯಾಗೆ ಮೊರೆಯಿಟ್ಟರು. ನಾನು ಕಷ್ಟಪಟ್ಟು ಎರಡು ಸ್ಲೈಸ್ ಬ್ರೆಡ್ ಅನ್ನು ಕಾಫಿಯಲ್ಲಿ ಅದ್ದಿ ತಿಂದೆ. ಶ್ರಾವಣ ಬೇರೆ. ಅಮ್ಮನ ಚೂಡಿಪೂಜೆ- ತುಲಸಿ ಪೂಜೆ ಕೂಡ ಮುಗಿಸಿಯಾಯಿತು ಮನೆಯಿಂದ 15 ಹೆಜ್ಜೆ ನಡೆದರೆ ನಾನು ದಾಖಲಾಗುವ ಆಸ್ಪತ್ರೆ. ನಮ್ಮ ಬಿಲ್ಡಿಂಗ್ ನ ಹಿರಿಯ ಆಂಟಿ, ಅಮ್ಮನ ಫ್ರೆಂಡ್ ಅವರನ್ನು ಜತೆ ಮಾಡಿಕೊಂಡು ನಾವು ಮೂವರು ನಡೆದುಕೊಂಡೆ ಹೊರಟೆವು. ಆದಷ್ಟು exercise ಆದ್ರೆ ಹೆರಿಗೆಗೆ ಒಳ್ಳೆಯದು ಅಂತ. ಮನೆಯಲ್ಲೂ ನಾನು ಅಮ್ಮನಿಗೆ ಎಲ್ಲ ಕೆಲಸ ಮಾಡಿ ಕೊಡುತ್ತಿದ್ದೆ, ಅದರ ಮಧ್ಯ ನನ್ನ ಸ್ನಾತಕೋತ್ತರ ಪದವಿ ಪರೀಕ್ಷೆಯ ಓದು ಕೂಡ ಸಾಗಿತ್ತು.
ಡಾಕ್ಟರ್ ಬಂದು ನನ್ನ ಮುಖ ನೋಡಿ, ಇಲ್ಲ ಡೆಲಿವರಿ ಸಂಜೆಗೆ ಆಗಬಹುದು. ಈಗಲೇ ಎಡ್ಮಿಟ್ ಮಾಡಿಸಿ ಬಿಡಿ ಎಂದರು. ಅಪ್ಪ ಆಸ್ಪತ್ರೆಯಲ್ಲಿರೋದು ಅವರಿಗೆ ಗೊತ್ತಿತ್ತು ಹಾಗಾಗಿ ಅವರು ಅಮ್ಮನಿಗೆ- ನೀವು ಮನೆಗೆ ಹೋಗಿ ಆರಾಮಾಗಿ ಸಂಜೆ ಬನ್ನಿ, ನಾವು ನೋಡಿಕೊಳ್ಳುತ್ತೇವೆ ಅಂತ ಅಮ್ಮನಿಗೆ ಹೇಳಿದರು. ನನ್ನ ಬಳಿ ತಿರುಗಿ ಐದೈದು ನಿಮಿಷಕ್ಕೆ contractionಬರುವಾಗ ಹೇಳು ಹುಡುಗಿ, ಲೇಬರ್ ರೂಮ್ ಗೆ ಹೋಗುವಾ ಅಂದಿದ್ದರು. ನಾನು ಸರಿ ಅಂದೆ. ನನಗೆ ಬೆಡ್ ಕೊಟ್ಟಿದ್ದರೂ ನಾನು ಆಸ್ಪತ್ರೆಯ corridor ಉದ್ದಕ್ಕೂ ವಾಕಿಂಗ್ ನಡೆಸ್ತಾ ಇದ್ದೆ. ನೋವು ಬಂದಾಗ ಸ್ವಲ್ಪ ಹೊತ್ತು ನಿಲ್ಲಿತ್ತಿದೆ ಮತ್ತು ಪುನ: ವಾಕ್. :-) ಸಂಜೆ 5.30 ನಂತರ contractions ಬೇಗ ಬೇಗ ಬರಲು ಶುರು ಆಯ್ತು. ಡಾಕ್ಟರ್ ಮನೆಗೆ ಹೋಗಿದ್ದರಷ್ಟೆ. ನರ್ಸ್ ಗೆ ಹೇಳಿದೆ.