Tea and book any time!!
ಎಲ್ಲರ ತಿಂಡಿ/ಊಟದ ಜವಾಬ್ದಾರಿ ನಂದು. ಬೆಳಿಗ್ಗೆ ಎರಡು ಗಂಟೆಗೆಲ್ಲ ಎದ್ದು ನಾನು ಅಡಿಗೆ / ತಿಂಡಿ ಮಾಡುತ್ತಿದ್ದೆ. ಈಗಿನ ಹಾಗೆ ಮಿಕ್ಸಿ ಇರಲಿಲ್ಲ. ಎಲ್ಲದಕ್ಕೂ ರುಬ್ಬೋ ಕಲ್ಲೇ ಗತಿ. ಕೆಲ ಸಮಯದ ನಂತರ ಮಿಕ್ಸಿ ತೆಗೆದುಕೊಂಡೆ ಯಾದರೂ ಕರೆಂಟ್ ಇರುತ್ತಿರಲಿಲ್ಲ. ಇಲ್ಲಿ ಬೆಂಗಳೂರಿಗೂ ಬಂದಿದೆ ನನ್ನ ಸಾಥಿ ರುಬ್ಬುವ ಕಲ್ಲು. :-) ನಾನು ಹೆಚ್ಚಾಗಿ ಕೊಟ್ಟೆ ಕಡುಬು ಮಾಡುತ್ತಿದ್ದೆ. ಅದು ಬಿಟ್ಟರೆ ಬಾಳೆ ಎಲೆ ಕಡುಬು.( ಅಪರೂಪಕ್ಕೆ ಚಪಾತಿ, ಚಿತ್ರ್ರಾನ್ನ)...ಅದಕ್ಕೆ ಗಟ್ಟಿ ಚಟ್ನಿ., ಅದರ ಜತೆ ಬ್ರೆಡ್ ಜ್ಯಾಮ್, ಬಿಸ್ಕತ್- ಬೆಣ್ಣೆ..ಉಪ್ಪಿನಕಾಯಿ, ಸಾಕಷ್ಟು ಕುಡಿಯುವ ನೀರು...ಪ್ರಥಮ ಚಿಕಿತ್ಸಾಡಬ್ಬಿ ಟಾರ್ಚ್ ಗೆ ಸೆಲ್ಲ್ (ದೊಡ್ಡ hunting torch ಇತ್ತು. ಸಕಥ್ powerful..) , ಜಮಖಾನೆ, ಹಳೆಯ ವಾರ್ತಾಪತ್ರಿಕೆಗಳು..etc etc.ಮುಂತಾದವು ಎಲ್ಲ ನನ್ನ ಡಿಪಾರ್ಟ್ಮೆಂಟ್. ದೊಡ್ಡದೊಂದು ಆರ್ಮಿ ರಕ್ ಸ್ಯಾಕ್ ಒಂದಿತ್ತು. bachelor ಹುಡುಗರೆಲ್ಲ ಆರಾಮಾಗಿ ಕೈ ಬೀಸಿ ಬರುತ್ತಾ ಇದ್ದರು.:-)
ನನ್ನದಿನ್ನೂ ಡಿಗ್ರಿ ಪರೀಕ್ಷೆ ಮುಗಿದಿರಲಿಲ್ಲ. ಆದುದರಿಂದ ನನ್ನ ವಾರದ ದಿನಚರಿ ಹೀಗಿರುತ್ತಿತ್ತು. ಶ್ರೀಕಾಂತ್ ಬೆಳೆಗ್ಗೆ 10.00 ಗಂಟೆಗೆಲ್ಲ ಮನೆ ಬಿಟ್ಟರೆ ಬರುತ್ತಿದ್ದಿದ್ದೆ ರಾತ್ರಿ 9.00 ರ ನಂತರ, ಬ್ಯಾಂಕಿನ field officer ಹುದ್ದೆಯಲ್ಲಿದ್ದರಿಂದ ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ visit. ಆಗ ಬರುವುದು ರಾತ್ರಿ ಎರಡು ಗಂಟೆ ಆಗಿದ್ದೂ ಇದೆ.
