September 30, 2018

ಆಶಾ ಜಾವೋರ್ ಮಾಝೆ - ಬಂಗಾಳಿ ಸಿನಿಮಾ

ಆಶಾ ಜಾವೋರ್  ಮಾಝೆ ( -labour of love) ) ನಾನು ಇತ್ತೀಚಿಗೆ ನೋಡಿದ ಚೆಂದದ ಸಿನಿಮಾ . ಒಂದು ಸುಂದರ ಪದ್ಯದ ಹಾಗಿದೆ. ಇಬ್ಬರ synchronised ನೃತ್ಯದ ಹಾಗೆ. ಕಷ್ಟಪಟ್ಟು ದುಡಿದು ಜೀವಿಸುವ ಗಂಡ ಹೆಂಡತಿ. ಹೆಂಡತಿಗೆ ಬೆಳಿಗ್ಗೆ ಹೋದರೆ ಸಂಜೆ ಮರಳುವ ಕೆಲಸ , ಆತನಿಗೆ ರಾತ್ರಿ ಶಿಫ್ಟ್ . ಅವಳು ಒಂದು ಹೆಂಗಸರ ಕೈಚೀಲ ತಯಾರಿಸುವ ಘಟಕದಲ್ಲಿ ಸೂಪ್ರವೈಸರ್ ಕೆಲಸ ಆದರೆ  ಅವನಿಗೆ ಪ್ರಿಂಟಿಂಗ್ ಪ್ರೆಸ್ ನಲ್ಲಿ.  ಅವಳು ಬೆಳಿಗ್ಗೆ ಎದ್ದು ಅಡಿಗೆ- ಡಬ್ಬಿಗೆ  ತಿಂಡಿ ತಯಾರಿಸಿ ಫ್ರಿಜ್ ನಲ್ಲಿ ಇತ್ತು ಹೋಗುತ್ತಾಳೆ. ಹಾಗೆ ಬಟ್ಟೆ ಒಗೆದು ಬಕೆಟ್ ನಲ್ಲಿ ಇಟ್ಟಿರುತ್ತಾಳೆ. ಅವನು ಬೆಳಿಗ್ಗೆ ಮನೆಗೆ ಬಂಡಿ ಟಿ ಕುಡಿದು ಸ್ನಾನ ಮಾಡಿ ಅವಳು ಒಗೆದ ಬಟ್ಟೆ ಒಣಗಿಸಲು ಹಾಕುತ್ತಾನೆ.( ಬಹುಶ: ಇಬ್ಬರಿಗೂ ದಿನದ ಕೂಲಿ ಕೊಡುತ್ತಾರೆ. ಯಾಕೆಂದರೆ ಯಾಕೆಂದರೆ ಇಬ್ಬರೂ ಮನೆಯ ಕಪಾಟಿನ ಡಬ್ಬಿಯಲ್ಲಿ ದುಡ್ಡು ಹಾಕುತ್ತಾರೆ. ) ನಂತರ ಬ್ಯಾಂಕ್ ಗೆ ಹೋಗಿ ದುಡ್ಡು ಡೆಪಾಸಿಟ್ ಮಾಡುತ್ತಾನೆ. ಹಾಗೆ ಬರುತ್ತಾ ಮೀನು ತಂದು ಫ್ರಿಜ್ ನಲ್ಲಿ ಹಾಕುತ್ತಾನೆ. ಅವಳು ಮಾಡಿಟ್ಟ ಊಟ ಮಾಡಿ ಮಲಗುತ್ತಾನೆ. ಸಂಜೆ ಅವಳು ಮನೆಗೆ ತಲುಪುವಷ್ಟರಲ್ಲಿ ಅವನು ಕೆಲಸಕ್ಕೆ ಹೋಗಿರುತ್ತಾನೆ. ಹೋಗ್ತಾ ಫ್ರಿಜ್ ನಲ್ಲಿಟ್ಟ  ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾನೆ. ಅವಳು ಮನೆಗೆ ಬಂದು ಟಿ ಕುಡಿದು,  ಒಣಗಿದ ಬಟ್ಟೆ ತಂದು ಫೋಲ್ಡ್ ಮಾಡುತ್ತಾಳೆ . ಬಟ್ಟೆಗೆ ಇಸ್ತ್ರಿ ಹಾಕಿ ಊಟ ಮಾಡಿ ಮಲಗುತ್ತಾಳೆ. ಬೆಳಿಗ್ಗೆ ಅವಳು ಬೇಗ ಎದ್ದು ಫ್ರಿಜ್ ನಲ್ಲಿದ್ದ ಮಿನುಗಳನ್ನು ತೆಗೆದು ಹೊರಗಿಡುತ್ತಾಳೆ. ಅಡಿಗೆ -ಚಪ್ಪಾತಿ ಪಲ್ಯ , ಮೀನಿನ ಖಾದ್ಯಮಾಡಿಡುತ್ತಾಳೆ. ಬೆಳಿಗ್ಗೆ ಒಂದು ಗಳಿಗೆ ಇಬ್ಬರ   ಭೇಟಿ. ಅವಳು ಇಬ್ಬರಿಗೂ ಚಹಾ ಮಾಡಿಡುತ್ತಾಳೆ . ಅವಳು ಚಹಾ ಕುಡಿದಾದ ನಂತರ ಅವನು ಬಂದು ಟಿ ಕುಡಿತಾ ಇರುವಾಗಲೇ ಅವಳು ಚಪ್ಪಲಿ ಮೆಟ್ಟಿ ಕೆಳಸಕ್ಕೆ ಹೊರಡುತ್ತಾಳೆ. ಅವಳು ಮನೆಯ ಓಣಿ ದಾಟಿ ಅದ್ರಶ್ಯ  ಆಗುವ ತನಕ ಅವು ಕಿಟಕಿಯಿಂದ ನೋಡುತ್ತಾನೆ. 
ಈ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದು ಯಾವುದೇ ಬಾಷೆಯ  ಸಿನಿಮಾ ಆಗಿರ ಬಹುದು ಬೆಂಗಾಲಿ ಶಾಸ್ತ್ರೀಯ ಸಂಗೀತ ಮತ್ತು ಬೆಂಗಾಲಿಯಲ್ಲಿ ಶ್ಲೋಗನ್  ಕೂಗುತ್ತ ಹೋಗುವ ಒಂದು ದೃಶ್ಯ  ಇದ್ದುದ್ದರಿಂದ ಇದು ಬೆಂಗಾಲಿ ಸಿನಿಮಾ  ಅಂತ ಗೊತ್ತಾಗುತ್ತದೆ.  :-)
ನಾನು ಯೂ ಟ್ಯೂಬ್  ನಲ್ಲಿ ನೋಡಿದ್ದು.  ಕಪ್ಪು ಬಿಳಿಪು ಸಿನಿಮಾ ಆಗಿತ್ತು. amazon  ಪ್ರೈಮ್  ನಲ್ಲಿ ಕಲರ್ ಸಿನಿಮಾ  ಸಿಗುತ್ತದೆ. ಯಾರೋ ಅಪ್ಲೋಡ್ ಮಾಡುವಾಗ ಸಿನಿಮಾ ಕಪ್ಪು ಬಿಳುಪಾಯಿತಾ ಗೊತ್ತಿಲ್ಲ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು. :-)  ಯು ಟ್ಯೂಬ್ ಲಿಂಕ್ ಇಲ್ಲಿ ಹಾಕುತ್ತೇನೆ. ಇಷ್ಟ ಇದ್ದವರು ನೋಡ ಬಹುದು.  ನಾನಂತು ಈ ಸಿನಿಮಾದಲ್ಲಿ ಕಳೆದು ಹೋದೆ. ನೀವೇನಾದರೂ ನೋಡಿದ್ರೆ ನಿಮಗೇನನ್ನಿಸಿತು ಹೇಳಿ. ಸಿನಿಮಾ ಸ್ವಲ್ಪ ಸ್ಲೋ , ಬಟ್ i like such movies. 

ನನಗನ್ನಿಸಿದ್ದು : ಜಗಳ ಮಾಡಕ್ಕೆ ಪುರುಸೋತ್ತಿರಲ್ಲ. ಮತ್ತು ಭಾನುವಾರ ಏನು ಮಾಡುತ್ತಾರೆ ಅಂತ ಕುತೂಹಲ .  ಅಥವಾ ಇಬ್ಬರಿಗೂ ಒಟ್ಟಿಗೆ ರಾಜಾ ಇಲ್ಲವೇನೋ   

ಸಿನಿಮಾದ blurb  ಹೀಗಿದೆ. 
Set in the crumbling environs of Calcutta, LABOUR OF LOVE is a lyrical unfolding of two ordinary lives suspended in the duress of a spiraling recession. They are married to a cycle of work and domestic routine, and long stretches of waiting in the silence of an empty house. They share each other's solitude in pursuit of a distant dream that visits them briefly every morning. Incorporating poignant political undertones, director Aditya Vikram Sengupta creates a stylistically beautiful film that depicts the challenges of sustaining love in a fast transitioning world via a simultaneous sensation of breathlessness and space.
ಎಷ್ಟೊಂದು ಬೆಂಗಾಲಿ ಸಿನಿಮಾ ನೋಡಿದೆ ಅಂದ್ರೆ, ಹಿಂದಿನ ತಿಂಗಳು ಕೊಲ್ಕಾತಾ ಗೆ ಹೋದಾಗ ಸಲೀಸಾಗಿ ಓದಿದ್ದು ಮಾತ್ರವಲ್ಲ  ಅವರ ಭಾಷೆ ಕೂಡ  ಅರ್ಥ ಆಗ್ತಿತ್ತು. ಶ್ರೀಕಾಂತಗಂತೂ ಅಚ್ಚರಿ. :-) 

September 24, 2018

ಮಡಿವಾಳ ಕೆರೆ ಬಳಿ ಒಂದು ಸಂಜೆ

ಮಳೆ ಬಂದು ಬೆಂಗಳೂರು ಒಂದು ತರಹ ಚಂದ ಆಗಿದೆ.
ನಿಹಾರಿಕಾ ಇಲ್ಲಿ ಬಂದು ಚಿತ್ರ ಬರೀತಾ ಇದ್ರೆ ನಾನು ಕೆಲವು ಫೋಟೋ ತೆಗೆದೆ. ಕೆರೆಯ ಹೂಳೆತ್ತಿದ್ದರಿಂದ ಕೆರೆ ತುಂಬಿದೆ. ಕೆರೆಯ ಮಧ್ಯ ಇರುವ mangroves ನಲ್ಲಿ ಹಲವಾರು ವಲಸಿಗ ಹಕ್ಕಿಗಳು ಬಿಡುಬಿಟ್ಟಿವೆ. ರಿಪೇರಿ ಕೆಲಸ ನಡೆದಿದೆ. 












ಒಂದು ಬಸವನ ಹೂಳ 




ಅಸ್ತಮಿಸುವ ಸೂರ್ಯನ ಬೆಳಕಿನಿಂದ ಮನೆಯ ಕಿಟಕಿಗಾಜುಗಳಿಗೆ ಬೆಂಕಿ ಹತ್ತಿದಂತಹ feel. 















September 18, 2018

ಕಲೆಬರಹ

ನಿಹಾರಿಕಾ ಹೊಸದೊಂದು ಬ್ಲಾಗ್ ಶುರು ಮಾಡಿದ್ದಾಳೆ. ಅವಳು ಬಿಡಿಸಿದ ಚಿತ್ರ ದ ಜೊತೆ ಪುಟ್ಟ ಬರಹ. ಆಸಕ್ತಿ ಉಳ್ಳವರು ಕೆಳಗಿನ ಕೊಂಡಿಯಲ್ಲಿ ಓದ ಬಹುದು
https://niharikashenoy.blogspot.com/
ಧನ್ಯವಾದಗಳು
😊😊

