November 14, 2013

ಮಕ್ಕಳ ದಿನಾಚರಣೆ

ನಿಹಾಗೆ ಪರೀಕ್ಷೆ ಮುಗಿದು ಒಂದು ತಿಂಗಳು ಕಾಲೇಜ್ ಗೆ ರಜೆ. ನಾವು ಚಿಕ್ಕ ಪುಟ್ಟ್ ಟೂರ್ ಹಾಕ್ಕೊಂಡಿದ್ದೇವೆ. ಇವತ್ತು ನಿಜ ಹೇಳಬೇಕೆಂದರೆ ನಾವು ಎರಡು ದಿನದ ದಾವಣಗೆರೆ ಟೂರ್ ಹಾಕ್ಕೊಂಡಿದ್ದೆವು.ಮರೆತು ಹೋಗಿತ್ತು. ನಮ್ಮ ಆಫಿಸ್ ನ ರಾಘು ಅವರ ನಿಶ್ಚಿತಾರ್ಥ ಇವತ್ತು ಎಂದು . ರಾಘು ನಮ್ಮ ಸಂಸ್ಥೆ ಸೇರಿ ಆಗಲೇ 10 ವರ್ಷ. ನನಗೆ ಮಗನ ತರಹ. ಹಾಗಾಗಿ ನನ್ನ ಟೂರ್ ಕ್ಯಾನ್ಸಲ್. ಇವತ್ತು ಮಕ್ಕಳ ದಿನಾಚರಣೆಯಲ್ಲವಾ?? ನನಗೆ ಮಾತೆ ಮಾಲತಿ, ಮಾಲದಿಯಮ್ಮೆ, ಅಮ್ಮ, mom ಅಂತ ಕರೆಯುವ ಸುಮಾರು ಮಿತ್ರರಿದ್ದಾರೆ ನನ್ನಷ್ಟೆ ವಯಸ್ಸಿನವರು ಕೂಡ. ನನ್ನ ಪುಟ್ಟ ಸ್ನೇಹಿತನೊಬ್ಬ ಉಡುಪಿಗೆ ನನ್ನನ್ನು ಭೇಟಿ ಮಾಡಲು ಬಂದಿದ್ದ. ನನ್ನ ಅಕ್ಕ (ಓರಗಿತ್ತಿ) ಗೆ 'ನನ್ನ ಮಗ' ಅಂತ ಪರಿಚಯಿಸಿದ್ದೆ. ಅವನು ಹೋದ ಮೇಲೆ ಅವನು ಹೇಗೆ ನಿನ್ನ ಮಗ ಆಗುತ್ತಾನೆ ಅವನು ದೊಡ್ಡ ಹುಡುಗ ಅಂತ ಕೇಳಿದ್ದು, ನಾನು, ಮುನ್ನಾ(ಸುಮತಿ- ಓರಗಿತ್ತಿಯ ಮಗಳು ಹಾಗೂ ಆ ಹುಡುಗನ FB ಪರಿಚಯ ಇರುವವಳು) ) ನಕ್ಕಿದ್ದು ನೆನಪಾಯ್ತು. ಅವರೆಲ್ಲರಿಗೂ happy childrens day from ಮಾತೆ. :-)

ಮಕ್ಕಳ ದಿನಾಚರಣೆ ಅಂದರೆ ನೆನಪಿಗೆ ಬರುವುದು ಎರಡು ಘಟನೆ
೧.ಮುಂಬೈನ ನಮ್ಮ ಮನೆ ಪಕ್ಕದಲ್ಲಿರುವ 8 ವರ್ಷದ ಹುಡುಗಿ. ತಾಯಿಯಿರಲಿಲ್ಲ. ತಂದೆ ಕುಡುಕ. ತಂದೆಗೆ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ. ಆ ಹುಡುಗಿ ಬೆಳಿಗ್ಗೆ ಮುಂಚೆ ಎದ್ದು ಅನತೀ ದೂರದಲ್ಲಿರುವ ಹ್ಯಾಂಡ್ ಪಂಪ್ ನಿಂದ ಮನೆಗೆ ನೀರು ತಂದು ಹಾಕುತ್ತಿದ್ದಳು. ತಿಂಡಿಗೆ ಟಿಫಿನ್ ಬಾಕ್ಸ್ ಗೆ ರೊಟ್ಟಿ ತಟ್ಟಿ ಕೊಡುತ್ತಿದ್ದಳು. ಮಾಡಿದ್ದ ಕೆಲಸ ಅಡಿಗೆ ಸರಿಯಾಗದಿದ್ದರೆ ತಂದೆಯಿಂದ ಒದೆತ/ಪೆಟ್ಟು. ಆ ಪುಟ್ಟ ಸೊಂಟದ ಮೇಲೆ ದೊಡ್ಡ ಬಿಂದಿಗೆ ತರೋದು ಇನ್ನೂ ನನ್ನ ಕಣ್ಣ ಮುಂದೆ ಇದೆ. ಆ ಪುಟ್ಟ ಮುಖದಲ್ಲಿ ದೊಡ್ಡವರ ಗಾಂಭೀರ್ಯ. ಅವಳಿಗೆ ಬಾಲ್ಯವೇ ಇರಲಿಲ್ಲ. ಇಲ್ಲಿ ನಾನು ದುಬಾರಿ ಚಾಕೋಲೇಟ್ ತಿನ್ನುತ್ತ ಬಣ್ಣ ಬಣ್ಣ್ದ ಕತೆ ಪುಸ್ತಕ ಓದುತ್ತಾ ಮಹಾರಾಣಿ ತರಹ ಇದ್ರೆ ಆ ಹುಡುಗಿಗೆ ದಿನ ಇಡೀ ಕೆಲಸ, ಪ್ರೀತಿ ಮಾಡುವವರು ಕೂಡ ಯಾರು ಇಲ್ಲ. :-(

