December 13, 2009

ಜವೆ ಗೋದಿ ರವೆ ಉಪ್ಪಿಟ್ಟು

ಜವೆ ಗೋದಿ ರವೆ (emmer wheat rawa) ಯಿಂದ ಮಾಡಿದ ಉಪ್ಪಿಟ್ಟು ಮತ್ತು pineapple ಪುಡ್ಡಿಂಗ್ ಚಿತ್ರ.
scientific name : triticum turgidum (emmer/Durum Wheat)

ಇತರೇ ಗೋದಿಗಳಿಗೆ compare ಮಾಡಿದರೆ ಜವೆ ಗೋದಿಯಲ್ಲಿ ಹೆಚ್ಚಿನ ಪೋಷಕಾಂಶವಿದೆಯಿದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ನಾರಿನಂಶ (fibre) ಇದ್ದು ಇದರಲ್ಲಿ ಕೊಬ್ಬು ಮತ್ತು ಪಿಷ್ಟಾಂಶದ ಪ್ರಮಾಣ ಕಡಿಮೆ ಇದ್ದುದರಿಂದ ಮಧುಮೇಹಿ ಹಾಗೂ ಹೃದ್ರೋಗಿಗಳಿಗೆ ಹೇಳಿ ಮಾಡಿಸಿದಂತಹ ಆಹಾರ. ಉಪ್ಪಿಟ್ಟು ತಯಾರಿಸುವುದು ಸುಲಭ.

ಉಪ್ಪಿಟ್ಟನ್ನು ಹೇಗೆ ತಯಾರಿಸುತ್ತೀರೋ ಹಾಗೆ ತಯಾರಿಸಿ. ಇದಕ್ಕೆ ಎಣ್ಣೆ ಕಡಿಮೆ ಹಾಕಿದ್ರೆ ಒಳ್ಳೆಯದು. ಮತ್ತೆ ಸಾಧಾರಣವಾಗಿ ನಾವು 1 ಕಪ್ ರವೆ ಬಳಸಿದ್ರೆ 2 ಕಪ್ ನೀರು ಹಾಕ್ತೇವೆ. ಜವೆ ಗೋದಿ ಉಪ್ಪಿಟ್ಟಿಗೆ 3 ಕಪ್ ನೀರು ಬೇಕಾಗುತ್ತದೆ. ಕೊನೆಯಲ್ಲಿ ಒಂದು ಟಿ.ಚಮಚ ತಾಜಾ ತುಪ್ಪ,ಕೊಬ್ಬರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ.
ನಾನು ಬಿಸಿ ಬೆಳೆ ಭಾತ್ ಮಾಡಿ ಅದಕ್ಕೆ ಅಕ್ಕಿ/ಅನ್ನದ ಬದಲಿಗೆ ಈ ರವೆ ನೀರಿನಲ್ಲಿ ಬೇಯಿಸಿ, ಬಳಸಿದ್ದೇನೆ. ಟೇಸ್ಟ್ ತುಂಬ ಚೆನ್ನಾಗಿರುತ್ತದೆ.
ಈ ರವೆಯಿಂದ ಮಾಡಿದ ತಿನಿಸಿನಿಂದ ತಿಂದಾಗ ಹೊಟ್ಟೆ ತುಂಬಿದಂತೆ ಇದ್ದು, ಬೇಗ ಹಸಿವೆಯಾಗುವುದಿಲ್ಲ. ಈ ಗೋದಿಯ ಹಿಟ್ಟಿನಿಂದ ಮಾಡಿದ ಚಪಾತಿನೂ tasty ಯಾಗಿರುತ್ತೆ.
ಆದರೆ ದುರದೃಷ್ಟವಶಾತ್ ಪೇಟೆಯಲ್ಲಿನ ಸುಮಾರು ಜನರಿಗೆ ಈ ಉತ್ಪನ್ನದ ಬಗ್ಗೆ ಗೊತ್ತಿಲ್ಲ. ಹಾಗಾಗಿ demand ಇಲ್ಲದೇ ಈಗ ಜವೆ ಗೋದಿ ರವೆ ಇಲ್ಲಿ ಅಲಭ್ಯ.ನನ್ನ ಚಿಕ್ಕಪ್ಪನಿಗೆ ಚೆನ್ನಗಿ ಊಟ ತಿಂಡಿ ಮಾಡ ಬೇಕು. routine ವೈದಕೀಯ ತಪಾಸಣೆಯಲ್ಲಿ ಡಯಾಬಿಟಿಸ್ ಉಲ್ಬಣಗೊಂಡಿದ್ದು ಪತ್ತೆಯಾಯಿತು. ನಮ್ಮಲ್ಲಿ ಬಂದಾಗ ಈ ತರಹ ಬಿಸಿ ಬೆಳೆ ಭಾತ್ ಮಾಡಿ ಕೊಟ್ಟಾಗ ಅವರು ತುಂಬ ಖುಶಿ ಪಟ್ಟರು ಹಾಗೇ 5 ಕೆ.ಜಿ ಪ್ಯಾಕೆಟ್ ರವೆ ಸಹ ತೆಗೆದುಕೊಂಡು ಹೋಗಿದ್ದರು. ಈಗ ಅವರಿಗೆ ಈ ರವೆ ಸಿಗುತ್ತಿಲ್ಲ.
ಲಾಸ್ಟ್ ಒಂದೇ ಪ್ಯಾಕೆಟ್ ಉಳಿದಿದ್ದ ರವೆ ಯಿಂದ ಈ ಉಪ್ಪಿಟ್ಟು, pineapple pudding ಮಾಡಿದ್ದೇನೆ. ಚಿತ್ರ ನೋಡಿ ಆನಂದಿಸಿ ..ಹಾ ಹಾ ಹಾ

:-)

December 9, 2009

December 6, 2009

ಆತಂಕದ ಕ್ಷಣಗಳು

ಡಿಸೆಂಬರ್ 7, 1992. ಬೆಳಿಗ್ಗೆ ಹೆರಿಗೆ ನೋವು ಶುರು ಆಯ್ತು. ಹಿಂದಿನ ದಿನ ರಾತ್ರಿ ಅಂದರೆ 6 ನೆ ತಾರೀಕಿಗೆ ಅಯೋಧ್ಯೆಯಲ್ಲಿ ಬಾಬ್ರಿ ಮಸ್ಜಿದ್ ಕೆಡವಲಾಗಿದೆ ಎಂದು ಸುದ್ದಿ. ಪರಿಸ್ಥಿತಿ ಅಷ್ಟು ವೀಕೋಪಕ್ಕೆ ಹೋಗುವುದೆಂದು ಖಂಡಿತ ತಿಳಿದಿರಲಿಲ್ಲ. ನಮ್ಮ ಮನೆ ಇರೋದು ಸಾತ್ ಬಂಗ್ಲೆಯಲ್ಲಿ. ಆಸ್ಪತ್ರೆ ಮನೆಯಿಂದ ಅರ್ಧ ಕಿಲೋಮೀಟರ್(ಚಾರ್ ಬಂಗ್ಲಾ- ಮನೀಶ್ ನಗರ್) ಅಷ್ಟೆ. ನಾನು ಅಮ್ಮ ಹಿಂದಿನ ಗಲ್ಲಿಯಿಂದ ನಡೆದುಕೊಂಡು ಹೋದ್ವಿ, . ಸಂಜೆ ಹೊತ್ತಿಗೆ ನನಗೆ ಹೆರಿಗೆಯಾಯ್ತು. ರಾತ್ರಿ ಮನೆಯಿಂದ ಊಟ, ಕೆಲವು ಬಿಸ್ಕತ್, ಹಣ್ಣುಗಳನ್ನು ತಮ್ಮ ತಂದು ಕೊಟ್ಟ.
ಮರುದಿನ ಬೆಳಿಗ್ಗೆ ನಮಗೆಲ್ಲ ಆಸ್ಪತ್ರೆಯಲ್ಲೇ ಟೀ ಮತ್ತು ಬಿಸ್ಕತ್ತ್ ಸಿಕ್ತು. ಆಮೇಲೆ (ಹಿಂದು ಮುಸ್ಲಿಂ) ಗಲಾಟೆ ಶುರು ಆಗಿ ಎಲ್ಲ ಬಂದ್. ಮಧ್ಯಾನ್ಹ ತಮ್ಮ ಊಟ ತರಬೇಕಾದ್ರೆ ಅವನಿಗೆ ಲಾಠಿ ಏಟು ಬಿದ್ದು, ಅಲ್ಲಿನ constable 'ಕಹಾಂ ಜಾ ರಹೇ ಹೋ’ ಅಂತ ಕೇಳಿದ್ರಂತೆ. ಅವನು ಊಟದ ಡಬ್ಬಿ ತೋರಿಸಿ ಆಸ್ಪತ್ರೆಗೆ ಹೋಗ್ತಾ ಇದ್ದೇನೆ ಅಂತ ಹೇಳಿದ್ದಕ್ಕೆ, ತಮ್ಮನ ಮುಖ ಪರಿಚಯ ಇರುವ ಮತ್ತೊಬ್ಬ constable ’ಪೀಛೆವಾಲಿ ಗಲ್ಲಿ ಸೇ ಜಾಒ”ಅಂದನಂತೆ. ಆಸ್ಪತ್ರೆ ತಲುಪುವಷ್ಟರಲ್ಲಿ ತಮ್ಮನ ಕೈ ಊದಿ ನೀಲಿ ಬಣ್ಣಕ್ಕೆ ತಿರುಗಿತು. ನನಗೆ ತುಂಬ ಕೆಟ್ಟದೆನಿಸಿತು.ರಾತ್ರಿ ಬರಬೇಡ ಅಂತ ಹೇಳಿದೆ. ಆದರೆ ರಾತ್ರಿ ಅವನಿಗೆ ಬರಲಿಕ್ಕೆ ಆಗದೇ ಇರುವಷ್ಟು ಗಲಾಟೆ ಶುರು ಆಯ್ತು. ಕರ್ಫ್ಯು ಹಾಕಿದ್ರು. ಹೆರಿಗೆಗೆ ದೂರದಿಂದ ಬಂದ ಇತರೇ ನಾಲ್ಕು patients ಗೆ ಊಟ ಬರಲೇ ಇಲ್ಲ. ಆಸ್ಪತ್ರೆಯಲ್ಲಿರುವ stock ನಲ್ಲಿದ್ದ ಹಾಲು, ಬಿಸ್ಕತ್ತು ಖರ್ಚಾಯಿತು. ನಮಗೆ ಹೊರಗೆ ನಡೆದಿರುವ ಗಲಾಟೆ ಕೇಳಿಸ್ತಾ ಇತ್ತು. ಆಸ್ಪತ್ರೆ main road ನಲ್ಲಿರದೇ, ಎರಡು ಕಟ್ಟಡಗಳ ಮಧ್ಯ ಇದ್ದುದರಿಂದ , ಪಕ್ಕನೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. safe ಅನ್ನಿಸ್ತು. ನಮ್ಮೊಂದಿಗೆ ಇಬ್ಬರು resident ನರ್ಸ ಗಳೂ ಹಾಗೂ ಅನುಸೂಯಾ ಎಂಬ ದಾಯಿ ಇದ್ದರು.ನನಗೆ ಹೆರಿಗೆ ಮಾಡಿಸುವಲ್ಲಿ assist ಮಾಡಿದ ನರ್ಸ್ ಹೆಸರು ಸಾಯಿರಾ. ಪಳಗಿದ ಕೈ, ಸ್ನಿಗ್ದ, ನಗು ಮುಖದ ಮುಸ್ಲಿಂ ನರ್ಸ್. ಬುರ್ಖ ಹಾಕಿಕೊಂಡು ಬರುವುದು, ಹೋಗುವುದು. ನಮ್ಮ ಮರಾಠಿ ಡಾಕ್ಟರ್ ನ favorite ನರ್ಸ್. ಡಾಕ್ಟರ್ ಹತ್ತಿರ ಟ್ರೈನಿಂಗ್ ಪಡೆದವರು, ಆದರೆ ಅಸ್ಪತ್ರೆಗೆ ಬರುವಾಗ ಹಾಗೂ ಅಲ್ಲಿಂದ ಮನೆಗೆ ಹೋಗುವಾಗ ಅವರ ಗಂಡ ಬಂದೇ ಕರೆದುಕೊಂಡು ಹೋಗುವುದು.
ರಾತ್ರಿಯಾಗುತ್ತಿದ್ದಂತೆ ಗಲಾಟೆಯ ಸದ್ದು ಸ್ಪಷ್ಟವಾಗಿ ನಮಗೆ ಕೇಳಿಸಹತ್ತಿತ್ತು. ಮಲಯಾಳಿ ನರ್ಸ್ ಗಳಂತೂ ಏಸುವಿನ ಪದ್ಯ, ಬೈಬಲ್ ಓದಲು ಶುರು ಮಾಡಿದರು. ಅದುವರೆಗೆ ಅವರು ಕ್ರಿಶ್ಚಿಯನ್ನರು ಅಂತ ನನಗೆ ತಿಳಿದಿರಲೇ ಇಲ್ಲ. :-)
ನನ್ನ ಬಳಿ ಇದ್ದ ಉಟ/ಚಪಾತಿ ಆಸ್ಪತ್ರೆಯಲ್ಲಿರುವವರ ಜತೆ ಹಂಚಿಕೊಂಡೆ. ಮುಂದಿನ ನಾಲ್ಕು ದಿನ ನನ್ನ ಬಳಿಯಿರುವ ಹಣ್ಣು, ಬಿಸ್ಕತ್ತ್ ನಿಂದಲೇ ನಾವೆಲ್ಲ ಹೊಟ್ಟೆ ತುಂಬಿಸಿಕೊಂಡ್ವಿ. ಐದನೇ ದಿನ ವತಾವರಣ ಸ್ವಲ್ಪವೇ ಸ್ವಲ್ಪ ತಿಳಿ ಗೊಂಡಿತು. ಅಮ್ಮ ಮತ್ತು ತಮ್ಮ ,ಪರಿಚಯದವರ ಕಾರ್ ಮಾಡಿಕೊಂಡು ಬೇಗ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಬರುವ ಮುಂಚೆ ಆಸ್ಪತ್ರೆಗೆ ಫೋನ್ ಮಾಡಿದ್ರಿಂದ ನಾನು ಅಮ್ಮನಿಗೆ ಉಳಿದವರ ಬಗ್ಗೆ ಹೇಳಿದೆ. ಅಮ್ಮ ಅವರಿಗೆ light ಆದ ಪಲಾವ್ ಮತ್ತು ಚಪಾತಿ ಪಲ್ಯ ಮಾಡಿ ತಂದಿದ್ದರು. fridge ನಲ್ಲಿಡಲು , ನಾಲ್ಕು ದಿನ ಸಾಕಾಗುವಷ್ಟು ಅಡಿಗೆ ಮಾಡಿ ತಂದಿದ್ದರು.
ನನ್ನ ತಮ್ಮನ ಫ್ರೆಂಡ್ ರಾಜು ಆವಾಗಷ್ಟೆ ’video box’ ಅನ್ನುವ ವಿಸಿಪಿ(Video Casette Players- (ಕೆಲವರಿಗಾದರೂ ಇದರ ನೆನೆಪು ಇದೆಯೆಂದು ಭಾವಿಸುತ್ತೇನೆ),( ನನ್ನ ತಂದೆಯ ಸಹಾಯದಿಂದ, ಬ್ಯಾಂಕ್ ಲೋನ್ ಪಡೆದುಕೊಂಡು) ಬಾಡಿಗೆ ಕೊಡುವ ಅಂಗಡಿ ತೆರೆದಿದ್ದ. ರಾಜು ಅಂಗಡಿ ಪಕ್ಕ ಮುಸ್ಲಿಮ್ ಒಬ್ಬರ ಹಣ್ಣಿನ ರಸ ಮಾರುವ ಅಂಗಡಿಯಿತ್ತು. ಖಂಡಿತ ಗಲಾಟೆಯಾದ್ರೆ ಅಂಗಡಿ ದ್ವಂಸವಾಗುತ್ತೆ ಅಂತ ಅವನಿಗೆ ಗೊತ್ತಿತ್ತು. ಸ್ವಲ್ಪ ಸ್ವಲ್ಪ ಮಾಡಿ ಅವನ ಅಂಗಡಿಯಲ್ಲಿರುವ ಸಾಮಾನು/casette ಗಳನ್ನೆಲ್ಲ ನಮ್ಮ ಮನೆಗೆ ಸಾಗಿಸಿದರು. ಪೂರ್ತಿ ಸಾಮಾನೆಲ್ಲ ಸಾಗಿಸುವಷ್ಟರಲ್ಲಿ ಪುನಃ ಕರ್ಫ್ಯು ಶುರು ಆಯ್ತು. ಅವರು ಎಣಿಸಿದ ಹಾಗೆ ರಾತ್ರಿ ಅವನ ಪಕ್ಕದ ಅಂಗಡಿಗೆ ಬೆಂಕಿ ಹಚ್ಚಲಾಯಿತು. ರಾಜು ನ ಅಂಗಡಿಗೂ ಸ್ವಲ್ಪ ಬೆಂಕಿ ತಗುಲಿತು.
ಮಜವಾದ ವಿಷಯವೆಂದರೆ ಅಲ್ಲಿರುವ ರಾಮ್-ರಹೀಮ್ ಎಣ್ಣೆ ಅಂಗಡಿ. ಅದಕ್ಕೆ ಮಾತ್ರ ಯಾರೂ ಎನೂ ಮಾಡಲಿಲ್ಲ. ಒಟ್ಟಿಗೆ ನಮ್ಮ ಬಿಲ್ಡಿಂಗ್ ನಲ್ಲಿ 42 ಮನೆಗಳಿದ್ದವು. ಅದರಲ್ಲಿ ಎರಡು ಮಾತ್ರ ಮುಸ್ಲಿಂ ಕುಟುಂಬಗಳಿದ್ದವು.ಪಾಪ ತುಂಬ ಹೆದರಿ ಕೊಂಡಿದ್ದರು. ಆದರೆ ನಾವು ಅವರನ್ನು ಏನೂ ಆಗದಂತೆ ಕಾಪಾಡುವ ಪೂರ್ಣ ಭರವಸೆ ನೀಡಿದ್ದೆವು. ವಾಚ್ ಮ್ಯಾನ್ ಜತೆ ಬಿಲ್ಡಿಂಗ್ ನ ಹಲವಾರು ಮಕ್ಕಳು ರಾತ್ರಿ ಬಿಲ್ಡಿಂಗ್ ಸುತ್ತ ಗಸ್ತು ತಿರುಗುತ್ತಿದ್ದರು. ಕಂಪೌಂಡ್ ದೊಡ್ಡದಾಗಿರದಿದ್ದರೂ. ಗೇಟ್ ಗೆ ಮಾತ್ರ ದೊಡ್ಡ ಬೀಗ ಜಡಿಯಲಾಯಿತು. ಟೆರೆಸ್ ಮೇಲೂ ಕೆಲವರು watch ಮಾಡಲು ಇದ್ದರು. ಏಳನೆ ಮಹಡಿಯಲ್ಲ್ಲಿರುವ ನಮಗೆ,ಕಿಟಕಿಯಿಂದ ತಲೆ ಹೊರಗೆ ಹಾಕಿದ್ದರೆ ಕೆಲವು ಕಡೆ ಬೆಂಕಿ, ಹೊಗೆ ಬರುವುದು ಕಾಣುತ್ತಿತ್ತು. ಆದರೂ ನನಗೆ ಅನಿಸುವುದುಂಟು. ನಾವು ಎಷ್ಟೆ ಆಶ್ವಾಸನೆ ನೀಡಿದ್ದರೂ ಆ ಎರಡು ಮುಸ್ಲಿಂ ಪರಿವಾರದವರು ಎಷ್ಟು ಹೆದರಿ ಕೊಂಡಿರಬೇಕು? mob mentality /mob psyche / mass hysteria ಆದಾಗ ಕೆಲವೊಮ್ಮೆ ಮನುಷ್ಯರ ಮನಸ್ಸು ಹೇಗೆ ಉಲ್ಟಾ ಹೊಡೆಯುತ್ತದೆ ಎಂದು ತಿಳಿಯುವುದಿಲ್ಲ. ಒಳ್ಳೆಯವರು ಕ್ಷಣದಲ್ಲಿ ಬಣ್ಣ ಬದಲಾಯಿಸುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ.ಆ ಮೇಲೆ ಅವರು ಪಶ್ಚಾತಾಪ ಪಟ್ಟಿದ್ದು ಉಂಟು.
ಇಂದಿರಾಗಾಂಧಿ ಗೆ ಗುಂಡಿಟ್ಟು ಕೊಂದಾಗ ಇಂತಹುದ್ದೆ ಪರಿಸ್ಥಿತಿ ಆಗಿತ್ತು. ಆವಾಗ ಸಿಖ್ ಸಮುದಾಯದವರನ್ನು ಹಿಡಿದು ಹೋಡೀತಾ ಇದ್ದರು. ರಸ್ತೆ ಎಲ್ಲ ನಿರ್ಜನ, ಗುಂಪಾಗಿ ಗಲಾಟೆ ಮಾಡುವವರನ್ನು ಬಿಟ್ಟು.
ಪರಿಸ್ಥಿತಿ ಸುಧಾರಿಸುವವರೆಗೆ necessary provision ಗೂ ಪರದಾಟ, ಎಷ್ಟೊಂದು ಆತಂಕ. Life came to a stand still.
ದರ್ಮದ ಹೆಸರಿನಲ್ಲಿ ಏನೆಲ್ಲ ಅತ್ಯಾಚಾರಗಳು ನಡೆದವೋ ಅದನ್ನೆಲ್ಲ ಟೇಪ್ ಮಾಡಿದ್ರು. ನೋಡಿ ದಿಗಿಲಾಯಿತು. ಜನರು ಈ ತರಹ behave ಮಾಡ್ತಾರಾ ಅಂತ ಅನ್ನಿಸ್ತು.
ನನ್ನ ಮಗಳಿಗೆ ಕರ ಸೇವಕಿ ಹೆಸರು ಇಡಲು ಎಲ್ಲರೂ ಸೂಚಿಸಿದ್ದರು. :-) ಆದರೆ ಅವಳ ಹೆಸರು ನಿಹಾರಿಕಾ.
ಇದಾದ ಕೆಲವೇ ತಿಂಗಳಲ್ಲಿ 12 ಮಾರ್ಚ್ 1993 ಸಿರಿಯಲ್ ಬಾಂಬ್ ಬ್ಲಾಸ್ಟ್ ಗಳು. ಆ ದಿನ ಅಮ್ಮ ಅವರ ಗೆಳತಿಯನ್ನು ಕಾಣಲು ಸುಮಾರು 11.00 ಗಂಟೆಗೆ ಚರ್ನಿ ರೋಡ್ ಗೆ ಹೋಗಿದ್ದರು. ಸಾಧರಣ ಒಂದು ವರೆ ಗಂಟೆಗೆ ಸುಮಾರು ಕಡೆ ಬಾಂಬ್ ಇಡಲಾಗಿದೆ ಎಂದು ತಿಳಿಯಿತು. ಆಗ ಸೆಲ್ ಫೋನ್ ಗಳು ಇನ್ನೂ ಬಂದಿರಲಿಲ್ಲ. ಅಮ್ಮನ ಸ್ನೇಹಿತೆಗೆ ಫೋನ್ ಮಾಡಿದಾಗ , ಅಮ್ಮ ಆಗಲೇ ಅಲ್ಲಿಂದ ಹೊರಟಿದ್ದಾರೆ ಎಂದು ತಿಳಿಯಿತು. ಅಮ್ಮ ಬರುವ ಬಸ್ ರೂಟ್ ನಲ್ಲೇ ಒಂದೊಂದಾಗಿ ಬಾಂಬ್ ಸ್ಫೋಟಿಸುತ್ತಿದ್ದವು. ನಾವೆಲ್ಲರೂ ಏನೂ ಮಾಡಲು ತೋಚದೆ, ಗಂಟಲಲ್ಲಿ ಅಳು ಇಟ್ಟುಕೊಂಡು ಎಲ್ಲ ಕಿಟಕಿಗಳಿಂದ ಹೊರಗೆ ಅಮ್ಮನ ಬರವನ್ನು ಕಾಯುತ್ತಿದ್ದೆವು. ಪುಟ್ಟ ನಿಹಾರಿಕಾ ಅಳ್ತಾ ಇದ್ದಳು. ಅವಳು ಹಾಲು ಉಣಿಸಲು ಹೋದಾಗ, ನನಗಾಗಿರುವ tension ಗೊತ್ತಾದಂತೆ ಸುಮ್ಮನೆ ಅಳ್ತಾ ಇದ್ದಳು ವಿನಃ ಹಾಲು ಕುಡಿಯಲೇ ಇಲ್ಲ.
ತಮ್ಮಂದಿರು ಪಾಪ ಬಿಲ್ಡಿಂಗ್ ಗೇಟ್ ಬಳಿ. ಸುಮಾರು 6.00 ಗಂಟೆಗೆ ಅಮ್ಮ ಬಂದ್ರು. ಮನಸ್ಸಿಗೆ ನಿರಾಳ. ತಂದೆ relief ಆಗಿ ಅಮ್ಮನಿಗೆ ಬೈದು ಬಿಟ್ರು. ಬಸ್ ರೂಟ್ ನ ಎರಡು ಕಡೆ ಬಾಂಬ್ ಬ್ಲಾಸ್ಟ್ ನೋಡಿ, ಬಸ್ ಡ್ರೈವರ್ ಸ್ವಲ್ಪ ತಲೆ ಉಪಯೋಗಿಸಿ, ಬೇರೆ ರೂಟ್ ನಲ್ಲಿ ಗಲ್ಲಿ ಗಲ್ಲಿ ತಿರುಗಿಸಿ ನಮ್ಮ ಮನೆಯ ಬಳಿ ಇರುವ ಕೊನೆಯ ನಿಲ್ದಾಣಕ್ಕೆ ಪ್ರಯಾಣಿಕರನ್ನು ತಲುಪಿಸಿದನಂತೆ. ಅಮ್ಮ ಕಂಡ ಹಾಗೆ ಜುಹು ರೋಡ್ ನಲ್ಲಿ ಒಂದು ಡಬಲ್ ಡೆಕ್ಕರ್ ಬಸ್ಸಿನ ಬಹುತೇಕ ಭಾಗ ಇರಲಿಲ್ಲವಂತೆ. ಕೆಲವರ ಕೈ, ಕಾಲು, ತಲೆ, ಮಾಂಸ ಎಲ್ಲ ರಸ್ತೆಯಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ವಂತೆ.ಕೆಲವು ಮನೆಗಳ ಛಾವಣಿನೆ ಹಾರಿ ಹೋಗಿತ್ತಂತೆ. ಒಂದು ಸೀಟ್ ಬಳಿ ಹುಡುಗಿಯ ಕೇವಲ ಎರಡೂ ಬೂಟುಗಾಲು ಮಾತ್ರ ಇತ್ತಂತೆ. ಉಳಿದ ಭಾಗ ಎಲ್ಲೋ?
ನಮ್ಮ ಬಿಲ್ಡಿಂಗ್ ನಲ್ಲಿರುವವರ ಸುಮಾರು ಜನರ ಪತ್ತೇನೆ ಇರಲಿಲ್ಲ. ಅದರಲ್ಲಿ ಕೆಲವರು ಫೋನ್ ಮಾಡಿ ಸ್ನೇಹಿತರ ಮನೆಯಲ್ಲಿರುತ್ತೇವೆಂದರು. ಒಬ್ಬರ ದೇಹ ಮೂರನೆ ದಿನ ಎಂಬುಲೆನ್ಸ್ ನಲ್ಲಿ ತಂದರು.ಅವರು ಬಾಂಬೆ ಸ್ಟಾಕ್ Exchange ನಲ್ಲಿ ಕೆಲಸಕ್ಕಿದ್ದರು.ಒಂದು ಕೈ ಇರಲಿಲ್ಲ. ಬಲ ಕಣ್ಣಿನ ಬಳಿ ಬಹುಭಾಗ ಹೋಗಿತ್ತು. ಪ್ಯಾಂಟ್ ಕಿಸೆಯಲ್ಲಿರುವ ಐಡೆಂಟಿಫಿಕೇಶನ್ ಕಾರ್ಡ್ ನಿಂದ ಅವರ ಮನೆಯ ವಿಳಾಸ ಸಿಕ್ಕಿ ಅವರ ದೇಹವನ್ನು ಮನೆಗೆ ತಂದಿದ್ದರು.client ಜತೆ ಮೀಟಿಂಗ್ ಗೆ ಹೊರಡಲು ಅನುವಾಗಿ basement ನಿಂದ ಕಾರ್ ಹೋರಗೆ ತೆಗೆಯುವಾಗ ತುಂಬ ಹತ್ತಿರದಿಂದ blast ನಲ್ಲಿ ಸಿಕ್ಕಿ ಹಾಕಿಕೊಂಡರು ಅನ್ನಿಸುತ್ತೆ.ಹೊರಡುವ ಮುಂಚೆ ಮನೆಗೆ ಫೋನ್ ಮಾಡಿದ್ದೆ ಅವರ ಕೊನೆಯ ಮಾತು.ಅವರ ಮನೆಯ ದೃಶ್ಯ ಹೃದಯವಿದ್ರಾವಕವಾಗಿತ್ತು.ಮನೆಯಲ್ಲಿ ಪುಟ್ಟ ಪುಟ್ಟ ಎರಡು ಮಕ್ಕಳು. ಏನಂತ ಸಮಾಧಾನ ಮಾಡುವುದೆಂದೇ ತಿಳಿಯಲಿಲ್ಲ.
ಬಿಲ್ಡಿಂಗ್ ನಲ್ಲಿ ಎಲ್ಲ ಹಬ್ಬಗಳನ್ನು ನಾವು ಕೂಡಿ ಮಾಡುವ ಪರಿಪಾಠವಿತ್ತು. ಈ ಘಟನೆ ನಡೆದ ವರ್ಷ ನಾವು ಬಿಲ್ದಿಂಗ್ ನಲ್ಲಿ ಯಾವುದೇ ಸಮಾರಂಭ, ಹಬ್ಬ ಮಾಡಲಿಲ್ಲ.
ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ. ಎಷ್ಟೆಲ್ಲ ಸಾವು, ನೋವು. ಇದೆಲ್ಲ ಮರೆಯಲಾಗುತ್ತ? ಗಾಯ ಮಾಗಿದರೂ ಕಲೆ ಉಳಿದ ಹಾಗೆ ಈ ನೆನಪುಗಳು. ಧರ್ಮದ ಹೆಸರಲ್ಲಿ ರಕ್ತ ಪಾತ ಇದ್ಯಾವ ಸೀಮೆ ನ್ಯಾಯ?
ನಿಹಾರಿಕಳ ಹುಟ್ಟಿದ ಹಬ್ಬದಂದು ಇದೆಲ್ಲ ನೆನಪಿಗೆ ಬರುತ್ತದೆ. Let us wish her a happy life in a peaceful India alwaa?
:-)

