ನನಗೋಸ್ಕರ ಆಸ್ಪತ್ರೆಗೆ ಹೋಗೋದು ಕಡಿಮೆ. 40 ಆದ ನಂತರ ವರ್ಷಕ್ಕೆ ಒಂದು ಸಲ ಪೂರ್ತಿ ಚೆಕ್ ಅಪ್ ಮಾಡಿಸಿಕೊಳ್ಳೋ ಕೆ ಹೋಗ್ತೀನಿ. ಇಲ್ಲದಿದ್ದರೆ ಕುಟುಂಬದವರ ಆಪ್ತರ ಜತೆಗಾರಳಾಗಿ ಹೋಗೋದು ಹೆಚ್ಚು.
ಶ್ರೀಕಾಂತ್ ಗೆ ಒಂದು ರಾತ್ರಿ 1 ಗಂಟೆ ಹೊತ್ತಿಗೆ ಕಿಡ್ನೀ ಸ್ಟೋನ್ ಪ್ರಾಬ್ಲಮ್ ಆಗಿ ಆಸ್ಪತ್ರೆಗೆ ಎಡ್ಮಿಟ್ ಮಾಡಬೇಕಾಯ್ತು. ಡ್ರಿಪ್ಸ್ ಪೈನ್ ಕಿಲ್ಲರ್ ಎಲ್ಲ ಕೊಟ್ಟು ಶ್ರೀಕಾಂತ ನಿದ್ದೆಯ ಮಂಪರಿನಲ್ಲಿದ್ದರು. ನನಗೆ ರಾತ್ರಿ ಮೊದಲೇ ನಿದ್ದೆ ಬರಲ್ಲ. ಮತ್ತು ಅದು ಆಸ್ಪತ್ರೆ ಅದರ ಮೇಲೆ ಸೊಳ್ಳೆಗಳ ಕಾಟ, ನಿಶಬ್ದ ಆಸ್ಪ್ತ್ರೆಯಲ್ಲಿನ ತರಹವಾರಿ ಸದ್ದುಗಳು, ಯಾರದೋ ಕೆಮ್ಮು, ಮಾನಿಟರ್ ಗಳ ಬೀಪ್. ಇದ್ದಕ್ಕಿದಂತೆ ಒಬ್ಬ ಪೇಶೆಂಟ್ ನ ತಂದು ಶ್ರೀಕಾಂತ ಪಕ್ಕದ ಬೆಡ್ ನಲ್ಲಿ ಎಡ್ಮಿಟ್ ಮಾಡಿದರು. ಇಂಜೆಕ್ಷನ್, ಸಲೈನ್ ನಳಿಗಳನ್ನು ಅವನಿಗೆ ಲಗತ್ತಿಸಿದರು. ತುಂಬ ಜ್ವರದಿಂದ ಹುಡುಗ ನಡುಗ್ತಾ ಇದ್ದ. ಕೊನೆಗೂ ಗೌಜು ಗಡಿಬಡಿ ನಿಲ್ಲಬೇಕಾದ್ರೆ ಸಮಯ ಮೂರು ಗಂಟೆ. ಅವನ ಜತೆ ಇದ್ದ ಮಹಿಳೆ ಆಗಲೆ ನಿದ್ರಾ ಲೋಕಕ್ಕೆ ಜಾರಿ ಗೊರಕೆ ಹೊರಡಿಸುತ್ತಿದ್ದರು. ನಾನು ಓದಲು ಪುಸ್ತಕ ಒಯ್ದಿದ್ದೆನಾದರೂ (ಆಸ್ಪತ್ರೆಗೆ ಹೋಗುವಾಗ ನನ್ನ ಬಳಿ ದೊಡ್ಡ ನೀರಿನ ಬಾಟಲ್, ಒಂದು ಬುಕ್,ಸ್ಕ್ರಿಬ್ಲಿಂಗ್ ಪ್ಯಾಡ್, ಪೆನ್, ಸ್ಟೀಲ್ ಲೋಟ, ಸಣ್ಣ ಪ್ಲೇಟ್ , ಸ್ಪೂನ್, ಸ್ಯಾವ್ಲಾನ್ ಬಾಟಲ್, ಟಿಸ್ಯೂ ಪೇಪರ್ - ಇವಿಷ್ಟು ಇರುತ್ತವೆ.)