ಸಮೂಹ -kvs ನಿಂದ ಪ್ರತೀ ಸಲ ಇ-ಮೈಲ್ ಬಂದಾಗ ಅಷ್ಟು ದೂರ ಯಾರು ಹೋಗ್ತಾರೆ ಅಂತಲೋ, ಅಯ್ಯೋ ಮಧ್ಯಾಹ್ನ ಊಟ ಆದ ಕೂಡಲೇ ಬಸ್ ನಲ್ಲಿ ಯಾರು ಹೋಗ್ತಾರೆ ಅಂತಲೋ ಏನಾದರೊಂದು ಸಬೂಬು ನಾನೆ ಸೃಷ್ಟಿಸಿ ಅಲ್ಲಿ ಹೋಗುವುದನ್ನೂ ಮುಂದೂಡುತ್ತಲೇ ಬಂದಿದ್ದ್ದೆ ಇಷ್ತರತನಕ. ಮೊನ್ನೆ ಭಾನುವಾರ ಮಾತ್ರ ಮರಾಠಿ ಸಿನಿಮಾ. ಇಲ್ಲಿ ಮರಾಠಿ ಸಿನಿಮಾ ನೋಡ ಸಿಗುವುದೇ ವಿರಳ. ಮತ್ತು ಇದೇ ಡರೈಕ್ಟರ್ ಅವರಿಂದ ಬೆಂಗಳೂರು ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ 'ಸಂಹಿತಾ' ಅನ್ನುವ ಸಿನಿಮಾ ಪ್ರದರ್ಶನ ಗೊಂಡರೂ ನಾನು ನಿಹಾ ಬೇರೆ ಸಿನಿಮಾ ಸೆಲೆಕ್ಟ್ ಮಾಡಿದ್ದರಿಂದ ಅದು ಮಿಸ್ ಆಗಿ, ಅವಳ ಇತರ ಸ್ನೇಹಿತೆಯರು 'it was very nice.','touching' sensitive , 'everyone was crying' ಅನ್ನುವ ಕಮೆಂಟ್ ಕೇಳಿಸಿತ್ತು ನಾವು ನೋಡಿದ ಸಿನಿಮಾ ಕೂಡ ಚೆನ್ನಾಗಿತ್ತಾದ್ದರಿಂದ, ಆ ಸಿನಿಮಾದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ. ಅಷ್ಟೆ ಅಲ್ಲ ಯಾವುದಾದರು ಒಳ್ಳೆಯ ಮರಾಠಿ ಸಿನಿಮಾ ಬಗ್ಗೆ ಕೇಳಿದ್ದರೆ, ಅದರ ಸಿಡಿ/ಡಿವಿಡಿ ನನ್ನ ತಮ್ಮನಿಗೆ ಮುಂಬೈನಿಂದ ಕಳಿಸಲು ಹೇಳುತ್ತಿದ್ದೆ. ಆದರೆ ಇತ್ತೀಚಿಗೆ ಅವನು ದುಬೈ ನಲ್ಲಿರೋದರಿಂದ ಅದು ನಿಂತು ಹೋಗಿದೆ. ಮರಾಠಿ ಬಾಂಧವರೊಂದಿಗೆ ಈ ಸಿನಿಮಾ ವೀಕ್ಷಣೆ, ಅಲ್ಲದೆ ಅದರ ಬಗ್ಗೆ ಸಂವಾದ ಕೂಡ ಇರುವುದರಿಂದ ನಾನು ಶನಿವಾರ ಈ ಸಿನಿಮಾಕ್ಕೆ ಹೋಗಿ ಬರುವುದೆಂದು ಶನಿವಾರ ಸಂಜೆ ನಿಹಾರಿಕ ಧಮಕಿ ಹಾಕಿದಮೇಲೆ ಡಿಸೈಡ್ ಮಾಡಿದೆ.
ಸರಿ ಭಾನುವಾರ ಬಂತು. ಅದರೊಂದಿಗೆ ಮನೆ ತುಂಬ ನೆಂಟರು. ಒಂದು 10 ಜನ ಬಂದಿದ್ದರು. ರೊಟ್ಟಿ ತಟ್ಟಿ, ಟೀ ಮಾಡಿ, ಪ್ರತೀ ಸಲ ಟೀ ಮಾಡುವಾಗ ನನಗೊಂದು ಗ್ಲಾಸ್ ಕುಡಿದು ಮಧ್ಯಾಹ್ನ ಪೊಗದಷ್ಟಾದ ಊಟ ಮಾಡಿ, ಇನ್ಯಾರು ಹೋಗುತ್ತಾರೆ? ಇವತ್ತು ಸುಸ್ತಾಗಿದೆ ಎನ್ನುವ ಸಬೂಬು ಮಾಡುವಷ್ಟರಲ್ಲೇ, ಕಾಲೇಜಿನಲ್ಲಿ ನಡೆಯುತ್ತಿರುವ ಥೀಯೇಟರ್ ವರ್ಕ್ ಶಾಪ್ ಗೆ ಹೋಗಿದ್ದ ನಿಹಾ, 'ಮೋಮ್ಮೀ ಹ್ಯಾವ್ ಯು ಕಾಲ್ಡ್ ಅಪ್ ದ ಸಮೂಹ ಟೀಮ್ ಟು ಫೈಂಡ್ ಅಔಟ್ ದ ಅಡ್ರೆಸ್ ಎಂಡ್ ಸ್ಟಫ್ಸ್' ಅಂದಾಗ ನನಗೆ ಹೋಗುವುದು ಬೇಡ ಅನ್ನುವ ಧೈರ್ಯ ಬರಲಿಲ್ಲ.
