August 31, 2010

ಗೋಕುಲಾಷ್ಟಮಿ

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು.
art: Niharika Shenoy T.V. using soft pastels. She is a balajanagraha volunteer and she created this picture along with a small write up on Krishnashtami to be put up on the school notice board.

ಕೃಷ್ಣಾಷ್ಟಮಿಯಂದು ಹುಟ್ಟಿದ ನನ್ನ ತಮ್ಮನ ಮೊದಲನೇ ವರ್ಷದ ಹುಟ್ಟು ಹಬ್ಬದ ಫೋಟೊ. ಅವನ ಹೆಸರು ಕೃಷ್ಣಾನಂದ

ನನ್ನ ಮುದ್ದು ರಿಯಾ. ಬೆಣ್ಣೆಕೃಷ್ಣ.
:-)

August 19, 2010

ಮೀ...... ರತ್ನ ಕಾಳೆ!!!!!

(Note: First time wrote a story, and also Tried to write it without using English words)

ಹೆರಳನ್ನು ಹಾಕ್ತಾ ಕನ್ನಡಿಯಲ್ಲಿ ನೋಡ್ತಾ ಇದ್ರೂ, ರತ್ನಳ ಮನಸ್ಸು ತನ್ನ ರೂಪವನ್ನು ನೋಡ್ತಾ ಇರಲಿಲ್ಲ, ಮತ್ತೇನನ್ನೋ ಧೇನಿಸ್ತಾ ಇತ್ತು. ನಾಡಿದ್ದಿಗೆ ಮದುವೆಯಾಗಿ ಐದನೇ ವರ್ಷಕ್ಕೆ ಕಾಲಿಡ್ತಾರೆ ರತ್ನಾ ಮತ್ತು ಮುಕುಂದ ಕಾಳೆ. ಈ ವರ್ಷನಾದ್ರು ಮಕ್ಕಳಾಗದಂತೆ, ಹಾಕಿಸಿ ಕೊಂಡಿರುವ ಕಾಪರ್-ಟಿ ತೆಗೆದುಹಾಕಬೇಕು. ತನಗೀಗ ೨೧ ವರ್ಷ ವಯಸ್ಸು. ಕೂಡಿಟ್ಟ ದುಡ್ದು ಕಾಸೂ ಇದೆ. ಈ ಬಗ್ಗೆ ಮುಕುಂದನಿಗೇನೂ ಗೊತ್ತಿಲ್ಲ. ಇಲ್ಲಿಯವರೆಗೆ ಅವನಾಯಿತು, ಅವನ ಫ್ಯಾಕ್ಟರಿ ಕೆಲಸ, ಭಾನುವಾರದ ಬೈಠಕ್, ಇವೆಷ್ಟೆ ಅವನ ಆಸಕ್ತಿಗಳು. ರತ್ನಳಿಗೇನು ಇದರಿಂದ ತೊಂದರೆ ಅಥವಾ ಬೇಸರ ಇಲ್ಲ.

ಅವಳ ತಿಳಿವಳಿಕೆ ಪ್ರಕಾರ ರಸಿಕತೆ, ಪ್ರೇಮ ಎಲ್ಲ ಸಿನಿಮಾ ಗಳಲ್ಲಿ ಮಾತ್ರ. ರತ್ನಾ ಹುಟ್ಟಿದ್ದು ರತ್ನಾಗಿರಿ ಬಳಿಯ ಹಳ್ಳಿ ಪರಿಸರದಲ್ಲಿ. ತಂದೆ ತಮ್ಮಂದಿರೆಲ್ಲ ಬೇಸಾಯ ಮಾಡಿ ಜೀವನ ನಡೆಸುವವರು. ಸಾಕಷ್ಟು ಅನುಕೂಲವಂತಿದ್ದರೂ ಜೀವನ ಶೈಲಿಯಲ್ಲಿ ಥಳುಕು ಬಳುಕಿಲ್ಲ. ರತ್ನಾಳ ಓದು ಏಳನೇ ಇಯತ್ತಿನ ತನಕ. ಮೈ ನೆರೆದ ಮೇಲೆ ಅದಕ್ಕೆ ತಿಲಾಂಜಲಿ. ಹಾಗಂತ ಮನೆಯಲ್ಲಿ ಸುಮ್ಮನೆ ಕೂಡುವಂತಿಲ್ಲ. ಹಳ್ಳಿ ಮನೆಯಲ್ಲಿ ಕೆಲಸ ಹೇರಳ. ಮುಗಿಯಿತು ಅಂತ ಹೇಳುವಂತೆ ಇಲ್ಲ. ಬಾವಿಯಿಂದ ನೀರು ತಂದು ಮನೆ ಅಡಿಗೆಗೆ, ನೀರುಮನೆಗೆ ಹಾಕುವುದು, ಅಂಗಳ ಗುಡಿಸಿ, ಗಿಡ-ಗಂಟಿಗಳನ್ನೆಲಾ ಚೊಕ್ಕವಾಗಿರುಸುವುದು, ಮರದಿಂದ ಹೂ ಬಿಡಿಸಿ ಮಾಲೆ ಹೆಣೆಯುವುದು. ಅಷ್ಟೆ ಅಲ್ಲ, ಅಮ್ಮ ತಿಂಗಳಿನ ಹೊಟ್ಟೆ ನೋವಿಂದ ನರಳುವಾಗ, ಭಾಕ್ರಿ ತಟ್ಟಿ, ಪಲ್ಯ ಮಾಡಿ, ಟೋಕ್ರಿಯಲ್ಲಿ ತೆಗೊಂಡು, ಅಪ್ಪ, ಅಣ್ಣಂದಿರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕು. ಬೆಳಿಗ್ಗೆ ಹೊತ್ತು ಮೂಡುವ ಮುಂಚೆ ಎದ್ದು, ದನದ ಕೊಟ್ಟಿಗೆ ಸ್ವಚ್ಚ ಮಾಡಿ, ಸೆಗಣಿಯನ್ನು ಗೋಬರ್ ಗ್ಯಾಸ್ ತೊಟ್ಟಿಗೆ ಹಾಕುವುದು, ಹಾಲು ಕರೆದು ಮೊದಲಿಗೆ ಎಲ್ಲರಿಗೂ ಒಂದೊಂದು ಕಪ್ಪ ಚಹಾ ಆದಮೇಲೆ ರತ್ನ ಮತ್ತು ಅವಳ ಆಯಿ, ಬಹಿರ್ದೆಶೆಗೆ ದೂರದ ಹಾಡಿಗೆ. ಅಲ್ಲಿಂದ ಬಂದು ಸ್ನಾನ, ಪೂಜೆ ಮುಗಿಸಿ ಆ ದಿನದ ಕೆಲಸಕ್ಕೆ ಶುರು.

ರತ್ನಳು ಮಾಡುವ ಮೊದಲ ಕೆಲಸ ಮೊಸರನ್ನು ಕಡೆದು ಮಜ್ಜಿಗೆ ಮಾಡುವುದು. ಬೆಣ್ಣೆ ತೆಗದಿಟ್ಟು, ಮಜ್ಜಿಗೆಗೆ ಇನ್ನಷ್ಟು ನೀರು ಸೇರಿಸಿ ಇಡುವುದು. ರತ್ನಳ ಅಪ್ಪ ಬೆಳಿಗ್ಗೆ ಭಾಕ್ರಿಯ ಜತೆಗೆ ಮಜ್ಜಿಗೆ ಆಗಬೇಕು. ಅಮ್ಮ ಭಾಕ್ರಿ ತಟ್ಟಲು ಕುಳಿತಳಂದ್ರೆ ಸುಮಾರು ಒಂದುವರೆ ತಾಸು ಅದೇ ಕೆಲಸ. ಬೆಳಿಗ್ಗೆ ಬಿಸಿ ಬಿಸಿ ಭಾಕ್ರಿ ತಿಂದ್ರೆ, ಮಧ್ಯಾನಕ್ಕೆ ಗದ್ದೆಯ ಬದಿ ಅವೇ ತಣ್ಣಗಾದ ಬಾಕ್ರಿ,ಏನಾದ್ರೊಂದು ಪಲ್ಯ, ಕತ್ತರಿಸಿದ ಹಸಿ ನೀರುಳ್ಳಿ ಮತ್ತು ಹಸಿಮೆಣಸಿನ ಕಾಯಿ, ನೀರು, ಮತ್ತಷ್ಟು ಮಜ್ಜಿಗೆ. ಅಪರೂಪಕ್ಕೆ ನೆಂಟರು-ಇಷ್ಟರು ಬಂದಾಗ ಅಲೂ-ಪೋಹಾ ಸಮಾರಾಧನೆ ಮತ್ತು ಪೂರಣ್ ಪೋಳಿ.

ಮಧ್ಯಾನ್ಹ ತಾಯಿ ಒಂದು ಗಳಿಗೆ ಮಲಗಿರ್ತಾರೆ. ಆಗ ರತ್ನ ಅಕ್ಕ ಪಕ್ಕದ ಮಕ್ಕಳನ್ನೊಡಗೂಡಿ ಕೆರೆಯ ಬಳಿ ಹೋಗಿ ಬಟ್ಟೆ ಒಗೆದು ಬರ್ತಾಳೆ. ಅಲ್ಲೆ ಒಣಗಿಸಿ ಬರುವಾಗ ಸಂಜೆಯಾಗಿರ್ತದೆ. ಸ್ವಲ್ಪ ಕಸೂತಿ, ಕೆಲವೊಮ್ಮೆ ಪಕ್ಕದ ಮನೆಯ ಮೇಷ್ಟ್ರ ಹೆಂಡತಿ ಬಳಿ ಎರವಳು ಪಡೆದ ಪುಸ್ತಕದ ಮೇಲೆ ಕಣ್ಣು ಹಾಯಿಸ್ತಾಳೆ. ಯಾರಿಗೂ ಗೊತ್ತಾಗದ ಹಾಗೆ ಇಂಗ್ಲೀಷು ಕಲಿತಿದ್ದಾಳೆ.

