ಒಂದು ಹೊಸ ಸಮಸ್ಯೆ ಶುರು ಆಗಿದೆ. ನಾನು ಯಾವುದಾದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರೆ, ಅದರ ಬಗ್ಗೆ ರಿಪೋರ್ಟ್ ಮಾಲತಿ ಮ್ಯಾಡಂ ಬ್ಲಾಗ್ ನಲ್ಲಿ ಓದ ಬಹುದು ಅಂತ. ಅಯ್ಯೋ ನಾನು ಎಟೆಂಡ್ ಆಗೋದು ನನಗೆ ತುಂಬಾssss ಆಪ್ತ ಎನಿಸಿದವರ ಸಮಾರಂಭಗಳನ್ನು ಮಾತ್ರ. ಮತ್ತೆ ಭಾಗವಹಿಸಿದ ಸಮಾರಂಭಗಳದ್ದೆಲ್ಲsss ನಾ ಬರೆಯಲ್ಲ. ಈ ಹಿಂದೆ ವಸುಧೇಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿ ಬಂದು ಅದರ ಬಗ್ಗೆ ಸುಮ್ನೆ ತಮಾಶೆಗೆ ಬರೆದಿದ್ದು, ಅದು ಫೇಸ್ ಬುಕ್ ನಲ್ಲಿ ಶೇರ್ ಆಗಿದ್ದು ಇಂತಹ ಗಲತ್ ಫೆಹಮಿ ಗೆ ಕಾರಣ. :-)
ಹೌದು ವಸುಧೇಂದ್ರ ಅತ್ಯಂತ ಆತ್ಮೀಯರು. ನಾನು ಅವರನ್ನು ಫ್ರೆಂಡ್ ಅನ್ನುತ್ತೇನಾದರು, ಸಾಧಾರಣ ವಾಗಿ ಫ್ರೆಂಡ್ಸ್ ಆದವರು ಎಷ್ಟು ಒಡನಾಡಬೇಕು ನಾನು ಅಷ್ಟು ಅವರ ಜತೆ ಒಡನಾಡುವುದಿಲ್ಲ. ಆದರೆ ನನಗೆ ಅಗತ್ಯ ಬಿದ್ದಾಗ ಯಾವುದೇ ಸಹಾಯ (ಆಫಿಸ್ ಫ್ರಂಟ್) ಬೇಡಿದರು ಅದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಭೇಟಿಯಾಗಿದ್ದಾಗಲೂ ಅವರು ಯಾರ ಬಗ್ಗೆ ಕುಹುಕ ಮಾತಾಡುವುದು ಇರಲಿ, ಬೇರೆಯವರ ಬಗ್ಗೆ ಕೆಟ್ಟದ್ದು ಮಾತಾಡುವುದಿರಲಿ ಮುಂತಾದ್ದನ್ನು ಮಾಡುವುದಿಲ್ಲ. ತುಂಬ ಹಾಸ್ಯ ಪ್ರವೃತ್ತಿಯವರು. ಇದರಿಂದ ನನಗೆ ಅವರ ಜತೆ ತುಂಬಾ ಕಂಫರ್ಟೇಬಲ್ ಅನ್ನಿಸುತ್ತೆ.
ಅವರ ಬರಹ ಕೂಡ ಅವರಂತೆಯೇ ಆಪ್ತ, honest. ಜೀವನ ಪ್ರೀತಿಯಿಂದ ಕೂಡಿದ ಬರಹಗಳು is not everybody's cup of tea ((or coffee), ಆಮೇಲೆ ಕಾಫಿ ಪ್ರಿಯರು ನನ್ನ ಮೇಲೆ ಸಿಟ್ಟಾಗುವುದು ಬೇಡ :-))
ನಿನ್ನೆಯ ಕಾರ್ಯಕ್ರಮದ ಬಗ್ಗೆ ಚುಕ್ಕುಬುಕ್ಕು ವೆಬ್ಸೈಟ್ ನಲ್ಲಿ ಹಾಕುತ್ತಾರೆಂದು ರಘು ಹೇಳಿದ್ದಾರೆ. ಅದನ್ನು ಇಲ್ಲಿ ಲಿಂಕಿಸುತ್ತೇನೆ. ಎಷ್ಟು ಆಪ್ತವಾಗಿತ್ತು ನಿನ್ನೆಯ ಕಾರ್ಯಕ್ರಮ ಎಂದು ನಿಮಗೂ ಗೊತ್ತಾಗುತ್ತೆ. ಎಂಜಾಯ್
