September 29, 2024

ಗೋದಿ ನಾಗರ ಕಂಡಿರಾ??

 


ಉಜಿರೆಯ ಶಿವಾಜಿನಗರದಲ್ಲಿ ನಾವು ಮೊದಲಿಗೆ ವಾಸ ಆಗಿದ್ದೆವು. ಅಲ್ಲಿ ಒಂದು ಪುಟ್ಟ/ಮಿಡಿ ಗೋದಿ ನಾಗರ ಹಾವು ಇತ್ತು. ಚೆಂದದ ಸಾವಯವ ತರಕಾರಿ ತೋಟ ಬೆಳೆಸಿದ್ದೆ. ನನಗೆ ಆಣ್ಣಿ. ಗೌಡ ಎನ್ನುವವರ ಸಹಾಯ ಇತ್ತು. ಅಲಸಂದೆ, ಬೆಂಡೆ, ತೊಂಡೆಕಾಯಿ ಮುಂತಾದವು ಬೆಳೆಸಿದ್ದೆ. independent ಮನೆಯಾಗಿದ್ದು, ಆ ಜಾಗದಲ್ಲಿ ಹಲಸಿನ ಮರ ಆಗಲೇ  ಇತ್ತು. ದ್ಧಾರಳವಾಗಿ ಚಿಪ್ಸ್ ಮಾಡಿ ತಿಂಡಿದ್ದೇವೆ...ಈ ಗೋದಿ ನಾಗರ ನನ್ನ ಸುತ್ತ ಮುತ್ತ ತಿರುಗಾಡುತ್ತಿತ್ತು. ಗಾಳಿಗೆ ನನ್ನ ಬಟ್ಟೆ ಹಾರಾಡುವಾಗ ಹೆಡೆ ಎತ್ತುತ್ತಿತ್ತು ಅನ್ನೋದು ಬಿಟ್ಟರೆ ಬಾರಿ ಸಾಧು ಪ್ರಾಣಿ. ನಾನೇ ಕೋಲಿನಿಂದ ಚುಚ್ಚಿ 'ಆ ಕಡೆ ಹೋಗೋ..ನನ್ನ ಕಾಲ ಬುಡ ಬಂದು ಸಾಯ್ತಿಯಾ ಎನ್ನುತ್ತಿದೆ. ಮತ್ತು ಅಡಿಗೆಯಾಗಿ ಒಗ್ಗರಣೆ ಹಾಕುವ ಟೈಮ್ ಗೆ ಅಡುಗೆ ಮನೆಯ ತೊಲೆ ಮೇಲೆ ಹಾಜರ್...ಪುನಃ ಕೋಲಿನಿಂದ..'ನನ್ನ ಸಾರು/ಸಾಂಬಾರ್ ಒಳಗೆ ಬೀಳ್ತಿಯ' ಅಂತ ಕೋಲಿನಿಂದ ಹೊರಗೆ ಹೋಗಲು ಪ್ರೇರೇಪಿಸುತ್ತಿದ್ದೆ.
ಅಮ್ಮ ಅಂತೂ ಹೆದರಿ ದಿನಾ ಫೋನ್ ಮಾಡೋರು...ನಾವು ಜೀವದಿಂದಿವಾ ಇಲ್ಲವಾ ಅಂತ. ಆ ಮೇಲೆ ಮನೆ ಮಾಲೀಕರಿಗೆ ಪುನಃ ಉಜಿರೆ ಗೆ ವರ್ಗವಾದಾಗ, ನಾವು ಕೆ ಟಿ ಗಟ್ಟಿ ಮಾಮನವರ ಬಾಡಿಗೆಗೆ ಇಟ್ಟ, ಮೇಲಿನ ಮನೆಗೆ ಶ್ರೀಕಾಂತ್ shift ಮಾಡಿದರು. ನಾನು ಮುಂಬೈಗೆ ಹೋಗಿದ್ದೆ...ಹಾಗಾಗಿ ನನ್ನ ಪುಟ್ಟ ಮಿಡಿ ನಾಗರ ನಿಗೆ ಬೈ ಹೇಳಲು ಆಗಲಿಲ್ಲ.

