Showing posts with label Biscoot Factory. Show all posts
Showing posts with label Biscoot Factory. Show all posts

November 16, 2017

ಇನ್ನಷ್ಟು ಕೇಕ್ ಗಳ ಫೋಟೋಗಳು

ಸುಮಾರು ಸಮಯದ ನಂತರ ಇನ್ನಷ್ಟು ಕೇಕ್ ಗಳ  ಫೋಟೋಗಳನ್ನು ಹಾಕ್ತಾ ಇದ್ದೀನಿ :-)






January 29, 2016

cake anek

ಇನ್ನಷ್ಟು ಕೇಕ್ ಗಳು. ಮಾಲವಿಕಾಳ speciality ಕುಕೀ ಮಾಡುವುದರಲ್ಲಿ. ಕುಕಿಗಳ ಆರ್ಡರ್ ಬಂದಾಗ ಅವಳಿಗೆ ತುಂಬಾ ಖುಷಿ . ಜನರಿಗೆ ಇತ್ತಿತ್ತಲಾಗಿ , ಅದರಲ್ಲೂ ಮಕ್ಕಳಿಗೆ ಕುಕೀ ಬಗ್ಗೆ ಎಲ್ಲ ಗೊತ್ತು. ಈ ಕುಕೀ ಗಳು ಬಿಸ್ಕಿಟ್ ತರಹ ಕುರುಂ ಇರಲ್ಲ. ಸ್ವಲ್ಪ ಮೆತ್ತಗೆ ಇರುತ್ವೆ. ಕಾಫಿ ಜತೆ ಒಳ್ಳೆಯ ಕಾಂಬಿನೇಶನ್. ಮಾಳವಿಕಾ  ಮೊಟ್ಟೆಯಿಲ್ಲದ ಕೂಕಿಗಳನ್ನು ಮಾಡುತ್ತಾಳೆ. ಅವಳ ಕೇಕ್ ಕೂಡ ಎಗ್ ಲೆಸ್. ಯಾರಾದರೂ ಸ್ಪೆಸಿಫಿಕ್ ಆಗಿ ಕೇಳಿದ್ರೆ ಮಾತ್ರ ಮೊಟ್ಟೆ ಹಾಕ್ತಾಳೆ ಇಲ್ಲದಿದ್ದರೆ by ಡಿಫಾಲ್ಟ್ ಮೊಟ್ಟೆ ರಹಿತ ಕೇಕ್ ನಮ್ಮ ಬಿಸ್ಕೂಟ್ ಫ್ಯಾಕ್ಟರಿನಲ್ಲಿ. 
ಓದಲು ಇಷ್ಟ ಪಡುವ ಹುಡುಗಿಗೆ ಹ್ಯಾರಿ potter ಪುಸ್ತಕದ ಪನ್ನೆ.  ಅವಳು ಅವಳ ಫ್ರೆಂಡ್ಸ್, ಕೇಕ್ ಮೇಲೆ  ಬರೆದಿದ್ದನ್ನೆಲ್ಲ ಓದಿ, ಇದನ್ನು ಕಟ್ ಮಾಡುವ ಮನಸ್ಸೇ ಬರಲ್ಲ ಅಂತ, ಮತ್ತು ಕೇಕ್ ಕಟ್ ಮಾಡಿದ ಕೂಡಲೆ ಹೇಗೆ ಬೇಗ ಬೇಗ ಕೇಕ್ ಖರ್ಚಾಯಿತು ಅಂತ ಹೇಳಲು ಅವರ ಅಮ್ಮ ಕೇಕ್ ಕಟ್ ಮಾಡಿದ ಕೆಲವೇ ನಿಮಿಷಕ್ಕೆ ಅಂದರೆ ಪಾರ್ಟಿ ಆರಂಭ ವಾಗುವ ಮೊದಲೇ ಫೋನ್ ಮಾಡಿ ತಮ್ಮ ಖುಷಿ ಹಂಚಿಕೊಂಡಾಗ ನಮಗೂ  ತುಂಬಾ ಖುಶಿ. ಡಿಸೈನ್ ಮಾತ್ರವಲ್ಲ ಕೇಕ್ ಕೂಡ ರುಚಿಯಾಗಿತ್ತು ಅಂತ. ಆಮೇಲೆ ಅವರ ಬಿಲ್ಡಿಂಗ್ ನಿಂದ ಹಲವಾರು ಜನರು ಬಿಸ್ಕೂಟ್ ಫ್ಯಾಕ್ಟರಿಯಿಂದ ಕೇಕ್ ಆರ್ಡರ್ ಮಾಡಿದಲ್ಲದೆ, ಈ ಹುಡುಗಿಯ ತಮ್ಮನಿಗೋಸ್ಕರ ಕಾರ್ ಕೇಕ್ ಆರ್ಡರ್ ಬಂದಿತ್ತು. ಅದು ಮುಂದೆ ಯಾವಾಗಲಾದರೂ ಇಲ್ಲಿ ಹಾಕುತ್ತೇನೆ 

