September 30, 2016

spring roll ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 






ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/

September 24, 2016

ಗೋವಾದ ಸಮುದ್ರತಟದಲ್ಲಿ ಮೀನು ಹಿಡಿಯುವ ನೋಟ

ಮಳೆಗಾಲದಲ್ಲಿ ಗೋವಾ ತುಂಬಾ ssss ಚಂದ ಇರ್ತದೆ ಅಂತ ಕೇಳಿದ್ದೆ. ಹಾಗಾಗಿ  ಹಿಂದಿನ ತಿಂಗಳು ಗೋವಾಕ್ಕೆ ಹೋಗುವ ಪ್ಲ್ಯಾನ್ ಹಾಕಿದೆವು. ಅಲ್ಲೊಂದು ಮದುವೆಯಿತ್ತು. ಮದುವೆಯನ್ನು ಸೇರಿಸಿ ಒಂದು ನಾಲ್ಕು ದಿನ ಗೋವಾದಲ್ಲಿ ಇರುವುದೆಂದಾಯಿತು. ಟ್ರೈನ್ ನಲ್ಲಿ ಟಿಕಟ್ ಕೂಡ ಕಾದಿರಿಸಲಾಯಿತು . ಮಧ್ಯಾಹ್ನ ಮೂರೂ ಗಂಟೆಯ ಟ್ರೈನ್ , ಮಡಗಾಂವ್ ಮುಂದಿನ ದಿನ ಬೆಳಿಗ್ಗೆ ೫. ೦೦ ಕ್ಕೆ ತಲುಪತ್ತದೆಂದು ಅಲ್ಲಿನ ಲೋಕಲ್ ಟ್ಯಾಕ್ಸಿ ಕೂಡ ಬುಕ ಮಾಡಿದ್ದೆ.  ಪ್ರಯಾಣಿಸುವ ದಿನ ಶ್ರೀಕಾಂತ ಗೆ ಎಷ್ಟು ಸಮಯಕ್ಕೆ ಆಫಿಸ್ ನಿಂದ ಬರಬೇಕು, ಊಟ ಮಾಡಿ ಎಷ್ಟು ಹೊತ್ತಿಗೆ ಹೊರಡಬೇಕೆಂದು ಹೇಳಿದ್ದೆ ಬಂತು. ರಾಯರು ಮನೆಗೆ ಬಂದು ಊಟ ಮಾಡಿ ನಾನು ಅಡಿಗೆ ಮನೆಯನ್ನು ಚೊಕ್ಕಟಗಳಿಸುವಷ್ಟರಲ್ಲಿ ತುಂಬಾ ನೇ ವಿಳಂಬವಾಗಿಹೋಯಿತು. ಟ್ರೈನ್ ಹೊರಡಲು ಐದು ನಿಮಿಷ ಮೊದಲು ತಲುಪಬಹುದೆಂದು ಅಂದಾಜಿಸಿ ಓಲಾ ಕ್ಯಾಬ್ ಬುಕ್ ಮಾಡಿ ಹೊರಟೆವು. ಆದರೆ ಕೋರಮಂಗಲದಲ್ಲಿ ವಿಪರೀತ ವಾಹನ ದಟ್ಟಣೆ ಹಾಗು ಟ್ರಾಫಿಕ್ ಜಾಮ್  ನಿಂದಾಗಿ ಟ್ರೈನ್ ಮಿಸ್ ಆಯಿತು. ಟ್ರೈನ್ ನಾವು ಯಶವಂತಪುರದಿಂದ ಹಿಡಿದಕೊಳ್ಳಬೇಕಿತ್ತು. ನಮ್ಮ ಓಲಾ ಕ್ಯಾಬ್ ನವನಿಗೆ ಸಖತ್ ಬೇಜಾರಾಗಿ ನಮಗೆ ತುಮಕೂರು ವರೆಗೂ ಡ್ರಾಪ್  ಕೊಡುವ ಉಮ್ಮೇದು. ನನಗ್ಯಾಕೋ ಅಲ್ಲಿ ಕೂಡ ವಿಳಂಬವಾಗೇ ತಲುಪುತ್ತೇವೆಂದು ಗೊತ್ತಾಯಿತು. ಇನ್ನೇನು ಮನೆಗೆ ವಾಪಸ್ ಆಗೋದು ಅಂದೆ. ಈ ತರಹದ್ದು ನಮಗೇನು ಹೊಸತಲ್ಲ. :-) ಆದರೆ ಶ್ರೀಕಾಂತ ಗೆ ಏನನ್ನಿಸಿತ್ತೋ ..ಬೇಡ ಪ್ರಯಾಣದ ತಯಾರಿ ಎಲ್ಲಾ ಆಗಿದೆ, ನಾನು ರಜೆ ಹಾಕಿ ಆಗಿದೆ , ಹರೀಶ್ ಫ್ರೀ ಇದ್ದರೆ ಅವರ ಗಾಡಿ ಬಾಡಿಗೆಗೆ ತೆಗೊಂಡು ಹೋಗುವ ಅಂತ ಓಲಾ ದವನಿಗೆ ಯಶವಂತಪುರದ ಬಿಡಲಿಕ್ಕೆ ಹೇಳಿದೆವು. ಹರೀಶ ಬಂದು ನಮ್ಮನ್ನು ಯಶವಂತಪುರದಿಂದ ಗೋವಾಕ್ಕೆ ಕರೆದುಕೊಂಡು ಹೋಗಲು  ಬರುವ 'ತನಕ ರಿಟರ್ನ್  ಟಿಕೆಟ್, ಅಲ್ಲಿನ ಗಾಡಿ ಕ್ಯಾನ್ನ್ಸಲ್ ಮಾಡೋದು ಮುಂತಾದ ಕೆಲಸ ಮಾಡಿದೆವು. ಸರಿಯಾಗಿ ೩. ೪೫ ಕ್ಕೆ ನಾವು ಬೆಂಗಳೂರು ಬಿಟ್ಟೆವು. ಸಂಜೆ ಒಂದು ಟಿ ಗೆ ನಿಲ್ಲಿಸಿದ್ದೆ ಸೀದಾ ಗೋವಾಕ್ಕೆ ಪ್ರಯಾಣ. ನಾವು ಧಾರವಾಡ ದಿಂದ ರಾಮನಗರ  ರೋಡ ಅನಮೋಡ್  ಘಾಟ  ಹಿಡಿದುಕೊಂಡು ಹೋದೆವು. ಕಾಡು ಪ್ರದೇಶದಲ್ಲಿ ನಮಗೆ ಹಲವಾರು ಕಾಡು ಪ್ರಾಣಿ ನೋಡಲು ಸಿಕ್ಕಿದವು.  ರಾತ್ರಿ ೧ ಗಂಟೆಗೆ  ನಾವು ಮಾರ್ದೋಳ ದೇವಸ್ಥಾನ ತಲುಪಿದೆವು. ಆ ರಾತ್ರಿ ನಾವು ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೆವು.
