ಮೊದಲೆಲ್ಲ ಒಂದು ಡಿಗ್ರಿ ಅಂತ ಆದ ಮೇಲೆ, ಇನ್ನು ಓದು ಮುಗೀತು, ಮದ್ವೆ ಮಾಡಿ ಬಿಡೋದು ಅಂತ ಮಾತಾಡಿಕೊಳ್ಳುದ್ದರು. (ನನ್ನ ಡಿಗ್ರಿ ಮುಗಿಯೋ ಮುಂಚೆನೇ ಮದುವೆ ಮಾಡಿ ಬಿಟ್ರು).ಇನ್ನು ಕೆಲವರ ಮನೆಯಲ್ಲಿ...ನೀನೇನು ಕೆಲಸಕ್ಕೆ ಹೋಗಬೇಕಾ? ಒಂದು ಆರ್ಟ್ಸ್ ಅಲ್ಲಿ ಬಿ ಎ ಮಾಡಿದ್ರೆ ಸಾಕು ಅನ್ನೋವ್ರು.
ಓದು ಮುಗಿಯುವುದುಂಟಾ? ನಮ್ಮ ತಂದೆ ಅವರ 40 ನೆ ವಯಸ್ದಿಗೆ ಹಿಂದಿ M A ಮಾಡಿದ್ದರು (ಅಮ್ಮ ಏನಾದರೂ ಅರ್ಥವಾಗದ ಹಿಂದಿ ಪದಕ್ಕೆ ಅರ್ಥ ಕೇಳಿದರೆ ನನಗೊತ್ತಿಲ್ಲ ಎನ್ನುತ್ತಿದ್ದರು. ಆಗ ಅಮ್ಮ ಅದೇನು ಹಿಂದಿ ಎಮ್ಮೆ ನೋ ಕೋಣನೊ ಮಾಡಿ ಏನು ಪ್ರಯೋಜನ ಅಂತಿದ್ದರು 😃)
ನನ್ನ ಮಕ್ಕಳಿಗೆ ನಾನು ಹೇಳಿದ್ದೆ...ಎಲ್ಲ ಟ್ರೈ ಮಾಡಿ.. ವಿಜ್ನ್ಯಾನ , commerce, arts ಎಲ್ಲ ಟ್ರೈ ಮಾಡಿ ಅಂದಿದ್ದೆ...ಸಮಯ ತೆಗೊಳ್ಳಿ, ಅಮೇಲೆ ಆಯ್ಕೆ ಮಾಡಿ ಅಂತ. ನಿಹಾ ಹಾಗಾಗಿ ಎರಡು ಸಲ gap year ತೆಗೊಂಡಳು. ಪಿ ಯು ಆದ ಮೇಲೆ. ಮತ್ತು graduation ಆದ ಮೇಲೆ ಕೆಲಸ ಮಾಡಿದ್ಲು, ಸೋಲೊ ಟ್ರಾವೆಲ್ ಮಾಡಿದ್ಲು...ಆಮೇಲೆ ಮಕ್ಕಳ ಪುಸ್ತಕಕ್ಕೆ illustrator ಆಗೋದು ಅಂತ decide ಮಾಡಿ ಜೀವನ ಸಾಗಿಸುತ್ತಿದ್ದಾಳೆ.
ಅವಳ ಸ್ನೇಹಿತರೆಲ್ಲ ನನಗೆ cool mom ಬಿರುದು ಕೊಟ್ಟಿದ್ದಾರೆ. But it has nothing to do with being a cool mom...this is way it should be alwaa?
ಅವಳು ಆರ್ಟ್ಸ್ ತೆಗೊಂಡಳು 10th ಆದಮೇಲೆ, ಅದಕ್ಕೆ
ಎಷ್ಟೋ ಜನ 10th ಅಲ್ಲಿ ಎಷ್ಟು ಮಾರ್ಕ್ಸ್ ಅಂತಲೂ ಕೇಳ್ತಾರೆ...ಅವಳು 8 ನೆ ಕ್ಲಾಸ್ ನಲ್ಲಿದ್ದಾಗಲೇ ಆರ್ಟ್ಸ್ stream ನಲ್ಲಿ ಓದೋದು ಅಂತ ನಿರ್ಧರಿಸಿದ್ದಳು.