September 12, 2018

ಒಂದು ಆನೆಯ ಸುತ್ತ

ಸದ್ದು ಆಡಗಿ  ಸುಮಾರು ಹೊತ್ತಾದರೂ ಅದು ಇನ್ನೂ  ಗಾಳಿಯ್ಲಲಿ ತೇಲುತ್ತಿರುವ ಭಾಸ. ಎರಡು ಕಾಲಿನ ನರ  ಪ್ರಾಣಿಯ ದನಿ ಕಡಿಮೆಯಾಗುತ್ತಾ ಹೋಯಿತು ಹಾಗೆಯೇ ಅಡವಿಯ  ರಾತ್ರಿಯ ಸಮಾಧಾನಕರ  ಸದ್ದುಗಳು  ಶುರುವಾದವು. ಸ್ವಲ್ಪ ಹೊತ್ತು  ನಿಂತೆ. ಘಿಳಿಡುವ ಡುವ ಆಸೆಯನ್ನು ಅದುಮಿಕೊಂಡೆ. ಹಿರಿಯರು ಹೇಳಿದ ಮಾತು ನೆನಪಾಯಿತು. ಎರಡು ಕಾಲಿನ ಪ್ರಾಣಿ ಬಳಿಯಿದ್ದಾಗ ಸದ್ದು  ಮಾಡದೆ ಅಡಗಿಕೊಂಡಿರು . ನಿಧಾನವಾಗಿ ಭಯ ಕರಗಲು  ಆರಂಭವಾಯಿತು. ತಲೆಯಲ್ಲಿ ರಿಂಗಣಿಸುತ್ತಿರುವ  ಸದ್ದುಗಳನ್ನು ಕೊಡವಿಕೊಳ್ಳಲು ಕಿವಿಯನ್ನು ಅಲ್ಲಾಡಿಸಿದೆ. ದೀರ್ಘವಾಗಿ ಉಸಿರೆಳೆದುಕೊಂಡೆ. ಮನೆಗೆ ಹೋಗಬೇಕೆನಿಸಿತು. ತನ್ನ ಹೊಲದ ಸುತ್ತ ಮುಳ್ಳು ತಂತಿಯ ಬೇಲಿ ಹಾಕಿ ನಮ್ಮ ಚರ್ಮ ಸುಡುವಂತೆ ಮಾಡುವ ನರಪ್ರಾಣಿಯ ಸಹವಾಸವೇ ಬೇಡವೆನಿಸಿತು. ಆದರೆ ಅಡವಿಯೆಲ್ಲ ನಾಶವಾಗಿ  ನಮಗೆ ತಿನ್ನಲು ಏನೂ ಇಲ್ಲವಾಗಿದೆ.
ಕಣ್ಣು ಮುಚ್ಚಿ ಮುಳ್ಳು ತಂತಿಯನ್ನು ಎಳೆದು ಬಿಸಾಕಿದೆ. ನಿಧಾನವಾಗಿ ಬಿದ್ದ ತಂತಿ ದಾಟಿದೆ. ಒಳಗಡೆ ಅಡಗಿಕೊಳ್ಳಲು  ಪ್ರಶಸ್ತ ಜಾಗ ಸಿಕ್ಕಿತು ಮಾತ್ರವಲ್ಲದೆ ರುಚಿಕರವಾದ ಹಲಸಿನ ಗೆಲ್ಲು ಸಿಕ್ಕಿದೆ. ರಾತ್ರಿಯಾದುದರಿಂದ ನರಪ್ರಾಣಿಯೆಲ್ಲ ಮಲಗಿ ನನಗೆ ಅಷ್ಟು ಭಯ ಅನ್ನಿಸಲಿಲ್ಲ. ನನಗೆ ಬೇಕಾದಷ್ಟು ಹೊಟ್ಟೆ ತುಂಬಾ ತಿಂದೆ.
ಅದೇ ಹಳ್ಳಿಯಲ್ಲಿ ಕಾಂತನೆಂಬ ರೈತ ರಾತ್ರಿ ಇಡೀ ಎಚ್ಚರ ವಾಗಿದ್ದ. ಮುದಿ ತಂದೆಯ ಹದೆಗೆಡುತ್ತಿರುವ ಆರೋಗ್ಯ ಹಾಗು ಮಗಳ ಮದುವೆಗೆ  ದುಡ್ಡು ಒಟ್ಟುಗೊಳಿಸುವ  ಚಿಂತೆ  ಅವನನ್ನು ಬಾಧಿಸಿದೆ . ಮತ್ತು ಈ ಆನೆಗಳ ಕಾಟ. ಆನೆಗಳನ್ನು ನೆನ್ನೆಸಿ ಅವನಿಗೆ ಸಿಟ್ಟೇರಿತು. ಅವನ ಅಕ್ಕಪಕ್ಕದ ರೈತರ ಹೊಲಗಳನ್ನೆಲ್ಲ ಆನೆಗಳು ತಿಂದು ದ್ವ೦ವ್ಸ ಮಾಡಿದ್ದವು. ಇಷ್ಟು ದಿನ ಅವನು ರಾತ್ರಿ ಹೊಲ ಕಾಯುತ್ತಿದ್ದ. ಆನೆಗಳನ್ನು ಹೆದರಿಸಲು  ಆವಾಗಾವಾಗ ಸುಡುಮದ್ದುಗಳನ್ನು ಉರಿಸುತ್ತಿದ್ದ. ಅದಲ್ಲದೆ ಕರೆಂಟು ತಾಗುವ ಮುಳ್ಳು ತಂತಿ ಹಾಕಿದ ಹೊಲಗಳಲ್ಲಿ ಇವನದ್ದು ಒಂದಾಗಿತ್ತು. ಇಷ್ಟು ದಿನ ಅವನು ತನ್ನ ಹೊಲವನ್ನು ಆನೆಗಳಿಂದ ಉಳಿಸಲು ಸಾಧ್ಯವಾಗಿತ್ತು. ಚಿಂತೆ ಮತ್ತು ನಿದ್ದೆಗೆಟ್ಟಿದ್ದರಿಂದ ಅವನ ಮುಖವೆಲ್ಲ ಸುಕ್ಕುಗಟ್ಟಿದೆ.
ಇವತ್ತು ಕಾಂತ ಬೇಗನೆಎದ್ದಿದ್ದಾನೆ. ಹಾಲು ಕರೆಯುವ ಹುಡುಗ  ತನ್ನ ಕೆಲಸ ಮಾಡುವುದನ್ನು ನೋಡಲು ಉಪೇಕ್ಷಿಸುತ್ತಾನೆ. ಆದರೆ ಆ ಹುಡುಗ ಇನ್ನು ಬಂದಿಲ್ಲ. ಅವನು ಬರುವ ತನಕ ಕಾಯಲು ಕುಳಿತ.
ಹೊರಗಡೆ ಇನ್ನು ಕತ್ತಲಿತ್ತು .ಆದರೂ ಕಾಂತ ಯಾವುದೇ ತೊಡಕಿಲ್ಲದೆ ನಡೆದ. ಅವನ ಹೊಲದ ಏರಿಳಿತದ ಹಾದಿ ಅವನಿಗೆ ತನ್ನ ಕೈರೇಖೆಯಷ್ಟು ಪರಿಚಿತ. ಸ್ವಲ್ಪ ದೂರ ಹಾದಿ ಕ್ರಮಿಸಿದೊಡನೆ ಯಾಕೋ ಏನೋ ಸರಿಯಿಲ್ಲ ಎಂಬ ಭಾವನೆ ಶುರುವಾಯಿತು. .  ಹಾದಿಯಳ್ಳಿ ತುಂಡಾಗಿ ಬಿದ್ದ ಮುಳ್ಳು ತಂತಿ.  ಮತ್ತು ಹೊಲದ ಮದ್ಯೆ ಏನೋ ಕಪ್ಪನೆಯ ಆಕಾರ. ಕಾಂತ ನಿಧಾನಕ್ಕೆ ಹಿಮ್ಮಡಿಯಿಟ್ಟ, ಕಾಲ ಬುಡದಲ್ಲಿ ಒಣಗಿದ  ಮರದ ತುಂಡೊಂದು ಕಟಕ್ ಅಂತ ಸದ್ದು ಮಾಡಿತು. ಆನೆಗೆ ಕೇಳಿಸಿತೋ ಎಂಬಂತೆ ಕಾಂತ ಹೆದರಿದ , ಆದರೆ ಆನೆ ಸುಮ್ಮನೆ ನಿಂತಿತ್ತು. ನಿಧಾನಕ್ಕೆ ಕಾಂತ ಅಲ್ಲಿಂದ ಜಾಗ ಖಾಲಿ ಮಾಡಿದೆ. ದನದ ಹಟ್ಟಿಯ  ಬಳಿ ಹಾಲು ಕರೆಯುವವ ನಿದ್ದೆ ಗಣ್ಣಲ್ಲಿ  ಹಾಲಿನ ಬಕೀಟನ್ನು ನೀಟಾಗಿ ಜೋಡಿಸುತ್ತಿದ.
"ಬೇಗ ಹೊರಡು, ನೆರೆಹೊರೆಯ ರೈತರಿಗೆ ಹೊಲದಲ್ಲಿ ಆನೆ ಬಂದಿದೆಎಂದು ಹೇಳು" ಓಡು !!
ಕಾಂತ ಹೇಳಿದಂತೆ ಮಾಡಲು ಹಾಲುಕರೆಯುವವ ಓಡಿದ . ಸಿಟ್ಟಿಗೆದ್ದ ರೈತರು ಆನೆಯನ್ನು ಓಡಿಸಲು ಬೆಳಕಿನ ದೊಂದಿ ಹಾಗು ಸುಡುಮದ್ದುಗಳೊಂದಿಗೆ ಸಜ್ಜಾಗಿ ಬಂದರು.  ಹೆಣ್ಣು ಮಕ್ಕಳು  ಮತ್ತು ಮಕ್ಕಳು ತಮ್ಮ ತಂದೆ , ಗಂಡ ಎಲ್ಲ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ರೈತರೆಲ್ಲ ಮರಳುವಷ್ಟರಲ್ಲಿ  ಹೊತ್ತು ಕಂದಿತು.  ಎಷ್ಟು ನಷ್ಟವಾಗಿದೆ ಎಂದು ತಿಳಿದು ಕಾಂತ ಹಳಹಳಿಸಿದ. ಹಣದ  ಋಣ ತೀರಿಸುವ ಬಗ್ಗೆ ಚಿಂತಾಕ್ರಾಂತನಾದ. ಹೊಲದಲ್ಲಿ ಆನೆಯ ಸುಳಿವಿರಲಿಲ್ಲ. ಆದರೆ ತಂತಿಯಲ್ ಬಳಿ ಬಿದ್ದ ರಕ್ತದ ಕಲೆಯಿಂದಾಗಿ ಆನೆಗೆ   ಏಟಾಗಿದೆ ಎಂದು ತಿಳಿಯಿತು.
ಕಾ೦ತಾನ  ಮನೆಯಲ್ಲಿ ಕೆಲವು ದಿನ ತುಂಬಾ ದುಃಖ ಮಡುಗಟ್ಟಿತ್ತು. ಕಾಂತ ತುಂಬಾ ಸೋತುಹೋಗಿದಂತೆ ಕಾಣುತ್ತಿದ್ದ. ಇದೆಲ್ಲವನ್ನು ಕೆಲವು ದಿನಗಳಿಂದ ಕಾಂತನ ಅಜ್ಜ   ಗಮನಿಸುತ್ತಿದ್ದ. ಒಂದು ದಿನ ಅವನನ್ನು ಬಳಿಗೆ  ಕರೆದು 'ನೋಡು ' ಅಂತ ಅಲ್ಲೇ ಬಿದ್ದ ಆನೆಯ ಒಣಗಿದ  ಲದ್ದಿಯ ಬಳಿ ಕೂತು ಬೆರಳು ತೋರಿಸಿದ. 'ಕಾಣಿಸುತ್ತಿದೆಯಾ?
ಕಾಂತ ಹತ್ತಿರಕ್ಕೆ ಹೋಗಿ ಗಮನಿಸಿದ. ಆನೆಯ ಲದ್ದಿಯಲ್ಲಿ ಅಂಜೂರದ ಬೀಜ ಮೊಳಕೆಯೊಡೆದಿತ್ತು. ಅವನ ಅಜ್ಜ ಅಲ್ಲಿಂದ ತೋಟದ ಕಡೆ  ಹೋರಡಲು ಅನುವಾದ.  'ಇಲ್ಲಿ ಬಾ ಅಂತ ಕ್ಷೀಣವಾದ ದನಿ ಹೊರಡಿಸಿದ. ಕಾಂತನಿಗೆ ತನ್ನ ತಾತನ ಆರೋಗ್ಯದ ಬಗ್ಗೆ ಕಾಳಜಿಯಾಯಿತು.  ಹೀಗೆ ಎಲ್ಲೆಂದರಲ್ಲೂ ನಡೆಯುವುದನ್ನು ಬಿಟ್ಟು ಮಲಗಿದೆಡೆಯಿರಬೇಕಿತ್ತು ಅಂದುಕೊಂಡ. ಅಜ್ಜನ ಕಡೆಗೆ ಸಾಗಿದ.  ಅಜ್ಜ ಈಗ ದಾಸವಾಳದ ಗಿಡ ಬಳಿಯಲ್ಲಿ ಬಗ್ಗಿ ಕುಳಿತಿಟ್ಟದ್ದ,  ಅಲ್ಲಿ ಆನೆಯ ಲದ್ದಿಯಿಂದ ಒಂದು ಹುಣಸೆಹುಳಿಯ ಗಿಡ ಬೆಳೆಯುತ್ತಿತ್ತು. ಅಜ್ಜ ಯಾಕಾಗಿ ಇದನ್ನೆಲ್ಲಾ ತೋರಿಸುತ್ತಿದ್ದಾನೆ ಅಂತ ಕಾಂತನಿಗೆ ಸಿಟ್ಟು ಬಂತು.
'ಈಗ ಅಲ್ಲಿ ನೋಡು " ಅಂತ ದೊಡ್ಡ ಮತ್ತುಊರಲೆಲ್ಲಾ  ಖ್ಯಾತ  ಹಲಸಿನ ಮರದ ಕಡೆ ಬೊಟ್ಟು ಮಾಡಿ ತೋರಿಸಿದ.  ಹತ್ತಿರ ಹಳ್ಳಿ ಮತ್ತು ಪಟ್ಟಣದಲ್ಲೆಲ್ಲ ಈ ಹಲಸಿನ ಮರದ ಹಣ್ಣು ತನ್ನ ಸಿಹಿಗಾಗಿ ಖ್ಯಾತ ವೆನಿಸಿತ್ತು.
"ನೆನಪಿದೆಯಾ ನಿನಗೆ, ಊರಲಿ ಕ್ಷಾಮವಾದಾಗ ಈ ಮರ ನಮ್ಮೆಲ್ಲರ ಹಸಿವೆ ನೀಗಿಸಿತ್ತು.  ಎಲ್ಲ ಬೆಳೆಗಳು ಒಣಗೆ, ಹಸುಗಳು ಹೊಟ್ಟೆಗಿಲ್ಲಕ್ಕಿದೆ ಇದ್ದಾಗ ಈ ಹಲಸಿನ ಮರ ಮಾತ್ರ ನಳನಳಿಸಿತ್ತಾ ಇತ್ತು. ನೀನು ಆಗ ಚಿಕ್ಕ ಹುಡುಗ.
ಕಾಂತನಿಗೆ ನೆನಪಾಯಿತು. ಊರಿನ ಉಗ್ರಾಣದಲ್ಲಿ ಒಂದು ಹಿಡಿ ಸಿರಿಧಾನ್ಯ , ಅದೂ ಕೆಲವು ದಿನಗಳಲ್ಲಿ ಖಾಲಿಯಾದಾಗ ಈ ಹಲಸಿನ ಮರದಲ್ಲೆಲ್ಲ ತುಂಬಾ ಹಣ್ಣುಗಳು ಕಾಣಸಿಕ್ಕಿದವು. ಕೆಂಪು ಜಾತಿಯ ಅಪರೂಪದ  ತಳಿಯ  ರುಚಿಕರವಾದ ಹಲಸಿನ ಹಣ್ಣು. 'ಈ ಹಲಸಿನ ಮರವನ್ನು ಆನೆ ನೆಟ್ಟಿದ್ದು ' ಪ್ರೀತಿಯಿಂದ ಹೇಳಿದರು ಅಜ್ಜ.
ಎಲ್ಲ ಮರಗಿಡಗಳು ಕ್ಷಾಮದಲ್ಲಿ ಒಣಗಿದಾಗ ಈ ಮರ ಮಾತ್ರ ಗಟ್ಟಿಮುಟ್ಟಾಗಿತ್ತು. ಈಗ ಅದನ್ನು ನೋಡು , ನನ್ನಷ್ಟೇ ವಯಸ್ಸು ಆದರೂ ಈಗಲೂ ಹೇಗೆ ನಳಿನಳಿಸುತ್ತಾ ಇದೆ   ಎಂದು ನಕ್ಕರು.
ಕಾಂತನ ಹೆಗಲ ಮೇಲೆ ಕೈಯಿಟ್ಟು " ಆನೆ ನಮ್ಮಿಂದ ಪಡೆಯುವುದು ಮಾತ್ರವಲ್ಲ , ನಮಗೇನಾದ್ರು ಕೊಟ್ಟೆ ಹೋಗುತ್ತೆ.  ನಾವು ಅದಕ್ಕೆ ಬೇಕಾದ ಅರಣ್ಯವನ್ನೆಲ್ಲಾ ಹೊಲಗಳನ್ನು ಮಾಡಿ ಜೀವನ ನಡೆಸುತ್ತೇವೆ , ಒಂದಷ್ಟು ಕಬ್ಬು ತಿಂದು ಹೋದರೆ ನಾವು ಅದಕ್ಕೆ ಆಕ್ಷೇಪ ಎತ್ತಬಾರದು.
ಕಾಂತ  ತನ್ನ ಅಜ್ಜನ ಕಡೆ ನೋಡಿ ಹೌದೆಂಬಂತೆ ತಲೆಯಲ್ಲಾಡಿಸಿದ. ತಿಳಿವಳಿಕೆ ಮತ್ತು ಭರವಸೆಯಿಂದ ಅವನ ಮುಖ ಅರಳಿತು.
ಡೌನ್ ಟು ಅರ್ಥ್ ನ ಗೋಬರ್ ಟೈಮ್ಸ ಪುರವಣಿಯಲ್ಲಿ   ಪ್ರಕಟವಾದ ನಿಹಾರಿಕಾ ಬರೆದ ಸಣ್ಣ ಕತೆಯ ತರ್ಜುಮೆ. 

August 7, 2018

ಕೂಷ್ಮಾಂಡ ಪುರಾಣ

ಕೂಷ್ಮಾಂಡ ಅಂದ್ರೆ ಬೂದುಗುಂಬಳ . Ashgourd . 
ಮನೆಗೆ ಬೂದುಗುಂಬಳಕಾಯಿ ಬಂದಾಗಲೆಲ್ಲ ಒಮ್ಮತದ ದನಿ ಮಜ್ಜಿಗೆ ಹುಳಿಗೆ . ಹೊಟ್ಟೆಗೆ ತಂಪು. ಆರೋಗ್ಯಕ್ಕೆ ಒಳ್ಳೆಯದು. ಕಡು  ಬೇಸಗೆಯಲ್ಲಂತೂ ಇದರ ಸೇವನೆ ಅತ್ಯುತ್ತಮ. ಈ ಸಲ ಸಂತೆಯಿಂದ  ತುಂಬಾ ದೊಡ್ಡ ಹೋಳು ತಂದಿದ್ದರು ಶ್ರೀಕಾಂತ.. ಹಾಗಾಗಿ ಅಕ್ಕ, 'ಅಮ್ಮಾ ತುಂಬಾ ದಿನ ಆಯ್ತು ಕಾಶಿ ಹಲ್ವಾ ಮಾಢದೆ ' ಅಂತ ಹೇಳಿದಳು . ಬೂದುಗುಂಬಳಕಾಯಿಯ ಹಲ್ವಾ ಗೆ ಕಾಶಿ ಹಲ್ವಾ ಯಾಕಂತಾರೆ? ಗೊತ್ತಿಲ್ಲ. ಬಹುಷ್ಯ ಹಿಂದೆ ಕಾಶಿ ರಾಮೇಶ್ವರ ಮುಂತಾದ ಕಡೆ ತೀರ್ಥಯಾತ್ರೆಗೆ  ಹೋಗುವಾಗ ಇದನ್ನು ಕಟ್ಟಿಕೊಂಡು ಹೋಗುತ್ತಿದ್ದರೋ ಏನೋ? (ತೀರ್ಥಯಾತ್ರೆ ಎಂದಾಗ ರೈಲು ತಂಬಿಗೆ ನೆನಪಾಗುತ್ತದೆ. ನನ್ನ ನಾನಿ (ಅಜ್ಜಿ) ಯ ಬಳಿ ಬೆಳ್ಳಿಯ ತಂಬಿಗೆ ಇತ್ತು. ಅಷ್ಟರಲ್ಲೇ ಯಾತ್ರೆ ಮುಗಿಸುತ್ತಿದ್ದರು. ರೈಲು ಕೆಲವು ನಿಲ್ದಾಣದಲ್ಲಿ ಹೆಚ್ಚಿಗೆ ನಿಲ್ಲುತ್ತಿದ್ದ ಕಡೆ ಅದರಲ್ಲಿ ನೀರು ತುಂಬಿಸುತ್ತಿದ್ದರು. ಆಗ ಬೇರೆ ಕಡೆ ನೀರು ಕುಡಿಯುವುದರಲ್ಲಿ ಹೆದರಿಕೆ ಇರಲಿಲ್ಲ, ಹಾಗೆಯೇ ಪ್ಲಾಸ್ಟಿಕ್ ಬಾಟಲಿಗಳಿರಲಿಲ್ಲ. ಪ್ಲ್ಯಾಸ್ಟಿಕ್ ಬಾಟಲಿಗಳು ಯಾವಾಗ ಚಾಲನೆಯಲ್ಲಿ ಬಂತು ಗೊತ್ತಾಗಲೇ ಇಲ್ಲ. ಸ್ವಲ್ಪ track change ಆಯ್ತು 😀 )
ಹಾಗಾಗಿ ನಿನ್ನೆ ನಮ್ಮಲ್ಲಿ ಬೂದುಗುಂಬಳದ ಹಲ್ವಾ. ಸುಮಾರು ಸಮಯ ಬೇಕು ಇದರ ಹಲ್ವಾ ತಯಾರಾಗಲು. ಮೊದಲಿಗೆ ಬೂದುಗುಂಬಳವನ್ನು ತುರಿಬೇಕು. ಬೆಲ್ಲಕ್ಕೆ ಒಂದೆಳೆ ಪಾಕ ಆದಾಗ ತುರಿದಿಟ್ಟ ಬೂದುಗುಂಬಳದಿಂದ ನೀರೆಲ್ಲ ಒತ್ತಿ ತೆಗೆದು ಬೆಲ್ಲದ ಪಾಕಕ್ಕೆ ಹಾಕಬೇಕು. ಬೂದುಗುಂಬಳದ ನೀರಿನ ಅಂಶ ಎಲ್ಲ ಹೋಗಿ ಪಾತ್ರೆಯ  ತಳ  ಬಿಡುತ್ತಿದ್ದ ಹಾಗೆ ಹಲ್ವಾ ತಯಾರಾಗಿದೆ ಅಂತ ಲೆಕ್ಕ. ಸುಮಾರು ಎರಡು ಗಂಟೆಯ ಮೇಲೆ ತಗಲುತ್ತದೆ ಈ ಹಲ್ವಾ ತಯಾರಿಸಲು. ಹಾಗಾಗಿ ತುಂಬಾ ದಿನ ಕೆಡದೆ ಉಳಿಯುತ್ತದೆ. ಕೊನೆಗೆ ಏಲಕ್ಕಿ, ತುಪ್ಪ , ಹುರಿದ ಗೋಡಂಬಿ ಬೆರೆಸಿದರೆ ಆಯ್ತು. ನಿಮ್ಮ ಹಲ್ವಾ ತಯಾರು. :-)
ಈ ಸಲ ಸ್ವಲ್ಪ ಚೀಟಿಂಗ್ ಮಾಡಿದೆ.  ತುರಿದು ನೀರು ಬಸಿದ  ಕುಂಬಳವನ್ನು ನೀರಾರುವ ತನಕ ಮೈಕ್ರೋವೇವಿಸಿದೆ 🙂 ಹಾಗಾಗಿ ಹಲ್ವಾ ಬೇಗ ತಯಾರಾಯಿತು