ಮರುದಿನ ಮದುವೆ  ರಾಮನಾಥಿಯಲ್ಲಿ. ಅಲ್ಲೇ ಹತ್ತಿರದಲ್ಲಿದ್ದ  ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ , ಕೊಲ್ವಾ ಬೀಚ್ ನಲ್ಲಿ ನಿಗದಿಪಡಿಸಿದ ಲಾಂಗಿನ್ಹಾಸ್  ರಿಸಾರ್ಟ್ ನಲ್ಲಿ ತಂಗಿದ್ದೆವು. ಗೋವಾದಲ್ಲಿ ಪೂರ್ತಿ ಮಳೆ. ಸಂಜೆ ಮಳೆಯಲ್ಲಿ ಒಂದು ರೌಂಡ್ ಬಿಚ ಗೆ ಆಮೇಲೆ ಕತ್ತಲಾದ  ಮೇಲೆ ಬೀಚ್ ಬಳಿ ಇರುವ ಮಾರ್ಕೆಟ್ ಗೆ ಹೋದೆವು. ಮರುದಿನ ಬೆಳಿಗ್ಗೆ ನಾವು ಬೀಚ್ ವಾಕ್ ನನ್ನ ಯೋಗ ಮುಂತಾದವುಗಳನ್ನು ಹಮ್ಮಿಕೊಂಡಿದ್ದೆವು. ನಾವು ಬೀಚ್ ಗೆ ಹೋಗುವಾಗ ಆಗಲೇ ಅಲ್ಲಿ ಮೀನು ಹಿಡಿಯುವ ತಯಾರಿ ನಡೆಯುತ್ತಿತ್ತು. ನಾವು  ಒಂದೂವರೆ  ಗಂಟೆ ಅವರು ಗಾಳ  ಹಾಕಿ ನಿಲ್ಲುತ್ತಾರೆ. ಒಂದು ದೋಣಿ ಸಮುದ್ರದಲ್ಲಿ  ಬಲೆ ಯಾ ತುದಿಯನ್ನು ಹಿಡಿದುಕೊಂಡು ಹೋಗುತ್ತೆ. ದಂಡೆಯ ಮೀಮೇಲೆ  ಸುಮಾರು ೬೦ ಜನರ ತಂಡ ಬಲೆಯ ಉಳಿದ ಭಾಗ   ಹಿಡಿದುಕೊಂಡಿದ್ದರು. ಆವಾಗಾವಾಗ  ಕ್ಯಾಚ್ ಈ  excitement ಎಷ್ಟು contagious ಇತ್ತಂದ್ರೆ ನಾವೇ ಮೀನು   ಹಿಡಿಯಲು ನಿಂತವರ ತರಹ. ಕೆಲವೊಮ್ಮೆ ಏನು ಸಿಗದೇ ಮರಳುತ್ತಾರಂತೆ. ಆಗ ಬೇಜಾರಾಗುವುದುಲ್ಲವಾ ಅಂದ್ರೆ, "ಅದರಲ್ಲೇನು ಬೇಜಾರು ಒಂದು ದಿನ  ತುಂಬಾ ಮೀನು ಇನ್ನೊಂದು ದಿನ ಸ್ವಲ್ಪ ಕೆಲವೊಮ್ಮೆ ಏನು ಸಿಗಲ್ಲ ಆದರೂ ನಮಗೆ ಜೀವನದಲ್ಲಿ ನಿರಾಸೆ ಆಗುವ ಸಂಭವ ಬಂದಿಲ್ಲ ಅಂದ ಅವರ ಲೀಡರ್.
ಅಲೆಗಳ ಹೊಡೆತಕ್ಕೆ ಬಲೇ ಆ ಕಡೆ ಈ ಕಡೆ   ತೇಲಿದಾಗ  ನಿಂತವರು ಬೇಗ ಬೇಗ ಜಾಗ ಬದಲಾಯಿಸುತ್ತಾ ಇರಬೇಕು ಇಲ್ಲದಿದ್ದರೆ ಬಲೆಯಲ್ಲಿ ಗಂಟುಗಳಾಗುವ ಸಂಭವ ಹೆಚ್ಚು. ಮತ್ತೆ ತೋಳುಬಲ ಕೂಡ ಬೇಕು. ಕೆಲಸಗಾರರಲ್ಲಿ ತಮಿಳು, ತೆಲುಗು ಕನ್ನಡ ಮಾತನಾಡುವವರು ಇದ್ದರು.
ಬಲೇ ಒಂದು ಸಲ ದಡಕ್ಕೆ ಬಂದ ಮೇಲೆ ಅದನ್ನು  ನೀಟಾಗಿ ಮಧ್ಯಕ್ಕೆ ತಂದು ಅಕ್ಕ ಪಕ್ಕ ಸಿಕ್ಕಿ ಹಾಕಿಕೊಂಡ ಮೀನನ್ನು ಒಂದು ಕಟ್ಟಿಗೆಯ ತುಂಡಿನಿಂದ ಹೊಡೆದು ಬಲೆಯ  ಮಧ್ಯ ಬೀಳುವಂತೆ ಮಾಡುತ್ತಾರೆ. ತುಂಬಾ ಚಿಕ್ಕ ಚಿಕ್ಕ ಮೀನುಗಳನ್ನು ಪುಟ್ಟ ಪುಟ್ಟ ಉಡುಗ ಹುಡುಗಿಯರು ಆರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಒಂದು ದಿಂದ ಸಾರಿಗೆ ಸಾಕಾಗುವಷ್ಟು.
ಇಲ್ಲಿವೆ ಕೆಲವು ಚಿತ್ರಗಳು
 ನಾವಿದ್ದ ಮೂರೂ ದಿನವೂ ನನ್ನನ್ನು ಹಿಂಬಾಲಿಸಿದ ನಾಯಿ. ಮಳೆಯಿಂದ ರಕ್ಷಿಸಲು ಅಕ್ಕ ಅವನಿಗೆ ಕೊಡೆ ಹಿಡಿದಿದ್ದು









