March 27, 2012

ಪುಟ್ಟು ಪ್ರಹಸನ ಇನ್ನಷ್ಟು...

ನನ್ನ ಪುಟ್ಟನ ಇನ್ನಷ್ಟು ಸಂಭಾಷಣೆಗಳು (ಪುಟ್ಟು ನನ್ನ ಮನೇ ಮಾಲೀಕರ 4 ವರ್ಷದ  ಮೊಮ್ಮಗ)
"ಪುಟ್ಟು,ಗಗನ್ ಈಗ ಮಾತಾಡ್ತಾನಾ?" (ಮೊನ್ನೆ ದಿನಾ ಇಡಿ ಗಗನ್, ’ಅಕ್ಕ’ ಅನ್ನುವ ಪದವನ್ನು ಅಕ್ಕ್, ಅಕ್ಕಾ, ಅಕ್ಕಾssss, ಅಕ್ಕಕ್ಕಾ..........ಅಂತೆಲ್ಲ ಹೇಗೆಲ್ಲ ಸಾಧ್ಯ ಹಾಗೆಲ್ಲ ನಾಲಿಗೆ ಮೇಲೆ ಹೊರಳಿಸ್ತಾ ಇದ್ದ)
"ಮಾತಾಡೋದಾ ಆಂಟಿ, ಬೈಗಳನ್ನೆಲ್ಲ ಕಲಿತು, ನನಗೆ ಬೈತಾನೆ ಅವನು" :-))) (ಗಗನ್ ಮೊನ್ನೆ ಒಂದು ವರ್ಷದ ಹುಟ್ಟು ಹಬ್ಬ ಆಚರಿಸಿದ)

ರಜೆ ಶುರು ಆಗುವ ಮುನ್ನ  ಶಾಲೆಯಲ್ಲಿ ಸರಸ್ವತಿ ಪೂಜೆ ದಿನ ಹೊಸ ಡ್ರೆಸ್ ಹಾಕ್ಕೊಂಡು ’ಆಂಟಿ, ಚೆನ್ನಾಗಿದೆಯಾ?’ ಅಂತ  ಕೇಳಿದ. ಫೋಟೊ ತೆಗೀಲಾ ಪುಟ್ಟ ಅಂದಾಗ ಹೂಂ ಆಂಟಿ ಅಂದ...ನಿಹಾ ಇರಲಿಲ್ಲ...ನಾನೆ ತೆಗೆದದ್ದು :-)


"ಐ ಲವ್ ಯು ಕಣೋ ಪು......"
"ಐ ಲವ್ ಯು ಟೂ ಆಂಟಿ" (ನಾನು ಪೂರ್ತಿ ಒಂದು ವಾಕ್ಯ ಪೊರೈಸುವ ಮೊದಲೆ ಅವನು ಉತ್ತರಿಸಿ ಆಗಿರುತ್ತೆ)

"ಆಂಟಿ, ನೀವು ನನಗೂ ಪುಟ್ಟೂ, ಗಗ್ನಿ (his pet name for his younger brother Gagan) ಗೂ ಪುಟ್ಟು ಅಂತೀರಾ..ನನಗೆ confuse ಆಗತ್ತೆ.".:-)

"ಆಂಟಿ ನೆನ್ನೆ ಪೀಸ್ ಮಾರ್ ಖಾನ್ ಪಿಚ್ಚರ್ ನೋಡೋಕೆ ಹೋಗಿದ್ವಿ"
"ಹೋಯ್ ಪುಟ್ಟಣ್ಣ, ಅದು ಪೀಸ್ ಮಾರ್ ಖಾನ್ ಅಲ್ಲ...ತೀಸ್ ಮಾರ್ ಖಾನ್’
"ಎಂತದ್ದೋ ಒಂದು, ಅಮ್ಮನಿಗೆ ಅಕ್ಷಯ ಕುಮಾರ್ ಇಷ್ಟ ಅಂತೆ ಅದಕ್ಕೆ"
"ಚೆನ್ನಾಗಿತ್ತ" ನಾನು ಕೇಳಿದೆ
"ಅಯ್ಯೋ ಡಬ್ಬ ಪಿಚ್ಚರ್ ಆಂಟಿ" ನನಗೆ ಶಿವರಾಜಕುಮಾರ್ ಪಿಚ್ಚರೇ ಇಷ್ಟ. ಜೋಗಿ ಪಿಚ್ಚರ್ ಮೂರು ಸಲ ನೋಡ್ದೆ.
'ಬೇಡುವೆನು ವರವನ್ನು ಅಂತ  ಒಂದು ಹಾಡು ಹೇಳಿ ತೋರಿಸಿದ..( ಆ ಸಿನಿಮಾದ ಹಾಡಾ ನನಗಂತೂ ಗೊತ್ತಿಲ್ಲ.:-)
:-)

March 22, 2012

ನಂದನ ಸಂವತ್ಸರ- ಯುಗಾದಿ ಹಬ್ಬದ ಶುಭಾಶಯಗಳು


ಶುಭಾಶಯ ಪತ್ರಿ,  ಶ್ರೀಕಾಂತ ನನಗೋಸ್ಕರ ಮಾಡಿಕೊಟ್ಟಿದ್ದು. ಚಿತ್ರದಲ್ಲಿರುವ ಲ್ಯಾಂಪ್ ನನ್ನದು. ಫೋಟೊ ತೆಗೆದಿದ್ದು as usual ನಿಹಾರಿಕಾ.
ಈ ದೀಪ special ದೀಪ.  usually ಎಲ್ಲರೂ ಮೆಟ್ಟಿಲ ಮೇಲೆ ಜೋಡಿ ದೀಪ ಬೆಳಗಿಸಿದರೆ ನಾನು ಒಂಟಿ ದೀಪ ಬೆಳಗಿಸುವುದು. ಎಲ್ಲರೂ ಯಾಕೆ ಎಂದು ಕೇಳುತ್ತಾರೆ. ಆದರೆ ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಪ್ರತಿ ಸಲ ಈ ದೀಪವನ್ನು ನಾನು ಮೆಟ್ಟಿಲ ಬಲಬದಿಗೆ ಇಡುವಾಗ ನಾನು ಉದ್ದ ಲೈಟ್ ಹೌಸ್ (ಹೂಂ ಗೊತ್ತು ನಾನು ಬರೇ 5' 2" ಆದ್ರೂ)  ಎನೋ ಎಂಬಂತೆ ಭಾಸವಾಗುತ್ತೆ. ಲೈಟ್ ಹೌಸ್ ಎಲ್ಲರಿಗೂ ಗೊತ್ತಿರಬಹುದು ಎಂದು ನನ್ನ ಅನಿಸಿಕೆ.ಹಿಂದಿನ ಕಾಲದಲ್ಲಿ ಹಡಗುಗಳಿಗೆ ದಾರಿ ದೀಪವೆಂಬಂತೆ  ಬೆಳಗಿಸುತ್ತಿದ್ದರು. 
ನನ್ನ ಈ ದೀಪ ಗಾಳಿ, ಮಳೆ , ಚಳಿಗೆ ಒಂದೆ ತರಹ ಬೆಳಗುತ್ತದೆ (ಎಣ್ಣೆ ಖಾಲಿ ಯಾಗುವ ತನಕ)
love you dear lamp......
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
:-) 