ನರ್ಸ್ ನಂಬಲಿಕ್ಕೆ ತಯಾರಿರಲಿಲ್ಲ. ತುಮ್ ತೋ ಆವಾಜ್ ಹೀ ನಹೀ ಕರ್ ರಹಿ ಹೋ, ಸಬ್ ಲೋಗ್ ತೊ ರೋತೆ ಹೈ -ಅಂತ. :-) ಅವರು ನನಗೆ ಲೇಬರ್ ರೂಮ್ ಗೆ ರೆಡಿ ಮಾಡಿದರು. ಡಾಕ್ಟರ್ ಗೆ ಫೋನ್ ಮಾಡಿದರು. ಡಾಕ್ಟರ್ ಕೂಡ ಅದೇ ಮಾತು ಹೇಳಿದರು, malathi make some sound, why are you silent, at least speak something ಅಂತ. ನನಗೆ ಏನು ಹೇಳುವುದು ತೋಚಲೆ ಇಲ್ಲ. ಬಟ್ ನನಗೆ ಕಿರುಚಾಡುವಷ್ಟು ಏನೂ ನೊವೇ ಇರಲಿಲ್ಲ. ಡಾಕ್ಟರ್ ಮಾತನಾದುತ್ತಿದ್ದ ಹಾಗೆ ನೆ ದೊಡ್ಡದೊಂದು contraction ಬಂದು ನಮ್ಮ ’ಅಕ್ಕ’ ಡಾಕ್ಟರ್ ಗೂ ಶಾಕ್ ಆಗುವಂತೆ ಹೊರಗೆ ಬಂದು ಆಗಿತ್ತು. :-) ಮೊದಲಿಗೆ ಕಿರುಚಿ ಅತ್ತಳಾದರೂ, ಆಮೇಲೆ ಹುಬ್ಬುಗಂಟ್ಟಿಕೊಂಡೆ ಇದ್ದಳು. ಅಳು ತುಂಬಾ ಕಡಿಮೆ. ಎಷ್ಟು ಒಳ್ಳೆ ಅಮ್ಮ ಮಗು ಅಂತಲೇ ನಮಗೆಲ್ಲರೂ ಹೇಳಿದ್ದು. ಡಾಕ್ಟರ್ ಅಂತೂ ಎಲ್ಲರಿಗೂ ’ನೋಡಿ ನನ್ನ ಮೊಡೆಲ್ (Model patient) ಒಂಚೂರು ಸದ್ದಿಲ್ಲದ್ದ ಡೆಲಿವರಿ ಅಂತ ಹೇಳುವಷ್ಟು.
ಸಂಜೆ ಅಮ್ಮ ತಮ್ಮಂದಿರು, ಅಮ್ಮನ ಪ್ರೆಂಡ್ಸ್ ಎಲ್ಲ ದಾಳಿ ಇಟ್ಟಿದ್ದೆ. ತಂಗಿ -ಆಗ ಅವಳು 9 ನೇ ತರಗತಿ, ಶಾಲೆಯಿಂದ ಬಂದವಳೇ ಮಗುವಿಗೆ ಜುಬ್ಬಾ, ಲಂಗೋಟಿ ಎಲ್ಲ ಟಕಾ ಟಕ್ ಹೊಲಿದು ತಂದಿದ್ದಳು. ಮಹಾ ಜಾಣೆ ಅವಳು, ನನ್ನ ಅಮ್ಮನ ತರಹ. ಮಾಲವಿಕ ಅವಳ ಮೊದಲು ಮಗಳು ಅಂತಲೇ ಅವಳು ಮಾಲವಿಕಳನ್ನು ಎಲ್ಲರಿಗೂ ಪರಿಚಯ ಮಾಡಿಸುವುದು. ಈಗಲೂ ಹಾಗೆ ಫೋನ್ ನಲ್ಲಿ ಏನೇನೋ ಗುಸು-ಪುಸು ಮಾತು ನಗೆ...ಅವರದ್ದು.
ಅಲ್ಲಿ ಇನ್ನೊಂದು ಆಸ್ಪತ್ರೆಯಲ್ಲಿ ಅಪ್ಪನ ಸರ್ಜರಿ (ಹೊಸ ಮಾದರಿ) ಸಕ್ಸೆಸ್ ಆಗಿತ್ತು, ಅದೇ ದಿನ ತಮ್ಮನಿಗೆ ಕೆಲಸದ ಆರ್ಡರ್ ಕೈಗೆ ಸಿಕ್ಕಿದ್ದು ಎಲ್ಲ ಮಾಲವಿಕ- ವರಮಹಾಲಕ್ಷ್ಮಿ ದಿನ ದಂದು ಹುಟ್ಟಿದ್ದರಿಂದಲೇ ಅಂತ ಅಮ್ಮ ಈಗಲೂ ನಂಬಿದ್ದಾರೆ. ಮನೆಯಲ್ಲಿನ ಟೆನ್ಷನ್ ಗಳೆಲ್ಲ ಒಂದೊಂದಾಗಿ ಸೂರ್ಯನ ಕಿರಣಕ್ಕೆ ಆವಿಯಾಗುವ ಇಬ್ಬನಿಯಂತೆ ಹಾರಿ ಹೋದವು.