 ಕೊಂಕಣಿಯಲ್ಲಿ ನಾವು ಖಮ್ಮಟೆ ಅನ್ನುವ ಮೀನು. ಇದನ್ನು ಒಣಗಿಸಿ ಇದರ ಚಟ್ನಿ ಮಾಡುತ್ತಾರೆ. 



ಸಂಸ್ಥೆ ಬಿಟ್ಟು ಇದನ್ನೇ ಉದ್ದಿಮೆಯನ್ನಾಗಿ ಪರಿಗಣಿಸಿದರೆ ಹೇಗೆ?? :-) 

September 18, 2016

ಒಂದು ಗಿಣ್ಣಿನ ಕತೆ

ಗಿಣ್ಣು ಕೊಂಕಣಿಯಲ್ಲಿ ನಾವು ಪೋಸು ಅಂತೇವೆ. 

ತುಂಬಾ ಚಿಕ್ಕವಳಿದ್ದಾಗ ಅಜ್ಜಿಯ ಮನೆಯಲ್ಲಿದೆ ಕೆಲವು ಸಮಯ. ಕೇರಳದ ಕಾಸರಗೋಡಿನಲ್ಲಿ. ಅಜ್ಜಿಯ ಜತೆ ಅವರ ಮಗಳ(ನನ್ನ ಸೋದರತ್ತೆ) ಸಂಸಾರ ಕೂಡ ಇತ್ತು . ದೊಡ್ಡಕುಟುಂಬ. ಮನೆಯಲ್ಲಿ ಮೂರೂ  ಹಸುಗಳಿದ್ದವು. ನರ್ಮದಾ, ಗೋದಾವರಿ ಮತ್ತು ಕಾಳಿ. ಮೊದಲಿನೆರಡು ಸೌಮ್ಯ ಸ್ವಭಾವದವರಾಗಿದ್ದು ಕಾಳಿ ಮಾತ್ರ ಸಿಟ್ಟಿನವಳು. ಅವಳಹಾಲು ಕರೆಯಲು ನನ್ನ ಅಜ್ಜಿ ಅಥವಾ ಸೋದರತ್ತೆನೆ ಆಗಬೇಕಿತ್ತು. ಉಳಿದವುಗಳಿಗೆ ನನ್ನ ಮಾಮ  ಬೆಳಿಗ್ಗೆ ಸಂಜೆ ಹಾಲು ಕರೆಯುತ್ತಿದ್ದ. ಚಿಕ್ಕಂದಿನಿಂದಲೇ ನನಗೆ ನಿದ್ದೆ ತೀರಾ ಕಡಿಮೆ. ಅಜ್ಜಿ ಜತೆ ಬೆಳಿಗ್ಗೆ ಬೇಗನೆ ಎದ್ದು  ನಾನೂ ಕೊಟ್ಟಿಗೆಗೆ  ಹೊಗ್ತಿದ್ದೆ. ಒಂದು ತಂಬಿಗೆಯಲ್ಲಿ ಬೆಚ್ಚಗಿನ ನೀರು, ಇನ್ನೊಂದು ದೊಡ್ಡ ತಂಬಿಗೆ ಹಾಲು ಕರೆದು ಹಾಕಲು. ಮೊದಲಿಗೆ ಅಜ್ಜಿ ಉಗುರು ಬೆಚ್ಚಗಿನ ನೀರಿನಿಂದ ಅದರ ಸ್ಥನವನ್ನು  ತೊಳೆಯುತ್ತಿದ್ದರು. ಅದಕ್ಕೂ ಮುಂಚೆ ಅದಕ್ಕೆ ತಿನ್ನಲು ಹುಲ್ಲು ಹರವಿ, ಅದರ ಮೈದಡವುತ್ತಿದ್ದರು. ಆ ಮೇಲೆ ಲಲ್ಲೆ ಗೆರೆಯುತ್ತ ಮಾತನಾಡುತ್ತ ಹಾಲು ಹಿಂಡುವ ಕಾಯಕ. ಸ್ಟೂಲ್ ಮೇಲೆ ಕುಳಿತು ತಂಬಿಗೆಯನ್ನು ಮೊಣಕಾಲುಗಳ ಮಧ್ಯ ಹಿಡಿದು ಎರಡು ಕೈಯಿಂದ ಅದರ ಮೊಲೆಗಳನ್ನು ಎಳೆಯ ಬೇಕು ಸಣ್ಣಕ್ಕೆ ಹಾಲಿನ ಝರಿ ತಂಬಿಗೆಯಲ್ಲಿ ಬೀಳುತ್ತಿತ್ತು. ಕಂಚಿನ ತಂಬಿಗೆಯಾದ್ದರಿಂದ ಟಿನ್ ಟಿನ್ ಸದ್ದು  ಬರೋದು. :-) ಆಮೇಲೆ ಅಡಿಗೆ ಮನೆಯ ಓಲೆ ಹಚ್ಚಿ ಹಾಲಿಗೆ ಸ್ವಲ್ಪ ನೀರು ಬೆರೆಸಿ ಅದನ್ನು ಕಾಯಿಸಲಿಕ್ಕಿಟ್ಟು  ಬೆಳಗ್ಗಿನ ತಿಂಡಿಗೆ ತಯಾರಿ. ಹೆಚ್ಚಾಗಿ ಉದ್ದಿನ ಅಕ್ಕಿಯ ಇಡ್ಲಿ ದೋಸೆ ಕಡುಬುಗಳೇ ಆಗುತ್ತಿದ್ದರಿಂದ ಅದರ ಚಟ್ನಿ ಗೆ ರುಬ್ಬುವುದು ಮುಂತಾದ್ದು ಮಾಡುತ್ತಿದ್ದರು. ...... ಇರಲಿ ಈ ಕತೆ ಮುಂದೆ ಯಾವಾಗಲಾದರೂ. ಆ ಹಾಲಿಗೆ ಏನು ರುಚಿ !!!!
