February 28, 2011

ಮೇಲುಕೋಟೆಯಲ್ಲಿ ನಾವು

ಯಾವತ್ತಿನ ಹಾಗೆ ಇನ್ನೊಂದು unplanned visit. ಈ ಸಲ ಮೇಲುಕೋಟೆಗೆ.
ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕಿನ ಹೋಬಳಿ.ಮೇಲುಕೋಟೆ 3589’ ಎತ್ತರದ ತಾಲೂಕಿನ ಅತಿ ಎತ್ತರದ ಗುಡ್ಡ ಪ್ರದೇಶ. ಗ್ರಾನೈಟ್ ಶಿಲೆಗಳಿಂದ ಕೂಡಿದ ಸಮೃದ್ಧ ಬೆಟ್ಟ. ಬೆಂಗಳೂರಿನಿಂದ ಸಾಧಾರಣ 130 ಕಿ.ಮಿ

ಚೆಲುವನಾರಾಯಣ ಸ್ವಾಮಿ ದೇವಾಲಯ ಮೇಲುಕೋಟೆಯ ಮುಖ್ಯ ದೇವಾಲಯ. ಚಚೌಕಾಕಾರದ ವಿಸ್ತಾರವಾದ ಕಟ್ಟಡ. ಸುತ್ತಲೂ ಕೈ ಸಾಲೆ, ಚಿಕ್ಕ ಗುಡಿಗಳು, ಯjnya ಶಾಲೆಗಳಿವೆ.



ರಾಮಾಯಣ, ಭಾಗವತ ಮತ್ತು ಮಹಾಭಾರತದ ಕಥೆಗಳನ್ನು ಕಂಬಗಳಲ್ಲಿ,ಕಣ್ಣಿಗೆ ಕಟ್ಟುವಂತೆ ಕೆತ್ತಲಾಗಿದೆ. ಇಲ್ಲಿ ಕೆಲವು ಚಿತ್ರಗಳನ್ನು ಹಾಕುತ್ತೇನೆ. ದೇವಸ್ಥಾನದ ವಿವರಗಳು ಜಾಲತಾಣದಲ್ಲಿ ಸಾಕಷ್ಟಿವೆ. ಗರ್ಭಗುಡಿಯಲ್ಲಿ ಚಿತ್ರಿಸುವುದು ನಿಶೇಧಿಸಲಾಗಿತ್ತು.









 





ಕೌಂಸ ವಧೆ
ದೇವಸ್ಥಾನದ ಬೀದಿಯಲ್ಲೆಲ್ಲ ಸುತ್ತ ಮುತ್ತ ಹಲವಾರು ಗುಡಿ, ಮಂಟಪ ಹಾಗೂ ಕೊಳಗಳಿವೆ. this is one of the unfinished manTapa




ಅಕ್ಕ ತಂಗಿ ಕೊಳದ ಎದುರಿಗೆ

ಯೋಗಾನರಸಿಂಹಸ್ವಾಮಿ ದೇವಸ್ಥಾನದ ಒಳಗಿನ ಕಿಟಕಿಯಿಂದ
ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಗೋಪುರ
ಮೇಲಕ್ಕೇರುವ ಮೆಟ್ಟಿಲು ಪ್ರದೇಶ


 


ಶ್ರೀಕಾಂತ್ ಅರಸಿನ ಬಣ್ಣದ ದಾರದಲ್ಲಿ ಕಟ್ಟಿದ ಒಂದು ತಾಯಿತ ಕೊಂಡು ಕೊರಳಿಗೆ ಹಾಕ್ಕೊಂಡ್ರು, ಕಾಣಿಸುತ್ತ? :-)



ಬೆಳಿಗ್ಗೆ ದೋಸೆ ತಿಂದು 8.30 ಗೆಲ್ಲ ಮನೆ ಬಿಟ್ಟಿದ್ದು.ಅಡಿಗೆ ಮಾಡಕ್ಕೆ ಪುರುಸೊತ್ತು ಇರಲಿಲ್ಲ. ಮೇಲುಕೋಟೆಯಲ್ಲಿ ಪುಷ್ಕಳವಾಗಿ ಸಿಗುವ ಮಸಾಲಾ ನೀರು ಮಜ್ಜಿಗೆ ಕುಡಿದೆವು, ತುಂಬ ಚೆನ್ನಾಗಿತ್ತು ಬಿಸಿಲಿಗೆ! ಮಧ್ಯಾನ್ಹ  ಅಲ್ಲಿ ಪ್ರಸಾದ ಭೋಜನ ಎಂದು ಬೋರ್ಡ್ ನೋಡಿ ಅಲ್ಲಿಗೆ ಹೋದೆವು.