March 17, 2012

ನ್ಯಾನಿ- ಒಂದು ನ್ಯಾನೋ ಪ್ರಸಂಗ

(for new readers of this blog...Dishanth is the four year old grandson of our house owner)


ಆಫಿಸ್ ಕೆಲಸದ ಮೇಲೆ ದಿನವಿಡೀ ಕನಕಪುರದಲ್ಲಿದ್ವಿ. ಸಂಜೆ ಮನೆಗೆ ಬಂದಾಗ ಪುಟ್ಟು ಮೆಟ್ಟಿಲ ಬಳಿ ಕಾಯ್ತಾ ಇದ್ದ. "ಎಲ್ಲಿಗೆ ಹೋಗಿದ್ರಿ ಆಂಟಿ...ನನಗೆ ಹೇಳ್ಲೆ ಇಲ್ಲ ಅಂದ. ನನ್ನ ಜತೆ ಮನೆ ಒಳಗೆ ಬಂದು...ನಾನು ನನ್ನ ಬಾಕಿ ಉಳಿದ ಮನೆಕೆಲಸಗಳನ್ನೆಲ್ಲ ಬಿಟ್ಟು ಅವನ ಜತೆ ಆಟ ಆಡಿದೆ. 
ಇವತ್ತು ನಾನು ಪುಟ್ಟು bowling ಆಟ. ಚಿಕ್ಕ ಚಿಕ್ಕ ಬೌಲಿಂಗ್ ಪಿನ್ಸ್ ಮತ್ತು ಒಂದು ಪುಟ್ಟ ಗೋಲಿ.
ಆಡ್ತಾ ನಮ್ಮ ಮಾತು ಸಾಗ್ತಾ ಇತ್ತು
ನಾನು ಮನೆಯಿಂದ ಹೊರಗಡೆ ಹೋಗದೇನೆ ನನಗೆ ಎಲ್ಲರ ಬಗ್ಗೆ ಗೊತ್ತು ..ಒಂದು ಥ್ಯಾಂಕ್ಸ್ to my sandwich(ed) home..
ಉಳಿದ ವಿಷಯಗಳಿಗೆ ನನ್ನ ಪುಟ್ಟು ನೆ ಮೆಸೆಂಜರ್...ಇಲ್ಲಿ ಅಕ್ಕ ಪಕ್ಕದವರ ಬಗ್ಗೆ ಮಾತ್ರ ಅಲ್ಲ, ಅವನ ಕುಟುಂಬದ ಹಲವಾರು ಸದಸ್ಯರ ಪರಿಚಯ ಕೂಡ ಆಗಿದೆ without ever having met them!!
"ಪುಟ್ಟು, ಚಕಿತ್ ತಮ್ಮನಿಗೆ ಏನು ಹೆಸರಿಟ್ಟಿದ್ದಾರೆ?? (ಚಕಿತ್, ಹಾವೆರಿ ಯಲ್ಲಿರುವ ಅವನ ಮಾಮನ ಮಗ..ದಿಶಾಂತ್ ಗಿಂತ ಒಂದು ದಿನ ದೊಡ್ಡವನು...ಇದೂ ಅವನೇ ಹೇಳಿ ನನಗೆ ಗೊತ್ತಾಗಿದ್ದು)
"ಆಂಟಿ, ಅವನಿಗೆ ನ್ಯಾನಿ ಅಂತ ಹೆಸರು ಇಟ್ಟಿದ್ದಾರೆ"
"ನ್ಯಾನಿ ನಾ...ಹೋಗೋ....ಹುಡುಗರಿಗೆ ಆ ಥರ ಹೆಸರು ಇಡ್ತಾರಾ?"
"ಹೂಂ ಆಂಟಿ..ನ್ಯಾನಿ ನೇ"
:ಹೋ ನಾಣಿ ನಾ, ನಾರಾಯಣ ಅಂತ ಹೆಸರು ಇಟ್ಟಿದ್ದಾರೇನೋ?"
"ಅಯ್ಯೋ ಎಷ್ಟು ಸಲ ಹೇಳಬೇಕು ಆಂಟಿ, ನ್ಯಾನಿ, ನ್ಯಾನಿ ಅಂತ ಅವನ ಹೆಸರು"
ಸ್ವಲ್ಪ ಹೊತ್ತು ನಾನು ಅವನೂ ಒಬ್ಬರ ಮುಖ ಒಬ್ಬರು ಸುಮ್ಮನೆ ಮಿಕಿ ಮಿಕಿ ನೋಡ್ತಾ ಇದ್ವಿ...
ನನಗೆ sudden ಆಗಿ strike ಆಯ್ತು, ಹೋsss  ಜ್ಞ್ಯಾನಿ (jnyaani) ನಾ?
ಹೂಂ ಆವಗ್ಲಿಂದ ಅದೇ ಹೇಳ್ತಾ ಇರೋದು ನ್ಯಾನಿ ನ್ಯಾನಿ ಅಂತ
ಅದೇನಾಗಿದೆ ಅಂದ್ರೆ ಪುಟ್ಟು ಉಚ್ಚಾರ ಸ್ಪಷ್ಟ. ಅವನಿಗೆ ಕಂಡಾಪಟ್ಟೆ  ಶೀತ ಆಗಿ,ಮೂಗೆಲ್ಲ ಕಟ್ಟಿಕೊಂಡು ಬಿಟ್ಟಿದೆ ಹಾಗಾಗಿ ಜ್ಞ್ಯಾನಿ became ನ್ಯಾನಿ....
fresh ಆಗಿದ್ದಾಗ್ಲೇ  ಈ ವಿಷಯ ಬ್ಲಾಗಿಸುವ ಅಂತ....
really bye bye!!!

-- 
:-)

March 16, 2012

ಆಟ ಒಂದೆssss ಆದ್ರೆ...??!!


