November 1, 2009

ದಿಲ್ ಕಾ ರಿಷ್ತಾ

ಇಸವಿ 2001. ಬೆಂಗಳೂರಿಗೆ ಬಂದು ಕೆಲವು ತಿಂಗಳು ಆಗಿತ್ತಷ್ಟೆ. ಮೇ 13 ನೇ ತಾರೀಕು ಬೆಳಿಗ್ಗೆ ಅಮೇರಿಕ ದಿಂದ ನನ್ನ ಬ್ರದರ್-ಇನ್-ಲಾ ಫೋನ್ ಮಾಡಿದರು

"hello malathi, Sundeep here. can you take leave from office today..-ಅಂತ ಕೇಳಿದ. ನಾನು ಸಂದೀಪ್ ಯಾವಾಗಲೂ ಇಂಗ್ಲೀಷ್ ನಲ್ಲೇ ಸಂಭಾಷಿಸುವುದು. ಅದಕ್ಕೆ ಕಾರಣ ಮಾತ್ರ ಈಗಲೂ ಗೊತ್ತಿಲ್ಲ.
ನಾನು ಆಗಬಹುದು ಅಂತ ಹೇಳಿ ಕಾರಣ ಕೇಳಿದೆ.

Jyothi has gone into labour and she is scared. She wants to talk to you.

ಅವನ ಇನ್ಸ್ಟ್ರಕ್ಷ್ ನ್ ಫಾಲೋ ಮಾಡ್ತಾ ಸ್ಕೈಪೀ ಎನ್ನುವ ವಿಡೀಯೋ-ಆಡಿಯೋ ಸಾಫ್ಟ್ ವೇರ್ ನ್ನು Install ಮಾಡಿದೆ. ಅವನು ಅದಕ್ಕೆ ಕ್ಯಾಮ್ ಕಾರ್ಡರ್ ಫಿಕ್ಸ್ ಮಾಡಿದ. ನಮ್ಮಲ್ಲಿ ವೆಬ್ ಕ್ಯಾಮರಾ ಇರಲಿಲ್ಲ. ಆದರೆ ನಾನು ನನ್ನ ತಂಗಿಯನ್ನು ನೋಡಬಹುದಿತ್ತು. ಅವಳಿಗೆ ನನ್ನ ದನಿ ಕೇಳಿಸ್ತಾ ಇತ್ತು. ಅವರೂ ಅಮೇರಿಕೆಗೆ , ಆಸ್ಟ್ರೇಲಿಯಾ ದಿಂದ ಬಂದಿದ್ದರಷ್ಟೆ. ನಮ್ಮ ತಾಯಿ ಹಾಗು ಸಂದೀಪ್ ತಾಯಿ ಒಂದು ತಿಂಗಳು ಬಿಟ್ಟು ಅಮೇರಿಕೆಗೆ ಹೋಗುವುದು ನಕ್ಕಿಯಾಗಿತ್ತು. ಅಲ್ಲಿರುವ ಭಾರತೀಯ ಮಿತ್ರರು ಭಾರತಕ್ಕೆ ಬಂದಿದ್ದರು. ಅದುದರಿಂದ ನಮ್ಮವರು ಅಂತ ಯಾರೂ ಇರದೇ ಇರುವುದರಿಂದ ಅವರಿಬ್ಬರಿಗೂ ಸ್ವಲ್ಪ ಆತಂಕವಾಗಿದ್ದಿರಬಹುದು.

ಸರಿ ಅವಳನ್ನು ನೋಡ್ತಾ ಇದ್ದ ಹಾಗೆ ಅವಳು ನೋವಿನಿಂದ ನರಳುತ್ತ ಇದ್ದರೂ ಅರೇ Jyothi, that is my dress you are wearing ಅಂತ ಉದ್ಗರಿಸಿದೆ. ಮುಂಬೈಯಲ್ಲಿ ತಾಯಿ ಮನೆಯಲ್ಲಿ ಕೆಲವು ಬಟ್ಟೆಗಳನ್ನು ನಾನು ಬಿಟ್ಟು ಬಂದಿದೆ.

