ಕೆ ಟಿ ಗಟ್ಟಿ ಯವರ ಆತ್ಮಕತೆ ತೀರ ಓದಿ ಆಯ್ತು. ನಮ್ಮ ಬಗ್ಗೆ ಸಧ್ಯ ಏನೂ ಬರೆದಿಲ್ಲ. ನಾವು ಎರಡೂವರೆ ವರ್ಷ ಅವರ ಮನೆಯ ಮಾಳಿಗೆಯಲ್ಲಿ ಬಾಡಿಗೆಗಿದ್ದೆವು.
ನಾವು ಬೆಲ್ತಂಗಡಿ ಉಜಿರೆ ಸೇರಿ ಒಟ್ಟು ೬ ವರ್ಷ ಅಲ್ಲಿ ಇದ್ದೆವು. ಬೆಳ್ತಂಗಡಿಯಲ್ಲಿ ಶ್ರೀಕಾಂತ ರೂರಲ್ ಡೆವಲಪ್ಮೆಂಟ್ ಆಫಿಸರ್ ಆಗಿದ್ರು. ಅಲ್ಲಿಂದ ಉಜಿರೆಯ ರೂಡ್ಸೆಟಿ* ಗೆ ವರ್ಗಾವಣೆಯಾಯ್ತು. ಮಕ್ಕಳ ಪ್ರಾಥಮಿಕ ಶಿಕ್ಷಣ ಉಜಿರೆಯಲ್ಲಿ ಆಗಿದ್ದ ಕಾರಣ ನಾನೂ ಕನ್ನಡ ಕಲಿಯಲು ಉಪಯುಕ್ತವಾಯ್ತು. ಉಜಿರೆಯಲ್ಲಿ ನಾವು ಮೊದಲಿಗಿದ್ದುದು ಶಿವಾಜಿನಗರದಲ್ಲಿ. ಅಲ್ಲಿ ಬಾಡಿಗೆಗೆ ಕೊಟ್ಟವರು ನಿವೃತ್ತಿ ಪಡೆದು ಅವರ ಮೆನ್ಗೆ ಬರುವವರಿದ್ದರಿಂದ ನಾವು ಕೆ ಟಿ ಗಟ್ಟಿಯವರ ಮನೆಗೆ ಬಾಡಿಗೆಗೆ ನಾವು ನೋಡಿದ್ದೇ. ಶ್ರೀಕಾಂತ 'ನಮಸ್ಕಾರ ಸರ್ ಅನ್ನೋವ್ರು. ನಗು ವಿನಿಮಯ ಮಾತ್ರ ಮಾಡುತ್ತಿದ್ದೆವು ವೀನ:ಹೆಚ್ಚು ಮಾತಾಡಿದ್ದು ನೆನಪಿಲ್ಲ. ಶ್ರೀಕಾಂತ ನನಗೆ ಅವರು ಖ್ಯಾತ ಬರಹಗಾರರು ಅಂತ ಹೇಳಿದ್ದರು. ನಾನು ಮಕ್ಕಳು ಮುಂಬಯಿಗೆ ಹೋದಾಗ ನನ್ನ ಅನುಪಸ್ಥಿತಿಯಲ್ಲಿ ಶ್ರೀಕಾಂತ ಮನೆಯನ್ನು ಬದಲಾಯಿಸಿದರು.