ashgourd halwa with organic jaggery

ಬೂದುಗುಂಬಳ ತುರಿಯುವ ಕೆಲಸ ಅಕ್ಕ ಹಚ್ಚಿಕೊಂಡಳು. ಕೆಲಸ ಮಾಡ್ತಾ ಅಮ್ಮ ನೀನು ಯಾವತ್ತಾದ್ರೂ  ಪೇಠಾ  ಮಾಡಿದೆಯಾ? ಅಂತ ಕೇಳಿದಳು . ಪೇಠಾ ಆಗ್ರಾದ ಸ್ಪೆಷಲ್ ಸ್ವೀಟು. 
ಹೌದೆಂದ್ದು ನಾವು ಪೇಠಾ ತಯಾರಿಸಿದ ಕತೆ ಶುರು ಮಾಡಿದೆ. 
ಆಗ ಅಕ್ಕ (ಮಾಲವಿಕಾ) ನ  ಮೊದಲ ಹುಟ್ಟು ಹಬ್ಬ ಆಚರಿಸಲು ಅಮ್ಮ ಮತ್ತು ತಮ್ಮ ಮುಂಬೈ ನಿಂದ ಕೊಪ್ಪಕ್ಕೆ ಬಂದಿದ್ದರು.  ಕರೆಂಟ್ ಇದ್ದರೆ ಮಧ್ಯಾಹ್ನ ನಾವು ದೂರದರ್ಶನ ನೋಡುತ್ತಿದ್ದೆವು. ಒಂದು ಮಧ್ಯಾಹ್ನ ಆಗ್ರಾದ ಪೇಠಾ  ತಯಾರಿಸಿವುದನ್ನು  ತೋರಿಸುತ್ತಿದ್ದರು. ನಮ್ಮ ಬಾಡಿಗೆ  ಮನೆಯ ಹಿತ್ತಲಲ್ಲಿ ನಾವು ಪುಟ್ಟ ಕೈತೋಟ ನಿರ್ಮಿಸಿದ್ದೆವು. ಆವಾಗಲೇ (30 ವರ್ಷದ ಹಿಂದೆ) ಮನೆಯ ಹಸಿ ತ್ಯಾಜ್ಯ ವಸ್ತುಗಳನ್ನು ಬಳಸಿ ಕಾಂಪೋಸ್ಟ್ ಕೂಡ ಮಾಡುತ್ತಿದೆವು. ನಮ್ಮ ತೋಟ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಅಲ್ಲದೆ ಕೊಪ್ಪದ ವಾತಾವರಣ  ಕೂಡ ಹೂ  ತರಕಾರಿ ಬೆಳೆಸುವಲ್ಲಿ ತುಂಬಾ  ಸಹಕಾರಿ. ನಾವು ಬೆಳೆಸಿದ ಮೂಲಂಗಿ ಅಂತೂ ಈಗಲೂ ಹಲವಾರು ಜನ ನೆನೆಸಿಕೊಳ್ಳುತ್ತಾರೆ. ನನ್ನ ತಮ್ಮ ಬಂದಾಗಲೆಲ್ಲ ತಾಜಾ ಮೂಲಂಗಿ ಸೊಪ್ಪು ಬಳಸಿ ಬ್ರೆಡ್ ಸ್ಯಾಂಡ್ವಿಚ್ ತಯಾರಿಸುತ್ತಿದ್ದೆ. ಈಗಲೂ ತಮ್ಮ ಅದನ್ನೆಲ್ಲ ನೆನೆಸಿಕೊಳ್ಳುತ್ತಾನೆ. ಕುಂಬಳಕಾಯಿಯಂತೂ ಹೇರಳವಾಗಿ ಬೆಳೆಯುತ್ತಿತ್ತು. 
ಈ ಪೇಠಾ ಮಾಡುವ ಕಾರ್ಯಕ್ರಮ ಪ್ರಸಾರವಾಗುವಾಗ ನಮ್ಮ ಹಿತ್ತಲಲ್ಲಿ ಮೂರು ಬೂದುಗುಂಬಳಕಾಯಿಗಳಿದ್ದವು. ಅದರಲ್ಲಿ ಚೆನ್ನಾಗಿ ಬಲಿತ ಕಾಯಿ ಅಮ್ಮ ಸೆಲೆಕ್ಟ್ ಮಾಡಿದರು. ಶ್ರೀಕಾಂತ ಮಧ್ಯಾಹ್ನ ಊಟ ಮುಗಿಸಿ  ಆಫಿಸ್ ಗೆ ಹೋಗುವ ಮುನ್ನ  ಅಮ್ಮ ಅವರ ಬಳಿ ಸುಣ್ಣ ತರಿಸಿಕೊಂಡರು.  ಆಮೇಲೆ ನೀಟಾಗಿ ಕುಂಬಳ ಕಾಯಿಯ ಒಂದೇ ಅಳತೆಯ  ಚೌಕ ಹೋಳುಗಳನ್ನು ಮಾಡಿದರೆ ನಾನು ಮುಳ್ಳು ಚಮಚ ದಿಂದ ಹೋಳುಗಳನ್ನು ಚುಚ್ಚುತ್ತಿದ್ದೆ . ಹೋಳುಗಳನ್ನು ಸುಣ್ಣದ ನೀರಿನಲ್ಲಿ ಎರಡು ದಿನ ನೆನೆ ಹಾಕಿದೆವು. ಮೂರನೇ ದಿನ ಹೋಳುಗಳನ್ನೆಲ್ಲ ಸುಣ್ಣದ ನೀರಿನಿಂದ ತೆಗೆದು ಒಳ್ಳೆಯ ನಿರಿನಿನಲ್ಲಿ ಹಾಕಿ ತೆಗೆದು  ಒಂದು ಬಿಳಿಯ ಮುಂಡಿ (ಮನೆ ಯೊಳಗೆ ಒಣಗಿಸಬೇಕು ಬಿಸಿಲಲ್ಲಲಾ} ನ ಮೇಲೆ ಒಣಗಿಸಲು ಇಟ್ಟೆವು. ನೀರಿನ ಅಂಶವೆಲ್ಲ ಹೋಗಬೇಕು. 
ಸಕ್ಕರೆಗೆ ನೀರು ಬೆರೆಸಿ ಅದು ಎರಡೆಳೆ ಪಾಕ ಆದ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡ  ಬೇಕು .ಬೇಕಿದ್ದಲ್ಲಿ ಏಲಕ್ಕಿ ಪುಡಿ ಬೆರೆಸ ಬಹುದು.  ಒಣಗಿದ ಹೋಳುಗಳನ್ನು ಸಕ್ಕರೆ ಪಾಕದಲ್ಲಿ ಒಂದು ದಿನ  ನೆನೆಯಲು ಇಟ್ಟು , ನಂತರ ಒಂದೊಂದೇ sugarcoated ಹೋಳನ್ನು ಇನ್ನೊಂದು  ಪಾತ್ರಗೆ ವರ್ಗಾಯಿಸಬೇಕು. ಪೇಠಾ ತಯ್ಯಾರ್ ಅಂತ ಹೇಳಿದೆ. ಅಷ್ಟರಲ್ಲಿ ಅವಳ ತುರಿಯುವ ಕೆಲಸ ಮುಗಿದಿತ್ತು. 
ಹೀಗೆ ಮಾಡಿದ ಪೇಠಾ ಮಾಲವಿಕಳ  ಹುಟ್ಟುಹಬ್ಬದಿನದಂದು ಎಲ್ಲರಿಗು ಇತರ ತಿಂಡಿ ಖಾದ್ಯದೊಂದಿಗೆ ಬಡಿಸಲಾಯಿತು. ಸಕ್ಕರೆ ಸ್ವ ಲ್ಪ ಜಾಸ್ತಿಯಾದುದು ಬಿಟ್ಟರೆ, ಪೇಠ ಸೂಪರ್ ಆಗಿತ್ತು. 
ಬೂದುಗುಂಬಳದ ಜ್ಯೂಸು : ತುರಿದ ಬೂದುಗುಂಬಳದಿಂದ  ಹಿಂಡಿದ ರಸಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬಹುದು.  ಹೌದು ಕೊಂಕಣಿಯವರು ಏನನ್ನು ವೆಸ್ಟ್ ಮಾಡುವುದಿಲ್ಲ :-)
ಶ್ರೀಕಾಂತ ಆಫಿಸ್ ಕೆಲಸದ ಮೇಲೆ ದೆಹಲಿಗೆ ಹೊಆಗಲೆಲ್ಲ ನನಗೋಸ್ಕರ ಪೇಠಾ ತೆಗೆದುಕೊಂಡು ಬರುತ್ತಾಳೆ. ಈಗ ಅದು ಕೇಸರ್, ಕೇದಗೆ , ಮಿಕ್ಸಡ್ ಫ್ರೂಟ್ ಅಂತ ಬೇರೆ ಬೇರೆ ಆಕಾರ ಫ್ಲೇವರ್ಸ್ ನಲ್ಲಿ ಲಭ್ಯ. 
ಹಾಗೆ ಒಂದು ಕೊಂಕಣಿ ಗಾದೆ ಇದೆ. ಅದರ ಕನ್ನಡ ವರ್ಷನ್ ಹೀಗೆ : ತನ್ನ ಮನೆಯ ಹಿತ್ತಲಲ್ಲಿ ಕುಂಬಳಕಾಯಿ ಕೊಳೆಯುತ್ತಿದ್ದರು ಇವನಿಗೆ ಬೇರೆಯವರ ಮನೆಯಲ್ಲಿನ  ಕುಂಬಳಕಾಯಿಯ ಹುಳುಕು ಹುಡುಕುವುದರಲ್ಲಿ ಎತ್ತಿದ ಕೈ ' ಅಂತ 
ಹೀಗೆ ಒಂದು ಲಹರಿ :-)

August 4, 2018

ಸಾರ - ಸಂಸಾರ

ಸಿನಿಮಾ ಮುಗಿಸಿ ಸುಚೇತಾ ಮತ್ತು ಮಗಳು ಶಾಂಭವಿ  ಹಾಗೆ ಟಿವಿ ಮುಂದೆ ಹಾಸಿಗೆ ಹಾಸಿಕೊಂಡು ಮಲಗಿದರು. ಇದು ಯಾವತ್ತೂ ಶುಕ್ರವಾರದ ವಾಡಿಕೆ. ಶಾಂಭವಿಗೆ ಶನಿವಾರ ಭಾನುವಾರ ಕೆಲಸಕ್ಕೆ ರಜೆ.ಶುಕ್ರವಾರ ಸಂಜೆ ಯಾವುದಾದರೂ ಸಿನಿಮಾ ನೋಡಿ ಮಲಗುವುದು.  ಅವಳು ಫುಡ್ ಮ್ಯಾಗಝಿನ್  ಒಂದಕ್ಕೆ ಎಡಿಟರ್ ಆಗಿ ಕೆಲಸ ಮಾಡುತ್ತಾಳೆ. ನಿದ್ದೆ ಬರದೇ ಇದ್ದಲ್ಲಿ ತನ್ನ ಆಫಿಸಿನ ಬಗ್ಗೆ ಏನಾದರೂ ಹೇಳುತ್ತಾಳೆ. 
ಅಯ್ಯೋ ಅಮ್ಮ ಮರೆತೇ ಹೋಯ್ತು. ತಡಿ ನನ್ನ ಬ್ಯಾಗ್ನಲ್ಲಿ ತಿರುಪತಿ ಲಾಡು ಇದೆ, ನಿನಗೆ ಇಷ್ಟ ಅಂತ ತಂದಿದ್ದೇನೆ. ಇರುವೆ ಬರದೇ ಇದ್ದಾರೆ ಸಾಕು  ಅಂತ ತನ್ನ ಕೊಠಡಿಗೆ ಓಡಿದಳು.  
ಮ್ಮ್ಮ್ಮ್ಮ್ ತುಂಬಾ ರುಚಿಯಾಗಿದೆ ಕಣೆ, ಆದ್ಸರಿ ಯಾರು ತಿರುಪತಿಗೆ ಹೋಗಿದ್ದು?
'ನಮ್ಮ ಆಫಿಸ್ ನಲ್ಲಿ ತುಂಬಾ ವಯಸಾದವರೆಂದರೆ ಚಂದ್ರನ್ ನಾಯರ್ . ಅವರು ಫ್ಯಾಮಿಲಿಯೊಂದಿಗೆ ಹೊರನಾಡಿಗೆ ಹೋಗಿದ್ದರು. ಅಲ್ಲಿಂದ ಸುಬ್ರಮಣ್ಯ, ಧರ್ಮಸ್ಥಳ ಎಲ್ಲ ಹೋಗಿ ಬಂದರು. ಈಗ ತಿರುಪತಿ ಮಾತ್ರ ಅಲ್ಲ ಎಲ್ಲ ಕಡೆ ಈ ಲಾಡು ಸಿಗುತ್ತೆ ಅಂತ ನಕ್ಕಳು. 
ಚಂದ್ರನ್ ನಾಯರ್ ಆ?  ನನ್ನ ಕ್ಲಾಸ್ ನಲ್ಲಿ ಕೂಡ ಒಬ್ಬ ಚಂದ್ರನ್ ನಾಯರ್ ಇದ್ದ. ಕಲಿಯಲು ಮಹಾ ಜಾಣ. ಆದರೂ ಫಿಸಿಕ್ಸ್ ನಲ್ಲಿ ನನಗೇನಾದರೂ ಹೆಚ್ಚು ಮಾರ್ಕ್ ಬಂದರೆ ನನ್ನ ಬಳಿ ಪೇಪರ್ ಇಸ್ಕೊಂಡು ಇಡೀ ಉತ್ತರ ಪತ್ರಿಕೆಯನ್ನು ತಪ್ಪು ಉತ್ತರವೇನಾದರೂ ಇದೆಯಾ ಅಂತ ಜಾಲಾಡುತ್ತಿದ್ದ ಬಗ್ಗೆ ಹೇಳಿ ನಗಿಸಿದಳು. 
ಸುಚೇತಾ ತನ್ನ ಕಾಲೇಜಿನ ಬಗ್ಗೆ ಮೆಲುಕುಹಾಕುತ್ತಿದ್ದರೆ ಶಾಂಭವಿ ಆಗಲೇ ನಿದ್ದೆಗೆ ಜಾರಿದ್ದಳು. 
ಚಂದ್ರನ್  ನಾಯರ ತನ್ನ ಜತೆ ೧೧ ಮತ್ತು ಹನ್ನೆರಡನೇ ಕ್ಲಾಸ್ ಓಡುತ್ತಿದ್ದಾಗ ಜತೆಯಾಗಿದ್ದ. . ಅವನ ತಂದೆ ಸ್ವೀಡನ್ ದೇಶಕ್ಕೆ ರಾಯಭಾರಿಯಾಗಿದ. ಆ ವರ್ಷ ಅವರು ಮುಂಬಯಿಗೆ ಬಂದಿದ್ದರು. ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲು ಚಂದ್ರನ್ ನನ್ನ ಮುಂಬಯಿಯ ಕಾಲೇಜಿಗೆ ಸೇರಿಸಿದ್ದರು. ಓದಲು ಅದರಲ್ಲೂ ಲೆಕ್ಕದಲ್ಲಂತೂ ಅವನು ತುಂಬಾ ಜಾಣನಾಗಿದ್ದ. ಬಾಹ್ಯಾಕಾಶ ವಿಜ್ಯ್ನಾನಿಯಾಗಿ  ಅಮೆರಿಕಕ್ಕೆ ಹೋಗುವ ಕನಸು ಅವನದ್ದಾಗಿತ್ತು ಸುಚೇತಾ ಗೆ ಫಿಸಿಕ್ಸ್ ನಲ್ಲಿ ಯಾವತ್ತೂ ಹೆಚ್ಚಿನ ಅಂಕ. ಫಿಸಿಕ್ಸ್ ಪೇಪರ್ ಅನ್ನು ಅವರ ಕೈಗೆ ಕೊಟ್ಟಾಗ ಮೊದಲು ಚಂದ್ರನ್ ಅವಳ ಕೈನಿಂದ ಉತ್ತರ ಪತ್ರಿಕೆ ಕಸಿಕೊಂಡು ಏನಾದರೂ ತಪ್ಪು ಇದೆಯಾ ಅಂತ ಹುಡುಕುತ್ತಿದ್ದ. ಒಂದು ಸಲ ಒಂದು ತಪ್ಪು ಉತ್ತರಕ್ಕೆ ಮಾರ್ಕ್ಸ್ ನೀಡಿದ್ದು ಅವನು  ಅವಳ ಉತ್ತರಪತ್ರಿಕೆಯನ್ನು ಸರ್ ಬಳಿ ಒಯ್ದು , ಬೈಸಿಕೊಂಡಿದ್ದ. ಅದೊಂದು ಬಿಟ್ಟರೆ ಅವನಿಗೆ ಸುಚೇತಾ ಎಂಬ ಪ್ರಾಣಿ ತನ್ನ ಕ್ಲಾಸ್ಮೆಟ್ ಅಂತ ಹೊಳೆಯುತ್ತಲೂ ಇರಲಿಲ್ಲ. ಬೇರೆ ಹುಡುಗಿಯರನ್ನು ಪಟಾಯಿಸುವುದರಲ್ಲಿ ಇರುತ್ತಿದ್ದ. ಸಣಕಲು ಮೈಯ, ತಲೆಗೆ ಎಣ್ಣೆ ಹಚ್ಚಿ ಜಡೇ  ಹೆಣೆದು   ಕಾಡಿಗೆ ಕಂಗಳ ಶಾಂಭವಿ ಅವನ ಅಸ್ತಿತ್ವದ ಅರಿವಲ್ಲಿ ಇರಲಿಲ್ಲ. ಆ ಎರಡು ವರ್ಷ ಒಟ್ಟೆಗೆ ಕಲಿತದ್ದೇ ಬಂತು. ಆಮೇಲೆ ಕ್ಲಾಸಿನವರು ಏನಾದರೇನೆಂದೇ ಗೊತ್ತಿರಲಿಲ್ಲ. ಹನ್ನೆರಡನೇ ಕ್ಲಾಸ್ ಮುಗಿಸಿದ ಹಾಗೆ , ಮುಂದೆ ಓದುತ್ತೇನೆಂದು ಆಸೆ ಪ್ಪಟ್ಟರೂ ಹಿರಿಯರು ಸೇರಿ ಗೌರೀಶನೊಂದಿಗೆ ಮಾಡುವೆ ಮಾಡಿಸಿದರು. ಗೌರೀಶನಂದು ದೊಡ್ಡ ಕುಟುಂಬ. ಚಿಕ್ಕ ಪ್ರಾಯಕ್ಕೆ ಶಾರ್ಜಾ ಗೆ  ಹೋಗಿ ಅಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ವರ್ಷಕ್ಕೊಂದು ಬಾರಿ ಭಾರತಕ್ಕೆ ಬಂದರೆ ಒಂದು ತಿಂಗಳು ಇದ್ದು ಹೋಗುತ್ತಿದ್ದ. ಶಾಂಭವಿ ಒಬ್ಬಳೇ ಮಗಳು. ಈಗ ಗಂಡನಿಗೆ ಅಷ್ಟೊಂದು ಜವಾಬ್ದಾರಿಗಳಿರಲಿಲ್ಲ. ಆದ್ರೂ ಶಾರ್ಜಾ ದ  ಜೀವನಕ್ಕೆ ಹೊಂದಿಕೊಂಡಿದ್ದಾನೆ. ಎಷ್ಟು ಆಗುತ್ತೆ ಅಷ್ಟು ಅಲ್ಲಿ ದುಡಿಯುತ್ತೇನೆ ಆಮೇಲೆ ಹೇಗೂ ಇಲ್ಲೇ ಬರಬೇಕಲ್ಲ ?? ಸುಚೇತಾಳಿಗೆ ಅದೇ ಅಭ್ಯಾಸ ಆಗಿದೆ. ಅವಳು ಕೆಲಸಕ್ಕೆ ಹೋಗುವುದಿಲ್ಲ. ಮನೆ ಸಂಭಾಳಿಸುವುದೇ ಕೆಲಸ. ಒಂದು ರೂಮ್ ಹಾಲ್ ನ ಪುಟ್ಟ ಮನೆ. ಬೆಳಿಗ್ಗೆ ಬೇಗನೆ ತಿಂಡಿ ಊಟ ಅಡುಗೆ ಗಳ ಕೆಲಸ ಮುಗಿಸುತ್ತಿದ್ದಳು. ಶಾಂಭವಿ ಮಧ್ಯಾಹ್ನಕ್ಕೆ ಡಬ್ಬಿ ಕಟ್ಟಿಕೊಂಡು ಹೋಗುತ್ತಾಳೆ. ಉಳಿದಂತೆ ಇಡೀ ದಿನ ಪುಸ್ತಕ ಓದಿಕೊಂಡು ಟಿವಿ ನೋಡಿಕೊಂಡು, ಸಂಜೆ ಅಕ್ಕ ಪಕ್ಕದ ಪರಿಚಯಸ್ಥ ಹೆಣ್ಣು ಮಕ್ಕಳ ಜತೆ ವಾಕ್. ವಾಕ್ ಗಿಂತ ಟಾಕ್ ಗೆ ಎಚ್ಚ್ಚು ಪ್ರಾಶಸ್ತ್ಯ. ರಜೆಯಿದ್ದಾಗ ಮಗಳ ಜತೆ ಎಲ್ಲಾದರೂ ಶಾಪಿಂಗ್ ಅದು ಇದು ಅಂತ ಹೋಗುತ್ತಾಳೆ. ಹೊರಗಡೆ ಊಟ ಮಾಡಿಕೊಂಡು ಬರುತ್ತ....... . ಒಟ್ಟಿಗೆ ಆರಾಮಾಗಿದ್ದಾಳೆ. 
ಹೀಗೆ ಒಂದು ಸಲ ಶ್ಯಾ೦ಭವಿಯ  ಆಫಿಸಿನಲ್ಲಿ ಫ್ಯಾಮಿಲಿ ಡಿನ್ನರ್ ಇಟ್ಟುಕೊಂಡಿದ್ದರು. ಅಮ್ಮ ನೋಡು ಅವರೇ ಚಂದ್ರನ್ ನಾಯರ್ ಅಂತ ಮಗಳು ಬೆರಳು ಮಾಡಿ ತೋರಿಸಿದಳು. ಅವರನ್ನು ನೋಡುತ್ತಿದ್ದಂತೆ ಒಂದು ಕ್ಷಣ ಮೈಯೆಲ್ಲಾ ಬಿಸಿ ತಣ್ಣಗೆ ಭಾಸವಾಯಿತು. ಮೂವತ್ತು ವರುಷದ ನಂತರವೂ ಅವ್ಳ ಕ್ಲಾಸಿನ ಚಂದ್ರನ್ ನಾಯರ್ ಅನ್ನು ಅವಳು ಗುರುತಿಸಿದಳು. ಸಖೇದಾಶ್ಚರ್ಯ !!! ಅರೆ ವಾಟ್ ಆರ್ ಯು ಡುಯಿಂಗ್ ಹಿಯರ್ ?? ಅಂತ ಕೇಳಿದಳು ಅವನಿಗೆ ಕಸಿವಿಸಿ . ಯಾರಪ್ಪ ಇದು ಅಂತ . ತಕ್ಷಣ ತನ್ನ ನಾಲಿಗೆ ಕಚ್ಚಿಕೊಂಡಳು ಸಚೇತಾ . ಅವಳು ಹಳೆ ಸಚೇತಾ ಆಗಿರಲಿಲ್ಲ. ಮ ಕೈ ತುಂಬಿಕೊಂಡು ಒಳ್ಳೆ ಡುಮ್ಮಿ ತರಹ ಆಗಿದ್ದಳು. 
ಅವಳೋ ಈ ಚಂದ್ರನ್ ನಾಯರ್ ಒಳ್ಳೆ ಖ್ಯಾತ ವಿಜ್ನ್ಯಾನಿ ಆಗಿರಬಹುದೆಂದು ತಿಳಿದಿದ್ದಳು. ಅಲ್ಲದಿದ್ದರೂ ಒಳ್ಳೆ ದೊಡ್ಡ ಕೆಲಸದಲ್ಲಿರಬಹುದು ಎಂದು ಕೊಂಡಿದ್ದಳು. ಈ ಸಣ್ಣ ಪತ್ರಿಕೆಯ ಅಕೌಂಟೆಂಟ್ ಎಂದು ಊಹಿಸಲು ಅವಳಿಗೆ ಅಸಾಧ್ಯ. 
ತನ್ನ ಪರಿಚಯ ಹೇಳಿಕೊಂಡಳು. ಅವನಿಗೆ ನೆನಪಿಗೆ ಬರಲಿಲ್ಲ. ಕಡೆಗೆ ಫಿಸಿಕ್ಸ್ ಬಗ್ಗೆ ಮಾತು ಶುರುಮಾಡಿದಾಗ, ಯಸ್ ಯಸ್ ಐ ರಿಮೆಂಬರ್  ಆ ಗರ್ಲ್ ಬಟ್ ನಾಟ್ ಕ್ಲಿಯರ್ಲಿ    ಅಂತ ಹೇಳಿದಾಗ ಸುಚೇತಾ ಗಟ್ಟಿಯಾಗಿ ನಕ್ಕಿದ್ದಳು. 
ಡಿಗ್ರಿ ಓದುವಾಗ ತನ್ನ ತಂದೆ ತಾಯಿ  ಪ್ಲೇನ್ ಕ್ರಾಶ್ ನಲ್ಲಿ  ತೀರದ್ದು , ಅವನ ದೊಡ್ಡಪ್ಪ ಎಲ್ಲಾ ಆಸ್ತಿ  ಕಬಳಿಸಿದ್ದು , ಮುಂಬಯಿಯ ಕಾಲೇಜಿನಿಂದ ಬಿಡಿಸಿ, ಊರಿನ ಕಾಲೇಜು ಹಾಸ್ಟೆಲ್ ಓದು, ವಾಸ , ಒಂದು ವರ್ಷ ಸಯನ್ಸ್ ಕಲಿತು ನಂತರ ಕಾಮರ್ಸ್ ಗೆ ಸೇರಿದ್ದು. ಕಷ್ಟ ಪಟ್ಟು ಓದಿ ಕೆಲಸ ಸಂಪಾದಿಸಿದ್ದು ಎಲ್ಲ ಹೇಳಿಕೊಂಡ. ಹೆಂಡತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನರ್ಸ್ ಕೆಲಸ. ಹಾಗಾಗಿ ಅವನು ಬೆಂಗಳೂರಿಗೆ ಬಂದು ಹಲವು ವರ್ಷಗಳೇ ಕಳೆದಿದ್ದವು. ಇಬ್ಬರು ಗಂಡು ಮಕ್ಕಳು . ಒಬ್ಬ ಕೆಲಸಕ್ಕೆ ಸೇರಿದ್ದನೆಂದು ಇನ್ನೊಬ್ಬ ತೀರಾ ಸಣ್ಣವ , ಈಗ ಹೈಸ್ಕೂಲ್ ಎಂದು ತಿಳಿಸಿದ.  ನೀನೂ ಫಿಸಿಷಿಸ್ಟ್ ಆಗುತ್ತಿ ಅಂದುಕೊಂಡಿದ್ದೆ ಎಂದ . ಅವಳು ನಕ್ಕಳು. ಮನೆಗೆ ಬರುವಂತೆ ವಿಳಾಸ, ಫೋನ್ ನಂಬರ್ ವಿನಿಮಿಯಾ ಮಾಡಿಕೊಂಡರು   
:-) 

June 3, 2018

Stuffed sardines - ಕಥೆ ಬರೆಯುವ ಹೊಸ ರೀತಿ

A new concept in story writing. Cooked up story ☺☺
ಸಮುದ್ಯತಾ ಟೀಪಾಯ್ ಮೇಲೆ ಕಾಲಿಟ್ಟು ಕ್ರೈಮ್  ಚಾನೆಲ್ ಒಂದನ್ನು ನೋಡುತ್ತಾ ಕುಳಿತಿದ್ದಳು. ಅದರ ಜತೆ ಹಲಸಿನ ಕಾಯಿಯ ಕುರುಕಲು ಚಿಪ್ಸ್ ಹಾಗು ಮೌಂಟನ್ ಡ್ಯೂ ಸೋಡಾ ಕುಡಿಯಲು. ಫೋನ್ ರಿಂಗಣಿಸಿತು. ಸೆಕ್ಯುರಿಟಿಯವರಿಂದ ಫೋನ್ ಬಂದು ಅದರಲ್ಲಿ ಕುರಿಯರ್ ನವರು ಬಂದಿದ್ದಾರೆ, ಬಿಡುವುದು /ನಿರಾಕರಿಸುವುದು (allow/deny) ಎಂಬ option ಬಂದು, ಸಮುದ್ಯತಾ allow ಅನ್ನುವ ಗುಂಡಿಯನ್ನು ಒತ್ತಿದಳು. ಏನು ಮಾತಾಡದೆ ಹೀಗೆ ಗುಂಡಿ ಒತ್ತುವುದರ ಮೂಲಕ ಸಂಪರ್ಕದ ಬಗ್ಗೆ ಅವಳಿಗೆ ಖುಷಿ. 
ಈ ಮನೆಗೆ ಬಂದು ೫ ವರ್ಷಗಳು ಕಳೆದಿವೆ. ಸಿಕ್ಕಾಪಟ್ಟೆ ದೊಡ್ಡ ಮನೆ. ಊರಿಂದ ಸ್ವಲ್ಪ ದೂರವಾದರೂ ಎಲ್ಲ ಸೌಕರ್ಯಗಳಿದ್ದವು. ಅಪಾರ್ಟ್ಮೆಂಟ್ ಕೆಳಗಡೇನೇ ಮಾಲ್, ಜಿಮ್ ಸ್ಕೂಲ್, ಆಸ್ಪತ್ರೆ ಎಲ್ಲ ಇತ್ತು. ಆಫಿಸ್ ಪೇಟೆಗೆ ಹೋಗಲೇ ಬೇಕಿತ್ತಂದರೆ ಕಾರ್ ಇತ್ತು. ಇವರ ಮನೆ ಏನೋ interactive ಮನೆಯಂತೆ. ಹಲೋ ,ಗುಡ್ ಮಾರ್ನಿಂಗ್ ಅಂತೆಲ್ಲಾ ಮನೆ ಉಸುರುತ್ತಾನೆ ಇರುತ್ತೆ. ಒಂದು ಸಲ ಅಡಿಗೆ ಮನೆಯ ಗ್ಯಾಸ್ ಲೀಕ್ ಆದಾಗ 'mrs  ಸಮುಡ್ಯಾತಾ ದೇರ್ ಸೀಮ್ಸ್ ಟು ಬಿ ಗ್ಯಾಸ್ ಲೀಕೇಜ್ , ಕೈಂಡ್ಲಿ ಓಪನ್ ಆಲ್ ಡೋರ್ಸ್ ಅಂಡ್ ವಿಂಡೋಸ್... ಅಂತಾ ಆ ಹೆಣ್ಣು ದನಿ  ಉಲಿಯುತ್ತಾ  ಇತ್ತಲ್ಲದೆ ಸೆಕ್ಯುರಿಟಿಯವರು ಕೂಡಲೇ ಬಂದು ಚೆಕ್ ಮಾಡಿ ಹೋದರು. ಟಾಯ್ಲೆಟ್ ಗು ಕೂಡ sensors  ಅಂತ , ಬಳಸಿದ ಕೂಡಲೇ ತನ್ನ ತಾನೇ ಫ್ಲಶ್ ಆಗುತಿತ್ತು. 