we had our afternoon lunch in that pink structure!
20ರೂ ನ ಟಿಕೆಟ್ ಪಡೆದು (ಅಂದರೆ ಕೇವಲ ನಲವತ್ತು ಜನರಿಗಾಗಿ)ಊಟ ಮಾಡುವ ವ್ಯವಸ್ಥೆ.ಮೊದಲು ಟಿಕೆಟ್ ಖಾಲಿಯಾಗಿದೆ ಅಂದರೂ, ನಾಲ್ಕೆ ಜನ ತಾನೆ?? ಸಾರು ಪಲ್ಯ adjust ಮಾಡ್ತೀರಾ ಅಂತ ಕೇಳಿ ನಮಗೆ ಪಕ್ಕದ ಬಾಗಿಲಿನಿಂದ ಒಳಗೆ ಬಿಟ್ಟರು. ಆಗಲೇ ಹಾಲ್ ಭರ್ತಿಯಾಗಿತ್ತು.  ಅನ್ನ,ಬಿಸಿ ಬಿಸಿ ಸಾರು, ಸೀಮೆ ಬದನೆ ಪಲ್ಯ ಹಸಿದ ಹೊಟ್ಟೆಗೆ ಸಖತ್ ಆಗಿತ್ತು. adjust ಮಾಡುವ ಪ್ರಮೇಯ ಬರಲೇ ಇಲ್ಲ. ಹೊಟ್ಟೆ ತುಂಬ ಊಟ ಬಡಸಿದರು. ನಮ್ಮ ತಟ್ಟೆ ನಾವೆ ಎತ್ತಿಕೊಂಡು ಹೊರಗಿಡವ ವ್ಯವಸ್ಥೆ. ನಮಗೆ ಟಿಕೆಟ್ ಇಲ್ಲದೇ ಊಟ ಬಡಿಸಿದರು ಅದಕ್ಕೆ ಶ್ರೀಕಾಂತ್ ಅವರಿಗೆ ೨೫ ಕೆ.ಜಿ ಅಕ್ಕಿಗೆ ಆಗುವಷ್ಟು ಹಣ ದೇಣಿಗೆಯ ರೂಪದಲ್ಲಿ ಕೊಟ್ಟರು.
ಪುಷ್ಕರಣಿ/ಕಲ್ಯಾಣಿ ಬಳಿ ಸ್ವಲ್ಪ ಸಮಯ spend ಮಾಡಿ,ಮೂರು ಗಂಟೆಯ ಹೊತ್ತಿಗೆ ನಾವು ಶ್ರೀ ಸುರೇಂದ್ರ ಕೌಲಗಿಯವರನ್ನು ಭೇಟಿ ಮಾಡಲು ಹೋದೆವು. prior appointment ಏನೂ ತೆಗೆದುಕೊಂಡಿರಲಿಲ್ಲ, ಹಾಗೂ ಹಿರಿಯ ಜೀವ ಊಟದ ನಂತರ ವಿಶ್ರಮಿಸುತ್ತಿರಬಹುದೆಂದು ಕೊಂಡು ಅವರ ಮನೆ ಬಾಗಿಲಿನ ತನಕ ಹೋದೆವು. ಬಾಗಿಲು ತೆರೆದೇ ಇತ್ತು. ಸಣ್ಣಕ್ಕೆ ಬಾಗಿಲಿನ ಸದ್ದು ಮಾಡಿದಾಗ ಅವರ ಮಗ ಬಂದರು. ನಮಗೆ ಒಳಗೆ ಕರೆದು, ನಾವು ಬಂದ ವಿಚಾರ ಕೇಳಿದರು. ಅವರ ತಂದೆ ಏಳುವ ಹೊತ್ತಾಯಿತೆಂದು ಕೂತುಕೊಳ್ಳಲಿಕ್ಕೆ ಹೇಳಿದರು. ಹಿರಿಯ ಕೌಲಗಿಯವರು ತಮ್ಮ ಸಂಸ್ಥೆ ಜನಪದ ಸೇವಾ ಟ್ರಸ್ಟ್ ಬಗ್ಗೆ ಹೇಳಿದರು, ನಮ್ಮ ಸಂಸ್ಥೆಗಳ ಬಗ್ಗೆ ತುಂಬ ಆಸ್ಥೆಯಿಂದ ಕೇಳಿಸಿಕೊಂಡರು.