ಮೇಲಿನ ಮನೆ ಪುಟ್ಟು ದಿಶಾಂತ ಗೆ ಈಗ ರಜೆ. ನಮ್ಮ ಮನೆಯಲ್ಲೇ ಇರುವುದು ಅವನು. ನಿಹಾ ಗೆ ಪರೀಕ್ಷೆಗೆ ತಯಾರಿ ನಡೆಸಲು ಕೆಲ ದಿನಗಳ ರಜೆ ಕೊಟ್ಟಿದ್ದಾರೆ. ಪುಟ್ಟನ ಜತೆ ದಿನಾ ಆಡಲಿಕ್ಕೆ ಅವನ ಮನೆಗೆ ಬರುತ್ತಿದ್ದ ಹುಡುಗಿಯರು ಡ್ಯಾನ್ಸ್ ಕ್ಲಾಸ್ ಸೇರಿದ್ದಾರೆ. ಹಾಗಾಗಿ ಆಡಲಿಕ್ಕೆ ನಮ್ಮ ಮನೆಗೆ ಬರುತ್ತಾನೆ. ಅಷ್ಟೆ ಅಲ್ಲ ಅವನಿಗೆ ಈಗ ಪುಟ್ಟ ತಮ್ಮ ಹುಟ್ಟಿದ್ದರಿಂದ ಅವನ ಅಮ್ಮ ಆ ಮಗುವಿನ ಲಾಲನೆಯಲ್ಲಿ ವ್ಯಸ್ತರಾಗಿತ್ತಾರೆಂದು ಕೆಲವೊಮ್ಮೆ ನಾನೇ ಪುಟ್ಟನ್ನ ನಮ್ಮ ಮನೆಗೆ ಕರೆಯುತ್ತೇನೆ.

ಅವನ ಹೊಸ ಆಟ ನನ್ನ ಶೋ ಕೇಸ್ ನಲ್ಲಿರೋ ಪುಟ್ಟ ಪುಟ್ಟ ಟೀ ಸೆಟ್ ನಿಂದ ಟೀ ಮಾಡಿಕೊಡುವುದು, ಮತ್ತು ಯಾರು ಅವನ ಜತೆ ಆಡುತ್ತಾರೋ..ಅದನ್ನ ಅವರು ಕುಡಿಯುವುದು. ಸುಮಾರು ಏಳೆಂಟು ಸಲ ಈ ಆಟ ಆಡಿಸುತ್ತಾನೆ.
ಆಟ ಹೀಗೆ ಆಡುವುದು.ನಾವು  ನಿದ್ದೆಮಾಡಿ ಎದ್ದು, ಹಲ್ಲುಜ್ಜಿ, ಸ್ನಾನ ಮಾಡಿ, ದೇವರಿಗೆ ನಮಸ್ಕಾರ ಮಾಡಿ, ಹಣೆಗೆ ವಿಭೂತಿ (ಅವರು ಲಿಂಗಾಯತರು) ಹಚ್ಚಿಕೋ ಬೇಕು. ಆಮೇಲೆ ಅವನು ’ರೀ ಬರ್ರಿ ಟೀ ಕುಡೀರಿ’ ಅಂತಾನೆ.

ನಾವು ಮೂರು ಜನ ಅವನೊಂದಿಗೆ ಆಟ ಆಡುವಾಗ ನಮ್ಮ ಪ್ರತಿಕ್ರಿಯೆ ಹೀಗಿರುತ್ತದೆ

ನಾನು:
ಹೇ ಟೀ ಚೆನ್ನಾಗಿದೆ ಕಣೋ ಇವತ್ತು...ಅಥವಾ....ಇವತ್ತು ಟೀ ಗೆ ಸಕ್ಕರೆ ಕಡಿಮೆ.....ಅಥವಾ....ಇವತ್ತು ಟೀ ಗೆ ಹಾಲಿನ ವಾಸನೆ ಬರ್ತಾ ಇದೆ....ಅಂತಲೋ ಹೇಳುತ್ತೇನೆ.
ಕೆಲವೊಮ್ಮೆ ಆಫಿಸಿನ ಕೆಲಸ ಜಾಸ್ತಿ ಇದ್ದರೆ..ಪುಟ್ಟು ಇವತ್ತು ಒಂದೇ ಸಲ ಆಡೋದು ಅಂದ್ರೆ...ಅವನು , "ಹಂಗೆಲ್ಲ ಹೇಳಿದ್ರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ’ ಅಂತಾನೆ. ಆಗ ನಾನು ’ ಹೇ ಹಂಗೆಲ್ಲ ಹೇಳಬೇಡ್ವೋ, ನಂಗೆ ಬೇಜಾರಾಗತ್ತೆ, ಮತ್ತು ನಾನು ಯಾರು ಜತೆ ಆಡ್ಲಿ ಅಂತೆಲ್ಲ ಪೂಸಿ ಹೋಡಿತೀನಿ..

ನೀಹಾ:
ನನಗೆ ಪರೀಕ್ಷೆ ಇದೆ. ಒಂದೆ ಸಲ ಆಡೋದು ಅಂತಾಳೆ...ಅದಕ್ಕೆ ಅವನು ’ಇಲ್ಲ ನಾಲ್ಕ್ಸ್ ಸಲ ಆಡಬೇಕು...ಇಲ್ಲದಿದ್ದರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ...ಅಂದಾಗ ಹಾಗೆಲ್ಲ ಅನ್ನಬಾರದಲ್ಲ್ವಾ ಪುಟ್ಟು, . ನಿಹಾ compromise ಮಾಡ್ತಾಳೆ. "ಸರಿ ಎರಡು ಸಲ ಆಡೋದು, ಮತ್ತೆ ನನಗೆ ಕಡಿಮೆ ಮಾರ್ಕ್ಸ್ ಬಂದ್ರೆ ಶೆಣೈ ಅಂಕಲ್ ಬೈತಾರೆ’ ಅದಕ್ಕೆ ಅವನು ಹೂಂ...ಅಂತ ಅವರ ಆಟ ನಡಿತದೆ...

ಮಾಲು:
ಅವಳು ಅವನ ಜತೆ ಅಪರೂಪಕ್ಕೆ ಅವಳಿಗೆ ರಜೆ ಇದ್ದಾಗ ಆಡೋದು. ಎರಡು ಸಲ ಆಡಿದ ಮೇಲೆ ಅವಳು, ಹೋಗೋ, ಬೋರ್ ಆಟ..ಎಷ್ಟು ಸಲ ಆಡೋದು ಅಂದ್ರೆ ಅವನದ್ದು ಯಥಾ ಪ್ರಕಾರದ ವರಾತ ಶುರು: ನೋಡು ಅಕ್ಕ ಹಾಗೆಲ್ಲ ಹೇಳಿದ್ರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ, ಅಂದ್ರೆ ಅವಳು ’ಹೋಗ್ ಹೋಗು ಏನು ನನಗೆ ಬ್ಯ್ಲಾಕ್ ಮೈಲ್ ಮಾಡ್ತೀಯ ಅಂದ್ರೆ...ಅವನು ಸುಮ್ಮನಾಗಿಬಿಟ್ಟ. ಸ್ವಲ್ಪ ಹೊತ್ತು ಕಂಪ್ಯೂಟರ್ ನಲ್ಲಿ ice ಪ್ರಿನ್ಚೆಸ್ ಆಟ ಆಡಿ ಮನೆಗೆ ಹೋದ.