ಸಂಜೆ ಗಿಡಗಳಿಗೆ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚಿ ತಾಯಿ ಹಾಗೂ ಅವಳು ಕೂಡಿ ನಾಲ್ಕಾರು ದೇವರ ನಾಮ ಅಂದವಾಗಿ ಹಾಡುತ್ತಾರೆ. ತಂದೆ ಅಣ್ಣಂದಿರು ತೋಟದ ಕೆಲಸ ಮುಗಿಸಿ, ಊರ ಪಂಚಾಯಿತಿಕೆಯಲ್ಲಿ ಪಾಲ್ಗೊಂಡು, ಮಿಂದು ಮನೆಗೆ ಬಂದ ಮೇಲೆ ಪುನ: ರಾತ್ರಿ ಊಟದ ಸಮಯ. ಅಣ್ಣ, ಅಪ್ಪ ಆ ದಿನ ಆಗು ಹೋಗುಗಳ ಬಗ್ಗೆ ಮಾತಾಡುವಾಗ ರತ್ನ ಮೈಯೆಲ್ಲಾ ಕಣ್ಣಾಗಿ ಕೇಳ್ತಾಳೆ. ಯಾರಿಗೆ ಮದುವೆ, ಯಾರಿಗೋ ಅವಳಿ ಜವಳಿ ಹುಟ್ಟಿದ ಸುದ್ದಿ, ಇನ್ಯಾರದ್ದೊ ಮಗ ದುಬಾಯಿಗೆ ಹೊರಡುವ ಬಗ್ಗೆ, ಆ ವರ್ಷದ ಬೇಳೆ, ಬೇಳೆಗೆ ತಗುಲಿದ ರೋಗ, ಅದರ ನಿವಾರಣೆ, ಬೇಳೆಗೆ ಬರುವ ಮೊತ್ತಹೀಗೆ ಹತ್ತು ಹಲವಾರು ಸಂಗತಿಗಳನ್ನು ಕೇಳಿ ಕಲೆತು ಹಾಕುತ್ತಾಳೆ. ರಾತ್ರಿ ಮಲಗುವ ತನಕ ಅಣ್ಣ ರೇಡಿಯೋ ಚಾಲು ಮಾಡಿಡ್ತಾನೆ. ಅದರಲ್ಲಿ ಬರುವ ಹಿಂದಿ ಮರಾಠಿ ಸಿನಿಮಾ ಹಾಡು, ಮರಾಠಿ ಲಾವಣಿ ಹಾಡು ಕೇಳ್ತಾ ರತ್ನಾ ನಿದ್ದೆಗೆ ಜಾರ್ತಾಳೆ.

ರತ್ನಳಿಗೆ ಹದಿನಾರನೇ ವರ್ಷ ನಡೀತಿದ್ದಾಗ, ಆ ಊರಿನಲ್ಲಿ ನಡೆದ ಮದುವೆಗೆ ಬಂದ ಮುಕುಂದ ಚುರುಕು ಚಟುವಟಿಕೆಯ ಉದ್ದ ಜಡೆಯ ರತ್ನಳನ್ನು ಕಂಡು, ಪರಿಚಯದವರ ಸಹಾಯದಿಂದ ಅವಳನ್ನು ಲಗ್ನ ವಾಗಿದ್ದ.

ಲಗ್ನವಾಗಿ ರತ್ನಳ ವಾಸ ಮುಂಬಯಿನ ನಾಲ್ಕಂತಸ್ತಿನ ಕಟ್ಟಡ, ಇವರದ್ದು ಮೂರನೆ ಮಹಡಿ. ಪ್ರತೀ ಮಹಡಿಯಲ್ಲಿ ಆರು ಮನೆ. ಒಂದು ಹಾಲ್, ಅಡಿಗೆ ಮನೆಯಿರುವ ಪುಟ್ಟ ಮನೆ. ಅಡಿಗೆ ಮನೆಯ ಮೂಲೆಯಲ್ಲೇ ಬಚ್ಚಲು. ಒಬ್ಬರು ಕೂತು ಸ್ನಾನ ಮಾಡುವಷ್ಟೇ ದೊಡ್ಡದು. ಅದಕ್ಕೆ ಒಂದು ದಪ್ಪ ಬಟ್ಟೆಯ ದಟ್ಟಿ ಕಟ್ಟಿದ್ದಾರೆ. ಅಲ್ಲೇ ಪಾತ್ರೆ,ಬಟ್ಟೆ ತೊಳೆಯಬೇಕು.ಪಾಯಿಖಾನೆ ಮಾತ್ರ ಮನೆಯ ಹೊರಗೆ, ಪ್ರತಿಯೊಂದು ಮಹಡಿಗೆ ಮೂರು ಪಾಯಿಖಾನೆಗಳು. ಅಂದರೆ ಎರಡು ಮನೆಗೆ ಒಂದು ಪಾಯಿಖಾನೆಯಂತೆ ಬಳಸಬೇಕಿತ್ತು. ಅದನ್ನು ಬೀಗ ಹಾಗಿ ಇಡಲಾಗುತ್ತಿತ್ತು. ಹಳ್ಳಿಯ ವಿಶಾಲವಾದ ಪರಿಸರದಲ್ಲಿ ಬೆಳೆದ ರತ್ನಳಿಗೆ ಹೊಂದಿಕೊಳ್ಳಲು ನಾಲ್ಕು ದಿನ ಸ್ವಲ್ಪ ಮುಜುಗರಾನು ಕಷ್ಟವೂ ಆಯಿತು. ಇನ್ನು ಮುಂದೆ ತನ್ನ ಜೀವನ ಇಲ್ಲೇ ರೂಪಿಸಬೇಕು ಎಂದು ಮನಗಂಡು, ನಿಧಾನವಾಗಿ ತನ್ನ ಪರಿಸರಕ್ಕೆ ಹೊಂದಿಕೊಂಡಳು. ಹಾಗೇ ಆ ಕಟ್ಟಡದಲ್ಲಿರುವವರೆಲ್ಲ ಇವಳ ಸಹಯಕ್ಕೆ ಟೊಂಕ ಕಟ್ಟಿ ನಿಂತರು. ಒಬ್ಬಂಟಿಯಂತೇನು ಅವಳಿಗೆ ಅನ್ನಿಸಲಿಲ್ಲ. ಅವಳಿಗೆ ಅತ್ಯಂತ ಖುಶಿ ಕೊಡುವ ಸಂಗತಿಯೆಂದರೆ ಹತ್ತಿರದಲ್ಲಿರುವ ಸಮುದ್ರ. ಮುಕುಂದನಿಗೋ ಬೆಳಿಗ್ಗೆ ಊಟದ ಬುತ್ತಿ ಹಿಡಿದು ಏಳು ಗಂಟೆಯ ರೈಲಿನಲ್ಲಿ ಫ್ಯಾಕ್ಟರಿಗೆ ಹೋಗುವ ತವಕ. ಅಂತದರಲ್ಲಿ ರತ್ನಳೊಡನೆ ಸರಿಯಾಗಿ ನಾಲ್ಕು ಮಾತನಾಡಲು ಪುರುಸೊತ್ತಿಲ್ಲ. ರತ್ನಳಿಗೆ ಸಮಾಧಾನವೆಂದರೆ ಅವನಿಗೆ ಕುಡಿತ, ಸಿಗರೇಟಿನ ಚಟವಿಲ್ಲದ್ದು.