ಅದಕ್ಕೆ ಅವಳು ಹೌದು, ನಾನು ಒಂದು ದಿನ ಮಳೆಯಲ್ಲಿ ನೆನೆದು ಬಂದಾಗ, ಒದ್ದೆ ಬಟ್ಟೆ ಬಿಚ್ಚಿ, ಹತ್ತಿರ ಸಿಕ್ಕಿದ ನಿನ್ನ ಬಟ್ಟೆ ಹಾಕಿಕೊಂಡೆ. ಯಾಕೋ ತುಂಬಾ ಸಮಾಧಾನ ಅನ್ನಿಸಿತು. ಅದಕ್ಕೆ ನಿನಗೆ ಕೇಳದೆ ನಾನು ಅದನ್ನು Australia ಗೆ ಎತ್ಕೊಂಡು ಹೋದೆ. ಅಮ್ಮನಿಗೂ ಗೊತ್ತಿಲ್ಲ. ನಾನು emotionally down ಆದಾಗ, ನಿಮ್ಮೆಲ್ಲರ ನೆನಪು ಬಂದಾಗ ಅದನ್ನು ಹಾಕಿಕೊಂಡಾಗ ಸಮಾಧಾನ ಅನ್ನಿಸುತ್ತಿತ್ತು. ನೀನು ಯಾವಾಗಲು ಶಾಂತಿ ಸಮಾಧಾನದಿಂದ ಇರುತ್ತಿದ್ದದ್ದು ನೆನಪು ಬರತಿತ್ತು ಅಂದಳು. miss you akka. ತುಂಬಾ emotional ಆದಾಗ ಅವಳು ಅಕ್ಕ ಎನ್ನುವುದು ಉಂಟು.

ನನಗೊತ್ತಿಲ್ಲದೇ ನನ್ನ ಕಣ್ಣಿರು ಗಲ್ಲದಿಂದ ಇಳಿದು ಬಿಸಿಯಾಗಿ ಎದೆ ತೋಯಿಸಿದಾಗ ನಾನು ಅಳುತ್ತಿರುವ ಅನುಭವ ನನಗೆ ಆಗಿದ್ದು. ಸಧ್ಯ ತಂಗಿಗೆ ತನ್ನ brave ಅಕ್ಕ ಅಳುವುದು ಅವಳಿಗೆ ಕಾಣಿಸಲಿಲ್ಲ.
Iam nervous ಅಕ್ಕ ಅಂದಾಗ. ಹೆದರಬೇಡ ಜ್ಯೋತಂಬೆ (ಅವಳಿಗೆ ನಾನಿಟ್ಟ pet-name). Deep breathತೆಗೋ, ನಿಧಾನವಾಗಿ ಉಸಿರು ಹೊರಗೆ ಬಿಡು. ನೋವು ಬಂದಾಗಲೆಲ್ಲ ಹಾಗೇ ಮಾಡು. ಇನ್ನು ಸ್ವಲ್ಪ ಹೊತ್ತು. Dont worry ಅಂದೆ. ಅದರ ಮಧ್ಯ ಅವಳನ್ನು Attend ಮಾಡ್ತಿದ್ದ ಲೇಡಿ ಡಾಕ್ಟರ್ ಗೆ ’ಹಾಯ್ ಅಂದೆ. ಅವಳಿಗೆ ಮಾಲತಿ ಉಚ್ಚಾರ ಮಾಡಲಿಕ್ಕೆ ಬರದೇ, ಹೆಲ್ಲೋ ಮಲಾಶಿ ಅಂದಾಗ ನಗು control ಮಾಡಿದೆ. ಬಹುಶಃ ಜರ್ಮನ್ ಮೂಲದವರಿರಬೇಕು!

ಲೇಬರ್ ವಾರ್ಡ್ ನಲ್ಲಿ ಕ್ಯಾಮೆರ ನಿಷಿದ್ದವಾಗಿದ್ದರಿಂದ, ಸ್ವಲ್ಪ ಹೊತ್ತು ನಾನು -ಸಂದೀಪ ಸುಮ್ಮನೆ ಅರ್ಥವಿಲ್ಲದ ಹರಟೆ, ನನ್ನ ಮಕ್ಕಳ ಕೀಟಲೆ ಎಲ್ಲ ಮಾತಾಡಿ ಕೊಂಡ್ವಿ. ಸಂಜೆ (ಭಾರತೀಯ ಸಮಯ) ೪.೦೦ ರ ಸಮಯ ನಿವೇದಿತಾ; ಹುಟ್ಟಿದಳು. ಕ್ಯಾಮರಾ ಅವಳ ಬಳಿ ತೆಗೆದು ಕೊಂಡು ಹೋದಾಗ ನಾನು :Nivu baby- ಪಳೆ ತುಗೆಲೆ ಮ್ಹಾವ(ನೋಡು ನಿನ್ನ ದೊಡ್ಡಮ್ಮ) ಅಂದಾಗ ಅವಳು ಒಂದು ಕ್ಷಣ ಕಣ್ಣು ಬಿಟ್ಟು, ಹುಬ್ಬು ಗಂಟಕ್ಕಿದ್ದಳು.