ನಾನು ಮಾಲವಿಕ ಳಿಗೆ ಕೇಳ್ದೆ...ಯಾಕೆ ಪಾಪ ಅವನಿಗೆ ಹಾಗಂದಿದ್ದು. ನಾವೆಲ್ಲ ಹೇಗೆ ಆಟ ಆಡ್ತೀವಿ ಅವನ ಜತೆ..ನೀನು ಹಾಗೆ ಆಡಬೇಕು ಅಂದ್ರೆ ಅವಳು ’ವ್ಹಾಟ್ ವೈ ಆರ್ ಯು ಟೀಚಿಂಗ್ ಹಿಮ್ ದ್ಯಾಟ್ ಹೀ ಕೆನ್ ಹ್ಯಾವ್ ಹಿಸ್ ಔನ್ ವೇ?’ ಯೇ ಹೋಗೆ ಎಷ್ಟು ಸಣ್ಣವನು (ನಾಲ್ಕು ವರಷ) ಅವನು..ಅಂದ್ರೆ  ಹೌದು ಈಗ ಅವನು ಸಣ್ಣವನು , ಲೇಟರ್ ಆನ್ ಹಿ ಇಸ್ ಗೋಯಿಂಗ್ ಟು ಗ್ರೋ ಅಪ್ ಆಂಡ್ ಹಿ ವಿಲ್ ಥಿಂಕ್ ಹಿ ಕ್ಯಾನ್ ಹ್ಯಾವ್ ಹಿಸ್ ಔನ್ ವೇ ಅಂದಾಗ ನಾನೇ ಸುಮ್ಮನಾದೆ.........

ಹಲವಾರು ವರ್ಷಗಳ ಹಿಂದೆ ನನ್ನ short film maker ಮಿತ್ರರೊಬ್ಬರು ನನಗೆ ನನ್ನ ಫಿಲ್ಮ್ ನಲ್ಲಿ ಆಕ್ಟ್ ಮಾಡ್ತೀರಾ ಅಂತ ಕೇಳಿದಾಗ ನಾನು ’even at gunpoint i dont think i will manage the A of acting ' ಅಂದಿದ್ದೆ..ಈಗ ಪುಟ್ಟು ನನ್ನಿಂದ ಸುಮಾರೆಲ್ಲ ಆಕ್ಟ್ ಮಾಡಿಸುತ್ತಾನೆ. ಅವನು ಟೈಲರ್ ಆದ್ರೆ..ನಾನು ಕಸ್ಟಮರ್..ಅವನು ಟೀಚರ್ ಆದ್ರೆ ನಾನು ಸ್ಟುಡೆಂಟ್..ಅವನು ಡಾಕ್ಟರ್ ಆದ್ರೆ ನಾನು ಪೇಷಂಟ್......

:-)
ಸುಮ್ನೆ ಒಂದು small post......blogger.com upgrade ಆಗ್ತಾ ಇದೆ ಅನ್ನಿಸುತ್ತೆ. ಕನ್ನಡದಲ್ಲಿ ಟೈಪ್ ಮಾಡಲಿಕ್ಕೆ ಸುಮಾರೆಲ್ಲ ತಲೆ ಖರ್ಚು ಮಾಡಬೇಕಾಯಿತು....
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು in advance.....ಮುಂದಿನ ತಿಂಗಳು ನಮ್ಮ ಭೇಟಿ!!!!!!!

March 13, 2012

ದಪ್ಪ ಮೆಣಸಿನಕಾಯಿ ಮೊಸರು ಬಜ್ಜಿ -Cool Cool Recipe for Summer

ಈ recipe ನನಗೆ ಹೇಳಿ ಕೊಟ್ಟಿದ್ದು ನನ್ನ ತಮ್ಮನ ಹೆಂಡತಿ ದೀಪಾ ಪೈ. ದೀಪ ಹುಟ್ಟಿದ್ದು ಮುಂಬೈನಲ್ಲಾದರೂ ಬೆಳೆದದ್ದು ಗುಜರಾತ ನ ವಡೋದರಾ (Baroda) ದಲ್ಲಿ. ಬಹುಶ: ಈ ಪದಾರ್ಥ ಅಲ್ಲಿ ಮಾಡುತ್ತಾರೇನೋ ಗೊತ್ತಿಲ್ಲ. ಅವಳು ಇಲ್ಲಿ ಬೆಂಗಳೂರಿಗೆ ಬಂದಾಗ ಒಂದು ಸಲ ಮಾಡಿದ್ದಳು. ನಮಗೆಲ್ಲ ತುಂಬ ಇಷ್ಟ ಆಯ್ತು. ಈಗ ಹದಿನೈದು ದಿನಕ್ಕೊಮ್ಮೆ ಈ dish ಮಾಡುತ್ತಿರುತ್ತೇನೆ. ದೀಪಾಳ ಅಮ್ಮ ಮತ್ತು ನಮ್ಮ ಅಮ್ಮ ಫ್ರೆಂಡ್ಸ್. ಪ್ರತೀ ಬೇಸಿಗೆ ರಜೆಯಲ್ಲಿ ಅವರು ಮುಂಬೈಗೆ ನಮ್ಮ ಮನೆಗೆ ಬರುತ್ತಿದ್ದರು. ನನ್ನ ತಮ್ಮ ಕೃಷ್ಣ ಅವಳನ್ನು ಸೈಕಲ್ ಮೇಲೆ ರೌಂಡ್ ಗೆ ಕರೆದುಕೊಂಡು ಹೋಗುತ್ತಿದ್ದ. ಕನಸು ಮನಸಲ್ಲೂ ಅವಳು ನನ್ನ ತಮ್ಮನ ಹೆಂಡತಿಯಾಗುತ್ತಾಳೆಂದು ಅಂದುಕೊಂಡಿರಲಿಲ್ಲ. ಚಿಕ್ಕವಳಿದ್ದಾಗ ಅವಳು ನನಗೆ ಮಾಲತಿಯಕ್ಕ ಅನ್ನುತ್ತಿದ್ದದ್ದು ಈಗಲೂ ನಾನು ಅವಳಿಗೆ ಮಾಲತಿಯಕ್ಕ...ದೀಪಾ ಗುಜರಾತಿ accent ನಲ್ಲಿ ಕೊಂಕಣಿ ಮಾತನ್ನಾಡುವುದು ಗಮ್ಮತ್ತಿರುತ್ತದೆ. ಅವಳು ಒಂದು ವಾಕ್ಯ ಮಾತಾಡಿ ಅದು ನನ್ನ ಮೆದುಳಿಗೆ ತಲುಪಿ process ಆಗುವಷ್ಟರಲ್ಲಿ ಅವಳು ಇನ್ನೊಂದು ವಾಕ್ಯ ಹೇಳಿರುತ್ತಾಳೆ...so ನಾವು ಹಿಂದಿಯಲ್ಲಿ ಮಾತನಾಡುವುದು. ಆದರೆ ತಮ್ಮನ ಮಗಳು ಮಿಹಿಕಾ ಹುಟ್ಟಿದ್ದು ಮುಂಬೈನಲ್ಲಿ, ಅವಳು ಮರಾಠಿ accent ನಲ್ಲಿ ಕೊಂಕಣಿ ಮಾತನಾಡುತ್ತಾಳೆ...... ಮತ್ತು ಯು.ಎಸ್. ನಲ್ಲಿರುವ  ನನ್ನ ತಂಗಿ ಮಕ್ಕಳು ಕೊಂಕಣಿ ಅಮೇರಿಕನ್ accent ನಲ್ಲಿ ಮಾತಾಡುವುದು ಮಜವಾಗಿರತ್ತೆ. ಕೊಂಕಣಿಯಲ್ಲೇ ಮಾತಾಡುವುದು ಅವಳು ಕಡ್ಡಾಯವಾಗಿಸಿದ್ದಾಳೆ....ಒಟ್ಟಿಗೆ ಗಮ್ಮತ್ತು... .ಹ್ಮ್ಮ್ recipe ಅಂಥೇಳಿ ಎಲ್ಲೆಲಿಗೋ ಹೊಗ್ತಾ ಇದೆ ವಿಷಯ....