ಹಿರಿಯ ಗಾಂಧಿವಾದಿ,(who follows the sarvodaya way of life)ಜಾನಪದ ಸೇವಾ ಟ್ರಸ್ಟ್ ನ ರುವಾರಿ ಶ್ರೀ ಸುರೇಂದ್ರ ಕೌಲಗಿಯವರ ಮನೆಯಲ್ಲಿ.
ಅವರ ಮನೆಯಲ್ಲಿನ ಹೆಂಗಸರು ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರಿಂದ, ಶ್ರೀ ಕೌಲಗಿ ಅವರ ಮಗ, ಎಷ್ಟು ಬೇಡವೆಂದರೂ ಸಕ್ಕರೆ ಹಾಕಿದ ಬಿಸಿ ಹಾಲು , ಬಾಳೆ ಹಣ್ಣು ತಂದು ಕೊಟ್ಟರು. ಹಾಲು ಬಿಸಿಯಾಗುತ್ತಿದ್ದ ಹಾಗೆ ನಾವು ಅವರ ಬಳಿಯಿದ್ದ ದೊಡ್ಡ ಅಲ್ಬಂ ನಲ್ಲಿ ಶ್ರೀ ಕೌಲಗಿಯವರು  ದೇಶ ವಿದೇಶದ ಗಣ್ಯರೊಂದಿಗಿನ ಹಳೆಯ ಕಪ್ಪು-ಬಿಳುಪಿನ ಫೋಟೊ ಗಳನ್ನು ನೋಡುತ್ತ ,ಸಮಯ ಸರಿದಿದ್ದೆ ತಿಳಿಯಲಿಲ್ಲ. ಅವರ ಮನೆಯ ಹಿಂಬದಿಯಲ್ಲಿ ಪುಟ್ಟ ಕೈತೋಟವಿದ್ದು, ಅಲ್ಲಿ ಹೂವು ತರಕಾರಿ ಬೆಳೆಸಿದ್ದಾರೆ.  ಮನೆಯೊಳಗಡೆ ತುಂಬ ತಂಪಾಗಿತ್ತು.ಮೊಮ್ಮಗ ಹುಟ್ಟಿದ ಸಂಭ್ರಮದಲ್ಲಿದ್ದರವರು. ನಾವು ಅವರಿಗೋಸ್ಕರ ನಮ್ಮ ಊರಿನ (ತೀರ್ಥಹಳ್ಳಿಯ)ಕೆಂಪು ಅಕ್ಕಿ ತೆಗೆದುಕೊಂಡು ಹೋಗಿದ್ದೆವು.

ಸುರೇಂದ್ರ ಕೌಲಗಿ ಹಾಗೂ ಅವರ ಮಗ ಸಂತೋಷ ಅವರೊಂದಿಗೆ ನಾವು
:-)

February 17, 2011

ಹರಿವೆ ಸೊಪ್ಪಿನ ಸಾಸಿವೆ - Recipe

mr and mrs ಸೀನಣ್ಣ. ತೀರ್ಥಹಳ್ಳಿಯ ಕೆಂಪು ಹರಿವೆ ಸೊಪ್ಪು the Best!!

ಇದೇ ಶಿರ್ಷಿಕೆಯಡಿ ನನ್ನ ಬ್ಲಾಗ್ ನಲ್ಲಿ ಇನ್ನೊಂದು ಪೋಸ್ಟ ಇದೆ. ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ ಓದಬಹುದು!

http://malathisanchiyinda.blogspot.com/2010/06/blog-post.html

 ಆಮೇಲೆ ಸಾಸಿವೆ ಮಾಡುವ ವಿಧಾನವನ್ನು ಓದಿ. ಓರ್ವ anonymous commentiಗರು ಸಾಸಿವೆ ಮಾಡುವ ವಿಧಾನ ಕೇಳಿದ್ದರು. ಈ recipe ಅವರಿಗಾಗಿ, on demand!! . :-)


ಹರಿವೆ ಸೊಪ್ಪು - 3 ಕಟ್ಟು
ತಾಜಾ ತೆಂಗಿನ ಕಾಯಿ ತುರಿ - 4 ದೊಡ್ಡ ಚಮಚ ಅಥವಾ 1/2 ತೆಂಗಿನಕಾಯಿ
ಸಾಸಿವೆ - 2 ಟೀ. ಚಮಚ
ಹುಣಸೆ ಬೀಜದ ಗಾತ್ರದಷ್ಟೆ ಹುಣಸೆ ಹುಳಿ :-)

ಹಸಿಮೆಣಸಿನ ಕಾಯಿ ನಾಲ್ಕೈದು, ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಕೆಂಪು ಒಣ ಮೆಣಸಿನ ಕಾಯಿ