ಒಂದು ದಿನ ರಾತ್ರಿ, ಹೀಗೆ ರಜೆಗೆ ಹೋಗಿದ್ದೆವು ಆಗ. ನರ್ಮದಾ ರಾತ್ರಿ ಇಡೀ ಅಂಬಾ sss ಅಂಬಾ ಅನ್ನುವುದು,ಅಜ್ಜಿ ಸೋದರತ್ತೆ ಪಾಳಿಯಲ್ಲಿ ಕೊಟ್ಟಿಗೆಗೆ ಹೋಗುವುದು ಬರುವುದು ,ಇನ್ನೂ  ಇಲ್ಲ ಅನ್ನುವುದು ನಡಿತಾ ಇತ್ತು. ನನಗೂ  ಎಚ್ಚರ. ಏನಜ್ಜಿ ಅಂತಾ ಕೇಳಿದೆ. ಏನಿಲ್ಲ ನೀನು  ಮಲಗು ನರ್ಮದೆ  ಕರು ಹಾಕಲು ತಯಾರಾಗಿದೆ ಅಂದರು. ಯಾವಾಗಲೋ ನನಗೆ ನಿದ್ದೆ. ಬೆಳಿಗ್ಗೆ ನೋಡಿದರೆ ಪುಟಾಣಿ  ಕರು . ಆದರೆ ನನಗೆ ಆವಾಗ ಗಿಣ್ಣು /ಪೋಸು   ತಿಂದ ನೆನಪಿಲ್ಲ. ಯಾವಾಗಲೋ ದೊಡ್ಡವಳಾದ ಮೇಲೆ,ಕರು ಹುಟ್ಟಿದ ಅಥವಾ ಮನುಜರಿಗೆ  ಮಗು ಹುಟ್ಟಿದ ನಂತರ ಬರುವ ಹಾಲಿಗೆ Colostrum ಅಂತಾರಂತಲೂ ಅದು ಕರುವಿಗೆ/ಮಗುವಿಗೆ ಕಾಯಿಲೆಗಳಿಂದ antibiotic ಉಪಾದಿಯಲ್ಲಿ ಕೆಲಸ ಮಾಡುತ್ತದೆಂದು  ಓದಿದ ನೆನಪು. ಹಾಗಾಗಿ ಅಜ್ಜಿ/ಸೋದರತ್ತೆ ಬಹುಶ: ಕರುವಿಗೆ ಆ ಹಾಲಿನ ವಂಚನೆ ಮಾಡುತ್ತಿರಲಿಲ್ಲವೆಂಬುದು ನನ್ನ ಎಣಿಕೆ. ಅವರನ್ನು ಕೇಳುವಾ ಅಂದರೆ ಅವರಿಬ್ಬರೂ ಈಗ ಕಾಲವಾಗಿದ್ದಾರೆ. 
ಗಿಣ್ಣು ನಾನು ತಿಂದಿದ್ದು ಮದುವೆಯಾದ ಮೇಲೆ ತೀರ್ಥಹಳ್ಳಿಗೆ ಬಂದ ಮೇಲೆ. ಅಲ್ಲಿ ಕೂಡು ಕುಟುಂಬ. ಮನೆಯಲ್ಲಿ ಆಗ ಹಸುಗಳು ಇರಲಿಲ್ಲ. ನಾನು ಮದುವೆಯಾಗಿ ಬರುವ ನಾಲ್ಕೈದು ವರ್ಷದ ಹಿಂದೇನೆ ಹಸು ಕಟ್ಟುವುದನ್ನು ನಿಲ್ಲಿಸಿದ್ದರಂತೆ. ಬೇರೆಯವರ ಮನೆಯಿಂದ ಗಿಣ್ಣು ತಂದುಕೊಡುತ್ತಿದ್ದರು.  ಹಾಗಾಗಿ ಆಸ್ವಾದಿಸುವಷ್ಟು ಗಿಣ್ಣು ಸಿಗುತ್ತಿರಲಿಲ್ಲ. ಒಂಚೂರು ಬಾಯಿಗೆ ಹಾಕುತ್ತಲೇ ಅದು ಯಾವಾಗಲೋ ಉದರದೊಳಗೆ ಮಾಯವಾಗುತ್ತಿತ್ತು. ಅದರ ರುಚಿ ಗೊತ್ತಾಗುತ್ತಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಎಕ್ಸಿಭಿಶನ್ ನಲ್ಲೆಲ್ಲಾ ಪುಟ್ಟ ಪ್ಲಾಸ್ಟಿಕ್ ಡಬ್ಬಿಯಲ್ಲಿ ಗಿಣ್ಣು ಸಿಗುತ್ತಿದ್ದದ್ದು ನೋಡಿ ಸಖೇದಾಶ್ಚರ್ಯ ?? ಅರೆ ಇದೇನು ಧಂಡಿಯಾಗೆ ಸಿಗುತ್ತಿದೆ ಇಲ್ಲಿ  ಅಂತ!ಮಕ್ಕಳಿಗೆ ಅದರ ರುಚಿ ತೋರಿಸುವಾ ಅಂತ ಒಂದು ಪುಟ್ಟ ಡಬ್ಬಿ ತೆಗೊಂಡಿದಿದೆ. ಮಾಲವಿಕಾಳಿಗೆ ಅಷ್ಟು ಇಷ್ಟ ಆಗಿರಲಿಲ್ಲ. ನನಗೋ ಅದರ ರುಚಿ ಗೊತ್ತಾಗಲೇ ಇಲ್ಲ. ಶ್ರೀಕಾಂತ ಮಾತ್ರ ಇದು ಗಿಣ್ಣು ಅಲ್ಲವೇ ಅಲ್ಲ ಅಂದು ಬಿಟ್ರು.  ಆಮೇಲೆ ಇತ್ತೀಚಿಗೆ ತೀರ್ಥಹಳ್ಳಿಯಿಂದ ಆಗುಂಬೆಯ ಕಸ್ತೂರಿ ಅಕ್ಕನ ದೊಡ್ಡಮನೆಗೆ ಭೇಟಿಯಿತ್ತಾಗ ಅವರು ಪ್ರೀತಿಯಿಂದ ಫ್ರಿಜ್  ನಲಿದ್ದ ಬೆಲ್ಲದಿಂದ ಮಾಡಿದ ಗಿಣ್ಣು ತಿನ್ನಲು ಕೊಟ್ಟರು. ಅದು ಸ್ವಲ್ಪವೇ ಇತ್ತು . ಮುಜುಗರದಿಂದ ಒಂಚೂರು ನಾಲಿಗೆ ಮೇಲೆ ಹಾಕ್ಕೊಂಡೆ. 

