The Chukkubukku Website for books and famous publishing house of Dharwad- Manohar Grantha mala (Srikanth has a soft corner for this publishing house :-)) has announced a cover page design contest for M R Dattathri Novel 'Masaku Bettada dari' .
I Am travelling and my laptop does not support Kannada. So am copy pasting the mail from Chukku Team.
Last year Niharika entered one such contest and secured the second prize. Hope there are more contestants this year. So what are you waiting for. Throw in your hats in to the ring :-) The more the merrier....
Good luck from nenapina Sanchiyinda.
Details in the mail as follows :-
ಚುಕ್ಕುಬುಕ್ಕು ತಾಣ ಮತ್ತೊಂದು ಮುಖಪುಟ ಸ್ಪರ್ಧೆಯನ್ನು ತಂದಿದೆ! ಈ ಬಾರಿ ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಮನೋಹರ ಗ್ರಂಥಮಾಲೆಯ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಈ ಬಾರಿ ನೀವು ಮುಖಪುಟ ವಿನ್ಯಾಸಗೊಳಿಸಬೇಕಿರುವುದು ಕಾದಂಬರಿಕಾರ ಎಂ ಆರ್ ದತ್ತಾತ್ರಿ ಅವರ ಹೊಸ ಪುಸ್ತಕ 'ಮಸುಕು ಬೆಟ್ಟದ ದಾರಿ'ಗೆ.
ಬಹುಮಾನದ ಮೊತ್ತ ೫೦೦೦ ರೂ. ನಿಮ್ಮ ವಿನ್ಯಾಸ ನಮ್ಮನ್ನು ಜುಲೈ 12ರೊಳಗೆ ತಲುಪಬೇಕು. ಎಲ್ಲ ಪ್ರವೇಶಗಳನ್ನು ಅವಲೋಕಿಸಿ, ತಮ್ಮ ಕೃತಿಯ ಭಾವಲೋಕವನ್ನು ಸೂಕ್ತವಾಗಿ ಬಿಂಬಿಸುವ ಮುಖಪುಟವನ್ನು ಲೇಖಕರೇ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವಿನ್ಯಾಸವು ಆಗಸ್ಟ್ ತಿಂಗಳಲ್ಲಿ ಪ್ರಕಟಗೊಳ್ಳುವ ಈ ಕಾದಂಬರಿಯ ಹೊದಿಕೆಯಾಗಲಿದೆ. ಗ್ರಂಥಮಾಲೆಯು ಆಗಸ್ಟ್ ೧೫ರಂದು ಧಾರವಾಡದಲ್ಲಿ ನಡೆಸಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
ಈಗ ನೀವು ಮಾಡಬೇಕಾದ್ದಿಷ್ಟು: ಈ ಕೆಳಗೆ ಕಾದಂಬರಿಕಾರರು ತಮ್ಮ ಕೃತಿಯ ಬಗ್ಗೆ ಹೇಳಿರುವ ಟಿಪ್ಪಣಿಯನ್ನು ಹಾಗೂ ಚುಕ್ಕುಬುಕ್ಕು ಈಗಾಗಲೇ ಪ್ರಕಟಿಸಿರುವ ಒಂದು ಅಧ್ಯಾಯವನ್ನೂ ಓದಿಕೊಳ್ಳಿ. (ನಿಮ್ಮ ಕಲ್ಪನೆಗೆ ನೆರವಾಗಬಲ್ಲ ಇನ್ನಷ್ಟು ವಸ್ತುವನ್ನೂ ಪ್ರಕಟಿಸುತ್ತೇವೆ, ಗಮನಿಸುತ್ತಿರಿ.) ನಂತರ ಈ ಪುಸ್ತಕಕ್ಕೆ ಹೊಂದುವಂಥ ಮುಖಪುಟ ವಿನ್ಯಾಸವೊಂದನ್ನು ರೂಪಿಸಿ ನಮಗೆ ಕಳುಹಿಸಿಕೊಡಿ. ಒಬ್ಬರು ಗರಿಷ್ಠ ಮೂರು ವಿನ್ಯಾಸಗಳನ್ನೂ ಕಳಿಸಬಹುದು. ಬಳಸುವ ಚಿತ್ರ ಅಥವಾ ಫೋಟೊಗಳು ನಿಮ್ಮದೇ ಆಗಿರಬೇಕು. ಇಂಟ್‌ರ್ನೆಟ್ ಚಿತ್ರಗಳನ್ನು ಯಥಾವತ್ ಬಳಸಬೇಡಿ. ಎಲ್ಲ ವಿಷಯಗಳಲ್ಲೂ ಆಯೋಜಕರದೇ ಅಂತಿಮ ತೀರ್ಮಾನ.
ನಿಮ್ಮ ಮುಖಪುಟಗಳನ್ನು ಇಮೇಲ್ ಮಾಡಬೇಕಾದ ವಿಳಾಸ: chukkumail@gmail.com. ಮುಖಪುಟದ ಅಳತೆ: ಅಗಲ 14.5 ಸೆಂಟಿಮೀಟರ್, ಎತ್ತರ 22.5 ಸೆಂಟಿಮೀಟರ್, ರೆಸಲೂಷನ್ 300, ನಮಗೆ ಇಮೇಲ್ ಮಾಡುವಾಗ 72 ರೆಸಲೂಷನ್‌ಗೆ ಇಳಿಸಿ ಜೆಪೆಗ್ ಫಾರ್ಮಾಟ್‌ಗೆ ಬದಲಾಯಿಸಿ ಕಳಿಸಿ.
ನಿಮಗೆ ಪುಸ್ತಕ ಮುಖಪುಟಗಳತ್ತ ಆಸಕ್ತಿ ಇದ್ದರೆ ಸಾಕು, ನೀವೀ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೋಟೋಶಾಪ್ ಬರಲೇಬೇಕು ಅಂತ ಇಲ್ಲ. ನೀವೇ ತೆಗೆದ ಫೋಟೊ, ಬಿಳಿಹಾಳೆ, ಬಣ್ಣ, ಬ್ರಷ್ಯು, ಕತ್ತರಿ, ಗೋಂದು ಏನನ್ನಾದರೂ ಬಳಸಿ. ಫೋಟೊ ತೆಗೆದು ಪುಸ್ತಕದ ಹೆಸರು ಸೇರಿಸಿ ಕಳಿಸಿ.
ಇದು ಈ ತಾಣದಲ್ಲಿ ನಡೆಯುತ್ತಿರುವ ಮೂರನೇ ಮುಖಪುಟ ಸ್ಪರ್ಧೆ. ಹಿಂದಿನ ಸ್ಪರ್ಧೆಗಳಂತೆಯೇ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು ನಿರೀಕ್ಷಿಸುತ್ತಿದ್ದೇವೆ.
ನಿಮ್ಮ ಸಹಕಾರ, ವಿಶ್ವಾಸ ನಮ್ಮೊಂದಿಗೆ ಹೀಗೆಯೇ ಇರಲಿ.
ವಂದನೆಗಳೊಂದಿಗೆ
ಸೌಮ್ಯ ಕಲ್ಯಾಣ್ಕರ್
ಚುಕ್ಕುಬುಕ್ಕು ಟೀಮ್
:-)
good luck guys. 6 more days to go