ಸೊಪ್ಪನ್ನು ಚೆನ್ನಾಗಿ ತೊಳೆದು,ಸಣ್ಣಕ್ಕೆ ಕತ್ತರಿಸಿ.ಇದಕ್ಕೆ ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಿ, ಸ್ವಲ್ಪ ಉಪ್ಪು ಬೆರೆಸಿ, ಮುಚ್ಚಿ, ಒಲೆಯ ಮೇಲಿಡಿ. ಸಾಧಾರಣವಾಗಿ ಅದು ಬೇಯುತ್ತಾ ನೀರು ನೀರು ಆಗತ್ತೆ ಹಾಗೇ ಸೊಪ್ಪಿನ ಪ್ರಾಮಾಣ ನೂ ಕಡಿಮೆ ಆಗುತ್ತೆ. ಅದಕ್ಕೆ ಉಪ್ಪು ಆದಷ್ಟು ಕಡಿಮೆ ಹಾಕಿ. ಬೇಕಾದ್ರೆ ರುಚಿ ನೋಡಿ ಲಾಸ್ಟ್ ಲ್ಲಿ ಬೆರೆಸ ಬಹುದು. ತುಂಬ ಹೊತ್ತು ಬೇಯಿಸಬೇಡಿ. ಅದರಿಂದ ಪೌಷ್ಠಿಕಾಂಶ ನಾಶವಾಗುತ್ತೆ.

ಬೆಂದ ಸೊಪ್ಪಿನಿಂದ ಮೆಣಸಿನಕಾಯಿಯನ್ನು ಆರಿಸಿ ತೆಗೆದು ಕಾಯಿ ತುರಿಗೆ ಹಾಕಿ, ಚಿಕ್ಕ ಹುಣಸೆ ತುಂಡಿನೊಟ್ಟಿಗೆ ತರಿ ತರಿಯಾಗಿ ರುಬ್ಬಿ. ಕೊನೆಯಲ್ಲಿ ಸಾಸಿವೆಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿಟ್ಟು, ರುಬ್ಬಿದ ಪದಾರ್ಥಕ್ಕೆ ಬೆರೆಸಿ-(ಮಿಕ್ಸಿ ಅಥವಾ ರುಬ್ಬುವಕಲ್ಲಲ್ಲಿ ) ಒಂದು ಅಥವಾ ಎರಡು ಸುತ್ತು ತಿರುವಿ. ತಣ್ಣಗಾದ ಬೆಂದ ಸೊಪ್ಪಿಗೆ ಬೆರೆಸಿ. ಸಾಸಿವೆ, ಕರಿಬೇವು ಮತ್ತು ಒಣ ಕೆಂಪು ಮೆಣಸಿನ ಒಗ್ಗರಣೆ ಕೊಡಿ. ಸಾಸಿವೆ readdy. ಇದು ತಣ್ಣಗಿನ ಪದಾರ್ಥ. ಬೇಸಿಗೆಯಲ್ಲಿ (summer) ತುಂಬ ಹಿತವಾಗಿರುತ್ತೆ. ಕೆಲವರು ಸಾಸಿವೆಯನ್ನು ಹಸಿಯಾಗೆ ಹಾಕುತ್ತಾರೆ. ಹಸಿ ಸಾಸಿವೆ ಬಳಸುವುದಾದರೆ ಒಂದುವರೆ ಸ್ಪೂನ್ ಸಾಸಿವೆ ಹಾಕಿ ಸಾಕು.but i like my version of ಹರಿವೆ ಸೊಪ್ಪಿನ ಸಾಸಿವೆ.

ಸೊಪ್ಪು ತೀರ್ಥಹಳ್ಳಿಯಿಂದ ತಂದಿದ್ದು. ಬೆಂಗಳೂರಿಗೆ ಬರುತ್ತ. ಬಸ್ ನಲ್ಲಿ ಬಸವಳಿದು ಹೀಗಾಗಿದೆ ಅಷ್ಟೆ. ರುಚಿ ಮಾತ್ರ sooper!!!
:-)