ನಾನು? ನಾನು ಮೊದಲಿನಿಂದ ಒಂತರಹ ಸೈಲೆಂಟ್ ಪ್ರಾಣಿ. ನಾನಾಯ್ತು, ನನ್ನ ಪುಸ್ತಕಗಳಾಯ್ತು. ಯಾರೊಬ್ಬರೂ ಸ್ನೇಹಿತರನ್ನೂ ಕೂಡ ಮಾಡಿದವಳಲ್ಲ. ಮಾಲವಿಕಳನ್ನು ನೋಡಿ ನನಗೆ ಅಚ್ಚರಿ. she is a part of me ಯಾ ಅಂತ. ನಾನು ಕೈ ಯಲ್ಲಿ ಪುಸ್ತಕ ಹಿಡಿದುಕೊಂಡಿದ್ದರು ಅವಳನ್ನೇ ನೋಡುತ್ತಿರುತ್ತಿದೆ.ಅವಳ ಪುಟ್ಟ ಕೈ ಕಾಲು ಬೆರಳುಗಳು, ತಲೆ ತುಂಬ ಕಪ್ಪು ಗುಂಗರು ಕೂದಲು etc ನಾನು ಅವಳನ್ನೇ ನೋಡುತ್ತಿದ್ದರೆ ಅವಳು ನನ್ನನ್ನೇ ತದೇಕ ದ್ರೃಷ್ಟಿಯಿಂದ ನೋಡುತ್ತಿದ್ದಳು. ಹಾಲು ಕುಡಿಯಲು ನನ್ನ ಬಳಿಯಿದ್ದದ್ದು ಬಿಟ್ಟರೆ ಅವಳು ಅಮ್ಮ, ತಮ್ಮಂದಿರ, ತಂಗಿಯ ಕೈಗೊಂಬೆ. ಒಂಚೂರು ಅಳು ಇಲ್ಲ. ಅಪ್ಪ ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಅವಳ ದೇಖಿ ರೇಖಿ ಎಲ್ಲ ಅಪ್ಪನದೇ. ನಮಗಾರಿಗೂ ಮಾಡದ ಪ್ರೀತಿ ಅವಳಿಗೆ. ಕೈಕಾಲು ಲು ಅಲ್ಲಡಿಸುತ್ತಾ ಯಾವಾಗಲೂ ಆಟ ಆಟ. ಮೂರನೆ ತಿಂಗಳಿಗೆ ಬಾಯಿಯಿಂದ ಹಲವಾರು ಸದ್ದು. ಅಮ್ಮ ಬೇಗನೆ ಅವಳಿಗೆ ಮಣ್ಣಿ ತಿನ್ನಿಸಲು ಶುರು ಮಾಡಿಸಿದರು. ಅಪ್ಪನ ಮಂಚಕ್ಕೆ ತಾಗಿ ಇದ್ದ ಕಿಟಕಿಗೆ ಅಮ್ಮ ಹೊಲಿದ ತೆಳು ನೀಲಿ ಪರದೆ. ಅದು ಗಾಳಿಗೆ ಹಾರಾಡುವಾಗಲೆಲ್ಲ ಮಾಲವಿಕಾ ಗೆ ಖುಶಿ, ಅದರ ಜತೆ ಮಾತು ಕತೆ ಎಲ್ಲ. ಅವಳಿಗೆ ಮೂರು ತಿಂಗಳು ಅನ್ನುವಾಗ ನಾವು ತಿರುಗಾಡಲು ಶುರು ಮಾಡಿದೆವು . ಅವಳಿಗೂ ಖುಶಿ. ಹಾಡು ಹೇಳುತ್ತಾ, ಬಾಯಿಯಿಂದ ಎಂಜಲಿನ ಬಬ್ಬಲ್ಸ್ ಮಾಡ್ತಾ ಖುಶಿ ಖುಶಿಯಾಗಿರೋಳು. ಕೊಪ್ಪಕ್ಕೆ ವಾಪಸ್ ಬಂದ ಮೇಲೆ ಶ್ರೀಕಾಂತ ಆಫಿಸ್ ನ ಬ್ಯಾಚುಲರ್ ಹುಡುಗರೇ ಅವಳ ಜತೆ ಕೊಂಕಣಿ ಮಾತಾಡಿ ಅವಳು ಮಾತಾಡುವಂತಾಗಿದ್ದು. ಅಮ್ಮ ಪ್ರತೀ ಸಲ ಪತ್ರ ಬರೆಯುವಾಗ ’ಮಗು ಜತೆ ಮಾತಾಡಿ. ನೀನು ಪುಸ್ತಕ ಹಿಡಿದು ಕೂರ್ತಿಯಾ, ಶ್ರೀಕಾಂತ ನ್ಯೂಸ್ ಪೇಪರ್ ನಲ್ಲೇ ಮಗ್ನ. ಅವಳು ಮಾತು ಕಲಿಯುವುದು ಯಾವಾಗ’ ಅಂತ. :-) ಆದರೆ ಅವಳು ನನ್ನ ತರಹ ಸೀರಿಯಸ್. ಬಹುಶ: ನಾನು ಅವಳು ನಗಲಿಕ್ಕೆ ಶುರು ಮಾಡಿದ್ದು ಕೀಟಲೆ ನಿಹಾರಿಕಾ ಹುಟ್ಟಿದ ಮೇಲೆಯೇ
ಮಾಲವಿಕಾ ಅಥವಾ ನಾವು ಪ್ರಿತಿಯಿಂದ ಕರೆಯುವ ’ಅಕ್ಕ’ ನನ್ನನ್ನು ಅಮ್ಮನಾಗಿಸಿ ಇವತ್ತಿಗೆ 25 ವರ್ಷ. ಅಷ್ಟೆ ಅಲ್ಲ ಇವತ್ತು ನನ್ನ ಅಮ್ಮನ ಹಾಗೂ ನನ್ನ ಇಬ್ಬರೂ ತಮ್ಮಂದಿರ ಹೆಂಡತಿಯರ ಹುಟ್ಟು ಹಬ್ಬ. ಒಟ್ಟಿಗೆ ನಾಲ್ಕು ಜನರ ಹುಟ್ಟಿದ ಹಬ್ಬ. ಸಂಭ್ರಮದ ವಾತಾವರಣ. ಹಾಗೆಯೇ ಮಾಲವಿಕಳ ಎಂಟರ್ಪ್ರೈಸ್ ’Biscoot Factory' ಮೊದಲನೆ ವರ್ಷದ ಹುಟ್ಟಿದ ಹಬ್ಬ, ಇಲ್ಲಿದೆ ಅವಳೆ ಮಾಡಿದ ಕೇಕ್, ಅವಳ ಸ್ನೇಹಿತೆಯ ಜತೆಗೂಡಿ ಹೊರಗೆ ಹೋಗುವ ಪ್ಲ್ಯಾನ್. ಈ ಕೇಕ್ ಅವಳು ಒಯ್ಯುವುದಕ್ಕೆ. ಮನೆಗೆ ಇನ್ನೊಂದು ಕೇಕ್, ಸಂಜೆ ಕಟ್ ಮಾಡಲು.
ಇವತ್ತು ಬೆಳಿಗ್ಗೆ ಎದ್ದ ಕೂಡಲೆ ನಾನು ಅವಳಿಗೆ ವಿಶ್ ಮಾಡೋದು ಬಿಟ್ಟು, ಹೇ congratulate me. It is silver jubilee of my motherhood ಅಂದೆ. ಅವಳು ಮೋಮಿsss ಅಂತ ಜೋರು ಮಾಡಿದಾಗಲೆಲ್ಲ ನನಗೆ ತುಂಬಾ ಖುಶಿ. ಓ ಬೈತಾಳೆ, especially ನಾನು ಫೇಸ್ ಬುಕ್ ನಲ್ಲಿ ತುಂಬಾ ಟೈಮ್ ಸ್ಪೆಂಡ್ ಮಾಡಿದರೆ. :-)
ನಿಮ್ಮೆಲ್ಲ ಆಶೀರ್ವಾದ ನನ್ನ ಮಗು ಜತೆ ಇರುತ್ತೆ ಅಂತ ಗೊತ್ತು. ಬ್ಲಾಗ್ ಮೂಲಕ ಅವಳು ನಿಮ್ಮ ಮಗು ಕೂಡ..
:-)