ಉಜಿರೆಯಲ್ಲಿ ಕೊನೆ ದಿನ. ಬೆಳಿಗ್ಗೆ ಬೇಗನೆ ಎದ್ದು ಪಕ್ಕದಲ್ಲಿದ್ದ ಡಾ. ವೀರೇಂದ್ರ ಹೆಗ್ಗಡೆಯವರ ತೋಟಕ್ಕೆ ಹೋದೆ. ನಾವಲ್ಲಿ ಇರುವ ತನಕ ದಿನಾ ಸಂಜೆ ಅಲ್ಲಿ walk. ನೆಂಟರು ಇಷ್ಟರು ಬಂದಾಗ ಅವರನ್ನೆಲ್ಲ ಅಲ್ಲಿ ಕರೆದುಕೊಂಡು ಒಂದು ಫೋಟೋ shoot. ಕೊನೆಯ ತಿಂಗಳು ಅಲ್ಲೊಂದು ಗೋದಿ ನಾಗರ ಹಾವು ಬರುತ್ತಿತ್ತು. ಸುಮ್ಮನೆ ಒಂದು ಕಡೆ ಇರುತ್ತಿತ್ತು. ನಾನು ಅದಕ್ಕೆ ತುಂಬಾ ತೊಂದರೆ ಕೊಟ್ಟಿದ್ದಿದೆ. ಕಡ್ಡಿಯಿಂದ ಕೊರೆದು ನೋಡಿದ್ದಿದ್ದೆ...ಜೀವಂತ ವಾಗಿದೆಯೋ ಅಂತ...ಅದು ಮಿಸುಕಾಡುತಿತ್ತು ವಿನಃ ಭುಸ್ ಅನ್ನಲಿಲ್ಲ, ಹೆಡೆಯು ಎತ್ತುತ್ತಿರಲಿಲ್ಲ. ಪಾಪ ಏನು ಕಾಯಿಲೆಯೊ, ಏಟಾಗಿತ್ತೋ, ವಯಸಾಗಿತ್ತೋ ಏನೋ. ಆಮೇಲೆ ಸುಮ್ಮನೆ ನಾನು ಕೂತ ಕಡೆ ಬಂದು ಸಿಂಬಿ ಸುತ್ತಿ ಅಲ್ಲಿರಿತ್ತುತ್ತು. ಬೆಳಿಗ್ಗೆ ನಮಗೆ ಕೆ ಟಿ ಗಟ್ಟಿ ಮಾಮನವರಲ್ಲಿ ಬೆಳಗಿನ ತಿಂಡಿಗೆ ಆಹ್ವಾನ ವಿತ್ತು. ಅದಕ್ಕೆ ನಾಗೊಬಾ (ನಾನಿಟ್ಟ ಹೆಸರು) ಬೈ ಹೇಳುವಾ ಅಂತ ಹೋದೆ. ಬೆಳಿಗ್ಗೆ ಅಲ್ಲಿ ಬರುತ್ತಾ ಅಂತ ಗೊತ್ತಿರಲಿಲ್ಲ ಆದರೂ ಹೊರಟೆ. ಅದು ಯಾವತ್ತಿನ ಹಾಗೆ ಅಲ್ಲಿ ಕುಳಿತಿತ್ತು. ನಾನು 'ನಾವು ಇಲ್ಲಿಂದ ಹೋಗ್ತಾ ಇದ್ದೇವೆ ನಾಗೋಬಾ...ಬೈ ಅಂದು ಅದರ ತಲೆ ಮೇಲೆ ನೇವರಿಸಿದೆ. ಸ್ವಲ್ಪ ಹೊತ್ತು ಇದ್ದು ನಿಧಾನಕ್ಕೆ ಅಲ್ಲಿಂದ ಹರಿದು ಹೋದ. ಅದು ಮರೆಯಾಗುವ ತನಕ ಅಲ್ಲಿದ್ದೆ. ಆಮೇಲೆ ನಾವು 2 ವರೆ ವರ್ಷ ಉಡುಪಿ...ಆಮೇಲೆ ಶ್ರೀಕಾಂತ್ ಮತ್ತು ಮಿತ್ರರು ಬ್ಯಾಂಕ್ ನ golden hand shake ಪಡೆದು..ಬೆಂಗಳೂರಿಗೆ ಬಂದು, ನಮ್ಮದೇ ಸಂಘ ಸಂಸ್ಥೆ , ಮನೆ ಮಾಡಿ ಕೊಂಡು 25 ವರ್ಷಗಳಾದವು..
ಬಾಲ್ಕನಿ ಗಿಡಗಳೊಂದಿಗೆ ಸಮಯ ಕಳೆಯುವಾಗ ನನಗೆ ಆ ಹಾವಿನ ನೆನಪಾಗುತ್ತೆ ಕೆಲವೊಮ್ಮೆ...