ಪಾಕ ಶಾಲೆ ಅಂತ ಫೇಸ್ ಬುಕ್ ನ ಒಂದು  ಗ್ರೂಪ್ ನಲ್ಲಿದ್ದೇನೆ ನಾನು. ಅಲ್ಲಿ ಗಿಣ್ಣು  ಮಾಡುವ ರೆಡಿ ಮೆಡ್ ಪ್ಯಾಕೆಟ್ ಸಿಗುತ್ತದೆಂದು ಕೇಳಿದ್ದೆ. ಆದರೆ ತಂದು ಮಾಡಬೇಕೆನಿಸಲಿಲ್ಲ. ಮೊನ್ನೆ ಶ್ರೀಕಾಂತ ಮಲ್ಲೇಶ್ವರದ ಕಿಣಿ ಮಾಮನ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಈ ಕಾಮಧೇನು ಗಿಣ್ಣು ಮಿಕ್ಸ್ ತಂದಿದ್ದರು.  
ಇಲ್ಲಿದೆ ನೋಡಿ ಪ್ಯಾಕೆಟ್ಟು ಮತ್ತು ನಾನು ಮಾಡಿದ ಗಿಣ್ಣು. ಏಲಕ್ಕಿ ಮಾತ್ರ ಹಾಕಲಿಲ್ಲ. ಉಳಿದ ತಯಾರಿ ಪ್ಯಾಕೆಟ್ ಹಿಂದುಗಡೆ ನಮೂದಿಸಿದಂತೆ. 
ಅರ್ಧ ಪ್ಯಾಕೆಟ್ ಹಸಿ ಹಾಲಲ್ಲಿ  , ೧೦೦ ಗ್ರಾಮ್ ಸಕ್ಕರೆ ಅಥವಾ ಬೆಲ್ಲ , ಏಲಕ್ಕಿ ಪುಡಿ , ಗಿಣ್ಣು ಪುಡಿ ಗಂಟಾಗದಂತೆ ಮಿಶ್ರ ಮಾಡುವುದು. ೧೫ ನಿಮಿಷ ಹಬೆ ಪಾತ್ರೆಯಲ್ಲಿ ಬೇಯಿಸುವುದು. ತಣಿದ ನಂತರ ಫ್ರಿಜ್  ನಲ್ಲಿ ಹಾಕಿಡುವುದು . ನಾನು ಎರಡು ಮೂರೂ ದಿನ ಉಳಿಯುತ್ತೆ ಅಂದುಕೊಂಡರೆ  ಒಂದೇ ಒಂದು ಪೀಸ್ ಉಳಿದಿದೆ. ನೀವು ತಂದುಕೊಂಡು ಮಾಡಿಕೊಂಡು ತಿನ್ಕಳ್ಳಿ  