೨.ಅಮ್ಮನ ಮನೆಯಲ್ಲಿ ಕೆಲಸಕ್ಕಿದ್ದ ಅನುಸೂಯ. ಅವಳ ಗಂಡ ಅವಳನ್ನು ಬಿಟ್ಟು ಬೇರೆ ಮದುವೆಯಾಗಿದ್ದ. ಯಾಕೆಂದರೆ ಅನುಸೂಯಾ ಗೆ ನಾಲ್ಕು ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಪುಷ್ಫ. ಒಂದು ದಿನ ಅನುಸೂಯ ಎದೆ ನೋವು ಅಂದವಳೆ, ಪುಷ್ಪ ಅವಳನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಇವಳ ಕೈ ಯಲ್ಲೇ ಅಸುನೀಗಿದಳು. ಆಗ ಪುಷ್ಪಾ 6 ನೇ ಕ್ಲಾಸ್. ಅದಾದ ನಂತರ ಸ್ಕೂಲ್ ಬಿಟ್ಟು ಮನೆಕೆಲಸಕ್ಕೆ ಹೋಗಿ , 10 ನೇ ತರಗತಿ ಪ್ರೈವೆಟ್ ನಲ್ಲಿ ಪಾಸ್ ಮಾಡಿ (ಇದಕ್ಕೆ ನಾನು ತುಂಬಾ ಸಹಾಯ ಮಾಡಿದ್ದೇನೆ ಅನ್ನುವ ಖುಶಿ ನನಗೆ) ಒಳ್ಳೆ ಅಂಕಗಳನ್ನು ಪಡೆದು, ನಮ್ಮ ತಂದೆಯ ಸಹಾಯದಿಂದ ಬ್ಯಾಂಕ್ ನ ಎಟೆಂಡರ್ ಆಗಿ, ಬ್ಯಾಂಕ್ ನ ಕ್ಲರಿಕಲ್ ಪರೀಕ್ಷೆಗೆ ಕೂತು, ಪ್ರೊಮೋಷನ್ ಎಲ್ಲ್ಸ್ ಆಗಿ ಈಗ ಅವಳು ಬೆಳಗಾವಿಯ ಹತ್ತಿರದ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್. ಮೂವರು ತಂಗಿಯರನ್ನು ದಡ ಸೇರಿಸಿ ತನ್ನ ನಲವತ್ತನೇಯ ವಯಸ್ಸಿಗೆ , ಇವಳಂತೇ ಕಷ್ಟ ಪಟ್ಟಿದ ಜೀವ ಒಂದರ ಜತೆ ಮದುವೆಯಾಗಿ, ಹಿಂದಿನ ವರ್ಷ ಅವಳಿಗೆ ಮಗು ಹುಟ್ಟಿದೆ. ಮದುವೆಗೆ ನಾನು ಹೋಗಿದ್ದೆ.