ಮುಂಬಯಿಗೆ ಬಂದ ಮೇಲೆ ರತ್ನಳಿಗೆ ಮೊದ ಮೊದಲು ಸಮಯ ಕಳೆಯುವುದು ದುರ್ಭರವೆನಿಸಿದ್ದು ಹೌದು. ಇಲ್ಲಿ ಬೆಳಿಗ್ಗೆ ಎದ್ದು ರೊಟ್ಟಿ ತಟ್ಟುವ ಪ್ರಮೇಯ ಇರಲಿಲ್ಲ. ಬೆಳಿಗ್ಗಿನ ಚಹಾ ಜತೆ ಒಂದೆರಡು ಗುಲ್ಕೋಸ್ ಬಿಸ್ಕತ್ತು ಅಥವಾ ಖಾರಿ ಬಿಸ್ಕತ್ತು ತಿಂದರೆ ಅದೇ ಬೆಳಗ್ಗಿನ ಉಪಹಾರ. ಮಧ್ಯಾನ್ಹಕ್ಕೆ ಮುಕುಂದನಿಗೆ ನಾಲ್ಕು ಚಪಾತಿ ಮತ್ತು ಆಲೂ ಅಥವಾ ಮೆಂಥೆ ಸೊಪ್ಪಿನ ಪಲ್ಯ. ಮೊಸರು ಅವನು ಫ್ಯಾಕ್ಟರಿ ಕ್ಯಾಂಟೀನ್ ನಲ್ಲೆ ತೆಗೆದುಕೊಳ್ಳುತ್ತಾನೆ. ಮುಕುಂದನಿಗೆ ಚಪಾತಿ ತಯಾರಿಸುವಾಗಲೇ ಅವಳ ಪಾಲಿನ ಎರಡು ಚಪಾತಿಯನ್ನೂ ಅವಳು ಕಾಯಿಸುತ್ತಾಳೆ. ಆ ಮೇಲೆ ಎಷ್ಟೇ ನಿಧಾನಿಸಿದ್ರೂ ಒಂದೆರಡು ಗಂಟೆಯಲ್ಲಿ ಮನೆ ಕಸ ಗುಡಿಸಿ-ಒರೆಸುವುದು, ಇಬ್ಬರ ಬಟ್ಟೆ, ಪಾತ್ರೆ ಪರಡಿ ಬಳಸುವ ಕೆಲಸ ಮುಗಿತು. ಆ ಮೇಲೆ ಅವಳು ಅಕ್ಕ ಪಕ್ಕದ ಮನೆಗೆ ಹೋಗುವಳು, ಅಥವಾ ಅವರೇ ಇಲ್ಲಿ ಬಂದ್ರೂ ಆಯ್ತು. ಅವರವರ ಮನೆಯ ಗೋಳು- ಗಮ್ಮತ್ತಿನ ಕಥೆ, ಅವರ ಮಕ್ಕಳ ಚೇಷ್ಟೆ ಕೇಳುತ್ತಾ ಕೂರುವುದು. ಕೆಲವೊಮ್ಮೆ ಅವರ ಮಾತಿನ ನಡುವೆ ಅವಳು ತನ್ನ ಹಳ್ಳಿ ಮನೆಯನ್ನು ನೆನೆಸ್ತಾ ಕನಸಿನ ಲೋಕಕ್ಕೆ ತೇಲಿದ್ದು ಉಂಟು. ಕೆಲವೊಮ್ಮೆ ಮದ್ಯಾನ್ಹ ಮಾತಿನ ನಡುವೆಯೆ ಗೋದಿ, ಮೆಕ್ಕೆ ಜೋಳ ಸಾಫ್ ಮಾದುವುದು, ತರಕಾರಿ ಚೊಕ್ಕ ಮಾಡಿಡುವುದು ಮುಂತಾದೆಲ್ಲಾ ನಡೀತಿರ್ತದೆ. ಕೆಲವು ಮಧ್ಯಾನ್ಹ ಸೀಮೆ ಎಣ್ನೆ ತರಲು ರೇಶನ್ ಅಂಗಡಿಯಲ್ಲಿ ಕ್ಯೂ ನಿಲ್ಲುವುದರಲ್ಲಿ ಕಳೆದು ಹೋಗುತ್ತದೆ. ಆಗಲೂ ನಾಲ್ಕೈದು ಹೆಂಗೆಳೆಯರು ಒಟ್ಟಿಗೆ ಹೋಗುತ್ತಿದ್ದರಿಂದ ಅದರಿಂದ ಸಮಯ ಚೆನ್ನಾಗಿ ಹೋಗುತ್ತಿತ್ತು. ಗೋದಿ ಹಿಟ್ಟಿನ ಗಿರಣಿ ಅವರ ಕಟ್ಟಡದಲ್ಲಿ ವಾಸಿಸುವ ಸಖಾರಾಮ್, ನೆಲಮಾಳಿಗೆಯಲ್ಲಿ ನಡೆಸ್ತಿದ್ದ. ಅದ್ದರಿಂದ ಹಿಟ್ಟನ ಗಿರಣಿಗೆ ಹೋಗುವ ತಾಪತ್ರಯವಿಲ್ಲ.

ರತ್ನಳ ಮನೆಯಿಂದ ಮೂರನೆ ಮನೆಯಲ್ಲಿ ನರ್ಸ್ ಮೇರಿಯ ವಾಸ. ಮಕ್ಕಳಾಗದಂತೆ ಕಾಪರ್-ಟಿ ಹಾಕಿಸಿಕೊಂಡಿದ್ದು ಅವಳ ಕೃಪೆಯಿಂದ. ರತ್ನಳಿಗೆ ಇನ್ನೂ ಚಿಕ್ಕ ವಯಸ್ಸು ಎಂದು ಅವಳ ಆಂಬೋಣ. ಕಾಪರ್-ಟಿ ಬಗ್ಗೆ ಮಾಹಿತಿ ನೀಡುವ ಹಲವಾರು ಪುಸ್ತಿಕೆಗಳನ್ನು ಅವಳು ರತ್ನಳಿಗೆ ನೀಡಿದ್ದಳು. ಸ್ವಲ್ಪ ಹೆದರಿಕೆಯಾದ್ರೂ, ಅವರ ಕಟ್ಟಡದಲ್ಲಿರುವ ಎರಡು ಮೂರು ಮಹಿಳೆಯರೂ ಕಾಪರ್-ಟಿ ಯನ್ನು ಉಪಯೋಗಿಸುತ್ತ ಇದ್ದರಿಂದ ಇವಳಿಗೂ ಧೈರ್ಯ ತುಂಬಿಸಿದರು. ಒಂದು ಮಧ್ಯಾನ್ಹ ಕಾಪರ್-ಟಿ ಹಾಕಿಸುವ ಶಸ್ತ್ರಕ್ರಿಯೆಗೆ ತನ್ನನ್ನು ಒಳಪಡಿಸಿದ್ದಳು. ಅವಳ ತಾಯಿಗೆ ಊರಲ್ಲಿ ಇದೇ ಚಿಂತೆ. ಊರಿಗೆ ಹೋದಾಗಲೆಲ್ಲ ಅವಳನ್ನು ತರಾಟೆಗೆ ತೆಗೊಳ್ಳುವಳು. ಅವರಿಗೆ ಈಗ ಬೇಡವಂತೆ ಅಮ್ಮ, ಅಂತ ಇವಳ ಉತ್ತರದಿಂದ ಅವಳಿಗೆ ಸಮಾಧಾನ. ಏನು ಜಮಾಯಿಯವರು ನಿರೋಧ ಉಪಯೋಗಿಸ್ತಾರಾ ಅಂತೆ ಕೇಳಿದ್ದಕ್ಕೆ ಇವಳು ಗೋಣು ಅಲ್ಲಾಡಿಸಿದ್ಲು. ಇಂತದೆಲ್ಲಾ ತಾಯಿ ಹತ್ತಿರ ಮಾತಾಡಲಿಕ್ಕೆ ಅವಳಿಗೆ ಮುಜುಗರ. ತುಂಬಾ ಸಮಯ ತೆಗೆದುಕೋ ಬೇಡ ಅಂತ ಬುದ್ಧಿ ಮಾತು ಹೇಳಿ ,ಅಲ್ಲಿಗೆ ಆ ವಿಷಯದ ಬಗ್ಗೆ ಪೂರ್ಣವಿರಾಮ.

ರತ್ನ ಕಾಪರ್-ಟಿ ಹಾಕಿಸಲಿಕ್ಕೆ ಇನ್ನೊಂದು ಕಾರಣಾನೂ ಇದೆ. ಅದು ಪ್ರತಿ ಭಾನುವಾರ ತನ್ನ ಗಂಡನು ಮನೆಯಲ್ಲಿ ನಡೆಸುವ ಇಸ್ಪೀಟು ಬೈಠಕ್ಕ. ದುಡ್ಡು ಪಣಕ್ಕಿಟ್ಟು ಆಡುತ್ತಿದ್ದರು.ವೈನಿ ವೈನಿ ಅಂದು ಬಾಯಿ ತುಂಬಾ ಮಾತಾಡುವ ಅವನ ಸ್ನೇಹಿತರು, ಅವರಿಗೆ ತಿಂಡಿ ತೀರ್ಥ ಸರಬರಾಜು ಮಾಡುವುದು. ತೀರ್ಥ ಅಂದ್ರೆ ಚಹಾ ಅಥವಾ ಶರ್‌ಬಥ್. ಬೆಳಿಗ್ಗೆ ಬಂದವರು ರಾತ್ರಿ ತನಕ ಇವರ ಮನೆಯಲ್ಲೇ ಠಿಕಾಣಿ. ಅವರಲ್ಲಿ ಮುಕ್ಕಾಲು ಪಾಲು ಮದುವೆಯಾಗದಿದ್ದವರು, ಮದುವೆಯಾದವರಿದ್ದರೆ ಅವರು ಹೆಂಡತಿಯರು ಬಾಣಾಂತನಕ್ಕೆ ಹೋಗಿರುತ್ತಿದ್ದರು. ಅಷ್ಟು ಮಾತ್ರವಲ್ಲದೆ ರತ್ನಳ ಕೈ ಅಡುಗೆ ತುಂಬಾ ರುಚಿ. ಆ ದಿನದ ಖರ್ಚು ಹೆಚ್ಚು. ಮುಕುಂದ ಪಗಾರ ಅಷ್ಟೇನು ಇರಲಿಲ್ಲ. ನಾಟಕದ ಸಂಭಾಷಣೆ, ಹಾಡು, ದೇಶದಲ್ಲಿ ವರ್ತಮಾನಗಳು, ಅವರ ತಮಾಷೆಯ ಮಾತುಗಳನ್ನು ಕೇಳುತ್ತಾ ಅವರಿಗಾಗಿ ಅಡಿಗೆ ಮಾಡುವುದು ರತ್ನಳಿಗೂ ತುಂಬಾ ಖುಶಿ. ವಾರ ಪೂರ್ತಿ ಅವಳ ಬಳಿ ತುಂಬಾ ಸಮಯ. ಭಾನುವಾರ ಬಂತು ಅನ್ನುವಷ್ಟರಲ್ಲಿ ಅದೂ ಹೋಗಿಯೂ ಆಗ್ತಿತ್ತು.