September 1, 2016

auto ಅವಾಂತರಗಳು

ಯು ಎಸ್  ನಿಂದ  ಫ್ರೆ೦ಡ್  ಬಂದಿದ್ದರು. ನಾವೆಲ್ಲಾ ಇನ್ನೊಂದು ಫ್ರೆ೦ಡ್  ಮನೆಯಲ್ಲಿ ಊಟಕ್ಕೆ ಸೇರುವುದೆಂದಾಯಿತು. ಮಹಾಲಕ್ಮಿಪುರದಿಂದ ಜಯನಗರ ಒಂಬತ್ತನೆಯ ಬ್ಲಾಕ್ ಗೆ ಬರಬೇಕಿತ್ತು. ಆ ದಿನ ಮನೆಯಲ್ಲಿ ಏನೋ ಗಡಿಬಿಡಿ. ಅರ್ಜೆಂಟ್  ಆಫಿಸಿನ ಕೆಲಸ, ಮಾಲವಿಕಾ ನಿಹಾರಿಕಾ ರ ಲಂಚ್ ಬಾಕ್ಸ್ ಅಂತ ಲೇಟಾಯಿತು. ದಾರಿಯಲ್ಲಿ ಕೇಕ್ ಒಂದನ್ನು ಪಿಕ್ ಮಾಡಬೇಕಿತ್ತು. ಶ್ರೀಕಾಂತ ನನಗೆ ಬೇಕರಿ ತನಕ ಡ್ರಾಪ್ ಕೊಟ್ಟರು ಅಲ್ಲಿಂದ ನನಗೆ ರಿಕ್ಷಾ ಸಿಕ್ಕಿತ್ತು. ಇಷ್ಟೆಲ್ಲಾ ಗಡಿಬಿಡಿಯಲ್ಲಿ ನಾನು ಮೂತ್ರಕ್ಕೆ ಹೋಗದೆ ಕಟ್ಟಿಕೊಂಡು ಬಿಟ್ಟಿತ್ತು. ಆಟೋ ದವಾ ಇದ್ದ ಬದ್ದ ಹೊಂಡದಲ್ಲೆಲ್ಲ ರಿಕ್ಷಾ ಓಡಿಸ್ತಾ ಇದ್ದ. 
ಸ್ವಲ್ಪ ದೂರ ಹೋದ ಮೇಲೆ, 'ಹಾಲೋ, ಏನ್ರಿ ಇವತ್ತು ಮನೆಯಲ್ಲಿ ಉಪ್ಪಿಟ್ಟಾ? ಇನ್ನೊಂದು ಹೊಂಡದಲ್ಲಿ ರಿಕ್ಷಾ ಓಡಿಸಿದರೆ ನಾನು ಸತ್ತೇ ಹೋಗ್ತೀನಿ ಅಂದೆ'
ಅಯ್ಯೋ ಏನಾಯ್ತ್ರಿ ಮ್ಯಾಡಮ್ ? ಮೊದಲೇ ಹೇಳೋದಲ್ವಾ? ನಿಧಾನಕ್ಕೆ ಓಡಿಸ್ತಿನಿ. ಅಂದಹಾಗೆ ನಮ್ಮ ಹೆಂಡ್ರು ಇವತ್ತು ಏನು ಮಾಡಿಲ್ಲ. ಇನ್ನು ಟಿಫನ್ ಆಗಬೇಕಷ್ಟೆ ಮ್ಯಾಡಮೊರೆ. ನಾನು ರಿಕ್ಷಾ ಓಡಿಸಿ ಆದಷ್ಟು ದುಡ್ಡು ಓಟ್ಟು  ಮಾಡುವ ಪ್ರಯತ್ನ ಮಾಡ್ತಿವ್ನಿ. ಅದು ಸಾಕಾಗೋಲ್ಲ ಅಂತೆ. ಆಕೆ ಚೀಟಿ  ವ್ಯವಹಾರ ಮಾಡ್ತಾಳಂತೆ, ನಾನು ಬೇಡ ಅಂದಿದ್ದಕ್ಕೆ ಸಿಟ್ಟು ಮ್ಯಾಡಮ್. ಮದುವೆ ಮುಂಚೆನೇ ನಾನು ರಿಕ್ಷಾ ಓಡಿಸೋದು ಆಕೆಗೆ ಗೊತ್ತಿತ್ತು. ಚೀಟಿ ವ್ಯವಹಾರ ಎಲ್ಲ ನಮಗೆ ಹೇಳಿದ್ದಲ್ಲ. ನನ್ನ ತಲೆ ಎಲ್ಲಾ ಹಾಳಾಗಿದೆ ಮ್ಯಾಡಂ !! 
"ಎಲ್ಲಾದ್ರೂ ನಿಲ್ಲಿಸಿ ತಿಂಡಿ ತಿನ್ನಿ ಎಷ್ಟು ಲೇಟ ಆಗಿದೆ" ಅಂದಿದ್ದಕ್ಕೆ. ಜಯನಗರ ಕಡೆ ಬೇಜ್ಜಾನ್ ಹೋಟಲ್ ಗಳಿದ್ದಾವೆ. ಅಲ್ಲೇ ಏನಾದ್ರೂ ತಿಂತಿನಿ  ಅಂದ. 
ಜಯನಗರ ತಲುಪಿದ ಮೇಲೆ ದಾರಿ ಸ್ವಲ್ಪ ಕನ್ಫ್ಯೂಸ್ ಆಯ್ತು. ಕೇಕ್ ಹಿಡಿದುಕೊಂಡು ಮನೆ ಹುಡುಕೋದು ಅನುಕೂಲ ಆಗ್ತಿರಲಿಲ್ಲ. ಆದರೂ ಒಂಚೂರು ಬೇಸರಿಸಿಕೊಳ್ಳದೆ ನನ್ನ ಎಡ್ರಸ್ ಚೀಟಿ ಹಿಡಿದುಕೊಂಡು ನಾಲ್ಕೈದು ಕಡೆ ಕೇಳಿ ನನ್ನನ್ನು ಫ್ರೆನ್ಡ್  ಮನೆಗೆ ಬಿಟ್ಟರು. ತುಂಬಾ ಥ್ಯಾಂಕ್ಸ್ ಕಣ್ರೀ. ನಿಮಗೆ ಒಳ್ಳೆದಾಗಲಿ ಅಂದೆ. 
ಅಷ್ಟ೦ದ್ರಲ್ವಾ? ಅದೇ ಸಾಕು ಮ್ಯಾಡಮ್ ಅಂದ 