ಕುರಿಯರ ನವ ಮೇಲೆ ಬಂದು ಕರೆಗಂಟೆ ಒತ್ತಿದಾಗ ನಿಧಾನಕ್ಕೆ ತನ್ನ ದಪ್ಪಮಯ್ಯನ್ನು ಸೋಫಾದಿಂದ ಎತ್ತಿಕೊಂಡು  ಹೋಗಿ ಬಾಗಿಲು ತೆಗೆದಳು. ಸಾಕಷ್ಟು ಭಾರವಾದ ಕುರಿಯರ್. ಅದನ್ನು ಇಸಿದುಕೊಂಡು , ಸೈನ್ ಹಾಕಿ ಅವನನ್ನು ಕಳುಹಿಸಿ ಬಾಗಿಲು ಹಾಕಿದಳು. ಇವತ್ತು ಆಶ್ಚರ್ಯ ಅಂದರೆ ಸಮುದ್ಯತಾಳ ಹೆಸರಿಗೆ ಕುರಿಯರ್ ಬಂದಿದ್ದು. ಸಾಧಾರಣವಾಗಿ ಅವಳ ಮಗ  ಸೊಸೆ ಕೆಲಸಕ್ಕೆ ಹೋಗುವುದರಿಂದ ಅಮೆಜಾನ್ ನಲ್ಲಿ ಏನಾದರೂ  ಖರೀದಿಸಿ , ಇಲ್ಲಿಯ ಮನೆಯ ವಿಳಾಸಕ್ಕೆ ಕಳುಹಿಸುತ್ತಿದ್ದಳು. ವಾರ್ಯಾ೦ತದಲ್ಲಿ ಮಗ ಸೊಸೆ ಮೊಮ್ಮಗ ಇಲ್ಲಿಗೆ ಬರುತ್ತಿದ್ದರು. ಶುಕ್ರವಾರ ಸಂಜೆ ಬಂದರೆ ಸೋಮವಾರ ಬೆಳಿಗ್ಗೆ ಇಲ್ಲಿಂದಲೇ ಆಫಿಸ್ ಗೆ ಹೋಗುವ ಪರಿಪಾಠ.  ಅವರಿಗೆ ಬಂದಿದ ಕುರಿಯರ್ ಅನ್ನು ಅವಳು ಯಾವತ್ತೂ ತೆರೆದಿಲ್ಲ. ಆದರೆ ಇವತ್ತು ಅವಳ ಹೆಸರಿಗೆ ಬಂದಿದ್ದರಿಂದ ಕುತೂಹಲ ತಾಳಲಾರದೆ ಪ್ಯಾಕ್ ಅನ್ನು ತೆರೆದಳು. ಅದರಲ್ಲಿ ಹೊಚ್ಚ ಹೊಸ ಮಾದರಿಯ ಮಿಕ್ಸಿ. ಅದರೊಟ್ಟಿಗೆ  ಅವಳಿಗೆ ಬಂದ ಬಹುಮಾನದ ಬಗ್ಗೆ ಅಭಿನಂದನಾ ಪತ್ರ .
*********************************************************
ಅರೆ ಯಾವಾಗಲೋ ಕಳುಹಿಸಿದ ಅಡುಗೆಗೆ ಇಷ್ಟು ಲೇಟಾಗಿಯಾದರು ಬಹುಮಾನ ಬಂದ ಬಗೆ ಖುಷಿ. ಹೊಸ ಮಾದರಿಯ ಮಿಕ್ಸಿಯಲ್ಲಿ ಆರೆಂಟು ಜಾರ್ ಗಳು. ಚಟ್ನಿ, ಹಿಟ್ಟು, ಪುಡಿ, ಸ್ಮೂದಿ , ಜ್ಯುಸ್ ವಗೈರೆ ಮಾಡಲು ಚೆಂದದ ಜಾರ್ ಗಳು .. ಹೊಸ ಮಿಕ್ಸಿ ಇಟ್ಟುಕೊಂಡು  ಹಳೆಯದನ್ನು ಅಡಿಗೆಯವಳಿಗೆ ಕೊಡುವುದೆಂದು ನಿರ್ಧರಿಸಿದಳು. 
ಸ್ಪರ್ಧೆ ಗೆ ಕಳುಹಿಸಿದ ಮೀನಿನ ಅಡುಗೆಯ ಬಗ್ಗೆ ಮನಸ್ಸು ಮೆಲುಕು ಹಾಕಿತು. 
ಸಮುದ್ಯತಾ ತುಂಬಾ ಬಡ ಕುಟುಂಬದಲ್ಲಿ ಹುಟ್ಟಿದವಳು. ಐದು ಜನ ಮಕ್ಕಳಲ್ಲಿ ಕೊನೇಯವಳು, ಅಮ್ಮನಿಗೆ ಮುಟ್ಟು  ನಿಲ್ಲುವ ಪ್ರಾಯದಲ್ಲಿ ಹುಟ್ಟಿದವಳು. ಆವಳಿಗೆ ಬುದ್ದಿ ಬರುವಷ್ಟರಲ್ಲಿ ದೊಡ್ಡ ಅಕ್ಕನಿಗೆ ಮದುವೆಯಾಗಿ ಒಂದು ಮಗು, ಹಾಗು ಅಣ್ಣನಿಗೂ ಮದುವೆಯಾಗಿ ಮಕ್ಕಳು ಹುಟ್ಟಿದ್ದವು. ಕೊನೆಯವಳು ಅಂತ ಪ್ರೀತಿ ಅಂತ ಯಾರೂ ಮಾಡುವವರಿರಲಿಲ್ಲ. ಅಷ್ಟು ಪುರುಸೊತ್ತೂ ಇರಲಿಲ್ಲ. ಮನೆ ತುಂಬಾ ಜನ ಅಪ್ಪ ಅಮ್ಮ , ಒಬ್ಬ ಅಣ್ಣನ ಕುಟುಂಬ, ಉಳಿದ ಮೂರೂ ಮಕ್ಕಳು ಮಾತ್ರವಲ್ಲದೆ ಅಜ್ಜ ಅಜ್ಜಿ ಕೂಡಾ ಮನೆಯಲ್ಲಿ. ಒಪ್ಪೊತ್ತಿನ ಊಟಕ್ಕೆ ದುಸ್ವಾರ. ಅಜ್ಜ ಹೆಸರಾಂತ   ಆಯುರ್ವೇದ ಪಂಡಿತ .ಈಗ ಮಲಗಿದ ಕಡೆ . ಅಜ್ಜಿ ಅವರ ಸೇವೆಯಲ್ಲಿ ನಿರತ.  ಅಜ್ಜ ನೀಡಿದ ಔಷಧಿಯಿಂದ ಗುಣ ಹೊಂದಿದ ಮಾರ್ವಾಡಿಯೊಬ್ಬನು ಅಜ್ಜನ ಹೆಸರಿಗೆ   ಎರಡೆಕರೆ ಜಮೀನು ಬರೆದುಕೊಟ್ಟಿದ್ದ. ಅದರಲ್ಲಿ ಮಣ್ಣಿನ ಗೋಡೆಯ ಪುಟ್ಟ ಮನೆ ಅದಕ್ಕೆ ಹುಲ್ಲಿನ ಮಾಡು. ಮನೆ ಮಂದಿ ಜಾಸ್ತಿಯಾದಾಗಲೆಲ್ಲ ಕಟ್ಟಿದ ಪುಟ್ಟ ಪುಟ್ಟ ಕೋಣೆ . ಎರಡು ಫಲವತ್ತಾದ ತೆಂಗಿನ ಮರ ಒಂದು ಹಾಲು ನೀಡುವ ಹಸು. ತೆಂಗಿನಕಾಯಿಯ ಮಾರಾಟದಿಂದ ಸ್ವಲ್ಪ ಹಣ ಕಾಸು ಒಟ್ಟಾಗುತ್ತಿತ್ತು. ಆದರೂ ಅಷ್ಟು ಜನರ ಹಸಿವನ್ನು ನೀಗಿಸಲು ಅದು ಸಾಕಾಗುತ್ತಿರಲಿಲ್ಲ. ಅಪ್ಪನಿಗೆ ಒಂದು ಪೆಟ್ಟಿಗೆ ಅಂಗಡಿ. ಮಿಠಾಯಿ, ಬೀಡಿ , ಪೆಪ್ಪರಮಿಂಟು ಇವಷ್ಟೇ ಸರಕು. ಹತ್ತಿರದಲ್ಲೇ ಶಾಲೆ ಹಾಗು ಸಿನಿಮಾ ಟಾಕೀಸು. ಬೆಳಿಗ್ಗೆ ಒಂದು ಹೊತ್ತು ಅಂಗಡಿಯಲ್ಲಿ ಕುಳಿತು ಬಂದು, ಮಧ್ಯಾಹ್ನ ಊಟ ಸಣ್ಣ ನಿದ್ದೆ, ಕಾಪಿ ಕುಡಿದಾದ ಮೇಲೆ ಪುನ: ಸಂಜೆ ಅಂಗಡಿಯ ಬಾಗಿಲು ತೆರೆದರೆ ಸಿನಿಮಾಡಾ ಕೊನೆ ಷೋ ಮುಗಿಯುವ  ತನಕ ಅಂಗಡಿಯ ಬಾಗಿಲು ತೆರೆದಿರುತ್ತಿತ್ತು. ಅದರಲ್ಲೂ ದುಡ್ಡು ಆಮೇಲೆ ಕೊಡುತ್ತೇನೆ ಎಂದು ಮೋಸ ಮಾಡುವ ಜನ. ಅಪ್ಪ ತುಂಬಾ ಸಾಧು ಸ್ವಭಾವ, ಅಮ್ಮ ಅಷ್ಟೇ ಜೋರಿನವಳು. ಬಾಯಲ್ಲಿ ಯಾವಾಗಲೂ ಬೈಗಳು ಮುಂದು. ಮದುವೆಯಾದ ಅಣ್ಣ ಅಷ್ಟೊಂದು ಚುರುಕಿಲ್ಲ . ಅವನಿಗೆ ಹಣ್ಣಿನ ವ್ಯಾಪಾರಿಯ ಬಳಿ ಮಾಲನ್ನು ಅತ್ತ ಇತ್ತ ಹೊರುವ ಕೆಲಸ. ಉಳಿದ ಅಣ್ಣ೦ದಿರಿಗೂ ವಿದ್ಯಾಭ್ಯಾಸ ಅಷ್ಟೊಂದು ಒಲಿದಿಲ್ಲ. ಅಲ್ಲಿ ಇಲ್ಲಿ ಕೂಲಿ ಆಳುಗಳಾಗಿ ಕೆಲಸ. ಸಮುದ್ಯತಾಳಿಗೆ  ಪಕ್ಕದ ಮನೆಯವರ ಒತ್ತಾಯದಿಂದ ಬಳಿಯಲ್ಲೇ ಇರುವ ಹೆಣ್ಣುಮಕ್ಕಳ ಶಾಲೆಗೇ ದಾಖಲಿಸಿದ್ದರು. 
ಬೆಳಿಗ್ಗಿನ ತಿಂಡಿಗೆ ಯಾವಾಗಲೂ ಅವಲಕ್ಕಿ ಮತ್ತು ಉಪ್ಪು ಹಾಕಿ ಬೇಯಿಸಿದ ಸಿಹಿಗೆಣಸು. ಅದರಲ್ಲೂ ಮೊದಲು ತಿನ್ನುವ ಪ್ರಾಶಸ್ತ್ಯ ಗಂಡಸರಿಗೆ. ಉಳಿದರೆ ಹೆಣ್ಣು ಮಕ್ಕಳಿಗೆ. ಸಮುದ್ಯತಾಳ  ಮುಂಚೆ ಹುಟ್ಟಿದ ವಿಠಲ ನಿಗೆ  ಯಾವಾಗಲೂ ಸಿಕು. ಮುಗಿನಿಂದ ಯಾವತ್ತೂ ಸುರಿಯುವ ಸಿಂಬಳ. ಅವನು ಬಿಟ್ಟ ಅವಲಕ್ಕಿ ಇವಳ ಪಾಲಿಗೆ. ವಾಕರಿಸಿಕೊಂಡು ಉಪಾಯವಿಲ್ಲದೆ ತಿನ್ನುತ್ತಿದ್ದಳು. ಕ್ರಮೇಣ ಅವಳಿಗೆ ಗೆಣಸು ತಿಂದರೆ ಹೊಟ್ಟೆ ನೋವು ಶುರು ಆಗುತ್ತಿತ್ತು.  ಉಳಿದ ಹೆಣ್ಣು ಮಕ್ಕಳಿಗ್ಗೆ ಬೆಳಿಗ್ಗೆ ಒಂದು ಬೆಲ್ಲದ ಕಾಪಿ ಕುಡಿದರೆ ಮಧ್ಯಾಹ್ನ ಗಂಜಿ ಊಟವೇ ಸೈ . ಅಮ್ಮ ಮೀನಿನ ಮಾರುಕಟ್ಟೆಗೆ ಹೋಗಿ ಅಲ್ಲಿ ಎಸೆದ ಪುಟ್ಟ ಭೂತಾಯಿ ಮೀನುಗಳನ್ನು ಆರಿಸಿ  ತರುತ್ತಿದ್ದಳು. ಆಗ ಪುಟ್ಟ ಭೂತಾಯಿ ಮಿನುಗಳನ್ನು  ಗೊಬ್ಬರಕ್ಕೆ ಉಪಯೋಗಿಸುತ್ತಿದ್ದರು. ಬೆಲೆ ಕೂಡ ಕಡಿಮೆಯಿತ್ತು. ಕಾಸು ಇಸಕೊಳ್ಳದೆ ಮೀನು ಮಾರುವವರು ಅಮ್ಮನಿಗೆ ಮೀನು ಕೊಡುವವರಿದ್ದರು. ಅಮ್ಮ ನ ಕೈಯಲ್ಲಿ ಏನೇ ಅಡುಗೆ ಮಾಡಿದರು ರುಚಿಯೇ ರುಚಿ. ತೆಂಗಿನಕಾಯಿ ಹೇಗೂ ಮನೆಯಲ್ಲಿ ಇರುತ್ತಿತ್ತು. . ಮಧ್ಯಾನಕ್ಕೆ  ಬಗೆ ಬಗೆಯ ಮೀನು ಸಾರು, ಒಣ ಮೀನಿನ  ಚಟ್ನಿ, ಮೀನಿನ ಫ್ರೈ ಮುಂತಾದವು ಇತ್ತು. ರಾತ್ರಿ ಪುನ: ಗಂಜಿ ತುಪ್ಪ ಉಪ್ಪಿನಕಾಯಿ. ಹಸುವಿನ ಹಾಲು ಮಾರುತ್ತಿರಲಿಲ್ಲ. ಮನೆಯವರ ಬೆಲ್ಲದ  ಕಾಪಿ, ನೀರು ಮಜ್ಜಿಗೆಗೆ ಅದು  ಸಾಕಾಗುತ್ತಿತ್ತು. 
ಸಮುದ್ಯತಾ ಚಿಕ್ಕವಳೆಂದು ಅವಳಿಗೆ ಯಾವ ಕೆಲಸವನ್ನು ಕೊಡುತ್ತಿರಲಿಲ್ಲ. ಆದರೆ ಅಡುಗೆ ಮನೆಯಲ್ಲಿ ಕುಳಿತು ಅಮ್ಮ ಮಾಡುವ ಅಡಿಗೆಗಳನ್ನು ನೋಡಿಯೇ ಕಲಿಯುತ್ತಿದ್ದಳು. ಅವರ ಮನೆಯ ಬಳಿ  ಟೀಚರ್ ಕುಟುಂಬ ವಾಸಿಸಲು ಬಂದಾಗ , ಸಮುದ್ಯತಾಕದ್ದು ಮುಚ್ಚಿ  ಅವರ ಮನೆಗೆ ಹೋಗಿ ಬರಲು ಶುರು ಮಾಡಿದಳು. ಟೀಚರ್ ಅಂದರೆ ಬಳಿಯ ಕಾಲೇಜಿಗೆ ಹೋಲಿಗೆ ಕಲಿಸುವ ಟೀಚರ್. . ಸಮುದ್ಯತಾಳಿಗೂ ಹೋಲಿಗೆ ಹಾಕುವುದನ್ನು ,ಕಲಿಸಿದಲ್ಲದೆ  ಅವಳಿಗೆ ಅವರ ಮನೆಯ ತಿಂಡಿಗಳನ್ನು ನೀಡುತ್ತಿದ್ದರು. ಆ ತಿಂಡಿಯ ಆಸೆಗೆ ಸಮುದ್ಯತಾ ಅಲ್ಲಿ ಹೆಚ್ಚ್ಚು ಸಮಯ ಕಳೆಯುತ್ತಿದ್ದಳು ಮಾತ್ರವಲ್ಲದೆ ಟೀಚರ್ ಗೆ ಬಟ್ಟೆಯ ಮೇಲೆ ಹೆಮ್ಮಿಂಗ್  , ಕುಸುರಿ ಕೆಲಸ ಎಲ್ಲ ಮಾಡಿ ಕೊಡುತ್ತಿದ್ದಳು. 
ಯಾರದೋ ಮನೆಗೆ ಮದುವೆಗೆಂದು ಹೋದಾಗ , ಬಿಳಿ ಮೈ ಬಣ್ಣದ, ಉದ್ದ ಜಡೆಯ ಚೆಂದದ  ೧೬ ವಯೋಮಾನದ ಸಮುದ್ಯತಾಳಿಗೆ ಚಂದನಕುಮಾರ ಎಂಬ ಟ್ರಾನ್ಸ್ಪೋರ್ಟ್ ಕಂಪನಿ ನಡೆಸುವ   ವರನೊಬ್ಬ ಪಸಂದು ಮಾಡಿ, ಅವರೇ ಖರ್ಚು ವೆಚ್ಚವನ್ನು ಸರಿದೂಗಿಸಿ ಮದುವೆಯೂ ಆಗಿ ಹೋಯಿತು. ಮಂಗಳೂರಿನ ಬಳಿಯ ಪುಟ್ಟ ಊರಿನಿಂದ ಸೀದಾ ಬೆಂಗಳೂರಿಗೆ. ಮನೆಯಲ್ಲಿ  ಅತ್ತೆ ಮಾವ ನಾದಿನಿ. ಕೈ ತುಂಬಾ ಓಡಾಡುವ ದುಡ್ಡು. ಮನೆಕೆಲಸಗಳಿಗೆ ಆಳು ಕಾಳು . ಹೊಟ್ಟೆ ತುಂಬಾ ತಿಂದು, ಒಳ್ಳೆಯ ಬಟ್ಟೆ ತೊಟ್ಟು, ಕಣ್ಣು ತುಂಬಾ ನಿದ್ರೆ ಮಾಡುವ ಕೆಲಸ ಸಮುದ್ಯತಾಳದ್ದು. ಮನೆಯ ಜವಾಬ್ದಾರಿ, ಇವಳ ಬಾಣಂತನ ಎಲ್ಲ ಅತ್ತೆಯ ದ್ದು. ಇವಳಿಗೆ ತವರಿನ ನೆನಪು ಬಾರದಷ್ಟು. ಮದುವೆಯಾದ ಮೇಲೆ ಒಂದೆರಡು ಬಾರಿ ತವರಿಗೆ  ಹೋಗಿ ಬಂದಿದ್ದಳಷ್ಟೆ. ಅವರೇನು ಉಪಚಾರ ಮಾಡಿ ನಿಲ್ಲಿಸಿಕೊಳ್ಳಲಿಲ್ಲ . ಹಾಗಾಗಿ ಅಲ್ಲಿನ ಸಂಪರ್ಕ ಕ್ರಮೇಣ  ತಪ್ಪಿಯೇ ಹೋಯಿತು. ಯಾರಾದರೂ ಸಂಬಂಧಿಕರು ಸಿಕ್ಕಿದರೆ ಅವರ ಬಗ್ಗೆ ತಿಳಿಯುತ್ತಿತ್ತು.
ಸಮುದ್ಯತಾಳ  ದು ವಿಚಿತ್ರ ಸ್ವಭಾವ. ಯಾವುದನ್ನೂ ಯಾರನ್ನೂ  ತೀರಾ ಹಚ್ಚಿಕೊಂಡವಳೇ ಅಲ್ಲ. ಅಪಾರ್ಟ್ಮೆಂಟ್ ನ ಇತರ ಜನಗಳೊಂದಿಗೆ ಮುಗುಳ್ನಗೆ ವಿನಿಮಿಯ. ಅವರೇನಾದರೂ ಕೇಳಿದರೆ ಉತ್ತರ. ಅವಳಾಗೆ ಯಾರನ್ನೂ ಈವರೆಗೂ ಮಾತಾಡಿಸಿಲ್ಲ. ಮನೆಯ ಆಳುಕಾಳುಗಳೊಂದಿಗೆ ಎಷ್ಟು ಬೇಕು ಅಷ್ಟೇ ಮಾತು. ತನ್ನದೇ ಪ್ರಪಂಚದಲ್ಲಿ ಇರುತ್ತಿದ್ದಳು. ಮಗ ಚಿಕ್ಕವನಿದ್ದಾಗ ಮನೆಯಲ್ಲಿ ಅತ್ತೆ ಮಾವ ನಾದಿನಿ ಇವರ ಲಾಲನೆ ಪಾಲನೆಯಲ್ಲಿ ಬೆಳೆದ. ನಾದಿನಿಗೆ ಮದುವೆಯಾಗಿ ಆಫ್ರಿಕಾಗೆ ಹೋದಳು. ಅಪರೂಪಕ್ಕೆ ಭಾರತಕ್ಕೆ ಬಂದರೂ ಹೋಟಲ್ ನಲ್ಲಿ ವಾಸ್ತವ್ಯ. ಇವರ ಮನೆಗೆ ಭೇಟಿ ನೀಡಿ , ಉಡುಗೊರೆಗಳನ್ನು ಕೊಟ್ಟು, ಆಫ್ರಿಕಾಗೆ ಬನ್ನಿ ಎಂದು ಹೇಳಿ ಹೋಗುತ್ತಿದ್ದಳು. ಈಗ ವಯಸ್ಸಾದ ಮೇಲೆ ಅದೂ ನಿಂತಿದೆ. ಅಪರೂಪಕ್ಕೆ ಫೋನ್ ನಲ್ಲಿ ಮಾತು. ಅವಳಿಗೆ ಮಕ್ಕಳಿಲ್ಲ, ಮನೆಯೆಲ್ಲ ನಾಯಿ ಬೆಕ್ಕುಗಳಿಂದ ತುಂಬಿದೆ. ಅತ್ತೆ  ಮಾವ ಈಗಿಲ್ಲ. ಮಗ ಓದಿನಲ್ಲಿ ಜಾಣ. ಯಾವುದೇ ತಂಟೆ ತಕರಾರಿಲ್ಲದೆ, ಆಳು ಕಾಳು ಗಳೊಂದಿಗೆ ಬೆಳೆದವನು.  . ಅಪ್ಪನ ಬಿಸಿನೆಸ್ ನಲ್ಲಿ ಅವನಿಗೆ ಆಸಕ್ತಿಯಿಲ್ಲ. ಸಾಫ್ಟವೆರ್ ಕಂಪನಿಯಲ್ಲಿ ಕೆಲಸ. ಅವನ ಆಫಿಸ್ ನಲ್ಲಿ ಪರಿಚಯವಾದ ರುತು ವಿನೊಂದಿಗೆ ಮದುವೆಯಾಗಿದೆ. 
ಸಮುದ್ಯತಾಳ ಗಂಡನಿಗೆ ಕೆಲಸ ಮಾತ್ರ  ಗೊತ್ತು. ಯಾವಾಗ ನೋಡಿದರೂ ಬಿಸಿನೆಸ್ ದೇ ಧ್ಯಾನ , ಫೋನು ವ್ಯವಹಾರ. ಅದು ಬಿಟ್ಟರೆ ವರ್ಷಕ್ಕೆ ಒಂದು ಬಾರಿ ಕುಟುಂಬ ಸಮೇತ ವೈಶ್ನೋದೇವಿ ಪ್ರಯಾಣ. ಮೊದಲೆಲ್ಲ ಆಫಿಸ್ ನ ಪಾರ್ಟಿ ಅಂತ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಕ್ರಮೇಣ ಸಮುದ್ಯತಾಳಿಗೆ ಬೊಜ್ಜು ಬಂದಂತೆ , ಅವಳೇ ಹೋಗಲು  ನಿರಾಕರಿಸುತ್ತಿದ್ದಳು. ಕೆಲವು commercial complex ಗಳನ್ನೂ ಖರೀದಿಸಿ ಅವನ್ನೆಲ್ಲಾ ಸಮುದ್ಯತಾಳ ಹೆಸರಿಗೆ ಮಾಡಿದ್ದಾನೆ. ಎಷ್ಟು ದುಡ್ಡು ಇದೆ, ಅದನ್ನು ಏನು ಮಾಡಬೇಕು ಇದ್ಯಾವುದರ ಬಗ್ಗೆಯೂ ಸಮುದ್ಯತಾ ತಲೆ ಕೆಡಿಸಿಕೊಂಡವಳೇ ಅಲ್ಲ. ಅದು ಬೇಕು ಇದು ಬೇಕು ಅಂತ ಕೂಡ ಕೇಳಿದವಳೇ ಅಲ್ಲ. ಬಟ್ಟೆ ಬಂಗಾರ ಯಾವುದರಲ್ಲೂ ವಿಶೇಷ ಆಸಕ್ತಿ ಕೂಡ ಇಲ್ಲ. ಅಡುಗೆ ಮಾಡಲು ಬರುತ್ತದೆಯಾದರೂ ಮನೆಯಲ್ಲಿ ಅಡುಗೆಯವಳು ಇದ್ದುದರಿಂದ ಆ ಕೆಲಸ ಕೂಡ ಇಲ್ಲ. ದಿನ ಇಡೀ ಟಿವಿ ನೋಡುವುದರಲ್ಲಿ ಸಮಯ ಕಳೆಯುತ್ತಾಳೆ 
***************************************************************************