ಇದೆಲ್ಲ ಯಾಕೆ ನೆನಪಾಯಿತು ಎಂದರೆ ಮೊನ್ನೆ you tube ನಲ್ಲಿ ಹಾವು ಹಿಡಿಯುವವ ಯುವಕ ಒಬ್ಬ educating ನೆಪದಲ್ಲಿ ವಿಡಿಯೋ ಮಾಡುತ್ತಿದ್ದಾಗ ನಾಗರ ಹಾವು ಅವನ ಹಿಡಿತದಲ್ಲಿರುವಾಗಲೇ ಸಡನ್ ಟ್ವಿಸ್ಟ್ ಆಗಿ ಅವನ ಕಾಲನ್ನು ಕಚ್ಚಿತು. ಅವನಿಗೆ ಗೊತ್ತಾಗುವಾಗ ವಿಳಂಬವಾಗಿ... ತೀರಿ ಬಿಟ್ಟ. ಪಾಪ 23 ವರ್ಷದ ಹುಡುಗ...

ಅಂದ ಹಾಗೆ ನಮ್ಮ ತೋಟದಲ್ಲಿ ಒಂದು ಮಿರಿ ಮಿರಿ ಮಿಂಚುವ ಕಾಳಿಂಗ ಇದ್ದಾನೆ...❤️🙂
ಚಿತ್ರ from the web...🙏🙏

September 20, 2024

ಮುಂಜಾನೆ ಪ್ರಲಾಪ

 ನಿನ್ನೆ ರಾತ್ರಿ ಮಲಗುವ ಮುಂಚೆ 'ನಾಳೆ breakfast ಗೆ ಏನೂ ಐಡಿಯ ಇಲ್ಲ...ಏನು ಮಾಡಲಿ ಅಂದಾಗ ಇವರು style ಆಗಿ, ನಾನು ಮಠಕ್ಕೆ volunteer ಆಗಿ ಹೋಗ್ತಿದ್ದೀನಿ, ಅಲ್ಲೇ bf ಎಂದಾಗ ಖುಷಿಯಿಂದ ಒಳ್ಳೆ ನಿದ್ದೆ ಮಾಡಿದೆ.