ಎಪಿಸೋಡ್ -೨ 
ಇದು ಇತ್ತೀಚಿಗೆ ನಡೆದಿದ್ದು. ಅಕ್ಕ ಕೇಕ್ ಒಂದನ್ನು ರಾಮಯ್ಯ ಕಾಲೇಜ್ ಕಡೆ ಒಯ್ಯಬೇಕಿತ್ತು. ಅದು ಯು ಎಸ ನಿಂದ  ಬಂದ ಆರ್ಡರ್, ಅವರ ವಯಸ್ಸಾದ ಅತ್ತೆ ಮಾವಂದರಿಗೆ ಕೇಕ್ ತಲುಪಿಸಬೇಕಿತ್ತು. ತುಂಬಾ ದೊಡ್ಡ ಕೇಕ್ ಅಥವಾ ಅವರ ಮನೆಗೆ ಹೋಗಿ ಸೆಟ್ ಮಾಡುವ ಕೆಲಸ ಇದ್ದರೆ, ನಾನು ಅಕ್ಕನ ಜತೆ ಹೋಗುತ್ತೇನೆ . ಅಲ್ಲಿ ತಲುಪಿದ ಮೇಲೆ ದಾರಿ ಗೊತ್ತಾಗಲಿಲ್ಲ. ಸ್ವಲ್ಪ ಸುತ್ತಾಡಬೇಕಾಯ್ತು. ಆಟೋದವನ ಆಟಾಟೋಪ ನೋಡಬೇಕಿತ್ತು! 'ಸರಿ ದಾರಿ ಗೊತ್ತಾಗಿಲ್ಲಾ ಅಂದ್ರೆ ಯಾರನ್ನಾದ್ರೂ ಕೇಳಬೇಕು, ಇಲ್ಲ ಆ ಮನೆಯವರನ್ನು ಇಲ್ಲಿ ಬರಲಿಕ್ಕೆ ಹೇಳಿ' ಅಂತ ವರಸೆ ಶುರು ಮಾಡಿದ. ನಾನು- ಅಲ್ಲಪ್ಪ ನಮಗೂ ಈ ಏರಿಯಾ ಹೊಸತು, ಮತ್ತು ವಯಸ್ಸಾದ ದಂಪತಿಗಳು, ಈ ಮಳೆಯಲ್ಲಿ ಅವರನ್ನೆಲ್ಲಿ ಬರಲಿಕ್ಕೆ ಹೇಳೋದು ಅಂತ ಕೇಳಿದೆ. ...ಮತ್ತೆ ನಿಮಗೆ ಮೀಟರ್ ಮೇಲೆ ಹತ್ತು ರೂಪಾಯಿ ಜಾಸ್ತಿನೇ ಕೊಡ್ತಿದ್ದೀವಿ, ಯಾಕೆ ಇಷ್ಟು ಗಲಾಟೆ? ನಾವೇನು ಸಂ ಸುಮ್ನೆ ಈ ಕಡೆ ಬಂದಿದ್ದೀವಾ? ಕೆಲಸ ಇರೋದಿಂದಲೇ ಬಂದಿದ್ದು  ?
" ಇಳೀರಿ ಮ್ಯಾಡಮ್  (ಅಕ್ಕ ಆಗಲೇ ಇಳಿದು ಕ್ರಾಸ್ ರೋಡ ಚೆಕ್ ಮಾಡ್ತಾ ಇದ್ಲು. ಜಿ ಪಿ ಎಸ ಬೇರೆ ಹಾಕ್ಕೊ೦ಡಿದ್ಲು) ಲೇಟ ಆಗ್ತಾ ಇದೆ' ಅಂದ. 'ಅರೆ ನಮಗೂ ಮನೇಲಿ ಕೆಲಸ ಇದೆ' (ಅಕ್ಕನಿಗೆ ಇನ್ನೊಂದು ಕೇಕ್ ಆರ್ಡರ್ ಇತ್ತು ). ನೀವು ಎಲ್ಲಿ ಬೇಕು ಅಲ್ಲಿ ಅಲೆದಾಡಿ ಮ್ಯಾಡಮ್, ನನ್ನ ಕಾಸ್ ಕೊಡಿ, ನಾ ಹೊಂಟೋಯ್ತಿನಿ  ಅಂದ. ನಾನು ಸರ್ಕಸ್ ಮಾಡಿ (ಕೇಕ್ ,ಕೊಡೆ , ಪರ್ಸ್ ಬ್ಯಾಗ್ ಎಲ್ಲ ನನ್ನತ್ರ ಇದ್ದವು) ಅವನ ಮೀಟರ್ ದುಡ್ಡು ಕೊಟ್ಟು ಅಷ್ಟೇ ಸರ್ಕಸ್ ಮಾಡ್ತಾ ಕೇಕ್ ಕೊಡೆ ಎಲ್ಲ ಬ್ಯಾಲನ್ಸ್ ಮಾಡ್ತಾ ಇದ್ದೆ. ಸಧ್ಯ ಮಾಲವಿಕಾ ಗೆ ಮನೆ ಸಿಕ್ಕಿ ಬಿಡ್ತು. ನಾವು ಇಳಿದ ಜಾಗದಲ್ಲೇ ಸ್ವಲ್ಪ ಮುಂದಕ್ಕೆ ತಿರುಗಿದ್ರೆ ಅವರ ಮನೆ. ಆಟೋ ದವನ ರಂಪ ಎಲ್ಲ ಹೇಳ್ದೆ. ಕೇಕ್ ಡೆಲಿವರಿ ಆದ ಮೇಲೆ ಓಲಾ ದವರಿಗೆ ಕಂಪ್ಲೈ೦ಟ ಕೊಟ್ಟಳು ಅಕ್ಕ ಫಾರ್ rude behaviour 