ರಾತ್ರಿಯ ಮಂದ ದೀಪದಲ್ಲಿ ಓದಲು ಆಗುವುದಿಲ್ಲ. ಕಿಟಕಿಯಿಂದ ಹೊರ ನೋಡಿದರೆ ಸ್ಟೀಟ್ ಲೈಟ್ ನಲ್ಲಿ ಕಾಣುತ್ತಿದ್ದ ಯಾರದ್ದೋ ಮನೆಯ ಟಾರಸಿ ಅಲ್ಲಿನ ಕೆಲವು ಹೂ ಕುಂಡಗಳು. ಬೆನ್ನು ನೋಯಲು ಶುರು ಆಗಿದ್ದಕ್ಕೆ ಹಾಗೆ ಬೆಂಚ್ ಮೇಲೆ ಅಡ್ಡಾದೆ. ಪಕ್ಕದ ಬೆಡ್ ನ ಹುಡುಗ ನಿದ್ದೆಯಲ್ಲೇ ನರಳುತ್ತಿದ್ದ. ಸ್ವಲ್ಪ ಹೊತ್ತಿಗೆ 'ಅಮ್ಮ' ಅಂದ ಹಾಗೆ ಅನ್ನಿಸಿತು. ಕೆಲ ನಿಮಿಷ ಬಿಟ್ಟು ಪುನ: ಆ ಹುಡುಗ ಕರೆದದ್ದು ಕೇಳಿಸಿತು. ಹಾಗಾಗಿ ಪಕ್ಕದಲ್ಲಿ ಮಲಗಿರುವ ಹೆಂಗಸು ಅವನ ಅಮ್ಮ ಅಂತ ಗೊತ್ತಾಯಿತು. ಬಹುಶ: ಬೆಳಗಿನಿಂದ ದುಡಿದು ದಣಿದ ಜೀವ, ಈ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು. ನಾನೇ ಅವನ ಬಳಿ ಹೋಗಿ 'ಅಮ್ಮ ಗಾಢ ನಿದ್ದೆಯಲ್ಲಿದ್ದಾರೆ, ಏನು ಬೇಕಾಗಿತ್ತು? ತುಂಬಾ ಚಳಿ, ರಗ್ ಬೇಕಿತ್ತು ಅಂದ. ಒಂದು ರಗ್ ಆಗಲೇ ಅವನಿಗೆ ಹೊದಿಸಿ ಆಗಿತ್ತು. ಸರಿ ನರ್ಸ್ ಸ್ಟೇಷನ್ ಬಳಿ ಹೋದೆ. ನರ್ಸ್ ಗಳು ಮಲಗಿದ್ದರು. ಒಂದು ರೂಮ್ ಹೊಕ್ಕೆ 'ಸಿಸ್ಟರ್' ಅಂದೆ, ಆಕೆ ಧಡಕ್ಕನೆ ಎದ್ದು ಕುಳಿತು 'ಏನಾಯ್ತು' ಅಂತ ಅವಳ ಮಲಯಾಳಿ accent ನಲ್ಲಿ ಕೇಳಿದಳು. ಏನಿಲ್ಲ ನಮ್ಮ ರೂಮ್ ನಲ್ಲಿರೋ ಇನ್ನೊಂದು ಪೇಶೆಂಟ್ ಗೆ ರಗ್ ಬೇಕಾಗಿತ್ತು. ಎಲ್ಲಿದೆ ಅಂತ ಕೇಳಿದೆ. ಆಕೆ ಅಲ್ಲೆ ಕಪಾಟು ತೋರಿಸಿ, ಏಳಲಿಕ್ಕೆ ಹೊರಟಳು, ನಾನು ಬೇಡ ಅಂತ ಸನ್ನೆ ಮಾಡಿ, ರಗ್ ಒಯ್ದು ಆ ಹುಡುಗಂಗೆ ಹೊದೆಸಿದೆ. ಸುಮಾರು 5 ಗಂಟೆ ಹೊತ್ತಿಗೆ ಆ ಹುಡುಗ ಕೆಮ್ಮಲು ಶುರು ಮಾಡಿ ಎದ್ದು ಕುಳಿತ, ವಾಂತಿ ಮಾಡುತ್ತಾನೇನೋ ಅಂತ ಭಯ ಆಯ್ತು. ಅವನ ಅಮ್ಮ ಇನೂ ನಿದ್ರೆಯಲ್ಲೇ ಇದ್ದರು. ನನಗೇನೂ ತೋಚದೆ ಬೆಡ್ ಕೆಳಗಿರುವ ಬೆಡ್ ಪ್ಯಾನ್ ಕೊಟ್ಟೆ. ಅವನು ಅದರಲ್ಲಿ ವಾಂತಿ ಮಾಡಬೇಕಾದ್ರೆ, ನರ್ಸ್ ಸದ್ದು ಕೇಳಿಸಿ ಬಂದು ದೊಡ್ಡ ಲೈಟ್ ಹಾಕಿದಳು. ಅವಳು ಬೆಡ್ ಪ್ಯಾನ್ ಹಿಡಿದುಕೊಂಡಳು, ನಾನು ಹೊರಡ ಬೇಕಾದರೆ ನನ್ನ ಕಣ್ಣು ಅಪ್ರಯತ್ನವಾಗಿ ಬೆಡ್ ಪ್ಯಾನ್ ಕಡೆ ಹೋಯಿತು. ಅದರ ತುಂಬಾ ರಕ್ತ. ಹೆದರಿ ಬಿಟ್ಟೆ. ಇನ್ನೊಬ್ಬ ನರ್ಸ್ ಬಂದು ಅವನಿಗೆ ಇಂಜೆಕ್ಷನ್ ಚುಚ್ಚಿದರು. ಆಮೇಲೆ ಆ ಹುಡುಗ ಮಲಗಿದ. ನಾನು ಆ ನರ್ಸ್ ಬಳಿ ಹೋಗಿ ಕಳಕಳಿಯಿಂದ 'ಎಷ್ಟೊಂದು ರಕ್ತ ಇತ್ತಲ್ಲವಾ' ಅಂದೆ. ನರ್ಸ್ ಏನೋ ಹೇಳಲು ಹೊರಟವಳು 'ಇನ್ವೆಸ್ಟಿಗೇಶನ್ ನಡೀತಾ ಇದೆ' ಅಂತ ಅಂದಳು.
ಬೆಳಿಗ್ಗೆ ಅವನ ಅಮ್ಮ ನನಗೆ ಎಷ್ಟೊಂದು ಥ್ಯಾಂಕ್ಸ್ ಹೇಳಿದರೆಂದರೆ ನನಗೆ ತುಂಬಾ ಮುಜುಗರ ಆಯ್ತು. ಅವರು ಸರಕಾರಿ ನೌಕರಿಯಲ್ಲಿದ್ದಾರಂತೆ. ಮಗನಿಗೆ ಬಿಟ್ಟು ಬಿಟ್ಟು ಜ್ವರ ಬಂದು ಹಿಂದಿನ ದಿನ ಸಂಜೆ ಜ್ವರ ಏರಿ ಮೇಲುಗಣ್ಣಾದಾಗ ಮನೆಯ ಬಳಿಯ ಆಸ್ಪತ್ರೆ ಕರೆದುಕೊಂಡು ಹೋಗಿ ಆ ಅಸ್ಪತ್ರೆಯ ಡಾಕ್ಟರ್ ಸಲಹೆ ಮೇರೆಗೆ ಶ್ರೀಕಾಂತ ಎಡ್ಮಿಟ್ ಆಗಿರುವ ಆಸ್ಪತ್ರೆಗೆ ಕರೆದು ತಂದು ಎಡ್ಮಿಟ್ ಮಾಡಿದರು. ಕೆಲ ತಿಂಗಳ ಹಿಂದೆಯಷ್ಟೆ ಅವನು ಕೆಲಸಕ್ಕೆ ಸೇರಿದ್ದನಂತೆ. ಹೆಸರು ರಘು. ಅವನಿಗೆ ಪಾಪು ಪಾಪು ಅಂತ ಕರೆಯುವುದು ತುಂಬಾ ಖುಶಿ ಅನ್ನಿಸ್ತು. :-)