ಹೀಗೆ ಸುಮ್ಮನೆ ಕುರೋದಕ್ಕಿಂತ ಮನೆಯಲ್ಲೇ ಏನಾದ್ರು ಮಾಡಿ, ಕಾಸು ಸಂಪಾದನೆಯಲ್ಲಿ ರತ್ನ ತನ್ನ ಮನಸ್ಸನ್ನು ಹರಿಸಿದಳು. ಅವಳು ಅಡಿಗೆಯಂತೂ ತುಂಬಾ ವೈನಾಗಿ ಮಾದುತ್ತಿದ್ದಳು. ಯಾಕೆ ಬೇರೆಯವರಿಗೆ ಮಧ್ಯಾನ್ಹದ ಊಟ ಒದಗಿಸಬಾರದು? ಈ ವಿಚಾರವನ್ನು ಅಕ್ಕ ಪಕ್ಕದ ಮಹಿಳೆಯರೊಂದಿಗೆ ಸಮಾಲೋಚಿಸಿದಾಗ ಅವರೆಲ್ಲ ಅವಳನ್ನು ಈ ಕೆಲಸಕ್ಕೆ ಹುರಿದುಂಬಿಸಿದರು. ಸರಿ. ಅವಳು ಮೇರಿಯಮ್ಮನ ಹತ್ತಿರ ಮಾತಾನಾಡಿದಳು. ಅವಳ ಆಸ್ಪತ್ರೆಯಲ್ಲೇ ನಾಲ್ಕು ಜನರಿಗೆ ಈ ವಿಷಯ ಹೇಳಿ, ಅವರು ಅನುಮತಿಸಿದಾಗ, ಅವರಿಗೆ ಮಧ್ಯಾನ್ಹದ ಊಟ ಸರಬರಾಜು ಮಾಡಲಾಯಿತು. ಪಾತ್ರೆ ಪಗಡಿ ಅವರಿಂದಲೇ ತಂದಳು. ಮುಖ್ಯ ಅವಳಿಗೆ ಗಂಡನಿಗೆ ಈ ವಿಷಯ ಗೊತ್ತಾಗಬಾರದೆಂಬ ತವಕ. ಹಾಗೂ ತಂದೆ ತಾಯಿ ಎನಾದರೆನ್ನಬಹುದು ಎಂಬ ದೂರದ ಭೀತಿ. ಹೀಗೆ ನಾಲ್ಕು ಜನರಿಂದ ಶುರು ಮಾಡಿ ಈಗ ಅವಳು ಎಂಟು ಜನರಿಗೆ ಡಬ್ಬಿ ಕಳಿಸ್ತಾಳೆ. ಹಾಗೆ ಅವರ ಕಟ್ಟಡದಲ್ಲಿ ಹುಟ್ಟು ಹಬ್ಬದ ಸಮಾರಂಭಕ್ಕೆಲ್ಲಾ ಸಧಾರಣ 25 ಮಂದಿಗಾಗುವಷ್ಟು ಆಲೂ ಬೋಂಡ, ಅವಲಕ್ಕಿ, ಚೂಡ ಮುಂತಾದುವುಗಳನ್ನೆಲ್ಲ ಅಗ್ಗದ ಬೆಲೆಗೆ ಅವರ ಮನೆ ಗಳಿಗೆ ಹೋಗಿ ಮಾಡಿ ಕೊಡುತ್ತಾಳೆ. ಇದರಿಂದ ಅವಳಿಗೆ ಹೊತ್ತು ಹೋಗುವುದು ಮಾತ್ರವಲ್ಲ, ಸ್ವಲ್ಪ ಪುಡಿಗಾಸನ್ನು ಒಟ್ಟು ಮಾಡಿದ ಸಂತಸ. ಭಾನುವಾರದಂದು ಈ ಕೆಲಸಗಳಿಗೆ ಬಿಡುಗಡೆ. ಆ ದಿನ ಅವಳ ಸಮಯ ಮುಕುಂದ ಮತ್ತು ಅವನ ಸಂಗಡಿಗರಿಗೆ. ಪುರಿ - ಪಲ್ಯ, ಶೀರಾ-ಶ್ರೀಖಂಡ್, ಅಪರೂಪಕ್ಕೆ ಬಾಸುಮತಿ ಅಕ್ಕಿಯ ಪುಲಾವ್ ಮುಂತಾದುವುಗಳನ್ನು ಮಾಡಿ ಬಡಿಸುವುದರಲ್ಲೇ ಅವಳಿಗೆ ಸಂಭ್ರಮ. ಅವರ ಹೊಗಳಿಕೆ ಕೇಳುವುದು ಇನ್ನೊಂದು ಸಂಭ್ರಮ ಎಂದು ಬೇರೆ ಹೇಳಬೇಕೆ ?

ಮನೆಗೆ ಹಾಗೂ ಡಬ್ಬಿಯಲ್ಲಿ ಕಳಿಸುವ ಕಾಯಿ ಪಲ್ಲೆಗೆ ಅವಳು ದಿನಾ ಸಾಯಂಕಾಲ ವಾಕ್ ಹೋಗುವ ನೆಪದಲ್ಲಿ, ಸಮುದ್ರದ ಬಳಿಯಿರುವ ಕಾಯಿ ಪಲ್ಲೆ ಮಾರುಕಟ್ಟೆಯಿಂದ ತರುತ್ತಾಳೆ.


ಇಷ್ಟಾದ್ರು ಅವಳ ಬಳಿ ಇನ್ನೂ ಸಮಯ ಉಳಿತಿದೆ. ಅದಕ್ಕೆ ಮಧ್ಯಾನ್ಹದ ಹೊತ್ತು ಅವಳು ಅಕ್ಕ ಪಕ್ಕದ ಮಕ್ಕಳಿಗೆ ಬಟ್ಟೆಯ ಮೇಲೆ ಕಸೂತಿ ಹಾಕುವುದನ್ನು ಕಲಿಸುತ್ತಾಳೆ.

ಈ ಮಧ್ಯ ಮುಕುಂದ ಕೆಲಸ ಮಾಡುವ ಫ್ಯಾಕ್ಟರಿಯಲ್ಲಿ ಮುಷ್ಕರ ಶುರು ಆಗಿತ್ತು. ರತ್ನಾ ತಾನು ನಡೆಸಿರುವ ಕಸುಬಿನ ಬಗ್ಗೆ ಅವನಿಗೆ ನಿಧಾನವಾಗಿ ಹೇಳಿದ್ದಾಳೆ. ಕೆಲಸ ಸಿಗುವ ತನಕ ದುಡ್ದಿಗೆ ಏನೂ ತಾಪತ್ರಯ ಪಡಬೇಡಿ ಅಂದಿದ್ದಾಳೆ. ಬೇಕಾದರೆ ನಮ್ಮದೇ ಆದ ಸ್ವಂತ ಉದ್ದಿಮೆಯೇನಾದರು ಹಾಕುವಾ ಅಂದಿದ್ದಾಳೆ. ಭಾನುವಾರ ನಡೆಯುವ ಬೈಠಕ್ಕಿಗೆ ಮಿತ್ರರು ಬರುವುದನ್ನು ಕಡಿಮೆ ಮಾಡಿದ್ದಾರೆ. ಎಲ್ಲಾದರೂ ಮುಕುಂದ ದುಡ್ಡು ಕೇಳ ಬಹುದೆಂಬ ಹೆದರಿಕೆ ಎಲ್ಲರಲ್ಲೂ. ಈ ಸಮಯದಲ್ಲಿ ಮಿತ್ರರು ಯಾರು, ತನ್ನನ್ನು ಸವಿ ಮಾತಿನಿಂದ ಉಪಯೋಗಿಸುವವರು ಯಾರು ಎಂದು ಮುಕುಂದನಿಗೆ ತಿಳುವಳಿಕೆ ಯಾಗಿದೆ. ಜೀವನದಿಂದ ಕೆಲವೇ ದಿನಗಲಲ್ಲಿ ಅವನು ಪಾಠ ಕಲಿತಿದ್ದಾನೆ. ಆಗ ನೆರವಿಗೆ ಬಂದಿದ್ದು ರತ್ನಳ ಕೌಶಲ್ಯ.

ಅವರ ಕಟ್ಟದಲ್ಲಿರುವ ಎರಡನೆ ಮಹಡಿಯ ದಪ್ಪ ಗುಜರಾತಿ ಹೆಂಗಸು ಇಳಾಬೇನ್ ಗೆ ಒಂದು ಹೊಸ ಉಪಾಯ ಹೊಳೆದಿದೆ. ಅವರೆಲ್ಲಾ ಮದುವೆ ಸಮಾರಂಭಕ್ಕೆ ಕಸೂತಿ ಹಾಕಿದ ನೈಲಾನ್ ಹಾಗೂ ಶಿಫೋನ್ ಸೀರೆಗಳನ್ನ್ನು ಉಡುವುದು. ರತ್ನಾ ಬಿಡಿಸುವ ಕಸೂತಿ ತುಂಬಾ ಮುದ್ದಾಗಿರ್ತವೆ. ಇಳಾಬೇನ್ ನ ತವರು ಮನೆ ಸೂರತ್ ನಲ್ಲಿ. ಅಲ್ಲಿ ಬಟ್ಟೆಗಳು ತುಂಬಾ ಅಗ್ಗದಲ್ಲಿ ಸಿಗುತ್ತವೆ. ಅವಳೀಗ ಅಲ್ಲಿಂದ ಪ್ಲೈನ್ ಸೀರೆ ಹೋಲ್ ಸೇಲ್ ದರದಲ್ಲಿ ತಂದು, ರತ್ನಳಿಂದ ಕಸೂತಿ ಬಿಡಿಸಿ ಅದನ್ಮ್ನ ಹೆಚ್ಚಿನ ಬೆಲೆಗೆ ಮಾರುತ್ತಾಳೆ. ರತ್ನಳಿಗೂ ಕಸೂತಿ ಹಾಕಿದ್ದಕ್ಕೆ ಒಳ್ಳೆ ಬೆಲೆ ಕೊಡುತ್ತಾಳೆ.