November 30, 2009

ನಾಯಿ ಇಸ್ಸಿ/ಇಶ್ಶಿ

ಇತ್ತೀಚಿಗೆ ರಸ್ತೆ ಅಗಲೀಕರಣ/ನವೀಕರಣ ಅಂತ ರಸ್ತೆ ಪಕ್ಕದಲ್ಲಿ ಒಂದು ಚೂರು ಜಾಗ ಬಿಡದೆ ಡಾಂಬರ್ ಹಾಕಿಟ್ಟಿದ್ದಾರೆ. ಮಳೆ ಬಂದಾಗ ಮೊದಲು ಮಣ್ಣಿನ ಪರಿಮಳ ಬರುತ್ತಿತ್ತು ಈಗ ಬರೀ ನಾಯಿ ಇಸ್ಸಿ (dog crap, poop, shit..whatever!!) ವಾಸನೆ. ನಾವು ನೆಟ್ಟಿದ ಬೇವಿನ ಮರ ಹಾಗೂ ಹೊಂಗೆ ಮರ ಸಹ ತೆಗೆದು ಬಿಟ್ಟಿದ್ದರು. ಹೊಸ technology ಅಂತೆ ಬೆಳಿಗ್ಗೆ ಶುರು ಮಾಡಿ ಸಂಜೆ ಒಳಗೆ ರಸ್ತೆ ರೆಡಿ. ಮರುದಿನ ಬಳಕೆಗೂ ರಡಿ.

ಆದರೆ ನಾಯಿ ಇದ್ದ ಮನೆಯವರು ಅವರ ಮನೆ ಬಿಟ್ಟು ಬೇರೆಯವರ ಮನೆಯ...ಅದೂ ಗೇಟ್ ಎದುರುಗಡೆ ಇಸ್ಸಿ ಮಾಡಿಸುವುದು ಯಾಕೇಂತ ಗೊತ್ತಾಗಲಿಲ್ಲಪ್ಪ. ಎಷ್ಟೆ ಹೇಳಿದರೂ ಕೆಲವರು ಕೋಳೊಲ್ಲ. ನಮ್ಮ ಮನೆಯ ಗೇಟ್ ಎದುರು ಈ ತರಹ ಸುಮಾರು ಸಲ ಆಯಿತು. ಅವರು ಯಾರಂತಲೂ ನನಗೊತ್ತಿತ್ತು. ಬೆಳಿಗ್ಗೆ 4 ಗಂಟೆಗೆ ನಾನು ಝೂಲಾ ಮೇಲೆ ಚಹಾ ಕುಡಿಯುತ್ತ ಇರುವಾಗ ಅಲ್ಲಿ ಇಸ್ಸಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗಂತೂ ಬೆಳಿಗ್ಗೆ ಬೆಳಿಗ್ಗೆ ಯಾರ ಜತೆನೂ ವಾದ ಮಾಡಲಿಕ್ಕೆ ಇಷ್ಟ ಆಗಲ್ಲ.

ಅದಕ್ಕೆ ಶ್ರೀಕಾಂತ್ ಒಂದು ದಿನ ಬೇಗನೆ ಎದ್ದು ಕಾಯುತ್ತ ಇದ್ದರು. ಅವರು ನಮ್ಮ ಮನೆ ಬಳಿ ಬಂದ ಕೂಡಲೆ..’ಹಲ್ಲೋ, ನಿಮ್ಮ ನಾಯಿ ಮುದ್ದಾಗಿದೆ, ಏನು ಹೆಸರು?’ ಅದಕ್ಕೆ ಅವರು ಮಹಾ ಜಂಬದಿಂದ ಅದರ ಬ್ರೀಡ್(ಲ್ಯಾಬ್ರಾಡೋರ್), ಮತ್ತೆ ನಾಯಿಯ ಹೆಸರು ’ರೋವರ” ಅಂತ ಹೇಳಿದರು. ಶ್ರಿಕಾಂತ್ ಉವಾಚ್- ನಿಮಗೆ ನಾಯಿ ಅಷ್ಟು ಪ್ರೀತಿಯಾದರೆ ಅದರ ಇಸ್ಸಿಯನ್ನು ಪ್ಯಾಕ್ ಮಾಡಿಕೊಂಡು ಫ್ರಿಡ್ಜ್ ನಲ್ಲಿಡಬಹುದಲ್ಲವಾ ಅಂದರು ಕೂಲಾಗಿ. ಅವರು ಕಕ್ಕಾಬಿಕ್ಕಿ. ಮುಖ ನೋಡಬೇಕಿತ್ತು. ಅಷ್ಟರೊಳಗೆ ನಾಯಿ ಒಂದು ಗುಡ್ಡೇ ಇಸ್ಸಿ ಮಾಡಿಯಾಗಿತ್ತು.

ಅಮೇರಿಕೆಯಲ್ಲಿರುವ ನನ್ನ ತಂಗಿ 5 ವರ್ಷ ಆದಮೇಲೆ ನನ್ನ ಮನೆಗೆ -ಬೆಂಗಳೂರಿಗೆ ಬಂದಿದ್ದಳು. ಅವರು ಬರುವ ಹೊತ್ತಿನಲ್ಲಿ ನಾನು ಅಡಿಗೆ ಮನೆಯಲ್ಲಿದ್ದೆ. ಗಾಡಿ ಬಂದ ಸದ್ದಾಗಿ ಗ್ಯಾಸ್ ಆಫ್ ಮಾಡಿ ಬರುವಷ್ಟರಲ್ಲಿ ನನ್ನ ತಂಗಿ ಗಟ್ಟಿ ದನಿಯಲ್ಲಿ ’ಏನೇ ಇದು? ಐದು ವರ್ಷ ಆದ ಮೇಲೆ ಬರ್ತಾ ಇದ್ದೇನೆ. ಪೂರ್ಣ ಕುಂಭ ಸ್ವಾಗತ ಇರ್ಲಿ, ತುಪ್ಪದ ಆರತಿ ಬಿಟ್ಟು. ಹೀಗಾ ಸ್ವಾಗತಿಸುವುದು? ಎನಪ್ಪ ಇವಳ ಗಲಾಟೆ ಅಂತ ಹೋಗಿ ನೋಡಿದ್ರೆ, ಗಾಡಿಯ ಬಾಗಿಲ ತೆಗೆದ ಕೂಡಲೇ, ಗೇಟ್ ಎದುರಿಗೇನೆ ಅವಳಿಗೆ ಕಂಡಿದ್ದು -dog crap- ಹಿ ಹಿ ಹಿ. ಮತ್ತೆ ಗಾಡಿ ಸ್ವಲ್ಪ ಮುಂದೆ ಮಾಡಿ ಅವಳ ದೊಡ್ಡ ದೊಡ್ಡ suitcase ಗಳನ್ನು ಒಳಗೆ ಸಾಗಿಸ ಬೇಕಾದರೆ ಶ್ರೀಕಾಂತ್ ಮತ್ತು ನನ್ನ ತಮ್ಮನಿಗೆ ಬೆವರು...ಯಕೆಂದರೆ ನಾವು ಹೊರಗೆ ನಿಂತು---ಇಸ್ಸಿ ಮೇಲೆ ಕಾಲು, ಬ್ಯಾಗ್ ತಾಗದ ಹಾಗೆ watch it watch it ಅಂತ ಕೂಗಾಡ್ತಾ ಇದ್ವಿ.ಶ್ರೀಕಾಂತ ’ಥೂ ನಾಯಿ’ ಅನ್ನಬೇಕಾದರೆ ನಾನು ಹೇಳಿದೆ..ನಾಯಿಗಳನ್ನು ಬೈ ಬೇಡಿ. ಅವಕ್ಕೇನು ಗೊತ್ತಾಗುತ್ತೆ, ನಾಯಿ ಮಾಲಿಕರಿಗೆ ಫೈನ್ ಹಾಕಿಸ ಬೇಕು ಅಂತ’ ಸಧ್ಯ ನನ್ನ ಮಕ್ಕಳಿಬ್ಬರು ಸ್ಕೂಲು-ಕಾಲೀಜಿಗೆ ಹೋಗಿದ್ರು. ಇಲ್ಲದಿದ್ದರೆ ಇನ್ನಷ್ಟು ಗಮ್ಮತ್ತು. ತಂಗಿಯ ಪುಟಾಣಿ ಮಕ್ಕಳಿಗೆ ಅಂತೂ ಇದು ಮೋಜಿನ ವಿಷಯವಾಗಿತ್ತು.

ಈಗ ನಾವು ಬೇರೆ ಮನೆಯಲ್ಲಿರುವುದು. ಇಲ್ಲಿ ಹತ್ತಿರದಲ್ಲಿ ಯಾರ ಮನೆಯಲ್ಲೂ ನಾಯಿಗಳನ್ನು ಸಾಕಿಲ್ಲ. ಆದರೆ 7 ಬೀದಿ ನಾಯಿಗಳಿದ್ದಾವೆ. ತುಂಬ ಒಳ್ಳೆಯವು. ಹೊಸಬರನ್ನು ಕಂಡರೆ ತುಂಬಾ ಬೊಗಳುತ್ತವೆ...ನಾವು ’ಸುಮ್ಮನಿರಿ. ಇವರು ನಮ್ಮವರು’ ಅನ್ನುವ ತನಕ. ಆದರೆ ಯಾವತ್ತು ಯಾರ ಮನೆಯ ಎದುರಿಗೂ ಇಸ್ಸಿ ಮಾಡಿಲ್ಲ. ನಾನು ಅವರ ಜತೆ ಕೊಂಕಣಿಯಲ್ಲಿ ಸಂಬಾಷಿಸುತ್ತೇನೆ. ನಾನು ಎಲ್ಲಿಗಾದರೂ ಹೊರಟರೆ, ಬಾಲ ಅಲ್ಲಾಡಿಸಿ ನನಗೆ ಒಂದಷ್ಟು ದೂರ ಕಂಪನಿ ಕೊಟ್ಟು ವಾಪಸ್ ನಮ್ಮ ಬೀದಿಗೆ ಬಂದು ವಿರಮಿಸುತ್ತವೆ. ನಮ್ಮ ಮನೆಯ ಎದುರುಗಡೆ ಸಾಲಿನ ಮನೆಯವರು ಅವರ ಊಟ ತಿಂಡಿ ಬಗ್ಗೆ ನೋಡಿಕೊಳ್ಳುತ್ತಾರೆ. ಅವರು ಆಕಸ್ಮಾತ್ ಊರಲಿಲ್ಲ ಅಂದರೆ ಬೇರೆಯವರಿಗೆ ಹೇಳಿ ಹೋಗುತ್ತಾರೆ. ಯಾರಾದರೊಬ್ಬರು ಅದರ ದೇಖಿ ರೇಖಿ ಮಾಡಿತ್ತಾರೆ. ಎಲ್ಲರೂ ಊಟ ಹಾಕುವುದು, ಅಥವಾ ಉಳಿದಿದೆ ಅಂತ ಊಟ ಹಾಕುವುದು ಇದೆಲ್ಲ ನಾವ್ಯಾರೂ ಮಾಡುವುದಿಲ್ಲ.
ಮತ್ತೆ ಮುನಿಸಿಪಾಲಿಟಿಯವರು ನಾಯಿ ಹಿಡಿಯಲು ಬಂದರೆ ಅವಕ್ಕೆ ಗೊತ್ತಾಗಿ ಅವರು ಚಪ್ಪಡಿ ಇರುವ ಚರಂಡಿಯೊಳಗೆ ಅವಿತುಕೊಳ್ಳುತ್ತವೆ. ನಾವ್ಯಾರೂ ಅವರಿಗೆ ಹೇಳಲು ಹೋಗುವುದಿಲ್ಲ.
:-)

November 25, 2009

26/12 (ಉಗ್ರರ ದಾಳಿ)


ಅರೇ ಇದೇನಿದು? ಎಲ್ಲರೂ ನವೆಂಬರ್ 26 ರ ಬಗ್ಗೆ ಮಾತಾಡ್ತಾ ಇದ್ದರೆ, ಮಾಲತಿ ಡಿಸೆಂಬರ್ 26, 2008 ಅಂತ ಬರೆದಿದ್ದಾಳೆ ಅಂದುಕೊಂಡ್ರಾ?

ಮದುವೆಯಾದ ಮೊದಲ ಕೆಲವು ವರ್ಷ ನಾನು ಆಗಾಗ ಮುಂಬೈಗೆ ಹೋಗುತ್ತಿದೆ. ಹೊಸ ದೀಪಾವಳಿ, ಮೊದಲ ಯುಗಾದಿ, ಆಮೇಲೆ ನನ್ನ ಪರೀಕ್ಷೆಗಳು. ನಾನು university of Bombay -distance Education ಅಡಿ ನನ್ನ ಗ್ರಾಜ್ಯುವೇಷನ್ ಮಾಡಿದೆ. ಮತ್ತು ಇಬ್ಬರು ಮಕ್ಕಳು ಅಲ್ಲೇ ಹುಟ್ಟಿದ್ದು, ಅಮೇಲೆ ತಂಗಿ ತಮ್ಮಂದಿರ ಮದುವೆ ಹೀಗೆ. ಇತ್ತಿಚಿಗಿನ 10 ವರ್ಷದಲ್ಲಿ ನಾವು ನಾಲ್ಕೂ ಜನ ಕೂಡಿ ಮುಂಬೈಗೆ ಹೋಗಿದ್ದಿಲ್ಲ.