ಹೀಗೆ ಒಂದು ದಿನ,  ಟಿ ವಿ ಯಲ್ಲಿ  ತಲೆಮಾರಿನಿಂದ ಬಳುವಳಿಯಾಗಿ  ಬಂದ , ಸಿಂಪಲ್ , ಸ್ವಾಸ್ಥ್ಯಕರ, ರುಚಿಕರ ಬೇಗ ತಯಾರಾಗುವ  ಅಡುಗೆಯ ಸ್ಪರ್ಧೆಯ ಬಗ್ಗೆ ಕೇಳಿದಾಗ, ಅವಳಿಗೆ ಅವಳ ಅಜ್ಜಿ, ಅಮ್ಮ ಮಾಡುವ ಭೂತಾಯಿ ಮೀನಿನ ಖಾದ್ಯ ನೆನಪಿಗೆ ಬಂದು ಒಂದು ಕ್ಷಣ ಬಾಯಲ್ಲಿ ನೀರೂರಿತು . ಒಂದು ಶುಕ್ರವಾರ ಮಗ ಸೊಸೆ ಬರುವಷ್ಟರಲ್ಲಿ ಅವಳು ಕೆಲಸದಾಕೆಯನ್ನು ಮೀನಿನ ಅಂಗಡಿಗೆ ಕಳುಹಿಸಿ ಮೀನಿನ ಅಡುಗೆಯನ್ನು ಮಾಡಿಟ್ಟಳು. ಗಂಡ ಮಗ ಸೊಸೆ 'ವಾವ್ ಭೇಶ ' ಅಂದಮೇಲೆ ಅವಳು ಸ್ಪರ್ಧೆಯ ಬಗ್ಗೆ ಹೇಳಿದಳು. ಸೊಸೆಯಿಂದ ತುಂಬಾ ಸಹಕಾರ ಸಿಕ್ಕಿತು,  ರೆಸಿಪಿ ಬರೆದು, ಅದನ್ನು ನೀಟಾಗಿ ಟೈಪ್ ಮಾಡಿ ಅವರು ಕೊಟ್ಟ ಈ ಮೇಲ್ ವಿಳಾಸಕ್ಕೆ ಆಕೆಯೇ ಕಳುಹಿಸಿದಳು. ಅದೇ  ಅಡುಗೆಗೆ ಬಹುಮಾನ ಬಂದಿದ್ದು ಅವಳಿಗೆ  ಖುಷಿ ಅನಿಸಿ ಮನೆ ಮಂದಿಗೆ ಹೇಳುವ ತರಾತುರಿಯಲ್ಲಿ ಇದ್ದಳು. 
  










ಸ್ಟಫ್ಡ್ ಸಾರ್ಡಿನ್ಸ್ (stuffed sardines)
ಬೇಕಾಗುವ ಸಾಮಗ್ರಿ : ೪-೫ ಸಣ್ಣ ಭೂತಾಯಿ ಮೀನು , ಕ್ಲಿನ್ ಮಾಡಿ ಉಪ್ಪು ಹಚ್ಚಿಡಿ
ಸಣ್ಣಕ್ಕೆ ಕತ್ತರಿಸಿದ -ನೀರುಳ್ಳಿ, ಎರಡು ಇಂಚು ಶುಂಠಿ , ಎರಡು  ಟೇಬಲ್ ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಹುಣಸೆ ರಸ, ಉಪ್ಪು , ಎಣ್ಣೆ , ಕೊತ್ತಂಬರಿ ಸೊಪ್ಪು
 ಮೇಲಿನ ಎಲ್ಲ ಸಾಮಾಗ್ರಿಯನ್ನು ಚೆನ್ನಾಗಿ ಮಿಶ್ರ ಮಾಡಿ, ಭೂತಾಯಿಯಲ್ಲಿ ತುಂಬಿ.
ಹತ್ತು  ನಿಮಿಷ ಇಡಿ
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದರಲ್ಲಿ ತುಂಬಿದ ಭೂತಾಯಿಗಳನ್ನು ನೀಟಾಗಿ ಜೋಡಿಸಿ. ಮುಚ್ಚಿ ಬೇಯಿಸಿ. ಎರಡು ನಿಮಿಷದ ನಂತರ ಮೀನುಗಳನ್ನು ಮಗುಚಿ ಮಸಾಲೆ ಏನಾದರೂ ಉಳಿದಲ್ಲಿ ಇದರ ಮೇಲೆ ಹಾಕಿ . ಪುನ: ಒಂದೈದು ನಿಮಿಷ ಮುಚ್ಚಿ ಬೇಯಿಸಿ
ಘಮ್ ಎನ್ನುವ ಸ್ಟಫ್ಡ್ ಸಾರ್ಡಿನ್ಸ್ ರೆಡಿ. ಕೆಳಗಿಳಿಸಿದ  ಮೇಲೆ, ಸರ್ವ್ ಮಾಡುವ ಮುನ್ನ ಕೊತ್ತಂಬರಿ ಸೊಪ್ಪು ಉದುರಿಸಿ ,
ಡ್ರಿಂಕ್ಸ್ ಜತೆ ಸ್ಟಾರ್ಟರ್ ಆಗಿ ಅಥವಾ ಬಿಸಿ ಅನ್ನದೊಂದಿಗೆ ಕಲಸಿ ತಿನ್ನುವುದು . :-) :-)
ಆವಾಗಲೆಲ್ಲ ಪ್ರೀ ಯಾಗಿ ಸಿಗುವ ಭೂತಾಯಿಗೆ ಈಗ ಎಲ್ಲಿಲ್ಲದ ಬೇಡಿಕೆ. ಮಿದುಳಿಗೆ ಒಳ್ಳೆಯದೆಂದು, ಒಮೇಗಾ -3 fatty acid ಆರೋಗ್ಯಕ್ಕೆ ಒಳ್ಳೆಯದೆಂದು ದುಬಾರಿ ಕೂಡ.
:-)


May 30, 2018

ಹೊಸ ಬಗೆ ಪರಾಠಾ

ಭಾನುವಾರ ಮನೆಗೆ ಹಲಸಿನ ಗುಜ್ಜೆ ತಂದಿದ್ವಿ. ಅದು ಹೇಗಿತ್ತೆಂದರೆ ಅತ್ತ ಕಾಯಿನೂ ಅಲ್ಲ, ಇತ್ತ ಹಣ್ಣಾಗಲು ಇನ್ನು ಸಮಯ ಇರುವಂತಹ ಸ್ಥಿತಿ. ಅದಕ್ಕೆ ಅದರ ತೊಳೆಗಳನ್ನು ಉಪ್ಪಿಗೆ ಹಾಕಿಟ್ವಿ . ಬೀಜ ಹೀಗೆ ಸಣ್ಣಕ್ಕೆ  ಶ್ರೀಕಾಂತ, ಎಲೆ ಬೀಜ ಆದ್ದರಿಂದ ಅದು ಕತ್ತರಿಸಲು ಬರುತ್ತದೆ. ಇದರಲ್ಲಿ ಸ್ವಲ್ಪ ಬೀಜದ ತುಂಡುಗಳನ್ನು ಸ್ವಲ್ಪ ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಮೂರೂ ವಿಶಲ್ ಬೇಯಿಸಿದೆ. ಆಲೂ ಪರಾಠಾ ಮಾಡುವ ಹಾಗೆ ಹಲಸಿನ ಬೀಜದ ಸ್ಟಫಿನ್ಗ್ ಮಾಡಿದೆ 
ಹಲಸಿನ ಬೀಜಗಳನ್ನು ನೀರಿಲ್ಲದೆ ಕುಕ್ಕರ್ ನಲ್ಲಿ ಬೇಯಿಸಿ. ನೀರೆನಾದರೂ ಉಳಿದರೆ ಜಾಲರಿ ಪಾತ್ರೆಯ್ಲಲಿ ಹಾಕಿ ನೀರು  ಬಸಿದು ಬಿಡಿ. ಇದಕ್ಕೆ ಸಾಸಿವೆ, ಕರಿಬೇವು, ಹಸಿಮೆಣಸಿನ ಚೂರು , ಹಿಂಗಿನ ಒಗ್ಗರಣೆ ಮತ್ತು ಅರಸಿನ ಪುಡಿ ಬೆರೆಸಿ. ಉಪ್ಪು ಹಾಕಿ  ಬೇಯಿಸಿದರಿಂದ ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಬೆರೆಸಿ. ಕೊತ್ತಂಬರಿ ಸೊಪ್ಪು ಕಟ್ ಮಾಡಿ ಬೆರೆಸಿ stuffing ತಯಾರಿಸಿ. 
ಚಪಾತಿ ಹಿಟ್ಟು ಕಲಸುವಾಗ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ಅರ್ಧ ಟಿ ಸ್ಪೂನ್ ಓ೦ಪುಡಿ (ಅಜವಾಯಿನ್) ಬೆರೆಸಿ. 
ಕೆಳಗಿನ ಚಿತ್ರಗಳಂತೆ ಪರಾಠಾ ತಯಾರಿಸಿ. 










ಇದಕ್ಕೆ ಖರ್ಜೂರ ಹುಣಸೆಹಣ್ಣಿನ ಸಿಹಿ  ಚಟ್ನಿ 
ಅಥವಾ ಕೊತ್ತಂಬರಿ ಸೊಪ್ಪು+ಪುದಿನಾ ಸೊಪ್ಪಿನ ಖಾರ ಚಟ್ನಿಯೊಂದಿಗೆ ಸರ್ವ್ ಮಾಡಿ . ಆಲೂ ಪರಾಠ ಗಿಂತ ಹೆಚ್ಚು ರುಚಿ ಅನ್ನಿಸ್ತು . 
:-)

April 24, 2018

ರೈಲ ವಡಾ

ಮೊನ್ನೆ ಟ್ರೈನ್ ನಲ್ಲಿ ವಡಾಮಾರುವವನ ಹತ್ತಿ ರ ಒಂದು ಪ್ಲೇಟ್ ವಡಾ ತೆಗೊಂಡೆ.
ಶ್ರೀಕಾಂತ್ ಅವನಿಗೆ ಬಿಸಿ ಇದೆಯಾ ಅಂತ ಕೇಳಿದರು. ಅವನು ಉತ್ತರಿಸುವಷ್ಟರಲ್ಲಿ ನಾನು ವಡಾ ಮುಟ್ಟಿ ಹಾ ಅಂತಾ ಕೈ ಮೇಲೆತ್ತಿ ಬೆರಳ ಮೇಲೆ ಊದಿದೆ.
ವಡಾ ಮಾರುವವನು 'ಅರ್ಧ ಗಂಟೆ ಮೊದಲು ಬಿಸಿ ಇತ್ತು' ಅಂತ ಬೋಂಡಾ ಮಾರುವವನು. ನಮ್ಮ ಎದುರಿಗೆ ಕೂತವರು ವಡಾ ತೆಗೊಂಡು.'ಮ್ಯಾಡಂ ಈ ವಡಾ ತಣ್ಣಗೆ ಇದೆ, ನಿಮಗೆ ಬಿಸಿ ಕೊಟ್ಟಿದ್ದಾನಾ" ಅಂತ ಕೇಳಿದರು ಪಾಪ. ನಾನು ' ಇಲ್ಲರಿ ತಮಾಷೆ ಮಾಡಿದ್ದು ಅಂದಾಗ ಅಕ್ಕ ಪಕ್ಕದಲ್ಲಿದ್ದವರು ನಗಲು ಶುರು ಮಾಡಿದರು
ತಣ್ಣಗಿದರೂ ವಡಾ ರುಚಿಯಾಗಿತ್ತು
😊😊👌

April 12, 2018

ಪಿಕ್ ನಿಕ್

ಸುಮಾರು ಸಮಯದ ನಂತರ ಮೊನ್ನೆ ಚಿತ್ರಾನ್ನ ಮಾಡಿದ್ದೆ. ಮಾಲವಿಕ ಈಗ food magazine #ಒಂದರಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಅವಳ ಮದ್ಯಾಹ್ನದ ಊಟಕ್ಕೆ ಡಬ್ಬಿ   ತೆಗೆದುಕೊಂಡು ಹೋಗುತ್ತಾಳೆ.
ಅಡುಗೆ ಮನೆಗೆ ಬಂದ ನಿಹಾ " ಅಮ್ಮ , ಚಿತ್ರಾನ್ನ ಮತ್ತು ವಾತಾವರಣ ನೋಡಿದರೆ pcnicಗೆ ಹೋಗುವಾ ಅನ್ನಿಸ್ತಿದೆ' ಅಂದ್ಲು. ಯಾಕಾಗಬಾರದು ಅಂತ ಬೇಗ ಬೇಗ ಮನೆಕೆಲಸಗಳನ್ನು ಮುಗಿಸಿ , ಡಬ್ಬಿ ಕಟ್ಟಿಕೊಂಡು ಕಬ್ಬನ್ ಪಾರ್ಕ್ ಗೆ ಹೋದೆವು. ನಿಹಾ freelance artist/ illustrator, writer . ಅವಳು ಸ್ವಲ್ಪ ಚಿತ್ರ ಬರೆದರೆ ನಾನು ಓದುತ್ತಾ ಅಲ್ಲಿನ ಆಗುಹೋಗುಗಳ ನ್ನು , ಪಕ್ಷಿಗಳನ್ನು ನೋಡುತ್ತಿದ್ದದ್ದೆ
ಕೆಲವು ಚಿತ್ರಗಳು ನಿಮಗಾಗಿ