ದೊಣ್ಣ ಮೆಣಸು /capsicum/ ದಪ್ಪ ಮೆಣಸಿನ ಮೊಸರು ಬಜ್ಜಿ:

ಸೆಕೆಗೆ ಸಖತ್...taste bhi health bhi ..easy bhi

2-3 ಹದ ಗಾತ್ರದ  ಕ್ಯಾಪ್ಸಿಕಮ್...ಸಣ್ಣಗೆ ಕತ್ತರಿಸಿದ್ದು

ಎರಡು ಗ್ಲಾಸ್ ಮೊಸರು..ಸ್ವಲ್ಪ ಸಿಹಿ ಇದ್ರೆ ಒಳ್ಳೆಯದು

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಜೀರಿಗೆ, ಮೆಂತೆ, ಹಿಂಗಿನ ಪುಡಿ, ಸಣ್ಣಗೆ ಕತ್ತರಿಸಿದ ಹಸಿಮೆಣಸಿಕಾಯಿ (ಬೇಕಾದರೆ ಮಾತ್ರ) ಇದೇ ಆರ್ಡರ್ ನಲ್ಲಿ ಒಗ್ಗರಣೆ ತಯಾರುಮಾಡಿ...

ಒಗ್ಗರಣೆಯಲ್ಲಿ ಸಣ್ಣಗೆ ಕತ್ತರಿಸಿದ ದಪ್ಪ ಮೆಣಸನ್ನು , ಉಪ್ಪುಹಾಕಿ, ಸ್ವಲ್ಪ ಹೊತ್ತು ಬಾಡಿಸಿ .(crunchy ಆಗಿರಬೇಕು) ಆರಿದ ಮೇಲೆ ಮೊಸರು ಬೆರೆಸಿ.

ಚಪಾತಿ, ಅನ್ನ ಅಥವ stand alone ಸಲಾಡ್ ತರಹನೂ ತಿನ್ನಬಹುದು.

(ಬೆಂಡೆಕಾಯಿ ಸ್ವಲ್ಪ ಎಣ್ಣೆ ಹಾಕಿ 30 ಸೆಕೆಂಡ್ಸ್ ಮೈಕ್ರೋ ವೇವ್ ನಲ್ಲಿಟ್ಟು  ಮೇಲಿನಂತೆ ಮಾಡಿದರೂ ಚೆನ್ನಾಗಿರುತ್ತೆ.)

so stay cool this summer with this simple dish

enjoy
:-)
(ಫೋಟೊ ನಾನೆ ತೆಗೆದದ್ದು ನಿಹಾ ಕ್ಯಾಮರಾದಿಂದ...ಅವಳಷ್ಟು creativity ನನಗಿಲ್ಲ...so there!!!!!!) :-)

March 9, 2012

ಹಾಳು ಹರಟೆ

ಬೆಳಿಗ್ಗೆ ಕಾಲೇಜಿನಿಂದ ನಿಹಾ ಎಸ್ ಎಮ್ ಎಸ್ ಮಾಡಿದ್ದಳು, ಸಂಜೆ 5.30 ಗೆ ರವೀಂದ್ರ ಕಲಾಕ್ಷೇತ್ರಕ್ಕೆ ಬಾ, ನನ್ನ ಫ್ರೆಂಡ್ ಅಕ್ಕನ ನಾಟಕ ಇದೆ ಅಂತ..ನಾನು ಹೆಚ್ಚಿಗೆ ಏನೂ ಕೇಳದೆ ಹೂಂ ಅಂತ ಕಳಿಸಿದೆ. ಸಂಜೆ 4.50 ರ ಸುಮಾರಿಗೆ ನಿಹಾ ಹಾಗು ಅವಳ ಸ್ನೇಹಿತೆಯರಿಗೆ ಬಿಸ್ಕತ್ ಕಟ್ಟಿಕೊಂಡು ಫ್ರಿಜ್ ನ ನೀರು (ಸಿಕ್ಕಾಪಟ್ಟೆ ಸೆಕೆ.. i almost cancelled going) ಹಿಡಿದುಕೊಂಡು ಹೊರಟೆ. ಒಬ್ಬ ರಿಕ್ಷಾದವ ಬರಲ್ಲ ಅಂದ, ಇನ್ನೊಬ್ಬ ಮೀಟರ್ ಮೇಲೆ ಹತ್ತು ರೂ ಎಕ್ಸ್ಟ್ರಾ ಕೊಡಿ ಅಂದ..ಅವನಿಗೆ ಮುಂದೆ ಹೋಗುವಂತೆ ಸನ್ನೆ ಮಾಡಿ, ಗಟ್ಟಿ ಹಾಡು ಹಾಕಿಕೊಂಡ ರಿಕ್ಷಾದವನಿಗೆ ’ರವೀಂದ್ರ ಕಲಾಕ್ಷೇತ್ರಕ್ಕೆ’ ಬರ್ತೀರಾ ಅಂತ ಎರಡು ಸಲ ಕೇಳಿದ ಮೇಲೆ, ಮೂರನೆ ಸಲ ಹಾಡಿನ ವಾಲ್ಯುಮ್ ಚಿಕ್ಕದು ಮಾಡಿ, ಎಲ್ಲಿಗೆ’ ಅಂತ ಕೇಳಿದ...ಪುನ: ನಾನು ಹೋಗಬೇಕಾಗಿದ್ದ ಸ್ಥಳದ ಹೆಸರು ಹೇಳಿದೆ. ಬನ್ನಿ ಅಂದ. ರಿಕ್ಷಾ ಚಾಲು ಆದ ಮೇಲೆ ಗಾಳಿ ಬಿಸಿ ಒಂದು ತರಹ ಮನಸ್ಸು ಉಲ್ಲಸಿತವಾಯ್ತು.