ನನ್ನ ತಮ್ಮ ಕೆಲವು ವರ್ಷ ಕೆಲಸದ ನಿಮಿತ್ತ ಹೊರ ದೇಶಕ್ಕೆ ಹೋಗುವವನಿದ್ದ. ಅದಕ್ಕೆ ಅವನು ಫೋನ್ ಮಾಡಿ ’ಈ ಸಲ ಎಲ್ಲರೂ ಬಂದು ಬಿಡಿ. ಒಮ್ಮೆ ಹೊರ ದೇಶಕ್ಕೆ ಹೋದರೆ ಇನ್ನು 5-6 ವರ್ಷ ಬರುವುದಿಲ್ಲ. ನೀವು ನನ್ನ ಹೊಸ ಮನೆ ಇನ್ನೂ ನೋಡಿಲ್ಲ.’ ಹಾಗಾಗಿ ಹಿಂದಿನ ವರ್ಷ ಮಕ್ಕಳ christmas ರಜೆ ಗೆ ನಾವು ಮುಂಬೈಗೆ ಹೋದೆವು. 26 ರಂದು elephanta caves ಗೆ ಹೋಗುವುದು ನಿರ್ಧರಿಸಿದೆವು. ಉಗ್ರರ ದಾಳಿ 179 ಜನರನ್ನು ಬಲಿ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳು


ಗೇಟ್ ವೇ ಆಫ್ ಇಂಡಿಯಾ ಬಳಿ ನಾವು ಬೆಳಿಗ್ಗೆ 9.30 ಗೆ ತಲುಪಿದೆವು. ತುಂಬ gloomy ಆಗಿತ್ತು ಆ ದಿನ. ಆಗಲೇ ಮಿಡಿಯಾದವರು ತಮ್ಮ ವ್ಯಾನ್ ಹಾಗೂ ಸಟೆಲ್ಲೈಟ್ ರಿಸೀವರ್ಸ್ ಹಿಡ್ಕೊಂಡು ಸಜ್ಜಾಗಿದ್ದರು .ಸುತ್ತ ಮುತ್ತ ಪೋಲಿಸ್ ಪ್ರಹರೆ. ಸಾವು-ನೋವು ಸಂಭವಿಸಿದ ಮನೆಯವರು, ಮಿತ್ರ-ಬಾಂಧವರು ಕಣ್ಣೀರುಗರೆಯು
ತ್ತ ಮೋಂಬತ್ತಿ ಹೊತ್ತಿಸುತ್ತಿದ್ದರು


ಆ ದಿನ ಆತಂಕವಾದದ ವಿರುದ್ದ ಮೌನ ಮೆರವಣಿಗೆ (silent march) ಹಮ್ಮಿಕೊಳ್ಳಲಾಗಿತ್ತು. ಎಷ್ಟೆ ಗಂಭೀರವಾಗಿರಲು ಪ್ರಯತ್ನ ಪಟ್ಟರೂ ಕೆಲವರಿಗೆ ಬಿಕ್ಕು ಬರುತ್ತಿತ್ತು.. ಅಲ್ಲಿ ನಿಂತ ನಮ್ಮ ಕಣ್ಣಲ್ಲೂ ನೀರು. photography was strictly prohibited so as not to interfere in their moment of grief. ಹಾಗಾಗಿ mourners ಗೆ ತೊಂದರೆಯಾಗದಂತೆ ಮಿಡಿಯಾದವರು respectfully ಸ್ವಲ್ಪ ದೂರದಲ್ಲಿ ಇದ್ದರು.



ಬೆಂಕಿಯಲ್ಲಿ damage ಆಗಿದ್ದ ಹೋಟಲ್ ತಾಜ್ ಮಹಲ್ ರಿಪೇರಿ ಕೆಲಸದಲ್ಲಿ ತೊಡಗಿ ಕೊಂಡಿತ್ತು.


ಕೆಲವೇ ದಿನಗಳ ಹಿಂದೆ ಅಂದರೆ ಡಿಸೆಂಬರ್ 21 ಕ್ಕೆ ಪುನಃ ಅದು ಅತಿಥಿಗಳಿಗೆ ತೆರೆಯಲ್ಪಟ್ಟಿತ್ತು.ತಾಜ್ ಮಹಲ್ ಹೋಟೆಲ್ ಗೆ ೧೦೬ ವರ್ಷಗಳ ಇತಿಹಾಸವಿದೆ. ಪ್ರಥಮ ಮಹಾ ಯುದ್ದದ ವೇಳೆ ಇದೇ ಹೋಟಲನ್ನು 600 ಮಂಚಗಳಿರುವ ಆಸ್ಪತ್ರೆಯಾಗಿ convert ಮಾಡಲಾಗಿತ್ತು.


ಧೈರ್ಯ ತೋರಿಸಿದ ಎಲ್ಲ ಧೀರರಿಗೂ ನನ್ನ ಸಲಾಮ್. ಸಂದೀಪ ಉಣ್ಣಿಕೃಷ್ಣನ್ ನ ತಾಯಿಯನ್ನು ಕಂಡಾಗಲೆಲ್ಲ ಒಂದು ಅವ್ಯಕ್ತವಾದ ನೋವು ಎದೆಯೊಳಗೆ ಹಾದು ಹೋಗುತ್ತದೆ.ನೋವನಂತು ಮರೆಯಲು ಸಾಧ್ಯವಿಲ್ಲ, ಆದರೆ ಅದನ್ನು ಸಹಿಸುವ ಶಕ್ತಿ ಅವರಿಗೆ ಬರಲಿ ಎಂದು ಆಶೀಸೋಣ.


ಈಗ ಕೈಗೆತ್ತಿಕೊಂಡಿರುವ ,ಯಶವಂತ ಚಿತ್ತಾಲರು ಬರೆದ ಕಾದಂಬರಿ, ’ಕೇಂದ್ರ ವೃತ್ತಾಂತ’ ದಲ್ಲಿ memories are memorials! ಅಂತ ಉಲ್ಲೇಖಿಸಿದ್ದಾರೆ.ನೆನಪುಗಳು ಆಳದಲ್ಲಿ ಕಾಡಿದ ಭಾವನೆಗಳಿಗೆ ಎದ್ದು ನಿಂತ ಸ್ಮಾರಕಗಳು.ಎಷ್ಟು ಅರ್ಥಪೂರ್ಣ ಆಗಿದೆಯಲ್ಲವ ಈ phrase!!


ರಕ್ತಪಾತಕ್ಕೆಲ್ಲ ಅಂತ್ಯ ಯಾವಾಗ? ಏನಾಗ್ತಾ ಇದೆ ನಮ್ಮ ದೇಶದಲ್ಲಿ?
ಉಗ್ರರಯರ ದಾಳಿಯಲ್ಲಿ ತೀರಿಕೊಂಡವರ ಆತ್ಮಕ್ಕೆ ಶಾಂತಿ ಕೋರುವಾ.

ಆದರೂ ಮುಂಬೈ ಮೇರಿ ಜಾನ್. phoenix ಹಕ್ಕಿಯಂತೆ ಯಾವಾಗಲೂ ಮೇಲೇಳುತ್ತದೆ. ಮುಂಬೈ ನ spirit ಗೂ ಒಂದು ಸಲಾಮ್
marine Drive. ರಾತ್ರಿ ದೀಪದ ಸಾಲು ಹಾರವನ್ನು ನೆನೆಪಿಸುತ್ತದೆ ಅದಕ್ಕೆ Queens Necklace ಅಂತ ಹೇಳುತ್ತಾರೆ.


ಚಿತ್ರಗಳು - yours truly

November 23, 2009

ರವೆ ರೊಟ್ಟಿ

ಬನ್ಸಿ ರವಾ - 2 ಕಪ್
ಮೊಸರು - 1 ಕಪ್
ರುಚಿಗೆ ಉಪ್ಪು ಮತ್ತು ಚಿಟಿಕೆ ಸಕ್ಕರೆ
ಹಸಿ ಮೆಣಸಿನಕಾಯಿ ಮತ್ತು ಶುಂಠಿ ಸಣ್ಣಗೆ ಕತ್ತರಿಸಿ ಹಾಕಿ. 1 ಟೇಬಲ್ ಚಮಚ ತಾಜಾ ತೆಂಗಿನ ತುರಿ. ತುರಿದ ಕ್ಯಾರೆಟ್. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಸಾಸಿವೆ ಮತ್ತು ಕರಿಬೇವು.

ಸ್ವಲ್ಪ ನೀರು ಬಳಸಿ ಎಲ್ಲವನ್ನು ಮಿಕ್ಸ್ ಮಾಡಿ, ಹೀಗೆ



ಅದಕ್ಕೆ ಒಗ್ಗರಣೆ ಕೊಡಿ, ಹೀಗೆ...

ಒಗ್ಗರಣೆಯನ್ನು ಮಿಕ್ಸ್ ಮಾಡಿ. ಬಿಸಿ ಕಾವಲಿ ಮೇಲೆ ಹಾಕಿ (ಅಕ್ಕಿ ರೊಟ್ಟಿ ಮಾಡಿದ ಹಾಗೆ: ಹಳೆಯ ಪೋಸ್ಟ್) ಒದ್ದೆ ಬೆರಳಿನಿಂದ , ಎಷ್ಟು ತೆಳು ಬೇಕೋ ಅಷ್ಟು ತಟ್ಟಿ. ಎರಡು ಬದಿ ಕೆಂಪಾಗುವಂತೆ ಕಾಯಿಸಿ.



ಬಿಸಿ ಬಿಸಿ ಇದ್ದಾಗಲೇ, ತುಪ್ಪದೊಂದಿಗೆ ತಿನ್ನಿ :-) ಇತ್ತೀಚಿಗೆ ಅಮ್ಮ ನನ್ನಲ್ಲಿ ಬಂದಾಗ ನನಗೆ ಮಾಡಿ ಕೊಟ್ಟಿದ್ದರು. ನಮಗೆಲ್ಲ ತುಂಬ ಇಷ್ಟ ಆಯ್ತು. ನೀವು ಮಾಡಿ taste ಹೇಗಿತ್ತು ಅಂತ ಹೇಳಿ

:-)

November 18, 2009

ರಾಜೀವಿ ನಮ್ಮ ಮನೆಗೆ ಬಂದ ಪರಿ

ನನಗೆ ಎರಡು ವರ್ಷ ಆಗುವ ಮುನ್ನ ನನ್ನ ತಮ್ಮ ಏಳನೇ ತಿಂಗಳಿಗೆ ಹುಟ್ಟಿದ. ಅವನಿಗೆ ಇನ್ಕ್ಯೂಬೇಟರ್(incubator) ನಲ್ಲಿ ಹತ್ತಿಯಲ್ಲಿ ಸುತ್ತಿ ಇಟ್ಟಿದ್ದರು. ಇಬ್ಬರು ಪುಟ್ಟ ಮಕ್ಕಳನ್ನು ನೋಡಲು ತೊಂದರೆ ಆಗುತ್ತದೆ ಎಂದು, ನನ್ನ ಆಜೋಬಾ ನನ್ನನ್ನು ಅವರ ಬಳಿ ಇಟ್ಟು ಕೊಂಡರು.ಅಜ್ಜ ಸಿವಿಲ್ ಇಂಜಿನಿಯರ್ ಆಗಿ ಆಗ ರಸ್ತೆ (highways construction)ಕಾಮಗಾರಿಯಲ್ಲಿ ವ್ಯಸ್ತರಾಗಿ ಕೆಲಸದ ಮೇಲೆ ಊರೂರು ತಿರುಗಬೇಕಾಗುತ್ತಿತ್ತು. ನನ್ನ ನಾನಿಗೆ rheumatic arthritis ಕಾಯಿಲೆ ಇತ್ತು. ಇದರಿಂದ ಕೈ-ಕಾಲು ಗಂಟಿನಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ಮನೆಯಲ್ಲಿ ಇಬ್ಬರು ಕೆಲಸದವರಿದ್ದರು, ಕಮಲಾ ಮತ್ತು ಹೀರ. ಅವರು ಕೆಲಸ ಮುಗಿಸಿದ ಮೇಲೆ ನಾನು ಅವರ ಜತೆ ಅವರ ಝೋಪಡಿಗೆ ಹೋಗುತ್ತಿದ್ದೆ. ಮಾತೃ ಭಾಷೆ ಕೊಂಕಣಿಯಾದ್ರೂ ನಾನು ಅವರ ಜತೆಯಲ್ಲಿದ್ದು ಮರಾಠಿ ಮಾತನಾಡಲಾರಂಭಿಸಿದೆ. ಅವರ ತಂದೆ ಮುನಿಸಿಪಲ್ ಗಾರ್ಡನ್ ನ ಮಾಲಿಯಾಗಿದ್ದರು. ಆ ಗಾರ್ಡನ್ ನಲ್ಲಿ cageನಲ್ಲಿ ಒಂದು ನವಿಲು ಮತ್ತು ಇನ್ನೊಂದರಲ್ಲಿ ಮೊಲ ಸಾಕಿದ್ದರು.ಅವರಲ್ಲಿಗೆ ಹೋಗಲು ನನಗೆ ಇದೇ ಪ್ರಮುಖ ಆಕರ್ಷಣೆ.

ಅಜ್ಜನ ಬಳಿ ರಸ್ತೆ ರಿಪೇರಿ ಮಾಡುವ ಕೂಲಿ ಆಳಾಗಿ ಸೇರಿದ್ದು ಗಿರೀಶ್ ಎನ್ನುವ ಹುಡುಗ. ಅವನು ಮೊದಲು ಸಿನಿಮಾದಲ್ಲಿ ಸ್ಟಂಟ್ ನಲ್ಲಿ part ಮಾಡುತ್ತಿದ್ದ. ಸ್ಟಂಟ್ ನ ಸಂದರ್ಭದಲ್ಲಿ ಬೆನ್ನು ಮೂಳೆಗೆ ಏಟಾಗಿ ಮೂರು-ನಾಲ್ಕು ತಿಂಗಳು ಹಾಸಿಗೆ ಹಿಡಿದಿದ್ದ. ಆಗ ಅವನನ್ನು ನೋಡಿಕೊಳ್ಳಲು ಅವನ ತಾಯಿ ರಾಜೀವಿ ಬಂದಿದ್ದಳು.ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ರಾಜೀವಿಗೆ ನಾಲ್ಕು ಜನ ಮಕ್ಕಳು. ಎರಡು ಹೆಣ್ಣಿನ ನಂತರ ಹುಟ್ಟಿದವನು ಗಿರೀಶ್. ಇನ್ನೊಬ್ಬ ತಂಗಿ ಚಿಕ್ಕವಳು. ಹಿರಿಯ ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಆಗಿತ್ತು. ರಾಜೀವಿ ಗಂಡ, ತಾಳೆ ಮರದಿಂದ ಕಳ್ಳು ತೆಗೆಯುವವನಾಗಿದ್ದ. ಮರದ ಮೇಲಿನಿಂದ ಬಿದ್ದು ತೀರಿಕೊಂಡಿದ್ದ. ಗಿರೀಶ್ ನಿಗೆ ಪೆಟ್ಟಾಗುವ ತನಕ ಅವರು ದಕ್ಷಿಣ ಕನ್ನಡ ಒಂದು ಹಳ್ಳಿಯ ಕೊಂಕಣಿ ಪರಿವಾರದಲ್ಲಿ ಕೆಲಸಕ್ಕಿದ್ದವರು. ರಾಜೀವಿ ಊರಿನಿಂದ ಗಿಡ ಮೂಲಿಕೆಯ ಎಣ್ಣೆ ತಂದು ಗಿರೀಶನಿಗೆ ಹಚ್ಚಿದ್ದರಿಂದ,ಗಿರೀಶ್ ಗುಣಮುಖನಾಗಿದ್ದ. ಫಿಲ್ಮ್ ಲೈನ್ ಬಿಟ್ಟು ಹೀಗೆ ಕೂಲಿ ನಾಲಿ ಮಾಡುತ್ತಿದ್ದ.

ಮೊದಲು ಕಮಲ, ಆರು ತಿಂಗಳ ನಂತರ ಹೀರೆ ಹೀಗೆ ಅವರ ಮದುವೆ ನಡೆದು ಹೋಯಿತು. ಅಷ್ಟರಲ್ಲಿ ನಾನಿಗೆ ಔಷಧದ ದುಷ್ಪರಿಣಾಮವಾಗಿ ಒಂದು ರಾತ್ರಿ ಬೆಳಗಾಗುವಷ್ಟರಲ್ಲಿ ಕೈ ಕಾಲುಗಳು ವಕ್ರವಾಗಿದ್ದವು. ಆಗ ರಾಜೀವಿ ನಮ್ಮ ಮನೆಗೆ ಕೆಲಸಕ್ಕೆ ಬರಲು ಶುರು ಮಾಡಿದಳು. ರಾಜೀವಿಗೆ ಕೊಂಕಣಿ ಬರುತ್ತಿದ್ದರಿಂದ ನಾನು ಪುನಃ ಕೊಂಕಣಿ ಮಾತನಾಡಲಾರಂಭಿಸಿದೆ. ರಾಜೀವಿ ಬೆಳಿಗ್ಗೆ 8.00 ಗಂಟೆಗೆ ಬಂದು ಮಧ್ಯಾನ್ಹ 3.00 ಗಂಟೆಗೆ ಹೊರಟು ಬಿಡುತ್ತಿದ್ದಳು. ಅಡಿಗೆಗೆ ಕಟ್ಟೆಯ ಮೇಲೆ ಎಲ್ಲ ಅಣಿಮಾಡಿದರೆ final ಅಡಿಗೆ ನಾನಿಯದೇ.

ರಾಜೀವಿಯ ಎಲೆ ಅಡಿಕೆ ಸಂಚಿಯ ಬಗ್ಗೆ ಇಲ್ಲಿ ಓದಿ: ನನ್ನ ಮೊಟ್ಟ ಮೊದಲ blog post :-)

ರಾಜೀವಿ ತುಂಬ ನೀಟಾಗಿ ಕೆಲಸಕ್ಕೆ ಬರುತ್ತಿದ್ದಳು. ನನ್ನ ನಾನಿಗಿಂತ ಸ್ವಲ್ಪ ಚಿಕ್ಕ ವಯಸ್ಸೆ. ಅವರನ್ನು ನೋಡಿದರೆ head madam ತರಹ ಕಾಣುತ್ತಿದ್ದರು. ಬಿಳಿ -ಕಪ್ಪು ಮಿಶ್ರಿತ ತಲೆ ಕೊದಲು ನೀಟಾಗಿ ಬಾಚಿದ್ದು, ಒಂದು ಕೂದಲೂ ಆ ಕಡೆ ಈ ಕಡೆ ಇರುತ್ತಿರಲಿಲ್ಲ. ಅವೈ ಶಣ್ಮುಖಿ / ಚಾಚಿ 420 ನ ಕಮಲಹಾಸನ್ ಮೈಕಟ್ಟು ಇತ್ತು ರಾಜೀವಿಗೆ. ಎರಡು ಕೈಗಳಿಗೆ ಯಾವುದೋ ಮೆಟಲ್ ನ ಒಂದೊಂದು ಬಳೆ. ಅಲ್ಲಲ್ಲಿ ಚಪ್ಪಟೆಯಾಗಿತ್ತು. ಗಟ್ಟಿಯಾಳು. ಅವಳು ಊಟ ಮಾಡುವುದನ್ನು ನೋಡುವುದು ನನಗೆ ಮೋಜಿನ ವಿಷಯ. ನಾನಿ ನನಗೆ ಬೈಯುತ್ತಿದ್ದಳು. ರಾಜೀವಿಯ ಊಟದ ಹೊತ್ತಿಗೆ ನನಗೆ ಹೊರಗೆ ಕಳುಹಿಸುತ್ತಿದ್ದರು :-)
ಅಜ್ಜ ಊರಿನಲ್ಲಿಲ್ಲದಿದ್ದಾಗ ರಾತ್ರಿ ಹೊತ್ತು ರಾಜೀವಿ ನಮ್ಮ ಮನೆಯಲ್ಲೇ ಇರುತ್ತಿದ್ದಳು. ಆಗ ಅವರ ಊರಿನ ದೆವ್ವದ ಕತೆಗಳನ್ನೆಲ್ಲ ಹೇಳುತ್ತಿದ್ದಳು.