ಸರಿ ಇ-ಮೈಲ್ ನಲ್ಲಿರುವ ಗೋಪಿನಾಥ ಅವರಿಗೆ ಫೋನ್ ಮಾಡಿದೆ
'ಗುಡ್ ಆಫ್ಟರ್ನೂನ್ ನನ್ನ ಹೆಸರು ಮಾಲತಿಯಂತ'
'ನಮಸ್ತೆ ಮೇಡಂ ಹೇಳಿ'
ನನಗೆ ವಾಸ್ತುಪುರುಷ ಸಿನಿಮಾ ಗೆ ಬರಬೇಕು. ಅದರ ಬಗ್ಗೆ ಡೀಟೈಲ್ಸ್ ಹೇಳ್ತೀರಾ
'ಬನ್ನಿ ಮೇಡಂ' 'ನೀವು ಇದರ ಬಗ್ಗೆ ಎಲ್ಲಿ ಓದಿದೀರಿ'
'ನನಗೆ ನಿಮ್ಮಿಂದ ಮೈಲ್ ಗಳು ಯಾವಗಲಿಂದೋ ಬರುತ್ತ ಇದೆ. ಆದರೆ ಇವತ್ತು ಮರಾಠಿ ಸಿನಿಮಾ ಅಂತ ಬರುವ ಅಂದಾಜಲ್ಲಿ ಇದ್ದೇನೆ'
'ಬನ್ನಿ ಮೇಡಂ ಚೆನ್ನಾಗಿರುತ್ತೆ. ಮಾಸ್ಟರ್ಸ್!, ಅಂದ್ರೆ ಯು ಆರ್ ಅನಂತ ಮೂರ್ತಿ, ಗಿರೀಶ ಕಾಸರವಳ್ಳಿ ಮುಂತಾದವರು ಸೆಲೆಕ್ಟ್ ಮಾಡಿದ ಸಿನಿಮಾ ತೋರಿಸಿ ಆಮೇಲೆ ಅದರ ಮೇಲೆ ಸಂವಾದ ನಡೆಸ್ತೀವಿ. ಇವತ್ತಿನ ಸಿನಿಮಾ ಆಯ್ಕೆ ಮಾಡಿದವರು ಮಾಸ್ಟರ್ ಕ್ರಿಟಿಕ್ ಮನು ಚಕ್ರವರ್ತಿ'.
"ಹೇಗೆ ಟಿಕೆಟ್ ಇದೆಯಾ? ನಮ್ಮ ಸೀಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದಾ?'
'ನಮ್ಮದು ಚಿಕ್ಕ ಹಾಲ್ ಮ್ಯಾಡಂ, 60 ಸೀಟ್ ಮಾತ್ರ. ಬೇಗ ಬಂದವರಿಗೆ ಆದ್ಯತೆ. ನೀವು 10-15 ನಿಮಿಷ ಮುಂಚೆ ಬಂದ್ರೆ ಸಾಕು. ಟಿಕೆಟ್ ಗೆ 50 ರೂ. ಮೆಂಬರ್ ಶಿಪ್ ಫೀ ಆದರೆ 600 ರೂ. ಮೆಂಬರ್ ಆದ್ರೆ ನಿಮ್ಮ ಸೀಟ್ ನಾವು ಕಾಯ್ದಿರಿಸಬಹುದು.
'ಓಕೆ. ಎಲ್ಲಿ ಬರುತ್ತೆ ಇದು ಜಯನಗರ 2nd ಬ್ಲಾಕ್ ಆ?'
'ಹೇಳ್ತೀನಿ ಮ್ಯಾಡಂ. ಯಾರಿಗಾದ್ರು ದಯಾನಂದ ಸಾಗರ್ ಕಾಲೇಜ್ ಅಥವಾ ವಸುಧಾ ಭವನ್ ಕೇಳಿ ಅಲ್ಲಿ ಹತ್ತಿರದಲ್ಲೆ ಇದೆ KVS. ಹಾಗೆ ಗೊತ್ತಾಗದಿದ್ದಲ್ಲಿ ನನಗೆ ಫೋನ್ ಮಾಡಿ ನಾನು ನಿಮಗೆ ಡೈರೆಕ್ಷನ್ಸ್ ಹೇಳ್ತೇನೆ '
'ಆಯ್ತು ಹಾಗಾದ್ರೆ ಸಿಗುವಾ, ಥ್ಯಾಂಕ್ಯು'
(...ಸಿಗುವಾ ಅಂತೇನೋ ಹೇಳಿದೆ ಆದ್ರೆ ಅಲ್ಲಿ ಗೋಪಿನಾಥ ಅವರು ಯಾರು ಎಂದು ಕೇಳುವ ಧೈರ್ಯ ಬರಲಿಲ್ಲ.)