ನನ್ನ ಬ್ಲಾಗ್ ನ ಕಮೆಂಟ್ ಓದಿ,  ವಸುಧೇಂದ್ರ ಅದರ ಬಗ್ಗೆ ಮಾಡಿದ ಎಸ್ ಎಮ್ ಎಸ್ ನೆನಪಿಸಿಕೊಂಡು ಖುಶಿಯಲ್ಲಿ ತೇಲ್ತಾ..ಅದರ ಒಟ್ಟಿಗೆ ಹಿನ್ನೆಲೆಯಲ್ಲಿ ’ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ’ ಕೇಳ್ತಾ...ಹೂಂ ಒಂದುತರಹ ಚೆನ್ನಾಗಿದೆ ಲಿರಿಕ್ಸ್ ...ಬಹುಶ: ಜಯಂತ ಕಾಯ್ಕಿಣಿ ಬರೆದಿರಬಹುದಾ ಅಂದುಕೊಳ್ಳುತ್ತಾ...: ನನ್ನ ಮುಖದ ಮೇಲೆ ನಗು  (ಅಥವಾ may be i was grinning like a Cheshire cat) ಇದ್ದಿರಬಹುದೆಂದು ಅನ್ನಿಸುತ್ತೆ. ರಿಕ್ಷಾದವನು ,ಮ್ಯಾಡಂ ಖುಶಿಯಾಗಿದ್ದಾರೆ’ ಅಂದಾಗ ಅವನ ಮುಖ ನೋಡಿದೆ. ಘನ್ ಗಂಭೀರ ಮುಖ...ನನಗೆ extra ಕೇಳಿಸ್ತಿರಬಹುದು ಅಂದುಕೊಂಡೆ..ಮತ್ತು  ನಾನು ನನ್ನ ಪೋಸ್ಟ್ ಗಳಿಗೆ ಬರುವ  ಕಮೆಂಟ್ ಇ-ಮೈಲ್ ಬಗ್ಗೆ ಮೆಲುಕು ಹಾಕುತ್ತ ಒಂದು ತರಹ happy happy feelings ನಲ್ಲಿ ತೇಲುತ್ತಾ ಮಾತನಾಡುವ  ಮೂಡ್ ನಲ್ಲಿ ಇರಲಿಲ್ಲ. 
"ಮ್ಯಾಡಂ, ರಸ್ತೆ ನೋಡಿದ್ರಾ?? ಎಷ್ಟು ಫ್ರೀ ಆಗಿದೆ ಇವತ್ತು" ಹೋ ಹಾಗಾದ್ರೆ ಇವನ ಮಾತೆ ನನಗೆ ಆವಾಗ ಕೇಳಿಸಿದ್ದು ಅಂದುಕೊಂಡೆ...
"ಹೂಂ"
"ಮ್ಯಾಡಂ ಖುಶಿಯಾಗಿದ್ದಕ್ಕೆ, ರಸ್ತೆ ಖಾಲಿಯಾಗಿದೆ"
"ಹೂಂ"
"ನಿಮಗೂ ಖುಶಿ, ನನಗೂ ಖುಶಿ.. ಈ ತರಹ ರಸ್ತೆ ಫ್ರೀ ಆಗಿದ್ರೆ ನಾನು ರಾಜಾರೋಷವಾಗಿ (liked the usage of this word by him) ಗಾಡಿ ಬಿಡ್ತೀನಿ"
"ಹೂಂ"
ಅಷ್ಟರಲ್ಲಿ ಒಂದು ಸಿಗ್ನಲ್ ಹತ್ರ ನಮ್ಮ ರಿಕ್ಷಾ ನಿಂತಿತು, ಪಕ್ಕದಲ್ಲೆ ಇನ್ನೊಂದು ರಿಕ್ಷ ಬಂದು ನಿಂತಿತು. ಆ ರಿಕ್ಷಾ ಡ್ರೈವರ್ ದೊಡ್ಡದಾಗಿ ಆಆ ಅಂತ ಆಕಳಿಸತ್ತಿರಬೇಕಾದ್ರೆ, ನನ್ನ ರಿಕ್ಷಾದವ ’ಅಣ್ಣ ಯಾಕಿವತ್ತು ರಸ್ತೆ ಇಷ್ಟು ಫ್ರೀ ಆಗಿದೆ" ಅಂತ ಅವನಿಗೆ ಪ್ರಶ್ನಿಸಿದಾಗ ಅವನು ಆಕಳಿಸುವುದನ್ನು ಅಲ್ಲೇ ಕಟ್ ಮಾಡಿ ’ಆಆಆಆ ನಾನೂ ಅದೇ ಅಂದುಕೊಳ್ಳತಾ ಇದೆ ಇಷ್ಟು ಹೊತ್ತು’ ಅಂದ.
ಪುನ: ನಮ್ಮ ಗಾಡಿ ಮುಂದೋಡಿತು
"ಮ್ಯಾಡಂ ಯಾಕಿವತ್ತು ಫ್ರೀ ಆಗಿರಬಹುದು ರೋಡ್, ಆ ದಿನ ಗಲಾಟೆ ಆಯ್ತಲ್ವರಾ?? ಏನೋ ಸಮಾರಂಭ ಇದೆ ಮನೆಯಲ್ಲಿ ಅಂತ ಆರು ಗಂಟೆಗೆ ಮನೆಗೆ ಹೊರಟು ಒಂಬತ್ತು ಗಂಟೆಗೆ ಮನೆ ತಲಪ್ದೆ." ಸತ್ಯನಾರಾಯಣನಿಗೆ ತುಪ್ಪದ ಮಂಗಳಾರತಿ, ನನಗೆ ಮಾತಿನ ಮಂಗಳಾರತಿ ಎಂದಾಗ ಮಾತ್ರ ನಗು ತಡೆದುಕೊಳ್ಳಲಾಗಲಿಲ್ಲ...
"ನನ್ನ ಮಕ್ಕಳು ಆ ದಿನ ಮನೆ ತಲುಪುವಾಗ ಲೇಟ್ ಆಗಿ ನನಗೂ ಸ್ವಲ್ಪ tension ಆಯ್ತು" ನಾನಂದೆ!!
"ಅಲ್ಲ ಮ್ಯಾಡಂ, ಆದ್ರೂ..."
"ಅಯ್ಯೋ ರೋಡ್ ಫ್ರೀ ಆಗಿದ್ದರೆ ಒಳ್ಳೆದಲ್ಲವಾ, ನಿಮಗೂ ನನಗೂ’ ಬನ್ನಿ ಆರಾಮಾಗಿ ಹೋಗುವ ಅಂದೆ...ರೇಡಿಯೋ ಜಾಕಿ ಏನೋ ಐದು ಕನ್ನಡ ಫಿಲ್ಮ್ ಸ್ಟಾರ್ ಗಳ ಹೆಂಡತಿ ಹೆಸರು ನೆನಪಿಸಿಕೊಂಡು ಹೇಳಲು ಕೇಳುಗರಿಗೆ, ರಾಗವಾಗಿ ಹೇಳ್ತಾ ಇದ್ದ.