ನನಗೂ ಉದ್ದ ಕೂದಲು. ಅದಕ್ಕೆ ಎಣ್ಣೆ ಹಾಕಿ ನೀಟಾಗಿ ಬಾಚುತ್ತಿದ್ದರು. ಬಾಚುತ್ತ ನನಗೆ ಕತೆ ಹೇಳುತ್ತಿದ್ದಳು. ಒಂದು ಸಲ ಜಡೆ ಹೆಣೆದರೆ ಮರುದಿನದ ತನಕ ಒಂದು ಕೂದಲು ಮಿಸುಕಾಡುತ್ತಿರಲಿಲ್ಲ. ಬಾಲವಾಡಿಗೆ ಹೋಗಲು ನನಗೆ ನೀಲು ಎನ್ನುವ ಹೆಂಗಸು ಐದು ಜನ ಇತರ ಮಕ್ಕಳೊಂದಿಗೆ ದರ ದರನೆ ಎಳೆದುಕೊಂಡು ಹೋಗುತ್ತಿದ್ದಳು. ನಾವು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಚೈನ್ (chain) ತರಹ ಮಾಡಿಕೊಂಡು ಹೋಗುತ್ತಿದ್ವಿ. ನಾನು ಪ್ರತೀ ಎರಡು ಹೆಜ್ಜೆಗೂ ಎಡವಿ ಬೀಳುತ್ತಿದ್ದೆ. ನನ್ನ ಕೈ ಹಿಡಿದುಕೊಂಡವರೂ ಬೀಳುತ್ತಿದ್ದರು. ನೀಲೂ ಕೆಟ್ಟದಾಗಿ ಬೈಯುತ್ತಿದ್ದಳು ’ಕಾಯ್ ಘರಿ ಖಾಯಾಲಾ ಘಾಲತ್ ನಾಹಿ ಕಾಯ್?’ (ಏನು ಮನೆಯಲ್ಲಿ ತಿನ್ನಕ್ಕೆ ಹಾಕಲ್ಲವೇನು?) ಒಂದೆರಡು ಸಲ ಪೆಟ್ಟು ಬಿದ್ದಿದಿದೆ. ಹೇಗೋ ಅಜ್ಜನಿಗೆ ಗೊತ್ತಾಯಿತು. ಆಮೇಲೆ ಅಜ್ಜನ ಕಾರಿನ ಡ್ರೈವರ್ ನನ್ನನ್ನು ಬಾಲವಾಡಿಗೆ ಬಿಟ್ಟು ಬರುತ್ತಿದ್ದ. ಎರಡು ವರ್ಷಗಳ ನಂತರ ತಿಳಿಯಿತು. ನನಗಿದ್ದದ್ದು knock-knees ಎನ್ನುವ ಪರಿಸ್ಥಿತಿ. ರಾಜೀವಿ ನನಗೆ ಶಾಲೆಯಿಂದ ಬಂದ ಕೂಡಲೇ ಅವಳ special ಗಿಡಮೂಲಿಕೆಗಳ ಎಣ್ಣೆಯಿಂದ ಕಾಲನ್ನು ಚೆನ್ನಾಗಿ ಮಾಲಿಶ್ ಮಾಡಿ ಬಿಸಿಲಿಗೆ ಕೂರಲು ಹೇಳುತ್ತಿದ್ದಳು. ಭಾನುವಾರದಂದು ಬೆಳಗ್ಗಿನ ಎಳೆ ಬಿಸಿಲಿಗೆ ಹೀಗೆ ಎಣ್ಣೆ ಹಚ್ಚಿ ನನ್ನನ್ನು ಕೂರಿಸುತ್ತಿದ್ದಳು. ಸಂಜೆ ಹೊತ್ತು ಅಜ್ಜನ ಜತೆ ಸಮುದ್ರದ ತಡಿಯಲ್ಲಿ barefooted (ಖಾಲಿ ಕಾಲು??) walk. ಕ್ರಮೇಣ ನನ್ನ ಕಾಲು ಸರಿಯಾಯಿತು.ಆ ಮೇಲೆ ಶಾಲೆ/ಹೈ ಸ್ಕೂಲ್/ ನಲ್ಲಿ ಓಟದ ಹಾಗೂ ಹೈ ಜಂಪ್ (highjump) ಸ್ಪರ್ಧೆಯಲ್ಲಿ ನಾನೇ ಮೊದಲಿಗಳು :-)

ಅವಳು ನಮ್ಮ ಮನೆ ಕೆಲಸ ಮುಗಿಸಿ, ಮನೆಗೆ ಹೋಗಿ ಗಿಡಮೂಲಿಕೆಗಳಿಂದ ನೋವಿನ / ತಲೆಗೆ ಉಪಯೋಗಿಸುವ ಎಣ್ಣೆಯನ್ನು ತಯಾರಿಸಿ ಮಾರುತ್ತಿದ್ದಳು. ಅಜ್ಜ ಜಾಸ್ತಿ ದುಡ್ಡು ಕೊಡುತ್ತಿದ್ದರಿಂದ ಅವಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಮನೆ ಸಮುದ್ರದ ಹತ್ತಿರ ಇದ್ದುದರಿಂದ ಕೆಲವೊಮ್ಮೆ ಜೋರಾಗಿ ಗಾಳಿ ಬೀಸುತ್ತಿತ್ತು. ಒಂದು ಸಲ ರಾತ್ರಿ ದೇವರ ದೀಪ ಗಾಳಿಯಲ್ಲಿ ಅಲುಗಿ ಅದರ ಬತ್ತಿ ನಾನಿ ಉಪಯೋಗಿಸುತ್ತಿದ ನೈಲಾನ್ ಸೊಳ್ಳೆ ಪರದೆಯ ಮೇಲೆ ಬಿದ್ದು, ಬೆಂಕಿ ತಗುಲಿಕೊಂಡು ಬಿಟ್ಟಿತು. ಅಜ್ಜನಿಗೆ high ಬಿ.ಪಿ. ಮಾತ್ರೆ ತೆಗೊಂಡು ಜೋರು ಮಂಪರಿನಲ್ಲಿದ್ದರು. ನಾನು ಅಜ್ಜನನ್ನು ಎಬ್ಬಿಸುವಷ್ಟರಲ್ಲಿ ನೆಟ್ ಒಳಗಡೆ ಮಲಗಿದ್ದ ನಾನಿಗೆ ಹಣೆ ಮತ್ತು ಒಂದು ಕೈಯಲ್ಲಿ ತುಂಬ ಸುಟ್ಟ ಗಾಯಗಳಾಗಿದ್ದವು. ಆಗ ರಾಜೀವಿ ಯಾವುದೋ ಗಬ್ಬು ವಾಸನೆಯ ಎಣ್ಣೆ ತಯಾರಿಸಿ, ಕಾಗೆಯ ಗರಿಯಿಂದ ಆ ಎಣ್ಣೆಯನ್ನು ಸುಟ್ಟ ಜಾಗಕ್ಕೆ ಹಚ್ಚುತ್ತಿದ್ದಳು. ಮೂರು ತಿಂಗಳಿಗೆ ನೋವು- ಕಲೆಯೆಲ್ಲ ಮಾಯ.

ನನ್ನ ನಾನಿಗೆ ಆಮೇಲೆ ಕ್ಯಾನ್ಸರ್ ಕಾಯಿಲೆ ತಗುಲಿಕೊಂಡಿತು. ಆಗ ರಾಜೀವಿ ಜಾಸ್ತಿ ಹೊತ್ತು ನಮ್ಮಲ್ಲಿರುತ್ತಿದ್ದಳು. ನನ್ನ ನಾನಿಯ ಕೊನೆಯ ದಿನಗಳವರೆಗೂ ನಮ್ಮ ಜೊತೆಯಲ್ಲೇ ಇದ್ದಳು. ನನ್ನ ನಾನಿ ತೀರಿಕೊಂಡಾಗ ನನ್ನ ಅಜ್ಜ ಅಲ್ಲೇ ಇದ್ದ ರಾಜೀವಿಗೆ ನಾನಿಯ ಬಂಗಾರದ ಬಳೆ ಹಾಗೂ ಮೂಗಿನ ವಜ್ರದ ಬಟ್ಟು ಕೊಟ್ಟುಬಿಟ್ಟರು. ಜನರು ತಲೆಗೊಂದು ಮಾತನಾಡಿದರು.ಆಗ ನಾನು ಎಂಟನೆ ತರಗತಿಯಲ್ಲಿದ್ದೆ. ಅಷ್ಟರಲ್ಲಿ ಬ್ಯಾಂಕೊಂದರಲ್ಲಿ ಅಧಿಕಾರಿಯಾದ ತಂದೆಗೆ ಪುನ: ಮುಂಬಯಿಗೆ ವರ್ಗವಾಗಿತ್ತು. ಅ ಮೇಲೆ ನಾನು ಮತ್ತು ಅಜ್ಜ ಪುನಃ ನನ್ನ ತಂದೆಯ ಮನೆಗೇ ವಾಪಸ್ಸ್ ಆದೇವು. ಈಗ ನಾನು ಅಜ್ಜನ ಜತೆ ಇದ್ದ ಬಿಲ್ಡಿಂಗ್ ಜಾಗದಲ್ಲಿ high rise ಅಪಾರ್ಟ್ ಮೆಂಟ್ ಗಳು ಮೇಲೆ ಬಂದಿವೆ.

ಅಜ್ಜನೂ ತೀರಿಕೊಂಡು 15 ವರ್ಷಗಳೇ ಆಗಿವೆ.
ರಾಜೀವಿ ಕೆಲವು ವರ್ಷ ಮುಂಬಯಿನಲ್ಲಿ ಇದ್ದಳು. ನಮ್ಮಲ್ಲಿ ಆಗಾಗ ಬಂದು ಹೋಗುತ್ತಿದ್ದಳು. ಗಿರೀಶನ ಹೆಂಡತಿ ಮುಂಬೈನವಳು. ಅವಳಿಗೂ ರಾಜೀವಿಗೂ ಕೂಡಿ ಬರಲಿಲ್ಲ. ಚಿಕ್ಕ ಮಗಳಿಗೂ ಮದುವೆಯ ವಯಾಸ್ಸಾಗಿದ್ದರಿಂದ ಅವರು ವಾಪಸ್ಸ್ ಅವರ ಊರಿಗೆ ಹೋದರು. ರಾಜೀವಿ ಇತ್ತೀಚಿಗೆ ಅಂದರೆ ಐದು ವರ್ಷಗಳ ಹಿಂದೆ ತೀರಿಕೊಂಡಳು ಅಂತ ಸುದ್ದಿ. ಅವಳು ಊರಿಗೆ ಹೋದ ಮೇಲೆ ನಮ್ಮ ಸಂಪರ್ಕ ಕಡಿದು ಬಿತ್ತು. ಗಿರೀಶ ಡ್ರೈವರ್ ಆಗಿ ದುಬೈಗೆ ಹೋದ. ಅದರ ಮುಂಚೆ ಅವನ ಹೆಂಡತಿ ಅವನನ್ನು ಬಿಟ್ಟು ಓಡಿ ಹೋದಳು.

November 6, 2009

Touch

I usually walk to my workplace which is one and a half kilometer from my home. The brisk walk is refreshing.

once I saw a blind person waiting to cross to the other side of the busy road, nobody was feeling helpful I suppose that day. So just when I reached him the signal for pedestrian crossing was green. I gripped his hand and pulled him (literally manhandled) along with me to the other side. I asked him where he wanted to go and he named his destination and the bus number. The bus was in the stop about to leave when I waved frantically at the driver, who fortunately saw my kathakali actions and stalled the bus. I led him to the bus and somebody helped him to get into it. I forgot about the episode.


After a month or so I saw him again in the same spot. This time though there was quite sometime before we crossed but I had already held on to his hand. He turned to me and said “Thank you for that day. I was in a hurry and I could not thank you.” I laughed heartily and said how did you know it was me? He replied that he identified the touch and the perfume.

he told me his name was Prashanth and he worked for a wrist watch assembling unit. He said he also was an expert in making chairs and candles. It saddened me when he said that their watch making unit was under loss and will be shut down completely in a matter of days. I took his contact number. He had a cell phone with him and he identified the numbers by touch. He replied in the negative at my query, if it was a special handset for the visually impaired.He saved my number in his cell, of course I was impressed.

My best friend Ram has adopted a blind school in Shivamogga . Ram is a banker by profession and spends all his spare time and weekends in the school. He is supported by his wife in this noble activity. Probably he can find how best to employ Prashanth at the school.

November 1, 2009

ದಿಲ್ ಕಾ ರಿಷ್ತಾ

ಇಸವಿ 2001. ಬೆಂಗಳೂರಿಗೆ ಬಂದು ಕೆಲವು ತಿಂಗಳು ಆಗಿತ್ತಷ್ಟೆ. ಮೇ 13 ನೇ ತಾರೀಕು ಬೆಳಿಗ್ಗೆ ಅಮೇರಿಕ ದಿಂದ ನನ್ನ ಬ್ರದರ್-ಇನ್-ಲಾ ಫೋನ್ ಮಾಡಿದರು

"hello malathi, Sundeep here. can you take leave from office today..-ಅಂತ ಕೇಳಿದ. ನಾನು ಸಂದೀಪ್ ಯಾವಾಗಲೂ ಇಂಗ್ಲೀಷ್ ನಲ್ಲೇ ಸಂಭಾಷಿಸುವುದು. ಅದಕ್ಕೆ ಕಾರಣ ಮಾತ್ರ ಈಗಲೂ ಗೊತ್ತಿಲ್ಲ.
ನಾನು ಆಗಬಹುದು ಅಂತ ಹೇಳಿ ಕಾರಣ ಕೇಳಿದೆ.

Jyothi has gone into labour and she is scared. She wants to talk to you.

ಅವನ ಇನ್ಸ್ಟ್ರಕ್ಷ್ ನ್ ಫಾಲೋ ಮಾಡ್ತಾ ಸ್ಕೈಪೀ ಎನ್ನುವ ವಿಡೀಯೋ-ಆಡಿಯೋ ಸಾಫ್ಟ್ ವೇರ್ ನ್ನು Install ಮಾಡಿದೆ. ಅವನು ಅದಕ್ಕೆ ಕ್ಯಾಮ್ ಕಾರ್ಡರ್ ಫಿಕ್ಸ್ ಮಾಡಿದ. ನಮ್ಮಲ್ಲಿ ವೆಬ್ ಕ್ಯಾಮರಾ ಇರಲಿಲ್ಲ. ಆದರೆ ನಾನು ನನ್ನ ತಂಗಿಯನ್ನು ನೋಡಬಹುದಿತ್ತು. ಅವಳಿಗೆ ನನ್ನ ದನಿ ಕೇಳಿಸ್ತಾ ಇತ್ತು. ಅವರೂ ಅಮೇರಿಕೆಗೆ , ಆಸ್ಟ್ರೇಲಿಯಾ ದಿಂದ ಬಂದಿದ್ದರಷ್ಟೆ. ನಮ್ಮ ತಾಯಿ ಹಾಗು ಸಂದೀಪ್ ತಾಯಿ ಒಂದು ತಿಂಗಳು ಬಿಟ್ಟು ಅಮೇರಿಕೆಗೆ ಹೋಗುವುದು ನಕ್ಕಿಯಾಗಿತ್ತು. ಅಲ್ಲಿರುವ ಭಾರತೀಯ ಮಿತ್ರರು ಭಾರತಕ್ಕೆ ಬಂದಿದ್ದರು. ಅದುದರಿಂದ ನಮ್ಮವರು ಅಂತ ಯಾರೂ ಇರದೇ ಇರುವುದರಿಂದ ಅವರಿಬ್ಬರಿಗೂ ಸ್ವಲ್ಪ ಆತಂಕವಾಗಿದ್ದಿರಬಹುದು.

ಸರಿ ಅವಳನ್ನು ನೋಡ್ತಾ ಇದ್ದ ಹಾಗೆ ಅವಳು ನೋವಿನಿಂದ ನರಳುತ್ತ ಇದ್ದರೂ ಅರೇ Jyothi, that is my dress you are wearing ಅಂತ ಉದ್ಗರಿಸಿದೆ. ಮುಂಬೈಯಲ್ಲಿ ತಾಯಿ ಮನೆಯಲ್ಲಿ ಕೆಲವು ಬಟ್ಟೆಗಳನ್ನು ನಾನು ಬಿಟ್ಟು ಬಂದಿದೆ.

ಅದಕ್ಕೆ ಅವಳು ಹೌದು, ನಾನು ಒಂದು ದಿನ ಮಳೆಯಲ್ಲಿ ನೆನೆದು ಬಂದಾಗ, ಒದ್ದೆ ಬಟ್ಟೆ ಬಿಚ್ಚಿ, ಹತ್ತಿರ ಸಿಕ್ಕಿದ ನಿನ್ನ ಬಟ್ಟೆ ಹಾಕಿಕೊಂಡೆ. ಯಾಕೋ ತುಂಬಾ ಸಮಾಧಾನ ಅನ್ನಿಸಿತು. ಅದಕ್ಕೆ ನಿನಗೆ ಕೇಳದೆ ನಾನು ಅದನ್ನು Australia ಗೆ ಎತ್ಕೊಂಡು ಹೋದೆ. ಅಮ್ಮನಿಗೂ ಗೊತ್ತಿಲ್ಲ. ನಾನು emotionally down ಆದಾಗ, ನಿಮ್ಮೆಲ್ಲರ ನೆನಪು ಬಂದಾಗ ಅದನ್ನು ಹಾಕಿಕೊಂಡಾಗ ಸಮಾಧಾನ ಅನ್ನಿಸುತ್ತಿತ್ತು. ನೀನು ಯಾವಾಗಲು ಶಾಂತಿ ಸಮಾಧಾನದಿಂದ ಇರುತ್ತಿದ್ದದ್ದು ನೆನಪು ಬರತಿತ್ತು ಅಂದಳು. miss you akka. ತುಂಬಾ emotional ಆದಾಗ ಅವಳು ಅಕ್ಕ ಎನ್ನುವುದು ಉಂಟು.

ನನಗೊತ್ತಿಲ್ಲದೇ ನನ್ನ ಕಣ್ಣಿರು ಗಲ್ಲದಿಂದ ಇಳಿದು ಬಿಸಿಯಾಗಿ ಎದೆ ತೋಯಿಸಿದಾಗ ನಾನು ಅಳುತ್ತಿರುವ ಅನುಭವ ನನಗೆ ಆಗಿದ್ದು. ಸಧ್ಯ ತಂಗಿಗೆ ತನ್ನ brave ಅಕ್ಕ ಅಳುವುದು ಅವಳಿಗೆ ಕಾಣಿಸಲಿಲ್ಲ.
Iam nervous ಅಕ್ಕ ಅಂದಾಗ. ಹೆದರಬೇಡ ಜ್ಯೋತಂಬೆ (ಅವಳಿಗೆ ನಾನಿಟ್ಟ pet-name). Deep breathತೆಗೋ, ನಿಧಾನವಾಗಿ ಉಸಿರು ಹೊರಗೆ ಬಿಡು. ನೋವು ಬಂದಾಗಲೆಲ್ಲ ಹಾಗೇ ಮಾಡು. ಇನ್ನು ಸ್ವಲ್ಪ ಹೊತ್ತು. Dont worry ಅಂದೆ. ಅದರ ಮಧ್ಯ ಅವಳನ್ನು Attend ಮಾಡ್ತಿದ್ದ ಲೇಡಿ ಡಾಕ್ಟರ್ ಗೆ ’ಹಾಯ್ ಅಂದೆ. ಅವಳಿಗೆ ಮಾಲತಿ ಉಚ್ಚಾರ ಮಾಡಲಿಕ್ಕೆ ಬರದೇ, ಹೆಲ್ಲೋ ಮಲಾಶಿ ಅಂದಾಗ ನಗು control ಮಾಡಿದೆ. ಬಹುಶಃ ಜರ್ಮನ್ ಮೂಲದವರಿರಬೇಕು!

ಲೇಬರ್ ವಾರ್ಡ್ ನಲ್ಲಿ ಕ್ಯಾಮೆರ ನಿಷಿದ್ದವಾಗಿದ್ದರಿಂದ, ಸ್ವಲ್ಪ ಹೊತ್ತು ನಾನು -ಸಂದೀಪ ಸುಮ್ಮನೆ ಅರ್ಥವಿಲ್ಲದ ಹರಟೆ, ನನ್ನ ಮಕ್ಕಳ ಕೀಟಲೆ ಎಲ್ಲ ಮಾತಾಡಿ ಕೊಂಡ್ವಿ. ಸಂಜೆ (ಭಾರತೀಯ ಸಮಯ) ೪.೦೦ ರ ಸಮಯ ನಿವೇದಿತಾ; ಹುಟ್ಟಿದಳು. ಕ್ಯಾಮರಾ ಅವಳ ಬಳಿ ತೆಗೆದು ಕೊಂಡು ಹೋದಾಗ ನಾನು :Nivu baby- ಪಳೆ ತುಗೆಲೆ ಮ್ಹಾವ(ನೋಡು ನಿನ್ನ ದೊಡ್ಡಮ್ಮ) ಅಂದಾಗ ಅವಳು ಒಂದು ಕ್ಷಣ ಕಣ್ಣು ಬಿಟ್ಟು, ಹುಬ್ಬು ಗಂಟಕ್ಕಿದ್ದಳು.

ನಿವೇದಿತಾ ಗೆ ನನ್ನ ಹಾಗೇ ಓದುವ ಗೀಳು. Love you Nivedita. :-)

October 30, 2009

ಅಕ್ಕಿ ರೊಟ್ಟಿ

3 ಬಟ್ಟಲು- ಅಕ್ಕಿ ಹಿಟ್ಟು
2 ಟೇಬಲ್ ಚಮಚ ತಾಜಾ ಹೆರೆದ ತೆಂಗಿನಕಾಯಿ
3 ಹದ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
1 ಬಟ್ಟಲು ಮೊಸರು, ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು


ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸ್ ಮಾಡಿ ಮೃದುವಾದ ಕಣಕ ತಯಾರಿಸಿ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ. ಬಾಳೆ ಎಲೆ ಮೇಲೆ ಕಣಕದ ಗೋಲವನ್ನು ಇಟ್ಟು ಬೆರಳಿನಿಂದ ತಟ್ಟಿ. ಒದ್ದೆ ಕೈ ಬೆರಳಿನಿಂದ ತಟ್ಟಿ. ಎಲೆಯನ್ನು ನಿಧಾನವಾಗಿ ಎತ್ತಿ ಕಾವಲಿ ಮೇಲೆ ಕವಚಿ.ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಕೆಂಪಾಗುವಂತೆ ಕಾಯಿಸಿ
ಅವರೆ ಕಾಳು season ನಲ್ಲಿ ಬೇಯಿಸಿ mash ಮಾಡಿದ ಅವರೆ ಬೇಳೆಯನ್ನು ಬೆರೆಸಬಹುದು.
ತುರಿದ carrot ಕೂಡಾ ಮಿಕ್ಸ್ ಮಾಡಬಹುದು
serve hot with ತಾಜಾ ಬೆಣ್ಣೆ ಮತ್ತು ಬೆಳ್ಳುಳ್ಳಿ ಚಟ್ನಿ

:-)

October 26, 2009

Post without title


I had been to her place on the request of my dear friend. Her name was Vani. She was engaged to be married, to a man from Bangalore. She was quite good looking. My husband, a banker was deputed to this village. A beautiful village surrounded by lovely mountains. My friend (my husband’s colleague) being a widow could not attend the engagement function so she chose that particular day to congratulate her childhood friend.