ಬೆಳ್ಳ ಬೆಳಿಗ್ಗೆ ತಮ್ಮನ bf ಫೋಟೋ ಬಂದಾಗ ಖುಷಿಯಿಂದ ಹೀಗೆ ಮೆಸೇಜ್ ಮಾಡಿದೆ 👇


ಶ್ರೀಕ್ಕಾಂತ್  ಎದ್ದು ಬಿಟ್ಟು..ಹೇ ಲೇಟ್ ಆಯ್ತು ಬ್ರೆಕ್ಫ್ಹಾಸ್ಟ್ ಗೆ ಏನಾದ್ರೂ ರೆಡಿ ಮಾಡಿದೆಯ ಅಂದ್ರೆ 'ಇಲ್ಲ' ಅಂದೆ.
ಮಠ ದ ಕೆಲಸ ಅಂದ್ರೆ ಅಕ್ಕಿಯಿಂದ ಮಾಡಿದ ಐಟಂ ತಿಂನಂಗಿಲ್ಲ. ಚಪಾತಿ ಹಿಟ್ಟು ಇದೆ. ಚಟ್ನಿ ಮಾಡಲಾ ಅಂದ್ರೆ 'ಓ' ಅಂದ್ರು. ನನಗೆ ವಿಪತೀತ ಉರಿದು ಹೋಯ್ತು... 'ಇಲ್ಲ ಹೊರಗಡೆ ತಿಂತೇನೆ' ಅಂತಾರೆನೋ ಅಂದುಕೊಂಡು. ನನಗೆ ಇತ್ತೀಚಿಗೆ ಬೆಳಗಿನ ತಿಂಡಿ ಮಾಡೋದಂದ್ರೆ ಕಿರಿಕಿರಿ....
ಸಿಟ್ಟಿನಿಂದಲೇ ಚಪಾತಿ ಚಟ್ನಿ, ಸಿಹಿ ಸುರನೋಳಿ ಮಾಡಿದೆ. 


ಅಕ್ಕ ಚಿತ್ರಾನ್ನ ಮಾಡಿ,  ಹೊರಗಿನಿಂದ ವಡೆ ತೆಗೆದುಕೊಂಡು ಬಂದ್ಲು 



ಎಂಬಲ್ಲಿ ಇವತ್ತಿನ ಬೆಳಗಿನ ತಿಂಡಿಯ ವಿಲಾಪ...😧😧😞
ವಿ.ಸೂ : ನಾವು ಹೊರಗಿನಿಂದ ವಡೆ, ಇಡ್ಲಿ ಮುಂತಾದು ತಂದ್ರೆ ಚಟ್ನಿ ಮನೆಯಲ್ಲೇ ಮಾಡೋದು...ಚಪಾತಿ(not in pic) ಗೆ ಮಾಡಿದ ಚಟ್ನಿ ಸೂಪರ್ ಟೇಸ್ಟಿ ಯಾಗಿತ್ತು..ಆದ್ದರಿಂದ ವಡೆ ಬಂತು....😁👍

September 16, 2024

ಪೂರಿ ಕಿ ಪೂರಿ ಕಹಾನಿ

 


 ಹತ್ತನೇ ತರಗತಿಯಲ್ಲಿದ್ದಾಗಿನಿಂದ ಪೂರಿಗೆ ಹಿಟ್ಟು ಕಲಿಸುವುದು ನನ್ನ ಕೆಲಸ ಆಗಿತ್ತು. ಒಳ್ಳೆ ಗಟ್ಟಿಯಾಗಿ ಕಲೆಸುತ್ತಿದ್ದೆ. ಗಟ್ಟಿ ಹಿಟ್ಟು ಕಲೆಸಿದರೆ ಪೂರಿ ಹೆಚ್ಚು ಎಣ್ಣೆ ಹೀರೋದಿಲ್ಲ. ಮದುವೆಯಾದ ಮೇಲೆ ಮಾವನ ಮನೆಯಲ್ಲೂ ಅದು ನನ್ನ ಪಾಲಿಗೆ ಬಂತು. ಅಮ್ಮನ ಮನೆಗೆ ನನ್ನ ಪದವಿ ಪರೀಕ್ಷೆ, ತಮ್ಮ ತಂಗಿರಯ ಮದುವೆ, ನನ್ನ ಮಕ್ಕಳ ರಜೆಯಲ್ಲಿ ಅಮ್ಮನ ಮನೆಗೆ ಹೋದಾಗ ಒಂದು ದಿನ ನಾನು ಕಲಿಸಿದ ಹಿಟ್ಟಿನ ಪೂರಿ ಮಾಡುವ ಸಂಭ್ರಮ

