ಮದುವೆಯಾದ ಮೊದಲ ಕೆಲವು ವರ್ಷ ನಾನು ಆಗಾಗ ಮುಂಬೈಗೆ ಹೋಗುತ್ತಿದೆ. ಹೊಸ ದೀಪಾವಳಿ, ಮೊದಲ ಯುಗಾದಿ, ಆಮೇಲೆ ನನ್ನ ಪರೀಕ್ಷೆಗಳು. ನಾನು university of Bombay -distance Education ಅಡಿ ನನ್ನ ಗ್ರಾಜ್ಯುವೇಷನ್ ಮಾಡಿದೆ. ಮತ್ತು ಇಬ್ಬರು ಮಕ್ಕಳು ಅಲ್ಲೇ ಹುಟ್ಟಿದ್ದು, ಅಮೇಲೆ ತಂಗಿ ತಮ್ಮಂದಿರ ಮದುವೆ ಹೀಗೆ. ಇತ್ತಿಚಿಗಿನ 10 ವರ್ಷದಲ್ಲಿ ನಾವು ನಾಲ್ಕೂ ಜನ ಕೂಡಿ ಮುಂಬೈಗೆ ಹೋಗಿದ್ದಿಲ್ಲ.
ತ್ತ ಮೋಂಬತ್ತಿ ಹೊತ್ತಿಸುತ್ತಿದ್ದರು

ಆ ದಿನ ಆತಂಕವಾದದ ವಿರುದ್ದ ಮೌನ ಮೆರವಣಿಗೆ (silent march) ಹಮ್ಮಿಕೊಳ್ಳಲಾಗಿತ್ತು. ಎಷ್ಟೆ ಗಂಭೀರವಾಗಿರಲು ಪ್ರಯತ್ನ ಪಟ್ಟರೂ ಕೆಲವರಿಗೆ ಬಿಕ್ಕು ಬರುತ್ತಿತ್ತು.. ಅಲ್ಲಿ ನಿಂತ ನಮ್ಮ ಕಣ್ಣಲ್ಲೂ ನೀರು. photography was strictly prohibited so as not to interfere in their moment of grief. ಹಾಗಾಗಿ mourners ಗೆ ತೊಂದರೆಯಾಗದಂತೆ ಮಿಡಿಯಾದವರು respectfully ಸ್ವಲ್ಪ ದೂರದಲ್ಲಿ ಇದ್ದರು.
ಬೆಂಕಿಯಲ್ಲಿ damage ಆಗಿದ್ದ ಹೋಟಲ್ ತಾಜ್ ಮಹಲ್ ರಿಪೇರಿ ಕೆಲಸದಲ್ಲಿ ತೊಡಗಿ ಕೊಂಡಿತ್ತು.
ಕೆಲವೇ ದಿನಗಳ ಹಿಂದೆ ಅಂದರೆ ಡಿಸೆಂಬರ್ 21 ಕ್ಕೆ ಪುನಃ ಅದು ಅತಿಥಿಗಳಿಗೆ ತೆರೆಯಲ್ಪಟ್ಟಿತ್ತು.ತಾಜ್ ಮಹಲ್ ಹೋಟೆಲ್ ಗೆ ೧೦೬ ವರ್ಷಗಳ ಇತಿಹಾಸವಿದೆ. ಪ್ರಥಮ ಮಹಾ ಯುದ್ದದ ವೇಳೆ ಇದೇ ಹೋಟಲನ್ನು 600 ಮಂಚಗಳಿರುವ ಆಸ್ಪತ್ರೆಯಾಗಿ convert ಮಾಡಲಾಗಿತ್ತು.
ಧೈರ್ಯ ತೋರಿಸಿದ ಎಲ್ಲ ಧೀರರಿಗೂ ನನ್ನ ಸಲಾಮ್. ಸಂದೀಪ ಉಣ್ಣಿಕೃಷ್ಣನ್ ನ ತಾಯಿಯನ್ನು ಕಂಡಾಗಲೆಲ್ಲ ಒಂದು ಅವ್ಯಕ್ತವಾದ ನೋವು ಎದೆಯೊಳಗೆ ಹಾದು ಹೋಗುತ್ತದೆ.ನೋವನಂತು ಮರೆಯಲು ಸಾಧ್ಯವಿಲ್ಲ, ಆದರೆ ಅದನ್ನು ಸಹಿಸುವ ಶಕ್ತಿ ಅವರಿಗೆ ಬರಲಿ ಎಂದು ಆಶೀಸೋಣ.