February 11, 2011

दॆशकाल ದೇಶಕಾಲ ಮರಾಠಿ ಸ್ಪೆಶಲ್ ಸಂಚಿಕೆ

अवधी ब्लाग मध्ये जेंह्वा नवीन दॆशकाल विशेषांक बाहेर पडले म्हणुन पॊस्ट केले, तेंह्वा पासून मी ते पुस्तकाचे वाट पाहत हॊते. तरी आज माझे मुल्गिला तिचे कालेज चा पुस्तक हवे हॊति तर मला ’सप्ना बुक हाउस’ ला जाण्या चा रीसन मिळाली. तिकडे जाउन बग्ते तरी त्यानी एनीवर्सरीचे डिस्कौन्ट ठेवले हॊते. गेलॊ हॊते ऎकच पुस्तक आणायला ,पण मी फारच इंग्रजी पुस्तक घेउन ठाकल. बाहेर आताना ठक अणि आठवण आले की माझे मित्र वसुधॆंद्र ह्यानी त्यांचे छंध प्रकाशन मधुन 4 नवीन पुस्तक बाहिर हांणले, अणि त्यातुन मला सुनंदा कडमे ह्यांचे पुस्तक हवे हॊती, तर मी कन्नड section ला गेले. ते पुस्तका बाजूनी दॆशकाल पुस्तक वर डॊळा पडला अणी मला फारच आनंद वाटल, नाहि तर मी खरच विसरून जात हॊते. अणि ते भी पुस्तक घेवुन मी घरी आले.

पिवळा रंग मला आवडत नाही. पण पिवळ्या वर्णाचा दॆशकाल - समकालीन मराठी साहित्या हा विष्यी भरपूर - विशॆषांक मला आकर्षक वाटला. मराठि साहित्य हे कन्नड ला अनुवाद केलेले पण छान अणि उत्कृष्ट झाले

पुस्तकाचा मुखपृष्ठ (coverpage) अणि मला आवडलेला काही पन्ने मी scan करून घातले आहे. तुम्हाला पन आवडनार असे माझी खात्रि आहे--


मुखपृष्ठला वापर्लॆला पान (paper) पण फार उत्तम क्वालिटिचा आहे

इकडे मी प्रामणिक पणे मराठि न लिहायचा प्रयत्न केले आहे. सवय नाही. चुक्ले तर माफ करा.


 ಸಮಕಾಲೀನ ಮರಾಠಿ ಲೇಖಕರನ್ನು ಪರಿಚಯಿಸಿ,ಅವರ ಬರಹಗಳನ್ನು ಕನ್ನಡಿಗರಿಗೆ ಉಣ ಬಯಸುವ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.ಮಾರಾಠಿ ಬಲ್ಲ ಕನ್ನಡ ಲೇಖಕರಿಂದ ಅನುವಾದಿಸಲ್ಪಟ್ಟಿದುದರಿಂದ ಭಾಷೆಯ ಮೂಲ ಅರ್ಥಕ್ಕೆ ಹೇಳುವಂಥಹ ಅಡಚಣೆಯಾಗಿಲ್ಲ. ಆಸಾರಾಮ್ ಲೋಮಟೆ ಯವರ ಆಲೋಕ ಕಥಾ ಸಂಗ್ರಹದಿಂದ ’ಚಿರೇಬಂದ್’ ಕಥೆಯ ಗ್ರಾಮೀಣ ಸೊಗಡನ್ನು ಚಂದ್ರಕಾಂತ ಪೋಕಳೆ ತುಂಬ ಹಿತವಾಗಿ ಹಿಡಿದಿಟ್ಟಿದ್ದಾರೆ..ಶ್ರೀ ಜಯಂತ ಕಾಯ್ಕಿಣಿಯವರು ’ಸಂಯುಕ್ತ ಸಂವೇದನೆ’ ಯಲ್ಲಿ ಯಾವತ್ತಿನ ಹಾಗೆ ಆಪ್ತ ವಾಗಿ ಬರೆದಿದ್ದಾರೆ. ಮರಾಠಿ ಹಾಗೂ ಕನ್ನಡವನ್ನು ಓದುವ ನನಗೆ ಭಾರಿ luck ಅಲ್ಲದೇ ಮತ್ತಿನ್ನೇನು? ಮುಖಪುಟ ಹಾಗೂ ಅದಕ್ಕೆ ಉಪಯೋಗಿಸಿದ ಕಾಗದ ತುಂಬ ಇಷ್ಟವಾಯ್ತು.