ಬೆಳಿಗ್ಗೆ 11 ಗಂಟೆ ಹೊತ್ತಿಗೆ ಯೂರೋಲೊಜಿಸ್ಟ್ ಬಂದು ನೋಡಿದ ನಂತರ ಶ್ರೀಕಾಂತ ಗೆ ಪುನ: ಸ್ಕ್ಯಾನ್ ಮಾಡಿಸಿ ಕೊಂಡು, ಸ್ಟೋನ್ ಬಿದ್ದು ಹೋಗಿದೆಯೆಂದು , ಡಿಸ್ಚಾರ್ಜ್ ನ formalities ಪೂರ್ಣ ಗೊಳಿಸಿ, ಈಗ ಮಾಲವಿಕಾ ಕೂಡ ಬಂದಿದ್ದರಿಂದ ಅವಳು ಉಳಿದ ಕೆಲಸಗಳನ್ನು ನಿಭಾಯಿಸಿದಳು. ನಾನು ಔಷಧಿ ಎಲ್ಲ ಬ್ಯಾಗ್ ನಲ್ಲಿ ತುಂಬಿದೆ, ಶ್ರೀಕಾಂತ್ ಸಿಸ್ಟರ್ ಹತ್ತಿರ ಮಾತಾಡಲು ಹೋಗಿದ್ದರು. ಅಷ್ಟರಲ್ಲೇ ಆ ಹುಡುಗನ ತಂದೆ ಬಂದು ಅವನ ಟೆಸ್ಟ್ ರಿಪೋರ್ಟ್ ನೋಡಿ 'ಅಯ್ಯೋ ಕಂದಾsss ಇದೇನಾಗಿ ಬಿಡ್ತೂ' ಅಂದಾಗ ನನ್ನ ಮೈ ಮೇಲೆ ಮುಳ್ಳು ಎದ್ದು ಬಂತು ಅಷ್ಟು ದಾರುಣವಾಗಿ ಬಂತು ಆ ದನಿ. ನಾನು ತಲೆ ಎತ್ತಿ ನೋಡಿದಾಗ ಅಪ್ಪ ಮಗ ಇಬ್ಬರ ಮುಖದ ಮೇಲೂ ಗಾಬರಿ. ನನ್ನ ಬ್ಯಾಗ್ ತುಂಬಿಸುವ ಕೆಲಸ ಮುಗಿದಿತ್ತು. ಅವರಿಗೆ ಪ್ರೈವಸಿ ಓದಗಿಸಲು ನಾನು ಹಿಂದುರಿಗಿ ನೋಡದೆ ಅಲ್ಲಿಂದ ಹೊರಬಿದ್ದೆ :-(
*********************************************************************************
ಪುಟ್ಟ ರಿಯಾ ಬಗ್ಗೆ ಹಿಂದಿನ ಹಲವಾರು ಪೋಸ್ಟ್ ಗಳಲ್ಲಿ ಬರೆದಿದ್ದೇನಿ. ಅವಳಿಗೆ ಕೀಮೋಥೆರಪಿ ಆದ ಕೆಲ ದಿನ ನಂತರ ರಕ್ತದಲ್ಲಿನ ಪ್ಲೇಟಲೆಟ್ ನ ಕೌಂಟ್ಸ್ ಗೋಸ್ಕರ್ ರಕ್ತ ತಪಾಸಣೆಗೆ ಹೋಗಿದ್ದೆವು. ಹೀಗೆ ಒಂದು ಸಲ ನಾನು ಹಣ ಪಾವತಿಸಿ ರಿಸೀದಿಗೋಸ್ಕರ ಕಾಯ್ತಾ ಇದೆ. ಆ ದಿನ ರಿಸಪ್ಷನ್ ಕೌಂಟರ್ ನಲ್ಲಿ ಸಿಕ್ಕಾಪಟ್ಟೆ ರಶ್. ಪ್ರಿಂಟರ್ ಜ್ಯಾಮ್ ಆಗಿ ರಸಿದಿ ಕೊಡಲು ತಡವಾಗುತ್ತಿತ್ತು. ಆಗಲೇ ಇಬ್ಬಿಬ್ಬರು