ನಾನೋ ಮುಂಬೈನಿಂದ direct ತೀರ್ಥಹಳ್ಳಿಗೆ ಬಂದಿದ್ದು. ಸ್ವಲ್ಪ ಸಮಯ ಕೂಡು ಕುಟುಂಬದ ಜತೆ ಇದ್ದುದರಿಂದ ನನಗೆ ಅಷ್ಟೊಂದು ಕಷ್ಟ ಅನಿಸಿರಲಿಲ್ಲ. ಆದರೆ ಕೊಪ್ಪಕ್ಕೆ ಹೋದ ಮೇಲೆ ನಾವಿಬ್ಬರೆ. ಮನೆ ಪೇಟೆಯಿಂದ ಸುಮಾರು ದೂರ. ಬೆಳಿಗ್ಗೆ ಶ್ರೀಕಾಂತ ಹೋದ ನಂತರ ಮನೆಯ ಸಾಫ್ ಸಫಾಯಾ...ಕನ್ನಡ ಬರುತ್ತಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೂ ಹೋಗುತ್ತಿರಲಿಲ್ಲ. ಮಧ್ಯಾಹ್ನ ಅಡಿಗೆ ಮಾಡುತ್ತಿರಲಿಲ್ಲ. ರಾತ್ರಿನೆ ಅಡುಗೆ.ಕ್ಯಾಸೆಟ್ ಪ್ಲೇಯರ್ ನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಹಾಕಿಕೊಂಡು ನನ್ನ ಮನೆ ಕೆಲಸ ಎಲ್ಲ ಪೋರೈಸಿ, ನಾನು ಓದಲು ಕುಳಿತುಕೊಳ್ಳುತ್ತಿದೆ. ಆಗಾಗ ಕರೆಂಟ್ ಹೋಗುತ್ತಿತ್ತು. ಮಳೆಗಾಲದಲ್ಲಂತೂ ಒಂದು ಸಲ 15 ದಿನ ಕರೆಂಟ್ ಇರಲಿಲ್ಲ. ಆಗಲೇ ನಾನು ಬಾವಿಯಿಂದ ನೀರು ಸೇದಲು ಕಲಿತಿದ್ದು. ಮುಂಬೈ ನಲ್ಲಿ ರಾತ್ರಿ ಅನ್ನುವುದೇ ಇರುತ್ತಿರಲಿಲ್ಲ. ಎರಡು ಗಂಟೆ ತನಕ ವಾಹನಗಳು ಓಡಾಡುತ್ತಲೇ ಇರುತ್ತಿದವು , ಆಮೇಲೆ ಬಿಲ್ಡಿಂಗ್ ಕೆಳಗಡೆ ಇರುವ ಹೋಟಲ್ ನ ಸದ್ದು ಗದ್ದಲ್...ರಸ್ತೆಯ ಬೀದಿ ದೀಪ ಗಳಿಂದ ಮನೆಯೊಳಗೆ ರಾತ್ರಿಯೂ ಬೆಳಕು ಕಂಡು ಬೆಳೆದಿದ್ದ ನಾನು,ಕೊಪ್ಪದ ಕತ್ತಲೆಗೆ ಹೆದರಿದ್ದೆ. ಕರೆಂಟ್ ಹೋದರಂತೂ ಮುಗಿಯಿತು. ಮೊದಲು ಕೆಲವು ದಿನ ಬಾಗಿಲ ಬಳಿ ಕೂತು ಅತ್ತಿದ್ದೆ. ಕರೆಂಟ್ ಹೋದಾಗ ಕ್ಯಾಂಡಲ್ ಹಚ್ಚಿಟ್ಟು, ಟಾರ್ಚ್ ಬಗಲಲ್ಲಿಟ್ಟು ಒಂದು ಕೋಲು ಹಿಡಿದುಕೊಂಡು ರಾತ್ರಿಯ ಗವ್ ಎನ್ನುವ silence ಗೆ ಶ್ರೀಕಾಂತ ಬುಲೆಟ್ ಬೈಕ್ ನ ಡಗ್ ಡಗ್ ಸದ್ದಿಗೆ ನನ್ನ ಕಿವಿ tuned ಆಗಿರುತ್ತಿತ್ತು, ಅಷ್ಟರವರೆಗೆ ಕ್ರೀಮಿಕೀಟಗಳು ಹೊರಡಿಸುವ ಸದ್ದು, ನನ್ನ ಹೃದಯದ ಲಬ್ ಡಬ್ ಕೇಳುತ್ತ ಕೂರುತ್ತಿದ್ದೆ..ಅದರ ಮಧ್ಯೆ ಬಳಿಯಲ್ಲೆ ಇರುವ ಕಬ್ಬಿನ ತೋಟದಿಂದ ಊಳಿಡುವ ನರಿ ನನ್ನ ಅಳುವನ್ನು ಹೆಚ್ಚಿಸುತ್ತಿದ್ದುವು...ಕ್ರಮೇಣ ನನಗೆ ನಾನೆ ಸಮಾಧಾನ ಧೈರ್ಯ ಹೇಳಿಕೊಂಡೆ...ಹೆದರಿದರೆ ಏನೂ ಉಪಯೋಗವಿಲ್ಲ. ಏನಾಗುತ್ತೆ ಮಹಾ ಅಂತ...
ವಾರಾಂತ್ಯಕ್ಕೆ ಜೀವ ಹಾತೊರೆಯುತ್ತಿತ್ತು. ಕೊಪ್ಪದಲ್ಲ್ಲಿದ್ದ ಐದು ವರ್ಷ ಪ್ರತೀ ಶನಿವಾರ ಭಾನುವಾರ ನಾವು ಬೈಕ್ ನಲ್ಲಿ ಹೋಗುತ್ತಿದ್ದೆವು. ಹೀಗೆ ಒಂದುಸಲ ನ್ಯೂಸ್ ಪೇಪರ್ ನಲ್ಲಿ ಜಿ.ಎನ್. ಅಶೋಕವರ್ಧನ್ ಬರೆದ ’ಚಕ್ರವರ್ತಿಗಳು’ ಅನ್ನುವ ಪುಸ್ತಕದ ವಿಮರ್ಶೆ ಬಂದಿತ್ತು. ನಾನು ಫೈನಲ್ ಯಿಯರ್ ಪದವಿ ಪರೀಕ್ಷೆ ಕೊಟ್ಟು ಮುಂಬೈನಿಂದ ಬಂದಿದ್ದಷ್ಟೆ.. ಅರೇ ನಮ್ಮ ಹಾಗೆ ಬೈಕರ್ಸ್ ಈ ಪುಸ್ತಕ ನಾವು ಕೊಳ್ಳಲೇ ಬೇಕು. ಈ ಸಲ ಮಂಗಳೂರು-ಉಡುಪಿ ಪ್ರಯಾಣ ಎಂದು ಫಿಕ್ಸ್ ಆಯಿತು. ಸರಿ ನನ್ನ ಯಥಾ ಪ್ರಕಾರ ಟ್ರಾವೆಲ್ ಪ್ಲ್ಯಾನ್ಸ್ ಶುರು.
ಬೆಳಿಗ್ಗೆ 6.00 ಗಂಟೆಗೆ ಮನೆ ಬಿಟ್ಟೆವು. ಟ್ರಾಫಿಕ್ ಅನ್ನುವುದೇ ಇರುತ್ತಿರಲಿಲ್ಲವಾದ್ದರಿಂದ ಸ್ವಲ್ಪ ವೇಗವಾಗೆ ಹೊರಟು ಬೇಗ ಮಂಗಳೂರು ತಲುಪಿದೆವು. ಮಧ್ಯದಲ್ಲಿ ಸ್ವಲ್ಪ ಹೊತ್ತು ಆಗುಂಬೆಯಲ್ಲಿ ಬ್ರೇಕ್ ಕೂಡ ತೆಗೆದುಕೊಂಡೆವು. ಅತ್ರಿ ಬುಕ್ ಸೆಂಟರ್ (ABC)ಬಳಿ ಹೋದಾಗ ಅದು ಇನ್ನೂ ತೆರೆದಿರಲಿಲ್ಲ. ನಾವು ಅಲ್ಲೆ ಕಾಯುತ್ತ ನಿಂತುಕೊಂಡೆವು. ಪುಸ್ತಕದ ಅಂಗಡಿ ಓಪನ್ ಆದ ಕೂಡಲೆ ನಾವು ಅಷ್ಟೂ ಜನ ಒಳಗೆ. ನನಗೆ ಬೇಕಾದ ಪುಸ್ತಕಗಳನ್ನೆಲ್ಲ ನಾನು ಮುಂಬೈ ನ Strand ಬುಕ್ಸ್ ನಿಂದ ಹೊತ್ತು ತರುತ್ತಿದ್ದೆ. ಕನ್ನಡ ನನಗೆ ಬರುತ್ತಿರಲಿಲ್ಲವಾದ್ದರಿಂದ ನಾನು ಸುಮ್ಮನೆ ಕೈ ಗೆ ಸಿಕ್ಕ ಪುಸ್ತಕ ತಿರುವಿ ಹಾಕುತ್ತ ಇದ್ದೆ. ಹಸಿವೆ, ಪ್ರಯಾಣದ ಆಯಾಸ ಅಷ್ಟು ಮಾತ್ರವಲ್ಲ i was pregnant ಕೂಡ. ಅಷ್ಟರಲ್ಲಿ ಕೋಮಾರ್ ಎಂಬ ಮಿತ್ರರು...ಬಲು joker ಅವರು ನಾನು ಸುಮ್ಮನಿದ್ದುದನ್ನು ನೋಡಿ ಏನೊ ಜೋಕ್ ಮಾಡಿದರು. ನನಗೆ ನಗು ಬಂದು ನಾನು ಜೋರಾಗಿ ನಕ್ಕಿದ್ದೆ. ಆಗ ಪುಸ್ತಕದ ಅಂಗಡಿಯ ಮಾಲೀಕ ಸಿಡುಕಿ ಜೋರಾಗಿ serious ಇದ್ದರೆ ಮಾತ್ರ ಇಲ್ಲಿ ಬರಬೇಕು..