ನಾನು ಮರಾಠಿಯವಳು ಹೌದು ಕನ್ನಡದವಳು ಹೌದು, ಅಥವಾ ಎರಡೂ ಅಲ್ಲ. 17 ನೇ (1986)ವರ್ಷಕ್ಕೆ ಮದುವೆಯಾಗಿ ಮುಂಬಯಿನಿಂದ ತೀರ್ಥಹಳ್ಳಿಗೆ ಬಂದವಳು. ಮೊದಲ 10-12 ವರ್ಷ ಮುಂಬಯಿಗೆ ಸಾಕಷ್ಟು ಸಲ ಹೋಗಿ ಇರುತ್ತಿದ್ದೆ. ಮೊದಲ ಮೂರು ವರ್ಷ ನನ್ನ ಪದವಿ ಪರೀಕ್ಷೆ, ಅಮೇಲೆ ನಾಲ್ಕು ವರ್ಷ ಮಕ್ಕಳ ಹುಟ್ಟು (ಇಬ್ಬರೂ ಅಲ್ಲೇ ಹುಟ್ಟಿದ್ದು), ತಮ್ಮಂದಿರು-ತಂಗಿಯ ಮದುವೆ ಅಂತ 4 ವರ್ಷ..ಹೀಗೆ. ಕನ್ನಡದಲ್ಲಿ serious ಆಗಿ ತೊಡಗಿಸಿಕೊಂಡಿದ್ದು ಬೆಂಗಳೂರಿಗೆ ಬಂದ ಮೇಲೆ..ಆಗಲೇ 10 ವರ್ಷಗಳಾದವು ಬೆಂಗಳೂರಿಗೆ ಬಂದು. ಜಯನಗರದ ಆಫಿಸ್ ಗೆ ಹೋಗ್ತಾ ಬಸ್ಸ್ ನಲ್ಲಿ ತುಂಬ ಓದುತ್ತಿದೆ. ಬರುವಾಗ ಬಸ್ ನಲ್ಲಿ ಕೂರಲಿಕ್ಕೆ ಜಾಗ ಸಿಗುತ್ತಿರಲಿಲ್ಲ. ಹಾಗಾಗಿ ಬೇರೆಯವರ ಮಾತನ್ನು ಆಲಿಸುತ್ತಿದೆ.ಶ್ರೀಕಾಂತ ಹಾಗೂ ಬೆಂಗಳೂರಿನ ನನ್ನ ಹಲವು ಮಿತ್ರರ ಸಹಾಯ- encouragement ದಿಂದ ಸಾಕಷ್ಟು ಒಳ್ಳೆ ಒಳ್ಳೆಯ ಕನ್ನಡ ಪುಸ್ತಕಗಳನ್ನು ಓದಿ, ಸಾಕಷ್ಟು ಚೆನ್ನಾಗಿಯೇ ಕನ್ನಡ ಮಾತನಾಡ /ಬರೆಯ ಬಲ್ಲೆ ಎನ್ನುವ ಹೆಮ್ಮೆ ನನಗಿದೆ.ನನ್ನ ಬ್ಲಾಗ್ ಮಿತ್ರರಾದ , ಓದಿ ತಕ್ಕ ಸಲಹೆ/ಸೂಚನೆ ಕೊಡುವ, ಅಮೇರಿಕಾದಲ್ಲಿರುವ ಶ್ರೀಕಾಂತ ಬೆಡತೂರ್ ಅವರ ಪ್ರಕಾರ ಕೆಲವೊಮ್ಮೆ ನಾನು ಬರೆದಿದ್ದು text bookish ತರಹ ಇರುತ್ತೆ ಅಂತ ಒಪ್ಪುತ್ತೇನೆ.  ಈಗ ಮಲಯಾಳಿ  ಓದಲಿಕ್ಕೆ ಪ್ರಯತ್ನ ಪಡ್ತಾ ಇದ್ದೇನೆ.
ಮರೆತಿದ್ದೆ!! ಸಂಚಿಕೆಗೆ ಕೇವಲ 100 ರೂ. ಮಾತ್ರ. ಖಂಡಿತ ಸಂಗ್ರಹಣೀಯ ಪ್ರತಿ ಎಂದು ನನ್ನ ಅನಿಸಿಕೆ!!

:-)