April 6, 2018

ದಂತಕತೆ

ಮೊನ್ನೆ ಒಂದು ದಿನ  ಪೊಂಗಲ್ ಮಾಡಿದ್ದೆ. ತಿಂದಾದ ಮೇಲೆ ಒಂದಷ್ಟು ಶೆಂಗಾ  ಬಾಯಲ್ಲಿ ಹಾಕಿಕೊಂಡು  ಕಚ್ಚಿದೆ. ಎಡಬದಿಯ ಹಲ್ಲು ಕಟಕ್ ಅಂದಿದ್ದು ಮಾತ್ರವಲ್ಲ ಬೆಳಗ್ಗಿನ ೭. ೪೫ ಗೆ ನಕ್ಷತ್ರಗಳ ದರ್ಶನ ಆಯ್ತು.ಸಾವರಿಸಿಕೊಳ್ಳಲು ಸ್ವಲ್ಪ ಸಮಯ  ಹಿಡಿಯಿತು .   ಕನ್ನಡಿಯಲ್ಲಿ ಚೆಕ್ ಮಾಡಿದಾಗ ಪೆಟ್ಟಾದ ಹಲ್ಲಿನ ಬದಿಯ ದವಡೆಗೆ ಒಂದು ರಕ್ತ ತುಂಬಿದ ಕೆಂಪು ಗುಳ್ಳೆ ಎದ್ದಿತ್ತು. ನಮ್ಮ ಮನೆಯ ಬಳಿಯ ದಂತಚಿತ್ಸಾಲಯ ಓಪನ್ ಆಗೋದೇ ೧೦ ಗಂಟೆಗೆ. ನೋವಲ್ಲೇ ಎಲ್ಲ ಮನೆ ಕೆಲಸ ಬೇಗ ಬೇಗ ಮುಗಿಸಿದೆ. 
ಸ್ವಲ್ಪ ಫ್ಲ್ಯಾಷ್ಬ್ಯಾಕ್  ಗೆ ಹೋಗುವಾ, ಎರಡು ತಿಂಗಳ ಹಿಂದೆ ಹಲ್ಲು ನೋವು ಅಂತ ಡಾಕ್ಟರ್ ಬಳಿ ಹೋಗಿದ್ದೆ. ಆಗ ರೂಟ್ ಕೆನಾಲ್ ಮಾಡಿಸಬೇಕಮ್ಮ ಅಂದಿದ್ದರು. ಸರಿ ಅಂದೆ. ಎಲ್ಲರ ಹಲ್ಲಿಗೆ  ಎರಡು ನರಗಳಿದ್ದರೆ ನನ್ನ ಹಲ್ಲಿಗೆ ಮೂರು ನರಗಳಿವೆ ಅಂತ ಎಕ್ಸ್ ರೇ ನಲ್ಲಿ ಗೊತ್ತಾಯಿತು. ಎರಡು ನರಗಳು ಸುಲಭದಲ್ಲಿ ಸಿಕ್ಕರೆ ಮೂರನೇ ನರ ಸಿಗದೇ , ಪದೇ ಪದೇ ಎಕ್ಸ್ ರೇ ಮಾಡೋದು , ಲೋಕಲ್ ಅನೆಸ್ತೇಷಿಯಾ ಇಲ್ಲದೆ ನರ ಹುಡುಕೋದು ಮಾಡೋದು  ಎರಡು ದಿನ ಬಿಟ್ಟು ಬನ್ನಿ ಅನ್ನೋದು ನಡಿತಾ ಇತ್ತು. ಕೊನೆಗೆ 'ಯಾಕೋ ಆ ನರಾ ಸಿಗ್ತಾ ಇಲ್ಲ, ಇನ್ನು ಚಳಿಗಾಲ ಶುರು ಆಗುತ್ತೆ ಆಗ ನೋವು ಶುರು ಆಗುತ್ತೆ, ಆಗ ಬನ್ನಿ ನೋಡುವಾ ಅಂದ್ರು. ನಾನು ಒಳ್ಳೆ ಟೂರ್ ಎಲ್ಲ ಹಾಕ್ಕೋ೦ಡು  ಗಮ್ಮತ್ತು ತಿರುಗಾಡಿ ಬಂದೆ. ಹಲ್ಲು ನೋವು ಏನೂ ಶುರು ಆಗಲಿಲ್ಲ. ಆದರೆ ಆ ಹಲ್ಲು expose ಆಗೇ ಇತ್ತು. ಡಾಕ್ಟರ್ ಅದರಲ್ಲಿ ಸ್ವಲ್ಪ ಸಿಮೆಂಟ್ ತುಂಬಿಸಿಟ್ಟಿದ್ದರು ಅಷ್ಟೇ 
ಫ್ಲ್ಯಾಷ್ಬ್ಯಾಕ್ ಮುಗಿತು 
ಡಾಕ್ಟರ್ ಬಳಿ ಹೋದ್ರೆ ಅವರು ತುಂಬಾ ಮರುಕ ಪಟ್ರು, ಅಯ್ಯೋ ಎರಡು ತಿಂಗಳು ಬಿಟ್ಟು ಬರಬೇಕಿತ್ತು ,(ಇಷ್ಟ್ರಲ್ಲೇ ಮೂರು ತಿಂಗಳು ಆಗಿತ್ತು ) ಹಲ್ಲು fracture  ಆಗಿಬಿಟ್ಟಿದೆ, ಅಂತ ಬೇಜಾರು ಪಟ್ಟುಕೊಂಡರು. ನಾಳೆ ಸರ್ಜನ್ ಬರ್ತಾರೆ , ಹಲ್ಲು ಉಳಿಸಲಿಕ್ಕಾಗುತ್ತಾ ನೋಡುವಾ ಅಂದ್ರು. ಆದರೆ ಹಲ್ಲು ಉಳಿಸಲಿಕ್ಕಾಗಿಲ್ಲ. ಕೀಳ್  ಬಿಟ್ರು. ಒಂದು ಗಟ್ಟಿ ಹಲ್ಲು ನನ್ನ ಉಡಾಫೆಯಿಂದ ಹೋಗೆ ಬಿಡ್ತು ;-( . ಆದರೆ ಐಸ್ಕ್ರೀಮ್  ತಿನ್ನುವ ಚಾನ್ಸ್ ಸಿಗ್ತು .  ಕಾಲೇಜ್ ನಲ್ಲಿದ್ದಾಗ ಕೋಲ್ಗೆಟ್ ಕಂಪನಿ ಯವರು healthy teeth contest  ಹಮ್ಮಿಕೊಂಡಿದ್ದು,ನನಗೆ ಅದರಲ್ಲಿ ಎರಡನೇ ಪ್ರೈಜ್ ಮಾತ್ರವಲ್ಲ ಹಲವಾರು ಟೂಥ್ ಬ್ರಶ್ , ತೂಥ್ಪೇಸ್ಟ್ ಬಹುಮಾನವಾಗಿ   ಬಂದಿದ್ದು ನೆನಪಿಸಿಕೊಂಡು    ಬೇಜಾರುಪಟ್ಟುಕೊಂಡೇ. 
ಅಂದಹಾಗೆ ನಮ್ಮ ಹಲ್ಲಿನ ಡಾಕ್ಟರ್ ತೀರ್ಥಹಳ್ಳಿಯವರು. ಮತ್ತು ಖ್ಯಾತ ಸಂಗೀತಗಾರ/ಹಾಡುಗಾರರಾದ ಮನ್ನಾ ಡೇ ಅವರ ಬಳಿ ಹಲ್ಲಿನ ಉಪಚಾರಕ್ಕಾಗಿ ಬಂದ  ಫೋಟೋ ಅವರ  ರಿಸೆಪ್ಟ್ನ್ ನಲ್ಲಿ ಹಾಕಿಕೊಂಡಿದ್ದಾರೆ. 
 ಆ ಸಂಜೆ  ಊಟ ಮಾಡುವಾಗ 
ನಾನು : ಮನ್ನಾ ಡೇ ನಮ್ಮ ಡಾಕ್ಟರ್ ಹತ್ತಿರ ಹಲ್ಲು ರಿಪೇರಿ ಮಾಡಿಸಿಕೊಂಡಿದ್ದಾರೆ 
ಮಾಲವಿಕಾ : ಅವರು ತೀರಿಕೊಂಡಿದ್ದಾರಲ್ಲವಾ ?
ನಿಹಾರಿಕಾ : ಅವರ ಹತ್ತಿರ ಹಲ್ಲು ಕೀಳಿಸಿಕೊಂಡು ತೀರಿಕೊಂಡ್ರಾ ಹೇಂಗೆ .... 
:-) :-) 



March 15, 2018

Cherry blossom

ಜಪಾನ್ ನಲ್ಲಿ ಈಗ ಚೆರ್ರಿ ಬ್ಲಾಸಮ್ ಮರಗಳ ಹೂ ಅರಳುವ ಸಂಭ್ರಮ. ಇವತ್ತಿನ 'ದ ಹಿಂದು' ಪತ್ರಿಕೆ ಯಲ್ಲಿ ಈ ಕೆಳಗಿನ ಪುಟ್ಟ ಬರಹವನ್ನು ಓದಿದೆ. ನಿಹಾರಿಕೆ ಜಪಾನಿ ಭಾಷೆ ಕಲಿಯಲು ಆರಂಭಿಸಿದಾಗಲಿಂದ.ನನಗೆ ಜಪಾನಿನ ಬಗ್ಗೆ ಕುತೂಹಲ.
ಹಾಗೆ ಯೆ ಅವಳು ಬರೆದ ಈ ಚಿತ್ರ ನಿಮ್ಮೊಂದಿಗೆ ಶೇರ್ ಮಾಡುವ ಅಂತ. ತುಂಬಾ ಇಷ್ಟ ನನಗೆ ಈ ಪೈಂಟಿಂಗ್ ☺☺


ಹೊರಗೆ ಮೋಡದ ವಾತಾವರಣ. ಮಳೆಗೆ ಕಾಯುತ್ತಾ ................. ☺☺

March 3, 2018

ಪುಸ್ತಕಗಳು


ಕೆ ಟಿ ಗಟ್ಟಿ ಯವರ ಆತ್ಮಕತೆ ತೀರ ಓದಿ ಆಯ್ತು. ನಮ್ಮ ಬಗ್ಗೆ ಸಧ್ಯ ಏನೂ ಬರೆದಿಲ್ಲ. ನಾವು ಎರಡೂವರೆ ವರ್ಷ ಅವರ ಮನೆಯ ಮಾಳಿಗೆಯಲ್ಲಿ ಬಾಡಿಗೆಗಿದ್ದೆವು. 
ನಾವು ಬೆಲ್ತಂಗಡಿ ಉಜಿರೆ ಸೇರಿ ಒಟ್ಟು ೬ ವರ್ಷ ಅಲ್ಲಿ ಇದ್ದೆವು. ಬೆಳ್ತಂಗಡಿಯಲ್ಲಿ ಶ್ರೀಕಾಂತ ರೂರಲ್ ಡೆವಲಪ್ಮೆಂಟ್ ಆಫಿಸರ್ ಆಗಿದ್ರು. ಅಲ್ಲಿಂದ ಉಜಿರೆಯ ರೂಡ್ಸೆಟಿ*  ಗೆ ವರ್ಗಾವಣೆಯಾಯ್ತು. ಮಕ್ಕಳ ಪ್ರಾಥಮಿಕ ಶಿಕ್ಷಣ ಉಜಿರೆಯಲ್ಲಿ ಆಗಿದ್ದ ಕಾರಣ ನಾನೂ ಕನ್ನಡ ಕಲಿಯಲು ಉಪಯುಕ್ತವಾಯ್ತು. ಉಜಿರೆಯಲ್ಲಿ  ನಾವು ಮೊದಲಿಗಿದ್ದುದು ಶಿವಾಜಿನಗರದಲ್ಲಿ. ಅಲ್ಲಿ ಬಾಡಿಗೆಗೆ ಕೊಟ್ಟವರು ನಿವೃತ್ತಿ ಪಡೆದು ಅವರ ಮೆನ್ಗೆ ಬರುವವರಿದ್ದರಿಂದ ನಾವು ಕೆ ಟಿ ಗಟ್ಟಿಯವರ ಮನೆಗೆ ಬಾಡಿಗೆಗೆ   ನಾವು   ನೋಡಿದ್ದೇ. ಶ್ರೀಕಾಂತ  'ನಮಸ್ಕಾರ ಸರ್ ಅನ್ನೋವ್ರು. ನಗು ವಿನಿಮಯ ಮಾತ್ರ ಮಾಡುತ್ತಿದ್ದೆವು ವೀನ:ಹೆಚ್ಚು ಮಾತಾಡಿದ್ದು   ನೆನಪಿಲ್ಲ. ಶ್ರೀಕಾಂತ ನನಗೆ ಅವರು ಖ್ಯಾತ  ಬರಹಗಾರರು ಅಂತ  ಹೇಳಿದ್ದರು. ನಾನು ಮಕ್ಕಳು ಮುಂಬಯಿಗೆ ಹೋದಾಗ ನನ್ನ ಅನುಪಸ್ಥಿತಿಯಲ್ಲಿ ಶ್ರೀಕಾಂತ ಮನೆಯನ್ನು ಬದಲಾಯಿಸಿದರು. 
ನನಗೋ ಭಯ ಮಿಶ್ರಿತ ಗೌರವ. ಮಕ್ಕಳಿಗೆ ಕಟ್ಟಪ್ಪಣೆ 'ಅವರು ಬರಹಗಾರರು , ಶಬ್ದಗಿದ್ದ ಮಾಡದೆ ಸುಮ್ಮಾನಿರಬೇಕು 'ಅಂತ ಪಾಪ ಅಲ್ಲಿದ್ದ ತನಕ ಮಕ್ಕಳು  ಸುಮ್ಮನಿರುತ್ತಿದ್ದರು. ಈಗ i feel terribly bad about that' :-) 
ಕೆ,ಟಿ ಗಟ್ಟಿಯವರ ಮನೆ ಹೆಸರು 'ವನಶ್ರೀ '. ಮನೆಯ ಸುತ್ತಲೂ ತೋಟ.  ಹಸಿರಿನಿಂದ ತುಂಬಿದ್ದ ತಾಣ. ಅಷ್ಟೇ  ಮಂಗಗಳ ಕಾಟ.  ಒಂದು ದೃಶ್ಯ ಮಾತ್ರ ಮರೆಯಲಾಗುವುದಿಲ್ಲ. ನಾನು ಒಂದು ದಿನ ಬಿಸಿಲಮಚ್ಚಿನ ಮೇಲೆ ಬಟ್ಟೆಗಳನ್ನು ಒಣಗಿಸುತ್ತಾ ಇದ್ದೆ, ಗಟ್ಟಿಯವರು (ಮಕ್ಕಳಿಗೆ ಗಟ್ಟಿ ಮಾಮ  ಹಾಗಾಗಿ ನಾವು ಕೂಡ ಗಟ್ಟಿ ಮಾಮ ಅಂತಲೇ ಕರಿಯುತ್ತಿದ್ದದ್ದು. ) ಹೆಗಲ ಮೇಲೆ ಬಂದೂಕು ಹಿಡಿದುಕೊಂಡು ಸೈನಿಕರೋಪಾದಿಯಲ್ಲಿ ಆ  ಕಡೆ ತೋಟದಲ್ಲೆಲ್ಲಾ ಅಡ್ಡಾಡುತ್ತಿದ್ದರು. ' ನನಗೋ 'ಏನಾಯ್ತಪ್ಪಾ ಈವರಿಗೆ ಅಂತ ಚಿಂತೆ. . ಆಮೇಲೆ ಯಶೋದಾ ಆಂಟಿ (ಗಟ್ಟಿಯವರ ಶ್ರೀಮತಿ), 'ಅದು ಮಂಗಗಳನ್ನು ಹೆದರಿಸುವ ಉಪಾಯ'ಅಂತ  :-)
ನಮ್ಮಮನೆಯ ಎದುರಿಗೆ ಸಾಕಷ್ಟು ಜಾಗ ಇತ್ತು . ಅಲ್ಲಿ ನಾನು ಟೇಬಲ್ ಕುರ್ಚಿಗಳನ್ನು ಇಟ್ಟಿದ್ದೆ. ನನ್ನ ಝೂಲಾ ಗೆ ಕೂಡ ಜಾಗ ಇತ್ತು. ಮನೆಯ ಸುತ್ತ ಮುಟ್ಟಲು ಗಿಡ ಮರಗಳು , ದೊಡ್ಡದಾದ ಬಿರಿಂಡಾದ ಮರದ ನೆರಳು. ನಾವುಇಲ್ಲಿಹಲವಾರು ಸಲ ಗಟ್ಟಿ ಮಾಮಾನವರೊಂದಿಗೆ ಸಂಜೆ ಸ್ನಾಕ್ಸ್ ಶೇರ್ ಮಾಡಿ ಏನೇನೋ ಡಿಸ್ಕಸ್ ಮಾಡ್ತಿದ್ವಿ. ಅವರು ಬರೆದ ಹಲವು ಕಾದಂಬರಿಗಳನ್ನು ಝೂಲಾ ಮೇಲೆ ಕೂತು ಓದಿದ್ದೇನೆ, ಅವರ ಜತೆ ಕಳೆದ ಎರಡು ವರೆ ವರ್ಷ ಬೇಗ ಕಳೆದು ಹೋಯ್ತು. ಆಮೇಲೆ ಶ್ರೀಕಾಂತ ಗೆ ಉಡುಪಿಗೆ ಬದಲಿಯಾಯ್ತು.  
ಹಿಂದಿನ  ವರ್ಷ  ಅವರಿಗೆ ಕನ್ನಡ ರಾಜ್ಯೋತ್ಸವ ಅವಾರ್ಡ್ ಸಿಕ್ಕಿದೆ. ನಮಗಂತೂ ತುಂಬಾ ಖುಷಿ. ಪ್ರಶಸ್ತೀ ಪಡೆಯಲು ಬಂದಾಗ ನಮ್ಮಲ್ಲೇ ಬಂದು ಇರಿ ಅಂತ ಆಹ್ವಾನಿಸಿದ್ದೆ. ಆದರೆ ಅವರು ಕಾರಣಾಂತರಗಳಿಂದ ಪ್ರಶಸ್ತಿ ಪಡೆಯಲು ಇಲ್ಲಿಗೆ ಬರಲಿಲ್ಲ. 
ಸುಮ್ಮನೆ ನೆನಪಿಗೆ ಬಂದಿದ್ದನ್ನು ಇಲ್ಲಿ ದಾಖಲಿಸಿದ್ದೇನೆ..
ಪುಸ್ತಕ ಅವರ ಕಷ್ಟದ ಜೀವನ, ಇಥಿಯೋಪಿಯಾದಲ್ಲಿ ಅವರು ಕಳೆದ ೯ ವರ್ಷ ಬಗ್ಗೆ ಇವೆ. ಆದರೆ ನಾವು ಇದೆಲ್ಲ ಮುಖತಃ: ಕೇಳಿದ್ದರಿಂದ ಇದು ಹೊಸತು ಅನ್ನಿಸಲಿಲ. ಪುಸ್ತಕ  reprint ಆಗಿದೆ ಅಷ್ಟೇ. ನಾವು ೧೯೯೯ ರಲ್ಲಿ ಅಲ್ಲಿಂದ ಉಡುಪಿಗೆ ಹೋಗಿದ್ದು. ಆಮೇಲಿಂದೆನೂಅವರಬದುಕಲ್ಲಿ ನಡೆದಿದ್ದು  ಈ ಪುಸ್ತಕದಲ್ಲಿ ಅಪ್ಡೇಟ್ ಆಗಿಲ್ಲ.
.............................................................................xxxxxxxxxx..........................................................


ಮಂಗರಸ ಬಗ್ಗೆ ಕೇಳಿದ್ದೆ. ತಮಾಷೆಯೇನೋ ಅಂದುಕೊಂಡಿದ್ದೆ ಈ ಪುಸ್ತಕ ಮೊನ್ನೆ  ಆಕೃತಿ ಯಿಂದ ತರಿಸಿಕೊಂಡೆ.