ಅಂತ ಬೈದರು. ನಾನೋ ಕಕ್ಕಾಬಿಕ್ಕಿ. ನನ್ನ 19 ವರ್ಷದಲ್ಲಿ ಯಾರೂ ನನಗೆ ಗದರಿದವರೇ ಇಲ್ಲ. ಆಗಲೇ ಸರಿಯಾಗಿ ಅವರ ಮುಖ ನೋಡಿದ್ದು ನಾನು. ನಮ್ಮ ರಾಯರು ಎಲ್ಲೋ ಪುಸ್ತಕಗಳ ಮಧ್ಯ ಹುದುಗಿಹೋಗಿದ್ದರು. ಅವರು ಬೈದಿದಕ್ಕೆ ನನಗೆ ಸಿಟ್ಟು ಬಂದು ನಾನು ಹೊರಗೆ ಬಂದು ನಿಂತೆ. ಈ rude ಮೀಸೆ ಮಾಮನ ಹತ್ತಿರ ಯಾರು ಪುಸ್ತಕ ತೆಗೋತಾರೆ ಅಂತ ಅನ್ನಿಸಿತ್ತು. ಅಷ್ಟರಲ್ಲೇ ಶ್ರೀಕಾಂತ ಅವರು ಬರೆದಿದ್ದ ಪುಸ್ತಕ ಜತೆ ಇನ್ನೂ ಹಲವಾರು ಪುಸ್ತಕಗಳನ್ನು ಕೊಂಡು ಅವರ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತ, ನಮ್ಮನ್ನು ಇನ್ನೂ ಸ್ವಲ್ಪ ಹೊತ್ತು ಕಾಯಿಸಿದರು. ನಾನು ಹೊರಗಡೆ ನಿಂತು ಇನ್ನು ಈ ಅಂಗಡಿಗೆ ಕಾಲಿಡಲ್ಲ ಅಂತ promise ಮಾಡಿದೆ. ಆ ಮೇಲೆ ನಾವು ಉಡುಪಿ, ದೇವಸ್ಥಾನ,St. Marys ಸಮುದ್ರ ಅಂತೆಲ್ಲ ಹೋಗಿ ವಾಪಸ್ ಭಾನುವಾರ ಸಂಜೆ ಮನೆಗೆ ಬಂದ್ವಿ.
ಅಷ್ಟರಲ್ಲೇ ನಮಗೆ ಬೆಳ್ತಂಗಡಿಗೆ ವರ್ಗವಾಯಿತು. ಅಲ್ಲಿಂದ ನಾವು ಪ್ರತಿ ವಾರಾಂತ್ಯ ಮಂಗಳೂರಿಗೆ ಹೋಗಿ ಬರುವುದು ಶುರುವಾಯಿತು. ನಮ್ಮ ನೆಂಟರ ಮನೆಗೆ ಹೋಗುವಾಗಲೆಲ್ಲ ಅತ್ರಿ ಬುಕ್ ಸೆಂಟರ್ ಕಾಣಿಸುತ್ತಿತ್ತು. ಅದರಲ್ಲಿ ಪುಸ್ತಕದ ಅಟ್ಟಿ ಬೆಳೆಯುವುದು ಕಾಣಿಸುತ್ತಿತ್ತು. ನಾನು ಮಾತ್ರ ಪುನ: ಆ ಶಾಪ್ ಗೆ ಕಾಲಿಡಲಿಲ್ಲ. ಈಗ childish ಅನ್ನಿಸಿ ನಗು ಬರುತ್ತಿದೆ. ಅದು ಮುಚ್ಚುತ್ತಿದೆ ಅಂದಾಗ ಎಲ್ಲ ನೆನಪು ಬಂತು. ಅಶೋಕವರ್ಧನ್ ಅವರ ತಂದೆಯವರು GTN ಅವರು ಬರೆದ ಎರಡು ಪುಸ್ತಕ ನನ್ನ ಬಳಿ ಇವೆ. ಅದರಲ್ಲಿ NCC ದಿನಗಳು ನನಗೆ ತುಂಬ ಇಷ್ಟ. ನನ್ನ ಲೈಬ್ರರಿಯಲ್ಲಿವೆ. ಮತ್ತು ಅಷೋಕವರ್ಧನ್ ಅವರು ಬರೆದ ’ಚಕ್ರವರ್ತಿಗಳು’ ಕಪಾಟಿನಲ್ಲಿ ಎದುರಿಗೇ ಇದೆ. ಹಾಗಾಗಿ ಯಾವತ್ತು ಅವರನ್ನ ಅವರ ಮುಖವನ್ನು ಮರೆತಿಲ್ಲ. :-)
ಪ್ಲಾಸ್ಟಿಕ್ ಚೀಲ ಬಳಸದೇ ಪೇಪರ್ ನಲ್ಲಿ ಪುಸ್ತಕ ಕಟ್ಟಿ ಕೊಡುತ್ತಿದ್ದಾರೆ ಅಂತ ಕೇಳಿದಾಗ ಅವರ ಬಗ್ಗೆ ಒಂದುತರಹ ಹೆಮ್ಮೆ ಎನಿಸಿದ್ದು ನಿಜ....ಅವರ ಬಗ್ಗೆ ಅವರ ಪುಸ್ತ್ಕಕ ದ collection ಬಗ್ಗೆ ಜನರು ಒಳ್ಳೆಯ ಮಾತನಾಡಿದ್ದಾಗಲೆಲ್ಲ...ಹೂಂ ಬಹುಶ: ಆ ದಿನ ನನ್ನ ಟೈಮ್ ಸರಿಯಿರಲಿಲ್ಲ ಅಂದುಕೊಳ್ಳುತ್ತಿದ್ದೆ. ಹಾಗೂ ಆಗುತ್ತೆಯಲ್ಲವಾ ಕೆಲವೊಮ್ಮೆ? ಅಬ್ಬಾ ಎಷ್ಟೊಂದು ವರ್ಷಗಳೆ ಕಳೆದುಹೋದವು. ಈಗ ನನ್ನ 42 ವಯಸ್ಸಿನಲ್ಲಿ ಇದನ್ನೆಲ್ಲ ನೆನಪು ಮಾಡಿಕೊಳ್ತಾ ಶ್ರೀಕಾಂತ ಜತೆ ನಿಮ್ಮ ಜತೆ ಶೇರ್ ಮಾಡಿಕೊಳ್ಳ್ಳುತ್ತ ಇದ್ದೇನೆ.
