ಮಂಜುಳಾ ಒಳಗೆ ಅಡಿಗೆ ಮನೆಯಲ್ಲಿ ಸ್ವೀಟ್ ತಯಾರಿ ಯಲ್ಲಿ ವ್ಯಸ್ತಳಾಗಿದ್ದಳು. ಹೊರಗಡೆ ಜಾನಿಬಾಯಿ ಮತ್ತು ಅವಳ ಪುಟ್ಟ ಮಗಳು ಸೇರಿ ದೀಪಾವಳಿಗೆ ಅಂತ ಮನೆ ಹೊರಗಡೆ ಚೊಕ್ಕ ಗೊಳಿಸುತ್ತಿದ್ದರು. ಅವರ ಸಂಭಾಷಣೆ ಮಂಜುಳೆಯ ಕಿವಿ ಮೇಲೆ ಬೀಳುತ್ತಾ ಇತ್ತು.
" ಅಮ್ಮ ನಾವು ನಾಳೆ ಹಬ್ಬ ಮಾಡ್ತೀವಾ?'
" ಇಲ್ಲ ಮಗಳೇ ನಾವು ಎರಡು ದಿನ ಬಿಟ್ಟು ಹಬ್ಬ ಆಚರಿಸುವಾ, ಆಯ್ತಾ' ಈಗ ಎರಡು ಮೂರು ಮನೆಯ ಕೆಲಸ ಇದೆಯಲ್ಲವಾ? ನಾವು ಹಬ್ಬ ಅಂತ ಮನೆಯಲ್ಲಿ ಕುಳಿತರೆ ಅವರ ಮನೆಯಲ್ಲಿ ಕೆಲಸ ಮಾಡುವವರು ಯಾರು?"
ಮಂಜುಳೆಗೆ ಕುರುಳು ಚುರುಕ್ ಎಂದಿತು. ಅವರಿಗೆ ರಜೆ ಕೊಡುವಾ ಅಂದ್ರೆ ನಾಳೆ ಡಿನ್ನರ್ ಪಾರ್ಟಿ ಗೆ ಸಹಾಯ ಮಾಡುವವರ್ಯಾರು?
ಅವಳಿಗೆ ಒಂದು ಐಡಿಯಾ ಬಂತು. ಬೇಗ ಬೇಗನೆ ಅಡಿಗೆ ತಿಂಡಿ ಕೆಲಸ ಮುಗಿಸಿ ಹೊರಗೆ ಹೋಗಿ ಜಾನಿಬಾಯಿ ಮತ್ತು ಅವಳ ಮಗಳಿಗೆ ಹೊಸ ಬಟ್ಟೆ, ಹಣತೆ, ಎಣ್ಣೆ , ಸ್ಕೂಲ್ ಬ್ಯಾಗ್ , ಬಣ್ಣ ಬಣ್ಣದ ಕತೆ ಪುಸ್ತಕ ತೆಗೊಂಡು ಅದನ್ನು ನೀಟಾಗಿ ಗಿಫ್ಟ್ ರ್ಯಾಪ್ ಮಾಡಿಸಿ ತಂದಿಟ್ಟು ಕೊಂಡಳು.
ಮರುದಿನ ಬೆಳಿಗ್ಗೆ ಅವರು ಬಂದ ಕೂಡಲೇ ಅವರಿಗೆ ಅವರ ಉಡುಗೊರೆಯನ್ನು ಕೊಟ್ಟಳು. ಮಗಳು ಹೊಸ ಬಟ್ಟೆಯನ್ನು ಕೂಡಲೇ ಹಾಕಿಕೊಂಡಳು. ಸಂಜೆ ಆ ಹುಡುಗಿಯಿಂದಲೇ ಮನೆಯ ಮುಂದೆ ದೀಪಗಳನ್ನು ತನ್ನ ಮಕ್ಕಳ ಜೊತೆಯಲ್ಲೇ ಹಚ್ಚಿಸಿ ತಂದ ಪಟಾಕಿಗಳನ್ನು ಅವರೆಲ್ಲರೂ ಕೂಡಿಸಿ ಹಚ್ಚಿದರು .
ದೀಪಾವಳಿಯ ಮರುದಿನ ಜಾನಿಬಾಯಿಗೆ ರಜೆ ಮಾತ್ರವಲ್ಲ ದೀಪಾವಳಿಯ ಮಿಠಾಯಿ ಮತ್ತು ಸ್ವಲ್ಪ ದುಡ್ಡನ್ನು ಕೊಟ್ಟು ಕಳಿಸಿ ಮನಸ್ಸಿಗೆ ಒಂದು ಸ್ವಲ್ಪ ಸಮಾಧಾನ ಆಗುವಂತೆ ನಡೆದುಕೊಂಡಳು ಮಂಜುಳಾ ..
ಸುಮ್ನೆ ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ .:-)