ಗರ್ಲ್ ಫ್ರೆಂಡ್ ತನ್ನ ಬಾಯ್ ಫ್ರೆಂಡ್ ಗೆ ಇಷ್ಟ ಅಂತ ಈ ತರಹದ ಕೇಕ್ ಆರ್ಡರ್ ಮಾಡಿದ್ದು. :-)

ಅಮ್ಮನಿಗೆ ಹೊಲಿಗೆ , ನಿಟ್ಟಿಂಗ್ ಇಷ್ಟ ಅಂತ ಮಕ್ಕಳ ಆರ್ಡರ್. 


hand painted cookies


ರಜತ್ ನಿಗೆ ಹುಷಾರಿಲ್ಲದೆ ಡಾಕ್ಟರ್ ಕೇಕ್ ತಿನ್ನಬಾರದು ಅಂದಿದ್ರಂತೆ ಹಾಗಾಗಿ ಅವನ ಅಪ್ಪ ಈ ದೊಡ್ಡ ಚಾಕೋಲೇಟ್  ಕುಕೀ ಆರ್ಡರ್ ಮಾಡಿದ್ರು. 

ಕ್ರಿಸ್ಮಸ್ ಗೆ ಕೆಲವು ಕೂಕಿಸ್ 
ಯುಮ್ಮಿ ಕಪ್ ಕೇಕ್ಸ್ ಅಂತ ..ಯಾವ ಕಪ್ ಕೇಕ್ ಚೂಸ್ ಮಾಡುವುದು ???

ಮಕ್ಕಳಿಗೆ ಇದು ತುಂಬಾ ಇಷ್ಟ ಕ್ಯಾಂಡಿ ಪಾಪ್ (candy pop)


ಮೇಲೆ ಮೂರು ಕ್ಯಾಂಡಿ ಪಾಪ್ ಗಳು, ಜನಪ್ರಿಯ ಕಾರ್ಟೂನ್ character ಗಳು . ಮಕ್ಕಳು ಅವರಿಗೆ ಬೇಕಾದನ್ನು ಸೆಲೆಕ್ಟ್ ಮಾಡುವುದನ್ನು ನೋಡುವುದೇ ಖುಶಿ. 

ವ್ಯಾನಿಲ್ಲ  ಕಪ್ ಕೇಕ್ with strawberry ಐಸಿಂಗ್
ಎಚ್ ಎಸ ಆರ್ ಲೇ ಔಟ್ ಇಲ್ಲಿಗೆ ಹತ್ತಿರ. ಅಲ್ಲೊಂದು ಆಫಿಸ್. ಅಲ್ಲಿ ಒಬ್ಬರು  ಹರಿ. ಅವರಿಗೆ ಬಿಸ್ಕೂಟ್ ಫ್ಯಾಕ್ಟರಿಯ ಕಪ್ ಕೇಕ್ ಗಳು ಬಹಳ ಇಷ್ಟ. ಅವರು ರಾತ್ರಿ ಅಥವಾ ಬೆಳಿಗ್ಗೆ ಕೇಕ್ ಗಳಿಗಾಗಿ ಆರ್ಡರ್ ಕೊಟ್ಟು, ಬೆಳಿಗ್ಗೆ ಆಫಿಸ್ ಗೆ ಹೋಗುವ ಮುಂಚೆ ಅದನ್ನು ಪಿಕ್ ಮಾಡಿಕೊಂಡು ಹೋಗುತ್ತಾರೆ. ಆಫಿಸ್ ನಲ್ಲಿ ಕ್ಯಾಬಿನ್ ನಲ್ಲಿ ಅವಿತುಕೊಂಡು ಅವರು ಕೇಕ್ ಗಳನ್ನು ತಿನ್ನುವುದಂತೆ. " ನಾನ್ ಯಾಕೆ ನನ್ನ ಕೇಕ್ ಶೇರ್ ಮಾಡಬೇಕು? ಬೇಕಾದರೆ ಅವ್ರು ಕೊಂಡು ತಿನ್ನಲಿ ' ಎಂದು ಅವರ ಆಂಬೋಣ. :-) ಆಫಿಸ್ ಕೆಲಸದ ಮೇಲೆ ಹೊರ ದೇಶಕ್ಕೆಲ್ಲ ಹೋದಾಗ ಅವರು ಬಿಸ್ಕುಟ್ ಫ್ಯಾಕ್ಟರಿಯ ಕಪ್ ಕೇಕ್ ತುಂಬಾ ಮಿಸ್ ಮಾಡ್ತಾರಂತೆ. ಮುಂದಿನ ಸಲ ಅವರಿಗೆ ಕೇಕ್ ಜತೆ ಸೆಳ್ಫಿ ತೆಗೆದು ಕಳಿಸಲು ಹೇಳಬೇಕು. ಈಗ ಅವರು ಊರಲಿಲ್ಲ. :-) 

