ನನ್ನ ’ladies only' ಪೋಸ್ಟ್ ನಲ್ಲಿ ನೈನಿತಾಲಗೆ ಹೋಗುತ್ತಿರುವುದನ್ನು ಬರೆದಿದ್ದೆನಷ್ಟೆ?? ಆದರೆ ಮೂರು ಕಾರಣಗಳಿಂದ ಅದು ರದ್ದಾಯಿತು. ಒಂದು ತಂಗಿ ಹಾಗೂ ಮಕ್ಕಳ ಜೆಟ್ ಲ್ಯಾಗ್ ಹೋಗಿರಲಿಲ್ಲ, ನಿಹಾರಿಕ IIT-madras ನ entrance ಕ್ಲಿಯರ್ ಮಾಡದೆ ಇದ್ದರಿಂದ,ಅವಳ ಇನ್ನೊಂದು option ಆದ NMKRV ಕಾಲೇಜು ಸೇರಿದಳು. ಅದು ಜೂನ್ 6 ಕ್ಕೆ ಶುರು ಆಗುವುದರಲ್ಲಿತ್ತು ಮತ್ತು ಮಾಲವಿಕ 15 ನೇ ತಾರೀಕಿಗೆ ಕೆಲಸಕ್ಕೆ ಸೇರ ಬೇಕಾದವಳಿಗೆ 5 ನೇ ತಾರಿಕಿಗೆ ಜಾಯಿನ್ ಆಗಲು ತಿಳಿಸಿದ್ದರು. ಮಾಲವಿಕ ನಿಹಾರಿಕ ರನ್ನು ಬಿಟ್ಟು ನನಗೆ ತಂಗಿಗೆ ನೈನಿತಾಲ್ ಗೆ ಹೋಗುವ ಮನಸ್ಸು ಬರಲಿಲ್ಲ. ಹಾಗಾಗಿ ladies only ಗಳುweekend ನಲ್ಲಿ ಹತ್ತಿರದ ಕೆಲವು ಪ್ರೇಕ್ಷಣಿಯ ಸ್ಥಳಗಳು ಹಾಗು ವಂಡರ್ ಲಾ ಹಾಗೂ ಆದಷ್ಟು ಸುಮಾರು ಹೋಟಲ್ ಗಳಿಗೆ ಭೆಟ್ಟಿ ನೀಡಿದೆವು. ಶ್ರೀಕಾಂತ ಹೈದರಾಬಾದ್, ಪಟ್ನಾ ಗೆ ಟೂರ್ ಹೋಗಿದ್ದರು. ತಂಗಿ ಆಗಷ್ಟ ಎರಡನೆ ವಾರ ವಾಪಸ್ ಯು ಎಸ್ ಗೆ ಹೋಗೋದು, ಮತ್ತು ನನ್ನ ತಮ್ಮ UAE ನಿಂದ ಜುಲೈ ಎರಡನೇ ವಾರ ಬರುತ್ತಿದ್ದಾನೆ.ಇನ್ನಷ್ಟು ಚಿಕ್ಕ ಪುಟ್ಟ ಪ್ಲಾನ್ ಗಳಿವೆ ಸುತ್ತಾಡುವುದು. ಸೊ ಇನ್ನಷ್ಟು fun on its way :-)
ಅಕ್ಕನ (ಮಾಲವಿಕ) ಕಾಲೇಜು ಮೇಟ್ ಗಳು ಹೆಚ್ಚಾಗಿ northies. ಗೌರವ್ ಮತ್ತು ಹರ್ಷ್ , ಒಂದು ಸಂಜೆ ಹಸಿವೆಯಾದಾಗ ಹೋಟೆಲ್ ಗೆ ಹೋಗಿ ಮೆನ್ಯು ನಲ್ಲಿದ್ದ ಚೌ ಚೌ ಭಾತ್ ಗೆ ಆರ್ಡರ್ ಕೊಟ್ಟರಂತೆ. ನಂತರ ಮಾಲವಿಕನಿಗೆ ಫೋನ್ ಮಾಡಿ ’ಕ್ಯಾ ಯಾರ್! ಹಮ್ ನೆ ಸಮಝಾ ಚೌ ಚೌ ಭಾತ್ ಯಾನೆ ಕೊಯಿ ಚೈನೀಸ್ ಡಿಶ್ ಮಿಲೆಗಾ ಖಾನೆ ಕೆ ಲಿಯೆ, ಯೆ ಕ್ಯಾ ಯೆ ತೊ ಉಪ್ಮಾ, ಸುಜಿ ಕಾ ಸ್ವೀಟ್ ಔರ್ ಮಿಕ್ಸರ್ ದಿಯಾ ಹೈ...