February 7, 2011

ಹತ್ತರೊಳಗೆ ಹನ್ನೊಂದು, ಕನ್ನಡ ಸಮ್ಮೇಳನದ ಚಿತ್ರಗಳು ನಮ್ಮದೂ ಕೆಲವೊಂದು

ನಾನಂತು ಆರಾಮಾಗಿ sunday special ಬಿಸಿ ಬೆಳೆ ಭಾತ ತಿಂದು, ತಲೆಗೆ ಕಾಲು ಲೀಟರ್ ಎಣ್ಣೆಯಿಟ್ಟುಕೊಂಡು ಸುಮ್ಮನೆ ಪೇಪರ್ ಓದ್ತಾ ಇದ್ದೆ. ಶ್ರೀಕಾಂತ ಬೇಗ ಬೇಗ ರೆಡಿ ಯಾಗಿ ಹೋಗುವಾ ಅಂದ್ರು. ನಾನು ಎಲ್ಲಿಗೆ ಅಂತ ಕೇಳಿದೆ. ಮತ್ತೆ?? ನಮ್ಮೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೀತಾ ಇದೆ. ನಾವು ಹೋಗದಿದ್ರೆ ಹೇಗೆ ಅಂದ್ರು.
’ಹೇ ವಿಜಯಕರ್ನಾಟಕ, ಅವಧಿ ಯಲ್ಲೆಲ್ಲ ಚಿತ್ರ-ವರದಿ ಬರ್ತಾ ಇದೆ. ಅಷ್ಟೊಂದು ಜನರಿರ್ತಾರೆ ನಾನಂತೂ ಬರಲ್ಲ, ನೀವು ಮೂರು ಜನ ಹೋಗಿ” ಅಂದ್ರೆ...’ಹೋಗಿ ನೋಡುವ, ತುಂಬ ರಶ್ ಇದ್ರೆ ನಾವು ವಾಪಸ್ ಬರುವಾ’ ಅಂತ ಹೇಳಿ,ಮೂರು ಜನರು ಪೂಸಿ ಹೊಡ್ದು, ಕರಕ್ಕೊಂಡು ಹೋದ್ರು. ನಾವು ತಲುಪುವಾಗ್ಲೆ 12.00 ಸ್ವಲ್ಪ ಹೊತ್ತು ಸನ್ಮಾನ ಸಮಾರಂಭವನ್ನು ನೋಡಿದ್ವಿ.



ಆಮೇಲೆ ಪುಸ್ತಕ ಮಳಿಗೆ ಕಡೆ ಹೋದ್ವಿ. ಅಲ್ಲಿ free ಯಾಗಿ ಯಾರೋ newspaper ಹಂಚುತ್ತ ಇದ್ರು. ಅದನ್ನು ತೆಗೆದುಕೊಳ್ಳಲು ನೂಕು ನುಗ್ಗಲು. ತೀರ entrance ನಲ್ಲಿ ಅವರು ಹಾಗೆ ಮಾಡಬಾರದಿತ್ತು. ಹಾಗೂ ಧೂಳು ಮೇಲೇರಬಾರದೆಂದು ಅವರು ಹಾಕಿದ ನೆಲಹಾಸು ಅಲ್ಲಲ್ಲಿ ತೂತು ಬಿದ್ದು, ಮುಗ್ಗರಿಸಿ ಯಾರಾದ್ರೂ ಬಿದ್ದಿದ್ರೆ, ಏಳಲು ಸಾಧ್ಯವಿಲ್ಲದಷ್ಟು ರಶ್ ಅಂದ್ರೆ ರಶ್. ನಾನು ಬಿಡಿಸಿಕೊಂಡು ವಾಪಸ್ ಬಂದೆ ಒಂದು ಸಲ.

ಬುಲ್ಲೆಟ್ ಹೋಳಿಗೆ ನೋಡಿದ್ರಾ??!!
ಶ್ರೀಕಾಂತ ಸ್ವಲ್ಪ ಕೋಸಂಬರಿ ಮತ್ತು ಬೇಯಿಸಿದ ಚನಾ ಉಸ್ಲಿ ತಿಂದ್ರು, ಮಕ್ಕಳು ಕುರುಂ ಕುರುಂ ಮಂಡಕ್ಕಿ!!

ಇಷ್ಟು ದೂರ ಬಂದು ಪುಸ್ತಕ ಮಳಿಗೆಗೆ ಹೋಗದಿದ್ರೆ ಹೇಗೆ ಅಂತ ಹೇಳಿದ್ರು ಶ್ರೀಕಾಂತ, ಪುನ: ಹೋದ್ವಿ. ಸುಮ್ಮನೆ ಹೋಗಿ ನಿಂತಿದಷ್ಟೆ ಗೊತ್ತು, ಹಿಂದೆ ಇದ್ದವರು ದೂಡುವಿಕೆಯಿಂದ ಅಂತು ಯಾವುದೋ ಒಂದು ಪುಸ್ತಕ ಮಳಿಗೆ ತಲುಪಿದ್ವಿ. ಉಸ್ಸಪ್ಪ ಅಂತ ನೋಡಿದ್ರೆ ಅದು ಅಭಿನವ ಪುಸ್ತಕ ಮಳಿಗೆ.