Her father was the high priest of the village temple, situated mid-town and their house was attached to the temple. She and her brother both were born here. Her mother had passed away a few years ago.

We were seated in the hall. Her home consisted of a huge hall, a middle room and Kitchen. The house was built on a slope and likewise a few rooms were situated at the top and the kitchen was located lower than the hall where we were seated, and bathroom at a still lower level. One had to descend/ascend a few steps to get to the kitchen.

No sooner we took our seats, she got us some water and jaggery as is the custom. She stumbled once and recovered quickly. I noticed the small tear at the bottom of her saree petticoat, big enough for her toe to get in.

She stumbled likewise twice, in the hour’s time we spent there. We left after my friend and vani exchanged pleasantries. As we were walking towards home I wanted to warn my friend about the danger of her friend tripping due to that torn petticoat. But somehow our topic turned to our trekking expeditions and the preparations that we were to make.

Anyways a few days later, my friend came to me in a hurry and said Vani had met with a fall and her right leg was fractured and the culprit the same torn petticoat. Her leg was in the cast for six months.

The wedding could not be postponed, since the bridegroom could not postpone his leave, and also there was no other auspicious date for a long time, She got married with the cast on. The marriage ceremony was conducted with great pomp and her father shelled an awful amount of gold and money as dowry.

The honeymoon was postponed until after the removal of the cast. Even after the cast was removed, there was a slight limp in her right leg. The doctor pronounced the limp to be permanent. The boy was not able to adjust to this new situation. And he sent her back to her fathers place. The girl had no mother. The brother was a hooligan. Even after six months of stay the boy was not ready to have her back. On intervention from the holy - seer and other relatives he agreed to take her back provided the father-in-law gave him money to buy a bike. Having borrowed heavily for the marriage, it was difficult for the father to get more money to cater to the boys demand. Also the income from the temple was not very high.

But somehow he managed to sell the small property that he possessed in his native place which, he had kept aside to tide him over in his old age. He borrowed some more from his friends This time round, when the girl was with her husband he slowly started harassing her calling her a handicapped person and also came home drunk and burnt her on the neck and arms with cigarette butts. He locked her inside the house when he went about his chores. The girl suffered all this in silence for she had not much education and did not want to return to her parental home, scared of the gossip that might spread in her small village.

Only when a relative visited them, he saw the sad state of affairs and got her back to her fathers’ place. Two years had passed by then. As soon as the girl left him, he shifted his residence unknown to everybody. Rumors came to the girl about his going about with another woman. Then one day she received lawyers notice asking for signatures on the divorce form. Again there was some try at getting them to reconcile but to no effect. This divorce proceeding again took a long time. It took its toll on her old father and he expired. Since another priest came there to stay with his family, the girl had nowhere to go. Last we heard she had gone to stay with her very distant, aged relatives where she was not given a humane treatment, as if it was her fault that situation took such a turn.

We were deputed to a far off metro by then and all subsequent news was shared by my friend over mail. But my question is if the father had utilized the money spent on her dowry to educate her or to start off some sort of a small business for her, he need not have gone to such lengths, avoiding all the heartburns on the way. Why is it that girls, (even now) are bought up as a burden, where -in she has to be married off as soon as possible?

October 20, 2009

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ದೀಪಾವಳಿಯ ದಿನ ಶ್ರೀಕಾಂತ್ sudden ಪ್ಲಾನ್ ಹಾಕಿ ಬಿಟ್ಟರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ತುಂಬ ಕೇಳಿದ್ದೇನೆ. ಅಲ್ಲಿಗೆ ಹೋದರೆ ಹೇಗೆ? ಮಕ್ಕಳು ಕೂಡಲೇ alert. ದೊಡ್ಡ ಮಗಳಿಗೆ ಆ ದಿನ ಅವಳ ವಾರದ ರಜೆ ಸಿಕ್ಕಿತು. ಅವಳು ಹೋಟಲ್ ಮ್ಯಾನೆಜ್ ಮೆಂಟ್ course ಮಾಡುವುದರಿಂದ, ಅವಳಿಗೆ ರಜೆ ಕಡಿಮೆ.
ದೀಪಾವಳಿಯ ಎಣ್ಣೆ ಅಭ್ಯಂಜನ, ಪೂಜೆ ಮುಗಿಸಿ, ಉದ್ದಿನ ದೋಸೆ, ಪಲ್ಯ, ಚಟ್ನೀ ಪುಡಿ, ಪುಳಿಯೊಗರೆ ಹಾಗೂ ಹಬ್ಬಕ್ಕೆ ಮಾಡಿದ ಕುರುಕಲು ತಿಂಡಿ ಮತ್ತು ಹಣ್ಣುಗಳನ್ನು pack ಮಾಡಿ ಕೊಂಡು ನಮ್ಮ ಕಾರ್ ಬೆಂಗಳೂರಿನಿಂದ ಹೊರಟಿತು.

ಬೆಂಗಳೂರಿಂದ ಮೈಸೂರು, ಅಲ್ಲಿಂದ ಗುಂಡ್ಲುಪೇಟೆ. ಗುಂಡ್ಲು ಪೇಟೆ ಯಿಂದ ಗೋಪಾಲಸ್ವಾಮಿ ಬೆಟ್ಟ ೧೫ ಕಿ.ಮಿ. ಶಿಖರವನ್ನೇರಲು 5 ಕಿ.ಮಿ ಅಷ್ಟು ಮಾರ್ಗ ಮೇಲೇರಬೇಕಾಗುತ್ತದೆ. ಸಮುದ್ರ ಮಟ್ಟದಿಂದ 1446 ಮೀ ಎತ್ತರದಲ್ಲಿರುವ ಈ ಬೆಟ್ಟ ಅತೀ ಸುಂದರವಾದ ಹಸಿರು ತಾಣ ಹೊಂದಿದೆ. ಬೆಟ್ಟದ ಬುಡದಲ್ಲಿನ ಚೆಕ್ ಪೋಸ್ಟ್ ನವರು ಪ್ಲ್ಯಾಸ್ಟಿಕ್ ಅಥವಾ ಪ್ರಾಣಿಗಳಿಗೆ ಹಾನಿ ಉಂಟು ಮಾಡುವಂತಹ ವಸ್ತುಗಳನ್ನು ತೆಗೆದು ಕೊಂಡು ಹೋಗಲು ಬಿಡುವುದಿಲ್ಲ.
ಅಲ್ಲಿನ ದೇವಸ್ಥಾನದಲ್ಲಿರುವ ದೇವರು ವೇಣುಗೋಪಾಲಸ್ವಾಮಿ. ಅನೇಕ ನೀರ ಬುಗ್ಗೆ ಗಳಿಂದ ಹಾಗೂ ಉತ್ತಮ ಮಣ್ಣಿನಿಂದ ಈ ಬೆಟ್ಟ ಸದಾ ಹಸಿರುಮಯವಾಗಿರುತ್ತದೆ.. ವರ್ಷದ ಬಹುಪಾಲು ಮಂಜು ಮೋಡ ಮುಸುಕಿರುವುದರಿಂದ ಈ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಹೆಸರು.. ನಾವು ಹೋದಾಗ ಸ್ವಲ್ಪ ಲೇಟ್ ಆದ್ದರಿಂದ ಬಿಸಿಲು ಏರಿದ್ದು, ನಮಗೆ ವೈನಾಡಿನ ಹಸಿರು ಕಾಡು ಕಾಣ ಸಿಕ್ಕಿತು.

ಹಳೆಯ ಕೋಟೆಯೊಂದರ ಒಳಗೆ ಈ ದೇವಸ್ಥಾನ ಸ್ಥಿತ ವಾಗಿದೆ. ಈಗ ಕೋಟೆ ಹೋಗಿ ಸಿಮೆಂಟ್ ನಿಂದ ಮಾಡಿದ ಕಾಂಪೌಂಡ್ ಒಳಗಿದೆ ಈ ದೇವಸ್ಥಾನ. ದೇವರ ಮೂರ್ತಿ ತುಂಬಾ ಚೆನ್ನಾಗಿದೆ. ದೇವಾಲಯದ ಎಡ ಬದಿಗೆ ಹೋದಾಗ airtel ನ ’ತಮಿಳುನಾಡಿಗೆ ಸ್ವಾಗತ’ ಎಂಬ ಎಸ್.ಎಮ್.ಎಸ್ ಬಂತು. ದೇವಸ್ಥಾನ ಬಲಬದಿಗೆ, ಅಂದರೆ ಸ್ವಲ್ಪ ತಗ್ಗಿನ ಪ್ರದೇಶಕ್ಕೆ ಹೋದಾಗ welcome to Kerala ಅನ್ನುವ ಅವರ ಎಸ್.ಎಮ್.ಎಸ್. ಬಂಡಿಪುರ್ ಅರಣ್ಯದಲ್ಲಿರುವ ಈ ಬೆಟ್ಟದಲ್ಲಿ , ಅಲ್ಲೆಲ್ಲ ಆನೆ ಓಡಾಡುತ್ತಿರುವ ಸಂಕೇತವಾಗಿ ಆನೆ ಲದ್ದಿ ಕಂಡೆವು.



ಊಟದ ಸಮಯದಲ್ಲಿ ನೋಡಿದರೆ ತಟ್ಟೆಗಳನ್ನೆ ತಂದಿರಲಿಲ್ಲ ನಾನು. ಡಬ್ಬಿಯ ಮುಚ್ಚಳಗಳನ್ನೆ ಉಪಯೋಗಿಸಬೇಕಾಯ್ತು. ಹಾಗೂ ಅಲ್ಲಿ ಊಟ/ತಿಂಡಿ/ ಕುಡಿಯುವ ನೀರು ಸಿಗುವುದಿಲ್ಲ. ಇದೂ ಒಂದು ತರಹ ಒಳ್ಳೆಯದೇ, ಯಾಕೆಂದರೆ ಜನರು ಇನ್ನಷ್ಟು ಜಾಗ ಗಲೀಜು ಮಾಡಿ ಬಿಡ್ತಾರೆ. ಆದರೂ ಕೆಲವು ಕಡೆ cigarette pack, ಬೀರ್ ಕ್ಯಾನ್ , ಪ್ಲ್ಯಾಸ್ಟಿಕ್ ಚೀಲಗಳು ಹಾರಾಡುತ್ತಿದ್ದವು. but ಬೆಟ್ಟದಲ್ಲಿ ಹೆಂಗಸರಿಗಾಗಿ toilet ಸೌಲಭ್ಯ ಇಲ್ಲದೇ ಸ್ವಲ್ಪ ತೊಂದರೆಯಾಯಿತು. ದೇವರ ದರ್ಶನಕ್ಕೆ ಆ ದಿನ ತುಂಬ ಜನರಿದ್ದರು. ಕ್ಯೂ ಸಿಸ್ಟಮ್ ಇದ್ದುದರಿಂದ ಎಲ್ಲರಿಗೂ ಗರ್ಭಗುಡಿಯಲ್ಲಿ ಎರಡೆರಡು ನಿಮಿಷ time ಕೊಡಲಾಯಿತು. ತುಲಸಿ ಹಾಗೂ ಹೂವಿನ ಅಲಂಕಾರದಿಂದ ದೇವರ ಮೂರ್ತಿ ಕಾಣ್ತಿರಲಿಲ್ಲ. ಆದರೂ ಪುರೋಹಿತರು, ಮಾಲೆಗಳನ್ನು ಎತ್ತಿ ದೇವರ ಮಸ್ತಕ, ಕೊಳಲು, ದೇವರ ಪಾದದ ಬಳಿಯಿರುವ ವಿಗ್ರಹಗಳನ್ನು ತೋರಿಸಿ, ಗರ್ಭಗುಡಿಯ ಬಾಗಿಲ ಮೇಲಿಂದ ಒಸರುತ್ತಿದ್ದ ಹಿಮ/mist ನ್ನು ಮುಟ್ಟಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಸ್ವಲ್ಪ ನೀರನ್ನು ಭಕ್ತರ ಮೇಲೆ ಸಿಂಪಡಿಸಿದರು. ISKCON ನಿಂದ ಬಂದ ಗುಂಪು ಕೃಷ್ಣನ ಕೆಲವು ಗೀತೆಗಳನ್ನು ಸುಶ್ಯ್ರಾವ್ಯವಾಗಿ ಹಾಡಿತು.
ಬಿಸಿಲು ನೆರಳಿನಾಟದಲ್ಲಿ ಗುಡ್ಡದ ಬಣ್ಣವು change ಆಗ್ತಾ ಇದ್ದದ್ದು ನೋಡುವುದೇ ಒಂದು ಆಹ್ಲಾದಕರವಾದ ಅನುಭವ. ಎಷ್ಟೋ ಹೊತ್ತು ಅದನ್ನು ನೋಡುತ್ತ ಕುತಿದ್ದೆವು. ಇನ್ನೊಮ್ಮೆ ನಾವು ದೊಡ್ಡ ಗುಂಪುನ್ನು ಮಾಡಿ ಅಲ್ಲಿಗೆ ಹೋಗುವ plan ಹಾಕ್ಕೊಂಡಿದ್ದೇವೆ. ನೀವು ಎಂದಾದರೊಮ್ಮೆ ಭೇಟಿ ನೀಡಲೇ ಬೇಕಾದ ತಾಣ.

ಈ ದಿನ ನನ್ನ ಹುಟ್ಟು ಹಬ್ಬ(according to ನಮ್ಮ ಪಂಚಾಂಗ) ಕೂಡ ಇತ್ತು. ಮಕ್ಕಳು ಅಲ್ಲಿ ಸಿಕ್ಕ ಬೆಟ್ಟದಲ್ಲಿನ ಹೂಗಳಿಂದ ನನಗೋಸ್ಕರ ಒಂದು ಹೂಗುಚ್ಛ ಮಾಡಿ ಕೊಟ್ಟರು.


ಅಲ್ಲಿಂದ ಮೈಸೂರಿಗೆ ಬಂದು ದಸರಾ ಕರಕುಶಲ ಮೇಳಕ್ಕೆ ಹೋದೆವು. 200 ಕ್ಕಿಂತ ಹೆಚ್ಚು ಕರಕುಶಲ, ಬಟ್ಟೆ, ಪಾತ್ರೆ, ಆಟ, ತಿಂಡಿಗಳ ಮಳಿಗೆಗಳಿದ್ದವು. ಈ ವರ್ಷದ ವಿಶೇಷ ಆಕರ್ಷಣೆ ’snow ball’ ಅನ್ನುವ ಮಳಿಗೆ. ಸಂಜೆ ಅರಮನೆ ದೀಪಾಲಂಕೃತಗೊಂಡು ಮನಮೋಹಕ ದೃಶ್ಯ ಒದಗಿಸಿಕೊಟ್ಟಿತು. ದಸರಾ ಉತ್ಸವಕ್ಕೆ ಹೋದಾಗ ನಾವು ಇದನ್ನು ಮಿಸ್ ಮಾಡ್ಕೊಂಡಿದ್ದೆವು. ಡಿಸೆಂಬರ್ ತನಕ ನಡೆಯುತ್ತದೆ ಈ ಮೇಳ. ವಿವಿಧ ಆಟದಲ್ಲಿ ತಲ್ಲಿನ ಮಕ್ಕಳು ಹಾಗು ದೊಡ್ಡವರನ್ನು ನೋಡುವುದೂ ಮಜವಾಗಿತ್ತು.

as usual ನಮ್ಮ ಕ್ಯಾಮರಾ ಕೈ ಕೊಟ್ಟು, ಇಲ್ಲಿ ಹಾಕಿರುವ ಚಿತ್ರಗಳೆಲ್ಲ cell phone ನಿಂದ ತೆಗೆದದ್ದು.

October 14, 2009

ಒಂದು ಭಾನುವಾರ- ಹಾಗೆ ಸುಮ್ಮನೆ

ಇತ್ತೀಚಿಗೆ ರಂಗಶಂಕರದಲ್ಲಿ ಮಧ್ಯಾನ್ಹ 3.30 ಗಂಟೆಗೆ ನಾಟಕದ ಶೋ ಇಡುತ್ತಾರೆ, ಇದರಿಂದ ನಮಗೆ ಅನುಕೂಲವಾಗಿದೆ. ಮಹಾಲಕ್ಷ್ಮಿಪುರಂ ದಿಂದ ಜೆ.ಪಿ ನಗರ ಸ್ವಲ್ಪ ದೂರ. ರಿಕ್ಷಾದವರು ಕೆಲವೊಮ್ಮೆ ಬರಲು ಒಪ್ಪುವುದಿಲ್ಲ.

ಭಾನುವಾರ ೩.೩೦ ಗಂಟೆಯ ಶೋ ‘ನಾ ತುಕಾರಾಮ್ ಅಲ್ಲ’ ಗೆ ಹೊರೆಟೆವು. ಸ್ವಲ್ಪ ಗಡಿಬಿಡಿಯಾಯ್ತು. ಬಸ್ಸು, ರಿಕ್ಷಾ ಹಿಡಿದು, ರಂಗಶಂಕರ ತಲುಪಿದಾಗ ಶೋ ಶುರು ಆಗುವ ಮೊದಲ ಗಂಟೆಯ ಸದ್ದಾಯಿತು. on-line ಟಿಕೆಟ್ ಬುಕ್ ಮಾಡಿದ್ದರಿಂದ ಅದನ್ನು ಕೊಟ್ಟು ಬೇರೆ ಪಾಸ ಅವರಿಂದ ಪಡೆದುಕೊಳ್ಳ ಬೇಕಿತ್ತು. ಅಂತು ಅದೆಲ್ಲಾ ಫೋರ್‌ಮೆಲಿಟಿ ಪೋರೈಸಿ, ಓಡ್ತಾ ಮೆಟ್ಟಿಲು ಹತ್ತಿ, ತುಂಬಾ ಎತ್ತರದ ಜಾಗದಲ್ಲಿ ಹೋಗಿ ಕುಳಿತು ಕೊಂಡೆವು, ಉಳಿದಿದ್ದ ಜಾಗವೆಲ್ಲಾ ಭರ್ತಿಯಾಗಿತ್ತು.

ನಾಟಕ ಇನ್ನೂ ಶುರು ಮಾಡಿರಲಿಲ್ಲ. ಅದಕ್ಕೆ ಸುಮ್ಮನೆ ಪರಿಚಯದವರೂ ಯಾರಾದರೂ ಇದ್ದಾರಾ ಅಂತ ನೋಡುತ್ತಿರುವಾಗ ಜಯಂತ ಕಾಯ್ಕಿಣಿ ಅವರ ಮಗನ ಜತೆ ಕೂತಿದ್ದು ಕಾಣಿಸಿತು ದೂರದಲ್ಲಿ ಸುಧನ್ವಾ ದೇರಾಜೆ ಯವರನ್ನು ಕಂಡೆ. ಅವರ (ಮುಖ) ಪರಿಚಯ ನನಗೆ ಮೇ ಪ್ಲವರ್ ನ,fish market ಕಾರ್ಯಕ್ರಮದಲ್ಲಿ, ದುಂಡಿರಾಜ ಅವರ ಕವನ ಗಳ ಬಗ್ಗೆ ಮಾತನಾಡಲು ಕರೆದಾಗ ಆಗಿತ್ತು. (ಆ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಅವರ ಕಡೆ ಬೆಟ್ಟು ಮಾಡಿ- ಅವನು ಸುಧನ್ವಾ ದೇರಾಜೆ-ಉಜಿರೆಯವನು- ಒಳ್ಳೆಯ ಹುಡುಗ ಅಂತ ಪರಿಚಯಿಸಿದ್ದು ನೆನಪಾಗಿ ನಗೆ ಬಂದಿತ್ತು) ದೇರಾಜೆಯವರು ತುಂಬ ಕುತೂಹಲದಿಂದ ರಂಗಸಜ್ಜಿಕೆಯನ್ನು study ಮಾಡ್ತಾ ಇದ್ದರು. (ಮರು ದಿನ ನಾಟಕದ ಬಗ್ಗೆ ಪುಟ್ಟ ಮುದ್ದಾದ ಬರಹ ವಿಜಯ ಕರ್ನಾಟಕದಲ್ಲಿ ಹಾಕಿದ್ದರು.)
ನಾವು ಕುಳಿತುಕೊಂಡ ಸಾಲಿನಲ್ಲಿ ಕೆಲವು ಖಾಲಿ ಸೀಟ್ ಇದ್ದುದರಿಂದ, ಅರುಂಧತಿ ನಾಗ ನಮ್ಮ ಹತ್ತಿರ ಕುಳಿತುಕೊಂಡ್ರು. ಕೂತ ಕಡೆಯಿಂದ ಎಲ್ಲರಿಗೂ ಮೊಬೈಲ್ ಸ್ವಿಚ್ ಆಫ್ ಮಾಡಲು ರಿಕ್ವೆಶ್ಟ್ ಮಾಡ್ತಾ ಇದ್ರು. ಜಯಂತ ಕಾಯ್ಕಿಣಿ ಮಾಡಿರಲಿಲ್ಲ. ಅದಕ್ಕೆ ಅರುಂಧತಿ ಅವರ ಬಳಿ ಹೋಗಿ, ಅವರ ಕೈ ಕುಲುಕಿ, ಕುಶಲೋಪರಿ ಬಳಿಕ ಅವರನ್ನು ಮೊಬೈಲ್ ಸ್ವಿಚ್ ಆಫ್ ಮಾಡಲು ಕೇಳಿಕೊಂಡರು.