ಕೆಲವು ದಿನ ರತ್ನಳಿಗೆ ಬಂದ ದುಡ್ಡನ್ನೆಲ್ಲಾ ಹೇಗೆ ಸಂಭಾಳಿಸುವ ಚಿಂತೆಯಾಗಿತ್ತು. ಪರಿಚಯದವರೊಬ್ಬರ ಸಹಾಯದಿಂದ ಸ್ವಲ್ಪ ದುಡ್ಡನ್ನು ಅವಳು ಪೋಸ್ಟ್ ಆಫೀಸಿನ ಅರ್.ಡಿ ಗೆ ಕಟ್ಟಿದ್ದಾಳೆ. ಇನ್ನು ಸ್ವಲ್ಪ ದುಡ್ಡನ್ಮ್ನ ಅವಳು ಹತ್ತಿರದಲ್ಲೇ ಇರುವ ಕೋ ಒಪರೇಟಿವ್ ಬ್ಯಾಂಕ್ ನಲ್ಲಿ ಇಟ್ಟಿದ್ದಾಳೆ. ಬಹುಶಃ ಅವಳ ಬಳಿ ಈಗ ಹತ್ತಿರ ಹತ್ತಿರ ಒಂದು ಲಕ್ಷ ದುಡ್ದು ಒಟ್ಟಾಗಿರಬಹುದು. ಸ್ವಲ್ಪ ಜಮೀನು, ದಾಗಿನೇ ಮುಂತಾದವುಗಳನ್ನು ತೆಗೆದುಕೊಳ್ಳುವ ಅಂದಾಜಿನಲ್ಲಿ, ಮುಂಬರುವ ಮಗುವಿನ ಆಗಮನದಲ್ಲಿ ಅವಳು ಖುಶಿಯಿಂದಿದ್ದಾಳೆ.

ಅವಳು ನಡೆಸಿತ್ತಿರುವ ಕುಸುಬುಗಳ ಬಗ್ಗೆ ಈಗ ಮುಕುಂದನಿಗೆ ಹೆಮ್ಮೆ ಇದೆ. ಮಿತ್ರರು ಈಗ ಅವನಿಗೆ ಬೇಗ ಒಂದು ಮಗುವಿನ ತಂದೆಯಾಗಲು ಹುರಿದುಂಬಿಸುತ್ತಿದ್ದಾರೆ. ಮಗು ಆಗದಿದ್ದರ ಬಗ್ಗೆ ಅವನಿಗೆ ತನ್ನಲ್ಲೆ ಏನಾದರೂ ದೋಷವಿರಬಹುದೆಂಬ ಗುಮಾನಿ. ಬಾಯಿ ಬಿಟ್ಟು ಯಾರಲ್ಲು ಹೇಳಿಲ್ಲ. ಇನ್ನೊಂದು ಆರು ತಿಂಗಳು ನೋಡಿ, ಇಬ್ಬರೂ ಡಾಕ್ಟರನ್ನು ಕಾಣಬೇಕೆಂದಿದ್ದಾನೆ. ಊರಿನಲ್ಲೂ ಅವನ ತಂದೆ ತಾಯಿ ಮಗುವಿನ ವಿಷಯವಾಗಿ ಪಿರಿ ಪಿರಿ ಶುರು ಮಾಡಿದ್ದಾರೆ. ಇನ್ನು ಮುಂದಾದರೂ ರತ್ನಳನ್ನು ವಾರಕ್ಕೊಂದು ಸರ್ತಿ ಹೊರಗಡೆ ಸುತ್ತಾಡಲು ಚೌಪಾಟಿ, ಜುಹು ಬೀಚ್ ಗೆ ಕರೆದು ಕೊಂಡು ಹೋಗಬೇಕು ಅಂದುಕೊಂಡಿದ್ದಾನೆ ಮನಸ್ಸಿನಲ್ಲೆ.

ಈಗ ಮದುವೆಯಾಗಿ ಐದನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವನ್ನೆಲ್ಲ ನೆನಸ್ತಾ ಅವಳ ಹೆರಳು ಸುತ್ತುವ ಕಾರ್ಯಕ್ರಮವೂ ಮುಗಿದಿದೆ. ಒಂದು ಸುಂದರವಾದ ಮಂದಹಾಸ ಅವಳ ಮುಖದಲ್ಲಿ ಹಾಯ್ದು ಹೋಗಿದೆ. ಇನ್ನು ಅವಳು ಇವತ್ತಿನ ಡಬ್ಬಿಯ ತಯಾರಿಕೆಯಲ್ಲಿ ತೊಡಗಬೇಕಾಗಿದೆ.


:-)

August 15, 2010

one year over

ನಾನು ಬ್ಲಾಗ್ ಶುರು ಮಾಡಿ ಆಗಲೇ ಒಂದು ವರ್ಷ ಆಗೇ ಬಿಡ್ತು ಗೊತ್ತೆ ಆಗಲಿಲ್ಲ :-) (August  5)not bad
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಸಬ್ಬಕ್ಕಿ/ಸೀಮೆ ಅಕ್ಕಿ/ಸಾಬುದಾಣಾ (ಮರಾಠಿಯಲ್ಲಿ) ಉಸ್ಲಿ/KichDi
ಇದನ್ನೊಮ್ಮೆ ಮಾಡಿ ನೋಡಿ. US ನಲ್ಲಿರುವ ಶ್ರೀಕಾಂತ್ Bedathur ಅವರು ಈ recipe ಕೇಳಿದ್ರು.. ಅದಕ್ಕೆ

1 ಗ್ಲಾಸ್ ಸಬ್ಬಕ್ಕಿ
2 ಹಸಿ ಮೆಣಸಿನಕಾಯಿ chopped
2 ಟೀ  ಸ್ಪೂನ್ ಎಣ್ಣೆ
ಒಗ್ಗರಣೆಗೆ- ಸಾಸಿವೆ, ಕರಿಬೇವು, ಜೀರಿಗೆ, ಹಿಂಗು ಪುಡಿ (asafoetida)
1 ಟೇಬಲ್ ಸ್ಪೂನ್ -ಹುರಿದು, ಸಿಪ್ಪೆ ತೆಗೆದು, ಕುಟ್ಟಿ ದ (coarsely pounded) ಶೇಂಗಾ
ಉಪ್ಪು/ಸಕ್ಕರೆ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹುಳಿ

ಸಬ್ಬಕ್ಕಿಯನ್ನು ಎರಡು ಗಂಟೆ ನೀರಲ್ಲಿ ನೆನೆಸಿಡಿ. ಆಮೇಲೆ ನೀರು ಬಸಿದು ಹೋಗುವಂತೆ  ಜಾಲರಿ ಪಾತ್ರೆಯಲ್ಲಿ (colander)ಹಾಕಿಡಿ.
ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಿಂಗಿನ ಪುಡಿಯ ಒಗ್ಗರಣೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನೀರು ಬಸಿದ ಸಬ್ಬಕ್ಕಿ, ಉಪ್ಪು, ಸಕ್ಕರೆ ಬೆರೆಸಿ ಐದು ನಿಮಿಷ ಹಾಗೇ ಮುಚ್ಚಿ ಇಡಿ. ಬಡಿಸುವ ಮುನ್ನ ಕೊತ್ತಂಬರಿ ಸೊಪ್ಪು ಮತ್ತು ಕುಟ್ಟಿದ ಶೇಂಗಾ ಹಾಕಿ. ಬೇಕಾದಲ್ಲಿ ನಿಂಬೆ ಹುಳಿ ಹಿಂಡಿ.
ಬಿಸಿ ಬಿಸಿ ಉಸ್ಲಿ , ಅದೂ ಮಳೆಗಾಲದಲ್ಲಿ, ಟೀ ಜತೆ.........
* ಮಹಾರಾಷ್ಟ್ರದಲ್ಲಿ ಸಬ್ಬಕ್ಕಿಯನ್ನು ಉಪವಾಸದಂದು ಬಳಸುತ್ತಾರೆ. its made from tapioca. tapioca ಗೆ ಕನ್ನಡದಲ್ಲಿ ಏನನ್ನುತ್ತಾರೆ?? ಗೊತ್ತಿದ್ದವರು ತಿಳಿಸಿ ಪ್ಲೀssssಸ್.
ಸಬ್ಬಕ್ಕಿ ಪಾಯಸ, ವಡೆ. ದೋಸೆ /ರೊಟ್ಟಿ ಕೂಡ ಮಾಡಬಹುದು

ಪುರುಸೊತ್ತು ಇದ್ರೆ ಇದನ್ನೂ ಓದಿ

http://malathisanchiyinda.blogspot.com/2009/08/blog-post_17.html
:-)
preparation and Photo : T.V. Malavika Shenoy

August 9, 2010

penny wise pound foolish

ಇವತ್ತು ಪರಿಚಯದೊಬ್ಬರು ಫೋನ್ ಮಾಡಿ ಅವರ ಪರ್ಸ್ ಕಳುವಾಗಿದ್ದನ್ನು ಹೇಳಿದರು.

ಬೆಂಗಳೂರಿಗೆ ಬಂದ ಹೊಸತರಲ್ಲಿ ನನ್ನ ಪರ್ಸ್ ಕೂಡ ಕಳುವಾಗಿತ್ತು. ಅದನ್ನೇ ಹೇಳ ಹೊರಟಿದ್ದೇನೆ.