ನನಗೋ ಭಯ ಮಿಶ್ರಿತ ಗೌರವ. ಮಕ್ಕಳಿಗೆ ಕಟ್ಟಪ್ಪಣೆ 'ಅವರು ಬರಹಗಾರರು , ಶಬ್ದಗಿದ್ದ ಮಾಡದೆ ಸುಮ್ಮಾನಿರಬೇಕು 'ಅಂತ ಪಾಪ ಅಲ್ಲಿದ್ದ ತನಕ ಮಕ್ಕಳು ಸುಮ್ಮನಿರುತ್ತಿದ್ದರು. ಈಗ i feel terribly bad about that' :-)
ಕೆ,ಟಿ ಗಟ್ಟಿಯವರ ಮನೆ ಹೆಸರು 'ವನಶ್ರೀ '. ಮನೆಯ ಸುತ್ತಲೂ ತೋಟ. ಹಸಿರಿನಿಂದ ತುಂಬಿದ್ದ ತಾಣ. ಅಷ್ಟೇ ಮಂಗಗಳ ಕಾಟ. ಒಂದು ದೃಶ್ಯ ಮಾತ್ರ ಮರೆಯಲಾಗುವುದಿಲ್ಲ. ನಾನು ಒಂದು ದಿನ ಬಿಸಿಲಮಚ್ಚಿನ ಮೇಲೆ ಬಟ್ಟೆಗಳನ್ನು ಒಣಗಿಸುತ್ತಾ ಇದ್ದೆ, ಗಟ್ಟಿಯವರು (ಮಕ್ಕಳಿಗೆ ಗಟ್ಟಿ ಮಾಮ ಹಾಗಾಗಿ ನಾವು ಕೂಡ ಗಟ್ಟಿ ಮಾಮ ಅಂತಲೇ ಕರಿಯುತ್ತಿದ್ದದ್ದು. ) ಹೆಗಲ ಮೇಲೆ ಬಂದೂಕು ಹಿಡಿದುಕೊಂಡು ಸೈನಿಕರೋಪಾದಿಯಲ್ಲಿ ಆ ಕಡೆ ತೋಟದಲ್ಲೆಲ್ಲಾ ಅಡ್ಡಾಡುತ್ತಿದ್ದರು. ' ನನಗೋ 'ಏನಾಯ್ತಪ್ಪಾ ಈವರಿಗೆ ಅಂತ ಚಿಂತೆ. . ಆಮೇಲೆ ಯಶೋದಾ ಆಂಟಿ (ಗಟ್ಟಿಯವರ ಶ್ರೀಮತಿ), 'ಅದು ಮಂಗಗಳನ್ನು ಹೆದರಿಸುವ ಉಪಾಯ'ಅಂತ :-)
ನಮ್ಮಮನೆಯ ಎದುರಿಗೆ ಸಾಕಷ್ಟು ಜಾಗ ಇತ್ತು . ಅಲ್ಲಿ ನಾನು ಟೇಬಲ್ ಕುರ್ಚಿಗಳನ್ನು ಇಟ್ಟಿದ್ದೆ. ನನ್ನ ಝೂಲಾ ಗೆ ಕೂಡ ಜಾಗ ಇತ್ತು. ಮನೆಯ ಸುತ್ತ ಮುಟ್ಟಲು ಗಿಡ ಮರಗಳು , ದೊಡ್ಡದಾದ ಬಿರಿಂಡಾದ ಮರದ ನೆರಳು. ನಾವುಇಲ್ಲಿಹಲವಾರು ಸಲ ಗಟ್ಟಿ ಮಾಮಾನವರೊಂದಿಗೆ ಸಂಜೆ ಸ್ನಾಕ್ಸ್ ಶೇರ್ ಮಾಡಿ ಏನೇನೋ ಡಿಸ್ಕಸ್ ಮಾಡ್ತಿದ್ವಿ. ಅವರು ಬರೆದ ಹಲವು ಕಾದಂಬರಿಗಳನ್ನು ಝೂಲಾ ಮೇಲೆ ಕೂತು ಓದಿದ್ದೇನೆ, ಅವರ ಜತೆ ಕಳೆದ ಎರಡು ವರೆ ವರ್ಷ ಬೇಗ ಕಳೆದು ಹೋಯ್ತು. ಆಮೇಲೆ ಶ್ರೀಕಾಂತ ಗೆ ಉಡುಪಿಗೆ ಬದಲಿಯಾಯ್ತು.