ಎಪಿಸೋಡ್ -೩
ಇದು ಹಾಗೆ ದೂರದಲ್ಲಿ ಕೇಕ್ ಡೆಲಿವರಿ ಮಾಡಲು ಹೋಗಿದ್ವಿ. ಇದು ಕೂಡಾ ಓಲಾ ಆಟೋ. ಹತ್ತುವ ಮುಂಚೆನೇ ಹೇಳಿದ್ದೆ ನಮಗೆ ದಾರಿ ಗೊತ್ತಿಲ್ಲ ಅಂತ. ಅವನೇನು ಮಾತನಾಡಲಿಲ್ಲ. ಎಡ್ರೆಸ್ ಅವನ ಮೊಬೈಲ್  ನಲ್ಲಿ ಹಾಕಿಕೊಂಡು ಮ್ಯಾಪ್ ಹಾಕ್ಕೊಂಡ . ಒಂದಷ್ಟು ದೂರ ತಲುಪಿದ  ಮೇಲೆ ಅವನ ಸೆಲ್ ಫೋನ್ ನ ಮ್ಯಾಪ್ ತೋರಿಸೋದು ನಿಂತು ಹೋಯ್ತು. ಆದರೆ ಎಲ್ಲ ಕಡೆ ಬೇರೆ ರಿಕ್ಷಾದವರನ್ನು ಕೇಳಿಕೊಂಡು ಹೋದ. ನಮಗೆ ಹೋಗಬೇಕಾದ ಏರಿಯಾ ಸಿಕ್ಕಿದ್ರು ಮನೆ ಹುಡುಕಲಿಕ್ಕೆ ಕಷ್ಟ ಆಗಿ  ದಾರಿಹೋಕರನ್ನು ಕೇಳಬೇಕಾಯ್ತು, ಅವರೆಲ್ಲ ' ಓ ಆ ಮನೆನಾ? ಅಂತ ಖುಷಿಯಿಂದ ವಿಳಾಸಕ್ಕೆ ಹೋಗುವ ದಾರಿ ಹೇಳಿದ್ರೂ  ಒಂದೆರಡು ಕನ್ಫ್ಯೂಷನ್. 'ಮ್ಯಾಡಮ್ ಎಲ್ಲರಿಗು ಆ ವ್ಯಕ್ತಿಯ ಪರಿಚಯ ಇದೆ' ಅವರು ಫಿಲ್ಮ್ ನವರಾ ಮ್ಯಾಡಮ್? 'ಅಲ್ಲ ಆದರೆ ಸುಪ್ರಸಿದ್ದ ನೃತ್ಯಗಾತಿ' ಅಂದೆ . ಟಿ ವಿ ನಲ್ಲೆಲ್ಲಾ ಬರ್ತಾರಾ? ಬಹುಶ: ಬರ್ತಾರೇನೋ. ನನಗೆ ಅವರ ಹೆಸರ ಪರಿಚಯ ಇದೆ ಆದರೆ ಅವರ ಡ್ಯಾನ್ಸ್ ನಾ ನೋಡಿಲ್ಲ ಅಂದೆ. ಮತ್ತೆ ನಮ್ಮನೇಲಿ ಟಿವಿ ಇಲ್ಲ ಅಂತಲೂ ಹೇಳಿದೆ. ಅವನಿಗೆ ಸಕತ್ ಟೆನ್ಷನ್ ಯಾಕೆ ಮ್ಯಾಡಂ ಟಿ ವಿ ಇಟ್ಟುಕೊಂಡಿಲ್ಲಾ? ಮತ್ತೆ ಬೋರ್ ಆದ್ರೆ ಏನು ಮಾಡ್ತೀರಿ ...ಮುಂತಾದ್ದು, ನಾನು 'ಓದುತ್ತೇನೆ ಅಂದೆ' ಅದು ಒಳ್ಳೇದೇ ಬಿಡಿ ಮ್ಯಾಡಮ್ , ನಮ್ಮನೇಲಿ ಟಿ ವಿ ಇಲ್ಲದಿದ್ದರೆ ಆಗೋದೇ ಇಲ್ಲ ಅಂತ ಸೇರಿಸಿದ.  ಅಷ್ಟ್ರಲ್ಲಿ ಅವರ ಮನೆಗೆ ಹೋಗುವ ಹಾದಿಗೆ ಅರಂಧತೀ  ನಾಗ್ ' ರಸ್ತೆ ಅಂತ ಬೋರ್ಡ್ ನೋಡಿ ಅವನಿಗೆ ಸಿಕ್ಕಾಪಟ್ಟೆ excitement . ಮ್ಯಾಡಮ್ ಶಂಕರ್ ನಾಗ್ ಅವರ ಹೆಂಡ್ರ ಹೆಸರು ' ಅಂತ. ಆ ಜಾಗ ವಂತೂ ನಮ್ಮ ಮನೆಯಿಂದ ಬೇರೆ ಊರು ಅನ್ನುವಷ್ಟು -ಸುಮಾರು ದೂರ ಇತ್ತು. ನಮಗೆ ವಾಪಸ್ ಬರಲು ವೆಹಿಕಲ್ ಸಿಕ್ಕೋದು ಸಂಶಯ  ಇತ್ತು. ಏನು ಮಾಡೋದಪ್ಪಾ ಅಂತ ಯೋಚಿಸ್ತೀರ ಬೇಕಾದ್ರೆ. ಆಟೋ ದವನೇ ಐಡಿಯಾ ಕೊಟ್ಟ. ಐದು ನಿಮಿಷ ಬಿಟ್ಟು ಆಟೋ ಬುಕ್ ಮಾಡಿ. ನಾನು ಇದೆ ಏರಿಯಾದಲ್ಲಿದ್ದೇನೆಂತ  ಆ ಆರ್ಡರ್ ನನಗೆ ಬರುತ್ತೆ ಅಂತ. ನನಗು ಸಮಂಜಸವೆನಿಸಿತು. ಅಲ್ಲಿ ಆಗಲೇ ಫಂಕ್ಷನ್ ನಡಿತಾ ಇತ್ತು , ಬಂದವರೆಲ್ಲ ಅವರವರ ವಾಹನಗಳಲ್ಲೇ ಬಂದಿದ್ದರು. ಜನನಿಬಿಡ ಪ್ರದೇಶ ... ಆದರೆ ಅಲ್ಲಿ ನೆಟ್ವರ್ಕ್  ಇಲ್ಲದೆ ನಮ್ಮ ಫೋನ್ ಕನೆಕ್ಟ್ ಆಗ್ತಾನೆ ಇರಲಿಲ್ಲ. ಆಟೋ ದವನು ಇರಲಿ ಬಿಡಿ ಮ್ಯಾಡಮ್ ಸುಮ್ನೆ ಮೀಟರ್ ಹಾಕ್ಕೊಂಡು  ಕರೆದುಕೊಂಡು ಹೋಗ್ತೀನಿ ಅಂದ . ಸರಿ ಅಂತ ನಾವು ಆರಾಮಾಗಿ ಅವನ ರಿಕ್ಷಾದಲ್ಲೇ ಬಂದ್ವಿ.  ಕೇಕ್ ಬೆಲೆಗಿಂತ ನಮ್ಮ ಟ್ರಾವೆಲ್ ಚಾರ್ಜ ಜಾಸ್ತಿ ಇತ್ತು. ಈ ತರಹ ಹಲವಾರು ಆರ್ಡರ್ ಬಂದಿವೆ :-) 
ಇನ್ನು ಕೆಲವು ಮುಂದಿನ ಸಲ. ಒಂದೆರಡು ಕೆಟ್ಟ ಅನುಭವ ಬಿಟ್ರೆ ನಮಗೆ ಸಿಕ್ಕಿದ ಆಟೋ ದವರು ಒಳ್ಳೆಯವರು

ಇಲ್ಲಿವೆ ಕೆಲ ಹಳೆ ಆಟೋ ಕತೆಗಳು
http://malathisanchiyinda.blogspot.in/2012/03/blog-post.html

http://malathisanchiyinda.blogspot.in/2014/05/blog-post_11.html