ಶ್ರೀಕಾಂತ್ and friends ಬ್ಯಾಂಕ್ ಬಿಟ್ಟ ಮೇಲೆ ನಮ್ಮ ಮೊದಲ ಪ್ರಾಜೆಕ್ಟ್ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜತೆ, ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ ನಿರ್ವಹಿಸುವುದಾಗಿತ್ತು.ಅವರದ್ದೆ ಆಫಿಸ್ space ಕೊಟ್ಟಿದ್ದರಿಂದ, ನಾವು ಅದನ್ನು ಉಪಯೋಗಿಸುತ್ತ ಇದ್ವಿ. ತುಂಬಾ ಒಳ್ಳೆ response ಬಂದಿತ್ತು, ಈಗಲೂ ಬರುತ್ತಾ ಇದೆ ಆ cell ನಲ್ಲಿ. ಜಯನಗರದ shopping complex ನಲ್ಲಿ ನಮ್ಮ ಆಫೀಸ್, ಅದ್ದರಿಂದ ಅಲ್ಲೇ ಹತ್ತಿರವಿದ್ದ, ನಮ್ಮ ಸೀನಿಯರ್ ಕಲೀಗ್ ದೇಶಪಾಂಡೆಯವರ ಹೆಂಡತಿ ಕೆಲಸ ಮಾಡ್ತಾ ಇದ್ದ ಸಿಂಡೀಕೇಟ್ ಬ್ಯಾಂಕ್ ನಲ್ಲಿ ನಮ್ಮ ಆಫೀಸ್ ಹಾಗೂ personal ಖಾತೆಗಳನ್ನು ಇಟ್ಟುಕೊಂಡಿದ್ವಿ. ನಮ್ಮ ಇನ್ನೊಂದು ಆಫಿಸ್(cum) ಮನೆ ಇದ್ದದ್ದು ಮಹಾಲಕ್ಷ್ಮಿಪುರಂ ನಲ್ಲಿ. ಹೆಚ್ಚಿನಂಶ ದುಡ್ಡಿನ ವ್ಯವಹಾರ  ಚೆಕ್ ಮೂಲಕ ಮಾಡ್ತಾ ಇದ್ದದ್ದು. ಒಂದು ಸಲ ನಮಗೆ ಇನ್ನೊಂದು ಪ್ರಾಜೆಕ್ಟ್ ಗೆ ತುರ್ತು cash ನ ಅಗತ್ಯ ಕಂಡು ಬಂತು. ಹಾಗಾಗಿ ಜಯನಗರ ಆಫೀಸ್ ನಿಂದ 40000 ಸಾವಿರ ಕ್ಯಾಶ್, ದೇಶಪಾಂಡೆಯವರು, ನನ್ನ ಕೈಲಿ ಕೊಟ್ಟರು. ಅದನ್ನು brown envelope ನಲ್ಲಿ ಪ್ಯಾಕ್ ಮಾಡಿ, staple ಹಚ್ಚಿ ಕೊಟ್ಟರು. ನನ್ನ ಪರ್ಸ್ ನಲ್ಲಿ ಮೊದಲು ಅದನ್ನು ಇಟ್ಟುಕೊಂಡೆ. ನನ್ನ ವ್ಯಾನಿಟಿ ಬ್ಯಾಗ್ ದೊಡ್ಡದಿತ್ತು,ಮತ್ತದರಲ್ಲಿ ಎರಡು ದಪ್ಪನೆಯ ಇಂಗ್ಲೀಷ ಪುಸ್ತಕಗಳಿದ್ದವು. ಯಾಕೋ ಕ್ಯಾಶನ್ನು ಪರ್ಸ್ ನಲ್ಲಿಡುವುದು ಬೇಡ ಅನ್ನಿಸಿ, ಆ envelope ಅನ್ನು ಇಂಗ್ಲೀಶ್ ಪುಸ್ತಕದ ಮಧ್ಯ ಇಟ್ಟುಕೊಂಡೆ. ದೇಶಪಾಂಡೆಯವರು ನನಗೆ, ’ಮಾಲ್ತೀ, ಬಸ್ ನಲ್ಲಿ ಹೋಗೋದು ಬೇಡ, ರಿಕ್ಷಾದಲ್ಲೇ ಹೋಗಿ ಅಂತ ಸೂಚಿಸಿದ್ದರು. ಬಸ್ ಸ್ಟಾಪ್ ನಲ್ಲಿ majestic ಕಡೆ ಹೋಗುವ ಖಾಲಿ ಬಸ್ ಸಿಕ್ತು, ಆದ್ದರಿಂದ ಬಸ್ಸ್ ನಲ್ಲೆ ಹತ್ತಿದೆ. ಆದರೆ majestic ನಿಂದ ಮಹಾಲಕ್ಷ್ಮಿಪುರಂ ಗೆ ಹೋಗುವ ಬಸ್ ನಲ್ಲಿ ತುಂಬಾ ರಶ್. ನಾನು ಹತ್ತಿಕೊಂಡ ಸ್ವಲ್ಪ ಹೊತ್ತಿಗೆ, ಇನ್ನಷ್ಟು ಜನರಿಂದ ಬಸ್ ತುಂಬಿ ಕತ್ತು ಅಲುಗಾಡಿಸಲು ಜಾಗ ಕೂಡ ಇರಲಿಲ್ಲ. ಒಂದು ಹತ್ತು ನಿಮಿಷ ಬಸ್ ಚಲಿಸಿರಬಹುದು, ಆಗಲೇ ನನ್ನ ಬಳಿ ನಿಂತ ಒಂದು ಪುಟ್ಟ ಹುಡುಗಿ ಕಿಟಾರನೆ ಕಿರುಚಿಕೊಂಡಿತು. ನಾನಂತು ಎರಡಿಂಚು ಹಾರಿದೆ ಹೆದರಿ!  ಎಲ್ಲರ ಲಕ್ಷ್ಯ ಅತ್ತ ಹೋದಾಗ, ಯಾರೋ ನನ್ನ ವ್ಯಾನಿಟಿ ಬಾಗ್ ತಡಕಾಡಿದ ಹಾಗಾಯ್ತು. ನಾನಂತು ಕಂಬಿಗೆ ನೇತು ಬಿದ್ದಿದ್ದೆ, jampacked ಆಗಿದ್ದೆ. ತಟ್ಟನೆ ಕ್ಯಾಶ್ ಇರುವ ನೆನಪು ಬಂದು ತುಂಬ ಹೆದರಿಕೆಯಾಯ್ತು. ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪುಸ್ತಕ ಇರುವ ಭಾಗ ನನ್ನ ಪಕ್ಕೆಗೆ ತಾಗುವಂತೆ ಇಟ್ಟ ನೆನಪು. ಸುಜಾತಾ ಥಿಯೇಟರ್ ಸ್ಟಾಪ್ ಬಂದಾಗ ಬಸ್ ಸುಮಾರಿಗೆ ಖಾಲಿಯಾಯ್ತು. ಪರ್ಸ್ ಕಡೆ ನೋಡಿದಾಗ ಒಂದು ಬದಿಯ ಜಿಪ್ ಪೂರ್ತಿ ಓಪನ್ ಆಗಿತ್ತು. ಒಳಗಡೆ ಕೈ ಹಾಕಿ ನೋಡಿದ್ರೆ ಪರ್ಸ್ ಇರಲಿಲ್ಲ. ಕೂಡಲೆ ಈ ಬದಿಯ ಜಿಪ್ ಎಳೆದು ನೋಡಿದೆ, ಕ್ಯಾಶ್ ಇದ್ದ envelope ಸೇಫ್ ಆಗಿತ್ತು. ಕಳವಾಗಿದ ಪರ್ಸ್ ನಲ್ಲಿ ಸ್ವಲ್ಪ ಚಿಲ್ಲರೆ ಹಣ, ಕೆಲವು ಸೇಫ್ಟಿ ಪಿನ್ ಮತ್ತು ಸ್ನೇಹಿತರ ಫೋನ್ ನಂ ಇದ್ದ ಚಿಕ್ಕ ಪುಸ್ತಕ ಮಾತ್ರ ಇತ್ತು. ಬಸ್ ಪಾಸ್ ವ್ಯಾನಿಟಿ ಪರ್ಸ್ ನ ಎದುರುಗಡೆಯ ಚಿಕ್ಕ ಪಾಕೆಟ್ನಲ್ಲಿ ಇದ್ದುದರಿಂದ ಬಚಾವಾದೆ.

2001 ಇಸವಿಯಲ್ಲಿ 40000 ಅಂದರೆ ಏನೂ ಕಡಿಮೆ ಮೊತ್ತ ಆಗಿರಲಿಲ್ಲ.

ಮನೆಗೆ ಬಂದ ಮೇಲೆ ಎಲ್ಲರಿಂದ ಬೈ ಸಿ ಕೊಂಡೆ. ರಾತ್ರಿ ತಮ್ಮ ಫೋನ್ ಮಾಡಿದಾಗ ನನ್ನ ಸಾಹಸ ಹೇಳಿದೆ. ಅವನೂ ಸರಿ ಉಗಿದು, at least now get out of your middle class mentality ಅಂತ ಸೇರಿಸಿದ.

ನನ್ನ ತಂದೆ  ಬ್ಯಾಂಕ್ ನ ಉನ್ನತ ಹುದ್ದೆಯಲ್ಲಿದ್ದರು, ಅವರಿಗೆ ಬೇಗ ಬೇಗ promotions ಎಲ್ಲ ಸಿಕ್ಕಿತ್ತು. ಆದರೆ ತಂದೆಯವರಿಗೆ shares ನಲ್ಲಿ invest ಮಾಡುವ ಗೀಳು ಇತ್ತು. Indian Express ನ ಶೇರ್ಸ್ ನಲ್ಲಿ ತುಂಬ invest ಮಾಡಿದ್ದರು, ಆಗ Indian Express Building ಗೆ ಬೆಂಕಿಹತ್ತಿ, share value ಕುಸಿದು ಅಪ್ಪ ತುಂಬ ಆರ್ಥಿಕ ಪೆಟ್ಟು ಅನುಭವಿಸದ್ದರು (1970). ಆಮೇಲೆ ಹೃದಯದ operation ಆಗಿ, ಅದರ ಔಷಧ ಕೂಡ ದುಬಾರಿಯಾಗಿದ್ದು, ಖರ್ಚು ಜಾಸ್ತಿ ಇತ್ತು. ನಾವು ಮನೆಯಲ್ಲಿ ಒಟ್ಟು 6 ಜನ, ಅಷ್ಟಲ್ಲದೆ, ಯಾವಾಗಲೂ ಊರಿನಿಂದ sight seeing, ಕೆಲಸ ಹುಡುಕಿಕೊಳ್ಳಲು, ಡಾಕ್ಟರಿಗೆ ತೋರಿಸಿಕೊಳ್ಳಲು ಅಂತ ಮನೆಯಲ್ಲಿ ಯಾವಾಗಲೂ ನೆಂಟರು. ತಂದೆ ಅಮ್ಮನಿಗೆ ತಿಂಗಳಿಗೆ ಇಂತಿಷ್ಟು ಅಂತ ಮನೆ ಖರ್ಚಿಗೆ ದುಡ್ಡು ಕೊಡುತ್ತಿದ್ದರು. ತಿಂಗಳ ಕೊನೆಯಲ್ಲಿ ಅಮ್ಮ ತುಂಬ ಹೆಣಗಾಡುತಿದ್ದರು.
ನನ್ನ ಚಿಕ್ಕಪ್ಪನವರ ಮಗಳ ಮದುವೆ ಮುಂಬೈನಲ್ಲೇ ಮಾಡಿದ್ದರು. ಆಗ ಅವರು ಧಾರವಾಡದಲ್ಲಿ ಇದ್ದರು. ಮದುವೆಗೆ 15 ದಿನ ಮುಂಚೆ ಅವರೆಲ್ಲ ನಮ್ಮ ಮನೆಗೆ, ಆಗ ನನ್ನ ಅಮ್ಮ ಅವರ ತವರುಮನೆಯಿಂದ ಬಳುವಳಿಯಾಗಿ ಬಂದಿದ್ದ, ತವರುಮನೆಯ ಏಕೈಕ ನೆನಪಿನ ಕಾಣಿಕೆ, ಕೆಂಪುಕಲ್ಲಿನ necklace ಒಂದನ್ನು ಮಾರಿದ್ದಾಗ ನಾನು ರಾತ್ರಿ ಇಡಿ ದಿಂಬಿನಲ್ಲಿ ಸದ್ದಾಗದೇ ಅತ್ತಿದ್ದು ಇನ್ನೂ ನೆನಪಿದೆ.