ಇನ್ನೂ ದೇಶಕಾಲ ಪುಸ್ತಕದ ಬಗ್ಗೆ ನನಗೆ ತಿಳಿದದ್ದೆ ಅದರ ಐದನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದಾಗ. ಮಿತ್ರ ಅಪಾರ (ರಘು) ನನಗೆ ಆ ಪುಸ್ತಕ ಕೊಟ್ಟಿದ್ದು. ಎಷ್ಟು ಇಷ್ಟ ಆಯಿತೆಂದರೆ ಹಳೆಯ ಕೆಲವು ಪ್ರತಿಗಳು ಸಪ್ನಾ ಹಾಗು ಅಂಕಿತದಲ್ಲಿ ಸಿಕ್ಕಿದ್ದು ಎಲ್ಲ ತೆಗೆದುಕೊಂಡು ಬಂದಿದ್ದೆ. ಉಳಿದದ್ದು ನಾಗರಾಜ ರಾವ್ ಜವಳಿಯವರ ಬಳಿ borrow ಮಾಡಿ ಓದುವುದೆಂದು ಆಯಿತು. ಹೊಸ ಪುಸ್ತ್ಕಕ ತಂದಾಗಲೆಲ್ಲ ಮೊದಲು ನಾನು ಆ ಪುಸ್ತಕದ ಮುಖಪುಟ ನೇವರಿಸುತ್ತೇನೆ. ಆಮೇಲೆ ಹಿಂಬದಿ ಪುಟ ಓದುತ್ತೇನೆ. ಆ ಮೇಲೆ ಮೊದಲಿನಿಂದ ಕೊನೆಯ ತನಕ ಒಂದೂ ಅಕ್ಷ ರ ಬಿಡದೆ ಓದುತ್ತೇನೆ. ವಿವೇಕ ಶಾನುಭಾಗ್ ಅವರ ಆಪ್ತ ಮುನ್ನುಡಿ ಓದಿಯೇ ನನಗೆ ಅವರು ಆತ್ಮೀಯ ರಾಗಿಬಿಟ್ಟಿದ್ದಾರೆ.ಅವರ ಪ್ರತೀ ಪುಸ್ತಕ ವಿಶೇಷವಾಗಿವೆ...ಮುಖಪುಟದಿಂದ ಹಿಡಿದು, ವಿಷಯದ ವೈವಿಧ್ಯತೆ, ಒಳಗಿನ illustrations, ಪುಟಗಳ (pages) quality...etc ಈಗ ಅವರು ಕೆಲ ಸಮಯದ ಬ್ರೇಕ್ ಅಂದಾಗ ಸಿಕ್ಕಾಪಟ್ಟೆ ಬೇಜಾರಾಗಿದೆ.:-(
ದೇಶಕಾಲ 28 ನೆ ಸಂಚಿಕೆಯಲ್ಲಿ ನನಗೆ ಇಷ್ಟವಾದ ಕತೆಗಳು in the order of my liking i have numbered them 1 to 8
1.ಮೋಹನ ಸ್ವಾಮಿ – ಷಣ್ಮುಖ ಎಸ್
2.ಫೋಟೋ ದೊಳಗೆ ಸಿಕ್ಕಿಹಾಕಿಕೊಂಡ ಮುಖ – ಮೌನೇಶ ಬಡಿಗೇರ್
3.ಒಳಾಂಗಣ – ಜಯಂತ ಕಾಯ್ಕಿಣಿ
4.ಮತ್ತೆ ಹರಿದ ದೇವರು – ಎಚ್ ಎಸ್ ನಾಗವೇಣಿ
5.ಬೆಳಗೂ ಅದೆ, ಕತ್ತಲೆಯೂ ಅದೆ – ಅಮರೇಶ ನುಗಡೋಣಿ
6.ಸಂಪೂರ್ಣ ಪಾರಿಜಾತ – ಅಬ್ದುಲ್ ರಶೀದ್
7.ವಿಚಿತ್ರಕತೆ – ವಿವೇಕ ಶಾನಭಾಗ
8.ಮುಂದುವರೆಯುವುದು – ಎಮ್. ಎಸ್. ಶ್ರೀರಾಮ್.