ನಾಟಕ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಕೆಲವು ಡಯಾಲಗ್ ತುಂಬಾ ಉದ್ದವಿತ್ತು. ಶ್ರೀಕಾಂತ್ ತುಂಬಾ ನಗ್ತಾ ಇದ್ದರು. ಅವರೆಲ್ಲಾದ್ರು ನಗ್ತ ನಗ್ತ ಬೀಳಬಹುದೆಂದನಿಸಿ, ನಾಟಕಕ್ಕಿಂತ ಅವರನ್ನು ಗಮನಿಸ್ತ್ತಾ ಇದ್ದೆ. ಎಲ್ಲ ಪಾತ್ರಧಾರಿಗಳು ತುಂಬಾ ಚೆನ್ನಾಗಿ ಅಭಿನಯಿಸಿದ್ರು. ವೃದ್ಧ್ಯಾಪದಲ್ಲಿ ಕಾಡುವ ಅನಿಶ್ಚಿತತೆ, ಅದನ್ನು ದೂರಮಾಡಲು ವೃದ್ದರು ಕಂಡು ಕೊಂಡ ಉಪಾಯ ತಮಾಷೆಯಾದ್ರೂ, ಮನಸ್ಸಿಗೆ ತಟ್ಟುವಂತಿತ್ತು. ನನ್ನ ಹಿರಿ ಮಗಳು ಬ್ಯಾಕ್ ರೆಸ್ಟ್ ಗೆ ತಲೆಯಾನಿಸಿ ಒಳ್ಳೆ ನಿದ್ದೆ ಮಾಡಿದಳು. ಯಾಕೆಂದರೆ ಪ್ರತಿ ಭಾನುವಾರ ಊಟದ ನಂತರ ಒಂದಷ್ಟು ಮಲಗುವುದು ಅವಳ ಅಭ್ಯಾಸ. ನಾಟಕ ಮುಗಿದ ಮೇಲೆ ‘ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅವಳ ಪ್ರಶ್ನೆ. ಸಧ್ಯ ಅವಳು ಮಲಗಿದ್ದು ಇವರಿಗೆ ಗೊತ್ತಿರಲಿಲ್ಲ. ಇಲ್ಲದಿದ್ದರೆ ಇವರು ಲೆಕ್ಚರ ಮೋಡ್ ಗೆ ಸಜ್ಜಾಗುತ್ತಿದ್ದರು.

೫.೩೦ ಗೆ ನಾಟಕ ಸಮಾಪ್ತ ವಾಯ್ತು. ಹೊರಗೆ ಜಯಂತ ಕಾಯ್ಕಿಣಿ ಅವರ ಮಗನನ್ನು ಆಪ್ತರಿಗೆ ಪರಿಚಯಿಸ್ತಾ ಇದ್ದರು. ನಾವು ಶಂಕರ್ ಬುಕ್ ಹೌಸ್ ನಿಂದ ಕೆಲವು ಹಳೆಯ ಕಪ್ಪು-ಬಿಳುಪು , ಕನ್ನಡ ಫಿಲ್ಮ್ ಸಿ. ಡಿ. ಗಳನ್ನು ಕೊಂಡುಕೊಂಡೆವು.

ಮಕ್ಕಳಿಗೆ ಅಷ್ಟು ಬೇಗ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಅದಕ್ಕೆ ನಮ್ಮವರು, ‘ನಡೀರಿ, ಗಾಂಧಿಬಜಾರ್ ಕಡೆಗೆ ಹೋಗುವ. ನೀವು ಅಲ್ಲಿ ಹೋಗಿಲ್ಲವಲ್ಲ’ ಅಂತ ಹೇಳಿ ರಿಕ್ಷಾದಲ್ಲಿ ಹೋಗಿ ಹೋಟೆಲ್ ಶಿವ ಸಾಗರ್ ಹತ್ತಿರ ಇಳಿದು. ಅಲ್ಲಿಂದ ನಮ್ಮನ್ನು ನಡೆಸಿಕೊಂಡು, ‘ಹಳೆಯ ಸಾಹಿತಿಗಳಿಗೆಲ್ಲ, film makers ಗಳಿಗೆಲ್ಲ ಅಚ್ಚು ಮೆಚ್ಚಿನ ತಾಣ ಅಂತ ವಿವರಿಸ್ತಾ, ಅಲ್ಲಿ ಭೇಟಿ ನೀಡುತಿದ್ದ ಎಲ್ಲ ಸಾಹಿತಿಗಳ ಹೆಸರನ್ನು ಪಟ ಪಟನೆ ಹೇಳುತ್ತಾ ಹೋದ್ರು. ಅಲ್ಲಿನ ಹೂವಿನ ಮಾರುಕಟ್ಟೆ ನನಗೆ ತುಂಬಾ ಇಷ್ಟವಾಯ್ತು. ತರಹ ತರಹದ ಆಕಾರದಲ್ಲಿ ಕಟ್ಟಿದ ಹೂ ಮಾಲೆ, ವಿವಿಧ ಜಾತಿಯ ಹೂಗಳು, ಅದನ್ನು ಕೊಳ್ಳುವ ಜನರು.ಬಹುಶ: ಅಲ್ಲೆಲ್ಲೋ ದೇವಸ್ಥಾನವಿದೆಯೋ ಎನೋ, ಗೊತ್ತಾಗಲಿಲ್ಲ.

ಡಿ.ವಿ.ಜಿ ರೋಡಲ್ಲಿ ಗುಲಕನ್ನ್-ಮಸಾಲಾ ಸೋಡಾ ಅಂಗಡಿಗೂ ಕರೆದುಕೊಂಡು ಹೋದ್ರು. ಅಂಗಡಿಯವನ ಮಾತನ್ನು ನನ್ನ ಮಕ್ಕಳು ಮಿಮಿಕ್ರಿ ಮಾಡಿದಾಗ, ಕುಡಿಯುತ್ತಿರುವ ಸೋಡಾ ನೆತ್ತಿಗೆ ಹತ್ತಿ, ಇವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ನಿಮಗೆ ನಗಲಿಕ್ಕೆ- ತಮಾಷೆ ಮಾಡಲಿಕ್ಕೆ ಹೊತ್ತು-ಗೊತ್ತು ಇಲ್ಲ ಅಂತ ಅಂದು ಬಿಟ್ರು. ಆ ಸೋಡ ಅಂಗಡಿಗಿಂತ ಮುನ್ನ, ದೇವರ ಸಾಮಾನು, ಕುಸುರಿ ಕೆತ್ತನೆಯ ಕೊಬ್ಬರಿ, ಸಕ್ಕರೆ ಅಚ್ಚುಗಳನ್ನು ಮಾರುವ ಸುಮಾರು ಅಂಗಡಿಗಳನ್ನು ನೋಡಿದೆ. ಅಲ್ಲಿ ಸಹ ಸಾಕಷ್ಟು ಜನಸಂದಣಿ ಇತ್ತು. ಅಂಗಡಿಯವನಿಗೆ ‘ಇಲ್ಲಿ ಯಾವಾಗಲೂ ಹೀಗೆ ರಶ್ ಆ’? ಅಂದಿದ್ದಕ್ಕೆ ಅವನು ‘ಅಮ್ಮ,- ಮದುವೆ, ಮುಂಜಿ, ಬಾಗಿನ, ಗಣೇಶ ಗೌರಿ ವೃತಕ್ಕೆ, ಏಳನೇ ತಿಂಗ ಳ ಶಾಸ್ತ್ರಕ್ಕೆ , ದೇವರ ಧೂಪ, ದೀಪ, ಬತ್ತಿ ಮುಂತಾದ ಸಾಮಾನೆಲ್ಲಾ ನಮ್ಮಲ್ಲಿ ದೊರೆಯುತ್ತೆ, ಅದಕ್ಕೆ ಇಲ್ಲಿ ಯವಾಗಲೂ ಜನ ಏನನ್ನಾದ್ರೂ ಕೊಂಡುಕೊಳ್ಳ್ತಾರೆ ಅಂತ ಹೇಳಿದ್ರು.

ಹಾಗೆ ನಡೆದುಕೊಂಡು ಹೋಗ್ತಾ ಇದ್ದಾಗ ನಮ್ಮೆದುರೇ ಅಂಕಿತ ಬುಕ್ಕ ಸ್ಟೋರ್ ಸಿಕ್ಕಿತು. ‘ಬಾ ನಿನಗೆ ನಿನ್ನ ಫ್ರೆಂಡ್ (ವಸುಧೇಂದ್ರರ ಹಂಪಿ ಎಕ್ಸ್‌ಪ್ರೆಸ್) ಪುಸ್ತಕ ಕೊಡಿಸ್ತೇನೆ ಅಂತ ಇವರು ನಮ್ಮನ್ನೆಲಾ ಅಂಗಡಿಗೆ ಕರೆದು ಕೊಂಡು ಹೋದ್ರು. ಪುಸ್ತಕ ದ ಅಂಗಡಿ ಹೊಕ್ಕಿದ್ದು ಅಂದ್ರೆ ಸಧಾರಣವಾಗಿ ನಾವೆಲ್ಲಾ ಹೊರಗೆ ಬರುವುದು ಎರಡು ಗಂಟೆ ಮೇಲೆ. ಮಕ್ಕಳಿಬ್ಬರೂ ಕನಿಷ್ಠ ಪಕ್ಷ ಎರಡು ಕಾಮಿಕ್ ಬುಕ್ ಗಳನ್ನು ಓದಲೇ ಬೇಕು. ನನಗ್ಯಾಕೋ ಅಂಗಡಿ ತುಂಬಾ ಕ್ರಾಂಪ್ಡ (claustrophobic ) ಅನ್ನಿಸಿತು. ಅದಕ್ಕೆ ನಾನು ಮೆಟ್ಟಿಲ ಹತ್ತಿರ ಇದ್ದ ಪುಸ್ತಕದ ಮೇಲೆ ಕಣ್ಣೋಡಿಸ್ತಾ ಇದ್ದೆ. ಎರಡು ಹಂಪಿ ಎಕ್ಸ್‌ಪ್ರೆಸ್ ಪುಸ್ತಕಗಳು, ಜಯಂತ ಕಾಯ್ಕಿಣಿ ಕವಿತೆಗಳ ಪುಸ್ತಕ ‘ಶ್ರಾವಣ ಮಧ್ಯಾನ್ಹ-ನೀಲಿ ಮಳೆ’ ಪಕ್ಕದಲ್ಲಿಟ್ಟು, ಅಂಗಡಿಗೆ ಬಂದ ಇತರ ಜನರನ್ನು ಗಮನಿಸ್ತಾ ಇದ್ದೆ. ತುಂಬ ಜನ ಇದ್ದರು. ಜಾಸ್ತಿ ಯುವಕರೇ. ಖುಶಿಯಾಯ್ತು. ಜನರಲ್ಲಿ ಪುಸ್ತಕ ಓದುವ ಅಭ್ಯಾಸ ಇನ್ನೂ ಇದೆ ಅಂತ ಆಯ್ತು

ಆಗಲೇ ಗಂಟೆ ೮.೩೦ ಯಾಗಿತ್ತು. ಅವರೆನ್ನೆಲ್ಲಾ ಹೊರಡಿಸಿ, ರೋಟಿ ಘರ್ ನಲ್ಲಿ ಊಟ ಮಾಡಿದ್ವಿ. ಮತ್ತೆ ಮನೆಗೆ ಮರಳಲು, ನಮ್ಮ ಏರಿಯಾಗೆ ಬರಲು ಯಾವೊಬ್ಬ ರಿಕ್ಷಾದವನೂ ಒಪ್ಪಲಿಲ್ಲ. ಬೇರೆ ವಿಧಿಯಿಲ್ಲದೇ ಬಸ್ಸ್ ಗೆ ಕಾದು, ಅಂತು ಇಂತು ಬಸ್ಸು ಬಂದು, ಅದರಲ್ಲಿ ಕುಳಿತು ಕೊಳ್ಳಲು ಜಾಗ ಸಿಕ್ಕಾಗ ನೆಮ್ಮದಿ. ಯಾಕೆಂದ್ರೆ ಪುಸ್ತಕ ಖರಿದಿ ಜೋರಾಗಿ, ಬ್ಯಾಗ್ ತುಂಬಾ ವಜ್ಜೆ heavy ಆಗಿತ್ತು. ಕಿಟಕಿ ಬಾಗಿಲು ತೆಗೆದು, ನನ್ನ ದೊಡ್ಡಮಗಳಿಗೆ ಆ ಜಾಗ ಬಿಟ್ಟು ಕೊಟ್ಟು ನಾನು ಪಕ್ಕದಲ್ಲಿ ಕುಳಿತುಕೊಂಡೆ.

ಬಸ್ಸ್ ಹತ್ತುವಾಗಲೇ ಖಾಲಿ ಇರುವ ಸೀಟ್ ನ ಹಿಂಬದಿ ಒಂದು ಪುಟ್ಟ ಪಾಪು ನ ನೋಡಿದ್ದೆ. ಸರಿ , ಕುಳಿತು ಎರಡು ನಿಮಿಷದ ಮೇಲೆ ತಲೆ ಮೇಲೆ ಪುಟ್ಟ ಕೈ ಯಿಂದ ತಬಲಾ ಬಾರಿಸಿದ ಹಾಗೆ ಅನ್ನಿಸ್ತು. ನಾನು ತಿರುಗಿ ನೋಡಲಿಲ್ಲ. ಹಾಗೇ ಮೂರು ನಾಲ್ಕು ಬಾರಿ ಆಯ್ತು. ಬಹುಶ: ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಿದು ಮಗುವಿಗೆ ಆಶ್ಚರ್ಯ ವಾಗಿರಬಹುದು. ನಿಧಾನವಾಗಿ ಪುಟ್ಟ ಕೈ ನಿಂದ ಸರಳು ಹಿಡಿದುಕೊಂಡು ಮುಖ ನನ್ನ ಬಳಿಗೆ ತಂದಿತು. ನಾನು ಮಗುವನ್ನು ನೋಡಿ, ತಟ್ಟಂತ ನಾಲಿಗೆ ಹೊರಚಾಚಿದಾಗ, ಮೊದಲಿಗೆ ಬೆಚ್ಚಿ ಆಮೇಲೆ ತಕ್ಷಣ ಅದು ಗಟ್ಟಿ ನಗಲು ಶುರು ಮಾಡಿತು. ಹಲ್ಲಿಲ್ಲದ ಬೊಚ್ಚು ಬಾಯಿಯ, ಜೊಲ್ಲು ಸುರಿಸುತ್ತಾ ನಕ್ಕಿದ್ದು ತುಂಬಾ ಖುಶಿ ಕೊಟ್ಟಿತು. ಮಗುವಿನ ಅಪ್ಪ ಅಮ್ಮ ಜಂಬದಿಂದ ಮಗುವಿನ ಬಾ ಲೀಲೆ ಹೇಳಲು ಮುಂದಾದರು. ಮಗುವಿನ ಹೆಸರು ಶ್ರೀ ರಾಮ ಚಂದ್ರ. ೧೧ ತಿಂಗಳು ವಯಸ್ಸು, ನೋಡಲಿಕ್ಕೆ ದುಂಡಗಿತ್ತು, ಮುದ್ದಾಗಿತ್ತು. ಸುಮಾರು ಹೊತ್ತು ಆಡ್ತಾ , ಒಂದು ಅರ್ಧಾ ಲೀಟರ್ ಜೊಲ್ಲು ಸುರಿದಿರಬೇಕು. ಆವಾಗಾವಾಗ ನನ್ನ ವೈಲ್ ನಿಂದ ಅದರ ಬಾಯಿ ಒರೆಸುತ್ತಾ ಇದ್ದೆ. ಯಾವುದೋ ಒಂದು ದೇವರನಾಮ (ಪವಮಾನ) ‘ಆಆಆಆsssssss ಅದರ ಬಾಲ ಭಾಷೆಯಿಂದ’ ಮಗುವಿನ ತಂದೆತಾಯಿ ಹಾಡಿಸಿದ್ರು. ಮತ್ತು ಅವರು ಇಳಿಯುವ ಸ್ಟಾಪ್ ಬಂತು. ಮಗುವಿಗೆ ದುಂಡಗಿನ ಕಪ್ಪು ಬಟ್ಟು ಇಟ್ಟಿದ್ರೂ ನಾನು ದೃಷ್ಟಿಯಾಗದಂತೆ ನನ್ನ ಬೆರಳಿನಿಂದ ನೆಟಿಕೆ ಮುರಿದು, ಮಗುವನ್ನು ಅದರ ಪೋಷಕರ ಬಳಿಗೆ ಕಳಿಸಿದೆ.

ಎಷ್ಟು ಎಂಜಾಯ್ ಮಾಡಿದೆ ಆ ದಿನ.

October 12, 2009

ರಾಗಿ-ಗೋದಿ ಹಿಟ್ಟಿನ ದೋಸೆ


ರಾಗಿ-ಗೋದಿ ದೋಸೆ

ಬೇಕಾಗುವ ಪದಾರ್ಥ

1 ಕಪ್ ರಾಗಿ ಹಿಟ್ಟು

1 ಕಪ್ ಗೋದಿ ಹಿಟ್ಟು

ಸಣ್ಣಗೆ ಕತ್ತರಿಸಿದ ಹಸಿ ಮೆಣಸು, ನೀರುಳ್ಳಿ, ಕೊತ್ತಂಬರಿ ಸೊಪ್ಪು, ತಾಜಾ ತುರಿದ ಕಾಯಿ, ತುರಿದ ಕ್ಯಾರೆಟ್, ಉಪ್ಪು, ಚಿಟಿಕೆ ಸಕ್ಕರೆ, 1 ಕಪ್ ಮೊಸರು


ಮಾಡುವ ವಿಧಾನ:
ಹಿಂದಿನ ದಿನ ರಾತ್ರಿ ರಾಗಿ ಹಿಟ್ಟು ,ಗೋದಿ ಹಿಟ್ಟನ್ನು ನೀರು ಹಾಕಿ ಗಂಟಾಗದಂತೆ ಪಾತ್ರೆಯಲ್ಲಿ ಮಿಕ್ಸ್ ಮಾಡಿ ತೆಳ್ಳಗೆ ಮಾಡಿಡಿ. ಮರು ದಿನ ಮೇಲೆ ನಿಂತ ನೀರನ್ನು ನಿಧಾನವಾಗಿ ತೆಗೆದು ಚೆಲ್ಲಿ ಬಿಡಿ.ತಳದಲ್ಲಿರುವ ಹಿಟ್ಟಿಗೆ ಉಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ, ಬೇಕಾದಲ್ಲಿ (ದೋಸೆ ಹದಕ್ಕೆ ತರಲು )ನೀರು ಹಾಕಿ, (dosa consistency).ಬಿಸಿ ಕಾವಲಿ ಮೇಲೆ ಹುಯ್ದು, ಎರಡು ಕಡೆ ಕೆಂಪಾಗುವಂತೆ ಬೇಯಿಸಿ.
ತುಪ್ಪ ಚಟ್ನಿ ಯೊಂದಿಗೆ- ಬಿಸಿ ಇದ್ದಾಗಲೇ ತಿನ್ನಿ ಸೂಪರ್!!!
tasty and healthy.

October 11, 2009

ಸಂಚಿಯಿಂದ ಇನ್ನೊಂದು ನೆನಪು


ಆಗ ನಾನು ಎರಡನೇಯ ತರಗತಿಯಲ್ಲಿದ್ದೆ. ಆ ದಿನಾ ನನ್ನ ಹುಟ್ಟಿದ ಹಬ್ಬ. ಕೆಂಪು- ಕೆನೆ ಬಣ್ಣದ ಕಸೂತಿ ಮಾಡಿದ ಪಾಕೀಜಾ (pakeezah) ಡ್ರೆಸ್ಸ್ ಹಾಕ್ಕೊಂಡಿದ್ದೆ. ಪಾಕೀಜಾ ಮೀನಾ ಕುಮಾರಿಯ ಕೊನೆಯ, ಹಿಟ್ ಚಿತ್ರ. ಅದರಲ್ಲಿ ಅವರು ಧರಿಸಿದ ಲಖನೌವಿ ಘಾಗ್ರ, ಚೋಲಿನೂ ಹಿಟ್ ಆಗಿತ್ತು.ನನ್ನ ಅಮ್ಮನೇ ನನಗೆ ಮುದ್ದಾದ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಶಾಲೆಯಲ್ಲಿ ಚಾಕಲೇಟು ಹಂಚಿಯಾದ ಮೇಲೆ, ಇನ್ನೇನು ಪಠ್ಯ ಪುಸ್ತಕ ತೆರೆಯುತ್ತಿದ್ದಂತೆ, ಏನೋ ಗಲಾಟೆ ಶುರು ಆಗಿದೆಯಂತ ನಮ್ಮನ್ನು ಶಾಲೆಯಿಂದ ಬೇಗ ಬೇಗ ಮನೆಗೆ ಹೋಗಲು ಒತ್ತಾಯಿಸಲಾಯಿತು. ಮನೆ ಶಾಲೆಯ ಬಳಿಯಲ್ಲೇನೋ ಇತ್ತು ನಿಜ. ಆದರೆ ಬೆಳಿಗ್ಗೆ ಕಾರಿನಲ್ಲಿ ಡ್ರೈವರ್ ಜತೆ ಬಂದು, ಸಾಯಂಕಾಲ ನನ್ನ ಆಜೋಬಾ (ಅಜ್ಜ - ಮರಾಠಿ ಸಂಬೋಧನೆ) ಮನೆಗೆ ಕರೆದು ಕೊಂಡು ಹೋಗುವುದು ರೂಢಿ, ಯಾಕೆಂದರೆ ನಡೆದುಕೊಂಡು ಹೋಗುವ ದಾರಿಯಲ್ಲಿ ನಾವು ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಿತ್ತು.