ಇಲ್ಲಿ ಒಂದು ಪ್ರಸಂಗ ಶೇರ್ ಮಾಡ್ಲೆ ಬೇಕು
ಪ್ರತಿಷ್ಠಿತ ಕಾಲೇಜು ಒಂದರಲ್ಲಿ admission ಗಾಗಿ ನಿಂತಿದ್ವಿ...ದೊಡ್ಡ ಸಾಲು. ಹಳೆ ವಿದ್ಯಾರ್ಥಿಗಳೇ volunteers ಆಗಿ ಫಾರ್ಮ್ ಎಲ್ಲ ಸರಿಯಾಗಿ fill ಮಾಡಿದಾರಾ ಇಲ್ವಾ ಅಂತ ಚೆಕ್ ಮಾಡಿ ಮುಂದಿನ ಲೆವೆಲ್ ಗೆ ಕಳಿಸ್ತಾ ಇದ್ರು. ಸಡನ್ ಆಗಿ anybody here who has scored more than 80 ℅ please raise your hands ಅಂದ್ರು. ನಿಹಾ ಕೈ ಎತ್ತಿದ್ಲು. ಹತ್ತಿರಕ್ಕೆ ಬಂದು ಚೆಕ್ ಮಾಡಿ she has more than 90 ℅ ...ದೊಡ್ಡದಾಗಿ ಹೇಳಿ...why are you standing in this line, science section is in that direction ಅಂದ್ರು. ನಿಹಾ ' ನನಗೆ ಆರ್ಟ್ಸ್ stream ಬೇಕು..ಅದಕ್ಕೆ ಇಲ್ಲಿ ನಿಂತಿದ್ದೇನೆ ಅಂದ್ಲು. ಮಕ್ಕಳಿಗೆ ಏನು ಅನ್ನಿಸ್ತೋ ಏನೋ, ನಿಹಾಳ form ತೆಗೆದುಕೊಂಡು ಹೋಗಿ, ಬರುವಾಗ principal ಅವರನ್ನು ಕರೆದು.ಕೊಂಡು ಬಂದ್ರು. ಅವರೂ ತುಂಬಾ ಆಗ್ರಹ ಪಡಿಸಿದರು science ತೆಗೋ ಅಂತ...ಆಮೇಲೆ ಆರ್ಟ್ಸ್ ಯಾಕೆ ಅಂತ ಕೇಳಿದ್ರು...ನನಗೆ economics ಇಷ್ಟ ಅಂತಲೂ . ಕೊನೆಗೆ ಸುಮಾರು ಮಾತುಕತೆಯಾದ ನಂತರ ಒಪ್ಪಿ ಅಂತೂ admission ಆಯ್ತು.ಅಲ್ಲಿದ್ದ ಎರಡು ವರ್ಷ ಅವಳು first three position ನಲ್ಲಿ ಇದ್ಲು. French mattu psychology centum scorer.
Now she is a busy children's book illustrator and happy with her choice of profession.
ಇದರ ಜತೆ ಹಾಡು, japanese ಓದು, ಮಧ್ಯ ಮಧ್ತ ಅದು ಇದು workshop ಅಂತ ಆರಾಮಾಗಿದ್ದಾಳೆ.