ಅಷ್ಟರೊಳಗೆ ಇನ್ನೊಂದು ಸಿಗ್ನಲ್ ಬಂತು. ನಮ್ಮರಿಕ್ಷಾ ಪಕ್ಕದಲ್ಲಿ ಒಂದು ಹೊಸ ಸ್ಕೂಟರ್ ನಿಂತಿತು. ಬಣ್ಣ ಮೇಕ್ ಎಲ್ಲ ಚೆನ್ನಾಗಿತ್ತು. ಅದರ ಪಕ್ಕ ಒಂದು ಬಸ್ ಬಂದು ನಿಂತಿತು. ಅದರಿಂದ ಹಿಂದೆ ಕೂತವರು ಯಾರೋ ಉಗುಳಿದ್ದು ನಮ್ಮ ಹೊಸ ಬೈಕ್ ಮಹಾಶಯರ ಸಿಟ್ ನ ಹಿಂದಗಡೆ ತಪಕ್ ಅಂತ ಬಿತ್ತು. ನಾನು reflex ನಲ್ಲಿ ಛೀ ಅಂದೆ...ನಾನು ರಿಕ್ಷಾ ಡ್ರೈವರ್ ಸೀಟ್ ಹಿಂಬದಿ ನೋಡ್ತಿರಬೇಕಾದ್ರೆ..ಸ್ಕೂಟರ್ ನವನೂ ನಮ್ಮ ದೃಷ್ಟಿಯ ಜಾಡನ್ನು ಅರಸಿ ಅವನು ತಿರುಗಿ ನೋಡಿದ. ಆಮೇಲೆ ಸ್ಕೂಟರ್ ಅನ್ನು , ನಿಂತುಕೊಂಡಿದ್ದ ಇತರೆ ವಾಹನಗಳೆಡೆಯಲ್ಲಿ ನುಸುಳಿಸಿಕೊಂಡು ಸೀದಾ ಆ ಬಸ್ ಮುಂದೆ ನಿಲ್ಲಿಸಿ, ಯಾರ್ರಿ ಅದು ಉಗುಳಿದ್ದು, ಬಂದು ವರೆಸಿ ಅಂದ ಕೂಗು ಹಾಕಿದ. ಅಷ್ಟರಲ್ಲಿ ಸಿಗ್ನಲ್ ಹಸಿರಾಯಿತು...ಬಸ್ ನವ ಹಾರ್ನ್ ಹಾಕಿದ್ರೂ ಕೇಳಿಸಿಕೊಳ್ಳದೆ, ಸ್ಕೂಟರ್ ನವ ಅಲ್ಲೆ ನಿಂತಿದ್ದ. ಬಸ್ ಡ್ರೈವರ್..ಯಾರ್ರಿ ಅದು ಉಗುಳಿದ್ದು ಅಂದಾಗ ಯಾರಾದ್ರೂ ಸೊಲ್ಲೆತ್ತಿದ್ದರೆ ಹೇಳಿ. ಕಡೆಗೆ ಒಬ್ಬ ಪುಟ್ಟ ಹುಡುಗ ಒಬ್ಬರ ಕಡೆ ಬೆರಳು ಮಾಡಿ..’ಈ ಅಂಕಲ್ ತುಪ್ಪಿದ್ದು’ ಅಂದಾಗ ಉಗುಳಿದವನ ಮುಖ ನೋಡಬೇಕಿತ್ತು. ಸರಿ ಶುರು ಆಯ್ತು ಉಳಿದ ಪ್ರಯಾಣಿಕರ ಸಹಸ್ರನಾಮಾರ್ಚನೆ...ನನಗೆ ಉಗುಳುವವರು, ರಸ್ತೆ ಬದಿ ನಿಂತು ಮೂತ್ರ ಹೊಯ್ಯುವವರನ್ನು ಕಂಡರೆ ಭಯಂಕರ ಅಸಹ್ಯ....ಉಗುಳಿದವನಿಗೆ ಎರಡು ಕೊಟ್ಟರು ಆಗುತ್ತಿತ್ತು ಅನ್ನಿಸಿದ್ದು ಹೌದು....:-( ನಮ್ಮ ರಿಕ್ಷಾದವ ನಾನು fully enjoying ನಮ್ಮ ರಿಕ್ಷಾ ದೆಸೆಯಿಂದ ಉಳಿದ ವಾಹನಗಳ ಓಡಾಟಕ್ಕೆ ಸಂಚಕಾರ. ಎಲ್ಲರೂ ಹಾರ್ನ್ ಮಾಡಿದ್ದೆ ಮಾಡಿದ್ದು...
ಸರಿ ಕೊನೆಗೆ ಹ್ಯಾಪು ಮೊರೆ ಹಾಕಿಕೊಂಡು ಉಗುಳಿದ ಆಸಾಮಿ ನಿಧಾನಕ್ಕೆ ಕೆಳಗಿಳಿದು ಬಂದ. ತನ್ನ ಪ್ಯಾಂಟ್ ಪಾಕೆಟ್, ಶರ್ಟ್ ನ ಪಾಕೆಟ್ ಎಲ್ಲ ಜಾಲಾಡಿದ. ಕರ್ಚೀಫ್ ಇರಲಿಲ್ಲ. ಹೋಗಲಿ ಅಂದ್ರೆ ರಸ್ತೆ ಬದಿಯಲ್ಲೂ ಒಂದು ಚಿಂದಿ ಬಟ್ಟೆ ,ಪೇಪರ್ ಕೂಡ ಇರಲಿಲ್ಲ ಅವನ ದುರದೃಷ್ಟಕ್ಕೆ...
ಬಸ್ ಡ್ರೈವರ್..’ಸಾರ್, ರಸ್ತೆ ಪಕ್ಕಕ್ಕೆ ನಿಲ್ಲಿಸಿ ನಿಮ್ಮ ಪ್ರಾಬ್ಲಂ ಸಾಲ್ವ್ ಮಾಡಿ ಸಾರ್...ಅಂತಾನೇ ಇದ್ದ.
ನನಗೆ ನನ್ನ ಬ್ಯಾಗ್ ನಲ್ಲಿ ಯಾವತ್ತೂ ಇಟ್ಟುಕೊಂಡಿರುವ ಟಿಶ್ಯು ಪೇಪರ್ ನೆನಪಾಗಿ, ನನ್ನ ರಿಕ್ಷಾದವನ ಕೈಯಲ್ಲಿ ಕಳಿಸಿ ಕೊಟ್ಟೆ...ಆ ಮೇಲೆ ನಾವು ಮುಂದೆ ಹೋದ್ವಿ..