ಸರಿ ಆ ದಿನ ನನ್ನಷ್ಟಕ್ಕೆ ನಾನೇ ಹೊರಟೆ. ನಾನು ಹಳಿ ಇನ್ನೇನು ದಾಟ ಬೇಕು ಎನ್ನುವಷ್ಟರಲ್ಲಿ ರೈಲು ಸಿಗ್ನಲ್ ಕೈ ಕೆಳಗಿಳಿಯಿತು. ನಾವು ಹಳಿದಾಟಬೇಕಾದ ಕಡೆಯಲ್ಲಿ ಆ ಸಿಗ್ನಲ್ ತಂತಿ ಇತ್ತು. ರೈಲು ಬರ್ತಾ ಇದೆ ಅನ್ನುವುದಕ್ಕೆ ಸೂಚನೆ. ನನ್ನ ಉದ್ದನೆಯ ಪಾಕೀಜಾ ಡ್ರೆಸ್, ತಂತಿಯಲ್ಲಿ ಹೇಗೋ ಸಿಕ್ಕಿಕೊಂಡಿತು. ನನ್ನ ಪುಟ ಕೈ ಗಳಿಂದ ಎಳೆದದ್ದೆ ಆಯ್ತು. ಕೊನೆಗೂ ಸುಸ್ತಾಗಿ ಸುಮ್ಮನಿದ್ದು ಬಿಟ್ಟೆ. ಸಾವು ಏನು ಅಂತ ಗೊತ್ತಿರಲಿಲ್ಲ ಆದರೂ ಎನೋ ಒಂದು ತೆರನಾದ, ಕೆಟ್ಟದ್ದು ಘಟಿಸಲಿದೆ ಎಂಬುದು ಮನವರಿಕೆ ಯಾಗಿ ರೈಲಿನ ದಡಬಡ ಸದ್ದಿಗಿಂತ ನನ್ನ ಎದೆ ಬಡಿತದ ಸದ್ದು ಜಾಸ್ತಿಯಾಗಿತ್ತು.
ರೈಲು ಇನ್ನೇನೂ ಹತ್ತಿರವಾಗಲಿದ್ದಾಗ, ಬಿಳಿ ಜುಬ್ಬಾ-ಪೈಜಾಮ, ಗಾಂಧಿ ಟೋಪಿ ಹಾಕಿ ಕೊಂಡಿದ್ದ ಸುಮಾರು ನನ್ನ ಅಜ್ಜನ ವಯಸ್ಸಿನವರು, ನನ್ನ ಲಂಗವನ್ನು ತಂತಿಯಿಂದ ಬಿಡಿಸಿ ಬೇಗ ಬೇಗನೆ ನನ್ನ ಕೈಗಳನ್ನು ಹಿಡಿದು ರೈಲಿನ ಹಳಿಯಿಂದ ದೂರ ಕರೆದುಕೊಂಡು ಹೋಗಿ ನಿಲ್ಲಿಸಿದರು. ರೈಲು ಹೋಗಿಯಾದ ಮೇಲೆ ನನ್ನನ್ನು ಹಳಿ ದಾಟಿಸಿ ’ಪೋರ್ ಆತಾ ಘರಿ ಜಾಶಿಲ್ ಕಾಯ” (ಮಗು ಈಗ ಮನೆಗೆ ಹೋಗ್ತಿಯಾ) ಅಂತ ಪ್ರಿತಿಯಿಂದ ತಲೆ ನೇವರಿಸಿ ಕೇಳಿದರು. ನಾನಂತು ಧನ್ಯವಾದ ಕೂಡ ಹೇಳದೆ ಬೇಗ ಬೇಗ ಮನೆಗೆ ನಡೆದು ಬಿಟ್ಟೆ.

ಈ ಘಟನೆ ನಡೆದು ಎಷ್ಟೊಂದು ವರ್ಷಗಳಾಗಿವೆ. ಆದರೂ ಅವರ ಚಹರೇ ಈಗಲೂ ಸ್ಪಷ್ಟವಾಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಯಾವುದೇ ಕಾರಣಕ್ಕೆ ಖುಷಿಯಾದಾಗ ನಾನು ನೆನೆಸುವುದು ಅವರನ್ನು. ಆ ದಿನ ಅವರು ಹಾಗೆ ಬರದೆ ಹೋಗಿದ್ದಿದ್ದರೆ would not have lived to tell this tale

:-)

October 5, 2009

Art for Hearts sake



























We use such illustrations in our training manuals/brochures/fliers targeting the rural folk
:-)


October 2, 2009

ಬಣ್ಣ ಬಣ್ಣದ ದಸರಾ ಮೆರವಣಿಗೆ

ನಾಳೆ ನಾವು ಮೈಸೂರಿಗೆ ಹೋಗ್ತಾ ಇದ್ದೇವೆ’ ಅಂದರು ಶ್ರೀಕಾಂತ್. ಹೇಳಿದ್ದು ಹೇಗಿತ್ತೆಂದರೆ ಇದರ ಬಗ್ಗೆ ದೂಸರಾ ಮಾತಿಲ್ಲ ಅನ್ನುವಂತಹ ಧಾಟಿ.


ಇದಕ್ಕೆ ಕಾರಣ ಇದೆ. ನಾವು ಬೆಂಗಳೂರಿಗೆ ಬಂದು ಆಗಲೇ ಒಂಬತ್ತು ವರ್ಷವಾಗಿದೆ. ಪ್ರತೀ ಸಲ ಶ್ರೀಕಾಂತ್ ದಸರೆಗೆ ಮೈಸೂರಿಗೆ ಹೋಗುವ ಅಂದರೆ ನಾನೇನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ನನಗೆ ಜನ ಜಂಗುಳಿಯಂದ್ರೆ ಆಗದು.


ಶ್ರೀಕಾಂತ್ ಮಿತ್ರರು ಮೈಸೂರನಲ್ಲಿ ನಾವು ವಿಜಯದಶಮಿಯ ದಿನ ಕಳೆಯಲು ಎಲ್ಲ ಏರ್ಪಾಡು ಮಾಡಿದ್ದರು. ನಾವು ಬೆಳಿಗ್ಗೆ 7.00 ಗಂಟೆಗೆ ಬೆಂಗಳೂರು ಬಿಡಿವುದೆಂದಾಯಿತು. ಮಗಳ ಫರ್ಮಾಯಿಶ್ ನಂತೆ ವಾಂಗೀ ಭಾತ್, ಮೊಸರನ್ನ ಬುತ್ತಿ ಕಟ್ಟಿಕೊಂಡು ಹೊರಟೆವು.


ನಾವು ಬಾಡಿಗೆಗೆ ಪಡೆದುಕೊಂಡ ಟ್ಯಾಕ್ಸಿ ಚಾಲಕ ತೀರ್ಥಹಳ್ಳಿಯವನು. ಶ್ರೀಕಾಂತ್ ಗಂತೂ ಇದು ಖುಶಿಯ ವಿಷಯ. ಊರಿನ ವಿಷಯ ಹರಟುತ್ತ ಸಾಗಿತು ನಮ್ಮ ಪ್ರವಾಸ.

ಮೊದಲು ಶ್ರೀರಂಗಪಟ್ಟಣಕ್ಕೆ ನಮ್ಮ ಪ್ರಯಾಣ.ದೇವಾಲಯದ ಹೊರಗಿನ ಗೋಪುರ ತುಂಬಾ ಆಕರ್ಷಕವಾಗಿದೆ. ಒಳಗೆ ಹೋಗುವ ಮುನ್ನ ’ಪ್ಲಾಸ್ಟಿಕ್ ಹಾಗೂ ಮೊಬೈಲ್ ನಿಷೇಧಿಸಿದೆ’ ಬೋರ್ಡ ನೋಡಿ ತುಂಬ ಖುಶಿಯಾಯಿತು. ದೇವಾಲಯದ ಒಳಗಡೆ ಫೋಟೊ ತೆಗೆಯುವುದು ನೀಷೇಧಿಸಿತ್ತು.ದ್ರಾವಿಡ/ವಿಜಯನಗರ- ಹೊಯ್ಸಳ ಶೈಲಿಯಲ್ಲಿ ಕಟ್ಟಿದ ದೇವಾಲಯ, ಸೂಕ್ಷ್ಮವಾದ ಕೆತ್ತನೆಯಿಂದ ತುಂಬಾ ಚಂದ ವಾಗಿದೆ. ನವರಂಗದಲ್ಲಿನ ಕಂಬಗಳು ನನಗೆ ತುಂಬ ಇಷ್ಟವಾಯಿತು. ಇಡೀ ದೇವಾಲಯ ಇಂತಹ ಕಂಬಗಳ ಮೇಲೆ ನಿಂತಿವೆ. ಪ್ರತಿ ಕಂಬದ ಕೆತ್ತನೆ ಕೆಲಸ ವೈವಿಧ್ಯಮಯವಾಗಿದೆ.-


ಏಳು ತಲೆಯ ಆದಿಶೇಷನ ಮೇಲೆ ಪವಡಿಸಿರುವ ಶ್ರೀ ರಂಗನಾಥಸ್ವಾಮಿಯ ಮೂರ್ತಿ ತುಂಬ ಆಕರ್ಷಕವಾಗಿದೆ. ಸಾಧಾರಣವಾಗಿ ಗರ್ಬಗುಡಿಯಲ್ಲಿ ವಿದ್ಯುದ್ದೀಪ ಇರುವುದಿಲ್ಲ. ಇಲ್ಲಿ ಲೈಟ್ ಹಾಕಿದ್ದರಿಂದ ಒಳಗಣ ದೇವರ ಮೂರ್ತಿ ಸ್ಪುಟವಾಗಿ ಕಾಣುತಿತ್ತು. ರಂಗನಾಥಸ್ವಾಮಿ ಪಾದದ ಬಳಿ ಲಕ್ಷ್ಮಿ ವಿಗ್ರಹವಿದೆ.


ಅಲ್ಲಿಂದ ನಾವು ಟಿಪ್ಪು ಸುಲ್ತಾನ್ ಕಟ್ಟಿಸಿದ ಕಾರಾಗ್ರಹವನ್ನು ನೋಡಿದೆವು. ಮತ್ತು ನಂತರದ ಭೇಟಿ ನಿಮಿಷಾಂಬ ದೇವಾಲಯಕ್ಕೆ. ಆದರೆ ಅಲ್ಲಿ ತುಂಬ ಗದ್ದಲ ಇದ್ದ ಕಾರಣ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೆ ಒಂದು ಮಾರು ದೂರದಲ್ಲಿದ್ದ ಕೆರೆಯ ಬಳಿಗೆ ತೆರಳಿ ನಾವು ಕಟ್ಟಿ ತಂದಿರುವ ಬುತ್ತಿಯನ್ನು ತಿಂದೆವು. ಅಲ್ಲಿಂದ ದರಿಯಾ ದೌಲತ್ ಗೆ. ಅಲ್ಲೂ ಒಳ ಹೋಗುವ ಕ್ಯೂ ತುಂಬ ದೊಡ್ಡದಾಗಿತ್ತು.


ಸೊ ಅದನ್ನೂ ಬಿಟ್ಟು ಅಲ್ಲಿಂದ ನಾವು ಸಂಗಮ್ ಗೆ ತೆರಳಿದೆವು. ಅಲ್ಲಿ ಕೆಲವು ಬಂಗಾಲಿಗಳು ಸೇರಿ ದುರ್ಗೆಯ ವಿಸರ್ಜನೆಗೆ ತಯಾರಿ ನಡಿಸಿದ್ದರು. ತರುಣ ತರುಣಿಯರು ಹಣೆಯ ಮೇಲೆ ಗುಲಾಲನ್ನು ಢಾಳಾಗಿ ಲೇಪಿಸಿ ದೇವಿಯ ಸುತ್ತ ಧೋಲಕದ ತಾಳಕ್ಕೆಮನಮೋಹಕವಾಗಿ, ನರ್ತಿಸಿದರು. ಹೂವಿನಿಂದ ಅಲಂಕೃತ ದುರ್ಗೆಯ ಮೂರ್ತಿ ಕೂಡ ಸುಂದರವಾಗಿತ್ತು.









ಎರಡು ಗಂಟೆಗೆ ನಾವು ಬನ್ನಿ ಮಂಟಪ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ ಹತ್ತಿರ ಬಂದೆವು. ಮೈಸೂರಿನ ಮಿತ್ರರು ನಮಗಾಗಿ ಕಾದಿದ್ದರು. ನಾನು ಮಗಳು ಮೆಟ್ಟಿಲ ಮೇಲೆ ಪವಡಿಸಿದೆವು. ಶ್ರೀಕಾಂತ್ ಗೆ ರಾಜಯೋಗ, ಕುರ್ಚಿ ಸಿಕ್ಕಿತು.

ಮೆರವಣಿಗೆ ಇನ್ನೂ ಶುರುವಾಗದೆ ಇದ್ದುದರಿಂದ ಶ್ರೀಕಾಂತ್ ತೀರ್ಥಹಳ್ಳಿಯಲ್ಲಿ ಅವರ ಚಿಕ್ಕಂದಿನ ದಸರಾ ಕಾರ್ಯಕ್ರಮದ ಬಗ್ಗೆ ವಿವಿರಿಸಿದರು. ಅವರ ಅಕ್ಕಂದಿರು- ತಂಗಿಯಂದಿರು ಸೇರಿ ಗೊಂಬೆ ಹಬ್ಬ ಆಚರಿಸುತ್ತಿದ್ದರಂತೆ. ಸಾಯಂಕಾಲ ಗಂಡು ಮಕ್ಕಳನ್ನು ’ನೀವು ಹೊರಗೆ ಹೋಗಿ ಅಡ್ಡಾಡಿಕೊಂಡು ಬನ್ನಿ ಅಂದರೆ ಇವರು ಮಹಡಿ ಮೇಲೆ ಅಡಗಿ ಕೂರುತ್ತಿದ್ದರಂತೆ. ಹೆಂಗೆಳೆಯರು ಧಾವಣಿ/ಸೀರೆ ಉಟ್ಟಿಕೊಂಡು, ದಸರಾ ಗೊಂಬೆಗಳ ಎದುರು ಕೋಲಾಟ/ ಹಾಡು ಮುಂತಾದವುಗಳನ್ನು ನಡೆಸಿ ಚರಪು ತಿಂದು ಹೋಗುತ್ತಿದರಂತೆ. ಸುಂದರಿಯರಾದ ಹೆಣ್ಣು ಮಕ್ಕಳ ಮೇಲೆ ಈ ಗಂಡು ಮಕ್ಕಳ ಕಣ್ಣು ಇರುತ್ತಿತ್ತಂತೆ. ರಾತ್ರಿ ಆ ಹುಡುಗಿಯರ ನೃತ್ಯದ mimicry ಮಾಡಿ ಏಟು ತಿಂದಿದ್ದೂ ಹೇಳಿದರು.

ಬನ್ನಿ ವೃಕ್ಷದ ಬಗ್ಗೆ : ತೀರ್ಥಹಳ್ಳಿಯ ಕುಶಾವತಿಯಲ್ಲಿ ಒಂದು ಶಮೀ (ಬನ್ನಿ) ವೃಕ್ಷ ಇದೆ. ವಿಜಯದಶಮಿಯಂದು ಊರಿನ ಎಲ್ಲರೂ ಶಮಿ ಎಲೆಗಳನ್ನು ಅಲ್ಲಿಂದ ತಂದು ಒಬ್ಬ್ಬರಿಗೊಬ್ಬರು ಅದನ್ನು ವಿನಿಮಯ ಮಾಡುತ್ತ, ಕಿರಿಯರು ’ಪ್ರೀತಿ -ವಿಶ್ವಾಸ- ಅಭಿಮಾನಗಳು ಯಾವಾಗಲೂ ಇರುವಂತೆ ಕೇಳಿಕೊಳ್ಳುತ್ತ ಹಿರಿಯರ ಕಾಲಿಗೆ ಒರಗಿ ಆಶೀರ್ವಾದವನ್ನು ಬೇಡುವ ಕ್ರಮ ಈಗಲೂ ಇದೆ.
ಬ್ಯಾಂಕಿನ ಮೆಟ್ಟಿಲ ಮೇಲೆ ನನ್ನ ಪಕ್ಕದಲ್ಲಿ ಕೂತ ಮಹಿಳೆಯ ಹೆಸರು ಅಲಮೇಲಮ್ಮ. ಅವರು ಮೈಸೂರಿನವರಂತೆ.ಅವರಿಗೆ 65 ವರ್ಷ ವಯಸ್ಸಂತೆ. ಒಂದೂ ದಸರಾ ಮೆರವಣಿಗೆಯನ್ನು ಬಿಡದೆ ನೋಡಿದಂತವರು. ಕೆನ್ನೆಗೆ ಅರಿಶಿನ, ಹಾಗೂ ಹಣೆಯಲ್ಲಿನ ದೊಡ್ಡ ಕುಂಕುಮದ ಬೊಟ್ಟಿನಿಂದ ತುಂಬ ಲಕ್ಷಣವಾಗಿತ್ತು ಅವರ ಮುಖ. ಅವರು ನೋಡಿದ ಹಳೆಯ ದಸರಾ ವೈಭವಗಳನ್ನೆಲ್ಲ ತುಂಬ ರಸವತ್ತಾಗಿ ವರ್ಣಿಸಿದರು. ಹಾಗೂ ರಾಜರ ಕಾಲದಲ್ಲಿ ದಸರಾ ರೇಷನ್ ಅಂತನೂ ಕೊಡುತ್ತಿದ್ದರಂತೆ. ದಸರೆಗೆ ಬಂದ ಬಂಧು, ಮಿತ್ರ ರ ಸತ್ಕಾರದಲ್ಲಿ ಲೋಪವಾಗದಿರುವುದು ಹಾಗೂ ಅತೀಥೇಯರಿಗೂ ಇದರಿಂದ ಅನುಕೂಲವಾಗಲೀ ಎನ್ನುವ ಉದ್ದೇಶ.

ಅಷ್ಟರಲ್ಲಿ ನನ್ನ ಎದುರಿಗೆ ಕೂತಿದ್ದ ಪುಟ್ಟ ಬಾಲಕಿ ’aunty, iam seeing you and seeing you from that time. I think i seen you many times. do you sing in Wilsons orchestra?' ಅಂತ ಕೇಳಿದಳು. ಅದಕ್ಕೆ ನಾನು ಅವಳ ಗಲ್ಲ ನೇವರಿಸುತ್ತ ’no baby, i cannot sing to save the the life of me' ಅಂದಾಗ ಮುದ್ದಾಗಿ ಮುಗುಳ್ನಕ್ಕಳು.

ಎರಡು ಕಾಲು ಗಂಟೆಯ ಸುಮಾರಿಗೆ ಮೆರವಣಿಗೆ ಶುರುವಾಯಿತು. ಮೊದಲು ಆನೆ ಅಶ್ವಗಳು followed by ಒಂದೊಂದೆ ಸ್ಥಿರ ಚಿತ್ರಗಳು. ನಡು ನಡುವೆ ನಮ್ಮ ರಾಜ್ಯದ ವೈವಿದ್ಯಮಯ ಪರಂಪರೆಯನ್ನು ಸಂಕೇತಿಸುವ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ಕೊಟ್ಟವು. ಆಟ, ನೃತ್ಯ, ಕೋಲಾಟ, ಕವಾಯತು, ರೊಲರ್ ಸ್ಕೇಟ್ ಶೋ ಮುಂತಾದವುಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದವು. ನಮ್ಮ ಅಕ್ಕ ಪಕ್ಕ ಸೇರಿದ ಜನರೆಲ್ಲ ಮರೆವಣಿಗೆಯಲ್ಲಿ ಪಾಲ್ಗೊಂಡವರನ್ನು ಚಪ್ಪಾಳೆ/ಉತ್ಸಾಹದ / ಹೋ ಎನ್ನುವ ಕೂಗುಗಳಿಂದ ಪ್ರೋತ್ಸಾಹಿಸುತಿತ್ತು.


ಕಡೆಗೆ ರಾಜಠೀವಿಯಲ್ಲಿ ಹೆಜ್ಜೆ ಹಾಕುತ್ತ ಬರುವ ಗಜರಾಜ ಬಲರಾಮ ಕಾಣಿಸಿದನು. 750 ಕೆ.ಜಿ ತೂಕದ ಚಾಮುಂಡಿ ವಿಗ್ರಹವನ್ನು ಅಂಬಾರಿಯಲ್ಲಿ ಹೊತ್ತ ಬಲರಾಮ ಹಾಗೂ ಅಕ್ಕ ಪಕ್ಕದಲ್ಲಿ ಬರುವ ಅಲಂಕೃತ ಹೆಣ್ಣಾನೆಗಳನ್ನು ನೋಡಲು ಎರಡು ಕಣ್ಣು ಸಾಲದಾಯಿತು. ನೆರೆದಿದ್ದ ಜನ ಸಮೂಹ ನಿಂತಲ್ಲಿ/ಕೂತಲ್ಲಿ ದೇವಿಗೆ ನಮಸ್ಕಾರ ಮಾಡುತ್ತಿದ್ದರು.

