February 11, 2024

ಬಿಸಿ ನೀರು ಸಾರು

 


ಸಣ್ಣವಳಿದ್ದಾಗ ನಾನಿ 'ಅವರು ಎಷ್ಟು ಬಡವರಂದ್ರೆ ಊಟಕ್ಕೆ ದಿನಾ ಬಿಸಿ ನೀರು ಸಾರು' (ಕೊಂಕಣಿಯಲ್ಲಿ ಹೂನ್ ಉದ್ಕಾ ಸಾರು)ಎನ್ನುತ್ತಿದ್ದರು. ಹಲವಾರು ಬಾರಿ ಕೇಳಿಯಾದ ಮೇಲೆ ಏನದು ನೀರು ಸಾರು ಅಂತ ಕೇಳಿದೆ. ನಾನಿ ಅದನ್ನು ವಿವರಿಸುತ್ತಿದ್ದ0ತೆ ನನಗೆ ಬಾಯಲ್ಲಿ ನೀರು ಬಂತು. ಇತ್ತೀಚಿಗೆ ಮಕ್ಕಳಿಗೆ ಈ ಸಾರಿನ ಬಗ್ಗೆ ಹೇಳಿದಾಗ, ಮಾಲವಿಕಾ, ಅಮ್ಮ ಒಂದ್ಸಲ ಮಾಡು' ಅಂದ್ಲು

ತುಂಬಾ ಸರಳ ಮಾಡುವ ವಿಧಾನ. ರುಚಿ.ಕೂಡ...ಒಳ್ಳೆ ಪರಿಮಳಯುಕ್ತ ನಿಂಬೆ ಹಣ್ಣು ಹೇಗೂ ಇತ್ತು.
ಸಾಸಿವೆ, ಜೀರಿಗೆ ,ಕರಿಬೇವು, ಹಿಂಗು, ಹಸಿ ಮೆಣಸು, ಒಣ ಮೆಣಸು - ತುಪ್ಪದಲ್ಲಿ ಒಗ್ಗರಣೆ,ಉಪ್ಪು, ಹೌದೋ ಅಲ್ಲವೋ ಬೆಲ್ಲ. ಎರಡು ಗ್ಲಾಸ್ ನೀರು ಹಾಕಿ ಕುದಿಸುವುದು. ಊಟಕ್ಕೆ ಮುಂಚೆ ಈ ಸಾರಿಗೆ ನಿಂಬೆ ಹಣ್ಣಿನ ರಸ ಹಿಂಡುವುದು.
ಇವತ್ತು ನಿಹಾ ಗೋಸ್ಕರ ಮೀನು ಅಡುಗೆ. ಅಕ್ಕನಿಗೆ ನೀರು ಸಾರು, ಕೋಕಂ ಕಡಿ, ಸೊಪ್ಪು ಪಲ್ಯ ಮತ್ತು ಆಲೂ ಗಡ್ಡೆ ಪಲ್ಯ





ಚಿತ್ರ ನಿಮಗಾಗಿ ❤️👍🙂

February 7, 2024

neuro psychiatry

 ನಿನ್ನೆ ಅಚಾನಕ್ಕಾಗಿ ರಾತ್ರಿ ಹೊರಗೆ ಊಟಕ್ಕೆ ಹೋಗುವ ಯೋಜನೆ ಮಾಡಲಾಯಿತು. 🙂. ಮೂರು ಓಲಾ ಆಟೋ ಗಳು ಕ್ಯಾನ್ಸಲ್ ಆಗಿ ಕೊನೆಗೂ 4 ನೆ ಯಂವ ಬಂದ. ಶ್ರೀಕಾಂತ್ ಆಫಿಸ್ ನಿಂದ ನಾವು ಹೋಗಳಿರುವ restaurant ಗೆ ಆಗಲೇ ತಲುಪಿಯಾಗಿತ್ತು. ಸಿಗ್ನಲ್ ನಲ್ಲಿ ಈ ನ್ಯೂರೋ psychiatry ಕ್ಲಿನಿಕ್ ನೋಡಿದೆ.

15 ವರ್ಷಗಳ ಹಿಂದಿನ ನೆನಪು ಬಂತು. ಆಗ ನಾವು ಮಹಾಲಕ್ಹ್ಮಿ ಪುರಂ ನ ಬಾಡಿಗೆ ಮನೆಯಲ್ಲಿದ್ವಿ. ಬ್ರಿಟಿಷ್ ಲೈಬ್ರರಿಗೆ ಯಿಂದ ಮರಳುವಾಗ ಮ್ಯಾಜೆಸ್ಟಿಕ್ ಗೆ ಬಂದು ಬಸ್ ಹಿಡಿಯಬೇಕಿತ್ತು. ನಾವುಮಾತಾಡ್ತ ನಮ್ಮದೇ ಲೋಕದಲ್ಲಿದ್ವಿ. ನಾನು ಬಸ್ ನಂಬರ್ ನೋಡ್ತಾ ಇದ್ದೆ. ಕಾಲಬುಡದಲ್ಲಿ ಒಂದು ದೊಡ್ಡ ಗೋಣಿಚೀಲದಲ್ಲಿ ಸಾಮಾನು ತುಂಬಿಸಿ ಹಾಕಿ ಅಡ್ಡ ಇಟ್ಟಿದ್ದು ನನಗೆ ಕಾಣಿಸಲಿಲ್ಲ. ಮುಗ್ಗರಿಸಿ ಬಿದ್ದು ಉರುಳಿ ಎಷ್ಟು ದೂರ ಹೋದೆ...ಯಾರದೋ ಕಾಲು ಕಾಣಿಸಿತು, ಗಟ್ಟಿ ಹಿಡಿದುಕೊಂಡೆ. ಆ ಆಸಾಮಿ ಮ್ಯಾಡಮ್ ಕಾಲ್ ಬಿಡ್ರಿ, ಕಾಲು ಬಿಡ್ರಿ ಅಂತು..😆. ಅಷ್ಟರೊಳಗೆ ಮಕ್ಕಳಿಬ್ಬರೂ ಬಂದು, ನನಗೆ ಕೈ ಕೊಟ್ಟು ಎಬ್ಬಿಸಿದರು. ಕಾಲನ್ನು ಹಿಡಿಯಲು ಕೊಟ್ಟ ಹುಡುಗನಿಗೆ ಥ್ಯಾಂಕ್ಸ್ ಹೇಳಿ, ನಮ್ಮ ಬಸ್ ನೋಡಿ , ಹತ್ತಿಕೊಂಡ್ವಿ. ಸ್ವಲ್ಪ ಹೊತ್ತಿಗೆ ಬಲಗಾಲಿನ ಮಂಡಿ ಮೇಲಿನ ಭಾಗ ನೋಯಲು ಶುರು ಆಯ್ತು. fracture ಏನಾದರೂ ಆಯ್ತಾ ಆಂದಕೊಂಡು, ನಾವು.ಇಳಿಯುವ stop ನಲ್ಲೇ ಒಂದು orthopaedic ಕ್ಲಿನಿಕ್ ಇತ್ತು. ಅಲ್ಲಿ ಚೆಕ್ ಮಾಡಿಸಿಕೊಂಡೇ ಹೋಗೋದು ಅಂತಾಯಿತು. fracture ಏನೂ ಇರಲಿಲ್ಲ. ಕೆಲ ದಿನ ನೋವು ಮತ್ತು ನಾನು ಬಲಗಾಲು ಎಳೆದುಕೊಂಡು ನಡೆಯೋದು ಆಯ್ತು. ಕೆಲ ದಿನ ಗಳ ನಂತರ ಎಲ್ಲ ಸರಿ ಹೋಯ್ತು. ಆದರೆ ಈಗಲೂ  ಕೆಲವೊಮ್ಮೆ ನನಗೆ ಆಗ ಬಿದ್ದದ್ದು ನೆನಪಾದ ಕೂಡಲೇ ನಾನು ಬಲಗಾಲು ಎಳೆದುಕೊಂಡು ನಡೆಯಲು ತೊಡಗುತ್ತೇನೆ, ಯಾರಾದರೂ ಕಾಲಿಗೆ ಏನಾಯಿತು ಅಂತ ಕೇಳುವ ತನಕ....