ಈ ಕತೆಗಳು ಈ order ನಲ್ಲಿ ಯಾಕಿಷ್ಟ ವಾದವು ಎನ್ನುವ elaboration , ಮುಂದಿನ ಪೋಸ್ಟ್ ನಲ್ಲಿ.........
ಪ್ರತಿ ಸಲ ದೇಶಕಾಲದ ಬಗ್ಗೆ ಬ್ಲಾಗ್ ಅಥವ ಫೇಸ್ ಬುಕ್ ನಲ್ಲಿ ಹಾಕಿದ್ದಾಗಲೆಲ್ಲ ನನಗೆ ಕೆಲವು ಮೈಲ್ ಗಳು ,’ಏನು ನೀವು ದೇಶಕಾಲ advertisement ನ ಹೊಣೆ ಹೊತ್ತಿದ್ದೀರಾ’ ಅಂತ...ಇನ್ನೂ ಕೆಲವರು ಅವರು ಕೊಂಕಣಿಯವರು ಅಂತ ಅದಕ್ಕೆpartiality ಎಂದು ಅಪಾದಿಸಿದವರು ಇದ್ದಾರೆ.
ಅವರಿಗೆ ನನ್ನ ಉತ್ತರ : ಪುಸ್ತಕ ಚೆನ್ನಾಗಿದ್ದರೆ ಅದರ advertisement ಮಾಡಲು ನನಗೆ ಎಲ್ಲ ಹಕ್ಕು ಇದೆ, ಮತ್ತು ಕೊಂಕಣಿಯವರು ಅಂದಿದಕ್ಕೆ, ಯು.ಆರ್ ಅನಂತಮೂರ್ತಿ, ಎಸ್. ಎಲ್ ಭೈರಪ್ಪ, ಶ್ರೀನಿವಾಸ ವೈದ್ಯ, ವಸುಧೇಂದ್ರ, ವೈದೇಹಿ ಅವರ ಬರಹ ಕೂಡ ಇಷ್ಟ ಆಗುತ್ತೆ ಅಂತ ಹಾಕಿದ್ದೇನಲ್ಲವಾ? ಅಂತಲೂ ಕೇಳಿದ್ದೇನೆ. -’ಅದು ನಿಜಕ್ಕೂ ನನ್ನ ತಲೆಗೆ ಹೊಳಿಲೇ ಇಲ್ಲ..:-( ಹಾಗೆ ನೋಡಿದ್ರೆ ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲರು ಹಾಗೂ ಇತ್ತಿಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈ ಯವರೆಲ್ಲ ಕೊಂಕಣಿಯವರು ಅಂತ ನೀವು ಹೇಳಿದ್ದ ಮೇಲೆ realise ಆಯ್ತು..ನನಗೆ ಹೆಮ್ಮೆ ಅಂತ ಉತ್ತರ ಕಳಿಸಿದ್ದೆ..:-) ನನ್ನ fav ಬರಹಗಾರರು ಎಸ್. ಎಲ್ ಭೈರಪ್ಪ ಮತ್ತು ಯಶವಂತ ಚಿತ್ತಾಲರು. ಅವರು ಬರೆದ ಎಲ್ಲ ಪುಸ್ತಕಗಳು ನನ್ನಲ್ಲಿವೆ ಮತ್ತು ಅವನ್ನು ಓದಿದ್ದೇನೆ.