ಜ್ಯೋತಿ ಫೋನ್ ಬಂದಾಗ ನಾನು "ವಸುಧೇಂದ್ರರ ಕಾರ್ಯಕ್ರಮ ಅಂದ್ರೆ ಸಭೆ ಕಿಕ್ಕಿರಿದು ತುಂಬಿರುತ್ತೆ, ನಾನು ಮೊದಲು ತಲುಪಿದ್ರೆ ನಿಮಗೆ ಸೀಟ್ ರಿಸರ್ವ್ ಮಾಡಿರ್ತೀನಿ ಅಂದಿದ್ದೆ, ಆದರೆ ನಾನು ಮನೆಯಲ್ಲಿ ಒತ್ತು ಶ್ಯಾವಿಗೆ, ಮಿತ್ರ ನೀಲೇಶ ಜವಳಿ ತೀರ್ಥಹಳ್ಳಿಯಿಂದ ಬರುತ್ತಾರೆಂದು ಅರ್ಧ ಅಡಿಗೆ ಮಾಡಿ ಬರುವುದರಷ್ಟರಲ್ಲಿ ನಾನು ತಲುಪುವಾಗ ಸ್ವಲ್ಪ ಲೇಟ್. ಜ್ಯೋತಿ ನನಗೋಸ್ಕರ ಜಾಗ ಕಾಯ್ದಿಟ್ಟಿದ್ದರು. ನಿಹಾ ತೆಗೆದ ಫೊಟೊ. ಸುಮ್ನೆ ನಿಲ್ಲಬೇಡಿ ಏನಾದರೂ ಮಾತಾಡಿ ಅಂದಾಗ ಜ್ಯೋತಿ 'hi malthi how r u? ಅಂದಾಗ ನಾನು ಥಟ್ ಅಂತ 'ಐ ಯಾಮ್ ಫೈನ್' ಅಂತ ನಕ್ಕಾಗ ನಿಹಾ ಕ್ಲಿಕ್ಕಿಸಿದ್ದು. :-)
ಜ್ಯೋತಿ ಕಡಲಾಡಿ, ವಸುಧೇಂದ್ರ ಮತ್ತು ನಾನು. ಅವರ ಫ್ಯಾನ್ ಗಳ ಮಧ್ಯ ಹೊಕ್ಕಿ ಫೋಟೊ ತೆಗೆದದ್ದೆ ಒಂದು ಸಾಹಸ/ಸಂಭ್ರಮ. :-)
ಶತಾವಧಾನಿ ಆರ್ ಗಣೇಶ ಅವರು ಎಷ್ಟೊಂದು ಓದಿಕೊಂಡಿದ್ದಾರೆ ಅಂತ ದಿಗಿಲು ಖುಶಿ ಅನ್ನಿಸಿತು. ಅವರು ಅಂದ ಮಾತು 'ಬರಹ ನಿಂತ ಕಲ್ಲಾಗದಂತೆ ಹರಿಯುವ ಶಾಸನದಂತಿರಬೇಕು' ತುಂಬ ಇಷ್ಟ ಆಯ್ತು. ಶತಾವಧಾನಿ ಆರ್. ಗಣೇಶ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ. ಅಶೋಕ ಮತ್ತು ವಸುಧೇಂದ್ರರ ಆಪ್ತ ಮಿತ್ರರಾದ ಎಮ್. ದತ್ತಾತ್ರಿ ಅವರ ಬರಹಗಳ (ಕತೆ, ಕಾದಂಬರಿ, ಲಘು ಬರಹ) ಬಗ್ಗೆ ಎಷ್ಟು ಚಂದದ ಮಾತನ್ನಾಡಿದರು ಅಂದ್ರೆ ನಾನು ಪುನ: ಅವರ ಪುಸ್ತಕಗಳನ್ನು ಓದುತ್ತಾ ಇದ್ದೇನೆ. ನನ್ನ ಮಗಳು ನಿಹಾರಿಕಾ ಕನ್ನಡ ಪುಸ್ತಕ ಓದುವುದು ಕಡಿಮೆ. ಶಿಕಾರಿ ಮುಖಪುಟ ಸ್ಪರ್ಧೆಯಲ್ಲಿ ಭಾಗವಹಿಸಲು (ಅದರ ಬಗ್ಗೆ ಪೋಸ್ಟ್ ಮುಂದೆ) ಶಿಕಾರಿ ಓದುತ್ತಿದ್ದಾಳೆ, ಆದರೆ ಕಾರ್ಯಕ್ರಮದಲ್ಲಿ ಘಟಾನುಘಟಿಗಳ ಮಾತು, ಅದಕ್ಕೆ ತಕ್ಕಂತೆ ನಮ್ಮ ನಗು ಚಪ್ಪಾಳೆಯಿಂದ ಎಷ್ಟು ಪ್ರಭಾವಿತಳಾಗಿದ್ದಾಳೆ ಅಂದ್ರೆ ಅವಳು ವಸುಧೇಂದ್ರರ ಪುಸ್ತಕ ಓದಲು ತೊಡಗಿದ್ದಾಳೆ. ಹೇಗೂ ನನ್ನ ಬಳಿ ಅವರು ಬರೆದ ಎಲ್ಲ ಪುಸ್ತಕಗಳು ಇವೆ ಮತ್ತು ಅವಳಿಗೆ ರಜೆ. ಕಾರಣಾಂತರಗಳಿಂದ ನಮ್ಮ ಟೂರ್ ಪ್ರೋಗ್ರಾಮ್ ಕ್ಯಾನ್ಸ್ಲಲ್ಡ್ <೦>
ಇಲ್ಲಿದೆ ಚುಕ್ಕುಬುಕ್ಕು ಲಿಂಕ್ ಅವರು ಅಪ್ ಡೇಟ್ ಮಾಡಿದ ಹಾಗೆ ಓದ್ತಾ ಇರಿ.
http://www.chukkubukku.com/
ಈಗ ಬೈ
:-)

3 comments:
Exactly! Even I was hoping that you would write on the event! Sudha Murthy madam Enoo maataaDlilvaa?
lla Radhika, :-)
was expecting to c u there!
you can listen to the talks on chukkubukku
Post a Comment