neuro psychiatry ಕ್ಲಿನಿಕ್ ನೋಡಿ ಈ ಸಂದರ್ಭ ನೆನಪಾಯಿತು 😆



February 2, 2024

ಉತ್ತರಾಖಂಡ್ ಭಾಗ 2

 ಗುಡ್ಡ ಹತ್ತಿ ಇಳಿದು, ,ಹತ್ತಿ ಇಳಿದು, ಹತ್ತಿ ಇಳಿದು ಕೊನೆಗೂ ಲೋಹಾಘಾಟ್ ತಲುಪಿದ್ವಿ. ತಾಪಮಾನ 9 ಡಿಗ್ರಿ ಸೆಲ್ಸಿಯ್ಸ್. ಹೋಟಲ್ ಚೆಕ್ ಇನ್ formalities ಮುಗಿಸಿದಾಗ 9 ಗಂಟೆ. ಬಿಸಿ ಅಡುಗೆ ಸಿದ್ಧವಾಗಿತ್ತು. buffet. ರೋಟಿ, ಸಬ್ಜಿ, ದಾಲ್, ಒಂದು ನಾನ್ ವೆಜ್, ಜೀರಾ ರೈಸ್...ಆ ಚಳಿಗೆ ರೋಟಿ ಮುರಿದು ಬಾಯಿಗೆ ಹಾಕೋದೆ ಕಷ್ಟ ಅನ್ನಿಸ್ತು..ಅಷ್ಟು ಚಳಿ. 

ರೂಮ್ ಪೊಗದಸ್ತಾಗಿತ್ತು. ಚಕಾ ಚಕ್ ಬೇರೆ. ರಾತ್ರಿ ತಾಪಮಾನ 2 ಡಿಗ್ರಿ ಗೆ ಇಳಿದು...ನಾನು ಅಷ್ಟಾಗಿ ಚಳಿಗೆ ತಯಾರಾಗಿ ಬಂದಿರಲಿಲ್ಲ. ಮರುದಿನ ಬೆಳಗಿನ ಉಪಹಾರದದ ನಂತರ ಶ್ರೀಕಾಂತ್ ರ ವರ್ಕ್ಶಾಪ್  9.00 ಗಂಟೆಗೆ ಶುರು. ಅಲ್ಲೆಲ್ಲ 6 ಗಂಟೆಗೆ ಚೆನ್ನಾಗಿ ಬೆಳಗಾಗಿರುತ್ತೆ. 8 ಗಂಟೆಗೆ ಸೂರ್ಯ ಮೇಲೇರುತ್ತಲೇ toasty ಆಗಿರುತ್ತೆ. ನಾನು ಬಿಸಿಲಿಗೆ ಕೂತು ಓದುತ್ತಿದ್ದೆ. 