ಮುಂಬೈ ನಲ್ಲಿ cost of living ವಿಪರೀತ. ಖರ್ಚನ್ನು ಸರಿದೂಗಿಸಲು ನಾನು ಅಮ್ಮ ಅಂಧೇರಿಯಿಂದ ಮಸ್ಜಿದ್ ಬಂದರಿಗೆ ಹೋಗಿ ಹೋಲ್ ಸೇಲ್ ದರದಲ್ಲಿ ಸಿಗುತ್ತಿದ್ದ ಅಕ್ಕಿ, ಬೇಳೆ ಕಾಳು, ಮೆಣಸು ಇತ್ಯಾದಿ ಹೊತ್ತು ತರುತ್ತಿದ್ದೆವು. ಅಕ್ಕಿ ಹಾಗೂ ತೊಗರಿ ಬೇಳೆ ಸ್ವಲ್ಪ ಜಾಸ್ತಿ, ಅಂದರೆ 25 ಕೆಜಿ order ಮಾಡ್ತಿದ್ವಿ. ನಾವು ಅಡಿಗೆಯಲ್ಲಿ ತೊಗರಿ ಬೇಳೆ ಉಪಯೋಗಿಸುವುದು ಸ್ವಲ್ಪ ಹೆಚ್ಚು. ಅದನ್ನು ಅಂಗಡಿಯ ಮಾರ್ವಾಡಿ ನಮ್ಮ ಮನೆಗೆ ತಲುಪಿಸುತ್ತಿದ್ದ. ಉಳಿದ ಎಲ್ಲ ಸಾಮಾನು ನಾನು ಅಮ್ಮ ಹೊತ್ತು ಕೊಂಡು ತರ್ತಿದ್ದುದು. ಆಗ 11.00 ಗಂಟೆ ಬೆಳಿಗ್ಗೆ (rush hour ಬಿಟ್ಟು) ನಮಗೆ direct ಮಸ್ಜಿದ್ ಗೆ ಹೋಗುವ local fast train ಸಿಗತಿತ್ತು. ಲೇಡಿಸ್ compartment ನಲ್ಲಿ ಕುಳಿತುಕೊಳ್ಳಲು ಜಾಗ ಸಹ ಸಿಗುತ್ತಿತ್ತು. ನಾವು ಚಪಾತಿ ಕಟ್ಟಿಕೊಂಡು ಹೋಗ್ತಿದ್ವಿ. 3.00 ಗಂಟೆಯ ಅಂಧೇರಿ last stop train ಗೇ ವಾಪಸ್ ಆಗುವಾಗ ಚಪಾತಿ ತಿನ್ನುತ್ತಿದ್ದೆವು. ಅಂಧೇರಿ ರೈಲ್ವೆ station ನಿಂದ ಪುನ: ಬಸ್ ನಲ್ಲಿ ಮನೆತನಕ ಬರುತ್ತಿದ್ವಿ. (ತಮ್ಮ ಹೇಳುವ ಪ್ರಕಾರ ಈಗ ಯಾವಾಗಲೂ rush hour ಅಂತೆ, ಮೂರು ಹೊಸ ಟ್ರೈನ್ ಸುರುಮಾಡಿದ್ದರೂ ಸಹ!!)ತುಂಬಾ ಸುಸ್ತಾಗಿರುತಿತ್ತು. ಶನಿವಾರ ಈ ಕೆಲಸ ಇಟ್ಟುಕೊಳ್ಳುತ್ತಿದ್ದೆವು ಯಾಕೆಂದರೆ ಆ ದಿನ ನನಗೆ ಶಾಲೆ 10.00 ಗಂಟೆಗೆ ಮುಗಿಯುತ್ತಿತ್ತು. ಬಿಲ್ಡಿಂಗ್ ಎದುರುಗಡೆ ನೆ ಸ್ಕೂಲ್.
ಸಂಜೆ ಮನೆಗೆ ಬಂದ ನಂತರ ನನಗೆ ಅಮ್ಮನಿಗೆ ಚಹಾ ಮಾಡುವ ಕೆಲಸ ನನ್ನದಾಗಿತ್ತು. ಆ ಮೇಲೆ ತಂದ ಸಾಮಾನನ್ನೆಲ್ಲ ಅದರ ಜಾಗದಲ್ಲಿ ಓರಣವಾಗಿಡುವ ಕೆಲಸ. ನಾನು ನೋಡಲು ಆಗ ಕಡ್ಡಿ ತರಹ ಇದ್ದೆ, ಆದರೂ ತುಂಬ wieghty ಸಾಮಾನುಗಳನ್ನು ಶಕ್ತಿಗಿಂತ ಹೆಚ್ಚು ಯುಕ್ತಿ ಉಪಯೋಗಿಸಿ ಎತ್ತುಕೊಂಡು ತರುತ್ತಿದ್ದೆ.:-) ಕೆಲವು ತುಂಬ ಕಷ್ಟದ ಸಮಯವನ್ನು ಎದುರುಹಾಕಿಕೊಂಡಿದ್ದೇವೆ. 11 ಹಾಗೂ 12 ನೇ ಕ್ಲಾಸ್ (ಇಲ್ಲಿಯ ಪಿ.ಯು.ಸಿ)ನಲ್ಲಿ ನಾನು science ವಿಷಯಗಳನ್ನು ಆಯ್ದು ಕೊಂಡಿದ್ದೆ. ಸ್ಕೂಲಿನ extension ಆಗಿದ್ದರಿಂದ ನಮಗೆ ಆವಗಲೂ uniform ಹಾಕಲಿಕಿತ್ತು. sulphuric acid ಮುಂತಾದವು ಬಿದ್ದು ಕಾಲುಚೀಲಕ್ಕೆಲ್ಲ ತೂತು. ಅದನ್ನು ನಾನು ಅಮ್ಮನಿಗೆ ಗೊತ್ತಾಗದ ಹಾಗೆ ಕಪ್ಪು ದಾರದಿಂದ ಹೋಲಿತಿದ್ದೆ. ಹೊಸ ಕಾಲು ಚೀಲ ಕೇಳಿದ್ದರೆ ಅಮ್ಮ ಇಲ್ಲ ಅಂತಿರಲಿಲ್ಲ, but ಅದಕ್ಕೆ ಏನಾದರೂ sacrifice ಮಾಡಬೇಕಾಗುತಿತ್ತು. ಯಾರಿಗೂ ನಮ್ಮ ತೊಂದರೆ/ಅಡಚಣೆಗಳನ್ನು ತೋರಿಸದೆ ನಗು ಮುಖದಿಂದ ಇರುತಿದ್ದರು ಅಮ್ಮ.