ಈಗ ಕೈಗೆತ್ತಿಕೊಂಡಿರುವ ,ಯಶವಂತ ಚಿತ್ತಾಲರು ಬರೆದ ಕಾದಂಬರಿ, ’ಕೇಂದ್ರ ವೃತ್ತಾಂತ’ ದಲ್ಲಿ memories are memorials! ಅಂತ ಉಲ್ಲೇಖಿಸಿದ್ದಾರೆ.ನೆನಪುಗಳು ಆಳದಲ್ಲಿ ಕಾಡಿದ ಭಾವನೆಗಳಿಗೆ ಎದ್ದು ನಿಂತ ಸ್ಮಾರಕಗಳು.ಎಷ್ಟು ಅರ್ಥಪೂರ್ಣ ಆಗಿದೆಯಲ್ಲವ ಈ phrase!!
ರಕ್ತಪಾತಕ್ಕೆಲ್ಲ ಅಂತ್ಯ ಯಾವಾಗ? ಏನಾಗ್ತಾ ಇದೆ ನಮ್ಮ ದೇಶದಲ್ಲಿ?
ಉಗ್ರರಯರ ದಾಳಿಯಲ್ಲಿ ತೀರಿಕೊಂಡವರ ಆತ್ಮಕ್ಕೆ ಶಾಂತಿ ಕೋರುವಾ.
marine Drive. ರಾತ್ರಿ ದೀಪದ ಸಾಲು ಹಾರವನ್ನು ನೆನೆಪಿಸುತ್ತದೆ ಅದಕ್ಕೆ Queens Necklace ಅಂತ ಹೇಳುತ್ತಾರೆ.
ಚಿತ್ರಗಳು - yours truly
4 comments:
ಒಂದು ವಾರದಿಂದ ಮುಂಭೈಯನ್ನು ಬಹಳ ನೆನೆಸಿದೆವು....
ಧೈರ್ಯದಿಂದ ಹೋರಾಡಿದ ಎಲ್ಲ ಧೀರ ಯೋಧರಿಗೆ ನನ್ನ ಸಲಾಮ್....
ಸಂದೀಪ ಉಣ್ಣಿಕೃಷ್ಣನ್ ರಂತಹ ಯೋಧರನ್ನು ಮರೆಯಲು ಸಾಧ್ಯವೆ?
ಮುಂಬಯಿಯಲ್ಲಿ ಹತ್ಯಾಕಾಂಡವಾಗುತ್ತಿದ್ದಾಗ ಮತ್ತು ಅದಾದ ಒಂದು ತಿಂಗಳಿಗೆ ಮುಂಬಯಿಗೆ ಹೋಗಿ ಮೌನ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾಗ ಆ ಊರಲ್ಲೇ ಹುಟ್ಟಿ ಬೆಳೆದ ನಿಮಗೆ ಹೇಗಾಗಿರಬೇಕು ಊಹಿಸಬಲ್ಲೆ. ಈ ರೀತಿಯ ಘಟನೆಗಳನ್ನು ನೆನಸಿಕೊಂಡಾಗಲೆಲ್ಲಾ ತುಂಬಾ ಸಂಕಟ ಆಗತ್ತೆ. ಇವು ಹೆಚ್ಚುತ್ತಿವೆಯೇ ಹೊರತು ಕಡಿಮೆ ಆಗುತ್ತಿಲ್ಲವಲ್ಲ.....
ಮಾಲತಿ,
ಮುಂಬೈ ಮೇಲೆ ಉಗ್ರರ ದಾಳಿ ಆ ನೆನಪು, ಕಳೆದುಕೊಂಡವರ ಸಂಕಟ ಎಂಥಹ ಕಲ್ಲು ಹೃದಯವನ್ನು ಕಲುಕುತ್ತದೆ... ನಾವು ಬೆಂಗಳೂರುನಲ್ಲಿ ಇದ್ದೆ ಏನೋ ಆಗ್ತಾ ಇದೆ ಅಂತ ಹೆದರಿಕೆ ಶುರು ಆಗುತ್ತೆ ಮುಂದೇನು ಅಂತ ನಮ್ಮನ್ನೇ ನಾವು ಕೆಳ್ಕೊಲ್ತೇವೆ... ಅಂತಹ ಪರಿಸ್ಥಿಯಲ್ಲಿ ಮುಂಬೈ..?
ನಿಮ್ಮ ಅನುಭವದ ಮಾತು... ನಿಮ್ಮ ನೆನಪನ್ನು ನಮ್ಮ ಜೋತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...
ನಿಮ್ಮವ,
ರಾಘು.
Really...Malti that was a terrible moment...even to watch on TV (I kept glued to different channels showing this)...ಮಾನವತೆಯನ್ನೇ ಮರೆತವರಿಗೆ ಧರ್ಮ ಬೋಧಿಸೋ ಹಕ್ಕು ಇರೊಲ್ಲ...ಇವರ ಸ್ವವಿಶ್ಲೇಷಿತ ಧರ್ಮದ ಪರಿಭಾಷೆಯಿಂದಲೇ ಎಲ್ಲ ನಷ್ಟ...
Post a Comment