ಮಕ್ಕಳ ದಿನಾಚರಣೆಯೆಂದರೆ ನೆನಪಿಗೆ ಬರುವುದು Mulk Raj Anand ರ 'The Lost Child' ಮತ್ತು ಪಥೇರ್ ಪಾಂಚಾಲಿಯ 'ಆಪೂ'
ಇಲ್ಲಿದೆ ದ ಲಾಸ್ಟ್ ಚೈಲ್ಡ್ ನ ಕೊಂಡಿ. ಮಕ್ಕಳಿಗೆ ಓದಿ ಹೇಳಿ. ಗೂಗಲ್ ನಲ್ಲಿ ಹುಡುಕುವಾಗ ಸಿಕ್ಕಿತು. ತುಂಬ ಚಿಕ್ಕವಳಿರುವಾಗ ಈ ಕತೆ ಓದಿ ದೇವರ ಹತ್ತಿರ ಆ ಮಗುವಿಗೆ ಅವನ ಅಪ್ಪ ಅಮ್ಮ ಸಿಗಲಿ ದೇವರೆ ಅಂತ ಕೇಳಿಕೊಂಡು ಅತ್ತಿದ್ದು ನೆನಪಿದೆ. ಆಗ ಅಜ್ಜನ ಬಳಿ ಬೆಳೆಯುತ್ತಿದ ನನಗೆ ದೂರದೂರಿನಲ್ಲಿರುವ ನನ್ನ ಅಪ್ಪ, ಅಮ್ಮನ, ತಮ್ಮಂದಿರ ನೆನಪು ತುಂಬಾssssss ಕಾಡಿತ್ತು. :-(

http://www.arvindguptatoys.com/arvindgupta/lostchild.pdf

ಪುಸ್ತಕದ ಕಪಾಟು ಕ್ಲೀನ್ ಆಗ್ತಾ ಇದೆ. ಒಂದು ಪುಸ್ತಕದಲ್ಲಿ ನಿಹಾ ಗೆ ಸಿಕ್ಕಿತು ಈ ಚಿತ್ರ. ಇದರಲ್ಲಿ ನಾನು ದ್ರೌಪತಿ/ದ್ರೌಪದಿ,
ನಿಹಾ ಮಾಡಿದ ಡೂಡಲ್. ಪರೀಕ್ಷೆ ಮುಗಿದ ನಂತರ ಅವಳಿಗೆ ತುಂಬಾ art attack ಬರ್ತಾ ಇದೆ.

ಇನ್ನಷ್ಟು ಚಿತ್ರಗಳಿಗಾಗಿ ಕ್ಲಿಕ್ಕಿಸಿ

http://dudledop.blogspot.in/

:-)

6 comments:

Radhika said...

2nd incident is really ' heego unTaa' case. Sudha Murthy madam used to tell us of a similar incident where an attender in a s/w company grew up to become a manager all because of self motivation and helpful people like you :-)
Will read the story when Ananya is back from school. Doodles are good.

Sudeepa ಸುದೀಪ said...

ha..ha ... remember that day :-)

2nd story is very touching

Anonymous said...

Nimma article odide. Jeevana bahalastu makkala palige hego hego eduragiruttade.............. Avella dodda dodda kathegalu..............
Niha art attack keli bhala khushi aytu. adre chitragalu display aguttilllla. .... adke bejaru....




Vandanegalu
Savi

nenapina sanchy inda said...

@ Radhika: ನಾನು ಇಲ್ಲಿ ಹೇಳಿಕೊಂಡೆ. ಆದರೆ ಹೇಳದೆ /ಬಲಗೈ ನಿಂದ ಕೊಟ್ಟಿದ್ದು ಎಡಗೈ ಗೆ ಗೊತ್ತಾಗದಂತೆ/ ಸಮಾಜಮುಖಿ ಕೆಲಸ ಮಾಡುವ ಎಷ್ಟೋ ಜನರನ್ನು ನೋಡಿದ್ದೇನೆ ರಾಧಿಕ, ಅಂತದ್ದರಲ್ಲಿ ನಾನು ಮಾಡಿದ್ದು ತೃಣ ಸಮಾನ
@ ಮುನ್ನಾ: :-)
@ Savithri: ನಿಮ್ಮ ಅನುಭವಗಳನ್ನೂ ಶೇರ್‍ ಮಾಡಿ ಪ್ಲೀಸ್
ಎಲ್ಲರಿಗೂ ಧನ್ಯವಾದಗಳು
ಮಾಲತಿ ಎಸ್.

Unknown said...

ನನಗೆ ಇಷ್ಟವಾದದ್ದು:
೧. ನಿಮ್ಮ ಬಾಲ್ಯದ ದ್ರೌಪತಿ ಪಾತ್ರ.
೨. ನಿಮ್ಮ ನಿಹಾ ಮಾಡಿದ ಡೂಡಲ್
ನನ್ನ ಮನಸ್ಸನ್ನು ಕಲಕ್ಕಿದ್ದು: ನಿಮ್ಮ ಮೊದಲ ಘಟನೆ.
ನನಗೆ ಸಮಾಧಾನ ಕೊಟ್ಟದ್ದು: ನಿಮ್ಮ ಸಹಾಯ ಹಸ್ತದಿಂದ ಕೂಡಿದ ಎರಡನೆಯ ಘಟನೆ.

nenapina sanchy inda said...

thank you Chandrashekar :-)