ಅಂದ ಹಾಗೆ ಗೋಪಾಲಕೃಷ್ಣ ಪೈ ಮಾಮ ಮುಂಬೈನಲ್ಲಿ ನಮ್ಮ ಬಿಲ್ಡಿಂಗ್ ನಲ್ಲೆ ಇದ್ದಿದ್ದು. ಅವರ ಬಗ್ಗೆ ನನಗೆಲ್ಲ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ. ಅವರಿಗೆ ನನ್ನ ತಮ್ಮ ಕೃಷ್ಣಾನಂದ, ಪಾಂಡುರಂಗ ಮತ್ತು ತಂಗಿ ಜ್ಯೋತಿ ಖಂಡಿತ ಗೊತ್ತು..:-))) ಶ್ರೀಕಾಂತ ರಾತ್ರಿ ಬೆಳಗೂ ಕೂತು ಅವರ ಸ್ವಪ್ನ ಸಾರಸ್ವತ’ ಓದಿದಾಗ ನನಗೆ ಹೊಟ್ಟೆಕಿಚ್ಚಾಗಿತ್ತು. ಅವರು ಯಾವ ಪುಸ್ತಕ ಹೀಗೆ at a stretch ಓದಿದ್ದು ನಾನು ನೋಡೆ ಇರಲಿಲ್ಲ. ನಾನಿನ್ನು ಪುಸ್ತಕ ಓದಿಲ್ಲ. ಅದರ ಗಾತ್ರ ನೋಡಿ ನನಗೆ ಗಾಬರಿ ಮತ್ತೀಗ ಅದು ತೀರ್ಥಹಳ್ಳಿ ಯಲ್ಲಿ ನೆಂಟರಿಷ್ಟರಲ್ಲಿ rounds ಹಾಕ್ತಾ ಇದೆ. :-)
dont know why i prefer books to human beings...i feel safe with them.ತುಂಬ ಚಿಕ್ಕ ಪ್ರಾಯಕ್ಕೆ ಓದುವ habits ಬೆಳೆಸಿಕೊಂಡಿದ್ದೆ. ನನ್ನ 6 ನೆ ವರ್ಷದಿಂದಲೆ....ನನ್ನ ಅಜ್ಜ ನನಗಾಗಿ ತುಂಬ ಪುಸ್ತಕ ಖರೀದಿಸುತ್ತಿದ್ದರು. ನನ್ನ ಸುತ್ತ ಮುತ್ತಲೂ ಯಾವಾಗಲೂ ಪುಸ್ತಕ comics ಗಳು ಸುತ್ತುವರೆದಿರುತ್ತಿದ್ದವು. ಗೊಂಬೆ ಎಲ್ಲ ಇಟ್ಟುಕೊಂಡು ಆಡಿದ್ದು ನೆನಪೆ ಇಲ್ಲ. ಮಾಲವಿಕ ಹುಟ್ಟಿದ ಮೇಲೆ ಅಮ್ಮನ ಪತ್ರ ಹೀಗೆ ಇರುತ್ತಿದ್ದವು ’ನೀವು ಇಬ್ಬರೂ ಹಾಗೆ ಓದುತ್ತ ಕೂತರೆ ಮಾಲವಿಕ ಭಾಷೆ ಕಲಿಯುವುದು ಹೇಗೆ ’ ಅಂತ...ನಿಜ ಹೇಳಬೇಕೆಂದರೆ ಮಾಲವಿಕ ಮಾತು ಕಲಿತಿದ್ದು ಶ್ರೀಕಾಂತರ ಹಲವಾರು ಮಿತ್ರರಿಂದಲೆ. ದಿನ ಸಂಜೆ ಅವರು ಬಂದು ಮಾಲವಿಕ ಳನ್ನು ಮಾತನಾಡ್ಸಿ ಅವಳ ಜತೆ ಆಡುತ್ತಿದ್ದರು. ನಾನು ಅವರಿಗೋಸ್ಕರ ಅಡಿಗೆ ಮಾಡ್ತಿದ್ದೆ. :-) ಮಾಲವಿಕ ನಿಹಾರಿಕ ಕೂಡ ಓದುವ ಹವ್ಯಾಸ ಬೆಳಸಿಕೊಂಡಿದ್ದಾರೆ. i do find Televisions a detriment to reading habits....ನಿಹಾ ಳ ಬರಹ ಕೂಡ ಚೆನ್ನಾಗಿದೆ. ಈಗ ಹಿಂದಿ ಕನ್ನಡದಲ್ಲಿ ಬರೆಯುವ ಪ್ರಯತ್ನ ನಡೆಸಿದ್ದಾಳೆ. ಕಾಲೇಜಿನ ಸಹಪಾಠಿಗಳ ಜತೆ ಸೇರಿ ಒಂದು magazine ನನ್ನು revive ಮಾಡುತ್ತಿದ್ದಾಳೆ. ಶ್ರೀಕಾಂತ ಮತ್ತು ಮಾಲವಿಕ ಕೂಡ ಚೆನ್ನಾಗಿ ಬರೆಯುತ್ತಾರೆ ಆದರೆ ಅವರಿಗೆ ಪುರುಸೊತ್ತು ಇಲ್ಲ....:-)