:-)
ನಿಹಾರಿಕಾ ಕಾಲೆಜ್ ನಿಂದ ಬಂದಮೇಲೆ ಬೇಗ ಬೇಗ ಊಟ ಮಾಡಿ, ಪಾತ್ರೆಗಳನ್ನೆಲ್ಲ ಹಾಗೆ ಬಿಟ್ಟು, ಶ್ರೀಕಾಂತ್ ಮೂರು ದಿನ ಹೈದರಾಬಾದ್ ಗೆ ಆಫಿಸ್ ಕೆಲಸದ ಮೇಲೆ ಹೊರಟಿದ್ದರಿಂದ ಅವರ ಲಗೇಜ್ ಎಲ್ಲ ಪ್ಯಾಕ್ ಮಾಡಿ. ಮನೆಗೆ ಬೀಗ ಹಾಕುವ ಮುಂಚಿನ ಎಲ್ಲ instructions ಅವರಿಗೆ ಕೊಟ್ಟು, ನಾವು ಹೊರಟ್ವಿ. ರಿಕ್ಷಾದವನಿಗೆ ಬನಶಂಕರಿ ಎಂದ್ವಿ. ಬನ್ನಿ ಅಂದ್ರು. ಅದರಲ್ಲಿ ವಿರಾಜಮಾನರಾದ ಮೇಲೆ ದಯಾನಂದ ಸಾಗರ್ ಕಾಲೇಜ್ ಅಂದ್ವಿ. ನಿಮಗೆ ದಾರಿ ಗೊತ್ತಾ ಅಂತ ಅವರು ಕೇಳಿದ್ರು. ಇಲ್ಲ ಬನಶಂಕರಿ ತಲುಪಿದ ಮೇಲೆ ಯಾರಿಗಾದ್ರೂ ಕೇಳುವ ಅಂದೆ. ಅವರು ಸರಿ ಅಂದ್ರು. ಅಬ್ಬಾ ಎಂತ ಬಿಸಿಲು. ನನ್ನ ಕಾಲು ಡೈರೆಕ್ಟ್ ಸನ್ ಲೈಟ್ ಗೆ ಇದ್ದುದರಿಂದ ಒಳ್ಳೆ ಬಿಸಿ ಬಿಸಿ ಆಯ್ತು. ರಸ್ತೆ ಯಲ್ಲಿ ರಶ್. ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿದಾಗಲೆಲ್ಲ ನನ್ನ ಮೊಣಕಾಲಿಗೆ ಬೆಂಕಿ ತಗಲುತ್ತೇನೋ ಅನ್ನುವಷ್ಟು ಬಿಸಿಲು. ನಾನು ಡೀಪ್ ಫ್ರೀಜ್ ಮಾಡಿದ ನೀರಿನ ಬಾಟಲಿ ಬಿಸಿಲಿಗೆ ಕರಗುವುದು ಬೇಡ ಅಂತ ನನ್ನ ಬ್ಯಾಗ್ ನ್ನು ನನ್ನ ನೀಹಾ ಮಧ್ಯೆ ಸೀಟಿನ ಮೇಲೆ ಇಟ್ಟು ಬಿಟ್ಟೆ. ಮುಕ್ಕಾಲು ಗಂಟೆ ನಂತರ ಯಾವುದೋ ಅಂಗಡಿ ಮೇಲೆ ಬನಶಂಕರಿ ಅಂದ ಬರೆದಿದ್ದು ನೋಡಿ, ಪ್ಲೀಸ್ ಎಲ್ಲಾದ್ರೂ ಕೇಳುವಾ ಅಂದೆ. ಅವರು ಒಂದು ಬೇಕರಿ ಬಳಿ ನಿಲ್ಲಿಸಿ ಸಾಗರ್ ಹೋಟಲ್ ಎಲ್ಲಿ ಅಂತ ಕೇಳಿದ್ರು, ನಾನು ಬೇಗ ಬೇಗ ಅಯ್ಯೋ ಹೋಟಲ್ ಅಲ್ಲ ದಯಾನಂದ ಸಾಗರ್ ಕಾಲೇಜ್ ಅಂದೆ. ಅವರು ಹೇಳಿದ್ರು. ಹೂಂ ಅಂತ ಡ್ರೈವರ್ ಹೊರಟರೂ ಎರಡು ಮೂರು ಕಡೆ ಕೇಳಿ ನಮಗೆ ದಯಾನಂದ ಕಾಲೇಜ್ ಎದುರಿಗೆ ಬಿಟ್ಟರು. ಅಲ್ಲೇ ಕಬ್ಬಿನ ಹಾಲು ಮಾರುವವನಿಗೆ ಕೇಳಿದ್ವಿ ಅವನು ಕರೆಕ್ಟ್ ಆಗಿ ಸುಬ್ಬಣ್ಣ ಆಪ್ತ ರಂಗಮಂದಿರ ಕ್ಕೆ ದಾರಿ ತಿಳಿಸಿದ. ಮುಂದೆ ನನಗೆ K V Subbanna Intimate Theatre ಬೋರ್ಡ್ ತೋರಿಸಿ ನಿಹಾ ಕಿಸಿ ಕಿಸಿ ನಗ್ತಾ ಇದ್ದಳು. ಮನೆಯ ಮೇಲಿನ ಜಾಗವನ್ನು ಸಿನಿಮಾ ಹಾಲ್ ಆಗಿ ಕನ್ವರ್ಟ್ ಮಾಡಿದ್ದಾರೆ. ನಾವು ಒಳಗೆ ಹೋದಾಗ ಬೆರಳಣಿಕೆಯಷ್ಟು ಜನ ಮಾತ್ರ ಇದ್ದರು. ಎಲ್ಲರೂ ಮಾರಾಠಿ ಮಾತಾಡ್ತಾ ಇದ್ದರೆ ನಾನು ನನ್ನ ಮುಂಬೈ ಯನ್ನು ಮಿಸ್ ಮಾಡ್ಕೊಳ್ಳುತ್ತ ಅವರ ಮಾತನ್ನು ಕೇಳ್ತಾ ಇದ್ದೆ. ಯಾರೋ ಒಬ್ಬರು ಕಾಕಸ್ಪರ್ಶದ ಕತೆ ಹೇಳ್ತಾ ಇದ್ದರು. ತೀರ ನನ್ನ ಪಕ್ಕ ಕುಳಿತ ದಂಪತಿಗೆ ಕನ್ನಡ ಬರುತ್ತಿರಲಿಲ್ಲವಾದ್ದರಿಂದ, ಅನುವಾದ ಮಾಡುವ ಕೆಲಸ ನನ್ನ ಪಾಲಿಗೆ ಬಿತ್ತು.