ಉತ್ತರಾಖಂಡ reels instagram

ಕೆಲವು ಚಿತ್ರಗಳನ್ನು ಮೇಲಿನ ಲಿಂಕ್ ನಲ್ಲಿ ನೋಡಿ 👍

ಆ ಮೇಲೆ ಸ್ನಾನ. ಇದ್ದ ಬದ್ದ ಸ್ವೇಟ್ಟರ್, ಕೋಟ್ ಹಾಕಿಕೊಂಡು ದೊಡ್ಡ ವಾಕ್ ಹೋಗುತ್ತಿದ್ದೆ. ಅಲ್ಲೆಲ್ಲ ಬಸ್ ಮುಂತಾದ ವಾಹನಗಳು ಜಾಸ್ತಿಯಿಲ್ಲ. ಟೆಂಪೋ ದಲ್ಲಿ ಒಂದು ತಲೆಗೆ ತಲಾ ಹತ್ತರಂತೆ ಬಾಡಿಗೆ ಅಥವಾ ಇತರೆ ಕಾರ್, ಬೈಕ್, ಸ್ಕೂಟರ್ ಮುಂತಾದವು ಖಾಲಿ ಇದ್ದಲ್ಲಿ ಅವರಿಗೆ ಕೈ ಅಡ್ಡಹಾಕಿ ನಿಲ್ಲಿಸಿ ಅವರಲ್ಲಿ drop ಕೇಳುವುದು.


ಸಣ್ಣ ಪುಟ್ಟ ಹೋಟಲ್ ಗಳಲ್ಲಿ ನನ್ನ ಮಧ್ಯಾಹ್ನದ ಊಟ. ಸಂಜೆ 4.00 ಗಂಟೆಗೆ ಅವರ workshop ಮುಗಿದ ನಂತರ 5 ಕಿ ಮಿ ದೂರದ ಮಾರುಕಟ್ಟೆಗೆ ನಮ್ಮ ವಾಕ್. ಲೋಕಲ್ ತರಕಾರಿ/ಬೀಜಗಳ ಮಾಹಿತಿ/ ಶೋಧ. ಮೊದಲ ದಿನ ನಾನು ವಾಕ್ ಮುಗಿಸಿ ಬಂದಾಗ project head, 'ಮೇಡಂ ಕಲ್ ಹಂ field ವಿಸಿಟ್ ಪರ್ ಜಾ ರಹೇ ಹೈ..ಆಪ್ ಭಿ ಆ ಜಾಯಿಯೇ 'ಅಂದಾಗ ನಾನು ಫುಲ್ ಖುಷ್. ಸಂಜೆ ಪೇಟೆಗೆ ಹೋಗಿ ಕೈ ಗವಸ, ಸಾಕ್ಸ್, ಕ್ಯಾಪ್ ಮುಂತಾದವುಗಳನ್ನು ಖರೀದಿಸಿದೆ.


ರಸ್ತೆ ಬದಿಯಲ್ಲಿ ಧಾರಾಳವಾಗಿ ಬೆಳೆಯುತ್ತಿರುವ ಕಿತ್ತಳೆ/ಸಂತರಾ/ಕಿನ್ನೋ/ಮಾಳ್ಟಾ, ಮೂಸಂಬಿ ಮತ್ತು ನಿಂಬೆ ಮರ/ಗಿಡಗಳು

ಮರುದಿನ ಬೆಳಗಿನ ಉಪಹಾರದದ ನಂತರ ಎರಡು ಮಿನಿ ಬಸ್, ಒಂದು 7 wheeler ಮೇಲೆ ನಮ್ಮ ಜರ್ನಿ ಶುರು. ಮೊದಲಿಗೆ ಒಂದು ಹಳೆಯ ಬಾವಿ ನೋಡುವುದು ಎಂದಾಯಿತು. ಹಳೆ ಪ್ರಕಾರದ ಬಾವಿ. ಅದನ್ನು ನೋಡಲು ಪೈನ್ ಗುಡ್ಡ pine forest ಒಂದನ್ನು ಹತ್ತಿ ಇಳಿಯಬೇಕಿತ್ತು. ಪೈನ್ ಮರದ ಕಡ್ಡಿಯಲ್ಲ ನೆಲದ ಮೇಲೆ ಕರ್ಪೆಟ್ ನಂತೆ ಬಿದ್ದಿತ್ತು. ಬರಿ ಜಾರುವುದೇ ಆಯ್ತು. ನನ್ನ ಬಾಟಾ ಶೂ ಅದಕ್ಕೆ ಹೇಳಿ ಮಾಡಿದ್ದಲ್ಲ. ಜಾರಿ ತರಹೇವಾರಿ positions ನಲ್ಲಿ ಬಿದ್ದು ನಕ್ಕಿದ್ದೆ ನಕಿದ್ದು. ಬಿದ್ಫು ಬಿದ್ದು ನಕ್ಕಿದ್ದೆ ಅನ್ನಲು ಅಡ್ಡಿಯಿಲ್ಲ 🙂. ಚಿಕ್ಕ್ ಪ್ರಾಯದವರು  ನಮ್ಮನ್ನು ಚೈನ್ ಮಾದರಿಯಲ್ಲಿ ಕೈ ಹಿಡಿದು ನಡೆಸಿದರು. ಅಲ್ಲಿಂದ ಹಿಮಾಲಯ ಹತ್ತಿರದಿಂದ ಕಾಣುವ ಸೌಭಾಗ್ಯ. 