ಪ್ರಿಂಟರ್ ಬಿಚ್ಚಿ ಅದನ್ನು ಸರಿಪಡಿಸುತ್ತ ಇದ್ದರು. ಒಬ್ಬ ನರ್ಸ್ ಗೂ ಯಾವುದೋ ರಿಪೋರ್ಟ್ ನ ಪ್ರಿಂಟ್ ಅಔಟ್ ಬೇಕಾಗಿದ್ದರಿಂದ ಆಕೇನೂ ಹುಬ್ಬುಗಂಟಕ್ಕಿ ಅಲ್ಲೇ ನಿಂತಿದ್ದಳು. ಅದೊಂದು ಚಿಕ್ಕ diagnostic centre. ಅಷ್ಟರಲ್ಲೇ ಒಬ್ಬ ಬಂದು 'ಮ್ಯಾಡಂ, ತಂದಿವ್ನಿ ಅಂತ ತರೆ ಕೆರೆದುಕೊಳ್ಳಹತ್ತಿದ. ಆಕೆ ಏನಪ್ಪ ಅದು ಅಂದ್ಲು. ಅದೇ ಮ್ಯಾಡಂ ಅಂತ ನಂದಿನಿ ಸ್ವೀಟ್ಸ್ ನ ಉರುಟು ಡಬ್ಬಿ ಕೌಂಟರ್ ಮೇಲಿಟ್ಟ. ನಾನು 'ಬಹುಶ: ಮಗು ಹುಟ್ಟಿದ ಖುಶಿಗೆ ಸ್ವೀಟ್ಸ್ ತಂದಿದ್ದಾನೆ ಅಂದುಕೊಂಡೆ. ನರ್ಸ್ ಪುನ: ಏನಪ್ಪ ಅದು ಅಂತ ಕೇಳಿದಾಗ, ಅದೇ ಮ್ಯಾಡಂ ಅವ್ರೆ, ಎರಡು ನಂಬ್ರ. ನರ್ಸ್ ತಲೆ ಚಚ್ಚಿಕೊಂಡು ಇದೇನ್ರಿ? ಟೆಸ್ಟ್ ಮಾಡಕ್ಕೆ ತರಲಿಕ್ಕೆ ಹೇಳಿದ್ದು, ಟೇಸ್ಟ್ ಮಾಡಕ್ಕಲ್ಲ ಅಂದಾಗ ನಾನಂತು ಬಿದ್ದು ಬಿದ್ದು ನಗಲಾರಂಭಿಸಿದೆ. ಅಸ್ಪತ್ರೆಯಲ್ಲಿ ಕಂಟೈನರ್ ಕೊಡುತ್ತಾರೆ ಮಲ ಪರೀಕ್ಷೆಗೆ. ಅವನಿಗೆ ಸರಿಯಾಗಿ ತಿಳಿಸಿಲಿಲ್ಲವೇನೋ ಅವನು ನಂದಿನಿ ಸ್ವೀಟ್ ಡಬ್ಬಿಯಲ್ಲಿ ಅವನ ಮಲ ನೀಟಾಗೆ ಹಾಕಿಕೊಂಡು ತಂದಿದ್ದ. ನರ್ಸ್ ಗೂ ನನಗೆ ಅಲ್ಲಿಗೆ ನಾನು ಹೋಗ್ತಾ ಬರ್ತಾ ಇದ್ದಿದ್ದರಿಂದ ಸ್ವಲ್ಪ ಸಲಿಗೆ ಇತ್ತು. ನಾನು 'ನೀವು ಸರಿಯಾಗಿ ಹೇಳಬೇಕಿತ್ತು' ಅಂದ್ರೆ ಮತ್ತೆ ಡೆಮೋ ಮಾಡೋಕ್ಕು ಹೇಳ್ತಿರಾ ಅಂತ ನನ್ನ ಜತೆ ಅವರು ಮುಸಿ ಮುಸಿ ನಗಲು ಶುರು ಮಾಡಿದರು. ಈಗ ನಂದಿನಿ ಬೂತ್ ಬಳಿ ಬಂದಾಗಲೆಲ್ಲ ಆ ಘಟನೆ ನೆನಪಾಗಿ ನಗು ಹಾದು ಹೋಗುತ್ತದೆ.

.jpg)