ಇನ್ನು ಅಕ್ಕ..ಅವಳೂ distinction ಸ್ಟೂಡೆಂಟ್. 10 ನೆ ಆದ ಮೇಲೆ science ತೆಗೊಂಡಿದ್ದು. Space ಸೈಂಟಿಸ್ಟ್ ಆಗುವ ಅಂದಾಜು.ಆಮೇಲೆ ಅವಳ ಕಾಲೇಜ್ ನಲ್ಲಿ career counselling ಅಂತ ಹಮ್ಮ್8ಕೊಂಡಿದ್ದರು. ಅಲ್ಲಿ ಹೋಟಲ್ ಮ್ಯಾನೇಜ್ ಮೆಂಟ್ ಬಗ್ಗೆ ಕೇಳಿ ಅದನ್ನು ಆಯ್ಕೆ ಮಾಡಿಕೊಂಡಳು. Entrance ಪರೀಕ್ಷೆಯಲ್ಲಿನೊಳ್ಳೆ rank ಬಂದಿದ್ದಕ್ಕೆ ಒಟ್ಟು 1 ವರೆ ಲಕ್ಶದಲ್ಲಿ 3 ವರ್ಷದ ಹೋಟೆಲ್ management ಕೋರ್ಸ್ ಮುಗಿಸಿ ಕೆಲವು ಸಮಯ ಕೆಲಸಕ್ಕೆ ಸೇರಿ..ಈಗ ಅವಳ ಸ್ವಂತದ್ದು biscoot factory ಮಾಡಿ ಕೇಕ್, ಕುಕ್ಕಿಸ್, ಚಾಕೋಲೇಟ್ ಎಲ್ಲ ಮಾಡ್ತಾಳೆ, ಮಾತ್ರವಲ್ಲ ಕೆಲವು ಡಾಕ್ಟರ್/nutritionist ಗಳುಗೆಲ್ಲ recipe develop ಮಾಡಿ ಕೊಡೋದು, review ಬರೆಯೋದು, ಫುಡ್ photography ಅಂತೆಲ್ಲ ಮಾಡಿಕೊಂಡು ಆರಾಮಾಗಿದ್ದಾಳೆ..
Let the kids be ಅಂತಷ್ಟೇ ಹೇಳಲಿಕ್ಕೆ ಹೊರಟಿದ್ದು. ಮೊನ್ನೆ ಯಾರೋ ನನಗೆ counselling ಬೇಕು.i want to bring up my teenage daughter in a good way...you are a good mom ಅಂತ ಮೆಸೇಜ್ ಕಳಿಸಿದ್ರು. ನನ್ನ ಎಫ್ ಬಿ ಪೋಸ್ಟ್ ಗಳನ್ನು ನೋಡಿ decide ಮಾಡಿದ್ದಾರೆ ಬಹುಶ . ಅವರಿಗೆ ತಜ್ಞ ಸಲಹಾಗಾರರ ನಂಬರ್ ಕೊಟ್ಟೆ...
Both my daughters are gems. ಯಾವುದೇ ತೊಂದ್ರೆ ಕಿರಿಕಿರಿ ಮಾಡದೆ ಯಾವಾಗ ಬೆಳೆದು ಬಿಟ್ರೋ..❤️❤️🤔
ನನಗೆ ಚಿಕ್ಕವಳಿದ್ದಾಗ ತುಂಬಾ ದುಡ್ಡು, ಕಾರು, ಬಂಗಲೆ, ಆಳು ಕಾಳು ಇಂತದ್ದೆಲ್ಲ್ಲ ಬೇಕು ಅಂತ ಆದೆಗಳಿದ್ದವು. ನನ್ನ ಇಬ್ಬರೂ ಮಕ್ಕಳಿಗೂ ಅಂತಹ expectations ಇಲ್ಲ. ನಿಜ ಹೇಳಬೇಕೆಂದರೆ ಅವರನ್ನು ನೋಡಿ ನಾನು ಕಲಿತಿದ್ದೇನೆ ಅನ್ನಲು ನನಗೆ ಯಾವ ನಾಚಿಕೇನೂ ಇಲ್ಲ
ವೀಣಾ ಶಿವಣ್ಣ ಅವರ ಒಂದು ಪೋಸ್ಟ ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಇತ್ತು...ಇವೆಲ್ಲ ನೆನಪಾಯ್ತು ಅಷ್ಟೇ.