*****************************************************************************************************************************************
ತಂಗಿಗೆ ಮನೆಯಲ್ಲಿದ್ದಾಗಲೆಲ್ಲ ಅವಳ ಇಷ್ಟವಾದ ಅಪರೂಪದ ಅಡುಗೆಗಳನ್ನು ಮಾಡಿ ಕೊಡುತ್ತಿದ್ದೆ.
ಅದರಲ್ಲಿ ,ಮಾವಿನಹಣ್ಣಿನ ಹುಮ್ಮಣ (a konkani Recipe) ಒಂದು. ಅದರ ಚಿತ್ರ ಕೆಳಗಿದೆ
ಸಿಪ್ಪೆ ಸುಲಿದ 4-5 ಸಿಹಿ ಹುಳಿ ಜಾತಿಯ ಚಿಕ್ಕ ಮಾವಿನ ಹಣ್ಣು, ಹಸಿ ಮೆಣಸು, ಬೇಯಿಸಲು ನೀರು , ಉಪ್ಪು , ಬೆಲ್ಲ. ಚೆನ್ನಾಗಿ ಕುದಿ ಬಂದ ನಂತರ ಅರ್ಧ ಟೀ ಸ್ಪೂನ್ ಮೈದಾವನ್ನುಕಾಲು ಗ್ಲಾಸ್ ನೀರಿನಲ್ಲಿ ಕದಡಿ, ಗುಳ್ಳೆಗಳಾಗದಂತೆ ತಯಾರಿಸಿ, ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇನ್ನೊಂದು ಕುದಿ ಬಂದ ನಂತರ ಒಲೆಯಿಂದ ಕೆಳಗಿಳಿಸಿ, ಉದ್ದು ಸಾಸಿವೆ,ಕರಿಬೇವು, ಹಿಂಗು, ಒಣ ಮೆಣಸಿನ ಒಗ್ಗರಣೆ ಕೊಡಿ. ಈಗಂತೂ ಅದರ ಸೀಸನ್ ಮುಗೀತು. ಚಿತ್ರ ನೋಡಿ ಯೆಂಜಾಯ್ ಮಾಡಿ :-)
ವಂಡರ್ ಲಾ ಗೆ ಹೋದಾಗ ಒಂದು ದೊಡ್ಡ ಮುಸ್ಲಿಮ್ ಕುಟುಂಬ ಬಂದಿತ್ತು. ವೇವ್ ಪೂಲ್ ಅನ್ನುವ ಆಟ ಒಂದಿದೆ. ಅಲ್ಲಿ ಕೃತಕವಾಗಿ ಸಮುದ್ರ ದ ಅಲೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಮುಸ್ಲಿಮ್ ಹೆಣ್ಣುಮಕ್ಕಳು, ಬುರ್ಖಾ ಹಾಕಿಕೊಂಡೆ enjoy ಮಾಡಿದರು. ನಾನು ನೀರಿಗಿಳಿದಿರಲಿಲ್ಲ. ಅವರನ್ನು ನೋಡಿ ನಾನೂ ಖುಶಿ ಪಟ್ಟೆ.
****************************************************************************************************************************************
***************************************************************************************************************************************
ಒಂದು ಗುಡ್ ನ್ಯೂಸ್ : ಪ್ಲ್ಯಾಸ್ಟಿಕ್ ಬಳಕೆ ನಿಜಕ್ಕೂ ಕಡಿಮೆಯಾಗಿದೆ. ತರಕಾರಿ ಅಂಗಡಿಯವರು ಪೇಪರ್ ಬ್ಯಾಗ್ ಗಳನ್ನು ಬಳಸುವಲ್ಲಿ ಬದ್ದರಾಗಿದ್ದಾರೆ. ಪ್ಲ್ಯಾಸ್ಟಿಕ್ ದರ ಜಾಸ್ತಿಯಾಗಿದೆ, ಅಲ್ಲದೆ ಬೇರೆ ಕಡಿಮೆ ದರದ ಪ್ಲ್ಯಾಸ್ಟಿಕ್ ಬಳಸಿದ ನಮ್ಮ ತರಕಾರಿ ಅಂಗಡಿಯವನಿಗೆ ಈಗಾಗಲೇ 1000 ರೂ ನ ದಂಡ ವಿಧಿಸಲಾಗಿದೆ. ನಾನು