ಹಿಂದಿನ ವರ್ಷ ಅವರಿಗೆ ಕನ್ನಡ ರಾಜ್ಯೋತ್ಸವ ಅವಾರ್ಡ್ ಸಿಕ್ಕಿದೆ. ನಮಗಂತೂ ತುಂಬಾ ಖುಷಿ. ಪ್ರಶಸ್ತೀ ಪಡೆಯಲು ಬಂದಾಗ ನಮ್ಮಲ್ಲೇ ಬಂದು ಇರಿ ಅಂತ ಆಹ್ವಾನಿಸಿದ್ದೆ. ಆದರೆ ಅವರು ಕಾರಣಾಂತರಗಳಿಂದ ಪ್ರಶಸ್ತಿ ಪಡೆಯಲು ಇಲ್ಲಿಗೆ ಬರಲಿಲ್ಲ.
ಸುಮ್ಮನೆ ನೆನಪಿಗೆ ಬಂದಿದ್ದನ್ನು ಇಲ್ಲಿ ದಾಖಲಿಸಿದ್ದೇನೆ..
ಪುಸ್ತಕ ಅವರ ಕಷ್ಟದ ಜೀವನ, ಇಥಿಯೋಪಿಯಾದಲ್ಲಿ ಅವರು ಕಳೆದ ೯ ವರ್ಷ ಬಗ್ಗೆ ಇವೆ. ಆದರೆ ನಾವು ಇದೆಲ್ಲ ಮುಖತಃ: ಕೇಳಿದ್ದರಿಂದ ಇದು ಹೊಸತು ಅನ್ನಿಸಲಿಲ. ಪುಸ್ತಕ reprint ಆಗಿದೆ ಅಷ್ಟೇ. ನಾವು ೧೯೯೯ ರಲ್ಲಿ ಅಲ್ಲಿಂದ ಉಡುಪಿಗೆ ಹೋಗಿದ್ದು. ಆಮೇಲಿಂದೆನೂಅವರಬದುಕಲ್ಲಿ ನಡೆದಿದ್ದು ಈ ಪುಸ್ತಕದಲ್ಲಿ ಅಪ್ಡೇಟ್ ಆಗಿಲ್ಲ.
.............................................................................xxxxxxxxxx..........................................................
ಮಂಗರಸ ಬಗ್ಗೆ ಕೇಳಿದ್ದೆ. ತಮಾಷೆಯೇನೋ ಅಂದುಕೊಂಡಿದ್ದೆ ಈ ಪುಸ್ತಕ ಮೊನ್ನೆ ಆಕೃತಿ ಯಿಂದ ತರಿಸಿಕೊಂಡೆ.
ಚಿಕ್ಕ ಫ್ಲಾಟ್ ಗಳಲ್ಲಿ ಡೈನಿಂಗ್ ರೂಮ್ ಅಂತ ಇರೋದೇ ಕಷ್ಟ .ಅಂತದ್ದರಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ಕೂತು ಉಣ್ಣೊದು ಕಷ್ಟ. ಅದಕ್ಕೆ ಒಂದೇ ಉಪಾಯ ಅಂದ್ರೆ ರೊಟ್ಟಿಂಗ್ ಹೋಟಲು ಗಳು ಬೆಂಗಳೂರಲ್ಲಿ ಇಂತಹ ಎರಡು ಹೋಟಲ್ ನಾನು ನೋಡಿದ್ದೇನೆ. :-)
ಪುಸ್ತಕ ಮಜವಾಗಿದೆ. ಎಲ್ಲ ತುಪ್ಪ/ಬೆಣ್ಣೆ ಯಲ್ಲಿ ಮಾಡುವ ಅಡಿಗೆಗಳು. ಕೆಲವು ಹಾಡಿಗೆಗಳ ಹೆಸರು ಹೇಳಲು ನಾಲಿಗೆ ತಿರುಗೋಲ್ಲ.