ನಿವೇದಿತಾ ಗೆ ನನ್ನ ಹಾಗೇ ಓದುವ ಗೀಳು. Love you Nivedita. :-)

7 comments:

Raghu said...

ನಿಮ್ಮ ತಂಗಿ ತುಂಬಾ ಲಕ್ಕಿ ಕಣ್ರೀ..
ರಾಘು.

ಸವಿಗನಸು said...

ಅಮ್ಮನಿಂದ ದೊಡ್ಡಮ್ಮನ ಸ್ಥಾನಕ್ಕೆ ಬಡ್ತಿ....
ಶುಭ ಹಾರೈಕೆಗಳು.....
Congrats sandeep & jyothi....

ಮನಸು said...

ಅಕ್ಕಂದಿರಿದ್ದರೆ ಇದೆ ನೋಡಿ ತಾಯಿ ಸ್ಥಾನದಲ್ಲಿ ನಿಲ್ಲುತ್ತಾರೆ, ನನ್ನ ಅಕ್ಕನೊ ನನಗೆ ತಾಯಿಯ ಹಾಗೆ ಎಷ್ಟೋ ಸಹಕರಿಸಿದ್ದಾಳೆ. ನಿಮ್ಮ ಲೇಖನ ನನ್ನಕ್ಕನ ನೆನಪಿಸಿತು.
ಧನ್ಯವಾದಗಳು ಹಾಗು ನಿಮಗೆ ಶುಭಾಶಯಗಳು

Ittigecement said...

ನಿಮ್ಮ ಲೇಖನ ಓದಿ ನನಗೆ ನನ್ನಕ್ಕ ನೆನಪಾದಳು...
ನನ್ನಕ್ಕ ಅಂದರೆ ನನಗೆ ನನ್ನಮ್ಮನ ಹಾಗೆ ...
ಎಷ್ಟು ಪ್ರೀತಿ ಮಡುತ್ತೇವೆಂದರೆ
ಈಗಲೂ ಪ್ರತಿನಿತ್ಯ ಜಗಳ ಮಾಡಿಕೊಳ್ಳುತ್ತೇವೆ...ಫೋನಿನಲ್ಲಿ

ಅಭಿನಂದನೆಗಳು ಚಂದದ ಲೇಖನಕ್ಕೆ..

ನಿಮ್ಮ ಈಮೇಲ್ ಕೊಡುವಿರಾ...
ನನ್ನದು... kash531@gmail.com

ಜಲನಯನ said...

ಮಾಲ್ತಿ.ಗೆ ಭಡ್ತಿ...ಅಮ್ಮ ನ ಜೊತೆಗೆ ದೊಡ್ಡಮ್ಮ...
ನಿಜ ನೋಡಿ ನಿಮ್ಮ ಮಾತು...ಅಕ್ಕ ತಂಗಿಯರ ಅನುಬಂಧ..ಹಾಗಿರುತ್ತೆ...ನನಗೆ ತಿಳಿದ ಮಟ್ಟಿಗೆ ಒಡ ಹುಟ್ಟಿದ ಹೆಣ್ಣು ಸಂತತಿ ಪರಸ್ಪರ ಬಹಳ ಹಚ್ಚಿಕೊಳ್ಳುವ-ನೆಚ್ಚಿಕೊಳ್ಳುವ ಹಾಗೆ ಗಂಡು ಸಂತತಿ ಇರುವುದಿಲ್ಲ... ತಮ್ಮ ಹಾಗೇನಾದರೂ ..ಯಾವುದಕ್ಕಾದರೂ ಹೆದರಿದರೆ...ಹೋಗೋಲೋ ಏನು ಆಗೊಲ್ಲಾ..(ನನಗೆ ಈಜುವುದನ್ನು ನನ್ನಣ್ಣ ಕಲಿಸುವಾಗಿನ ಮಾತು ನೆನೆಪಾಯ್ತು)..ಮುಳುಗೋಹಾಗಾದ್ರೆ..ನಾನು ಬರ್ತೀನಿ...ಅಂತ ಗದರಿಸ್ತಾನೆ...
ಚಂದದ ಲೇಖನ..ನಿಮಗೆ ಅಭಿನಂದನೆಗಳು...ದೊಡ್ಡಮ್ಮ....!!!

Anonymous said...

ಮಲಾಶಿಯವರೇ ,

ಚೆನ್ನಾಗಿದೆ ಲೇಖನ.

Anonymous said...

ಒಳ್ಳೆಯ ಬರಹ, ಚೆನ್ನಾದ ತಲೆಬರಹ !

-- Shee