ಮೊದಲೆಲ್ಲ ಯಾಕ್ರಿ ಗಿರಾಕಿಗಳಿಗೆ ಪ್ಲ್ಯಾಸ್ಟಿಕ್ ಕೊಡ್ತೀರಿ, ಮನೆಯಿಂದ ಚೀಲ ತರಲಿಕ್ಕೆ ಹೇಳಿ ಅಂದರೆ, ಅವನು ಮ್ಯಾಡಂ ನಾನು ಹಾಗಂದ್ರೆ ನನಗೆ ವ್ಯಾಪಾರ ಆಗೋದು ಬೇಡ್ವಾ? ನಾನು ಕೋಡಲ್ಲ ಅಂದ್ರೆ ಅವರು ಬೇರೆ ಅಂಗಡಿಗೆ ಹೋಗ್ತಾರೆ ಅಷ್ಟೆ, ಅಂತ ನನಗೇ ಪ್ರಶ್ನೆ ಹಾಕುತ್ತಿದ್ದ. ಈಗ ನನಗೆ ’ನಿಮ್ಮ ಬಳಿ ಇರುವ ಚೀಲ ಎಲ್ಲಿ ಸಿಗುತ್ತೆ ಮ್ಯಾಡಂ? ನಾನು ಅದನ್ನೆ ಇಲ್ಲಿ ಮಾರುತ್ತೇನೆ ಅಂತಿದ್ದಾನೆ. ಅಂದ ಹಾಗೆ ನನ್ನ ಪುಟ್ಟ foldable ಬಟ್ಟೆ ಚೀಲ ಕೇವಲ 15 ರೂ. 5 ಕೆ.ಜಿಯಷ್ಟು ವಜನ್ ತಾಳುತ್ತದೆ. ಮುಂಬೈನಲ್ಲಿ ಸಿಗುತ್ತದೆ. ವಾಶ್ ಮಾಡಿದ್ರೆ ಬೇಗ ಒಣಗುತ್ತದೆ ಕೂಡ. ಈಗ ಆ ಬ್ಯಾಗ್ ಗೆ ತುಂಬ ಡಿಮಾಂಡ್ ಇದೆ. ಎಲ್ಲರೂ ನನಗೆ ಆ ತರಹ ಬ್ಯಾಗ್ ತಂದು ಕೊಡಿ ಮ್ಯಾಡಂ ಅನ್ನುತ್ತಾರೆ.
ನನಗೆ ವಸುಧೇಂದ್ರರ ಬಗ್ಗೆ ತುಂಬ ಹೆಮ್ಮೆ. ಅವರು ಪುಸ್ತಕ ಬಿಡುಗಡೆಯ ದಿನ ಅವರ ಪುಸ್ತಕಗಳನ್ನು ನೀಟಾಗಿ ಮುದ್ದಾದ, ಅವರ ಛಂದ ಪ್ರಕಾಶನದ ಲೋಗೊ ಇರುವ ಪೇಪರ್ ಬ್ಯಾಗ ನಲ್ಲಿ ಕೊಡುತ್ತಾರೆ. ಎಲ್ಲರೂ ನಮ್ಮ ಪರಿಸರ ಉಳಿಸುವುದಲ್ಲಿ ಚಿಕ್ಕ ಚಿಕ್ಕ ಪ್ರಯತ್ನ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು(environment) ಒದಗಿಸಬಹುದು. ಜನರು ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವ್ಶ್ಯಕತೆ ಇದೆ. ಈಗಾಗಲೇ ಮಳೆ ಕಡಿಮೆಯಾಗಿದೆ. ನಾವು ಬೆಂಗಳೂರಿಗೆ ಬಂದ 11 ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಅಷ್ಟೆ ಅಲ್ಲ ಇತ್ತೀಚೆಗೆ ನಮಗೆ ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಬರುತ್ತಿದೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳು. ನಮ್ಮ ಪಕ್ಕದ ಮನೆಯವ environmental engineer ಅಂತೆ. ಆದರೆ ಅವರು ಬಳಸುವಷ್ಟು ಪ್ಲ್ಯಾಸ್ಟಿಕ್, ಅಥ್ವಾ ಕಾರು ತೊಳೆಯಲು ಬಳಸುವ ನೀರನ್ನು ಕಂಡು ಅಥವಾ ದೀಪವಾಳಿಗೆ ಅವನು ಸುಡುವ ಪಟಾಕಿಗಳನ್ನು ಕಂಡರೆ ನನಗೆ ನಿಜಕ್ಕೂ ಸೋಜಿಗ.
ಇಷ್ಟೆಲ್ಲದರ ನಡುವೆ ದೇಶಕಾಲ -25 ಓದಿ ಮುಗಿಸಿದೆ. V.S. Ramachandran ಅವರ ’ಟೆಲ್ ಟೇಲ್ ಬ್ರೈನ್’ ಇನ್ನು ಓದಲು ಶುರು ಮಾಡಬೇಕಷ್ಟೆ.
ಇಲ್ಲಿಗೆ ನನ್ನ potpourri ಪ್ರವರ ನಿಲ್ಲಿಸುತ್ತೇನೆ.