ಚಿಕ್ಕ ಫ್ಲಾಟ್ ಗಳಲ್ಲಿ ಡೈನಿಂಗ್ ರೂಮ್ ಅಂತ ಇರೋದೇ ಕಷ್ಟ .ಅಂತದ್ದರಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ಕೂತು ಉಣ್ಣೊದು ಕಷ್ಟ. ಅದಕ್ಕೆ ಒಂದೇ ಉಪಾಯ ಅಂದ್ರೆ ರೊಟ್ಟಿಂಗ್ ಹೋಟಲು ಗಳು  ಬೆಂಗಳೂರಲ್ಲಿ ಇಂತಹ ಎರಡು ಹೋಟಲ್ ನಾನು ನೋಡಿದ್ದೇನೆ. :-)
ಪುಸ್ತಕ ಮಜವಾಗಿದೆ. ಎಲ್ಲ ತುಪ್ಪ/ಬೆಣ್ಣೆ ಯಲ್ಲಿ ಮಾಡುವ ಅಡಿಗೆಗಳು. ಕೆಲವು ಹಾಡಿಗೆಗಳ ಹೆಸರು ಹೇಳಲು ನಾಲಿಗೆ ತಿರುಗೋಲ್ಲ. 

February 20, 2018

ಜಗತ್ತು ಅಷ್ಟೊಂದು ಬದಲಾಗಿಲ್ಲ

ನಾನು ಸಂಜೆ ದಿನಾ ಮನೆ ಬಳಿಯ ಉದ್ಯಾನವನಕ್ಕೆ ವಾಕ್ ಹೋಗುತ್ತೇನೆ. ಅಲ್ಲಿ ದಿನಾ ಆಕೆಯನ್ನು ನೋಡುತ್ತಿದ್ದರೂ  ನಾನು ಮಾತಾಡಿಸಿರಲಿಲ್ಲ. ಮುಖ ಪರಿಚಯ ಇತ್ತು ಅಷ್ಟೆ. ಆ ದಿನ ಏನಾಯ್ತೆಂದರೆ ಆಕೆ ಗಾರ್ಡನ್ ನ  ಟೈಲ್ ಸ ನ ಬಿರುಕಲ್ಲಿ ಚಪ್ಪಲಿ ಸಿಕ್ಕಿಹಾಕಿಕೊಂಡು ಮುಗ್ಗ್ರಿಸುವುದರಲ್ಲಿ ಇದ್ಲು . ನಾನು ಅವರನ್ನು ನಿಧಾನ ಅಂತ ಹೇಳಿ ಅವರ ಕೈ  ಹಿಡಿದುಕೊಂಡೆ. ಥ್ಯಾಂಕ್ಸ್ ಹೇಳಿ ನಗು ವಿನಿಮಯ ಮಾಡಿಕೊಂಡ್ವಿ. ಮರುದಿನ ನನ್ನ ವಾಕ್ ಮುಗಿಸಿ ಖಾಲಿ ಇರುವ ಬೆಂಚ್ ಮೇಲೆ ಕೂತಿದ್ದೆ. ಬೇರೆಲ್ಲೂ ಜಾಗ ಇರದೇ ಆಕೆ ನನ್ನ ಬಳಿ  ಬಂದು ಕೂತಳು. ಚಿಕ್ಕ ವಯಸ್ಸು. ಹೆಸರು, ಏನು ಮಾಡ್ತಾ ಇದ್ದೀರಾ ವಗೈರೆ ಕೇಳಿದೆ. ಅವರು ಹಿಂದೂಸ್ಥಾನಿ  ಸಂಗೀತದ ಪಾಠ ಹೇಳುತ್ತಾರಂದಾಗ ನನ್ನ ಕಿವಿ ಚುರುಕಾಯಿತು. ನನ್ನ ನಿಹಾರಿಕಾ ಹಿಂದೂಸ್ಥಾನಿ ಸಂಗೀತ ಕಲಿತಿದ್ದಾಳೆ ಅಂದೆ. ಇವರು ಪಾಠ ಕಲಿಸುವ ಜಾಗ ಹತ್ತಿರವಿದ್ದಲ್ಲಿ ನಿಹಾ ಗೆ ಅಲ್ಲಿ ಹೋಗಲು ಹೇಳುವ ಅಂದಾಜು  ನನ್ನದು,ಯಾಕೆಂದರೆ ಈಗಾಗಲೇ ಕಲಿಯುತ್ತಿರುವ ಟೀಚರ್ ಇನ್ನು ಸ್ವಲ್ಪ ದಿನದಲ್ಲಿ ಹೆರಿಗೆಗೆ ಅವರ ತವರು ಮನೆಗೆ ತೆರಳುವವರಿದ್ದರು. 
"ಇಲ್ಲ ಮ್ಯಾಡಂ ನನಗೆ ಮನೆಯಲ್ಲಿ ಪಾಠ ಹೇಳಿ ಕೊಡುವ ಪರ್ಮಿಶನ್ ಇಲ್ಲ ಅಂದ್ರು. ನಾನು ಸರಿ, ಹೋಗ್ಲಿ ಬಿಡಿ ಅಂತ ಸುಮ್ಮನಾದೆ. ಅವರೇ ಮುಂದುವರೆಸಿ , ನನ್ನ ನೋಡಿದರೆ ನನ್ನನ್ನು  ಖ್ಯಾತ ಹಿಂದೂಸ್ಥಾನಿ ಗಾಯಕಿ ************ ಅವರ ತಂಗಿ ತರಹ ಕಾಣ್ತೀನಾ  ಅಂತ ಕೇಳಿ . ಅವಳ ಅಕ್ಕನ  ಹೆಸರು ಕೇಳಿ ನನ್ನ ಹುಬ್ಬು ಹಣೆಗೆ ಅಂಟಿ ಕೂರಲಿಲ್ಲ ಸಧ್ಯ . ಅಷ್ಟೊಂದು ಅವಾಕ್ಕಾಗಿ 'ಹೌದಾ  ssssss' ಅಂತ ರಾಗ ಎಳೆದೆ. 
ಹೌದು ಮ್ಯಾಡಂ . ತಂದೆ ತಾಯಿ ನಮಗಿಬ್ಬರಿಗೂ ಒಂದೆ ತರಹ ಕಲೀಸಿದ್ದು. ಈಗ ಆಕೆಯನ್ನು ನೋಡಿ. ದೇಶ ವಿದೇಶಕ್ಕೆಲ ಹೋಗಿ ಕನ್ಸರ್ಟ್ ಕೊಟ್ಟು ಬರುತ್ತಾಳೆ. ಒಂದು ದಿನಾ ನೂ ಫ್ರೀ ಇರಲ್ಲ.  ಮನೆಯಲ್ಲೂ ಸಪೋರ್ಟ್ ಕೂಡ. ನಮ್ಮವರು ಶಾಲೆಯಲ್ಲಿ ಆರ್ಟ್ಸ್ ಟೀಚರ್. ಆವಾಗಾವಾಗ ಪೈಟಿಂಗ್ಸ್ ಎಲ್ಲ ಮಾಡಿ ಮಾರ್ತಾರೆ. ಮನೆಯಲ್ಲಿ ಅತ್ತೆ ಮಾವ. ನನಗಿಬ್ಬರು ಪುಟ್ಟ   ಮಕ್ಕಳು. ಹಣಕಾಸಿನ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ನಾನು ಸಂಗೀತದ ಪಾಠ ಹೇಳಿ ಸ್ವಲ್ಪ ಹೆಚ್ಚಿಗೆ ದುಡಿಯಬಹುದು. ಅಕ್ಕ ನನಗೆ ನನ್ನ ಸ್ವಂತ ಮ್ಯುಸಿಕ್ ಕ್ಲಾಸ್ ಮಾಡಿಸಿಕೊಡಲು ರೆಡಿ ಯಿದ್ದಾಳೆ.  ಆದರೆ ಸಂಜೆ ಆ ಮ್ಯೂಸಿಕ್ ಕ್ಲಾಸ್ ಗೆ ಹೋಗಿ , ಅದೂ ವಾರದಲ್ಲಿ ಮೂರು ದಿನ ಮಾತ್ರ ಸಂಗೀತದ ಪಾಠ ಹೇಳಲು ನನಗೆ ಪರ್ಮಿಶನ್. . ಅದಕ್ಕೂ ಕಂಡೀಶನ್. ನಾನು ಮನೆ ಕೆಲಸ ಎಲ್ಲ ಮುಗಿಸಿ, ಮಕ್ಕಳನ್ನೂ ಕರೆದು  ಕೊಂಡು ಹೋಗ ಬೇಕು . ಮಕ್ಕಳನ್ನು ಅವರು ನೋಡಿಕೊಳ್ಳುವುದಿಲ್ಲವಂತೆ. ಹಾಗಾಗಿ ಬೇರೆಯವರ ಮನೆಗೆ ಹೋಗಿ ಸಂಗೀತದ ಪಾಠ ಹೇಳಲೂ ಬರುವುದಿಲ್ಲ. ತುಂಬಾ ಚಿಕ್ಕ ಮಕ್ಕಳು ನನಗೆ, ಅಂತ ಅಲ್ಲೇ ಮರಳಲ್ಲಿ ಇತರ ಮಕ್ಕಳ ಜತೆ ಆಟ ಆಡುವ ಆಕೆಯ ಮಕ್ಕಳನ್ನು ತೋರಿಸಿದಳು.  ಅತ್ತೆ ಮಾವ ತುಂಬಾ ವಯಸ್ಸಾದವರಾ? ಅಂತ ಕೇಳಿದೆ. "ಇಲ್ಲ ಮೇಡಂ ಗಟ್ಟಿ ಮುಟ್ಟಾಗಿದ್ದಾರೆ ಅಂದ್ಲು. ಮತ್ತು ಅಕ್ಕನ ಸಂಗೀತ ಕಚೇರಿಗೂ ಹೋಗಲೂ ಅಷ್ಟಾಗಿ ಪರ್ಮಿಶನ್ ಇಲ್ಲ."
ಜಗತ್ತು ಎಷ್ಟೇ ಮುಂದುವರೆದ್ರೂ ಕೆಲವು ಸಂಕುಚಿತ ಮನೋಭಾವಗಳು ಬದಲಾಗಲ್ಲ   ಅನ್ನಿಸ್ತು. 
ಇರಲಿ ಬಿಡಿ ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಹೆಚ್ಚಿನ ಪಾಠ ಮಾಡಿ. ಮತ್ತು ಅಷ್ಟು ನಿರಾಸೆಯಿಂದ   ಮಾತನಾಡಬೇಡಿ. ಯಾಕೆಂದರೆ ನೀವು ಹೋಗುವ ಮ್ಯುಸಿಕ್ ಕ್ಲಾಸಿನ ಮಾಲೀಕರು ಒಳ್ಳೆಯವರಲ್ಲವೇ?  ಅವರು  ನಿಮ್ಮ ಜತೆ ಮಕ್ಕಳನ್ನು ಕರೆತರುವುದಕ್ಕೆ ಬೇಡ  ಅಂದಿಲ್ಲವಲ್ಲ. ಮುಂದೆ  ಒಳ್ಳೆಯದಾಗುತ್ತೆ ಅಂತ ಹೇಳಿ ಕಳಿಸಿದೆ. 
ಆದರೆ ಅವರ ಅಕ್ಕನ ಬಗ್ಗೆ ಕೇಳಿ ಮಾತ್ರ  ತಲೆ ಗಿರ್ರ್ರ್ ಅಂದಿದ್ದು ಸುಳ್ಳಲ್ಲ. 

February 16, 2018

ಒಂದು ಬೊಂಡದ ಕತೆ


ಟೂರ್ ಎಲ್ಲ ಹೋಗಿ ಬಂದ್ವಿ. ನಮ್ಮ ಮಿತ್ರರು ಹಾಗು ಕಲೀಗ್ ಸಾಲಿಮಠರ ಮಗನ ಮದುವೆ ಇತ್ತು.  ಟೂರ್ ಹೋಗಿ ಬಂದ  ಮೇಲೆ ಯೂರಿನರಿ ಇನ್ಫೆಕ್ಷನ್ ಆಯ್ತು. ಅದಕ್ಕೆ ಎಳನೀರು ಕುಡಿಯಲು ಹೋಗಿದ್ದೆ. ಹಲವಾರು ವರ್ಷದ ಹಿಂದೆ ನಡೆದ ಈ ಘಟನೆ ನೆನಪಾಯ್ತು. 

ಆಗ ನಾವು ಮಹಾಲಕ್ಷ್ಮಿಪುರಂ ನಲ್ಲಿ ಬಾಡಿಗೆ ಮನೆಯಲ್ಲಿಇದ್ವಿ. ಮೋದಿ ಕಣ್ಣಿನ ಆಸ್ಪತ್ರೆ ಬಳಿ ವಾಕ್ ಹೋಗಿದ್ವಿ. ಅಲ್ಲಿ ಒಬ್ಬ ಎಳನೀರು ಮಾರುವವನಿದ್ದ. ಶ್ರೀಕಾಂತ ಅಲ್ಲಿ ಯಾವಾಗ್ಲೂ ಎಳನೀರು ಕುಡಿತಿದ್ರು. ಆ ದಿನ ಹಾಗೆಯೇ ವಾಕ್ ಹೋಗಿ ಎಳನೀರಿನವನ ಬಳಿ ಹೋದ್ವಿ. ತುಂಬಾ ರಶ್ ಇತ್ತು. ಅವನು ಒಂದು ಎಳನೀರು ಕಟ್ ಮಾಡಬೇಕಾದ್ರೆ ಕಾಯಿ ಜಾರಿ ಅವನ ಹೆಬ್ಬೆರಳ  ಸುಮಾರು ಭಾಗ ಕೆತ್ತಿ  ಹೋಯ್ತು. ಸ್ವಲ್ಪ ಹೊತ್ತು ಒತ್ತಿ ಹಿಡಿದ್ರು ರಕ್ತಸ್ರಾವ ನಿಲ್ಲಲಿಲ್ಲ. ನಾನು ಅವನಿಗೆ 'ನೀವು ಡಾಕ್ಟರ್ ಗೆ ತೋರಿಸಿ, ಟೆಟಾನಸ್ , ಹೋಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು  ಬನ್ನಿ ' ನಾವು ಇಲ್ಲಿ ಕಾಯುತ್ತೇವೆ  ಅಂದೆ.  ಅಲ್ಲೇ  ಹಲವಾರು ಡಾಕ್ಟರ್  ಶಾಪ್ ಗಳಿವೆ. ಅವನು ಆಯ್ತು  ಅಂತ ಹೋದ. ನಾನು ಶ್ರೀಕಾಂತ್ ಆ ಹುಡುಗ ಬರುವ ತನಕ ಎಳನೀರು ವ್ಯಪಾರ ಮಾಡಿದ್ವಿ. ಸುಮಾರುಹೊತ್ತು ಆಯ್ತು ಅವನಿಗೆ ಡಾಕ್ಟರ್ ಬಳಿ. ಅವನು ಬರುವಷ್ಟರಲ್ಲಿ ಸುಮಾರು ವ್ಯಾಪಾರ ಮಾಡಿದ್ವಿ. :-)

ಮೊನ್ನೆ ಇದನ್ನೆಲ್ಲಾ ನೆನೆದು ,ಇದರ ಬಗ್ಗೆ ಬರೀತೀನಿ, ಫೋಟೋ ಗೆ ಪೋಸ್ ಕೊಡು ಅಂತ ನಿಹಾ ಳ ಫೋಟೋ ತೆಗೆದೆ . ನಂಬುತ್ತೀರಾ ಇಲ್ಲವಾ, ಅವನೂ  ಕೈಗೆ ಗಾಯ ಮಾಡಿಕೊಂಡ. ಆದರೆ ಅವಂಗೆ ಸಹಾಯಕರಿದ್ದರು ಹಾಗಾಗಿ ನಾವು ವ್ಯಾಪಾರ ಮಾಡುವ ಪ್ರಮೇಯ ಬರಲಿಲ್ಲ. 

ನಮ್ಮ ಮನೆಯಿಂದ ಫೋರಂ ಮಾಲ್ ಗೆ ನಡೆದುಕೊಂಡು ಹೋಗ ಬಹುದು. ಕೆಲವೊಮ್ಮೆ ರಿಕ್ಷಾ ದವರು ಮಿನಿಮಮ್ ಅಂತ ಬರೋದೇ ಇಲ್ಲ. ಆದಿನ ಹಾಗೆ ಆಯ್ತು. ಕೇಕ್ಗೆ  ಬೇಕಾಗುವ ಸಾಮಗ್ರಿ ತರಲು ಹೋಗಿದ್ವಿ. ರಿಕ್ಷಾ ದವರು ಬರಲಿಲ್ಲ. ನಿಧಾನವಾಗಿ ನಡೆದುಕೊಂಡು ಬರ್ತಾ ಇದ್ವಿ. ನಾನು ನೀರಿನ ಬಾಟಲ್ ತರಲು ಮರೆತಿದ್ದೆ. ಸೆಕೆ ಬೇರೆ. ಹಾಗಾಗಿ ಒಂದು ಎಳನೀರು ಕುಡಿದ್ವಿ. ಅದರಲ್ಲಿ ತುಂಬಾ ಗಂಜಿ ಇತ್ತು. ತಿನ್ನೋದು ಬೇಡ ವಾಗಿತ್ತು ಹಾಗಾಗಿ 'ಹಾಗೆ ಕೊಡಿ ಮನೆಗೆ ಹೋಗಿ ಕಟ್ ಮಾಡ್ತೇನೆ/ ಅಂದೆ. ನಿಮಗೆ ಕಟ್ ಮಾಡಕ್ಕೆ ಬರುತ್ತಾ ಅಂತ ಕೇಳಿದ ಎಳನೀರು ಮಾರುವವ. ನಿಹಾ 'ಹೌದು , ನಮ್ಮಮ್ಮನಿಗೆ ಎಲ್ಲಾ ಬರುತ್ತೆ 'ಅಂದ್ಲು. ಅವನು ನಗುತ್ತಾ ' ಎಷ್ಟು ಖುಷಿಯಾಯ್ತು ಮೇಡಂ ಕೇಳಿ, ಗಂಡಸರೇ ಇಂತಾ ಮಾತು ಹೇಳಲ್ಲಾ ' ಅಂದ  ನಾನು ಇಲ್ಲದ ಮೀಸೆಯಡಿ ನಗುತ್ತಾ ಮನೆಗೆ ವಾಪಸ್ ಆದೆ. 
:-)  


February 9, 2018

Niha's illustrations

The book with Niharika's illustration is finally out. I am so very proud iof her!!