ತುಂಬ ಇಕ್ಕಟ್ಟು. ಒಬ್ಬರು ಅಲ್ಲಾಡಿದರೆ ಆ ಸಾಲು ಪೂರ್ತಿ ಅಲ್ಲಾಡ್ತಾ ಇತ್ತು. ನನಗಂತು ಸುಮ್ಮನೆ ಕೂರಲು ಆಗುವುದಿಲ್ಲ. ಪ್ರತಿಸಲ ನನ್ನ ಕೈ ಯೋ ಕಾಲೋ ಬೇರೆ ಯವರ ಕುರ್ಚಿಗೆ ತಾಗಿ ಅವರು ಹಿಂದುರುತಿ ನೋಡುವುದೋ, ಕೆಂಗಣ್ಣು ಬಿಡುವುದೋ , ನಾನು ಸಾರಿ ಹೇಳುವುದು ನಡೀತಾ ಇತ್ತು. ಅದಕ್ಕೆ ನಿಹಾ 'ಇದಕ್ಕೆ ಇಂಟಿಮೇಟ್ ಅನ್ನೋದು ಅಂದಾಗ ಕಷ್ಟ ಪಟ್ಟು ನಗು ತಡೆಹಿಡಿದೆ. i enjoyed. ಸಾಧಾರಣ ಸನ್ ಸೆಟ್ ಹೊತ್ತಿಗೆ ಆ ಹಾಲ್ ಎಷ್ಟು ಬಿಸಿಯಾಯ್ತೆಂದರೆ ನಾನೇದರೂ ಯೀಷ್ಟ್ (yeast) ತಿಂದಿದ್ದರೆ ಬ್ರೆಡ್ ಅಥವ ಕೇಕ್ ಆಗೋದು ಗ್ಯಾರಂಟಿ ಇತ್ತು.

ಸಿನಿಮಾ ವಾಸ್ತುಪುರುಷ, ಅದರ ಜಂಟಿ ನಿರ್ದೇಶಕರು ಸುಮಿತ್ರಾ ಭಾವೆ ಮತ್ತು ಅವರ ಶಿಷ್ಯ ಸುನಿಲ್ ಸುಂಕ್ಟಂಕರ್.
ವಯಸ್ಸಾದ ಡಾ.ಭಾಸ್ಕರ್ ದೇಶಪಾಂಡೆ ಗೆ ಮುಂಬೈ ನ ಸ್ಲಮ್ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಸೇವೆ ಸಲ್ಲಿಸಿದಕ್ಕೆ ಮ್ಯಾಗಸೆಸೆ ಪುರಸ್ಕಾರ ನೀಡಲಾಗುತ್ತದೆ. ಅವರ ಮಗ ಮತ್ತು ಅಮೇರಿಕನ್ ಸೊಸೆ ಮುಂಬೈಗೆ ಬರುವವರಿದ್ದರು. ಅವರೆಲ್ಲ ಸೇರಿ ಡಾಕ್ಟರ್ ಭಾಸ್ಕರ್ ಹುಟ್ಟಿದ ಅವರ ಮೂಲ ಊರಾದ ನಂದಗಾಂವ್ ಗೆ ಹೋಗುವ ಪ್ಲ್ಲ್ಯಾನ್ ಹಾಕುತ್ತಾರೆ. ಅಲ್ಲಿ ತಲುಪಿದ ನಂತರ ಈಗ ಶಿಥೀಲ ಗೊಂಡ ಹಳೆ ಮನೆಯನ್ನು ನೋಡಿ, ಅವರು ಡಾಕ್ಟರ್ ಆಗಬೇಕಾದರೆ ಏನೆನೆಲ್ಲ ಘಟನೆಗಳು ಅವರ ಚಿಕ್ಕಂದಿನಲ್ಲಿ ನಡೆಯಿತು ಎಂದು ನೆನಸಿಕೊಳ್ಳುವುದು ಕಥೆಯ ಸಾರಾಂಶ. ಈ ಸಿನಿಮಾದಲ್ಲಿ ಫ್ಲಾಶ್ ಬ್ಯಾಕ್ ಟೆಕ್ನಿಕ್ ತುಂಬ ಹೊಸತರ ಆಗಿದೆ. ವಯಸ್ಸಾದ ಡಾಕ್ಟರ್ ಮತ್ತು ಅವರು ಹುಡುಗನಾಗಿದ್ದ ಘಟನೆಗಳನ್ನು ಕೆಲವೊಮ್ಮೆ ಮುಖಾಮುಖಿ ಅಂದರೆ ಒಂದೆ ಫ್ರೇಮ್ ನಲ್ಲಿ ಇಬ್ಬರೂ ಸಂಧಿಸುವುದು ತೋರಿಸಿದ್ದು ಸಿಕ್ಕಾಪಟ್ಟೆ ಇಷ್ಟ ಆಯ್ತು ನನಗೆ. ಜೀವನ ದಲ್ಲಿ ನಮಗೆಲ್ಲ ರಿಗ್ರೆಟ್ ಇದ್ದೆ ಇರುತ್ತದೆ ಈ ರಿಗ್ರೆಟ್ ಗಳನ್ನೆಲ್ಲ ಆ ಡಾಕ್ಟರ್ ಕೂಡ ಹೆಜ್ಜೆ ಹೆಜ್ಜೆ ಗೆ ಅನುಭವಿಸುತ್ತಾರೆ. ಆಗ ಅರ್ಥ ಆಗದಿದ್ದನ್ನು ಉತ್ತರಿಸಲಾಗದಿದ್ದನ್ನು ಪ್ರಶ್ನಿಸಲಾಗದಿದ್ದನ್ನು ಈಗ ಸ್ಪಂಧಿಸುವ ಮೂಲಕ- ಅದನ್ನು ತೋರಿಸಿದ ರೀತಿ ಅನನ್ಯ.(ಇದನ್ನು ಇನ್ನೂ ಚೆನ್ನಾಗಿ explain ಮಾಡಲು ಬರ್ತಾ ಇಲ್ಲ) :-(
ಡಾ ಭಾಸ್ಕರ್ ಮನೆಯಲ್ಲಿ ಅವರ ಗಾಂಧಿ ತತ್ವ ಪರಿಪಾಲಿಸುವ ಸ್ವಾತಂತ್ರ್ಯ ಹೋರಾಟಗಾರ ತಂದೆ, ತಾಯಿ, ಭಾಸ್ಕರ್ ನ ಅಣ್ಣ ನಿಶಿಕಾಂತ್, ಚಿಕ್ಕಪ್ಪ, ಮನೆಯ ಆಳು ಗೋಟುರಾಮ್ ಮತ್ತು ಹೆಲ್ಥ್ ಸೆಂಟರ್ ನಡೆಸುವ ಕೃಷ್ಣಾ ತಾಯಿ, ಭಾಸ್ಕರ್ ನ ಸ್ನೇಹಿತ ಇವರೆಲ್ಲರ ಸುತ್ತು ತಿರುಗುತ್ತದೆ. ಚಿಕ್ಕಪ್ಪನ ಹೆಂಡತಿ ಮತ್ತು ಮಗಳು ತೀರಿಕೊಂಡಿದ್ದಾರೆ. ಅವರಿಗಿನ್ನೂ ಚಿಕ್ಕ ವಯಸ್ಸು. ಭಾಸ್ಕರ್ ನ ಅಣ್ಣ ನಿಶಿಕಾಂತ ಟಿ.ಬಿ ತಗುಲಿದ್ದು ಔಷಧಿಯಿಂದ ಗುಣಮುಖನಾದರೂ ಅವನ ಆತ್ಮ ವಿಶ್ವಾಸ ಕಳಕೊಂಡುಬಿಟ್ಟಿರುತ್ತಾನೆ. ಕವನಗಳನ್ನು ಬರೆದಿಡುತ್ತಾನೆ. ಕೃಷ್ಣಾತಾಯಿ ಯನ್ನು ಪ್ರೀತಿಸುತ್ತಾನೆ ಆದರೆ ಅವಳು ಅನ್ಯ ಜಾತಿಯವಳು, ತಂದೆ ಈ ಮದುವೆಯನ್ನು ತಪ್ಪಿಸುತ್ತಾರೆ, ಆದರೆ ಅವನಿಗೆ ಎಲ್ಲರನ್ನೂ ಧಿಕ್ಕರಿಸಿ ಮದುವಯಾಗುವ ಧೈರ್ಯ ಇರುವುದಿಲ್ಲ. ಊರಿನಲ್ಲಿ ನಡೆಯುವ ನಾಟಕ ಸಂಗೀತ ಅಂತ ಭಾಸ್ಕರ್ ನ ಅಣ್ಣ ಹಾಗೂ ಚಿಕ್ಕಪ್ಪ ಇಬ್ಬರೂ ಅಂಡೆಲೆಯುತ್ತಾರೆ. ಕಷ್ಟ ಪಟ್ಟು ಕೆಲಸ ಮಾಡದೆ ಇದ್ದ ಆಸ್ತಿ ಯನ್ನೇ ತಿಂದುಂಡು ಈಗ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಭಾಸ್ಕರ್ ನ ಅಮ್ಮನಿಗೆ ಒಂದೆ ಆಸೆ ಭಸ್ಕರ್ ನಿಗೆ ಡಾಕ್ಟರ್ ಓದಿಸಿ, ಅವರ ಊರಲ್ಲೆ ಬಡ ಬಗ್ಗರ ಸೇವೆ ಮಾಡಿಕೊಂಡಿದ್ದು, ಅವರ ಪೂರ್ವಜರು ಮಾಡಿದ ಒಳ್ಳೆ ಕೆಟ್ಟ ಕೆಲಸಗಳಿಗೆಲ್ಲ ವಾಸ್ತುಪುರುಶನಿಗೆ ಶಾಂತಿ ಮಾಡಿಸಿ ಮುಂದಿನ ಪೀಳಿಗೆಯವರ ಜೀವನವಾದರೂ ಸುಧಾರಿಸಬೇಕೆಂಬುದು. ಚಿಕ್ಕಪ್ಪ ಮತ್ತು ನಿಶಿಕಾಂತ ಎಲ್ಲೋ ಓದಿದ್ದ ಪ್ರಕಾರ ಅವರ ಹಳೆಮನೆಯನ್ನು ಕಾಯುತ್ತಿರುವ ವಾಸ್ತುಪುರುಷ ಅವರಿಗೋಸ್ಕರ ನಿಧಿಯನ್ನು ಆ ಮನೆಯಲ್ಲೇ ಎಲ್ಲೋ ಬಚ್ಚಿಟ್ಟಿದ್ದಾನೆ. ಈ ನಿಧಿಯನ್ನು ಹುಡುಕಲೋಸುವ ಅವರಿಬ್ಬರೂ ರಾತ್ರಿ ಮನೆಯನ್ನು ಅಗೆಯಲು ಪ್ರಾರಂಭಿಸುತ್ತಾರೆ. ಆ ನಿಧಿಯಿಂದ ಬರುವ ಹಣದಿಂದ ಅವರು ಭಾಸ್ಕರ್ ನಿಗೆ ಡಾಕ್ಟರ್ ಓದಿಸಲು ಕಾತುರರಾಗಿರುತ್ತಾರೆ.
ಅವರ ತಂದೆ, ಬುದ್ಧಿವಂತ ಮಗನ ಯಾವ ಸಹಾಯಕೂ ಬರುವುದಿಲ್ಲ ಅನ್ನುತ್ತಾರೆ. 'ಅವನೆ ಕಷ್ಟ ಪಟ್ಟು ಓದಿ ಡಾಕ್ಟರ್ ಆಗಲಿ ನಾನಂತು ಲಂಚ ಕೊಡುವುದಿಲ್ಲ ಹಾಗೂ ಯಾರ ಕಾಲಿಗೆ ಬೀಳುವುದಿಲ್ಲ' ಎಂಬ ಧೋರಣೆ. ಅವರ ಧೋರಣೆಯನ್ನು ಹೆಂಡತಿ ಕಟುವಾಗಿ ಟೀಕಿಸಿದಕ್ಕೆ ಸಿಟ್ಟು ಮಾಡಿಕೊಂಡು ಭಾಸ್ಕರ್ ನ ತಂದೆ (ಈ ಸೀನ್ ನ ಡಯಲೋಗ್ ಸಕತ್ ಇಷ್ಟ ಆಯ್ತು) ಮನೆ ಬಿಟ್ಟು ಹೋಗುತ್ತಾರೆ. ಹನ್ನೆರಡನೆ ಇಯತ್ತೆಯಲ್ಲಿ ಭಾಸ್ಕರ್ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣ ನಾಗಿ ಮುಂಬೈ ನ ಪ್ರತಿಷ್ಟಿತ ವೈದಕೀಯ ಕಾಲೇಜು-ಗ್ರಾಂಟ್ ಮೆಡಿಕಲ್ ಕಾಲೇಜ್ ನಲ್ಲಿ ಪ್ರವೇಶಪಡೆಯಲು ಅರ್ಹನಾಗುತ್ತಾನೆ. ಎರಡೇ ದಿನದಲ್ಲಿ ಫೀಸ್ ಕೂಡ ತುಂಬ ಬೇಕೆಂಬ ಆದೇಶ ಕಾಲೇಜಿನಿಂದ ಬರುತ್ತೆ. ಅವನ ತಾಯಿ ಅವಳ ಬಳೆಗಳನ್ನು ಮಾರಲು ಕೃಷ್ಣಾತಾಯಿಯ ಜತೆ ಹೋಗಿರುತ್ತಾರೆ. ಆಗ ಮನೆಯಲ್ಲಿ ನಿಧಿಗಾಗಿ ಅಗೆಯುತ್ತಿದ್ದ ಅಣ್ಣ ಹಾಗೂ ಚಿಕ್ಕಪ್ಪನ ಗುದ್ದಲಿಗೆ ಏನೋ ತಾಗಿ 'ಝಣ್' ಅಂತ ಸದ್ದು ಬರುತ್ತೆ. ಏನೋ ಬೆಳಗುತ್ತಿರುವ ಸಾಮಾನು ಕಾಣುತ್ತಿರಲು ಅದು ನೆಲದಲ್ಲಿ ತುಂಬ ಹೂತು ಹೋಗಿದ್ದರಿಂದ ಚಿಕ್ಕಪ್ಪ ಡೈನಮೈಟ್ ತಂದು ಮನೆಯಲ್ಲಿ ಇಡುತ್ತಾನೆ. ಇತ್ತ ಬಂಗಾರ ಮಾರಿ ಮನೆಗೆ ಬರುವಾಗ ಜೋರು ಮಳೆಯಾಗುವ ಸಂಭಾವನೆ ಎದ್ದು ಕಾಣುತ್ತದೆ. ಭಾಸ್ಕರ್ ನ ಅಮ್ಮ ಅವನಿಗೆ ಸೀದ ಬಸ್ ಹಿಡಿಯಲು ಹೋಗಲು ಹೇಳುವಷ್ಟರಲ್ಲಿ ಅವರ ಮನೆಯಲ್ಲಿ ಸ್ಫೋಟ ನಡೆದು ಬೆಂಕಿ ಜ್ವಾಲೆ ಮೇಲೇರುವುದು ಕಾಣಿಸುತ್ತದೆ. ಅವನ ಅಮ್ಮ ಭಾಸ್ಕರನಿಗೆ ಆಣೆ ಇಟ್ಟು ನೀನು ಮುಂದಕ್ಕೆ ಹೋಗು, ಡಾಕ್ಟರ್ ಆಗಿ ಈ ಊರಲ್ಲಿ ಸೇವೆ ಸಲ್ಲಿಸು ಈಗ ಬಸ್ ಹಿಡಿಯಲು ಹೋಗು ಹಿಂದುರುಗಿ ನೋಡಬೇಡ ಅನ್ನುವ ಆದೇಶ ಹೊರಡಿಸುತ್ತಾಳೆ. ಮುಂದೆ ಕೃಷ್ಣಾ ತಾಯಿ ಅವನಿಗೆ, ಅಕ್ಷರ ಜ್ಞಾನ ಇಲ್ಲದ ಅಮ್ಮನ ಪರವಾಗಿ ಪತ್ರಗಳನ್ನು, ಆಗಾಗ ತಿಂಡಿಗಳನ್ನು ಕಳುಹಿಸುವುದು, ಮಾಡುತ್ತ ಅಪರೂಪಕ್ಕೆ ಅವನನ್ನು ಭೇಟಿಯಾಗಲು ಮುಂಬೈಗೆ ಬರುತ್ತಾಳೆ. ಒಂದೊಮ್ಮೆ ಅವಳು ನಿಮ್ಮ ಮನೆಯಲ್ಲಿ ಎಲ್ಲರೂ ತೀರಿಕೊಂಡಿದ್ದಾರೆ, ನಾನೇ ನಿನ್ನ ಆತ್ಮ ವಿಶ್ವಾಸ ಕುಗ್ಗದಿರಲಿ ಅಂತ ಹಾಗೂ ನಿನ್ನ ಅಮ್ಮನ ಆಣೆಯ ನಿಮಿತ್ತ ನಿನಗೇನೂ ಹೇಳಲಿಲ್ಲ ಅಂದವಳೇ ಆ ದಿನ ಅವನ ಜೀವನ ದಿಂದ ಹೊರನಡೆಯುತ್ತಾಳೆ.

ಪ್ಲ್ಯಾಶ್ ಬ್ಯಾಕ್ ಮುಗಿಯುವ ಹಂತಕ್ಕೆ ಬಂದಾಗ ಡಾ ಭಾಸ್ಕರ್ ನ ಮಗ ಮತ್ತು ಅವರ ಹೆಂಡತಿಗೆ ಇಲ್ಲಿ ಬಂದು ನೆಲೆಸುವ ಆಸಕ್ತಿ ಇಲ್ಲದಿರುವುದು ವ್ಯಕ್ತಪಡಿಸುತ್ತಾರೆ. ಕೃಷ್ಣಾತಾಯಿಯ ಮೊಮ್ಮಗಳು ಇವರ ಜತೆ ಯಲ್ಲಿ, ಮೂಲಮನೆಯನ್ನು ಆಸ್ಪತ್ರೆಯಾಗಿಸಿ ಅವರ ಜತೆಯಲ್ಲಿ ಸಹಕರಿಸಲು ಆಶಯ ವ್ಯಕ್ತ ಪಡಿಸುತ್ತಾಳೆ.
ಸಿನಿಮಾದ ಪ್ರಾರಂಭ ಹಾಗೂ ಕೊನೆಯಲ್ಲಿ ಮನೆಯಲ್ಲಿ ವಾಸ್ತುಪುರುಷನ ರೂಪದಲ್ಲಿ ಹರಿಯುವ ಹಾವನ್ನು ತೋರಿಸುತ್ತಾರೆ.
ಸಿನಿಮಾದ ಪ್ರಾರಂಭ ಹಾಗೂ ಕೊನೆಯಲ್ಲಿ ಮನೆಯಲ್ಲಿ ವಾಸ್ತುಪುರುಷನ ರೂಪದಲ್ಲಿ ಹರಿಯುವ ಹಾವನ್ನು ತೋರಿಸುತ್ತಾರೆ.
ಇಷ್ಟು ವಾಸ್ತುಪುರುಷದ ಸಂಕ್ಷಿಪ್ತ ಕತೆ.