October 21, 2015

ಒಬ್ಬಂಟಿ


ಇಷ್ಟು ದೊಡ್ಡ ಜಗದಲ್ಲಿ  ಯಾರೂ ನನಗಿಲ್ಲ
ಪರರ ಮಾತು ಹಾಗಿರಲಿ ನನ್ನವರೂ ನನ್ನ ಪಾಲಿಗಿಲ್ಲ 

ಜನರು ಅತ್ತು ಅತ್ತು ಜೀವನ ಸವೆಸುವರು
ನಾನು ನಗುತ್ತಿದ್ದರೂ ಜೀವನ ಸಾಗಿಸಲಾಗಲಿಲ್ಲ 

ಒಂದು ಚೂರು ಪ್ರೀತಿ ಅಷ್ಟೆ ನನಗೆ ಬೇಕಿತ್ತು
ಜಗತ್ತಿಗೆ ಅದನ್ನೂ ಸಹಿಸಲಾಗಲಿಲ್ಲ

ಆಕಾಶವೇ ಎಷ್ಟೊಂದು ತಾರೆಗಳು ನಿನ್ನ ಸನ್ನಿಧಿಯಲ್ಲಿ
ನನ ಜೀವನದಲ್ಲಿ ಆ  ಅದೃಷ್ಟ ಜಗಮಗಿಸಲಿಲ್ಲ
:-)

guess ಮಾಡಿ 
(ಮಿರ್ಜಾನ ಕೋಟೆ ಚಿತ್ರಗಳು ಮುಂದಿನ ವಾರ ಪುರುಸೊತ್ತು ಆದ್ರೆ. ಗೋಕರ್ಣ ಕ್ಕೆ ಹೋಗಿ ಬಂದದ್ದೇ ಬಿಸ್ಕೂಟ್  ಫ್ಯಾಕ್ಟರಿ ಗೆ ಬಿಡುವಿಲ್ಲದ ಕೆಲಸ . ನನಗೊತ್ತಿರೋವಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ನಮ್ಮ ಮಾಮೂಲಿ ಅಡಿಗೆಯ ಹಾಗೆ ಅಲ್ಲ. ಮಾಮೂಲಿ ಅಡಿಗೆಯಾದ್ರೆ ಅದೇನೋ ಹೇಳ್ತಾರಲ್ಲ ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡಿಗೆ ಮಾಡುವುದು' ಅಂತ ..... ನನ್ನ ಅಡಿಗೆ ಸ್ವಲ್ಪ ಹಾಗೆ ಕಾಯಿ, ಉಪ್ಪು, ಹುಳಿ ಹಾಕೋದು ಏನೋ ಒಂದು ಮಾಡಿ ಇಡೋದು.  Baking  needs precision. ಬೇಕಿಂಗ್  ಅದೆಲ್ಲ ನನಗೆ ಹೇಳಿ ಮಾಡಿಸಿದ್ದಲ್ಲ. ಕೆಲ ಐಡಿಯಾ, suggestions,  ಲೇಬಲ್ ಅಂಟೀಸೋದು, ಬಾಕ್ಸ್ ಅಸೆಂಬಲ್ ಮಾಡಿ ಕೊಡೋದು, ಪಾತ್ರೆ ತೊಳೆಯೋದು ಇಂತದ್ದೆಲ್ಲ ಮಾಡಿ ಕೊಡೋದು. ಹಾಂ ಮತ್ತೆ ನನಗೆ ಅವಳು ಸಂಬಳ ಕೊಡುತ್ತಾಳೆ. :-))
ಬೇಕಿಂಗ್ = ? in ಕನ್ನಡ 
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 




May 6, 2014

Biscoot Factory

ನನ್ನ ಮಗಳು ಮಾಲವಿಕಾಳ enterprise 'Biscoot Factory' ಪ್ರಾರಂಭ ವಾಗುತ್ತಿದೆ,  ನಿಮ್ಮೆಲ್ಲರ ಆಶೀರ್ವಾದ, ಸಲಹೆ, ಸಹಕಾರಗಳು ತುಂಬಾ ಮುಖ್ಯ. 
ಅವಳಿಗೆ Best Of Luck' ಅನ್ನುತ್ತಾ....ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಫೇಸ್ ಬುಕ್ ಪುಟ ನೋಡಿ. ಇಲ್ಲಿದೆ ಕೊಂಡಿ Biscoot Factory
ಹಾಗು ಚೆಂದದ ಚಿತ್ರಗಳಿಗೆ ಈ ಕೊಂಡಿ ಕ್ಲಿಕ್ಕಿಸಿ:Biscoot Factory Photo Shoot