ಕ್ಯಾಮರ ನನ್ನ ಬಳಿ ಇತ್ತು. ಝೂಮ್ ನಲ್ಲಿ ಫೋಟೊ ತೇಗಿ ಬೇಕಾದ್ರೆ ಒಂದು ಕ್ಷಣ ನನ್ನ ಕಣ್ಣು, ಬಲರಾಮನ ಕಣ್ಣೊಂದಿಗೆ ಕೂಡಿತ್ತು. ಒಂದು ಕ್ಷಣ ಎಲ್ಲ ಸ್ಥಬ್ದವಾದಂತೆ, ಅಲ್ಲಿರುವುದು ನಾನು ಮತ್ತು ಬಲರಾಮ ಮಾತ್ರ ಅನ್ನಿಸಿ, ಅದರ ಕಣ್ಣಿನಲ್ಲಿರುವ ನೋವು ನನಗೆ ರವಾನಿಸಿದಂತಾಗಿ, ಸುಮ್ಮನೆ ಅದನ್ನೆ ನೋಡ್ತಾ ಕೂತೆ. ದೇವಿಯನ್ನು ಹೊತ್ತ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿ ಬಲರಾಮನಿಗೆ ತುಂಬಾ ತೊಂದರೆಯಾಗಿದೆ ಅನ್ನಿಸಿತು. ತನ್ಮಯಳಾಗಿ ಹಾಗೇ ನೋಡ್ತಾ ಫೋಟೊ ತೆಗೆಯುವುದನ್ನು ಮರೆತುಹೋದೆ. ನನ್ನ ಮಗಳಿಗೂ ಹೀಗೆ ಅನುಭವ ಆಗಿ ತುಂಬ ಬೇಸರವಾಯಿತಂತೆ.
ಕಾರ್ ನಲ್ಲಿ ಹೋಗ್ತಾ ಬರ್ತಾ Lays potato wafers ನ ಎಲ್ಲ flavor ನ 20 ಪ್ಯಾಕೆಟ್ ಗಳನ್ನು ದ್ವಂಸ ಮಾಡಿದ್ದೆ. ಅದಕ್ಕೆ ಶ್ರೀಕಾಂತ್ ಮುಂದಿನ ವರ್ಷ ಬಲರಾಮನ ಬದಲಿಗೆ ನನ್ನನ್ನು ಕಳಿಸುತ್ತಾರಂತೆ. though i dont think it will be as spectacular :-)

ಇನ್ನೊಂದು ಬೇಜಾರಿನ ವಿಷಯವೆಂದರೆ ಜನರು ಅವರು ತಿಂದ,ಕುಳಿತುಕೊಳ್ಳಲು ತಂದ ಪ್ಲಾಸ್ಟಿಕ್ ಚೀಲ ಹಾಗೂ ವೃತ್ತಪತ್ರಿಕೆಗಳನ್ನು ಅಲ್ಲಲ್ಲೇ ಬಿಸುಟು ಹೋಗಿದ್ದು. ಜೋರಾಗಿ ಬೀಸಿದ ಗಾಳಿಗೆ ಅವೆಲ್ಲ ಎರ್ರಾ ಬಿರ್ರಿ ಯಾಗಿ ಹಾರಾಡ್ತಾ ಇದ್ದವು. ನಡೆದುಕೊಂಡು ಹೊರಟ ಜನರ ಮುಖಕ್ಕೆ ಬಡಿಯುತ್ತಿತ್ತು. ಹೋಟಲ್ ದಾಸ್ ಪ್ರಕಾಶ ದಲ್ಲಿ ಬಿಸಿ ಬಿಸಿ ಮಸಾಲೆ ದೋಸೆ, ಟೀ ಕುಡಿದು, ಕೃಷ್ಣರಾಜಸಾಗರ್ ಡ್ಯಾಮ್ ಗೆ ಭೇಟಿ ಕೊಟ್ಟು, ಪಂಜಿನ ಕವಾಯತನ್ನು ಮಿಸ್ ಮಾಡಿ ರಾತ್ರಿ 10.30 ಗೆ ಬೆಂಗಳೂರು ತಲುಪಿದೆವು.

at last ನಾವೂ ದಸರಾ ಮೆರವಣಿಗೆ ನೋಡಿದಂತಾಯಿತು.


ಚಿತ್ರಗಳನ್ನು ನಾನೇ ತೆಗೆದದ್ದು. ನಾಜೂಕಿನ ಕೆಲಸಗಳು ನನ್ನ ಕೈಲಾಗುವುದಿಲ್ಲವೆನ್ನುವುದಕ್ಕೆ ಸಾಕ್ಷಿ. ಹಾ ಹಾ ಹಾ

September 27, 2009

ಬಿನಾಕಾ ಗೀತ್ ಮಾಲಾ

ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ.
ಇನ್ನೊಂದು ನೆನಪು ’ಬಿನಾಕಾ ಗೀತ್ ಮಾಲಾ’ ದ ಅಮೀನ್ ಸಿಯಾನಿ’ ಪ್ಯಾರೆ ಬೆಹೆನೋ ಔರ್ ಭಾಯಿಯೋ”ಅಥವ’ಆವಾಜ್ ಕೆ ದುನಿಯಾ ಕೆ ದೋಸ್ತೋಂ, ಆಪಕೋ ಅಮೀನ್ ಸಿಯಾನಿ ಕಾ ಪ್ಯಾರ್ ಭರಾ ನಮಶ್ಕಾರ” ಕೇಳಿದ ಕೋಡಲೆ ಮೈ ಮೇಲಿನ ರೋಮ ನಿಮಿರಿ ನಿಲ್ಲುತ್ತಿದ್ದವು. ಅಷ್ಟು ಮಾಂತ್ರಿಕ ಶಕ್ತಿಯಿತ್ತು ಅವರ ದನಿಗೆ.
ಬುಧವಾರ ರಾತ್ರಿ 8.00 ರಿಂದ 9.00 ಜನ ಜೀವನ ಎಲ್ಲ ತಟಸ್ಥ. ಮುಂಬೈನಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ. ರಿಕ್ಷಾ, taxi ನವರು ಸಹ ರೇಡಿಯೋ ಸೀಲೋನ್ ಗೆ ಟ್ಯೂನ್ ಮಾಡ್ತಿದ್ದರು. ಮಧ್ಯ ಬರುವ binaca top toothpaste ನ advertisement ಹಾಡನ್ನು ನಾವು ಅದರ ಜತೆಗೆ ಗುನುಗುನಿಸುತ್ತಿದ್ದೆವು.
ಒಂದು ಸಲ ಹುಬ್ಬಳ್ಳಿಗೆ ಹೋಗಿದ್ದೆವು, ಮದುವೆಯಲ್ಲಿ ಪಾಲ್ಗೊಳ್ಳಲು. ದೊಡ್ಡಮ್ಮನ ಮನೆಗೆ. ಮನೆ ಚಿಕ್ಕದ್ದು. ರಾತ್ರಿ ೭.೦೦ ರ ಸುಮಾರಿಗೆ ಕರೆಂಟ್ ಹೋಯ್ತು. ನಾವೆಲ್ಲ ಮಲಗಿದ್ದೆವು. ದೊಡ್ಡಮ್ಮನ ಕಿರಿ ಮಗ ಮಂಚದ ಕೆಳಗಡೆ ಮಲಗಿ, ರಾತ್ರಿ ಬಿನಾಕ ಗೀತ್ ಮಾಲಾ ಹಾಕಿ, ನಾವೆಲ್ಲರೂ ತನ್ಮಯರಾಗಿ ಕೆಳಿದ್ದ ನೆನಪು ಇನ್ನೂ ಹಸಿರಾಗಿದೆ. ಸೆಲ್ ನಿಂದ ನಡೆಯುವ ರೇಡಿಯೋ ಆದ್ದರಿಂದ ಕರೆಂಟ್ ಇಲ್ಲದಾಗಿಯೂ ಕೇಳಬಹುದಿತ್ತು.
ಅಮೇಲೆ ಅದು ’ಸಿಬಾಕಾ’ ಗೀತಮಾಲಾ ಆಗಿ ಪರಿವರ್ತನೆ ಗೊಂಡಾಗ ಏನೋ ಇರುಸುಮುರುಸು. ಆದರೂ ಅಮೀನ್ ಸಯಾನಿ ಯವರು ಸಿರ್ಫ್ ನಾಮ್ ಬದಲಾ ಹೈ ಅಂದಾಗ ಸಮಾಧಾನ. ಮೊಟ್ಟಮೊದಲು ಅರ್ಧ ಗಂಟೆ ಇದ್ದ ಬಿನಾಕಾ ಗೀತ್ ಮಾಲಾ ಅಭಿಮಾನಿ ಕೇಳುಗರ ಒತ್ತಾಯದ ಮೇರೆಗೆ ಒಂದು ಗಂಟೆ ನಡೆಸಲಾಯಿತು. ಕಾರ್ಯಕ್ರಮ ಕೇಳುಗರ ಪತ್ರ ಸೆಕ್ಷನ್ ನಲ್ಲಂತೂ ಕೇಳುಗರ ಪತ್ರದ ಮಹಾಪೂರ.ಸೈನಿಕರು ಬರೆದ ಪತ್ರಗಳನ್ನು ಓದಿದಾಗ ಕಲ್ಲು ಹೃದಯ ಕರಗಬೇಕು ಹಾಗಿರುತ್ತಿತ್ತು ಪತ್ರದ ಒಕ್ಕಣೆ. ಹೈ ಸ್ಕೂಲ್ ಗೆ ಬಂದಾಗ ನಾವು ಮರುದಿನ ಶಾಲೆಯಲ್ಲಿ ಯಾವ ಯಾವ ಹಾಡು ಬಂತು ಅಂತ ಅದರ ಬಗ್ಗೆ ಡಿಸ್ಕಸ್ ಮಾಡ್ತಿದ್ವಿ. that was the -in thing- ಆವಾಗ.
ಸಿಬಾಕ ಗೀತ ಮಾಲದಿಂದ ಅದು ಕೋಲ್ಗೆಟ್ - ಸಿಬಾಕಾ ಗೀತ ಮಾಲಾ ಆಗಿ ಪರಿವರ್ತನೆಗೊಂಡು ಅದನ್ನು ವಿವಿಧ ಭಾರತಿಯಲ್ಲಿ ಮುನ್ನಡೆಸಲಾಯಿತು.ಆಮೇಲಿನ ದಿನಗಳಲ್ಲಿ ಹವಾಮಹಲ್ ಬಿಟ್ಟರೆ ಈ ಪರಿಯ ಮನ್ನಣೆ ಸಿಕ್ಕಿದ ಯಾವುದೇ ಕಾರ್ಯಕ್ರಮದ ಬಗ್ಗೆ ಕೇಳಿಯೂ ಇಲ್ಲ.
ಸುಮಾರು 1983 ನಲ್ಲಿ ನಮ್ಮ ಮನೆಗೆ ಮೊದಲ ಟಿ.ವಿ.- ಕಪ್ಪು ಬಿಳುಪು -ಬಂತು. ರೇಡಿಯೋ ಕಡೆ ಗಮನ ಕಡಿಮೆಯಾಗಿ, ಕ್ರಮೇಣ ನಿಂತು ಹೋಗಿತ್ತು.ಇತ್ತೀಚಿಗೆ ಬೆಂಗಳೂರಿಗೆ ಬಂದ ಮೇಲೆ ರೇಡಿಯೋ f.M. ಶುರು ಆದ ಮೇಲೆ ಪುನಃ ಹಾಡು ಕೇಳುವ ಗೀಳು ಹತ್ತಿ ಬಿಟ್ಟಿದೆ.ಈಗ ನಮ್ಮ ಮನೆಯಲ್ಲಿ/ಕಛೇರಿಯಲ್ಲಿ ದಿನದ 24 ಗಂಟೆಯೂ world space ಚಾಲೂ ಇರುತ್ತದೆ.
ಅಮೀನ್ ಸಯಾನಿಯವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗಲಂತೂ ತುಂಬಾ ಖುಶಿ.
ಅಮೀನ್ ಸಯಾನಿ ನಂತರ ಒಳ್ಳೆ ದನಿ ಇದ್ದದ್ದು ಹರೀಶ್ ಭಿಮಾನಿ ಮತ್ತು ಅಮಿತಾಭ್ ಬಚ್ಚನ್, ಆದರೂ ಅಮೀನ್ ಸಯಾನಿ ದನಿ ಬಗ್ಗೆ undying loyalty ಈಗಲೂ
ಮೊನ್ನೆ ಸೊಪ್ಪು ಕ್ಲೀನ್ ಮಾಡ್ತ ಸಿಕ್ಕ ಹಳೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶರ್ ಭಟ್ ನವರು ಅಮೀನ್ ಸಯಾನಿಯವರ ಬಗ್ಗೆ ಬರೆದಿದ್ದನ್ನು ಓದಿ, ನನ್ನದಿಷ್ಟು ನೆನೆಪನ್ನು ಬ್ಲಾಗಿಸಿದೆ.
’ಅಮೀನ್ ಸಯಾನಿಜೀ ಆಪ್ಕೋ ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್’

September 13, 2009

ಪ್ರಾಣಿಗಳಲ್ಲೂ ದಯಾಮರಣದ ಕಲ್ಪನೆ?

ಇದು ನಿಜವಾಗಿ ನಡೆದ ಘಟನೆ. ನಾವಾಗ ವರ್ಗವಾಗಿ ಉಜಿರೆಯ ಶಿವಾಜಿನಗರದಲ್ಲಿದ್ದೆವು. ನಮ್ಮವರ ಬ್ಯಾಂಕ್ ನಲ್ಲಿದ್ದ ಕಲೀಗ್ ಗೆ ನವ ದೆಹಲಿ ಗೆ ವರ್ಗವಾಗಿ ಅವರ ಮನೆಯಲ್ಲಿ ನಾವು ಬಾಡಿಗೆಗಿದ್ದೆವು. ದೊಡ್ಡದಾದ ಹಳೇ ಮನೆ. ಮನೆಯ ಸುತ್ತ ಮುತ್ತ ಸಾಕಷ್ಟು ಜಾಗ ಇದ್ದು, ಹಲಸು, ಮಾವಿನ ಹಾಗೂ ನಾಲ್ಕೈದು ತೆಂಗಿನ ಮರಗಳಿದ್ದವು. ಮನೆಯ ಸುತ್ತ ದೊಡ್ಡ ಕಂಪೌಂಡ್ ಇದ್ದು, ಗಾಡಿ ಹೋಗಲು ದೊಡ್ಡದಾದ ಗೇಟ್ ಹಾಗೂ ಅದರ ಪಕ್ಕದಲ್ಲೇ ನಾವೆಲ್ಲ ಉಪಯೋಗಿಸುತ್ತಿದ್ದ ಚಿಕ್ಕ ಗೇಟ್. ಆ ಚಿಕ್ಕ ಗೇಟ್ ಮೂಲಕ ಒಂದು ಚಿಕ್ಕ ಕಪ್ಪು ಬಣ್ಣದ ನಾಯಿ ಮರಿ ಬರುತ್ತಿತ್ತು. ನಾನದಕ್ಕೆ ಬ್ಲ್ಯಾಕಿ ಅಂತ ಹೆಸರಿಟ್ಟಿದ್ದೆ. ಅಷ್ಟಾಗಿ ಕನ್ನಡ ಬರದಿದ್ದ ನನಗೆ ದನ-ಕರು, ನಾಯಿ, ಹಾವುಗಳೆ ಫ್ರೆಂಡ್ಸ್. :-) ಬ್ಲ್ಯಾಕಿಗೆ ನೀರು ದೋಸೆ ಅಂದರೆ ಇಷ್ಟ.
ಮನೆಯವರು ಬೈಕ್ ತೆಗೆದುಕೊಂಡು ಕಛೇರಿ ಗೆ ತೆರೆಳಿದ ಮೇಲೆ ಗೇಟ್ ಹಾಕಲು ಹೋದ ನನಗೆ ಬ್ಲ್ಯಾಕಿ ಬರುವುದು ಕಾಣಿಸಿತು. ಬೇಗ ಬಾ ಬ್ಲ್ಯಾಕಿ, ನಿನ್ನ ಇಷ್ಟದ ದೋಸೆ ಮಾಡಿದ್ದೇನೆ (ಕೊಂಕಣಿಯಲ್ಲಿ) ಅಂತ ಹೇಳಿದೆ. ಹೇಗೂ ದೊಡ್ಡ ಗೇಟ್‌ತೆರೆದೇ ಇದ್ದುದರಿಂದ ಅದರಿಂದ ಬ್ಲ್ಯಾಕಿ ಒಳಗೆ ಬರಲಿ ಅಂತ, ಅದು ತಲುಪುವವರೆಗೆ ಕಾಯ್ತಾ ಇದ್ದೆ. ಅಷ್ಟರೊಳಗೆ ರಭಸದಿಂದ ಬಂದ ಒಂದು ಎಸ್ಟೇಟ್ ಜೀಪ್ ಅದನ್ನು ಹಾಯ್ದು ಕೊಂಡು ಹೋಯ್ತು. ಬ್ಲ್ಯಾಕಿ ಅಂತ ಕಿರುಚಿ ಕಣ್ಣುಗಳನ್ನು ಎರಡು ಕೈ ನಿಂದ ಮುಚ್ಚಿಕೊಂಡೆ. ಬ್ಲ್ಯಾಕಿ ಊಳಿಡುವುದು ಕೇಳಿಸ್ತು. ನಿಧಾನವಾಗಿ ಕಣ್ಣು ತೆರೆದು ನೋಡಿದಾಗ, ಜೀಪ್ ಅದರ ಹಿಂಬಾಗ ಮೇಲೆ ಹರಿದು, ಆ ಭಾಗ ಕಾಲುಗಳ ಸಹಿತ ಪೂರ್ತಿ ಜಜ್ಜಿ ಹೋಗಿತ್ತು. ಮೂಕವಾಗಿ ನನ್ನೆಡೆಗೆ ನೋಡುತ್ತ ಅದು ರೋದಿಸುತ್ತಿತ್ತು. ನಾನು ಅದರ ಜತೆ ಅಳ್ತಾ ಇದ್ದೆ. ಎಲ್ಲಿದ್ದವೋ ನಾಲ್ಕೈದು ನಾಯಿಗಳು ಬಂದು ಅದರ ಸುತ್ತ ಮುತ್ತ ತಿರುಗಿ ಅದನ್ನು ಎಬ್ಬಿಸುವ ಪ್ರಯತ್ನ ಮಾಡಿದವು. ಅದು ಏಳದೆ ಇದ್ದುದರಿಂದ ಅದರ ಜತೆ ಒಂದೈದು ನಿಮಿಷ ಅವೂ ಊಳಿಟ್ಟವು. ಅಮೇಲೆ ಎರಡು ನಾಯಿ ಹಿಂಬಾಗ ಕಚ್ಚಿ ಹಿಡಿದವು, ಮೂರು ನಾಯಿ ಕುತ್ತಿಗೆ ಭಾಗವನ್ನು ಹಿಡಿದು ಅದರ ಕುತ್ತಿಗೆ ಮುರಿಯುವ ತನಕ ಎಳೆದಾಡಿದವು. ಅದು ಕೊನೆಯುಸಿರೆಳೆಯಿತು. ನಾಯಿಗಳು ಪುನ: ಅದನ್ನು ಕಾಲಿನಿಂದ ತಡಕಾಡಿ, ಅದು ಅಲುಗದೇ ಇರುವುದು ಖಾತರಿ ಮಾಡಿ, ಬಂದ ದಾರಿಯಲ್ಲಿ ಹೋಗಿ ಬಿಟ್ಟವು. ನಾನು ಮಾತ್ರ, ಬ್ಲ್ಯಾಕಿಯ ಕಣ್ಣಿನಿಂದ ಒಸರಿದ ಕರುಣಾಜನಕ ನೋಟ ಮತ್ತು ನನ್ನ ಅಸಹಾಯಕತೆಯನ್ನು ನೆನೆಸಿಕೊಂಡು, ನಮ್ಮ ತೋಟಕ್ಕೆ ಪಾತಿ ಮಾಡುವ ಅಣ್ಣಿ ಗೌಡ ಬರುವ ತನಕ ಅಲ್ಲೆ ನಿಂತಿದ್ದೆ. ಅಳಬೇಡಿ ಒಡತಿ ಅಂದ ಅಣ್ಣಿ ಗೌಡ, ಹತ್ತಿರದ ತೋಟದಲ್ಲಿ ಕೆಲಸಕ್ಕಿರುವ ಇನ್ನಿಬ್ಬರು ಕೆಲಸಗಾರನ್ನು ಕರೆದು ತಂದು, ಗೇಟ್ ಬಳಿಯಿರುವ ತೆಂಗಿನ ಬುಡದಲ್ಲಿ ಗುಂಡಿ ತೆಗೆದು ಬ್ಲ್ಯಾಕಿ ಯನ್ನು ಅದರಲ್ಲಿ ಹೂತಿದರು. ಮಣ್ಣು ಹಾಕುವ ಮುಂಚೆ ಅದಕ್ಕೆ ಅಂತ ಇಟ್ಟ ನೀರು ದೋಸೆಯನ್ನು ಅದರ ಒಟ್ಟಿಗೆ ಮಣ್ಣು ಮಾಡಿದೆ. ನಾಯಿಗಳ ಹಿಂಡು ಕಂಡಾಗ ಹಾಗೂ ನೀರು ದೋಸೆ ಮಾಡಿದಾಗಲೆಲ್ಲ ನನಗೆ ಬ್ಲಾಕಿ ನೆನಪಿಗೆ ಬರುತ್ತದೆ.
ಪ್ರಾಣಿಗಳಲ್ಲಿಯೂ ದಯಾ ಮರಣದ ಪರಿಕಲ್ಪನೆ ಇರಬುಹುದಾ? ನಾನು ಅದಕ್ಕೆ ಸಾಕ್ಷಿ ಆಗಿದ್ದೇನಾ? ಗೊತ್ತಿಲ್ಲ.

September 12, 2009

ಮಸಾಲಾ ಪೂರಿ


ಗೋದಿ ಹಿಟ್ಟು - 1 ಕಪ್


ಬಾಂಬೆ ರವಾ- 2 ಟೀ. ಚ


ಮಸಾಲೆ ರುಬ್ಬಲು : ಕೊತ್ತಂಬರಿ ಸೊಪ್ಪು ಸ್ವಲ್ಪ, ತಾಜಾ ತೆಂಗಿನ ತುರಿ- 2 ಟೀ. ಚ, ಹಸಿ ಮೆಣಸಿನಕಾಯಿ-2, ಉಪ್ಪು ರುಚಿಗೆ ತಕ್ಕಂತೆ,( ಜೀರಿಗೆ ಮತ್ತು ಪುದೀನ ಎಲೆ(optional))


ಕರಿಯಲು - ಎಣ್ಣೆ


ತರಿ ತರಿಯಾಗಿ ರುಬ್ಬಿದ ಮಸಾಲೆಯೊಂದಿಗೆ ಗೋದಿ ಹಿಟ್ಟು , ಬಾಂಬೆ ರವೆ ಹಾಕಿ- ನೀರು ಬೆರೆಸಿ, ಗಟ್ಟಿಯಾದ ಕಣಕ (dough) ತಯಾರಿಸಿ. ಲಟ್ಟಿಸಿ, deep fry ಮಾಡಿ.


ಸಂಜೆ ಫಿಲ್ಮ್ ನೋಡ್ತಾ / ನೆಂಟರು ಬಂದಾಗ ಮಾಡಿತಿನ್ನಬಹುದು. ಮಸಲಾ ಪೂರಿಗೆ ಚಟ್ನಿ , ಪಲ್ಯದ ಜತೆ ಬೇಕಿಲ್ಲ. ಆದುದರಿಂದ ಪಿಕ್ ನಿಕ್ / tour ಗೆ ಒಯ್ಯಲು ಸುಲಭ ಮತ್ತು convenient. :-)


photo - from my kitchen