ಶ್ರೀಕಾಂತ ರಾಯರು

ನಾನು ಸುಮ್ಮನೆ ಪುಸ್ತಕ carrier
ಶ್ರೀಕಾಂತ ಸುಮಾರು ಪುಸ್ತಕಗಳನ್ನು ತೆಗೊಂಡ್ರು. ನವಕರ್ನಾಟಕ ಮಳಿಗೆಯಿಂದ ಇಗೋ ಕನ್ನಡ (ಮೂರು + 1) ನಿಘಂಟಿನ set ತೆಗೊಂಡ್ರು. ಮತ್ತು ಅವರ favorite ಮನೋಹರ ಗ್ರಂಥ ಮಾಲೆ ಮಳಿಗೆಯಲ್ಲಿ, ಸಮೀರ್ ಜೋಶಿವವರನ್ನು ಮಾತನಾಡಿಸಿ, ರಾಶಿ ಪುಸ್ತಕ ತಗೊಂಡ್ರು.ಕೆಲವೇ ಕೆಲವು ಮಳಿಗೆ ನೋಡಿದ್ವಿ. ಶ್ರೀಕಾಂತ ಗೆ ಸಂಜೆ ದೆಹಲಿಗೆ ಹೋಗಲು flight ಹಿಡೀ ಬೇಕಿತ್ತು. ನಾವು ಅಲ್ಲಿಂದ ವಾಪಸ್ ಹೊರಡುವಾಗ್ಲೂ ಸನ್ಮಾನ ಸಮಾರಂಭ ನಡಿತಾ ಇತ್ತು. ಚಪ್ಪಳೆ ತಟ್ಟುವವರೇ ಇರಲಿಲ್ಲ.
ಶ್ರೀಕಾಂತಗೆ ಕನ್ನಡ t-shirt ಸಿಗದೆ ಸ್ವಲ್ಪ ಬೇಜಾರಾಯಿತು.
ಹಸಿ ಚನಾ ತೆಗೊಂಡು, ರಿಕ್ಷಾದವನಿಗೆ ಒಂದುವರೆ ಕೋಡ್ತೀವಪ್ಪ ಮೀಟರ್ ಮೇಲೆ, ಬಸವನಗುಡಿ ಕರೆದುಕೊಂದು ಹೋಗು ಅಂದ್ರೆ, ರಿಕ್ಷಾದವನು ’ನಾಲ್ಕು ಜನ ಇದ್ದೀರಾ one and a half ಆಗುತ್ತೆ ಅಂದ. ಅದಕ್ಕೆ ಶ್ರೀಕಾಂತ, ’ಹತ್ತುವಾಗಲೇ ಕನ್ನಡದಲ್ಲಿ ಅದೇ ಅಲ್ಲವ ನಾನು ಹೇಳಿದ್ದು’ ಅಂದ್ರು. ರಿಕ್ಷಾ ಚಾಲಕ ನಕ್ಕಿದು ಒಳ್ಳೆ ಮಜಾ ಇತ್ತು.
ಹೋಟಲ್ ಅತಿಥೇಯದ ಬಳಿ ರಿಕ್ಷ ನಿಲ್ಸಿದ್ವಿ.ಜೋಳದ ರೊಟ್ಟಿ ಊಟ ಮಾಡುವ ಅಂತ, but ಅಲ್ಲಿ ಕೂಡ ರಶ್. ಅಲ್ಲೇ ಕೆಳಗಡೆ’ಗೋಲಿ’ ವಡಾ-ಪಾವ್ ಅಂಗಡಿ ಇತ್ತು. ನಾನಂತು ನನ್ನ ಇಷ್ಟದ ವಡಾ ಪಾವ್ ತಿಂದೆ. ಮುಂಬಯಿಯಷ್ಟು tasty ಆಗಿರಲಿಲ್ಲ ಖಂಡಿತ.
ಇಲ್ಲಿ ಇನ್ನೂ ಕೆಲವು ಚಿತ್ರಗಳು ನಿಹಾ ತೆಗೆದದ್ದು.








ಪುಸ್ತಕ ಪ್ರಿಯರು
ಮಕ್ಕಳ ಉತ್ಸಾಹ- ಛದ್ಮವೇಷ

ಪುಸ್ತಕ ಮಳಿಗೆ to the right

ಸುಂದರ ಕೈ ಬರಹದಲ್ಲಿ

ಧಿಕ್ಕಾರ: ಶ್ರೀ ಭಾರಧ್ವಾಜ್ ರ ಕನ್ನಡ ವಿರೋಧಿ ನಿಲುವಿಗೆ

ಬ್ಯಾಗ್ ತುಂಬ ಪುಸ್ತಕ
:-)