ಪೈನ್ ಅಡವಿಯ ವಿಶೇಷತೆಯಂದ್ರೆ ಅದು ಬುಡಕ್ಕೆ ಯಾವುದೇ ಮರ ಬೆಳೆಯಲು ಅವಕಾಶ ಮಾಡುವುದಿಲ್ಲ. ಭೂಮಿ ಬರಿ ಬರಡು ಆಗುತ್ತದೆ. ಪೈನ್ ಮರದ ಕಡ್ಡಿಗಳಿಂದ  ಕೈಗಾರಿಕೆ ಉತ್ಪನ್ನಕಾಗಿ ಬಳಸಿ ಉದ್ಯಮವನ್ನಾಗಿಸಿದ್ದಾರೆ. ಕಡ್ಡಿಗಳಿಂದ ಬುಟ್ಟಿ, ಗೊಂಬೆ, ಟಿ ಕೋಸಿ ಎಲ್ಲ ಮಾಡಿ







ಎಕ್ಸ್ಸಿಬಿಷನ್ಸ್ ನಲ್ಲಿ ಮಾರುತ್ತಾರೆ. ಅವನ್ನು ಮಾಡುವ ಸ್ವ ಸಹಾಯ ಸಂಘಕ್ಕೆ ಭೇಟಿ ನೀಡಿದಾಗ ಅವರಿಗೆ ಹೊರದೇಶದಿಂದ 6000 ಬುಟ್ಟಿ ಗಳಿಗೆ ಆರ್ಡರ್ ಬಂದು ಅದರ ತಯಾರಿಯಲ್ಲಿ ತೊಡಗಿದ್ದರು. 




ನಗುಮುಖದ  ವ್ಯಕ್ತಿಗಳು ಅಲ್ಲೆಲ್ಲ. ತುಂಬಾ friendly. ಲೋಹಘಾಟ್ tourist ತಾಣವಲ್ಲ. ಚೆಂದದ ಗುಡ್ಡಗಾಡು ಪದೇಶ. 

ಫೀಲ್ಡ್ ವಿಸಿಟ್ ದಿನ ನಮಗೆ ಸ್ಥಳೀಯ ಊಟ ದೊರಕಿತು. ಪನೀರ್ ನ ಅಡುಗೆ ಒಂದು common.. ಅದರ ಜತೆ ಅಲ್ಲಿ ಲಭ್ಯ ವಿವಿಧ ದಾಲ್ ಹಾಕಿ ಮಾಡಿದ ಸಾರು, sarson ಸೊಪ್ಪಿನ ಪಲ್ಯ, ಭಾಂಗ್ ಜೀರಾ ಚಟ್ನಿ, ಸ್ಥಳೀಯ ತಳಿಯ ದಪ್ಪಕ್ಕಿ ಅನ್ನ, ಮೊಸರು, ತವಾ ರೋಟಿ...ಬಹಳ ರುಚಿಕರವಾಗಿತ್ತು ಮಾತ್ರವಲ್ಲ ತುಂಬಾ ಹಸಿವು ಕೂಡ ಆಗಿತ್ತು


                   ಪಹಾಡಿ sarson 👆👆

to be continued.....