ಎಲ್ಲರೂ ಒಳ್ಳೆಯ ಅಭಿನಯ ಕೊಟ್ಟಿದ್ದಾರೆ. ಉತ್ತರಾ ಬಾವ್ ಕರ್ ಅಂತೂ ಧೈರ್ಯವಂತೆ practical ಆಗಿ ಯೋಚಿಸುವ ತಾಯಿಯಾಗಿ ಎಲ್ಲರನ್ನೂ ಮೀರಿಸಿದ್ದಾರೆ. ಒಟ್ಟಾರೆ ಟೀಮ್ ವರ್ಕ್ ಇಲ್ಲಿ ಎದ್ದುಕಾಣುತ್ತದೆ. ಇಡಿ ಸಿನಿಮಾದಲ್ಲಿ ಬಾಂಸುರಿಯದೇ ಬ್ಯಾಕ್ ಗ್ರೌಂಡ್ ಸ್ಕೋರ್. ಯಾವುದೇ ಅಬ್ಬರವಿಲ್ಲದೆ ನಿಧಾನಕ್ಕೆ ನಿಮ್ಮ ಒಳಹೊಕ್ಕುವ ಸಿನಿಮಾ
ತಂದೆ ಯಾಗಿ ಸದಾಶಿವ್ ಅಮ್ರಾಪುರ್ ಕರ್, ಅಣ್ಣ ನಾಗಿ ನಿಶಿಕಾಂತ್ ಅತುಲ್ ಕುಲಕರ್ಣಿ, ಚಿಕ್ಕಪ್ಪನಾಗಿ ರವೀಂದ್ರ ಮನಕಣಿ, ಚಿಕ್ಕ ಭಾಸ್ಕರ್ ಆಗಿ ಸಿಧ್ಧಾರ್ಥ ದಫ್ತರ್ ದಾರ್, ವಯಸ್ಸಾದ ಡಾ ಭಾಸ್ಕರ್ ಮಹೇಶ ಎಳಕುಂಚವಾರ್ ಆಗಿ ಪಾತ್ರ ವಹಿಸಿದ್ದಾರೆ. ಒಂದು ಚೆಂದದ ಸಿನಿಮಾ ನೋಡುವ ಅವಕಾಶ.
ಇಲ್ಲಿದೆ ಸಿನಿಮಾದ ಟ್ರೈಲರ್
ಈ ವರ್ಷದ ಪ್ರಜಾವಾಣಿ ಯುಗಾದಿ ವಿಶೇಷಾಂಕದಲ್ಲಿ ಈ ಸಿನಿಮಾದ ಡೈರಕ್ಟರ್ ಸುಮಿತ್ರಾ ಭಾವೆ ಹಾಗೂ ಸುನಿಲ್ ಸುಂಕ್ಟಂಕರ್ ಜತೆ ಪ್ರೋ. ಮನು ಚಕ್ರವರ್ತಿ ನಡೆಸಿದ ಸಂದರ್ಶನ ಪ್ರಕಟಿಸಿದ್ದಾರೆ
ಮನು ಸರ್ - ನಿಹಾರಿಕಾಳ ಪ್ರೊಫೆಸರ್ - ಸಿನಿಮಾದ ಬಗ್ಗೆ ವಿವರವನ್ನು ತುಂಬ ಚೆನ್ನಾಗಿ ನೀಡಿದರು. ನಿಹಾ ಕೊನೆಗೆ 'ಎಷ್ಟು ಚೆನ್ನಾಗಿ ಹೇಳ್ತಾರಲ್ಲವಾ ನಮ್ಮ ಮನು ಸರ್' ಅಂದಾಗ ನಿಜಕ್ಕೂ ಒಪ್ಪಿದೆ ಮಾತ್ರವಲ್ಲ, you are lucky to have such a teacher ಅಂತ ಹೇಳಿದೆ. ಸಮೂಹದವರು ಆ ಕಾರ್ಯಕ್ರಮದ ಬಗ್ಗೆ ವರದಿ ಕಳುಹಿಸಿದರೆ ಮುಂದೆ ಅದನ್ನು ಇಲ್ಲೆ ಹಾಕುತ್ತೇನೆ.
ವಾಸ್ತುಪುರುಷ: ಮನೆಯನ್ನು ಕಾಯ್ವ ದೈವ
ಇನ್ನೇನಾದರು ನೆನಪು ಬಂದರೆ ಇಲ್ಲಿ add ಮಾಡ್ತೇನೆ. ಮರೆಯುವ ಮುನ್ನ ಸುಮ್ನೆ ಹೀಗೇ ಗೀಚಿದ್ದೇನೆ. ಇತ್ತಿಚಿಗಿನ ವರ್ಷಗಳಲ್ಲಿ ಹಲವಾರು ಒಳ್ಳೆಯ ಮರಾಠಿ ಸಿನಿಮಾಗಳು ಬರುತ್ತಿವೆ.
The story begins with the news saying that Dr. Bhaskar Deshpande has won the Magsaysay award for his contriubution in providing preventive medical care to the slum dwellers in Mumbai. The next day the Doctor is all set to go to the airport to receive his son and foreigner wife and visit his ancestral home in Nandagaon. He is visiting his house after a span of 40 years
Once he reaches the house which is falling apart he recalls his struggles and travails he had to face to become a doctor.
He decides to stay in his ancestral home and start a hospital there to appease the Vastupurush- family's guardian spirit as per his mothers wishes who feels and pounds into his head repeatedly during his childhood days that 'our fuedal Brahmin family has done a lot of injustice to the people residing in this village. you should become a doctor and serve the poor and the needy here. its the best way to undo our past wrongdoings and also to undo their curse that has fallen upon our vastupurush'