ಈಗ ವಯಸ್ಸಾಗುತ್ತಿದ್ದ ಹಾಗೆ ಅಷ್ಟು ಗಟ್ಟಿ ಹಿಟ್ಟು ಕಲಿಸಲು ಆಗ್ತಿಲ್ಲ. ಮೊನ್ನೆ ಪೂರಿ  ಗೆ ಹಿಟ್ಟು ಕಲಿಸಲು ಅರ್ಧ ಗಂಟೆ ತಗುಲಿತು ..ಬಲಗೈ , ಎಡಗೈ ಪ್ರಯೋಗ ಮಾಡುತ್ತಿದ್ದನ್ನು ನೋಡಿ  ಶ್ರೀಕಾಂತ್ ಹೌಹಾರಿ, ಮಧ್ಯಾಹ್ನ ಕ್ಕೆ ಆಫಿಸ್ ಗೆಸ್ಟ್ ಗಳಿಗೆ ನಾನು ಬಿಸಿ ಬೆಳೆ ಭಾತ್ ಮಾಡುವ ಕಾರ್ಯಕ್ರಮ ರದ್ದುಗೊಳಿಸಿ, ಬೇಡ, ಹೊರಗಿನಿಂದ ಆರ್ಡರ್ ಮಾಡ್ತೇನೆ ಅಂದ್ರು... 😁😁
ಶ್ರೀಕಾಂತ್ ಅಣ್ಣ ನಮ್ಮಲ್ಲಿದ್ದರು ಕೆಲವು ದಿನ...ಇಡ್ಲಿ, ದೋಸೆ ಉಪ್ಪಿಟ್ಟು ಎಲ್ಲ ಮಾಡಿ ಆಗಿತ್ತು, ಸೋ ಪೂರಿ ಮಾಡುವ ಅಂತ. ಅವರು ಊರಲ್ಲಿ ಒಬ್ಬರೇ ಇರೋದು. ಅವರ ಪತ್ನಿ- ನನ್ನ ಒರಗಿತ್ತಿ  ಕಾಲವಾಗಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಲುಗೆ ಮದುವೆಯಾಗಿ ಬೆಂಗ್ಳೂರಿನಲ್ಲಿದ್ದಾರೆ..
ನಾವು ಅಂಗಡಿ ಅಥವಾ ರಾಯಬಾಗ್ ನಿಂದ ಜವೆ ಗೋದಿ  ತಂದು ಇಲ್ಲಿ ಗಿರಣಿಯಲ್ಲಿ ಹಿಟ್ಟು ಮಾಡಿಸುವುದು. ಹಾಗಾಗಿ ಪೂರಿ ಗೆ ಚೆಂದದ ಬಣ್ಣ. ಹಿಟ್ಟಿಗೆ ಸ್ವಲ್ಪವೇ ಸ್ವಲ್ಪ ಕರಿ ಮೆಣಸಿನ ಪುಡಿ ಬೆರೆಸುತ್ತೇನೆ. 👍🙂

September 11, 2024

yummy tomato recipe


Just before the COVID lockdown, I found myself with a bounty of juicy, red, utterly ripe tomatoes. I decided to cook this recipe shared by my mumbai brother ,thinking it would last me a while. But, oh dear! The dish was devoured in no time, leaving me wondering... WTF (What The Fruit?! 😂) indeed! I guess you could say it was a recipe for success... 
we decided to drop off Niha to mysuru and i.prepared this dish for her lunch
below is our whatsapp engagement
😀😀












curry leaves are the game changers...dont add too much. just follow my recipe and you will not regret it. tasty side for chapathi/phulka, dose or paddu..👍👍


😀😀

September 8, 2024

Love for trees

 



this tree had cute tiny orange birds on it. expand the pic and tell me can u see them??!!