ನಾಟಕದ ಸ್ಥಳ ತಲುಪಿದಾಗ ಲೇಟ್ ಆಗಿತ್ತು, ಆಗಲೇ ನಿಹಾ ಳ ಮೂರು ಮಿಸ್ಸಡ್ ಕಾಲ್ ಗಳಿದ್ದವು. ಆದರೂ ರಂಗಕರ್ಮಿಗಳಿಗೆ ಸಮ್ಮಾನ-ಗೌರವ ಅಂತ ನಾಟಕ ಶುರು ಆಗಿದ್ದು 7.30 ಗೆ...ಅ ಸೆಕೆಗೆ, uncomfortable ಸೀಟ್ ನಲ್ಲಿ ಕೂತುಕೊಂಡು, ತಂದಿದ್ದ ಬಿಸ್ಕಿಟ್ ಎಲ್ಲ ಖಾಲಿ ಮಾಡಿ, compering ಮಾಡುತ್ತಿದ್ದ ಹುಡುಗನನ್ನು ಗೇಲಿ ಮಾಡಿ ನಕ್ಕು, ನನಗೆ cramps ಬಂದು ಸ್ವಲ್ಪ ಹಿಂಸೆಯಾಯಿತು. ಅಬ್ಬಾ ಕೆಲವರಿಗೆ ಭಾಷಣ ಮಾಡ್ತಾ ಅವರ ದನಿ ಕೇಳ್ತಾ ಇರೋದು ಎಷ್ಟು ಇಷ್ಟ ಆಗುತ್ತಲ್ಲವಾ?? ನಿಹಾ ನನಗೆ ಕೇಳಿದ್ದು..ಅಮ್ಮ ನೀನು ’verbal Diarrhea ಎನ್ನುವ ಪದ use  ಮಾಡುತ್ತಿಯಲ್ಲವಾ?? ಇದೇನಾ ಅಂತ..

ನಾಟಕ ಸುಮಾರಾಗಿ ಚೆನ್ನಾಗಿತ್ತು. ದೃಶ್ಯ ತಂಡದವರ ’ಸ್ವಪ್ನವಾಸವದತ್ತ’. ಮನೆ ತಲುಪುವಾಗ 9.30...ಉಜಿರೆಯಿಂದ ಮಂಗಳೂರಿಗೆ ಎರಡು ಸಲ ಹೋಗಿ ಬರಬಹುದಿತ್ತು ಅನ್ನಿಸ್ತು ಯಾಕೋ..LOL

ಈಗೀಗ ಶ್ರೀಕಾಂತ, ಮಕ್ಕಳಿಗೆ..’ಇವತ್ತು ಒಂದು ಗಮ್ಮತ್ತಾಯಿತು ಅಂದಾಗ ಏನದು ಏನದು ಅಂತ ಕೇಳ್ತಾರೆ....ಆಗ ನಾನು  ಅರ್ಧಂಬರ್ಧ ಹೇಳಿ ಮುಂದಿನದ್ದು  ಬ್ಲಾಗ್ ನಲ್ಲಿ ಓದಿ ಅಂತೇನೆ...ಹೆ ಹೆ ಹೆ  ಹೆಂಗೆ ನನ್ನ ಹೊಸ (sadistic) ಐಡಿಯಾ??
:-)

March 5, 2012

Keep your cool please!!

aha!! though it sounds like Robin Sharma's  leadership/management discourse, i assure you its not. This is  free -for-all gyan for who ever wants to use it.

i was supposed to take break or give you all a break, but somehow my travel plans got rescheduled. So you all have to suffer with me :-)

March heat is on!! i HATE heat!! so here are some ways to beat the heat. yeah the heat is making me write like this....

My favorite is the Cocum (also spelt as Kokum or Kokam) juice. One can get it from one of the'dime-a-dozen' Mangalore Stores in the city. Just pour one big table spoon of the syrup, add cold water, a pinch of salt and stir... quick and cool

option second. a tablespoon of cocum juice, add sprite and pinch of rocksalt.

or like this... at a stall on the Dona Paula beach...cocum extract, jal jeera powder, sugar syrup(tasted more like saccharine though) and plain soda...tasted good but we were thirsty again soon (thanks to saccharine)

The Watermelon: you can cut it into pieces, add salt, pepper powder, chat masala and eat it with a fork..

or else you can pass the watermelon pieces in a blender with sugar. add a pinch of pepper powder and rock salt..

Muskmelon juice: scoop the pulp, remove the seeds, put it in a blender along with sugar and u will have thick cool juice ready. Alternatively you can add milk and have a Muskmelon milk shake.

The great Cocum Kadi. For this you have to get Cocum agal..which is nothing but cocum concentrate with salt added to it. To a tablespoon of agal add finely chopped green chillies, coriander leaves (optional: two flakes of garlic) .add one glass of coconut milk. alternatively you can add this concentrate to buttermilk.


Coconut milk can be extracted either by passing the grated coconut and little water in a blender and then straining it.or else if u are hardpressed for time. add hot water, keep for two minutes, and strain. this kadi is  the best  bet when you have had a heavy lunch.

Recently i came across  coconut milk powder in a convenience store near my house. You just have to add water to it. A 100 gm packet costs rupees 40/-...and here i was thinking i can get three coconuts. (my middle class mentality at work here)

under the cocum tree..Niha, Nagbhushan, Prathamesh and Malavika.. terrace of K T Gatti mama's house along with my potted plants

Cocum revokes some wonderful memories. We were the tenants of K.T. Gatti, the famous writer (hah now you know his writings have rubbed off on me as well). We were on the top floor.There was this huge cocum tree with a huge trunk and a thick mass of glossy leaves. Though i have seen many Cocum trees, this one was really grand.My bedroom window was very near to the tree. On full moon nights watching the moonbeam play hide and seek on the leaves was truly enchanting transporting me to a fairy like world. i used sit gazing at this play of lights for hours together. We have had umpteen number of terrace parties here below the tree.

I have dried and stored the cocum fruits of this tree and they are still intact even after 11 years..i am amazed. I still have stock that will last me another year...

Cocum is said to prevent formation of Cholesterol in the body..

Last time Sathyajith , K.T. Gatti mama's son visited us he said that they had to cut the tree because  the 
roots had broken through one of the walls of the house and were threatening the foundation of the house too.

:-(. Srikanth has planted Cocum in our farm...hoping to recreate my magical world soon ..

different names for the Cocum...Punarpuli/murugana huli in Kannada, kokumba in marathi
just a small post for my ardent blog readers who say they check my blog once in two days for updates. 

Thank you guys for being so nice!! and keep your cool with the above mentioned easy methods..

 photo credit Niharika Shenoy (except, the one with cocum tree that was my handiwork...:-))
:-)