ಊರಿನ ಆಸ್ತಿ ಮಾರಿ ಈಗ ಅಮ್ಮ ಅಪ್ಪ ಆರ್ಥಿಕವಾಗಿ ತುಂಬ ಒಳ್ಳೆಯ ರೀತಿಯಲ್ಲಿದ್ದಾರೆ, ಹಾಗೆ ತಮ್ಮ ತಂಗಿಯರೂ ಕೂಡ. ಈಗಲೂ ಅಪ್ಪ ಶೇರ್ಸ್ ನಲ್ಲಿ invest ಮಾಡ್ತಾರೆ. ನನ್ನ ಚಿಕ್ಕ ತಮ್ಮ, ತನ್ನ ಬಿಸಿನೆಸ್ ಜತೆ, ಅಪ್ಪನ portfolio manage ಮಾಡ್ತಾನೆ.ಆದರೂ growing up stage ನ ಆ ಭಾಗ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ನನ್ನದು ದುಂದು ವೆಚ್ಚ ತೀರ ಕಡಿಮೆ. ಒಬ್ಬಳೆ ಎಲ್ಲಾದರೂ ಹೋಗುವಾಗ ಆದಷ್ಟು ನಾನು ಬಸ್ ನಲ್ಲೆ ಪ್ರಯಾಣಿಸುತ್ತೇನೆ. ಶ್ರೀಕಾಂತ ಹಾಗೂ ಮಕ್ಕಳೊಂದಿಗೆ, ಅಥವಾ ನೆಂಟರು ಬಂದಾಗ ರಿಕ್ಷಾ/taxi ಗೊತ್ತು ಮಾಡಿಕೊಳ್ಳುತ್ತೇನೆ. ಬಟ್ಟೆ ಬರೆ mall ಗಳಿಂದೆಲ್ಲ ಖರೀದಿಸುವುದು ನನಗೆ ಯಾಕೋ waste ಅಂತಲೇ ಅನ್ನಿಸುತ್ತೆ. ನನ್ನ ಮಕ್ಕಳಿಗೆ ನನ್ನ ಸ್ವಭಾವದಿಂದ ಕೆಲವೊಮ್ಮೆ ಇರುಸುಮುರುಸಾಗುತ್ತದೆ. ಆದರೆ ನಾನವರಿಗೆ ’ನೀವೇನು ಬೇಕಾದ್ರು ತೆಗೆದುಕೊಳ್ಳಿ, ನನ್ನ ಜೀವ/ತಲೆ ತಿನ್ನಬೇಡಿ , ನನ್ನನ್ನು ನನ್ನ ಪಾಡಿಗೆ ಬಿಡಿ ಅಂತಲೆ ಹೇಳೋದು.ತಮ್ಮಂದಿರಿಬ್ಬರೂ ನನಗೆ ಕಂಜೂಸ್ ಅಂತಲೇ ಕರೆಯೋದು.
ರಿಕ್ಷಾದ ದುಡ್ಡು ಉಳಿಸಿದ ಹಾಗೆ ಕಂಡರು, ಅದನ್ನು ನಾನು consciously ಹಾಗೆ ಮಾಡಿದ್ದಲ್ಲ, ಅಭ್ಯಾಸಬಲದಿಂದ ಹಾಗೆ ಆಗಿದ್ದು. ಆಫೀಸ್ ದುಡ್ದು ಕಳುವಾಗಿದ್ದರೆ ಅದನ್ನು ನಾನೇ ಕೈನಿಂದ ಹಾಕಬೇಕಿತ್ತು!! ಈ ನನ್ನ ಸ್ವಭಾವವನ್ನು,ನನ್ನ ತಮ್ಮ middle class mentality ಅನ್ನುತ್ತಾನೇನೋ. ಬಹುಶ: ನಾನು spend ಮಾಡೋದು ಪುಸ್ತಕದ ಮೇಲೆ ಅಷ್ಟೆ.

ಇರ್ಲಿ ಬಿಡಿ. ಪರ್ಸ್ ಕಳ್ಳತನದ ಬಗ್ಗೆ ಹೇಳ್ತ ಸ್ವಲ್ಪ track change ಆಯ್ತು. :-)
ಇನ್ನೂ ಎರಡು ಮೂರು ಸಲ  ಆ ದಿನ ಬಸ್ ನಲ್ಲಿದ ಗುಂಪನ್ನು ನೋಡ್ದೆ, ಎಲ್ಲ ಅವರೆ. ಈ ಸಲ ಸ್ವಲ್ಪ different ಕತೆ. ಮಗು ಗಟ್ಟಿಯಾಗಿ ಅರಚಿಕೊಳ್ತು, ಒಂದು ಮುದಿ ಹೆಂಗಸು ಇನ್ನೊಬ್ಬ ಪ್ಯಾಸೆಂಜರ್ ಗೆ ’ಏನಮ್ಮ ಇಷ್ಟು ಹೈ ಹೀಲ್ ಚಪ್ಪಲಿ ನಾ ಹಾಕ್ಕೊಂಡು ಬರೋದು, ಮಗು ಕಾಲು ನೋಡಿ, ಜಜ್ಜಿ ಹೋಗಿದೆ....ಜನರ attention ಆ ಕಡೆ ಹೋದಾಗ ಪರ್ಸ್ ಗಳನ್ನು ಕದಿಯೋದು. ನೋಡಿದ್ರೆ, ಹೈ ಹೀಲ ಹಾಕ್ಕೊಂಡಿದ್ದ ಹೆಂಗಸೂ ಅವರ ಗುಂಪಿನದೇ.....
ಗುಂಪುಗಳ್ಳರು???!!!!!




:-)

malathi S

August 3, 2010

At 20 teenager no more; but still my baby



ಸಮಯ ಎಷ್ಟು ಬೇಗ ಹಾರುತ್ತೆ!!!!ಇವತ್ತು ಮಾಲವಿಕ ಳ 20 ನೆ ಹುಟ್ಟು ಹಬ್ಬ.

ಅವಳು ಹುಟ್ಟಿದ ದಿನ ಇನ್ನೂ ನಿನ್ನೆ ಮೊನ್ನೆಯ ಹಾಗೆ ಕಣ್ಮುಂದೆ ಸುಳಿದುಹೋಗುತ್ತದೆ. ಬೆಚ್ಚನೆಯ spot ನಿಂದ ಹೊರಗೆ ಬಂದಿದ್ದಕ್ಕೆ ಇದ್ದ ಬಲ ಎಲ್ಲ ಹಾಕಿ ಕಿರುಚಿಕೊಂಡಿದ್ದಳು ಅವಳು, ಆಗಸ್ಟ್ 3, 1990, ಶುಕ್ರವಾರ ಸಂಜೆ 4.37 ಸಮಯ. ಆ ದಿನ ವರಮಹಾಲಕ್ಷ್ಮಿ ಹಬ್ಬ.ಕೂಡಲೆ ತನ್ನಷ್ಟಕ್ಕೆ ಸಮಾಧಾನ ಪಟ್ಟು ಎಲ್ಲರನ್ನೂ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತ ಇದ್ದಳು. ಒಂದು ಚೂರು ಮಲಗ್ಲೇ ಇಲ್ಲ ಅವಳು. ತುಂಬ ಸಮಾಧಾನಿ ಮಗು. ತಂಟೆ ಇಲ್ಲ ತಕರಾರಿಲ್ಲ. ಒಂದು ಚೂರು ನಗು ಸಹ ಒಲ್ಲ. ಘನ ಗಾಂಬೀರ್ಯ.ತಂಟೆ ತಕರಾರೆಲ್ಲ ಈಗ. ಮತ್ತೀಗ ನಗಲು ಕಾರಣವೇ ಬೇಕಿಲ್ಲ, ನಾನೇ ಕೆಲವೊಮ್ಮೆ ಅವಳಿಗೆ ಬಯ್ಯುವುದು. ಸ್ವಲ್ಪ ನಾದ್ರೂ ಗಂಭೀರವಾಗಿರೆ ಅಂತ.

ಅವಳು ಹುಟ್ಟಿದಾಗ ನನಗೆ 20 ವರ್ಷ ವಯಸ್ಸು. ಅವಳ ಜತೆ compare ಮಾಡಿದ್ರೆ, ಆಗಲೇ ನಾನು ಮನೆ, ನನ್ನ ಓದು,ಮಗು ಎಲ್ಲ ಸಂಭಾಳಿಸ್ತಾ ಇದ್ದೆ, ಅವಳು ಎಷ್ಟು carefree.

ಇನ್ನೊಂದು ಗಮ್ಮತ್ತಿನ ವಿಷಯ, ಇವತ್ತು ನನ್ನ family ಯಲ್ಲಿ ಮಾಲವಿಕನ್ನೂ ಸೇರಿಸಿ ನಾಲ್ಕು ಜನರ ಹುಟ್ಟಿದ ಹಬ್ಬ

ನನ್ನ ಅಮ್ಮ = 60 years

ದೀಪಾ (ನನ್ನ ಮೊದಲ್ನೇ ತಮ್ಮನ ಹೆಂಡತಿ) =32 years

ಪದ್ಮ (ನನ್ನ ಎರಡನೇ ತಮ್ಮನ ಹೆಂಡತಿ) =29 years

ನನ್ನ plan ಪ್ರಕಾರ ಅಮ್ಮನ 60 ನೇ ಹುಟ್ಟು ಹಬ್ಬ ಗ್ರಾಂಡ ಮಾಡುವ ಅಂತ ಇತ್ತು. ಮತ್ತೆ ನನ್ನ ತಮ್ಮ ನಂ 1,ಹೆಸರು ಕೃಷ್ಣಾನಂದ, ಫ್ಯಾಮಿಲಿ ಕರೆದುಕೊಂಡು ದೂರದ ದುಬ್ಯಾ ಗೆ ಹೋಗುತ್ತಿದ್ದಾನೆ ಕೆಲಸದ ನಿಮಿತ್ತ. ಇನ್ನು ಎರಡು ವರ್ಷ ಇಲ್ಲಿಗೆ ಬರುವ ಹಾಗಿಲ್ಲವಂತೆ...ನಾವೆಲ್ಲರೂ ಅಮ್ಮನ ಮನೆಯಲ್ಲಿ ಸೇರುವುದಿತ್ತು. ನಾನೇ ಇವತ್ತಿನ ದಿನದ ಎಲ್ಲ plan ಹಾಕಿದ್ದು. ಆದರೆ ಶ್ರೀಕಾಂತ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಹೋಗುವುದು cancel ಆಯ್ತು. ಉಳಿದ ಪ್ಲಾನ್ ನಂತೆ ಅಲ್ಲಿ , ನಮ್ಮನ್ನು ಬಿಟ್ಟು ಎಲ್ಲರೂ ಸೇರಿದ್ದಾರೆ.ಇವತ್ತು ದೊಡ್ಡ cake ಮೇಲೆ ನಾಲ್ಕು ಜನರ ಹೆಸರು, ಇವತ್ತು ಸಂಜೆ ಅಲ್ಲಿ ಅವರು ಕೇಕ್ ಕಟ್ ಮಾಡ್ತಾರೆ. ಇಲ್ಲಿ ಮಾಲವಿಕ ಬೆಳಿಗ್ಗೆ ಕೇಕ್ ಕಟ್ ಮಾಡಿ ಅವಳ ಕಾಲೇಜು ಫ್ರೆಂಡ್ಸ್ ಗೆ ಅಂತ ಕೇಕ್ ತೆಗೆದುಕೊಂಡು ಹೋಗಿದ್ದಾಳೆ.




:-)
yummy Strawberry cake from Sweet Chariot. Next best to my favorite Mongini's cakes -Mumbai