ನನ್ನ ಪುಸ್ತಕ ಓದುವ ಹವ್ಯಾಸ ತಿಳಿದಿರುವ ಆತ್ಮೀಯರೆಲ್ಲ e-ಬುಕ್, ಕಿಂಡಲ್ ಬಗ್ಗೆ ಎಲ್ಲ ಸಲಹೆ ಕೊಡುತ್ತಿರುತ್ತಾರೆ.ಎಲ್ಲ ಕ್ಲಾಸಿಕ್ಸ್ ನ ಪಿಡಿಎಫ್ ನನ್ನ ಸಿಸ್ಟಮ್ ನಲ್ಲಿದೆ . ಆದರೂ ಪುಸ್ತ್ಕಕ ಕೈಯಲ್ಲಿ ಹಿಡಿದು, feel ಮಾಡಿಕೊಂಡು , ಮಲಗಿ..ಒಂದು ಪ್ಲೇಟ್ ಕುರುಕುಲು ತಿಂಡಿ ಜತೆ ...ಓದುವುದೇ ಹೆಚ್ಚು ಇಷ್ಟ. ಅಥವ ನನ್ನ ಝೂಲಾದ ಮೇಲೆ ಕೂತು ಓದುವುದು, ಟೀ ಜತೆ ಓದುವುದು ಇವೆಲ್ಲ ತುಂಬಾ ಇಷ್ಟ....
ಶ್ರೀಕಾಂತ ಮೊದಲೆಲ್ಲ ಎಷ್ಟೊಂದು ಓದ್ತಿಯ..ಬರೀ ಬರೀ..ಅನ್ನುತ್ತಿದ್ದರು..ಈಗ ಅಲ್ಪ್ಸ ಸ್ವಲ್ಪ ಬರೆಯುತ್ತೇನಾದರು...ಬರಹದಲ್ಲಿ depth ಇಲ್ಲ ಅನ್ನುತ್ತಿರುತ್ತಾರೆ...its not necessary that everybody who read a lot should also be able to write well...my blog is full of my idle jottings ಅಷ್ಟೆ writing is not my forte......:-( ಇದು ಶ್ರೀಕಾಂತ ಒಬ್ಬರ ಅಭಿಪ್ರಾಯ ಅಲ್ಲ. ಹಲವಾರು ಓದುಗರು ಇದನ್ನು ನನಗೆ ಹೇಳಿದಾರೆ. ನನ್ನ ಬ್ಲಾಗ್ ನಲ್ಲಿ ನನ್ನ ಕನ್ನಡದ practice ಮಾಡುತ್ತೇನೆಯೆ ಹೊರತು ನನ್ನ ಬರಹಗಳ ಬಗ್ಗೆ ನನಗೆ ಹೇಳಿಕೊಳ್ಳುವ ಅಭಿಮಾನವೇನು ಇಲ್ಲ. :-) ಆಗಲೇ ಇದು ನನ್ನ 150 ನೇ ಪೋಸ್ಟ್...not bad at all, all things considered!!

ಇನ್ನು ನನಗೆ ನಿಮಗೂ ಬ್ರೇಕ್..ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬದ (ಅದು ಇದ್ದದ್ದು ನವೆಂಬರ್ 15 ರಂದು...ಯಾರಿಗೂ ಪುರುಸೊತ್ತಿರಲಿಲ್ಲ..ಈಗಲೂ ಸಡನ್ ಆಗಿ) ಸಮಾರಂಭಕ್ಕೆ ನಾವೆಲ್ಲ ರೆಡಿ ಯಾಗ್ತಿದ್ದೇವೆ .ಈ ವರ್ಷ ಕೂಡ ನಮಗೆ ನಬಾರ್ಡ್ ನಿಂದ best NGO ಪ್ರಶಸ್ತಿ ಸಿಕ್ಕಿದೆ.awards mean we have to work harder. ಕಾರ್ಯಕ್ರಮದ ನಂತರ ನನ್ನದು ಒಂದು ಚಿಕ್ಕ ಟೂರ್....yes as usual books are accompanying me.....ವ್ಯಾಸರಾಯ ಬಲ್ಲಾಳರ ಉತ್ತರಾಯಣ, The Crimson Throne by Sudhir Kakar ಮತ್ತು tales told by Mystics by Manoj Das....
ನಾನು ವಾಪಸ್ ಬರುವ ತನಕ... ತನಕ....ಬೈ ಬೈ....take care!!
ನಾನು ವಾಪಸ್ ಬರುವ ತನಕ... ತನಕ....ಬೈ ಬೈ....take care!!
:-)